ವಿಜ್ಞಾನ

ವಿಜ್ಞಾನವು ಬ್ರಹ್ಮಾಂಡದ ಬಗ್ಗೆ ಪರೀಕ್ಷಣೀಯ ವಿವರಣೆಗಳು ಮತ್ತು ಭವಿಷ್ಯವಾಣಿಗಳ ರೂಪದಲ್ಲಿ ಜ್ಞಾನವನ್ನು ನಿರ್ಮಿಸುವ ಮತ್ತು ಸಂಘಟಿಸುವ ಒಂದು ವ್ಯವಸ್ಥಿತ ಯೋಜನೆ.

ಮಾನವನಿಂದ ತಿಳಿಯಬಲ್ಲ ವಿಶ್ವದ ಬಗೆಗಿನ ಜ್ಞಾನದ ಸಮೂಹವೆ ವಿಜ್ಞಾನ. ಒಂದು ಹಳೆಯ ಮತ್ತು ನಿಕಟವಾಗಿ ಸಂಬಂಧಿತ ಅರ್ಥದಲ್ಲಿ, "ವಿಜ್ಞಾನ"ವು, ತಾರ್ಕಿಕವಾಗಿ ವಿವರಿಸಬಲ್ಲ ಮತ್ತು ವಿಶ್ವಾಸಾರ್ಹವಾಗಿ ಅನ್ವಯಿಸಬಲ್ಲ ಪ್ರಕಾರದ, ಜ್ಞಾನದ ಮಂಡಲವನ್ನೇ ನಿರ್ದೇಶಿಸುತ್ತದೆ. ಈ ಜ್ಞಾನವು ಮಾನವ ತನ್ನ ಇಂದ್ರಿಯಗಳಿಂದ ತಿಳಿಯುವಂತಿರಬೇಕು, ತರ್ಕಕ್ಕೆ ಬದ್ಧವಾಗಿರಬೇಕು ಮತ್ತು ಪರಿಶೋಧನೆಗೆ ವಿಧೇಯವಾಗಿರಬೇಕು. ಈ ಜ್ಞಾನ ಸಂಪಾದನೆಯ ವಿಧಿಯನ್ನು ವೈಜ್ಞಾನಿಕ ವಿಧಿ ಯೆಂದು ಪರಿಗಣಿಸಲಾಗುತ್ತದೆ. ವಿಜ್ಞಾನದ ವೃತ್ತಿ ನಡೆಸುವವನನ್ನು ಒಬ್ಬ ವಿಜ್ಞಾನಿಯೆಂದು ಕರೆಯಲಾಗುತ್ತದೆ.

ವಿಜ್ಞಾನ
ಭೋರ್ನ ಅಣು ಆಕೃತಿ

ಶಾಸ್ತ್ರೀಯ ಪ್ರಾಚೀನತೆಯಿಂದಲೂ, ಜ್ಞಾನದ ಒಂದು ಪ್ರಕಾರವಾಗಿ ವಿಜ್ಞಾನವನ್ನು ತತ್ವಶಾಸ್ತ್ರಕ್ಕೆ ನಿಕಟವಾಗಿ ಸಂಬಂಧಿಸಲಾಗಿದೆ. ಆರಂಭಿಕ ಆಧುನಿಕ ಅವಧಿಯಲ್ಲಿ "ವಿಜ್ಞಾನ" ಮತ್ತು "ಪ್ರಕೃತಿಯ ತತ್ವಶಾಸ್ತ್ರ" ಪದಗಳನ್ನು ಕೆಲವೊಮ್ಮೆ ಅದಲುಬದಲಾಗಿ ಬಳಸಲಾಗಿತ್ತು. ೧೭ನೇ ಶತಮಾನದಿಂದ, ಪ್ರಾಕೃತಿಕ ತತ್ವಶಾಸ್ತ್ರವನ್ನು (ಇಂದು ಇದನ್ನು ಪ್ರಕೃತಿ ವಿಜ್ಞಾನ"ವೆಂದು ಕರೆಯಲಾಗುತ್ತದೆ) ತತ್ವಶಾಸ್ತ್ರದ ಒಂದು ಪ್ರತ್ಯೇಕ ಶಾಖೆಯಾಗಿ ಪರಿಗಣಿಸಲಾಗಿತ್ತು.

ಆಧುನಿಕ ಬಳಕೆಯಲ್ಲಿ, "ವಿಜ್ಞಾನ" ಪದವು ಹೆಚ್ಚಾಗಿ ಜ್ಞಾನವನ್ನು ಅನುಸರಿಸುವ ಒಂದು ರೀತಿಯನ್ನು ಸೂಚಿಸುತ್ತದೆ, ಕೇವಲ ಜ್ಞಾನವನ್ನೇ ಅಲ್ಲ. ಅದು ಹಲವುವೇಳೆ ವಿಷಯಕ ಬ್ರಹ್ಮಾಂಡದ ವಿದ್ಯಮಾನಗಳನ್ನು ವಿವರಿಸಲು ಯತ್ನಿಸುವ ಅಧ್ಯಯನ ಶಾಖೆಗಳಿಗೆ ಸೀಮಿತವಾಗಿದೆ. ೧೭ನೇ ಮತ್ತು ೧೮ನೇ ಶತಮಾನಗಳಲ್ಲಿ ವಿಜ್ಞಾನಿಗಳು ಹೆಚ್ಚಾಗಿ ಜ್ಞಾನವನ್ನು ನ್ಯೂಟನ್‍ನ ಚಲನೆಯ ನಿಯಮಗಳಂಥ ನಿಸರ್ಗದ ನಿಯಮಗಳ ರೂಪದಲ್ಲಿ ಸೂತ್ರೀಕರಿಸಲು ಯತ್ನಿಸಿದರು. ಮತ್ತು ೧೯ನೇ ಶತಮಾನದ ಅವಧಿಯಲ್ಲಿ, "ವಿಜ್ಞಾನ" ಶಬ್ದವು ಹೆಚ್ಚೆಚ್ಚು ವೈಜ್ಞಾನಿಕ ವಿಧಾನದೊಂದಿಗೇನೇ ಒಡಗೂಡಿತು, ಭೌತಶಾಸ್ತ್ರ, ರಸಾಯನಶಾಸ್ತ್ರ, ಭೂವಿಜ್ಞಾನ ಮತ್ತು ಜೀವಶಾಸ್ತ್ರವನ್ನು ಒಳಗೊಂಡಂತೆ, ನೈಸರ್ಗಿಕ ಪ್ರಪಂಚವನ್ನು ಅಧ್ಯಯನಿಸುವ ಒಂದು ಶಿಸ್ತುಬದ್ಧ ರೀತಿಯಾಗಿ. ೧೯ನೇ ಶತಮಾನದಲ್ಲಿಯೇ ಸಹ ನಿಸರ್ಗವಾದಿ-ದೇವತಾಶಾಸ್ತ್ರಜ್ಞ ವಿಲಿಯಮ್ ಹ್ಯೂವಲ್‍ರಿಂದ, ನಿಸರ್ಗದ ಮೇಲಿನ ಜ್ಞಾನವನ್ನು ಅರಸುವವರನ್ನು ಇತರ ಬಗೆಗಳ ಜ್ಞಾನವನ್ನು ಅರಸುವವರಿಂದ ಪ್ರತ್ಯೇಕಿಸಲು, ವಿಜ್ಞಾನಿ ಪದ ಸೃಷ್ಟಿಯಾಯಿತು.

ಆದರೂ, "ವಿಜ್ಞಾನ" ಶಬ್ದವು ವಿಶಾಲ ಅರ್ಥದಲ್ಲಿ, ಗ್ರಂಥಾಲಯ ವಿಜ್ಞಾನ ಅಥವಾ ಗಣಕ ವಿಜ್ಞಾನಗಳಂತಹ ಆಧುನಿಕ ಪದಗಳಲ್ಲಿರುವಂತೆ, ಒಂದು ವಿಷಯದ ಬಗ್ಗೆ ವಿಶ್ವಾಸಾರ್ಹ, ಕಲಿಸಬಲ್ಲ ಜ್ಞಾನವನ್ನು ಸೂಚಿಸಲು ಬಳಕೆಯಾಗುವುದು ಮುಂದುವರೆದಿದೆ. ಇದು "ಸಮಾಜ ವಿಜ್ಞಾನ" ಅಥವಾ "ರಾಜಕೀಯ ವಿಜ್ಞಾನ"ಗಳಂತಹ ಕೆಲವು ಶೈಕ್ಷಣಿಕ ಅಧ್ಯಯನ ಕ್ಷೇತ್ರಗಳ ಹೆಸರುಗಳಲ್ಲಿ ಸಹ ಪ್ರತಿಬಿಂಬಿತವಾಗಿದೆ.

ನೈಸರ್ಗಿಕ ವಿಜ್ಞಾನ

ನೈಸರ್ಗಿಕ ವಿಜ್ಞಾನವು ಪ್ರಕೃತಿ ಮತ್ತು ಭೌತಿಕ ಪ್ರಪಂಚದ ವ್ಯವಸ್ಥಿತ ಜ್ಞಾನವಾಗಿದೆ. ಅವುಗಳನ್ನು ಅಧ್ಯಯನ ಮಾಡುವ ಅನೇಕ ಶಾಖೆಗಳಿವೆ. ವಾಸ್ತವವಾಗಿ, ವಿಜ್ಞಾನ ಪದವನ್ನು ಯಾವಾಗಲೂ ನೈಸರ್ಗಿಕ ವಿಜ್ಞಾನಗಳಿಗೆ ಬಳಸಲಾಗುತ್ತದೆ. ಇದು ಮೂರು ಮುಖ್ಯ ಶಾಖೆಗಳನ್ನು ಹೊಂದಿದೆ: ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ, ಇತ್ಯಾದಿ.

ಸಮಾಜ ವಿಜ್ಞಾನ

ಸಮಾಜ ವಿಜ್ಞಾನವು ಮಾನವ ಸಮಾಜದ ರಚನೆ ಮತ್ತು ಅದರ ಸದಸ್ಯರ ಚಟುವಟಿಕೆಗಳ ಅಧ್ಯಯನವಾಗಿದೆ. ಇವುಗಳಲ್ಲಿ ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರ ಇತ್ಯಾದಿಗಳು ಸೇರಿವೆ.

ವಿಧಾನ

ಒಳಗೊಂಡಿದೆ.

ವಿಜ್ಞಾನ 
ವಿಜ್ಞಾನದ ಶಾಖೆಗಳು ಮತ್ತು ವಿಜ್ಞಾನದ ವರ್ಗಶ್ರೇಣಿಗೆ ಚಿತ್ರಿಸಲಾದ ಬ್ರಹ್ಮಾಂಡದ ತುಲನಾತ್ಮಕ ಅಳತೆ.

ಇತಿಹಾಸ

    ಮುಖ್ಯ ಲೇಖನ: ವಿಜ್ಞಾನದ ಇತಿಹಾಸ
ವಿಜ್ಞಾನ 
ಆರಸ್ಟಾಟಲ್ ಮತ್ತು ಕ್ವಾನ್ ಟ್ಜ಼ು (ಕ್ರಿ.ಪೂ. ೪ನೇ ಶತಮಾನ) ಇಬ್ಬರೂ ಏಕಕಾಲಿಕ ವೈಜ್ಞಾನಿಕ ಸಂಶೋಧನೆಯ ಒಂದು ಉದಾಹರಣೆಯಲ್ಲಿ, ಕೆಲವು ಸಮುದ್ರ ಪ್ರಾಣಿಗಳು ಚಾಂದ್ರ ಚಕ್ರಕ್ಕೆ ಒಳಪಟ್ಟಿವೆ, ಮತ್ತು ಚಂದ್ರನ ವರ್ಧಿಸುವ ಹಾಗು ಕ್ಷೀಣಿಸುವ ಕ್ರಿಯೆಯೊಂದಿಗೆ ಗಾತ್ರದಲ್ಲಿ ಹೆಚ್ಚು ಹಾಗು ಕಡಿಮೆಯಾಗುತ್ತವೆ ಎಂದು ಉಲ್ಲೇಖಿಸುತ್ತಾರೆ. ಆರಸ್ಟಾಟಲ್ ನಿರ್ದಿಷ್ಟವಾಗಿ, ಮೇಲೆ ಚಿತ್ರದಲ್ಲಿರುವ, ಕಡಲ ಚಿಳ್ಳೆಯನ್ನು ನಿರ್ದೇಶಿಸುತ್ತಿದ್ದರು.

ವಿಶಾಲ ಅರ್ಥದಲ್ಲಿ, ಆಧುನಿಕ ಯುಗಕ್ಕೆ ಮುಂಚೆ, ಮತ್ತು ಅನೇಕ ಐತಿಹಾಸಿಕ ನಾಗರಿಕತೆಗಳಲ್ಲಿ, ವಿಜ್ಞಾನ ಅಸ್ತಿತ್ವದಲ್ಲಿತ್ತು, ಆದರೆ ಆಧುನಿಕ ವಿಜ್ಞಾನ ಅದರ ಕಾರ್ಯವಿಧಾನದಲ್ಲಿ ಎಷ್ಟೊಂದು ವಿಭಿನ್ನ ಮತ್ತು ಅದರ ಫಲಿತಾಂಶಗಳಲ್ಲಿ ಎಷ್ಟೊಂದು ಸಫಲವಾಗಿದೆಯೆಂದರೆ, ಈಗ ಅದು ಪದದ ಕರಾರುವಾಕ್ಕಾದ ಅರ್ಥದಲ್ಲಿ ವಿಜ್ಞಾನವೆಂದರೆ ಏನು ಎಂಬುದನ್ನು ವ್ಯಾಖ್ಯಾನಿಸುತ್ತದೆ. ಆಧುನಿಕ ಯುಗಕ್ಕಿಂತ ಸಾಕಷ್ಟು ಮುಂಚೆಯೇ, ಪುರಾತನ ಗ್ರೀಕ್ ಮಾತಾಡುವ ಪ್ರದೇಶಗಳಲ್ಲಿ ಶಾಸ್ತ್ರೀಯ ನೈಸರ್ಗಿಕ ತತ್ವಶಾಸ್ತ್ರದ ಬೆಳವಣಿಗೆಯು ಮತ್ತೊಂದು ಪ್ರಮುಖ ಸಂಧಿಕಾಲವಾಗಿತ್ತು.

ಪೂರ್ವ-ತತ್ತ್ವಶಾಸ್ತ್ರದ

ಅದರ ಮೂಲ ಅರ್ಥದಲ್ಲಿ ವಿಜ್ಞಾನವು ಒಂದು ಪ್ರಕಾರದ ಜ್ಞಾನಕ್ಕೆ ಒಂದು ಶಬ್ದ, ಬದಲಾಗಿ ಅಂತಹ ಜ್ಞಾನದ ಅನ್ವೇಷಣೆಗೆ ಒಂದು ವಿಶೇಷ ಶಬ್ದವಲ್ಲ. ವಿಶೇಷವಾಗಿ ಅದು ಜನರು ಪರಸ್ಪರ ಸಂವಹನ ಮಾಡಬಹುದಾದ ಮತ್ತು ಹಂಚಿಕೊಳ್ಳಬಹುದಾದ ಜ್ಞಾನದ ಪ್ರಕಾರಗಳಲ್ಲಿ ಒಂದು. ಉದಾಹರಣೆಗೆ, ನೈಸರ್ಗಿಕ ವಸ್ತುಗಳ ಕಾರ್ಯನಿರ್ವಹಣೆ ಬಗ್ಗೆ ಜ್ಞಾನವನ್ನು ದಾಖಲಿತ ಇತಿಹಾಸಕ್ಕಿಂತ ಬಹಳ ಮುಂಚೆಯೇ ಸಂಗ್ರಹಮಾಡಲಾಗಿತ್ತು, ಮತ್ತು ಇದು, ಸಂಕೀರ್ಣ ದಿನಾಂಕ ಪಟ್ಟಿಗಳ ನಿರ್ಮಾಣ, ವಿಷಕಾರಿ ಸಸ್ಯಗಳನ್ನು ತಿನ್ನಲು ಯೋಗ್ಯವಾಗಿ ಮಾಡಲು ತಂತ್ರಗಳು, ಮತ್ತು ಪಿರಮಿಡ್‍ಗಳಂತಹ ಕಟ್ಟಡಗಳ ಮೂಲಕ ತೋರಿಸಲ್ಪಟ್ಟಿರುವ ಸಂಕೀರ್ಣ ಅಮೂರ್ತ ಚಿಂತನೆಯ ಬೆಳವಣಿಗೆಗೆ ಕಾರಣವಾಯಿತು. ಆದರೆ ಪ್ರತಿಯೊಂದು ಸಮುದಾಯದಲ್ಲಿ ಸತ್ಯವಾಗಿರುವ ಅಂತಹ ವಿಷಯಗಳ ಜ್ಞಾನ, ಮತ್ತು ಪುರಾಣಗಳು ಹಾಗು ಕಾನೂನು ವ್ಯವಸ್ಥೆಗಳಂತಹ ಇತರ ಪ್ರಕಾರಗಳ ಸಾಮುದಾಯಿಕ ಜ್ಞಾನದ ನಡುವೆ ಯಾವ ಸುಸಂಗತ ಸೈದ್ಧಾಂತಿಕ ಭಿನ್ನತೆಯನ್ನು ಮಾಡಲಾಗಲಿಲ್ಲ.

Essays by Leo 

ಮಾನವ ವಿಷಯಗಳಿಗೆ ತತ್ವಶಾಸ್ತ್ರೀಯ ತಿರುವು

ಮೊದಲಿನ ತತ್ವಶಾಸ್ತ್ರೀಯ ವಿಜ್ಞಾನದ ಇತಿಹಾಸದಲ್ಲಿ, ಸಾಕ್ರಟೀಸ್‍ನಿಂದಾದ ಮಾನವ ಸ್ವಭಾವ, ರಾಜಕೀಯ ಸಮುದಾಯಗಳ ಸ್ವಭಾವ, ಮತ್ತು ಮಾನವ ಜ್ಞಾನವನ್ನೇ ಒಳಗೊಂಡಂತೆ, ಮಾನವ ವಿಷಯಗಳ ಅಧ್ಯಯನಕ್ಕೆ ತತ್ವಶಾಸ್ತ್ರವನ್ನು ಅನ್ವಯಿಸುವ ವಿವಾದಾತ್ಮಕ ಆದರೆ ಸಫಲ ಪ್ರಯತ್ನ, ಒಂದು ಪ್ರಮುಖ ಸಂಧಿಕಾಲವಾಗಿತ್ತು. ಅವನು ಭೌತಶಾಸ್ತ್ರದ ಅಧ್ಯಯನದ ಹಳೆಯ ಪ್ರಕಾರವನ್ನು ತೀರಾ ಸಂಪೂರ್ಣವಾಗಿ ಊಹಾತ್ಮಕ, ಮತ್ತು ಸ್ವವಿಮರ್ಶೆಯಲ್ಲಿ ಕೊರತೆಯಿರುವಂಥದ್ದು ಎಂದು ಟೀಕಿಸಿದನು. ಅವನು ವಿಶೇಷವಾಗಿ ಮುಂಚಿನ ಕೆಲವು ಭೌತಶಾಸ್ತ್ರಜ್ಞರು ನಿಸರ್ಗಕ್ಕೆ ಯಾವುದೇ ಬುದ್ಧಿವಂತ ವ್ಯವಸ್ಥೆ ಇರಲಿಲ್ಲ ಎಂದು ಭಾವಿಸಬಹುದೆಂಬಂತೆ, ಮತ್ತು ವಸ್ತುಗಳನ್ನು ಚಲನೆ ಹಾಗು ಜಡದ್ರವ್ಯದ ಪರಿಭಾಷೆಯಲ್ಲಿ ವಿವರಿಸಿ ಕಂಡರು ಎಂದು ಕಳವಳಗೊಂಡಿದ್ದನು.

ಮಾನವ ವಿಷಯಗಳ ಅಧ್ಯಯನವು ಪುರಾಣ ಹಾಗು ಸಂಪ್ರದಾಯದ ಕ್ಷೇತ್ರವಾಗಿತ್ತು, ಮತ್ತು ಸಾಕ್ರಟೀಸ್‍ನಿಗೆ ಮರಣದಂಡನೆ ವಿಧಿಸಲಾಯಿತು. ನಂತರ ಅರಿಸ್ಟಾಟಲ್ ಸಾಕ್ರಟೀಸ್‍ನ ತತ್ವಶಾಸ್ತ್ರದ ಕಡಿಮೆ ವಿವಾದಾತ್ಮಕ, ಅಂತಿಮಕಾರಣ ಸೈದ್ಧಾಂತಿಕವಾಗಿದ್ದ, ಮತ್ತು ಮಾನವ ಕೇಂದ್ರಿತವಾಗಿದ್ದ ವ್ಯವಸ್ಥಿತ ಕಾರ್ಯಸೂಚಿಯನ್ನು ಸೃಷ್ಟಿಸಿದನು. ಅವನು ಮುಂಚಿನ ವಿಜ್ಞಾನಿಗಳ ಅನೇಕ ನಿರ್ಣಯಗಳನ್ನು ತಿರಸ್ಕರಿಸಿದನು. ಉದಾಹರಣೆಗೆ ಅವನ ಭೌತಶಾಸ್ತ್ರದಲ್ಲಿ ಸೂರ್ಯ ಭೂಮಿಯ ಸುತ್ತ ಸುತ್ತುತ್ತದೆ, ಮತ್ತು ಅನೇಕ ವಸ್ತುಗಳು ಅವುಗಳ ಸ್ವಭಾವದ ಭಾಗವಾಗಿ ಅವು ಮಾನವರಿಗಾಗಿ ಎಂದು ಹೊಂದಿದ್ದವು. ಪ್ರತಿ ವಸ್ತುವು ಔಪಚಾರಿಕ ಕಾರಣ ಹಾಗು ಅಂತಿಮ ಕಾರಣ ಹೊಂದಿದೆ ಮತ್ತು ತರ್ಕಾಧಾರಿತ ವಿಶ್ವ ವ್ಯವಸ್ಥೆಯಲ್ಲಿ ಪಾತ್ರ ಹೊಂದಿದೆ. ಚಲನೆ ಮತ್ತು ಬದಲಾವಣೆ ವಸ್ತುಗಳಲ್ಲಿ, ಅವುಗಳು ಯಾವ ರೀತಿಯ ವಸ್ತುಗಳು ಎಂಬುದರ ಪ್ರಕಾರ, ಮೊದಲೇ ಇರುವ ಸಾಮರ್ಥ್ಯಗಳ ವಾಸ್ತವೀಕರಣ ಎಂದು ವಿವರಿಸಲಾಗಿದೆ. ಸಾಕ್ರಟೀಸ್‍ನ ಅನುಯಾಯಿಗಳು ತತ್ವಶಾಸ್ತ್ರವನ್ನು ಒಬ್ಬ ಮನುಷ್ಯನಿಗೆ ಜೀವಿಸಲು ಅತ್ಯುತ್ತಮ ರೀತಿ ಎಂಬ ವಾಸ್ತವಿಕ ಪ್ರಶ್ನೆಯನ್ನು ಪರಿಗಣಿಸಲು ಬಳಸಬೇಕೆಂದು ಒತ್ತಾಯಿಸಿದರು (ಈ ಅಧ್ಯಯನವನ್ನು ಆರಸ್ಟಾಟಲ್ ನೀತಿಶಾಸ್ತ್ರ ಮತ್ತು ರಾಜಕೀಯ ತತ್ವಶಾಸ್ತ್ರವಾಗಿ ವಿಭಜಿಸಿದನು), ಅವರು ಯಾವುದೇ ಇತರ ಅನ್ವಯಿಕ ವಿಜ್ಞಾನದ ಪ್ರಕಾರಗಳಿಗೆ ವಾದಿಸಲಿಲ್ಲ.

ಅರಿಸ್ಟಾಟಲ್ ವಿಜ್ಞಾನ ಮತ್ತು ಕುಶಲಕರ್ಮಿಗಳ ವ್ಯಾವಹಾರಿಕ ಜ್ಞಾನದ ನಡುವಿನ ತೀಕ್ಷ್ಣವಾದ ಭಿನ್ನತೆಯನ್ನು ಸಮರ್ಥಿಸಿದನು, ಸೈದ್ಧಾಂತಿಕ ಚಿಂತನವನ್ನು ಅತ್ಯುನ್ನತ ಪ್ರಕಾರದ ಮಾನವ ಕ್ರಿಯೆಯಾಗಿ, ಒಳ್ಳೆ ಜೀವನದ ಬಗ್ಗೆ ವಾಸ್ತವಿಕ ಚಿಂತನೆಯನ್ನು ಸ್ವಲ್ಪ ಕಡಿಮೆ ಉದಾತ್ತವಾಗಿ, ಮತ್ತು ಕುಶಲಕರ್ಮಿಗಳ ಜ್ಞಾನವನ್ನು ಕೇವಲ ಕೆಳವರ್ಗದವರಿಗೆ ಸೂಕ್ತವಾದದ್ದೆಂದು ಕಂಡನು. ಆಧುನಿಕ ವಿಜ್ಞಾನಕ್ಕೆ ವ್ಯತಿರಿಕ್ತವಾಗಿ, ಅರಿಸ್ಟಾಟಲ್ನ ಪ್ರಭಾವಿ ಒತ್ತು ಸಂಸ್ಕರಿಸದ ದತ್ತಾಂಶದಿಂದ ಸಾರ್ವತ್ರಿಕ ನಿಯಮಗಳನ್ನು ತರ್ಕಿಸುವ "ಸೈದ್ಧಾಂತಿಕ" ಕ್ರಮಗಳ ಮೇಲಿತ್ತು, ಮತ್ತು ಅನುಭವ ಹಾಗು ಸಂಸ್ಕರಿಸದ ದತ್ತಾಂಶದ ಸಂಗ್ರಹವನ್ನು ವಿಜ್ಞಾನದ್ದೇ ಭಾಗವೆಂದು ಕಾಣಲಿಲ್ಲ.

ಮಧ್ಯಯುಗೀಯ ವಿಜ್ಞಾನ

ಪ್ರಾಚೀನಕಾಲದ ಉತ್ತರಾರ್ಧ ಮತ್ತು ಮುಂಚಿನ ಮಧ್ಯಯುಗದ ಅವಧಿಯಲ್ಲಿ, ನೈಸರ್ಗಿಕ ವಿದ್ಯಮಾನದ ಮೇಲಿನ ವಿಚಾರಣೆಗೆ ಆರಸ್ಟಾಟಲ್‍ನ ವಿಧಾನವನ್ನು ಬಳಸಲಾಯಿತು. ರೋಮನ್ ಸಾಮ್ರಾಜ್ಯದ ಪತನ ಮತ್ತು ಆವರ್ತಕ ರಾಜಕೀಯ ಹೋರಾಟಗಳ ಅವಧಿಯಲ್ಲಿ ಸ್ವಲ್ಪ ಪುರಾತನ ಜ್ಞಾನ ಕಳೆದುಹೋಯಿತು, ಅಥವಾ ಕೆಲವು ಸಂದರ್ಭಗಳಲ್ಲಿ ಅದನ್ನು ಅಸ್ಪಷ್ಟತೆಯಲ್ಲಿ ಇರಿಸಲಾಯಿತು. ಆದಾಗ್ಯೂ, ವಿಜ್ಞಾನದ ಸಾಮಾನ್ಯ ಕ್ಷೇತ್ರಗಳು, ಅಥವಾ ನೈಸರ್ಗಿಕ ತತ್ವಶಾಸ್ತ್ರವೆಂದು ಕರೆಯಲ್ಪಡುತ್ತಿದ್ದ ಕ್ಷೇತ್ರ, ಮತ್ತು ಪುರಾತನ ಪ್ರಪಂಚದ ಹೆಚ್ಚಿನ ಸಾಮಾನ್ಯ ಜ್ಞಾನ ಸವಿಲ್‍ನ ಇಸಿಡೋರ್‌ನಂತಹ ಮುಂಚಿನ ಲ್ಯಾಟಿನ್ ವಿಶ್ವಕೋಶಕರ್ತರ ಕೃತಿಗಳ ಮೂಲಕ ಸಂರಕ್ಷಿಸಲ್ಪಟ್ಟು ಉಳಿಯಿತು. ಅಲ್ಲದೆ, ಬಿಜ಼ಂಟೀನ್ ಸಾಮ್ರಾಜ್ಯದಲ್ಲಿ, ಅನೇಕ ಗ್ರೀಕ್ ವಿಜ್ಞಾನ ಗ್ರಂಥಗಳನ್ನು ನೆಸ್ಟೋರಿಯನ್ನರು ಮತ್ತು ಮನಾಫ಼ಸೈಟರಂತಹ ಗುಂಪುಗಳಿಂದ ಮಾಡಲ್ಪಟ್ಟ ಸೀರಿಯಾಕ್ ಅನುವಾದಗಳಲ್ಲಿ ಸಂರಕ್ಷಿಸಲಾಯಿತು. ಇವುಗಳಲ್ಲಿ ಹಲವನ್ನು ನಂತರ ಇಸ್ಲಾಮಿ ಆಡಳಿತದಡಿಯಲ್ಲಿ ಅರಬ್ಬಿ ಭಾಷೆಗೆ ಅನುವಾದಿಸಲಾಯಿತು, ಮತ್ತು ಈ ಅವಧಿಯಲ್ಲಿ ಅನೇಕ ಪ್ರಕಾರಗಳ ಶಾಸ್ತ್ರೀಯ ಕಲಿಕೆಯನ್ನು ಸಂರಕ್ಷಿಸಲಾಯಿತು ಮತ್ತು ಕೆಲವು ಸಂದರ್ಭಗಳಲ್ಲಿ ಸುಧಾರಿಸಲಾಯಿತು. ನಂತರದ ಮಧ್ಯಯುಗೀಯ ಅವಧಿಯಲ್ಲಿ, ಬಿಜ಼್ಯಾಂಟಿಯಮ್ ಮತ್ತು ಇಸ್ಲಾಮಿ ಪ್ರಪಂಚದಲ್ಲಿ ವಿಜ್ಞಾನ ಕ್ಷೀಣಿಸುತ್ತಿದ್ದಂತೆ, ಪಶ್ಚಿಮ ಐರೋಪ್ಯರು ಮೆಡಿಟರೇನಿಯನ್‍ನಿಂದ ಪುರಾತನ ಗ್ರಂಥಗಳನ್ನು ಸಂಗ್ರಹಿಸಲು ಪ್ರಾರಂಭಿಸಿದರು, ಲ್ಯಾಟಿನ್‍ನಲ್ಲಿ ಮಾತ್ರವಲ್ಲ, ಗ್ರೀಕ್, ಅರಬ್ಬಿ, ಮತ್ತು ಹಿಬ್ರೂವಲ್ಲಿ ಕೂಡ. ಕ್ಯಾಥಲಿಕ್ ವಿದ್ವಾಂಸರ ಪೈಕಿ ಆರಸ್ಟಾಟಲ್, ಟಾಲಮಿ, ಯೂಕ್ಲಿಡ್‍ನಂತಹ ಪುರಾತನ ಸಂಶೋಧಕರ ಜ್ಞಾನವನ್ನು ನೈಸರ್ಗಿಕ ವಿದ್ಯಮಾನದ ವಿವಿಧ ಅಂಶಗಳಲ್ಲಿ ನವೀಕೃತ ಆಸಕ್ತಿಯೊಂದಿಗೆ ಮರಳಿ ಪಡೆಯಲಾಯಿತು. ಯೂರೋಪ್‍ನಲ್ಲಿ, ರೋಜರ್ ಬೇಕನ್‍ನಂತಹ ಪುರುಷರು ಇಂಗ್ಲೆಂಡ್‍ನಲ್ಲಿ ಹೆಚ್ಚು ಪ್ರಾಯೋಗಿಕ ವಿಜ್ಞಾನದ ಪರ ವಾದಿಸಿದರು. ಮಧ್ಯಯುಗದ ಉತ್ತರಾರ್ಧದಲ್ಲಿ, ಸ್ಕಲ್ಯಾಸ್ಟಸಿಸಮ್ ಎಂದು ಕರೆಯಲಾದ ಕಥಾಲಸಿಸಮ್ ಮತ್ತು ಆರಸ್ಟಟೀಲಿಯನಿಸಮ್‍ನ ಸಂಶ್ಲೇಷಣೆಯು ವಿಜ್ಞಾನದ ಹೊಸ ಭೌಗೋಳಿಕ ಕೇಂದ್ರವಾಗಿದ್ದ ಪಶ್ಚಿಮ ಯೂರೋಪ್‍ನಲ್ಲಿ ಏಳಿಗೆ ಹೊಂದುತ್ತಿತ್ತು.

ಪುನರುದಯ ಕಾಲ, ಮತ್ತು ಆರಂಭಿಕ ಆಧುನಿಕ ವಿಜ್ಞಾನ

ವಿಜ್ಞಾನ 
ಗಾಲಿಲೆಯೊನನ್ನು ಆಧುನಿಕ ವಿಜ್ಞಾನದ ಜನಕರ ಪೈಕಿ ಒಬ್ಬನೆಂದು ಪರಿಗಣಿಸಲಾಗುತ್ತದೆ.

ಮಧ್ಯಯುಗದ ಉತ್ತರಾರ್ಧದಲ್ಲಿ, ವಿಶೇಷವಾಗಿ ಇಟಲಿಯಲ್ಲಿ ಕುಸಿಯುತ್ತಿದ್ದ ಬಿಜ಼ಂಟೀನ್ ಸಾಮ್ರಾಜ್ಯದಿಂದ ಗ್ರೀಕ್ ಗ್ರಂಥಗಳು ಮತ್ತು ವಿದ್ವಾಂಸರ ಒಳಹರಿವಿತ್ತು. ಕೋಪರ್ನಿಕಸ್ ಟಾಲಮಿಯ ಆಲ್ಮಜೆಸ್ಟ್‍ನ ಭೂಕೇಂದ್ರಿತ ಮಾದರಿಗೆ ಭಿನ್ನವಾದ ಸೌರಮಂಡಲದ ಸೂರ್ಯಕೇಂದ್ರಿತ ಮಾದರಿಯನ್ನು ಸೂತ್ರೀಕರಿಸಿದನು. ಸ್ಕಲ್ಯಾಸ್ಟಸಿಸಮ್‍ನ ಎಲ್ಲ ಅಂಶಗಳನ್ನು ೧೫ನೇ ಮತ್ತು ೧೬ನೇ ಶತಮಾನದಲ್ಲಿ ಟೀಕಿಸಲಾಯಿತು; ಪ್ರಯೋಗ ಮತ್ತು ಗಣಿತದ ನವೀನ ಬಳಕೆಮಾಡಿ ಕುಖ್ಯಾತವಾಗಿ ಚಿತ್ರಹಿಂಸೆ ಅನುಭವಿಸಿದ ಒಬ್ಬ ಲೇಖಕ ಗಾಲಿಲೆಯೊ. ಆದಾಗ್ಯೂ ಕಿರುಕುಳವು ಪೋಪ್ ಎಂಟನೆಯ ಅರ್ಬನ್ ಕೋಪರ್ನಿಕಸ್‍ನ ವ್ಯವಸ್ಥೆಯ ಬಗ್ಗೆ ಬರೆಯುವಂತೆ ಗಾಲಿಲೆಯೊನನ್ನು ಹರಸಿದ ನಂತರ ಆರಂಭವಾಯಿತು. ಗಾಲಿಲೆಯೊ ಪೋಪ್‍ನ ವಾದಗಳನ್ನು ಬಳಸಿದ್ದನು ಮತ್ತು ಅವನ್ನು ಮೂಢನ ಧ್ವನಿಯಲ್ಲಿ "ಡಾಯಲಾಗ್ ಕನ್ಸರ್ನಿಂಗ್ ದ ಟೂ ಚೀಫ಼್ ವರ್ಲ್ಡ್ ಸಿಸ್ಟಮ್ಸ್" ಕೃತಿಯಲ್ಲಿ ಇರಿಸಿದನು ಮತ್ತು ಇದು ಪೋಪ್‍ನನ್ನು ಬಹಳ ಅಸಂತುಷ್ಟಿಗೊಳಿಸಿತು.

ಉತ್ತರ ಯೂರೋಪ್‍ನಲ್ಲಿ, ಚರ್ಚ್ ಮತತತ್ವದೊಂದಿಗೆ ಒಪ್ಪದಿರುವ ಕೆಲವನ್ನು ಒಳಗೊಂಡಂತೆ ಅನೇಕ ವಾದಗಳನ್ನು ಪ್ರಕಟಿಸಲು ಮುದ್ರಣಾಲಯದ ಹೊಸ ತಂತ್ರಜ್ಞಾನವನ್ನು ವ್ಯಾಪಕವಾಗಿ ಬಳಸಲಾಯಿತು. ರನೆ ಡೇಕಾರ್ಟ್ ಮತ್ತು ಫ಼್ರ್ಯಾನ್ಸಿಸ್ ಬೇಕನ್ ಒಂದು ಹೊಸ ಪ್ರಕಾರದ ಆರಸ್ಟಾಟಲ್ ವಿರೋಧಿ ವಿಜ್ಞಾನಕ್ಕೆ ಪರವಾದ ತತ್ವಶಾಸ್ತ್ರೀಯ ವಾದಗಳನ್ನು ಪ್ರಕಟಿಸಿದರು. ಗಾಲಿಲೆಯೊ ವಾದಿಸಿದಂತೆ, ಪ್ರಕೃತಿಯನ್ನು ಅದ್ಯಯನಿಸಲು ಗಣಿತವನ್ನು ಬಳಸಬಹುದು ಎಂದು ಡೇಕಾರ್ಟ್ ವಾದಿಸಿದನು, ಮತ್ತು ಬೇಕನ್ ಚಿಂತನೆಯ ಮೇಲೆ ಪ್ರಯೋಗದ ಪ್ರಾಮುಖ್ಯವನ್ನು ಒತ್ತಿ ಹೇಳಿದನು. ಆರಸ್ಟಾಟಲ್ ಮುಂದಿಟ್ಟ ಔಪಚಾರಿಕ ಕಾರಣ ಹಾಗು ಅಂತಿಮ ಕಾರಣದ ಪರಿಕಲ್ಪನೆಗಳನ್ನು ಬೇಕನ್ ಪ್ರಶ್ನಿಸಿದನು, ಮತ್ತು ವಿಜ್ಞಾನವು, ಯಾವುದೇ ನಿರ್ದಿಷ್ಟ ಪ್ರಕೃತಿ ಇದೆಯೆಂದು, ಅಥವಾ ಪ್ರತಿ ವಸ್ತುವಿನ ಸಂಕೀರ್ಣ ಪ್ರಕಾರದ "ಔಪಚಾರಿಕ ಕಾರಣ" ಇದೆಯೆಂದು ಭಾವಿಸುವ ಬದಲು, ಶಾಖದಂತಹ "ಸರಳ" ಪ್ರಕೃತಿಗಳ ನಿಯಮಗಳನ್ನು ಅಧ್ಯಯನಿಸಬೇಕು ಎನ್ನುವ ವಿಚಾರವನ್ನು ಪ್ರೋತ್ಸಾಹಿಸಿದನು. ಈ ಹೊಸ ಆಧುನಿಕ ವಿಜ್ಞಾನವು ತನ್ನನ್ನು ತಾನು "ಪ್ರಕೃತಿಯ ನಿಯಮಗಳನ್ನು" ವಿವರಿಸುತ್ತಿರುವಂತೆ ಕಾಣಲು ಆರಂಭಿಸಿತು. ಪ್ರಕೃತಿಯಲ್ಲಿನ ಅಧ್ಯಯನಗಳಿಗೆ ಈ ಅದ್ಯತನಗೊಳಿಸಿದ ವಿಧಾನವನ್ನು ಯಾಂತ್ರಿಕ ಎಂದು ಕಾಣಲಾಯಿತು. ವಿಜ್ಞಾನವು ಮೊದಲ ಸಲ ಎಲ್ಲ ಮಾನವ ಜೀವನದ ಏಳಿಗೆಗಾಗಿ ಕಾರ್ಯರೂಪದ ಆವಿಷ್ಕಾರಗಳ ಗುರಿಯಿರಿಸಿಕೊಳ್ಳಬೇಕು ಎಂದು ಸಹ ಬೇಕನ್ ವಾದಿಸಿದನು.

ವಿಜ್ಞಾನ 
೧೯ನೇ ಶತಮಾನದ, ಜಾಗವನ್ನು ತುಂಬುವ ಉದ್ದೇಶಕ್ಕಾಗಿ ದ್ರವವಾಗಿರಬೇಕಾಗಿದ್ದ, ಬೆಳಕಿನ ಅಲೆಗಳ ಉನ್ನತ ಆವರ್ತನಗಳಿಗೆ ಆಸರೆಯಾಗುವ ಉದ್ದೇಶಕ್ಕಾಗಿ ಉಕ್ಕಿಗಿಂತ ಹೆಚ್ಚು ಗಡುಸಾಗಿರಬೇಕಾಗಿದ್ದ, ಹಾಗೆಯೇ ಗ್ರಹಗಳ ಕಕ್ಷೆಗಳ ದೃಷ್ಟಿಗೋಚರತೆ ಮೇಲೆ ಪರಿಣಾಮ ಬೀರದಿರಲು ರಾಶಿರಹಿತ ಮತ್ತು ಸ್ನಿಗ್ಧತೆ ಇಲ್ಲವಾಗಿರಬೇಕಾಗಿದ್ದ ಮಾಧ್ಯಮವಾಗಿ ಬೆಳಕನ್ನು ಹೊಂದಿರುವ ಈಥರ್‌ನ ಸಿದ್ಧಾಂತವನ್ನು ಅಲ್ಲಗಳೆದ ಪ್ರಖ್ಯಾತ ಮೈಕಲ್‍ಸನ್-ಮಾರ್ಲಿ ಪ್ರಯೋಗದಿಂದ ದತ್ತಾಂಶಗಳು.

ಜ್ಞಾನೋದಯದ ಯುಗ

೧೭ನೇ ಮತ್ತು ೧೮ನೇ ಶತಮಾನಗಳಲ್ಲಿ, ಬೇಕನ್ ಮತ್ತು ಡೇಕಾರ್ಟ್‍ರಿಂದ ಪ್ರೋತ್ಸಾಹಿತವಾದ ಆಧುನಿಕತೆಯ ಯೋಜನೆಯು ತ್ವರಿತ ವೈಜ್ಞಾನಿಕ ಪ್ರಗತಿ ಮತ್ತು ಗಣಿತೀಯ, ವಿಧಿವತ್ತಾಗಿ ಪ್ರಾಯೋಗಿಕ, ಹಾಗು ಉದ್ದೇಶಪೂರ್ವಕವಾಗಿ ನವೀನವಾಗಿದ್ದ ಒಂದು ಹೊಸ ಪ್ರಕಾರದ ನೈಸರ್ಗಿಕ ವಿಜ್ಞಾನದ ಸಫಲ ಅಭಿವೃದ್ಧಿಗೆ ಕಾರಣವಾಯಿತು. ನ್ಯೂಟನ್ ಮತ್ತು ಲೈಬ್ನಿಟ್ಸ್, ಪ್ರಯೋಗದಿಂದ ದೃಢಪಡಿಸಬಹುದಾದ ಮತ್ತು ಗಣಿತದಲ್ಲಿ ವಿವರಿಸಬಹುದಾದ, ಇಂದು ನ್ಯೂಟೋನಿಯನ್ ಭೌತಶಾಸ್ತ್ರ ಎಂದು ಉಲ್ಲೇಖಿಸಲಾಗುವ ಒಂದು ಹೊಸ ಭೌತಶಾಸ್ತ್ರವನ್ನು ಅಭಿವೃದ್ಧಿಪಡಿಸುವಲ್ಲಿ ಸಫಲವಾದರು. ಆರಸ್ಟಾಟಲ್‍ನ ಭೌತಶಾಸ್ತ್ರದಿಂದ, ಆದರೆ ಈಗ ಒಂದು ಹೊಸ ಅಂತಿಮಕಾರಣ ಸೈದ್ಧಾಂತಿಕವಲ್ಲದ ರೀತಿಯಲ್ಲಿ ಬಳಸಲಾಗುತ್ತಿರುವ ಪದಗಳನ್ನು, ಉದಾಹರಣೆಗೆ "ಶಕ್ತಿ" ಮತ್ತು "ಸಾಮರ್ಥ್ಯ" ಪದಗಳನ್ನು (ಆರಸ್ಟಾಟಲ್‍ನ "ಎನರ್ಜಿಯ ಮತ್ತು ಪೊಟೆಂಶಿಯ"ದ ಆಧುನಿಕ ಆವೃತ್ತಿಗಳು), ಕೂಡ ಲೈಬ್ನಿಟ್ಸ್ ಸೇರಿಸಿಕೊಂಡನು. ಬೇಕನ್‍ನ ಶೈಲಿಯಲ್ಲಿ, ವಿವಿಧ ಪ್ರಕಾರಗಳ ವಸ್ತುಗಳು ಎಲ್ಲವೂ, ಪ್ರತಿ ಪ್ರಕಾರದ ವಸ್ತುವಿಗೆ ಯಾವುದೇ ವಿಶೇಷ ಔಪಚಾರಿಕ ಮತ್ತು ಅಂತಿಮ ಕಾರಣಗಳು ಇಲ್ಲದೆಯೇ, ಪ್ರಕೃತಿಯ ಅದೇ ಸಾಮಾನ್ಯ ನಿಯಮಗಳ ಪ್ರಕಾರ ಕಾರ್ಯನಿರ್ವಹಿಸುತ್ತವೆ ಎಂದು ಅವನು ಭಾವಿಸಿದನು.

ಈ ಅವಧಿಯಲ್ಲಿ "ವಿಜ್ಞಾನ" ಶಬ್ದವು ಕ್ರಮೇಣ ಒಂದು ಪ್ರಕಾರದ ಜ್ಞಾನದ ಒಂದು ಪ್ರಕಾರದ ಅನ್ವೇಷಣೆಯನ್ನು, ವಿಶೇಷವಾಗಿ ನಿಸರ್ಗದ ಜ್ಞಾನವನ್ನು ಉಲ್ಲೇಖಿಸಲು ಹೆಚ್ಚು ಸಾಮಾನ್ಯವಾಗಿ ಬಳಸಲ್ಪಟ್ಟಿತು — ಮತ್ತು ಅರ್ಥದಲ್ಲಿ ಹಳೆಯ ಪದ "ನೈಸರ್ಗಿಕ ತತ್ವಶಾಸ್ತ್ರ"ಕ್ಕೆ ಹತ್ತಿರ ಬಂದಿತು.

೧೯ನೇ ಶತಮಾನ

ಜಾನ್ ಹರ್ಶಲ್ ಮತ್ತು ವಿಲಿಯಮ್ ಹ್ಯುವಲ್ ಇಬ್ಬರೂ ವಿಧಾನಶಾಸ್ತ್ರವನ್ನು ಕ್ರಮಬದ್ಧಗೊಳಿಸಿದರು: ಎರಡನೆಯವನು ವಿಜ್ಞಾನಿ ಪದವನ್ನು ಸೃಷ್ಟಿಸಿದನು. ಚಾರ್ಲ್ಸ್ ಡಾರ್ವಿನ್ ಆನ್ ದಿ ಆರಿಜಿನ್ ಆಫ಼್ ಸ್ಪೀಶೀಸ್ ಅನ್ನು ಪ್ರಕಟಿಸಿದಾಗ ಮಾರ್ಪಾಡಿನೊಂದಿಗೆ ಅವರೋಹಣವನ್ನು ಜೀವವೈಜ್ಞಾನಿಕ ಸಂಕೀರ್ಣತೆಯ ಚಾಲ್ತಿಯಲ್ಲಿರುವ ವಿಕಾಸಾತ್ಮಕ ವಿವರಣೆಯಾಗಿ ಸ್ಥಿರೀಕರಿಸಿದನು. ನೈಸರ್ಗಿಕ ಆಯ್ಕೆಯ ಅವನ ಸಿದ್ಧಾಂತವು ಜೀವಜಾತಿಗಳು ಹೇಗೆ ಉತ್ಪತ್ತಿಯಾದವು ಎಂಬುದಕ್ಕೆ ಒಂದು ಸ್ವಾಭಾವಿಕ ವಿವರಣೆಯನ್ನು ಒದಗಿಸಿತು, ಆದರೆ ಇದು ಕೇವಲ ಒಂದು ಶತಮಾನದ ನಂತರ ವ್ಯಾಪಕವಾದ ಮಾನ್ಯತೆಯನ್ನು ಪಡೆಯಿತು. ಜಾನ್ ಡಾಲ್ಟನ್ ಪರಮಾಣುಗಳ ಪರಿಕಲ್ಪನೆಯನ್ನು ವೃದ್ಧಿಪಡಿಸಿದನು. ಉಷ್ಣಬಲ ವಿಜ್ಞಾನದ ನಿಯಮಗಳು ಮತ್ತು ವಿದ್ಯುತ್ಕಾಂತೀಯ ಸಿದ್ಧಾಂತವನ್ನೂ ೧೯ನೇ ಶತಮಾನದಲ್ಲಿ ದೃಢಪಡಿಸಲಾಯಿತು, ಇದು ನ್ಯೂಟನ್‍ನ ಚೌಕಟ್ಟನ್ನು ಬಳಸಿ ಸುಲಭವಾಗಿ ಉತ್ತರಿಸಲಾಗದ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿತು.

೨೦ನೇ ಶತಮಾನ ಮತ್ತು ಅದರ ಆಚೆಗೆ

ವಿಜ್ಞಾನ 
Students at the Science Battle

ಐನ್‍ಸ್ಟೈನ್‍ನ ಸಾಪೇಕ್ಷತಾ ಸಿದ್ಧಾಂತ ಮತ್ತು ಕ್ವಾಂಟಮ್ ಯಂತ್ರಶಾಸ್ತ್ರದ ಬೆಳವಣಿಗೆಯು ನ್ಯೂಟೋನಿಯನ್ ಭೌತಶಾಸ್ತ್ರದ ಬದಲಿಗೆ ಎರಡು ಭಾಗಗಳನ್ನು ಹೊಂದಿರುವ, ಪ್ರಕೃತಿಯಲ್ಲಿನ ವಿಭಿನ್ನ ಪ್ರಕಾರದ ಘಟನೆಗಳನ್ನು ವಿವರಿಸುವ ಒಂದು ಹೊಸ ಭೌತಶಾಸ್ತ್ರ ಬರುವುದಕ್ಕೆ ದಾರಿತೋರಿತು. ಈ ಶತಮಾನದ ಯುದ್ಧಗಳ ಅವಧಿಯಲ್ಲಿ ವೈಜ್ಞಾನಿಕ ನಾವೀನ್ಯದ ವ್ಯಾಪಕ ಬಳಕೆಯು ಬಾಹ್ಯಾಕಾಶ ಓಟಕ್ಕೆ ದಾರಿತೋರಿತು, ಆಯುರ್ನಿರೀಕ್ಷೆಯನ್ನು ಹೆಚ್ಚಿಸಿತು, ಮತ್ತು ಬೈಜಿಕ ಶಸ್ತ್ರಾಸ್ತ್ರ ಓಟಕ್ಕೆ ದಾರಿತೋರಿ ಆಧುನಿಕ ವಿಜ್ಞಾನದ ಪ್ರಾಮುಖ್ಯಕ್ಕೆ ವ್ಯಾಪಕ ಸಾರ್ವಜನಿಕ ಮೆಚ್ಚುಗೆಯನ್ನು ನೀಡಿತು. ತೀರಾ ಇತ್ತೀಚೆಗೆ ವಿಜ್ಞಾನದ ಅಂತಿಮ ಉದ್ದೇಶ ಮಾನವರು ಮತ್ತು ನಮ್ಮ ಪ್ರಕೃತಿಯ ಬಗ್ಗೆ ಅರ್ಥೈಸುವುದು ಎಂದು ವಾದಿಸಲಾಗಿದೆ – ಉದಾಹರಣೆಗೆ ತಮ್ಮ ಪುಸ್ತಕ ಕನ್ಸಿಲಿಯನ್ಸ್‍ನಲ್ಲಿ ಇಒ ವಿಲ್ಸನ್ ಹೇಳಿದರು "ಮಾನವ ಸ್ಥಿತಿಗತಿಯು ನೈಸರ್ಗಿಕ ವಿಜ್ಞಾನಗಳ ಅತ್ಯಂತ ಪ್ರಮುಖ ಸೀಮಾರೇಖೆ." ಜೆರಮಿ ಗ್ರಿಫ಼ಿತ್ ಈ ಅಭಿಪ್ರಾಯವನ್ನು ಬೆಂಬಲಿಸುತ್ತಾರೆ.

ವಿಜ್ಞಾನದ ತತ್ವಶಾಸ್ತ್ರ

    ಮುಖ್ಯ ಲೇಖನ: ವಿಜ್ಞಾನದ ತತ್ವಶಾಸ್ತ್ರ
ವಿಜ್ಞಾನ 
ಜಾನ್ ಲಾಕ್

ಕಾರ್ಯನಿರತ ವಿಜ್ಞಾನಿಗಳು ಸಾಮಾನ್ಯವಾಗಿ ವೈಜ್ಞಾನಿಕ ವಿಧಾನವನ್ನು ಸಮರ್ಥಿಸಲು ಅಗತ್ಯವಿರುವ ಮೂಲಭೂತ ಕಲ್ಪನೆಗಳ ಒಂದು ಸಮೂಹವನ್ನು ಭಾವಿಸಿಕೊಳ್ಳುತ್ತಾರೆ: (1) ಎಲ್ಲ ವೈಚಾರಿಕ ವೀಕ್ಷಕರಿಂದ ಸಹಮತಿಹೊಂದಲಾದ ವಸ್ತುನಿಷ್ಠ ವಾಸ್ತವವಿದೆ ಎಂದು; (2) ಈ ವಸ್ತುನಿಷ್ಠ ವಾಸ್ತವವು ನೈಸರ್ಗಿಕ ನಿಯಮಗಳ ಪ್ರಭಾವಕ್ಕೆ ಒಳಪಟ್ಟಿದೆ ಎಂದು; (3) ಈ ನಿಯಮಗಳನ್ನು ವ್ಯವಸ್ಥಿತ ವೀಕ್ಷಣೆ ಮತ್ತು ಪ್ರಯೋಗದ ವಿಧಾನದಿಂದ ಕಂಡುಹಿಡಿಯಬಹುದು ಎಂದು. ವಿಜ್ಞಾನದ ತತ್ವಶಾಸ್ತ್ರವು ಈ ಆಧಾರಭೂತ ಕಲ್ಪನೆಗಳ ಅರ್ಥವೇನು ಮತ್ತು ಅವು ಸಮಂಜಸವಾಗಿವೆಯೆ ಎಂಬುದರ ಆಳವಾದ ಅರ್ಥವನ್ನು ಹುಡುಕಲು ಪ್ರಯತ್ನಿಸುತ್ತದೆ.

ಎಲ್ಲ ವೀಕ್ಷಕರು ಒಂದು ಸಾಮಾನ್ಯ ವಾಸ್ತವದ ಬಗ್ಗೆ ಸಹಮತಿ ಹೊಂದಿದ್ದಾರೆ ಎಂಬ ನಂಬಿಕೆಯನ್ನು ವಾಸ್ತವವಾದವೆಂದು ಕರೆಯುತ್ತಾರೆ. ಇದು ಪ್ರತಿವಾಸ್ತವವಾದಕ್ಕೆ ತದ್ವಿರುದ್ಧವಾಗಿದೆ, ಅಂದರೆ ಒಬ್ಬ ವೀಕ್ಷಕನಿಗೆ ಸತ್ಯವಾಗಿರುವ ವಸ್ತುಗಳು ಎಲ್ಲ ವೀಕ್ಷಕರಿಗೆ ಸತ್ಯವಾಗಿವೆ ಎಂಬ ಪರಿಪೂರ್ಣ ಸತ್ಯದ ಯಾವುದೇ ಮಾನ್ಯ ಪರಿಕಲ್ಪನೆ ಇಲ್ಲ ಎಂಬ ನಂಬಿಕೆ. ಆದರ್ಶವಾದವು ಪ್ರತಿವಾಸ್ತವವಾದದ ಅತಿ ಸಾಮಾನ್ಯವಾಗಿ ಸಮರ್ಥಿಸಲ್ಪಟ್ಟ ಪ್ರಕಾರವಾಗಿದೆ, ಮನಸ್ಸು ಅಥವಾ ಪ್ರಜ್ಞೆಯು ಅತಿ ಮೂಲಭೂತ ಸತ್ವ, ಮತ್ತು ಪ್ರತಿ ಮನಸ್ಸು ಅದರ ಸ್ವಂತ ವಾಸ್ತವವನ್ನು ಸೃಷ್ಟಿಸುತ್ತದೆ ಎಂಬ ನಂಬಿಕೆ. ಆದರ್ಶಾತ್ಮಕ ಪ್ರಾಪಂಚಿಕ ದೃಷ್ಟಿಕೋನದಲ್ಲಿ, ಒಂದು ಮನಸ್ಸಿಗೆ ಏನು ಸತ್ಯವಿರುತ್ತದೊ ಅದು ಎಲ್ಲ ಮನಸ್ಸುಗಳಿಗೆ ಸತ್ಯವಿಲ್ಲದಿರಬಹುದು.

ವಿಜ್ಞಾನದ ತತ್ವಶಾಸ್ತ್ರದಲ್ಲಿ ವಿಭಿನ್ನ ತತ್ವ ಸಿದ್ಧಾಂತಗಳಿವೆ. ಪ್ರಯೋಗವಾದವು ಅತ್ಯಂತ ಜನಪ್ರಿಯ ದೃಷ್ಟಿಕೋನವಾಗಿದೆ, ಇದು ಜ್ಞಾನವು ವೀಕ್ಷಣೆಯನ್ನು ಒಳಗೊಂಡ ಪ್ರಕ್ರಿಯೆಯಿಂದ ಸೃಷ್ಟಿಸಲ್ಪಡುತ್ತದೆ ಮತ್ತು ವೈಜ್ಞಾನಿಕ ಸಿದ್ಧಾಂತಗಳು ಅಂತಹ ವೀಕ್ಷಣೆಗಳಿಂದುಂಟಾದ ಸಾಮಾನ್ಯೀಕರಣದ ಪರಿಣಾಮ ಎಂದು ಹೇಳಿಕೊಳ್ಳುತ್ತದೆ. ಪ್ರಯೋಗವಾದವು ಸಾಮಾನ್ಯವಾಗಿ ಚೋದನವಾದ, ಮಾನವರು ಮಾಡಬಹುದಾದ ಪರಿಮಿತ ಸಂಖ್ಯೆಯ ವೀಕ್ಷಣೆಗಳಿಂದ ಮತ್ತು ಪರಿಣಾಮವಾಗಿ ವೈಜ್ಞಾನಿಕ ಸಿದ್ಧಾಂತಗಳನ್ನು ಖಚಿತಪಡಿಸಲು ಲಭ್ಯವಿರುವ ಪ್ರಯೋಗವಾದಿ ಪುರಾವೆಯ ಪರಿಮಿತ ಪ್ರಮಾಣದಿಂದ ಸಾಮಾನ್ಯ ಸಿದ್ಧಾಂತಗಳನ್ನು ಸಮರ್ಥಿಸಬಹುದಾದ ರೀತಿಯನ್ನು ವಿವರಿಸಲು ಪ್ರಯತ್ನಿಸುವ ದೃಷ್ಟಿಕೋನವನ್ನು ಆವರಿಸಿರುತ್ತದೆ. ಇದು ಅಗತ್ಯವಾಗಿದೆ ಏಕೆಂದರೆ ಆ ಸಿದ್ಧಾಂತಗಳು ಮಾಡುವ ಭವಿಷ್ಯವಾಣಿಗಳ ಸಂಖ್ಯೆಯು ಅಪರಿಮಿತವಾಗಿದೆ, ಮತ್ತು ಇದರರ್ಥ ಅವನ್ನು ಕೇವಲ ಅನುಮಾನಾತ್ಮಕ ತರ್ಕ ಬಳಸಿ ಪುರಾವೆಯ ಪರಿಮಿತ ಪ್ರಮಾಣದಿಂದ ತಿಳಿಯಲಾಗದು. ಪ್ರಯೋಗವಾದದ ಅನೇಕ ಸ್ವರೂಪಗಳು ಅಸ್ತಿತ್ವದಲ್ಲಿವೆ, ಬೇಸಿಯನಿಸಮ್ ಮತ್ತು ಪೂರ್ವಕಲ್ಪಿತ-ಅನುಮಾನಾತ್ಮಕ ವಿಧಾನ ಇದರಲ್ಲಿ ಪ್ರಧಾನವಾಗಿವೆ.

ವಿಜ್ಞಾನ Leslie - physicsFrancis Baily - astronomerPlayfair - UniformitarianismRutherford - NitrogenDollond - OpticsYoung - modulus etcBrown - Brownian motionGilbert - Royal Society presidentBanks - BotanistKater - measured gravity??Howard - Chemical EngineerDundonald - propellorsWilliam Allen - PharmacistHenry - Gas lawWollaston - Palladium and RhodiumHatchett - NiobiumDavy - ChemistMaudslay - modern latheBentham - machinery?Rumford - thermodynamicsMurdock - sun and planet gearRennie - Docks, canals & bridgesJessop - CanalsMylne - Blackfriars bridgeCongreve - rocketsDonkin - engineerHenry Fourdrinier - Paper making machineThomson - atomsWilliam Symington - first steam boatMiller - steam boatNasmyth - painter and scientistNasmyth2Bramah - HydraulicsTrevithickHerschel - UranusMaskelyne - Astronomer RoyalJenner - Smallpox vaccineCavendishDalton - atomsBrunel - Civil EngineerBoulton - SteamHuddart - Rope machineWatt - Steam engineTelfordCrompton - spinning machineTennant - Industrial ChemistCartwright - Power loomRonalds - Electric telegraphStanhope - InventorUse your cursor to explore (or Click icon to enlarge)
Distinguished Men of Science. Use a cursor to see who is who.

ಪ್ರಯೋಗವಾದವು, ಜ್ಞಾನವು ಮಾನವನ ಬುದ್ಧಿಶಕ್ತಿಯಿಂದ ಸೃಷ್ಟಿಸಲ್ಪಟ್ಟಿದೆ ವೀಕ್ಷಣೆಯಿಂದಲ್ಲ ಎಂದು ಅಭಿಪ್ರಾಯಪಡುವ, ಮೂಲತಃ ಡೇಕಾರ್ಟ್‍ಗೆ ಸಂಬಂಧಿಸಲಾದ ದೃಷ್ಟಿಕೋನವಾದ, ವಿಚಾರವಾದಕ್ಕೆ ವಿರುದ್ಧವಾಗಿ ಸಾಗುತ್ತಾ ಬಂದಿದೆ. ಆಸ್ಟ್ರಿಯನ್-ಬ್ರಿಟಿಷ್ ತತ್ವಶಾಸ್ತ್ರಜ್ಞ ಕಾರ್ಲ್ ಪಾಪರ್‍ನಿಂದ ಮೊದಲು ವ್ಯಾಖ್ಯಾನಿಸಲಾದ, ವಿಮರ್ಶಾತ್ಮಕ ವಿಚಾರವಾದವು ಒಂದು ಗಮನಾರ್ಹವಾದ ೨೦ನೇ ಶತಮಾನದ ವಿಚಾರವಾದದ ಸ್ವರೂಪವಾಗಿದೆ. ಪ್ರಯೋಗವಾದವು ಸಿದ್ಧಾಂತ ಮತ್ತು ವೀಕ್ಷಣೆಯ ನಡುವಿನ ಸಂಪರ್ಕವನ್ನು ವಿವರಿಸುವ ರೀತಿಯನ್ನು ಪಾಪರ್ ತಿರಸ್ಕರಿಸಿದರು. ಸಿದ್ಧಾಂತಗಳು ವೀಕ್ಷಣೆಯಿಂದ ಉತ್ಪತ್ತಿಯಾಗುವುದಿಲ್ಲ, ಬದಲಾಗಿ ವೀಕ್ಷಣೆಯನ್ನು ಸಿದ್ಧಾಂತಗಳ ದೃಷ್ಟಿಯಿಂದ ಮಾಡಲಾಗುತ್ತದೆ ಮತ್ತು ಸಿದ್ಧಾಂತ ಹಾಗು ವೀಕ್ಷಣೆಯ ನಡುವೆ ತಿಕ್ಕಾಟ ಆದಾಗ ಮಾತ್ರ ಸಿದ್ಧಾಂತವು ವೀಕ್ಷಣೆಯಿಂದ ಬಾಧಿತವಾಗಬಹುದು ಎಂದು ಅವರು ಪ್ರತಿಪಾದಿಸಿದರು. ಸುಳ್ಳುಸೃಷ್ಟಿ ಸಾಧ್ಯತೆಯನ್ನು ವೈಜ್ಞಾನಿಕ ಸಿದ್ಧಾಂತಗಳ ಮೈಲಿಗಲ್ಲಾಗಿ, ಮತ್ತು ಪರಿಶೀಲನಾ ಸಾಧ್ಯತೆ ಹಾಗು ಸಂಪೂರ್ಣವಾಗಿ ಅನುಮಾನಾತ್ಮಕ ಚಿಂತನೆಗಳಿಂದ ದೃಷ್ಟಾಂತ ಕೊಡುವುದರ ಬದಲು ಸುಳ್ಳಾಗಿಸುವಿಕೆಯನ್ನು ಪ್ರಾಯೋಗಿಕ ವಿಧಾನವಾಗಿ ಪಾಪರ್ ಪ್ರಸ್ತಾಪಿಸಿದರು. ವಾಸ್ತವವಾಗಿ ಒಂದೇ ಒಂದು ಸಾರ್ವರ್ತ್ರಿಕ ವಿಧಾನವಿದೆ, ಮತ್ತು ಈ ವಿಧಾನವು ವಿಜ್ಞಾನಕ್ಕೆ ನಿರ್ದಿಷ್ಟವಲ್ಲ ಎಂದು ಪಾಪರ್ ಮುಂದೆ ಹೇಳಿಕೊಂಡರು: ಟೀಕೆಯ ಋಣಾತ್ಮಕ ವಿಧಾನವಾದ ಪ್ರಯೋಗ ಮತ್ತು ದೋಷ. ವಿಜ್ಞಾನ, ಗಣಿತ, ತತ್ವಶಾಸ್ತ್ರ, ಮತ್ತು ಕಲೆಯನ್ನು ಒಳಗೊಂಡಂತೆ ಅದು ಮಾನವ ಮನಸ್ಸಿನ ಎಲ್ಲ ಉತ್ಪನ್ನಗಳನ್ನು ವ್ಯಾಪಿಸುತ್ತದೆ.

ಆಡುಮಾತಿನಲ್ಲಿ "ಬಾಯಿ ಮುಚ್ಚು ಮತ್ತು ಲೆಕ್ಕಮಾಡು" ಎಂದು ಕರೆಯಲ್ಪಡುವ ಮತ್ತೊಂದು ಕಾರ್ಯವಿಧಾನವಾದ ಸಾಧನಭೂತವಾದವು ವಿದ್ಯಮಾನಗಳನ್ನು ವಿವರಿಸಲು ಹಾಗು ಮುನ್ನುಡಿಯಲು ಸಾಧನಗಳಾಗಿ ಸಿದ್ಧಾಂತಗಳ ಉಪಯುಕ್ತತೆಯನ್ನು ಒತ್ತಿ ಹೇಳುತ್ತದೆ. ವೈಜ್ಞಾನಿಕ ಸಿದ್ಧಾಂತಗಳು ಕೇವಲ ಅವುಗಳ ಆದಾನ (ಆರಂಭಿಕ ಪರಿಸ್ಥಿತಿಗಳು) ಮತ್ತು ಹುಟ್ಟುವಳಿ (ಮುನ್ನುಡಿಗಳು) ಪ್ರಸ್ತುತವಾಗಿರುವ ಕಪ್ಪು ಪೆಟ್ಟಿಗೆಗಳಾಗಿವೆ ಎಂದು ಅದು ಪ್ರತಿಪಾದಿಸುತ್ತದೆ. ಸಿದ್ಧಾಂತಗಳ ಪರಿಣಾಮಗಳು, ಎಣಿಕೆಗಳು ಮತ್ತು ತಾರ್ಕಿಕ ರಚನೆ ಏನೋ ಸುಮ್ಮನೆ ನಿರ್ಲಕ್ಷಿಸಬೇಕಾದದ್ದು ಮತ್ತು ವಿಜ್ಞಾನಿಗಳು ಅವುಗಳ ಬಗ್ಗೆ ಅಸಮಾಧಾನ ಸೂಚಿಸಬಾರದು ಎಂದು ಪ್ರತಿಪಾದಿಸಲಾಗುತ್ತದೆ (ಕ್ವಾಂಟಮ್ ಯಂತ್ರಶಾಸ್ತ್ರದ ವ್ಯಾಖ್ಯಾನಗಳು ನೋಡಿ). ರಾಚನಿಕವಾದಿ ಜ್ಞಾನಮೀಮಾಂಸೆಯು ಸಾಧನಭೂತವಾದಕ್ಕೆ ನಿಕಟವಾಗಿದೆ ಮತ್ತು ಇದರ ಪ್ರಕಾರ ಆದಾನ ಕೊಡಬಹುದಾದ ಮತ್ತು ನಿಮಗೆ ಒಂದು ಹುಟ್ಟುವಳಿಯನ್ನು ಕೊಡುವ ಹಾಗು ಅದೇ ಸ್ಥಿತಿಗತಿಗಳ ಅಡಿಯಲ್ಲಿ ವಾಸ್ತವದಿಂದ ನೀಡಲ್ಪಟ್ಟ ಹುಟ್ಟುವಳಿಯನ್ನು ಸಾಕಷ್ಟು ಕರಾರುವಾಕ್ಕಾಗಿ ಹಾಗು ಸಮಂಜಸವಾಗಿ ಮುನ್ನುಡಿಯುವ ಮಾದರಿಗಳನ್ನು ರಚಿಸುವುದು ವಿಜ್ಞಾನದ ಮುಖ್ಯ ಕಾರ್ಯವಾಗಿದೆ.

ವೈಜ್ಞಾನಿಕ ಪ್ರಗತಿ ಅಥವಾ ಜ್ಞಾನದ ಬೆಳವಣಿಗೆಯನ್ನು ನಿರ್ಣಯಿಸುವ ಯಾವ ಉಪಯುಕ್ತ ಹಾಗು ಆಕ್ಷೇಪಣಾ ಮುಕ್ತ ಕ್ರಮಶಾಸ್ತ್ರೀಯ ನಿಯಮಗಳು ಇಲ್ಲ ಮತ್ತು ವಿಜ್ಞಾನವು ವಿಶ್ವವ್ಯಾಪಿ ಹಾಗು ನಿಶ್ಚಿತ ನಿಯಮಗಳ ಪ್ರಕಾರ ನಿರ್ವಹಿಸಬಹುದು ಅಥವಾ ನಿರ್ವಹಿಸಬೇಕು ಎಂಬ ಕಲ್ಪನೆಯು ಅವಾಸ್ತವಿಕ, ಹಾನಿಕಾರಕ ಹಾಗು ವಿಜ್ಞಾನಕ್ಕೇ ಹಾನಿಕರ ಎಂದು ಅಭಿಪ್ರಾಯಪಡುವ ಜ್ಞಾನಮೀಮಾಂಸಾ ಅರಾಜಕತಾವಾದದ ಕಲ್ಪನೆಯನ್ನು ಪೌಲ್ ಕೆ ಫ಼ಾಯರ್‍ಆಬ್ಡ್ ಮುಂದುವರೆಸಿದರು. ಧರ್ಮ, ಮಂತ್ರವಿದ್ಯೆ ಹಾಗು ಪುರಾಣದಂತಹ ಇತರರ ಜೊತೆಗೆ ವಿಜ್ಞಾನವನ್ನು ಒಂದು ತತ್ತ್ವವಾದವಾಗಿ ಕಾಣುವಂತೆ ಫ಼ಾಯರ್‍ಆಬ್ಡ್ ಪ್ರತಿಪಾದಿಸುತ್ತಾರೆ ಮತ್ತು ಸಮಾಜದಲ್ಲಿ ವಿಜ್ಞಾನದ ಪ್ರಾಬಲ್ಯವನ್ನು ನಿರಂಕುಶಾಧಿಕಾರಿ ಹಾಗು ಅಸಮರ್ಥನೀಯವೆಂದು ಪರಿಗಣಿಸುತ್ತಾರೆ. ವಸ್ತುನಿಷ್ಠ ಆಧಾರಗಳ ಮೇಲೆ ವಿಜ್ಞಾನವನ್ನು ಹುಸಿವಿಜ್ಞಾನದಿಂದ ಪ್ರತ್ಯೇಕಿಸುವ ಗಡಿಗುರುತಿಸುವಿಕೆ ಸಮಸ್ಯೆ ಸಾಧ್ಯವಿಲ್ಲ ಮತ್ತು ಆದ್ದರಿಂದ ನಿಶ್ಚಿತ, ಸಾರ್ವತ್ರಿಕ ನಿಯಮಗಳ ಪ್ರಕಾರ ಚಾಲನೆಯಲ್ಲಿರುವ ವಿಜ್ಞಾನದ ಕಲ್ಪನೆಗೆ ಮಾರಕ ಎಂದೂ ಅವರು (ಇಮರೆ ಲಾಕಾಟೋಶ್ ಜೊತೆಗೆ) ವಾದಿಸಿದರು. ವಿಜ್ಞಾನವು ಅದರ ತತ್ವಶಾಸ್ತ್ರೀಯ ಮಾರ್ಗದರ್ಶಕ ಸೂತ್ರಗಳಿಗೆ, ವಿಶೇಷವಾಗಿ ಕಾನೂನಿನ ಏಕರೂಪತೆ ಮತ್ತು ಕಾಲ ಹಾಗು ಸ್ಥಳದ ಉದ್ದಗಲಕ್ಕೂ ಪ್ರಕ್ರಿಯೆಯ ಏಕರೂಪತೆಯ ಕಲ್ಪನೆಗೆ, ಪುರಾವೆಯನ್ನು ಹೊಂದಿಲ್ಲ ಎಂದೂ ಫ಼ಾಯರ್‍ಆಬ್ಡ್ ಹೇಳಿದರು.

ಕೊನೆಯದಾಗಿ, ಕ್ರಮಶಾಸ್ತ್ರೀಯ ನಿಸರ್ಗವಾದವು ಹಲವುವೇಳೆ ವೈಜ್ಞಾನಿಕ ಸಂದೇಹವಾದದ ಚರ್ಚಾಸ್ಪರ್ಧೆಗಳಲ್ಲಿ "ವೈಜ್ಞಾನಿಕ ಸೃಷ್ಟಿತ್ವ"ದಂತಹ ವಿವಾದಾತ್ಮಕ ಚಳುವಳಿಗಳ ವಿರುದ್ಧ ಉಲ್ಲೇಖಿಸಲಾದ ಇನ್ನೊಂದು ಕಾರ್ಯವಿಧಾನವಾಗಿದೆ. ಸಹಜ ಮತ್ತು ನಿಸರ್ಗಾತೀತ ವಿವರಣೆಗಳ ನಡುವೆ ವ್ಯತ್ಯಾಸ ಮಾಡಬೇಕಾಗಿದೆ, ಮತ್ತು ವಿಜ್ಞಾನವನ್ನು ಸ್ವಾಭಾವಿಕ ವಿವರಣೆಗಳಿಗೆ ಕ್ರಮಾನುಸರಣವಾಗಿ ನಿರ್ಬಂಧಿಸಬೇಕು ಎಂಬುದು ಅದರ ಮುಖ್ಯ ಅಂಶವಾಗಿದೆ. ನಿರ್ಬಂಧವು (ಮೂಲತತ್ತ್ವವೈಚಾರಿಕದ ಬದಲು) ಕೇವಲ ವಿಧಾನಾತ್ಮಕವಾಗಿದೆ ಎಂಬುದರರ್ಥ ವಿಜ್ಞಾನವು ನಿಸರ್ಗಾತೀತ ವಿವರಣೆಗಳನ್ನೇ ಪರಿಗಣಿಸಬಾರದು, ಆದರೆ ಅವು ತಪ್ಪು ಎಂದು ಸಹ ಹಕ್ಕುಸಾಧಿಸಬಾರದು. ಬದಲಿಗೆ, ನಿಸರ್ಗಾತೀತ ವಿವರಣೆಗಳನ್ನು ವಿಜ್ಞಾನದ ವ್ಯಾಪ್ತಿಯ ಹೊರಗಿನ ವೈಯಕ್ತಿಕ ನಂಬಿಕೆಯ ವಿಷಯ ಎಂದು ಬಿಡಬೇಕು. ಯೋಗ್ಯ ವಿಜ್ಞಾನಕ್ಕೆ ಪ್ರಾಯೋಗಿಕ ಅಧ್ಯಯನ ಮತ್ತು ಗಮನಿಸಬಹುದಾದ ವಿದ್ಯಮಾನಗಳಿಗೆ ವಿವರಣೆಗಳನ್ನು ಸರಿಯಾಗಿ ವೃದ್ಧಿಪಡಿಸಲು ಹಾಗು ಮೌಲ್ಯಮಾಪನಮಾಡಲು ಒಂದು ಪ್ರಕ್ರಿಯೆಯಾಗಿ ಸ್ವತಂತ್ರ ಪರಿಶೀಲನೆಗೆ ನಿಖರವಾದ ಬದ್ಧತೆ ಅಗತ್ಯವಾಗಿದೆ ಎಂದು ಕ್ರಮಶಾಸ್ತ್ರೀಯ ನಿಸರ್ಗವಾದವು ಸಾಧಿಸುತ್ತದೆ. ಈ ಮಾನದಂಡಗಳ ಅನುಪಸ್ಥಿತಿ, ಅಧಿಕಾರದಿಂದ ವಾದಗಳು, ಪಕ್ಷಪಾತಿ ವೀಕ್ಷಣಾ ಅಧ್ಯಯನಗಳು ಮತ್ತು ಇತರ ಸಾಮಾನ್ಯ ಕುತರ್ಕಗಳನ್ನು ಸತ್ಯವಾದ ವಿಜ್ಞಾನವಲ್ಲವೆಂದು ಅವರು ಟೀಕಿಸುವ ಸಂಶಯಾಸ್ಪದ ಹೇಳಿಕೆಗಳಿಗೆ ಒರೆಗಲ್ಲುಗಳಾಗಿ ಕ್ರಮಶಾಸ್ತ್ರೀಯ ನಿಸರ್ಗವಾದದ ಬೆಂಬಲಿಗರಿಂದ ಆಗಾಗ್ಗೆ ಉಲ್ಲೇಖಿಸಲಾಗುತ್ತದೆ.

ನಿಶ್ಚಿತತೆ ಮತ್ತು ವಿಜ್ಞಾನ

ವಿಜ್ಞಾನ 
ಡಿಎನ್ಎ ಎಲ್ಲ ಪರಿಚಿತ ಜೀವಿಗಳ ಆನುವಂಶಿಕ ರಚನೆಯನ್ನು ನಿರ್ಧರಿಸುತ್ತದೆ

ಒಂದು ವೈಜ್ಞಾನಿಕ ಸಿದ್ಧಾಂತವು ಪ್ರಾಯೋಗಿಕವಾಗಿದೆ, ಮತ್ತು ಹೊಸ ಸಾಕ್ಷ್ಯವನ್ನು ಒದಗಿಸಿದರೆ ಯಾವಾಗಲೂ ಸುಳ್ಳುಸೃಷ್ಟಿಗೆ ಮುಕ್ತವಾಗಿದೆ. ಅಂದರೆ, ಯಾವ ಸಿದ್ಧಾಂತವನ್ನೂ ಎಂದಿಗೂ ಕಟ್ಟುನಿಟ್ಟಾಗಿ ನಿಶ್ಚಿತವೆಂದು ಪರಿಗಣಿಸಲಾಗುವುದಿಲ್ಲ ಏಕೆಂದರೆ ವಿಜ್ಞಾನವು ದೋಷಾಸ್ಪದತೆಯ ಪರಿಕಲ್ಪನೆಯನ್ನು ಸ್ವೀಕರಿಸುತ್ತದೆ. ವಿಜ್ಞಾನದ ತತ್ವಜ್ಞಾನಿ ಕಾರ್ಲ್ ಪಾಪರ್ ಸತ್ಯವನ್ನು ನಿಶ್ಚಿತತೆಯಿಂದ ತೀಕ್ಷ್ಣವಾಗಿ ಬೇರ್ಪಡಿಸುತ್ತಾರೆ. ವೈಜ್ಞಾನಿಕ ಜ್ಞಾನವು "ಸತ್ಯದ ಅನ್ವೇಷಣೆಯಲ್ಲಿ ಒಳಗೊಂಡಿದೆ", ಆದರೆ ಅದು "ನಿಶ್ಚಿತತೆಯ ಅನ್ವೇಷಣೆಯಲ್ಲ ... ಎಲ್ಲ ಮಾನವ ಜ್ಞಾನವೂ ದೋಷಾಸ್ಪದವಾಗಿದೆ ಮತ್ತು ಹಾಗಾಗಿ ಅನಿಶ್ಚಿತವಾಗಿದೆ" ಎಂದು ಅವರು ಬರೆಯುತ್ತಾರೆ.

ಹೊಸ ವೈಜ್ಞಾನಿಕ ಜ್ಞಾನವು ಅಪರೂಪವಾಗಿ ನಮ್ಮ ತಿಳುವಳಿಕೆಯಲ್ಲಿ ವ್ಯಾಪಕ ಬದಲಾವಣೆಗಳಾಗಿ ಪರಿಣಮಿಸುತ್ತದೆ. ಮನೋವಿಜ್ಞಾನಿ ಕೀಥ್ ಸ್ಟ್ಯಾನವಿಚ್ ಪ್ರಕಾರ, "ಪ್ರಮುಖ ಬೆಳವಣಿಗೆ" ಯಂತಹ ಪದಗಳ ಮಾಧ್ಯಮಗಳಿಂದ ಅತಿಬಳಕೆಯು ಸಾರ್ವಜನಿಕರು ವಿಜ್ಞಾನವು ಅದು ಸತ್ಯವೆಂದು ಭಾವಿಸಿದ್ದ ಎಲ್ಲವನ್ನೂ ಸುಳ್ಳೆಂದು ನಿರಂತರವಾಗಿ ಸಾಬೀತುಮಾಡುತ್ತಿದೆ ಎಂದು ಕಲ್ಪಿಸಲು ಕಾರಣವಾಗಿರಬಹುದು. ಸಂಪೂರ್ಣ ಪುನರ್ಕಲ್ಪನೀಕರಣ ಬೇಕಾಗಿದ್ದ ಸಾಪೇಕ್ಷತಾ ಸಿದ್ಧಾಂತದಂತಹ ಪ್ರಸಿದ್ಧ ನಿದರ್ಶನಗಳು ಇದೆಯಾದರೂ, ಇವು ತೀವ್ರತರವಾದ ಅಪವಾದಗಳು. ವಿಜ್ಞಾನದಲ್ಲಿ ಜ್ಞಾನವನ್ನು , ವಿವಿಧ ಸಂಶೋಧಕರಿಂದ, ವಿಜ್ಞಾನದ ವಿಭಿನ್ನ ಶಾಖೆಗಳಲ್ಲಿ, ವಿಭಿನ್ನ ಪ್ರಯೋಗಗಳಿಂದ, ಮಾಹಿತಿಯ ಹಂತಹಂತವಾದ ಸಂಶ್ಲೇಷಣೆಯಿಂದ ಗಳಿಸಲಾಗುತ್ತದೆ; ಇದು ಜಿಗಿತದ ಬದಲಾಗಿ ಹೆಚ್ಚು ಏರಿಕೆಯಂತೆ. ಸಿದ್ಧಾಂತಗಳು ಅವು ಎಷ್ಟು ಪರೀಕ್ಷಿಸಲ್ಪಟ್ಟಿವೆ ಹಾಗು ಪರಿಶೀಲಿಸಪಟ್ಟಿವೆ ಎನ್ನುವ ಪ್ರಮಾಣದಲ್ಲಿ, ಮತ್ತು ಜೊತೆಗೆ ವೈಜ್ಞಾನಿಕ ಸಮುದಾಯದಲ್ಲಿ ಅವುಗಳ ಸ್ವೀಕೃತಿ ಎಷ್ಟಿದೆ ಎಂಬುದರಲ್ಲಿ ಬದಲಾಗುತ್ತವೆ. ಉದಾಹರಣೆಗೆ, ಸೂರ್ಯಕೇಂದ್ರಿತ ಸಿದ್ಧಾಂತ, ವಿಕಾಸವಾದ ಸಿದ್ಧಾಂತ, ಸಾಪೇಕ್ಷತಾ ಸಿದ್ಧಾಂತ, ಮತ್ತು ಸೂಕ್ಷ್ಮಜೀವಿ ಸಿದ್ಧಾಂತಗಳು ಆಚರಣೆಯಲ್ಲಿ ಅವನ್ನು ವಾಸ್ತವಿಕವೆಂದು ಪರಿಗಣಿಸಲಾದರೂ, ಈಗಲೂ "ಸಿದ್ಧಾಂತ" ಹೆಸರನ್ನು ಹೊಂದಿರುತ್ತವೆ "ಜ್ಞಾನ"ಕ್ಕೆ ಅತ್ಯುತ್ತಮ ವ್ಯಾಖ್ಯಾನವನ್ನು ವಾದಿಸಲಾಗಿದೆಯಾದರೂ, ಸಂಶಯ ಪ್ರಕೃತಿ ಹೊಂದಿರುವುದು ಮತ್ತು ಒಬ್ಬರು ತಪ್ಪಾಗಿರಬಹುದು ಎಂಬ "ಸಾಧ್ಯತೆ"ಯನ್ನು ಅಂಗೀಕರಿಸುವುದು ಸರಿಯಾಗಿರುವುದಕ್ಕೆ ಹೊಂದಾಣಿಕೆಯಾಗುತ್ತದೆ. ವಿಪರ್ಯಾಸವೆಂದರೆ ಆಗ, ಸರಿಯಾದ ವೈಜ್ಞಾನಿಕ ಕಾರ್ಯವಿಧಾನಗಳಿಗೆ ಬದ್ಧವಾಗಿರುವ ವಿಜ್ಞಾನಿಯು ತಾನು ಸತ್ಯವನ್ನು ಹೊಂದಿದಮೇಲೆಯೂ ತನ್ನನ್ನು ತಾನೇ ಸಂದೇಹಿಸುತ್ತಾನೆ. ವಿಚಾರಣೆಯು ನೈಜ ಅನುಮಾನವನ್ನು ಬಗೆಹರಿಸುವ ಹೋರಾಟ ಮತ್ತು ಕೇವಲ ಕಲಹಪ್ರಿಯ, ಶಾಬ್ದಿಕ, ಅಥವಾ ಅತಿಪರವಲಯಕ ಸಂದೇಹವು ನಿರರ್ಥಕವಾದದ್ದು ಎಂದು—ಆದರೆ ತನಿಖೆಗಾರನು ಲೋಕಜ್ಞಾನದ ಮೇಲೆ ವಿಮರ್ಶಾರಹಿತವಾಗಿ ವಿಶ್ರಮಿಸುವುದರ ಬದಲು ನೈಜ ಸಂದೇಹ ಪಡೆಯಲು ಯತ್ನಿಸಬೇಕು ಎಂದೂ ಫ಼್ಯಾಲಿಬಿಲಿಸ್ಟ್ ಚಾರ್ಲ್ಸ್ ಸ್ಯಾಂಡರ್ಸ್ ಪರ್ಸ್ ವಾದಿಸಿದರು. ಸಫಲ ವಿಜ್ಞಾನಗಳು ತೀರ್ಮಾನದ ಯಾವುದೇ ಏಕ ಸರಪಳಿಯನ್ನು ಅಲ್ಲ (ಅದರ ಅತಿ ದುರ್ಬಲ ಕೊಂಡಿಗಿಂತ ಹೆಚ್ಚು ಬಲವಾಗಿಯಲ್ಲ), ಬದಲು ನಿಕಟವಾಗಿ ಸಂಪರ್ಕಹೊಂದಿದ ಅನೇಕ ಹಾಗು ವಿವಿಧ ವಾದಗಳ ಹೊರಜಿಯನ್ನು ನಂಬುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.

ವಿಜ್ಞಾನವು ಒಂದು "ಮಾಯಾ ಗುಂಡಿಗಾಗಿ" ಹುಡುಕುವುದನ್ನು ತಪ್ಪಿಸುತ್ತದೆ; ಅದು ಏಕ ಕಾರಣ ಭ್ರಮೆಯನ್ನು ತಪ್ಪಿಸುತ್ತದೆ ಎಂದೂ ಸ್ಟ್ಯಾನವಿಚ್ ಪ್ರತಿಪಾದಿಸುತ್ತಾರೆ. ಇದರರ್ಥ ಒಬ್ಬ ವಿಜ್ಞಾನಿಯು ಕೇವಲ "...ರ ಕಾರಣವೇನು" ಎಂದು ಕೇಳುವುದಿಲ್ಲ ಬದಲಾಗಿ "...ರ ಅತ್ಯಂತ ಪ್ರಮುಖ ಕಾರಣಗಳೇನು" ಎಂದು ಕೇಳುತ್ತಾನೆ. ಇದು ವಿಶೇಷವಾಗಿ ವಿಜ್ಞಾನದ ಹೆಚ್ಚು ಸ್ಥೂಲಗೋಚರ ಕ್ಷೇತ್ರಗಳಲ್ಲಿನ (ಉದಾ. ಮನೋವಿಜ್ಞಾನ, ವಿಶ್ವವಿಜ್ಞಾನ) ಸನ್ನಿವೇಶವಾಗಿದೆ. ಸಹಜವಾಗಿ, ಸಂಶೋಧನೆಯು ಹಲವುವೇಳೆ ಒಂದು ಸಲಕ್ಕೆ ಕೆಲವು ಅಂಶಗಳನ್ನು ವಿಶ್ಲೇಷಿಸುತ್ತದೆ, ಆದರೆ ಇವನ್ನು ಪರಿಗಣಿಸಲು ಅತ್ಯಂತ ಪ್ರಮುಖವಾಗಿರುವ ಅಂಶಗಳ ಉದ್ದನೆಯ ಪಟ್ಟಿಗೆ ಯಾವಾಗಲೂ ಸೇರಿಸಲಾಗುತ್ತದೆ. ಉದಾಹರಣೆಗೆ: ಕೇವಲ ಒಬ್ಬ ವ್ಯಕ್ತಿಯ ತಳಿಗಳ ವಿವರಗಳನ್ನು, ಅಥವಾ ಅವರ ಚರಿತ್ರೆ ಹಾಗು ಪಾಲನೆ, ಅಥವಾ ಪ್ರಸಕ್ತ ಸಂದರ್ಭವನ್ನು ತಿಳಿಯುವುದು ಒಂದು ವರ್ತನೆಯನ್ನು ವಿವರಿಸಲಾಗದಿರಬಹುದು, ಆದರೆ ಈ ಎಲ್ಲ ಅಸ್ಥಿರಗಳ ಒಟ್ಟು ಆಳವಾದ ತಿಳುವಳಿಕೆಯು ಬಹಳ ಭವಿಷ್ಯಸೂಚಕವಿರಬಹುದು.

ಹುಸಿವಿಜ್ಞಾನ, ಅಂಚಿನ ವಿಜ್ಞಾನ, ಮತ್ತು ಹಾಳುಮೂಳು ವಿಜ್ಞಾನ

    ಮುಖ್ಯ ಲೇಖನಗಳು: ಹುಸಿವಿಜ್ಞಾನ, ಅಂಚಿನ ವಿಜ್ಞಾನ, ಹಾಳುಮೂಳು ವಿಜ್ಞಾನ, ಕಾರ್ಗೊ ಕಲ್ಟ್ ವಿಜ್ಞಾನ, ಮತ್ತು ವೈಜ್ಞಾನಿಕ ದುರ್ವರ್ತನೆ

ನ್ಯಾಯಸಮ್ಮತೆಯ ಹಕ್ಕುಸಾಧಿಸುವ ಪ್ರಯತ್ನದಲ್ಲಿ ವಿಜ್ಞಾನದ ಮುಖವಾಡ ಧರಿಸುವ (ಇಲ್ಲದಿದ್ದರೆ ಅದು ನ್ಯಾಯಸಮ್ಮತೆಯನ್ನು ಸಾಧಿಸುವುದು ಅಸಾಧ್ಯವಾಗಿತ್ತು) ಊಹನ ಅಥವಾ ಅಧ್ಯಯನದ ಒಂದು ಕ್ಷೇತ್ರವನ್ನು ಕೆಲವೊಮ್ಮೆ ಹುಸಿವಿಜ್ಞಾನ, ಅಂಚಿನ ವಿಜ್ಞಾನ, ಅಥವಾ "ಪರ್ಯಾಯ ವಿಜ್ಞಾನ" ಎಂದು ನಿರ್ದೇಶಿಸಲಾಗುತ್ತದೆ. ಇನ್ನೊಂದು ಪದವಾದ ಹಾಳುಮೂಳು ವಿಜ್ಞಾನವನ್ನು ಬಹುಶಃ ತಮ್ಮದರಲ್ಲೇ ನ್ಯಾಯಸಮ್ಮತವಾಗಿರಬಹುದಾದರೂ ಸಾಕ್ಷ್ಯದ ಪೂರ್ಣತೆಯಿಂದ ನ್ಯಾಯಸಮ್ಮತವಾಗಿ ಸಮರ್ಥಿಸಲಾಗದ್ದೆಂದು ಕಾಣಲಾದ ಒಂದು ಅಭಿಪ್ರಾಯವನ್ನು ಬೆಂಬಲಿಸಲು ಬಳಸಲಾಗುತ್ತದೆಂದು ನಂಬಲಾದ ವೈಜ್ಞಾನಿಕ ಕಲ್ಪಿತ ಸಿದ್ಧಾಂತಗಳು ಅಥವಾ ತೀರ್ಮಾನಗಳನ್ನು ವಿವರಿಸಲು ಹಲವುವೇಳೆ ಬಳಸಲಾಗುತ್ತದೆ. ವಿಜ್ಞಾನದ ಸಾಂಪ್ರದಾಯಿಕ ಅಲಂಕಾರಕಗಳನ್ನು ಹೊಂದಿರುವ ಆದರೆ ಅವುಗಳ ಪರಿಣಾಮಗಳನ್ನು ಕಟ್ಟುನಿಟ್ಟಾಗಿ ಮೌಲ್ಯಮಾಪನಮಾಡಲು ಅನುಮತಿಸದ "ಸಂಪೂರ್ಣ ಪ್ರಾಮಾಣಿಕತೆಯ ಒಂದು ರೀತಿಗೆ ಅನುರೂಪವಾಗಿರುವ ವೈಜ್ಞಾನಿಕ ಚಿಂತನೆಯ ತತ್ವ"ದ ಕೊರೆತೆಯಿರುವ ಅನ್ವೇಷಣೆಗಳ ಉಲ್ಲೇಖದಲ್ಲಿ "ಕಾರ್ಗೊ ಕಲ್ಟ್ ವಿಜ್ಞಾನ" ಪದವನ್ನು ಭೌತವಿಜ್ಞಾನಿ ರಿಚರ್ಡ್ ಫ಼ೈನ್‍ಮನ್ ಸೃಷ್ಟಿಸಿದರು. ಅತಿಪ್ರಚಾರದಿಂದ ವಂಚನೆವರೆಗೆ ವ್ಯಾಪಿಸುವ ವಿವಿಧ ಪ್ರಕಾರಗಳ ವಾಣಿಜ್ಯ ಜಾಹೀರಾತುಗಳು ಈ ವರ್ಗಗಳಲ್ಲಿ ಬರಬಹುದು.

ಅಂತಹ ಚರ್ಚೆಗಳ ಎಲ್ಲ ಕಡೆಗಳಲ್ಲೂ ರಾಜಕೀಯ ಅಥವಾ ತತ್ತ್ವವಾದಿ ಪಕ್ಷಪಾತದ ಅಂಶವೂ ಇರಬಹುದು. ಕೆಲವೊಮ್ಮೆ, ಸದುದ್ದೇಶದ ಆದರೆ ತಪ್ಪು, ಅಪೂರ್ಣ ಅಥವಾ ವೈಜ್ಞಾನಿಕ ಕಲ್ಪನೆಗಳ ಅತಿ-ಸರಳೀಕೃತ ಪ್ರತಿಪಾದನೆಗಳು ಎಂದು ಕಾಣಲಾದ ಸಂಶೋಧನೆಯನ್ನು "ಕೆಟ್ಟ ವಿಜ್ಞಾನ"ವೆಂದು ನಿರೂಪಿಸಬಹುದು. "ವೈಜ್ಞಾನಿಕ ದುರ್ವರ್ತನೆ" ಪದವು ಸಂಶೋಧಕರು ತಮ್ಮ ಪ್ರಕಟಿತ ದತ್ತವನ್ನು ಉದ್ದೇಶಪೂರ್ವಕವಾಗಿ ತಪ್ಪಾಗಿ ಪ್ರತಿನಿಧಿಸಿದ ಅಥವಾ ಒಂದು ಪರಿಶೋಧನೆಗೆ ಉದ್ದೇಶಪೂರ್ವಕವಾಗಿ ತಪ್ಪು ವ್ಯಕ್ತಿಗೆ ಮನ್ನಣೆ ನೀಡುವ ಪರಿಸ್ಥಿತಿಗಳನ್ನು ಸೂಚಿಸುತ್ತದೆ.

ವೈಜ್ಞಾನಿಕ ವೃತ್ತಿ

ವಿಜ್ಞಾನ 
ದೂರದರ್ಶಕದ ಆವಿಷ್ಕಾರದ ಮೊದಲು ಟೈಕೊ ಬ್ರಾಹೆ ಎರಡು ಆಕಾಶಕಾಯಗಳ ನಡುವಿನ ಕೋನಗಳನ್ನು ಅಳೆಯಲು ತನ್ನ ವೈಜ್ಞಾನಿಕ ಉಪಕರಣಗಳನ್ನು ರೂಪಿಸಿದ ನಂತರ ಖಗೋಳಶಾಸ್ತ್ರವು ಮತ್ತಷ್ಟು ನಿಖರವಾಯಿತು. ಬ್ರಾಹೆಯ ವಿಕ್ಷಣೆಗಳು ಕೆಪ್ಲರ್‌ನ ನಿಯಮಗಳಿಗೆ ಆಧಾರವಾಗಿದ್ದವು.

"If a man will begin with certainties, he shall end in doubts; but if he will be content to begin with doubts, he shall end in certainties." —Francis Bacon (1605) The Advancement of Learning, Book 1, v, 8

ಸಾಕ್ಷ್ಯಾಧಾರದ ವಿಧಾನವನ್ನು ಬೇಡುವ ಒಂದು ಸಂಶಯವಾದಿ ದೃಷ್ಟಿಕೋನವು ೧೦೦೦ ವರ್ಷಗಳಷ್ಟು ಹಿಂದೆಯೇ ತೆಗೆದುಕೊಂಡ ವಾಸ್ತವಿಕ ನಿಲುವಾಗಿತ್ತು, ಅಲ್‍ಹಸನ್, ಟಾಲಮಿಯ ಬಗ್ಗೆ ಸಂದೇಹಗಳು, ಬೇಕನ್ (೧೬೦೫), ಮತ್ತು ಸಿ. ಎಸ್. ಪರ್ಸ್ (೧೮೩೯-೧೯೧೪) ಈ ಅನಿಶ್ಚಿತತೆಯ ಅಂಶಗಳನ್ನು ನಿಭಾಯಿಸಲು ಸಮುದಾಯವು ಆಗ ಕಾಣಿಸಿಕೊಳ್ಳುತ್ತದೆ ಎಂದು ಗಮನಿಸುತ್ತಾರೆ. ಒಂದು ಸಮಸ್ಯೆಯಲ್ಲಿ ವಿಚಾರಣೆಯ ವಿಧಾನಗಳು ಸಾವಿರಾರು ವರ್ಷಗಳಿಂದ ಪರಿಚಿತವಾಗಿವೆ, ಮತ್ತು ಸಿದ್ಧಾಂತದ ಆಚೆಗೆ ಆಚರೆಣೆಗೆ ವಿಸ್ತರಿಸುತ್ತವೆ. ಉದಾಹರಣೆಗೆ, ಮಾಪನಗಳ ಬಳಕೆಯು ಸಮುದಾಯದಲ್ಲಿನ ವಿವಾದಗಳನ್ನು ಇತ್ಯರ್ಥಗೊಳಿಸಲು ಒಂದು ವಾಸ್ತವಿಕ ಕಾರ್ಯವಿಧಾನವಾಗಿದೆ.

ಅಂತರವ್ಯಕ್ತಿನಿಷ್ಠ ನಮೂನೆ ಗುರುತಿಸುವಿಕೆಯು ಎಲ್ಲ ವೈಜ್ಞಾನಿಕ ಜ್ಞಾನದ ಸೃಷ್ಟಿಗೆ ಮೂಲಭೂತವಾಗಿದೆ ಎಂದು ಜಾನ ಜ಼ೀಮನ್ ಎತ್ತಿತೋರಿಸುತ್ತಾರೆ. ವಿಜ್ಞಾನಿಗಳು ಒಂದಕ್ಕೊಂದಿರುವ ನಮೂನೆಗಳನ್ನು ಶತಮಾನಗಳ ಉದ್ದಗಲಕ್ಕೂ ಹೇಗೆ ಗುರುತಿಸಬಲ್ಲರು ಎಂದು ಜ಼ೀಮನ್ ತೋರಿಸುತ್ತಾರೆ: ಇಂದಿನ ತರಬೇತಿ ಪಡೆದ ಪಾಶ್ಚಾತ್ಯ ಸಸ್ಯಶಾಸ್ತ್ರಜ್ಞನು ೧೬ನೆಯ ಶತಮಾನದ ಚೀನಾದ ವೈದ್ಯಸಂಹಿತೆಯಿಂದ ತೆಗೆದುಕೊಂಡ ಚಿತ್ರಗಳಿಂದ ಆರ್ಟೆಮಿಸೀಯಾ ಆಬ್ಸಿಂಥಿಯಮ್ ಅನ್ನು ಹೇಗೆ ಗುರುತಿಸಬಲ್ಲನು ಎಂದು Needham 1954 (ಪುಟ ೧೬೪ಕ್ಕೆ ಮುಖಮಾಡಿರುವ ವಿವರಣೆ) ತೋರಿಸುತ್ತಾರೆ, ಮತ್ತು ಈ ಸಾಮರ್ಥ್ಯವನ್ನು 'ಪರ್ಸೆಪ್ಚ್ಯುವಲ್ ಕನ್ಸೆನ್ಸಿಬಿಲಿಟಿ' ಎಂದು ಜ಼ೀಮನ್ ನಿರ್ದೇಶಿಸುತ್ತಾರೆ. ಜ಼ೀಮನ್ ನಂತರ ಒಮ್ಮತಕ್ಕೆ ಕಾರಣವಾಗುವ ಕನ್ಸೆನ್ಸಿಬಿಲಿಟಿಯನ್ನು ವಿಶ್ವಾಸಾರ್ಹ ಜ್ಞಾನದ ಒರೆಗಲ್ಲಾಗಿ ಮಾಡುತ್ತಾರೆ.

ವೈಜ್ಞಾನಿಕ ವಿಧಾನ

ವೈಜ್ಞಾನಿಕ ವಿಧಾನವು ನಿಸರ್ಗದ ಘಟನೆಗಳನ್ನು ಪುನರುತ್ಪಾದಕ ರೀತಿಯಲ್ಲಿ ವಿವರಿಸಲು ಪ್ರಯತ್ನಿಸುತ್ತದೆ. ಒಂದು ವಿವರಣಾತ್ಮಕ ಆಲೋಚನಾ ಪ್ರಯೋಗ ಅಥವಾ ಕಲ್ಪಿತ ಸಿದ್ಧಾಂತವನ್ನು ಮುಂದಿಡಲಾಗುತ್ತದೆ, ವಿವರಣೆಯಾಗಿ, ಕೃಪಣತನದಂತಹ ("ಒಕ್ಯಾಮ್ಸ್ ರೇಜ಼ರ್" ಎಂದೂ ಕರೆಯಲಾಗುತ್ತದೆ) ತತ್ವಗಳನ್ನು ಬಳಸಿ ಮತ್ತು ಸಾಮಾನ್ಯವಾಗಿ ಸಹಮತಿ ಪಡೆಯಲು ನಿರೀಕ್ಷಿಸಲಾಗುತ್ತದೆ—ವಿದ್ಯಮಾನಗಳಿಗೆ ಸಂಬಂಧಿಸಿದ ಇತರ ಸ್ವೀಕೃತ ವಾಸ್ತವಾಂಶಗಳೊಂದಿಗೆ ಚೆನ್ನಾಗಿ ಸರಿಹೊಂದುತ್ತವೆ. ಈ ಹೊಸ ವಿವರಣೆಯನ್ನು ಪ್ರಯೋಗ ಅಥವಾ ವೀಕ್ಷಣೆಯಿಂದ ಪರೀಕ್ಷಣೀಯವಾದ ಸುಳ್ಳಾಗಿಸಬಲ್ಲ ಭವಿಶ್ಯವಾಣಿಗಳನ್ನು ಮಾಡಲು ಬಳಸಲಾಗುತ್ತದೆ. ದೃಢೀಕರಿಸುವ ಪ್ರಯೋಗ ಅಥವಾ ವೀಕ್ಷಣೆಯನ್ನು ಕೋರುವ ಮೊದಲು ಯಾವುದೇ ವಿರೂಪಗೊಳಿಸುವಿಕೆ ಸಂಭವಿಸಿಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿ ಭವಿಷ್ಯವಾಣಿಗಳನ್ನು ದಾಖಲಿಸಬೇಕಾಗುತ್ತದೆ. ಒಂದು ಭವಿಷ್ಯವಾಣಿಯ ಖಂಡನಸಾಕ್ಷ್ಯವು ಪ್ರಗತಿಯ ಸಾಕ್ಷಿಯಾಗಿದೆ. ಇದನ್ನು ಭಾಗಶಃ ನೈಸರ್ಗಿಕ ವಿದ್ಯಮಾನಗಳ ವೀಕ್ಷಣೆಯ ಮೂಲಕ, ಮತ್ತು ಶಾಖೆಗೆ ಸೂಕ್ತವಾದ ನಿಯಂತ್ರಿತ ಸ್ಥಿತಿಯಲ್ಲಿ ನೈಸರ್ಗಿಕ ಘಟನೆಗಳನ್ನು ಅನುಕರಿಸಲು ಪ್ರಯತ್ನಿಸುವ ಪ್ರಯೋಗಪರೀಕ್ಷೆಯ ಮೂಲಕವೂ ಮಾಡಲಾಗುತ್ತದೆ (ಖಗೋಳಶಾಸ್ತ್ರ ಅಥವಾ ಭೂವಿಜ್ಞಾನದಂತಹ ವೀಕ್ಷಣಾ ವಿಜ್ಞಾನಗಳಲ್ಲಿ ಒಂದು ಮುನ್ನುಡಿದೆ ವೀಕ್ಷಣೆಯನ್ನು ನಿಯಂತ್ರಿತ ಪ್ರಯೋಗದ ಸ್ಥಳವನ್ನು ತೆಗೆದುಕೊಳ್ಳಬಹುದು). ಪ್ರಯೋಗಪರೀಕ್ಷೆಯು ಕಾರಣಾತ್ಮಕ ಸಂಬಂಧಗಳನ್ನು ಸ್ಥಾಪಿಸಲು ಸಹಾಯಮಾಡಲು ವಿಶೇಷವಾಗಿ ವಿಜ್ಞಾನದಲ್ಲಿ ಪ್ರಮುಖವಾಗಿದೆ (ಪರಸ್ಪರ ಸಂಬಂಧ ಭ್ರಾಂತಿಯನ್ನು ತಡೆಯಲು).

ಒಂದು ಕಲ್ಪಿತ ಸಿದ್ಧಾಂತವು ಅತೃಪ್ತಿಕರವೆಂದು ಸಾಬೀತಾದರೆ, ಅದನ್ನು ಬದಲಾಯಿಸಲಾಗುತ್ತದೆ ಅಥವಾ ತಿರಸ್ಕರಿಸಲಾಗುತ್ತದೆ. ಕಲ್ಪಿತ ಸಿದ್ಧಾಂತವು ಪರೀಕ್ಷೆಯನ್ನು ಪಾರಾದರೆ, ಅದು ಒಂದು ವೈಜ್ಞಾನಿಕ ಸಿದ್ಧಾಂತದ ಚೌಕಟ್ಟಿನೊಳಗೆ ಅಳವಡಿಸಕೊಳ್ಳಲ್ಪಡಬಹುದು. ಕೆಲವು ನೈಸರ್ಗಿಕ ವಿದ್ಯಮಾನಗಳ ವರ್ತನೆಯನ್ನು ವಿವರಿಸಲು ಇದು ಒಂದು ತಾರ್ಕಿಕವಾಗಿ ಸಮರ್ಥಿಸಲ್ಪಟ್ಟ, ಸಂಗತವಾದ ಮಾದರಿ ಅಥವಾ ಚೌಕಟ್ಟು. ಒಂದು ಸಿದ್ಧಾಂತವು ವಿಶಿಷ್ಟವಾಗಿ ಕಲ್ಪಿತ ಸಿದ್ಧಾಂತಕ್ಕಿಂತ ವಿದ್ಯಮಾನಗಳ ಹೆಚ್ಚು ವಿಸ್ತಾರವಾದ ಸಮೂಹಗಳ ವರ್ತನೆಯನ್ನು ವಿವರಿಸುತ್ತದೆ; ಸಾಮಾನ್ಯವಾಗಿ, ದೊಡ್ಡ ಸಂಖ್ಯೆಯ ಕಲ್ಪಿತ ಸಿದ್ಧಾಂತಗಳು ಒಂದು ಒಂಟಿ ಸಿದ್ಧಾಂತದಿಂದ ತಾರ್ಕಿಕವಾಗಿ ಒಟ್ಟಾಗಿ ಬಂಧಿಸಲ್ಪಡಬಹುದು. ಹಾಗಾಗಿ ಒಂದು ಸಿದ್ಧಾಂತವು ಇತರ ವಿವಿಧ ಕಲ್ಪಿತ ಸಿದ್ಧಾಂತಗಳನ್ನು ವಿವರಿಸುವ ಕಲ್ಪಿತ ಸಿದ್ಧಾಂತ. ಆ ಧಾಟಿಯಲ್ಲಿ, ಕಲ್ಪಿತ ಸಿದ್ಧಾಂತಗಳಂತೆ ಬಹಳಷ್ಟು ಅದೇ ವೈಜ್ಞಾನಿಕ ತತ್ವಗಳ ಪ್ರಕಾರ ಸಿದ್ಧಾಂತಗಳನ್ನು ಸೂತ್ರೀಕರಿಸಲಾಗುತ್ತದೆ. ಕಲ್ಪಿತ ಸಿದ್ಧಾಂತಗಳನ್ನು ಪರೀಕ್ಷಿಸುವುದರ ಜೊತೆಗೆ, ವೀಕ್ಷಿಸಿದ ವಿದ್ಯಮಾನಗಳನ್ನು ಆಧರಿಸಿ ವಿಜ್ಞಾನಿಗಳು ಒಂದು ಮಾದರಿಯನ್ನೂ ಸೃಷ್ಟಿಸಬಹುದು. ವಿದ್ಯಮಾನವನ್ನು ತಾರ್ಕಿಕ, ಭೌತಿಕ ಅಥವಾ ಗಣಿತೀಯ ನಿರೂಪಣೆಯ ಪರಿಭಾಷೆಯಲ್ಲಿ ವಿವರಿಸಲು ಅಥವಾ ವರ್ಣಿಸಲು ಮತ್ತು ಪರೀಕ್ಷಿಸಬಹುದಾದ ಹೊಸ ಕಲ್ಪಿತ ಸಿದ್ಧಾಂತಗಳನ್ನು ಸೃಷ್ಟಿಸಲು ಇದು ಒಂದು ಪ್ರಯತ್ನ.

ಕಲ್ಪಿತ ಸಿದ್ಧಾಂತಗಳನ್ನು ಪರೀಕ್ಷಿಸಲು ಪ್ರಯೋಗಗಳನ್ನು ಮಾಡುವಾಗ, ವಿಜ್ಞಾನಿಗಳು ಒಂದರ ಬದಲು ಮತ್ತೊಂದು ಫಲಿತಾಂಶದ ಬಗ್ಗೆ ಆದ್ಯತೆ ಹೊಂದಿರಬಹುದು, ಮತ್ತು ಹಾಗಾಗಿ ಒಟ್ಟಾರೆಯಾಗಿ ವಿಜ್ಞಾನವು ಈ ಪಕ್ಷಪಾತವನ್ನು ನಿರ್ಮೂಲಗೊಳಿಸಬಲ್ಲದೆಂದು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ. ಇದನ್ನು ಪ್ರಾಯೋಗಿಕ ಪರಿಣಾಮಗಳ ಜೊತೆಗೆ ಯಾವುದೇ ತೀರ್ಮಾನಗಳ ಎಚ್ಚರಿಕೆಯ ಪ್ರಾಯೋಗಿಕ ವಿನ್ಯಾಸ, ಪಾರದರ್ಶಕತೆ, ಮತ್ತು ಆಮೂಲಾಗ್ರ ಸ್ಕಂಧ ಪರಿಶೀಲನೆ ಪ್ರಕ್ರಿಯೆಯಿಂದ ಸಾಧಿಸಬಹುದು. ಒಂದು ಪ್ರಯೋಗದ ಪರಿಣಾಮಗಳನ್ನು ಘೋಷಿಸಿದ ಅಥವಾ ಪ್ರಕಟಿಸಿದ ನಂತರ, ಸಂಶೋಧನೆಯನ್ನು ಹೇಗೆ ನಡೆಸಲಾಯಿತು ಎಂದು ಮರುಪರಿಶೀಲಿಸುವುದು, ಮತ್ತು ಫಲಿತಾಂಶಗಳು ಎಷ್ಟು ನಂಬಲರ್ಹವಾದದ್ದೆಂದು ನಿರ್ಧರಿಸಲು ಅದೇ ರೀತಿಯ ಪ್ರಯೋಗಗಳನ್ನು ಮಾಡಿ ತನಿಖೆಯನ್ನು ಮುಂದುವರಿಸುವುದು ಸ್ವತಂತ್ರ ಸಂಶೋಧಕರಿಗೆ ಸಾಮಾನ್ಯ ಪರಿಪಾಠವಾಗಿದೆ. ಅದರ ಸಂಪೂರ್ಣತೆಯಲ್ಲಿ ತೆಗೆದುಕೊಂಡಾಗ, ವೈಜ್ಞಾನಿಕ ವಿಧಾನವು ಅದರ ಬಳಕೆದಾರರ ಕಡೆಯಿಂದ ವ್ಯಕ್ತಿನಿಷ್ಠ ಪಕ್ಷಪಾತದ (ಅಂದರೆ ದೃಢೀಕರಣ ಪಕ್ಷಪಾತ) ಯಾವುದೇ ಪರಿಣಾಮಗಳನ್ನು ಕಡಿಮೆಮಾಡಿ ಅತ್ಯಂತ ಸೃಜನಶೀಲ ಸಮಸ್ಯಾ ಪರಿಹಾರಕ್ಕೆ ಅವಕಾಶ ಒದಗಿಸುತ್ತದೆ.

ಗಣಿತ ಮತ್ತು ವಿಧ್ಯುಕ್ತ ವಿಜ್ಞಾನಗಳು

ಗಣಿತವು ವಿಜ್ಞಾನಗಳಿಗೆ ಅತ್ಯಗತ್ಯವಾಗಿದೆ. ವೈಜ್ಞಾನಿಕ ಮಾದರಿಗಳ ಅಭಿವ್ಯಕ್ತಿಯಲ್ಲಿ ಅದು ವಹಿಸುವ ಪಾತ್ರ ವಿಜ್ಞಾನದಲ್ಲಿ ಗಣಿತದ ಒಂದು ಪ್ರಮುಖವಾದ ಕಾರ್ಯವಾಗಿದೆ. ಅಳತೆಗಳನ್ನು ವೀಕ್ಷಿಸುವುದು ಮತ್ತು ಸಂಗ್ರಹಿಸುವುದರೆ ಜೊತೆಗೆ, ಊಹನ ಮಾಡುವುದು ಮತ್ತು ಮುನ್ನುಡಿಯುವುದಕ್ಕೆ, ಹಲವುವೇಳೆ ಗಣಿತದ ವ್ಯಾಪಕ ಬಳಕೆ ಅಗತ್ಯವಾಗಿರುತ್ತದೆ. ಉದಾಹರಣೆಗೆ ಅಂಕಗಣಿತ, ಬೀಜಗಣಿತ, ರೇಖಾಗಣಿತ, ತ್ರಿಕೋನಮಿತಿ ಮತ್ತು ಕಲನಶಾಸ್ತ್ರ, ಎಲ್ಲವೂ ಭೌತಶಾಸ್ತ್ರಕ್ಕೆ ಅತ್ಯಗತ್ಯವಾಗಿವೆ. ಸಂಖ್ಯಾ ಸಿದ್ಧಾಂತ ಮತ್ತು ಸ್ಥಾನ ವಿಜ್ಞಾನದಂತಹ ಶುದ್ಧ ಕ್ಷೇತ್ರಗಳನ್ನು ಒಳಗೊಂಡಂತೆ, ವಸ್ತುತಃ ಗಣಿತದ ಪ್ರತಿಯೊಂದು ಶಾಖೆಯು ವಿಜ್ಞಾನದಲ್ಲಿ ಅನ್ವಯಗಳನ್ನು ಹೊಂದಿದೆ.

ದತ್ತವನ್ನು ಸಂಕ್ಷಿಪ್ತಗೊಳಿಸಲು ಮತ್ತು ವಿಶ್ಲೇಷಿಸಲು ಇರುವ ಗಣಿತೀಯ ತಂತ್ರಗಳಾದ ಸಂಖ್ಯಾಶಾಸ್ತ್ರೀಯ ವಿಧಾನಗಳು ಪ್ರಾಯೋಗಿಕ ಫಲಿತಾಂಶಗಳಲ್ಲಿ ವಿಶ್ವಾಸಾರ್ಹತೆ ಮಟ್ಟ ಮತ್ತು ವ್ಯತ್ಯಾಸದ ವ್ಯಾಪ್ತಿಯನ್ನು ನಿರ್ಣಯಿಸಲು ವಿಜ್ಞಾನಿಗಳಿಗೆ ಅವಕಾಶ ನೀಡುತ್ತವೆ. ಸಂಖ್ಯಾಶಾಸ್ತ್ರೀಯ ವಿಶ್ಲೇಷಣೆಯು ನೈಸರ್ಗಿಕ ವಿಜ್ಞಾನಗಳು ಮತ್ತು ಸಮಾಜ ವಿಜ್ಞಾನಗಳ ಅನೇಕ ಕ್ಷೇತ್ರಗಳಲ್ಲಿ ಒಂದು ಮೂಲಭೂತ ಪಾತ್ರವಹಿಸುತ್ತದೆ.

ಗಣನಾ ವಿಜ್ಞಾನವು ನೈಜ ಜಗತ್ತಿನ ಪರಿಸ್ಥಿತಿಗಳನ್ನು ಅನುಕರಿಸಲು ಗಣಕ ಶಕ್ತಿಯನ್ನು ಅನ್ವಯಿಸುತ್ತದೆ, ಮತ್ತು ಕೇವಲ ಸಾಂಪ್ರದಾಯಿಕ ಗಣಿತವು ಸಾಧಿಸಬಲ್ಲ ತಿಳುವಳಿಕೆಗಿಂತ ವೈಜ್ಞಾನಿಕ ಸಮಸ್ಯೆಗಳ ಉತ್ತಮ ತಿಳುವಳಿಕೆಗೆ ಅನುವುಮಾಡಿಕೊಡುತ್ತದೆ. ಸೊಸೈಟಿ ಫ಼ಾರ್ ಇಂಡಸ್ಟ್ರಿಯಲ್ ಆಂಡ್ ಅಪ್ಲೈಡ್ ಮ್ಯಾಥಮ್ಯಾಟಿಕ್ಸ್ ಪ್ರಕಾರ, ವೈಜ್ಞಾನಿಕ ಜ್ಞಾನವನ್ನು ಮುನ್ನಡೆಸುವಲ್ಲಿ ಗಣನೆಯು ಈಗ ಸಿದ್ಧಾಂತ ಮತ್ತು ಪ್ರಯೋಗದಷ್ಟೆ ಪ್ರಮುಖವಾಗಿದೆ.

ಗಣಿತವನ್ನೇ ವಿಜ್ಞಾನವಾಗಿ ಸರಿಯಾಗಿ ವರ್ಗೀಕರಿಸಲಾಗಿದೆಯೇ ಎಂಬುದು ಸ್ವಲ್ಪ ಚರ್ಚೆಯ ವಿಷಯವಾಗಿದೆ. ಭೌತಿಕ ಪ್ರಯೋಗಗಳು ಅನಗತ್ಯ ಅಥವಾ ಗಣಿತೀಯ ಪುರಾವೆಗಳು ಪ್ರಯೋಗಗಳಿಗೆ ಸಮಾನ ಎಂಬುದಕ್ಕೆ ಸಂಬಂಧಿಸಿದಂತೆ, ಕೆಲವು ಚಿಂತಕರು ಗಣಿತಜ್ಞರನ್ನು ವಿಜ್ಞಾನಿಗಳಾಗಿ ನೋಡುತ್ತಾರೆ. ಇತರರು ಗಣಿತವನ್ನು ಒಂದು ವಿಜ್ಞಾನವಾಗಿ ನೋಡುವುದಿಲ್ಲ, ಏಕೆಂದರೆ ಅದಕ್ಕೆ ಅದರ ಸಿದ್ಧಾಂತಗಳು ಮತ್ತು ಕಲ್ಪಿತ ಸಿದ್ಧಾಂತಗಳ ಪ್ರಾಯೋಗಿಕ ಪರೀಕ್ಷೆ ಅಗತ್ಯವಿಲ್ಲ. ಗಣಿತೀಯ ಪ್ರಮೇಯಗಳು ಮತ್ತು ಸೂತ್ರಗಳನ್ನು, ವೈಜ್ಞಾನಿಕ ವಿಧಾನವೆಂದು ಪರಿಚಿತವಾಗಿರುವ ಪ್ರಾಯೋಗಿಕ ವೀಕ್ಷಣೆ ಮತ್ತು ತಾರ್ಕಿಕ ಪ್ರತಿಪಾದನೆಯ ಸಂಯೋಗದ ಬದಲಾಗಿ, ಸ್ವಯಂವೇದ್ಯವಾದ ವ್ಯವಸ್ಥೆಗಳನ್ನು ಭಾವಿಸುವ ತಾರ್ಕಿಕ ವ್ಯುತ್ಪತ್ತಿಗಳಿಂದ ಪಡೆಯಲಾಗುತ್ತದೆ. ಸಾಮಾನ್ಯವಾಗಿ, ಗಣಿತವನ್ನು ವಿಧ್ಯುಕ್ತ ವಿಜ್ಞಾನವೆಂದು ವರ್ಗೀಕರಿಸಲಾದರೆ, ನೈಸರ್ಗಿಕ ಮತ್ತು ಸಮಾಜ ವಿಜ್ಞಾನಗಳನ್ನು ಪ್ರಾಯೋಗಿಕ ವಿಜ್ಞಾನಗಳೆಂದು ವರ್ಗೀಕರಿಸಲಾಗುತ್ತದೆ.

ಮೂಲಭೂತ ಮತ್ತು ಅನ್ವಯಿಕ ಸಂಶೋಧನೆ

ಸ್ವಲ್ಪ ವೈಜ್ಞಾನಿಕ ಸಂಶೋಧನೆಯು ವೈಜ್ಞಾನಿಕ ಸಮಸ್ಯೆಗಳಲ್ಲಿನ ಅನ್ವಯಿಕ ಸಂಶೋಧನೆಯಾದರೂ, ನಮ್ಮ ತಿಳುವಳಿಕೆಯ ದೊಡ್ಡ ಪ್ರಮಾಣವು ಮೂಲಭೂತ ಸಂಶೋಧನೆಯ ಕುತೂಹಲ ಚಾಲಿತ ವ್ಯವಹಾರದಿಂದ ಬರುತ್ತದೆ. ಇದು ಯೋಜಿತವಾಗಿರದ ಅಥವಾ ಕೆಲವೊಮ್ಮೆ ಭಾವಿಸಬಹುದಾಗಿರದ ತಾಂತ್ರಿಕ ಪ್ರಗತಿಗೆ ಆಯ್ಕೆಗಳಿಗೆ ಕಾರಣವಾಗುತ್ತದೆ. ಈ ವಾದವನ್ನು ಮೈಕಲ್ ಫ಼್ಯಾರಡೇ "ಮೂಲಭೂತ ಸಂಶೋಧನೆಯ ಉಪಯೋಗವೇನು?" ಎಂಬ ಪ್ರಶ್ನೆಗೆ ಪ್ರತಿಕ್ರಿಯೆಯಾಗಿ, ಅವರು "ಸರ್, ಆಗತಾನೆ ಹುಟ್ಟಿದ ಮಗುವಿನ ಉಪಯೋಗವೇನು?" ಎಂದು ಪ್ರತಿಕ್ರಿಯಿಸುತ್ತಾ ಮಾಡಿದರು. ಉದಾಹರಣೆಗೆ, ಮಾನವ ಕಣ್ಣಿನ ರಾಡ್ ಕೋಶಗಳ ಮೇಲೆ ಕೆಂಪು ಬೆಳಕಿನ ಪರಿಣಾಮಗಳಲ್ಲಿನ ಸಂಶೋಧನೆಯು ಯಾವುದೇ ಕಾರ್ಯೋಪಯೋಗಿ ಉದ್ದೇಶ ಹೊಂದಿದಂತೆ ಕಾಣಲಿಲ್ಲ; ಅಂತಿಮವಾಗಿ, ನಮ್ಮ ರಾತ್ರಿ ದೃಷ್ಟಿಯು ಕೆಂಪು ಬೆಳಕಿನಿಂದ ತೊಂದರೆಗೀಡಾಗುವುದಿಲ್ಲ ಎಂಬ ಪರಿಶೋಧನೆಯು (ಇತರವುಗಳಲ್ಲಿ) ಹುಡುಕಾಟ ಮತ್ತು ರಕ್ಷಣಾ ತಂಡಗಳು ಜೆಟ್‍ಗಳು ಮತ್ತು ಹೆಲಿಕಾಪ್ಟರ್‌ಗಳ ಚಾಲಕ ಕೊಣೆಗಳಲ್ಲಿ ಕೆಂಪು ಬೆಳಕನ್ನು ಅಳವಡಿಸಿಕೊಳ್ಳಲು ಕಾರಣವಾಯಿತು. ಸಂಕ್ಷಿಪ್ತವಾಗಿ, ಮೂಲಭೂತ ಸಂಶೋಧನೆಯು ಜ್ಞಾನಕ್ಕಾಗಿ ಹುಡುಕಾಟ.

ವಿಭಾಗೀಕರಣ

ವಿಜ್ಞಾನವನ್ನು ವಿಶಾಲವಾಗಿ ೨ ಸಮೂಹಗಳಾಗಿ ವಿಂಗಡಿಸಬಹುದು.

ಗಣಿತ ವೈಜ್ಞಾನಿಕ ವಿಧಿಯನ್ನು ಸಂಪೂರ್ಣವಾಗಿ ಉಪಯೋಗಿಸದಿದ್ದರೂ, ಕಟ್ಟುನಿಟ್ಟಾದ ಆಯಕಟ್ಟಿನಲ್ಲಿ ಜ್ಞಾನ ಸಂಪಾದನೆ ಮಾಡುವುದರಿಂದ, ಕೆಲವೂಮ್ಮೆ ಇದನ್ನು ವಿಜ್ಞಾನದ ೩ನೇ ಸಮೂಹಕ್ಕೆ ಸೇರಿಸಲಾಗುತ್ತದೆ. ಕೇವಲ ಅಧ್ಯಯನ ಮಾಡುವ ವಿಧಾನಗಳು ಶುದ್ಧ ವಿಜ್ಞಾನವಾದರೆ, ವಿಜ್ಞಾನದಿಂದ ಸಂಪಾದಿಸಿದ ಜ್ಞಾನವನ್ನು ಸಮಾಜದಲ್ಲಿ ಉಪಯೋಗಿಸುವುದಕ್ಕೆ ಯೊಕ್ತಿಕ ವಿಜ್ಞಾನವೆನ್ನುತ್ತಾರೆ.

ಟಿಪ್ಪಣಿಗಳು

ಉಲ್ಲೇಖಗಳು

Tags:

ವಿಜ್ಞಾನ ನೈಸರ್ಗಿಕ ವಿಜ್ಞಾನ ಸಮಾಜ ವಿಜ್ಞಾನ ವಿಧಾನವಿಜ್ಞಾನ ಇತಿಹಾಸವಿಜ್ಞಾನ ದ ತತ್ವಶಾಸ್ತ್ರವಿಜ್ಞಾನ ವೈಜ್ಞಾನಿಕ ವೃತ್ತಿವಿಜ್ಞಾನ ವಿಭಾಗೀಕರಣವಿಜ್ಞಾನ ಟಿಪ್ಪಣಿಗಳುವಿಜ್ಞಾನ ಉಲ್ಲೇಖಗಳುವಿಜ್ಞಾನಇಂದ್ರಿಯಜ್ಞಾನತರ್ಕಶಾಸ್ತ್ರಬ್ರಹ್ಮಾಂಡಮಾನವವಿಜ್ಞಾನಿ

🔥 Trending searches on Wiki ಕನ್ನಡ:

ರಾಗಿಷಟ್ಪದಿಹೈದರಾಲಿಹರಕೆಬಿಜು ಜನತಾ ದಳಪ್ಲೇಟೊಸಿದ್ದಲಿಂಗಯ್ಯ (ಕವಿ)ಅರಿಸ್ಟಾಟಲ್‌ಪ್ರಬಂಧಕೃಷಿಅಮೇರಿಕ ಸಂಯುಕ್ತ ಸಂಸ್ಥಾನಗದ್ದಕಟ್ಟುಭಾರತದಲ್ಲಿನ ಶಿಕ್ಷಣರತ್ನಾಕರ ವರ್ಣಿಮೈಸೂರು ಅರಮನೆಇಮ್ಮಡಿ ಪುಲಿಕೇಶಿಮುಪ್ಪಿನ ಷಡಕ್ಷರಿಭಾರತದಲ್ಲಿ ಮೀಸಲಾತಿಉಪನಯನಹಾಲುಭೂಮಿ ದಿನಭಾರತದ ಉಪ ರಾಷ್ಟ್ರಪತಿದುಂಡು ಮೇಜಿನ ಸಭೆ(ಭಾರತ)ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಜಪಾನ್ಮಲಬದ್ಧತೆಬಿ.ಜಯಶ್ರೀವಿಭಕ್ತಿ ಪ್ರತ್ಯಯಗಳುದಾಸವಾಳಸುಭಾಷ್ ಚಂದ್ರ ಬೋಸ್ಅಳಿಲುಸಂಖ್ಯೆಒಡೆಯರ್ಅರರಾಜ್‌ಕುಮಾರ್ಬಸವೇಶ್ವರಮಸೂರ ಅವರೆಯುಧಿಷ್ಠಿರಮಾಸ್ತಿ ವೆಂಕಟೇಶ ಅಯ್ಯಂಗಾರ್ಭತ್ತಭೂತಾರಾಧನೆನಾಯಿಹೊಯ್ಸಳ ವಿಷ್ಣುವರ್ಧನಹಂಪೆರೈತಭಾರತದ ಚುನಾವಣಾ ಆಯೋಗಕರ್ನಾಟಕದ ವಾಸ್ತುಶಿಲ್ಪಬಾದಾಮಿ ಶಾಸನಗಾದೆದ್ಯುತಿಸಂಶ್ಲೇಷಣೆಕರ್ನಾಟಕದ ಮಹಾನಗರಪಾಲಿಕೆಗಳುಮೈಸೂರು ದಸರಾಪರಿಸರ ವ್ಯವಸ್ಥೆಕರ್ನಾಟಕ ವಿಶ್ವವಿದ್ಯಾಲಯವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಕೃಷಿ ಉಪಕರಣಗಳುರಾಯಚೂರು ಜಿಲ್ಲೆಬಹಮನಿ ಸುಲ್ತಾನರುದಯಾನಂದ ಸರಸ್ವತಿಬ್ಯಾಂಕಿಂಗ್ ವ್ಯವಸ್ಥೆಮುಖ್ಯ ಪುಟವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪವೇದಸಂಶೋಧನೆಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುಪ್ರಾಚೀನ ಈಜಿಪ್ಟ್‌ಕೆ. ಅಣ್ಣಾಮಲೈತಾಳಗುಂದ ಶಾಸನಆವಕಾಡೊಅಡೋಲ್ಫ್ ಹಿಟ್ಲರ್ಝಾನ್ಸಿ ರಾಣಿ ಲಕ್ಷ್ಮೀಬಾಯಿಮಹಾಕವಿ ರನ್ನನ ಗದಾಯುದ್ಧಗೋಲಗೇರಿಕ್ಯಾನ್ಸರ್ದ್ವಿರುಕ್ತಿ🡆 More