ತಾಳಗುಂದ ಶಾಸನ

ತಾಳಗುಂದ ಶಾಸನಗಳು ಕನ್ನಡದ ಹಳೆಯ ಕಲ್ಲಿನ ಶಾಸನಗಳು.

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿತಾಳಗುಂದ ಗ್ರಾಮದಲ್ಲಿವೆ. ಇಲ್ಲಿನ ಒಂದು ಶಾಸನವು ಈವರೆಗೆ ಸಿಕ್ಕಿರುವ ಕನ್ನಡದ ಅತಿಹಳೆಯ ಶಾಸನವೆಂದು ಅಧಿಕೃತವಾಗಿ ಪ್ರಕಟಿಸಲಾಗಿದೆ. ಅದುವರೆಗೂ ಹಲ್ಮಿಡಿ ಶಾಸನವು ಕನ್ನಡದ ಅತಿಹಳೆಯ ಶಾಸನವೆಂದು ಪರಿಗಣಿತವಾಗಿತ್ತು. ಆದರೆ ಅದಕ್ಕಿಂತಲೂ ಇದು ಹಳೆಯದೆಂದು ಭಾರತೀಯ ಪುರಾತತ್ವ ಇಲಾಖೆ ಪ್ರಕಟಿಸಿದೆ. ಈ ಮೂಲಕ ಕನ್ನಡ ಬರವಣಿಗೆಯ ಇತಿಹಾಸವು ಸುಮಾರು ಒಂದು ನೂರು ವರ್ಷಗಳಷ್ಟು ಹಿಂದೆ ಹೋದಂತಾಗಿದೆ.

ಶಾಸನದ ಇತಿಹಾಸ

ತಾಳಗುಂದದ ಪ್ರಣವಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಪುರಾತತ್ವ ಇಲಾಖೆಯಿಂದ ೨೦೧೩-೧೪ರಲ್ಲಿ ನಡೆಸಿದ ಉತ್ಖನನದ ವೇಳೆ ಈ ಶಾಸನ ಪತ್ತೆಯಾಗಿತ್ತು. ಇದರ ಅಧ್ಯಯನಕ್ಕೆ ಸಾಕಷ್ಟು ಸಮಯ ತೆಗೆದುಕೊಂಡ ಪುರಾತತ್ವ ಇಲಾಖೆ ಇದರ ಪ್ರಾಚೀನತೆಯ ಅಂಶಗಳನ್ನು ಬಹಿರಂಗಪಡಿಸಿತು. ಇದರಂತೆ, ಈ ಶಾಸನವೇ ಕನ್ನಡದ ಮೊದಲ ಶಾಸನವೆಂದು ಪರಿಗಣಿಸಲ್ಪಟ್ಟಿದೆ. ಈ ಶಾಸನ ರಚನೆಯಾದ ಅವಧಿ ಕ್ರಿ.ಶ. ೩೭೦-೪೫೦ ಇರಬಹುದೆಂದು ಅಧ್ಯಯನದಿಂದ ತಿಳಿದುಬಂದಿದೆ. ಈ ಶಾಸನ ಕದಂಬ ದೊರೆ ಶಾಂತಿವರ್ಮನ ಕಾಲಕ್ಕಿಂತಲೂ ಹಳೆಯದೆಂಬ ಅಂಶ ಬೆಳಕಿಗೆ ಬಂದಿದೆ.

ಇನಾಮು ಭೂಮಿ ವಿವರ

ವಜಿನಾಗ ಎಂಬ ಅಂಬಿಗನಿಗೆ ಕದಂಬ ದೊರೆಯು ಭೂಮಿಯನ್ನು ಇನಾಮು ನೀಡಿದ್ದ ಅಂಶವನ್ನು ಈ ಶಾಸನ ವಿವರಿಸುತ್ತದೆ. ಪ್ರಣವಲಿಂಗೇಶ್ವರ ದೇವಾಲಯದ ಉತ್ತರ ಭಾಗದಲ್ಲಿ ಇದು ಪತ್ತೆಯಾಗಿತ್ತು. ತುಂಡರಿಸಿರುವ ಏಳು ಸಾಲುಗಳಲ್ಲಿ ಕನ್ನಡ ಪದಗಳ ಬಳಕೆ ಮಾಡಿರುವುದರಿಂದ ಶಾಸನ ಶಾಸ್ತ್ರದ ಪ್ರಕಾರ ಇದನ್ನು ಕನ್ನಡ ಶಾಸನ ಎಂದು ಒಪ್ಪಿಕೊಳ್ಳಬೇಕಾಗುತ್ತದೆ ಎಂಬ ಅಂಶವನ್ನು ಪುರಾತತ್ವ ಇಲಾಖೆ ದೃಢಪಡಿಸಿದೆ.

ಕದಂಬ ಸಾಮ್ರಾಜ್ಯ

ಕ್ರಿ.ಶ. ೩೪೫ರಲ್ಲಿ ಮಯೂರವರ್ಮ ಕದಂಬ ಸಾಮ್ರಾಜ್ಯವನ್ನು ಸ್ಥಾಪಿಸಿದ್ದ. ಉತ್ತರ ಕನ್ನಡ ಜಿಲ್ಲೆಸಿರ್ಸಿ ಸಮೀಪದ ಬನವಾಸಿ ಕದಂಬರ ರಾಜಧಾನಿಯಾಗಿತ್ತು. ಮಯೂರವರ್ಮ ೩೬೫ರಲ್ಲಿ ಮೃತಪಟ್ಟ ನಂತರ ಕಂಗವರ್ಮ, ಭಗೀರಥ ವರ್ಮ, ರಘುಪತಿ ವರ್ಮ ಮುಂತಾದವರು ಕ್ರಿ.ಶ. ೩೬೫-೪೨೫ರವರೆಗೂ ಆಳ್ವಿಕೆ ನಡೆಸಿದ್ದರು. ಇದೇ ಅವಧಿಯಲ್ಲಿ ಶಾಸನ ಕೆತ್ತಿಸಲಾಗಿತ್ತು ಎಂಬುದು ಶಾಸನ ಶಾಸ್ತ್ರ ತಜ್ಞರ ಅನಿಸಿಕೆ.

ಪ್ರಾಚೀನತೆ ಬಗ್ಗೆ ಅನುಮಾನಗಳು

ಅತಿ ಹಳೆಯ ಶಾಸನವೆಂದು ಘೋಷಿತವಾಗಿರುವ ಶಾಸನದಲ್ಲಿ ಕೇವಲ ಎರಡೇ ಸಾಲುಗಳಿರುವುದರಿಂದ ಇದನ್ನು ಮರುಪರಿಶೀಲನೆಗೊಳಿಸಬೇಕೆಂಬ ಅಭಿಪ್ರಾಯಗಳೂ ಕೇಳಿಬಂದಿದೆ.

ಉಲ್ಲೇಖಗಳು

ಹೊರಸಂಪರ್ಕ ಕೊಂಡಿಗಳು

Tags:

ತಾಳಗುಂದ ಶಾಸನ ಶಾಸನದ ಇತಿಹಾಸತಾಳಗುಂದ ಶಾಸನ ಪ್ರಾಚೀನತೆ ಬಗ್ಗೆ ಅನುಮಾನಗಳುತಾಳಗುಂದ ಶಾಸನ ಉಲ್ಲೇಖಗಳುತಾಳಗುಂದ ಶಾಸನ ಹೊರಸಂಪರ್ಕ ಕೊಂಡಿಗಳುತಾಳಗುಂದ ಶಾಸನಕನ್ನಡತಾಳಗುಂದಶಿಕಾರಿಪುರಶಿವಮೊಗ್ಗ ಜಿಲ್ಲೆಹಲ್ಮಿಡಿ ಶಾಸನ

🔥 Trending searches on Wiki ಕನ್ನಡ:

ಇಮ್ಮಡಿ ಪುಲಕೇಶಿಬೀಚಿಅಶ್ವತ್ಥಾಮಸಾಲುಮರದ ತಿಮ್ಮಕ್ಕಯೋಗವಾಹಜೈನ ಧರ್ಮಗುಣ ಸಂಧಿಶನಿಮೈಗ್ರೇನ್‌ (ಅರೆತಲೆ ನೋವು)ವಡ್ಡಾರಾಧನೆಭಾರತದ ಪ್ರಧಾನ ಮಂತ್ರಿರಾಮನಗರ1935ರ ಭಾರತ ಸರ್ಕಾರ ಕಾಯಿದೆರಾಮ ಮನೋಹರ ಲೋಹಿಯಾಸ್ಯಾಮ್ ಪಿತ್ರೋಡಾಕನಕದಾಸರುಮಸೂರ ಅವರೆಸ್ಕೌಟ್ಸ್ ಮತ್ತು ಗೈಡ್ಸ್ಪ್ರಶಾಂತ್ ನೀಲ್ಹುರುಳಿಪುನೀತ್ ರಾಜ್‍ಕುಮಾರ್ರೇಡಿಯೋಮುಖ್ಯ ಪುಟಮಧುಮೇಹಸಂಸ್ಕಾರವ್ಯಾಕ್ಸಿನೇಷನ್ (ಲಸಿಕೆ ಹಾಕುವುದು)ಭಾರತದ ವಿಜ್ಞಾನಿಗಳುಸಮುಚ್ಚಯ ಪದಗಳುಅಂತರ್ಜಲಎಚ್.ಎಸ್.ಶಿವಪ್ರಕಾಶ್ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುರಾಮಾಚಾರಿ (ಕನ್ನಡ ಧಾರಾವಾಹಿ)ನೊಬೆಲ್ ಪ್ರಶಸ್ತಿಕನ್ನಡಗುರುರಾಜ ಕರಜಗಿಆಮ್ಲಬಾರ್ಲಿನಳಂದಮಾನವನ ಪಚನ ವ್ಯವಸ್ಥೆಆಲದ ಮರವಿಜಯನಗರದ ಸಂಸ್ಥಾಪನಾಚಾರ್ಯ ಕುಮಾರ ರಾಮಹಳೆಗನ್ನಡಕನ್ನಡದಲ್ಲಿ ಕಾದಂಬರಿ ಸಾಹಿತ್ಯಪೆಟ್ರೋಮ್ಯಾಕ್ಸ್ (ಚಲನಚಿತ್ರ)ಅಯೋಧ್ಯೆಕನ್ನಡ ಕಾವ್ಯಕರ್ಮಧಾರಯ ಸಮಾಸಆಸ್ಟ್ರೇಲಿಯಾ ಕ್ರಿಕೆಟ್ ತಂಡಕರ್ನಾಟಕದ ಮಹಾನಗರಪಾಲಿಕೆಗಳುಭೂಮಿ ದಿನದೇವಸ್ಥಾನಕೊಡಗುಛತ್ರಪತಿ ಶಿವಾಜಿಇತಿಹಾಸಭಾರತೀಯ ಅಂಚೆ ಸೇವೆರಾಗಿಬಿಳಿ ರಕ್ತ ಕಣಗಳುಸುದೀಪ್ರವೀಂದ್ರನಾಥ ಠಾಗೋರ್ಭಾರತ ಬಿಟ್ಟು ತೊಲಗಿ ಚಳುವಳಿಚಾಮುಂಡರಾಯನವರತ್ನಗಳುಭಾರತೀಯ ಆಡಳಿತಾತ್ಮಕ ಸೇವೆಗಳುವಿದುರಾಶ್ವತ್ಥಭಾರತೀಯ ಜನತಾ ಪಕ್ಷಭೂತಾರಾಧನೆಭಾರತೀಯ ಸಂಸ್ಕೃತಿಅಳಿಲುಗದಗಭಾರತದ ಪಂಚಾಯತ್ ರಾಜ್ ವ್ಯವಸ್ಥೆಸಹಕಾರಿ ಸಂಘಗಳುಮುಹಮ್ಮದ್ಸಂಭೋಗವಿರಾಟ್ ಕೊಹ್ಲಿಸೂರ್ಯಕನ್ನಡ ಅಭಿವೃದ್ಧಿ ಪ್ರಾಧಿಕಾರಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಯಕ್ಷಗಾನ🡆 More