ರಾಮನಗರ: ರೇಷ್ಮೆ ನಾಡು

ರಾಮನಗರ ಕರ್ನಾಟಕದ ಒಂದು ನಗರ, ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರ, ಕಸಬಾ ಹೋಬಳಿಯ ಕೇಂದ್ರವಾಗಿದೆ.

ರಾಮನಗರ ಜಿಲ್ಲೆಯ ಹೆಸರುನ್ನು ನವ ಬೆಂಗಳೂರು ಎಂದು ಬದಲಾವಣೆ ಮಾಡಲು ಸರ್ಕಾರ ನಿರ್ಧರಿಸಿದೆ. ಬೆಂಗಳೂರು ಜಿಲ್ಲೆಯ ಭಾಗವಾಗಿದ್ದು 1986ರಲ್ಲಿ ಬೆಂಗಳೂರು ಗ್ರಾಮಾಂತರ ಪ್ರತ್ಯೇಕ ಜಿಲ್ಲೆಯಾಗಿ ರಚನೆಯಾಯಿತು. ನಂತರ 2007ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಭಾಗವಾಗಿದ್ದ ರಾಮನಗರ ಪ್ರತ್ಯೇಕ ಜಿಲ್ಲೆಯಾಯಿತು. ರಾಮನಗರವು ರೇಷ್ಮೆ ನಾಡು, ಕ್ಷೀರ ನಗರ, ಸಪ್ತಗಿರಿ ನಾಡು ಎಂದು ಖ್ಯಾತಿಗಳಿಸಿದೆ. ರಾಮನಗರ ತಾಲೂಕು ವಿಸ್ತೀರ್ಣ 630 ಚ.ಕಿ.ಮೀ ಹೊಂದಿದೆ.

ರಾಮನಗರ
ರೇಷ್ಮೆ ನಗರ
ನಗರ
English transcription(s)
ರಾಮನಗರದ ಪ್ರದೇಶವೊಂದರ ಹಕ್ಕಿನೋಟ
ರಾಮನಗರದ ಪ್ರದೇಶವೊಂದರ ಹಕ್ಕಿನೋಟ
ಒಕ್ಕೂಟರಾಮನಗರ: ನವ ಬೆಂಗಳೂರು (ರಾಮನಗರ) ಜಿಲ್ಲೆಯ ತಾಲ್ಲೂಕುಗಳು ಮತ್ತು ವಿಸ್ತೀರ್ಣ, ನವ ಬೆಂಗಳೂರು (ರಾಮನಗರ) ಜಿಲ್ಲೆಯ ಅಭವೃದ್ಧಿಯ ಯೋಜನೆಗಳು, ರಾಮನಗರ ಜಿಲ್ಲೆಯ ಹೋಬಳಿಗಳು ಭಾರತ
ನಾಡು/ದೇಶಕರ್ನಾಟಕ
ಜಿಲ್ಲೆರಾಮನಗರ
Elevation
೭೪೭ m (೨,೪೫೧ ft)
Population
 (2011)
 • Total೯೫,೧೬೭
Languages
 • Officialಕನ್ನಡ
Time zoneUTC+5:30 (IST)
Websitewww.ramanagaracity.mrc.gov.in

ರಾಮನಗರ ನಗರ ಪ್ರದೇಶ ವ್ಯಾಪ್ತಿಯಲ್ಲಿ ರಾಮನಗರ, ಕೊತ್ತಿಪುರ, ಸಿಡ್ಲುಕಲ್ಲು, ಚನ್ನಮಾನಹಳ್ಳಿ, ಅರ್ಚಕರಹಳ್ಳಿ, ಐಜೂರು, ರಂಗರಾಯರ ದೊಡ್ಡಿ, ಬೋಳಪ್ಪನಹಳ್ಳಿ, ಚನ್ನೇನಹಳ್ಳಿ, ಕೇಶವಪುರ, ಚಾಮುಂಡಿಪುರ, ಜಿಗೇನಹಳ್ಳಿ, ರಾಯರದೊಡ್ಡಿ, ಕೆಂಪೇಗೌಡನ ದೊಡ್ಡಿ, ಅಂಚೆಕೆಂಪಯ್ಯನ ದೊಡ್ಡಿ, ದೇವರೆಸೆಗೌಡನ ದೊಡ್ಡಿ, ವಡೇರಹಳ್ಳಿ, ರಾಮಗಿರಿ, ರಾಮದುರ್ಗ ಎಂಬ 20 ಗ್ರಾಮಗಳನ್ನು ಕೂಡಿ ರಾಮನಗರ ನಗರವಾಗಿದೆ.

ರಾಮನಗರ ಜಿಲ್ಲೆ 6 ತಾಲೂಕುಗಳನ್ನು ಹೊಂದಿದೆ ಅವುಗಳೆಂದರೆ ರಾಮನಗರ, ಚನ್ನಪಟ್ಟಣ, ಮಾಗಡಿ, ಕನಕಪುರ, ಕುಣಿಗಲ್, ಹಾರೋಹಳ್ಳಿಯನ್ನು 2020ರಲ್ಲಿ ನೂತನ ತಾಲೂಕು ಕೇಂದ್ರವಾಗಿ ಘೋಷಣೆಯಾಗಿದೆ.

ಬೇಡಿಕೆಯಿರುವ 5 ಹೊಸ ತಾಲೂಕುಗಳು ಕನಕಪುರ ತಾಲೂಕನ್ನು ವಿಭಜಿಸಿ ಹಾರೋಹಳ್ಳಿ ಮತ್ತು ಕೋಡಿಹಳ್ಳಿ ತಾಲೂಕು ರಚನೆ ಮಾಡಬೇಕು.

ರಾಮನಗರ ತಾಲೂಕನ್ನು ವಿಭಜಿಸಿ ಬಿಡದಿ ತಾಲೂಕು ರಚನೆ ಮಾಡಬೇಕು

ಮಾಗಡಿ ತಾಲೂಕನ್ನು ವಿಭಜಿಸಿ ಕುದೂರು ತಾಲೂಕು ರಚನೆ ಮಾಡಬೇಕು

ಕುಣಿಗಲ್ ತಾಲೂಕನ್ನು ವಿಭಜಿಸಿ ಹುಲಿಯೂರು ದುರ್ಗ ತಾಲೂಕು ರಚನೆ ಮಾಡಬೇಕು

ಕುಣಿಗಲ್ ತಾಲೂಕನ್ನು ರಾಮನಗರ ಜಿಲ್ಲೆಗೆ ಸೇರ್ಪಡೆ ಮಾಡಬೇಕು ರಾಮನಗರ ಜಿಲ್ಲೆಯ ಒಟ್ಟು ವಿಸ್ತೀರ್ಣ 4497 ಚ.ಕಿ.ಮೀ.

ನವ ಬೆಂಗಳೂರು (ರಾಮನಗರ) ಜಿಲ್ಲೆಯ ತಾಲ್ಲೂಕುಗಳು ಮತ್ತು ವಿಸ್ತೀರ್ಣ

ರಾಮನಗರ ಜಿಲ್ಲೆಯ ತಾಲ್ಲೂಕುಗಳು:

ಜಿಲ್ಲೆ ತಾಲೂಕು ವಿಸ್ತೀರ್ಣ


1.ರಾಮನಗರ ಜಿಲ್ಲೆ 2021 (ಜನಗಣತಿ ಪ್ರಕಾರ)
1.ರಾಮನಗರ 630 ಚ.ಕಿ.ಮೀ
2.ಚನ್ನಪಟ್ಟಣ 540 ಚ.ಕಿ.ಮೀ
3.ಕನಕಪುರ 410 ಚ.ಕಿ.ಮೀ
4.ಮಾಗಡಿ 410 ಚ.ಕಿ.ಮೀ
5.ಹಾರೋಹಳ್ಳಿ 502 ಚ.ಕಿ.ಮೀ
ಹೊಸ ತಾಲ್ಲೂಕುಗಳು
7.ಕೋಡಿಹಳ್ಳಿ 630 ಚ.ಕಿ.ಮೀ
9.ಕುದೂರು 394 ಚ.ಕಿ.ಮೀ
10.ಬಿಡದಿ 00 ಚ.ಕಿ.ಮೀ
ಒಟ್ಟು ಜಿಲ್ಲೆಯ ವಿಸ್ತೀರ್ಣ 4006 ಚ.ಕಿ.ಮೀ

ನವ ಬೆಂಗಳೂರು (ರಾಮನಗರ) ಜಿಲ್ಲೆಯ ಅಭವೃದ್ಧಿಯ ಯೋಜನೆಗಳು

ರಾಮನಗರ ಜಿಲ್ಲೆಯ ಹೋಬಳಿಗಳು

ರಾಮನಗರ ಜಿಲ್ಲೆಯ ಹೋಬಳಿಗಳು ತಾಲ್ಲೂಕುವಾರು

ಜಿಲ್ಲೆ ತಾಲೂಕು ಹೋಬಳಿ


01.ರಾಮನಗರ ಜಿಲ್ಲೆ
1.ರಾಮನಗರ ತಾಲ್ಲೂಕು
01.ರಾಮನಗರ ಕಸಬಾ ನಗರ ಸಭೆ
02.ಕೈಲಾಂಚ ಗ್ರಾಮ ಪಂಚಾಯತಿ
03.ಕೂಟಗಲ್ ಗ್ರಾಮ ಪಂಚಾಯತಿ
2.ಚನ್ನಪಟ್ಟಣ
01.ಚನ್ನಪಟ್ಟಣ ಕಸಬಾ ನಗರ ಸಭೆ
02.ಬೇವೂರು ಗ್ರಾಮ ಪಂಚಾಯತಿ
03.ಮಳೂರು ಗ್ರಾಮ ಪಂಚಾಯತಿ
04.ವಿರೂಪಾಕ್ಷಿ ಪುರ ಗ್ರಾಮ ಪಂಚಾಯತಿ
3.ಕನಕಪುರ
01.ಕನಕಪುರ ಕಸಬಾ ನಗರ ಸಭೆ
02.ಸಾತನೂರು ಪಟ್ಟಣ ಪಂಚಾಯಿತಿ
03.ದೊಡ್ಡ ಆಲಹಳ್ಳಿ, ಉಯ್ಯಂಬಳ್ಳಿ ಗ್ರಾಮ ಪಂಚಾಯಿತಿ
4.ಮಾಗಡಿ
01.ಮಾಗಡಿ ಕಸಬಾ ಪುರ ಸಭೆ
02.ಸೋಲೂರು ಗ್ರಾಮ ಪಂಚಾಯತಿ
03.ಮಾಡಬಾಳ್ ಗ್ರಾಮ ಪಂಚಾಯತಿ

ತಿಪ್ಪ ಸಂದ್ರ

5.ಹಾರೋಹಳ್ಳಿ
01.ಹಾರೋಹಳ್ಳಿ ಕಸಬಾ ಪಟ್ಟಣ ಪಂಚಾಯತಿ
02.ದೊಡ್ಡ ಮರಳವಾಡಿ ಗ್ರಾಮ ಪಂಚಾಯತಿ
03.ತಟ್ಟೆಕೆರೆ ಗ್ರಾಮ ಪಂಚಾಯತಿ
ಹೊಸ ತಾಲ್ಲೂಕುಗಳು
7.ಕೋಡಿಹಳ್ಳಿ
01.ಕೋಡಿಹಳ್ಳಿ ಕಸಬಾ ಪಟ್ಟಣ ಪಂಚಾಯತಿ
02.ಏಳಗಳ್ಳಿ ಗ್ರಾಮ ಪಂಚಾಯತಿ
03.
9.ಕುದೂರು
01.ಕುದೂರು ಕಸಬಾ ಪಟ್ಟಣ ಪಂಚಾಯತಿ
02.ಸೋಲೂರು ಪಟ್ಟಣ ಪಂಚಾಯತಿ
03.ತಿಪ್ಪಸಂದ್ರ ಪಟ್ಟಣ ಪಂಚಾಯತಿ
10.ಬಿಡದಿ
01.ಬಿಡದಿ ಕಸಬಾ ಪುರಸಭೆ
02.ಕಗ್ಗಲೀಪುರ ಪಟ್ಟಣ ಪಂಚಾಯತಿ
03.ಹೆಜ್ಜಾಲ ಪಟ್ಟಣ ಪಂಚಾಯತಿ
ಒಟ್ಟು ಹೋಬಳಿಗಳ ಸಂಖ್ಯೆ 35

ರಾಮನಗರದ ವಿಶೇಷತೆ

  • ಕರ್ನಾಟಕಕ್ಕೆ ಮೂವರು ಮುಖ್ಯಮಂತ್ರಿಗಳನ್ನು ನೀಡಿದ ಜಿಲ್ಲೆಯಾಗಿದೆ. ಅವರೆಂದರೆ ವಿಧಾನ ಸೌಧ ನಿರ್ಮಾತೃ ಕೆಂಗಲ್ ಹನುಮಂತಯ್ಯ, ಮೊಟ್ಟ ಮೊದಲ ಕನ್ನಡದ ಪ್ರಧಾನಿಯೆಂಬ ಹೆಗ್ಗಳಿಕೆಗೆ ಪಾತ್ರವಾದ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪುತ್ರ ಹೆಚ್.ಡಿ.ಕುಮಾರಸ್ವಾಮಿ.
  • ರಾಮನಗರ ಜಿಲ್ಲೆಯ ಪ್ರಮುಖ ಸ್ಥಳಗಳೆಂದರೆ ಜಾನಪದ ಲೋಕ , ಕೆಂಗಲ್, ದೊಡ್ಡ ಮಳೂರು , ರಂಗರಾಯರದೊಡ್ಡಿ ಕೆರೆ.
  • ರಾಮನಗರ ಮಿನಿ ವಿಧಾನ ಸೌಧ ವನ್ನು ಹೊಂದಿದೆ. ಹೆಚ್ಚಾಗಿ ಬೆಟ್ಟ ಗುಡ್ಡಗಳಿಂದ ಕೂಡಿದ ಪ್ರದೇಶವಾಗಿದೆ. ರಾಮನಗರ - ಇದು ಹಿಂದಿಯ 'ಶೋಲೆ' ಖ್ಯಾತಿಯ ರೇಷ್ಮೆ ಸೀಮೆ! ರೇಷ್ಮೆ ನಗರ ರಾಮನಗರ ಬೆಂಗಳೂರಿನಿಂದ ೪೭ ಕಿಲೋಮೀಟರು ದೂರದಲಿದ್ದು, ನೈರುತ್ಯ ದಿಕ್ಕಿನಲ್ಲಿದೆ.
  • ಇದು ರಾಮನಗರ ಜಿಲ್ಲೆಯ ಜಿಲ್ಲಾಕೇಂದ್ರ. ಕರ್ನಾಟಕ ರಾಜ್ಯದ ಇತರೆ ಭಾಗಗಳಂತೆ ಇದೂ ಕೂಡ ಗಂಗ, ಚೋಳ, ಹೊಯ್ಸಳ ಹಾಗು ಮೈಸೂರು ರಾಜರ ಆಳ್ವಿಕೆಗೆ ಒಳಪಟ್ಟಿತ್ತು ಆದರೆ ಈ ಪಟ್ಟಣ ಏಕಾಏಕಿ ಪ್ರಸಿದ್ದಿಗೆ ಬಂದದ್ದು ಸುಮಾರು 70ರ ದಶಕದಲ್ಲಿ ಇಲ್ಲಿ ನಡೆದ 'ಶೋಲೆ' ಚಲನ ಚಿತ್ರದ ಚಿತ್ರೀಕರಣದಿಂದ.
  • ರಾಮನಗರ ಜಿಲ್ಲೆಯು ಪ್ರಮುಖ ಧಾರ್ಮಿಕ ನಾಯಕರುಗಳಾದ ಆದಿ ಚುಂಚನಗಿರಿ ಕ್ಷೇತ್ರದ ಶ್ರೀ ಬಾಲಗಂಗಾಧರನಾಥ ಸ್ವಾಮಿಗಳು ಮತ್ತು ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳ ತವರು ಜಿಲ್ಲೆ, ರಾಮನಗರ ತಾಲೂಕಿನ ಬಿಡದಿಯ ಬಾನಂದೂರು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಗಳ ತವರಾದರೆ ಮಾಗಡಿ ತಾಲೂಕಿನ ವೀರಾಪುರ ಶ್ರೀ ಶಿವಕುಮಾರ ಸ್ವಾಮೀಜಿಗಳ ತವರು


ರಾಮನಗರದ ಬೆಟ್ಟ ಪ್ರದೇಶ

  • ರಾಮನಗರವು, ಶಿವರಾಮಗಿರಿ, ಸೋಮಗಿರಿ, ಕೃಷ್ಣಗಿರಿ, ಯತಿರಾಜಗಿರಿ, ರೇವಣ ಸಿದ್ದೇಶ್ವರ, ಸಿಡಿಲಕಲ್ಲು ಹಾಗು ಜಲ ಸಿದ್ದೇಶ್ವರ ಎಂಬ 7 ಭವ್ಯ ಬೆಟ್ಟಗಳಿಂದ ಸುತ್ತುವರಿದಿದೆ. ಇಲ್ಲಿ ರೇಷ್ಮೆಯನ್ನು ಹೆಚ್ಚಾಗಿ ಬೆಳೆಯುವುದರಿಂದ ಈ ಊರು ರೇಷ್ಮೆ ನಗರವೆಂದೂ ಹೆಸರುವಾಸಿ. ವಿಶ್ವ ವಿಖ್ಯಾತ ಮೈಸೂರು ರೇಷ್ಮೆ ಸೀರೆಗಳನ್ನು ರಾಮನಗರದ ರೇಷ್ಮೆಯನ್ನು ಬಳಸಿಯೇ ನೇಯಲಾಗುತ್ತದೆ.
  • ಪ್ರಕೃತಿ ಪ್ರೇಮಿಗಳಿಗೆ ಖುಷಿ ಕೊಡುವ ವಿಚಾರವೆಂದರೆ ಇಲ್ಲಿರುವ ಬೆಟ್ಟಗಳು ಈಗ ಅಳಿವಿನಂಚಿನಲ್ಲಿರುವ ಹಳದಿ ಕುತ್ತಿಗೆಯ ಬುಲ್ ಬುಲ್ ಹಾಗು ಉದ್ದ ಕೊಕ್ಕಿನ ರಣಹದ್ದುಗಳಿಗೆ ಮನೆಯಾಗಿರುವುದು. ಇಲ್ಲೇ ಜಾನಪದ ಲೋಕವಿದ್ದು ಕರ್ನಾಟಕದ ಜಾನಪದ ಕಲೆ ಹಾಗು ಸಂಸೃತಿಗೆ ಸಂಬಂದ್ದಪಟ್ಟ ಸಣ್ಣ ವಸ್ತು ಸಂಗ್ರಹಾಲಯವನ್ನು ಇಲ್ಲಿ ನೋಡಬಹುದು.
  • ಈ ಪ್ರದೇಶ ಬೆಟ್ಟಗಳಿಂದ ಸುತ್ತುವರಿದಿದ್ದು ಪರ್ವತಾರೋಹಣ ಪ್ರಿಯರಿಗೆ ಹೇಳಿ ಮಾಡಿಸಿದ ತಾಣವಾಗಿದೆ ಹಾಗೂ ಇದು ಈ ಪ್ರದೇಶದ ಪ್ರವಾಸೋದ್ಯಮಕ್ಕೂ ಆಸರೆಯಾಗಿದೆ. ರಾಮನಗರ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವುದರಿಂದ ಇಲ್ಲಿಗೆ ಈ ಎರಡೂ ನಗರಗಳಿಂದ ರಸ್ತೆಯ ಮೂಲಕ ಸುಲಭವಾಗಿ ತಲುಪಬಹುದು.

ರಾಮನಗರ ಜಿಲ್ಲೆಯ ಕಲೆ

ರಾಮನಗರ ಜಿಲ್ಲೆಯು ವಿಶೇಷವಾಗಿ ಜಾನಪದ ಕಲೆಗೆ ಹೆಸರು ವಾಸಿಯಾದ ಜಿಲ್ಲೆ. ಇಲ್ಲಿ ಅನೇಕ ಪ್ರಕಾರದ ಜಾನಪದ ಕಲೆಗಳು ಅನಾವರಣಗೊಂಡಿವೆ. ಅದಕ್ಕಾಗಿಯೇ ವಿಶೇಷವಾಗಿ ಜಾನಪದ ಲೋಕವನ್ನು ಕಾಣಬಹುದು. ಜಾನಪದ ಕಲೆಗಳ ಸಂಗ್ರಹ ಇಲ್ಲಿದೆ. ಜಾನಪದ ಗಾಯನದಲ್ಲಿ ಬಾನಂದೂರು ಕೆಂಪಯ್ಯನವರು ಹೆಸರುವಾಸಿಯಾಗಿದ್ದಾರೆ. ಅನೇಕ ಹಳ್ಳಿಗಳಲ್ಲಿ ತಾಸು ಗಟ್ಟಲೆಯಲ್ಲದೆ, ದಿನಗಟ್ಟಲೆ ವಿವಿಧ ಕೆಲಸ ಕಾರ್ಯಗಳು, ಸಂಪ್ರದಾಯ ಆಚರಣೆಯ ಜಾನಪದ ವಿವಿಧ ಪ್ರಕಾರದ ಗೀತೆಗಳನ್ನು ಹಾಡುವ ಹಿರಿಯ ತಲೆಗಳು ಜಿಲ್ಲೆಯಲ್ಲಿವೆ. ಹಾಗೆಯೇ ಚನ್ನಪಟ್ಟಣದ ಗೊಂಬೆಗಳಿಗೆ ಪ್ರಸಿದ್ದಿಯಾಗಿದೆ.

ಶಾಸ್ತ್ರೀಯ ಸಂಗೀತ

ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಸಾತನೂರಿನ ಗ್ರಾಮದಲ್ಲಿ ಪುಂಡರೀಕ ವಿಠಲನೆಂಬ ಶ್ರೇಷ್ಠ ಖ್ಯಾತ ಶಾಸ್ತ್ರೀಯ ಸಂಗೀತ ಗಾಯಕನಿದ್ದದ್ದು ತಿಳಿದುಬರುತ್ತದೆ. ಈತ ಅಕ್ಬರನ ಆಸ್ಥಾನದಲ್ಲಿ, ತಾನ್ ಸೇನನ ಸಮಕಾಲೀನನಾಗಿದ್ದನಂತೆ. ಈತ ಅಕ್ಬರನ ಬಿರುದಿನೊಂದಿಗೆ ಗೌರವಿಸಲ್ಪಟ್ಟವನೆಂದು ಹೇಳಲಾಗಿದೆ. ಇವನು ಆಗಿನ ಕಾಲಕ್ಕೆ ದಕ್ಷಿಣ ಭಾರತದ ಖ್ಯಾತ ಹಿಂದೂಸ್ಥಾನಿ ಗಾಯಕನಾಗಿದ್ದನೆಂದು ಹೇಳಲಾಗಿದೆ. ರಾಮನಗರದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಹಾಡುವ ವಿದ್ವಾನ್ ನಾರಾಯಣ ಅಯ್ಯಂಗಾರ್ ಅವರ ಹೆಸರು ಕೇಳಿಬರುತ್ತದೆ.[ಸೂಕ್ತ ಉಲ್ಲೇಖನ ಬೇಕು]

ಹೆಚ್ಚಿನ ಮಾಹಿತಿ

ಉಲ್ಲೇಖಗಳು

2. https://ramanagara.nic.in/en/map-of-district/

Tags:

ರಾಮನಗರ ನವ ಬೆಂಗಳೂರು () ಜಿಲ್ಲೆಯ ತಾಲ್ಲೂಕುಗಳು ಮತ್ತು ವಿಸ್ತೀರ್ಣರಾಮನಗರ ನವ ಬೆಂಗಳೂರು () ಜಿಲ್ಲೆಯ ಅಭವೃದ್ಧಿಯ ಯೋಜನೆಗಳುರಾಮನಗರ ಜಿಲ್ಲೆಯ ಹೋಬಳಿಗಳುರಾಮನಗರ ದ ವಿಶೇಷತೆರಾಮನಗರ ದ ಬೆಟ್ಟ ಪ್ರದೇಶರಾಮನಗರ ಜಿಲ್ಲೆಯ ಕಲೆರಾಮನಗರ ಶಾಸ್ತ್ರೀಯ ಸಂಗೀತರಾಮನಗರ ಉಲ್ಲೇಖಗಳುರಾಮನಗರಕರ್ನಾಟಕನವ ಬೆಂಗಳೂರು ಜಿಲ್ಲೆಬೆಂಗಳೂರುಬೆಂಗಳೂರು ಗ್ರಾಮಾಂತರ

🔥 Trending searches on Wiki ಕನ್ನಡ:

ಶ್ರೀ ಸಿದ್ಧಲಿಂಗೇಶ್ವರಕಾಲಾಯ ತಸ್ಮೈ ನಮಃ (ಚಲನಚಿತ್ರ)ಕನ್ನಡದಲ್ಲಿ ಸಣ್ಣ ಕಥೆಗಳುಸಂಚಿ ಹೊನ್ನಮ್ಮಕುಟುಂಬಸರ್ವಜ್ಞಹಸಿರುಮನೆ ಪರಿಣಾಮಭಗತ್ ಸಿಂಗ್ಅವಿಭಾಜ್ಯ ಸಂಖ್ಯೆಅರವಿಂದ ಘೋಷ್ಮಂಕುತಿಮ್ಮನ ಕಗ್ಗವಲ್ಲಭ್‌ಭಾಯಿ ಪಟೇಲ್ಕನ್ನಡ ಗುಣಿತಾಕ್ಷರಗಳುಸಮುದ್ರಅನುನಾಸಿಕ ಸಂಧಿಝಾನ್ಸಿ ರಾಣಿ ಲಕ್ಷ್ಮೀಬಾಯಿಕೆ. ಅಣ್ಣಾಮಲೈಗೋಲಗೇರಿಅರ್ಥಶಾಸ್ತ್ರಕನ್ನಡಮುರುಡೇಶ್ವರಸಿರಿ ಆರಾಧನೆಬಹಮನಿ ಸುಲ್ತಾನರುಭಾರತದ ಬುಡಕಟ್ಟು ಜನಾಂಗಗಳುಲೋಪಸಂಧಿಶಿವಮೊಗ್ಗಜಾತ್ರೆಋತುಚಕ್ರಹದಿಬದೆಯ ಧರ್ಮಭಾರತದ ಭೌಗೋಳಿಕತೆಭಾರತದ ಸಂಸತ್ತುರಾವಣಗೋಕರ್ಣತುಳುಕನ್ನಡ ಅಭಿವೃದ್ಧಿ ಪ್ರಾಧಿಕಾರಹೊಯ್ಸಳ ವಾಸ್ತುಶಿಲ್ಪಕರ್ನಾಟಕದ ಜಿಲ್ಲೆಗಳುದ್ವಾರಕೀಶ್ಮಾನವನ ವಿಕಾಸಮರದೆಹಲಿ ಸುಲ್ತಾನರುವಿಜಯಪುರ ಜಿಲ್ಲೆಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಾಸ ಸಾಹಿತ್ಯಸಮಾಜ ವಿಜ್ಞಾನನೀನಾದೆ ನಾ (ಕನ್ನಡ ಧಾರಾವಾಹಿ)ಶಾಲಿವಾಹನ ಶಕೆಕಬಡ್ಡಿಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟಕೈಕೇಯಿಕರ್ನಾಟಕ ವಿಧಾನ ಸಭೆಕೊಬ್ಬರಿ ಎಣ್ಣೆದಾವಣಗೆರೆಕಾಂತಾರ (ಚಲನಚಿತ್ರ)ದಕ್ಷಿಣ ಭಾರತದ ಇತಿಹಾಸಕನ್ನಡದಲ್ಲಿ ಮಹಿಳಾ ಸಾಹಿತ್ಯಸುರಪುರದ ವೆಂಕಟಪ್ಪನಾಯಕಭಾರತೀಯ ಸಮರ ಕಲೆಗಳುಶಾತವಾಹನರುಕನಕದಾಸರುಭಾರತದ ಸರ್ವೋಚ್ಛ ನ್ಯಾಯಾಲಯಭಾರತೀಯ ನೌಕಾಪಡೆಹರಿಹರ (ಕವಿ)ಭಾರತದ ಉಪ ರಾಷ್ಟ್ರಪತಿಗಳ ಪಟ್ಟಿವಚನಕಾರರ ಅಂಕಿತ ನಾಮಗಳುಮೂಲಭೂತ ಕರ್ತವ್ಯಗಳುಹರಿಶ್ಚಂದ್ರಪಠ್ಯಪುಸ್ತಕಬರವಣಿಗೆಮಹಾಭಾರತಪರಶುರಾಮಕಂದಪರಿಣಾಮಕೇಶಿರಾಜಪ್ಲಾಸಿ ಕದನ🡆 More