ಆಲದ ಮರ

ಇದು ಹಲಸಿನ ಕುಟುಂಬಕ್ಕೆ ಸೇರಿದ (ಮೋರೇಸೀ ಕುಟುಂಬ), ಬೃಹತ್ತಾಗಿ ಬೆಳೆಯುವ ವೃಕ್ಷವಾಗಿದ್ದು ಮೊದಲಿಗೆ ಎಪಿಫೈಟಿಕ್ ಆಗಿ ಜನ್ಮ ತಾಳುತ್ತದೆ.

ಎಪಿಫೈಟಿಕ್ ಅಂದರೆ ಬೇರೊಂದು ಮರದ ಮೇಲೆ ಬಿದ್ದ ಬೀಜ ಹುಟ್ಟಿ ಅಲ್ಲಿಂದ ತನ್ನ ಜೀವನ ಚಕ್ರ ಆರಂಭಿಸುತ್ತದೆ. ಇದು ನಮ್ಮ ದೇಶದ ರಾಷ್ಟ್ರೀಯ ವೃಕ್ಷವಾಗಿದೆ. ಅಶ್ವತ್ಥ ವೃಕ್ಷವೂ ಇದೇ ಜಾತಿಯದ್ದಾಗಿದೆ.

ಆಲದ ಮರ
ಆಲದ ಮರ

ಪರಿಚಯ

  • ಆಲದ ಮರ ಒಮ್ಮೆ ನೆಲದ ಮೇಲೆ ಬೇರು ಬಿಟ್ಟರೆ, ಅದು ನೂರಾರು ವರ್ಷಗಳ ಕಾಲ ಬೆಳೆದು ಬದುಕ ಬಲ್ಲದು. ಆಲದ ಮರ ಬೆಳೆದಂತೆ ಅನೇಕ ಬಿಳಲುಗಳನ್ನು ಹೊಂದಿ ವಿಸ್ತಾರವಾಗುತ್ತಾ, ಸುಮಾರು ಒಂದು ಎಕರೆಯಷ್ಟು ಸ್ಥಳವನ್ನು ಅದು ಆಕ್ರಮಿಸಿಕೊಂಡು ಬಿಡುತ್ತದೆ.
  • ಮನುಷ್ಯನ ಜೀವನಕ್ಕೂ ಆಲದ ಮರಕ್ಕೂ ಅವಿನಾಭಾವ ಸಂಬಂಧವಿದೆ. ಸಾಮಾನ್ಯವಾಗಿ ತಂದೆಯನ್ನು ಆಲದ ಮರಕ್ಕೆ ಹೋಲಿಸುವರು. ಏಕೆಂದರೆ ಇದು ಬಹುಪಯೋಗಿ ಮರ. ಹಾಗಾಗಿ ಮನುಷ್ಯರ ವಂಶಾವಳಿಯನ್ನು ಆಲದ ಮರಕ್ಕೆ ಹೋಲಿಸುತ್ತಾರೆ. 'ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಂಡಂತೆ' ಎಂಬ ನುಡಿಗಟ್ಟು ಪ್ರಚಲಿತದಲ್ಲಿದೆ.
  • ಇದು ಸು. 100' ಎತ್ತರ ಬೆಳೆದು ಒಳ್ಳೆ ಹರವಾಗಿ ಹಬ್ಬುತ್ತದೆ. ಮರದ ಟೊಂಗೆಗಳಿಂದ ಜೋತುಬಿದ್ದ ಬಿಳಲುಗಳು ಅಥವಾ ಜಡೆ ಬೇರುಗಳು ಟೊಂಗೆಗಳಿಗೆ ಕಂಬಗಳಂತೆ ಆಧಾರ ಕೊಟ್ಟು ಅದರ ಹಬ್ಬುವಿಕೆಗೆ ಸಹಾಯ ಮಾಡುತ್ತವೆ. ಈ ಮರಗಳನ್ನು ದಾರಿಯುದ್ದಕ್ಕೂ ನೆರಳಿಗಾಗಿ ಬಳಸುತ್ತಾರೆ.
  • ಇದರ ಎಲೆ ಆಡು, ಕುರಿ, ದನಕರುಗಳಿಗೆ ಒಳ್ಳೆಯ ಆಹಾರ. ಕಾಗದ ತಯಾರಿಕೆಗೆ ಬೇಕಾಗುವ ಪಲ್ಪನ್ನು ತಯಾರಿಸಲು ಇದರ ಕಟ್ಟಿಗೆಯನ್ನು ಬಳಸುವರು. ಈ ಮರ ಸೌದೆಗೆ ಉಪಯೋಗವಾಗುತ್ತದೆ. ಆಲದ ಮರದ ಹಾಲನ್ನು ಹಲ್ಲುನೋವಿನ ಶಮನಕ್ಕೂ ಗಂಟುಕಟ್ಟಿದ ಹುಣ್ಣುಗಳಿಗೆ, ಬೆಚ್ಚಾರದಂತೆ ಬಾವು ಬಂದ ಭಾಗಕ್ಕೆ ಲೇಪವಾಗಿಯೂ ಉಪಯೋಗಿಸುವುದುಂಟು.
  • ಚಿಗುರಿನ ಕಷಾಯವನ್ನು ಭೇದಿಗೆ ಔಷಧವಾಗಿ ಕೊಡುತ್ತಾರೆ. ಹಾಲನ್ನು ಸಂಧಿವಾತಕ್ಕೆ ಉಪಯೋಗಿಸುತ್ತಾರೆ. ಆಲದ ಹಣ್ಣು ಅಳಿಲುಗಳಿಗೆ ತುಂಬಾ ಪ್ರಿಯವಾದ ಆಹಾರ. ಆಲದ ಗಿಡವನ್ನು ಕುಬ್ಜವಾಗಿಸಿ (ಬೋನ್ಸಾಯ್) ಅಲಂಕಾರಿಕ ಗಿಡವಾಗಿಯೂ ಬಳಸುತ್ತಾರೆ.

Tags:

ಕುಟುಂಬದೇಶ

🔥 Trending searches on Wiki ಕನ್ನಡ:

ಮಾನವನ ನರವ್ಯೂಹಭಕ್ತಿ ಚಳುವಳಿಭಾರತದ ಚುನಾವಣಾ ಆಯೋಗಕನ್ನಡದ ಉಪಭಾಷೆಗಳುಬಾಬರ್ಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಮೂಲಭೂತ ಕರ್ತವ್ಯಗಳುಜಗತ್ತಿನ ಅತಿ ಎತ್ತರದ ಪರ್ವತಗಳುಸಮಾಜ1935ರ ಭಾರತ ಸರ್ಕಾರ ಕಾಯಿದೆದರ್ಶನ್ ತೂಗುದೀಪ್ಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಕೇಸರಿ (ಬಣ್ಣ)ಗಣೇಶ ಚತುರ್ಥಿಪ್ರಜಾಪ್ರಭುತ್ವರವೀಂದ್ರನಾಥ ಠಾಗೋರ್ಚಾಮುಂಡೇಶ್ವರಿ ದೇವಸ್ಥಾನ, ಮೈಸೂರುಟೈಗರ್ ಪ್ರಭಾಕರ್ಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಕವನಭಾವನಾ(ನಟಿ-ಭಾವನಾ ರಾಮಣ್ಣ)ಭಾರತದಲ್ಲಿ ತುರ್ತು ಪರಿಸ್ಥಿತಿಮಲೈ ಮಹದೇಶ್ವರ ಬೆಟ್ಟಕುವೆಂಪುರಾಷ್ಟ್ರೀಯ ಶಿಕ್ಷಣ ನೀತಿಭಾರತೀಯ ಮೂಲಭೂತ ಹಕ್ಕುಗಳುಚಿಕ್ಕಮಗಳೂರುದ.ರಾ.ಬೇಂದ್ರೆಭದ್ರಾವತಿವಾಣಿಜ್ಯ ಪತ್ರಬಸವಲಿಂಗ ಪಟ್ಟದೇವರುಒಡೆಯರ್ಭಾರತದ ವಿಜ್ಞಾನಿಗಳುಹನುಮ ಜಯಂತಿಹವಾಮಾನಕರ್ನಾಟಕದ ಜಿಲ್ಲೆಗಳುಒಡ್ಡರು / ಭೋವಿ ಜನಾಂಗಸಮಾಸಜಾಹೀರಾತುಶೃಂಗೇರಿಭೂಮಿಜನಪದ ಕಲೆಗಳುಬಾದಾಮಿ ಗುಹಾಲಯಗಳುಕರ್ನಾಟಕದ ವಾಸ್ತುಶಿಲ್ಪಲೋಪಸಂಧಿಕೃಷ್ಣರಾಜಸಾಗರಸಂಗೀತನೀನಾದೆ ನಾ (ಕನ್ನಡ ಧಾರಾವಾಹಿ)ಮೊಘಲ್ ಸಾಮ್ರಾಜ್ಯಭಾರತದ ಸ್ವಾತಂತ್ರ್ಯ ಚಳುವಳಿಮಣ್ಣುಜೋಗಿ (ಚಲನಚಿತ್ರ)ಕರ್ನಾಟಕತೆಲುಗುರಾಷ್ಟ್ರಕೂಟಅಂಬಿಗರ ಚೌಡಯ್ಯಮಣ್ಣಿನ ಸಂರಕ್ಷಣೆಮೂಲಧಾತುಗಳ ಪಟ್ಟಿಗಂಗ (ರಾಜಮನೆತನ)ಕೆ. ಎಸ್. ನಿಸಾರ್ ಅಹಮದ್ಭಾರತದ ನದಿಗಳುಯೋಗಕನ್ನಡ ಸಾಹಿತ್ಯಕನ್ನಡ ಚಂಪು ಸಾಹಿತ್ಯಭಾರತೀಯ ಸಂವಿಧಾನದ ತಿದ್ದುಪಡಿಸಾರಜನಕಕರ್ನಾಟಕ ಸ್ವಾತಂತ್ರ್ಯ ಚಳವಳಿಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಸೋಮನಾಥಪುರಉಪ್ಪಾರಪಾಲಕ್ಅಲಾವುದ್ದೀನ್ ಖಿಲ್ಜಿಭಾರತದ ಬಂದರುಗಳುಮೂಢನಂಬಿಕೆಗಳುಹರಪ್ಪಅರಿಸ್ಟಾಟಲ್‌🡆 More