ಕುಂತಲ ದೇಶ

ಕುಂತಲ ದೇಶವು  ಪುರಾತನ ಭಾರತೀಯ ರಾಜಕೀಯ ಪ್ರದೇಶ . ಇದು  ಬಹುಶಃ ಪಶ್ಚಿಮ ಡೆಕ್ಕನ್ ಮತ್ತು ದಕ್ಷಿಣ ಕರ್ನಾಟಕ ದ ಕೆಲವು ಭಾಗ (ಹಿಂದಿನ ಉತ್ತರ ಮೈಸೂರು ರಾಜ್ಯದ ಉತ್ತರ ಭಾಗ ) ಗಳನ್ನು  ಒಳಗೊಳ್ಳುತ್ತದೆ.

ಸುಮಾರು ಕ್ರಿ. ಪೂ. 600-450 ಅವಧಿಯ  ಕುಂತಲ ನಾಣ್ಯಗಳು ಲಭ್ಯ ಇವೆ .  ಕುಂತಲವು   ಕ್ರಿ.ಶ.  10-12 ನೇ ಶತಮಾನಗಳ ಹೊತ್ತಿಗೆ  ದಕ್ಷಿಣ ಭಾರತದ  ಮುಖ್ಯ ಭಾಗಗಳಲ್ಲಿ ಒಂದಾಗಿತ್ತು  (ಚೋಳ, ಚೇರ, ಪಾಂಡ್ಯ ಮತ್ತು ಆಂಧ್ರ ಇತರ ಭಾಗಗಳು ). ಪ್ರತಿ ಭಾಗವೂ  ತನ್ನದೇ ಆದ ಸಂಸ್ಕೃತಿ ಮತ್ತು ಆಡಳಿತವನ್ನು ಅಭಿವೃದ್ಧಿ ಪಡಿಸಿತು. ತಾಳಗುಂದ ಶಾಸನಗಳಲ್ಲಿ ಬಳ್ಳಿಗಾವಿ ಮತ್ತು ಹತ್ತಿರದ ಪ್ರದೇಶಗಳನ್ನು  ಕುಂತಲದ ಭಾಗಗಳೆಂದು ಉಲ್ಲೇಖಿಸಲಾಗಿದೆ.

ಧರ್ಮಗ್ರಂಥಗಳಲ್ಲಿ ಉಲ್ಲೇಖಗಳು

  • ದೇವಗಿರಿಯ ಯಾದವರ ತಾಮ್ರಪತ್ರಗಳು ನಾಗರನ್ನು ಕುಂತಲದ  ಅತ್ಯಂತ ಹಳೆಯ ರಾಜರು ಎಂದು ಉಲ್ಲೇಖಿಸುತ್ತವೆ.  ಕಲ್ಲುಬರಹಗಳು ಮತ್ತು ತಾಮ್ರಪಟಗಳು  ಸೂಚಿಸುವಂತೆ ರಾಷ್ಟ್ರಕೂಟರು, ಸಾತವಾಹನರು, ವಾಕಾಟಕರು, ಚಾಲುಕ್ಯರು , ಚುಟುಗಳು,ವಿಷ್ಣುಕುಂಡಿನರು ಕುಂತಲವನ್ನು ಆಳಿದ್ದಾರೆ. ಕುಂತಲವನ್ನು ರಟ್ಟಪಾಡಿ ಅಂದರೆ ರಟ್ಟರ ನಾಡು ಎಂದು  ಗುರುತಿಸಲಾಗಿದೆ.  ಇಮ್ಮಡಿ ಪುಲಿಕೇಶಿಯ ತಾಮ್ರಪಟಗಳು ಅವನನ್ನು ಮೂರು ಮಹಾರಾಷ್ಟ್ರಗಳ ರಾಜ ಎಂದು ಹೇಳುತ್ತವೆ (ಇತರ ಎರಡು ವಿದರ್ಭ , ಮತ್ತು ಕೊಂಕಣ ).
  • ಕಾಳಿದಾಸನು  ಕುಂತಲ ಮತ್ತು ಕುಂತಲದ ರಾಜರನ್ನು ತನ್ನ ಕೃತಿಗಳಲ್ಲಿ  ಉಲ್ಲೇಖಿಸಿದ್ದಾನೆ.

ಪೂರಕ ಮಾಹಿತಿ

  • ಕುಂತಲ

ಪ್ರಾಚೀನ ಕಾಲದಲ್ಲಿ ಪ್ರಖ್ಯಾತಿ ಪಡೆದಿದ್ದ ಒಂದು ಕರ್ಣಾಟಕದಲ್ಲಿದ್ದ ಜನಪದ ರಾಜ್ಯ. ಸಾತವಾಹನ ಮನೆತನದ ಒಬ್ಬ ರಾಜ ಕುಂತಲ ವಿಷಯದಲ್ಲಿ ಹುಟ್ಟಿದ್ದರಿಂದ ಇವನಿಗೆ ಕುಂತಲ ಶಾತಕರ್ಣಿ ಎಂಬ ಹೆಸರಿತ್ತೆಂದು ತಿಳಿದು ಬಂದಿದೆ. 4-5ನೆಯ ಶತಮಾನಗಳ ವಾಕಾಟಕದ ಶಾಸನಗಳಲ್ಲಿ ಕುಂತಳದ ಉಲ್ಲೇಖವಿದೆ. ಮಾನಾಂಕನೆಂಬ ರಾಷ್ಟ್ರಕೂಟ ಅರಸನು 5ನೆಯ ಶತಮಾನದಲ್ಲಿ ಕುಂತಳ ದೇಶವನ್ನು ಆಳುತಿದ್ದ. 6ನೆಯ ಶತಮಾನದ ವರಾಹಮಿಹಿರನ ಬೃಹತ್‍ಸಂಹಿತೆಯಲ್ಲಿಯೂ ಇದರ ಹೆಸರು ಉಕ್ತವಾಗಿದೆ. ಕುಂತಲವಿಷಯ ಕರ್ಣಾಟಧರಾ ಮಂಡಲದ ಮಧ್ಯದಲ್ಲಿತ್ತೆಂದು ಹಂಯ ಒಂದು ಶಾಸನ ಹೇಳುತ್ತದೆ. ಕನ್ನಡ ನಾಡಿನಲ್ಲಿ ದೊರೆತ 10ನೆಯ ಶತಮಾನದಿಂದೀಚಿನ ಶಾಸನಗಳಿಂದ ಶಿವಮೊಗ್ಗೆಯಿಂದ ಉತ್ತರಕ್ಕೆ Wಟz(ವಾಟಕದ) ಮೇಲಿನ ಕರ್ಣಾಟಕದ ಎಲ್ಲ ಜಿಲ್ಲಗಳೂ ಕುಂತಳ ದೇಶಕ್ಕೆ ಸೇರಿದ್ದುವೆಂದು ವ್ಯಕ್ತವಾಗುತ್ತದೆ. ಇದಕ್ಕೆ ಶಾಸನಗಳಲ್ಲಿ ಕುಂತಲ ಸಪ್ತಾರ್ಥಲಕ್ಷ (ಏಳೂವರೆ ಲಕ್ಷ ಗ್ರಾಮಗಳನ್ನೊಳಗೊಂಡ ದೇಶ) ಎಂಬ ಹೆಸರಿದೆ. ಚಾಳುಕ್ಯರು ಕಲ್ಯಾಣ ರಾಜಧಾನಿಯಿಂದ ಈ ದೇಶವನ್ನು ಅಳುತಿದ್ದರು. ಮೇಲೆ ಹೇಳಿರುವ ರಾಷ್ಟ್ರಕೂಟ ಮಾನಾಂಕನ ರಾಜಧಾನಿಯಾಗಿದ್ದ ಮಾನಪುರ ಈಗಿನ ಸಾತಾರಾ ಜಿಲ್ಲೆಯಲ್ಲಿರುವ ಮಾಣ್ ಎಂಬುದು. ಅದ್ದರಿಂದ ಸಾತಾರಾ ಜಿಲ್ಲೆಯವರೆಗಾದರೂ ಕುಂತಳ ದೇಶ ವ್ಯಾಪಿಸಿತ್ತೆಂಬುದು ಸ್ಪಷ್ಟ. ಅಶ್ಮPಕ್ ಮತ್ತು ದರ್ಭದ ರಾಜರುಗಳನ್ನು ಸೋಲಿಸಿದುದಾಗಿ ಮಾನಾಂಕ ಹೇಳಿಕೊಂಡಿರುವುದರಿಂದಲೂ ದರ್ಭದ ಒಡೆಯರಾಗಿದ್ದ ವಾಕಾಟಕರು ಕುಂತಳ ರಾಜರನ್ನು ಜೈಸಿರುವುದಾಗಿ ಕೇಳಿಕೊಂಡಿರುವುದರಿಂದಲೂ ಕೂಂತಲ ರಾಜ ಅಶ್ಮದ (ಈಗಿನ ಅಹಮದ್ ನಗರ ಮತ್ತು ಬೀದರ ಜಿಲ್ಲೆಗಳು) ಮತ್ತು ದರ್ಭಗಳಿಗೆ ನೆರೆ ರಾಜ್ಯವಾಗಿದ್ದಿರಬೇಕು. ಸೊಡ್ಡಲ ದೇವನೆಂಬ ಸಂಸ್ಕøತಕವಿ ತನ್ನ 'ಉದಯ ಸುಂದರಿ'ಯಲ್ಲಿ ಗೋದಾವರಿ ತಿರದ ಪ್ರತಿಷ್ಠಾನ (ಈಗಿನ ಔರಂಗಾಬಾದ್ ಜಿಲ್ಲೆಯ ಪ್ಶೆಠಣ) ಕುಂತಲದ ರಾಜಧಾನಿಯಾಗಿತ್ತೆಂದು ಹೇಳಿದ್ದಾನೆ.(ಎನ್.ಎಲ್.ಆರ್.)

ಆಧಾರಗಳು

Tags:

ಆಂಧ್ರ ಪ್ರದೇಶಕರ್ನಾಟಕಚೋಳ ವಂಶತಾಳಗುಂದ ಶಾಸನದಖ್ಖನ್ ಪೀಠಭೂಮಿಪಾಂಡ್ಯ ರಾಜವಂಶಮೈಸೂರು ರಾಜ್ಯ

🔥 Trending searches on Wiki ಕನ್ನಡ:

ಪಿ.ಲಂಕೇಶ್ಭಾರತೀಯ ಜ್ಞಾನಪೀಠಕರ್ನಾಟಕದ ನದಿಗಳುಮಂಡಲ ಹಾವುನಾಗೇಶ ಹೆಗಡೆಶಬ್ದಮಣಿದರ್ಪಣದೀಪಾವಳಿಕನ್ನಡ ಸಾಹಿತ್ಯ ಪ್ರಕಾರಗಳುನಾಗವರ್ಮ-೧ಯುಗಾದಿವಿಜಯಪುರಖೊಖೊಶಿರ್ಡಿ ಸಾಯಿ ಬಾಬಾಗುಪ್ತ ಸಾಮ್ರಾಜ್ಯರಾಘವಾಂಕವಿಶ್ವ ಕನ್ನಡ ಸಮ್ಮೇಳನಪ್ಯಾರಿಸ್ಪಾಂಡವರುಅಸಹಕಾರ ಚಳುವಳಿಗೋಲ ಗುಮ್ಮಟತತ್ಸಮಅಂಬರ್ ಕೋಟೆಭತ್ತಸ್ತ್ರೀಮಹಾತ್ಮ ಗಾಂಧಿಕರ್ನಾಟಕದ ಮಹಾನಗರಪಾಲಿಕೆಗಳುಭಾರತದ ಮುಖ್ಯಮಂತ್ರಿಗಳುಅಕ್ಷಾಂಶ ಮತ್ತು ರೇಖಾಂಶಶ್ರವಣ ಕುಮಾರಪು. ತಿ. ನರಸಿಂಹಾಚಾರ್ಪಲ್ಸ್ ಪೋಲಿಯೋಭಾರತದ ಸಂಯುಕ್ತ ಪದ್ಧತಿಚಿಕ್ಕಮಗಳೂರುದಲಿತರೆವರೆಂಡ್ ಎಫ್ ಕಿಟ್ಟೆಲ್ಮಫ್ತಿ (ಚಲನಚಿತ್ರ)ಕಂಪ್ಯೂಟರ್ರಾಹುಲ್ ಗಾಂಧಿಬ್ಯಾಸ್ಕೆಟ್‌ಬಾಲ್‌ರಾಷ್ಟ್ರಕವಿಜಾನಪದನರಿಭಾರತದಲ್ಲಿ ಬ್ರಿಟಿಷ್ ಆಳ್ವಿಕೆರೋಮನ್ ಸಾಮ್ರಾಜ್ಯವೈದೇಹಿಬಾದಾಮಿ ಶಾಸನಅಸ್ಪೃಶ್ಯತೆಅವರ್ಗೀಯ ವ್ಯಂಜನವಿಕಿಪೀಡಿಯರಾಜ್ಯಸಭೆಸಿದ್ಧಯ್ಯ ಪುರಾಣಿಕವಿದ್ಯುತ್ ಮಂಡಲಗಳುಇಂಡಿ ವಿಧಾನಸಭಾ ಕ್ಷೇತ್ರ1935ರ ಭಾರತ ಸರ್ಕಾರ ಕಾಯಿದೆಕದಂಬ ರಾಜವಂಶನಾಗಚಂದ್ರಆದಿ ಶಂಕರಚೀನಾದ ಇತಿಹಾಸಕೃಷ್ಣರಾಜಸಾಗರಗುರುರಾಜ ಕರಜಗಿಕನ್ನಡ ರಂಗಭೂಮಿಊಳಿಗಮಾನ ಪದ್ಧತಿಭಾರತೀಯ ಸಶಸ್ತ್ರ ಪಡೆಕೆಂಗಲ್ ಹನುಮಂತಯ್ಯಬಾರ್ಲಿಕುಂದಾಪುರಗಣೇಶ್ (ನಟ)ನೀರಿನ ಸಂರಕ್ಷಣೆಸಂಖ್ಯಾಶಾಸ್ತ್ರಪೂರ್ಣಚಂದ್ರ ತೇಜಸ್ವಿಯುರೋಪ್ಲಾಲ್‌ಬಾಗ್, ಕೆಂಪು ತೋಟ, ಬೆಂಗಳೂರುಟಿ. ವಿ. ವೆಂಕಟಾಚಲ ಶಾಸ್ತ್ರೀಶಾಮನೂರು ಶಿವಶಂಕರಪ್ಪಹುಯಿಲಗೋಳ ನಾರಾಯಣರಾಯಅಲಂಕಾರಛಂದಸ್ಸುವಾಣಿಜ್ಯ(ವ್ಯಾಪಾರ)🡆 More