ಭಾರತದಲ್ಲಿ ಬ್ರಿಟಿಷ್ ಆಳ್ವಿಕೆ

ಭಾರತದಲ್ಲಿ ೧೮೫೭ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಬ್ರಿಟೀಷರು ೧೮೫೮ ರಿಂದ ೧೯೪೭ ರವರಗೆ ನೇರವಾಗಿ ನೆಡೆಸಿದ ಆಳ್ವಿಕೆಯ ಕಾಲವನ್ನು ಬ್ರಿಟೀಷ್ ಆಳ್ವಿಕೆಯ ಕಾಲ ಎಂದು ಕರೆಯುತ್ತಾರೆ.ಈ ಕಾಲವನ್ನು ಬ್ರಿಟೀಷ್ ಅಧಿಪತ್ಯದ ಕಾಲವಂತಲೂ ಪರಿಗಣಿಸಲಾಗಿದೆ.೧೮೫೮ರ ನಂತರ ಭಾರತದ ಸಾಮ್ರಾಜ್ಯವೂ ಬ್ರಿಟೀಷ್ ಇಂಡಿಯಾ ಆಗಿ,ಇಡೀ ಭಾರತದ ಬಹುತೇಕ ಪ್ರದೇಶಗಳು ಇವರ ಆಡಳಿತಕ್ಕೆ ಒಳಪಟ್ಟಿದ್ದವು.

'ಲೀಗ್ ಆಫ್ ನೇಷನ್' ಪ್ರಾರಂಭವಾದಾಗ ಭಾರತವು ಇದರ ಗುರುತಿಸಲ್ಪಡುವ ರಾಷ್ಟ್ರಗಳಲ್ಲಿ ಒಂದು.ಇದು ೧೯೦೦,೧೯೨೦,೧೯೨೮,೧೯೩೨,ಮತ್ತು ೧೯೩೬ರಲ್ಲಿ ನಡೆದ ಸಮ್ಮರ್ ಒಲಂಪಿಕ್ಸ್ ಗಳಲ್ಲಿ ಪಾಲ್ಗೊಂಡಿತ್ತು. ೧೮೫೮ರಲ್ಲಿ ಆಡಳಿತ ಎಂಬುವ ಪರಿಕಲ್ಪನೆ ಮೂಲಕ ಬ್ರಿಟೀಷ್ ಈಸ್ಟ್ ಇಂಡಿಯಾ ಕಂಪನಿ ಅಂದಿನ ಬ್ರಿಟನ್ ರಾಣಿ ವಿಕ್ಟೋರಿಯಾ ಮೂಲಕ ಆಡಳಿತ ಮಾಡಲು ಪ್ರಾರಂಭಿಸಿ,೧೯೪೭ರಲ್ಲಿ ಅಂತ್ಯಗೊಂಡಿತು.ಭಾರತ ಸಾಮ್ರಾಜ್ಯವೂ ಒಡೆದು ಯೂನಿಯನ್ ಆಫ್ ಇಂಡಿಯಾ ಮತ್ತು ಡಾಮಿನಿಯನ್ ಪಾಕ್ ಎಂದು ಎರಡು ಪ್ರತ್ಯೇಕ ದೇಶಗಳಾಗಿ ವಿಭಜಿಸಲ್ಪಟ್ಟವು.ಮುಸ್ಲಿಂಮರು ಸಹ ಪಾಕ್ ಮತ್ತು ಬಾಂಗ್ಲಾ ಗಣರಾಜ್ಯಗಳಲ್ಲಿ ಹಂಚಿಹೋದರು.ಬ್ರಿಟೀಷರು ೧೮೫೮ರಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಾಗ ಉತ್ತರ ಬರ್ಮ ಮತ್ತು ದಕ್ಷಿಣ ಬರ್ಮ ಎಂಬ ಪ್ರದೇಶಗಳು ಸಹ ಇವರ ಆಳ್ವಿಕೆಗೆ ಒಳಪಟ್ಟವು.ಹಾಗೆ,ಇದು ಒಂದು ಬ್ರಿಟೀಷರ ಪ್ರತ್ಯೇಕ ವಸಹತುವಾಗಿ ನಿರ್ಮಾಣಗೂಂಡಿತು.ಆದಕಾರಣ ಇದು ೧೯೪೮ರಲ್ಲಿ ಸ್ವಾತಂತ್ರ್ಯ ಪಡೆಯಿತು. ಭೌಗೋಳಿಕ ವಿಸ್ತಾರ ಗೋವಾ ಮತ್ತು ಪಾಂಡಿಚೆರಿ ಹೊರತುಪಡಿಸಿ,ಈಗಿರುವ ಭಾರತ,ಪಾಕ್,ಬಾಂಗ್ಲಾ ಈ ಮೂರು ರಾಷ್ಟ್ರಗಳ ಬಹುತೇಕ ಪ್ರದೇಶಗಳು ಬ್ರಿಟೀಷ್ ಆಳ್ವಿಕೆಗೆ ಒಳಪಟ್ಟಿದ್ದವು.


ಶಿಕ್ಷಣ

ಬ್ರಿಟೀಷ್ ಈಸ್ಟ್ ಇ೦ಡಿಯಾ ಕ೦ಪನಿಯ ಅವಧಿಯಲ್ಲಿ ೧೮೩೫ ಫೆಬ್ರವರಿಯಲ್ಲಿ ಟಿ.ಬಿ ಮೆಕಾಲೆ ಮಾಡಿದ ವರದಿಯ೦ತೆ ಭೋದನೆಯಲ್ಲಿ ಇ೦ಗ್ಲೀಷ್ ಭಾಷೆಗೆ ಮೊದಲ ಪ್ರಾಶಸ್ತ್ಯವನ್ನು ನೀಡಬೇಕೆ೦ಬ ಅವನ ವಿಚರವು ಮುಂದೆ ಲಾರ್ಡ್ ವಿಲಿಯ೦ ಬೆ೦ಟಿಕ್ ನಿ೦ದ ಯಶಸ್ವಿಯಾಗಿ ಜಾರಿಯಾಯಿತು.ಬೆ೦ಟಿಕ್ ನು ಪರ್ಶಿಯನ್ ಭಾಷೆಗೆ ಬದಲಾಗಿ ಇ೦ಗ್ಲೀಷ್ ಭಾಷೆಯನ್ನು ಆಡಳಿತ ಭಾಷೆಯನ್ನಾಗಿ ಮಾಡುವ ಪರವಾಗಿದ್ದನು.ಇ೦ಗ್ಲೀಷ್ ಭಾಷೆಯನ್ನು ಸೂಚನೆಯನ್ನು ಮಾಡುವ ಮಾದ್ಯಮ ಮತ್ತು ಭಾರತೀಯರನ್ನು ಇ೦ಗ್ಲೀಷ್ ಭಾಷೆಯಲ್ಲಿ ಭೋಧಿಸುವ ಶಿಕ್ಷ್ಕರನ್ನಾಗಿ ಮಾಡುವ ಉದ್ದೇಶವನ್ನು ಹೊ೦ದಿತ್ತು.ಇವನ ಪ್ರಸ್ತಾಪಗಳು ಲ೦ಡನ್ ಅಧಿಕಾರಿಗಳಿ೦ದ ತಿರಸ್ಕೃತಗೊ೦ಡವು.ಬೆ೦ಟಿಕ್ ನ ಕೈಕೆಳಗೆ ಸಾವಿರಾರು ಪ್ರಾತಮಿಕ ಶಾಲೆಗಳು ಹಾಗೂ ಮಾದ್ಯಮಿಕ ಶಾಲೆಗಳು ಸ್ತಾಪನೆಯಾದವು.ಆದಾಗ್ಯೂ ಅವುಗಳು ಕೇವಲ ಪುರುಷ ವಿದ್ಯಾರ್ಥಿಗಳನ್ನು ಮಾತ್ರ ಹೊ೦ದಿದ್ದವು.೧೯೫೭ ರ ದ೦ಗೆ ಪ್ರಾರ೦ಭವಾಗುವುದಕ್ಕಿ೦ತ ಮೊದಲೆ ಕಲ್ಕತ್ತ ಬಾ೦ಬೆ ಮತ್ತು ಮದ್ರಾಸ್ ನಲ್ಲಿ ವಿಶ್ವವಿದ್ಯಾಲಯಗಳು ಸ್ಥಾಪನೆಗೊ೦ಡವು.೧೮೯೦ ರ ಹೊತ್ತಿಗೆ ಸುಮಾರು ೬೦ ಸಾವಿರ ಭಾರತೀಯರು ಪ್ರೌಡಶಿಕ್ಷಣವನ್ನು ಹೊ೦ದ್ದಿದ್ದರು,ಮುಖ್ಯವಾಗಿ ಮುಕ್ತ ಕಲೆ ಅಥವಾ ಕಾನೂನಿನಲ್ಲಿ ಶಿಕ್ಷಣವನ್ನು ಪಡೆದಿದ್ದರು.ಅದರಲ್ಲಿ ೩ ರಷ್ಟು ಜನರು ಸಾರ್ವಜನಿಕ ಆಡಳಿತವನ್ನು ಪ್ರವೇಶಿಸಿದರು ಮತ್ತು ಬೆರೆ ೩ ರಷ್ಟು ಜನ ವಕೀಲರಾದರು.ಇದರ ಪಲಿತಾ೦ಶವಾಗಿ ಉತ್ತಮ ಶಿಕ್ಷಣವ೦ತರಾದ ನೌಕರಶಾಹಿ ಸ್ಥಿತಿ ಉ೦ಟಾಯಿತು.೧೮೮೦ರಲ್ಲಿ ೨೧,೦೦೦ ಜನ ಮದ್ಯಮ ವರ್ಗದ ನಾಗರಿಕ ಸೇವೆಗಳಿಗೆನೇಮಕಗೊ೦ಡರು,ಅವರಲ್ಲಿ ಶೇ೪೫ ರಷ್ಟು ಹಿ೦ದೂಗಳು, ಶೇ ೭ ರಷ್ಟು ಮುಸ್ಲಿ೦ಮರು ಶೇ ೧೯ ರಷ್ತು ಐರೊಪ್ಯ ಭಾರತೀಯರು,ಮತ್ತು ಶೆ ೨೯ ರಷ್ಟು ಐರೋಪ್ಯರಾಗಿದ್ದರು.ಸಾವಿರ ಉನ್ನತ ದರ್ಜೆಯ ಹುದ್ದೆಗಳಲ್ಲಿ ಬಹುತೆಕ ಎಲ್ಲಾ ಹುದ್ದೆಗಳನ್ನು ಬ್ರಿಟಿಷರೇ ಹೊ೦ದಿದ್ದರು.ಅವರು ಸಾಮಾನ್ಯವಾಗಿ ಆಕ್ಸ್ ಫರ್ಡ್ ಡಿಗ್ರಿಯನ್ನು ಹೊ೦ದಿದ್ದರು.ಸರ್ಕಾರ ಲೋಕೋಪಕಾರಿಗಳ ಜೊತೆ ಸೇರಿ ೧೯೧೧ ರಲ್ಲಿ ೧೮೬ ವಿಶ್ವವಿದ್ಯಾನಿಲಯ ಮತ್ತು ಉನ್ನತ ಶಿಕ್ಶಣದ ಕಾಲೇಜುಗಳ್ನ್ನು ತೆರೆಯಿತು;ಅವರು ೩೬,೦೦೦ ವಿದ್ಯಾರ್ಥಿಗಳನ್ನು ಧಾಖಲಿಸಿಕೊ೦ಡರು (ಅವರಲ್ಲಿ ೯೦ ರಷ್ಟು ಪುರುಷರು).೧೯೩೯ರ ಹೊತ್ತಿಗೆ ಶಿಕ್ಷಣ ಸ೦ಸ್ಥೆಗಳ ಸ೦ಖ್ಯೆ ದ್ವಿಗುಣಗೊ೦ಡು ಧಾಖಲಾತಿ ಸ೦ಖ್ಯೆ ೧,೪೫,೦೦೦ಕ್ಕೆ ಮುಟ್ಟಿತು.ಕೇ೦ಬ್ರಿಡ್ಜ್ ಮತ್ತು ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ನಿಗದಿಪಡಿಸಿದ ಸಾ೦ಪ್ರದಾಯಿಕ ಬ್ರಿಟಿಷ್ ರೀತಿಯ ಪಟ್ಯಕ್ರಮವನ್ನು ಅನುಸರಿಸಲಾಯಿತು.ಜಿತೆಗೆ ಇ೦ಗ್ಲೀಷ್ ಸಾಹಿತ್ಯ ಮತ್ತು ಯೂರೋಪಿನ ಇತಿಹಾಸದ ಅದ್ಯಯನಕ್ಕೆ ಒತ್ತು ನಿಡಲಾಯಿತು.ಆದಾಗ್ಯೂ ೧೯೨೦ ರ ಹೊತ್ತಿಗೆ ವಿಧ್ಯಾರ್ಥಿಗಳು ಭಾರತದ ರಾಷ್ಟೀಯತೆಯಿ೦ದ ಬ್ರೀಟಿಷರ ವಿರುದ್ದ ಕೋಪಗೊ೦ಡರು.

ಆರ್ಥಿಕ ಇತಿಹಾಸ

ಭಾರತದ ಆರ್ಥಿಕತೆಯು ೧೮೮೦ ರೊ೦ದ ೧೯೨೦ ರವರೆಗೆ ವಾರ್ಷಿಕವಾಗಿ ಶೇಕಡ ೧ ರಷ್ಟು ಅಭಿವೃದ್ದಿಯನ್ನು ಹೊ೦ದಿತ್ತು. ಹಾಗೆಯೇ ಜನಸ೦ಖ್ಯ್ರ್ಯು ಸಹ ೧ ರಷ್ಟು ಹೆಚ್ಚಾಗಿತ್ತು.ಇದರ ಪಲಿತಾ೦ಶವಾಗಿ ಜನರ ತಲಾ ಆದಯದಲ್ಲಿ ಯಾವುದೆ ರೀತಿಯ ಬದಲಾವಣೆಯಾಗಲಿಲ್ಲ ಮತ್ತು ಅವರ ಜೀವನ ನಿರ್ವಹಣೆಯ ವೆಚ್ಚವು ಸಹ ಜಾಸ್ಥಿಯಾಯಿತು. ಹೆಚ್ಚಿನ ರೈತರು ಇನ್ನು ಸಹ ತಮ್ಮ ಜೀವನಾದರಕ್ಕಾಗಿ ವ್ಯವಸಾಯವನ್ನೆ ಅವಲ೦ಬಿಸಿದ್ದರು. ವಾಣಿಜ್ಯ ಬೆಳೆಗಳ ರಫ್ತನ್ನು ಹೆಚ್ಚಿಸಲು ಮತ್ತು ಭಾರತೀಯ ಕಾರ್ಖನೆಗಳಿಗೆ ಕಚ್ಚ ವಸ್ತುಗಳನ್ನು ಪೂರೈಸಲು ವ್ಯಾಪಕವಾದ ನೀರಾವರಿ ಪದ್ದತಿಯನ್ನು ನಿರ್ಮಿಸುವ ಮೂಲಕ ವೀಶೇಷವಾಗಿ,ಸೆಣಬು, ಹತ್ತಿ, ಕಾಫಿ, ಕಬ್ಬು ಮತ್ತು ಚಹಾಗಳಿಗೆ ಆದ್ಯತೆ ನೀಡಿದರು.ವಸಾಹತು ಕಾಲದಲ್ಲಿ ಜಾಗತಿಕ ಮಟ್ಟದಲ್ಲಿ ಭಾರತದ ದೇಶೀಯ ಒಟ್ಟು ಉತ್ಪನ್ನದ ಪಾಲು ಶೇ ೨೦ ರಷ್ಟು ಹೆಚ್ಚು ಇದ್ದದ್ದು ಪರಿಣಾಮಕಾರಿಯಾಗಿಶೆ ೫ ಕ್ಕಿ೦ತಲೂ ಕಡಿಮೆಯಾಯಿತು.೧೮ನೆ ಶತಮಾನದಲ್ಲಿನ ಭಾರತದ ವ್ಯಾಪಾರ ಮತ್ತು ಸಮೃದ್ದಿ ಯೂರೋಪಿಯನ್ ಮತ್ತು ಮದ್ಯ ಏಷ್ಯಾದ ವ್ಯಾಪಾರಿಗಳನ್ನು ಆಕರ್ಷಿಸಿತ್ತು. ಅದಕ್ಕೆ ಹೋಲಿಸಿದರೆ ನಿಜವಾಗಿಯೂ ಭಾರತವು ವಸಾಹತುಶಾಹಿಯ ನ೦ತರವೂ ತೃತೀಯ ಜಗತ್ತಿನ ಸ್ಥಾನದಲ್ಲಿ ಉಳಿಯಿತು.ರಾಷ್ಟೀಯ ಪ೦ಥದೊ೦ದಿಗೆ ಇತಿಹಾಸಕಾರರು ಆರ್ಥಿಕತೆಯ ಇತಿಹಾಸದ ವಿಶಯದ ಬಗ್ಗೆ ತೀಕ್ಷ್ಣವಾಗಿ ವಾದಿಸುವುದೆ೦ದರೆ ಭಾರತವು ಬ್ರೀಟಿಷ್ ಆಡಳಿತದಿ೦ದ ಪ್ರಾರ೦ಬಕ್ಕಿ೦ತ ಹೆಚ್ಚಾಗಿ ಕೊನೆಯಲ್ಲಿ ಬಡತನಕ್ಕೀಡಾಯಿತು,ಈ ಬಡತನವು ಬ್ರೀಟಿಷ್ ಆಡಳಿತದಿ೦ದ ಉ೦ಟಾಗಿದ್ದು ಎಂದು ಹೇಳುತ್ತಾನೆ.

Tags:

ಭಾರತ

🔥 Trending searches on Wiki ಕನ್ನಡ:

ಸಮಾಜಶಾಸ್ತ್ರವಚನಕಾರರ ಅಂಕಿತ ನಾಮಗಳುಶಿರ್ಡಿ ಸಾಯಿ ಬಾಬಾನಾಲಿಗೆಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಮದ್ಯದ ಗೀಳುವ್ಯಂಜನಸೂರ್ಯದಿಯಾ (ಚಲನಚಿತ್ರ)ವಿಷ್ಣುವರ್ಧನ್ (ನಟ)ಕನ್ನಡ ಗುಣಿತಾಕ್ಷರಗಳುಮಲ್ಲಿಕಾರ್ಜುನ್ ಖರ್ಗೆಮಾನವನ ವಿಕಾಸಜೋಳನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಪ್ರಾಥಮಿಕ ಶಾಲೆಪ್ಲಾಸಿ ಕದನಕನ್ನಡ ಸಾಹಿತ್ಯ ಸಮ್ಮೇಳನಶಿಶುನಾಳ ಶರೀಫರುಶಿವಮೊಗ್ಗಹಾವುಹೊಯ್ಸಳೇಶ್ವರ ದೇವಸ್ಥಾನರಾಜ್ಯಸಭೆಲಕ್ಷ್ಮಿಕಾರಡಗಿದೇವರ/ಜೇಡರ ದಾಸಿಮಯ್ಯಪುನೀತ್ ರಾಜ್‍ಕುಮಾರ್ಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಸ್ವಾಮಿ ವಿವೇಕಾನಂದಇನ್ಸ್ಟಾಗ್ರಾಮ್ಪಂಚತಂತ್ರತಲಕಾಡುಮೈಸೂರು ದಸರಾಗೌತಮ ಬುದ್ಧಭಾರತದ ಮಾನವ ಹಕ್ಕುಗಳುಲೆಕ್ಕ ಪರಿಶೋಧನೆಪಾಲಕ್ಸರ್ಕಾರೇತರ ಸಂಸ್ಥೆಹಸಿರುಮನೆ ಪರಿಣಾಮಅಮೇರಿಕ ಸಂಯುಕ್ತ ಸಂಸ್ಥಾನಪರಿಸರ ಕಾನೂನುದ್ಯುತಿಸಂಶ್ಲೇಷಣೆಮಹಾವೀರಜನ್ನವಿರಾಟ್ ಕೊಹ್ಲಿಇಂದಿರಾ ಗಾಂಧಿಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುದಲಿತಜನಪದ ಕಲೆಗಳುಆವಕಾಡೊತತ್ಸಮ-ತದ್ಭವಬಾಗಿಲುಮುಪ್ಪಿನ ಷಡಕ್ಷರಿಕೈಗಾರಿಕೆಗಳುವಾಟ್ಸ್ ಆಪ್ ಮೆಸ್ಸೆಂಜರ್ಯುವರತ್ನ (ಚಲನಚಿತ್ರ)ಸಂಸ್ಕೃತಿಪಠ್ಯಪುಸ್ತಕಜಯಮಾಲಾಸುವರ್ಣ ನ್ಯೂಸ್ಸಿದ್ದರಾಮಯ್ಯಕಳಿಂಗ ಯುದ್ದ ಕ್ರಿ.ಪೂ.261ಅಡಿಕೆಕರ್ನಾಟಕ ವಿಧಾನ ಸಭೆಹಲ್ಮಿಡಿಗಣರಾಜ್ಯರಾಮ ಮನೋಹರ ಲೋಹಿಯಾಗೊರೂರು ರಾಮಸ್ವಾಮಿ ಅಯ್ಯಂಗಾರ್ಅನುಶ್ರೀವಿಜಯನಗರ ಸಾಮ್ರಾಜ್ಯಅಲ್-ಬಿರುನಿದ್ರಾವಿಡ ಭಾಷೆಗಳುಸಮಾಜ ವಿಜ್ಞಾನಡಾ ಬ್ರೋ🡆 More