ಮಂಡಲ ಹಾವು

ಮಂಡಲದ ಹಾವು ವೈಪರಿಡೀ ಕುಟುಂಬದ ವೈಪರಿನೀ ಉಪಕುಟುಂಬಕ್ಕೆ ಸೇರಿದ ವಿಷಪೂರಿತ ಹಾವು (ರಸೆಲ್ಸ್ ವೈಪರ್ - Russell's Viper).

ಮಂಡಲದ ಹಾವು
ದಬೋಯ ರಸೆಲಿಯೈ
ಮಂಡಲ ಹಾವು
ಪುಣೆ ಭಾರತದಲ್ಲಿ ಒಂದು ಮಂಡಲದ ಹಾವು.
Scientific classification
ಸಾಮ್ರಾಜ್ಯ:
ಅನಿಮೇಲಿಯಾ
ವಿಭಾಗ:
ಉಪವಿಭಾಗ:
ವರ್ಗ:
ಗಣ:
ಸ್ಕ್ವಾಮೇಟಾ
ಉಪಗಣ:
ಕುಟುಂಬ:
ವೈಪರಿಡೇ
ಉಪಕುಟುಂಬ:
ವೈಪರಿನೇ
ಕುಲ:
ದಬೋಯ

Gray, 1842
ಪ್ರಜಾತಿ:
ದ. ರಸೆಲಿಯೈ
Binomial name
ದಬೋಯ ರಸೆಲಿಯೈ
(Shaw & Nodder, 1797)
Synonyms
    Genus synonymy
  • Daboia Gray, 1842
  • Chersophis Fitzinger, 1843
  • Daboya Hattori, 1913
    Species synonymy
  • Coluber russelii Shaw & Nodder, 1797
  • Coluber daboie
    Latreille In Sonnini & Latreille, 1801
  • Coluber trinoculus
    Schneider In Bechstein, 1802
  • Vipera daboya Daudin, 1803
  • Vipera elegans Daudin, 1803
  • Coluber triseriatus Hermann, 1804
  • Vipera russelii — Gray, 1831
  • Daboia elegans — Gray, 1842
  • Daboia russelii — Gray, 1842
  • Daboia pulchella Gray, 1842
  • Echidna russellii Steindachner, 1869

ದಬೋಯ ರಸೆಲಿಯೈ (Daboia Russelii) ಇದರ ವೈಜ್ಞಾನಿಕ ಹೆಸರು. ಭಾರತದ ನಾಲ್ಕು ಅತ್ಯಂತ ವಿಷಯುಕ್ತ ಹಾವುಗಳ ಪೈಕಿ ಇದು ಒಂದು.

ದೇಹರಚನೆ

ಸಾಧಾರಣವಾಗಿ 1.5 ಮೀ ಉದ್ದಕ್ಕೆ ಬೆಳೆಯುತ್ತದೆ. ದೇಹ ಸ್ಥೂಲವಾದದ್ದು. ತಲೆ ಮುಮ್ಮೂಲೆಯಾಕಾರದ್ದು. ಮೂತಿ ಚೂಪು. ಮೂಗಿನ ಹೊಳ್ಳೆಗಳು ಪ್ರಧಾನವಾಗಿದೆ. ಕಣ್ಣುಗಳ ಸುತ್ತ ಬಿಳಿ ಅಂಚು ಉಂಟು. ತಲೆಯ ಮೇಲೆ ಶಲ್ಕಗಳ ಬದಲು ಫಲಕಗಳಿವೆ. ಮೈಬಣ್ಣ ಕಂದು ಇಲ್ಲವೆ ಹಳದಿ. ಉದರಭಾಗ ಬಿಳಿ. ಆಗ್ನೇಯ ಮತ್ತು ಈಶಾನ್ಯ ಭಾಗದ ಪ್ರದೇಶಗಳಲ್ಲಿರುವ ಬಗೆಗಳಲ್ಲಿ ಉದರದ ಮೇಲೆ ಚುಕ್ಕೆಗಳುಂಟು. ತಲೆಯಿಂದ ಬಾಲದವರೆಗೆ ಬೆನ್ನು ಹಾಗೂ ಪಾರ್ಶ್ವಗಳ ಮೇಲೆ ಮೂರು ಸಾಲುಗಳಲ್ಲಿ ವೃತ್ತಾಕಾರದ ಗುರುತುಗಳಿವೆ. ಬೆನ್ನುಹುರಿ ಗುಂಟ ಇರುವ ಗುರುತುಗಳು ಕ್ರಮಬದ್ಧವಾಗಿ ಜೋಡಣೆಗೊಂಡಿವೆ.

ಆವಾಸಸ್ಥಾನ

ಇದರ ವಾಸಸ್ಥಾನ ದಕ್ಷಿಣ ಏಷ್ಯಾ. ಇದು ಭಾರತಾದ್ಯಂತ 3000 ಮೀ ಎತ್ತರ ಮೀರದ ಎಲ್ಲ ಪ್ರದೇಶಗಳಲ್ಲೂ ವಾಸಿಸುತ್ತವೆ. ಸಾಮಾನ್ಯವಾಗಿ ಹಗಲಿನಲ್ಲಿ, ಉಷ್ಣತೆ ಹೆಚ್ಚಾಗಿರುವ ವೇಳೆಯಲ್ಲಿ ಕಲ್ಲುಪೊಟರೆ ತರಗೆಲೆಗಳ ಅಡಿ, ಮುಳ್ಳುಪೊದರು, ಕತ್ತಾಳೆ ಮೆಳೆ ಮುಂತಾದ ತಾಣಗಳಲ್ಲಿ ಅಡಗಿರುತ್ತದೆ. ಕೇದಗೆ, ಕತ್ತಾಳೆ ಪೊದೆಗಳು, ಬಿದಿರು ಮೆಳೆಗಳು ಇದರ ಮೆಚ್ಚಿನ ತಾಣಗಳು.

ಸ್ವಭಾವ

ನೋಟಕ್ಕೆ ಇದು ತುಂಬ ಆಲಸಿಯಾಗಿ ಕಾಣುತ್ತದೆ. ಆದರೆ ರೇಗಿದಾಗ ಇಲ್ಲವೇ ಉದ್ರೇಕಗೊಂಡಾಗ ಛಂಗನೆ ನೆಗೆಯಬಲ್ಲದು. ಆಗ ತಲೆ ಎತ್ತಿ, ನಾಲಗೆ ಹೊರಚಾಚಿ ಅಲುಗಿಸಿ, ಒಂದೇ ಸಮನೆ ಜೋರಾಗಿ ಭುಸುಗುಡುತ್ತ ಕಚ್ಚಲು ನುಗ್ಗುತ್ತದೆ. ಸ್ವಭಾವತಃ ಇದು ಅಳ್ಳೆದೆಯದು. ಅಪಾಯ ಒದಗಿದೆ ಎನಿಸಿದಾಗ ಅವಿತುಕೊಳ್ಳುವುದೇ ಸಹಜ ಪ್ರವೃತ್ತಿ. ಮನುಷ್ಯನಿಂದ ಆದಷ್ಟು ದೂರದಲ್ಲೇ ಇರುತ್ತದೆ. ಆದರೆ ಅತ್ಯಂತ ವಿಷಪೂರಿತವಾದ್ದರಿಂದ ಇದನ್ನು ಲಘುವಾಗಿ ಕಾಣಲಾಗದು.

ವಿಷ

ಈ ಹಾವಿನಲ್ಲಿ ಸುಮರು ೧೩೦-೨೫೦ ಮಿ.ಗ್ರಾಂನಷ್ಟು ವಿಷ ಉತ್ಪತ್ತಿಯಾಗುತ್ತದೆ. ಇದರ ವಿಷದ ಹಲ್ಲುಗಳು ಸೂಜಿಯಂತೆ ಬಲು ಉದ್ದ ಹಾಗೂ ತೀಕ್ಷ್ಣ. ಚುಚ್ಚುಮದ್ದಿನ ಸೂಜಿಯಂತೆ ಒಳಗೆ ಕೊಳವೆಯಿಂದ ಕೂಡಿವೆ. ಬಾಯಿಯ ಹಿಂಭಾಗದಲ್ಲಿ ಎರಡೂ ಪಾರ್ಶ್ವಗಳಲ್ಲಿರುವ ವಿಷಗ್ರಂಥಿಗಳಲ್ಲಿ ಉತ್ಪತ್ತಿಯಾಗುವ ವಿಷ ಈ ಕೊಳವೆಗಳ ಮೂಲಕ ಹರಿದುಬರುತ್ತದೆ. ಕೆಲವೂಮ್ಮೆ ಹಾವು ಬಾಯಿ ತೆರೆದಕ್ಷಣ ವಿಷ ಚಿಮ್ಮುವುದೂ ಉಂಟು. ಇದರ ವಿಷಕ್ಕೆ ರಕ್ತಹೆಪ್ಪುಗಟ್ಟುವ ಕ್ರಿಯೆಯನ್ನು ಶಿಥಿಲಗೊಳಿಸುವ ಶಕ್ತಿ ಇದೆ. ದಂಶನಕ್ಕೆ ಒಳಗಾದ ಅಂಗ ಬಾತುಕೊಂಡು ಅಲ್ಲಿ ವಿಪರೀತ ಉರಿಉಂಟಾಗುತ್ತದೆ. ಮಂಡಲದ ಹಾವಿನ ಕಡಿತದಿಂದ ಸಾವು ಸಂಭವಿಸುವುದು ವಿಷದ ಮೊತ್ತವನ್ನವಲಂಬಿಸಿದೆಯಾದರೂ ಪ್ರತಿವಿಷವನ್ನು ಧಾರಾಳ ಮೊತ್ತದಲ್ಲಿ ಕೊಡುವುದು ಉತ್ತಮ ಎನ್ನಲಾಗಿದೆ. ತುರ್ತು ವೈದ್ಯಕೀಯ ಚಿಕಿತ್ಸೆ ಅಗತ್ಯ.

ಆಹಾರ

ಮಂಡಲದ ಹಾವಿನ ಪ್ರಧಾನ ಆಹಾರ ಇಲಿ, ಹೆಗ್ಗಣ, ಓತಿ, ಹಲ್ಲಿ, ಏಡಿ, ಕೆಲವು ತೆರನ ಕೀಟಗಳು. ಬೇರೆ ಹಾವುಗಳನ್ನೂ ಹಕ್ಕಿಗಳನ್ನೂ, ಅವುಗಳ ಮರಿಗಳನ್ನೂ ತಿನ್ನುವುದಿದೆ. ಹಲವು ಸಲ ಸ್ವಜಾತಿ ಹಾವುಗಳನ್ನು ತಿನ್ನುವುದುಂಟು.

ಸಂತಾನೋತ್ಪತ್ತಿ

ಇದರ ಸಂತಾನವೃದ್ಧಿ ಶ್ರಾಯ ಜುಲೈ-ಆಗಸ್ಟ್. ಮಂಡಲದ ಹಾವು ತನ್ನ ದೇಹದಲ್ಲಿಯೇ ಮೊಟ್ಟೆಯಿಟ್ಟು ಕಾವುಕೊಟ್ಟು ಮರಿಮಾಡಿ ಮರಿಗಳನ್ನು ಪ್ರಸವಿಸುತ್ತದೆ. ಕೆಲವು ಸರಿಸೃಪಗಳಲ್ಲಿ ಕಾಣಬಹುದಾದ ಒಂದು ವಿಶೇಷ ಬಗೆಯ ವಂಶಾಭಿವೃದ್ಧಿ ಇದು. ಇದನ್ನೆ ಜನರು ಮಂಡಲದ ಹಾವು ನೇರವಾಗಿ ಮರಿಹಾಕುತ್ತದೆ ಎಂದು ತಪ್ಪಾಗಿ ಗ್ರಹಿಸುತ್ತಾರೆ. ಒಂದು ಸಲಕ್ಕೆ 20-40 ಮರಿಗಳು ಹುಟ್ಟುವವು. ಕೆಲವೊಮ್ಮೆ 80-90 ಮರಿಗಳು ಹುಟ್ಟುವುದೂ ಉಂಟು. ಹುಟ್ಟಿದಾಗ ಸುಮಾರು 130 ಮಿಮೀ ಉದ್ದವಿರುವ ಇವು ವಯಸ್ಕಗಳಿಗಿಂತ ಹೆಚ್ಚು ಹೊಳೆಯುತ್ತಿರುತ್ತವೆ. ಮರಿಗಳೂ ವಯಸ್ಕಗಳಷ್ಟೇ ಅಪಾಯಕಾರಿ.

ಉಲ್ಲೇಖಗಳು

ಹೊರಗಿನ ಕೊಂಡಿಗಳು

ಮಂಡಲ ಹಾವು 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

ಮಂಡಲ ಹಾವು ದೇಹರಚನೆಮಂಡಲ ಹಾವು ಆವಾಸಸ್ಥಾನಮಂಡಲ ಹಾವು ಸ್ವಭಾವಮಂಡಲ ಹಾವು ಆಹಾರಮಂಡಲ ಹಾವು ಸಂತಾನೋತ್ಪತ್ತಿಮಂಡಲ ಹಾವು ಉಲ್ಲೇಖಗಳುಮಂಡಲ ಹಾವು ಹೊರಗಿನ ಕೊಂಡಿಗಳುಮಂಡಲ ಹಾವುಭಾರತಹಾವು

🔥 Trending searches on Wiki ಕನ್ನಡ:

ಸಾಲ್ಮನ್‌ಸಂಗೊಳ್ಳಿ ರಾಯಣ್ಣಸಾವಯವ ಬೇಸಾಯಸುಧಾ ಮೂರ್ತಿಐಹೊಳೆಡಾ ಬ್ರೋಹೊಯ್ಸಳ ವಿಷ್ಣುವರ್ಧನಅಂತರ್ಜಲಭಾರತದಲ್ಲಿನ ಜಾತಿ ಪದ್ದತಿಭಾರತೀಯ ಸಂವಿಧಾನದ ತಿದ್ದುಪಡಿಯೋಗ ಮತ್ತು ಅಧ್ಯಾತ್ಮಗುಡಿಸಲು ಕೈಗಾರಿಕೆಗಳುದಕ್ಷಿಣ ಕನ್ನಡಸಾಮಾಜಿಕ ಸಮಸ್ಯೆಗಳುದಾಳಿಂಬೆಸೀತೆಬೆಳ್ಳುಳ್ಳಿಜವಹರ್ ನವೋದಯ ವಿದ್ಯಾಲಯಜಾನಪದಜ್ಯೋತಿಷ ಶಾಸ್ತ್ರಕಾಲಾಯ ತಸ್ಮೈ ನಮಃ (ಚಲನಚಿತ್ರ)ದೇವಸ್ಥಾನಮಹಾವೀರಸಂಗ್ಯಾ ಬಾಳ್ಯಾ(ನಾಟಕ)ಪಂಪ ಪ್ರಶಸ್ತಿಆರತಿಬೆಂಕಿಸಾಲುಮರದ ತಿಮ್ಮಕ್ಕಹನುಮಾನ್ ಚಾಲೀಸಶಿವರಾಜ್‍ಕುಮಾರ್ (ನಟ)ಉಪ್ಪಿನ ಸತ್ಯಾಗ್ರಹಧರ್ಮಲೋಕಸಭೆಗಾಂಧಿ- ಇರ್ವಿನ್ ಒಪ್ಪಂದನವರತ್ನಗಳುಮೊದಲನೇ ಅಮೋಘವರ್ಷತ. ರಾ. ಸುಬ್ಬರಾಯಓಝೋನ್ ಪದರು ಸವಕಳಿ(ಸಾಮರ್ಥ್ಯ ಕುಂದು)ಭಾರತದ ರೂಪಾಯಿಕರ್ನಾಟಕ ವಿಧಾನ ಸಭೆಹಲ್ಮಿಡಿ ಶಾಸನಭಗತ್ ಸಿಂಗ್ಕರ್ನಾಟಕದ ಇತಿಹಾಸಮಾನವನ ವಿಕಾಸಗಾದೆ ಮಾತುಪೌರತ್ವಕಿತ್ತೂರು ಚೆನ್ನಮ್ಮಲಸಿಕೆಭಾರತೀಯ ಧರ್ಮಗಳುಮಾಸ್ಕೋವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಮಲೇರಿಯಾಅಂಡವಾಯುಆನೆಮಹಾಕವಿ ರನ್ನನ ಗದಾಯುದ್ಧಈಸೂರುಜನಪದ ಕಲೆಗಳುಕರ್ನಾಟಕದ ಜಾನಪದ ಕಲೆಗಳುಶನಿಭಾರತ ಸಂವಿಧಾನದ ಪೀಠಿಕೆನಾಗರೀಕತೆಅವರ್ಗೀಯ ವ್ಯಂಜನಬುಧದೇವರ/ಜೇಡರ ದಾಸಿಮಯ್ಯಹಂಪೆಭಾರತದ ಸ್ವಾತಂತ್ರ್ಯ ಚಳುವಳಿತಂತ್ರಜ್ಞಾನಹಕ್ಕ-ಬುಕ್ಕಮೈಸೂರು ದಸರಾಮಂಗಳೂರುಶಿವಮೌರ್ಯ ಸಾಮ್ರಾಜ್ಯರತನ್ ನಾವಲ್ ಟಾಟಾಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುಚಿತ್ರದುರ್ಗ ಕೋಟೆತುಳು🡆 More