ಕುರುಡು ಮರಿ ಹುಳ ಹಾವು

ಹುಳ ಹಾವು(ಕುರುಡುಮರಿ ಎಂಬ ಹೆಸರೂ ಇದೆ) ವಿಷರಹಿತ ಹಾವುಗಳಲ್ಲಿ ಅತ್ಯಂತ ಚಿಕ್ಕ ಸರಿಸೃಪ ಪ್ರಾಣಿ.

ನೋಡಲು ಎರೆಹುಳುವಿನ ರೀತಿ ಇದ್ದು, ಹೊಳೆಯುವ ನುಣುಪಾದ ಮೈ, ದುಂಡಗಿನ ತಲೆ ಮತ್ತು ಬಾಲವನ್ನು ಈ ಹಾವು ಹೊಂದಿರುತ್ತದೆ. ತುಳು ಭಾಷೆಯಲ್ಲಿ ಈ ಹಾವಿಗೆ ಕುಮೆಮಣ್ಣ್, ಹಿಂದಿಯಲ್ಲಿ ಅಂಧಾ ಸಾಂಫ್, ಆಂಗ್ಲಭಾಷೆಯಲ್ಲಿ Worm snake ಅಥವಾ Blind Snake ಮುಂತಾದ ಹೆಸರುಗಳಿಂದ ಕರೆಯುತ್ತಾರೆ.

Indotyphlops braminus
ಕುರುಡು ಮರಿ ಹುಳ ಹಾವು
Conservation status
ಕುರುಡು ಮರಿ ಹುಳ ಹಾವು
Least Concern (IUCN 3.1)
Scientific classification e
Unrecognized taxon (fix): Indotyphlops
ಪ್ರಜಾತಿ:
I. braminus
Binomial name
Indotyphlops braminus
(Daudin, 1803)
Synonyms
  • Eryx braminus Daudin, 1803
  • [Tortrix] Russelii
    Merrem, 1820
  • Typhlops braminus
    — Cuvier, 1829
  • Typhlops Russeli
    — Schlegel, 1839
  • Argyrophis truncatus
    Gray, 1845
  • Argyrophis Bramicus
    Gray, 1845
  • Eryx Bramicus
    — Gray, 1845
  • Tortrix Bramicus
    — Gray, 1845
  • Onychocephalus Capensis A. Smith, 1846
  • Ophthalmidium tenue Hallowell, 1861
  • T[yphlops]. (Typhlops) inconspicuus Jan, 1863
  • T[yphlops]. (Typhlops) accedens Jan, 1863
  • T[yphlops]. accedens
    — Jan & Sordelli, 1864
  • Typhlops (Typhlops) euproctus Boettger, 1882
  • Typhlops bramineus A.B. Meyer, 1887
  • Tortrix russellii
    — Boulenger, 1893
  • Typhlops russellii
    — Boulenger, 1893
  • Typhlops braminus
    — Boulenger, 1893
  • Typhlops accedens
    — Boulenger, 1893
  • Typhlops limbrickii Annandale, 1906
  • Typhlops braminus var. arenicola Annandale, 1906
  • [Typhlops braminus] var. pallidus Wall, 1909
  • Typhlops microcephalus F. Werner, 1909
  • Glauconia braueri Sternfeld, 1910
  • [Typhlops] braueri
    — Boulenger, 1910
  • Typhlopidae braminus
    Roux, 1911
  • Typhlops fletcheri
    Wall, 1919
  • Typhlops braminus braminus — Mertens, 1930
  • Typhlops braminus
    — Nakamura, 1938
  • Typhlops pseudosaurus Dryden & Taylor, 1969
  • Typhlina (?) bramina
    — McDowell, 1974
  • Ramphotyphlops braminus
    Nussbaum, 1980
  • Indotyphlops braminus
    Hedges et al., 2014

ಟೈಫ್ಲೊಪಿಡೆ(Typhlopidae) ಕುಟುಂಬದ, ಇಂಡೋಟೈಫ್ಲಾಪ್ಸ್(Indotyphlops) ಕುಲಕ್ಕೆ ಸೇರಿದ ಈ ಹಾವಿನ ಪ್ರಾಣಿಶಾಸ್ತ್ರೀಯ ಹೆಸರು ಟೈಫ್ಲಿನಾ ಬ್ರಾಮಿನ(Typhlina bramina). ಈ ಹಿಂದೆ ಟೈಫ್ಲಾಪ್ಸ್ ಬ್ರಾಮಿನ ಎಂಬ ಹೆಸರು ಇದ್ದು, ಸಂಶೋಧನೆಗಳ ನಂತರ, ಈ ಹಾವಿನ ಕುಲದಲ್ಲಿ ಇನ್ನೂ ಕೆಲವು ಉಪಕುಲಗಳನ್ನು ಕಂಡು ಹಿಡಿಯಲಾಗಿದೆ.

ಶರೀರ ವಿನ್ಯಾಸ

ಕುರುಡು ಮರಿ ಹುಳ ಹಾವು 
ಹುಳ ಹಾವಿನ ಪೂರ್ಣ ಚಿತ್ರ(ಮೇಲಿನ ಚಿತ್ರ), ಮೈಮೇಲಿನ ಹುರುಪೆ ಮತ್ತು ಪುಟ್ಟ ಕಣ್ಣುಗಳು(ಕೆಳಗಿನ ಚಿತ್ರ)

ಹುಳ ಹಾವಿನ ಸರಾಸರಿ ಉದ್ದ ಹುಟ್ಟಿದಾಗ ೩ರಿಂದ ೪ಸೆಂ.ಮೀ. ಇದ್ದು, ಪೂರ್ಣ ಬೆಳೆದ ಹಾವು ಸುಮಾರು ೧೫ ಸೆಂ.ಮೀ ವರೆಗೂ ಇರುತ್ತದೆ. ಮೇಲ್ನೋಟಕ್ಕೆ ಎರೆಹುಳುವನ್ನು ಹೋಲುವ ಈ ಹಾವಿನ ಚಲನೆಯನ್ನು ಗಮನಿಸಿದಾಗ ಇದು ಹುಳಹಾವು ಎಂದು ತಿಳಿಯಬಹುದು. ಹೊರಮೈ ನುಣುಪಾಗಿದ್ದು ಕೆಂಪು ಕಂದು, ಬೆಳ್ಳಿ ಬೂದು, ಕಪ್ಪು ಬೂದು ಬಣ್ಣವನ್ನು ಹೊಂದಿರುತ್ತವೆ.ಮೈ ಮೇಲೆ ನುಣುಪಾದ ಹುರುಪೆಗಳು ಅಗಲವಾಗಿ ವ್ಯಾಪ್ತವಾಗಿರುತ್ತವೆ. ಹುಳ ಹಾವಿನ ಶರೀರದ ಅಡಿಭಾಗ ತಿಳಿಯಾದ ಬಣ್ಣವನ್ನು ಹೊಂದಿರುತ್ತದೆ.

ಈ ಹಾವಿನ ಬಾಲ ಮತ್ತು ತಲೆ ಮೊಂಡಗಿದ್ದು, ತಲೆಯ ಭಾಗದಲ್ಲಿ ಕಂಡೂ ಕಾಣದಂತೆ ಇರುವ ಪುಟ್ಟ ಕಣ್ಣುಗಳಿವೆ. ಕಣ್ಣುಗಳನ್ನು ಹುರುಪೆಗಳು ಆವರಿಸಿಕೊಂಡಿರುತ್ತವೆ. ಬಾಲದಲ್ಲಿ ಪುಟ್ಟದಾದ ಮುಳ್ಳಿನಂತಹ ಅಂಗ ಇರುತ್ತದೆ.

ಆವಾಸ ಮತ್ತು ಆಹಾರ

ಸಾಮನ್ಯವಾಗಿ ಹುಳ ಹಾವಿನ ಕುಲದ ಹಾವುಗಳು ಮೃದುವಾದ ಶರೀರರಚನೆಯನ್ನು ಹೊಂದಿರುವುದರಿಂದ, ಅತಿಯಾದ ಬಿಸಿಲು ಅಥವಾ ತಾಪಮಾನವನ್ನು ಸಹಿಸಲಾರವು. ಹಾಗಾಗಿ ತಂಪು ಹವೆ ಇರುವ, ಹೆಚ್ಚು ತೇವಾಂಶ ಇರುವ ಪ್ರದೇಶಗಳಾದ ಕೊಳೆತ ಗೊಬ್ಬರದ ರಾಶಿ, ಹಸಿ ಮಣ್ಣು, ಹುತ್ತ, ಕೊಳೆತ ಮರಗಳ ಒಳಗೆ ಅಥವಾ ಹಸಿರು ಗಿಡಗಳ ಅಡಿಭಾಗದಲ್ಲಿ ಇವು ವಾಸಿಸುವುದನ್ನು ಕಾಣಬಹುದು. ಹಗಲಿನಲ್ಲಿ ಹೆಚ್ಚು ತಾಪಮಾನ ಇರುವುದರಿಂದ, ರಾತ್ರಿ ಸಮಯದಲ್ಲಿ ಇವುಗಳು ಚಟುವಟಿಕೆಯಿಂದ ಇರುತ್ತವೆ.

ಕುರುಡುಮರಿ ಹಾವು ಗೆದ್ದಲು, ಇರುವೆ, ಎರೆಹುಳುವಿನ ಮರಿ, ಗೆದ್ದಲು, ಇರುವೆಯ ಮೊಟ್ಟೆ ಇತ್ಯಾದಿಗಳನ್ನು ತಿಂದು ಬದುಕುತ್ತದೆ.

ಸಂತಾನೋತ್ಪತ್ತಿ

ಹುಳ ಹಾವುಗಳು ಸ್ವ-ಫಲೀಕೃತ ವಿಧಾನದಲ್ಲಿ ತಮ್ಮ ಸಂತಾನವನ್ನು ವೃದ್ಧಿಸಿಕೊಳ್ಳುತ್ತವೆ. ಅಂದರೆ ಈ ಹಾವುಗಳಲ್ಲಿ ಗಂಡು ಹಾವುಗಳು ಇಲ್ಲದಿರುವುದು ವಿಶೇಷ. ಹಾಗಾಗಿ ಸಂತಾನ ವೃದ್ಧಿಗಾಗಿ ಹೆಣ್ಣು-ಗಂಡು ಕೂಡುವ ಸಂದರ್ಭ ಇರುವುದಿಲ್ಲ. ಈ ಎರಡೂ ಲಿಂಗದ ವೈಶಿಷ್ಟ್ಯತೆಗಳು ಒಂದೇ ಹೆಣ್ಣು ಹಾವಿನಲ್ಲಿ ಮಿಳಿತವಾಗಿರುತ್ತವೆ. ಎಪ್ರಿಲ್- ಮೇ ತಿಂಗಳ ಸಮಯದಲ್ಲಿ, ಬೆಳ್ತಿಗೆ ಅಕ್ಕಿಕಾಳಿನ ಗಾತ್ರದ ೪ರಿಂದ ೧೪ರಷ್ಟು ಮೊಟ್ಟೆಗಳನ್ನಿಟ್ಟು ಮರಿಮಾಡುತ್ತವೆ.

ಸ್ವಭಾವ

ಕುರುಡು ಮರಿ ಕಚ್ಚಿದರೆ ಕಚ್ಚಿದ ಭಾಗ ಕೊಳೆಯುತ್ತದೆ ಎಂಬ ಮೂಢನಂಬಿಕೆ ಹಳ್ಳಿಯ ಜನರಲ್ಲಿ ಇದೆ. ಆದರೆ ಕುರುಡು ಮರಿ ಸ್ವಭಾವತಃ ವಿಷರಹಿತವಾದ ಹಾವು. ಕಚ್ಚಿದಾಗ ಕಚಗುಳಿಯ ಅನುಭವ ಆಗುತ್ತದೆ. ಹಾವನ್ನು ಕ್ಕೈಯಲ್ಲಿ ಹಿಡಿದರೆ ತನ್ನ ಬಾಲದಲ್ಲಿರುವ ಪುಟ್ಟ ಮುಳ್ಳಿನ ಕೊಂಡಿಯಿಂದ ಚುಚ್ಚುತ್ತದೆ. ಕೊಂಡಿಯ ಮೂಲಕ ಮಲ ಮೂತ್ರವನ್ನು ವಿಸರ್ಜಿಸಿ ತೀಕ್ಷ್ಣವಾದ ವಾಸನೆಯನ್ನು ಹರಡುತ್ತದೆ.

ವ್ಯಾಪ್ತಿ

ಜಗತ್ತಿನ ಅತ್ಯಂತ ವಿಶಾಲ ಪ್ರದೇಶಗಳಲ್ಲಿ ವ್ಯಾಪಿಸಿರುವ ಹಾವಿನ ಪ್ರಭೇದವೆಂದರೆ ಹುಳಹಾವು ಎನ್ನಬಹುದು. ಹೂ ನೆಡುವ ಕುಂಡಗಳ ಮೂಲಕ ಈ ಹಾವುಗಳು ಜಗತ್ತಿನ ಇತರ ಭಾಗಗಳಿಗೆ ವ್ಯಾಪಿಸಿರಬಹುದು ಎಂದು ನಂಬಲಾಗುತ್ತದೆ.

ಭಾರತದಲ್ಲಿ

ಕುರುಡು ಹಾವು ಭಾರತದಾದ್ಯಂತ ಕಂಡುಬರುತ್ತದೆ. ಸಮುದ್ರ ಮಟ್ಟದಿಂದ ೧,೦೦೦ ಮೀ. ಎತ್ತರದ ಪ್ರದೇಶಗಳಲ್ಲೂ ಈ ಹಾವು ಕಾಣಸಿಗುತ್ತದೆ. ಲಕ್ಷದ್ವೀಪದಲ್ಲಿ ಕಂಡುಬರುವ ಏಕೈಕ ಹಾವು ಕುರುಡುಮರಿ.

ವಿಶ್ವ

ಆಫ್ರಿಕಾ ದೇಶಗಳು, ಏಷ್ಯಾ, ಆಸ್ಟ್ರೇಲಿಯಾ, ಅಮೇರಿಕಾ, ಯುರೋಪ್- ಈ ಎಲ್ಲಾ ದೇಶಗಳಲ್ಲಿ ಹುಳಹಾವು ವಾಸಿಸುತ್ತದೆ.

ಇವುಗಳನ್ನೂ ಓದಿ

ಉಲ್ಲೇಖಗಳು

Tags:

ಕುರುಡು ಮರಿ ಹುಳ ಹಾವು ಶರೀರ ವಿನ್ಯಾಸಕುರುಡು ಮರಿ ಹುಳ ಹಾವು ಆವಾಸ ಮತ್ತು ಆಹಾರಕುರುಡು ಮರಿ ಹುಳ ಹಾವು ಸಂತಾನೋತ್ಪತ್ತಿಕುರುಡು ಮರಿ ಹುಳ ಹಾವು ಸ್ವಭಾವಕುರುಡು ಮರಿ ಹುಳ ಹಾವು ವ್ಯಾಪ್ತಿಕುರುಡು ಮರಿ ಹುಳ ಹಾವು ಇವುಗಳನ್ನೂ ಓದಿಕುರುಡು ಮರಿ ಹುಳ ಹಾವು ಉಲ್ಲೇಖಗಳುಕುರುಡು ಮರಿ ಹುಳ ಹಾವುಎರೆಹುಳುಹಾವು

🔥 Trending searches on Wiki ಕನ್ನಡ:

ಸಂಧಿರುಮಾಲುಚನ್ನವೀರ ಕಣವಿಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಜಿ.ಎಸ್.ಶಿವರುದ್ರಪ್ಪಕುಮಾರವ್ಯಾಸದಲಿತಬರಗೂರು ರಾಮಚಂದ್ರಪ್ಪಕೃಷ್ಣ ಮಠಇನ್ಸಾಟ್ಬಿ. ಆರ್. ಅಂಬೇಡ್ಕರ್ಕುವೆಂಪುಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಯಕೃತ್ತುಭಾರತದ ಪ್ರಧಾನ ಮಂತ್ರಿಗಳ ಪಟ್ಟಿಶಾತವಾಹನರುಕೊಬ್ಬಿನ ಆಮ್ಲಭಗೀರಥಜೈನ ಧರ್ಮಶ್ರೀ ಕೃಷ್ಣ ಪಾರಿಜಾತರಾಮನಗರಪಿತ್ತಕೋಶಅವಿಭಾಜ್ಯ ಸಂಖ್ಯೆಸ್ವಚ್ಛ ಭಾರತ ಅಭಿಯಾನಭೂಮಿರಾಷ್ಟ್ರೀಯ ಸ್ವಯಂಸೇವಕ ಸಂಘಭೂತಾರಾಧನೆಬಾಹುಬಲಿಕರ್ನಾಟಕದ ಜಲಪಾತಗಳುಕೇದರನಾಥ ದೇವಾಲಯಅದ್ವೈತಗಂಗ (ರಾಜಮನೆತನ)ಎಂ.ಬಿ.ಪಾಟೀಲಕ್ರಿಯಾಪದಗೋಲ ಗುಮ್ಮಟಕರ್ನಾಟಕ ಹೈ ಕೋರ್ಟ್ಮುದ್ದಣಜಿ.ಪಿ.ರಾಜರತ್ನಂಕನ್ನಡ ಸಾಹಿತ್ಯ ಪರಿಷತ್ತುಓಂ ನಮಃ ಶಿವಾಯರಾಜ್ಯಸಭೆಭಾರತದ ಉಪ ರಾಷ್ಟ್ರಪತಿಮಾನವ ಸಂಪನ್ಮೂಲಗಳುಕೇಶವಾನಂದ ಭಾರತಿ ಹಾಗೂ ಕೇರಳ ಸರ್ಕಾರಸಿಗ್ಮಂಡ್‌ ಫ್ರಾಯ್ಡ್‌ಭಾರತದ ರಾಷ್ಟ್ರಪತಿಭಾರತದ ಜನಸಂಖ್ಯೆಯ ಬೆಳವಣಿಗೆಜಯಮಾಲಾಸಿದ್ಧರಾಮಸಮಾಸಕರ್ನಾಟಕ ವಿಧಾನ ಸಭೆಲಕ್ಷ್ಮಿಕನ್ನಡದಲ್ಲಿ ಕಾದಂಬರಿ ಸಾಹಿತ್ಯಭಾರತದ ಇತಿಹಾಸಸಾಹಿತ್ಯರೌಲತ್ ಕಾಯ್ದೆಕರ್ಣಕಿತ್ತೂರು ಚೆನ್ನಮ್ಮಜೋಗಿ (ಚಲನಚಿತ್ರ)ಬಿಳಿಗಿರಿರಂಗನ ಬೆಟ್ಟಬಲಚಂದ್ರಶೇಖರ ಕಂಬಾರಅಲೆಕ್ಸಾಂಡರ್ನಾಡ ಗೀತೆಸಂಭೋಗಸಾವಯವ ಬೇಸಾಯಯಕ್ಷಗಾನಬೆಳವಲಕುರು ವಂಶಬೆರಳ್ಗೆ ಕೊರಳ್ಎಸ್.ಎಲ್. ಭೈರಪ್ಪಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಆರ್ಯ ವೈಶ್ಯ ಗೋತ್ರಗಳು ಮತ್ತು ಸಂಕೇತನಾಮಗಳುಕೆಳದಿಯ ಚೆನ್ನಮ್ಮಸಮಾಜ ವಿಜ್ಞಾನನಿರ್ವಹಣೆ ಪರಿಚಯಗುರುಶನಿ (ಗ್ರಹ)🡆 More