ಶಾತವಾಹನರು

ಸಿಮುಖನ ಬಗ್ಗೆ ವಿವರಣೆ

ಶಾತವಾಹನರು
ಶಾತವಾಹನರ ಸಾಮ್ರಾಜ್ಯ
ಶಾತವಾಹನರು
Satavahana

೧.ಶಾತವಾಹನರು(ಕ್ರಿ.ಪೂ.೨೩೫-ಕ್ರಿ.ಶ.೨೨೫)

ಕರ್ನಾಟಕವನ್ನು ಆಳಿದ ಮೊದಲ ಹಿರಿಯ ಐತಿಹಾಸಿಕ ಸಾಮ್ರಾಜ್ಯದ ಸಂಸ್ಥಾಪಕರು. ಆರಂಭದಲ್ಲಿ ಅವರು ಮೌರ್ಯರ ಸಾಮಂತರಾಗಿದ್ದರು, ಮೌರ್ಯರ ಪತನದ ನಂತರ ಸ್ವತಂತ್ರ ರಾಗಿ ಶಾತವಾಹನ ವಂಶವನ್ನು ಸ್ಥಾಪಿಸಿದರು. ಪೈಥಾನ್ ಅವರ ರಾಜಧಾನಿಯಾಗಿತ್ತು. ಅವರು ಸುಮಾ ರು ೪೬೦ ವರ್ಷಗಳ ಕಾಲ ಕರ್ನಾಟಕವನ್ನಾಳಿದರು. ಅವರ ಸಾಮ್ರಾಜ್ಯವು ದಕ್ಷಿಣ ಭಾರತವಲ್ಲದೆ ಉತ್ತರ ಭಾರತಕ್ಕೂ ವ್ಯಾಪಿಸಿತ್ತು. ಕರ್ನಾಟಕದ ಬಹು ಭಾಗಗಳನ್ನು ಅವರು ಆಳಿದರು. ಶಾತಕರ್ಣಿ,ಗೌತಮಿಪುತ್ರ, ಪುಲಮಾಯಿ,ಯಜ್ಞಶ್ರೀಗಳು ಈ ವಂಶದ ಮುಖ್ಯ ದೊರೆ ಗಳು. ಅವರು ವೈದಿಕ ಧರ್ಮದ ಪೋಷಕರು. ದಕ್ಷ ಆಡಳಿತಗಾರರು. ಕಲೆ, ಸಾಹಿತ್ಯ, ಧರ್ಮಗಳ ಪೋಷಕರಾಗಿ ಉತ್ತರ ಮತ್ತು ದಕ್ಷಿಣ ಭಾರತಗಳ ನಡುವೆ ಮೊದಲಿಗೆ ಸಾಂಸ್ಕೃತಿಕ ಐಕ್ಯತೆಯನ್ನು ತಂದು ಬೃಹತ್ ಭಾರತಕ್ಕೆ ತಳಹದಿ ಹಾಕಿದರು. ಅವರ ಆಶ್ರಯದಲ್ಲಿ ಬೌದ್ಧ ಧರ್ಮ ಮತ್ತು ಪ್ರಾಕೃತ ಭಾಷೆಗಳು ವಿಪುಲವಾಗಿ ಬೆಳೆದವು. ಇವೆಲ್ಲವುಗಳ ಸಂಗಮ ಎಂಬಂತೆ ಕ್ರಿ.ಶ. ೨೭೮ರಲ್ಲಿ ಶಾಲಿವಾಹನ ಶಕೆಯನ್ನು ಆರಂಭಿಸಿದರು.ಶಾತವಾಹನರು ಮಧ್ಯ ಏಷ್ಯಾದಿಂದ ಆಕ್ರಮಣಗಳಿಗೆ ತಡೆದು ಕೊಂಡು ಎಂದು ಸೋಲದೆ, ದೊಡ್ಡ ಮತ್ತು ಪ್ರಬಲ ಸಾಮ್ರಾಜ್ಯದ ಆಳ್ವಿಕೆಮಾಡಿದರು.ಅವರು ವಿಷ್ಣುವಿನ ಆರಾಧಕರು ಮತ್ತು ಶಿವನ ಆದರೆ ಗೌರಿ, ಇಂದ್ರ, ಸೂರ್ಯ ಮತ್ತು ಚಂದ್ರ, ಇತರ ಅವತಾರಗಳು ಅವರ ದೇವಸ್ಥಾನಗಲಳಲ್ಲಿ ಕಾಣಬರುವವವು. ಶಾತವಾಹನರು ವಿಶ್ವದಲ್ಲಿ ವೈದಿಕ ಸಂಸ್ಕೃತಿ, ಭಾಷೆ ಮತ್ತು ಧರ್ಮ ವ್ಯಾಪಿಸುವಂತೆ ಮಾಡಿದ್ದಾರೆ.ಅವರ ನಾಣ್ಯಗಳಲ್ಲಿ ಹಡಗುಗಳ ಚಿತ್ರಗಳನ್ನು ನೋಡಿ ವಿದೇಶಿ ವ್ಯಾಪರದಲ್ಲಿ ಕೂಡ ಅವರು ಮುಂದಿದ್ದರು ಎಂಬುದ್ದನ್ನು ತಿಳಿಯಬಹುದು.

ಶಾತವಾಹನರ ಮೂಲ

ಇವರ ಮೂಲದ ಬಗ್ಗೆ ವಿದ್ವಾಂಸರಲ್ಲಿ ಎರಡು ಅಭಿಪ್ರಾಯಗಳಿವೆ-

  • ೧.ತೆಲುಗು ಮೂಲ:-ಇವರು ಆಂಧ್ರ ಪ್ರದೇಶದ ಕೆಲವು ಭಾಗಗಳನ್ನು ಆಳುತ್ತಿದ್ದು, ಮೌರ್ಯ ಸಾಮ್ರಾಜ್ಯ ದ ಸಾಮಂತರಾಗಿ, ಅವರ ಪತನಾ ನಂತರ ಸ್ವತಂತ್ರಗೊಂಡರು. ಈ ಸಿದ್ದಾಂತದ ವಾದಕರು ಪ್ರೊ.ರಾಪ್ಸನ್, ವಿ.ಎ. ಸ್ಮಿತ್ ಮತ್ತ್ತು ಭಂಡಾರಕರ್, ಇವರ ಪ್ರಕಾರ ಶಾತವಾಹನರ ನೆಲೆ ಶ್ರೀಕಾಕುಳಂ, ಕೃಷ್ಣ, ಗುಂಟೂರು, ಪೈಥಾನಗಳು. ನಾಣ್ಯಗಳಲ್ಲಿ ಮತ್ತು ಶಾಸನಗಳಲ್ಲಿ ಇವರನ್ನು ಆಂಧ್ರರೆಂದೂ, ಸ್ಕಂದ ಪುರಾಣದಲ್ಲಿಯೂ ಇವರನ್ನು ಆಂಧ್ರರೆಂದು ಕರೆಯಲಾಗಿದೆ.
  • ೨.ಕನ್ನಡ ಮೂಲ :-ಕೆ.ಪಿ.ಜಯಸ್ವಾಲ್ ರ ಪ್ರಕಾರ ಇವರು ಕನ್ನಡ ನಾಡಿಗೆ ಸೇರಿದವರು, ಹಿರೇಹಡಗಲಿಯಲ್ಲಿ ದೊರೆತಿರುವ ಶಾಸನವು ಇವರು ಕನ್ನಡಿಗರೆಂಬುದನ್ನು ಹೇಳುತ್ತದೆ. ಉತ್ತರದ ಮೈಸೂರನ್ನು ಹಾಲ ಮತ್ತು ಇತರ ದೊರೆಗಳು ಆಳುತ್ತಿದ್ದರು.

೨.ಶಾತವಾಹನರ ಸಾಮ್ರಾಟರು

ಆರಂಭಿಕ ಶಾತವಾಹನರು ಆಳ್ವಿಕೆ ಆಂಧ್ರ ಮತ್ತು ಪ್ರಸ್ತುತ ತೆಲಂಗಾಣ ಪ್ರದೇಶಗಳಲ್ಲಿ. ಪುರಾಣಗಳಲ್ಲಿ ೩೦ ಆಂಧ್ರ ಆಡಳಿತಗಾರರು ಪಟ್ಟಿ. ಅನೇಕ ಹಾಗೂ ತಮ್ಮ ನಾಣ್ಯಗಳು ಮತ್ತು ಬರಹಗಳಿಂದ ತಿಳಿಯಬಹುದು.

೨.೧. ಸಿಮುಖನ ಸಾಧನೆಗಳು

ಸಿಮುಖ ಈ ವಂಶದ ಸ್ಥಾಪಕ,ಪೈಥಾನ್ ಇವನ ರಾಜಧಾನಿ, ಕ್ರಿ.ಪೂ.೨೩೫ರಲ್ಲಿ ಇವನು ಮೌರ್ಯರ ದೊರೆ ಸುಶೀಮನನ್ನು ಕೊಂದು ಸ್ವತಂತ್ರನಾದನು. ನಾನಾಘಾಟ್ ಶಾಸನ ಇವನನ್ನು ರಾಜಸಿಮುಖ ಶಾತವಾಹನ ಎಂದು ವರ್ಣಿಸಿದೆ. ಇವನು ೨೩ವರ್ಷಗಳ ಕಾಲ ರಾಜ್ಯಾವಳಿದನು. ನಂತರ ಅವನ ತಮ್ಮ ಕೃಷ್ಣನು ೧೦ ವರ್ಷ ರಾಜ್ಯಾವಾಳಿದನು. ಈತ ನಾಸಿಕ್ ನವರೆಗೆ ಸಾಮ್ರಾಜ್ಯವನ್ನು ವಿಸ್ತರಿಸಿದನು. ಈತ ನಾಸಿಕ್ ನಲ್ಲಿ ಬೌದ್ಧ ದೇವಾಲಯವನ್ನು ನಿರ್ಮಿಸಿದನು. ಶ್ರೀಕಾಕುಲಂ ಸಿಮುಖನ ರಾಜಧಾನಿಯಾಗಿತ್ತು. ಅವರು ಮಧ್ಯಪ್ರದೇಶದ ಮೇಲೆ ಶಾತವಾಹನರ ನಿಯಮ ವಿಸ್ತರಿಸಲಾಯಿತು.

೨.೨. ೧ನೇ ಶಾತಕರ್ಣಿ

ಇವನು ಕ್ರಿ.ಪೂ.೧೯೪ರಲ್ಲಿ ಅಧಿಕಾರಕ್ಕೆ ಬಂದನು. ಇವನು ಆರಂಭ ಶಾತವಾಹನರಲ್ಲಿ ಅತಿ ಪ್ರಬಲ ದೊರೆ. ಇವನು ಅನುಪ,ಮಾಳ್ವ,ವಿದರ್ಭಗಳನ್ನು ಗೆದ್ದು ವಿಂದ್ಯಪರ್ವತದಿಂದ ಕೊಂಕಣದವರೆಗೆ ಅಗಲಿಸಿದನು.ಆತ ಅಶ್ವಮೇದ ಮತ್ತು ರಾಜಾಸೂಯಯಾಗಗಳನ್ನು ಆಚರಿಸಿದನು. ಅಪ್ರತ್ರಿಹಿತ ಇವನ ಬಿರುದು. ಇವನು ಆದಮೇಲೆ ೨ನೇ ಶಾತಕರ್ಣಿ ಸುಮಾರು ೫೬ ವರ್ಷ ನಾಡ‌ನ್ನಾಳಿದನು. ಇವನು ತೆಲಂಗಾಣ, ಪಶ್ಚಿಮದ ಮಹಾ. ಹಥಿಗುಂಪ ಕಲ್ಬರಹದಲ್ಲಿ ಈ ಬಗೆಯಾಗಿ ಉಲ್ಲೇಖಿಸುತ್ತಾನೆ ಮಾಡಿದ ಕಳಿಂಗದ ದೊರೆ ಖಾರವೆಲನೊಡನೆ ಕಾಳಗ ಮಾಡಿ ಕಳಿಂಗವನ್ನು ತನ್ನದಾಗಿಸಿಕೊಂಡನಂತೆ.

೨.೩. ಹಾಲ

ಹಾಲ ೧ನೇ ಶಾತಕರ್ಣಿಯ ನಂತರದ ದೊರೆ. ಈತನು ತನ್ನ ಪೂರ್ವಜರು ಕೊಟ್ಟ ರಾಜ್ಯವನ್ನು ಹಾಗೆ ತನ್ನ ನಂತರದ ಅರಸುಗಳಿಗೆ ಕೊಟ್ಟು ಒಳ್ಳೆಯ ರಾಜ ಎನಿಸಿಕೊಂಡಿದ್ದಾನೆ.ಪ್ರಾಕೃತ ಭಾಷೆಯಲ್ಲಿ ಗಾಥಾಸಪ್ತಸತಿ ಕೃತಿ ಬರೆದನು. ಹಾಲನು ಶ್ರೀಲಂಕಾದ ಮೇಲೆ ದಾಳಿ ಮಾಡಿದನು. ಅಲ್ಲಿರುವ ಲೀಲಾವತಿಯನ್ನು ವಶಪಡಿಸಿಕೊಳ್ಳುವುದಕ್ಕಾಗಿ.

೨.೪. ಗೌತಮಿಪುತ್ರ ಶಾತಕರ್ಣಿ

  • ಈತ ಶಾತವಾಹನರ ವಂಶದಲ್ಲೆ ಅತ್ಯಂತ ಪ್ರಸಿದ್ದಿ ರಾಜ.ಇವನು ಆಡಳಿತಕ್ಕೆ ಬರುವ ಮುನ್ನ ತುಂಬ ಬಲಶಾಲಿಗಳಾಗಿದ್ದ ಪಲ್ಲವರು ಶಾತವಾಹನರ ಉತ್ತರ ಪ್ರದೇಶದ ಕೆಲವು ಭಾಗಗಳನ್ನು ಆಕ್ರಮಿಸಿ ಕೊಂಡಿದ್ದರು,ನಂತರ ಗೌತಮಿಪುತ್ರ ಶಾತಕರ್ಣಿ ನಹಪಾನನನ್ನ್ನು ಸೋಲಿಸಿ ಆ ಪ್ರದೇಶಗಳನ್ನು ಮತ್ತೆ ಹಿಂದಕ್ಕೆ ಪಡೆದರು,ಇದರಿಂದಾಗಿ ಶಾತವಾಹನರು ತಮ್ಮ ವೈಭವದ ಆಡಳಿತವನ್ನು ಮುಂದುವರಿಸಲು ಸಾಧ್ಯವಾಯಿತು.
  • ಈತನ ವಿಜಯಗಳ ನೆನಪಿಗಾಗಿ ಇವನ ತಾಯಿ ಗೌತಮಿ ಬಾಲಾಶ್ರಿ ನಾಸಿಕ್ ನಲ್ಲಿ ಒಂದು ಶಾಸನವನ್ನು ಬರೆಸಿದರು.ಶಕ ವಂಶದ ಮೇಲಿನ ವಿಜಯದ ಸಂಕೇತವಾಗಿಶಾಲಿವಾಹನ ಶಕೆಯನ್ನು ಪ್ರಾರಂಭಿಸಿದರು.

೩.ಸಾಂಸ್ಕೃತಿಕ ಕೊಡುಗೆಗಳು

ಕರ್ನಾಟಕಕ್ಕೆ ಶಾತವಾಹನರ ಕೊಡುಗೆಗಳು ಬಹಳ ಅಪಾರವಾದದ್ದು.ಅದರಲ್ಲು ಸಾಂಸ್ಕೃತಿಕ ಕೊಡುಗೆಗಳು ಗಣನೀಯವಾದುದ್ದೆ.ಅಂತಹ ಅಪೂರ್ವ ಸಾಧನೆ ಹಾಗು ಸಾಧಕರ ಕಿರು ಪರಿಚಯ ಇಲ್ಲಿದೆ.

೩.೧.ಆಡಳಿತ

  • ಶಾತವಾಹನರು ಮೌರ್ಯ ಸಾಮ್ರಾಜ್ಯದಆಡಳಿತ ಪದ್ದತಿಯನ್ನು ಅನುಸರಿಸಿದರು.ರಾಜನೇ ರಾಜ್ಯದ ಮುಖ್ಯಸ್ಥ ಅವನನ್ನು ಕುಮಾರನ್,ರಾಜನ್,ಸ್ವಾಮಿನ್,ರಾಜರಾಣೊ ಎಂಬ ನಾನಾ ಹೆಸರುಗಳಿಂದ ಕರೆಯುತ್ತಿದ್ದರು. ರಾಣಿಯರು ಕೆಲವೊಮ್ಮೆ ಅವರ ಆಡಳಿತದಲ್ಲಿ ಭಾಗಿಯಾಗುತ್ತಿದ್ದರು.ರಾಜರು ಮುಖ್ಯ ನಿರ್ಣಯಗಳನ್ನು ಮಂತ್ರಾಲೋಚನಾ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತಿದ್ದರು. ರಾಜರ ನೆರವಿಗೆ ಮಂತ್ರಿ ಮಂಡಲವಿತ್ತು.
  • ಅದರ ಮುಖ್ಯ ಅಧಿಕಾರಿಗಳೆಂದರೆ- ಅಮಾತ್ಯ-ಪ್ರಾಂತ್ಯಗಳ ರಾಜ್ಯಪಾಲ ರಾಜಮಾತ್ಯಾ-ರಾಜನ ಆಪ್ತ ಸಲಹೆಗಾರ ಮಹಾಮಾತ್ರ-ಮುಖ್ಯ ಕಾರ್ಯಗಳ ನಿರ್ವಾಹಕ ಬಂಡಗಾರಿಕ-ಸರಕು ಸರಂಜಾಮುಗಳ ಮೇಲ್ವಿಚಾರಕ ಹೆರಣಿಕ-ಕೊಶಾಧ್ಯಕ್ಷ ಮಹಾಸೇನಾಪತಿ-ಸೈನ್ಯದ ಮೇಲ್ವಿಚಾರಕ ಮಹಾಸಂದಿ ವಿಗ್ರಹಿ-ವಿದೇಶಾಂಗ ವ್ಯವಹಾರಪ್ರಕ್ರಿಯೆ ನಿರ್ವಹಣೆ ಇವರಲ್ಲದೆ ಇನ್ನು ಪಾರುಪತ್ಯಗಾರ, ಅಕ್ಕಸಾಲಿಗ, ನಾಣ್ಯ ಮುದ್ರೆ ಹಾಗು ಇನ್ನಿತರೆ ಇದ್ದಾರೆಂದು ಶಾಸನಗಳು ಹೇಳಿವೆ.

೩.೨.ಸಾಮಾಜಿಕ ಸ್ಥಿತಿ

ಶಾತವಾಹನ ಸಮಾಜವು ವೃತ್ತಿಮೇಲೆ ಆಧರಿಸಿ ಅನೇಕ ಜಾತಿ ಹಾಗು ಉಪಜಾತಿಗಳಾಗಿ ವಿಂಗಡಿಸಲಾಗಿತ್ತು. ಸಮಾಜದಲ್ಲಿ ಅವಿಭಕ್ತ ಕುಟುಂಬ ಮತ್ತು ಅಂತರ ಜಾತಿ ವಿವಾಹ ಪದ್ಧತಿಗಳು ರೂಢಿಯಲ್ಲಿದ್ದವು. ಇಲ್ಲಿಗೆ ಬಂದ ವಿದೇಶಿ ಗಳಾದ ಯವನ, ಶಕ, ಗ್ರೀಕರು ಹಿಂದೂ ಸ್ತ್ರೀಯರನ್ನು ವಿವಾಹವಾಗಿ ಹಿಂದೂಸಂಸ್ಕೃತಿಯಪೊಷಕರಾಗಿ ಭಾರತೀಕರಣ ಸಾಧಿಸಿದುದು ಅವರ ಸಮಾಜದ ವಿಶಿಷ್ಟ ಲಕ್ಷಣ.ಶಾತವಾಹನರ ಸಮಾಜವನ್ನು (೧)ಮಹಾರತಿ (೨)ಮಹಾಭೋಜಕ (೩)ಸೇನಾಪತಿ ಮತ್ತು (೪)ಸಾಮಾನ್ಯ ವರ್ಗಗಳೆಂಬ ನಾಲ್ಕು ಭಾಗಗಳಾಗಿ ವಿಂಗಡಣೆಯಾಗಿತ್ತು.ರಾಜರು ಅಶ್ವಮೇದ ಮತ್ತು ರಾಜಾಸೂಯಯಾಗಗಳನ್ನು ಆಚರಿಸುತ್ತಿದ್ದರು.

೩.೩ಆರ್ಥಿಕ ಸ್ಥಿತಿ

ಕೃಷಿ ಶಾತವಾಹನರ ಮುಖ್ಯ ಕಸುಬಾಗಿತ್ತು. ಭೂಕಂದಾಯವು ರಾಜ್ಯದ ಮುಖ್ಯ ಆದಾಯದ ಮೂಲವಾಗಿತ್ತು. ಅವರು ರೋಮ್ ನೊಂದಿಗೆ ವ್ಯಾಪಾರ ಸಂಬಂಧ ಹೊಂದಿದ್ದರೆಂದು ಚಂದ್ರವಳ್ಳಿಯಲ್ಲಿ ದೊರೆತ ರೂಮಿನ ನಾಣ್ಯಗಳು ಹೇಳುತ್ತವೆ. ಅಲ್ಲಿಗೆ ವಜ್ರ, ಮುತ್ತು, ಬೆಳ್ಳಿ, ಆಭರಣಗಳು, ಮೆಣಸು ಶ್ರೀಗಂಧ, ಏಲಕ್ಕಿ, ಸಾಂಬಾರ್ ಪದಾರ್ಥಗಳು ರಫ್ತಾಗುತ್ತಿದ್ದು ಮತ್ತು ಇಲ್ಲಿಗೆ ಮದ್ಯ, ತಾಮ್ರ, ಸೀಸೆ,ಗಾಜು ಮುಂತಾದವುಗಳು ಆಮದಾಗುತ್ತಿದ್ದವು. ಇದರಿಂದ ವಿದೇಶಿಗಳಿಂದ ಇಲ್ಲಿಗೆ ಅಪಾರ ಸಂಪತ್ತು ಹರಿದು ಬಂದಿತ್ತು.

೩.೪.ನಾಣ್ಯಗಳು

ಶಾತವಾಹನರು ದಿನಾರ, ಸುವರ್ಣ ಎಂಬ ಚಿನ್ನದ, ಕುಷಣ ಎಂಬ ಬೆಳ್ಳಿ ಮತ್ತು ಇತರೆ ಕರ್ಷಪಣ, ದ್ರಮ್ಮ, ಪಣ, ಗದ್ಯಣ ಎಂಬ ನಾಣ್ಯಗಳನ್ನು ಚಲಾವಣೆಗೆ ತಂದರು. ಅವು ಹಡಗು, ರಾಜರ ಚಿತ್ರಗಳನ್ನೊಳಗೊಂಡಿವೆ.

೩.೫.ಧಾರ್ಮಿಕ ಸ್ಥಿತಿ

  • ಶಾತವಾಹನರು ವೈದಿಕ ಧರ್ಮದ ಅನುವಾಯಿಗಳು. ಅವರ ಕಾಲದಲ್ಲಿ ಸೂರ್ಯ, ಚಂದ್ರ, ಶಿವ, ವಿಷ್ಣು, ಲಕ್ಷ್ಮಿ, ಗೌರಿ, ವಾಸುದೇವರ ಆರಾಧನೆ ರೂಢಿಯಲ್ಲಿತ್ತು. ವೇದಗಳು, ಪುರಾಣಗಳು, ಮಹಾಕಾವ್ಯಗಳು ಅವರ ಕಾಲದಲ್ಲಿ ಅನುಸರಣೆಯಲ್ಲಿದ್ದವು. ನಾನ್ ಫಾಟ್ ಶಾಸನದಲ್ಲಿ ೨ನೇ ಶಾತಕರ್ಣಿಬ್ರಾಹ್ಮಣರಿಗೆ ಗೋದಾನ ಮಾಡಿದ ವಿಷಯವಿದೆ. ಶಾತವಾಹನರು ಜೈನ ಧರ್ಮ ಪೊಷಕರು ಆಗಿದ್ದು ಅವರ ಆಶ್ರಯದಲ್ಲಿ ಅನೇಕ ಜೈನ ಪಂಡಿತರಿದ್ದರು. ಅವರು ವೈದಿಕ ಧರ್ಮದ ಪೋಷಕರು.
  • ದಕ್ಷ ಆಡಳಿತಗಾರರು. ಕಲೆ, ಸಾಹಿತ್ಯ, ಧರ್ಮಗಳ ಪೋಷಕ ರಾಗಿ ಉತ್ತರ ಮತ್ತು ದಕ್ಷಿಣ ಭಾರತಗಳ ನಡುವೆ ಮೊದಲಿಗೆ ಸಾಂಸ್ಕೃತಿಕ ಐಕ್ಯತೆಯನ್ನು ತಂದು ಬೃಹತ್ ಭಾರತಕ್ಕೆ ತಳಹದಿ ಹಾಕಿದರು. ಅವರ ಆಶ್ರಯದಲ್ಲಿ ಬೌದ್ಧ ಧರ್ಮ ಮತ್ತು ಪ್ರಾಕೃತ ಭಾಷೆಗಳು ವಿಪುಲವಾಗಿ ಬೆಳೆದವು.ಅವರು ವೈದಿಕ ಧರ್ಮದ ಪೋಷಕರು. ದಕ್ಷ ಆಡಳಿತಗಾರರು.
  • ಕಲೆ, ಸಾಹಿತ್ಯ, ಧರ್ಮಗಳ ಪೋಷಕರಾಗಿ ಉತ್ತರ ಮತ್ತು ದಕ್ಷಿಣ ಭಾರತಗಳ ನಡುವೆ ಮೊದಲಿಗೆ ಸಾಂಸ್ಕೃತಿಕ ಐಕ್ಯತೆಯನ್ನು ತಂದು ಬೃಹತ್ ಭಾರತಕ್ಕೆ ತಳಹದಿ ಹಾಕಿದರು. ಅವರ ಆಶ್ರಯದಲ್ಲಿ ಬೌದ್ಧ ಧರ್ಮ ಮತ್ತು ಪ್ರಾಕೃತ ಭಾಷೆಗಳು ವಿಪುಲವಾಗಿ ಬೆಳೆದವು.

೩.೬.ಸಾಹಿತ್ಯ

ಪ್ರಾಕೃತ ಮತ್ತು ಸಂಸ್ಕೃತಗಳು ಶಾತವಾಹನರ ಪೋಷಣೆಯಲ್ಲಿದ್ದವು. ಪ್ರಾಕೃತ ಅವರ ರಾಜ್ಯ ಭಾಷೆಯಗಿತ್ತು. ಅವರ ಶಾಸನಗಳು ಪ್ರಾಕೃತದಲ್ಲಿವೆ. ಅಂದು ರಚನೆಯಾದ ಮುಖ್ಯ ಕೃತಿಗಳೆಂದರೆ ಕುಂದಾಚಾರ್ಯನ ಪ್ರಬೃತ್ತಸಾರ, ರಾಯನಸಾರ, ಸಮಯಸಾರ, ಪ್ರವಚನಸಾರ ಮತ್ತು ದ್ವಾದಶಾಮಪ್ರೇಕ್ಷ ಎಂಬ ಕೃತಿಗಳನ್ನು ಪ್ರಾಕೃತದಲ್ಲಿ ರಚಿಸಿದರು. ಹಲವು ಶಾಸನಗಳು ಸಹ ರಚನೆಯಾಗಿವೆ.

೩.೭.ವಾಸ್ತುಶಿಲ್ಪ

ಶಾಸನಗಳು ಅತಿಯಾಗಿ ಬಳಕೆಯಲ್ಲಿರುವುದು, ಹಥಿಗುಂಪ ಶಾಸನದಲ್ಲಿ ಈ ರೀತಿಯಾಗಿ ಉಲ್ಲೇಖಿಸುತ್ತಾನೆ- ಮಾಡಿದ ಕಳಿಂಗದ ರಾಜ ಖಾರವೆಲನೊಡನೆ. ಯುದ್ಸ್ಧ ಮಾಡಿ ಕಳಿಂಗವನ್ನು ವಶಪಡಿಸಿಕೊಂಡನಂತೆ. ವಶಿಷ್ಟಪುತ್ರ ಶಾತಕರ್ಣಿಯ ಈ ಸೋಲನ್ನು ಜುನಗಢ್ ಕಲ್ಲಿನ ಶಾಸನ ತಿಳಿಸುತ್ತದೆ. ಸಿಮುಖ ನಾಸಿಕ್ ನಲ್ಲಿ ಬೌದ್ಧ ದೇವಾಲಯವನ್ನು ನಿರ್ಮಿಸಿದನು. ಸಂಚಿ ಮತ್ತು ಅಮರವಾತಿ ಕಲೆ ಪ್ರಮುಖವಾಗಿ ಬೆಳೆದು ಬಂದಿತ್ತು ಈ ಕಳೆಯು ಕೆಂಪು ಶಿಲೆಯಿಂದ ಕೂಡಿತ್ತು.ಕಾರ್ಲೆಯಲ್ಲಿನ ಚೈತ್ಯಾಲಯ, ಹನುಮಕೊಂಡ ಜಗ್ಗಯ್ಯನ ಪೇಟೆ ಇವರ. ಕಾಲೆ ಮತ್ತು ವಾಸ್ತುಶಿಲ್ಪ ಉದಾಹರಣೆಗಳು. ಸಂಚಿ ಸ್ತೂಪ ಅವರ ಕೊಡುಗೆ.

ಶಾತವಾಹನರು 
Sanchi Stupa 1 (1999)
ಶಾತವಾಹನರು 
Sanchi Stupa Nr. 1 Buddha (1999)

೪.ಆಮೇಲಿನ ಅರಸರು

ಗೌತಮಿಪುತ್ರ ಶಾತಕರ್ಣಿಯ ತಮ್ಮನಾದ ವಶಿಷ್ಟಪುತ್ರ ಶಾತಕರ್ಣಿ ಸತ್ರಪ್ಸ್ ರಾಜವಂಶದ ದೊರೆಯಾದ ೧ನೇ ರುದ್ರದಮನ್ ನ ಮಗಳನ್ನು ಮದುವೆಯಾದ. ಮುಂದೆ ಕ್ರಿ.ಶ.೧೫೦ ರಲ್ಲಿ ೧ನೇ ರುದ್ರದಮನ್ ಶಾತವಾಹನರ ಮೇಲೆ ಕಾಳಗ ಸಾರಿ ಎರಡು ಸಲ ಗೆದ್ದ. ೧ನೇ ರುದ್ರದಮನ್ ನ ನಂಟಿನಿಂದ ವಶಿಷ್ಟಪುತ್ರ ಶಾತಕರ್ಣಿ ಸತ್ತ. ವಶಿಷ್ಟಪುತ್ರ ಶಾತಕರ್ಣಿಯ ಈ ಸೋಲನ್ನು ಜುನಗಢ್ ಕಲ್ಲಿನ ಬರಹ ತಿಳಿಸುತ್ತದೆ.

೫.ಅಳಿವು

ಯಜ್ಞ ಶಾತಕರ್ಣಿ ಸಾಲಿನ ನಾಲ್ಕು ಅಥವಾ ಐದು ರಾಜರುಗಳ ಅವನಿಗೆ ಉತ್ತರಾಧಿಕಾರಿಯಾದರು ಮತ್ತು ಕ್ರಿ.ಪೂ.200 ತನಕ ಆಡಳಿತವನ್ನು ಮುಂದುವರೆಸಿದರು. ಆದರೆ ರಾಜವಂಶದ ಶೀಘ್ರದಲ್ಲೇ ಅವನತಿಗೆ ತಲುಪಿತು,ಕಾರಣ ಬಹುಶಃ ಕೇಂದ್ರ ಶಕ್ತಿಯಲ್ಲಿ ಇಳಿತವಾಗಿ ಅವರ ಊಳಿಗ ಮಾನ್ಯರ ಶಕ್ತಿ ಏರಿಕೆಯಾದ್ದರಿಂದ ಇವರು ಮರೆಯಾದರು. ಹಲವಾರು ರಾಜವಂಶಗಳ ತಮ್ಮತಮ್ಮಲ್ಲೇ ಶಾತವಾಹನರ ರಾಜ್ಯಾವನ್ನು ವಿಭಾಗಿಸಿಕೊಂಡರು, ಅವುಗಳನ್ನು ಪೈಕಿ

  1. ಉತ್ತರ ಕರ್ನಾಟಕದ ಬನವಾಸಿಯಚುತುಗಳು
  2. ಉತ್ತರ ಕರ್ನಾಟಕದ ಬನವಾಸಿಯ ಕದಂಬರು.
  3. ಕಾಂಚೀಪುರಂನ ಪಲ್ಲವರು

==೬.ನಾಣ್ಯ ಯುಗ==*ಶಾತವಾಹನರು ತಮ್ಮ ರಾಜರು ಭಾವಚಿತ್ರಗಳನ್ನು ತಮ್ಮ ನಾಣ್ಯಗಳಲ್ಲಿ ಬಿಡುಗಡೆಗೊಳಿಸಿದ ಮೊದಲ ಸ್ಥಳೀಯ ಭಾರತೀಯ ಆಡಳಿತಗಾರರು ಇವರೆ. ಶಾತವಾಹನರ ನಾಣ್ಯಗಲೂ ಅನೇಕ ವೈಶಿಷ್ಟ್ಯಗಳನ್ನು ಹೊಂದಿದ್ದವು. ಅವರ ಕಾಲಗಣನೆ, ಭಾಷೆ ಹೀಗೆ ಅನನ್ಯ ಸೂಚನೆಗಳನ್ನು ನೀಡುತ್ತಿತ್ತು.ಅವರು ಮುಖ್ಯವಾಗಿ ದಾರಿ ಮತ್ತು ತಾಮ್ರದ ನಾಣ್ಯಗಳನ್ನು ಬಿಡುಗಡೆ ಮಾಡಿದ್ದರೆ ತಮ್ಮ ಭಾವಚಿತ್ರ ಶೈಲಿಯ ಬೆಳ್ಳಿ ನಾಣ್ಯಗಳನ್ನು ಬಿಡುಗಡೆ ಮಾಡಿದ್ದಾರೆ .

ಶಾತವಾಹನರು 
ವಶಿಷ್ಟಪುತ್ರ ಶಾತಕರ್ಣಿಯ ಭಾವಚಿತ್ರವುಳ್ಳ ನಾಣ್ಯ

ನೋಡಿ

ಮೈಸೂರುವಿಶ್ವವಿದ್ಯಾನಿಲಯ ವಿಶ್ವಕೋಶ/ಗೌತಮೀಪುತ್ರ ಶಾತಕರ್ಣಿ

ಉಲ್ಲೇಖ

Tags:

ಶಾತವಾಹನರು ೧.(ಕ್ರಿ.ಪೂ.೨೩೫-ಕ್ರಿ.ಶ.೨೨೫)ಶಾತವಾಹನರು ಶಾತವಾಹನರ ಮೂಲಶಾತವಾಹನರು ೨.ಶಾತವಾಹನರ ಸಾಮ್ರಾಟರುಶಾತವಾಹನರು ೩.ಸಾಂಸ್ಕೃತಿಕ ಕೊಡುಗೆಗಳುಶಾತವಾಹನರು ೩.೧.ಆಡಳಿತಶಾತವಾಹನರು ೩.೨.ಸಾಮಾಜಿಕ ಸ್ಥಿತಿಶಾತವಾಹನರು ೩.೩ಆರ್ಥಿಕ ಸ್ಥಿತಿಶಾತವಾಹನರು ೩.೪.ನಾಣ್ಯಗಳುಶಾತವಾಹನರು ೩.೫.ಧಾರ್ಮಿಕ ಸ್ಥಿತಿಶಾತವಾಹನರು ೩.೬.ಸಾಹಿತ್ಯಶಾತವಾಹನರು ೩.೭.ವಾಸ್ತುಶಿಲ್ಪಶಾತವಾಹನರು ೪.ಆಮೇಲಿನ ಅರಸರುಶಾತವಾಹನರು ೫.ಅಳಿವುಶಾತವಾಹನರು ನೋಡಿಶಾತವಾಹನರು ಉಲ್ಲೇಖಶಾತವಾಹನರು

🔥 Trending searches on Wiki ಕನ್ನಡ:

ಮೊದಲನೆಯ ಕೆಂಪೇಗೌಡಸಿದ್ದಲಿಂಗಯ್ಯ (ಕವಿ)ಟೊಮೇಟೊಸುಭಾಷ್ ಚಂದ್ರ ಬೋಸ್ಸವರ್ಣದೀರ್ಘ ಸಂಧಿಉತ್ಪಲ ಮಾಲಾ ವೃತ್ತಭಾಮಿನೀ ಷಟ್ಪದಿವೀರಗಾಸೆರಾಷ್ಟ್ರಕವಿವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನಬೆಟ್ಟದ ನೆಲ್ಲಿಕಾಯಿಸಾರ್ವಭೌಮತ್ವಮೊಹೆಂಜೊ-ದಾರೋಭಾರತದಲ್ಲಿ ಪಂಚಾಯತ್ ರಾಜ್ಶೈಕ್ಷಣಿಕ ಮನೋವಿಜ್ಞಾನಕಾಮಸೂತ್ರಅರಿಸ್ಟಾಟಲ್‌ನೀನಾದೆ ನಾ (ಕನ್ನಡ ಧಾರಾವಾಹಿ)ಚಾಣಕ್ಯಹರಿಹರ (ಕವಿ)ಅಂಬಿಗರ ಚೌಡಯ್ಯಭಾರತದ ಬುಡಕಟ್ಟು ಜನಾಂಗಗಳುಅಯೋಧ್ಯೆಕಪ್ಪೆಚಿಪ್ಪುಮಳೆಭಾರತೀಯ ಮೂಲಭೂತ ಹಕ್ಕುಗಳುಬಾರ್ಲಿಚುನಾವಣೆದಿಕ್ಕುವಿಶ್ವ ಪರಿಸರ ದಿನಸವದತ್ತಿಮಯೂರಶರ್ಮಬಾದಾಮಿಸ್ಟಾರ್‌ಬಕ್ಸ್‌‌ಋಗ್ವೇದಅರ್ಥಶಾಸ್ತ್ರಕೈಗಾರಿಕೆಗಳುಕನಕದಾಸರುಅರ್ಥ ವ್ಯವಸ್ಥೆವಾರ್ತಾ ಭಾರತಿಯುಗಾದಿಭದ್ರಾವತಿಕಾನೂನುಸಾನೆಟ್ಬೆಂಗಳೂರುಭಗವದ್ಗೀತೆಬಹುವ್ರೀಹಿ ಸಮಾಸಭ್ರಷ್ಟಾಚಾರಮದ್ಯದ ಗೀಳುಕರ್ಮಧಾರಯ ಸಮಾಸದುರ್ಗಸಿಂಹಬಬಲಾದಿ ಶ್ರೀ ಸದಾಶಿವ ಮಠಸುಧಾರಾಣಿಕ್ರಿಯಾಪದಅಕ್ರಿಲಿಕ್ಅಸಹಕಾರ ಚಳುವಳಿವಾಣಿಜ್ಯ ಪತ್ರಯಶ್(ನಟ)ಅಕ್ಬರ್ಕೊಡಗಿನ ಗೌರಮ್ಮಪಂಚಾಂಗಬಿಳಿಗಿರಿರಂಗನ ಬೆಟ್ಟಅಲ್ಲಮ ಪ್ರಭುರಗಳೆಭಾರತದಲ್ಲಿನ ಚುನಾವಣೆಗಳುಪ್ಯಾರಾಸಿಟಮಾಲ್ಮೂಲಭೂತ ಕರ್ತವ್ಯಗಳುಬೆಕ್ಕುಕವಲುಭಾರತದ ಮುಖ್ಯ ನ್ಯಾಯಾಧೀಶರುಕೃಷ್ಣರಾಜಸಾಗರಸೀತೆಪುರಂದರದಾಸಆಟಿಸಂಸ್ವಚ್ಛ ಭಾರತ ಅಭಿಯಾನತೆಲುಗುಹಿಪಪಾಟಮಸ್ಕೆ. ಎಸ್. ನಿಸಾರ್ ಅಹಮದ್🡆 More