ಪಿತ್ತಕೋಶ

ಪಿತ್ತಕೋಶವು ಯಕೃತ್ತಿನ (ಪಿತ್ತಜನಕಾಂಗ, ಲಿವರ್) ಸ್ರಾವವಾದ ಪಿತ್ತ (ಬೈಲ್) ಸಂಗ್ರಹವಾಗುವ ಚೀಲ (ಗಾಲ್ ಬ್ಲ್ಯಾಡರ್).

ಇದು ಯಕೃತ್ತಿನ ಬಲಸಂಪುಟದ ಕೆಳಭಾಗದಲ್ಲಿದೆ. ಆಕಾರ ಶಂಖದಂತೆ. ಯಕೃತ್ತಿನಲ್ಲಿ ಉತ್ಪನ್ನವಾಗುವ ಪಿತ್ತ ಅದರ ಎರಡೂ ಸಂಪುಟಗಳಿಂದ ಪ್ರತ್ಯೇಕ ನಳಿಗೆಗಳ ಮೂಲಕ ಹರಿಯುತ್ತದೆ. ಇವೆರಡೂ ಸಂಗಮಿಸಿ ಯಕೃತ್ ಪ್ರಣಾಲಿ (ಕಾಮನ್ ಹೆಪಟೈಟ್ ಡಕ್ಟ್) ಆಗುತ್ತದೆ. ಪಿತ್ತಕೋಶದ ನಳಿಗೆ ಯಕೃತ್ ಪ್ರಣಾಲಿಯನ್ನು ಸೇರಿ ಪಿತ್ತನಾಳ (ಬೈಲ್ ಡಕ್ಟ್) ಆಗುತ್ತದೆ. ಪಿತ್ತಕೋಶದ ಉದ್ದ 7-10 ಸೆಂ.ಮೀ.; ಮೊಂಡಾದ ಅದರ ತುದಿಯ ಕಡೆ ಅಗಲ ಸುಮಾರು 3 ಸೆಂ.ಮೀ. ಇದರಲ್ಲಿ ಸುಮಾರು 30-50 ಘನ ಸೆಂ.ಮೀ. ಪಿತ್ತರಸ ಹಿಡಿಯುತ್ತದೆ. ಪಿತ್ತಕೋಶದ ಮೇಲಿನ ಹೊರಮೈ ಯಕೃತ್ತಿನ ಬಲಸಂಪುಟದ ಕೆಳಗಡೆ ಇರುವ ಕೂಪದಲ್ಲಿ ಬಂಧಿತವಾಗಿದೆ. ಮೊಂಡಾದ ತುದಿ ಯಕೃತ್ತಿನ ಕೆಳಗಿನ ಅಂಚಿನಿಂದ ಮುಂದಕ್ಕೆ ಸ್ವಲ್ಪಮಟ್ಟಿಗೆ ಚಾಚಿಕೊಂಡು ಉದರ ಫಲಕವನ್ನು (ಆಬ್ಡೊಮಿನಲ್ ವಾಲ್) ಸ್ಪರ್ಶಿಸುತ್ತದೆ. ಪಿತ್ತಕೋಶದ ಕೆಳಗಿನ ಹೊರಮೈ ಮುಂಭಾಗದಲ್ಲಿ ತಿರ್ಯಕ್ ಸ್ಥೂಲಾಂತ್ರಕ್ಕೂ (ಟ್ರಾನ್ಸ್‍ವರ್ಸ್ ಕೊಲಾನ್) ಹಿಂಭಾಗದಲ್ಲಿ ಗೃಹಿಣೀ (ಸುಶ್ರುತ) ಡುಯೋಡೀನಮ್ಮಿಗೂ ಬಂಧಿತವಾಗಿದೆ. ಪಿತ್ತಕೋಶ ನಳಿಗೆಯ ಮೂಲಕ ಪಿತ್ತ, ಪಿತ್ತಕೋಶವನ್ನು ಸೇರಿ ನೀರಿನಂಶವನ್ನು ಬಲುಮಟ್ಟಿಗೆ ಕಳೆದುಕೊಂಡು ಮಂದವಾಗುತ್ತದೆ. ಜೀರ್ಣಕಾಲದಲ್ಲಿ ಪಿತ್ತಕೋಶ ಸಂಕೋಚಿಸುತ್ತದೆ. ಆಗ ಪಿತ್ತ ಅದೇ ನಳಿಗೆ ಮೂಲಕ ಪಿತ್ತನಾಳಕ್ಕೆ ಹರಿದು ತನ್ಮೂಲಕ ಗ್ರಹಣೀ ಡುಯೋಡೀನಮ್ಮನ್ನು ಸೇರುತ್ತದೆ.

ಪಿತ್ತಕೋಶ

ಕೆಲವು ಪ್ರಾಣಿಗಳಿಗೆ (ಕುದುರೆ) ಪಿತ್ತಕೋಶ ಇರುವುದಿಲ್ಲ. ಒಮ್ಮೊಮ್ಮೆ ಮನುಷ್ಯನ ಪಿತ್ತಕೋಶದಲ್ಲಿ ಪಿತ್ತಶೋಷಣೆಯಿಂದ ಪಿತ್ತಾಶ್ಮಗಳು (ಗಾಲ್ ಸ್ಟೋನ್ಸ್) ಉಂಟಾಗಬಹುದು. ಆಗ ಶಸ್ತ್ರಚಿಕಿತ್ಸೆಯ ಮೂಲಕ ಪಿತ್ತಕೋಶವನ್ನೇ ತೆಗೆದುಹಾಕಬೇಕಾಗಬಹುದು.

ಬಾಹ್ಯ ಸಂಪರ್ಕಗಳು

ಪಿತ್ತಕೋಶ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

Tags:

🔥 Trending searches on Wiki ಕನ್ನಡ:

ಇಮ್ಮಡಿ ಪುಲಿಕೇಶಿನಾಮಪದನವೋದಯಯುಗಾದಿಕರ್ನಾಟಕದ ವಾಸ್ತುಶಿಲ್ಪಸಾಕ್ರಟೀಸ್ಚಿಕ್ಕಬಳ್ಳಾಪುರಭಾರತೀಯ ಆಡಳಿತಾತ್ಮಕ ಸೇವೆಗಳುಬ್ಯಾಂಕ್ಭಾರತದ ವಿಜ್ಞಾನಿಗಳುಭಾರತೀಯ ಧರ್ಮಗಳುಅಕ್ಬರ್ಬಿಳಿ ರಕ್ತ ಕಣಗಳುಚಂದ್ರಶೇಖರ ವೆಂಕಟರಾಮನ್ಅಕ್ಷಾಂಶ ಮತ್ತು ರೇಖಾಂಶಭಾಷಾಂತರಅಚ್ಯುತ ಸಮಂಥಾವೇದವ್ಯಾಸಕಲಿಯುಗಹುಲಿಭರತ-ಬಾಹುಬಲಿಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಜೋಗಿ (ಚಲನಚಿತ್ರ)ಕೊಪ್ಪಳರೋಸ್‌ಮರಿಕರ್ನಾಟಕ ಹೈ ಕೋರ್ಟ್ಗ್ರಾಮ ಪಂಚಾಯತಿಚದುರಂಗಶಿವಕುಮಾರ ಸ್ವಾಮಿಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಮ್ಯಾಕ್ಸ್ ವೆಬರ್ಎಚ್.ಎಸ್.ಶಿವಪ್ರಕಾಶ್ಋತುಚಕ್ರಮಂಕುತಿಮ್ಮನ ಕಗ್ಗತೆಲುಗುಹರಪನಹಳ್ಳಿ ಭೀಮವ್ವಅರ್ಥಶಾಸ್ತ್ರಭಾರತ ಬಿಟ್ಟು ತೊಲಗಿ ಚಳುವಳಿಕ್ರೈಸ್ತ ಧರ್ಮಸಿದ್ದಲಿಂಗಯ್ಯ (ಕವಿ)ಭಾರತದ ರಾಷ್ಟ್ರಪತಿಪಂಚಾಂಗದಕ್ಷಿಣ ಕನ್ನಡ (ಲೋಕ ಸಭೆ ಚುನಾವಣಾ ಕ್ಷೇತ್ರ)ಸಂವಹನವಿಜ್ಞಾನಭಾರತದ ಸಂಸತ್ತುಅಜಯ್ ಜಡೇಜಾದ.ರಾ.ಬೇಂದ್ರೆಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಭಕ್ತ ಪ್ರಹ್ಲಾದವಾದಿರಾಜರುತೆನಾಲಿ ರಾಮಕೃಷ್ಣಮಲೈ ಮಹದೇಶ್ವರ ಬೆಟ್ಟಜಾಗತೀಕರಣಛತ್ರಪತಿ ಶಿವಾಜಿಒಂದು ಮುತ್ತಿನ ಕಥೆಭಾರತದಲ್ಲಿನ ಚುನಾವಣೆಗಳುರಾಜ್ಯಗಳ ಪುನರ್ ವಿಂಗಡಣಾ ಆಯೋಗಸಂಪತ್ತಿನ ಸೋರಿಕೆಯ ಸಿದ್ಧಾಂತಭ್ರಷ್ಟಾಚಾರಭಾರತೀಯ ಮೂಲಭೂತ ಹಕ್ಕುಗಳುಪರಿಣಾಮವಿಕಿಪೀಡಿಯಯಕ್ಷಗಾನಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ಸಹಾಯಧನರಾಮಾಯಣಐಸಿಐಸಿಐ ಬ್ಯಾಂಕ್ಭಾರತದ ತ್ರಿವರ್ಣ ಧ್ವಜಭಾರತದ ಸ್ವಾತಂತ್ರ್ಯ ದಿನಾಚರಣೆಬುಧಛಂದಸ್ಸುಅಲ್ಬರ್ಟ್ ಐನ್‍ಸ್ಟೈನ್ತಂತ್ರಜ್ಞಾನಹವಾಮಾನ🡆 More