ಹವಾಮಾನ

ಹವಾಮಾನವು ವಾತಾವರಣದ ಸ್ಥಿತಿ, ಬಿಸಿ ಅಥವಾ ಶೀತಲ, ತೇವ ಅಥವಾ ಶುಷ್ಕ, ಶಾಂತ ಅಥವಾ ಬಿರುಗಾಳಿಯಿಂದ ಕೂಡಿದ, ನಿಚ್ಚಳ ಅಥವಾ ಮೋಡಕವಿದ ಅನ್ನುವಷ್ಟರ ಮಟ್ಟಿಗೆ.

ಬಹುತೇಕ ಹವಾಮಾನ ವಿದ್ಯಮಾನಗಳು ಪರಿವರ್ತನ ಗೋಳದಲ್ಲಿ ಸಂಭವಿಸುತ್ತವೆ, ಸಮಗೋಳದ ಸ್ವಲ್ಪ ಕೆಳಗೆ. ಹವಾಮಾನವು ಸಾಮಾನ್ಯವಾಗಿ ದಿನನಿತ್ಯದ ಉಷ್ಣಾಂಶ ಮತ್ತು ಮಳೆ ಪ್ರಮಾಣವನ್ನು ನಿರ್ದೇಶಿಸಿದರೆ, ವಾಯುಗುಣವು ಸಮಯದ ದೀರ್ಘಾವಧಿಯಲ್ಲಿ ಸರಾಸರಿ ವಾತಾವರಣ ಸ್ಥಿತಿಗಳಿಗಾಗಿ ಬಳಸಲಾಗುವ ಪದ.

ಹವಾಮಾನ, ಇದು ಕಾಲೋಚಿತ ವಿಪರೀತಗಳ, ಬದಲಾವಣೆ ರೀತಿಯ ಸರಾಸರಿ ಹವಾಮಾನ, ಭೂಮಿಯ ಶಕ್ತಿ ಮತ್ತು ವಾಯುಮಂಡಲದಿಂದ ನಿಯಂತ್ರಣ ವಾಸ್ತವವಾಗಿ ಮಾನವ ಚಟುವಟಿಕೆಗಳು ಮತ್ತು ನೈಸರ್ಗಿಕ ಘಟನೆಗಳು ಎರಡೂ ಉಂಟಾಗುತ್ತದೆ ಆಗಿದೆ. ... ಹವಾಮಾನ ಬದಲಾವಣೆ ಕುರಿತಾದ ಅಂತರರಾಷ್ಟ್ರೀಯ ಮಂಡಳಿ ಪ್ರಕಾರ, ಹವಾಮಾನ ಬದಲಾವಣೆ ಗಮನಾರ್ಹವಾಗಿ ಮಾನವ ಚಟುವಟಿಕೆಗಳಿಂದ ಕಾರಣ, ಮತ್ತು ಈ ಭೂಮಿಯ ಮೇಲೆ ಬದಲಾಯಿಸಲಾಗದ ಪರಿಣಾಮಗಳನ್ನು ಉಂಟುಮಾಡುತ್ತವೆ. ಇದಲ್ಲದೆ, ನೈಸರ್ಗಿಕ ಘಟನೆಗಳು ಹವಾಗುಣದ ಬದಲಾವಣೆಯ ಅಂಶಗಳು. ಭಾರತದ ಹವಾಮಾನ ಇಲಾಖೆಯ ಕೇಂದ್ರ ಕಛೀರಿ ಮಹಾರಾಷ್ಟ್ರದ ಪುಣೆಯಲ್ಲಿ ಇದೆ.

ಮುಂಗಾರಿನ ಮುನ್ಸೂಚನೆ

ಭಾರತೀಯ ಹವಾಮಾನ ಇಲಾಖೆಯು ಮುಂಗಾರಿನ ಆಗಮನಕ್ಕೆ ೧೫ ದಿನಗಳು ಮುಂಚಿತವಾಗಿ ಮುನ್ಸೂಚನೆ ನೀಡುತ್ತಿತ್ತು. ಆದರೆ ರೈತರಿಗೆ ತಮ್ಮಕೃಸಿ ಚಟುವಟಿಕೆಗಳನ್ನು ಅಥವಾ ನೀರಿನ ಸಂಪನ್ಮೂಲಗಳನ್ನು ಸಂಪೂರ್ಣವಾಗಿ ಯೋಜಿಸಲು, ಈ ಸಮಯ ಸಾಕಾಗುತ್ತಿರಲಿಲ್ಲ. ಅದಕ್ಕಾಗಿಯೇ ಭಾರತೀಯ ಉಷ್ಣವಲಯದ ಹವಾಮಾನ ವಿಜ್ಹಾನ ಸಂಸ್ಥೆಯ ಸಂಶೋಧಕರು, ಈ ಸಮಸ್ಯೆಯನ್ನು ಬಗೆಹರಿಸುವ ಅತ್ಯುತ್ತಮ ಮಾರ್ಗದ ಬಗ್ಗೆ ಕಾರ್ಯತತ್ಪರರಾಗಿದ್ದರು. ಇದರ ಫಲವಾಗಿ, ಈಗ ಋತುಮಾನದ ಮುಸ್ಸೂಚನೆಯನ್ನು ಒಂದು ಋತುವಿನಷ್ಟು ಮುಂಚಿತವಾಗಿಯೇ ತಿಳಿಸುವ ವಿಧಾನ ರೂಪಿಸಿದ್ದಾರೆ.

ಮುಂಗಾರಿನ ಆಗಮನವು ತನ್ನದೇ ರೀತಿಯಲ್ಲಿ ವಿಶಿಷ್ಟ ಮತ್ತು ಗಮನಿಸದೇ ಇರಲು ಸಾಧ್ಯವೇ ಇಲ್ಲದಂತಹ ಸೂಚನೆಗಳನ್ನು ನೀಡುವ, ಅದ್ಭುತ ಪ್ರಕ್ರಿಯೆ, ಮಳೆಗಾಲವು ಕೇರಳಕ್ಕೆ ಆಗಮಿಸುವ ಮೊದಲು ಹಿಂದೂ ಮಹಾಸಾಗರ, ಅರೇಬುಯನ್ ಸಮುದ್ರ ಮತ್ತು ಭಾರತೀಯ ಪರ್ಯಾಯ ದ್ವೀಪದ ವಾಆವರಣದಲ್ಲಿ ದೊಡ್ಡ ಪ್ರಮಾಣದ ಬದಲಾವಣೆಗಳು ಉಂಟಾಗುತ್ತವೆ. ಮಳೆಗಾರ ಪ್ರಾರಂಭಕ್ಕೂ ಕೆಲವೇ ದಿನಗಳ ಮುಂಚೆ ಮಳೆ, ಮಾರುತ ಮತ್ತು ವಿಕಿರಣಗಳನ್ನು ಒಳಗೊಂಡಂತೆ ವಾತಾವರಣದಲ್ಲಿ ಆದ ಈ ಬದಲಾವಣೆಗಳನ್ನು ಹವಾಮಾನ ಶಾಸ್ತ್ರಜ್ಞರು ಅಧ್ಯಾಯನ ಮಾಡುತ್ತಾರೆ.

ಪ್ರಸ್ತುತ ಬಳಕೆಯಲ್ಲಿರುವ ಕ್ರಿಯಾತ್ಮಕ ಮುನ್ಸೂಚನಾ ವ್ಯವಸ್ಥೆಯು, ಮುಂಗಾರಿನ ಆಗಮನದ ದಿನಾಂಕವನ್ನು ೨-೩ ವಾರಗಳ ಮುಂಚಿತವಾಗಿ ಊಹಿಸುವ ಮಿತಿಯನ್ನು ಹೊಂದಿದೆ. ಆದರೆ, ಫೆಬ್ರವರಿ ತಿಂಗಳಿನಲ್ಲಿಯೇ, ವಾತಾವರಣ ಮತ್ತು ಸಾಗರದ ಅಥವಾ ವಿಳಂಬವಾದ ಆಗಮನವನ್ನು ಊಹಿಸಲು, ಜಾಗತಿಕ ಕಾಲೋಚಿತ ಮುನ್ಸೂಚನಾ ಮಾದರಿ ಬಳಸಲು ಸಾಧ್ಯ ಎಂಬುದನ್ನು ಪ್ರತಿಪಾದಿಸುವುದೇ ನಮ್ಮ ಅಧ್ಯಯನದ ಪ್ರಾಥಮಿಕ ಉದ್ದೇಶ ಎನ್ನುತ್ತಾರೆ ಭಾರತೀಯ ಉಷ್ಣವಲಯದ ಹವಾಮಾನವಿಜ್ಞಾನ ಸಂಸ್ಥೆಯ ವಿಜ್ಞಾನಿ. ಭಾರತದಲ್ಲಿ ಮಳೆಗಾಲವು ವಾತಾವರಣದ ಬದಲಾವಣೆಗಳ ಮೇಲೆ ಮಾತ್ರವಲ್ಲದೆ, ಎಲ್ ನಿನೋ ದಕ್ಷಿಣ ಅಸಿಲೇಶನ್ಸ್, ಹಿಂದೂ ಮಹಾಸಾಗರ ದ್ವಿಧ್ರುವಿ ವಿದ್ಯಮಾನ, ಉತ್ತರ ಅಟ್ಲಾಂಟಿಕ್ ಅಸಿಲೇಸನ್ಸ್ ಮತ್ತು ಪೆಸಿಫಿಕ್ ದಶವಾರ್ಷಿಕ ಅಸಿಲೇಶನ್ ಗಳಂತಹ ಜಾಗತಿಕ ಹವಾಮಾನ ವಿದ್ಯಮಾನಗಳ ಮೇಲೆ ಅವಲಂಬಿತವಾಗಿದೆ. ಇವು ಹವಾಮಾನ ಬದಲಾವಣೆಯ ವಿಶಿಷ್ಟ ಮಾದರಿಗಳಾಗಿದ್ದು, ತುಲನಾತ್ಮಕವಾಗಿ ದೀರ್ಘಾವಧಿಯ ನಂತರ ಪುನರಾವರ್ತಿಸುತ್ತವೆ. ಹವಾಮಾನ ಮುನ್ಸೂಚನೆಗಾಗಿ ಬಳಸಲ್ಪಡುವ ಕಂಪ್ಯೂಟರ್ ಆಧಾರಿತ ಹವಾಮಾನ ಮಾದರಿಗಳಾದ 'ಜಾಗತಿಕ ಪ್ರಸರಣ ಮಾದರಿ'ಗಳನ್ನು ಬಳಸುವ ಮೂಲಕ, ಸಂಶೋಧಕರು ಈ ಎಲ್ಲಾ ಜಾಗತಿಕ ಹವಾಮಾನ ವಿದ್ಯಮಾನಗಳನ್ನು ಅರ್ಥೈಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.

ಒಂದು ಕುತೂಹಲಕಾರಿ ಅಂಶ ಏನಂದರೆ, ಮಳೆಗಾಲವು ಕೇರಳದಲ್ಲಿ ಆಗಮಿಸಿದಾಗ, ಭಾರತೀಯ ಪರ್ಯಾಯ ದ್ವೀಪದ ಮೇಲಿನ ಉಷ್ಣಾಂಶವು, ಹಿಂದೂ ಮಹಾಸಾಗರದ ಮೇಲಿನ ಉಷ್ಣಾಂಶಕ್ಕಿಂತ ಹೆಚ್ಚಿನದ್ದಾಗಿರುತ್ತದೆ. ಇತರ ಸಮಯಗಳಲ್ಲಿ, ಭಾರತೀಯ ಪರ್ಯಾಯ ದ್ವೀಪದ ಮೇಲೆ ಉಷ್ಣತೆಯು ಸಮುದ್ರದ ಮೇಲಿನ ಉಷ್ಣಾಂಶಕ್ಕಿಂತ ಕಡಿಮೆಯಿರುತ್ತದೆ. ಸಂಶೋಧಕರು ಮುಂಗಾರಿನ ಮುನ್ಸೂಚನೆಗಾಗಿ 'ಉಷ್ಣಾಂಶದ ವಿಮೋಮತೆ' ಎಂಬ ಈ ವಿದ್ಯಮಾನವನ್ನು ತಮ್ಮ ಸಂಶೋಧನಾ ಮಾದರಿಗಳಲ್ಲಿ ಬಳಸಿದ್ದಾರೆ. ಈ ಅಧ್ಯಯನದಲ್ಲಿ ಸಂಶೋಧಕರು,ಕೇಂದ್ರ ಮತ್ತು ರಾಷ್ಟ್ರೀಯ ಪರಿಸರ ಮುನ್ಸೂಚನಾ ಕೇಂದ್ರಗಳ ದತ್ತಾಂಶವನ್ನು ಬಳಸಿದರು. ೨೬ ವರ್ಷಗಳ ಅವಧಿಯಲ್ಲಿ (೧೯೮೨ ರಿಂದ ೨೦೦೮) ಮುಂಗಾರಿನ ಆರಂಭದ ದಿನಾಂಕದ ಬಗ್ಗೆ ತಮ್ಮ ನಿಖರವಾದ ಊಹೆಯನ್ನು ಭಾರತೀಯ ಹವಾಮಾನ ಸಂಸ್ಥೆಯು ದತ್ತಾಂಶದಲ್ಲಿನ ನಿಜವಾದ ದಿನಾಂಕದೊಂದಿಗೆ ತಾಳೆ ಹಾಕಿದರು. ಈ ಅಧ್ಯಯನಗಳು ಊಹಿಸಿದ ಮುಂಗಾರಿನ ಆಗಮನದ ಸರಾಸರಿ ದಿನಾಂಕ ಮೇ ೩೦ ಎಂದಿದ್ದರೆ, ಭಾರಾತೀಯ ಹವಾಮಾನ ಸಂಸ್ಥೆಯು ಸರಾಸರಿ ದಿನಾಂಕವು ಜೂನ್ ೨ ಎಂದಾಗಿತ್ತು. ಮತ್ತೂ ಹೆಚ್ಚು ಕುತೂಹಲಕಾರಿಯಾದ ಅಂಶವೆಂದರೆ, ಈ ಹೊಸ ಮಾದರಿಯು ಮುಂಗಾರಿನ ಆಗಮನದಲ್ಲಿ ಆಗಬಹುದಾದ ವ್ಯತ್ಯಾಸವನ್ನು ಗಮನಾರ್ಹ ನಿಖರತೆಯೊಂದಿಗೆ ಪ್ರಸ್ತುತಪಡಿಸಿತ್ತು.

ಜಾಗತಿಕ ಸಮುದ್ರದ ಮೇಲ್ಮೈ ತಾಪಮಾನವು, ಭಾರತದಲ್ಲಿ ಮುಂಗಾರಿನ ಆಗಮನದ ಮೇಲೆ, ಗಣನೀಯ ಪ್ರಮಾಣದ ಪ್ರಭಾವವನ್ನು ಬೀರುತ್ತದೆ ಎಂದೂ ಸಂಶೋಧಕರು ಗಮನಿಸಿದರು. ಪೆಸಿಫಿಕ್ ಮತ್ತು ಹಿಂದೂ ಮಹಾಸಾಗರದ ಮೇಲೆ ತಾಪಮಾನವು ಹೆಚ್ಚಿದಾಗ, ಭಾರತದಲ್ಲಿ ಮುಂಗಾರು ವಿಳಂಬವಾಗುತ್ತದೆ ಎಂಬುದನ್ನೂ ಕಂಡುಕೊಂಡರು. ಪ್ರಸ್ತುತ ಮುಂಗಾರಿನ ಆಗಮನದಲ್ಲಿ ಆಗಬಹುದಾದ ವ್ಯತ್ಯಾಸವನ್ನು ಗುರುತಿಸಲು, ಹೆಚ್ಚಾಗಿ ಎಲ್-ನಿನೋ ಮತ್ತು ದಕ್ಷಿನ ಅಸಿಲೇಶನ್ಸ್ ಮೇಲೆ ಅವಲಂಬಿತರಾಗಿದ್ದಾರೆ. ಇಂತಹ ಮತ್ತೂ ಹೆಚ್ಚು ನಿಯತಾಂಕಗಳನ್ನು ಈ ಮಾದರಿಯಲ್ಲಿ ಸೇರ್ಪಡೆಗೊಳಿಸಿದರೆ, ಈ ಮುನ್ಸೂಚನಾ ಮಾದರಿಯ ನಿಖರತೆಯನ್ನು ಸುಧಾರಿಸುವುದು ಸಾಧ್ಯ. ಇದೇ ನಿಟ್ಟಿನಲ್ಲಿ ಸಂಶೋಧಕರು ಕಾರ್ಯಪ್ರವೃತರಾಗಿದ್ದಾರೆ. (ಪ್ರಜಾವಾಣಿಯ ಗುಬ್ಬಿ ಲ್ಯಾಬ್ಸ್ ನಿಂದ)

ನೋಡಿ

ಗ್ರೇಟಾ ಥನ್‍ಬರ್ಗ್

ಉಲ್ಲೇಖ

??

Tags:

ವಾಯುಗುಣ

🔥 Trending searches on Wiki ಕನ್ನಡ:

ಸಾಮ್ರಾಟ್ ಅಶೋಕಚಾರ್ಲಿ ಚಾಪ್ಲಿನ್ನದಿತ. ರಾ. ಸುಬ್ಬರಾಯಮಗುಯುಗಾದಿಚುನಾವಣೆಸಾಮಾಜಿಕ ಸಮಸ್ಯೆಗಳುಚೆನ್ನಕೇಶವ ದೇವಾಲಯ, ಬೇಲೂರುಕನ್ನಡ ಸಂಧಿಕಾಮಅದಿಲಾಬಾದ್ ಜಿಲ್ಲೆಕೋವಿಡ್-೧೯ಕಾಶ್ಮೀರದ ಬಿಕ್ಕಟ್ಟುಸ್ವಾಮಿ ವಿವೇಕಾನಂದಶಿವಪಿ.ಲಂಕೇಶ್ಅಂಬಿಗರ ಚೌಡಯ್ಯಸ್ಯಾಮ್‌ಸಂಗ್‌ರಚಿತಾ ರಾಮ್ಹೊಯ್ಸಳ ವಿಷ್ಣುವರ್ಧನಕಾಜೊಲ್ಏರ್ ಇಂಡಿಯಾ ಉಡ್ಡಯನ 182ವಿನಾಯಕ ಕೃಷ್ಣ ಗೋಕಾಕಆದೇಶ ಸಂಧಿದಕ್ಷಿಣ ಕನ್ನಡರಾಯಚೂರು ಜಿಲ್ಲೆಸಂತಾನೋತ್ಪತ್ತಿಯ ವ್ಯವಸ್ಥೆಭಾರತೀಯ ಧರ್ಮಗಳುಕನ್ನಡದಲ್ಲಿ ಮಹಿಳಾ ಸಾಹಿತ್ಯಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಂವತ್ಸರಗಳುಅಮೇರಿಕ ಸಂಯುಕ್ತ ಸಂಸ್ಥಾನಆಧುನಿಕತಾವಾದಚಿಕ್ಕ ದೇವರಾಜಏಷ್ಯನ್ ಕ್ರೀಡಾಕೂಟಭಾಷಾ ವಿಜ್ಞಾನರುಮಾಲುಗೂಗಲ್ಸಿಂಧೂತಟದ ನಾಗರೀಕತೆವಿತ್ತೀಯ ನೀತಿತುಂಬೆಗಿಡಏರೋಬಿಕ್ ವ್ಯಾಯಾಮಕನ್ನಡ ರಂಗಭೂಮಿಭಾರತದ ಸರ್ವೋಚ್ಛ ನ್ಯಾಯಾಲಯಗುಣ ಸಂಧಿಬೆಳಗಾವಿಮೋಕ್ಷಗುಂಡಂ ವಿಶ್ವೇಶ್ವರಯ್ಯವ್ಯಕ್ತಿತ್ವಕೇಂದ್ರಾಡಳಿತ ಪ್ರದೇಶಗಳುಪೌರತ್ವಸಮಾಜ ವಿಜ್ಞಾನಕನ್ನಡ ಸಾಹಿತ್ಯ ಸಮ್ಮೇಳನವಿಮರ್ಶೆಜ್ಞಾನಪೀಠ ಪ್ರಶಸ್ತಿಸೀತಾ ರಾಮವಿಶ್ವ ಮಹಿಳೆಯರ ದಿನಬಾಬು ಜಗಜೀವನ ರಾಮ್ಭಾರತದ ಧಾರ್ಮಿಕ ಮತ್ತು ಸಾಮಾಜಿಕ ಸುಧಾರಕರುಇಂದಿರಾ ಗಾಂಧಿನಾಗಚಂದ್ರಪ್ರಜಾಪ್ರಭುತ್ವಜಶ್ತ್ವ ಸಂಧಿಜನಪದ ಕಲೆಗಳುಆಸ್ಪತ್ರೆಹರಿಹರ (ಕವಿ)ವಾಣಿಜ್ಯ ಬ್ಯಾಂಕ್ಮೂಲಭೂತ ಕರ್ತವ್ಯಗಳುಅನಂತ್ ಕುಮಾರ್ ಹೆಗಡೆಸಿಂಧನೂರುಕರ್ನಾಟಕದ ಇತಿಹಾಸನವರತ್ನಗಳುಕಾಳಿಕೈಗಾರಿಕೆಗಳುಕಾವ್ಯಮೀಮಾಂಸೆಶಾಲಿವಾಹನ ಶಕೆಕ್ಯಾರಿಕೇಚರುಗಳು, ಕಾರ್ಟೂನುಗಳು🡆 More