ತೆನಾಲಿ ರಾಮಕೃಷ್ಣ: ತೆಲುಗು ಕವಿ

ತೆನಾಲಿ ರಾಮಕೃಷ್ಣ (ಕ್ರಿ.ಶ ೧೫೧೪-೧೫೭೫) (తెలుగు:తెనాలి రామకృష్ణ) ಗಾರ್ಲಪಾಡು ಎಂಬ ಹಳ್ಳಿಯಲ್ಲಿ ಜನಿಸಿದನು.http://yousigma.com/biographies/Tenali%20Ramakrishna.html ಮೂಲತಃ ಆಂಧ್ರಪ್ರದೇಶದವನು.

ಈತನ ತಂದೆ ಗಾರ್ಲಪಾಟಿ ರಾಮಯ್ಯ ತಾಯಿ ಲಕ್ಷ್ಮಾಂಬ. ಇವನು ವಿಕಟಕವಿ ಎಂದೇ ಪ್ರಸಿದ್ಧಾ.ಇವನು ಬುದ್ಧಿವಂತ ಹಾಗೂ ಒಳ್ಳೆ ಮನೋಭಾವವುಳ್ಳವನಾಗಿದ್ದನು.ಇವನು ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣದೇವರಾಯರ ಆಸ್ಥಾನದಲ್ಲಿದ್ದ ಅಷ್ಟದಿಗ್ಗಜರಲ್ಲಿ ಒಬ್ಬನಾಗಿದ್ದನು.ತೆನಾಲಿ ರಾಮಕೃಷ್ಣನು ಹಿಂದುಧರ್ಮವನ್ನು ಕುರಿತು ಅನೇಕ ಪುಸ್ತಕಗಳನ್ನು ಬರೆದಿದ್ದಾನೆ. ತೆನಾಲಿ ರಾಮಕೃಷ್ಣನ ಮೂಲ ಹೆಸರು ರಾಮಲಿಂಗ. ಇವನು ಹುಟ್ಟಿನಿಂದ ಶೈವ ಧರ್ಮದವನಾಗಿದ್ದ, ಕ್ರಮೇಣ ವೈಷ್ಣವ ಧರ್ಮಕ್ಕೆ ಪರಿವರ್ತನೆಗೊಂಡು ತನ್ನ ನಾಮವನ್ನು ರಾಮಕೃಷ್ಣ ಎಂದು ಬದಲಾಯಿಸಿಕೊಂಡನು. ಇವನು ತೆಲುಗು ಭಾಷೆಯಲ್ಲಿ ಮಾತ್ರವಲ್ಲದೆ ಕನ್ನಡ, ತಮಿಳು ಹಾಗು ಮಳಯಾಳಂ ಭಾಷೆಗಳಲ್ಲಿಯೂ ಸಹ ಪ್ರಸಿದ್ಧ ವಿದ್ವಾಂಸನಾಗಿದ್ದನು.

ತೆನಾಲಿ ರಾಮಕೃಷ್ಣ
ಜನನಗಾರ್ಲಪಾಡು,ಗುಂಟೂರು ಜಿಲ್ಲೆ,ಆಂಧ್ರ ಪ್ರದೇಶ,ಭಾರತ
ಮರಣಹಂಪಿ
ವೃತ್ತಿಹಾಸ್ಯ ಕವಿ
ಭಾಷೆತೆಲುಗು
ರಾಷ್ಟ್ರೀಯತೆಭಾರತೀಯ
ಕಾಲ೧೬ನೇ ಶತಮಾನ

ಇತಿಹಾಸ

ತೆನಾಲಿ ರಾಮಲಿಂಗ ೧೬ನೇ ಶತಮಾನದ ಆದಿಯಲ್ಲಿ ಗಾರ್ಲಪಾಡು ಎಂಬ ಹಳ್ಳಿಯಲ್ಲಿ ವಾಸವಾಗಿದ್ದ ಗಾರ್ಲಪಾಟಿ ರಾಮಯ್ಯ ಹಾಗೂ ಲಕ್ಷ್ಮಾಂಬ ಎಂಬ ಬ್ರಾಹ್ಮಣ ದಂಪತಿಗಳಿಗೆ ಜನಿಸಿದನು. ಆದರೆ ಈತ ತೆನಾಲಿಯಲ್ಲಿ ಹುಟ್ಟಿದ್ದಾನೆ ಎಂದು ಬಾಹಳ ಜನರು ನಂಬಿದ್ದಾರೆ. ಈತನ ತಂದೆ ತೆನಾಲಿಯಲ್ಲಿದ್ದ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು. ರಾಮಕೃಷ್ಣ ಚಿಕ್ಕವನಾಗಿದ್ದಾಗಲೇ ತನ್ನ ತಂದೆಯನ್ನು ಕಳೆದುಕೊಂಡನು. ಆನಂತರ ತನ್ನ ತಾಯಿ ಲಕ್ಷ್ಮಾಂಬ ತನ್ನ ತವರೂರಾದ ತೆನಾಲಿಯಲ್ಲಿನ ತನ್ನ ಅಣ್ಣನ ಮನೆಯಲ್ಲಿ ವಾಸವಾಗಿದ್ದಳು. ರಾಮಕೃಷ್ಣನು ತನ್ನ ಮಾವನ ಊರಾದ ತೆನಾಲಿಯಲ್ಲಿಯೇ ಬೆಳೆದಿದ್ದರಿಂದ ಈತ ತೆನಾಲಿ ರಾಮಕೃಷ್ಣ ಎಂದೇ ಬಹು ಪರಿಚಿತನಾದ. ಈತನನ್ನು ತೆನಾಲಿ ರಾಮಲಿಂಗ ಎಂಬ ಶೈವ ಹೆಸರಿನಿಂದಲೂ ಕರೆಯುತ್ತಿದ್ದರು. ಈತ ನಂತರ ವೈಷ್ಣವ ಧರ್ಮಕ್ಕೆ ಪರಿರ್ವತನೆಗೊಂಡನು. ರಾಮಕೃಷ್ಣನು ತನ್ನ ಬಾಲ್ಯದಲ್ಲಿ ಯಾವುದೇ ವ್ಯವಸ್ಥಿತವಾದ ಶಿಕ್ಷಣವನ್ನು ಪಡೆದಿರಲಿಲ್ಲ. ತಾನು ಬೆಳಗ್ಗಿನಿಂದ ರಾತ್ರಿಯವರೆಗು ತನ್ನ ಗೆಳೆಯರೊಂದಿಗೆ ಕಾಲ ಕಳೆಯುತ್ತಿದ್ದ. ತಾನು ಹತ್ತು ವರ್ಷ ವಯಸ್ಕನಾದಾಗ ತನಗೆ ವಿದ್ಯಾಭ್ಯಾಸದ ಮಹತ್ವ ಏನೆಂಬುದು ಅರಿವಾಯಿತು. ಆಗ ರಾಮಕೃಷ್ಣನು ಅನೇಕ ಪಂಡಿತರ ಬಳಿಗೆ ಹೋದನು. ಒಂದು ಕಥೆಯ ಪ್ರಕಾರ ವೈಷ್ಣವ ಪಂಡಿತರು ರಾಮಕೃಷ್ಣನನ್ನು ತಮ್ಮ ಅನುಯಾಯಿಯಾಗಿ ಸ್ವೀಕರಿಸಲು ತಿರಸ್ಕರಿಸಿದರು. ಆನಂತರ ತಾನು ಗೊತ್ತುಗುರಿಯಿಲ್ಲದೆ ತಿರುಗುತ್ತಿದ್ದನು. ಒಮ್ಮೆ ಒಬ್ಬ ಸಾಧುವನ್ನು ಭೇಟಿಯಾದಾಗ ಆತ ಕಾಳಿದೇವಿಯನ್ನು ಪೂಜಿಸು ಎಂದನು. ಸಾಧು ಹೇಳಿದಂತೆ ರಾಮಕೃಷ್ಣನು ಮಂತ್ರವನ್ನು ಹನ್ನೊಂದು ಕೋಟಿ ಹನ್ನೊಂದು ಭಾರಿ ಭಕ್ತಿಯಿಂದ ಪಟಿಸಿದನು. ಆಗ ಕಾಳಿದೇವಿಯು ಪ್ರತ್ಯಕ್ಷಳಾದಳು. ಸಾವಿರ ತಲೆಗಳುಳ್ಳ ಕಾಳಿದೇವಿಯನ್ನು ನೋಡಿದ ರಾಮಕೃಷ್ಣನು ಆಕೆಯ ಪಾದಗಳಿಗೆ ನಮಸ್ಕರಿಸಿ ಜೋರಾಗಿ ನಗೆದನು. ಕಾಳಿದೇವಿಯು ತಾನು ನಕ್ಕ ಕಾರಣ ಕೇಳಿದಳು. ಆಗ ರಾಮಕೃಷ್ಣ "ಕ್ಷಮಿಸು ತಾಯಿ,ನಮಗೆ ನೆಗಡಿ ಬಂದಾಗ ಮೂಗನ್ನು ಒರೆಸಲು ಎರಡು ಕೈಗಳು ಸಾಲುವುದಿಲ್ಲ ಸಾವಿರ ತಲೆಗಳುಳ್ಳ ನಿನಗೆ ನೆಗಡಿ ಬಂದರೆ ಎರಡು ಕೈಗಳು ಹೇಗೆ ಸಾಲುತ್ತವೆ"ಎಂದನು. ರಾಮಕೃಷ್ಣನ ಹಾಸ್ಯ ಕೌಶಲ್ಯಗಳನ್ನು ಮೆಚ್ಚಿದ ಕಾಳಿದೇವಿಯು "ನೀನು ಶ್ರೀಕೃಷ್ಣದೇವರಾಯನ ಆಸ್ಥಾನದಲ್ಲಿ ಒಬ್ಬ ಪ್ರಸಿದ್ಧ ಹಾಸ್ಯ ಕವಿ ಆಗುತ್ತೀಯ" ಎಂದು ಆಶಿರ್ವದಿಸಿದಳು. ತದನಂತರ ರಾಮಕೃಷ್ಣನು ಭಗವತ ಮೇಳ ಎಂಬ ಪ್ರಸಿದ್ಧ ತಂಡವನ್ನು ಸೇರಿಕೊಂಡನು. ಒಮ್ಮೆ ಈ ತಂಡವು ತಮ್ಮ ಪ್ರದರ್ಶನ ನೀಡಲು ವಿಜಯನಗರಕ್ಕೆ ಬಂದಿದ್ದರು. ಆಗ ಶ್ರೀಕೃಷ್ಣದೇವರಾಯ ಹಾಗೂ ಅಲ್ಲಿನ ಜನ ರಾಮಕೃಷ್ಣನ ಪ್ರದರ್ಶನವನ್ನು ಕಂಡು ಆಕರ್ಷಿತರಾದರು. ಶ್ರೀಕೃಷ್ಣದೇವರಾಯನು ರಾಮಕೃಷ್ಣನ ಹಾಸ್ಯ ಕೌಶಲ್ಯಗಳನ್ನು ಮೆಚ್ಚಿ ತನ್ನ ಆಸ್ಥಾನದಲ್ಲಿ ರಾಮಕೃಷ್ಣನನ್ನು ಹಾಸ್ಯ ಕವಿಯಾಗಿ ನೇಮಿಸಿ, ಅಷ್ಟದಿಗ್ಗಜರ ಗುಂಪಿನಲ್ಲಿ ಸ್ಥಾನ ನೀಡಿದ. ಈ ರೀತಿಯಾಗಿ ಅಷ್ಟದಿಗ್ಗಜರ ಗುಂಪು ಎಂಟು ವಿದ್ವಾಂಸರಿಂದ ಕೂಡಿ ಸಂಪೂರ್ಣವಾಯಿತು. ಕ್ರಮೇಣ ರಾಮಕೃಷ್ಣನು ಒಬ್ಬ ಪ್ರಸಿದ್ಧ ವಿದೂಷಕ ಎಂಬ ಖ್ಯಾತಿ ಪಡೆದನು. ರಾಮಕೃಷ್ಣನು ತನ್ನ ರಣನೀತಿ ಹಾಗು ಸಮಯಪ್ರಜ್ಞೆಯಿಂದ ಶ್ರೀಕೃಷ್ಣದೇವರಾಯನ ಸಾಮ್ರಾಜ್ಯವನ್ನು ವೈರಿಗಳ ಆಪತ್ತಿನಿಂದ ಅನೇಕ ಬಾರಿ ಕಾಪಾಡಿದನು ಎಂಬ ಮಾಹಿತಿ ದಾಖಲಾತಿಗಳಿಂದ ಲಭ್ಯವಿದೆ. ರಾಮಕೃಷ್ಣನು ವಿಜಯನಗರ ಸಾಮ್ರಾಜ್ಯವನ್ನು ಡೆಹಲಿ ಸುಲ್ತಾನರಿಂದ ಕಾಪಾಡಿದ ಎಂಬುದು ಒಂದು ಪ್ರಸಿದ್ಧ ಕಥೆಯಲ್ಲಿ ವಿವರಿಸಲಾಗಿದೆ.

ಸಾಹಿತ್ಯ ಗ್ರಂಥಗಳು

ತೆನಾಲಿ ರಾಮಕೃಷ್ಣನು ಬಹಳ ಬುದ್ಧಿವಂತನಾಗಿದ್ದನು. ತಾನು ಶ್ರೀಕೃಷ್ಣದೇವರಾಯನ ಆಸ್ಥಾನಕವಿಯಾಗಿದ್ದಾಗಲೇ ಬಹಳ ಖ್ಯಾತಿಯನ್ನು ಪಡೆದನು. ರಾಮಕೃಷ್ಣನ ರಚನೆಗಳು ಪ್ರಬಂಧ ಶೈಲಿಯಲ್ಲಿದ್ದು ಅದರಲ್ಲಿ ಹಾಸ್ಯ ಹಾಗು ವ್ಯಂಗ್ಯ ರಸಗಳು ಕೂಡಿತ್ತು. ರಾಮಕೃಷ್ಣನು ರಚಿಸಿದ ಪ್ರಮುಖ ಕಾವ್ಯ "ಪಾಂಡುರಂಗ ಮಹಾತ್ಯಮು".https://www.thehindu.com/society/history-and-culture/panduranga-mahatyam-classic-work-revisited/article17867464.ece ಈ ಕಾವ್ಯವು ಬಹಳ ಶಕ್ತಿಯುತ ಪದಗಳಿಂದ ರಚಿಸಲಾಗಿತ್ತು. ಈ ಕಾವ್ಯವು ತೆಲುಗು ಸಾಹಿತ್ಯದ ಪಂಚ ಮಹಾಕಾವ್ಯಗಳಲ್ಲಿ ಒಂದು. ಈ ಕಾವ್ಯದಲ್ಲಿ ಪಾಂಡುರಂಗ ಎಂಬ ಹೆಸರಿನಿಂದ ಕರೆಯಲ್ಪಡುವ ಪಂಢರಪುರ ಶಿವನ ಶಿಲ್ಪದ ಬಗ್ಗೆ ಅನೇಕ ಮಾಹಿತಿ ಇದೆ. ಈ ವಿಗ್ರಹವನ್ನು ಸಂತ ಪಾಂಡರಿಕ ಪವಿತ್ರ ಉದ್ದೇಶಕ್ಕಾಗಿ ಪ್ರತ್ಯೇಕವಾಗಿ ಇಟ್ಟಿದ್ದನು.ನಿಗಮ ಶರ್ಮ ಎಂಬ ಬ್ರಾಹ್ಮಣನು ತನ್ನ ಜೀವನವನ್ನು ಕಲಹದಲ್ಲಿ ಕಳೆದು ಪಂಢರಪುರ ತನ್ನ ಕೊನೆ ಉಸಿರು ಬಿಟ್ಟನು. ಆಗ ಯಮ ಮತ್ತು ವಿಷ್ಣುವಿನ ಸೇವಕರ ಮಧ್ಯೆ ವಾಗ್ವಾದ ನಡೆಯುತ್ತದೆ. ಯಮನ ಸೇವಕರು ನಿಗಮ ಒಬ್ಬ ದುಷ್ಟ ಅದ್ದರಿಂದ ಅವನನ್ನು ನರಕಕ್ಕೆ ಕರೆದೊಯ್ಯಬೇಕೆಂದು ವಾದಿಸಿದರೆ ವಿಷ್ಣುವಿನ ಸೇವಕರು ನಿಗಮ ಒಂದು ಪವಿತ್ರ ಸ್ಥಳದಲ್ಲಿ ಸತ್ತಿದ್ದರಿಂದ ಸ್ವರ್ಗಕ್ಕೆ ಬರಬೇಕು ಎಂದು ವಾದಿಸಿದರು. ಕೊನೆಗೆ ನ್ಯಾಯವು ವಿಷ್ಣುವಿನ ಸೇವಕರ ಪರವಾಯಿತು. ತೆನಾಲಿ ರಾಮನ ಪಾಂಡುರಂಗ ಮಹಾತ್ಯಮು ಕಾವ್ಯದ ಮೂಲವನ್ನು ಸ್ಕಾಂದ ಪುರಾಣದಿಂದ ಆರಿಸಿಕೊಳ್ಳಲಾಗಿದೆ. ಈ ಕಾವ್ಯದಲ್ಲಿ ಪಂಡುರಂಗನ ಭಕ್ತರ ಬಗ್ಗೆ ಅನೇಕ ಕಥೆಗಳಿವೆ. ತೆನಾಲಿ ರಾಮನು ನಿಗಮಶರ್ಮ ಅಕ್ಕ ಎಂಬ ಕಾಲ್ಪನಿಕ ಪಾತ್ರವನ್ನು ಸೃಷ್ಟಿಸಿ ಆಕೆಯ ಬಗ್ಗೆ ಒಂದು ಕಥೆಯನ್ನು ಬರೆದ. ತೆನಾಲಿ ಯಾವುದೆ ರೀತಿಯ ಪೂರ್ವಸಿದ್ಧತೆ ಇಲ್ಲದೆ ಅನೇಕ ಪದ್ಯಗಳನ್ನು ಬರೆದಿದ್ದು ಇದನ್ನು "ಚಾಟುವು" ಎಂದು ಕರೆಯಲ್ಪಡುತ್ತದೆ. "ಘುಟಿಕಾಚಲ ಮಹಾತ್ಯಂ" ಎಂಬ ಕಾವ್ಯವೂ ಸಹ ತೆನಾಲಿ ರಾಮಕೃಷ್ಣನಿಂದ ರಚಿಸಲ್ಪಟ್ಟಿದ್ದು ಈ ಕಾವ್ಯವು ತಮಿಳುನಾಡಿನ ವೇಲೂರು ಮಂಡಳಿಯಲ್ಲಿನ ಘುಟಿಕಾಚಲ ಕ್ಷೇತ್ರದಲ್ಲಿ ಇರುವ ಶ್ರೀ ನರಸಿಂಹಸ್ವಾಮಿಯನ್ನು ಸ್ಮರಿಸುತ್ತ ಬರೆದ ಕಾವ್ಯ. ತೆನಾಲಿ ರಾಮಕೃಷ್ಣನು ರಚಿಸಿರುವ ಪದ್ಯಗಳಲ್ಲಿ ಮೂರು ಪದ್ಯಗಳು ಇಂದೂ ಸಹ ಲಭ್ಯವಿದೆ. ತನ್ನ ಮೊದಲನೆಯ ಪದ್ಯವಾದ "ಉದ್ಭಟಾರಾಧ್ಯ ಚರಿತಮು" ಒಬ್ಬ ಶೈವ ಗುರುವಿನ ಕುರಿತಾಗಿದ್ದು,ವಾರಣಾಸಿಯ ಪವಿತ್ರತೆಯ ಬಗ್ಗೆ ಸಹ ಬರೆದಿದ್ದನೆ. ತೆನಾಲಿ ರಾಮಕೃಷ್ಣನು ಶೈವಧರ್ಮಕ್ಕೆ ಬಹಳ ಹತ್ತಿರವಾದ್ದದರಿಂದ ಆತನನ್ನು ತೆನಾಲಿ ರಾಮಲಿಂಗ ಎಂದು ಸಹ ಕರೆಯಲ್ಪಡುತ್ತದೆ. ಆದರೂ ಸಹ ತನಗೆ ವೈಷ್ಣವ ಧರ್ಮದ ಬಗ್ಗೆ ಹೆಚ್ಚಿನ ಭಕ್ತಿ ಇತ್ತು ಎಂಬುದನ್ನು "ಪಾಂಡುರಂಗ ಮಹಾತ್ಯಮು" ಕಾವ್ಯದಲ್ಲಿ ವ್ಯಕ್ತಪಡಿಸಿದ್ದಾನೆ.ಈತನಿಗೆ ವಿಕಟಕವಿ ಎಂಬ ಬಿರುದಿನ ಜೊತೆಗೆ ಈತನ ರಚನೆಗಳಿಗಾಗಿ "ಕುಮಾರಭಾರತಿ"ಎಂಬ ಬಿರುದನ್ನು ಸಹ ನೀಡಲಾಗಿದೆ.

ಖ್ಯಾತ ಸಂಸ್ಕೃತಿಯಲ್ಲಿ

೧.ತೆನಾಲಿ ರಾಮಕೃಷ್ಣ, ೧೯೫೬ರಲ್ಲಿ ಬಂದ ಒಂದು ಖ್ಯಾತಿಯ ತೆಲುಗು ಸಿನಿಮಾ.https://www.imdb.com/title/tt0259631/ ಈ ಚಿತ್ರವನ್ನು ಬಿ.ಎಸ್ ರಂಗ ಅವರು ನಿರ್ದೆಶನ ಮಾಡಿದ್ದರು.ಈ ಸಿನಿಮಾ ತಮಿಳು ಭಾಷೆಯಲ್ಲಿ "ತೆನಾಲಿ ರಾಮನ್" ಎಂಬ ಹೆಸರಿನಿಂದ ಬಂದಿತ್ತು.ಈ ಎರಡು ಚಿತ್ರಗಳಲ್ಲಿ ಎನ್.ಟಿ ರಾಮಾರಾವ್ ಅವರು ಶ್ರೀಕೃಷ್ಣ ದೇವರಾಯನ ಪಾತ್ರವನ್ನು ಪೋಷಿಸಿದ್ದಾರೆ. ತೆನಾಲಿ ರಾಮಕೃಷ್ಣನ ಪಾತ್ರವನ್ನು ತೆಲುಗಿನಲ್ಲಿ ಎ.ನಾಗೇಶ್ವರ ರಾವ್ ಹಾಗು ತಮಿಳಿನಲ್ಲಿ ಶಿವಾಜಿ ಗಣೀಶನ್ ಅವರು ಪೋಶಿಸಿದ್ದಾರೆ.

೨.ಹಾಸ್ಯರತ್ನ ರಾಮಕೃಷ್ಣ, ೧೯೮೨ರಲ್ಲಿ ಬಂದ ಕನ್ನಡ ಚಿತ್ರ.ಈ ಚಿತ್ರವು ಕೂಡ ಬಿ.ಎಸ್.ರಂಗಾ ಅವರಿಂದ ನಿರ್ದೇಶಿಸಲ್ಪಟ್ಟಿತು.ಈ ಚಿತ್ರದಲ್ಲಿ ಪ್ರಸಿದ್ಧ ಕಲಾವಿದರಾದ ಅನಂತ್ ನಾಗ್ ಹಾಗು ಆರತಿಯವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.ತೆನಾಲಿ ರಾಮಕೃಷ್ಣನ ಪಾತ್ರವನ್ನು ಅನಂತ್ ನಾಗ್ ಅವರು ಪೋಷಿಸಿದ್ದಾರೆ.

೩.ತೆನಾಲಿ ರಾಮ,೧೯೯೦ರಲ್ಲಿ ದೂರದರ್ಶನ ವಾಹಿನಿಯಲ್ಲಿ ಪ್ರಸ್ತಾರವಾಗುತ್ತಿದ್ದ ಒಂದು ಹಿಂದಿ ಧಾರವಾಹಿ.ಇದನ್ನು ಟಿ.ಎಸ್ ನಾಗಾಭರಣ ಅವರು ನಿರ್ದೇಶನ ಮಾಡಿದ್ದರು.ಈ ಧಾರವಾಹಿಯಲ್ಲಿ ವಿಜಯ ಕಶ್ಯಪ್ ಅವರು ಪ್ರಮುಖ ಪಾತ್ರವನ್ನು ಪೋಷಿಸಿದ್ದರು.

೪.ಡಿ ಅಡ್ವೆಂಚರ್ಸ್ ಆಫ್ ತೆನಾಲಿ ರಾಮನ್,ಎಂಬ ಸಚೇತನ ಶ್ರೇಣಿ ೨೦೦೩ರಲ್ಲಿ ಕಾರ್ಟೂನ್ ನೆಟ್ವರ್ಕ್(ಭಾರತ)ರವರಿಂದ ಸೃಷ್ಟಿಸಲ್ಪಟ್ಟಿತು.

೫.ತೆನಾಲಿರಾಮನ್,೨೦೧೪ರಲ್ಲಿ ಬಂದ ತಮಿಳು ಸಿನಿಮಾ. ಈ ಚಿತ್ರದಲ್ಲಿ ತೆನಾಲಿ ರಾಮನ್ ಹಾಗು ಕೃಷ್ಣದೇವರಾಯ ಈ ಎರಡೂ ಪಾತ್ರಗಳಲ್ಲಿ ವಡಿವೇಲು ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಮುಖ್ಯವಾಗಿ ರಾಮಕೃಷ್ಣನ ಹಾಸ್ಯ ಪ್ರಧಾನವಾಗಿದೆ.

6.ತೆನಾಲಿ ರಾಮಕೃಷ್ಣ ಅವರಾ ಸಹಸಗಲನು ಧೀರ ಯೆಂಬಾ ಚಿತ್ರಾವ್ 2020 ರಲ್ಲಿ ಅರುಣ್ ಕುಮಾರ್ ರಾಪೋಲು ನಿರ್ದೇಶಿಸಿದ್ದು, ವಿವೇಕ್ ಒಬೆರಾಯ್ ಮತ್ತು ವಿಜಯ್ ಸೇತುಪತಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ

ಉಲ್ಲೇಖನೆಗಳು

Tags:

ತೆನಾಲಿ ರಾಮಕೃಷ್ಣ ಇತಿಹಾಸತೆನಾಲಿ ರಾಮಕೃಷ್ಣ ಸಾಹಿತ್ಯ ಗ್ರಂಥಗಳುತೆನಾಲಿ ರಾಮಕೃಷ್ಣ ಖ್ಯಾತ ಸಂಸ್ಕೃತಿಯಲ್ಲಿತೆನಾಲಿ ರಾಮಕೃಷ್ಣ ಉಲ್ಲೇಖನೆಗಳುತೆನಾಲಿ ರಾಮಕೃಷ್ಣಆಂಧ್ರಪ್ರದೇಶತೆಲುಗುವಿಜಯನಗರಶ್ರೀಕೃಷ್ಣದೇವರಾಯ

🔥 Trending searches on Wiki ಕನ್ನಡ:

ಮಧ್ವಾಚಾರ್ಯಕದಂಬ ರಾಜವಂಶಜನಮೇಜಯಜೋಗಿ (ಚಲನಚಿತ್ರ)ದ್ರವೀಕೃತ ಪೆಟ್ರೋಲಿಯಮ್‌ ಅನಿಲ(ಎಲ್‌ಪಿಜಿ),ಮಳೆಗಾಲವಿರಾಟ್ ಕೊಹ್ಲಿಆವಕಾಡೊದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆಹೊಂಗೆ ಮರನೇರಳೆಭಾರತದ ಪ್ರಧಾನ ಮಂತ್ರಿರಾಗಿಭಾರತದ ಬಂದರುಗಳುಅಶೋಕನ ಶಾಸನಗಳುಹಾಸನಬಳ್ಳಾರಿಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಜಾನಪದಸಿದ್ದರಾಮಯ್ಯನಾಯಿಬೌದ್ಧ ಧರ್ಮಭಾರತೀಯ ಭಾಷೆಗಳುನೀನಾದೆ ನಾ (ಕನ್ನಡ ಧಾರಾವಾಹಿ)ಹಿಂದೂ ಧರ್ಮಮದ್ಯದ ಗೀಳುಕೈಗಾರಿಕೆಗಳುಭರತನಾಟ್ಯಬ್ರಹ್ಮಚರ್ಯಶಾಸನಗಳುಬುಡಕಟ್ಟುಬೆಳವಲಡಿ. ದೇವರಾಜ ಅರಸ್ಏಲಕ್ಕಿಬಸವೇಶ್ವರಯುಗಾದಿಕನ್ನಡದ ಉಪಭಾಷೆಗಳುಸುವರ್ಣ ನ್ಯೂಸ್ಗೊರೂರು ರಾಮಸ್ವಾಮಿ ಅಯ್ಯಂಗಾರ್ದಾಸವಾಳಸಮರ ಕಲೆಗಳುಕರ್ನಾಟಕದಲ್ಲಿ ಪಂಚಾಯತ್ ರಾಜ್ಭಾರತದ ಮಾನವ ಹಕ್ಕುಗಳುರಾಜ್ಯಪಾಲಕನಕದಾಸರುಗ್ರಹಕುಂಡಲಿಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಮಹಾಭಾರತಬಾದಾಮಿ ಗುಹಾಲಯಗಳುವ್ಯಕ್ತಿತ್ವಶಕುನಿಕನ್ನಡದಲ್ಲಿ ಸಣ್ಣ ಕಥೆಗಳುಕನ್ನಡ ರಂಗಭೂಮಿಹಲಸುಭಗವದ್ಗೀತೆಯೇಸು ಕ್ರಿಸ್ತಈರುಳ್ಳಿಭಾರತೀಯ ನೌಕಾಪಡೆಅರಿಸ್ಟಾಟಲ್‌ವಿರೂಪಾಕ್ಷ ದೇವಾಲಯಭಾಮಿನೀ ಷಟ್ಪದಿಕಿತ್ತಳೆಛತ್ರಪತಿ ಶಿವಾಜಿಸಮಾಜ ವಿಜ್ಞಾನಬಿಜು ಜನತಾ ದಳಐಹೊಳೆಕುಕ್ಕೆ ಸುಬ್ರಹ್ಮಣ್ಯ ದೇವಾಲಯಸಾರಾ ಅಬೂಬಕ್ಕರ್ವಿವಾಹಶ್ರೀಕೃಷ್ಣದೇವರಾಯಪರಿಸರ ವ್ಯವಸ್ಥೆಪುಟ್ಟರಾಜ ಗವಾಯಿಎಕರೆಮೂಲಭೂತ ಕರ್ತವ್ಯಗಳುನರೇಂದ್ರ ಮೋದಿನುಗ್ಗೆಕಾಯಿರಾಘವಾಂಕ🡆 More