ಅಲ್ಬರ್ಟ್ ಐನ್‍ಸ್ಟೈನ್: ಗಣಿತಜ್ಞ

ಆಲ್ಬರ್ಟ್ ಐನ್‍ಸ್ಟೀನ್ (ಜರ್ಮನ್ ಉಚ್ಛಾರಣೆ (ಸಹಾಯ·ಮಾಹಿತಿ)) (ಮಾರ್ಚ್ ೧೪, ೧೮೭೯ - ಏಪ್ರಿಲ್ ೧೮, ೧೯೫೫) ೨೦ನೇ ಶತಮಾನದ ಜರ್ಮನಿ ಮೂಲದ ಭೌತವಿಜ್ಞಾನಿ.

ಇವರು ಸಾಪೇಕ್ಷತ ಸಿದ್ಧಾಂತವನ್ನು (ಥಿಯರಿ ಆಫ್ ರಿಲೇಟಿವಿಟಿ) ಜಗತ್ತಿನ ಮುಂದಿಟ್ಟವರು. ಕ್ವಾಂಟಮ್ ಭೌತಶಾಸ್ತ್ರ, ಸ್ಟ್ಯಾಟಿಸ್ಟಿಕಲ್ ಮೆಕ್ಯಾನಿಕ್ಸ್ ಹಾಗೂ ವಿಶ್ವಶಾಸ್ತ್ರ (ಕಾಸ್ಮಾಲಜಿ)ಗಳಲ್ಲಿ ಕೂಡ ಮಹತ್ತರವಾದ ಕಾಣಿಕೆ ನೀಡಿದ್ದಾರೆ. ೧೯೨೧ರಲ್ಲಿ ಇವರಿಗೆ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ದ್ಯುತಿವಿದ್ಯುತ್ ಪರಿಣಾಮ ಬಣ್ಣಿಸಿದ ಇವರ ವಾದ ಹಾಗೂ ಸೈದ್ಧಾಂತಿಕ ಭೌತಶಾಸ್ತ್ರಕ್ಕೆ ಇವರು ಸಲ್ಲಿಸಿದ ಸೇವೆಗೆ ಈ ಪ್ರಶಸ್ತಿ ನೀಡಲಾಯಿತು.

ಅಲ್ಬರ್ಟ್ ಐನ್‍ಸ್ಟೈನ್
ಅಲ್ಬರ್ಟ್ ಐನ್‍ಸ್ಟೈನ್: ಅವರ ವಿಶ್ವವಿಖ್ಯಾತ ಸಮೀಕರಣ : `UNIQ--postMath-00000001-QINU`, ೨೦ ನೆಯ ಶತಮಾನದ ಅತ್ಯಂತ ಜನಪ್ರಿಯವ್ಯಕ್ತಿ, ಐನ್‍ಸ್ಟೈನ್, :, ಯಹೂದಿಯಾಗಿ ಜನಿಸಿದ, ಐನ್‍ಸ್ಟೈನ್, ಜರ್ಮನಿಯಿಂದ ಪಲಾಯನ ಮಾಡಬೇಕಾಯಿತು :
೧೯೪೭ರಲ್ಲಿ ಒರೆನ್ ಟರ್ನರ್‍ರವರಿಂದ ಚಿತ್ರಿತ
ಜನನಮಾರ್ಚ್ ೧೪, ೧೮೭೯
ಉಲ್ಮ್, ವುರ್ಟಮ್‍ಬರ್ಗ್, ಜರ್ಮನಿ
ಮರಣಏಪ್ರಿಲ್ ೧೮, ೧೯೫೫
ಪ್ರಿನ್ಸ್‍ಟನ್, ನ್ಯೂ ಜರ್ಸಿ
ವಾಸಜರ್ಮನಿ, ಇಟಲಿ, ಸ್ವಿಟ್ಜರ್‍ಲ್ಯಾಂಡ್, ಯುಎಸ್ಎ
ರಾಷ್ಟ್ರೀಯತೆಜರ್ಮನಿ (೧೮೭೯-೯೬, ೧೯೧೪-೩೩)
ಸ್ವಿಟ್ಜರ್‍ಲ್ಯಾಂಡ್ (೧೯೦೧-೫೫)
ಯುಎಸ್‍ಎ (೧೯೪೦-೫೫)
ಕಾರ್ಯಕ್ಷೇತ್ರಗಳುಭೌತಶಾಸ್ತ್ರ
ಸಂಸ್ಥೆಗಳುSwiss Patent Office (Berne)
Univ. of Zürich
Charles Univ.
Kaiser Wilhelm Inst.
Univ. of Leiden
ಇನ್ಸ್ಟಿಟ್ಯೂಟ್ ಫಾರ್ ಅಡ್ವಾನ್ಸ್‍ಡ್ ಸ್ಟಡೀಸ್
ಅಭ್ಯಸಿಸಿದ ಸಂಸ್ಥೆETH Zürich
ಪ್ರಸಿದ್ಧಿಗೆ ಕಾರಣಸಾಮಾನ್ಯ ಸಾಪೇಕ್ಷತ ಸಿದ್ಧಾಂತ, ವಿಶೇಷ ಸಾಪೇಕ್ಷತ ಸಿದ್ಧಾಂತ
Brownian motion, ಫೋಟೊ ಎಲೆಕ್ಟ್ರಿಕ್ ಎಫೆಕ್ಟ್‌
ಗಮನಾರ್ಹ ಪ್ರಶಸ್ತಿಗಳುಅಲ್ಬರ್ಟ್ ಐನ್‍ಸ್ಟೈನ್: ಅವರ ವಿಶ್ವವಿಖ್ಯಾತ ಸಮೀಕರಣ : `UNIQ--postMath-00000001-QINU`, ೨೦ ನೆಯ ಶತಮಾನದ ಅತ್ಯಂತ ಜನಪ್ರಿಯವ್ಯಕ್ತಿ, ಐನ್‍ಸ್ಟೈನ್, :, ಯಹೂದಿಯಾಗಿ ಜನಿಸಿದ, ಐನ್‍ಸ್ಟೈನ್, ಜರ್ಮನಿಯಿಂದ ಪಲಾಯನ ಮಾಡಬೇಕಾಯಿತು : ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ (೧೯೨೧)
ಕೊಪ್ಲೆ ಪದಕ (೧೯೨೫)
ಮ್ಯಾಕ್ಸ್ ಪ್ಲಾಂಕ್ ಪದಕ (೧೯೨೯)
ಅಲ್ಬರ್ಟ್ ಐನ್‍ಸ್ಟೈನ್: ಅವರ ವಿಶ್ವವಿಖ್ಯಾತ ಸಮೀಕರಣ : `UNIQ--postMath-00000001-QINU`, ೨೦ ನೆಯ ಶತಮಾನದ ಅತ್ಯಂತ ಜನಪ್ರಿಯವ್ಯಕ್ತಿ, ಐನ್‍ಸ್ಟೈನ್, :, ಯಹೂದಿಯಾಗಿ ಜನಿಸಿದ, ಐನ್‍ಸ್ಟೈನ್, ಜರ್ಮನಿಯಿಂದ ಪಲಾಯನ ಮಾಡಬೇಕಾಯಿತು :
ಯೂಸುಫ್ ಕರ್ಶ್ ರವರಿಂದ ಫೆಬ್ರುವರಿ ೧೧, ೧೯೪೮ರಲ್ಲಿ ತೆಗೆಯಲ್ಪಟ್ಟ ಆಲ್ಬರ್ಟ್ ಐನ್‍ಸ್ಟೀನ್ ಅವರ ಚಿತ್ರ

ಅವರ ವಿಶ್ವವಿಖ್ಯಾತ ಸಮೀಕರಣ :

೧೯೧೬ರಲ್ಲಿ ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತ (ಜನರಲ್ ರಿಲೇಟಿವಿಟಿ ಥಿಯರಿ) ಬಿತ್ತರಿಸಿದ ನಂತರ ಐನ್‍ಸ್ಟೈನ್ ವಿಶ್ವದಾದ್ಯಂತ ವಿಜ್ಞಾನಿಯೊಬ್ಬರಿಗೆ ಅಸಾಮಾನ್ಯವಾದ ಪ್ರಸಿದ್ಧಿಯನ್ನು ಪಡೆದರು. ವರ್ಷಗಳು ಕಳೆದಂತೆ ಇವರ ಪ್ರಸಿದ್ಧಿ ಜಗತ್ತಿನ ಯಾವುದೇ ವಿಜ್ಞಾನಿಗಿಂತ ಹೆಚ್ಚಾಯಿತು. ಜಗತ್ತಿನ ಅತಿ ದೊಡ್ಡ ಮೇಧಾವಿಯಾಗಿ ಚಿರಪರಿಚಿತರಾದರು. ಇಂದಿಗೂ ಭೌತಶಾಸ್ತ್ರ ಕ್ಷೇತ್ರದಲ್ಲಿ ಐನ್‍ಸ್ಟೈನ್ ಅವರು ಮಾಡಿರುವ ಸಂಶೋಧನೆಗಳಿಂದ ಅವರನ್ನು "ಭೌತಶಾಸ್ತ್ರದ ಜನಕ" ಎಂದೇ ವಿಜ್ಞಾನಿಗಳು ಗೌರವಿಸುತ್ತಾರೆ. ಅವರನ್ನು ಗೌರವಿಸುವ ಸಲುವಾಗಿ ಮೂಲ ವಸ್ತುವೊಂದಕ್ಕೆ 'ಐನ್‍ಸ್ಟೈನಿಯಮ್' ಎಂದು ಹೆಸರಿಡಲಾಗಿದೆ.

೨೦ ನೆಯ ಶತಮಾನದ ಅತ್ಯಂತ ಜನಪ್ರಿಯವ್ಯಕ್ತಿ, ಐನ್‍ಸ್ಟೈನ್,' :

ಇಸಾಕ್ ನ್ಯೂಟನ್ ನ ಸಿದ್ಧಾಂತವನ್ನು ಮತ್ತಷ್ಟು ಉತ್ತಮಪಡಿಸಿ, ಭೌತಶಾಸ್ತ್ರೀಯ ಸಂಶೋಧನೆಯ ಜಗತ್ತಿನಲ್ಲಿ ಮಹತ್ವದ ಮೈಲುಗಲ್ಲುಗಳನ್ನು ಸ್ಥಾಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಭೌತಶಾಸ್ತ್ರದ ಕಡೆ ಅವರ ಒಲವು, ಅಪಾರ ಬುದ್ಧಿಮತ್ತೆ ಹಾಗೂ ಕಾರ್ಯತತ್ಪರತೆ ಒಂದು ಹೊಸಲೋಕವನ್ನೇ ಅವರ ಮುಂದೆ ತೆರೆದಿಟ್ಟಿತು. ತೊದಲು ನುಡಿಯುತ್ತಿದ್ದ ಬಾಲಕ, ಸಂಶೋಧನಶೀಲತೆಯಂತಹ ಅದ್ವಿತೀಯ ಗುಣಗಳಿಂದ ಶ್ರೇಷ್ಠ ಪ್ರಾಧ್ಯಾಪಕನಾದದ್ದು, ಅಪೂರ್ವ ಸಂಶೋಧಕನಾದದ್ದೂ, ಚಾರಿತ್ರ್ಯಕ ಸತ್ಯ.

ಯಹೂದಿಯಾಗಿ ಜನಿಸಿದ, ಐನ್‍ಸ್ಟೈನ್, ಜರ್ಮನಿಯಿಂದ ಪಲಾಯನ ಮಾಡಬೇಕಾಯಿತು :

ಐನ್‍ಸ್ಟೈನ್, ಜನಿಸಿದ್ದು ಜರ್ಮನಿಯ ವುಟೆನ್ ಬರ್ಗ್ ನ ಉಲ್ಮ್ ಎಂಬ ಹಳ್ಳಿಯಲ್ಲಿ. ೧೮೭೯ ರ ಮಾರ್ಚ್ ೧೪ರಂದು. ತಂದೆ, ಹರ್ಮನ್ ಐನ್‍ಸ್ಟೈನ್. ತಾಯಿ, ಪೌಲಿನ್ ಐನ್‍ಸ್ಟೈನ್. ಬಾಲ್ಯದಲ್ಲಿ ಅವರನ್ನು ಕಾಡಿದ ಸಮಸ್ಯೆಯೆಂದರೆ ತೊದಲುವಿಕೆ. ಮನೆಯ ಸದಸ್ಯರೆಲ್ಲಾ ಬಹಳ ನೊಂದುಕೊಂಡಿದ್ದರು. ತಮ್ಮ ಜರ್ಮನ್ ಮಾತೃಭಾಷೆಯನ್ನು ಚೆನ್ನಾಗಿ ಕಲಿತರು. ಮ್ಯುನಿಕ್ ನಲ್ಲಿ ಮನೆತನದ ಎಲೆಕ್ಟ್ರಿಕಲ್ ಉಪಕರಣಗಳ ತಯಾರಿಕೆಯ ಸಂಸ್ಥೆಯನ್ನು ತಂದೆ ಹಾಗೂ ಚಿಕ್ಕಪ್ಪನವರು ಸೇರಿ ಸ್ಥಾಪಿಸಿದ್ದರು. ಪರಿವಾರವೆಲ್ಲಾ ಇಟಲಿಗೆ ಹೋಗಿ ನೆಲೆಸುವ ಆತುರದಲ್ಲಿತ್ತು. ಅಗ ಐನ್‍ಸ್ಟೈನ್ ರವರಿಗೆ ೬ ವರ್ಷ ವಯಸ್ಸು. ಐನ್‍ಸ್ಟೈನ್ ಝೂರಿಚ್ ನ "ಸ್ವಿಸ್ ಫೆಡರಲ್ ತಾಂತ್ರಿಕ ಸಂಸ್ಥೆ"ಗೆ ಅರ್ಜಿ ಸಲ್ಲಿಸಿದರು. ಅವರ ಬಳಿ ಸೆಕೆಂಡರಿಶಾಲೆಯ ಪ್ರಮಾಣಪತ್ರವಿರಲಿಲ್ಲ. ೧೬ ವರ್ಷವಯಸ್ಸಿನ ಐನ್‍ಸ್ಟೈನ್ ಪ್ರವೇಶ ಪರೀಕ್ಷೆಯಲ್ಲಿ ನಾಪಾಸಾದರು. ಸೆಕೆಂಡರಿ ವಿಧ್ಯಾಭ್ಯಾಸಕ್ಕೆ 'ಹ್ಯಾರೋ' ಸ್ಕೂಲಿಗೆ ಹೋಗಿ ಭರ್ತಿಯಾದರು. "ವಿದ್ಯುತ್‍ಕಾಂತೀಯ ಸಿದ್ಧಾಂತ" ( ಎಲೆಕ್ಟ್ರೋ ಮ್ಯಾಗ್ನೆಟಿಕ್ ಸಿದ್ಧಾಂತ)ದಲ್ಲಿ ವಿಶೇಷ ಆಸಕ್ತಿ ಬೆಳೆಯಿತು. ೧೮೯೬ ರಲ್ಲಿ ಪದವಿ ದೊರೆಯಿತು. ಐನ್‍ಸ್ಟೈನ್ ರಿಗೆ ಗಣಿತಶಾಸ್ತ್ರದಲ್ಲಿ ವಿಶೇಷ ಪರಿಣತಿ ಇದೆ ಎನ್ನುವ ಸತ್ಯ ಅರಿವಾಗಿದ್ದು ಆನಂತರವೇ. ೧೯೦೦ ರಲ್ಲಿ ಭೌತಶಾಸ್ತ್ರದಲ್ಲಿ ಪದವಿ ಸಿಕ್ಕಿತು. ೧೯೦೧ ರಲ್ಲಿ "ಸ್ವಿಸ್ ಪೌರತ್ವ"ವನ್ನು ಪಡೆದುಕೊಂಡರು. ಜರ್ಮನ್ ಇಟ್ಯಾಲಿಯನ್ ಭಾಷೆಗಳ ಜೊತೆಗೆ ಆಂಗ್ಲ ಭಾಷೆಯನ್ನು ಚೆನ್ನಾಗಿ ಅಭ್ಯಾಸಮಾಡಿದರು. ಉಪಾಧ್ಯರ ವೃತ್ತಿಗೆ ಅರ್ಜಿಹಾಕಿ ೨ ವರ್ಷ ಅಲೆದಲೆದು ಸೋತುಹೋದರು. ನೌಕರಿ ಸಿಗುವುದು ಕಠಿಣವಾಗಿತ್ತು. ಕೊನೆಗೆ 'ಬರ್ನ್' ನಗರದ "ಪೇಟೆಂಟ್ ಆಫೀಸ್"ನಲ್ಲಿ ಕೆಲಸ ದೊರೆಯಿತು. ಐನ್‍ಸ್ಟೈನ್ ಗೆ ಭೌತಶಾಸ್ತ್ರದಲ್ಲಿ ಅಗಾಧ ಪ್ರತಿಭೆ ಇತ್ತು. ಅವರ ವ್ಯವಸಾಯವೂ ಆ ನಿಟ್ಟಿನಲ್ಲೇ ಭರದಿಂದಲೇ ಸಾಗಿತ್ತು. "ಅನಾಲೆಂಡರ್ ಫಿಸಿಕ್" ಎಂಬ ಜರ್ಮನಿಯ ಪ್ರತಿಶ್ಠಿತ ಭೌತಶಾಸ್ತ್ರದ ಪತ್ರಿಕೆಗೆ ತಮ್ಮ ಪ್ರಬಂಧವನ್ನು ಪ್ರಕಟಿಸಲು ಕಳಿಸಿಕೊಟ್ಟರು. ಇವರ ಪ್ರಗತಿಪರ ಸಂಶೋಧನಾ ತತ್ವಗಳು ಭೌತಶಾಸ್ತ್ರದ ವಲಯದಲ್ಲಿ ಎಲ್ಲರ ಗಮನವನ್ನೂ ಸೆಳೆದವು. ತಮ್ಮ ೨೬ ನೆಯ ವರ್ಷ ವಯಸ್ಸಿನಲ್ಲೇ ಡಾಕ್ಟೊರೇಟ್ ಗಳಿಸಿದರು. ೧೯೧೧ ರಲ್ಲಿ ಜುರಿಚ್ ನಗರದ ವಿಶ್ವವಿದ್ಯಾಲಯದಲ್ಲಿ ಸಹ-ಪ್ರಾಧ್ಯಾಪಕ ವೃತ್ತಿ ಸಿಕ್ಕಿತು.

ಡಾ. ಐನ್‍ಸ್ಟೈನ್, ರ ವೈವಾಹಿಕ ಜೀವನ :

'ಮಿಲೆವಾ ಮ್ಯಾರಿಕ್' ಎಂಬ ಜರ್ಮನ್ ಹುಡುಗಿಯ ಜೊತೆ ೧೯೦೩ ರಲ್ಲಿ ಮದುವೆಯಾಯಿತು. ಹಾನ್ಸ್ ಮತ್ತು ಎಡ್ವರ್ಡ್ ಎಂಬ ಎರಡುಮಕ್ಕಳು ಜನಿಸಿದರು. ವಿವಾಹದ ಮೊದಲೆ ಒಬ್ಬ ಮಗಳು ಜನಿಸಿದ್ದಳು. ಆ ಮದುವೆ ವಿವಾಹ ವಿಚ್ಛೇದನೆಯಲ್ಲಿ ಕೊನೆಗೊಂಡಿತು. ೧೯೧೯ ರಲ್ಲಿ ಎಲ್ಯಾ ಲೊವೆಂಥಾಲ್ ಎಂಬ ಮಹಿಳೆಯ ಜೊತೆ ಮರುಮದುವೆಯಾದರು. ಐನ್‍ಸ್ಟೈನ್ ರ ನೆರಳಿನಂತೆ ಅವರ ಬಾಳಿನಲ್ಲಿ ಸಮರಸ ಹೊಂದಿಸಿದ ಎಲ್ಯಾ, ಖಾಯಿಲೆಯಿಂದ ಬಳಲಿ, ೧೯೩೬ ರಲ್ಲಿ ಅಸುನೀಗಿದರು.

ಐನ್‍ಸ್ಟೈನ್ ರ ಜೀವನದ ಅವಿಸ್ಮರಣೀಯ ಘಟನೆ, ೧೯೨೧ ರಲ್ಲಿ :

೪೨ ವರ್ಷವಯಸ್ಸಿನ ಐನ್‍ಸ್ಟೈನ್ ರವರಿಗೆ ಫೊಟೊ ಎಲೆಕ್ಟ್ರಿಕಲ್ ಎಫೆಕ್ಟ್ (ದ್ಯುತಿವಿದ್ಯುತ್ ಪರಿಣಾಮ) ಎಂಬ ಮಹಾಪ್ರಬಂಧವನ್ನು ಮಂಡಿಸಿದ್ದಕ್ಕೆ ನೊಬೆಲ್ ಪ್ರಶಸ್ತಿ ದೊರೆಯಿತು. ಅವರ ಪ್ರಶಸ್ತಿಯ ಬಹುಪಾಲು ನಗದುಹಣವೆಲ್ಲಾ ಅವರ ಪತ್ನಿಯ ವಿವಾಹವಿಚ್ಛೇದನದ ಪರಿಹಾರಧನ ಕೊಡುವುದರಲ್ಲೇ ವ್ಯಯವಾಯಿತು. ಆಗ ಜರ್ಮನಿಯ ಯಹೂದ್ಯರಿಗೆ ಹಿಟ್ಲರ್ ನ ಕಿರುಕುಳ ಶುರುವಾಗಿತ್ತು. ೧೯೨೧ ರಲ್ಲಿ ಪ್ರಥಮವಾಗಿ ನ್ಯೂಯಾರ್ಕ್ ಗೆ ಭೇಟಿಕೊಟ್ಟರು. ಮನೆ ಖರೀದಿಸಿದರು. ೧೯೪೦ ರಲ್ಲಿ ಅಮೆರಿಕದ ಪೌರತ್ವ ಪಡೆದ ಅವರು ತಮ್ಮ ಜೀವನದ ಶೇಷಭಾಗವನ್ನು ಅಲ್ಲೇ ಕಳೆದರು. ೨ನೇ ವಿಶ್ವ ಸಮರದ ಸಮಯದಲ್ಲಿ ಅಣುಬಾಂಬ್, ನ ಹಾನಿಕರ ಪರಿಣಾಮಗಳನ್ನು ಜನರಿಗೆಲ್ಲಾ ಪ್ರಸಾರ ಮಾಡುತ್ತಿದ್ದರು. ಆ ಸಮಯದಲ್ಲಾಗಲೇ ಹಿಟ್ಲರ್ ಆಡಳಿತದಲ್ಲಿದ್ದ ಜರ್ಮನಿಯು ಅಣ್ವಸ್ತ್ರಕ್ಕಾಗಿ ಪೈಪೋಟಿ ನೆಡೆಸುತಿತ್ತು. ೧೯೩೯ರಲ್ಲಿ ಲಿಯೋ ಸಿಲ್ಲಾರ್ಡ್ ಎಂಬ ವಿಜ್ಞಾನಿಯನ್ನು ಒಳಗೊಂಡಿದ್ದ ಹಂಗೇರಿಯ ವಿಜ್ಞಾನಿಗಳ ಗುಂಪೊಂದು ನಾಜಿಗಳ ಈ ಕೃತ್ಯದ ಬಗ್ಗೆ ಅಮೆರಿಕವನ್ನು ಎಚ್ಚರಿಸಲು ಯತ್ನಿಸುತ್ತಿದ್ದರು. ಪರಮಾಣು ವಿದಳನ ಕ್ರಿಯೆಯ ಹಿಂದಿದ್ದ ಸಿದ್ಧಾಂತವನ್ನು ತಿಳಿದಿದ್ದ ಲಿಯೋ ಸಿಲ್ಲಾರ್ಡ್ ಹಾಗೂ ಯೂಜಿನ್ ವಿಜಿನರ್ ಎಂಬ ವಿಜ್ಞಾನಿಗಳು ಈ ಬಗ್ಗೆ ಐನ್‍ಸ್ಟೈನ್ ರನ್ನು ಜುಲೈ ೯, ೧೯೩೯ರಂದು ಭೇಟಿಮಾಡಿದರು. ಐನ್‍ಸ್ಟೈನ್ ರವರು ಸಿಲ್ಲಾರ್ಡ್ ಜೊತೆ ಸೇರಿ ಅಣ್ವಸ್ತ್ರದ ಸಾಧ್ಯತೆಯನ್ನು ವಿವರಿಸಿ ಆಗಿನ ಅಮೆರಿಕದ ಅಧ್ಯಕ್ಷರಾಗಿದ್ದ ರೂಸ್ವೆಲ್ಟ್ ಅವರಿಗೆ ಪತ್ರ ಬರೆದರು. ಅಮೆರಿಕದ ವಿಜ್ಞಾನಿಗಳು ಅಣುಬಾಂಬನ್ನು ತಯಾರಿಸಿ ಜಪಾನ್ ನ ನಾಗಸಾಕಿ ಮತ್ತು ಹಿರೋಷಿಮಾ ನಗರಗಳ ಮೇಲೆ ಎಸೆದದ್ದರಿಂದ, ಸಹಸ್ರಾರು ಜನರ ಪ್ರಾಣವನ್ನು ಆಹುತಿಯನ್ನಾಗಿ ತೆಗೆದುಕೊಂಡಿತ್ತು. ಈ ಘಟನೆಯಿಂದ ಘಾಸಿಗೊಂಡಿದ್ದ ಐನ್‍ಸ್ಟೈನ್ ರು ಎಲ್ಲಾ ವಿಜ್ಞಾನಿಗಳಿಗೂ ಕರೆಕೊಟ್ಟು ಅಣುವಿಜ್ಞಾನವನ್ನು, ಜಾಗತಿಕ ಶಾಂತಿ ಹಾಗೂ ಮಾನವನ ಒಳಿತಿಗಾಗಿಯೇ ಉಪಯೋಗಿಸಲು ಭಿನ್ನವಿಸಿಕೊಂಡರು.

' ಟೈಮ್ಸ್ ಪತ್ರಿಕೆ', ಪ್ರಸ್ತುತಪಡಿಸಿದ, ಶತಮಾನದಮಹಾವಿಜ್ಞಾನಿಯ,ಪ್ರಚಂಡ ಬಹುಮತದಗೌರವ :

ಸನ್. ೨೦೦೦ ದಲ್ಲಿ, ಪ್ರಖ್ಯಾತ "ಟೈಮ್ಸ್ ಪತ್ರಿಕೆ"ಯ ೨೦ ನೆಯ ಶತಮಾನದ ಅತ್ಯಂತ ಪ್ರಖ್ಯಾತ ವ್ಯಕ್ತಿಯನ್ನು ನಿರ್ಧರಿಸುವಲ್ಲಿ ನಡೆಸಿದ ವಿಶ್ವದಾದ್ಯಂತದ ಸಮೀಕ್ಷೆಯಲ್ಲಿ 'ಐನ್‍ಸ್ಟೈನ್ ' ರೇ ಪ್ರಚಂಡ ಬಹುಮತದಿಂದ ಚುನಾಯಿತರಾದರು. ಐನ್‍ಸ್ಟೈನ್ , ತಮ್ಮ ನಾಲ್ಕೂವರೆ ದಶಕಗಳ ಸೇವೆ, ವೃತ್ತಿಗೌರವಗಳಿಂದ ಮನುಕುಲದ ಒಳಿತಿಗಾಗಿ ಮಾಡಿದ ಸೇವೆಗಳನ್ನು ಜನಸ್ತೋಮ ಸ್ಮರಿಸಿತು. ಅದಕ್ಕಾಗಿಯೇ ಅವರಿಗೆ ಅಗ್ರಸ್ಥಾನ ! ಐನ್‍ಸ್ಟೈನ್ ರವರಿಗೆ ದೊರೆತ ಗೌರವ ಪ್ರಶಸ್ತಿಗಳು, ಅಸಂಖ್ಯ.

ಉಲ್ಲೇಖಗಳು

Tags:

ಅಲ್ಬರ್ಟ್ ಐನ್‍ಸ್ಟೈನ್ ಅವರ ವಿಶ್ವವಿಖ್ಯಾತ ಸಮೀಕರಣ : `UNIQ--postMath-00000001-QINU`ಅಲ್ಬರ್ಟ್ ಐನ್‍ಸ್ಟೈನ್ ೨೦ ನೆಯ ಶತಮಾನದ ಅತ್ಯಂತ ಜನಪ್ರಿಯವ್ಯಕ್ತಿ, ಐನ್‍ಸ್ಟೈನ್, :ಅಲ್ಬರ್ಟ್ ಐನ್‍ಸ್ಟೈನ್ ಯಹೂದಿಯಾಗಿ ಜನಿಸಿದ, ಐನ್‍ಸ್ಟೈನ್, ಜರ್ಮನಿಯಿಂದ ಪಲಾಯನ ಮಾಡಬೇಕಾಯಿತು :ಅಲ್ಬರ್ಟ್ ಐನ್‍ಸ್ಟೈನ್ ಡಾ. ಐನ್‍ಸ್ಟೈನ್, ರ ವೈವಾಹಿಕ ಜೀವನ :ಅಲ್ಬರ್ಟ್ ಐನ್‍ಸ್ಟೈನ್ ಐನ್‍ಸ್ಟೈನ್ ರ ಜೀವನದ ಅವಿಸ್ಮರಣೀಯ ಘಟನೆ, ೧೯೨೧ ರಲ್ಲಿ :ಅಲ್ಬರ್ಟ್ ಐನ್‍ಸ್ಟೈನ್ ಟೈಮ್ಸ್ ಪತ್ರಿಕೆ, ಪ್ರಸ್ತುತಪಡಿಸಿದ, ಶತಮಾನದಮಹಾವಿಜ್ಞಾನಿಯ,ಪ್ರಚಂಡ ಬಹುಮತದಗೌರವ :ಅಲ್ಬರ್ಟ್ ಐನ್‍ಸ್ಟೈನ್ ಉಲ್ಲೇಖಗಳುಅಲ್ಬರ್ಟ್ ಐನ್‍ಸ್ಟೈನ್Albert Einstein german.oggw:Wikipedia:Media helpಈ ಧ್ವನಿಯ ಬಗ್ಗೆಏಪ್ರಿಲ್ ೧೮ಕ್ವಾಂಟಮ್ ಭೌತಶಾಸ್ತ್ರಚಿತ್ರ:Albert Einstein german.oggಜರ್ಮನಿದ್ಯುತಿವಿದ್ಯುತ್ ಪರಿಣಾಮನೊಬೆಲ್ ಪ್ರಶಸ್ತಿಭೌತವಿಜ್ಞಾನಮಾರ್ಚ್ ೧೪ಸಾಪೇಕ್ಷತ ಸಿದ್ಧಾಂತ೧೮೭೯೧೯೨೧೧೯೫೫

🔥 Trending searches on Wiki ಕನ್ನಡ:

ಕರ್ನಾಟಕದ ಸಂಸ್ಕೃತಿಹೊಯ್ಸಳ ವಾಸ್ತುಶಿಲ್ಪಬೆಂಗಳೂರು ನಗರ ಜಿಲ್ಲೆಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಸಂಭೋಗಕರ್ನಾಟಕದ ಮಹಾನಗರಪಾಲಿಕೆಗಳುಮಳೆವ್ಯವಸಾಯಕರ್ನಾಟಕದ ನದಿಗಳುರವೀಂದ್ರನಾಥ ಠಾಗೋರ್ರಾಮ ಮಂದಿರ, ಅಯೋಧ್ಯೆಬೇವುರಾಜ್‌ಕುಮಾರ್ವರ್ಣಾಶ್ರಮ ಪದ್ಧತಿದಲಿತಅಂಶಗಣಮೂಲಧಾತುಗಳ ಪಟ್ಟಿಜಯಂತ ಕಾಯ್ಕಿಣಿಭಾರತದಲ್ಲಿನ ಜಾತಿ ಪದ್ದತಿಕೆಂಪುಜಿ.ಎಸ್.ಶಿವರುದ್ರಪ್ಪಕಾಳಿ ನದಿಶಬ್ದಕೃಷ್ಣರಾಜಸಾಗರಸೆಸ್ (ಮೇಲ್ತೆರಿಗೆ)ಕರ್ನಾಟಕದ ಅಣೆಕಟ್ಟುಗಳುಭಾರತದಲ್ಲಿ ಪಂಚಾಯತ್ ರಾಜ್ಡಿ.ವಿ.ಗುಂಡಪ್ಪಧಾನ್ಯಕಾನೂನುಕರ್ನಾಟಕದ ತಾಲೂಕುಗಳುಕಬಡ್ಡಿನಯಸೇನಕನ್ನಡ ವ್ಯಾಕರಣತಂತ್ರಜ್ಞಾನಕೋಟ ಶ್ರೀನಿವಾಸ ಪೂಜಾರಿಬೀಚಿಚೆನ್ನಕೇಶವ ದೇವಾಲಯ, ಬೇಲೂರುಸಂಚಿ ಹೊನ್ನಮ್ಮರಾಷ್ಟ್ರಕೂಟಅವರ್ಗೀಯ ವ್ಯಂಜನಸಂಸ್ಕೃತವೀರಗಾಸೆಪೆಟ್ರೋಮ್ಯಾಕ್ಸ್ (ಚಲನಚಿತ್ರ)ಗ್ರಾಮ ದೇವತೆಚಂದ್ರಯಾನ-೩ಋತುಸವದತ್ತಿಕೋವಿಡ್-೧೯ಹಾಸನ ಜಿಲ್ಲೆಹುರುಳಿಮೂಲಧಾತುಶಿವಮೊಗ್ಗಭತ್ತಪರ್ವತ ಬಾನಾಡಿಜಯಮಾಲಾಆದಿಪುರಾಣತತ್ಪುರುಷ ಸಮಾಸರಕ್ತಶಿಕ್ಷಣಪರಿಣಾಮವಿಷ್ಣುವರ್ಧನ್ (ನಟ)ಶಿಕ್ಷಕಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಕೂಡಲ ಸಂಗಮರಕ್ತಪಿಶಾಚಿಲೋಪಸಂಧಿಚನ್ನವೀರ ಕಣವಿಬೊಜ್ಜುಕ್ಯಾನ್ಸರ್ಮುತ್ತುಗಳುತಮ್ಮಟ ಕಲ್ಲು ಶಾಸನವಿಭಕ್ತಿ ಪ್ರತ್ಯಯಗಳುಕಲಿಯುಗಕಪ್ಪೆಚಿಪ್ಪುಕದಂಬ ರಾಜವಂಶಮಾನವನ ನರವ್ಯೂಹ🡆 More