ಸುಧಾ ಮೂರ್ತಿ: ಮಾದರಿ

ಸುಧಾ ಮೂರ್ತಿ ಕನ್ನಡ ಮತ್ತು ಇಂಗ್ಲಿಷ್ ನ ಬರಹಗಾರ್ತಿ, ಸುಧಾ ತಮ್ಮ ವೃತ್ತಿಪರ ಜೀವನವನ್ನು ಕಂಪ್ಯೂಟರ್ ವಿಜ್ಞಾನಿ ಮತ್ತು ಎಂಜಿನಿಯರ್ ಆಗಿ ಆರಂಭಿಸಿದರು.

ಅವರು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷರಾಗಿದ್ದಾರೆ ಹಾಗೂ 'ಬಿಲ್ ಗೇಟ್ಸ್ ಪ್ರತಿಷ್ಠಾನ'ದ ಸಾರ್ವಜನಿಕ ಆರೋಗ್ಯ ಉಪಕ್ರಮಗಳ ಸದಸ್ಯರಾಗಿದ್ದಾರೆ.

ಸುಧಾ ಮೂರ್ತಿ
ಸುಧಾ ಮೂರ್ತಿ: ಜನನ, ಬಾಲ್ಯ-ಶಿಕ್ಷಣ, ವೃತ್ತಿ ಜೀವನ
Born
ಸುಧಾ ಕುಲಕರ್ಣಿ

ಧಾರವಾಡ ಜಿಲ್ಲೆಯ 'ಶಿಗ್ಗಾಂವ್‌' (ಈಗ ಹಾವೇರಿ ಜಿಲ್ಲೆಯಲ್ಲಿದೆ)
Nationalityಭಾರತೀಯ
Educationಹುಬ್ಬಳ್ಳಿಯ ಬಿ.ವಿ.ಬಿ. ಕಾಲೇಜಿನಿಂದ ಎಂಜನಿಯರಿಂಗ್‌ ಬಿ.ಇ.(ಎಲೆಕ್ಟ್ರಿಕಲ್‌)
ಬೆಂಗಳೂರಿನ ಟಾಟಾ ವಿಜ್ಞಾನ ಮಂದಿರದಿಂದ ಎಂ.ಇ. ಪದವಿ (೧೯೭೪)
Alma materಬೆಂಗಳೂರಿನ ಟಾಟಾ ವಿಜ್ಞಾನ ಮಂದಿರ
Known forನಾರಾಯಣ ಜೊತೆಗೂಡಿ ೧೯೮೧ ರಲ್ಲಿ ಇನ್ಫೋಸಿಸ್ ಕಂಪೆನಿ ಸ್ಥಾಪನೆ.
ಇನ್‌ಫೋಸಿಸ್‌ ಫೌಂಡೇಷನ್‌’ ನೇತೃತ್ವ. ಲೇಖಕಿ

ಜನನ

ಇವರು ೧೯೫೦ರಲ್ಲಿ ಧಾರವಾಡ ಜಿಲ್ಲೆಯ 'ಶಿಗ್ಗಾಂವ್‌' (ಜಿಲ್ಲೆಯ) (ಈಗ ಹಾವೇರಿ ಜಿಲ್ಲೆಯಲ್ಲಿದೆ) ಗ್ರಾಮದ ಕುಲಕರ್ಣಿ ಮನೆತನದಲ್ಲಿ ೧೯೫೦ ರ ಆಗಸ್ಟ್‌ ೧೯, ರಂದು ಜನಿಸಿದರು. ಜಯಶ್ರೀ ದೇಶಪಾಂಡೆಸುಧಾಮೂರ್ತಿಯವರ ಸೋದರಿ. ಜಯಶ್ರೀ ದೇಶಪಾಂಡೆ ಮತ್ತು ಅವರ ಪತಿ, ಗುರುರಾಜ ದೇಶಪಾಂಡೆ, ಜೊತೆಗೂಡಿ ಉದ್ಯಮಶೀಲತೆ ಗುಣ ಬೆಳೆಸುವ ಮಹತ್ವದ ಉದ್ದೇಶದೊಂದಿಗೆ 1996ರಲ್ಲಿ ಹುಟ್ಟು ಹಾಕಿದ ‘ದೇಶಪಾಂಡೆ ಪ್ರತಿಷ್ಠಾನ’ ವಿನೂತನ ಕಾರ್ಯಕ್ರಮಗಳಿಂದಾಗಿ ಉತ್ತರ ಕರ್ನಾಟಕದಲ್ಲಿ ಸಾಮಾಜಿಕ ಬದಲಾವಣೆಗೆ ಕಾರಣವಾಗಿದೆ.

ಬಾಲ್ಯ-ಶಿಕ್ಷಣ

ಸುಧಾ ಕುಲಕರ್ಣಿಯವರ ತಂದೆ, ರಾಮಚಂದ್ರ ಕುಲಕರ್ಣಿಯವರು ಹುಬ್ಬಳ್ಳಿಯ ಕೆ.ಎಂ.ಕಾಲೇಜಿನ ಸ್ತ್ರೀ ರೋಗ ತಜ್ಞರು, ಪ್ರಾಧ್ಯಾಪಕರು. ತಾಯಿ ವಿಮಲಾ ಕುಲಕರ್ಣಿಯವರು ಪದವಿ ಪರೀಕ್ಷೆಯಲ್ಲಿ ಚಿನ್ನದ ಪದಕ ಗಳಿಸಿದ್ದರು. ಈ ದಂಪತಿಗಳಿಗೆ ೪ ಜನ ಮಕ್ಕಳು. ಅವರು ಬೆಂಗಳೂರಿನ ಟಾಟಾ ಇನ್ಸ್ಟಿ ಟ್ಯೂಟ್' ನಲ್ಲಿ ಎಮ್.ಇ (ಕಂಪ್ಯೂಟರ್ ಸೈನ್ಸ್) ಪದವಿಗಳಿಸಿದರು. ಚಿನ್ನದ ಪದಕ ಗಳಿಸಿದ ಏಕೈಕ ಮಹಿಳಾ ವಿದ್ಯಾರ್ಥಿನಿ. ಸುಧಾ ಅವರ ಪ್ರಾಥಮಿಕ ಮಾಧ್ಯಮಿಕ ಮತ್ತು ಹೈಸ್ಕೂಲ್ ವಿದ್ಯಾಭ್ಯಾಸವೆಲ್ಲಾ ಅವರ ಹುಟ್ಟೂರಾದ ಹಾವೇರಿ ಜಿಲ್ಲೆಯ ಶಿಗ್ಗಾಂವ್‍ನಲ್ಲಿ ನಡೆಯಿತು. ೧೯೬೬ರಲ್ಲಿ ಹುಬ್ಬಳ್ಳಿಯ ನ್ಯೂ ಎಜ್ಯುಕೇಶನ್ ಸೊಸೈಟಿಗರ್ಲ್ಸ್ ಇಂಗ್ಲಿಷ್ ಸ್ಕೂಲ್‍ ನಿಂದ ಎಸ್.ಎಸ್.ಎಲ್.ಸಿ ಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದು ಉತ್ತೀರ್ಣರಾದರು..

  • ೧೯೭೨ರಲ್ಲಿ ಹುಬ್ಬಳ್ಳಿಬಿ.ವಿ.ಬಿ.ಕಾಲೇಜ ಆಫ್ ಇಂಜನಿಯರಿಂಗ್‍ ನಲ್ಲಿ, ಇಲೆಕ್ಟ್ರಿಕಲ್ ಇಂಜನಿಯರಿಂಗ್ ನ ಎಲ್ಲ ಚತುರ್ಮಾಸಗಳಲ್ಲಿ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾದರು.
  • ೧೯೭೪ರಲ್ಲಿ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಯಲ್ಲಿ ಕಂಪ್ಯೂಟರ್ ಸಾಯನ್ಸ್' ‍ದಲ್ಲಿ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾದರು..

ವೃತ್ತಿ ಜೀವನ

  • ಸುಧಾ ಮೂರ್ತಿ (ಆಗಿನ್ನೂ ಸುಧಾಕುಲಕರ್ಣಿ) ಅವರು ಟೆಲ್ಕೊದ ಪುಣೆ, ಮುಂಬಯಿ ಹಾಗು ಜಮ್ ಶೇಡ್ ಪುರ ಶಾಖೆಗಳಲ್ಲಿ ಡೆವಲಪ್ಮೆಂಟ್ ಇಂಜನಿಯರ್ ಆಗಿ ದುಡಿದಿದ್ದಾರೆ. ಟೆಲ್ಕೊಗೆ ಪ್ರವೇಶ ಪಡೆದ ಪ್ರಥಮ ಮಹಿಳಾ ಇಂಜನಿಯರ್ ಎನ್ನುವ ಹೆಗ್ಗಳಿಕೆ ಇವರದು. ಆಬಳಿಕ ಇವರು ಪುಣೆಯ ವಾಲಚಂದ ಗ್ರೂಪ್ ಆಫ್ ಇಂಡಸ್ಟ್ರೀಜ್ದಲ್ಲಿ ಸೀನಿಯರ್ ಸಿಸ್ಟಮ್ಸ್ ಅನಲಿಸ್ಟ್ ನಲ್ಲಿ ಕೆಲಕಾಲ ಸೇವೆ ಸಲ್ಲಿಸಿದರು.
  • ೧೯೯೬ರಲ್ಲಿ ತಮ್ಮ ಪತಿ ನಾರಾಯಣ ಮೂರ್ತಿಯವರ ಜೊತೆಗೂಡಿ ಇನ್ಫೋಸಿಸ್ ಫೌಂಡೇಶನ್ ಪ್ರಾರಂಭಿಸಿದರು.


ಸುಧಾ ಮೂರ್ತಿ: ಜನನ, ಬಾಲ್ಯ-ಶಿಕ್ಷಣ, ವೃತ್ತಿ ಜೀವನ 
ಸುಧಾ ಮೂರ್ತಿ ಮತ್ತು ಇನ್ಫೋಸಿಸ್ ಫೌಂಡೇಶನ್

ಸಾಹಿತ್ಯ

ಸುಧಾ ಮೂರ್ತಿಯವರು ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ. ಕೆಲವು ಕೃತಿಗಳು ಕನ್ನಡ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿವೆ.

ಕನ್ನಡ ಕೃತಿಗಳು

  • ಹಕ್ಕಿಯ ತೆರದಲಿ
  • ಶಾಲಾ ಮಕ್ಕಳಿಗಾಗಿ ಕಂಪ್ಯೂಟರ್
  • ಕಾವೇರಿಯಿಂದ ಮೇಕಾಂಗಿಗೆ
  • ಡಾಲರ್ ಸೊಸೆ
  • ಮಹಾಶ್ವೇತೆ
  • ಅತಿರಿಕ್ತೆ
  • ಪರಿಧಿ
  • ಮನದ ಮಾತು (ಅಂಕಣ ಬರಹಗಳ ಸಂಗ್ರಹ)
  • ಗುಟ್ಟೊಂದು ಹೇಳುವೆ
  • ಸಾಮಾನ್ಯರಲ್ಲಿ ಅಸಾಮಾನ್ಯರು
  • ದಿ ಸರ್ಪೆಂಟ್ಸ್ ರಿವೇಂಜ್
  • ತುಮುಲ
  • ಋಣ
  • ಯಶಸ್ವಿ
  • ಸಾಫ್ಟ್ ಮನ
  • ಏರಿಳಿತದ ದಾರಿಯಲ್ಲಿ
  • ನೂನಿಯ ಸಾಹಸಗಳು

ಇಂಗ್ಲೀಷ್ ಪುಸ್ತಕಗಳು

  • The Serpent's Revenge
  • How I Taught My Grandmother to Read.
  • Something Happened on the Way to Heaven
  • The Old Man and His God: Discovering the Spirit of India
  • The Day I Stopped Drinking Milk
  • Wise and Otherwise
  • Gently Falls the Bakula
  • The Accolades Galore
  • The Bird with Golden Wings: Stories of Wit and Magic
  • Dollar Bahu
  • Grandma's Bag of Stories (children's fiction)
  • The Magic Drum And Other Favourite Stories (children's stories)
  • House of Cards
  • The Mother I Never Knew (two novellas)
  • Three thousand stitches
  • The Man from the Egg
  • Here, There, Everywhere
  • Magic of the lost Temple
  • How the earth got its beauty (೨೦೨೧)

ಪ್ರಶಸ್ತಿ/ ಗೌರವ/ ಪುರಸ್ಕಾರ

ಸುಧಾ ಮೂರ್ತಿ: ಜನನ, ಬಾಲ್ಯ-ಶಿಕ್ಷಣ, ವೃತ್ತಿ ಜೀವನ 
ಡಾ. (ಶ್ರೀಮತಿ) ಸುಧಾ ಮೂರ್ತಿ ಅವರಿಗೆ ಅಂದಿನ ರಾಷ್ಟ್ರಪತಿಗಳಾದ ಅಬ್ದುಲ್ ಕಲಾಂ ಅವರು ಪದ್ಮಶ್ರೀ ಪ್ರಶಸ್ತಿ - 2006 ಅನ್ನು ಪ್ರದಾನ ಮಾಡಿದರು
  1. ಭಾರತ ಸರಕಾರ - ೨೦೦೬ನೆಯ ಸಾಲಿನಲ್ಲಿ ಸುಧಾ ಮೂರ್ತಿಯವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿದೆ
  2. ಬಿ.ಇ.(ಇಲೆಕ್ಟ್ರಿಕಲ್ ಇಂಜನಿಯರಿಂಗ್ ಪರೀಕ್ಷೆ) ಯಲ್ಲಿ ಪ್ರಥಮ ಸ್ಥಾನ ಲಭಿಸಿದಾಗ ಕರ್ನಾಟಕದ ಮುಖ್ಯ ಮಂತ್ರಿಗಳಿಂದ ಬೆಳ್ಳಿಯ ಪದಕ ಲಭಿಸಿತ್ತು.
  3. ಐಐಟಿ ಕಾನ್ಪುರ್ದಿಂದ ಡಾಕ್ಟರ್ ಆಫ್ ಸೈನ್ಸ್ ಗೌರವ ಪದವಿ (ಹೊನೊರಿಸ್ ಕಾಸಾ)
  4. ಎಮ್.ಟೆಕ್. ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ದೊರೆತಾಗ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಇಂಜನಿಯರ್ಸ್ ದಿಂದ ಬಂಗಾರದ ಪದಕ ದೊರೆತಿತ್ತು.
  5. ೧೯೯೫ರಲ್ಲಿ ಬೆಂಗಳೂರಿನ ರೋಟರಿ ಕ್ಲಬ್ ನಿಂದ ಅತ್ಯುತ್ತಮ್ಮ ಶಿಕ್ಷಕಿ ಪ್ರಶಸ್ತಿ ದೊರೆತಿದೆ.
  6. ಪಬ್ಲಿಕ್ ರಿಲೇಶನ್ಸ್ ಸೊಸೈಟಿ ಆಫ್ ಇಂಡಿಯಾದವರಿಂದ ರಾಷ್ಟ್ರೀಯ ಪ್ರಶಸ್ತಿ ದೊರೆತಿದೆ.
  7. ಸಮಾಜಸೇವೆಗಾಗಿ ಹುಬ್ಬಳ್ಳಿ ದಕ್ಷಿಣ ಭಾಗದ ರೋಟರಿ ಕ್ಲಬ್ ನಿಂದ ಪುರಸ್ಕಾರ ದೊರೆತಿದೆ.
  8. ೨೦೦೦ ನೆಯ ಸಾಲಿನ ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ ಲಭಿಸಿದೆ.
  9. ಸಮಾಜಸೇವೆಗಾಗಿ ೨೦೦೦ ಸಾಲಿನ ಓಜಸ್ವಿನಿ ಪ್ರಶಸ್ತಿ ದೊರೆತಿದೆ.
  10. ಮಿಲೆನಿಯಮ್ ಮಹಿಳಾ ಶಿರೋಮಣಿ' ಪ್ರಶಸ್ತಿ ಲಭಿಸಿದೆ.
  11. ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಎಂಜನಿಯರಿಂಗ್‌ ಪ್ರತಿಷ್ಠಾನ ಪ್ರಶಸ್ತಿ (೨೦೦೧),
  12. “ಶಾಲೆ ಮಕ್ಕಳಿಗಾಗಿ ಕಂಪ್ಯೂಟರ್” ಈ ಕೃತಿಗೆ ಅತ್ತಿಮಬ್ಬೆ ಪ್ರಶಸ್ತಿ ದೊರೆತಿದೆ.
  13. ರೇಡಿಯೊ ಸಿಟಿ ಬೆಂಗಳೂರಿನಿಂದ ೨೦೦೨ರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯೆಂದು “ವರ್ಷದ ಮಹಿಳೆ ಪ್ರಶಸ್ತಿ ಲಭಿಸಿದೆ,
  14. ಬೆಂಗಳೂರಿನ ಲೇಡೀಸ್‌ ಸರ್ಕಲ್‌ನಿಂದ ಅಚೀವರ್ಸ್ ವಿಥ್‌ ಎ ಹಾರ್ಟ್ ಪ್ರಶಸ್ತಿ (೨೦೦೨),
  15. ಸಮಾಜ ಸೇವೆಗಾಗಿ, ಚೆನ್ನೈದ ಶ್ರೀ ರಾಜ-ಲಕ್ಷ್ಮಿ ಫೌಂಡೇಶನ್ ನವರು ೨೦೦೪ ರ ರಾಜ-ಲಕ್ಷ್ಮಿ ಪ್ರಶಸ್ತಿಯನ್ನು ನೀಡಿದ್ದಾರೆ.
  16. ದೆಹಲಿಯ ಸಹಸ್ರಮಾನ ಮಹಿಳಾ ಶಿರೋಮಣಿ ಪ್ರಶಸ್ತಿ,
  17. ಗುಲಬರ್ಗಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌,
  18. ಶಿವಮೊಗ್ಗ ಕರ್ನಾಟಕ ಸಂಘದಿಂದ ಎಂ.ಕೆ. ಇಂದಿರಾ ಪ್ರಶಸ್ತಿ ಕೆಂಪೇಗೌಡ ಪ್ರಶಸ್ತಿ,
  19. ಡಾ.ಸಾ.ಶಿ. ಮರುಳಯ್ಯ ಪ್ರಶಸ್ತಿ (೨೦೦೪),
  20. ಇಂದೂರ್ ನ ದೇವಿ ಅಹಲ್ಯಾಬಾಯಿ ರಾಷ್ಟ್ರೀಯ ಪ್ರಶಸ್ತಿ (೨೦೦೫),
  21. ಮಹಾರಾಷ್ಟ್ರದ ಶಿವಾಜಿ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ (೨೦೦೭),
  22. ಫಾಯ್‌ ಫೌಂಡೇಶನ್‌ನಿಂದ (ಮಹಾರಾಷ್ಟ್ರ) ರಾಷ್ಟ್ರಭೂಷಣ ಪ್ರಶಸ್ತಿ,
  23. ಆಳ್ವಾಸ್ ನುಡಿಸಿರಿ ಪ್ರಶಸ್ತಿ (೨೦೦೯),
  24. ಬಸವಶ್ರೀ ಪ್ರಶಸ್ತಿ .
  25. ತುಮಕೂರು ವಿ.ವಿ.ದ ಗೌರವ ಡಾಕ್ಟರೇಟ್‌ (೨೦೧೦) ಮುಂತಾದ ಪ್ರಶಸ್ತಿಗಳು ಸಂದಿವೆ.
  26. ೨೦೨೩ನೇ ವರ್ಷದ ಪದ್ಮಭೂಷಣ ಪ್ರಶಸ್ತಿ.
  • ಸುಧಾಮೂರ್ತಿ ಸಾಹಿತ್ಯ ಪ್ರತಿಷ್ಠಾನದಿಂದ ಪ್ರತಿ ವರ್ಷವೂ ಉತ್ತರ ಕರ್ನಾಟಕ ಲೇಖಕಿಯರಿಗೆ ಸಾಹಿತ್ಯ ಪ್ರಶಸ್ತಿ ನೀಡುತ್ತಾ ಬಂದಿದೆ.

ಬಾಹ್ಯ ಸಂಪರ್ಕಗಳು

ಉಲ್ಲೇಖಗಳು

Tags:

ಸುಧಾ ಮೂರ್ತಿ ಜನನಸುಧಾ ಮೂರ್ತಿ ಬಾಲ್ಯ-ಶಿಕ್ಷಣಸುಧಾ ಮೂರ್ತಿ ವೃತ್ತಿ ಜೀವನಸುಧಾ ಮೂರ್ತಿ ಸಾಹಿತ್ಯಸುಧಾ ಮೂರ್ತಿ ಪ್ರಶಸ್ತಿ ಗೌರವ ಪುರಸ್ಕಾರಸುಧಾ ಮೂರ್ತಿ ಬಾಹ್ಯ ಸಂಪರ್ಕಗಳುಸುಧಾ ಮೂರ್ತಿ ಉಲ್ಲೇಖಗಳುಸುಧಾ ಮೂರ್ತಿ

🔥 Trending searches on Wiki ಕನ್ನಡ:

ಎರಡನೇ ಮಹಾಯುದ್ಧದಕ್ಷಿಣ ಭಾರತದ ಪಕ್ಷಿಗಳ ಪಟ್ಟಿಸಜ್ಜೆತಾರುಣ್ಯನಂದಿ ಬೆಟ್ಟ (ಭಾರತ)ಯು.ಆರ್.ಅನಂತಮೂರ್ತಿಕೊಡಗುಕನ್ನಡ ಸಾಹಿತ್ಯ ಪ್ರಕಾರಗಳುಹಲ್ಮಿಡಿ ಶಾಸನಭಾರತೀಯ ಸಂಸ್ಕೃತಿಪುಟ್ಟರಾಜ ಗವಾಯಿಗಿರವಿದಾರಕುಂಬಳಕಾಯಿಕುದುರೆವಿಜಯನಗರಚನ್ನರಾಯಪಟ್ಟಣಬೆಂಗಳೂರು ಕೋಟೆಆದೇಶ ಸಂಧಿಮಾನವ ಸಂಪನ್ಮೂಲ ನಿರ್ವಹಣೆಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಹಲ್ಮಿಡಿಗಾದೆಉಪನಯನಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಮೋಕ್ಷಗುಂಡಂ ವಿಶ್ವೇಶ್ವರಯ್ಯಲಕ್ಷ್ಮಿಕದಂಬ ರಾಜವಂಶಮರಾಠಾ ಸಾಮ್ರಾಜ್ಯಗ್ರಂಥಾಲಯಗಳುಬೆಂಗಳೂರು ಅರಮನೆಛತ್ರಪತಿ ಶಿವಾಜಿಹಣಕಾಸುಕರ್ನಾಟಕ ಸರ್ಕಾರಗುರು (ಗ್ರಹ)ಹೂವುವಿಕ್ರಮಾರ್ಜುನ ವಿಜಯನಾಲ್ವಡಿ ಕೃಷ್ಣರಾಜ ಒಡೆಯರುಯುದ್ಧಮುಖ್ಯ ಪುಟಮಹಾತ್ಮ ಗಾಂಧಿಮಂಜುಮ್ಮೆಲ್ ಬಾಯ್ಸ್ಕೆ.ಎಲ್.ರಾಹುಲ್ಕೇಶಿರಾಜಕೈಗಾರಿಕಾ ಕ್ರಾಂತಿಚೋಳ ವಂಶಹೊಯ್ಸಳ ವಿಷ್ಣುವರ್ಧನವಾಯು ಮಾಲಿನ್ಯಮೂಲಭೂತ ಕರ್ತವ್ಯಗಳುಪಂಚಾಂಗಗರ್ಭಧಾರಣೆಲಕ್ಷ್ಮಣ ತೀರ್ಥ ನದಿಮಾಧ್ಯಮಚಿತ್ರಕಲೆನಕ್ಷತ್ರಒಗಟುಬಾವಲಿಬಾಲ್ಯ ವಿವಾಹಆರೋಗ್ಯಕ್ಷಯನವರತ್ನಗಳುಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಭಾರತದ ಮುಖ್ಯಮಂತ್ರಿಗಳುಬಾರ್ಲಿಜ್ಯೋತಿಷ ಶಾಸ್ತ್ರದ ನಕ್ಷತ್ರಗಳುಸಂಧಿನಿರುದ್ಯೋಗಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಸಂಖ್ಯಾಶಾಸ್ತ್ರಕಲಿಯುಗಸವರ್ಣದೀರ್ಘ ಸಂಧಿಅರಿಸ್ಟಾಟಲ್‌ಕರ್ನಾಟಕದ ಏಕೀಕರಣಗೌತಮ ಬುದ್ಧನ ಕುಟುಂಬಪ್ರಜಾವಾಣಿರತನ್ ನಾವಲ್ ಟಾಟಾಹೊಯ್ಸಳ🡆 More