ಮಹಾಕವಿ ರನ್ನನ ಗದಾಯುದ್ಧ

’ಕವಿಚಕ್ರವರ್ತಿ’, ’ಕವಿರತ್ನ’ ಮುಂತಾದ ಬಿರುದುಗಳನ್ನು ಪಡೆದಿದ್ದ ಕವಿ 'ರನ್ನ'ನು ಕನ್ನಡ ಸಾಹಿತ್ಯ ಮಹಾಮಕುಟದಲ್ಲಿನ ಮೂರು ಅನರ್ಘ್ಯ ರತ್ನಗಳಲ್ಲಿ ಒಬ್ಬ.

ಹತ್ತನೇ ಶತಮಾನದಲ್ಲಿ ಜೀವಿಸಿದ್ದ ಈ ಜೈನಕವಿಯು ’ಅಜಿತನಾಥ ಪುರಾಣ’, ’ಸಾಹಸಭೀಮ ವಿಜಯಂ/ಗದಾಯುದ್ಧ’ ಮುಂತಾದ ೫ ಕೃತಿಗಳನ್ನು ರಚಿಸಿದ್ದಾನೆ.

ಮಹಾಕವಿ ರನ್ನನ ಗದಾಯುದ್ಧ

  • ’ಗದಾಯುದ್ಧ’ವನ್ನು ರನ್ನನು ತನ್ನ ಆಶ್ರಯದಾತ ಅರಸನಾದ ಸತ್ಯಾಶ್ರಯನನ್ನು ಮಹಾಭಾರತದ ಭೀಮನಿಗೆ ಹೋಲಿಸಿ, ಭೀಮನನ್ನೇ ಕಥಾನಾಯಕನನ್ನಾಗಿ ಕಲ್ಪಿಸಿ(ಕೊನೆಯಲ್ಲಿ ಪಟ್ಟಾಭಿಷೇಕವಾಗುವುದು ಭೀಮನಿಗೇ) ಬರೆದಿದ್ದಾನೆ. ಹತ್ತು ಆಶ್ವಾಸಗಳುಳ್ಳ ಈ ಚಂಪೂ ಕೃತಿಯು ಕೇವಲ ಗದಾಯುದ್ಧದ ಪ್ರಸಂಗವನ್ನಷ್ಟೇ ಕಥಾವಸ್ತುವನ್ನಾಗಿ ಹೊಂದಿದ್ದರೂ, ಸಮಗ್ರ ಮಹಾಭಾರತದ ಸಿಂಹಾವಲೋಕನವನ್ನಿಲ್ಲಿ ಕಾಣಬಹುದು.
  • ಭೀಮನ ಪರಾಕ್ರಮವನ್ನಷ್ಟೇ ಅಲ್ಲ, ಕರ್ಣ-ದುರ್ಯೋಧನರ ಸ್ನೇಹದ ಆಳ-ವಿಸ್ತಾರವನ್ನಿಲ್ಲಿ ಕಾಣುತ್ತೇವೆ. ಕರ್ಣನ ಸಾವಿಗಾಗಿ ಮರುಗುವ ದುರ್ಯೋಧನ ನನ್ನು ಕಂಡು ನಮಗೂ ಅಷ್ಟೇ ವ್ಯಥೆಯಾಗದೇ ಇರದು. ಎಲ್ಲೋ ಒಮ್ಮೆ ದುರ್ಯೋಧನನೂ ತುಂಬ ಇಷ್ಟವಾಗಿಬಿಡುತ್ತಾನೆ ಇಲ್ಲಿ! ಹಾಗಿದೆ ಆ ಪಾತ್ರದ ಪೋಷಣೆ.
  • ಕವಿಯು ತನ್ನ ಆಶ್ರಯದಾತನನ್ನು ಭೀಮನಿಗೆ ಹೋಲಿಸಿ ಈ ಕಾವ್ಯವನ್ನು ರಚಿಸಿದ್ದಾನೆ. ಹಾಗಾಗಿ ಹಲವಾರು ಐತಿಹಾಸಿಕ ಘಟನೆಗಳೂ(ಸತ್ಯಾಶ್ರಯನ ಬಗೆಗಿನ ಘಟನೆಗಳೂ) ಈ ಕಾವ್ಯದಲ್ಲಿ ಪ್ರಸ್ತಾಪಿತವಾಗಿವೆ. ಕೃತಿಯ ಆದಿಯಲ್ಲಿಯೇ ಕವಿಯು ತಾನು ಈ ಕೃತಿಯನ್ನು ಏಕೆ ಬರೆಯು ತ್ತಿರುವುದಾಗಿ ಹೇಳಿಬಿಡುತ್ತಾನೆ.


ಎನಿಸಿದ ಸತ್ಯಾಶ್ರಯದೇ
ವನೆ ಪೃಥ್ವೀವಲ್ಲಭಂ ಕಥಾನಾಯಕನಾ
ಗನಿಲಜನೊಳ್ ಪೋಲಿಸಿ ಪೇ
ೞ್ದನೀ ಗದಾಯುದ್ಧಮಂ ಮಹಾಕವಿ ರನ್ನಂ ||೧.೩೧||

ಕೃತಿ ನೆಗೞ್ದ ಗದಾಯುದ್ಧಂ
ಕೃತಿಗೀಶಂ ಚಕ್ರವರ್ತಿ ಸಾಹಸಭೀಮಂ
ಕೃತಿಯಂ ವಿರಚಿಸಿದನಲಂ
ಕೃತಿಯಂ ಕವಿರತ್ನನೆಂದೊಡೇವಣ್ಣಿಪುದೋ ||೧.೩೨||

ಮೊದಲೊಳ್ ಬದ್ಧವಿರೋಧದಿಂ ನೆಗೞ್ದ ಕುಂತೀಪುತ್ರರೊಳ್ ಭೀಮನಂ
ಕದ ಗಾಂಧಾರಿಯ ಪುತ್ರರೊಳ್ ಮೊದಲಿಗಂ ದುರ್ಯೋಧನಂ ಧರ್ಮಯು
ದ್ಧದೊಳಂತಾತನನಿಕ್ಕಿ ಕೊಂದನದಱಿಂ ಭೀಮಂ ಜಯೋದ್ಧಾಮನೆಂ
ಬುದನೆಂಬಂತಿದು ವಸ್ತುಯುದ್ಧಮೆನಿಸಲ್ ಪೇೞ್ದಂ ಗದಾಯುದ್ಧಮಂ ||೧.೩೩||

Tags:

ಕನ್ನಡರನ್ನ

🔥 Trending searches on Wiki ಕನ್ನಡ:

ದಾಸವಾಳಸುದೀಪ್ಹೃದಯಬೇಲೂರುಭಾರತ ಸಂವಿಧಾನದ ಪೀಠಿಕೆಮೈಗ್ರೇನ್‌ (ಅರೆತಲೆ ನೋವು)ಹಸಿರುಮನೆ ಪರಿಣಾಮಭಾರತದ ರಾಷ್ಟ್ರಪತಿಗಳ ಪಟ್ಟಿಬಸವೇಶ್ವರವಿಷ್ಣುಕರ್ನಾಟಕ ವಿಧಾನಸಭೆ ಚುನಾವಣೆ, ೨೦೧೮ಶಾಂತರಸ ಹೆಂಬೆರಳುಮಲೈ ಮಹದೇಶ್ವರ ಬೆಟ್ಟರವಿ ಡಿ. ಚನ್ನಣ್ಣನವರ್ಮಂಕುತಿಮ್ಮನ ಕಗ್ಗವಡ್ಡಾರಾಧನೆಎಸ್. ಬಂಗಾರಪ್ಪವೀರಪ್ಪ ಮೊಯ್ಲಿದೇವನೂರು ಮಹಾದೇವವಿನಾಯಕ ದಾಮೋದರ ಸಾವರ್ಕರ್ಗೌತಮಿಪುತ್ರ ಶಾತಕರ್ಣಿದುರ್ಗಸಿಂಹಪಕ್ಷಿಪುನೀತ್ ರಾಜ್‍ಕುಮಾರ್ಶಿವಕುಮಾರ ಸ್ವಾಮಿಮೈಸೂರು ಅರಮನೆಆಸ್ಪತ್ರೆಮೈಸೂರು ರಾಜ್ಯಗುಪ್ತ ಸಾಮ್ರಾಜ್ಯಕರ್ನಾಟಕದ ಮುಖ್ಯಮಂತ್ರಿಗಳುಭಾರತದ ಪ್ರಧಾನ ಮಂತ್ರಿಗಳ ಪಟ್ಟಿಮಳೆಅವರ್ಗೀಯ ವ್ಯಂಜನಭಾರತದ ಸಂವಿಧಾನ ರಚನಾ ಸಭೆಪುರಾತತ್ತ್ವ ಶಾಸ್ತ್ರಮಫ್ತಿ (ಚಲನಚಿತ್ರ)ಶ್ರೀಪಾದರಾಜರುಎರಡನೇ ಎಲಿಜಬೆಥ್ಹಂಪೆನಿರಂಜನಅನುಪಮಾ ನಿರಂಜನಲಾಲ್ ಬಹಾದುರ್ ಶಾಸ್ತ್ರಿಯಣ್ ಸಂಧಿಭಾರತ ಗಣರಾಜ್ಯದ ಇತಿಹಾಸವಿಶ್ವ ರಂಗಭೂಮಿ ದಿನದೆಹಲಿ ಸುಲ್ತಾನರುಓಂ ನಮಃ ಶಿವಾಯಕೆ. ಎಸ್. ನಿಸಾರ್ ಅಹಮದ್ಭಾರತದಲ್ಲಿ ಮೀಸಲಾತಿರಂಗಭೂಮಿಆರ್ಥಿಕ ಬೆಳೆವಣಿಗೆಅಕ್ಬರ್ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (೨೦೦೫)ಕರಾವಳಿ ಚರಿತ್ರೆಭಾರತದಲ್ಲಿನ ಚುನಾವಣೆಗಳುಪಲ್ಸ್ ಪೋಲಿಯೋಕನ್ನಡ ಸಾಹಿತ್ಯಕುಮಾರವ್ಯಾಸಕಾಗೆಮಹಿಳೆ ಮತ್ತು ಭಾರತಭಾರತದ ಕೇಂದ್ರ ಮಂತ್ರಿ ಮಂಡಲ ೨೦೧೪ಹಲ್ಮಿಡಿದೇವರ/ಜೇಡರ ದಾಸಿಮಯ್ಯಪರಿಪೂರ್ಣ ಪೈಪೋಟಿದರ್ಶನ್ ತೂಗುದೀಪ್ರಂಜಾನ್ಅವಾಹಕಬಿ. ಆರ್. ಅಂಬೇಡ್ಕರ್ಎಚ್.ಎಸ್.ಶಿವಪ್ರಕಾಶ್ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಭಾರತೀಯ ಸಶಸ್ತ್ರ ಪಡೆಕಪ್ಪೆ ಅರಭಟ್ಟಚನ್ನಬಸವೇಶ್ವರಕನ್ನಡಪ್ರಭಮೊಗಳ್ಳಿ ಗಣೇಶಎಂ. ಎಂ. ಕಲಬುರ್ಗಿಕೇಂದ್ರ ಪಟ್ಟಿಏಷ್ಯಾ ಖಂಡ🡆 More