ಅರೆತಲೆ ನೋವು ಮೈಗ್ರೇನ್‌

ಮೈಗ್ರೇನ್‌ ಒಂದು ನರವೈಜ್ಞಾನಿಕ ರೋಗಲಕ್ಷಣ, ದೈಹಿಕ ಗ್ರಹಿಕೆಯನ್ನು ವ್ಯತ್ಯಸ್ತಗೊಳಿಸುವ ಇದು ವಿಪರೀತ ತಲೆ ನೋವು ಮತ್ತು ವಾಕರಿಕೆ ಮೊದಲಾದವುಗಳನ್ನು ಉಂಟುಮಾಡುತ್ತದೆ.

ಶರೀರ ವೈಜ್ಞಾನಿಕವಾಗಿ 'ಮೈಗ್ರೇನ್‌ ತಲೆನೋವು' ಒಂದು ನರವೈಜ್ಞಾನಿಕ ಸ್ಥಿತಿ, ಸಾಮಾನ್ಯವಾಗಿ ಪುರುಷರಿಗಿಂತ ಮಹಿಳೆಯರಲ್ಲಿ ಇದು ಹೆಚ್ಚು. ಪ್ರಾಚೀನ ಫ್ರೆಂಚ್‌ನ migraigne ನಿಂದ migraine (ಮೈಗ್ರೇನ್) ಪದವನ್ನು ಎರವಲು ಪಡೆಯಲಾಗಿದೆ. (ಮ‌ೂಲತಃ "megrim" ಎಂದಿದ್ದ ಪದವನ್ನು 1777ರಲ್ಲಿ ಆಧುನಿಕ ಫ್ರೆಂಚ್ ಮಾದರಿಯಲ್ಲಿ ಮರುಉಚ್ಛಾರಣೆಗೆ ಒಳಪಡಿಸಲಾಯಿತು). ಈ ಫ್ರೆಂಚ್ ಪದ ಹಿಂದಿನ ಲ್ಯಾಟಿನ್ ಪದ hemicrania ಎಂಬ ಸಾಮಾನ್ಯ ಉಚ್ಛಾರಣೆಯಿಂದ ನಿಷ್ಪನ್ನಗೊಂಡಿದೆ. ಈ ಲ್ಯಾಟಿನ್ ಪದವೂ ಗ್ರೀಕ್‌‌ನಲ್ಲಿ "ಅರ್ಧ" ಮತ್ತು "ತಲೆಬುರುಡೆ" ಎಂಬರ್ಥವಿರುವ hemikrania ಎಂಬ ಗ್ರೀಕ್ ಪದವನ್ನು ಆಧರಿಸಿದೆ.

Migraine
Classification and external resources
ICD-10G43
ICD-9346
OMIM157300
DiseasesDB8207 (Migraine)
31876 (Basilar)
4693 (FHM)
MedlinePlus000709
eMedicineneuro/218 neuro/517 emerg/230 neuro/529
MeSHD008881

ಮೈಗ್ರೇನ್‌ ತಲೆನೋವು ಏಕಪಾರ್ಶ್ವೀಯವಾಗಿ, ಮಿಡಿಯುತ್ತದೆ ಹಾಗೂ ಇದು 4ರಿಂದ 72 ಗಂಟೆಗಳವರೆಗೆ ಇರುತ್ತದೆ; ರೋಗಲಕ್ಷಣಗಳೆಂದರೆ - ವಾಕರಿಕೆ, ವಾಂತಿ, ಫೋಟೊಫೋಬಿಯ (=ಬೆಳಕಿನ ಭಯ) ಮತ್ತು ಫೋನೊಫೋಬಿಯ (=ದ್ವನಿ ಭಯ). ಮೈಗ್ರೇನ್‌ ತಲೆನೋವಿನಿಂದ ಬಳಲುವ ಸರಿಸುಮಾರು ಮ‌ೂರನೇ ಒಂದರಷ್ಟು ಮಂದಿ ಅಸಾಮಾನ್ಯ ದೃಷ್ಟಿಯ, ಘ್ರಾಣ ಸಂಬಂಧಿ ಅಥವಾ ಇತರ ಇಂದ್ರಿಯ ಅನುಭವಗಳ ಸೆಳವು ಸೂಚನೆ(aura)ಯನ್ನು ಗ್ರಹಿಸುತ್ತಾರೆ. ಇವು ಮೈಗ್ರೇನ್‌ ಕಾಣಿಸಿಕೊಳ್ಳುವುದರ ಮುನ್ಸೂಚನಾ ಲಕ್ಷಣಗಳು. ತಲೆನೋವಿಗೆ ನೋವು ಶಾಮಕ, ವಾಕರಿಕೆಗೆ ವಾಂತಿ-ಶಮನಕ್ಕೆ ಔಷಧಗಳನ್ನು ತೆಗೆದುಕೊಳ್ಳುವುದು ಹಾಗೂ ಪ್ರಚೋದಕ ಕಾರಣಗಳಿಂದ ದೂರವಿರುವುದು ಆರಂಭಿಕ ಚಿಕಿತ್ಸೆಯಾಗಿದೆ. ಮೈಗ್ರೇನ್‌ ತಲೆನೋವಿಗೆ ಕಾರಣ ತಿಳಿದಿಲ್ಲ; ಸಿರೊಟೋನಿನ್ ಸಂಬಂಧಿತ ನಿಯಂತ್ರಣ ವ್ಯವಸ್ಥೆಯಲ್ಲಿನ ಏರುಪೇರು ಇದಕ್ಕೆ ಕಾರಣವೆಂಬುದು ಸಾಮಾನ್ಯವಾಗಿ ಸಿದ್ಧಾಂತ . ಮೈಗ್ರೇನ್‌ ತಲೆನೋವಿನಲ್ಲಿ ಭಿನ್ನತೆಗಳಿವೆ, ಕೆಲವು ಮಿದುಳುಕಾಂಡ(ಬ್ರೈನ್‌ಸ್ಟೆಮ್)ದಲ್ಲಿ ಹುಟ್ಟುತ್ತವೆ (ಜೀವಕೋಶಗಳ ನಡುವೆ ಕ್ಯಾಲ್ಸಿಯಂ ಮತ್ತು ಪೊಟ್ಯಾಶಿಯಂ ಐಯಾನುಗಳ ಸಾಗಣೆ ಸರಿಯಾಗಿರದಿರುವುದು) ಮತ್ತೆ ಕೆಲವು ಆನುವಂಶೀಯವಾಗಿ ಬರುತ್ತವೆ. ಮೈಗ್ರೇನ್‌ ತಲೆನೋವನ್ನು ಹೆಚ್ಚಿಸುವಲ್ಲಿ 60ರಿಂದ 65 ಪ್ರತಿಶತ ಆನುವಂಶೀಯ ಪ್ರಭಾವವಿದೆ ಎಂಬುದನ್ನು ಅವಳಿಗಳ ಮೇಲೆ ಮಾಡಿದ ಅಧ್ಯಯನಗಳು ಸೂಚಿಸುತ್ತವೆ. ಹಾರ್ಮೋನಿನ ಏರಿಳಿತವೂ ಮೈಗ್ರೇನ್‌‌ಗೆ ಕಾರಣವಾಗುತ್ತದೆ: 75 ಪ್ರತಿಶತದಷ್ಟು ವಯಸ್ಕ ರೋಗಿಗಳು ಮಹಿಳೆಯರಾಗಿದ್ದಾರೆ, ಆದರೂ ಮೈಗ್ರೇನ್‌ ಹರೆಯದ ಹುಡುಗ ಮತ್ತು ಹುಡುಗಿಯರಲ್ಲಿ ಸಮ ಪ್ರಮಾಣದಲ್ಲಿ ಪರಿಣಾಮ ಬೀರುತ್ತದೆ; ಮೈಗ್ರೇನ್‌ ತಲೆನೋವಿನ ಲಕ್ಷಣಗಳು ಗರ್ಭಣಿಯರಲ್ಲಿ ಕಾಣಿಸಿಕೊಳ್ಳುವುದಿಲ್ಲ, ಆದರೂ ಮೈಗ್ರೇನ್‌ ಇರುವ ಕೆಲವು ಮಹಿಳೆಯರಲ್ಲಿ ಗರ್ಭಿಣಿಯರಾದಾಗಲೂ ಆಗಾಗ ಕಾಣಿಸಿಕೊಳ್ಳುವುದುಂಟು. [ಸೂಕ್ತ ಉಲ್ಲೇಖನ ಬೇಕು]

ವಿಂಗಡಣೆ

ಅಂತಾರಾಷ್ಟ್ರೀಯ ತಲೆನೋವು ಸೊಸೈಟಿಯು (IHS) ಮೈಗ್ರೇನ್‌ ತಲೆನೋವನ್ನು ವಿಂಗಡಿಸುತ್ತದೆ.

ನೋವಿನ ತೀಕ್ಷ್ಣತೆಯ ನಿರೂಪಣೆ

IHS ನೋವಿನ ತೀಕ್ಷ್ಣತೆಯನ್ನು ನಾಲ್ಕು ವಿಧಗಳಾಗಿ ವಿಂಗಡಿಸುತ್ತಡೆ:

ಕ್ರಮ ಸಂಖ್ಯೆ ಹೆಸರು ವಿವರಣೆ
0 ನೋವಿಲ್ಲ
1 ಸ್ವಲ್ಪ ನೋವು ಸಾಮಾನ್ಯ ಚಟುವಟಿಕೆಗೆ ಅಡ್ಡಿಬಾರದು
2 ಸಹಿಸಬಹುದಾದ ನೋವು ಪ್ರತಿರೋಧಿಸುತ್ತದೆ, ಸಾಮಾನ್ಯ ಚಟುವಟಿಕೆಗೆ ಅಡ್ಡಿಯೊಡ್ಡೊಲ್ಲ
3 ತೀವ್ರ ನೋವು ಎಲ್ಲಾ ಚಟುವಟಿಕೆಗೆ ತಡೆಯೊಡ್ಡುತ್ತದೆ

ರೋಗ ಸೂಚನೆ ಹಾಗೂ ಲಕ್ಷಣಗಳು

ಮೈಗ್ರೇನ್‌‌ನ ರೋಗ ಸೂಚನೆ ಮತ್ತು ಲಕ್ಷಣಗಳು ಎಲ್ಲಾ ರೋಗಿಗಳಲ್ಲಿ ಒಂದೇ ರೀತಿ ಇರುವುದಿಲ್ಲ,ಅದು ವ್ಯತ್ಯಾಸಗೊಳ್ಳುತ್ತದೆ. ಆದ್ದರಿಂದ, ಒಬ್ಬ ವ್ಯಕ್ತಿಗೆ ಈ ರೋಗ ದಾಳಿ ಇಡುವ ಮೊದಲು,ತಗುಲಿದಾಗ ಮತ್ತು ನಂತರ ಯಾವ ರೀತಿಯ ಅನುಭವವನ್ನು ಪಡೆಯುತ್ತಾನೆ ಎಂಬುದನ್ನು ನಿಖರವಾಗಿ ನಿರೂಪಿಸಲು ಅಸಾಧ್ಯ. ಈ ಕೆಳಗೆ ನೀಡಿದ ಮೈಗ್ರೇನ್‌ ದಾಳಿಯ ನಾಲ್ಕು ಹಂತಗಳು ಸಾಮಾನ್ಯವಾದರೂ ಎಲ್ಲಾ ಮೈಗ್ರೇನ್‌‌ಗೆ ಈಡಾದವರಲ್ಲೆಲ್ಲಾ ಇರುತ್ತದೆಂದೇನಿಲ್ಲ. ಮೈಗ್ರೇನ್‌ ರೋಗದ ರೀತಿ ಒಂದೇ ಆದರೂ ಅನುಭವದ ಹಂತಗಳು ಮತ್ತು ರೋಗ ಲಕ್ಷಣಗಳು ಒಬ್ಬರಿಂದ ಮತ್ತೊಬ್ಬರಿಗೆ ಬದಲಾಗುವುದು ಇದರ ಮತ್ತೊಂದು ಗುಣ.

  1. ಪೂರ್ವ ಲಕ್ಷಣ - ಇದು ತಲೆನೋವಿನ ಗಂಟೆಗಳ ಅಥವಾ ದಿನಗಳ ಮೊದಲು ಕಾಣಿಸಿಕೊಳ್ಳುತ್ತದೆ.
  2. ಸೆಳವು ಸೂಚನೆ - ಇದು ತಲೆನೋವಿನ ಮೊದಲು ಬರುತ್ತದೆ.
  3. ನೋವಿನ ಹಂತ - ತಲೆನೋವು ಹಂತ ಎಂದೂ ಕರೆಯುತ್ತಾರೆ.
  4. ನಂತರದ ಲಕ್ಷಣಗಳು.

ರೋಗದ ಪೂರ್ವಲಕ್ಷಣದ ಹಂತ

ರೋಗದ ಪೂರ್ವಲಕ್ಷಣಗಳು 40–60%ನಷ್ಟು ಮೈಗ್ರೇನ್‌ ರೋಗಿ(ಮೈಗ್ರೇನರ್ಸ್‌)ಗಳಲ್ಲಿ ಕಂಡುಬರುತ್ತದೆ. ಚಂಚಲ ಮನಸ್ಥಿತಿ, ಕಿರಿಕಿರಿ ಉಂಟಾಗುವಿಕೆ, ಖಿನ್ನತೆ ಅಥವಾ ಸುಖ ಭ್ರಮಾಧೀನತೆ, ಆಯಾಸ, ಆಕಳಿಕೆ, ಮಿತಿಮೀರಿದ ತೂಕಡಿಕೆ,ನಿರ್ದಿಷ್ಟ ಆಹಾರಕ್ಕಾಗಿ ಹಪಹಪಿಸುವುದು(ಉದಾ: ಚಾಕೋಲೇಟ್), ಸ್ನಾಯು ಬಿಗಿತ(ವಿಶೇಷವಾಗಿ ಕತ್ತಿನಲ್ಲಿ), ಮಲ ಬದ್ಧತೆ ಅಥವಾ ಭೇದಿ, ಅಧಿಕ ಮ‌ೂತ್ರ ವಿಸರ್ಜನೆ ಮತ್ತು ಇತರ ಒಳಾಂಗಗಳ ರೋಗಲಕ್ಷಣಗಳು ಮೊದಲಾದವುಗಳು ಈ ಹಂತದಲ್ಲಿ ಕಾಣಿಸಿಕೊಳ್ಳಬಹುದು. ಈ ರೋಗ ಲಕ್ಷಣಗಳು ಕೆಲವು ಗಂಟೆಗಳೊಗಾಗಿ ಅಥವಾ ದಿನಗಳೊಳಗಾಗಿ ಸಾಮಾನ್ಯವಾಗಿ ಮೈಗ್ರೇನ್‌ ತಲೆನೋವಿನ ದಾಳಿಗೆ ಕಾರಣವಾಗುತ್ತವೆ. ರೋಗಿಗೆ ಅಥವಾ ವೀಕ್ಷಕ ಕುಟುಂಬ ವರ್ಗಕ್ಕೆ ಮೈಗ್ರೇನ್‌ ದಾಳಿಯು ಸಮೀಪದಲ್ಲಿರುವುದನ್ನು ಹೇಗೆ ಪತ್ತೆ ಹಚ್ಚ ಬಹುದು ಎಂಬುದನ್ನು ಅನುಭವದಿಂದ ಕಲಿಸುತ್ತದೆ.

ಸೆಳವು ಸೂಚನೆ ಹಂತ

ಸೆಳವು ಸೂಚನೆಯೊಂದಿಗೆ ಮೈಗ್ರೇನ್‌‌ನಿಂದ ನರಳುವ 20–30%ನಷ್ಟು ವ್ಯಕ್ತಿಗಳಲ್ಲಿ ಈ ವ್ಯಾಧಿ ಮೈಗ್ರೇನ್‌ಗೂ ಮುನ್ನ ಅಥವಾ ಅದರ ಸಂಗಡ ದಾಳಿ ಇಡುತ್ತದೆ. ಸೆಳವು ಸಹಿತದ ಮೈಗ್ರೇನ್‌ ಒಂದು ನರವೈಜ್ಞಾನಿಕ ವ್ಯಾಧಿ. 5ರಿಂದ 20 ನಿಮಿಷಗಳವರೆಗೆ ಕ್ರಮೇಣವಾಗಿ ಮುಗಿಬೀಳುವ ಇದು ಸಾಮಾನ್ಯವಾಗಿ 60 ನಿಮಿಷಗಳ ತನಕ ಇರುತ್ತದೆ. ಸೆಳವು ಸೂಚನೆ ಹಂತ ಕೊನೆಗೊಂಡ 60 ನಿಮಿಷಗಳೊಳಗೆ ಮೈಗ್ರೇನ್‌ ದಾಳಿಯ ತಲೆನೋವಿನ ಹಂತವು ಆರಂಭವಾಗುತ್ತದೆ, ಆದರೆ ಕೆಲವೊಮ್ಮೆ ಹಲವು ಗಂಟೆಗಳವರೆಗೆ ತಡವಾಗಬಹುದು ಮತ್ತು ಬಾರದೆಯೂ ಇರಬಹುದು. ಮೈಗ್ರೇನ್‌ ಸೆಳವು ಸೂಚನೆಯ ರೋಗಲಕ್ಷಣಗಳು ಕಣ್ಣಿಗೆ ಕಟ್ಟುವಂತೆ ಗೋಚರವಾಗ ಬಹುದು, ಇಂದ್ರಿಯ ಸಂಬಂಧಿಯೋ ಅಥವಾ ಸ್ನಾಯು ಚಲನೆಗೆ ಸಂಬಂಧಿಸಿದ್ದೋ ಆಗಿರಬಹುದು. ನರವೈಜ್ಞಾನಿಕ ಸಂಗತಿಗಳಲ್ಲಿ ದೃಷ್ಟಿ ಸೆಳವು ಸೂಚನೆಯು ಹೆಚ್ಚಾಗಿ ಕಂಡುಬರಯತ್ತದೆ ಇದರಿಂದಾಗಿ ದೃಗ್ಗೋಚರದಲ್ಲಿ ಅಡ್ಡಿಯುಂಟಾಗುತ್ತದೆ, ಬಿಳಿ ಮತ್ತು/ಅಥವಾ ಕಪ್ಪು ಬಣ್ಣದ ಅಥವಾ ವಿರಳವಾಗಿ ಬಹುಬಣ್ಣದ ಬೆಳಕು (ಫೋಟೋಪ್ಸಿಯಾ) ಸರಿಯಾಗಿ ಕಾಣಿಸುವುದಿಲ್ಲ ಅಥವಾ ಅಂಕುಡೊಂಕಾದ ಕಣ್ಣು ಕುಕ್ಕುವ ಗೆರೆಗಳು ಉಂಟಾಗಬಹುದು (ಕಿಡಿಕಾರುವ ಸ್ಕಾಟೋಮ; ಕೋಟೆಯ ಕಂಡಿಗಳುಳ್ಳ ಕೈಪಿಡಿಗೋಡೆಯಂತೆ ಕಾಣಿಸುತ್ತದೆ, ಆದ್ದರಿಂದ "ಪೋರ್ಟಿಫಿಕೇಶನ್ ಸ್ಪೆಕ್ಟ್ರಾ" ಅಥವಾ "ಟೈಕೋಪ್ಸಿಯ" ಎಂಬ ಪರ್ಯಾಯ ಪದಗಳು ಬಂದಿವೆ[ಸೂಕ್ತ ಉಲ್ಲೇಖನ ಬೇಕು]). ನೋಟ ಮಂಕಾಗುವುದು, ದಪ್ಪ ಗಾಜು ಅಥವಾ ಹೊಗೆ ಹಿಡಿಸಲಾದ ಗಾಜಿನ ಮೂಲಕ ನೋಡಿದಂತಾಗುವುದು, ದೃಷ್ಟಿ ಕಕ್ಷವಿಲ್ಲದಂತಾಗುವುದು(=ಅಕ್ಕ ಪಕ್ಕದ್ದು ಕಾಣದ ಸ್ಥಿತಿ), ಅರೆಕುರುಡುತನಕ್ಕೆ(=hemianopsia) ತುತ್ತಾಗುವುದು ಇವೇ ಮೊದಲಾದ ದೃಷ್ಟಿ ದೋಷ ಉಂಟಾಗಿರುವುದನ್ನು ಕೆಲವರು ಹೇಳಿಕೊಂಡಿದ್ದಾರೆ. ಮೈಗ್ರೇನ್‌ನ ಶರೀರ ಸೂಕ್ಷ್ಮಗ್ರಾಹಿ(ಸೊಮ್ಯಾಟೊಸೆನ್ಸರಿ) ಸೆಳವು ಸೂಚನೆಯು ಡಿಜಿಟೊಲಿಂಗ್ವಲ್ ಅಥವಾ ಕೈರೊ-ಓರಲ್ ಪ್ಯಾರೆಸ್ತೆಸಿಯಾಸ್ ಅನ್ನು ಉಂಟುಮಾಡುತ್ತದೆ. ಈ ಪರಿಸ್ಥಿತಿಯಲ್ಲಿ ಅಂದರೆ ಕೈ ಮತ್ತು ಬಾಹುಗಳಲ್ಲಿ ಮಾತ್ರವೇ ಅಲ್ಲದೆ ಮ‌ೂಗು-ಬಾಯಿಯಲ್ಲಿಯ‌ೂ ಪಿನ್ನು-ಸೂಜಿಯಿಂದ ಚುಚ್ಚಿದಂಥ ವೇದನೆಯ ಅನುಭವವಾಗುತ್ತದೆ. ಪ್ಯಾರೆಸ್ತೆಸಿಯಾ ಬಾಹುಗಳಿಂದ ಮುಂದಕ್ಕೆ ಹೋಗಿ, ಮುಖ, ತುಟಿ ಮತ್ತು ನಾಲಗೆಯವರೆಗೂ ವ್ಯಾಪಿಸಿಕೊಳ್ಳತ್ತದೆ.ಸೆಳವು ಸೂಚನೆಯ ಇತರ ರೋಗಲಕ್ಷಣಗಳು - ಶ್ರಾವ್ಯ ಅಥವಾ ಘ್ರಾಣ ಸಂಬಂಧಿ ಭ್ರಮೆ, ತಾತ್ಕಾಲಿಕ ಡಿಸ್ಫೇಸಿಯಾ, ತಲೆಸುತ್ತು, ಮುಖ ಮತ್ತು ಕೈಕಾಲುಗಳ ಜುಮ್ಮೆನಿಸುವಿಕೆ ಅಥವಾ ಮರಗಟ್ಟುವಿಕೆ ಮತ್ತು ಸ್ಪರ್ಶಕ್ಕೆ ಅತಿಸೂಕ್ಷ್ಮ ಪ್ರತಿಕ್ರಿಯೆ ನೀಡುವುದಾಗಿದೆ.

ನೋವಿನ ಹಂತ

ಮೈಗ್ರೇನ್‌ ತಲೆನೋವು ಒಂದು ಮಗ್ಗುಲಲ್ಲಿ, ಜೋರಾಗಿ ಮಿಡಿಯುತ್ತದೆ ಹಾಗೂ ದೈಹಿಕ ಕ್ರಿಯೆಯಿಂದಾಗಿ ಇದು ತೀವ್ರಗೊಳ್ಳುತ್ತದೆ. ಈ ಎಲ್ಲ ಲಕ್ಷಣಗಳೂ ಕಾಣಿಸಿಕೊಳ್ಳುತ್ತದೆ ಎಂದೇನಿಲ್ಲ. ನೋವು ಒಂದು ಬದಿಯಲ್ಲಿ ಆರಂಭವಾಗಿ ಎರಡು ಬದಿಗೂ ಹರಡಬಹುದು ಅಥವಾ ಪ್ರಾರಂಭದಲ್ಲೇ ಎರಡು ಬದಿಯಲ್ಲಿಯ‌ೂ ಇರಬಹುದು. ಸಾಮಾನ್ಯವಾಗಿ ಈ ತಲೆನೋವು ಪ್ರತಿ ಸಲ ದಾಳಿ ಇಟ್ಟಾಗಲೂ ಬೇರೆ ಬೇರೆ ಬದಿಯನ್ನು ಆಯ್ಕೆ ಮಾಡಿಕೊಳ್ಳುತ್ತದೆ. ಆರಂಭದಲ್ಲಿ ಈ ನೋವು ಸ್ವಲ್ಪ ಸ್ವಲ್ಪ ಇರುತ್ತದೆ. ನೋವು ಒಮ್ಮೆ ತನ್ನ ಪರಾಕಾಷ್ಠೆಯನ್ನು ಮುಟ್ಟಿ ನಂತರ ಕಡಿಮೆಯಾಗುತ್ತದೆ, ಸಾಮಾನ್ಯವಾಗಿ ವಯಸ್ಕರಲ್ಲಿ 4ರಿಂದ 72 ಗಂಟೆಗಳ ಕಾಲ ಹಾಗೂ ಮಕ್ಕಳಲ್ಲಿ 1ರಿಂದ 48 ಗಂಟೆಗಳ ಕಾಲ ಹಾಗೇ ಇರುತ್ತದೆ. ಮೈಗ್ರೇನ್‌ ದಾಳಿಯ ಪುನರಾವರ್ತನೆ ಭಾರೀ ಬದಲಾವಣೆಗೆ ಒಳಗಾಗುವ ಸಂಗತಿ. ಇದು ಇಡೀ ಜೀವಮಾನದಲ್ಲಿ ಕೆಲವೊಮ್ಮೆ ಮಾತ್ರ ಬರಬಹುದು ಅಥವಾ ಒಂದು ವಾರದಲ್ಲೇ ಅನೇಕ ಬಾರಿ ದಾಳಿ ಮಾಡಬಹುದು. ಸಾಧಾರಣ ಮಟ್ಟದ ಮೈಗ್ರೇನ್‌ಪೀಡಿತರುಒಂದು ತಿಂಗಳಲ್ಲಿ ಒಂದರಿಂದ ಮ‌ೂರು ಬಾರಿ ತಲೆನೋವು ಅನುಭವಿಸುತ್ತಾರೆ. ತಲೆನೋವಿನ ತೀವ್ರತೆಯಲ್ಲಿ ಭಾರೀ ವ್ಯತ್ಯಾಸವಿರುತ್ತದೆ.

ಮೈಗ್ರೇನ್‌‌ ನೋವಿನಿಂದಾಗಿ ಇತರ ರೋಗಲಕ್ಷಣಗಳೂ ಸಹವರ್ತಿಗಳಂತೆ ಹಿಂಬಾಲಿಸುತ್ತವೆ. ಪ್ರತಿಶತ 90ರಷ್ಟು ರೋಗಿಗಳಲ್ಲಿ ವಾಕರಿಕೆ, ಹಾಗೂ ಮ‌ೂರನೇ ಒಂದರಷ್ಟು ರೋಗಿಗಳಲ್ಲಿ ವಾಂತಿಯ ಲಕ್ಷಣ ಕಂಡುಬರುತ್ತವೆ. ಅನೇಕ ರೋಗಿಗಳು ಫೋಟೊಫೋಬಿಯ(=ಬೆಳಕಿನ ಭಯ), ಫೋನೊಫೋಬಿಯ(=ಧ್ವನಿ ಭಯ) ಮತ್ತು ಓಸ್ಮೊಫೋಬಿಯ(=ವಾಸನೆಯ ಭಯ) ಮೊದಲಾದ ಭಯಗಳಿಂದ ಐಂದ್ರಿಯಕ ಉದ್ವೇಗ ಉದ್ರೇಕಗಳಿಗೆ ಒಳಗಾಗುತ್ತಾರೆ.ಇವುಗಳಿಂದ ಪಾರಾಗುವ ಉದ್ದೇಶದಿಂದ ಪ್ರಶಾಂತವಾದ ಕತ್ತಲ ಕೋಣೆಯ ಮೊರೆ ಹೋಗುತ್ತಾರೆ. ದೃಷ್ಟಿಗೋಚರ ಮಸುಕಾಗುವಿಕೆ, ಉಸಿರುಗಟ್ಟುವಿಕೆ, ಭೇದಿ, [[ಪಾಲಿಯ‌ೂರಿಯ(=ಅತಿ ಮ‌ೂತ್ರ) ಬಿಳಿಚಿಕೊಳ್ಳುವಿಕೆ|ಪಾಲಿಯ‌ೂರಿಯ(=ಅತಿ ಮ‌ೂತ್ರ) ಬಿಳಿಚಿಕೊಳ್ಳುವಿಕೆ]] ಅಥವಾ ಬೆವರುವಿಕೆ ಮೊದಲಾದವುಗಳು ತಲೆನೋವಿನ ಹಂತದಲ್ಲಿ ಕಾಣಿಸಿಕೊಳ್ಳಬಹುದು. ತಲೆಬುರುಡೆ ಅಥವಾ ಮುಖದಲ್ಲಿ ಯಡಿಮ (=ನೀರಿನಂಥ ದ್ರವ ತುಂಬಿ ಊದಿಕೊಳ್ಳುವುದು)ಉಂಟಾಗಬಹುದು, ತಲೆಬುರುಡೆ ಮೃದುವಾಗುವುದು, ಕಪೋಲದಲ್ಲಿ ಅಭಿಧಮನಿ ಅಥವಾ ಅಪಧಮನಿಗಳು ಹೊರಕ್ಕೆ ಎದ್ದುಕಾಣುವುದು ಅಥವಾ ಕತ್ತು ಬಿಗುವಾಗುವುದು ಮತ್ತು ಮೃದುವಾಗುವುದು ಇತ್ಯಾದಿ ಲಕ್ಷಣಗಳೂ ಕಂಡುಬರಬಹುದು. ಏಕಾಗ್ರತೆಗೂ ಆಲೋಚನಾ ಲಹರಿಗೂ ಇದು ಭಂಗ ತರುತ್ತದೆ. ನೋವಿನ ತೀವ್ರತೆಯಿಂದಾಗಿ ಶೀತ ಮತ್ತು ಥಂಡಿ ಅಡರಿದಂತಾಗುತ್ತದೆ. ಈ ಹಂತದಲ್ಲಿ ತಲೆಸುತ್ತು ಬರಬಹುದು; ಹಾಗೆ ಬಂದರೆವೆಸ್ಟಿಬ್ಯುಲಾರ್ ಮೈಗ್ರೇನ್‌ ಎಂದು ಅದನ್ನು ಹೇಳಲಾಗುತ್ತದೆ.ಇದು ಮೈಗ್ರೇನ್‌‌ನ ವ್ಯತ್ಯಾಸಗೊಂಡ ಇನ್ನೊಂದು ರೂಪ. ನಿಜವಾಗಿ ತಲೆಸುತ್ತುವುದಕ್ಕಿಂತ, ಹೆಚ್ಚಾಗಿ ತಲೆತಿರುಗುವ ಹಾಗೆ[ಸೂಕ್ತ ಉಲ್ಲೇಖನ ಬೇಕು] ಹಾಗೂ ಮ‌ೂರ್ಛೆ ಬೀಳುವ ರೀತಿಯ ಅನುಭವ ಆಗಬಹುದು.

ನಂತರದ ಹಂತ

ರೋಗಿಯು ಹೆಚ್ಚಾಗಿ "ಜಡತ್ವ" ಅಥವಾ ಆಯಾಸ ಅನುಭವಿಸಬಹುದು ಹಾಗೂ ತಲೆನೋವು, ಕಷ್ಟಸಾಧ್ಯ ಗ್ರಹಿಕೆ, ಜಠಗರುಳಿನ ರೋಗ ಲಕ್ಷಣ, ಮನಸ್ಸಿನ ಚಂಚಲ ಸ್ಥಿತಿ ಮತ್ತು ಬಳಲಿಕೆ ಉಂಟಾಗಬಹುದು. ಮೈಗ್ರೇನ್ ದಾಳಿಯ ನಂತರ ಕೆಲವರು ಅಸಾಧಾರಣ ಉಲ್ಲಾಸ ಅಥವಾ ಭ್ರಮಾಧೀನ ಸುಖದಲ್ಲಿ ಇದ್ದರೆ ಇನ್ನು ಕೆಲವರು ಖಿನ್ನತೆಗೂ ಆಲಸ್ಯಕ್ಕೂ ಒಳಗಾಗುತ್ತಾರೆ. ಹಸಿವಾಗದಿರುವುದು, ಬೆಳಕಿನ ಭಯ ಮತ್ತು ತಲೆಸುತ್ತು ಮೊದಲಾದ ತಲೆ ನೋವಿನ ಹಂತದ ಕೆಲವು ಸಣ್ಣ ರೋಗ ಲಕ್ಷಣಗಳು ಮುಂದುವರಿಯಬಹುದು. ಕೆಲವರಲ್ಲಿ 5ರಿಂದ 6ಗಂಟೆಗಳ ನಸುನಿದ್ರೆಯು ತಲೆ ನೋವನ್ನು ತಗ್ಗಿಸಬಹುದು, ಆದರೆ ರೋಗಿಯು ಹಠಾತ್ತಾಗಿ ಎದ್ದರೆ ಅಥವಾ ಕೂತರೆ ಸ್ವಲ್ಪ ಪ್ರಮಾಣದ ತಲೆ ನೋವು ಮತ್ತೆ ಬರಬಹುದು. ಚೆನ್ನಾಗಿ ನಿದ್ರೆ ಮಾಡಿ ಈ ರೋಗ ಲಕ್ಷಣಗಳನ್ನು ಪರಿಹರಿಸಿಕೊಳ್ಳಬಹುದಾದರೂ, ಅದು ಹೋಗೇ ಹೋಗುತ್ತದೆಂಬ ಖಚಿತತೆ ಇಲ್ಲ. ಬಳಲಿ ಚೇತರಿಸಿಕೊಳ್ಳುವಲ್ಲಿ ಕೆಲವರದು ಇತರರಿಗಿಂತ ವಿಭಿನ್ನ.

ಪ್ರಚೋದಕಗಳು

ತೀವ್ರ ಮೈಗ್ರೇನ್‌ ತಲೆನೋವಿಗೆ ಕಾರಣವಾಗುವ ಯಾವುದೇ ಅಂಶವನ್ನು 'ಮೈಗ್ರೇನ್‌ ಪ್ರಚೋದಕ' ಎನ್ನುತ್ತಾರೆ. ಈ ಪ್ರಚೋದಕಗಳ ಪ್ರಭಾವಕ್ಕೆ ವ್ಯಕ್ತಿ ಸಂಪರ್ಕಕ್ಕೆ ಬಂದಾಗ ಅಥವಾ ಅಂಥ ಸಂದರ್ಭದಿಂದ ಹಿಂದೆ ಸರಿದಾಗ ತೀವ್ರ ಮೈಗ್ರೇನ್ ತಲೆನೋವು ಬರುತ್ತದೆ. ವರ್ತನೆ, ಪರಿಸರ, ನಂಜು, ಆಹಾರ ಕ್ರಮ, ರಾಸಾಯನಿಕ ಅಥವಾ ಹಾರ್ಮೋನಿನಿಂದ ಉಂಟಾಗುತ್ತವೆಂದು ಈ ಪ್ರಚೋದಕಗಳನ್ನು ವರ್ಗೀಕರಿಸಬಹುದು. ವೈದ್ಯಕೀಯ ಸಾಹಿತ್ಯದಲ್ಲಿ ಈ ಅಂಶಗಳನ್ನು 'ಒತ್ತರಕಾರಿಗಳು'(=ಪ್ರೆಸಿಪಿಟೆಂಟ್ಸ್)' ಎಂದು ಕರೆಯುತ್ತಾರೆ.

ಮೆಡ್‌ಲೈನ್‌ಪ್ಲಸ್ ಮೆಡಿಕಲ್ ಎನ್‌ಸೈಕ್ಲೋಪೀಡಿಯವು ನೀಡಿದ ಮೈಗ್ರೇನ್‌ ಪ್ರಚೋದಕಗಳ ಪಟ್ಟಿಯು ಈ ಕೆಳಗಿನಂತಿದೆ:

Migraine attacks may be triggered by:

  • Allergic reactions
  • Bright lights, loud noises, and certain odors or perfumes
  • Physical or emotional stress
  • Changes in sleep patterns
  • Smoking or exposure to smoke
  • Skipping meals
  • Alcohol
  • Menstrual cycle fluctuations, birth control pills, hormone fluctuations during the menopause transition
  • Tension headaches
  • Foods containing tyramine (red wine, aged cheese, smoked fish, chicken livers, figs, and some beans), monosodium glutamate (MSG) or nitrates (like bacon, hot dogs, and salami)
  • Other foods such as chocolate, nuts, peanut butter, avocado, banana, citrus, onions, dairy products, and fermented or pickled foods.

— MedlinePlus medical encyclopedia

ಕೆಲವೊಮ್ಮೆ ಮೈಗ್ರೇನ್‌‌ ಕಾಣಿಸಿಕೊಳ್ಳಲು ಸ್ಪಷ್ಟ "ಕಾರಣ"ಗಳಿರುವುದಿಲ್ಲ. ಕೆಲವು ಪರಿಸರದ ಅಂಶಗಳಿಗೆ ಪ್ರವೇಶಿಸುವುದರಿಂದ ವ್ಯಕ್ತಿಯ ಮೈಗ್ರೇನ್‌ ತೀವ್ರಗೊಳ್ಳುತ್ತದೆ ಅಥವಾ ಪ್ರಚೋದನೆಗೆ ಒಳಗಾಗುತ್ತದೆ ಎಂಬುದೊಂದು ಸಿದ್ಧಾಂತ. ಮೈಗ್ರೇನ್‌ಗೆ ಈಡಾಗುವವರ ತಲೆನೋವು ಮತ್ತು ಹಲವಾರು ಪ್ರಚೋದಕ ಅಂಶಗಳ ನಡುವಿನ ಸಂಬಂಧವನ್ನು ಗುರುತಿಸುವ ಮ‌ೂಲಕ ಹಾಗೂ ಮೈಗ್ರೇನ್ ಬಂದ ಬಗ್ಗೆ "ತಲೆನೋವು ಡೈರಿ" ದಾಖಲೆಯನ್ನು ಇಟ್ಟುಕೊಳ್ಳುವುದರ ಮ‌ೂಲಕ ಅವರ ತಲೆನೋವಿನ ಪ್ರಚೋದಕಗಳನ್ನು ಕಂಡುಹಿಡಿಯುವಂತೆ ಸಲಹೆ ನೀಡಲಾಗುತ್ತದೆ. ಪ್ರಚೋದಕ ಆಹಾರ ಕ್ರಮದಿಂದ ದೂರವಿರುವಂತೆಯೂ ಮುನ್ಸೂಚನೆ ಕೊಡಲಾಗುತ್ತದೆ. ಕೆಲವಷ್ಟು ಪ್ರಚೋದಕ ಅಂಶಗಳು ಅದರ ಪ್ರಮಾಣವನ್ನು ಅವಲಂಬಿಸಿರುತ್ತವೆ ಎಂಬುದು ಗಮನಾರ್ಹ. ಗಾಢವರ್ಣದ ಚಾಕೋಲೇಟ್‌ನ ಸಣ್ಣ ತುಂಡನ್ನು ತಿಂದರೆ ಬಾರದಿರುವ ಮೈಗ್ರೇನ್‌‌, ಅರ್ಧ ಭಾಗದಷ್ಟು ಅದೇ ಚಾಕೋಲೇಟ್‌ ತಿಂದರೆ ನೋವಿಗೆ ಪಕ್ಕಾಗಬಲ್ಲ ವ್ಯಕ್ತಿಗೆ ಖಂಡಿತವಾಗಿ ಬರಬಹುದು. ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಪ್ರಚೋದಕ ಅಂಶಗಳಿಗೆ ಈಡಾದಾಗ ಮೈಗ್ರೇನ್‌ ಉಂಟಾಗುವ ಸಂಭಾವ್ಯತೆ ಹೆಚ್ಚಾಗಿರುತ್ತದೆ. ಉದಾ. ಬಿಸಿ, ತೇವ ದಿನದಲ್ಲಿ ಹಲವಾರು ಪ್ರಚೋದಕ ಅಂಶಗಳಿರುವ ಆಹಾರವನ್ನು ಸೇವಿಸಿದರೆ ಒತ್ತಡದಿಂದ ಸ್ವಲ್ಪ ಪ್ರಮಾಣದ ನಿದ್ದೆ ಮಾಡಿದ ನಂತರ ಮೈಗ್ರೇನ್‌‌ ಖಂಡಿತವಾಗಿ ಬರಬಹುದು. ಆದರೆ ತಂಪಾದ ದಿನದಲ್ಲಿ ಒಂದು ಪ್ರಚೋದಕ ಅಂಶವಿರುವ ಆಹಾರವನ್ನು ಸೇವಿಸಿ, ಕನಿಷ್ಠ ಒತ್ತಡ ಇರುವ ಪರಿಸರದಲ್ಲಿ ಚೆನ್ನಾಗಿ ನಿದ್ರೆ ಮಾಡಿದರೆ ಮೈಗ್ರೇನ್‌ ಬರುವ ಸಂಭವವಿಲ್ಲ. ಮೈಗ್ರೇನ್‌ ಬರದಿರುವಂತೆ ತಡೆಯುವುದು ಬಹು ಕಷ್ಟ, ಆದರೆ ಮೈಗ್ರೇನ್‌ ದಿನಚರಿಯನ್ನು ನಿಖರವಾಗಿ ಬರೆದು ಇಟ್ಟುಕೊಂಡರೆ ಹಾಗೂ ಕ್ರಮಬದ್ಧವಾದ ಜೀವನಕ್ರಮದಿಂದ ಮೈಗ್ರೇನ್‌ನನ್ನು ದೂರವಿರಿಸಬಹುದು. ಕೆಲವು ಪ್ರಚೋದಕ ಅಂಶಗಳನ್ನು ವಾಸ್ತವಿಕವಾಗಿ ದೂರವಿರಿಸಲು ಸಾಧ್ಯವಿಲ್ಲ. ಉದಾ. ಹವಾಮಾನ ಅಥವಾ ಭಾವೋದ್ವೇಗಗಳು. ಆದರೆ ಪ್ರಚೋದಕ ಅಂಶಗಳನ್ನು ಮಿತಿಗೊಳಿಸುವ ಮ‌ೂಲಕ ತಪ್ಪಿಸಿಕೊಳ್ಳಲಾಗದ-ಅಂಶಗಳು ರೋಗಿಗಳ ಮೇಲೆ ಕಡಿಮೆ ಪರಿಣಾಮವನ್ನು ಬೀರುವಂತೆ ಮಾಡಬಹುದು.

ಆಹಾರ

ತಮಗೆ ಒಗ್ಗದ ಆಹಾರ ಪ್ರಚೋದಕಗಳನ್ನು ಗುರುತಿಸಿ ಅದನ್ನು ದೂರವಿರಿಸುವುದರಿಂದ ಮೈಗ್ರೇನ್‌ ಬರುವುದನ್ನು ಕಡಿಮೆ ಮಾಡಿದ ಸಂಗತಿಗಳನ್ನು ಮೈಗ್ರೇನ್‌ಗೆ ಈಡಾದ ಹಲವರು ಹೇಳುತ್ತಾರೆ. ಆದರೂ ಇದರ ಬಗ್ಗೆ ಇನ್ನಷ್ಟು ಅಧ್ಯಯನದ ಅವಶ್ಯಕತೆ ಇದೆ.

ಅಂಟುಪದಾರ್ಥ ಅಂಟುಪದಾರ್ಥವಿರುವ ಆಹಾರವನ್ನು ತ್ಯಜಿಸುವುದರಿಂದ ಮೈಗ್ರೇನ್‌ ಪೀಡಿತರ ಸಂಖ್ಯೆಯನ್ನು ಕಡಿಮೆ ಮಾಡಬಹುದು. ಉದರದ ಕಾಯಿಲೆ ಅಥವಾ ಅಂಟು ಪದಾರ್ಥದಿಂದ ಬರುವ ಇತರ ಕಾಯಿಲೆಗಳಿಗೆ ಒಳಗಾದವರಲ್ಲಿ, ಅಂಟು ಪದಾರ್ಥವನ್ನು ಸಹಿಸಿಕೊಳ್ಳಲಾಗದೇ ಇರುವುದರಿಂದ ಅಂಥ ವ್ಯಕ್ತಿಗಳಲ್ಲಿ ಮೈಗ್ರೇನ್‌ ಬರುವ ರೋಗಲಕ್ಷಣ ವ್ಯಕ್ತವಾಗುತ್ತದೆ. ಸಾಮಾನ್ಯ ಜನರಿಗಿಂತ ಮೈಗ್ರೇನ್‌ ರೋಗಿಗಳಲ್ಲಿ ಉದರದ ಕಾಯಿಲೆಯು(=ಕರಳು ಬೇನೆ) ಹತ್ತು ಪಟ್ಟು ಹೆಚ್ಚು ಕಂಡುಬರುವ ಸಂಭಾವ್ಯತೆ ಇದೆ ಹಾಗೂ ಅಂಟಿರದ ಆಹಾರವು ಈ ರೋಗಿಗಳಲ್ಲಿ ಮೈಗ್ರೇನ್‌ ಅನ್ನು ಹೋಗಲಾಡಿಸುತ್ತದೆ ಅಥವಾ ಕಡಿಮೆ ಮಾಡುತ್ತದೆ ಎಂಬುದನ್ನು ಒಂದು ಅಧ್ಯಯನವು ಕಂಡುಹಿಡಿದಿದೆ. ದೀರ್ಘಕಾಲದ ತಲೆನೋವಿನಿಂದ ಬಳಲುವ 10 ರೋಗಿಗಳ ಅಧ್ಯಯನವು, ಈ ಎಲ್ಲಾ ರೋಗಿಗಳು ಅಂಟುಪದಾರ್ಥಕ್ಕೆ ಸೂಕ್ಷ್ಮಗ್ರಾಹಿಯಾಗಿದ್ದಾರೆ ಎಂಬುದನ್ನು ತೋರಿಸಿಕೊಟ್ಟಿದೆ. ಅಂಟುಪದಾರ್ಥದ ಸಂವೇದನಾಶೀಲತೆಯಿಂದಾಗಿ ಪ್ರತಿಯೊಬ್ಬರೂ ಕೇಂದ್ರೀಯ ನರಮಂಡಲ ವ್ಯವಸ್ಥೆಯಲ್ಲಿ ಉರಿಯ‌ೂತವನ್ನು ಹೊಂದಿರುತ್ತಾರೆ ಎಂದು MRI ಸ್ಕ್ಯಾನ್‌ಗಳು ದೃಢಪಡಿಸಿವೆ. ಅಂಟು ಪದಾರ್ಥವಿರದ ಆಹಾರ ಕ್ರಮವನ್ನು ಆರಂಭಿಸಿದ ಒಂಭತ್ತರಲ್ಲಿನ ಏಳು ರೋಗಿಗಳ ತಲೆನೋವು ಸಂಪೂರ್ಣವಾಗಿ ನಿಂತುಹೋಯಿತು.

ಆಸ್ಪರ್ಟಮೆ ಆಸ್ಪರ್ಟಮೆಯು ಮೈಗ್ರೇನ್‌ ಅನ್ನು ಪ್ರಚೋದಿಸುತ್ತದೆ ಹಾಗೂ ಇದಕ್ಕೆ ಉಪಾಖ್ಯಾನ ರೂಪದ ಸಾಕ್ಷ್ಯವಿದೆ, ಇದನ್ನು ವೈದ್ಯಕೀಯವಾಗಿ ಸಾಬೀತುಪಡಿಸಲಾಗಿಲ್ಲ.

MSG ಮನಃಶಾತಿಗಾಗಿ ನೀಡಲಾಗುವ ಶಮನೌಷಧಿ-ನಿಯಂತ್ರಿತ ಪ್ರಯೋಗದಲ್ಲಿ, ಖಾಲಿ ಹೊಟ್ಟೆಗೆ ಮೋನೊಸೋಡಿಯಂ ಗ್ಲುಟನಮೇಟ್ಅನ್ನು (MSG) ಹೆಚ್ಚಿನ ಪ್ರಮಾಣದಲ್ಲಿ (2.5 ಗ್ರಾಂಗಳು) ತೆಗೆದುಕೊಂಡಾಗ ಮನಃಸಮಾಧಾನವಾಗುವ ಬದಲಿಗೆ ತಲೆನೋವನ್ನೂ ಒಳಗೊಂಡಂತೆ ಪ್ರತಿಕೂಲ ರೋಗ ಲಕ್ಷಣಗಳು ಕಾಣಿಸಿಕೊಂಡವು. ಆದರೆ 3.5ಗ್ರಾಂ MSG ಯನ್ನು ಆಹಾರದೊಂದಿಗೆ ನೀಡಿದಾಗ ಯಾವುದೇ ಪರಿಣಾಮ ಬೀರದಿರುವುದನ್ನು ಮತ್ತೊಂದು ಪ್ರಯೋಗವು ತೋರಿಸಿಕೊಟ್ಟಿದೆ.

ತೈರಮಿನ್ ದಿ ನ್ಯಾಷನಲ್ ಹೆಡ್‌ಏಕ್ ಫೌಂಡೇಶನ್ ತೈರಮಿನ್ ಅಧ್ಯಯದ ಆಧಾರದಲ್ಲಿ ಪ್ರಚೋದಕಗಳ ಪಟ್ಟಿಯನ್ನು ಹೊಂದಿದೆ, ಇದು ಪ್ರಚೋದಕಗಳ ಬಗ್ಗೆ ಎಚ್ಚರಿಕೆ ಮತ್ತು ತಪ್ಪಿಸಿಕೊಳ್ಳಬಹುದಾದ ವಿವರಗಳನ್ನು ಒಳಗೊಂಡಿದೆ. ಮೈಗ್ರೇನ್‌ ಮೇಲೆ ತೈರಮಿನ್‌ನ ಪರಿಣಾಮ ಇರುವ ಬಗ್ಗೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ ಎಂಬುದನ್ನು 2003ರ ವೈದ್ಯಕೀಯ ಸಮೀಕ್ಷೆಯೊಂದು ಸೂಚಿಸಿದೆ.

ಇತರೆ ಆಹಾರಕ್ರಮದ ಪ್ರಚೋದಕ ಅಂಶಗಳ ಬಗೆಗಿನ ಲಭ್ಯವಿರುವ ಮಾಹಿತಿಯು ರೋಗಿಗಳ ವೈಯಕ್ತಿಕ ನಿರ್ಧರಿಸುವಿಕೆಯನ್ನು ಅವಲಂಬಿಸಿರುತ್ತದೆ ಎಂದು 2005ರ [[ಸ್ಥೂಲ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ.|ಸ್ಥೂಲ ಸಮೀಕ್ಷೆ[[ಯಲ್ಲಿ ವ್ಯಕ್ತವಾಗಿದೆ.]]]] ಕೆಲವು ಆಹಾರ ಕ್ರಮದ ಪ್ರಚೋದಕ ಅಂಶಗಳು ನಿಜವಾಗಿ ಮೈಗ್ರೇನ್‌ಅನ್ನು ಪ್ರಚೋದಿಸುವಂತೆ ಅಥವಾ ತ್ವರಿತವಾಗಿಸುವಂತೆ ಕಾಣಿಸುತ್ತವೆ, ಆದರೆ ಮೈಗ್ರೇನ್‌‌ಗೆ ಕಾರಣವಾಗುತ್ತವೆ ಎಂದು ಸಂಶಯಿಸಿದ ಹಲವಾರು ಇತರ ಆಹಾರ ಕ್ರಮದ ಪ್ರಚೋದಕ ಅಂಶಗಳು ಮೈಗ್ರೇನ್‌ ಪ್ರಚೋದಕವಾಗಿರುವುದಿಲ್ಲ. ದೇಹದಲ್ಲಿನ ಜಲ ಹೀನತೆ ಮೈಗ್ರೇನ್‌ನಲ್ಲಿ ಹೆಚ್ಚಿನ ಪಾತ್ರವಹಿಸುವುದರಿಂದ ಮತ್ತು ಕೆಲವು ರೋಗಿಗಳು ರೆಡ್ ವೈನ್‌ಗೆ ಸೂಕ್ಷ್ಮಗ್ರಾಹಿಯಾಗಿರುವುದರಿಂದ ಮದ್ಯ ಸೇವನೆ, ಕೆಫೀನ್ ತ್ಯಜಿಸುವುದು ಮತ್ತು ಊಟ ತಪ್ಪಿಸುವುದು ಮೊದಲಾದ ಆಹಾರ ಕ್ರಮ ಮೈಗ್ರೇನ್‌ ಬರುವುದಕ್ಕೆ ಪ್ರಮುಖ ಕಾರಣಗಳೆಂದು ಸ್ಥೂಲ ಸಮೀಕ್ಷೆ ತಿಳಿಸಿದೆ. ಚಾಕೋಲೇಟ್, ಚೀಸು, ಹಿಸ್ಟಮಿನ್, ತೈರಮಿನ್, ನೈಟ್ರೇಟ್ ಅಥವಾ ನೈಟ್ರೈಟ್ ಮೊದಲಾದವು ಮೈಗ್ರೇನ್‌ನ ಸಂಶಯಾತ್ಮಕ ಪ್ರಚೋದಕಗಳು ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ. 'ಪಥ್ಯ'ದ ಆಹಾರ ಕ್ರಮ ಮೈಗ್ರೇನ್‌ಗೆ ಪರಿಣಾಮಕಾರಿಯಾದ ಚಿಕಿತ್ಸೆಯೇನಲ್ಲ, ಇದು ರೋಗಿಗಳಿಗೆ ಮೈಗ್ರೇನ್‌‌ನ ಸ್ಪಷ್ಟವಾಗಿ ತಿಳಿಯಲ್ಪಟ್ಟ ಕಾರಣದಿಂದ ದೂರವಿರುವುದಕ್ಕೆ ಪ್ರಯೋಜನಕಾರಿ ಎಂಬುದನ್ನು ಸ್ಥೂಲ ಸಮೀಕ್ಷೆಗಳು ತಿಳಿಸಿವೆ.

ಹವಾಮಾನ

ಹವಾಮಾನ ಬದಲಾವಣೆಯಿಂದಾಗಿ ಕೆಲವು ಮೈಗ್ರೇನ್‌ಗಳು ಪ್ರಚೋದಿಸಲ್ಪಡುತ್ತವೆ ಎಂದು ಅನೇಕ ಅಧ್ಯಯನಗಳು ವ್ಯಕ್ತಪಡಿಸಿವೆ. ಹವಾಮಾನ ಮೈಗ್ರೇನ್‌ಗೆ ಕಾರಣ ಎಂದು 62%ನಷ್ಟು ರೋಗಿಗಳು ಭಾವಿಸಿದ್ದರೆಂದು ಅಧ್ಯಯನವೊಂದು ಸೂಚಿಸಿದರೆ, ಹವಾಮಾನ ಬದಲಾವಣೆಗೆ 51%ನಷ್ಟು ಮಾತ್ರ ಸೂಕ್ಷ್ಮಗ್ರಾಹಿಗಳಾಗಿದ್ದಾರೆ. ಹವಾಮಾನದ ಬದಲಾವಣೆಯಿಂದಾಗಿ ಮೈಗ್ರೇನ್‌ ಕಂಡುಬರುವವರಲ್ಲಿ ಮೈಗ್ರೇನ್ ರೋಗಿಗಳು ನಿಜವಾಗಿ ದಾಖಲಾದ ಹವಾಮಾನ ಅಂಕಿ ಅಂಶಕ್ಕಿಂತ ಹವಾಮಾನ ಬದಲಾವಣೆಯಿಂದಲೇ ಬಾಧೆಗೊಳಗಾತ್ತಾರೆ. ಮೈಗ್ರೇನ್‌ ಪ್ರಚೋದನೆಗೆ ಕಾರಣವಾಗುವ ಸಂಭಾವ್ಯತೆ ಅನುಕ್ರಮವಾಗಿ ಹೀಗಿದೆ:

  1. ತೇವಾಂಶ ಮಿಶ್ರಿತ ತಾಪಮಾನ. ಅಧಿಕ ಅಥವಾ ಅಲ್ಪ ತಾಪಮಾನದೊಂದಿಗೆ ಹೆಚ್ಚಿನ ತೇವಾಂಶವುಳ್ಳ ಹವಾಮಾನ ಪ್ರಮುಖ ಕಾರಣ.
  2. ಹವಾಮಾನದಲ್ಲಿ ಗಮನಾರ್ಹ ಬದಲಾವಣೆ
  3. ವಾಯುಭಾರ ಮಾಪಕದಲ್ಲಿ ಸೂಚಿತವಾದ ಒತ್ತಡದಲ್ಲಿನ ಬದಲಾವಣೆ

ಮತ್ತೊಂದು ಅಧ್ಯಯನವು ಮೈಗ್ರೇನ್ ಮೇಲೆ ಬಿಸಿ ಗಾಳಿಯ ಪ್ರಭಾವವನ್ನು ಪರಿಶೀಲಿಸಿದೆ, ಇದು ಬಿಸಿ ಗಾಳಿ ಸಂದರ್ಭದಲ್ಲಿ ಮತ್ತು/ಅಥವಾ ನಂತರ ಮೈಗ್ರೇನ್ ರೋಗ ಪೀಡನೆ ಹೆಚ್ಚಾಯಿತು ಎಂದು ಹೇಳುತ್ತದೆ. ಮೈಗ್ರೇನ್ ರೋಗಿಗಳ ಸಂಖ್ಯೆಯು ಬಿಸಿ ಗಾಳಿ ಬೀಸಿದ ಹಿನ್ನೆಲೆಯಲ್ಲಿ ಹೆಚ್ಚಿನ-ಪ್ರಮಾಣದಲ್ಲಿ ಇದ್ದದ್ದು ವರದಿಯಾಗಿದೆ. ಗಾಳಿಯಲ್ಲಿ ಧನಾತ್ಮಕ ಅಯಾನುಗಳು ಹೆಚ್ಚಾದುದು ಇದಕ್ಕೆ ಕಾರಣವಾಗಿರಬಹುದು ಎಂದು ಊಹಿಸಲಾಗಿದೆ.

ಇತರೆ

ಭಾರತದಲ್ಲಿನ ಕೆಲವು ಮೈಗ್ರೇನ್ ಪೀಡಿತರಿಗೆ ತಲೆಸ್ನಾನ ಮಾಡುವುದು ಮೈಗ್ರೇನ್‌ ಪ್ರಚೋದಕ ಅಂಶವಾಗಿದೆ ಎಂದು ಅಧ್ಯಯನವೊಂದರಿಂದ ತಿಳಿದುಬರುತ್ತದೆ. ಪ್ರಚೋದಕ ಪರಿಣಾಮವು ಸ್ನಾನಾನಂತರ ತಲೆಗೂದಲನ್ನು ಹೇಗೆ ಒಣಗಿಸುತ್ತಾರೆ ಎಂಬುದನ್ನೂ ಅವಲಂಬಿಸಿದೆ.

ಗಾಢ ಸುವಾಸನೆಯ‌ೂ ಪ್ರಬಲ ಪ್ರಚೋದಕವಾಗಿದೆ ಹಾಗೂ ಪರಿಮಳಕ್ಕೆ ಸೂಕ್ಷ್ಮಗ್ರಾಹಿಯಾದ ಕೆಲವು ರೋಗಿಗಳಲ್ಲಿ ಸೆಳವು ಸೂಚನೆಗೆ ಇಂಬುಕೊಡುತ್ತದೆ.

ದೈಹಿಕ ಕ್ರಿಯೆ ಮತ್ತು ಶರೀರ ವಿಜ್ಞಾನ

ಮೈಗ್ರೇನ್ ರಕ್ತ ನಾಳಗಳ ತೊಂದರೆಯಿಂದ ಮಾತ್ರ ಆರಂಭವಾಗುತ್ತದೆ ಎಂದು ಹಿಂದೊಮ್ಮೆ ಊಹಿಸಲಾಗಿತ್ತು. ಮೈಗ್ರೇನ್‌ಗಳ ನಾಳೀಯ ಅಧ್ಯಯನವನ್ನು ಈಗ, ಮಿದುಳು ಸರಿಯಾಗಿ ಕೆಲಸ ಮಾಡದಿರುವುದಕ್ಕೆ ನೇರ ಸಂಬಂಧ ಹೊಂದಿಲ್ಲ ಎಂದು ಪರಿಗಣಿಸಲಾಗಿದೆ ಹಾಗೂ ಈ ಅಧ್ಯಯನವು ಇತರರಿಂದ ನಂಬಿಕೆ ಕಳೆದುಕೊಂಡಿದೆ. ಪ್ರಚೋದಕ ಅಂಶಗಳು ಕನಿಷ್ಠ ಪಕ್ಷ ರೋಗದ ಕಾರಣಗಳ ಭಾಗವಾಗಿರಬಹುದು ಮತ್ತು ಜೀವನಪರ್ಯಂತ ವಿವಿಧ ಪ್ರಕಾರದ ತಲೆನೋವು ಉಳಿಯುವಂತೆ ಮಾಡಬಹುದು.

ಪ್ರಮುಖ ತಲೆನೋವು ಗುಣಮುಖವಾದ ನಂತರವೂ ಕೆಲವು ದಿನಗಳವರೆಗೆ ಮೈಗ್ರೇನ್‌ನ ಪರಿಣಾಮವು ಮುಂದುವರಿಯಬಹುದು. ಅನೇಕ ಮೈಗ್ರೇನ್‌ ಪೀಡಿತರು ಮೈಗ್ರೇನ್‌ ಇರುವ ಜಾಗದಲ್ಲಿ ವೇದನೆಯನ್ನು ಹೊಂದಿರುತ್ತಾರೆ ಹಾಗೂ ಇನ್ನು ಕೆಲವರು[who?] ತಲೆನೋವು ಬಂದುಹೋದ ನಂತರದ ಕೆಲವು ದಿನಗಳವರೆಗೆ ನಿಶ್ಯಕ್ತಿಯಿಂದ ಬಳಲುತ್ತಾರೆ.

ಮೈಗ್ರೇನ್‌ ತಲೆನೋವು ಥೈರಾಯ್ಡ್ ಕೊರತೆಯ ರೋಗಲಕ್ಷಣವಾಗಿರಬಹುದು.[ಸೂಕ್ತ ಉಲ್ಲೇಖನ ಬೇಕು]

ವಿಧ್ರುವೀಕರಣ ಸಿದ್ಧಾಂತ

ಅರೆತಲೆ ನೋವು ಮೈಗ್ರೇನ್‌ 
ದೇಹದ ಹೊರಪದರಕ್ಕೆ ಹರಡುವಿಕೆಯ ಕುಸಿತದ ಆನಿಮೇಶನ್

ದೇಹದ ಹೊರಪದರಕ್ಕೆ ಹರಡುವಿಕೆಯ ಕುಸಿತವು ಮೈಗ್ರೇನ್‌ಗೆ ಕಾರಣವಾಗಬಹುದು. ದೇಹದ ಹೊರಪದರಕ್ಕೆ ಹರಡುವಿಕೆಯ ಕುಸಿತದಲ್ಲಿ, ಮಿದುಳಿನ ಹೊರಪದರದಲ್ಲಿ ನರವೈಜ್ಞಾನಿಕ ಚಟುವಟಿಕೆಯು ಕುಂದುತ್ತದೆ. ಇದರಿಂದ ಉರಿಯ‌ೂತದ ಮಧ್ಯವರ್ತಿಗಳ ಬಿಡುಗಡೆಯಾಗುತ್ತದೆ. ಇವು ಮುಖ ಮತ್ತು ತಲೆಯ ಹೆಚ್ಚಿನ ಭಾಗಕ್ಕೆ ಸೂಕ್ಷ್ಮ ಮಾಹಿತಿಯನ್ನು ಕಳಿಸುವ ತಲೆಬುರುಡೆಯ ನರಗಳ, ನಿರ್ದಿಷ್ಟವಾಗಿ ಮೇಲುದವಡೆಯ ನರದ, ಬುಡದಲ್ಲಿ ಕೆರಳಿಕೆಯನ್ನು ಉಂಟುಮಾಡುತ್ತವೆ.

ಈ ದೃಷ್ಟಿಕೋನವನ್ನು ನ್ಯೂರೊಇಮೇಜಿಂಗ್ ತಂತ್ರಜ್ಞಾನವು ಬೆಂಬಲಿಸುತ್ತದೆ, ಮೈಗ್ರೇನ್‌ ಮ‌ೂಲತಃ ಮಿದುಳಿನ (ನರವೈಜ್ಞಾನಿಕ) ಅವ್ಯವಸ್ಥೆಯಿಂದ ಉಂಟಾಗುತ್ತದೆಯೇ ಹೊರತು ರಕ್ತ ನಾಳಗಳಿಂದಲ್ಲ ಎಂಬುದನ್ನು ಈ ತಂತ್ರಜ್ಞಾನವು ತೋರಿಸುತ್ತದೆ. ವಿಧ್ರುವೀಕರಣವು (ಎಲೆಕ್ಟ್ರಿಕಲ್ ಬದಲಾವಣೆಯು) ಮೈಗ್ರೇನ್‌ ದಾಳಿಯ 24 ಗಂಟೆಗಳ ಮೊದಲು ಕಾಣಿಸಿಕೊಳ್ಳುತ್ತದೆ, ಇದು ಮಿದುಳಿನ ಅತೀ ದೊಡ್ಡದಾದ ಪ್ರದೇಶವು ವಿಧ್ರುವೀಕರಣಗೊಳ್ಳುವ ಸಮಯದಲ್ಲಿ ತಲೆನೋವಿನೊಂದಿಗೆ ಪ್ರಾರಂಭಗೊಳ್ಳುತ್ತದೆ. ಪಾಸಿಟ್ರಾನ್ ಎಮಿಶನ್ ಟೋಮೋಗ್ರಫಿ (PET) ತಂತ್ರವನ್ನು ಬಳಸಿ 2007ರ ಫ್ರೆಂಚ್ ಅಧ್ಯಯನವು, ಆರಂಭಿಕ ಹಂತದಲ್ಲಿ ಮಿದುಳಿನ ಕೆಳಭಾಗವು ಹೆಚ್ಚಾಗಿ ತೊಡಗಿರುತ್ತದೆ ಎಂಬುದನ್ನು ಗುರುತಿಸಿತು.

ನಾಳೀಯ ಸಿದ್ಧಾಂತ

ಮಿದುಳಿನಲ್ಲಿನ ರಕ್ತ ನಾಳಗಳ ಸಂಕುಚನ ಮತ್ತು ವಿಕಸನ ಅಸಮಂಜಸವಾದಾಗ ಮೈಗ್ರೇನ್‌ ಆರಂಭವಾಗುತ್ತದೆ. ಇದು ಮಿದುಳಿನ ಹಿಂದೆ ಆಕ್ಸಿಪಿಟಲ್‌ನ ಪಾಲಿಯಲ್ಲಿ ಅಪಧಮನಿಗಳು ಅನೈಚ್ಛಿಕವಾಗಿ ಸಂಕೋಚನಗೊಂಡಾಗ ಆರಂಭವಾಗಬಹುದು. ಆಕ್ಸಿಪಿಟಲ್‌ನ ಪಾಲಿಯಿಂದ ರಕ್ತದ ಹರಿವು ಕಡಿಮೆಯಾಗುವುದರಿಂದ, ಇದು ಮೈಗ್ರೇನ್ ಇರುವವರಲ್ಲಿ ಕಂಡುಬರುವ ಸೆಳವು ಸೂಚನೆಯನ್ನು ಪ್ರಚೋದಿಸುತ್ತದೆ, ಏಕೆಂದರೆ ದೃಗ್ಗೋಚರದ ಕಾರ್ಟೆಕ್ಸ್ ಆಕ್ಸಿಪಿಟಲ್‌ನಲ್ಲಿದೆ.[unreliable source?]

ಸಂಕೋಚನ ನಿಂತು ರಕ್ತ ನಾಳಗಳು ಹಿಗ್ಗಿದಾಗ, ಇನ್ನಷ್ಟು ಅಗಲವಾಗುತ್ತವೆ. ರಕ್ತ ನಾಳಗಳ ಘನವಾದ ಭಿತ್ತಿಯ ಅಂತಃಪ್ರವೇಶವು (ಸುಲಭವಾಗಿ ಒಳಹೋಗಲು ಸಾಧ್ಯವಾದಾಗ)ಹೆಚ್ಚಾದಾಗ, ಸ್ವಲ್ಪ ದ್ರವ ಪದಾರ್ಥವು ಹೊರಗಡೆ ಸೋರುತ್ತದೆ. ಈ ಸೋರಿಕೆಯು ಸುತ್ತಲಿರುವ ಅಂಗಾಂಶಗಳ ರಕ್ತ ನಾಳಗಳಲ್ಲಿನ ನೋವು ಗ್ರಾಹಕಗಳಿಂದ ಗ್ರಹಿಸಲ್ಪಡುತ್ತದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಶರೀರವು ಉರಿಯ‌ೂತವನ್ನು ಉಂಟುಮಾಡುವ ರಾಸಾಯನಿಕಗಳನ್ನು ಒದಗಿಸುತ್ತದೆ. ಪ್ರತಿಯೊಂದು ಹೃದಯ ಬಡಿತಕ್ಕೆ ರಕ್ತವು ಈ ಸೂಕ್ಷ್ಮ ಜಾಗಕ್ಕೆ ಹೋದಾಗ, ನೋವಿನ ಮಿಡಿತ ಉಂಟಾಗುತ್ತದೆ.[unreliable source?]

ಮೈಗ್ರೇನ್‌ಗಳ ನಾಳೀಯ ಅಧ್ಯಯನವನ್ನು ಈಗ, ಮಿದುಳು ಸರಿಯಾಗಿ ಕೆಲಸ ಮಾಡದಿರುವುದಕ್ಕೆ ನೇರ ಸಂಬಂಧ ಹೊಂದಿಲ್ಲ ಎಂದು ಹೇಳಲಾಗಿದೆ.[unreliable source?]

ಸಿರೊಟೋನಿನ್ ಸಿದ್ಧಾಂತ

ಸಿರೊಟೋನಿನ್‌ ಒಂದು ನರತಂತುವಿನಿಂದ ಒಸರುವ ರಾಸಾಯನಿಕ ಪದಾರ್ಥ(ನ್ಯೂರೊಟ್ರಾನ್ಸ್ಮಿಟರ್) ಅಥವಾ "ಸಂವಹನ ರಾಸಾಯನಿಕ", ಇದು ನರ ಕೋಶಗಳ ಮಧ್ಯೆ ಸಂದೇಶಗಳನ್ನು ರವಾನಿಸುತ್ತದೆ. ಇದು ಸ್ಥಿಮಿತ, ನೋವಿನ ಗ್ರಹಿಕೆ, ಲೈಂಗಿಕ ವರ್ತನೆ, ನಿದ್ರೆ ಮಾತ್ರ ಅಲ್ಲದೆ ರಕ್ತ ನಾಳಗಳ ವಿಕಸನ ಮತ್ತು ಸಂಕೋಚನೆಯನ್ನೂ ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ. ಮಿದುಳಿನಲ್ಲಿ ಸಿರೊಟೋನಿನ್‌‌ನ ಕಡಿಮೆ ಮಟ್ಟವು ರಕ್ತ ನಾಳಗಳ ಸಂಕೋಚನ ಮತ್ತು ವಿಕಸನಕ್ಕೆ ಕಾರಣವಾಗಬಹುದು, ಇದರಿಂದ ಮೈಗ್ರೇನ್‌ ಪ್ರಚೋದನೆಗೆ ಒಳಗಾಗುತ್ತದೆ. ಮೈಗ್ರೇನ್‌ ದಾಳಿಯನ್ನು ನಿಯಂತ್ರಿಸಲು ಸಿರೊಟೋನಿನ್‌ ಗ್ರಾಹಕಗಳನ್ನು ಟ್ರಿಪ್ಟಾನ್ ಸಕ್ರಿಯ ಗೊಳಿಸುತ್ತದೆ.

ನರವ್ಯೂಹ ಸಿದ್ಧಾಂತ

ಮಿದುಳು ಕಾಂಡದಲ್ಲಿನ ಕೆಲವು ನರಗಳಲ್ಲಿ ಅಥವಾ ಒಂದಷ್ಟು ಭಾಗದಲ್ಲಿ ಕೆರಳಿಕೆ ಉಂಟಾದರೆ, ಮೈಗ್ರೇನ್‌ ಶುರುವಿಟ್ಟುಕೊಳ್ಳುತ್ತದೆ. ಈ ಕೆರಳಿಕೆಗೆ ಪ್ರತಿಯಾಗಿ ಶರೀರವು ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ, ಇವು ರಕ್ತ ನಾಳಗಳಲ್ಲಿ ಉರಿಯ‌ೂತವನ್ನು ಉಂಟುಮಾಡುತ್ತವೆ. ಈ ರಾಸಾಯನಿಕಗಳು ನರಗಳಲ್ಲಿ ಮತ್ತು ರಕ್ತ ನಾಳಗಳಲ್ಲಿ ಮತ್ತಷ್ಟು ಕೆರಳಿಕೆ ಉಂಟಾಗಲು ಕಾರಣವಾಗುತ್ತದೆ, ಇದರ ಪರಿಣಾಮವಾಗಿ ನೋವು ಕಾಣಿಸಿಕೊಳ್ಳುತ್ತದೆ. ಮೊದಲ ಕೆರಳಿಕೆಯಲ್ಲಿ ಬಿಡುಗಡೆಯಾಗುವ ಪದಾರ್ಥಗಳಲ್ಲಿ P ಪದಾರ್ಥವು ಒಂದು. ಮಿದುಳಿಗೆ ನೋವಿನ ಸಂಕೇತಗಳನ್ನು ಕಳುಹಿಸುವಲ್ಲಿ P ಪದಾರ್ಥವು ಸಹಾಯ ಮಾಡುವುದರಿಂದ, ನಂತರ ನೋವು ಉಲ್ಬಣಿಸುತ್ತದೆ.

ಒಗ್ಗೂಡಿಸುವ ಸಿದ್ಧಾಂತ

ನಾಳೀಯ ಮತ್ತು ನರವ್ಯೂಹ ಎರಡರ ಪ್ರಭಾವವೂ ಮೈಗ್ರೇನ್‌‌ಗೆ ಕಾರಣವಾಗುತ್ತದೆ.

  1. ಒತ್ತಡವು ಮಿದುಳಿನಲ್ಲಿ ಬದಲಾವಣೆಗಳನ್ನು ಪ್ರಚೋದಿಸುತ್ತದೆ
  2. ಸಿರೊಟೋನಿನ್‌ ಬಿಡುಗಡೆಯಾಗಲು ಈ ಬದಲಾವಣೆಗಳು ಕಾರಣವಾಗುತ್ತವೆ
  3. ರಕ್ತ ನಾಳಗಳು ಸಂಕೋಚನ ಮತ್ತು ವಿಕಸನವಾಗುತ್ತವೆ
  4. P ಪದಾರ್ಥವನ್ನೂ ಸೇರಿದಂತೆ ಅನೇಕ ರಾಸಾಯನಿಕಗಳು ನರಗಳಲ್ಲಿ ಮತ್ತು ರಕ್ತ ನಾಳಗಳಲ್ಲಿ ಕೆರಳಿಕೆಯನ್ನು ಉಂಟುಮಾಡುತ್ತದೆ, ಇದು ನೋವಿಗೆ ಕಾರಣವಾಗುತ್ತದೆ

ರೋಗ ನಿರ್ಣಯ

ಮೈಗ್ರೇನ್‌ ಅನ್ನು ಕೆಲವೊಮ್ಮೆ ತಪ್ಪಾಗಿ ನಿರ್ಣಯಿಸಲಾದರೆ ಇನ್ನು ಕೆಲವು ಸಲ ನಿರ್ಣಯದಲ್ಲಿ ಕೊರತೆ ತುಂಬಿರುತ್ತದೆ. ಇಂಟರ್‌ನ್ಯಾಷನಲ್ ಹೆಡೇಕ್ ಸೊಸೈಟಿಯ ಪ್ರಕಾರ ಸೆಳವು ಸೂಚನೆ ಇಲ್ಲದ ಮೈಗ್ರೇನ್‌ ರೋಗ ಲಕ್ಷಣವನ್ನು ಈ ಕೆಳಗಿನ ನಿರ್ಣಾಯಕ ಅಂಶಗಳಿಂದ ನಿರ್ಣಯಿಸಬಹುದು, "5, 4, 3, 2, 1 ನಿರ್ಣಾಯಕ ಅಂಶಗಳು":

  • 5 ಅಥವಾ ಅದಕ್ಕಿಂತ ಹೆಚ್ಚು ದಾಳಿಗಳು
  • 4 ಗಂಟೆಗಳಿಂದ 3 ದಿನಗಳ ವರೆಗಿನ ಅವಧಿ
  • 2 ಅಥವಾ ಅದಕ್ಕಿಂತ ಹೆಚ್ಚು - ಒಮ್ಮಗ್ಗುಲಾಗಿರುವುದು, ಮಿಡಿಯುವ ಗುಣ, ಮಂದವಾದ ನೋವಿನಿಂದ ತೀವ್ರತೆಗೆ ಏರುವುದು, ದಿನ ನಿತ್ಯದ ದೈಹಿಕ ಚಟುವಟಿಕೆಯಿಂದ ಉಲ್ಬಣಗೊಳ್ಳುವುದು ಅಥವಾ ಅದರಿಂದ ತಪ್ಪಿಸಿಕೊಳ್ಳುವಂತೆ ಮಾಡುವುದು.
  • 1 ಅಥವಾ ಅದಕ್ಕಿಂತ ಹೆಚ್ಚು ಸಹವರ್ತಿ ರೋಗ ಲಕ್ಷಣಗಳು - ವಾಕರಿಕೆ ಮತ್ತು/ಅಥವಾ ವಾಂತಿ, ಬೆಳಕಿನ ಭಯ, ಧ್ವನಿ ಭಯ

ಸೆಳವಿರುವ ಮೈಗ್ರೇನ್‌ನ ನಿರ್ಣಯವನ್ನು ದೃಢೀಕರಿಸಲು ಕೇವಲ ಎರಡು ದಾಳಿಯ ಅಗತ್ಯವಿದೆ[ವು ಸೂಚನೆ ಇರುವ/ರೋಗ ಚಿಹ್ನೆಗಳನ್ನು/ಗಳಿಂದ ಗುರುತಿಸಬಹುದು.]

ನೆನಪಿನಲ್ಲಿಡಲು ನೆರವಾಗುವ ರೂಪ POUND (P ulsating, duration of 4–72 hO urs, U nilateral, Nausea , D isabling) ಎಂಬುದು ಮೈಗ್ರೇನ್‌ ರೋಗದ ಸ್ವರೂಪ ಕಂಡುಹಿಡಿಯಲು ಸಹಾಯ ಮಾಡುತ್ತದೆ. 5ರಲ್ಲಿ 4 ಮಾನದಂಡಗಳು ಕಂಡುಬಂದರೆ, ಮೈಗ್ರೇನ್‌ ರೋಗ ನಿರ್ಣಯದ ಸಂಭಾವ್ಯ ಸಾಧ್ಯತೆಯ ಅನುಪಾತ 24.

ನಿಶ್ಯಕ್ತಿ, ವಾಕರಿಕೆ ಅಥವಾ ಸೂಕ್ಷ್ಮ ಸಂವೇದಹೆ-ಇವುಗಳಲ್ಲಿ ಯಾವುದಾದರೊಂದು ಇದ್ದರೆ, ಈ ಕೆಳಗಿನಂತೆ ಮೈಗ್ರೇನ್‌ ರೋಗನಿರ್ಣಯ ಮಾಡಬಹುದು:

  • 81%ನಷ್ಟು ಸೂಕ್ಷ್ಮ ಸಂವೇದನೆ
  • 75%ನಷ್ಟು ನಿರ್ದಿಷ್ಟ ಲಕ್ಷಣ

ಮೈಗ್ರೇನ್‌ ಅನ್ನು ಕ್ಲಸ್ಟರ್ ತಲೆನೋವಿನಂತಹ ಇತರ ತಲೆನೋವುಗಳಿಂದ ಬೇರ್ಪಡಿಸಬೇಕು. ಇವು ಅತೀ ತೀಕ್ಷ್ಣ ನೋವಿನ, ಒಮ್ಮಗ್ಗುಲಾಗಿ ಚುಚ್ಚುವ ರೀತಿಯಲ್ಲಿರುವ ತಲೆ ನೋವು. ಸಾಮಾನ್ಯ ದಾಳಿಯು 15 ನಿಮಿಷಗಳಿಂದ ಮ‌ೂರು ಗಂಟೆಗಳ ಅವಧಿಯವರೆಗೆ ಇರುತ್ತದೆ. ಬಹುತೇಕವಾಗಿ ಆರಂಭಿಕ ಚಿಹ್ನೆಗಳಿಲ್ಲದೆಯೇ ಕ್ಷಿಪ್ರಗತಿಯಲ್ಲಿ ಪ್ರಾರಂಭವಾಗುವ ಈ ನೋವು ಮೈಗ್ರೇನ್‌ನ ವಿಶಿಷ್ಟ ಲಕ್ಷಣ‌.[ಸೂಕ್ತ ಉಲ್ಲೇಖನ ಬೇಕು]

ತಡೆಗಟ್ಟುವಿಕೆ

ಮೈಗ್ರೇನ್‌ ತಡೆಗಟ್ಟುವ (ರೋಗ ನಿರೋಧಕ ಎಂದೂ ಕರೆಯುತ್ತಾರೆ) ಚಿಕಿತ್ಸೆಯು ಮೈಗ್ರೇನ್‌ ನಿರ್ವಹಣೆಯಲ್ಲಿ ಒಂದು ಪ್ರಮುಖ ಅಂಶವಾಗಿದೆ. ಕೆಲವು ಔಷಧಗಳ ಅಥವಾ ಪೌಷ್ಟಿಕ ಆಹಾರದ ಸೇವನೆ ಅಥವಾ ಹೆಚ್ಚು ವ್ಯಾಯಾಮ ಮಾಡುವಂತಹ ಮತ್ತು ಮೈಗ್ರೇನ್‌ ಪ್ರಚೋದಕಗಳಿಂದ ದೂರವಿರುವ ಜೀವನ ಶೈಲಿಗೆ ಹೊಂದಿಕೆ ಮಾಡಿಕೊಳ್ಳುವುದು- ಅನೇಕ ರೂಪಗಳಲ್ಲಿರುವ ಅಂತಹ ಚಿಕಿತ್ಸೆಗಳು.

ಮೈಗ್ರೇನ್‌ ಪುನರಾವರ್ತನೆ, ನೋವು ಮತ್ತು/ಅಥವಾ ಅವಧಿಯನ್ನು ತಗ್ಗಿಸುವುದು ಹಾಗೂ ಅಪೂರ್ಣ ವ್ಯವಸ್ಥೆ ಚಿಕಿತ್ಸೆಯ ಪರಿಣಾಮಕಾರಿತ್ವವನ್ನು ಹೆಚ್ಚಿಸುವುದು ತಡೆಗಟ್ಟುವ ಚಿಕಿತ್ಸೆಯ ಪ್ರಮುಖ ಉದ್ಧೇಶಗಳಾಗಿವೆ. ಈ ಉದ್ಧೇಶಗಳನ್ನು ಮುಂದುವರಿಸಿಕೊಂಡು ಹೋಗಲು ಮತ್ತೊಂದು ಕಾರಣವೆಂದರೆ - ಮರುಕಳಿಸುವ ತಲೆನೋವು ಎಂದು ಕರೆಯುವ ಮೈಗ್ರೇನ್ ಇರುವವರಲ್ಲಿ ಸಾಮಾನ್ಯವಾಗಿರುವ ಅತೀ ಹೆಚ್ಚು ಔಷಧ ತೆಗೆದುಕೊಳ್ಳುವುದರಿಂದ ಬರುವ ತಲೆನೋವು (ಮೆಡಿಕೇಶನ್ ಓವರ್‌ಯ‌ೂಸ್ ಹೆಡೇಕ್ - MOH)ಅನ್ನು ಹೋಗಲಾಡಿಸುವುದು. ತೆಗೆದುಕೊಳ್ಳುವ ನೋವು ನಿವಾರಕ ಔಷಧಗಳಿಂದ ಇದು ಬರಬಹುದು ಹಾಗೂ ದಿನನಿತ್ಯ ತೀವ್ರ ತಲೆನೋವಿಗೂ ಕಾರಣವಾಗಬಹುದು ಎಂದು ನಂಬಲಾಗಿದೆ.

ಹೆಚ್ಚಿನ ತಡೆಗಟ್ಟುವ ಚಿಕಿತ್ಸೆಗಳು ಪರಿಣಾಮಕಾರಿಯಾಗಿವೆ: ಪರೀಕ್ಷಾ ಪ್ರಯೋಗದಲ್ಲಿ ಬಳಸಲಾಗುವ ಒಂದು ಹುಸಿ ಔಷಧದಿಂದ (ಶ್ಯಾಮ್ ಚಿಕಿತ್ಸೆ) ನಾಲ್ಕನೇ ಒಂದರಷ್ಟು ರೋಗಿಗಳ ಮೈಗ್ರೇನ್‌ ಪುನರಾವರ್ತನೆಯು ಅರ್ಧದಷ್ಟು ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕಡಿಮೆಯಾಯಿತು, ಹಾಗೂ ನಿಜವಾದ ಚಿಕಿತ್ಸೆಯು ಈ ಸಂಖ್ಯೆಯನ್ನು ಮೀರಿಸುತ್ತದೆ.

ನಿರ್ವಹಣೆ

ಸಾಂಪ್ರದಾಯಿಕ ಚಿಕಿತ್ಸೆಯು ಮ‌ೂರು ವಿಷಯಗಳ ಮೇಲೆ ಕೇಂದ್ರೀಕರಿಸಿರುತ್ತದೆ: ಪ್ರಚೋದಕಗಳ ದೂರವಿರಿಸುವಿಕೆ, ರೋಗ ಲಕ್ಷಣಗಳ ನಿಯಂತ್ರಣ ಮತ್ತು ರೋಗ ನಿರೋಧಕ ಔಷಧ. ಮೈಗ್ರೇನ್‌ನಿಂದ ಬಳಲುವವರಿಗೆ ಶಿಫಾರಸು ಮಾಡುವ ಚಿಕಿತ್ಸೆಗಳು ಮೈಗ್ರೇನ್‌ ತಡೆಗಟ್ಟುವಲ್ಲಿ 100%ನಷ್ಟು ಫಲಕಾರಿಯಾಗಿರುವುದಿಲ್ಲ ಎಂದು ಕಂಡುಬಂದಿದೆ ಹಾಗೂ ಕೆಲವೊಮ್ಮೆ ಅವು ಅಲ್ಪ ಪ್ರಮಾಣದ ಪರಿಣಾಮವನ್ನೂ ಬೀರುವುದಿಲ್ಲ. ಚಿಕಿತ್ಸೆಗಳು ಮೈಗ್ರೇನ್‌ ದಾಳಿಯ ಪುನರಾವರ್ತನೆ ಅಥವಾ ತೀವ್ರತೆಯನ್ನು 50%ನಷ್ಟು ಕಡಿಮೆ ಮಾಡಿದರೆ, ಅವನ್ನು ಪರಿಣಾಮಕಾರಿ ಔಷಧ ಎಂದು ಔಷಧ ವಿಜ್ಞಾನ ಪರಿಗಣಿಸುತ್ತದೆ.

ಮಕ್ಕಳು ಮತ್ತು ಹರೆಯದವರಿಗೆ ಮೊದಲು ಔಷಧೀಯ ಚಿಕಿತ್ಸೆಯನ್ನು ನೀಡಲಾಗುವುದು, ಆದರೆ 'ಪಥ್ಯ'ದ ಆಹಾರ ಕ್ರಮವನ್ನು ನಿರ್ಲಕ್ಷಿಸಬಾರದು. ಹಾಟ್ ಡಾಗ್, ಚಾಕೋಲೇಟ್, ಚೀಸ್ ಮತ್ತು ಐಸ್‌ಕ್ರೀಮ್ ಮೊದಲಾದ ಪ್ರಚೋದಕ ಆಹಾರ ಸೇವಿಸುವುದನ್ನು ಕಡಿಮೆ ಮಾಡುವುದು ಮೈಗ್ರೇನ್ ಅನ್ನು ತಗ್ಗಿಸಲು ಇರಬಹುದಾದ ಸರಳೋಪಾಯ.

ಮರುಕಳಿಸುವ ಮೈಗ್ರೇನ್‌‌ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳಿಗೆ ಚಿಕಿತ್ಸೆಗಾಗಿ ಮೈಗ್ರೇನ್‌ ಅಪೂರ್ಣವ್ಯವಸ್ಥೆ ಔಷಧಗಳನ್ನು ಬಳಸಲಾಗುತ್ತದೆ. ಇದನ್ನು ಬೇಗನೆ ತೆಗೆದುಕೊಂಡರೆ ಹೆಚ್ಚು ಪರಿಣಾಮಕಾರಿ, ದಾಳಿಯು ಪ್ರಾರಂಭವಾದ ನಂತರ ಔಷಧದ ಪರಿಣಾಮ ಕಡಿಮೆಯಾಗುತ್ತದೆ. ದಾಳಿಗೆ ಮನ್ನವೇ ಚಿಕಿತ್ಸೆ ನೀಡುವುದರಿಂದ ಮೈಗ್ರೇನ್ ಅನ್ನು ಗಂಭೀರ ಸ್ವರೂಪಕ್ಕೆ ಹೋಗುವ ಮೊದಲೇ ತಡೆಯಬಹುದು, ಹಾಗೂ ಮುಂದೆ ಸ್ವಲ್ಪದರಲ್ಲೇ ಇದು ಪುನರಾವರ್ತನೆ ಆಗುವುದನ್ನು ಕಡಿಮೆ ಮಾಡಬಹುದು.[ಸೂಕ್ತ ಉಲ್ಲೇಖನ ಬೇಕು]

ಪ್ಯಾರಸಿಟಮಾಲ್ ಅಥವಾ ಸ್ಟಿರೋಯ್ಡ್‌ ಅಲ್ಲದ ಉರಿ ಪ್ರತಿರೋಧಕ ಔಷಧ(NSAID)

ಮುಕ್ತ ಮಾರಾಟಕ್ಕೆ ದೊರೆಯುವ ಅಕಾಲಿಕ ಔಷಧಮೊದಲ ಚಿಕಿತ್ಸಾ ವಿಧಾನ.

  • ಸ್ಟಿರೋಯ್ಡ್‌ ಅನ್ನು ಒಳಗೊಳ್ಳದ ಉರಿ ಪ್ರತಿರೋಧಕ ಔಷಧಗಳಿಗೆ ಸಂಬಂಧಿಸಿದಂತೆ, ಯಾದೃಚ್ಛಿಕ ನಿಯಂತ್ರಿತ ಪ್ರಯೋಗವು ಸುಮಾರು ಮ‌ೂರನೇ ಒಂದರಷ್ಟು ಮೈಗ್ರೇನ್‌ ದಾಳಿಯನ್ನು ನ್ಯಾಪ್ರೋಕ್ಸೆನ್ ಆರಂಭದಲ್ಲೇ ತಡೆಯುತ್ತದೆ ಎಂದು ಕಂಡುಹಿಡಿಯಿತು. ಇದು ಸುಮಟ್ರಿಪ್ಟಾನ್‌ನ ಪ್ರಯೋಜನಕ್ಕಿಂತ 5%ನಷ್ಟು ಕಡಿಮೆಯಾಗಿತ್ತು.
  • ಯಾದೃಚ್ಛಿಕ ನಿಯಂತ್ರಿತ ಪ್ರಯೋಗದಲ್ಲಿ, ಮಂದವಾದ ಮೈಗ್ರೇನ್‌ ಇರುವ ಅರ್ಧದಷ್ಟು ರೋಗಿಗಳು ಪ್ಯಾರಸಿಟಮಾಲ್ (ಉತ್ತರ ಅಮೇರಿಕಾದಲ್ಲಿ ಅಸೆಟಾಮಿನೋಫೆನ್ ಎನ್ನುತ್ತಾರೆ)‌ನಿಂದ ಪ್ರಯೋಜನ ಪಡೆದರು.
  • ಕ್ಯಫೀನ್ ಹೊಂದಿರುವ ಸರಳ ನೋವು ನಿವಾರಕಗಳು ಉಪಯೋಗಕ್ಕೆ ಬರಬಹುದು. ಮೈಗ್ರೇನ್‌ ಪೀಡಿತರ ಜಠರದಲ್ಲಿ ಆಹಾರದ ಪಚನ ಕ್ರಿಯೆಯು ನಿಧಾನ ಗತಿಯಲ್ಲಿ ಸಾಗುವುದರಿಂದ ವಾಕರಿಕೆ ಉಂಟಾಗುತ್ತದೆ, ಇದರಿಂದ ಔಷಧದ ಹೀರುವಿಕೆ ವಿಳಂಬವಾಗುತ್ತದೆ. ಕ್ಯಫೀನ್ ಈ ಪರಿಣಾಮವನ್ನು ಭಾಗಶಃ ತಿರುವು ಮುರುವಾಗಿಸುತ್ತದೆ. ಎಕ್ಸೆಡ್ರಿನ್ ಕ್ಯಫೀನ್-ಉತ್ಪನ್ನವಿರುವ ಆಸ್ಪರಿನ್‌ಗೆ ಒಂದು ಉದಾಹರಣೆ. ಆಸ್ಪರಿನ್ ಮತ್ತು ಪ್ಯಾರಸಿಟಮಾಲ್‌ನೊಂದಿಗೆ ಸಂಯೋಗ ಮಾಡಿದ ಕ್ಯಫೀನ್ ಅನ್ನು ಮೈಗ್ರೇನ್‌‌ಗೆ ಮುಕ್ತ ಮಾರಾಟದ ಔಷಧಿ (ಓವರ್ ದ ಕೌಂಟರ್ ಡ್ರಗ್ - OTC) ಚಿಕಿತ್ಸೆ ಎಂದು U.S. ಫುಡ್ ಆಂಡ್ ಡ್ರಗ್ ಅಡ್ಮಿನಿಸ್ಟ್ರೇಶನ್ ಗುರುತಿಸಿದೆ. ಬರಿಯ ಕ್ಯಫೀನ್ ಸಹ ದಾಳಿಯ ಸಂದರ್ಭದಲ್ಲಿ ಪ್ರಯೋಜನಕಾರಿ, ಆದರೂ, ಸಾಮಾನ್ಯವಾಗಿ ಮೈಗ್ರೇನ್‌-ರೋಗಿಗಳಿಗೆ ಕ್ಯಫೀನ್ ಸೇವಿಸುವುದನ್ನು ಮಿತಿಗೊಳಿಸುವಂತೆ ಸಲಹೆ ನೀಡಲಾಗುತ್ತದೆ.

ಪ್ಯಾರಸಿಟಮಾಲ್, ಆಸ್ಪರಿನ್, ಐಬುಪ್ರೊಫೇನ್ ಅಥವಾ ಒತ್ತಡ ಜನ್ಯ ತಲೆನೋವುಗಳನ್ನು ಗುಣಪಡಿಸುವ ಇತರ ನೋವು ಶಾಮಕಗಳ ಸೇವನೆಯನ್ನು ರೋಗಿಗಳು ತಾವೇ ಆರಂಭಿಸುತ್ತಾರೆ. ಅವು ಹೆಚ್ಚಿನ ರೋಗಿಗಳಿಗೆ ಪ್ರಾತಿನಿಧಿಕವಾಗಿ ಪರಿಣಾಮ ನೀಡದಾದರೂ, OTC ಔಷಧಗಳು ಸ್ವಲ್ಪ ಉಪಶಮನವನ್ನು ನೀಡಬಹುದು.

U.S. ಫುಡ್ ಆಂಡ್ ಡ್ರಗ್ ಅಡ್ಮಿನಿಸ್ಟ್ರೇಶನ್ ಮ‌ೂರು OTC ಉತ್ಪನ್ನಗಳಿಗೆ ಮೈಗ್ರೇನ್‌ ನಿವಾರಣೆಗೆಂದೇ‌ ವಿಶೇಷವಾಗಿ ಅನುಮತಿ ನೀಡಿದೆ: ಎಕ್ಸೆಡ್ರಿನ್ ಮೈಗ್ರೇನ್‌, ಅಡ್ವಿಲ್ ಮೈಗ್ರೇನ್,‌ ಮತ್ತು ಮೋಟ್ರಿನ್ ಮೈಗ್ರೇನ್‌ ಪೈನ್. ಎಕ್ಸೆಡ್ರಿನ್ ಮೈಗ್ರೇನ್‌ ಮೇಲೆ ಸೂಚಿಸಿದ ಹಾಗೆ ಆಸ್ಪರಿನ್, ಅಸೆಟಾಮಿನೋಫೆನ್ ಮತ್ತು ಕ್ಯಾಫೇನ್‌ಗಳ ಸಂಯುಕ್ತವಾಗಿದೆ. ಅಡ್ವಿಲ್ ಮೈಗ್ರೇನ್‌ ಮತ್ತು ಮೋಟ್ರಿನ್ ಮೈಗ್ರೇನ್‌ ಪೈನ್ ಎರಡೂ ಸರಳ NSAIDಗಳು. ಇವು ಐಬುಪ್ರೊಫೇನ್ನ‌ನ್ನು ಮಾತ್ರ ಕ್ರಿಯಾಶೀಲ ಘಟಕಾಂಶವಾಗಿ ಹೊಂದಿವೆ.

ವಾಂತಿ-ನಿರೋಧಕಗಳೊಂದಿಗೆ ಸಂಯೋಗಗೊಳಿಸಿದ ನೋವು ಶಾಮಕಗಳು

ಬಾಯಿಯಿಂದ ತೆಗೆದುಕೊಳ್ಳುವ ವಾಂತಿ-ನಿರೋಧಕಗಳು, ವಾಕರಿಕೆಯ ಲಕ್ಷಣಗಳನ್ನು ಶಮನ ಮಾಡಲು ಮತ್ತು ವಾಂತಿ ತಡೆಗಟ್ಟಲು ಸಹಾಯ ಮಾಡುತ್ತವೆ, ಇದರಿಂದಾಗಿ ಬಾಯಿಯಿಂದ ಸೇವಿಸಿದ ನೋವು ಶಾಮಕದ ಪರಿಣಾಮ ಕಡಿಮೆಯಾಗುತ್ತದೆ. ಮೆಟೊಕ್ಲೋಪ್ರಮೈಡ್‌ನಂತಹ ಕೆಲವು ವಾಂತಿ-ನಿರೋಧಕಗಳು ಚಲನೆಯನ್ನು ಪ್ರೇರೇಪಿಸುವ ಶಕ್ತಿಗಳು ಹಾಗೂ ಮೈಗ್ರೇನ್ ದಾಳಿಯ ಸಂದರ್ಭದಲ್ಲಿ ಧಕ್ಕೆಗೊಳಗಾಗುವ ಜಠರ ಖಾಲಿಮಾಡುವಿಕೆಯಲ್ಲಿ ಇವು ಸಹಾಯ ಮಾಡುತ್ತದೆ‌. UKಯಲ್ಲಿ ವಾಂತಿ-ನಿರೋಧಕ ಮತ್ತು ನೋವುಶಾಮಕಗಳ ಮ‌ೂರು ಸಂಯುಕ್ತಗಳು ಲಭ್ಯ ಇವೆ: ಮಿಗ್ರಾಮ್ಯಾಕ್ಸ್ (ಮೆಟೊಕ್ಲೋಪ್ರಮೈಡ್‌ನೊಂದಿಗೆ ಆಸ್ಪರಿನ್), ಮಿಗ್ರಾಲೆವೆ (ನೋವು ಶಮನಕ್ಕಾಗಿ ಪ್ಯಾರಸಿಟಮಾಲ್/ಕೊಡೇನ್ ಮತ್ತು ವಾಂತಿ-ನಿರೋಧಕವಾಗಿ ಬ್ಯುಕ್ಲಿಜೈನ್‌ನ ಸಂಯುಕ್ತ) ಹಾಗೂ ಪ್ಯಾರಸಿಟಮಾಲ್/ಮೆಟೊಕ್ಲೋಪ್ರಮೈಡ್ (UKಯಲ್ಲಿ ಪ್ಯಾರಾಮ್ಯಾಕ್ಸ್). ಮೈಗ್ರೇನ್ ಉಪಶಮನಕ್ಕಾಗಿ ಈ ಔಷಧಗಳನ್ನು ಎಷ್ಟು ಬೇಗ ಸೇವಿಸುತ್ತೇವೋ ಅಷ್ಟು ಉತ್ತಮ ಪರಿಣಾಮ ಲಭ್ಯ.

ಕೆಲವು ರೋಗಿಗಳು ಬೆನಾಡ್ರಿಲ್‌ ನಂಥ ವಾಕರಿಕೆ-ನಿರೋಧ ಲಕ್ಷಣವನ್ನು ಹೊಂದಿರುವ ಇತರ ಹಿಸ್ಟಮೀನ್‌ವಿರೋಧೀ ಶಾಮಕಗಳನ್ನು ತೆಗೆದುಕೊಳ್ಳುವುದರಿಂದ ಶಮನವನ್ನು ಕಾಣುತ್ತಾರೆ. ಉದಾಹರಣೆಗಾಗಿ ಬೆನಾಡ್ರಿಲ್, ಇದು ಡೈಫೆನ್‌ಹೈಡ್ರಮಿನ್ ಹೊಂದಿರುವ USನಲ್ಲಿರುವ ಅಂಶವಾಗಿದೆ (ಆದರೆ UKಯಲ್ಲಿ ಶಾಮಕವಲ್ಲದ ಭಿನ್ನ ಉತ್ಪನ್ನವನ್ನು ಹೊಂದಿದೆ).

ಸಿರೊಟೋನಿನ್‌ ಸಂಘರ್ಷಕ ಸ್ನಾಯುಗಳು

ಸುಮಟ್ರಿಪ್ಟಾನ್ ಮತ್ತು ಸಂಬಂಧಿತ ಸಿರೊಟೋನಿನ್‌ ಗ್ರಾಹಕ ಸಂಘರ್ಷಕ ಸ್ನಾಯುಗಳು ತೀವ್ರ ಮೈಗ್ರೇನ್‌‌ಗೆ ಅಥವಾ NSAID ಗಳಿಗೆ ಅಥವಾ ಇತರ ಮುಕ್ತಮಾರಾಟದ ಔಷಧಗಳಿಗೆ ಪ್ರತಿಕ್ರಿಯಿಸದ ಮೈಗ್ರೇನ್‌ಗೆ ಘನವಾದ ಕಾರಣವಾಗಿವೆ. ವಿಶಿಷ್ಟವಾದ ಮೈಗ್ರೇನ್ ಇರುವವರಿಗೆ ಟ್ರಿಪ್ಟಾನ್‌ಗಳು ಮಧ್ಯಮ-ಮಟ್ಟದ ಪ್ರಯೋಜನಕಾರಿ ಚಿಕಿತ್ಸೆಯಾಗಿದೆ. ವಿಲಕ್ಷಣ ಅಥವಾ ವಿಶೇಷ ರೀತಿಯ ತೀಕ್ಷ್ಣ ಮೈಗ್ರೇನ್‌ಗಳಿಗೆ, ಪರಿವರ್ತಿತ ಮೈಗ್ರೇನ್‌ಗಳಿಗೆ ಅಥವಾ ಪರಿಸ್ಥಿತಿಯಿಂದ ಬರುವ (ನಿರಂತರ) ಮೈಗ್ರೇನ್‌ಗಳ ಮೇಲೆ ಇವು ಕೆಲಸ ಮಾಡುವುದಿಲ್ಲ.

ಸಿರೊಟೋನಿನ್‌ ಸ್ಪೆಸಿಫಿಕ್ ರಿಅಪ್ಟೇಕ್ ಇನ್ಹಿಬಿಟರ್ಸ್ (SSRI) ಮೈಗ್ರೇನ್ ಚಿಕಿತ್ಸೆಗಾಗಿ U.S. ಫುಡ್ ಆಂಡ್ ಡ್ರಗ್ ಅಡ್ಮಿನಿಸ್ಟ್ರೇಶನ್ (FDA)ನಿಂದ ಅನುಮತಿಯನ್ನು ಪಡೆದಿಲ್ಲ, ಆದರೆ ಪ್ರಾಯೋಗಿಕ ಒಮ್ಮತದಿಂದ ಇದು ಪರಿಣಾಮಕಾರಿ ಎಂದು ಗುರುತಿಸಲಾಗಿದೆ.

ಉಪಶಾಮಕ-ಪ್ರತಿರೋಧಕಗಳು

ಟ್ರೈಸೈಕ್ಲಿಕ್ ಉಪಶಾಮಕ-ಪ್ರತಿರೋಧಕಗಳನ್ನು ಹೆಚ್ಚು ಪರಿಣಾಮಕಾರಿ ರೋಗನಿರೋಧಕ ಚಿಕಿತ್ಸೆಯಾಗಿ ಬಹು ಹಿಂದೆಯೇ ದೃಢಪಡಿಸಲಾಗಿದೆ. ಈ ಔಷಧಗಳು ನಿದ್ರಾ ಹೀನತೆ ಅಥವಾ ಲೈಂಗಿಕ ನಿರಾಸಕ್ತಿಯಂತಹ ಅನಪೇಕ್ಷಣೀಯ ಅಡ್ಡ ಪರಿಣಾಮಗಳನ್ನು ಉಂಟುಮಾಡುತ್ತವೆ. ಮೈಗ್ರೇನ್‌ ರೋಗ ನಿರೋಧಕ ಚಿಕಿತ್ಸೆಗೆ SSRI ಉಪಶಾಮಕ-ಪ್ರತಿರೋಧಕ ಔಷಧಿ ಟ್ರೈಸೈಕ್ಲಿಕ್‌ಗಳಿಗಿಂತ ಕಡಿಮೆ ಪರಿಣಾಮಕಾರಿ. ಮೈಗ್ರೇನ್‌ ಚಿಕಿತ್ಸೆಗಾಗಿ FDA ಮಾನ್ಯತೆಯನ್ನು ಹೊಂದಿಲ್ಲವಾದರೂ, ಉಪಶಾಮಕ-ಪ್ರತಿರೋಧಕಗಳನ್ನು ವ್ಯಾಪಕವಾಗಿ ಸೂಚಿಸಲಾಗುತ್ತದೆ. ಟ್ರೈಸೈಕ್ಲಿಕ್ ಮತ್ತು SSRIಗಳಲ್ಲದೆ, ಉಪಶಾಮಕ-ಪ್ರತಿರೋಧಕ ನೆಫಾಜೊಡಾನ್‌ ಸಹ ಮೈಗ್ರೇನ್ ರೋಗ ನಿವಾರಣೆಯಲ್ಲಿ ಬಹಳ ಪ್ರಯೋಜನಕಾರಿ, ಇದು 5-HT2A ಮತ್ತು 5-HT2C ಸಂವೇದೀ ಅಂಗಗಳ ಮೇಲೆ ಪ್ರತಿವರ್ತಿ ಪರಿಣಾಮವನ್ನು ಹೊಂದಿದೆ. ಇದು ಮೈಗ್ರೇನ್‌ ರೋಗನಿರೋಧಕ ಚಿಕಿತ್ಸೆಯಾಗಿ ಸಾಮಾನ್ಯವಾಗಿ ಬಳಸುವ ಟ್ರೈಸೈಕ್ಲಿಕ್ ಉಪಶಾಮಕ-ಪ್ರತಿರೋಧಕ 'ಆಮಿಟ್ರಿಪ್ಟಿಲೈನ್'‌ಗಿಂತ ಹೆಚ್ಚು ಅಡ್ಡ ಪರಿಣಾಮವನ್ನು ಹೊಂದಿದೆ. ಅನಾರೋಗ್ಯದ ಒತ್ತಡವಿರುವ ಮೈಗ್ರೇನ್‌ ರೋಗಿಗಳ ಚಿಕಿತ್ಸೆಗೆ ಉಪಶಾಮಕ-ಪ್ರತಿರೋಧಕಗಳು ಬಹುಪ್ರಯೋಜನಕಾರಿ.

ಅರ್ಗಟ್ ಅಲ್ಕಲಾಯ್ಡ್‌ಗಳು

1991ರಲ್ಲಿ ಸುಮಟ್ರಿಪ್ಟಾನ್ ಬಳಕೆಗೆ ಬರುವವರೆಗೆ, ಅರ್ಗಟ್ ಸಂಯುಕ್ತಗಳು (ಎರ್ಗೊಲೈನ್ ನೋಡಿ) ಮೈಗ್ರೇನ್‌ ಉಪಶಮನಕ್ಕಾಗಿ ಲಭ್ಯವಿದ್ದ ಬಾಯಿಯಿಂದ ತೆಗೆದುಕೊಳ್ಳುವ ಪ್ರಾಥಮಿಕ ಔಷಧ.

ಎರ್ಗಟ್ ಔಷಧಗಳ ಬೆಲೆ ಮತ್ತು ಒಟ್ಟು ಅಡ್ಡ ಪರಿಣಾಮಗಳು 'ಅಕಾಲಿಕ ಅಪಾಯ ಔಷಧ' ಎಂದು ಪ್ರತ್ಯೇಕಿಸಿಡುವಂತೆ ಸೂಚಿಸಿದರೂ, ಅವನ್ನು ಮೈಗ್ರೇನ್ ತಡೆಗಟ್ಟಲು ಅಥವಾ ಅಕಾಲಿಕ ಚಿಕಿತ್ಸೆಗಾಗಿ ಬಳಸಬಹುದು. ಎರ್ಗಟಮೈನ್ ಟಾರ್ಟೇಟ್ ಗುಳಿಗೆಗಳು (ಸಾಮಾನ್ಯವಾಗಿ ಕ್ಯಫೀನ್‌ನೊಂದಿಗೆ) ತುಂಬ ಹಾಗೂ ದೀರ್ಘಾವಧಿ(ಟ್ರಿಪ್ಟಾನ್‌ಗಿಂತ ವಿಭಿನ್ನ) ಪರಿಣಾಮಕಾರಿಯಾಗಿದ್ದರೂಎರ್ಗಾಟಿಸಮ್ ತೊಂದರೆಯಿಂದಾಗಿ ಅವು ಅವಕೃಪೆಗೆ ಈಡಾಯಿತು. ರೋಗಿಗೆ ವಾಕರಿಕೆ ಇರದಿದ್ದರೆ ಮಾತ್ರ ಬಾಯಿಯಿಂದ ತೆಗೆದುಕೊಳ್ಳುವ ಎರ್ಗಟಮೈನ್ ಗುಳಿಗೆ ಜೀರ್ಣಿಸಿಕೊಳ್ಳಲು ಸಾಧ್ಯ. ಎರ್ಗಟಮೈನ್ ಔಷಧ ನಿಕ್ಷೇಪದಿಂದ (ಅಥವಾ ಸುಮಾರು 1992ರವರೆಗೆ ಮಾಡಿದ ಎರ್ಗಸ್ಟಾಟ್ ನಾಲಿಗೆಯ ಕೆಳಗಿಡುವ ಗುಳಿಗೆ) ವಾಕರಿಕೆಯನ್ನು ನಿಗ್ರಹಿಸಬಹುದು. ಎರ್ಗಟ್ ಔಷಧ ಸ್ವತಃ ಅತೀ ವಾಕರಿಕೆ ತರುವಂಥದು, ಆದ್ದರಿಂದ ಅವನ್ನು ಮೊದಲು ತೆಗೆದುಕೊಳ್ಳುವಾಗ ರೋಗಿಗಳು ಇದರ ವ್ಯತಿರಿಕ್ತ ಪರಿಣಾಮವನ್ನು ಪ್ರತಿರೋಧಿಸಲು ಸಿದ್ಧಹಸ್ತರಾಗಿರಬೇಕು. ಅರ್ಗಟಮೈನ್-ಕ್ಯಫೀನ್ 1/100 ಮಿಗ್ರಾಂ ಅನುಪಾತದ ಮಿಶ್ರಣ ಗುಳಿಗೆಗಳು (ಕ್ಯಾಫರ್ಗಟ್, ಎರ್ಕ್ಯಾಫ್‌ ಇತ್ಯಾದಿ.) ಟ್ರಿಪ್ಟಾನ್‌ಗಿಂತ ಅತೀ ಅಗ್ಗ ಹಾಗೂ ಇವು ಏಷ್ಯಾ ಮತ್ತು ರೊಮೇನಿಯಾದಲ್ಲಿ (ಕ್ಯಾಫೆಡಾಲ್) ಸಾಮಾನ್ಯವಾಗಿ ಲಭಿಸುತ್ತವೆ.[ಕಡಿಮೆ ಬೆಲೆಯವು/ ಇವುಗಳನ್ನು USAನಲ್ಲಿ ಪಡೆಯುವುದು ಕಷ್ಟ. ನಿದ್ರೆ ಬರಿಸುವ ಕ್ಯಫೀನ್‌‌ನ ಪರಿಣಾಮವನ್ನು ದುರ್ಬಲಗೊಳಿಸುವುದರಿಂದ ಅರ್ಗಟಮೈನ್-ಕ್ಯಫೀನ್‌ ಅನ್ನು ಸಂಜೆ ಅಥವಾ ರಾತ್ರಿ ಅಮರಿಕೊಳ್ಳುವ ಮೈಗ್ರೇನ್‌ಗಳನ್ನು ತಡೆಯಲು ನಿರಂತರವಾಗಿ ಬಳಸಲಾಗುವುದಿಲ್ಲ. ಶುದ್ಧವಾದ ಅರ್ಗಟಮೈನ್ ಟಾರ್ಟ್ರೇಟ್ ಸಂಜೆ-ರಾತ್ರಿ ಮೈಗ್ರೇನ್‌ಗಳಿಗೆ ಬಹುಪರಿಣಾಮಕಾರಿ, ಆದರೆ ಇದು USAಯಲ್ಲಿ ಅತೀ ಕಡಿಮೆಯಾಗಿದೆ ಅಥವಾ ಸಿಗುವುದೇ ಇಲ್ಲ. ಸೂಜಿಯ ಮ‌ೂಲಕ ಅಥವಾ ಉಸಿರಿನಿಂದ ಎಳೆದುಕೊಳ್ಳುವ ಮ‌ೂಲಕ ತೆಗೆದುಕೊಳ್ಳುವ ಡಿಹೈಡ್ರೊಅರ್ಗಟಮೈನ್ (DHE) ಸಹ ಅರ್ಗಟಮೈನ್ ಟಾರ್ಟ್ರೇಟ್‌ನಷ್ಟೇ ಪರಿಣಾಮಕಾರಿಯಾಗಿರುತ್ತದೆ, ಆದರೆ ಇದು $2 USD ಕ್ಯಾಫರ್ಗಟ್ ಗುಳಿಗೆಗಳಿಗಿಂತ ಹೆಚ್ಚು ದುಬಾರಿ.

ಸ್ಟೀರಾಯ್ಡ್‌ಗಳು

ಇತ್ತೀಚಿನ ಮೆಟಾ ವಿಶ್ಲೇಷಣೆಯ ಆಧಾರದಲ್ಲಿ, ಪ್ರಮಾಣಿತ ಚಿಕಿತ್ಸೆಯೊಂದಿಗೆ ಒಂದು ಡೋಸು IV ಡೆಕ್ಸಾಮೀಥಸೋಮ್ಅನ್ನು ತೆಗೆದುಕೊಳ್ಳುವುದರಿಂದ ತಲೆನೋವು ಮತ್ತೆ ಮತ್ತೆ ಬರುವುದು 26%ನಷ್ಟು ಕಡಿಮೆಯಾಗುತ್ತದೆ.

ಇತರ ಅಂಶಗಳು

ಮುಕ್ತ ಮಾರಾಟದ ಔಷಧಗಳು ಕೆಲಸ ಮಾಡದಿದ್ದರೆ ಅಥವಾ ಟ್ರಿಪ್ಟಾನ್‌ಗಳು ಅಸಮರ್ಥವಾದರೆ, ಮುಂದಿನ ಹೆಜ್ಜೆಯಾಗಿ ಹೆಚ್ಚಿನ ವೈದ್ಯರು ಫಿಯೋರಿಸೆಟ್ ಅಥವಾ ಫಿಯೋರಿನಲ್ಅನ್ನು ಸೂಚಿಸುತ್ತಾರೆ. ಇವು ಬುಟಲ್ಬಿಟಲ್ (ಒಂದು ಬಾರ್ಬಿಟುರೇಟ್), ಪ್ಯಾರಸಿಟಮಾಲ್ (ಫಿಯೋರಿಸೆಟ್‌ನಲ್ಲಿ) ಅಥವಾ ಆಸಿಟಿಲ್‌ಸ್ಯಾಲಿಸಿಲಿಕ್ ಆಮ್ಲ (ಸಾಮಾನ್ಯವಾಗಿ ಆಸ್ಪರಿನ್ ಎನ್ನುತ್ತಾರೆ ಮತ್ತು ಇದು ಫಿಯೋರಿನಲ್‌ನಲ್ಲಿರುತ್ತದೆ) ಮತ್ತು ಕ್ಯಫೀನ್‌ನ ಸಂಯುಕ್ತವಾಗಿದೆ. ಬುಟಲ್ಬಿಟಲ್‌ಅನ್ನು ಪ್ರತಿದಿನ ಬಳಸಿದರೆ ವ್ಯಸನಿಗಳಾಗುವ ಅಪಾಯ ಕಡಿಮೆ ಇದ್ದರೂ, ಅದು ಚಟವಾಗಿ ಬೆಳೆಯಬಲ್ಲದು ಹಾಗೂ ಮರುಕಳಿಸುವ ತಲೆನೋವು ಬರಲು ಆಸ್ಪದ ನೀಡಿದಂತಾಗುತ್ತದೆ. ಬಾರ್ಬಿಟುರೇಟ್ಅನ್ನು ಒಳಗೊಂಡಿರುವ ಔಷಧಗಳು ಹೆಚ್ಚಿನ ಯುರೋಪಿಯನ್ ರಾಷ್ಟ್ರಗಳಲ್ಲಿ ಲಭ್ಯವಿಲ್ಲ.

ಮೈಗ್ರೇನ್‌ ತಲೆನೋವಿಗೆ ಹೆಚ್ಚಾಗಿ ಸಲಹೆ ನೀಡುವ ಅಮೈಡ್ರಿನ್, ಡ್ಯಾರಾಡ್ರಿನ್ ಮತ್ತು ಮೈಡ್ರಿನ್‌ಗಳು ಅಸೆಟಾಮಿನೋಫೆನ್, ಡೈಕ್ಲೋರಾಲ್ಫೆನಾಜೋನ್ ಮತ್ತು ಐಸೊಮೀಥೆಪ್ಟೀನ್‌ಗಳ ಸಂಯೋಜನೆಗಳಾಗಿವೆ. ಈ ಔಷಧಗಳು ಮೈಗ್ರೇನ್ ಗುಣಪಡಿಸುವಲ್ಲಿ ಸುಮಟ್ರಿಪ್ಟಾನ್‌ಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ ಎಂದು ಕೆಲವು ಅಧ್ಯಯನಗಳು ಇತ್ತೀಚೆಗೆ ತೋರಿಸಿಕೊಟ್ಟಿವೆ.

ವಾಂತಿಯ ಲಕ್ಷಣ ಪ್ರಬಲವಾಗಿದ್ದರೆ ಇಂಜೆಕ್ಷನ್ ಅಥವಾ ಕರಗುವ ಗುಣವಿರುವಂಥ ವಾಂತಿನಿಗ್ರಹ ಔಷಧವನ್ನು ನೀಡಬೇಕಾಗುತ್ತದೆ.

ಕ್ಯಾಲ್ಸಿಟೋನಿನ್ ಜೀನ್ ಸಂಬಂಧಿತ ಪೆಪ್ಟೈಡ್‌ಗಳು (CGRP) ಮೈಗ್ರೇನ್‌‌ಗೆ ಸಂಬಂಧಿತ ನೋವು ಹುಟ್ಟುವುದರಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಹಾಗೂ ಟ್ರಿಪ್ಟಾನ್‌ಗಳು ಇದರ ಬಿಡುಗಡೆ ಮತ್ತು ಕ್ರಿಯೆಯನ್ನು ಕಡಿಮೆ ಮಾಡುತ್ತವೆ ಎಂದು ಇತ್ತೀಚೆಗೆ ಪತ್ತೆಯಾಗಿದೆ. ಮೈಗ್ರೇನ್‌ ಚಿಕಿತ್ಸೆಗಾಗಿ ಓಲ್ಸೆಜೆಪಂಟ್ ಮತ್ತು ಟೆಲ್ಕಜೆಪಂಟ್‌ (CGRP) ನಂತಹ ಸಂವೇದಿ ನರಕ್ಕೆ ಸಂಜ್ಞೆ ರವಾನಿಸುವ ಅಂಗದ ಪ್ರತಿವರ್ತಿಗಳನ್ನು ವೈಜ್ಞಾನಿಕ ಮತ್ತು ಪ್ರಾಯೋಗಿಕ ಅಧ್ಯಯನಗಳೆರಡರಲ್ಲೂ ಪರೀಕ್ಷಿಸಲಾಗುತ್ತಿದೆ.

ಸ್ಟೇಟಸ್ ಮೈಗ್ರೇನೋಸಸ್

72 ಗಂಟೆಗಳಿಗಿಂತಲೂ ಹೆಚ್ಚು ಕಾಲ ಇರುವ ವಿಶಿಷ್ಟ ಮೈಗ್ರೇನ್‌ಗೆ ಸ್ಟೇಟಸ್ ಮೈಗ್ರೇನೋಸಸ್ ಎನ್ನಲಾಗಿದೆ. ಈ ವೇಳೆಯಲ್ಲಿ ನಾಲ್ಕು ಗಂಟೆಗಳಿಗಿಂತ ಹೆಚ್ಚು ಅವಧಿಯ ಉಪಶಮನ ಸಿಗುವುದಿಲ್ಲ. ಸ್ಟೇಟಸ್ ಮೈಗ್ರೇನೋಸಸ್ ಸಾಮಾನ್ಯ ಹೊರರೋಗಿಗಳ ತೋರುವಿಕೆಯ ಆಧಾರದಲ್ಲಿ ಚಿಕಿತ್ಸೆ ನೀಡಿದರೆ ಗುಣಮುಖವಾಗುವುದಿಲ್ಲ ಎಂದು ತಿಳಿದುಬಂದಿದೆ.

ಸ್ಟೇಟಸ್ ಮೈಗ್ರೇನೋಸಸ್ ಚಿಕಿತ್ಸೆಯು ರೋಗದ ಹರಡುವಿಕೆಯ ನಿರ್ವಹಣೆಯನ್ನು ಒಳಗೊಂಡಿದೆ (ಅಂದರೆ ಸ್ಟೇಟಸ್ ಮೈಗ್ರೇನೋಸಸ್‌ನೊಂದಿಗೆ ಜೊತೆಗೂಡಿರುವ ಹಸಿವಿಲ್ಲದಿರುವಿಕೆ ಮತ್ತು ವಾಕರಿಕೆ/ವಾಂತಿ ಮೊದಲಾದವುಗಳಿಗೆ ಕಾರಣವಾಗುವ ದ್ರವ ಮತ್ತು ಎಲೆಕ್ಟ್ರೊಲೈಟ್ ವೈಪರೀತ್ಯಗಳನ್ನು ಸರಿದೂಗಿಸುವುದು) ಹಾಗೂ ಅನ್ನನಾಳ ಬಿಟ್ಟು ಬೇರೆ ಮಾರ್ಗದಲ್ಲಿ ನೀಡುವ ಔಷಧದಿಂದ ತಲೆನೋವನ್ನು ನಿವಾರಿಸಬಹುದು.

ಸ್ಟೇಟಸ್ ಮೈಗ್ರೇನೋಸಸ್ ಚಿಕಿತ್ಸೆಗೆ ಸಂಬಂಧಿಸಿದ ಹಲವಾರು ಘಟನೆಗಳು, ವರದಿಗಳು ವೈದ್ಯಕೀಯ ಸಾಹಿತ್ಯದಲ್ಲಿವೆ, ಅದರಲ್ಲಿ ಮೊದಲ ಚಿಕಿತ್ಸೆ ಎಂದರೆ - ಅಭಿಧಮನಿಯೊಳಗೆ ಮೆಟೊಕ್ಲೋಪ್ರಮೈಡ್ ಮತ್ತು ಟ್ರಿಪ್ಟಾನ್ ಅಥವಾ DHE. ಅನ್ನು ದ್ರವ ರೂಪದಲ್ಲಿ ನೀಡುವುದು.

ಮ‌ೂಲಿಕಾ ಚಿಕಿತ್ಸೆ

ಮ‌ೂಲಿಕೆ ಪೂರಕ 'ಫಿವರ್‌ಫ್ಯೂ'ಅನ್ನು (ಮೈಗ್ರೇನ್‌ ನಿವಾರಣೆಗೆ ಸಾಮಾನ್ಯವಾಗಿ ಬಳಸಲಾಗುತ್ತದೆ, ಕೆಳಗೆ ನೋಡಿ) OTC ಮೈಗ್ರೇನ್‌ ಕಡಿಮೆ ಮಾಡುವ ಔಷಧವಾಗಿದೆ, GelStat Corporation (=ಗೆಲ್‌ಸ್ಟಾಟ್ ಕಾರ್ಪೊರೇಶನ್) ಮಾರಾಟದಲ್ಲಿ ತೊಡಗಿದೆ. ಇದನ್ನು ಶುಂಠಿಯೊಂದಿಗೆ ಮಿಶ್ರಣ ಮಾಡಿ ನಾಲಗೆಯ ಕೆಳಗೆ ಇಟ್ಟು ಕರಗಲು ಬಿಡಲಾಗುತ್ತದೆ. ಓಪನ್-ಲೇಬಲ್ ಅಧ್ಯಯನವು (ಗೆಲ್‌ಸ್ಟಾಟ್ ನಿಧಿ ನೆರವು) ಚಿಕಿತ್ಸೆಯ ಪರಿಣಾಮದ ಬಗೆಗಿನ ಕೆಲವು ತಾತ್ಕಾಲಿಕ ಆಧಾರಗಳನ್ನು ಕಂಡುಹಿಡಿಯಿತು, ಆದರೆ ವೈಜ್ಞಾನಿಕವಾಗಿ ನೆಚ್ಚಬಹುದಾದ ಯಾವುದೇ ಅಧ್ಯಯನ ಮಾಡಿಲ್ಲ. ಇನ್ನೇನು ನೋವು ಶುರುವಾಯಿತು ಎನ್ನುವ ಹೊತ್ತಿಗೆ ಗಾಂಜಾ ಸೇವಿಸುವುದೂ ನೋವಿಗೆ ತಡೆಯೊಡ್ಡಬಹುದು ಜೊತೆಗೆ ನೋವಿನ ಉಪಶಮನ ಮಾಡಬಲ್ಲದು ಎಂದು ತಿಳಿಯಲಾಗಿದೆ.

ತುಲನಾತ್ಮಕ ಅಧ್ಯಯನಗಳು

ಮೈಗ್ರೇನ್‌ ದಾಳಿಯನ್ನು ಕಡಿಮೆ ಮಾಡುವಲ್ಲಿ ಈ ಔಷಧಗಳ ತಕ್ಕಮಟ್ಟಿನ ಪರಿಣಾಮಕ್ಕೆ ಸಂಬಂಧಿಸಿದಂತೆ, 2004ರ ಪರೀಕ್ಷಾ ಪ್ರಯೋಗದಲ್ಲಿ ಬಳಸಲಾಗುವ ಹುಸಿ ಔಷಧ-ನಿಯಂತ್ರಿತ ಪ್ರಯೋಗ ವು ನೋವಿನಿಂದ ಉಪಶಮನ ಹೊಂದುವಲ್ಲಿ ಹೆಚ್ಚಿನ ಪ್ರಮಾಣದ ಆಸಿಟಿಲ್‌ಸ್ಯಾಲಿಸಿಲಿಕ್ ಆಮ್ಲ (1000 ಮಿಗ್ರಾಂ), 50 ಮಿಗ್ರಾಂನಷ್ಟು ಸುಮಟ್ರಿಪ್ಟಾನ್ ಮತ್ತು 400 ಮಿಗ್ರಾಂನಷ್ಟು ಐಬುಪ್ರೊಫೇನ್‌ ಸಮಾನವಾಗಿ ಪರಿಣಾಮಕಾರಿ ಎಂದು ತೋರಿಸಿಕೊಟ್ಟಿದೆ. ಸುಮಟ್ರಿಪ್ಟಾನ್ ನೋವಿನಿಂದ ಮತ್ತು ಮೈಗ್ರೇನ್‌-ಸಂಬಂಧಿತ ಇತರ ರೋಗಲಕ್ಷಣಗಳಿಂದ ಸಂಪೂರ್ಣವಾಗಿ ಮುಕ್ತಿ ನೀಡುವುದರಿಂದ ಇದಕ್ಕೆ ರೋಗಿಗಳಿಂದ ಹೆಚ್ಚು ಬೇಡಿಕೆ ಇದೆ.

ಪರಿಶೀಲನಾ ಔಷಧ ಉತ್ಪಾದಕರ ನೀಧಿ ನೆರವಿನಿಂದ ನಡೆಸಲ್ಪಟ್ಟ ಮತ್ತೊಂದು ಯಾದೃಚ್ಛಿಕ ನಿಯಂತ್ರಿತ ಪ್ರಯೋಗವು, ಯಾವುದೇ ಒಂದನ್ನು ಮಾತ್ರ ತೆಗೆದುಕೊಳ್ಳುವುದಕ್ಕಿಂತಲೂ 85 ಮಿಗ್ರಾಂ ಸುಮಟ್ರಿಪ್ಟಾನ್ ಮತ್ತು 200 ಮಿಗ್ರಾಂ ನ್ಯಾಪ್ರೋಕ್ಸೆನ್ ಸೋಡಿಯಂ ಸಂಯುಕ್ತ ಸೇವನೆ ಹೆಚ್ಚು ಉಪಯುಕ್ತ ಎಂದು ತೋರಿಸಿದೆ.

85 ಮಿಗ್ರಾಂ ಸುಮಟ್ರಿಪ್ಟಾನ್ ಮತ್ತು 500 ಮಿಗ್ರಾಂ ನ್ಯಾಪ್ರೋಕ್ಸೆನ್ ಸೋಡಿಯಂ ಸಂಯುಕ್ತವು ಮೈಗ್ರೇನ್‌ನ ‌ಚುರುಕಾದ ಚಿಕಿತ್ಸೆಯಲ್ಲಿ ಬಹುಪರಿಣಾಮಕಾರಿ ಹಾಗೂ ಬೇಗನೆ ಮಧ್ಯಪ್ರವೇಶಿಸುವ ಅದರ ಮಾದರಿಗಳನ್ನು ಚೆನ್ನಾಗಿ ಸಹಿಸಿಕೊಳ್ಳುತ್ತದೆ ಎಂಬುದನ್ನು ಇತ್ತೀಚೆಗೆ ಕಂಡುಹಿಡಿಯಲಾಯಿತು. ಸುಮಟ್ರಿಪ್ಟಾನ್/ನ್ಯಾಪ್ರೋಕ್ಸೆನ್ ಸೇವಿಸಿದ 30 ನಿಮಿಷಗಳೊಳಗಾಗಿ ನೋವಿನಿಂದ ಮುಕ್ತಿ ಸಿಗುವ ಪ್ರತಿಕ್ರಿಯೆ ಸಿಗುತ್ತದೆ, 1 ಗಂಟೆಗಳವರೆಗೆ ಇದು ಉಳಿಸಿಕೊಂಡು ಬರುತ್ತದೆ ಹಾಗೂ 2ರಿಂದ 24 ಗಂಟೆಗಳವರೆಗೆ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತದೆ. ಸುಮಟ್ರಿಪ್ಟಾನ್/ನ್ಯಾಪ್ರೋಕ್ಸೆನ್ ನೀಡಿದ 2 ಮತ್ತು 4 ಗಂಟೆಗಳಲ್ಲಿ ಇದು ಸಾಂಪ್ರದಾಯಿಕ ಮೈಗ್ರೇನ್‌-ಸಂಬಂಧಿತ ರೋಗಲಕ್ಷಣಗಳನ್ನು (ವಾಕರಿಕೆ,ಬೆಳಕಿನ ಭಯ, ಧ್ವನಿಭಯಪಿ) ಹಾಗೂ ಅಸಾಂಪ್ರದಾಯಿಕ ಮೈಗ್ರೇನ್‌-ಸಂಬಂಧಿತ ರೋಗಲಕ್ಷಣಗಳನ್ನು (ಕುತ್ತಿಗೆ ನೋವು/ಅಸ್ವಸ್ಥತೆ ಮತ್ತು ಸೈನಸ್ ನೋವು/ಒತ್ತಡ) ಕಡಿಮೆ ಮಾಡುತ್ತದೆ.

ಪೂರ್ವಸೂಚನೆ

ಹೃದಯ ರಕ್ತನಾಳದ ಅಪಾಯಗಳು

ಮೈಗ್ರೇನ್‌ ಪೀಡಿತರಲ್ಲಿ ಪಾರ್ಶ್ವವಾಯು ಹೊಡೆತದ ಸಂಭವವು ಎರಡರಿಂದ ಮ‌ೂರು ಪಟ್ಟು ಹೆಚ್ಚಿರುತ್ತದೆ. ಪ್ರಾಪ್ತ ವಯಸ್ಸಿಗೆ ಕಾಲಿಟ್ಟವರು ಮತ್ತು ಹಾರ್ಮೋನ್‌ ಗರ್ಭ ನಿರೋಧಕಗಳನ್ನು ತೆಗೆದುಕೊಳ್ಳುವ ಮಹಿಳೆಯರು ಗಮನಾರ್ಹವಾಗಿ ಅಪಾಯಕ್ಕೆ ಈಡಾಗುತ್ತಾರೆಂದು ತೋರುತ್ತದೆ. ಯಾವುದೇ ದೈಹಿಕ ಕ್ರಿಯೆ ಸಂಬಂಧದ ಕಾರ್ಯರೀತಿಗಳು ಮೈಗ್ರೇನ್‌ಗೆ ಕಾರಣ ಎಂಬುದು ಅಸ್ಪಷ್ಟ, ಆದರೆ ಮಿದುಳಿನ ರಕ್ತ ನಾಳಗಳ ತೀವ್ರ ವೈಪರೀತ್ಯಗಳು ಇದಕ್ಕೆ ಕಾರಣವಾಗಬಹುದು. ಸೆಳವು ಸೂಚನೆಯ ಮೈಗ್ರೇನ್ ಇಲ್ಲದ ಮಹಿಳೆಗಿಂತ, ಸೆಳವು ಸೂಚನೆಯ ಮೈಗ್ರೇನ್‌ ಹೊಂದಿರುವ ಮಹಿಳೆಯು ಪಾರ್ಶ್ವವಾಯು ಹೊಡೆತಕ್ಕೆ ಮತ್ತು ಹೃದಯಾಘಾತಕ್ಕೆ ಈಡಾಗುವ ಅಪಾಯವು ಎರಡು ಪಟ್ಟು ಹೆಚ್ಚಿರುತ್ತದೆ. ಮೈಗ್ರೇನ್‌ನಿಂದ ಬಳಲುವವರು ರಕ್ತದ ಹೆಪ್ಪುಗಟ್ಟುವಿಕೆ ಮತ್ತು ರಕ್ತ ಸ್ರಾವದಿಂದ ಉಂಟಾಗುವ ಪಾರ್ಶ್ವವಾಯು ಹೊಡೆತ ಮಾತ್ರ ಅಲ್ಲದೆ ಕ್ಷಣಮಾತ್ರದ ರಕ್ತದ ಕೊರತೆಯಿಂದಾಗುವ ಹೊಡೆತಗಳ ಅಪಾಯವನ್ನೂ ಹೊಂದಿರುವಂತೆ ತೋರುತ್ತದೆ. ಹೃದಯ ರಕ್ತನಾಳಗಳ ಕಾರಣದಿಂದ ಉಂಟಾಗುವ ಮರಣ ಸಂಖ್ಯೆಯು ಸೆಳವು ಸೂಚನೆ ಇರುವ ಮೈಗ್ರೇನ್‌ ಹೊಂದಿರುವವರಲ್ಲಿ ಹೆಚ್ಚಾಗಿರುತ್ತದೆ ಎಂದು ವಿಮೆನ್ಸ್ ಹೆಲ್ತ್ ಇನಿಶಿಯೇಟಿವ್ ಅಧ್ಯಯನವು ಹೇಳಿದೆ, ಆದರೆ ಇದನ್ನು ದೃಢಪಡಿಸಲು ಹೆಚ್ಚಿನ ಸಂಶೋಧನೆಯ ಅಗತ್ಯವಿದೆ.

ಸೋಂಕು ವಿಜ್ಞಾನ

ಅರೆತಲೆ ನೋವು ಮೈಗ್ರೇನ್‌ 
2002ರಲ್ಲಿ ಪ್ರತಿ 100,000 ಮಂದಿಯಲ್ಲಿನ ಮೈಗ್ರೇನ್ ಅಸಾಮರ್ಥ್ಯದ ಜೀವನದ ವರ್ಷ.[158][159][160][161][162][163][164][165][166][167][168][169][170]
ಅರೆತಲೆ ನೋವು ಮೈಗ್ರೇನ್‌ 
ವಯಸ್ಸು-ಲಿಂಗ ವ್ಯಾಪ್ತಿ

ಮೈಗ್ರೇನ್‌ ಒಂದು 12–28%ನಷ್ಟು ಜನರ ಜೀವನದ ಯಾವುದೋ ಒಂದು ಕ್ಷಣದಲ್ಲಿ ತಗಲುವ ಸಾಮಾನ್ಯ ಕಾಯಿಲೆ. ಸಂಪೂರ್ಣ ಜೀವನದಲ್ಲಿ ಮೈಗ್ರೇನ್‌ ಚಾಲ್ತಿಯಲ್ಲಿರುವ ಪ್ರಮಾಣವು ಯಾವುದೇ ಒಂದು ಸಮಯದಲ್ಲಿ ಎಷ್ಟು ರೋಗಿಗಳಲ್ಲಿ ಮೈಗ್ರೇನ್‌ ಸಕ್ರಿಯವಾಗಿರುತ್ತದೆ ಎಂಬುದರ ಬಗ್ಗೆ ಅಅಕಿ ಅಂಶ ಸ್ಪಷ್ಟ ಚಿತ್ರಣವನ್ನು ನೀಡುವುದಿಲ್ಲ. ಆದ್ದರಿಂದ ಒಂದು ವರ್ಷದಲ್ಲಿ ಚಾಲ್ತಿಯಲ್ಲಿರುವ ಪ್ರಮಾಣವನ್ನು ಗಮನಿಸಿ ಮೈಗ್ರೇನ್‌ ಪೀಡಿತರ ಪ್ರಮಾಣದ ಬಗ್ಗೆ ನಿರ್ಣಯಿಸಲಾಗುತ್ತದೆ. ಈ ಪ್ರಮಾಣವು ಹಿಂದಿನ ವರ್ಷದಲ್ಲಿ ಒಂದು ಅಥವಾ ಅದಕ್ಕಿಂತ ಹೆಚ್ಚು ಬಾರಿ ಮೈಗ್ರೇನ್‌ ದಾಳಿಗೆ ತುತ್ತಾದ ರೋಗಿಗಳ ಸಂಖ್ಯೆಯ ಬಗ್ಗೆ ವಿವರಿಸುತ್ತದೆ. ಸ್ಪಷ್ಟವಾದ ಚಿತ್ರಣ ನೀಡುವಲ್ಲಿ ಸಹಾಯ ಮಾಡುವುದು ರೋಗದ ವ್ಯಾಪನೆ. ಇದು ಯಾವುದೇ ನಿರ್ದಿಷ್ಟ ವಯಸ್ಸಿನಲ್ಲಿ ಕಾಣಿಸಿಕೊಳ್ಳುವ ಮೊದಲ ದಾಳಿಯ ಬಗ್ಗೆ ನಿರೂಪಿಸುತ್ತದೆ ಮತ್ತು ರೋಗವು ಸಮಯ ಹೋದಂತೆ ಹೇಗೆ ಬೆಳೆಯುತ್ತದೆ ಮತ್ತು ಕುಗ್ಗುತ್ತದೆ ಎಂಬುದರ ಬಗ್ಗೆ ತಿಳಿಯುವಲ್ಲಿ ಸಹಾಯ ಮಾಡುತ್ತದೆ.

ಹಲವಾರು ಅಧ್ಯಯನಗಳ ಆಧಾರದ ಮೇಲೆ, ಒಂದು ವರ್ಷದಲ್ಲಿ ಕಾಣಿಸಿಕೊಳ್ಳುವ ಮೈಗ್ರೇನ್‌‌ನ ಪ್ರಮಾಣವು ವಯಸ್ಕ ಪುರುಷರಲ್ಲಿ 6–15%ನಷ್ಟಿರುತ್ತದೆ ಮತ್ತು ವಯಸ್ಕ ಮಹಿಳೆಯರಲ್ಲಿ 14–35%ನಷ್ಟಿರುತ್ತದೆ. ಈ ಅಂಕಿಗಳು ವಯಸ್ಸಿಗನುಗುಣವಾಗಿ ಬದಲಾಗುತ್ತವೆ: ಮೈಗ್ರೇನ್‌ನಿಂದ ಬಳಲುವ 12 ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ಈ ಪ್ರಮಾಣವು ಸರಿಸುಮಾರು 4–5%ನಷ್ಟಿರುತ್ತದೆ, ಇದು ಹುಡುಗರು ಮತ್ತು ಹುಡುಗಿಯರಲ್ಲಿ ಸ್ವಲ್ಪವೇ ವ್ಯತ್ಯಾಸವಿರುತ್ತದೆ. ರೋಗದ ವ್ಯಾಪ್ತಿಯು ಹುಡುಗಿಯರಲ್ಲಿ ಯೌವನಾವಸ್ಥೆಗೆ ಬಂದ ನಂತರ ಇನ್ನಷ್ಟು ಹೆಚ್ಚಾಗುತ್ತದೆ, ಆರಂಭಿಕ ವಯಸ್ಕ ಜೀವನದವರೆಗೆ ಇದು ಹಾಗೆಯೇ ಮುಂದುವರಿಯುತ್ತದೆ. ಮಧ್ಯ ವಯಸ್ಸಿನವರೆಗೆ 25%ನಷ್ಟು ಮಹಿಳೆಯರು ವರ್ಷಕ್ಕೆ ಕನಿಷ್ಠ ಒಂದು ಬಾರಿ ಮೈಗ್ರೇನ್‌‌ನಿಂದ ಬಳಲುತ್ತಾರೆ, ಪುರುಷರಿಗೆ ಹೋಲಿಸಿದರೆ ಇದು 10%ನಷ್ಟು ಕಡಿಮೆ. ಮುಟ್ಟು ನಿಂತ ನಂತರ ಮಹಿಳೆಯರಲ್ಲಿ ಮೈಗ್ರೇನ್ ದಾಳಿಯು ಕಡಿಮೆಯಾಗುತ್ತಾ ಹೋಗುತ್ತದೆ, ಆದ್ದರಿಂದ 70ರ ವಯಸ್ಸಿನಲ್ಲಿ ಮೈಗ್ರೇನ್‌ ವ್ಯಾಪನೆಯು ಸುಮಾರು 5%ಗೆ ಹಿಂದಿರುವುದರೊಂದಿಗೆ ಗಂಡು ಮತ್ತು ಹೆಣ್ಣು ರೋಗಿಗಳ ಸಂಖ್ಯೆಯು ಸಮಪ್ರಮಾಣದಲ್ಲಿತ್ತದೆ.

ಎಲ್ಲಾ ವಯಸ್ಸಿನಲ್ಲಿ ಸೆಳವು-ಸೂಚನೆ ಇಲ್ಲದ ಮೈಗ್ರೇನ್‌ ಸೆಳವು-ಸೂಚನೆ ಇರುವ ಮೈಗ್ರೇನ್‌ಗಿಂತ ಹೆಚ್ಚು ಸಾಮಾನ್ಯವಾಗಿರುತ್ತದೆ, ಇದು 1.5:1 ಮತ್ತು 2:1ರ ನಡುವಿನ ಅನುಪಾತದಲ್ಲಿರುತ್ತದೆ. ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರಲ್ಲಿ ಮೈಗ್ರೇನ್‌ ಮುಖ್ಯವಾಗಿ ಸೆಳವು ಸೂಚನೆಯಿಲ್ಲದ ಮೈಗ್ರೇನ್‌ ಹೆಚ್ಚಾಗಿ ಕಂಡುಬರುತ್ತದೆ ಎಂದು ವ್ಯಾಪನೆಯ ಅಂಕಿಅಂಶಗಳು ತೋರಿಸುತ್ತವೆ. ಯೌವನಾವಸ್ಥೆಗೆ ಬರುವ ಮುನ್ನ ಮತ್ತು ಮುಟ್ಟು ನಿಂತ ನಂತರದ ಮಹಿಳೆಯರಲ್ಲಿ, ಸೆಳವು ಸೂಚನೆ ಇರುವ ಮೈಗ್ರೇನ್‌ 15–50 ವಯಸ್ಸಿನವರಲ್ಲಿ ಹೆಚ್ಚು ಸಾಮಾನ್ಯ.

ವಯಸ್ಸು, ಲಿಂಗ ಮತ್ತು ಮೈಗ್ರೇನ್‌ನ ಪ್ರಕಾರದ ಮಧ್ಯೆ ಪ್ರಬಲ ಸಂಬಂಧವಿದೆ.

ಮೈಗ್ರೇನ್‌ ವ್ಯಾಪನೆಯಲ್ಲಿ ಪ್ರಭಾವ ಬೀರುವ ಭೌಗೋಳಿಕ ವ್ಯತ್ಯಾಸಗಳ ಬಗ್ಗೆ ಗುರುತಿಸಲಾಗಿಲ್ಲ. ಏಷ್ಯಾ ಮತ್ತು ದಕ್ಷಿಣ ಅಮೇರಿಕಾದಲ್ಲಿನ ಅಧ್ಯಯನವು ಸಂಭವಗಳು ತುಲನಾತ್ಮಕವಾಗಿ ಕಡಿಮೆ ಇರುತ್ತದೆ ಎಂದು ಸೂಚಿಸುತ್ತದೆ, ಯುರೋಪ್ ಮತ್ತು ಉತ್ತರ ಅಮೇರಿಕಾದಲ್ಲಿನ ಅಂಶಗಳ ಮೌಲ್ಯ ರೇಖೆಗಿಂತ ಅವು ತಗ್ಗುವುದಿಲ್ಲ ಎಂಬುದು ಅಧ್ಯಯನಗಳಲ್ಲಿ ಕಂಡುಬಂದಿದೆ.

ಮೈಗ್ರೇನ್‌ನ ಪ್ರಮಾಣವು ಮ‌ೂರ್ಛೆ ರೋಗ ಹೊಂದಿರುವ ಕುಟುಂಬ ಸದಸ್ಯರಲ್ಲಿ ಎರಡು ಪಟ್ಟು ಹೆಚ್ಚಿರುವುದರೊಂದಿಗೆ ಕುಟುಂಬದಲ್ಲಿರುವ ಮ‌ೂರ್ಛೆ ರೋಗದ ಪ್ರಮಾಣಕ್ಕೆ ಇದು ಸಂಬಂಧಿಸಿದೆ ಹಾಗೂ ಇದು ಮ‌ೂರ್ಛೆ ರೋಗ ಇರುವವರಲ್ಲಿ ಸಾಮಾನ್ಯವಾಗಿರುತ್ತದೆ.

ಇತಿಹಾಸ

ಅರೆತಲೆ ನೋವು ಮೈಗ್ರೇನ್‌ 
ತಲೆ ನೋವು. ಜಾರ್ಜ್ ಕ್ರುಕ್‌ಶಾಂಕ್ (1819)

[[ಕೊರೆಯಲಾಗಿರುವ 9,000 ವರ್ಷ ಹಿಂದಿನ ತಲೆ ಬುರುಡೆಗಳು ಸಿಕ್ಕಿವೆ|ಕೊರೆಯಲಾಗಿರುವ[[9,000 ವರ್ಷ ಹಿಂದಿನ ತಲೆ ಬುರುಡೆಗಳು ಸಿಕ್ಕಿವೆ[ಸೂಕ್ತ ಉಲ್ಲೇಖನ ಬೇಕು]]]]]. ತಲೆನೋವನ್ನು ಗುಣಪಡಿಸುವುದಕ್ಕಾಗಿ ಈ ತೀವ್ರ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಊಹಿಸಲಾಗಿದೆ, ಆದರೂ ಇದನ್ನು ರುಜುವಾತುಪಡಿಸಲು ಯಾವುದೇ ಸ್ಪಷ್ಟ ಆಧಾರಗಳಿಲ್ಲ. [ಸೂಕ್ತ ಉಲ್ಲೇಖನ ಬೇಕು]. ನರಶೂಲೆ ಇರುವ ತಲೆನೋವಿನ ಬಗ್ಗೆ ಕ್ರಿ.ಪೂ. 1200ರಲ್ಲಿಯೇ ಪುರಾತನ ಈಜಿಪ್ಟಿನ ವೈದ್ಯಕೀಯ ದಾಖಲೆಯಲ್ಲಿ ನಮ‌ೂದಿಸಲಾಗಿದೆ.

ಗೋಚರ ಸೆಳವು ಸೂಚನೆಯು ಮೈಗ್ರೇನ್‌ ತಲೆ ನೋವನ್ನು ಉಂಟುಮಾಡುತ್ತದೆ ಹಾಗೂ ವಾಂತಿ ಮಾಡುವುದರಿಂದ ಉಪಶಮನ ಸಿಗುತ್ತದೆ ಎಂದು ಕ್ರಿ.ಪೂ. 400ರಲ್ಲಿ ಹಿಪ್ಪೋಕ್ರೇಟ್ಸ್ ವಿವರಿಸಿದ್ದಾನೆ. ಕ್ಯಪಡೋಕಿಯಾದ ಆರೆಟಿಯಸ್ ಎರಡು ಬಾರಿ ತಲೆನೋವು ಬರುವ ಮಧ್ಯೆ ಸ್ವಲ್ಪ ಅಂತರವಿದ್ದು ವಾಂತಿಯ ಲಕ್ಷಣಗಳಿರುವ ಒಮ್ಮಗ್ಗುಲಿನ ತಲೆನೋವಿನ ರೋಗಲಕ್ಷಣಗಳ ಬಗ್ಗೆ ನೀಡಿದ ವಿವರಣೆಯಿಂದಾಗಿ ಮೈಗ್ರೇನ್‌ "ಆವಿಷ್ಕಾರಕ" ಎಂಬ ಖ್ಯಾತಿ ಪಡೆದಿದ್ದಾನೆ.

ಪರ್ಗಮನ್‌ನ ಗ್ಯಾಲೆನಸ್ "ಹೆಮಿಕ್ರೇನಿಯ" (ಅರ್ಧ-ತಲೆ) ಎಂಬ ಪದವನ್ನು ಬಳಸಿದ, ಇದರಿಂದ "ಮೈಗ್ರೇನ್‌" ಪದ ನಿಷ್ಪನ್ನಗೊಂಡಿದೆ. ಮೈಗ್ರೇನ್ ತಗುಲಿದಾಗ ಹೆಚ್ಚಾಗಿ ವಾಕರಿಕೆ ಮತ್ತು ವಾಂತಿ ಕಾಣಿಸಿಕೊಳ್ಳುವುದರಿಂದ ಜಠರ ಮತ್ತು ಮಿದುಳಿನ ಮಧ್ಯೆ ಸಂಬಂಧವಿದೆ ಎಂದು ಅವನು ಯೋಚಿಸಿದನು. ಆಂಡಲುಸಿಯಾದಲ್ಲಿ ಜನಿಸಿದ ವೈದ್ಯ ಅಬು ಎಲ್ ಕೇಸಿಮ್ ಎಂದೂ ಕರೆಯುವ ಅಬುಲ್ಕೇಸಿಸ್, ತಲೆಗೆ ಕಾಯಿಸಿದ ಕಬ್ಬಿಣವನ್ನು ಹಚ್ಚುವುದರಿಂದ ಅಥವಾ ಕಪೋಲದಲ್ಲಿ ಸೀಳುಕಾ ಗಾಯ ಮಾಡಿ ಅದರೊಳಗೆ ಬೆಳ್ಳುಳ್ಳಿಯನ್ನು ತೂರಿಸುವುದರಿಂದ ಮೈಗ್ರೇನ್‌ ಉಪಶಮನ ಮಾಡಬಹುದು ಎಂದು ಸೂಚಿಸಿದ್ದಾನೆ.

ಮಧ್ಯಯುಗದಲ್ಲಿ ಮೈಗ್ರೇನ್‌ ಅನ್ನು ಮೌನವಾಗಿ ಅಮರಿಕೊಳ್ಳುವ ವಿಭಿನ್ನ ಭಾವನಾರೂಪದ ಕಾಯಿಲೆ ಎಂದು ಗುರುತಿಸಿದ್ದರು, ಅದರ ಚಿಕಿತ್ಸೆಗಾಗಿ ಕಾಯಿಸಿದ ಕಬ್ಬಿಣದಿಂದ ಹಿಡಿದು ರಕ್ತ ತೆಗೆಯುವ ಕ್ರಮವನ್ನು ಹಾಗೂ ಕೆಲವೊಮ್ಮೆ ಮಾಟಮಂತ್ರವನ್ನೂ ಮಾಡಲಾಗುತ್ತಿತ್ತು[ಸೂಕ್ತ ಉಲ್ಲೇಖನ ಬೇಕು]. ಮೈಗ್ರೇನ್‌ ಆಕ್ರಮಣಶೀಲ ಹಳದಿ ಪಿತ್ತರಸದಿಂದ ಬರುತ್ತದೆ ಎಂದು ಗ್ಯಾಲೆನಸ್‌ನ ಶಿಷ್ಯರು ವಿವರಿಸಿದರು. ಎಬ್ನ್ ಸಿನ (ಅವಿಸೆನ್ನ) ಅವನ ಪಠ್ಯಪುಸ್ತಕ "ಎಲ್ ಕನೂನ್ ಫೆಲ್ ಟೆಬ್"ನಲ್ಲಿ ಮೈಗ್ರೇನ್‌ಅನ್ನು ಹೀಗೆಂದು ನಿರೂಪಿಸಿದ್ದಾನೆ - "... ಸ್ವಲ್ಪ ಪ್ರಮಾಣದ ಚಲನೆ, ಕುಡಿತ ಮತ್ತು ತಿನ್ನುವಿಕೆ ಮತ್ತು ಶಬ್ಧಗಳು ನೋವನ್ನು ಪ್ರಚೋದಿಸುತ್ತವೆ. ರೋಗಿಯು ಮಾತನಾಡುವ ಶಬ್ಧ ಮತ್ತು ಬೆಳಕನ್ನು ಸಹಿಸಲಾರ. ಕತ್ತಲಲ್ಲಿ ಏಕಾಂತವಾಗಿ ವಿಶ್ರಾಂತಿ ತೆಗೆದುಕೊಳ್ಳಲು ಬಯಸುತ್ತಾನೆ. " ಅಬು ಬಾಕ್ರ್ ಮಹಮ್ಮದ್ ಐಬ್ನ್ ಜಕಾರಿಯ ರಾಜಿಯು ಮಹಿಳೆಯ ಜೀವನದಲ್ಲಿ ತಲೆನೋವು ವಿವಿಧ ಅಂಶಗಳೊಂದಿಗೆ ಸಂಬಂಧ ಹೊಂದಿದೆ ಎಂದು ಗುರುತಿಸಿದ್ದಾನೆ, "...ಹಾಗೂ ಅಂತಹ ತಲೆನೋವು ಹೆರಿಗೆ ಮತ್ತು ಗರ್ಭಪಾತದ ನಂತರ ಅಥವಾ ಮುಟ್ಟು ನಿಂತಾಗ ಮತ್ತು ಡಿಸ್ಮೆನೋರಿಯಾ ಸಂದರ್ಭದಲ್ಲಿ ಕಾಣಿಸಿಕೊಳ್ಳುತ್ತದೆ."

ಲಂಡನ್‌ನಲ್ಲಿ 1712ರಲ್ಲಿ ಪ್ರಕಟವಾದ ಬಿಬ್ಲಿಯೊತೆಕ ಅನಾಟಮಿಕ, ಮೆಡಿಕ್, ಚಿರುರ್ಜಿಕ ಮೊದಲಾದವುಗಳಲ್ಲಿ, "ಮೆಗ್ರಿಮ್"ಅನ್ನೂ ಒಳಗೊಂಡಂತೆ ಮುಖ್ಯ ಮೈಗ್ರೇನ್‌ ಎಂದು ಗುರುತಿಸಬಹುದಾದ ಐದು ಪ್ರಕಾರದ ಪ್ರಮುಖ ತಲೆನೋವುಗಳನ್ನು ವಿವರಿಸಲಾಗಿದೆ. ಗ್ರಾಹಮ್ ಮತ್ತು ವೋಲ್ಫ್ (1938) ಅವರ ಬರಹದಲ್ಲಿ ಮೈಗ್ರೇನ್‌‌ನಿಂದ ಉಪಶಮನ ಪಡೆಯಲು ಅರ್ಗಟಮೈನ್ ಟಾರ್ಟ್ ಅನ್ನು ಸಲಹೆ ನೀಡಿದ್ದಾರೆ. ನಂತರ 20ನೇ ಶತಮಾನದಲ್ಲಿ ಹ್ಯಾರೋಲ್ಡ್ ವೋಲ್ಫ್ (1950) ತಲೆನೋವಿನ ಅಧ್ಯಯನಕ್ಕಾಗಿ ಪ್ರಾಯೋಗಿಕ ಪ್ರಸ್ತಾಪವನ್ನು ಅಭಿವೃದ್ಧಿಗೊಳಿಸಿದನು ಹಾಗೂ ನರವ್ಯೂಹದ ಸಿದ್ಧಾಂತಕ್ಕೆ ವಿರುದ್ಧವಾಗಿರುವ ಮೈಗ್ರೇನ್‌ನ ನಾಳೀಯ ಸಿದ್ಧಾಂತವನ್ನು ಉತ್ತಮವಾಗಿ ಪರಿಷ್ಕರಿಸಿದನು.

ಸಮಾಜ ಮತ್ತು ಸಂಸ್ಕೃತಿ

ಆರ್ಥಿಕ ಪರಿಣಾಮ

ನೋವು ಮತ್ತು ವೇದನೆಗೆ ಮುಖ್ಯ ಕಾರಣವಾಗಿರುವುದರೊಂದಿಗೆ, ದೀರ್ಘಕಾಲದ ಮೈಗ್ರೇನ್‌ ರೋಗವು ವೈದ್ಯಕೀಯ ಖರ್ಚಿಗೆ ಮತ್ತು ಉತ್ಪಾದಕತೆ ಕಳೆದುಕೊಳ್ಳುವುದಕ್ಕೆ ಪ್ರಮುಖ ಮ‌ೂಲ. ಇದನ್ನು ಯುರೋಪಿಯನ್ ಸಮುದಾಯದಲ್ಲಿ ಪ್ರತಿ ವರ್ಷಕ್ಕೆ €27 ಶತಕೋಟಿಗಿಂತಲೂ ಹೆಚ್ಚು ಖರ್ಚಿರುವ ಅತೀ ದುಬಾರಿ ನರವೈಜ್ಞಾನಿಕ ಕಾಯಿಲೆ ಎಂದು ಅಭಿಪ್ರಾಯ ಪಡಲಾಗಿದೆ. $313ನಷ್ಟು ಕಳೆದುಕೊಂಡ-ಉತ್ಪಾದಕತೆಯನ್ನೂ ಒಳಗೊಂಡಂತೆ ಪ್ರತಿ ಮೈಗ್ರೇನ್‌ ರೋಗಿಯ ಆರು ತಿಂಗಳ ಸಂಪೂರ್ಣ ವೈದ್ಯಕೀಯ ಖರ್ಚು ಸುಮಾರು $107 USD ಇರುತ್ತದೆ ಎಂದು 1988 ಅಧ್ಯಯನವು ಅಂದಾಜು ಮಾಡಿದೆ.[ಸೂಕ್ತ ಉಲ್ಲೇಖನ ಬೇಕು] ಮೈಗ್ರೇನ್‌ನಿಂದಾಗಿ ಕಳೆದುಕೊಂಡ ಉದ್ಯೋಗದಾತನ ಉತ್ಪಾದಕತೆಯ ವಾರ್ಷಿಕ ಖರ್ಚು ಪ್ರತಿ ರೋಗಿಗೆ $3,309ನಷ್ಟಿರುತ್ತದೆ ಎಂದು ನಿರ್ಣಯಿಸಲಾಗಿದೆ. ಅಮೇರಿಕಾ ಸಂಯುಕ್ತ ಸಂಸ್ಥಾನದಲ್ಲಿ 1994ರಲ್ಲಿ ಮೈಗ್ರೇನ್‌ಗೆ ಸಂಬಂಧಿಸಿದಂತೆ ಒಟ್ಟು ವೈದ್ಯಕೀಯ ಖರ್ಚು ಸುಮಾರು ಒಂದು ಶತಕೋಟಿ ಡಾಲರ್‍‌ಗಳಷ್ಟಿತ್ತು ಹಾಗೂ ಪ್ರತಿ ವರ್ಷಕ್ಕೆ ಕಳೆದುಕೊಂಡ ಉತ್ಪಾದಕೆಯು ಹದಿಮ‌ೂರರಿಂದ ಹದಿನೇಳು ಶತಕೋಟಿ ಡಾಲರ್‌ಗಳು ಎಂದು ಲೆಕ್ಕ ಮಾಡಲಾಗಿದೆ. ಮೈಗ್ರೇನ್‌ ಕಾರ್ಯಕ್ಷೇತ್ರದಲ್ಲಿ ಉತ್ತಮ ರೀತಿಯಲ್ಲಿ ಮುಂದುವರಿಯಲು ಸಹಾಯವಾಗುವುದಕ್ಕಾಗಿ ಉದ್ಯೋಗದಾತರು ಮೈಗ್ರೇನ್‌ನ ಪರಿಣಾಮಗಳ ಬಗ್ಗೆ ತಿಳಿಯುವುದರಿಂದ ಇನ್ನಷ್ಟು ಪ್ರಯೋಜನವಾಗಬಹುದು. ವಾರಕ್ಕೆ 5 ದಿನ, 9-5 ಗಂಟೆಗಳ ದುಡಿಮೆಯ ಮಾದರಿಯು ಮೈಗ್ರೇನ್‌ ರೋಗಿಗಳಿಗೆ ಸಾಧುವಾದುದಲ್ಲ. ಉತ್ತಮ ಶಿಕ್ಷಣ ಮತ್ತು ತಿಳುವಳಿಕೆಯನ್ನು ಪಡೆಯುವುದರಿಂದ ಉದ್ಯೋಗದಾತರು ಮೈಗ್ರೇನ್‌ ಪೀಡಿತ ಉದ್ಯೋಗಿಗಳೊಂದಿಗೆ ಉಭಯತರಿಗೂ ಅನುಕೂಲವಾಗುವಾಂಥ ಕಾರ್ಯಾತ್ಮಕ ಪರಿಹಾರವನ್ನು ರೂಪಿಸಿಕೊಳ್ಳಬಹುದು.

ಇದನ್ನೂ ಗಮನಿಸಿ

  • ಅಕ್ಷಿಪಟಲದ ಮೈಗ್ರೇನ್‌

ಅಡಿ ಟಿಪ್ಪಣಿಗಳು

ಆಕರಗಳು

ಹೊರಗಿನ ಕೊಂಡಿಗಳು

ಸಾಮಾನ್ಯ ಮಾಹಿತಿ

ಸಂಸ್ಥೆಗಳು

Tags:

ಅರೆತಲೆ ನೋವು ಮೈಗ್ರೇನ್‌ ವಿಂಗಡಣೆಅರೆತಲೆ ನೋವು ಮೈಗ್ರೇನ್‌ ರೋಗ ಸೂಚನೆ ಹಾಗೂ ಲಕ್ಷಣಗಳುಅರೆತಲೆ ನೋವು ಮೈಗ್ರೇನ್‌ ಪ್ರಚೋದಕಗಳುಅರೆತಲೆ ನೋವು ಮೈಗ್ರೇನ್‌ ದೈಹಿಕ ಕ್ರಿಯೆ ಮತ್ತು ಶರೀರ ವಿಜ್ಞಾನಅರೆತಲೆ ನೋವು ಮೈಗ್ರೇನ್‌ ರೋಗ ನಿರ್ಣಯಅರೆತಲೆ ನೋವು ಮೈಗ್ರೇನ್‌ ತಡೆಗಟ್ಟುವಿಕೆಅರೆತಲೆ ನೋವು ಮೈಗ್ರೇನ್‌ ನಿರ್ವಹಣೆಅರೆತಲೆ ನೋವು ಮೈಗ್ರೇನ್‌ ಪೂರ್ವಸೂಚನೆಅರೆತಲೆ ನೋವು ಮೈಗ್ರೇನ್‌ ಸೋಂಕು ವಿಜ್ಞಾನಅರೆತಲೆ ನೋವು ಮೈಗ್ರೇನ್‌ ಇತಿಹಾಸಅರೆತಲೆ ನೋವು ಮೈಗ್ರೇನ್‌ ಸಮಾಜ ಮತ್ತು ಸಂಸ್ಕೃತಿಅರೆತಲೆ ನೋವು ಮೈಗ್ರೇನ್‌ ಇದನ್ನೂ ಗಮನಿಸಿಅರೆತಲೆ ನೋವು ಮೈಗ್ರೇನ್‌ ಅಡಿ ಟಿಪ್ಪಣಿಗಳುಅರೆತಲೆ ನೋವು ಮೈಗ್ರೇನ್‌ ಆಕರಗಳುಅರೆತಲೆ ನೋವು ಮೈಗ್ರೇನ್‌ ಹೊರಗಿನ ಕೊಂಡಿಗಳುಅರೆತಲೆ ನೋವು ಮೈಗ್ರೇನ್‌

🔥 Trending searches on Wiki ಕನ್ನಡ:

ಕನ್ನಡ ಗುಣಿತಾಕ್ಷರಗಳುಅಂತಿಮ ಸಂಸ್ಕಾರಅಲಂಕಾರಪರಿಣಾಮಬಾವಲಿಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಪ್ಲಾಸ್ಟಿಕ್ಆವಕಾಡೊದಾಸವಾಳನಾಮಪದಪಶ್ಚಿಮ ಘಟ್ಟಗಳುಕೆ. ಅಣ್ಣಾಮಲೈಸಿಂಧೂತಟದ ನಾಗರೀಕತೆಕವನಆಯ್ದಕ್ಕಿ ಲಕ್ಕಮ್ಮಕನ್ನಡದ ಉಪಭಾಷೆಗಳುಯುಗಾದಿಭಾರತೀಯ ರಿಸರ್ವ್ ಬ್ಯಾಂಕ್ನಾಗರೀಕತೆಶಿಕ್ಷಕವಿದುರಾಶ್ವತ್ಥಇನ್ಸ್ಟಾಗ್ರಾಮ್ವಸುಧೇಂದ್ರವಾಣಿಜ್ಯ ಪತ್ರಕರ್ನಾಟಕದ ಶಾಸನಗಳುಸಾರ್ವಭೌಮತ್ವಕರ್ನಾಟಕದ ಆರ್ಥಿಕ ಪ್ರಗತಿಭಾರತೀಯ ಭೂಸೇನೆಭಾರತದ ಸರ್ವೋಚ್ಛ ನ್ಯಾಯಾಲಯವಿವಾಹಭದ್ರಾವತಿಬಾರ್ಲಿಶಿಕ್ಷಣಆದೇಶ ಸಂಧಿಚಾಣಕ್ಯಪಾಂಡವರುಜಿ.ಎಸ್.ಶಿವರುದ್ರಪ್ಪಕರ್ನಾಟಕದ ಕಲೆ ಮತ್ತು ಸಂಸ್ಕೃತಿರೇಡಿಯೋವಿಜಯನಗರಭಾರತದಲ್ಲಿ ಮೀಸಲಾತಿಭಾಷೆಕ್ಯಾರಿಕೇಚರುಗಳು, ಕಾರ್ಟೂನುಗಳುಕನ್ನಡ ಸಾಹಿತ್ಯಅನುಪಮಾ ನಿರಂಜನವೇದಪ್ರಾಥಮಿಕ ಶಿಕ್ಷಣಭಾರತದ ಮುಖ್ಯ ನ್ಯಾಯಾಧೀಶರುತಾಟಕಿಕುಂಬಳಕಾಯಿರೇಣುಕಹೊಯ್ಸಳೇಶ್ವರ ದೇವಸ್ಥಾನಕನ್ನಡದಲ್ಲಿ ಮಹಿಳಾ ಸಾಹಿತ್ಯಜೀವವೈವಿಧ್ಯವಿಶ್ವ ಪರಿಸರ ದಿನಸೂರ್ಯವಂಶ (ಚಲನಚಿತ್ರ)ಚಿಕ್ಕಬಳ್ಳಾಪುರ೧೮೬೨ಹಿಂದೂ ಧರ್ಮರಾಷ್ಟ್ರಕವಿವ್ಯಕ್ತಿತ್ವಚದುರಂಗ (ಆಟ)ಹೊಯ್ಸಳ ವಾಸ್ತುಶಿಲ್ಪಮಹೇಂದ್ರ ಸಿಂಗ್ ಧೋನಿಭಾರತದಲ್ಲಿನ ಜಾತಿ ಪದ್ದತಿಮಲಬದ್ಧತೆಶೂದ್ರ ತಪಸ್ವಿಎ.ಪಿ.ಜೆ.ಅಬ್ದುಲ್ ಕಲಾಂಸಂಗೊಳ್ಳಿ ರಾಯಣ್ಣದಾಸ ಸಾಹಿತ್ಯಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಕದಂಬ ಮನೆತನದಶಾವತಾರಮಂಗಳೂರುವಚನಕಾರರ ಅಂಕಿತ ನಾಮಗಳುಸಂಪತ್ತಿಗೆ ಸವಾಲ್ಭಾಷಾಂತರಕೈಗಾರಿಕೆಗಳು🡆 More