ಹಲ್ಮಿಡಿ

ಹಲ್ಮಿಡಿ ಕರ್ನಾಟಕದ ಹಾಸನ ಜಿಲ್ಲೆಯ ಒಂದು ಹಳ್ಳಿ.

ಕ್ರಿ. ಶ. ೪೫೦ರ ಕಾಲದ, ಕನ್ನಡದ ಮೊಟ್ಟಮೊದಲ ಶಾಸನ ಇದೇ ಹಳ್ಳಿಯಲ್ಲಿ ದೊರಕಿತು. ಹಿಟ್ಟುಗಲ್ಲಿನಿಂದ ಕೆತ್ತಿಸಿದ ಈ ಶಾಸನವನ್ನು ೧೯೩೦ರ ಸುಮಾರಿಗೆ ಪತ್ತೆಹಚ್ಚಲಾಯಿತು. ಕದಂಬರ ಅರಸ ಕಾಕುಸ್ಥವರ್ಮ ಬರೆಸಿದ ಶಾಸನ ಇದಾಗಿದೆ.

ಹಲ್ಮಿಡಿ
Halmidi
town
ಹಲ್ಮಿಡಿ ಶಾಸನ ಪ್ರತಿಕೃತಿ ಪೀಠದ ಮೇಲೆ ಅಳವಡಿಸಲಾಗಿದೆ
ಹಲ್ಮಿಡಿ ಶಾಸನ ಪ್ರತಿಕೃತಿ ಪೀಠದ ಮೇಲೆ ಅಳವಡಿಸಲಾಗಿದೆ
ದೇಶಹಲ್ಮಿಡಿ ಭಾರತ
ರಾಜ್ಯಕರ್ನಾಟಕ
ಭಾಷೆಗಳು
 • ಅಧಿಕೃತಕನ್ನಡ
ಸಮಯ ವಲಯಯುಟಿಸಿ+5:30 (IST)
ISO 3166 codeIN-KA
ಜಾಲತಾಣkarnataka.gov.in

ಹಾಸನ-ಬೇಲೂರು-ಚಿಕ್ಕಮಗಳೂರು ಹೆದ್ದಾರಿಯಲ್ಲಿ ಬಂದರೆ, ಬೇಲೂರಿನಿಂದ ೧೩ ಕಿ.ಮೀ ಅಂತರದಲ್ಲಿ ’ಹಲ್ಮಿಡಿ’ ಗೆ ಹೋಗುವ ದಾರಿಯ ದೊಡ್ಡ ಫಲಕ ಕಾಣುತ್ತದೆ. ಅಲ್ಲಿಂದ ಒಳಗೆ ೬ ಕಿ.ಮೀ. ತೆರಳಿದರೆ, ಹಲ್ಮಿಡಿಯನ್ನು ತಲುಪಬಹುದು. ಶಾಸನದ ಸ್ಥಳವನ್ನು ಸ್ಥಳೀಯರು ತೋರಬಲ್ಲರು. ಇಲ್ಲಿ ದೊರೆತಿರುವ ಈ ಶಿಲಾ ಶಾಸನ, ಇದೇ ಪ್ರದೇಶದ ವಿವರಗಳನ್ನೊಳಗೊಂಡಿರುವುದರಿಂದ ಈ ಊರಿಗೂ ಪ್ರಾಮುಖ್ಯತೆ ಬಂದಿದೆ.

ಹಲ್ಮಿಡಿ ಶಾಸನ

ಕನ್ನಡ ಭಾಷೆಯಲ್ಲಿರುವ ಅತ್ಯಂತ ಹಳೆಯ ಶಾಸನ ಶಿಲ್ಪ ಇಲ್ಲಿ ದೊರೆತಿದೆ. ಕ್ರಿ.ಶ. ೪೫೦ರ ಸುಮಾರಿನಲ್ಲಿ ಈ ಶಾಸನ ರಚಿತವಾಗಿದೆ ಎಂದು ಅಭಿಪ್ರಾಯ ಪಡಲಾಗಿದೆ. ಕನ್ನಡ ಭಾಷೆಯ ಪ್ರಾಚೀನತೆಗೆ ಹಲ್ಮಿಡಿಶಾಸನ ಸಾಕ್ಷಿಯಾಗಿದೆ. ಇದು ಕದಂಬರ ಕಾಕುತ್ಸ್ಥವರ್ಮನ ಕಾಲದ್ದು. ಈ ಶಾಸನ ಆಗಿನ ಕಾಲದ ಕನ್ನಡಭಾಷೆಯ ಪ್ರೌಢ ಸ್ವರೂಪದ ಬಗ್ಗೆ ಸಾಕಷ್ಟು ಮಾಹಿತಿ ನೀಡುತ್ತದೆ.ಈ ಶಾಸನದ ಪ್ರಾರ್ಥನಾ ಪದ್ಯ ಸಂಸ್ಕೃತದಲ್ಲಿದೆ. ಉಳಿದ ಭಾಗದಲ್ಲಿ ಹೇರಳವಾದ ಸಂಸ್ಕೃತ ಪದಗಳೂ, ಸಮಾಸಗಳೂ ತುಂಬಿವೆ. ಇದು ಆ ಕಾಲದ ಗ್ರಾಂಥಿಕ ಕನ್ನಡದ ಮೇಲೆ ಇದ್ದ ಸಂಸ್ಕೃತದ ಪ್ರಭಾವವನ್ನು ತೋರಿಸುತ್ತದೆ. ಈ ಶಾಸನದಲ್ಲಿರುವ, ಕನ್ನಡ ವ್ಯಾಕರಣದ ದೃಷ್ಟಿಯಿಂದ ಗಮನಾರ್ಹವಾದ ಎರಿದು,ಕೊಟ್ಟಾರ್,ಅದಾನ್ ಮೊದಲಾದ ಪದಗಳು, ಇದರ ಭಾಷೆ "ಪೂರ್ವದ ಹಳೆಗನ್ನಡ" ಎಂಬುದನ್ನು ಸೂಚಿಸುತ್ತವೆ.

ಉಲ್ಲೇಖಗಳು

Tags:

ಕನ್ನಡಕರ್ನಾಟಕಜಿಲ್ಲೆಹಾಸನ

🔥 Trending searches on Wiki ಕನ್ನಡ:

ಮಂತ್ರಾಲಯಹಿಂದೂ ಧರ್ಮಅಷ್ಟ ಮಠಗಳುನಿರಂಜನಡಿ.ಕೆ ಶಿವಕುಮಾರ್ನೀನಾದೆ ನಾ (ಕನ್ನಡ ಧಾರಾವಾಹಿ)ಕ್ಯಾನ್ಸರ್ಸವದತ್ತಿಅಶೋಕನ ಶಾಸನಗಳುಶ್ರೀ ರಾಮ ನವಮಿಋಷಿಪ್ರಬಂಧಕಬಡ್ಡಿಯೇಸು ಕ್ರಿಸ್ತಪಂಚಾಂಗಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಲೋಕಸಭೆನಾಡ ಗೀತೆಹಾಸನ ಜಿಲ್ಲೆಕನ್ನಡದಲ್ಲಿ ಸಾಂಗತ್ಯಕಾವ್ಯತತ್ಸಮ-ತದ್ಭವಮಂಜುಳಅರ್ಥ ವ್ಯವಸ್ಥೆಅಮೃತಬಳ್ಳಿಸಿದ್ದಲಿಂಗಯ್ಯ (ಕವಿ)ಕನ್ನಡ ಗುಣಿತಾಕ್ಷರಗಳುಛತ್ರಪತಿ ಶಿವಾಜಿಕಾಫಿರ್ಹಲ್ಮಿಡಿಶಾಂತಲಾ ದೇವಿಮಂಗಳೂರುನಾಗರೀಕತೆರಾಶಿರಾಜಕೀಯ ವಿಜ್ಞಾನಆರ್ಯಭಟ (ಗಣಿತಜ್ಞ)ಭಾರತೀಯ ಶಾಸ್ತ್ರೀಯ ನೃತ್ಯಮೂಲಭೂತ ಕರ್ತವ್ಯಗಳುಕನ್ನಡದಲ್ಲಿ ಪ್ರವಾಸ ಸಾಹಿತ್ಯಅರವಿಂದ ಘೋಷ್ನುಗ್ಗೆಕಾಯಿಸಾಮಾಜಿಕ ಸಮಸ್ಯೆಗಳುವರ್ಣಾಶ್ರಮ ಪದ್ಧತಿಗ್ರಂಥ ಸಂಪಾದನೆಚಿತ್ರದುರ್ಗ ಕೋಟೆಅರಣ್ಯನಾಶಹರ್ಡೇಕರ ಮಂಜಪ್ಪಬ್ಯಾಂಕ್ಕನ್ನಡ ಕಾವ್ಯಚ.ಸರ್ವಮಂಗಳಕ್ರೈಸ್ತ ಧರ್ಮಕೊಪ್ಪಳಕಾನೂನುಬೌದ್ಧ ಧರ್ಮಸಮುಚ್ಚಯ ಪದಗಳುಕನ್ನಡ ರಾಜ್ಯೋತ್ಸವಸಂಸದೀಯ ವ್ಯವಸ್ಥೆಪೌರತ್ವ (ತಿದ್ದುಪಡಿ) ಮಸೂದೆ, ೨೦೧೯ವಿಧಾನ ಪರಿಷತ್ತುಗೋತ್ರ ಮತ್ತು ಪ್ರವರಮುಮ್ಮಡಿ ಕೃಷ್ಣರಾಜ ಒಡೆಯರುಪಂಚತಂತ್ರತೆಲುಗುಉಪನಯನಬುಡಕಟ್ಟುಆಯ್ದಕ್ಕಿ ಲಕ್ಕಮ್ಮವೆಂಕಟೇಶ್ವರ ದೇವಸ್ಥಾನಕೇಸರಿಶೈಕ್ಷಣಿಕ ಮನೋವಿಜ್ಞಾನಗರ್ಭಪಾತಮಂಜಮ್ಮ ಜೋಗತಿಮಧ್ವಾಚಾರ್ಯಗ್ರಾಮ ಪಂಚಾಯತಿಸೂರ್ಯವ್ಯೂಹದ ಗ್ರಹಗಳುಐಹೊಳೆವಿಷ್ಣುಹರಿಶ್ಚಂದ್ರಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡು🡆 More