ಬಿದಿರು: ಸಸ್ಯಗಳ ಉಪಕುಟುಂಬ

See the full Taxonomy of the Bambuseae.

ಬಿದಿರು
ಬಿದಿರು: ಸಸ್ಯಗಳ ಉಪಕುಟುಂಬ
ಬಿದಿರು (ಜಪಾನ್)
Scientific classification
ಸಾಮ್ರಾಜ್ಯ:
plantae
Division:
ಹೂ ಬಿಡುವ ಸಸ್ಯ
ವರ್ಗ:
ಲಿಲಿಯೋಪ್ಸಿಡ
ಗಣ:
ಪೊವಾಲೆಸ್(Poales)
ಕುಟುಂಬ:
ಪೊವಾಸಿ(Poaceae)
ಉಪಕುಟುಂಬ:
ಬಾಂಬೂಸೊಯಿಡೆಸಿ (Bambusoideae)
Supertribe:
ಬಾಂಬೂಸೋಡೆ
ಪಂಗಡ:
Bambuseae

Kunth ex Dumort.
Subtribes
  • Arthrostylidiinae
  • Arundinariinae
  • Bambusinae
  • Chusqueinae
  • Guaduinae
  • Melocanninae
  • Nastinae
  • Racemobambodinae
  • Shibataeinae
Diversity
[[Taxonomy of the Bambuseae|Around 92 genera and 1,000 species]]

'ಬಿದಿರು'

ಬಿದಿರು ಕಾಡು ಬೆಳೆಯಾದರೂ, ಈಗೀಗ ಶೃಂಗಾರಕ್ಕೆಂದು ಅದನ್ನು ಉದ್ಯಾನವನಗಳಲ್ಲೂ ಮನೆಯಂಗಳದಲ್ಲೂ ಬೆಳೆಯುತ್ತಿದ್ದಾರೆ. ಇದು ಹುಲ್ಲಿನ ಜಾತಿಗೆ ಸೇರಿದೆ. Poaceae Sub, Bambusoideae Tribe, Bambuseae, ಸಸ್ಯಸಮುದಾಯಕ್ಕೆ ಸೇರಿದೆ. ಸಂಸ್ಕೃತ ಭಾಷೆಯಲ್ಲಿ, ವಂಶ, ವೇಣು, ಯುವಫಲ, ಶತಪರ್ವ, ಎಂದು ಕರೆಸಿಕೊಳ್ಳುವ ಬಿದಿರನ್ನು ಹಿಂದೂಸ್ತಾನಿಯಲ್ಲಿ 'ಬಾಸ್,' ಎನ್ನುತ್ತಾರೆ ಇದರಲ್ಲಿ ಬಾಸುರಿ ತಯಾರಾಗುತ್ತದೆ (ಕೊಳಲು). ಇಂಗ್ಲೀಷ್ ಭಾಷಿತದಲ್ಲಿ ' ಠೊರ್ನ್ಯ್ ಭಮ್ಬೂ' ಎಂದೂ, ಲ್ಯಾಟಿನ್ ಭಾಷೆಯಲ್ಲಿ ಭಮ್ಬುಸ ಅರುನ್ದಿನೆಸಿಅ ಎಂದು ಜನರಿಗೆ ಪರಿಚತವಾಗಿದೆ. ಬಿದಿರಿನ ಔಷಧೀಯ ಗುಣಗಳನ್ನು ಅರಿತುಕೊಂಡು ಮಾನವ ಅದನ್ನು ಪ್ರತಿಮನೆಮನೆಯ ಆಪ್ತಬಂಧುವಾಗಿ ಉಪಯೋಗಿಸುವುದನ್ನು ಕಲಿತಿದ್ದಾನೆ ಇದನ್ನು ಶಿಶುನಾಳ ಶರೀಫರ ಶಿಶುನಾಳರ ಗೀತೆಗಳು ಎಂಬ ತಮ್ಮ ಕೃತಿಯಲ್ಲಿ ಹಾಡಿ ಹೊಗಳಿದ್ದಾರೆ

ಬಿದಿರಿನ ಪ್ರಭೇದಗಳು

ಜಗತ್ತಿನಲ್ಲಿ ೫೫೦ ಪ್ರಭೇದಗಳ ಬಿದಿರು ಸಸ್ಯಗಳಿವೆಯೆಂದು ಪಟ್ಟಿಮಾಡಲಾಗಿದೆ. ಭಾರತದಲ್ಲೇ ೧೩೬ ಜಾತಿಯ ಬಿದಿರುಗಳು ಇವೆ. ಆದರೆ ನಮಗೆ ಹೆಚ್ಚಾಗಿ ಕಾಣಿಸುವುದು, ಕೇವಲ ೪೦ ಬಗೆಯ ಬಿದಿರುಗಳಷ್ಟೆ. ಬಿದಿರು ಹೂಬಿಡುವುದು, ೩೨ ವರ್ಷಗಳ ನಂತರ, ಮತ್ತೆ ೬೦ ವರ್ಷ, ೧೨೦ ವರ್ಷಗಳ ಕಾಲ ಬಾಳಿದ ನಂತರ. ಆಮೇಲೆ ಹೂ ಬಿಟ್ಟು 'ಭತ್ತ' ಕಟ್ಟಿಕೊಂಡ ಬಳಿಕ, ಒಣಗುವ ಜಾತಿಗಳೂ ಇವೆ. ಬಿದುರಿನ ಮೇಲೆ ಸಾಮಾನ್ಯವಾಗಿ ನಾವು ಮುಳ್ಳುಗಳನ್ನು ಕಾಣುತ್ತೇವೆ. ಆದರೆ ಮುಳ್ಳಿಲ್ಲದ ಪ್ರಭೇದಗಳೂ ಇವೆ. ಹತ್ತಿರ ಹತ್ತಿರ ಗೆಣ್ಣುಗಳಿರುವ ಬಿದಿರು ಮೆಳೆಗಳಂತೆ, ದೂರ-ದೂರ ಗೆಣ್ಣುಗಳಿರುವ ಬಿದುರಿನ ಮರಗಳೂ ಇವೆ. ಬಿದುರಿನ ಮರಗಳು ಯಾವಾಗಲೂ ಗುಂಪುಗುಂಪಾಗಿ ಬೆಳೆಯುತ್ತವೆ.

ಬಿದಿರಿನ ಬೆಳೆಯಬಗ್ಗೆ ಸ್ವಲ್ಪ ಮಾಹಿತಿ

ಇವು ದಿನಕ್ಕೆ ೩-೪ ಅಂಗುಲಗಳಷ್ಟು ಶೀಘ್ರವಾಗಿ ಬೆಳೆಯುತ್ತದೆ. ಎಳೆ ಬಿದಿರಿನ ಬುಡದಭಾಗವನ್ನು 'ಕಳಲೆ,' ಕತ್ತರಿಸಿ, ಪಲ್ಯ, ಸಾಂಬಾರು ,ಗೊಜ್ಜು, ಉಪ್ಪಿನಕಾಯಿ-ಹೀಗೆ ವಿವಿಧ ವ್ಯಂಜನಗಳನ್ನು ತಯಾರಿಸಿಕೊಳ್ಳುವವರಿದ್ದಾರೆ. ಆದರೆ ಕಳಲೆಯನ್ನು ಬಳಸುವ ಮುನ್ನ ಅದನ್ನು ಕನಿಷ್ಠ ೩ ದಿನಗಳ ಕಾಲ ನೀರಿನಲ್ಲಿ ನೆನೆಸಿಡಬೇಕು. ನೆನೆಸದೆ ಹಾಗೇ ಬಿಟ್ಟರೆ ವಿಷಕಾರಿಯಾಗಿ ಕೆಲಸಮಾಡುತ್ತದೆ. ಕಳಲೆಯನ್ನು ಸಂಸ್ಕರಿಸಿದ ಬಳಿಕ, ಅದರ ಸಿಪ್ಪೆ ತುಂಡು ಇತ್ಯಾದಿಗಳನ್ನು ಜಾನುವಾರುಗಳ ಬಾಯಿಗೆ ಸಿಕ್ಕದಂತೆ ದೂರಕ್ಕೆ ಒಯ್ದು ಒಂದೆಡೆ ಹೂತುಹಾಕುವುದು ಕ್ಷೇಮಕರ. ಬಿದಿರಿನ ಅಕ್ಕಿ, ನಾವು ಸಾಮಾನ್ಯವಾಗಿ ಬಳಸುವ ಅಕ್ಕಿ-ಗೋಧಿಗಳಿಗಿಂತ ಅಧಿಕ ಪೌಷ್ಟಿಕಾಂಶಯುಕ್ತವಾಗಿದೆ. --117.247.182.162 ೦೫:೦೧, ೧೧ ಮಾರ್ಚ್ ೨೦೧೫ (UTC)== ಬಿದಿರಿನ ಉಪಯೋಗಗಳ ಪಟ್ಟಿ ==

  • ಕಾಗದದ ತಯಾರಿಕೆಯಲ್ಲಿ ಹಾಗೂ ರಯಾನ್ ಬಟ್ಟೆಯತಯಾರಿಕೆಯಲ್ಲಿ.
  • ಮನೆಗಳ ನಿರ್ಮಾಣದಲ್ಲಿ-
  • ತೆಪ್ಪ, ದೋಣಿ, ಹಾಯಿ ಪಟಗಳಿಗಾಗಿ
  • ದೀಪದ ಕಂಬ, ಏಣಿ, ತೊಟ್ಟಿಲು, ಕೊಳಲುವಾದನದ ತಯಾರಿಕೆಯಲ್ಲಿ.
  • ಕೃಷಿಯಲ್ಲಿ ಬಳಸುವ ವಿವಿಧ ಉಪಕರಣಗಳಲ್ಲಿ.
  • ಪೀಠೋಪಕರಣಗಳ ತಯಾರಿಕೆಯಲ್ಲಿ- ಕುರ್ಚಿ, ಮೇಜು, ಚಾಪೆ, ಬುಟ್ಟಿ, ಶಾಮಿಯಾನ, ಮೊರ, ಮಂಕರಿ, ಬೀಸಣಿಗೆ, ಕಟ್ಟಡಗಳನ್ನು ದುರಸ್ತಿಮಾಡುವಾಗ ಕಟ್ಟುವಾಗ, ಬಿದಿರಿನ ಅಟ್ಟಳಿಕೆ ಅಗತ್ಯ.
  • ಬಿದಿರಿನ ಚಿಗುರೆಲೆಯನ್ನು ಚೆನ್ನಾಗಿಜಜ್ಜಿ, ಗಾಯ ಹಾಗೂ ಬಾವು ಇಳಿಸಲು ಲೇಪ ಹಾಕುತ್ತಾರೆ. ಎಳೆ-ಬಿದುರಿನ ಕಷಾಯವು ಕೆಮ್ಮುನಿವಾರಕ.

ರಜೋರೋಧಕವಾಗಿಯೂ, ಕೃಷ್ಣಾರ್ತವ ನಿವಾರಕವಾಗಿಯೂ ಕೆಲಸಮಾಡುತ್ತದೆ.

  • ಕಳಲೆಯು ರಕ್ತಶೋಧಕದಂತೆ ಕೆಲಸಮಾಡುತ್ತದೆ. ಬಾಣಂತಿಯರಿಗೆ ಲಾಭದಾಯಕ.
  • ಬಿದುರಿನ ಮರದಿಂದ ಅಂಟಿನಂತೆ ಜಿನುಗುವ ರಸಕ್ಕೆ 'ವಂಶಲೋಚನ' ಎನ್ನುತ್ತಾರೆ. ಇದರ ಉಪಯೋಗ ಅನನ್ಯ. ಹೃದ್ರೋಗ, ರಕ್ತ-ಪಿತ್ತ, ರಕ್ತಕ್ಷಯ, ಚರ್ಮರೋಗ, ವಾಂತಿ, ಅತಿಸಾರ, ಸಾಮಾನ್ಯದೌರ್ಬಲ್ಯ, ಮೂತ್ರತಡೆ, ಹಾಗೂ ಜ್ವರಕ್ಕೆ ದಿವ್ಯೌಷಧ.
  • ಆಯುರ್ವೇದದಲ್ಲಿ ಬಳಸುವ ಔಷಧಿಗಳಾದ ತಾಲೀಸಾದಿ ಚೂರ್ಣ, ಸಿತೋಪಲಾದಿ ಚೂರ್ಣ, ಗಳಲ್ಲಿ 'ವಂಶಲೋಚನ,' ವನ್ನು ಉಪಯೋಗಿಸುತ್ತಾರೆ. ಸಿತೋಪಲಾದಿಚೂರ್ಣವು ಗಟ್ಟಿ ಕಫವನ್ನು ಹೊಡೆದೋಡಿಸಲು ಪರಿಣಾಮಕಾರಿಯೆಂದು ಧೃಢಪಟ್ಟಿದೆ.
  • ಮೊಳೆ ರೋಗ ಇರುವವರು ಈ ಬಿದುರು ಕಳಲೆಯನ್ನು ಹೆಚ್ಚಾಗಿ ಉಪಯೋಗಿಸಬಾರದು.

ಛಾಯಾಂಕನ

ಬಿದಿರು: ಸಸ್ಯಗಳ ಉಪಕುಟುಂಬ 
Giant bamboo with person to show relative size
ಬಿದಿರು: ಸಸ್ಯಗಳ ಉಪಕುಟುಂಬ 
A grove of giant bamboo in Ecuador
ಬಿದಿರು: ಸಸ್ಯಗಳ ಉಪಕುಟುಂಬ 
Bamboo foliage with black stems (probably Phyllostachys nigra)
ಬಿದಿರು: ಸಸ್ಯಗಳ ಉಪಕುಟುಂಬ 
A "Bamboo Cathedral" in Chaguaramas, Trinidad and Tobago
ಬಿದಿರು: ಸಸ್ಯಗಳ ಉಪಕುಟುಂಬ 
Bamboo scaffolding can reach great heights.
ಬಿದಿರು: ಸಸ್ಯಗಳ ಉಪಕುಟುಂಬ 
Chinese bamboo carving, late Qing Dynasty.
ಬಿದಿರು: ಸಸ್ಯಗಳ ಉಪಕುಟುಂಬ 
Bicycle frame made of bamboo (1896)
ಬಿದಿರು: ಸಸ್ಯಗಳ ಉಪಕುಟುಂಬ 
Making a bamboo mill in the Yangshuo countryside, Guanxi, China (March 2007)

Tags:

🔥 Trending searches on Wiki ಕನ್ನಡ:

ಚಂದ್ರಶೇಖರ ವೆಂಕಟರಾಮನ್ಉತ್ಪಾದನೆಯ ವೆಚ್ಚಗಾದೆ ಮಾತುಸಾಮಾಜಿಕ ಸಮಸ್ಯೆಗಳುರೇಣುಕಉಡುಪಿ ಜಿಲ್ಲೆಕನ್ನಡ ಕಾಗುಣಿತಜೀವವೈವಿಧ್ಯವ್ಯಕ್ತಿತ್ವಆಯುರ್ವೇದಸುಧಾ ಚಂದ್ರನ್ಹಾ.ಮಾ.ನಾಯಕಸ್ಟಾರ್‌ಬಕ್ಸ್‌‌ಚಾಲುಕ್ಯಕರ್ನಾಟಕ ಲೋಕಸಭಾ ಚುನಾವಣೆ, ೨೦೦೯ವ್ಯಂಜನಪಕ್ಷಿಶಾಂತಲಾ ದೇವಿಕುಂಬಳಕಾಯಿಮಹಿಳೆ ಮತ್ತು ಭಾರತಚಾಣಕ್ಯಮತದಾನಪ್ಯಾರಾಸಿಟಮಾಲ್ಶಿಕ್ಷಕರಾಜಸ್ಥಾನ್ ರಾಯಲ್ಸ್ಯೂಟ್ಯೂಬ್‌ಈಚಲುಬೆಳ್ಳುಳ್ಳಿಚುನಾವಣೆಹುರುಳಿಬೆಳಗಾವಿಪಂಚತಂತ್ರಮೈಸೂರು ಸಂಸ್ಥಾನಕನ್ನಡ ರಾಜ್ಯೋತ್ಸವವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪಆದಿಪುರಾಣಅವರ್ಗೀಯ ವ್ಯಂಜನಅಸಹಕಾರ ಚಳುವಳಿಮೂಲಭೂತ ಕರ್ತವ್ಯಗಳುಹರಿಶ್ಚಂದ್ರರನ್ನಸಂಪತ್ತಿಗೆ ಸವಾಲ್ಕೊ. ಚನ್ನಬಸಪ್ಪಪಶ್ಚಿಮ ಘಟ್ಟಗಳುಭ್ರಷ್ಟಾಚಾರಬ್ಲಾಗ್ಟೈಗರ್ ಪ್ರಭಾಕರ್ಸಂಸ್ಕೃತಿಕರ್ನಾಟಕ ಪೊಲೀಸ್ವಾಲ್ಮೀಕಿಪಿ.ಲಂಕೇಶ್ಕನ್ನಡ ಕಾವ್ಯಆಸ್ಪತ್ರೆರಕ್ತಕನ್ನಡ ಅಭಿವೃದ್ಧಿ ಪ್ರಾಧಿಕಾರಶ್ರೀವಿಜಯಸುಮಲತಾವಾಲಿಬಾಲ್ಉಪ್ಪಿನ ಸತ್ಯಾಗ್ರಹಹಿರಿಯಡ್ಕಕನ್ನಡ ಬರಹಗಾರ್ತಿಯರುಬೇವುಗರ್ಭಪಾತಶಬ್ದಕಾಳಿ ನದಿಕ್ಯಾರಿಕೇಚರುಗಳು, ಕಾರ್ಟೂನುಗಳುಒಗಟುಕೇಂದ್ರ ಲೋಕ ಸೇವಾ ಆಯೋಗಅರ್ಥಶಾಸ್ತ್ರಕರಡಿಕ್ಯಾನ್ಸರ್ಸುಧಾರಾಣಿಋತುತ್ರಿಪದಿಅರ್ಥ ವ್ಯವಸ್ಥೆರಾಜಕೀಯ ವಿಜ್ಞಾನಗೀತಾ ನಾಗಭೂಷಣಗುಡುಗು🡆 More