ಸಂಗೊಳ್ಳಿ ರಾಯಣ್ಣ

ಸಂಗೊಳ್ಳಿ ರಾಯಣ್ಣ (15 ಆಗಸ್ಟ್ 1796 - 26 ಜನವರಿ 1831) ಕರ್ನಾಟಕ, ಭಾರತದ ಪ್ರಮುಖ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು - ಬ್ರಿಟಿಷರ ವಿರುದ್ಧ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರಲ್ಲೊಬ್ಬರು.

ಕಿತ್ತೂರು ಚೆನ್ನಮ್ಮಳ ಬಲಗೈ ಬಂಟರಾಗಿದ್ದರು.ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ  ಅವರ ಸಾವಿನವರೆಗೂ ಹೋರಾಡಿದರು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ
ಸಂಗೊಳ್ಳಿ ರಾಯಣ್ಣ
ರಾಯಣ್ಣನ ಪ್ರತಿಮೆ
ಜನನಆಗಸ್ಟ್ ೧೫, ೧೭೯೬
ಜನ್ಮ ಸ್ಥಳಸಂಗೊಳ್ಳಿ, ಕಿತ್ತೂರು ಸಾಮ್ರಾಜ್ಯ
(ಇಂದಿನ ಬೆಳಗಾವಿ, ಕರ್ನಾಟಕ, ಭಾರತ)
ಮರಣಜನವರಿ ೨೬, ೧೮೩೧
ಮರಣ ಸ್ಥಳನಂದಗಡ
(ಇಂದಿನ ಕರ್ನಾಟಕ, ಭಾರತ)
ತಂದೆಭರಮಪ್ಪ ರೋಗಣ್ಣವರ
ತಾಯಿಕೆಂಚವ್ವ ರೋಗಣ್ಣವರ
ಧಾರ್ಮಿಕ ನಂಬಿಕೆಗಳುಹಿಂದೂ ಧರ್ಮ, ಕುರುಬ

ಪರಿಚಯ/ಹಿನ್ನೆಲೆ

  • ಸಂಗೊಳ್ಳಿ ರಾಯಣ್ಣ ಹುಟ್ಟಿದ್ದು ಆಗಸ್ಟ್‌ ೧೫ ನೆಯ ದಿನ ೧೭೯೬.ಆಗಸ್ಟ ಹದಿನೈದು ಭಾರತೀಯರಿಗೆ ಸ್ವಾತಂತ್ರ್ಯ ದೊರಕಿದ ದಿನವಾಗಿದೆ. ಭಾರತೀಯರಿಗೆ ರಾಷ್ಟ್ರೀಯ ಹಬ್ಬ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ (ಸಂಪಗಾವಿ)ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ತಂದೆ ಭರಮಪ್ಪ ತಾಯಿ ಕೆಂಚಮ್ಮಾಜಿಯ ಪುತ್ರನಾಗಿ ಜನಿಸಿದನು,ಈತನ ಸಹೋದರಿ ಮಾಯವ್ವ.
  • ರಾಯಣ್ಣನಿಗೆ, ವೀರ ರಾಯ , ವೀರ ಸಂಗೊಳ್ಳಿ ರಾಯಣ್ಣ, ಶೂರ ರಾಯಣ್ಣ ಧೀರ ರಾಯಣ್ಣ, ಕ್ರಾಂತಿವೀರ ರಾಯಣ್ಣ ಇತ್ಯಾದಿ ದಾಖಲೆಗಳು ಜನಮನದಾಳದಿಂದ, ಜನಪದರಿಂದ ನಾಟಕಕಾರರಿಂದ, ಇತಿಹಾಸಕಾರರಿಂದ ರಾಯಣ್ಣನಿಗೆ ಹೆಸರಿಸಲ್ಪಟ್ಟಿವೆ.
  • ಕಿತ್ತೂರಿನಿಂದ ಕೆಲವೇ ದೂರದಲ್ಲಿರುವ ಸಂಗೊಳ್ಳಿ ಗ್ರಾಮದಲ್ಲಿ ಭರಮಪ್ಪ ಮತ್ತು ಕೆಂಚವ್ವ ದಂಪತಿಯ ಪುತ್ರನಾಗಿ ರಾಯಣ್ಣ ಜನಿಸುತ್ತಾನೆ. ಇವರದು ಪ್ರಸಿದ್ಧ ಕುಟುಂಬ. ಇವರ ತಾತ ರೋಗಪ್ಪ ವೀರಪ್ಪ ದೇಸಾಯಿ ಯುದ್ಧದಲ್ಲಿ ತೋರಿದಂತಹ ಶೌರ್ಯಕ್ಕಾಗಿ ‘‘ಸಾವಿರ ಒಂಟೆ ಸರದಾರ’’ ಎಂಬ ಬಿರುದು ನೀಡಿ ರಕ್ತಮಾನ್ಯ ಭೂಮಿಯನ್ನು ಬಳುವಳಿಯಾಗಿ ನೀಡಿದನು
  • ರೋಗಪ್ಪ ಆಯುರ್ವೇದ ಪಂಡಿತರಾಗಿದ್ದರು. ರಾಯಣ್ಣನ ತಂದೆ ಭರಮಣ್ಣ ಮಹಾನ್ ಸಾಹಸಿ.ಕಿತ್ತೂರ ಸಂಸ್ಥಾನದ ಜನರಿಗೆ ಕಾಟ ಕೊಡುತ್ತಿದ್ದ ಹೆಬ್ಬುಲಿಯನ್ನು ಕೊಂದ ಕೀರ್ತಿ ಇವರದ್ದು. ಈ ಸಾಹಸಕ್ಕಾಗಿ ಕಿತ್ತೂರು ಮಲ್ಲಸರ್ಜ ದೇಸಾಯಿ ನೀಡಿದ ಹೊಲವೇ ರಕ್ತಮಾನ್ಯದ ಹೊಲ. ಸಂಗೊಳ್ಳಿಯಲ್ಲಿನ ಗರಡಿ ಮನೆ ಅತ್ಯಂತ ಪ್ರಸಿದ್ಧಿಯಿರುವ ಗರಡಿ.
  • ರಾಯಣ್ಣನಿಗೆ ಮರಣದಂಡನೆಯಾಗಿ ಗಲ್ಲುಗಂಬಕ್ಕೇರಿದ ದಿನ ಜನವರಿ ೨೬ನೆಯ ದಿನ ೧೮೩೧; ಜನವರಿ ಇಪ್ಪತ್ತಾರು ಭಾರತೀಯರ ನಿಜವಾದ ಸ್ವಾತಂತ್ರ್ಯ ದಿನವಾಗಿದೆ ಹಾಗೂ ಗಣರಾಜ್ಯವ ದಿನವೂ ಹೌದು, ಪ್ರಜಾಸತ್ತಾತ್ಮಕ ದಿನ, ಭಾರತೀಯರಿಗೆ ರಾಷ್ಟ್ರೀಯ ಹಬ್ಬ. ಇವೆರಡು ದಿನಗಳು ಜನನ ಮರಣದವುಗಳು ರಾಯಣ್ಣನಿಗೆ ಮಾತ್ರವಲ್ಲ, ಭಾರತೀಯರಿಗೆ ರಾಷ್ಟ್ರೀಯ ಉತ್ಸವದ ದಿನಗಳಾಗಿವೆ. ಇಡೀ ಜೀವಮಾನ ಆಂಗ್ಲರನ್ನು ನಾಡಿನಿಂದ-ದೇಶದಿಂದ ಹೊರಹಾಕಲು ಮಾಡಿದ ಹೋರಾಟ (ಲಡಾಯಿ)ಗಳು ಸ್ಮರಣೀಯವಾಗಿವೆ.
  • ಜನ್ಮದಾರಭ್ಯದಿಂದ ಮೂವತ್ತೈದು ವರುಷಗಳ ಕಾಲ ಅಂದರೆ ಸ್ವರ್ಗವಾಸಿಯಾಗುವವರೆಗೆ, ತನ್ನ ಸರ್ವಸ್ವವನ್ನು ಕಿತ್ತೂರ ನಾಡಿನ ಸ್ವಾತಂತ್ಯ್ರಕ್ಕಾಗಿ ಅರ್ಪಣೆ ಮಾಡಿದವನು ಸಂಗೊಳ್ಳಿ ರಾಯಣ್ಣ. ಬ್ರಿಟಿಷರು ಸಂಗೊಳ್ಳಿ ರಾಯಣ್ಣನ ವಿಚಾರಣೆ ನಡೆಸಿ ಮರಣದಂಡನೆ ನೀಡಿದರು. ಆತನ ಜೊತೆ ಇತರ ಏಳು ಜನ ಅನುಯಾಯಿಗಳು ವಿಚಾರಣೆ ನಡೆಸಿ ಮರಣ ದಂಡನೆ ನೀಡಿದರು. ಆರು ಜನರಿಗೆ ಜೀವಾವಧಿ ಶಿಕ್ಷೆ ನೀಡಿ, ಸಮುದ್ರದಾಚೆಗೆ ಕಳಿಸಿದರು. ಅವರ ವಿವರ ಕೆಳಗಿನಂತಿದೆ.


ಸಂಗೊಳ್ಳಿ ರಾಯಣ್ಣ 
ಬ್ರಿಟೀಷರು ಸಂಗೊಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಿದ ಸ್ಥಳ

ಜೀವಾವಧಿ ಶಿಕ್ಷೆಗೊಳಪಟ್ಟು ಸಮುದ್ರದಾಚೆಗೆ ಕಳಿಸಲ್ಪಟ್ಟವರು:

೧.ರುದ್ರನಾಯಕ  ೫೦ 
೨. ಎಲ್ಲಾನಾಯಕ  ೪೦
೩. ಅಪ್ಪೂಜಿ  ೪೦
೪. ರಾಣಮೋಜಿಕೊಂಡ  ೩೦
೫. ಕೋನೇರಿ  ೪೦ 
೬. ನೇಮಣ್ಣ  ೪೦

ಮರಣದ ನಂತರ

  • ಸಂಗೊಳ್ಳಿ ಗ್ರಾಮದ ಬಿಚ್ಚುಗತ್ತಿ ಚನ್ನಬಸವಣ್ಣ ಮಾರುವೇಷದಲ್ಲಿ ರಾಯಣ್ಣನ ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಂಡು ಇವನ ಸಮಾಧಿಯ ಮೇಲೆ ಆಲದ ಸಸಿ ನೆಡುವ ಮೂಲಕ ತನ್ನ ಗೆಳೆಯರಿಗೆ ಅಂತಿಮ ನಮನ ಸಲ್ಲಿಸಲಿಸಿದನು. ಅಂದು ನೆಟ್ಟ ಆಲದ ಸಸಿ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ ನಮ್ಮ ರಾಷ್ಟ್ರೀಯ ವೃಕ್ಷವಾಗಿ ದೇಶಾಭಿಮಾನಿಗಳಿಗೆ ಸದಾಕಾಲ ಸ್ಪೂರ್ತಿಯ ಸಂಕೇತವಾಗಿ ಬೃಹದಾಕಾರವಾಗಿ ಬೆಳೆದು ಇಂದು ಪೂಜ್ಯ ಭಾವನೆಗಳಿಗೆ ಇಂಬು ನೀಡುವ ಪುಣ್ಯ ಸ್ಥಳವಾಗಿದೆ.
  • ರಾಯಣ್ಣನ ನಿಸ್ವಾರ್ಥ ಹೋರಾಟ, ದೇಶಪ್ರೇಮ ಯುವಜನತೆಯಲ್ಲಿ ಸ್ಫೂರ್ತಿಯನ್ನು ತುಂಬುತ್ತದೆ. ಇದ್ದರೆ ರಾಯಣ್ಣನಂತಹ ದೇಶಪ್ರೇಮಿಗಳಿರಬೇಕು ಎನ್ನುವುದು ಎಲ್ಲರ ಮಾತಾಗಿದೆ. ರಾಯಣ್ಣನ ದಂಡಿನಲ್ಲಿ ಸ್ಮರಿಸಬೇಕಾದ ಅತ್ಯಂತ ಮಹತ್ವದ ವಿಷಯವೆಂದರೆ ಒಗ್ಗಟ್ಟು ಉಂಟು ಮಾಡಿರುವ ಬಗೆಯನ್ನು ತಿಳಿಯುವುದು. ರಾಯಣ್ಣನ ಹೆಸರನ್ನು ಅಮರವಾಗಿಸಲು ಬೆಂಗಳೂರಿನ ರೈಲು ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಎಂದು ಹೆಸರಿಡಲಾಗಿದೆ.

ಚಲನಚಿತ್ರ

  • ರಾಯಣ್ಣನ ಬದುಕನ್ನು ಆಧರಿಸಿ ೧೯೬೭ರಲ್ಲಿ ಒಂದು ಚಿತ್ರ ನಿರ್ಮಾಣವಾಯ್ತು. ಮತ್ತೆ ೨೦೧೨ರಲ್ಲಿ ಸಂಗೊಳ್ಳಿ ರಾಯಣ್ಣ ಎಂಬ ಹೆಸರಿನಲ್ಲಿಯೇ ಮತ್ತೊಂದು ಅದ್ದೂರಿ ಚಿತ್ರವೂ ನಿರ್ಮಾಣವಾಯ್ತು. ಇದನ್ನು ನಿರ್ಮಿಸಿದವರು ಆನಂದ ಅಪ್ಪುಗೋಳ ಮತ್ತು ಇದನ್ನು ನಿರ್ದೇಶಿಸಿದವರು ನಾಗಣ್ಣ.
  • ಈ ಚಿತ್ರದ ನಾಯಕರಾಗಿ ದರ್ಶನ್ ತೂಗುದೀಪ್ ಅಭಿನಯಿಸಿದ್ದಾರೆ.ತಾಯಿಯ ಪಾತ್ರದಲ್ಲಿ [ಶ್ರೀಮತಿ ಉಮಾಶ್ರೀಯವರು] ಮತ್ತು ಕಿತ್ತೂರು ಚೆನ್ನಮ್ಮನಾಗಿ ಜಯಪ್ರದಾ ಕೂಡಾ ಅಭಿನಯಿಸಿದ್ದಾರೆ..

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

Tags:

ಸಂಗೊಳ್ಳಿ ರಾಯಣ್ಣ ಪರಿಚಯಹಿನ್ನೆಲೆಸಂಗೊಳ್ಳಿ ರಾಯಣ್ಣ ಜೀವಾವಧಿ ಶಿಕ್ಷೆಗೊಳಪಟ್ಟು ಸಮುದ್ರದಾಚೆಗೆ ಕಳಿಸಲ್ಪಟ್ಟವರು:ಸಂಗೊಳ್ಳಿ ರಾಯಣ್ಣ ಮರಣದ ನಂತರಸಂಗೊಳ್ಳಿ ರಾಯಣ್ಣ ಚಲನಚಿತ್ರಸಂಗೊಳ್ಳಿ ರಾಯಣ್ಣ ಉಲ್ಲೇಖಗಳುಸಂಗೊಳ್ಳಿ ರಾಯಣ್ಣ ಬಾಹ್ಯ ಸಂಪರ್ಕಗಳುಸಂಗೊಳ್ಳಿ ರಾಯಣ್ಣಕಿತ್ತೂರು ಚೆನ್ನಮ್ಮಬ್ರಿಟೀಷ್ ಸಾಮ್ರಾಜ್ಯ

🔥 Trending searches on Wiki ಕನ್ನಡ:

ಸಾಗುವಾನಿಸಮುದ್ರಉಗುರುನೀನಾದೆ ನಾ (ಕನ್ನಡ ಧಾರಾವಾಹಿ)ವರ್ಗೀಯ ವ್ಯಂಜನಮಾದಿಗಎಸ್. ಜಾನಕಿವಾಲಿಬಾಲ್ಭಾರತೀಯ ಧರ್ಮಗಳುಭಾರತದ ರಾಜಕೀಯ ಪಕ್ಷಗಳುರೇಣುಕಉಪನಯನಶ್ರೀ ಸಿದ್ದೇಶ್ವರ ಸ್ವಾಮಿಜಿಗಳುರಾಷ್ಟ್ರೀಯ ಉತ್ಪನ್ನವಿಜಯನಗರ ಸಾಮ್ರಾಜ್ಯಮಲೆನಾಡುಮಂಗಳಮುಖಿವಡ್ಡಾರಾಧನೆಗೋವಿಂದ ಪೈಸೂರ್ಯಹುಲಿಕರ್ನಾಟಕದ ಜಿಲ್ಲೆಗಳುಭಾರತೀಯ ಸ್ಟೇಟ್ ಬ್ಯಾಂಕ್ಭಾರತದಲ್ಲಿನ ಜಾತಿ ಪದ್ದತಿದೇವರ ದಾಸಿಮಯ್ಯಕನ್ನಡದಲ್ಲಿ ನವ್ಯಕಾವ್ಯಮೈಸೂರು ದಸರಾಭಾರತದ ಪ್ರಧಾನ ಮಂತ್ರಿದಿಕ್ಕುಮಧ್ಯಕಾಲೀನ ಭಾರತಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಮದುವೆಸರ್ವಜ್ಞಗುಬ್ಬಚ್ಚಿಪಂಚತಂತ್ರಉತ್ಪಾದನೆಯ ವೆಚ್ಚಹಾ.ಮಾ.ನಾಯಕಲೋಹಪ್ಲೇಟೊರಕ್ತಪಿಶಾಚಿಗುರುರಾಜ ಕರಜಗಿಫೇಸ್‌ಬುಕ್‌ಚದುರಂಗದ ನಿಯಮಗಳುನರೇಂದ್ರ ಮೋದಿಶಿವಮೊಗ್ಗಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಚಿತ್ರದುರ್ಗಒಡೆಯರ ಕಾಲದ ಕನ್ನಡ ಸಾಹಿತ್ಯಕೊಡಗಿನ ಗೌರಮ್ಮಹಯಗ್ರೀವಭರತೇಶ ವೈಭವಕನ್ನಡ ಛಂದಸ್ಸುಸಾಂಗತ್ಯಉಪ್ಪಿನ ಸತ್ಯಾಗ್ರಹಭಾರತದ ವಾಯುಗುಣಪೌರತ್ವ (ತಿದ್ದುಪಡಿ) ಮಸೂದೆ, ೨೦೧೯ಖೊಖೊವಸುಧೇಂದ್ರಪಾಪಹನುಮ ಜಯಂತಿಉಡಕನ್ನಡ ಸಾಹಿತ್ಯ ಸಮ್ಮೇಳನಗೊರೂರು ರಾಮಸ್ವಾಮಿ ಅಯ್ಯಂಗಾರ್ಪ್ರಾಥಮಿಕ ಶಿಕ್ಷಣಮೊಘಲ್ ಸಾಮ್ರಾಜ್ಯವಿಧಾನಸೌಧಮಳೆವಿಜಯಪುರವ್ಯಕ್ತಿತ್ವಹಸಿರುಕರ್ನಾಟಕ ಸ್ವಾತಂತ್ರ್ಯ ಚಳವಳಿಕಾರ್ಮಿಕರ ದಿನಾಚರಣೆಆವರ್ತ ಕೋಷ್ಟಕಇನ್ಸ್ಟಾಗ್ರಾಮ್ಆಲೂರು ವೆಂಕಟರಾಯರುಶ್ರವಣಬೆಳಗೊಳಕನ್ನಡ ಕಾವ್ಯ🡆 More