ಗರಗಸ ಮಂಡಲ: ಸರೀಸೃಪದ ಪ್ರಭೇದಗಳು

ಗರಗಸ ಮಂಡಲ (Saw scaled Viper, Carpet Viper) ಎಂಬ ಹಾವು ವಿಷಪೂರಿತ ಮಂಡಲ ಹಾವುಗಳ ಗುಂಪಿಗೆ ಸೇರಿದ ಸರೀಸೃಪ.

ಇವುಗಳು ಸಾಮಾನ್ಯವಾಗಿ ಆಫ್ರಿಕಾ, ಮಧ್ಯ ಏಷ್ಯಾ, ಭಾರತ, ಪಾಕಿಸ್ತಾನ, ಶ್ರೀಲಂಕಾ ದೇಶಗಳಲ್ಲಿ ಕಂಡುಬರುತ್ತವೆ. ಇವುಗಳು ತಮ್ಮ ದೇಹವನ್ನು ಉಜ್ಜಿಕೊಳ್ಳುವುದರ ಮೂಲಕ ಶತ್ರುಗಳಿಗೆ ತಮ್ಮ ಇರುವಿಕೆಯನ್ನು ತೋರಿಸುತ್ತವೆ. ಇದರ ವೈಜ್ಞಾನಿಕ ಹೆಸರು "ಇಚಿಸ್" (Echis). ಈ ಹೆಸರು ಲ್ಯಾಟಿನ್ ಭಾಷೆಯಿಂದ ಬಂದಿದೆ. ಲ್ಯಾಟಿನ್ ಭಾಷೆಯಲ್ಲಿ ಇಚಿಸ್ ಎಂದರೆ ಮಂಡಲ ಹಾವು ಎಂದು ಅರ್ಥ. ಸಾಮಾನ್ಯವಾಗಿ ಇದನ್ನು ಗರಗಸ ಮಂಡಲ ಎಂದು ಕರೆಯುತ್ತಾರೆ. ಇದು ಜಗತ್ತಿನಲ್ಲಿಯೇ ಅತಿ ಹೆಚ್ಚು ಹಾಗೂ ಭಾರತದಲ್ಲಿ ೪ನೇ ಸ್ಥಾನಿಯಾಗಿ ಹಾವು ಹಾವುಕಡಿತಗಳಿಗೆ ಕಾರಣವಾಗಿದೆ.

ಗರಗಸ ಮಂಡಲ: ವಿವರಣೆ, ಭೌಗೋಳಿಕ ವ್ಯಾಪ್ತಿ, ವರ್ತನೆ
ಗರಗಸ ಮಂಡಲ

ವಿವರಣೆ

ಗರಗಸ ಮಂಡಲ: ವಿವರಣೆ, ಭೌಗೋಳಿಕ ವ್ಯಾಪ್ತಿ, ವರ್ತನೆ 
ಗರಗಸ ಮಂಡಲದ ದೇಹದ ಹತ್ತಿರದ ಚಿತ್ರ. ಇಲ್ಲಿ ದೇಹವು ಮುಳ್ಳು ಮುಳ್ಳಾಗಿರುವುದನ್ನು ಕಾಣಬಹುದು.

ಗರಗಸ ಮಂಡಲ ಹಾವುಗಳು ಗಾತ್ರದಲ್ಲಿ ಚಿಕ್ಕ ಹಾವುಗಳು. ಇವುಗಳಲ್ಲಿ ಕೆಲವು ಹಾವಿನ ಗಾತ್ರ ೯೦ ಸೆಂ.ಮೀಗಳ ವರೆಗೆ ಇರುತ್ತವೆ. ಇವುಗಳಲ್ಲಿ ಚಿಕ್ಕದು ಎಂದರೆ ೩೦ ಸೆಂ.ಮೀಗಳಷ್ಟು ಬೆಳೆಯುತ್ತವೆ. ಇವುಗಳ ತಲೆ ಚಿಕ್ಕದಾಗಿದ್ದು ತ್ರಿಕೋನ ಆಕಾರದಲ್ಲಿ ಇರುತ್ತದೆ. ಕುತ್ತಿಗೆ ಭಾಗಕ್ಕೆ ಹೋಲಿಸಿದರೆ ತಲೆ ಸ್ವಲ್ಪ ದೊಡ್ಡದು. ಇವುಗಳ ಕಣ್ಣು ದೊಡ್ಡದಾಗಿದೆ. ದೇಹವು ತೆಳುವಾಗಿ ಮತ್ತು ದುಂಡಾಕಾರದಲ್ಲಿದೆ. ಬಾಲವು ಚಿಕ್ಕದಾಗಿದೆ. ಇದರ ದೇಹದ ಚರ್ಮವು ಒರಟಾಗಿದ್ದು ಮುಳ್ಳು ಮುಳ್ಳಾಗಿದೆ. ಹೀಗಾಗಿ ಇವು ಶತ್ರುಗಳನ್ನು ಕಂಡಾಗ ತಮ್ಮ ದೇಹವನ್ನು ದುಂಡಾಗಿಸಿ ಉಜ್ಜಿಕೊಂಡು "ಸ್ಸ್‌ಸ್ಸ್‌" ಎಂಬ ಶಬ್ದವನ್ನು ಮಾಡಿ ಶತ್ರುಗಳನ್ನು ಭಯಪಡಿಸುತ್ತದೆ ಹಾಗೂ ತನ್ನ ಇರುವಿಕೆಯನ್ನೂ ಹೇಳಿತ್ತದೆ.

ಭೌಗೋಳಿಕ ವ್ಯಾಪ್ತಿ

ಈ ಜಾತಿಯ ಹಾವುಗಳು ಸಾಮಾನ್ಯವಾಗಿ ಪಾಕಿಸ್ತಾನ, ಭಾರತಮಹಾರಾಷ್ಟ್ರ, ರಾಜಸ್ಥಾನ, ಪಂಜಾಬ್, ಉತ್ತರ ಪ್ರದೇಶದ ಕಲ್ಲುಗಳನ್ನು ಒಳಗೊಂಡ ಒಣ ಪ್ರದೇಶದಲ್ಲಿ ಕಂಡುಬರುತ್ತವೆ. ಕರ್ನಾಟಕದಲ್ಲಿಯೂ ಈ ಹಾವುಗಳು ಕಂಡುಬರುತ್ತವೆ. ಭಾರತವಲ್ಲದೇ ಇವುಗಳು ಶ್ರೀಲಂಕಾ, ಮಧ್ಯ ಏಷ್ಯಾ, ಆಫ್ರಿಕಾದ ದಕ್ಷಿಣ ಭಾಗದಲ್ಲಿಯೂ ಕಂಡುಬರುತ್ತವೆ.

ವರ್ತನೆ

ಚಿತ್ರ:IMG 20170614 180157.JPG
C ಆಕಾರದಲ್ಲಿ ಸುತ್ತಿಕೊಂಡಿರುವುದು ಮತ್ತು ದೊಡ್ಡದಾದ ಕಣ್ಣುಗಳನ್ನು ಗಮನಿಸಬಹುದು

ಈ ಗುಂಪಿಗೆ ಸೇರಿದ ಎಲ್ಲಾ ಹಾವುಗಳು ಅಪಾಯ ಎದುರಾದಾಗ ತನ್ನ ದೇಹವನ್ನೇ C ಆಕಾರದಲ್ಲಿ ಅನೇಕ ಸುತ್ತುಗಳನ್ನು ಸುತ್ತಿಕೊಂಡು ತಲೆಯನ್ನು ಆ ಸುತ್ತುಗಳ ಮಧ್ಯದಲ್ಲಿ ಇರಿಸುತ್ತದೆ. ಈ ರೀತಿಯಲ್ಲಿ ಅದು ಇರುವಾಗ ಯಾವಗ ಬೇಕಾದರೂ ಕಚ್ಚಬಹುದು. ಇವುಗಳು ಈ ರೀತಿಯಲ್ಲಿ ಸುರುಳಿ ಸುತ್ತಿಕೊಂಡು ಅದರ ದೇಹದ ಚರ್ಮವನ್ನು ಸುತ್ತಿಕೊಳ್ಳುತ್ತಾ ಉಜ್ಜಿಕೊಳ್ಳುತ್ತಾ ಸ್ವರ ಮಾಡಿ ಹೆದರಿಸಲು ಪ್ರಯತ್ನಿಸುತ್ತದೆ. ಅದು ಏನೂ ಫಲಕಾರಿಯಾಗದಿದ್ದರೆ ಕಚ್ಚುತ್ತವೆ. ಕೆಲವೊಂದು ಬುಸುಗುಟ್ಟುವ ಉದಾಹರಣೆಗಳೂ ಇವೆ.

ಆಹಾರ

ಇವು ಸಾಮಾನ್ಯವಾಗಿ ಕಪ್ಪೆ, ಟೋಡ್, ಜೇಡ, ಹಲ್ಲಿ, ಚೇಳುಗಳನ್ನು ಹಿಡಿದು ತಿನ್ನುತ್ತವೆ.

ಸಂತಾನೋತ್ಪತ್ತಿ

ಆಫ್ರಿಕಾದಲ್ಲಿ ಕಂಡುಬರುವ ಹಾವುಗಳು ಮೊಟ್ಟೆಗಳನ್ನಿಟ್ಟು ಮರಿ ಮಾಡುತ್ತವೆ. ಆಫ್ರಿಕಾದ ಹೊರಗೆ, ಭಾರತದಲ್ಲಿ ಕಂಡುಬರುವವು ನೇರವಾಗಿ ಮರಿಗಳನ್ನು ಇಡುತ್ತವೆ.

ವಿಷ

ಇವು ಹಿಮೋಟಾಕ್ಸಿನ್ ಎಂಬ ವಿಷವನ್ನು ಹೊಂದಿರುತ್ತದೆ. ಈ ಹಾವುಗಳ ವಿಷವು ಕೆಂಪು ರಕ್ತಕಣಗಳಿಗೆ ನೇರವಾದ ಹಾನಿಯನ್ನು ಉಂಟುವಾಡುತ್ತವೆ. ರಕ್ತವನ್ನು ಹೆಪ್ಪುಗಟ್ಟಿಸುವುದರ ಮೂಲಕ ಶತ್ರುಗಳನ್ನು ಕೊಲ್ಲುತ್ತವೆ. ಮನುಷ್ಯರಲ್ಲಿ ಹಾವು ಕಚ್ಚಿದ ೪೦ ನಿಮಿಷಗಳಲ್ಲಿ ಪರಿಣಾಮಗಳು ಕಾಣಿಸುತ್ತವೆ. ತಕ್ಷಣದ ಚಿಕಿತ್ಸೆ ಸಿಗದಿದ್ದರೆ ಸಾವು ಸಂಭವಿಸುತ್ತದೆ.

Tags:

ಗರಗಸ ಮಂಡಲ ವಿವರಣೆಗರಗಸ ಮಂಡಲ ಭೌಗೋಳಿಕ ವ್ಯಾಪ್ತಿಗರಗಸ ಮಂಡಲ ವರ್ತನೆಗರಗಸ ಮಂಡಲ ಆಹಾರಗರಗಸ ಮಂಡಲ ಸಂತಾನೋತ್ಪತ್ತಿಗರಗಸ ಮಂಡಲ ವಿಷಗರಗಸ ಮಂಡಲw:Echisಆಫ್ರಿಕಾಪಾಕಿಸ್ತಾನಭಾರತಶ್ರೀಲಂಕಾ

🔥 Trending searches on Wiki ಕನ್ನಡ:

ರೇಣುಕಭಾರತದ ಉಪ ರಾಷ್ಟ್ರಪತಿಚಂದ್ರಗುಪ್ತ ಮೌರ್ಯಶಾಸಕಾಂಗಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಅಲಾವುದ್ದೀನ್ ಖಿಲ್ಜಿನೈಸರ್ಗಿಕ ಸಂಪನ್ಮೂಲಸಿಂಧೂತಟದ ನಾಗರೀಕತೆಕರ್ನಲ್‌ ಕಾಲಿನ್‌ ಮೆಕೆಂಜಿಚದುರಂಗಸರ್ಪ ಸುತ್ತುಮದ್ಯದ ಗೀಳುಜಿ.ಪಿ.ರಾಜರತ್ನಂಯಕೃತ್ತುಭಾರತದ ರಾಷ್ಟ್ರಗೀತೆಶಿವಮೊಗ್ಗಆದಿವಾಸಿಗಳುಕಲ್ಯಾಣ ಕರ್ನಾಟಕಅನ್ವಿತಾ ಸಾಗರ್ (ನಟಿ)ಕೃತಕ ಬುದ್ಧಿಮತ್ತೆಕೋಲಾಟಗೋಲ ಗುಮ್ಮಟಜಿ.ಎಸ್. ಘುರ್ಯೆಅತ್ತಿಮಬ್ಬೆಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಶಿವಕುಮಾರ ಸ್ವಾಮಿಬೀದರ್ಶನಿರಾಜ್ಯಗಳ ಪುನರ್ ವಿಂಗಡಣಾ ಆಯೋಗಸ್ಫಿಂಕ್ಸ್‌ (ಸಿಂಹನಾರಿ)ಕರ್ನಾಟಕದ ಹಬ್ಬಗಳುಕರ್ನಾಟಕದ ಪ್ರಸಿದ್ಧ ವ್ಯಕ್ತಿಗಳುನರೇಂದ್ರ ಮೋದಿಲಿನಕ್ಸ್ಷಟ್ಪದಿಕೂಡಲ ಸಂಗಮಮಹೇಂದ್ರ ಸಿಂಗ್ ಧೋನಿಮಡಿವಾಳ ಮಾಚಿದೇವತತ್ಸಮ-ತದ್ಭವಕದಂಬ ಮನೆತನಕನ್ನಡದಲ್ಲಿ ವಚನ ಸಾಹಿತ್ಯಸಂಗೊಳ್ಳಿ ರಾಯಣ್ಣಸಿಹಿ ಕಹಿ ಚಂದ್ರುಸಂಭೋಗಭಾರತದಲ್ಲಿನ ಚುನಾವಣೆಗಳುಸಂವಹನಬಸವೇಶ್ವರಯೋಗಿ ಆದಿತ್ಯನಾಥ್‌ಕರ್ನಾಟಕ ವಿಧಾನಸಭೆ ಚುನಾವಣೆ, ೨೦೧೮ಗ್ರಹಚಾಮರಾಜನಗರಪೋಲಿಸ್ನಾಡ ಗೀತೆಭಾವನಾ(ನಟಿ-ಭಾವನಾ ರಾಮಣ್ಣ)ಕೃಷ್ಣಾ ನದಿಜೋಡು ನುಡಿಗಟ್ಟುಚುನಾವಣೆಚಿತ್ರದುರ್ಗಕರ್ನಾಟಕ ವಿಧಾನ ಸಭೆಸಾಮಾಜಿಕ ತಾಣಹೇಮರೆಡ್ಡಿ ಮಲ್ಲಮ್ಮಯೋಗವಾಹಜನಪದ ಆಭರಣಗಳುಸಂವತ್ಸರಗಳುಬಿ.ಎಸ್. ಯಡಿಯೂರಪ್ಪವಚನ ಸಾಹಿತ್ಯಭಾರತದ ಚಲನಚಿತ್ರೋದ್ಯಮವಿಚ್ಛೇದನವಿ. ಕೃ. ಗೋಕಾಕರಾಜಾ ರವಿ ವರ್ಮಗರ್ಭಪಾತಭಾರತದ ರಾಷ್ಟ್ರಪತಿಗಳ ಪಟ್ಟಿಸ್ತ್ರೀರಾಮ್ ಮೋಹನ್ ರಾಯ್ರಾಧಿಕಾ ಕುಮಾರಸ್ವಾಮಿಸುಧಾ ಮೂರ್ತಿವಿಕ್ರಮಾರ್ಜುನ ವಿಜಯ🡆 More