ಶಿವಮೊಗ್ಗ: ಕರ್ನಾಟಕ ರಾಜ್ಯದ ಒಂದು ಜಿಲ್ಲೆ

ಶಿವಮೊಗ್ಗ ಭಾರತ ದೇಶದ ಕರ್ನಾಟಕ ರಾಜ್ಯದ ಒಂದು ನಗರ (ಸಂಪರ್ಕ : ೧೩.೫೬ ಉ /೭೫.೩೮ ಪೂ).

ಇದು ಕರ್ನಾಟಕದ ರಾಜಧಾನಿಯಾದ ಬೆಂಗಳೂರು ನಗರದಿಂದ ೨೬೬ ಕಿ.ಮೀ. ದೂರದಲ್ಲಿದೆ. ಶಿವಮೊಗ್ಗ ಮಹಾನಗರವು ಈ ಜಿಲ್ಲೆಯ ರಾಜಧಾನಿಯಾಗಿದೆ. ಶಿವಮೊಗ್ಗ ಜಿಲ್ಲೆ ಕರ್ನಾಟಕದ ನಿಸರ್ಗಭರಿತ ಮಲೆನಾಡಿನ ಒಂದು ಭಾಗವಾಗಿದೆ.

ಶಿವಮೊಗ್ಗ
ಶಿವಮೊಗ್ಗ: ಚರಿತ್ರೆ, ಪ್ರವಾಸೀ ತಾಣಗಳು, ವಿಮಾನ ನಿಲ್ದಾಣ
ಶಿವಮೊಗ್ಗ: ಚರಿತ್ರೆ, ಪ್ರವಾಸೀ ತಾಣಗಳು, ವಿಮಾನ ನಿಲ್ದಾಣ
ಶಿವಮೊಗ್ಗ
ರಾಜ್ಯ
 - ಜಿಲ್ಲೆ
[[ಕರ್ನಾಟಕ]]
 - ಶಿವಮೊಗ್ಗ
ನಿರ್ದೇಶಾಂಕಗಳು 13.9167° N 75.5667° E
ವಿಸ್ತಾರ 50 km²
ಸಮಯ ವಲಯ IST (UTC+5:30)
ಜನಸಂಖ್ಯೆ (2001)
 - ಸಾಂದ್ರತೆ

 - /ಚದರ ಕಿ.ಮಿ.
ನಗರಸಭೆ ಉಪಾಧ್ಯಕ್ಷರು ಮಂಗಳಾ ಅಣ್ಣಪ್ಪ
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 577 201-೪
 - +91-(0)8182
 - ಶಿವಮೊಗ್ಗ KA-14,
ಸಾಗರ KA-15 
ಅಂತರ್ಜಾಲ ತಾಣ: [http://www.shimogacity.gov.in www.shimogacity.gov.in]
ಶಿವಮೊಗ್ಗ: ಚರಿತ್ರೆ, ಪ್ರವಾಸೀ ತಾಣಗಳು, ವಿಮಾನ ನಿಲ್ದಾಣ
ಮಹಿಷ ಮರ್ಧಿನಿ - ಶಿವಪ್ಪನಾಯಕನ ಅರಮನೆಯ ಹಿಂಭಾಗದಲ್ಲಿರುವ ಒಂದು ಶಿಲ್ಪ

ಸಹ್ಯಾದ್ರಿ ಪರ್ವತಶ್ರೇಣಿ ಮತ್ತು ಅಲ್ಲಿ ಉಗಮಗೊಳ್ಳುವ ನದಿ-ಉಪನದಿಗಳು ಶಿವಮೊಗ್ಗಕ್ಕೆ ಯಥೇಚ್ಛ ನೈಸರ್ಗಿಕ ಸೌಂದರ್ಯವನ್ನು ತಂದುಕೊಟ್ಟಿವೆ. ಶಿವಮೊಗ್ಗದಿಂದ ೧೧೩ ಕಿಮೀ ದೂರದಲ್ಲಿರುವ ಜಗತ್ಪ್ರಸಿದ್ಧ ಜೋಗದ ಜಲಪಾತ ಪ್ರಕೃತಿಯ ಒಂದು ಅಪೂರ್ವ ದೃಶ್ಯ. ಇಲ್ಲಿ ಶರಾವತಿ ನದಿ ೨೩೫ ಮೀ ಎತ್ತರದಿಂದ ಸುಮನೋಹರವಾಗಿ ಧುಮುಕುತ್ತದೆ. ರಾಜ, ರಾಣಿ, ರೋರರ್ ಮತ್ತು ರಾಕೆಟ್ ಎಂಬ ನಾಲ್ಕು ವಿಭಿನ್ನ ಪ್ರವಾಹಗಳಾಗಿ ಧುಮುಕುವ ಶರಾವತಿ ಏಷ್ಯದ ಅತಿ ಎತ್ತರದ ಜಲಪಾತವನ್ನು ನಿರ್ಮಿಸಿದೆ. ಮಳೆಗಾಲದ ಸಮಯದಲ್ಲಿ ಕಾಮನ ಬಿಲ್ಲುಗಳನ್ನು ನಿರ್ಮಿಸಿಕೊಂಡು ಅತ್ಯದ್ಭುತ ದೃಶ್ಯವನ್ನು ಜಲಪಾತ ಪ್ರದರ್ಶಿಸುತ್ತದೆ. ತುಂಗಭದ್ರಾ, ಶರಾವತಿ, ಕುಮುದ್ವತಿ ಮತ್ತು ಇತರ ನದಿಗಳಿಂದ ಜಲಸರಬರಾಜಿನ ಸೌಕರ್ಯವುಳ್ಳ ಶಿವಮೊಗ್ಗ ಜಿಲ್ಲೆ ಕರ್ನಾಟಕದ ಅನ್ನದ ಬಟ್ಟಲು ಎನ್ನಿಸಿಕೊಂಡಿದೆ[ಸೂಕ್ತ ಉಲ್ಲೇಖನ ಬೇಕು].

ಶಿವಮೊಗ್ಗ: ಚರಿತ್ರೆ, ಪ್ರವಾಸೀ ತಾಣಗಳು, ವಿಮಾನ ನಿಲ್ದಾಣ
ಕೂಡ್ಲಿಯ ಸಂಗಮೇಶ್ವರ ದೇವಸ್ಥಾನ - ಪ್ರವಾಸೀ ಆಕರ್ಷಣೆ

ಚರಿತ್ರೆ

ಶಿವಮೊಗ್ಗ ಎಂಬ ಹೆಸರು 'ಶಿವ-ಮುಖ' ಎಂಬ ಪದಪುಂಜದಿಂದ ಬಂದದ್ದು. ಇನ್ನೊಂದು ವ್ಯುತ್ಪತ್ತಿಯಂತೆ ಇದು 'ಸಿಹಿ-ಮೊಗೆ' (ಸಿಹಿಯಾದ ಮೊಗ್ಗು) ಎಂದಿದ್ದು ಅದು 'ಶಿವಮೊಗ್ಗ'ವಾಗಿ ಮಾರ್ಪಾಟುಹೊಂದಿದೆ.ಈ ಪ್ರದೇಶವು ಕ್ರಿ.ಪೂ. ೩ನೇ ಶತಮಾನದಲ್ಲಿ ಸಾಮ್ರಾಟ್ ಅಶೋಕನ ಮೌರ್ಯ ಸಾಮ್ರಾಜ್ಯದ ದಕ್ಷಿಣದ ತುದಿಯಾಗಿದ್ದಿತು. ಮುಂದಿನ ಶತಮಾನಗಳಲ್ಲಿ ಅನೇಕ ರಾಜಮನೆತನಗಳ ಆಳ್ವಿಕೆಯಲ್ಲಿ ಈ ಪ್ರದೇಶ ಇದ್ದಿತು: ೪ನೇ ಶತಮಾನದಲ್ಲಿ ಕದಂಬರು, ೬ನೇ ಶತಮಾನದಲ್ಲಿ ಚಾಲುಕ್ಯರು ಮತ್ತು ಅವರ ಸಾಮಂತರಾದ ಗಂಗರು, ೮ನೇ ಶತಮಾನದಲ್ಲಿ ರಾಷ್ಟ್ರಕೂಟರು, ೧೧ನೇಯದರಲ್ಲಿ ಹೊಯ್ಸಳರು ಮತ್ತು ೧೫ನೇ ಶತಮಾನದಲ್ಲಿ ವಿಜಯನಗರದ ಅರಸರು ಈ ಪ್ರದೇಶವನ್ನು ಆಳಿದೆ ರಾಜಮನೆತನಗಳಲ್ಲಿ ಪ್ರಮುಖರು. ಶಿವಮೊಗ್ಗ ನಗರಕ್ಕೆ ಸ್ವತಂತ್ರ ವ್ಯಕ್ತಿತ್ವ ಬಂದದ್ದು ೧೬ನೇ ಶತಮಾನದ ಕೆಳದಿ ನಾಯಕರ ಆಳ್ವಿಕೆಯಲ್ಲಿ. ೧೭ನೇ ಶತಮಾನದ ನಂತರ ಭಾರತ ಸ್ವಾತಂತ್ರ್ಯದ ವರೆಗೂ ಶಿವಮೊಗ್ಗ ಮೈಸೂರು ಸಂಸ್ಥಾನದ ಭಾಗವಾಗಿತ್ತು.

ಪ್ರವಾಸೀ ತಾಣಗಳು

ಶಿವಮೊಗ್ಗ: ಚರಿತ್ರೆ, ಪ್ರವಾಸೀ ತಾಣಗಳು, ವಿಮಾನ ನಿಲ್ದಾಣ 
Jog-falls

ವಿಮಾನ ನಿಲ್ದಾಣ

ಶಿವಮೊಗ್ಗ ವಿಮಾನ ನಿಲ್ದಾಣದ ಕಾಮಗಾರಿ ೨೦೧೧ರಲ್ಲಿ ಪ್ರಾರಂಭವಾಯಿತು. ಗುತ್ತಿಗೆದಾರರು ಮತ್ತು ಪಾಲುದಾರರ ಜೊತೆ ಅಭಿಪ್ರಾಯಭೇದ ತಲೆದೋರಿ ಕೆಲಸವು ೨೦೧೫ರಲ್ಲಿ ನಿಂತುಹೋಯಿತು. ೨೦೨೦ರಲ್ಲಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪನವರು ಕಾಮಗಾರಿ ಆರಂಭಕ್ಕೆ ಅನುಮೋದನೆ ನೀಡಿದರು. ೨೮ ಫೆಬ್ರವರಿ ೨೦೨೩ರಂದು ಪ್ರಧಾನಿ ನರೇಂದ್ರ ಮೋದಿಯವರಿಂದ ಉದ್ಘಾಟನೆಗೊಂಡಿತು.

ಕುವೆಂಪು ವಿಶ್ವವಿದ್ಯಾನಿಲಯ

ಕುವೆಂಪು ವಿಶ್ವವಿದ್ಯಾನಿಲಯವು ಶಿವಮೊಗ್ಗದಿ೦ದ ೨೭ ಕಿ.ಮಿ, ಶಿವಮೊಗ್ಗದಿಂದ ಭದ್ರಾ ಅಣೆಕಟ್ಟೈಗೆ (ಬಿ.ಆರ್.ಪಿ) ಗೆ ಹೋಗುವ ಮಾರ್ಗದಲ್ಲಿ ಶಂಕರ ಘಟ್ಟ ದಲ್ಲಿದೆ. ಶಿವಮೊಗ್ಗ ಜಿಲ್ಲೆಯ ಪ್ರಸಿಧ್ಹ ಸಾಹಿತಿ ಕೆ. ವಿ. ಪುಟ್ಟಪ್ಪ (ಕುವೆಂಪು) ರವರ ಸ್ಮರಣಾರ್ಥ್ಹ ವಾಗಿ ಈ ವಿಶ್ವ ವಿದ್ಯಾನಿಲಯಕ್ಕೆ ಅವರ ಹೆಸರನ್ನು ಇಡಲಾಗಿದೆ.

ಗಿರಿ-ಶಿಖರಗಳು

ನದಿಗಳು

ಚರಿತ್ರೆ ಮತ್ತು ಧರ್ಮ

  • ಕೆಳದಿ-ಇಕ್ಕೇರಿ, ಕೆಳದಿ ನಾಯಕರ ರಾಜಧಾನಿಗಳು. ಸಾಗರ ತಾಲ್ಲೂಕು
  • ನಗರ, ಬಿದನೂರು ಸಂಸ್ಥಾನದ ರಾಜಧಾನಿ
  • ಬಳ್ಳಿಗಾವಿಯ ಕೇದಾರೇಶ್ವರ ದೇವಾಲಯ
  • ಶಿವಪ್ಪ ನಾಯಕನ ಅರಮನೆ
  • ಸೇಕ್ರೆಡ್ ಹಾರ್ಟ್ ಚರ್ಚ್, ಭಾರತದಲ್ಲಿ ಎರಡನೆ ಅತಿ ದೊಡ್ಡ ಚರ್ಚ್
  • ಕವಲೇದುರ್ಗದ ಕೋಟೆ, ಕೆಳದಿ ಸಂಸ್ಥಾನದ ರಾಜಧಾನಿ. ಈಗ ಕೋಟೆಯ ಪಳಯುಳಿಕೆ ಮಾತ್ರ ಇದೆ.
  • ತೀರ್ಥಹಳ್ಳಿ ತಾಲ್ಲೂಕಿನ ಬೆಟ್ಟಬಸರವಾನಿ ಮತ್ತು ಮರಹಳ್ಳಿ ಗ್ರಾಮಗಳಲ್ಲಿ ಜೈನ ಸಂಪ್ರದಾಯದ ಪಳಿಯುಳಿಕೆ ಇವೆ.
  • ಹೊಸನಗರ ತಾಲ್ಲೂಕಿನ ಹುಂಚ ಗ್ರಾಮದಲ್ಲಿ ಜೈನ ಸಂಪ್ರದಾಯದ ಮಠ ಮತ್ತು ಪದ್ಮಾವತಿ ದೇವಿಯ ದೇವಸ್ಥಾನವಿದೆ
  • ಹಣಗೇರೆಕಟ್ಟೆ ಹಿಂದು ಮುಸ್ಲಿಂ ಧರ್ಮಗಳ ಪವಿತ್ರ ಸ್ಥಳವಾಗಿದೆ.
  • ನಾಡಕಲಸಿ ಸಾಗರ ತಾಲ್ಲೂಕು; ಪ್ರಾಚೀನ ದೇವಾಲಯ
  • ಉರುಗನಹಳ್ಳಿ- ಸೊರಬ ತಾಲ್ಲೂಕು - ಶಿವಮೊಗ್ಗ ಜಿಲ್ಲಾ, ಹಿಂದೂ ಮುಸ್ಲಿಂ ಭಾವೈಕ್ಯತೆಯ ಕೇಂದ್ರ
  • ತವನಂದಿ- ಸೊರಬ ತಾಲ್ಲೂಕು - ಕದಂಬರ ಕಾಲದ ಕೋಟೆ
  • ಮೃಗವಧೆ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ,ತೀರ್ಥಹಳ್ಳಿ ಬಳಿ. ಶ್ರೀರಾಮನು ಚಿನ್ನದ ಜಿಂಕೆಯ ರೂಪದಲ್ಲಿ ಬಂದ ಮಾರೀಚನನ್ನು ವಧೆ ಮಾಡಿದ ಸ್ಥಳ.

ವನ್ಯಜೀವಿ

  • ತಾವರೆಕೊಪ್ಪ, ಹುಲಿ ಮತ್ತು ಸಿಂಹಧಾಮ
  • ಸಕ್ಕರೆಬೈಲು, ಆನೆ ತರಬೇತಿ ಶಿಬಿರ
  • ಮಂಡಗದ್ದೆ ಪಕ್ಷಿಧಾಮ, ಕುಕ್ಕನ ಗುಡ್ಡಾ, ಗುಡವಿ
  • ಸೊರಬ ತಾಲ್ಲೂಕಿನ ಚೀಲನೂರು ಕಾಡು ನವಿಲುಗಳ ವಾಸಸ್ಥಾನ

ಐತಿಹಾಸಿಕ ವ್ಯಕ್ತಿಗಳು

ಪ್ರಮುಖ ವ್ಯಕ್ತಿಗಳು

ತಾಲ್ಲೂಕುಗಳು

ತಾಲ್ಲೂಕು ಎತ್ತರ (ಮಿ.) ಹೋಬಳಿಗಳ ಸಂಖ್ಯೆ ನಿವಾಸಿತ ಹಳ್ಳಿಗಳ ಸಂಖ್ಯೆ ಅನಿವಾಸಿತ ಹಳ್ಳಿಗಳ ಸಂಖ್ಯೆ ವಿಸ್ತಿರಣ (ಚ. ಕಿ.ಮಿ)
 ತೀರ್ಥಹಳ್ಳಿ  ೬೧೦  ೫  ೨೪೫  ೨  ೧೨೪೭
 ಭಧ್ರಾವತಿ  ೫೯೪  ೬  ೧೪೬  ೭  ೬೯೦
 ಶಿಕಾರಿಪುರ  ೬೦೩  ೫  ೧೫೩  ೨೨  ೯೦೯
 ಶಿವಮೊಗ್ಗ  ೫೭೧  ೮  ೧೯೮  ೨೪  ೧೧೦೮
 ಸಾಗರ  ೫೭೯  ೬  ೨೩೩  ೫  ೧೯೪೦
 ಸೊರಬ  ೫೭೯  ೬  ೨೬೮  ೩೮  ೧೧೪೮
 ಹೊಸನಗರ  ೫೭೨  ೪  ೧೯೭  ೫  ೧೪೨೩

ಜನಸಂಖ್ಯೆ

೨೦೧೧ರ ಜನಗಣತಿಯ ಪ್ರಕಾರ ಶಿವಮೊಗ್ಗ ಜಿಲ್ಲಾ ಜನಸಂಖ್ಯಾ ವಿವರ

ತಾಲ್ಲೂಕು ಸಾಕ್ಷರತೆ ಪ್ರಮಾಣ (%) ಜನಸಂಖ್ಯೆ ೨೦೧೧ರ

ಜನಗಣತಿ ಪ್ರಕಾರ

ಪುರುಷರು ಮಹಿಳೆಯರು/

(ಪ್ರತಿ ೧೦೦೦ ಪುರುಷರಿಗೆ ಮಹಿಳೆಯರ ಪ್ರಮಾಣ) ರ2001 ರ ಗಣತಿ

ಜನಸಂಖ್ಯೆ ೨೦೦೧ರ

ಜನಗಣತಿ ಪ್ರಕಾರ

ಶಿವಮೊಗ್ಗ ಜಿಲ್ಲೆ 74.89 17,55,512 8,79,817 8,75,695/995 ಲಭ್ಯವಿಲ್ಲ
ಶಿವಮೊಗ್ಗ ತಾಲ್ಲೂಕು 77 5,07,083 2,55,317 251761/969 4,45,192
ಭದ್ರಾವತಿ ತಾಲ್ಲೂಕು 77 3,39,930 1,70,291. 1,69,636/997 3,38,989
ಭದ್ರಾವತಿ ನಗರ -- 1,50,776 ಲಭ್ಯವಿಲ್ಲ ಲಭ್ಯವಿಲ್ಲ 1,60,662
ತೀರ್ಥಹಳ್ಳಿ 83.05 1,41,453 69,593 71,869/1038 1,43,207
ಶಿವಮೊಗ್ಗ ಗ್ರಾಮೀಣ -- 1,26,916 ಲಭ್ಯವಿಲ್ಲ ಲಭ್ಯವಿಲ್ಲ 1,28,399
ಸಾಗರ 81.00 2,06,112 1,02,276 1,03,834/1012 2,00,995
ಹೊಸನಗರ 81.5 1,18,148 58,503 59,645/1037 1,15,000
ಶಿಕಾರಿಪುರ 76.5 2,41,943 1,22,5271, 19,413/980 2,13,590
ಸೊರಬ 77 2,00,843 1,01,297 91,546/999 1,85,572

ಉಲ್ಲೇಖಗಳು

ಇದನ್ನೂ ನೋಡಿ

ಹೊರಗಿನ ಸಂಪರ್ಕಗಳು

Tags:

ಶಿವಮೊಗ್ಗ ಚರಿತ್ರೆಶಿವಮೊಗ್ಗ ಪ್ರವಾಸೀ ತಾಣಗಳುಶಿವಮೊಗ್ಗ ವಿಮಾನ ನಿಲ್ದಾಣಶಿವಮೊಗ್ಗ ಕುವೆಂಪು ವಿಶ್ವವಿದ್ಯಾನಿಲಯಶಿವಮೊಗ್ಗ ಗಿರಿ-ಶಿಖರಗಳುಶಿವಮೊಗ್ಗ ನದಿಗಳುಶಿವಮೊಗ್ಗ ಚರಿತ್ರೆ ಮತ್ತು ಧರ್ಮಶಿವಮೊಗ್ಗ ವನ್ಯಜೀವಿಶಿವಮೊಗ್ಗ ಐತಿಹಾಸಿಕ ವ್ಯಕ್ತಿಗಳುಶಿವಮೊಗ್ಗ ಪ್ರಮುಖ ವ್ಯಕ್ತಿಗಳುಶಿವಮೊಗ್ಗ ತಾಲ್ಲೂಕುಗಳುಶಿವಮೊಗ್ಗ ಜನಸಂಖ್ಯೆಶಿವಮೊಗ್ಗ ಉಲ್ಲೇಖಗಳುಶಿವಮೊಗ್ಗ ಇದನ್ನೂ ನೋಡಿಶಿವಮೊಗ್ಗ ಹೊರಗಿನ ಸಂಪರ್ಕಗಳುಶಿವಮೊಗ್ಗಕರ್ನಾಟಕಬೆಂಗಳೂರುಭಾರತ

🔥 Trending searches on Wiki ಕನ್ನಡ:

ಹೃದಯಭೌಗೋಳಿಕ ಲಕ್ಷಣಗಳುಕಾಂತಾರ (ಚಲನಚಿತ್ರ)ದಿಕ್ಕುಉತ್ತರ ಕನ್ನಡಪಂಪಅಮ್ಮೊನೈಟ್ಭಾರತ ರತ್ನಶಿಕ್ಷಣಸಸ್ಯಶಕ್ತಿಭಾಷಾ ವಿಜ್ಞಾನವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಯಕ್ಷಗಾನಉದ್ಯಮಿಎ.ಪಿ.ಜೆ.ಅಬ್ದುಲ್ ಕಲಾಂಅಲಿಪ್ತ ಚಳುವಳಿನಿರುದ್ಯೋಗಶಿವರಾಮ ಕಾರಂತಸೌರಮಂಡಲಕರ್ನಾಟಕ ಹೈ ಕೋರ್ಟ್ಕೊಲೆಸ್ಟರಾಲ್‌ಬಸವೇಶ್ವರಭಾರತತಾಳೀಕೋಟೆಯ ಯುದ್ಧಹಸಿವುನೀತಿ ಆಯೋಗಜನ್ನಸಂಭೋಗಬೌದ್ಧ ಧರ್ಮಮಹಾವೀರಮಹಾತ್ಮ ಗಾಂಧಿಆಸ್ಪತ್ರೆಆಸ್ಟ್ರೇಲಿಯಸಂಚಿ ಹೊನ್ನಮ್ಮಸಾರ್ವಜನಿಕ ಹಣಕಾಸುಪಿತ್ತಕೋಶಶಬ್ದಗಗನಯಾತ್ರಿಜಯಪ್ರದಾರೈತ ಚಳುವಳಿಕೃಷ್ಣ೨೦೧೬ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಭಾರತದಾಸ ಸಾಹಿತ್ಯರಾಷ್ಟ್ರಕೂಟಪ್ರಬಂಧಪೂರ್ಣಚಂದ್ರ ತೇಜಸ್ವಿಒಡೆಯರ್ಕಂಸಾಳೆಭಾರತದ ವಿಜ್ಞಾನಿಗಳುಸಾಹಿತ್ಯಜೈನ ಧರ್ಮ ಇತಿಹಾಸಅಂತರಜಾಲಭಾರತೀಯ ಅಂಚೆ ಸೇವೆನರೇಂದ್ರ ಮೋದಿವಸಾಹತುಅಕ್ಷಾಂಶ ಮತ್ತು ರೇಖಾಂಶವಿಶ್ವ ಮಹಿಳೆಯರ ದಿನವಿಜಯಪುರ ಜಿಲ್ಲೆಆಗಮ ಸಂಧಿಐಹೊಳೆಹಸ್ತ ಮೈಥುನಭಾರತದಲ್ಲಿ ಪಂಚಾಯತ್ ರಾಜ್ಕನ್ನಡ ಛಂದಸ್ಸುಜೀನ್-ಜಾಕ್ವೆಸ್ ರೂಸೋಜಶ್ತ್ವ ಸಂಧಿ2017ರ ಕನ್ನಡ ಚಿತ್ರಗಳ ಪಟ್ಟಿಜಯಪ್ರಕಾಶ್ ಹೆಗ್ಡೆತ್ರಿಪದಿವಿಶ್ವ ಮಾನವ ಸಂದೇಶಅಗ್ನಿ(ಹಿಂದೂ ದೇವತೆ)ಆಸಕ್ತಿಗಳುಸಮಾಸಎಸ್.ನಿಜಲಿಂಗಪ್ಪಮೈಸೂರು ದಸರಾಮಲಾವಿಮಾನ್ಸೂನ್🡆 More