ಹನುಮಾನ್ ಚಾಲೀಸ

ಹನುಮಾನ್ ಚಾಲೀಸ (ಹಿಂದಿ:हनुमान चालीसा ಹನುಮಂತನ ಮೇಲೆ ನಲವತ್ತು ಶ್ಲೋಕಗಳು ) ಒಂದು ಭಕ್ತಿ ಗೀತೆಯಾಗಿದ್ದು, ಇದು ಭಗವಾನ್ ಹನುಮಂತನನ್ನು ಆಧರಿಸಿ ಮಾದರಿ ಉಪಾಸಕನನ್ನಾಗಿ ಮಾಡಿದೆ.

ಇದು ಒಂದು ಪದ್ಯ. ತುಳಸೀದಾಸ ಅವರಿಂದ ಹಿಂದಿ ಭಾಷೆಯಲ್ಲಿ ರಚಿತವಾದದ್ದು. ರಾಮಚರಿತ ಮಾನಸ ಇದು ಒಂದು ಪದ್ಯ. ತುಳಸೀದಾಸ ರಿಂದ ಅವಧಿ ಭಾಷೆಯಲ್ಲಿ ರಚಿತವಾದದ್ದು. ರಾಮಚರಿತ ಮಾನಸವನ್ನು ಬಿಟ್ಟು, ಇದು ಅವರ ಉತ್ತಮ ಹಿಂದೂ ಮೂಲಗ್ರಂಥವಾಗಿದೆ ಎಂದು ತಿಳಿದಿದೆ. ಪ್ರಭು ಹನುಮಾನ್ ಬ್ರಹ್ಮಚಾರಿ ದೇವರು, ಮತ್ತು ಶ್ರೀ ಹನುಮಾನ್ ನ ಆಶೀರ್ವಾದವನ್ನು ಪಡೆಯಲು ಕೋಟಿ ಜನರು ಚಾಲೀಸಾವನ್ನು ಪಠಿಸುತ್ತಾರೆ.

ಹನುಮಾನ್ ಚಾಲೀಸ
Depiction of Bharata (Lord Rama's Youngest Brother) meeting Lord Rama watched by Hanuman, Sita and Lakshman.... From Left – Hanuman, Bharata, Lord Rama, Sita and Lakshman
ಹನುಮಾನ್ ಚಾಲೀಸ
Hanuman fetches the herb-bearing Sanjivini mountain

ಪ್ರಾಮುಖ್ಯತೆ

ಹಿಂದೂ ಗಳಿಗೆ ಈ ಆಧುನಿಕ ಕಾಲದಲ್ಲೂ ಹನುಮಾನ್ ಚಾಲೀಸಾ ಅತ್ಯಂತ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಅವರಲ್ಲಿ ಕೆಲವರು ಪ್ರತಿದಿನ ಈ ಪ್ರಾರ್ಥನೆಯನ್ನು ಹೇಳುತ್ತಾರೆ. ( ಅಥವಾ ಪ್ರತೀ ವಾರ, ಸಾಮಾನ್ಯವಾಗಿ ಮಂಗಳವಾರ, ಶನಿವಾರ ಮತ್ತು ಭಾನುವಾರಗಳಂದು.) ಪದ್ಯ ೩೮ ರಲ್ಲಿ ಹೇಳುವಂತೆ, ಯಾವ ಮನುಷ್ಯ ಹನುಮಾನ್ ಚಾಲೀಸಾವನ್ನು ೧೦೦ ದಿನಗಳಿಗೆ ೧೦೦ ಬಾರಿ ಹೇಳುವನೋ, ಅವನು ಹುಟ್ಟು ಮತ್ತು ಸಾವುಗಳ ಚಕ್ರ ದಿಂದ ಮುಕ್ತನಾಗಿ, ದಿವ್ಯವಾದ ಮಹಾಸುಖವನ್ನು ಅನುಭವಿಸುತ್ತಾನೆ ಎಂಬ ನಂಬಿಕೆಯಿದೆ. ಹನುಮಾನ್ ಚಾಲೀಸಾದ ೪೦ ಪದ್ಯಗಳಲ್ಲಿ ಪ್ರತೀ ಪದ್ಯವೂ ಒಂದೊಂದು ಆಶೀರ್ವಾದವನ್ನು ನೀಡುತ್ತದೆ, ಭಕ್ತನ ಭಾವ ಅಥವಾ ಶ್ರಧ್ಧೆ ಗಳಿಗನುಗುಣವಾಗಿ, ಪ್ರತೀ ಪದ್ಯದಲ್ಲೂ ಪ್ರತಿಫಲವನ್ನು ಪಡೆಯುತ್ತಾರೆ.

ಶ್ರೀ ಹನುಮಾನ್ ಚಾಲಿಸ

ದೋಹಾ (दोहा)

ಶ್ರೀ ಗುರು ಹನುಮಾನ್ - ಶ್ರೀ ತುಳಸೀದಾಸ ವಿರಚಿತ - ಶ್ರೀ ಹನುಮಾನ ಚಾಲೀಸ

ಶ್ರೀ ಗುರು ಚರಣ ಸರೋಜ ರಜ್, ನಿಜ ಮನು ಮುಕುರ ಸುಧಾರಿ ' ಬರನೋ ರಘುವರ ಬಿಮಲ ಜಸು ಜೋ ದಾಯಕ ಫಲ ಚಾರಿ ' ಬುಧೀಹೀನ ತನು ಜಾನ್ನಿಕೆ ಸುಮಿರೋ ಪವನಕುಮಾರ ' ಬಲ ಬುದ್ಧೀ ವಿದ್ಯಾ ದೇಹೂ ಮೊಹೀ ಹರಹು ಕಲೇಶ್ ವಿಕಾರ '

ಚೌಪಾಯಿ (चौपाई)

ಜೈ ಹನುಮಾನ ಜ್ಞಾನ ಗುಣ ಸಾಗರ ' ಜೈ ಕಪೀಸ ತಿಹುಂ ಲೋಕ ಉಜಾಗರ '

ರಾಮ ದೂತ ಅತುಲಿತ ಬಲ ಧಾಮ ' ಅಂಜನಿ ಪುತ್ರ ಪವನ ಸುತ ನಾಮ'

ಮಹಾಬೀರ ವಿಕ್ರಮ ಬಜರಂಗೀ ' ಕುಮತಿ ನಿವಾರ ಸುಮತಿ ಕೆ ಸಂಗೀ '

ಕಾಂಚನ ವರನ ವಿರಾಜ ಸುಬೇಸಾ ' ಕಾನನ ಕುಂಡಲ ಕುಂಚಿತ ಕೇಶ '

ಹಾಥ ವಜ್ರ ಔರ ಧ್ವಜ ವಿರಾಜೆ ' ಕಾಂಧೆ ಮೂಂಜ ಜನೆಊ ಸಾಜೆ '

ಶಂಕರ ಸುವನ ಕೇಸರಿ ನಂದನ ' ತೇಜ ಪ್ರತಾಪ ಮಹಾ ಜಗ ವಂದನ'

ವಿದ್ಯವಾನ ಗುಣೀ ಅತಿ ಚತುರ ' ರಾಮ ಕಾಜ ಕರೀಬೆ ಕೋ ಆತುರ'

ಪ್ರಭು ಚರಿತ್ರ ಸುನಿಬೆ ಕೋ ರಸಿಯಾ ' ರಾಮ ಲಖನ ಸೀತಾ ಮನ ಬಸಿಯಾ '

ಸೂಕ್ಷ್ಮ ರೂಪ ಧರಿ ಸಿಯಹಿ ದಿಖಾವಾ ' ವಿಕಟ ರೂಪ ಧರಿ ಲಂಕ ಜರಾವಾ'

ಭೀಮ ರೂಪ ಧರಿ ಅಸುರ ಸಂಹಾರೆ ' ರಾಮಚಂದ್ರ ಕೆ ಕಾಜ ಸಂವಾರೆ '

ಲಾಯೇ ಸಂಜಿವನ ಲಖನ ಜಿಯಾಯೇ' ಶ್ರೀ ರಘುವೀರ ಹರಷಿ ಉರ ಲಾಯೇ '

ರಘುಪತಿ ಕಿನ್ಹಿ ಬಹುತ ಬಡಾಯೀ ' ತುಮ ಮಮ ಪ್ರಿಯ ಭರತ-ಹಿ-ಸಮ ಭಾಯಿ '

ಸಹಸ ಬದನ ತುಮ್ಹರೋ ಯಶ ಗಾವೆ ' ಅಸ ಕಹಿ ಶ್ರೀಪತಿ ಕಂಠ ಲಗಾವೆ '

ಸನಕಾದಿಕ ಬ್ರಹ್ಮಾದಿ ಮುನೀಸಾ ' ನಾರಾದ ಸಾರದ ಸಹಿತ ಅಹೀಸಾ '

ಯಮ ಕುಬೇರ ದಿಕ್ಪಾಲ ಜಹಾನ ತೇ' ಕವಿ ಕೋವಿದ ಕಹಿ ಸಕೆ ಕಹಾನ ತೇ '

ತುಮ ಉಪಕಾರ ಸುಗ್ರೀವಹಿನ ಕೀನ್ಹ ' ರಾಮ ಮಿಲಾಯೇ ರಾಜಪದ ದೀನ್ಹ '

ತುಮ್ಹ್ರರೋ ಮಂತ್ರ ವಿಭೀಷಣ ಮಾನ ' ಲಂಕೇಶ್ವರ ಭಯ ಸಬ ಜಗಜಾನ '

ಯುಗ ಸಹಸ ಜೋಜನ ಪರ ಭಾನೂ ' ಲೀಲ್ಯೋತಾಹಿ ಮಧುರ ಫಲ ಜಾನೂ '

ಪ್ರಭು ಮುದ್ರಿಕಾ ಮೇಲಿ ಮುಖ ಮಾಹೀ ' ಜಲಧಿ ಲಾಂಘಿ ಗಯೇ ಅಚರಜ ನಾಹೀ '

ದುರ್ಗಮ ಕಾಜ ಜಗತ ಕೆ ಜೇತೇ ' ಸುಗಮ ಅನುಗ್ರಹ ತುಮಹರೇ ತೇತೇ '

ರಾಮ ದುವಾರೆ ತುಮ ರಖವಾರೇ ' ಹೋತ ನ ಆಗ್ಯ ಬಿನು ಪೈಸಾರೇ '

ಸಬ ಸುಖ ಲಹೈ ತುಮ್ಹಾರೀ ಸರನಾ ' ತುಮ ರಕ್ಷಕ ಕಾಹೂ ಕೋ ಡರನಾ '

ಆಪನ ತೇಜ ಸಂಹಾರೋ ಆಪೈ ' ತೀನೋ ಲೋಕ ಹಾಂಕ ತೇ ಕಾಂಪೈ '

ಭೂತ ಪಿಸಾಚ ನಿಕಟ ನಹಿನ ಆವೈ ' ಮಹಾವೀರ ಜಬ ನಾಮ ಸುನಾವೈ '

ನಾಸೆ ರೋಗ ಹರೆ ಸಬ ಪೀರಾ ' ಜಪತ ನಿರಂತರ ಹನುಮತ ಬೀರಾ '

ಸಂಕಟ ಸೆ ಹನುಮಾನ ಛುಡಾವೈ ' ಮನ ಕ್ರಮ ವಚನ ಧ್ಯಾನ ಜೋ ಲಾವೈ'

ಸಬ ಪರ ರಾಮ ತಪಸ್ವೀ ರಾಜಾ ' ತಿನ ಕೇ ಕಾಜ ಸಕಲ ತುಮ ಸಾಜಾ '

ಔರ ಮನೋರಥ ಜೋ ಕೋಇ ಲಾವೈ ' ಸೋಇ ಅಮಿತ ಜೀವನ ಫಲ ಪಾವೈ'

ಚಾರೋನ ಜುಗ ಪರತಾಪ ತುಮ್ಹಾರಾ ' ಹೈ ಪರಸಿದ್ಧ ಜಗತ ಉಜಿಯಾರಾ '

ಸಾಧು ಸಂತ ಕೇ ತುಮ ರಖವಾರೇ ' ಅಸುರ ನಿಕಂದನ ರಾಮ ದುಲಾರೇ '

ಅಷ್ಟ ಸಿದ್ಧಿ ನವ ನಿಧಿ ಕೇ ದಾತಾ ' ಅಸ ವರ ದೀನ ಜಾನಕೀ ಮಾತಾ '

ರಾಮ ರಸಾಯನ ತುಮ್ಹಾರೇ ಪಾಸಾ' ಸದಾ ರಹೋ ರಘುಪತಿ ಕೇ ದಾಸಾ '

ತುಮ್ಹಾರೆ ಭಜನ ರಾಮ ಕೋ ಪಾವೈ ' ಜನಮ ಜನಮ ಕೇ ದುಃಖ ಬಿಸರಾವೈ '

ಅಂತಕಾಲ ರಘುವರ ಪುರ ಜಾಯೀ ' ಜಹಾನ ಜನಮ ಹರಿ ಭಕ್ತ ಕಹಾಯೀ '

ಔರ ದೇವತಾ ಚಿತ್ತ ನ ಧರಹಿನ ' ಹನುಮತ ಸೇಇ ಸರ್ವ ಸುಖ ಕರಹಿನ '

ಸಂಕಟ ಕಟೆ ಮಿಟೆ ಸಬ ಪೀರಾ ' ಜೋ ಸುಮಿರೈ ಹನುಮತ ಬಲಬೀರಾ '

ಜಯ ಜಯ ಜಯ ಹನುಮಾನ ಗೋಸಾಯಿ ' ಕೃಪಾ ಕರಹು ಗುರುದೇವ ಕಿ ನಾಯಿ'

ಜೋ ಸತ ಬಾರ ಪಾಠ ಕರ ಕೋಇ ' ಛೂಟಹಿ ಬಂದಿ ಮಹಾ ಸುಖ ಹೋಇ '

ಜೋ ಯಹ ಪಡೇ ಹನುಮಾನ ಚಾಲೀಸಾ ' ಹೋಯೇ ಸಿದ್ಧಿ ಸಾಖಿ ಗೌರೀಸಾ '

ತುಳಸೀದಾಸ ಸದಾ ಹರಿ ಚೇರಾ ' ಕೀಜೈ ನಾಥ ಹೃದಯ ಮಹ ಡೇರಾ '

ದೋಹಾ (दोहा)

ಪವನ ತನಯ ಸಂಕಟ ಹರಣ ಮಂಗಳ ಮೂರತಿ ರೂಪ ' ರಾಮ ಲಖನ ಸೀತ ಸಹಿತ ಹೃದಯ ಬಸಹು ಸುರ ಭೂಪ ''


ಹನುಮಾನ್‌ ಚಾಲೀಸ - ಕನ್ನಡ ಅನುವಾದ

ಹನುಮಾನ್‌ ಚಾಲೀಸ ಕನ್ನಡದಲ್ಲಿ

ಜಯ ಹನುಮಾನ ಜ್ಞಾನಗುಣಸಾಗರ

ಜಯ ಕಪೀಶ ಮೂರ್ಲೋಕ ಪ್ರಭಾಕರ

ರಾಮದೂತ ಅತುಲಿತ ಬಲಧಾಮ

ಅಂಜನಿಪುತ್ರ ಪವನಸುತ ನಾಮ

ಮಹಾವೀರ ವಿಕ್ರಮ ಬಜರಂಗೀ

ಕುಮತಿ ನಿವಾರಕ ಸುಮತಿಯ ಸಂಗೀ

ಕಾಂಚನ ರಂಜತ ಸುಂದರ ವೇಷ

ಕರ್ಣಕುಂಡಲ ಗುಂಗುರುಕೇಶ

ವಜ್ರಗದಾಧರ ಧ್ವಜಕರಶೋಭಿತ

ಸುಂದರಭುಜ ಉಪವೀತ ಅಲಂಕೃತ

ಶಂಕರಕುವರ ಕೇಸರೀ ನಂದನ

ತೇಜಪ್ರತಾಪ ಮಹಾ ಜಗವಂದನ

ವಿದ್ಯಾವಾನ ಗುಣೀ ಅತಿ ಚತುರ

ರಾಮಕಾರ್ಯವೆಸಗೆ ಬಲು ಕಾತುರ

ಪ್ರಭುಕಥೆ ಕೇಳುತ ಮೈಮರೆವಾತ

ಮನವಿ ರಾಮ ಸೌಮಿತ್ರಿ ಸೀತ

ಸೂಕ್ಷ್ಮರೂಪವನು ಸೀತೆಗೆ ತೋರಿದೆ

ವಿಕಟರೂಪದಲಿ ಲಂಕೆಯ ದಹಿಸಿದೆ

ಭೀಮರೂಪದಲಿ ಅಸುರರ ಕೊಂದೆ

ರಾಮಚಂದ್ರನ ಕಾರ್ಯವೆಸಗಿದೆ

ಮೂಲಿಕೆ ತಂದು ಸೌಮಿತ್ರಿಯ ಪೊರೆದೆ

ರಾಮನ ಪ್ರೀತಿಯ ಅಪ್ಪುಗೆ ಪಡೆದೆ

ಭರತನಂತೆ ನೀನು ಪ್ರಿಯಸಹೋದರ

ಎನ್ನುತ ಹೊಗಳಿದ ಶ್ರೀರಘುವೀರ

ಸಹಸ್ರಮುಖವು ನಿನ್ನ ಸ್ತುತಿಸಿದೆ

ಎನ್ನುತ ಶ್ರೀಪತಿ ಆಲಿಂಗಿಸಿದ

ಸನಕಬ್ರಹ್ಮಾದಿ ಮುನಿವರೇಣ್ಯರು

ನಾರದ ಶಾರದೆ ಆದಿಶೇಷರು

ಯಮಕುಬೇರ ದಿಕ್ಪಾಲಕರೆಲ್ಲರು

ಕವಿಕೋವಿದರು ನಿನ್ನ ಸ್ತುತಿಸಿಹರು

ಸುಗ್ರೀವಗೆ ನೀ ಸಹಾಯ ಮಾಡಿದೆ

ರಾಮಸಖ್ಯದಿ ರಾಜ್ಯ ಕೊಡಿಸಿದೆ

ನಿನ್ನುಪದೇಶ ವಿಭೀಷಣ ಒಪ್ಪಿದ

ಲಂಕೇಶನಾದುದ ಜಗವೇ ಬಲ್ಲದು

ಮಧುರ ಹಣ್ಣೆಂದು ತಿಳಿದು ರವಿಯನು

ಪಿಡಿಯೆ ಹಾರಿದೆ ಸಹಸ್ರಯೋಜನ

ಪ್ರಭುಮುದ್ರಿಕೆಯನು ಧರಿಸಿ ಬಾಯಲಿ

ಶರಧಿ ಲಂಘನವು ಸೋಜಿಗವಲ್ಲ


ಎಷ್ಟೇ ಕಠಿಣ ಕಾರ್ಯವೇ ಇರಲಿ

ಅಷ್ಟೇ ಸುಲಭ ನಿನ್ನ ಕೃಪೆಯಿಂದಲಿ

ರಾಮನ ದ್ವಾರಪಾಲಕ ನೀನು

ನಿನ್ನಾಜ್ಞೆ ವಿನಾ ಒಳ ಬರಲಾರೆನು

ಸುಖವೆಲ್ಲ ನಿನಗೆ ಶರಣಾಗಿ ಇರಲು

ಭಯವೇಕೆ ಎಮಗೆ ನೀ ರಕ್ಷಿಸಲು

ನಿನ್ನ ತೇಜ ನಿನ್ನಂದಲೆ ಶಮನ

ನಿನ್ನ ಘರ್ಜನೆಗೆ ತ್ರಿಲೋಕ ಕಂಪನ

ಮಹಾವೀರ ನಿನ್ನ ನಾಮವ ಕೇಳಲು

ಸನಿಹಕೆ ಬರದು ಭೂತಪ್ರೇತಗಳು

ಹನುಮ ನಿನ್ನನು ಸದಾ ಭಜಿಸಲು

ನಾಶವಾಗುವುವು ರೋಗರುಜಗಳು

ಹನುಮನ ಧ್ಯಾನಿಸೆ ತ್ರಿಕರಣದಿಂದ

ಕಷ್ಟಕಾರ್ಪಣ್ಯವು ದೂರಾಗುವುದು

ತಪಸ್ವೀರಾಮನ ಕಾರ್ಯಗಳೆಲ್ಲವ

ಯಶಸ್ಸಿನಿಂದ ಸಫಲಗೊಳಿಸಿದವ

ನೆರವೇರಿಸುತಲಿ ಭಕ್ತರಾಭೀಷ್ಟವ

ಅಮಿತ ಫಲವನು ನೀ ಕರುಣಿಸುವೆ

ನಾಲ್ಕು ಯುಗಗಳಲೂ ಪ್ರತಾಪ ನಿನ್ನದೆ

ನಿನ್ನಯ ಪ್ರಭೆಯ ಲೋಕ ಬೆಳಗಿದೆ

ಸಾಧುಸಂತರನು ಪೊರೆದು ಸಲಹಿದೆ

ಅಸುರರ ಕೊಂದು ರಾಮಪ್ರಿಯನಾದೆ

ಅಷ್ಟಸಿದ್ಧಿ ನವನಿಧಿಯ ಕೊಡುವವ

ಜಾನಕಿ ಮಾತೆಯಿಂ ವರವ ಪಡೆದವ

ನಿನ್ನಲಿ ಇರಲು ರಾಮರಸಾಯನ

ಸದಾ ರಘುಪತಿಯ ದಾಸನು ನೀನು


ನಿನ್ನ ಭಜಿಸಿದವ ರಾಮನ ಪಡೆವ

ಜನ್ಮಜನ್ಮದ ದುಃಖವ ಮರೆವ

ಜೀವಿಸಿರಲು ಹರಿಭಕ್ತನೆನಿಸುವ

ಅಂತ್ಯಸಮಯದಿ ರಾಮನ ಸೇರುವ

ಅನ್ಯದೇವರನು ಭಜಿಸದಿದ್ದರು

ಹನುಮನ ಸೇವಿಸೆ ಸುಖವ ಪಡೆವರು

ವೀರ ಹನುಮನ ಭಜಿಸಲು ಭಕ್ತರು

ವ್ಯಾಧಿ ಸಂಕಟದಿ ಮುಕ್ತಿ ಪಡೆವರು

ಜಯ ಜಯ ಜಯ ಹನುಮಾನ ಗೋಸಾಯಿ

ಗುರುವಿನಂದದಿ ಕೃಪೆ ಇದು ಸಾಯಿ

ನೂರು ಬಾರಿ ಇದ ಪಠಣ ಮಾಡಿದವ

ಬಂಧನ ಕಳಚುತ ನಿಜ ಸುಖ ಪಡೆವ

ಯಾರು ಪಠಿಸುವರೊ ಹನುಮ ಚಾಲೀಸ

ಸಿದ್ಧಿ ಪಡೆಯುವರು ಸಾಕ್ಷಿ ಗೌರೀಶ

ತುಲಸೀದಾಸ ಸದಾ ಹರಿಭಕ್ತ

ವಾಸಿಸು ಎನ್ನ ಹೃದಯದಿ ನಾಥ

ಪರಮ ಭಕ್ತ ಶ್ರೀ ತುಲಸೀದಾಸರ

ಚರಣಕೆ ವಂದಿಪೆ ನಿತ್ಯ ನಿರಂತರ

ಮಂಗಳ ಶ್ಲೋಕ

ಪವನ ತನಯ ಸಂಕಟಹರಣ ಮಂಗಳಮೂರುತಿ ರೂಪ

ರಾಮ ಸೌಮಿತ್ರಿ ಸೀತಾ ಸಹಿತ ನೆಲೆಸು ಹೃದಯದಿ ಸುರಭೂಪ


ಹನುಮನ ದಯೆಯಿಂ ಅತನ ಚರಿತೆಯ

ಕನ್ನಡ ಭಾಷೆಗೆ ಬರೆದಂತಾಯ್ತು

ಇಂತು ಚೈತನ್ಯವ ನೀಡಿದ ಪ್ರಭುವನು

ಚೈತನ್ಯದಾಸ ಭಕ್ತಿಲಿ ನಮಿಪನು

||ಓಂ ಶಾಂತಿಃ ಶಾಂತಿಃ ಶಾಂತಿಃ ||


'

Hanuman Chalisa in Kannada PDF

ಹನುಮಾನ್ ಚಾಲೀಸಾ ಮಂತ್ರ (ಸಂಪೂರ್ಣ ಪರಿಚಯ)

ಹನುಮಾನ್ ಚಾಲೀಸಾ Archived 2021-11-09 ವೇಬ್ಯಾಕ್ ಮೆಷಿನ್ ನಲ್ಲಿ.

Hanuman Chalisa in Kannada | ಹನುಮಾನ್ ಚಾಲೀಸಾ Archived 2022-05-18 ವೇಬ್ಯಾಕ್ ಮೆಷಿನ್ ನಲ್ಲಿ.

Tags:

ಹನುಮಾನ್ ಚಾಲೀಸ ಪ್ರಾಮುಖ್ಯತೆಹನುಮಾನ್ ಚಾಲೀಸ ಶ್ರೀ ಹನುಮಾನ್ ಚಾಲಿಸಹನುಮಾನ್ ಚಾಲೀಸಅವಧಿತುಳಸಿದಾಸ್ಪದ್ಯರಾಮಚರಿತ ಮಾನಸಹನುಮಂತಹಿಂದಿ ಭಾಷೆಹಿಂದೂ

🔥 Trending searches on Wiki ಕನ್ನಡ:

ಆಭರಣಗಳುಸಂಶೋಧನೆಮಯೂರವರ್ಮಭಾರತೀಯ ಮೂಲಭೂತ ಹಕ್ಕುಗಳುಬಿ.ಎಫ್. ಸ್ಕಿನ್ನರ್ಕರ್ನಾಟಕದ ತಾಲೂಕುಗಳುರಾಶಿಶಿವರಾಮ ಕಾರಂತಕೆ. ಎಸ್. ನಿಸಾರ್ ಅಹಮದ್ಕನ್ನಡದಲ್ಲಿ ಕಾದಂಬರಿ ಸಾಹಿತ್ಯನೇಮಿಚಂದ್ರ (ಲೇಖಕಿ)ಕನ್ನಡದಲ್ಲಿ ಗದ್ಯ ಸಾಹಿತ್ಯಕಿತ್ತೂರು ಚೆನ್ನಮ್ಮಸಂತೋಷ್ ಆನಂದ್ ರಾಮ್ಪಿ.ಲಂಕೇಶ್ಹುಲಿಮಾರಾಟ ಪ್ರಕ್ರಿಯೆಕನ್ನಡದಲ್ಲಿ ಮಹಿಳಾ ಸಾಹಿತ್ಯಎಸ್.ಎಲ್. ಭೈರಪ್ಪಸ್ಯಾಮ್ ಪಿತ್ರೋಡಾಸವದತ್ತಿಅಂತರ್ಜಲಹಾಸನ ಜಿಲ್ಲೆಶ್ರೀ ರಾಮಾಯಣ ದರ್ಶನಂಮಾನವನ ವಿಕಾಸರಾಜಧಾನಿಗಳ ಪಟ್ಟಿಸುದೀಪ್ಅಜಯ್ ಜಡೇಜಾಚಂದ್ರಶೇಖರ ಕಂಬಾರಹೈದರಾಬಾದ್‌, ತೆಲಂಗಾಣಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಹೊಂಗೆ ಮರದಕ್ಷಿಣ ಕನ್ನಡರವಿಚಂದ್ರನ್ದಯಾನಂದ ಸರಸ್ವತಿಹಾಗಲಕಾಯಿಯೂಟ್ಯೂಬ್‌ವೇದವ್ಯಾಸಯಜಮಾನ (ಚಲನಚಿತ್ರ)ಗುರುರಾಜ ಕರಜಗಿರಾಷ್ಟ್ರೀಯ ಶಿಕ್ಷಣ ನೀತಿಭಾರತರಾಜಕುಮಾರ (ಚಲನಚಿತ್ರ)ಅನುಭವ ಮಂಟಪಭ್ರಷ್ಟಾಚಾರಬಿಳಿಗಿರಿರಂಗನ ಬೆಟ್ಟಸಂಯುಕ್ತ ರಾಷ್ಟ್ರ ಸಂಸ್ಥೆಮುಹಮ್ಮದ್ಪಂಚಾಂಗವಿರಾಟ್ ಕೊಹ್ಲಿಅಲಾವುದ್ದೀನ್ ಖಿಲ್ಜಿದರ್ಶನ್ ತೂಗುದೀಪ್ಡಿ.ವಿ.ಗುಂಡಪ್ಪವಿಷ್ಣುವರ್ಧನ್ (ನಟ)ಅಮೃತಧಾರೆ (ಕನ್ನಡ ಧಾರಾವಾಹಿ)ಬಿಸಿನೀರಿನ ಚಿಲುಮೆತಂತ್ರಜ್ಞಾನಗಾದೆಜಲ ಮಾಲಿನ್ಯಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಅಮರೇಶ ನುಗಡೋಣಿಪೆನೆಲೋಪ್ ಫಿಟ್ಜ್‌ಗೆರಾಲ್ಡ್ಕರ್ನಾಟಕದ ಅಣೆಕಟ್ಟುಗಳುಸಿದ್ಧರಾಮಭಾರತದ ಪಂಚಾಯತ್ ರಾಜ್ ವ್ಯವಸ್ಥೆಭೂಮಿಅಡಿಕೆಕರ್ನಾಟಕ ಸಹಕಾರ ಹಾಲು ಉತ್ಪಾದಕರ ಒಕ್ಕೂಟಭರತ-ಬಾಹುಬಲಿಸಂಯುಕ್ತ ಕರ್ನಾಟಕಸೀತಾ ರಾಮವೇದರಾಮಾಚಾರಿ (ಕನ್ನಡ ಧಾರಾವಾಹಿ)ಸವರ್ಣದೀರ್ಘ ಸಂಧಿ🡆 More