ಜಿಎಸ್‍ಟಿ ಸರಕು ಮತ್ತು ಸೇವಾ ತೆರಿಗೆ

ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ:GST) 2016:(Goods and Services Tax Bill or GST Bill 2016) ಭಾರತದ ತೆರಿಗೆ ವ್ಯವಸ್ಥೆಯಲ್ಲಿ ತೆರಿಗೆ ಸುಧಾರಣಾ ಕ್ರಮವಾಗಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯು ದಿ.1 ಜುಲೈ, 2017 ಮಧ್ಯರಾತ್ರಿಯಿಂದಲೇ ದೇಶದಾದ್ಯಂತ ಜಾರಿಗೆ ಬಂದಿದೆ.

ಸಂಸತ್ತಿನ ಸೆಂಟ್ರಲ್‌ ಹಾಲ್‌ನಲ್ಲಿ ಮಧ್ಯರಾತ್ರಿ 12 ಗಂಟೆಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಗುಂಡಿ ಒತ್ತುವ ಮೂಲಕ ಹೊಸ ತೆರಿಗೆ ವ್ಯವಸ್ಥೆಗೆ ಚಾಲನೆ ನೀಡಿದರು. |}

  • ಸರಕು ಮತ್ತು ಸೇವಾ ತೆರಿಗೆ ಬಿಲ್ ಅಥವಾ ಜಿ.ಎಸ್.ಟಿ ಮಸೂದೆ (ಬಿಲ್) (ಹಿಂದಿ: वस्तु एवं सेवा कर विधेयक), ಅಧಿಕೃತವಾಗಿ ಇದು ಸಂವಿಧಾನದ (ನೂರಾ ಇಪ್ಪತ್ತೆರಡನೇ ತಿದ್ದುಪಡಿ) ಮಸೂದೆ, ೨೦೧೪ ಎಂದು ಪ್ರಸ್ತಾಪಿಸಿದೆ. ಇದು ರಾಷ್ಟ್ರೀಯ ಮೌಲ್ಯವರ್ಧಿತ ತೆರಿಗೆಯನ್ನು ಭಾರತದಲ್ಲಿ ಅನುಷ್ಠಾನಗೊಳಿಸಲು ತಂದ ಮಸೂದೆ.(ಜೂನ್ 2016)
The President Launching Goods and Services Tax (GST) on 1st July 2017
ಜಿಎಸ್‍ಟಿ ಸರಕು ಮತ್ತು ಸೇವಾ ತೆರಿಗೆ
ಭಾರತ ಸರ್ಕಾರ
  • ದಿ.೩-೮-೨೦೧೬ ರಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಮಸೂದೆ ಮಂಡಿಸಿದ ನಂತರ ರಾತ್ರಿ 9ರ ತನಕ ಸುದೀರ್ಘ ಚರ್ಚೆ ನಡೆಯಿತು. ಆರಂಭದಿಂದಲೇ ಜಿಎಸ್‌ಟಿಯನ್ನು ವಿರೋಧಿಸುತ್ತಿರುವ ಎಐಎಡಿಎಂಕೆ ಸಭಾತ್ಯಾಗ ನಡೆಸುವ ಮೂಲಕ ಮತದಾನದಿಂದ ದೂರ ಉಳಿಯಿತು. ಇತರ ಎಲ್ಲ ಪಕ್ಷಗಳು ಮಸೂದೆಯನ್ನು ಬೆಂಬಲಿಸಿದವು. ಹಾಗಾಗಿ ಸಂವಿಧಾನ ತಿದ್ದುಪಡಿ ಮಸೂದೆಗೆ ರಾಜ್ಯಸಭೆ ಅವಿರೋಧ ಅಂಗೀಕಾರ ನೀಡಿತು. ಸದನದಲ್ಲಿ ಹಾಜರಿದ್ದ ಎಲ್ಲ ೨೦೩ ಸದಸ್ಯರು ಮಸೂದೆಯ ಪರ ಮತ ಹಾಕಿದರು.(ತಿದ್ದುಪಡಿಗಳ ಕಾರಣ ಪುನಃ ಲೋಕಸಭೆ ಅಂಗೀಕಾರ ಆಗಬೇಕು)


  • "ಸರಕು ಮತ್ತು ಸೇವಾ ತೆರಿಗೆ" ಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೊಳಿಸಿದ ಸಮಗ್ರ ಪರೋಕ್ಷ ತೆರಿಗೆಗಳು. ಇದು ಉತ್ಪಾದನೆ, ಮಾರಾಟ ಮತ್ತು ಬಳಕೆ, ಸರಕು ಮತ್ತು ಸೇವೆಗಳ ಬಗ್ಗೆ ಭಾರತದಾದ್ಯಂತ ವಿಧಿಸುವ ಸಮಗ್ರ ಪರೋಕ್ಷ ತೆರಿಗೆ; ಇದನ್ನು ಈ ವರೆಗಿನ ಸರಕು ಮತ್ತು ಸೇವೆಗಳ ತೆರಿಗೆ ಬದಲಿಗೆ ಭಾರತದಾದ್ಯಂತ ‘ಇನ್ಪುಟ್ ತೆರಿಗೆ ಕ್ರೆಡಿಟ್ ಆಧಾರ’ದ ಮೇಲೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಸರಕುಗಳು ಅಥವಾ ಸೇವೆಗಳ ಮಾರಾಟ ಅಥವಾ ಖರೀದಿಗಾಗಿ ಪ್ರತಿ ಹಂತದಲ್ಲಿ ಹೇರಲಾಗುತ್ತದೆ.
  • 2017ರ ಏಪ್ರಿಲ್‌ನಿಂದ ಜಿಎಸ್‌ಟಿ ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಆದರೆ ಅದಕ್ಕೂ ಮೊದಲು 29 ರಾಜ್ಯಗಳ ಪೈಕಿ ಕನಿಷ್ಠ 15 ರಾಜ್ಯಗಳು (ಶೇ 50ರಷ್ಟು) ಮಸೂದೆಗೆ ಅನುಮೋದನೆ ನೀಡಬೇಕಿದೆ. ಜೊತೆಗೆ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ರಾಜ್ಯಗಳು ಸಜ್ಜಾಗಬೇಕಿವೆ. ವರಮಾನ ಹಂಚಿಕೆ ಮುಂತಾದ ವಿಚಾರಗಳ ಪೂರಕ ಮಸೂದೆಗಳು ಸಂಸತ್ತಿನ ಅಂಗೀಕಾರ ಪಡೆಯಬೇಕಿವೆ. ಹಾಗಾಗಿ ಏಪ್ರಿಲ್‌ ಒಂದರಿಂದಲೇ ಜಾರಿಗೆ ತರುವುದು ಕಷ್ಟ ಎಂಬ ಮಾತು ಕೇಳಿ ಬರುತ್ತಿದೆ. (2017ರ ಜುಲೈ ನಂತರವೇ ಹೊಸ ತೆರಿಗೆ ವ್ಯವಸ್ಥೆ ಜಾರಿಗೆ ಬರುತ್ತದೆ .)

ತಕ್ಷಣದ ಪರಿಣಾಮ

  • ಪ್ರಸ್ತುತ ಸೇವಾ ತೆರಿಗೆ ದರ ಶೇ ೧೪.೫ ರಷ್ಟಿದೆ. ಜಿಎಸ್‌ಟಿ ದರ ಶೇ ೧೮ ರಷ್ಟು ನಿಗದಿಪಡಿಸಿದರೆ ಸೇವಾ ವಲಯಕ್ಕೆ ಹೊರೆ ಬೀಳಲಿದೆ. ಪ್ರವಾಸ, ವಿಮಾನ ಪ್ರಯಾಣ, ಆಂಬುಲೆನ್ಸ್‌ ಸೇವೆ, ಸಾಂಸ್ಕೃತಿಕ ಚಟುವಟಿಕೆ, ಕೆಲವೊಂದು ತೀರ್ಥಯಾತ್ರೆಗಳು, ಕ್ರೀಡಾ ಸ್ಪರ್ಧೆಗಳು ದುಬಾರಿಯಾಗಲಿವೆ. ಭಾರತದ ಆರ್ಥಿಕತೆಯಲ್ಲಿ ಸೇವಾ ವಲಯದ ಪಾಲು ಶೇ ೫೭ ರಷ್ಟಿದೆ. ಆದ್ದರಿಂದ ತೆರಿಗೆ ದರ ಹೆಚ್ಚಿದರೆ ಆರ್ಥಿಕತೆಯ ಮೇಲೆ ಪರಿಣಾಮ ಬೀರಲಿದೆ. (೧೩೦ ಕೋಟಿ ಜನಸಂಖ್ಯೆಯಿರುವ ದೇಶದಲ್ಲಿ ಈ ತೆರಿಗೆಯಿಂದ ಸರ್ಕಾರಕ್ಕೆ ಸುಮಾರು ೧೫೦ ಲಕ್ಷ ಕೋಟಿ ಹೆಚ್ಚುವರಿ ಆದಾಯ ತರುವುದೆಂದರೆ, ಸರಾಸರಿ ೧.೧೫ ಲಕ್ಷ ರೂಪಾಯಿಯಷ್ಟು ವಾರ್ಷಿಕ ತಲಾ ಹೆಚ್ಚುವರಿ ತೆರಿಗೆ ಬೀಳಬಹುದು. ಬಡವರಿಗೆ ವಾರ್ಷಿಕ ತಲಾ ೩೬ಸಾವಿರ ತೆರಿಗೆ ಬಿದ್ದರೆ ಬಡತನದ ಮೇಲಿನವರಿಗೆ ವಾರ್ಷಿಕ ೪೦,೦೦೦ರೂ.ನಿಂದ ೨ ಲಕ್ಷ ರೂಪಾಯಿಗೂ ಹೆಚ್ಚು ತೆರಿಗೆ ಬೀಳಬಹುದು. ನಾಲ್ಕು ಜನರ ಕುಟುಂಬವನ್ನು ಗಣನೆಗೆ ತೆಗೆದುಕೊಂಡರೆ ಅದರ ನಾಲ್ಕರಷ್ಟು ತೆರಿಗೆಯ ಹೊರೆ ಬೀಳಬಹುದು. ಅದು ಜಾರಿಗೆ ಬಂದಾಗಲೇ ಅದರ ನಿಜ ಪರಿಣಾಮ ತಿಳಿಯುವುದು.)
  • ಸ್ಥಳೀಯಾಡಳಿತ ಸಂಸ್ಥೆಗಳು ವಿಧಿಸುವ ತೆರಿಗೆಗಳು ಜೆಎಸ್‌ಟಿಯಲ್ಲಿ ಅಂತರ್ಗತವಾಗುವುದಿಲ್ಲ. ಈ ತೆರಿಗೆಗಳು ಪ್ರತ್ಯೇಕವಾಗಿಯೇ ಉಳಿಯಲಿವೆ.
  • ಜಿಎಸ್‌ಟಿ ಜಾರಿಗೆ ಬರುವುದರೊಂದಿಗೆ ಅಬಕಾರಿ ಸುಂಕ, ಮೌಲ್ಯವರ್ಧಿತ ತೆರಿಗೆ, ಸೇವಾ ತೆರಿಗೆ, ಐಷಾರಾಮ ತೆರಿಗೆ ಮತ್ತು ಆಕ್ಟ್ರಾಯ್‌ ಸೇರಿದಂತೆ ಎಲ್ಲ ಪರೋಕ್ಷ ತೆರಿಗೆಗಳು ರದ್ದಾಗಲಿವೆ.
  • ಸರ್ಕಾರವು ಜಿಎಸ್‌ಟಿ ದರವನ್ನು ಶೇ ೧೮ಕ್ಕೆ ನಿಗದಿಪಡಿಸಿದರೆ, ತಯಾರಕರು ಮತ್ತು ಗ್ರಾಹಕರು ಈ ಹೊಸ ತೆರಿಗೆ ವ್ಯವಸ್ಥೆಯಡಿ ಲಾಭ ಪಡೆಯಲಿದ್ದಾರೆ. ಅಬಕಾರಿ ಸುಂಕ, ವ್ಯಾಟ್‌ ಮತ್ತು ಕೇಂದ್ರ ಮಾರಾಟ ತೆರಿಗೆ ನೀಡಬೇಕಿರುವುದರಿಂದ ಗ್ರಾಹಕರು ಈಗ ವಸ್ತುವೊಂದರ ಉತ್ಪಾದನಾ ವೆಚ್ಚಕ್ಕಿಂತ ಅಂದಾಜು ಶೇ ೨೫ ರಷ್ಟು ಅಧಿಕ ಬೆಲೆ ನೀಡುತ್ತಿದ್ದಾರೆ. ಜಿಎಸ್‌ಟಿ ಅನುಷ್ಠಾನಗೊಂಡರೆ ಗ್ರಾಹಕನ ಹೊರೆ ಕಡಿಮೆಯಾಗಲಿದೆ.
  • ಅಬಕಾರಿ, ವ್ಯಾಟ್‌ ಮತ್ತು ಸೇವಾ ತೆರಿಗೆ ಪಾವತಿಸುತ್ತಿರುವ ತಯಾರಕರು ಇನ್ನು ಮುಂದೆ ಏಕರೂಪದ ತೆರಿಗೆ ವ್ಯವಸ್ಥೆಯಡಿ ಬರಲಿದ್ದಾರೆ.
  • ಪ್ರಸ್ತುತ ಇರುವ ವ್ಯವಸ್ಥೆಯಲ್ಲಿ ಗ್ರಾಹಕರು ತೆರಿಗೆಯ ಜತೆಗೆ ಇತರ ಕೆಲವು ಸೆಸ್‌ಗಳನ್ನೂ ಪಾವತಿಸುತ್ತಾರೆ. ಆದರೆ ಇನ್ನು ಮುಂದೆ ತೆರಿಗೆಯ ಮೇಲೆ ಉಪಕರ ಇರುವುದಿಲ್ಲ.
  • ಕಚ್ಚಾ ಅಹಾರ ಪದಾರ್ಥ ಸೇರಿದಂತೆ ಕೆಲವು ಅಗತ್ಯ ವಸ್ತುಗಳ ತೆರಿಗೆ ದರ ಪ್ರಸ್ತುತ ಶೇ ೬ ರಿಂದ ಶೇ ೮ರಷ್ಟಿದೆ. ಜಿಎಸ್‌ಟಿ ದರವನ್ನು ಶೇ ೧೮ಕ್ಕೆ ನಿಗದಿಪಡಿಸಿದರೆ ಎಲ್ಲ ಅಗತ್ಯ ಸಾಮಗ್ರಿಗಳ ಬೆಲೆ ಏರಿಕೆಯಾಗಲಿದೆ.

ಇತಿಹಾಸ

ಜಿಎಸ್‌ಟಿ ನಡೆದು ಬಂದ ದಾರಿ
  • ೧೯೮೬: ಫೆಬ್ರುವರಿ: ಅಬಕಾರಿ ಸುಂಕ ವ್ಯವಸ್ಥೆಯಲ್ಲಿ ವ್ಯಾಪಕ ಬದಲಾವಣೆ ಆಗಬೇಕು ಎಂದು ಹಣಕಾಸು ಸಚಿವ ವಿಶ್ವನಾಥ್ ಪ್ರತಾಪ್ ಸಿಂಗ್; ೧೯೮೬-೮೭ರ ಬಜೆಟ್‌ನಲ್ಲಿ ಪ್ರಸ್ತಾಪ ಮಾಡಿದ್ದರು
  • ೨೦೦೦: ಜಿಎಸ್‌ಟಿಯ ಸ್ವರೂಪವನ್ನು ವಿನ್ಯಾಸ ಮಾಡಲು ಪಶ್ಚಿಮ ಬಂಗಾಳದ ಹಣಕಾಸು ಸಚಿವ ಅಸೀಂ ದಾಸ್‌ಗುಪ್ತಾ ನೇತೃತ್ವದಲ್ಲಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಂದ ಸಮಿತಿ ರಚನೆ
  • ೨೦೦೩: ತೆರಿಗೆ ಸುಧಾರಣೆ ಶಿಫಾರಸಿಗಾಗಿ ವಿಜಯ್ ಕೇಳ್ಕರ್‌ ನೇತೃತ್ವದಲ್ಲಿ ಕಾರ್ಯಪಡೆ ರಚನೆ
  • ೨೦೦೪: ಜಾರಿಯಲ್ಲಿದ್ದ ತೆರಿಗೆ ಪದ್ಧತಿಗೆ ಪರ್ಯಾಯವಾಗಿ ಜಿಎಸ್‌ಟಿ ಜಾರಿ ಮಾಡಬಹುದು ಎಂದು ಕೇಳ್ಕರ್ ಅವರಿಂದ ಶಿಫಾರಸು
  • ೨೦೦೬: ಫೆಬ್ರುವರಿ, 28: ಜಿಎಸ್‌ಟಿ ಬಗ್ಗೆ ಬಜೆಟ್‌ ಭಾಷಣದಲ್ಲಿ ಪ್ರಸ್ತಾವ ಮಾಡಿದ ಹಣಕಾಸು ಸಚಿವ ಪಿ.ಚಿದಂಬರಂ. ಜಿಎಸ್‌ಟಿ ಅನುಷ್ಠಾನಕ್ಕೆ ೨೦೧೦ರ ಏಪ್ರಿಲ್‌ ೧ರ ಗಡವು
  • ೨೦೦೮: ಜಿಎಸ್‌ಟಿ ಅನುಷ್ಠಾನ ನೀಲನಕ್ಷೆ ಸಿದ್ಧಪಡಿಸಲು ಎಲ್ಲಾ ರಾಜ್ಯಗಳ ಹಣಕಾಸು ಸಚಿವರಿರುವ ಉನ್ನತಾಧಿಕಾರ ಸಮಿತಿ ರಚನೆ
  • ೨೦೦೮:ಏಪ್ರಿಲ್ ೩೦: ಜಿಎಸ್‌ಟಿ ಅನುಷ್ಠಾನ ನೀಲನಕ್ಷೆ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ಉನ್ನತಾಧಿಕಾರ ಸಮಿತಿ
  • ೨೦೦೯: ದಾಸ್‌ಗುಪ್ತಾ ಸಮಿತಿ ವಿನ್ಯಾಸ ಮಾಡಿದ ಜಿಎಸ್‌ಟಿಯ ಮೂಲ ಸ್ವರೂಪವನ್ನು ಬಹಿರಂಗಪಡಿಸಿದ ಹಣಕಾಸು ಸಚಿವ ಪ್ರಣವ್ ಮುಖರ್ಜಿ. ಮೂಲ ಸ್ವರೂಪದ ಬಗ್ಗೆ ವಿರೋಧ ಪಕ್ಷ ಬಿಜೆಪಿಯ ಆಕ್ಷೇಪ
  • ೨೦೧೦ ಫೆಬ್ರುವರಿ: ಜಿಎಸ್‌ಟಿ ಜಾರಿಗೆ ಪೂರ್ವಭಾವಿಯಾಗಿ ರಾಜ್ಯ ವಾಣಿಜ್ಯ ತೆರಿಗೆಗಳ ಕಂಪ್ಯೂಟರೀಕರಣಕ್ಕೆ ಚಾಲನೆ. ಜಿಎಸ್‌ಟಿ ಜಾರಿ, ೨೦೧೧ರ ಏಪ್ರಿಲ್‌ ೧ಕ್ಕೆ ಮುಂದೂಡಿಕೆ
  • ೨೦೧೧:ಮಾರ್ಚ್ ೨೨: ಜಿಎಸ್‌ಜಿ ಜಾರಿಗೆ ಅನುವು ಮಾಡಿಕೊಡುವ ಉದ್ದೇಶದಿಂದ ಲೋಕಸಭೆಯಲ್ಲಿ ೧೧೫ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆ ಮಂಡಿಸಿದ ಯುಪಿಎ–2 ಸರ್ಕಾರ
    -ಮಾರ್ಚ್ ೨೯: ಜಿಎಸ್‌ಟಿ ಮಸೂದೆ, ಯಶವಂತ್ ಸಿನ್ಹಾ ನೇತೃತ್ವದ ಹಣಕಾಸು ಸಂಸದೀಯ ಸ್ಥಾಯಿ ಸಮಿತಿಯ ಪರಿಶೀಲನೆಗೆ. ಅಸೀಂ ದಾಸ್‌ಗುಪ್ತಾ ಸ್ಥಾನಕ್ಕೆ ಕೆ.ಎಂ.ಮಾಣಿ ನೇಮಕ
  • ೨೦೧೩ ಫೆಬ್ರುವರಿ: ಜಿಎಸ್‌ಟಿ ಯಿಂದಾಗಿ ತೆರಿಗೆ ನಷ್ಟ ಅನುಭವಿಸುವುದರಿಂದ ರಾಜ್ಯಗಳಿಗೆ ರೂ.9,000 ಕೋಟಿ ಪರಿಹಾರ ನೀಡುವುದಾಗಿ ಬಜೆಟ್ ಭಾಷಣದಲ್ಲಿ ಘೋಷಿಸಿದ ಪಿ.ಚಿದಂಬರಂ
    ಆಗಸ್ಟ್: ಜಿಎಸ್‌ಟಿ ಯಲ್ಲಿನ ಸುಧಾರಣೆಗಳ ಸಂಬಂಧ ವರದಿ ಸಲ್ಲಿಸಿದ ಸಂಸದೀಯ ಸ್ಥಾಯಿ ಸಮಿತಿ. ಸಂಸತ್ತಿನಲ್ಲಿ ಮಂಡನೆಗೆ ಮಸೂದೆ ಸಿದ್ಧ
    ಅಕ್ಟೋಬರ್: ‘ಜಿಎಸ್‌ಟಿ ಯಿಂದ ರಾಜ್ಯಕ್ಕೆ ಪ್ರತಿ ವರ್ಷ ರೂ.೧೪,೦೦೦ ಕೋಟಿ ತೆರಿಗೆ ನಷ್ಟವಾಗುತ್ತದೆ’ ಎಂದು ಜಿಎಸ್‌ಟಿ ವಿರುದ್ಧ ಧ್ವನಿ ಎತ್ತಿದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ
  • ೨೦೧೪: ಲೋಕಸಭೆ ವಿಸರ್ಜನೆ ಆದ ಕಾರಣ, ಸಂಸದೀಯ ಸಮಿತಿ ಪಾಸು ಮಾಡಿದ್ದ ಜಿಎಸ್‌ಟಿ ಮಸೂದೆ ರದ್ದಾಯಿತು. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ
    ಡಿಸೆಂಬರ್ ೧೮: ಜಿಎಸ್‌ಟಿಯ ೧೨೨ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಗೆ ಸಂಪುಟ ಒಪ್ಪಿಗೆ ನೀಡಿತು.
    ಡಿಸೆಂಬರ್ ೧೯: ಲೋಕಸಭೆಯಲ್ಲಿ ಮಸೂದೆ ಮಂಡನೆ. ಕಾಂಗ್ರೆಸ್‌ನಿಂದ ಆಕ್ಷೇಪ
  • ೨೦೧೫ ಫೆಬ್ರುವರಿ: ೨೦೧೬ರ ಏಪ್ರಿಲ್‌ ೧ಕ್ಕೆ ಜಿಎಸ್‌ಟಿ ಜಾರಿಗೆ ಗಡವು ನಿಗದಿ ಮಾಡಿದ ಹಣಕಾಸು ಸಚಿವ ಅರುಣ್ ಜೇಟ್ಲಿ
  • ಮೇ ೬: ಲೋಕಸಭೆಯಲ್ಲಿ ಮಸೂದೆಗೆ ಅನುಮೋದನೆ.
  • ಮೇ ೧೨: ರಾಜ್ಯಸಭೆಯಲ್ಲಿ ಮಸೂದೆ ಮಂಡನೆ. ಜಿಎಸ್‌ಟಿ ದರವನ್ನು ಗರಿಷ್ಠ ಶೇ18ಕ್ಕೆ ನಿಗದಿ ಮಾಡುವಂತೆ ಕಾಂಗ್ರೆಸ್‌ನಿಂದ ಬೇಡಿಕೆ
  • ಮೇ ೧೪: ರಾಜಸ್ಯಸಭೆ ಮತ್ತು ಲೋಕಸಭೆಯ ಜಂಟಿ ಸಮಿತಿ ಮುಂದಕ್ಕೆ ಮಸೂದೆ
  • ಆಗಸ್ಟ್: ರಾಜ್ಯಸಭೆಯಲ್ಲಿ ಮಸೂದೆಗೆ ವಿರೋಧ ಪಕ್ಷಗಳಿಂದ ಬೆಂಬಲ ಪಡೆಯಲು ವಿಫಲವಾದ ಸರ್ಕಾರ
  • ೨೦೧೬ ಜುಲೈ: ಜಿಎಸ್‌ಟಿ ದರವನ್ನು ಗರಿಷ್ಠ ಶೇ18ಕ್ಕೆ ನಿಗದಿ ಮಾಡಲು ನಿರಾಕರಿಸಿದ ಸರ್ಕಾರ
  • ಆಗಸ್ಟ್: ರಾಜ್ಯಸಭೆಯಲ್ಲಿ ಮಸೂದೆಗೆ ಬೆಂಬಲ ನೀಡಲು ಕಾಂಗ್ರೆಸ್ ಒಪ್ಪಿಗೆ. ಮಸೂದೆಗೆ ರಾಜ್ಯಸಭೆಯ ಅನುಮೋದನೆ
  • ಸೆಪ್ಟೆಂಬರ್ ೨: ಮಸೂದೆಗೆ ರಾಷ್ಟ್ರಪತಿಗಳ ಅಂಕಿತ
  • ನವೆಂಬರ್ 3: ಶೇ 5, ಶೇ 12, ಶೇ 18 ಮತ್ತು ಶೇ 28ರಂತೆ ನಾಲ್ಕು ಹಂತದಲ್ಲಿ ತೆರಿಗೆ ವಿಧಿಸಲು ಜಿಎಸ್‌ಟಿ ಮಂಡಳಿ ಒಪ್ಪಿಗೆ. ಇದರ ಮೇಲೆ ಹೆಚ್ಚುವರಿ ಸೆಸ್ ವಿಧಿಸಲು ಅವಕಾಶ
    2017ಜನವರಿ 16
    2017ರ ಜುಲೈ 1ರಂದು ಜಿಎಸ್‌ಟಿ ಜಾರಿ ಘೋಷಣೆ.
.
  • ಕೇಂದ್ರ ಹಣಕಾಸು ಸಚಿವ ಪಳನಿಯಪ್ಪನ್ ಚಿದಂಬರಂ, ೨೦೦೬-೦೭ ಕೇಂದ್ರ ಬಜೆಟ್ ಸಂದರ್ಭದಲ್ಲಿ, ದಿನಾಂಕ ೨೮ ಫೆಬ್ರವರಿ ೨೦೦೬ ಸಂದರ್ಭದಲ್ಲಿ, ಜಿಎಸ್ಟಿಯನ್ನು ಏಪ್ರಿಲ್ ೧, ೨೦೧೦ ರಿಂದ ಜಾರಿಗೊಳಿಸಲು ಒಂದು ಒಂದು ಘೋಷಣೆಯನ್ನು ಮಾಡಿದರು. , ಅದಕ್ಕೆ ಕೇಂದ್ರ ಸರ್ಕಾರದ ಜೊತೆ ರಾಜ್ಯ ಹಣಕಾಸು ಸಚಿವರನ್ನು ಒಳಗೊಂಡ ಒಂದು ಉನ್ನತಾಧಿಕಾರ ಸಮಿತಿಯನ್ನು ರಚಿಸಲಾಯಿತು. ಇದರಲ್ಲಿ ಎಂಬುದನ್ನು ಪರಿಚಯಿಸಲಾಯಿತು ಎಂದು, ಭಾರತದಲ್ಲಿ ಜಿಎಸ್.ಟಿಯನ್ನು ಈ ದಶಕದಲ್ಲಿ ಆರಂಭಗೊಳಿಸಲು ಮಾರ್ಗಸೂಚಿಯನ್ನು ತಯಾರುಮಾಡುವ ಕೆಲಸ ವಹಿಸಲಾಯಿತು.
  • ಈ ಘೋಷಣೆಯ ನಂತರ, ರಾಜ್ಯ ಹಣಕಾಸು ಸಚಿವರು ಉನ್ನತಾಧಿಕಾರ ಸಮಿತಿ ಸಲಹೆಗಾರ ಕೇಂದ್ರ ಹಣಕಾಸು ಸಚಿವರು ಮತ್ತು ಸಹ ನಿರ್ವಾಹಕರು ಸದಸ್ಯ ಕಾರ್ಯದರ್ಶಿಗಳು, ಮತ್ತು ಸಂಬಂಧಪಟ್ಟ ಜಂಟಿ ಕಾರ್ಯದರ್ಶಿಗಳು, ಮೇ ೧೦, ೨೦೦೭ ರಂದು ಜಂಟಿ ವರ್ಕಿಂಗ್ ಗ್ರೂಪ್ ಸ್ಥಾಪಿಸಲು ನಿರ್ಧರಿಸಿದರು. ಇಲಾಖೆ ಕೇಂದ್ರ ಹಣಕಾಸು ಸಚಿವಾಲಯದ ಕಂದಾಯ ಮತ್ತು ಅದರ ಸದಸ್ಯರನ್ನು ರಾಜ್ಯಗಳ ಹಣಕಾಸು ಕಾರ್ಯದರ್ಶಿಗಳ ಜಂಟಿ ಕಾರ್ಯನಿರ್ವಾಹಕ ತಂಡ (ವರ್ಕಿಂಗ್ ಗ್ರೂಪ್), ತಜ್ಞರು ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಚೇಂಬರ್ಸ್ ಪ್ರತಿನಿಧಿಗಳೊಂದಿಗೆ ತೀವ್ರ ಆಂತರಿಕ ಪರಸ್ಪರ ಚರ್ಚೆಗಳ ನಂತರ, ಈಸಮಿತಿಯು ತನ್ನ ವರದಿಯನ್ನು ಉನ್ನತಾಧಿಕಾರ ಸಮಿತಿಗೆ ನವೆಂಬರ್ ೧೯, ೨೦೦೭ ರಂದು ಸಲ್ಲಿಸಿತು..
  • ವರದಿಯನ್ನು ಉನ್ನತಾಧಿಕಾರ ಸಮಿತಿ ಸಭೆಯಲ್ಲಿ ನವೆಂಬರ್ ೨೮ ವಿವರವಾಗಿ ಚರ್ಚಿಸಿದ್ದು, ೨೦೦೭ ರಲ್ಲಿ ಈ ಚರ್ಚೆಯ ಮತ್ತು ರಾಜ್ಯಗಳ ಬರೆದ ಅವಲೋಕನಗಳ ಆಧಾರದ ಮೇಲೆ, ಕೆಲವು ಮಾರ್ಪಾಡುಗಳನ್ನು ಮಾಡಲಾಯಿತು, ಆ ಹಂತದಲ್ಲಿ ವೀಕ್ಷಣೆಗಳು ಉನ್ನತಾಧಿಕಾರ ಸಮಿತಿ ಮತ್ತು ಭಾರತ ಸರ್ಕಾರದಿಂದ ತಯಾರಿಸಲಾದ (ಏಪ್ರಿಲ್ 30, 2008) ಒಂದು ಅಂತಿಮ ಆವೃತ್ತಿಯನ್ನು ಕಳುಹಿಸಲಾಯಿತು. ಸಲಹೆಗಳನ್ನು ಭಾರತ ಸರ್ಕಾರ, ಡಿಸೆಂಬರ್ ೧೨, ೨೦೦೮ ರಂದು ಸ್ವೀಕರಿಸಿತು, ಮತ್ತು ಉನ್ನತಾಧಿಕಾರ ಸಮಿತಿಯಿಂದ (ಡಿಸೆಂ.6, 2008ರಲ್ಲಿ) ಪರಿಗಣಿಸಲಾಗಿತ್ತು.

ಜಿ.ಎಸ್.ಟಿ.ಗೆ ಮೊದಲು ಇದ್ದ ತೆರಿಗೆಗಳು ಜಾರಿಯಾದ ವರ್ಷ

  • ಜಿಎಸ್‌ಟಿ ಜಾರಿಗೆ ಬರುವುದರೊಂದಿಗೆ ಅಬಕಾರಿ ಸುಂಕ, ಮೌಲ್ಯವರ್ಧಿತ ತೆರಿಗೆ, ಸೇವಾ ತೆರಿಗೆ, ಐಷಾರಾಮ ತೆರಿಗೆ ಮತ್ತು ಆಕ್ಟ್ರಾಯ್‌ ಸೇರಿದಂತೆ ಎಲ್ಲ ಪರೋಕ್ಷ ತೆರಿಗೆಗಳು ರದ್ದಾಗಲಿವೆ.
ತೆರಿಗೆ ಜಾರಿಯಾದ ಇಸವಿ
ಮಾರಾಟ ತೆರಿಗೆ 1957
ಸೇವಾ ತೆರಿಗೆ 1994
ಕೇಂದ್ರೀಯ ವ್ಯಾಟ್‌ 2000
ಅಬಕಾರಿ ಸುಂಕ 1985
ಪ್ರವೇಶ ತೆರಿಗೆ 2000
ಮೌಲ್ಯವರ್ಧಿತ ತೆರಿಗೆ 2005

ಸಂಕ್ಷಿಪ್ತ ಇತಿಹಾಸ

ಇಸವಿ ಘಟನೆ
2000 ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಸರ್ಕಾರದಿಂದ ಜಿಎಸ್‌ಟಿ ಕರಡು ರೂಪಿಸಲು, ಪಶ್ಚಿಮ ಬಂಗಾಳದ ಹಣ ಕಾಸು ಸಚಿವ ಆಸಿಂ ದಾಸ್‌ಗುಪ್ತಾ ನೇತೃತ್ವದ ಸಮಿತಿ ರಚನೆ.
2003 ವ್ಯಾಟ್‌ ತತ್ವದ ಆಧಾರದಲ್ಲಿಯೇ ಸಮಗ್ರ ಜಿಎಸ್‌ಟಿ ಜಾರಿಗೆ ತರುವಂತೆ ಪರೋಕ್ಷ ತೆರಿಗೆಗಳ ಮೇಲಿನ ಕೇಳ್ಕರ್‌ ಕಾರ್ಯಪಡೆಯಿಂದ ಶಿಫಾರಸ್ಸು
2006 2006–07ರ ಬಜೆಟ್‌ ಭಾಷಣದಲ್ಲಿ 2010ರ ಏಪ್ರಿಲ್‌ 1ರೊಳಗೆ ರಾಷ್ಟ್ರಮಟ್ಟದಲ್ಲಿ ಜಿಎಸ್‌ಟಿ ಬಗ್ಗೆ ಹಣಕಾಸು ಸಚಿವ ಪಿ.ಚಿದಂಬರಂ ಅವರಿಂದ ಲೋಕ ಸಭೆಯಲ್ಲಿ ಪ್ರಸ್ತಾಪ; ರಾಜ್ಯಗಳ ಹಣಕಾಸು ಸಚಿವರ ಉನ್ನತಾಧಿಕಾರ ಸಮಿತಿಗೆ ಜಿಎಸ್‌ಟಿ ಮಸೂದೆಯ ಕರಡು ಮತ್ತು ನೀಲಕನ್ಷೆಯನ್ನು ನೀಡಲಾಯಿತು.
2009 ನವೆಂಬರ್‌: ಉನ್ನತಾಧಿಕಾರ ಸಮಿ ತಿ ಜಿಎಸ್‌ಟಿ ಬಗೆಗಿನ ಮೊದಲ ಚರ್ಚಾ ಪ್ರಬಂಧವನ್ನು ಬಿಡುಗಡೆ ಮಾಡಿತು. 2010ರ ಏ.1ರಿಂದ ಜಾರಿಯ ಗುರಿ 2009: ಉನ್ನತಾಧಿಕಾರವುಳ್ಳ ಸಚಿವರ ಸಮಿತಿಯು ಜಿಎಸ್‌ಟಿ ಹೇಗಿರಬೇಕು ಎಂಬುದರ ಕುರಿತ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತು.
2011 ಎಲ್ಲಾ ಸರಕು ಮತ್ತು ಸೇವೆಗಳ ಮೇಲೆ ಜಿಎಸ್‌ಟಿ ಜಾರಿಗೊಳಿಸುವ ಸಂವಿಧಾನದ 115ನೇ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಮಂಡನೆ. ಮಸೂದೆ ಸ್ಥಾಯಿ ಸಮಿತಿಗೆ ರವಾನೆ; 2011: ಕೇಂದ್ರ ಹಣಕಾಸು ಬಜೆಟ್‌ ಮಂಡಿಸಿದ ಸಚಿವ ಪ್ರಣಬ್‌ಮುಖರ್ಜಿ ಅವರಿಂದ 2011ರ ಏ.1ರಿಂದ ಜಿಎಸ್‌ಟಿ ಜಾರಿಯಾಗುವ ವಿಶ್ವಾಸ.
2013 ಬಿಜೆಪಿ ಆಡಳಿತದ ಗುಜರಾತ್‌ ಸೇರಿದಂತೆ ಹಲವು ರಾಜ್ಯಗಳ ವಿರೋಧ. ಹೀಗಾಗಿ ಲೋಕಸಭೆಯಲ್ಲಿ ಮಸೂದೆ ರದ್ದಾಯಿತು.
2014 ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ನೇತೃತ್ವದ ಎನ್‌ಡಿಎ ಯಿಂದ ಪರಿಷ್ಕೃತ ಮಸೂದೆ 2014 ಡಿ.9,ಮಂಡನೆ.
2015
  1. ಮೇ 6:ಸಂವಿಧಾನಕ್ಕೆ 122ನೇ ತಿದ್ದುಪಡಿ ತರುವ ಮಸೂದೆಗೆ ಲೋಕಸಭೆಯ ಅಂಗೀಕಾರ; ಮತ್ತೆ ರಾಜ್ಯಸಭೆಯ ಆಯ್ಕೆ ಸಮಿತಿಗೆ ಸಲ್ಲಿಕೆ,
  2. 2015ರ ಜುಲೈ 22ರಂದು ವರದಿ ಸಲ್ಲಿಕೆ;ಕಾಂಗ್ರೆಸ್‌ ಮತ್ತು ಇತರ ವಿರೋಧ ಪಕ್ಷಗಳ ಜತೆ ಸಮಾಲೋಚನೆ ನಡೆಸಿ ಮತ್ತೆ ಮಸೂದೆ ಪರಿಷ್ಕರಿಸಿದ ಸರ್ಕಾರ
2016
  1. ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ರಾಜ್ಯಸಭೆಯಲ್ಲಿ ಜಿಎಸ್‌ಟಿ ಮಸೂದೆ ಮಂಡನೆ.
  2. 2016 ಆಗಸ್ಟ್‌ 3: ಕೊನೆಗೂ ರಾಜ್ಯಸಭೆಯಲ್ಲಿ ಮಸೂದೆಗೆ ಅಂಗೀಕಾರ.
2017

2017 ಜೂನ್ 30ರ ಮಧ್ಯ ರಾತ್ರಿ ಸಂಸತ್ ಭವನದ ಐತಿಹಾಸಿಕ ಸೆಂಟ್ರಲ್ ಹಾಲ್ ನಲ್ಲಿ ಕರೆಯಲಾಗಿದ್ದ ವಿಶೇಷ ಜಂಟೀ ಅಧಿವೇಶನದಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಸಮ್ಮುಖದಲ್ಲಿ ಜಿ ಎಸ್ ಟಿ ಲೋಕಾರ್ಪಣೆ. ದೇಶದಾದ್ಯಂತ ಅಧೀಕೃತವಾಗಿ ಏಕ ರೂಪ ತೆರಿಗೆ ವ್ಯವಸ್ಥೆ ಜಾರಿ.

೨೦೧೬ ಆಗಸ್ಟ್ ಮಸೂದೆ ರಾಜ್ಯಸಭೆಯಲ್ಲಿ

  • 2016 ಆಗಸ್ಟ್ 3 ರಂದು ಕೇಂದ್ರ ಹಣಕಾಸು ಮಂತ್ರಿ ಅರುಣ್ ಜೇಟ್ಲಿಯವರು ಸರಕು ಮತ್ತು ಸೇವಾ ತೆರಿಗೆ ಮಸೂದೆಯನ್ನು(ಬಿಲ್) ಅಥವಾ ಜಿ.ಎಸ್.ಟಿ ಮಸೂದೆ (ಬಿಲ್)ಯನ್ನು ರಾಜ್ಯ ಸಭೆಯಲ್ಲಿ ಒಪ್ಪಿಗೆಗಾಗಿ ಮಂಡಿಸಿದ್ದಾರೆ.
  • 2016 ಆಗಸ್ಟ್ 3 ಬುಧವಾರ ರಾಜ್ಯಸಭೆಯಲ್ಲಿ ಸಂವಿಧಾನ ತಿದ್ದುಪಡಿ ಬಿಲ್ ಅಂಗೀಕಾರದ ನಿರೀಕ್ಷೆಯಲ್ಲಿದೆ. ಈಗಾಗಲೇ ಅದು ಲೋಕಸಭೆಯಲ್ಲಿ ಅಂಗೀಕಾರವಾಗಿದೆ. ಈಗ ರಾಷ್ಟ್ರವ್ಯಾಪಿ ಸರಕು ಮತ್ತು ಸೇವೆಗಳ ತೆರಿಗೆ (ಜಿ.ಎಸ್.ಟಿ.) ತೆರಿಗೆ ದರಗಳ ಬಗೆಗೆ ಗಮನಕೊಡಲಾಗುತ್ತಿದೆ. ಹೊಸ ಪದ್ಧತಿಯಡಿಯಲ್ಲಿ, ರಾಜ್ಯಗಳು ಮತ್ತು ಕೇಂದ್ರವು ಸರಕು ಮತ್ತು ಸೇವೆಗಳ ಮೇಲೆ ಒಂದೇ ತೆರಿಗೆ ದರಗಳನ್ನು ಸಂಗ್ರಹಿಸುತ್ತವೆ. ಉದಾಹರಣೆಗೆ, ದೇಶಾದ್ಯಂತ 18% ಜಿ.ಎಸ್.ಟಿ. ಉತ್ತಮ ದರ; ಇದರಂತೆ ರಾಜ್ಯಗಳು ಮತ್ತು ಕೇಂದ್ರ ತಲಾ 9% ಕೇಂದ್ರ ಜಿ.ಎಸ್.ಟಿ. ಮತ್ತು ರಾಜ್ಯ ಜಿ.ಎಸ್.ಟಿ. ಪಡೆಯುತ್ತವೆ, (Central CGST and State SGST)

ಜಿ.ಎಸ್.ಟಿ.ತೆರಿಗೆ ವಿವರ

    ಜಿ.ಎಸ್ ಟಿ. ತೆರಿಗೆ-Goods and Services Tax;
  • ಉತ್ಪಾದನೆ,ಮಾರಾಟ,ಬಳಕೆ ವಸ್ತುಗಳು ಮತ್ತು ಸೇವೆಗಳ ಮೇಲೆ ರಾಷ್ಟ್ರೀಯ ಮಟ್ಟದಲ್ಲಿ ಹೇರಲಾಗುವ ಸಮಗ್ರ ತೆರಿಗೆಗೆ ಸರಕು ಮತ್ತು ಸೇವಾ ತೆರಿಗೆ ಎಂದು ಕರೆಯಲಾಗುತ್ತದೆ. ಇದು ಭಾರತದ ಅತಿ ದೊಡ್ಡ ಸೇವಾ ತೆರಿಗೆಗಳಲ್ಲೊಂದು ಎಂದು ಹೇಳಲಾಗುತ್ತದೆ. ಸರಳವಾಗಿ ಹೇಳಬೇಕೆಂದರೆ, ಗ್ರಾಹಕರು ವಸ್ತುಗಳನ್ನು ಖರೀದಿಸುವಾಗ ಅಥವಾ ಸೇವೆಗಳನ್ನು ಪಡೆದುಕೊಳ್ಳುವಾಗ ಪ್ರತಿ ಹಂತದಲ್ಲಿಯೂ ವಿಧಿಸುವ ತೆರಿಗೆಯಾಗಿರುತ್ತದೆ. ಈ ತೆರಿಗೆ ವಿಧಾನ ಈಗಾಗಲೇ ವಿಶ್ವದ 150 ದೇಶಗಳಲ್ಲಿ ಜಾರಿಯಲ್ಲಿದೆ. ಇದು ಇಡೀ ದೇಶವನ್ನು ಸಮಾನ ಮಾರುಕಟ್ಟೆಯಡಿ ತರಲಿದ್ದು, ಎಲ್ಲಾ ಪರೋಕ್ಷ ತೆರಿಗೆಗಳನ್ನು ಬದಲಾಯಿಸಿ ಒಂದೇ ತೆರಿಗೆ ವ್ಯವಸ್ಥೆಯಡಿ ತರಲಿದೆ.
ಆರ್ಥಿಕ ಮುನ್ನಡೆಯ ಉದ್ದೇಶ
  • ಮೂಲತಃ ಜಿಎಸ್‌ಟಿ, ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಶಿಶು;
  • ಜಿಎಸ್‌ಟಿ ಫಲವಾಗಿ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಶೇ 1ರಿಂದ 2 ರಷ್ಟು ಹೆಚ್ಚಳ ಸಾಧ್ಯತೆ;
  • ಒಟ್ಟು ರಾಷ್ಟ್ರೀಯ ಉತ್ಪನ್ನವನ್ನು (ಜಿಡಿಪಿ) ಹೆಚ್ಚಿಸಿ ಅರ್ಥ ವ್ಯವಸ್ಥೆಯನ್ನು ಪ್ರಗತಿಯ ಪಥದತ್ತ ಒಯ್ಯುವ ಪಥ;
  • ಉದ್ಯಮ, ಕೈಗಾರಿಕೆ ಮತ್ತು ಉತ್ಪಾದನಾ ವಲಯಗಳ ಚೇತರಿಕೆ;
  • ವಿದೇಶಿ ಬಂಡವಾಳ ಹೂಡಿಕೆದಾರರಲ್ಲಿ ವಿಶ್ವಾಸ, ಭರವಸೆ. ವಿದೇಶಿ ಬಂಡವಾಳ ವೃದ್ಧಿ;
  • ಹೆಚ್ಚೆಚ್ಚು ಉದ್ಯೋಗ ಸೃಷ್ಟಿಗೆ ಅನುಕೂಲ;
  • ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಧ್ಯೆ ಹೊಸ ಸಹಕಾರದ ಭಾಷ್ಯೆ;
  • ತೆರಿಗೆ ತಪ್ಪಿಸುವ ಚಾಳಿ ದೂರವಾಗಿ ತೆರಿಗೆ ಪಾವತಿಯೂ ಹೆಚ್ಚಲಿದೆ;
  • ವಿತ್ತೀಯ ಶಿಸ್ತನ್ನು ಪಾಲಿಸಲು ಸರ್ಕಾರಕ್ಕೆ ನೆರವು, ಹಣದುಬ್ಬರ ನಿಯಂತ್ರಣ;
.

ಜಿ.ಎಸ್.ಟಿ ಅಗತ್ಯ

  • ಪ್ರಸ್ತುತ ನಮ್ಮ ದೇಶದಲ್ಲಿ ವಿವಿಧ ರೀತಿಯ ತೆರಿಗೆ ವಿಧಾನಗಳಿವೆ. ಕೇಂದ್ರ ಮತ್ತು ಅಬಕಾರಿ ಸುಂಕ , ಸೇವಾ ತೆರಿಗೆ ಮತ್ತು ಕಸ್ಟಮ್ಸ್ ತೆರಿಗೆಗಳನ್ನು ಕೇಂದ್ರ ಸರ್ಕಾರ ಹಾಕುವುದಿದ್ದರೆ, ಮೌಲ್ಯವರ್ಧಿತ ತೆರಿಗೆವ್ಯಾಟ್ ), ಮನರಂಜನಾ ತೆರಿಗೆ, ಐಷಾರಾಮಿ ತೆರಿಗೆ ಅಥವಾ ಲಾಟರಿ ತೆರಿಗೆಗಳನ್ನು ಆಯಾ ರಾಜ್ಯ ಸರಕಾರಗಳು ವಿಭಿನ್ನವಾಗಿ ನಿಭಾಯಿಸುತ್ತವೆ. ಈ ಎಲ್ಲಾ ತೆರಿಗೆಗಳನ್ನು ಒಂದೇ ತೆರಿಗೆ ವಿಧಾನದಡಿ ತರಲು ಜಿಎಸ್ ಟಿಯನ್ನು ಜಾರಿಗೆ ತರಲಾಗುತ್ತದೆ.
  • ಇದರಿಂದ ದೇಶಾದ್ಯಂತ ಯಾವುದೇ ಅಡೆತಡೆಯಿಲ್ಲದೆ ವಹಿವಾಟು ನಡೆಸಬಹುದು. ವಹಿವಾಟು ವೆಚ್ಚ ಕೂಡ ಕಡಿಮೆಯಾಗುತ್ತದೆ. ಭಾರತದ ಆರ್ಥಿಕ ಮಟ್ಟ ಸುಧಾರಣೆಯಾಗುತ್ತಿರುವ ಇಂದಿನ ದಿನಗಳಲ್ಲಿ ಈ ತೆರಿಗೆ ಪದ್ದತಿ ಪ್ರಸ್ತುತವಾಗಿದೆ.ಇದು ಭ್ರಷ್ಟತೆಯನ್ನು ಕಡಿಮೆ ಮಾಡಿ ಹೆಚ್ಚು ಪಾರದರ್ಶಕವಾಗಿ ಆಡಳಿತ ನಡೆಸಲು ಅನುಕೂಲವಾಗುತ್ತದೆ.

ಅನುಕೂಲ

  • ಪ್ರಸ್ತುತ ಭಾರತದಲ್ಲಿರುವ ತೆರಿಗೆ ಪದ್ದತಿ ತುಂಬಾ ಸಂಕೀರ್ಣವಾಗಿದೆ. ಯಾವುದೇ ವ್ಯಾಪಾರ-ವಹಿವಾಟು ನಡೆಸಲು ಕಾನೂನು ಕಟ್ಟಳೆಗಳನ್ನು ಈಡೇರಿಸಬೇಕಾಗುತ್ತದೆ. ಜಿಎಸ್ ಟಿ ತೆರಿಗೆ ವಿಧಾನಗಳನ್ನು ಸರಳಗೊಳಿಸಿ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುತ್ತದೆ. ಇದರಿಂದ ಅಂತಿಮವಾಗಿ ಗ್ರಾಹಕರಿಗೆ ಅನುಕೂಲವಾಗುತ್ತದೆ. ಅಲ್ಲದೆ ಭಾರತದ ಜಿಡಿಪಿ ( ಸಮಗ್ರ ದೇಶೀಯ ಉತ್ಪನ್ನ ) ಮತ್ತು ಆದಾಯ ಹೆಚ್ಚಾಗಲಿದ್ದು, ಗ್ರಾಹಕರಿಗೆ ಈ ತೆರಿಗೆಯಿಂದ ಪರೋಕ್ಷ ಲಾಭ ಹೆಚ್ಚಿದೆ. ಭಾರತದ ಆದಾಯ ಹೆಚ್ಚಲು ಹೆಚ್ಚು ಅನುಕೂಲವಾಗಿದೆ. ಜಿಎಸ್ಟಿಯಿಂದ ಭಾರತದ ಒಟ್ಟಾರೆ ಜಿಡಿಪಿ ಮತ್ತು ಒಟ್ಟು ಆದಾಯ ಸಂಗ್ರಹಣೆ ಹೆಚ್ಚಾಗುತ್ತದೆ.ವಿದೇಶಗಳಿಗೆ ಹೆಚ್ಚು ರಫ್ತು ಆಗಲಿದ್ದು, ವಿದೇಶಿ ಹೂಡಿಕೆದಾರರನ್ನು ಆಕರ್ಷಿಸುತ್ತದೆ. ಉದ್ಯೋಗ ಉತ್ತೇಜಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.

ವಹಿವಾಟು ಮೇಲೆ ಜಿ.ಎಸ್ ಟಿ. ಪರಿಣಾಮ

  • ಸರಕು ಮತ್ತು ಸೇವಾ ತೆರಿಗೆಯನ್ನು ಅತ್ಯಂತ ಸರಳವಾಗಿ ಹೇಳುವುದಾದರೆ,ಒಂದು ಉತ್ಪಾದನಾ ಘಟಕವನ್ನು ತೆರೆದರೆ, ಇದಕ್ಕೆ ಕೇಂದ್ರ ಸರ್ಕಾರಕ್ಕೆ ತೆರಿಗೆ ಕಟ್ಟಬೇಕು ಜೊತೆಗೆ ಪ್ರತ್ಯೇಕ ರಿಟರ್ನ್ ಫೈಲ್ ಮಾಡಬೇಕು. ಆದರೆ ಬೇರೆ ಚಿಲ್ಲರೆ ಗ್ರಾಹಕರಿಗೆ ನಿಮ್ಮ ಉತ್ಪನ್ನಗಳನ್ನು ಪೂರೈಸುವಾಗ ತೆರಿಗೆ ಕಟ್ಟಬೇಕಾಗಿಲ್ಲ ಹಾಗೂ ರಿಟರ್ನ್ ಫೈಲ್ ಮಾಡಬೇಕಾಗಿಲ್ಲ. ಜಿ ಎಸ್ ಟಿ ಇಡೀ ದೇಶಕ್ಕೆ ಏಕರೂಪ ತೆರಿಗೆ ವಿಧಾನವಾಗಿರುವುದರಿಂದ ಬೇರೆ ರಾಜ್ಯಗಳಲ್ಲಿ ಕಂಪೆನಿ ಆರಂಭಿಸಬೇಕೆಂದಿದ್ದರೆ ಅಲ್ಲಿ ತೆರಿಗೆ ಕಟ್ಟಬೇಕಾಗಿಲ್ಲ. ಹಾಗಾಗಿ ಇದು ಸರಳವೆನಿಸುತ್ತದೆ. ಆದುದರಿಂದ ಈ ಹೊಸ ತೆರಿಗೆ ನಮ್ಮ ಜೀವನವನ್ನು ಸಂಕೀರ್ಣದಿಂದ ಸರಳತೆಗೆ ತರಬಹುದು.

ರಾಜ್ಯಗಳ ಸಮಸ್ಯೆ

  • ಬಹುತೇಕ ಎಲ್ಲಾ ರಾಜ್ಯಗಳಿಗೆ ಅಬಕಾರಿ, ತಂಬಾಕು, ಪೆಟ್ರೋಲಿಯಂ ಉತ್ಪನ್ನಗಳ ಮೇಲಿಂದ ಬರುವ ಆದಾಯ ಪ್ರಮುಖವಾದದ್ದು. ಹೀಗಾಗಿ ಇವುಗಳನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗೆ ಇಡಬೇಕು ಎಂದು ಹಲವು ರಾಜ್ಯಗಳು ಮನವಿ ಮಾಡಿದ್ದವು. ಜಿಎಸ್‌ಟಿ ಜಾರಿಯಿಂದ ತಮಗೆ ಭಾರೀ ಆದಾಯ ನಷ್ಟ ಆಗುತ್ತದೆ. ಇದನ್ನು ಕೇಂದ್ರ ಸರ್ಕಾರ ಭರಿಸಬೇಕು ಎಂಬುದು ಬಹುತೇಕ ರಾಜ್ಯಗಳ ಬೇಡಿಕೆಯಾಗಿತ್ತು.
  • ಕೇಂದ್ರ ಜಿಎಸ್‌ಟಿ ಮತ್ತು ರಾಜ್ಯ ಜಿಎಸ್‌ಟಿ ಜೊತೆಗೆ, ಅಂತಾರಾಜ್ಯ ವಹಿವಾಟಿನ ಮೇಲೆ ಶೇ.1ರಷ್ಟು ತೆರಿಗೆ ವಿಧಿಸುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಮಾಡಿತ್ತು. ಇದಕ್ಕೆ ಕೆಲ ರಾಜ್ಯಗಳು ಮತ್ತು ಪ್ರಮುಖವಾಗಿ ಕಾಂಗ್ರೆಸ್‌ ವಿರೋಧಿಸಿತ್ತು. ಜಿಎಸ್‌ಟಿ ದರವನ್ನು ಸಂವಿಧಾನದ ತಿದ್ದುಪಡಿ ಮಸೂದೆಯಲ್ಲೇ ಸೇರಿಸಬೇಕು ಎಂಬುದು ಕಾಂಗ್ರೆಸ್‌ನ ಪ್ರಮುಖ ಬೇಡಿಕೆಯಾಗಿತ್ತು. ಮಸೂದೆ ಜಾರಿಯಿಂದ ಏಳುವ ಪ್ರಶ್ನೆಗಳು, ವಿವಾದ ಬಗೆಹರಿಸಲು ನ್ಯಾಯಾಧಿಕರಣ ಸ್ಥಾಪಿಸಬೇಕೆಂಬ ಒತ್ತಾಯ ಕೇಳಿಬಂದಿತ್ತು.
  • ಶೇ.1ರಷ್ಟು ಅಂತಾರಾಜ್ಯ ತೆರಿಗೆ ರದ್ದು:
  • ಜಿಎಸ್‌ಟಿ ಜಾರಿಯಿಂದ ಉತ್ಪಾದನೆ ಮೇಲಿನ ತೆರಿಗೆಯನ್ನೇ ನಂಬಿರುವ ತಮಿಳುನಾಡು, ಗುಜರಾತ್‌ ರಾಜ್ಯಗಳಿಗೆ ಭಾರೀ ನಷ್ಟ ಆಗುತ್ತಿತ್ತು. ಈ ಹಿನ್ನೆಲೆಯಲ್ಲಿ ಅವುಗಳ ಬೇಡಿಕೆ ಹಿನ್ನೆಲೆಯಲ್ಲಿ ಅಂತಾರಾಜ್ಯ ವಹಿವಾಟಿನ ಮೇಲೆ ಶೇ.1ರಷ್ಟು ಹೆಚ್ಚುವರಿ ತೆರಿಗೆಯನ್ನು ಸಂಗ್ರಹಿಸುವ ಇರಾದೆ ಸರ್ಕಾರದ್ದಾಗಿತ್ತು. ಆದರೆ ಇದಕ್ಕೆ ಕಾಂಗ್ರೆಸ್‌ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಹೀಗಾಗಿ ಆ ಪ್ರಸ್ತಾಪವನ್ನು ಸರ್ಕಾರ ಕೈಬಿಟ್ಟಿತು.
  • ಇದುವರೆಗೆ ರಾಜ್ಯಗಳು ಪ್ರತಿ ವರ್ಷ ಬಜೆಟ್‌ ಮಂಡನೆ ವೇಳೆ ತಮಗೆ ಇಷ್ಟಬಂದಷ್ಟು ತೆರಿಗೆ ವಿಧಿಸಬಹುದಾಗಿತ್ತು. ಆದರೆ ಜಿಎಸ್‌ಟಿ ಜಾರಿ ಬಳಿಕ ಇದಕ್ಕೆಲ್ಲಾ ತಡೆ ಬೀಳಲಿದೆ. ಇನ್ನು ಮನಬಂದಂತೆ ತೆರಿಗೆ ಹಾಕುವಂತಿಲ್ಲ.

ರಾಜ್ಯಗಳ ಸಮಸ್ಯೆಯ ಪರಿಹಾರ

  • ರಾಜ್ಯಗಳ ಬೇಡಿಕೆಯಂತೆ ಅಬಕಾರಿ, ತಂಬಾಕು ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ಸದ್ಯಕ್ಕೆ ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗೆ ಇಡಲಾಗಿದೆ. ಇವುಗಳಿಗೆ ಯಾವುದೇ ರೀತಿಯ ತೆರಿಗೆ ವಿಧಿಸುವ ಅಧಿಕಾರ ರಾಜ್ಯಗಳ ಬಳಿಯೇ ಉಳಿಯಲಿದೆ.
  • ಜಿಎಸ್‌ಟಿ ಜಾರಿಯಿಂದ ರಾಜ್ಯಗಳಿಗೆ ಆಗುವ ನಷ್ಟವನ್ನು ಮುಂದಿನ 5 ವರ್ಷಗಳ ಕಾಲ ಭರಿಸುವ ಅಂಶವನ್ನು ಸಂವಿಧಾನದ ತಿದ್ದುಪಡಿ ಮಸೂದೆಯಲ್ಲೇ ಸೇರಿಸಲಾಗಿದೆ. ಅಂತಾರಾಜ್ಯ ವಹಿವಾಟಿಗೆ ಶೇ.1ರಷ್ಟು ತೆರಿಗೆ ವಿಧಿಸುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಕೈಬಿಟ್ಟಿದೆ.
  • ಜಿಎಸ್‌ಟಿ ದರವನ್ನು ಸಂವಿಧಾನದ ತಿದ್ದುಪಡಿ ಮಸೂದೆಯಲ್ಲಿ ಸೇರಿಸುವುದು ಸಾಧ್ಯವಾಗದು ಎಂಬ ಅಂಶವನ್ನು ಕಾಂಗ್ರೆಸ್‌ ಹೊರತುಪಡಿಸಿ ಉಳಿದ ವಿಪಕ್ಷಗಳಿಗೆ ಮನವರಿಕೆ ಮಾಡಿಕೊಡುವಲ್ಲಿ ಸರ್ಕಾರ ಸಫ‌ಲವಾಯ್ತು. ಮಸೂದೆ ಜಾರಿಯಿಂದ ಏಳಬಹುದಾದ ವಿವಾದಗಳ ಇತ್ಯರ್ಥಕ್ಕೆ ವ್ಯವಸ್ಥೆ ಜಾರಿಗೊಳಿಸುವ ಹೊಣೆಯನ್ನು ಜಿಎಸ್‌ಟಿ ಮಂಡಳಿಗೆ ವಹಿಸಲಾಗಿದೆ.

ಮಸೂದೆ ಅಂಗೀಕಾರಕ್ಕಾಗಿ ತಿದ್ದುಪಡಿ

  • ರಾಜ್ಯಸಭೆಯಲ್ಲಿ ಎನ್‌ಡಿಎ ಸರ್ಕಾರಕ್ಕೆ ಬಹುಮತ ಇಲ್ಲದ ಕಾರಣ ಇಷ್ಟು ದಿನ ಮಸೂದೆ ಅಂಗೀಕಾರ ಕಷ್ಟವಾಗಿತ್ತು. ಅದರೆ ವಿಪಕ್ಷಗಳು ಸೂಚಿಸಿದ್ದ ಹಲವು ಅಂಶಗಳನ್ನು ಇದೀಗ ಪರಿಷ್ಕೃತ ಮಸೂದೆಯಲ್ಲಿ ಸೇರಿಸಿ ಅದನ್ನು ರಾಜ್ಯಸಭೆಯಲ್ಲಿ ಮಂಡಿಸಲು ನಿರ್ಧರಿಸಿದೆ.
  • ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರವಾದ ಬಳಿಕ ಇದನ್ನು ಲೋಕಸಭೆಯಲ್ಲೂ ಮಂಡಿಸಿ ಅಂಗೀಕಾರ ಪಡೆಯಲಾಗುತ್ತದೆ. ಇದು ಸಂವಿಧಾನ ತಿದ್ದುಪಡಿ ಮಸೂದೆಯಾದ ಕಾರಣ ಎರಡೂ ಸದನಗಳಲ್ಲಿ ಇದು ಮೂರನೇ ಎರಡರಷ್ಟು ಬಹುಮತದಿಂದ ಅಂಗೀಕಾರಗೊಳ್ಳಬೇಕು. ಜೊತೆಗೆ ಎಲ್ಲಾ ರಾಜ್ಯಗಳು ತಮ್ಮ ತಮ್ಮ ವಿಧಾನಸಭೆ ಮತ್ತು ವಿಧಾನಪರಿಷತ್‌ನಲ್ಲಿ ಇದಕ್ಕೆ ಅಂಗೀಕಾರ ಪಡೆಯಬೇಕು. ಹೀಗೆ ಎಲ್ಲಾ ರಾಜ್ಯಗಳು ಒಪ್ಪಿಗೆ ಸೂಚಿಸಿದ ಬಳಿಕವಷ್ಟೇ ಮಸೂದೆ ಜಾರಿಯಾಗುತ್ತದೆ. ಮಸೂದೆಗೆ ಕಾಯ್ದೆ ರೂಪ ದೊರೆತು 2017ರ ಏಪ್ರಿಲ್‌ 1ರಿಂದ ಜಿಎಸ್‌ಟಿ ಅನುಷ್ಠಾನಗೊಳಿಸುವ ಗುರಿ ಕೇಂದ್ರ ಸರ್ಕಾರದ್ದು.

ಜಿಎಸ್‌ಟಿ ತೆರಿಗೆಯ ಪರಿಣಾಮ

ಹೊಸ ತೆರಿಗೆಯ ವಿಶೇಷ
  • ಒಟ್ಟು 150 ದೇಶಗಳಲ್ಲಿ ಜಿಎಸ್‌ಟಿ ಅಸ್ತಿತ್ವದಲ್ಲಿದೆ;
  • ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಘಟನೆಯ ಎಲ್ಲ ದೇಶಗಳಲ್ಲಿಯೂ ಜಿಎಸ್‌ಟಿ ಇದೆ,(ಅಮೆರಿಕ ಹೊರತುಪಡಿಸಿ);
  • ಈಗ ರಾಜ್ಯಗಳು ಮಾರಾಟ ತೆರಿಗೆ ಮಾತ್ರ ವಿಧಿಸುತ್ತಿವೆ. ಸೇವಾ ತೆರಿಗೆ ರಾಜ್ಯಕ್ಕೆ ಇಲ್ಲ;
  • ತಯಾರಿಕೆ ಮೇಲೆ ಕೇಂದ್ರ ತೆರಿಗೆ ವಿಧಿಸುತ್ತದೆ. ಆದರೆ ಸಗಟು ಮತ್ತು ಚಿಲ್ಲರೆ ಮಾರಾಟದ ಮೇಲೆ ಕೇಂದ್ರದ ತೆರಿಗೆ ಇಲ್ಲ;
  • ತೆರಿಗೆ ವಿಷಯದಲ್ಲಿ ಎಲ್ಲ ರಾಜ್ಯಗಳು ಈಗ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿವೆ, ಇನ್ನು ಮುಂದೆ ಇಲ್ಲ;
  • ಜಿಎಸ್‌ಟಿಯಿಂದಾಗಿ ಕಾರ್ಯನಿರ್ವಹಣಾ ವೆಚ್ಚ ಕಡಿತವಾಗಲಿದೆ;
.
ಹೊಸ ತೆರಿಗೆಯ ಪ್ರಯೋಜನ
  • ೧.ಸರಳೀಕೃತ ತೆರಿಗೆ ಪದ್ಧತಿ ಜಾರಿ.
  • ೨.ಜಿಡಿಪಿ ಪ್ರಗತಿ ದರ ಶೇ.2ರಷ್ಟು ಹೆಚ್ಚಾಗುವ ನಿರೀಕ್ಷೆ.
  • ೩.ಗ್ರಾಹಕರಿಗೆ ಸರಕು, ಸೇವೆಗಳು ಅಗ್ಗದ ದರದಲ್ಲಿ ಲಭ್ಯ.
  • ೪.ಹೂಡಿಕೆದಾರರಿಗೆ ಉದ್ಯಮಿ ಸ್ನೇಹಿ ವಾತಾವರಣ.
  • ೫.ತೆರಿಗೆ ಹೊರೆಯು ಉತ್ಪಾದನೆ ಮತ್ತು ಸೇವೆಯ ಮೇಲೆ ಸಮನಾಗಿ ಹಂಚಿಕೆ.
  • ೬.ತೆರಿಗೆ ಜಾಲ ಇನ್ನಷ್ಟು ವಿಸ್ತರಣೆ,
  • *ಹೆಚ್ಚಿನ ತೆರಿಗೆ ಸಂಗ್ರಹ „ ಪಾರದರ್ಶಕ,
  • *ಭ್ರಷ್ಟಾಚಾರ ಮುಕ್ತ ತೆರಿಗೆ ವ್ಯವಸ್ಥೆ. „
  • ೭.ತೆರಿಗೆ ವ್ಯಾಪ್ತಿ ಹೆಚ್ಚಳ.
  • ೮.ಹಾಗಾಗಿ, ಕೇಂದ್ರ, ರಾಜ್ಯ ಸರ್ಕಾರಗಳಿಗೆ ವಾರ್ಷಿಕ
  • *1 ಲಕ್ಷ ಕೋಟಿ ರೂ. ಹೆಚ್ಚುವರಿ ಆದಾಯ ನಿರೀಕ್ಷೆ.
.

ಅನುಕೂಲಗಳು

  • ಗ್ರಾಹಕರಿಗೂ ಲಾಭವಿದೆ:ಉದಾಹರಣೆಗೆ ಸದ್ಯ 300 ರೂ.ಬೆಲೆ ಬಾಳುವ 1 ಚೀಲ ಸಿಮೆಂಟ್‌ ಮೇಲೆ ಕೇಂದ್ರ ಮತ್ತು ರಾಜ್ಯಗಳು ವಿಧಿಸುವ ತೆರಿಗೆ ಪ್ರಮಾಣ 66 ರೂ. ಇದೆ. ಜಿಎಸ್‌ಟಿ ಜಾರಿ ಬಳಿಕ ಇದು 44 ರೂ.ಗೆ ಇಳಿಯಲಿದೆ.
  • ಸರ್ಕಾರಕ್ಕೂ ಲಾಭ:ಬಹುತೇಕ ಎಲ್ಲಾ ವಸ್ತುಗಳು ತೆರಿಗೆ ವ್ಯಾಪ್ತಿಗೆ ಒಳಪಡುತ್ತವೆ. ಇದರಿಂದ ತೆರಿಗೆ ಜಾಲ ವಿಸ್ತರಣೆಗೊಂಡು, ತೆರಿಗೆ ಸಂಗ್ರಹ ಹೆಚ್ಚಾಗುತ್ತದೆ.
  • ಇದುವರೆಗೆ ಎಲ್ಲಿ ಕಡಿಮೆ ತೆರಿಗೆ ವಿಧಿಸಲಾಗುತ್ತದೆಯೋ ಅಲ್ಲಿ ಕಂಪನಿಗಳು ತಮ್ಮ ಘಟಕ ಸ್ಥಾಪಿಸುತ್ತಿದ್ದವು. ಆದರೆ ಇನ್ನು ಆ ನೀತಿ ತಪ್ಪುತ್ತದೆ. ಎಲ್ಲಿ ಉದ್ಯಮಕ್ಕೆ ಪೂರಕ ವಾತಾವರಣ ಇದೆಯೋ ಅಲ್ಲಿ ಘಟಕ ಸ್ಥಾಪಿಸುತ್ತವೆ.

ಈಗ ಭಾರತದಲ್ಲಿರುವ ತೆರಿಗೆಗಳು

ಕೇಂದ್ರ ತೆರಿಗೆ ರಾಜ್ಯ ತೆರಿಗೆ
೧.ಕೇಂದ್ರೀಯ ಅಬಕಾರಿಸುಂಕ ೧.ವ್ಯಾಟ್‌/ ಸೇವಾ ತೆರಿಗೆ
೨.ಹೆಚ್ಚುವರಿ ಅಬಕಾರಿ ಸುಂಕ ೨.ಮನರಂಜನಾ ತೆರಿಗೆ (ಸ್ಥಳೀಯ ಸಂಸ್ಥೆ ತೆರಿಗೆ ಬಿಟ್ಟು)
೩.ಸೇವಾ ತೆರಿಗೆ ೩.ಖರೀದಿ ತೆರಿಗೆ
೪.ಹೆಚ್ಚುವರಿ ಸೀಮಾ ಸುಂಕ ೪.ಐಷಾರಾಮಿ ತೆರಿಗೆ
(೪) (ಕೌಂಟರ್‌ ವೆಲಿಂಗ್ ಡ್ಯೂಟಿ) ೫.ಲಾಟರಿ, ಬೆಟ್ಟಿಂಗ್‌,
೫.ವಿಶೇಷ ಹೆಚ್ಚುವರಿ ಸೀಮಾ ಸುಂಕ ೬.ಜೂಜು ತೆರಿಗೆ
೬.ಸರ್‌ಚಾರ್ಜ್‌ ೭.ಪ್ರವೇಶ ತೆರಿಗೆ
೭.ಸೆಸ್‌ಗಳು ೮.ರಾಜ್ಯ ಸೆಸ್‌,
೯.ಸರ್‌ಚಾರ್ಜ್‌ಗಳು
೧೦.ಆಕ್ಟ್ರಾಯ್

ಈ ತೆರಿಗೆ ಕಾನೂನಿಗೆ ಸಂವಿಧಾನ ತಿದ್ದುಪಡಿ ಅಗತ್ಯ

  • ಒಕ್ಕೂಟ ವ್ಯವಸ್ಥೆಯಾದ ಭಾರತದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡಕ್ಕೂ ತೆರಿಗೆ ವಿಧಿಸುವ ಅಧಿಕಾರವನ್ನು ನಮ್ಮ ಸಂವಿಧಾನ ಕಲ್ಪಿಸಿದೆ. ಆದರೆ ಇಲ್ಲೂ ಒಂದಿಷ್ಟು ಮಿತಿಯನ್ನು ಹಾಕಲಾಗಿದೆ. ಕೇಂದ್ರ ಸರ್ಕಾರವು ವಿವಿಧ ರೀತಿಯ ಸೇವೆಗಳು ಮತ್ತು ಕೆಲವೊಂದು ವಸ್ತುಗಳಿಗೆ ಉತ್ಪಾದನಾ ಹಂತದಲ್ಲಿ ಮಾತ್ರ ತೆರಿಗೆ ಹಾಕುವ ಅಧಿಕಾರ ಹೊಂದಿದೆ. ಇನ್ನು ರಾಜ್ಯ ಸರ್ಕಾರಗಳು ವಸ್ತುವಿನ ಮಾರಾಟದ ಮೇಲೆ ಮಾತ್ರ ತೆರಿಗೆ ವಿಧಿಸುವ ಹಕ್ಕು ಹೊಂದಿದೆ. ಅಂದರೆ ವಸ್ತುವಿನ ಮಾರಾಟ ಹಂತದಲ್ಲಿ ತೆರಿಗೆ ವಿಧಿಸುವ ಹಕ್ಕು ಕೇಂದ್ರಕ್ಕಿಲ್ಲ, ಅದೇ ರೀತಿ ರಾಜ್ಯಗಳಿಗೆ ಸೇವಾ ತೆರಿಗೆ ವಿಧಿಸುವ ಹಕ್ಕಿಲ್ಲ. ಆದರೆ ಜಿಎಸ್‌ಟಿ ಜಾರಿಯಾದ ಬಳಿಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡಕ್ಕೂ ಸರಕು ಮತ್ತು ಸೇವೆಯ ಮೇಲೆ ತೆರಿಗೆ ಸಂಗ್ರಹಿಸುವ ಅಧಿಕಾರ ಸಿಗುತ್ತದೆ. ಹೀಗಾಗಿ ಸಂವಿಧಾನಕ್ಕೆ ತಿದ್ದುಪಡಿ ತರಬೇಕಾಗಿದೆ.ತಮಿಳುನಾಡು ಬಿಟ್ಟು ಎಲ್ಲಾ ರಾಜ್ಯಗಳಿಂದ ಜಿಎಸ್ ಟಿಗೆ ಬೆಂಬಲ ಸಿಕ್ಕಿದೆ.
  • ಈ ತೆರಿಗೆಯನ್ನು ಜಾರಿ ಮಾಡಲು ಸಂಸತ್ತಿನಲ್ಲಿ ಮೂರನೇ ಎರಡರಷ್ಟು ಬಹುಮತದ ಒಪ್ಪಿಗೆ ಬೇಕು. ಹಾಗೆಯೇ ಶೇ. 50 ರಷ್ಟು ರಾಜ್ಯಗಳ ವಿಧಾನಸಭೆಗಳು ಇದಕ್ಕೆ ಒಪ್ಪಿಗೆ ನೀಡಬೇಕು.

ಜಿಎಸ್‌ಟಿ ದರ

  • ಉನ್ನತಾಧಿಕಾರವುಳ್ಳ ಸಚಿವರ ಸಮಿತಿಯು 2 ಹಂತದ ತೆರಿಗೆ ವಿಧಿಸಲು ಶಿಫಾರಸು ಮಾಡಿತ್ತು. ದೈನಂದಿನ ಮತ್ತು ಮೂಲಭೂತ ಕೆಲ ವಸ್ತುಗಳಿಗೆ ಶೇ.12 ಮತ್ತು ದುಬಾರಿ ವಸ್ತುಗಳಿಗೆ ಶೇ.18ರಷ್ಟು ತೆರಿಗೆ ವಿಧಿಸುವಂತೆ ಶಿಫಾರಸು ಮಾಡಿತ್ತು. ಅಲ್ಲದೆ ಕೆಲವೊಂದು ರಾಜ್ಯಗಳಿಗೆ ಕೆಲ ವಸ್ತುಗಳಿಗೆ ವಿಶೇಷ ರಿಯಾಯಿತಿ ನೀಡುವಂತೆಯೂ ಶಿಫಾರಸು ಮಾಡಿತ್ತು. ಅಂತಿಮವಾಗಿ ಶೇ.16-ಶೇ.18ರಷ್ಟು ದರದಲ್ಲಿ ಜಿಎಸ್‌ಟಿ ವಿಧಿಸುವ ಸಾಧ್ಯತೆ ಇದೆ.

ತೆರಿಗೆಯ ಪರಿಣಾಮಗಳ ಅಂದಾಜು

  • ಅಬಕಾರಿ, ವ್ಯಾಟ್‌ ಮತ್ತು ಸೇವಾ ತೆರಿಗೆ ಪಾವತಿಸುತ್ತಿರುವ ತಯಾರಕರು ಇನ್ನು ಮುಂದೆ ಏಕರೂಪದ ತೆರಿಗೆ ವ್ಯವಸ್ಥೆಯಡಿ ಬರಲಿದ್ದಾರೆ.
  • ಪ್ರಸ್ತುತ ಇರುವ ವ್ಯವಸ್ಥೆಯಲ್ಲಿ ಗ್ರಾಹಕರು ತೆರಿಗೆಯ ಜತೆಗೆ ಇತರ ಕೆಲವು ಸೆಸ್‌ಗಳನ್ನೂ ಪಾವತಿಸುತ್ತಾರೆ. ಆದರೆ ಇನ್ನು ಮುಂದೆ ತೆರಿಗೆಯ ಮೇಲೆ ಉಪಕರ ಇರುವುದಿಲ್ಲ.
  • ಕಚ್ಚಾ ಅಹಾರ ಪದಾರ್ಥ ಸೇರಿದಂತೆ ಕೆಲವು ಅಗತ್ಯ ವಸ್ತುಗಳ ತೆರಿಗೆ ದರ ಪ್ರಸ್ತುತ ಶೇ 6 ರಿಂದ ಶೇ 8ರಷ್ಟಿದೆ. ಜಿಎಸ್‌ಟಿ ದರವನ್ನು ಶೇ 18ಕ್ಕೆ ನಿಗದಿಪಡಿಸಿದರೆ ಎಲ್ಲ ಅಗತ್ಯ ಸಾಮಗ್ರಿಗಳ ಬೆಲೆ ಏರಿಕೆಯಾಗಲಿದೆ. ಪ್ರಸ್ತುತ ಕಡಿಮೆ ತೆರಿಗೆ ಹೊಂದಿರುವ ವಸ್ತುಗಳ ಬೆಲೆ ಏರಿಕೆಯಾಗುವ ಸಂಭವ ಇದೆ. ಉದಾಹರಣೆಗೆ ಸಣ್ಣ ಕಾರುಗಳಿಗೆ ಈಗ ಶೇ 8 ರಷ್ಟು ಅಬಕಾರಿ ಸುಂಕ ವಿಧಿಸಲಾಗುತ್ತದೆ. ಜೆಎಸ್‌ಟಿ ಜಾರಿಯಾದರೆ ಸಣ್ಣ ಕಾರುಗಳು ದುಬಾರಿಯಾಗಲಿವೆ.
  • ಎಸ್‌ಯುವಿ, ಐಷಾರಾಮಿ ಕಾರುಗಳು ಮತ್ತು ಭಾರಿ ವಾಹನಗಳಿಗೆ ಈಗ ಶೇ 27 ರಿಂದ 30 ರಷ್ಟು ಅಬಕಾರಿ ಸುಂಕ ವಿಧಿಸಲಾಗುತ್ತಿದೆ. ಶೇ 18 ರಿಂದ ಶೇ 20 ರಷ್ಟು ದರದಲ್ಲಿ ಜಿಎಸ್‌ಟಿ ಜಾರಿಯಾದರೆ ಈ ವಾಹನಗಳ ಬೆಲೆ ಇಳಿಕೆಯಾಗಲಿವೆ.
  • ಆದರೆ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ ಸುಬ್ರಮಣಿಯನ್‌ ಅವರ ಸೂತ್ರವನ್ನು ಅಳವಡಿಸಿದರೆ, ಜಿಎಸ್‌ಟಿ ಬಳಿಕ ಐಷಾರಾಮಿ ಕಾರುಗಳು ದುಬಾರಿಯಾಗಲಿವೆ. ಏಕೆಂದರೆ ಅರವಿಂದ ಸುಬ್ರಮಣಿಯನ್‌ ಅವರು ಐಷಾರಾಮಿ ಕಾರುಗಳಿಗೆ ಶೇ 40 ರಷ್ಟು ತೆರಿಗೆಗೆ ಶಿಫಾರಸು ಮಾಡಿದ್ದಾರೆ.

ಈ ತೆರಿಗೆಯಿಂದ ದುಬಾರಿ X ಅಗ್ಗ (ಅಂದಾಜು)

ಈ ತೆರಿಗೆಯಿಂದ ಕರ್ನಾಟಕಕ್ಕೆ ಆಗುವ ಅಂದಾಜು ನಷ್ಟ

  • ಈ ಏಕರೂಪದ 'ಸರಕು ಮತ್ತು ಸೇವಾ ತೆರಿಗೆ (ಜಿಎಸ್ ಟಿ)' ಮಸೂದೆ ಅಂಗೀಕಾರವಾಗಿದ್ದು, ಇನ್ನು ಮುಂದೆ ಅನುಷ್ಠಾನಕ್ಕೆ ಬರಲಿದೆ. ಈ ಜಿಎಸ್ ಟಿ ಕರ್ನಾಟಕದ ಆದಾಯದ ಮೇಲೆ ಕೊರತೆ ಪರಿಣಾಮ ಬೀರುತ್ತದೆ ಎಂದು ತಜ್ಜರ ಅಭಿಮತ. 5 ವರ್ಷಗಳವರೆಗೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳ ನಷ್ಟ ಭರಿಸುವುದಾಗಿ ಭರವಸೆ ನೀಡಿದೆ.
  • ೧.ಈಗಿನ ಪೂರ್ಣ ಆದಾಯ ಕೊಡುವ ವ್ಯಾಟ್(ಮೌಲ್ಯ ವರ್ಧಿತ ತೆರಿಗೆ)ರದ್ದಾಗಿ ಅದರ ಬಾಬ್ತು ಬರುವ ಜಿಎಸ್‍ಟಿಯಲ್ಲಿ ಅರ್ಧ ಕೇಂದ್ರಕ್ಕೆ ಹೋಗುವುದು.
  • ೨.ಬೇರೆರಾಜ್ಯದಿಂದ ಬರವ ವಸ್ತಗಳಮೇಲಿನ ಎಂಟ್ರಿ ಟ್ಯಾಕ್ಸ್ ಹೋಗಿ ಜಿಎಸ್‍ಟಿ ಬಂದು ಅದರ ಅರ್ಧವೂ ಕೇಂದ್ರಕ್ಕೆ ಹೋಗುವುದು.
  • ೩.ಪೂರ್ತಿ ರಾಜ್ಯಕ್ಕೆ ಬರುತ್ತಿದ್ದ ಲಕ್ಷುರಿ ತೆರಿಗೆಯಲ್ಲೂ ಅಷ್ಟೆ ಅರ್ಧ ಕೇಂದ್ರಕ್ಕೆ.
  • ೪.ಆದರೆ ರಾಜ್ಯಕ್ಕೆ ಪೂರಾ ಆದಾಯ ಕೊಡುವುದು ರಾಜ್ಯದ ಕೈಯಲ್ಲಿರುವ,ಸ್ಟಾಂಪ್ಸ್ ಮತ್ತು ನೋಂದಣಿ, ಸೇಲ್ಸ್ ಟ್ಯಾಕ್ಸ್(ಮಾರಾಟ ತೆರಿಗೆ). ಪ್ರೊಫೇಶನ್ ಟ್ಯಾಕ್ಸ್ ಮತ್ತು ಎಲೆಕ್ಟ್ರಿಸಿಟಿ ಟ್ಯಾಕ್ಸ್.
    ನಷ್ಟ-ತಜ್ಜ್ಞರ ಲೆಕ್ಖ
  • ೫.ಮೇಲಿನ ಜಿಎಸ್ ಟಿ ಅನ್ವಯ (ಎಂಟ್ರಿ ಟ್ಯಾಕ್ಸ್, ಸಿಎಸ್ ಟಇ, ಬೆಟ್ಟಿಂಗ್, ಮನರಂಜನೆ ತೆರಿಗೆ) ಕಳೆದುಕೊಳ್ಳುವುದು- 5,835 ಕೋಟಿ ರೂ.
  • ೬.ಕೇಂದ್ರ ಸರ್ಕಾರದಿಂದ ತೆರಿಗೆ ಹಂಚಿಕೆ ಮಾಡಿಕೊಳ್ಳುವುದರಿಂದ ಕಳೆದುಕೊಳ್ಳುವುದು- 7,769 ಕೋಟಿ ರೂ,
  • ೭.ತೆರಿಗೆ ಹರಿವಿನಿಂದ ರಾಜ್ಯಕ್ಕೆ ನಷ್ಟ- 8556 ಕೋಟಿ ರೂ.
    ಒಟ್ಟು ನಷ್ಟ
    5,835+7,769+8556=22,160 ಕೋಟಿ ರೂ.
    ಹೊಸ ತೆರಿಗೆಯಿಂದ ಆದಾಯ
  • ಸೇವಾ ಶುಲ್ಕ ವಿಧಿಸುವುದರಿಂದ ಆದಾಯ-5,680 ಕೋಟಿ ರು., ವಿನಾಯಿತಿಗಳನ್ನು ತಡೆದಿದ್ದಕ್ಕೆ ಸಿಗುವ ಆದಾಯ- 8,064 ಕೋಟಿ ರೂ.
    ನಿವ್ವಳ ನಷ್ಟ=ಜಿಎಸ್ ಟಿ ಕಾರಣಕ್ಕೆ 8,416 ಕೋಟಿ ರೂ.

ಜುಲೈ ೧, ೨೦೧೭ ರಿಂದ ಜಿ.ಎಸ್.ಟಿ.

  • ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯನ್ನು ಎಲ್ಲ ರಾಜ್ಯಗಳಲ್ಲಿ ಜಾರಿಗೆ ತರುವ ಪೂರ್ವಭಾವಿ ಸಿದ್ಧತೆಗಳೆಲ್ಲ ಭರದಿಂದ ಸಾಗಿವೆ. ಹೊಸ ವ್ಯವಸ್ಥೆ ಜಾರಿಗೆ ತರಲು 2017 ಜುಲೈ 1ರ ಗಡುವು ನಿಗದಿ ಮಾಡಲಾಗಿದೆ.ಸ್ವಾತಂತ್ರ್ಯಾನಂತರದ ಅತಿ ದೊಡ್ಡ ತೆರಿಗೆ ಸುಧಾರಣಾ ಕ್ರಮ ಇದಾಗಿದೆ. ಇಡೀ ದೇಶವನ್ನು ವಿಶ್ವದಲ್ಲಿಯೇ ಅತಿದೊಡ್ಡ ಏಕೀಕೃತ ಮಾರುಕಟ್ಟೆಯನ್ನಾಗಿ ಪರಿವರ್ತಿಸಲಿದೆ. ಹೊಸ ತೆರಿಗೆ ವ್ಯವಸ್ಥೆಯು ಸದ್ಯದ ತೆರಿಗೆ ಸ್ವರೂಪವನ್ನೇ ಆಮೂಲಾಗ್ರವಾಗಿ ರೂಪಾಂತರಿಸಲಿದೆ.

ದೇಶ ಒಂದೇ ಮಾರುಕಟ್ಟೆ

  • ಸದ್ಯಕ್ಕೆ ಜಾರಿಯಲ್ಲಿ ಇರುವ ಬಹುಹಂತದ ತೆರಿಗೆ ವ್ಯವಸ್ಥೆ ಕೊನೆಗೊಳ್ಳಲಿದೆ. ದೇಶದಾದ್ಯಂತ ಒಂದೇ ಬಗೆಯ ತೆರಿಗೆ ವ್ಯವಸ್ಥೆ ಜಾರಿಗೆ ಬರಲಿದೆ. ಇಡೀ ದೇಶ ಒಂದೇ ಮಾರುಕಟ್ಟೆಯಾಗಿ ಪರಿವರ್ತನೆಯಾಗಲಿದೆ. ಯಾವುದೇ ಸರಕು ಮತ್ತು ಸೇವೆಯ ಬೆಲೆ ದೇಶದಾದ್ಯಂತ ಒಂದೇ ರೀತಿಯಲ್ಲಿ ಇರಲಿದೆ.
  • ಹತ್ತಾರು ತೆರಿಗೆಗಳು ರದ್ದಾಗಿ ಒಂದೇ ಬಗೆಯ ತೆರಿಗೆ ವ್ಯವಸ್ಥೆ
  • ಸಂಕೀರ್ಣ ಸ್ವರೂಪದ ತೆರಿಗೆ ವ್ಯವಸ್ಥೆ ರದ್ದು
  • ವ್ಯಾಪಾರಿಗಳು ಮತ್ತು ಉದ್ಯಮಿಗಳ ತೆರಿಗೆ ವಂಚನೆಗೆ ಕೊನೆ
  • ತೆರಿಗೆದಾರರ ಸಂಖ್ಯೆ ಗಣನೀಯವಾಗಿ ಹೆಚ್ಚಳ
  • ಅಭಿವೃದ್ಧಿಗೆ ತೊಡಕಾಗಿದ್ದ ಸಂಕೀರ್ಣ ಸ್ವರೂಪದ ತೆರಿಗೆ ವ್ಯವಸ್ಥೆ ಸರಳ
  • ಸರಕುಗಳ ಸಾಗಣೆ ವೆಚ್ಚ ಇಳಿಕೆ.

ವಹಿವಾಟು ಮಿತಿ ಏರಿಕೆ

  • ಹೊಸ ತೆರಿಗೆ ವ್ಯವಸ್ಥೆಯಲ್ಲಿ ನೋಂದಣಿಗೆ ವಹಿವಾಟು ಮಿತಿಯನ್ನು ಈಗಿರುವ ₹ 10 ಲಕ್ಷಗಳಿಂದ ₹ 20 ಲಕ್ಷಕ್ಕೆ ಏರಿಸಿರುವುದರಿಂದ ಚಿಕ್ಕಪುಟ್ಟ ವ್ಯಾಪಾರ ಉದ್ದಿಮೆದಾರರಿಗೆ ಅನುಕೂಲವಾಗಲಿದೆ. ಸರಕು ಮತ್ತು ಸೇವೆಗಳ ವಾರ್ಷಿಕ ವಹಿವಾಟು ₹ 20 ಲಕ್ಷಗಳಿದ್ದರೆ ಮಾತ್ರ ನೋಂದಣಿ ಕಡ್ಡಾಯವಿರುತ್ತದೆ.
  • ಸಾವಿರಾರು ಉತ್ಪನ್ನ ಮತ್ತು ಸೇವೆಗಳನ್ನು ಐದು ತೆರಿಗೆ ಹಂತಗಳಲ್ಲಿ (ಶೇ 0, 5, 12,18 ಮತ್ತು 28) ಸೇರ್ಪಡೆ ಮಾಡುವುದು ಜಿಎಸ್‌ಟಿ ಮಂಡಳಿ ಮುಂದಿರುವ ಸದ್ಯದ ಕ್ಲಿಷ್ಟಕರ ಸಮಸ್ಯೆಯಾಗಿದೆ.

ಸರಕು ಮತ್ತು ಸೇವೆಗಳ ತೆರಿಗೆ

  • ಸರಕು ಮತ್ತು ಸೇವಾ ತೆರಿಗೆಯು (ಜಿಎಸ್‌ಟಿ) ಸರಕುಗಳ ತಯಾರಿಕೆ, ಮಾರಾಟ ಹಾಗೂ ಸೇವೆಗಳ ಬಳಕೆ ಮೇಲೆ ದೇಶದಾದ್ಯಂತ ಏಕರೂಪದಲ್ಲಿ ವಿಧಿಸಲಾಗುವ ತೆರಿಗೆಯಾಗಿದೆ. ಹೊಸ ವ್ಯವಸ್ಥೆಯಲ್ಲಿ ಸರಕು ಹಾಗೂ ಸೇವೆಗಳ ಮೇಲೆ ಹಲವು ಹಂತಗಳಲ್ಲಿ ತೆರಿಗೆ ಕೊಡುವ ಬದಲು ಕೊನೆಯ ಹಂತದಲ್ಲಿ ಮಾತ್ರವೇ ಗ್ರಾಹಕ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.
  • ಸದ್ಯಕ್ಕೆ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ತೆರಿಗೆ ಸಂಗ್ರಹ ಕ್ರಮದಲ್ಲಿ ಬಹಳಷ್ಟು ವ್ಯತ್ಯಾಸಗಳಿವೆ. ಇನ್ನು ಮುಂದೆ ಈ ವ್ಯತ್ಯಾಸ ದೂರವಾಗಲಿದೆ.

ತಂತ್ರಜ್ಞಾನ ಅಳವಡಿಕೆ

ದರಪಟ್ಟಿಗಳನ್ನು ಪರಿಶೀಲಿಸಿ ತೆರಿಗೆ ಹೊಂದಾಣಿಕೆ ಮಾಡಲು ಜಿಎಸ್‌ಟಿ ಸಂಪರ್ಕ ಜಾಲ (ಜಿಎಸ್‌ಟಿಎನ್‌) ಅಭಿವೃದ್ಧಿಪಡಿಸಲಾಗಿದೆ. ಈ ತಂತ್ರಜ್ಞಾನವು ಹೊಸ ತೆರಿಗೆ ವ್ಯವಸ್ಥೆಯ ಬೆನ್ನೆಲುಬು ಆಗಿ ಕಾರ್ಯನಿರ್ವಹಿಸಲಿದೆ. ಇದರ ನೆರವಿನಿಂದ ತೆರಿಗೆ ವಂಚನೆಯ ಜಾಡನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ತೆರಿಗೆದಾರರ ನೋಂದಣಿ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಆದರೆ, ದಕ್ಷಿಣದ ರಾಜ್ಯಗಳನ್ನು ಹೊರತುಪಡಿಸಿ ಇತರ ರಾಜ್ಯಗಳು ಈ ನಿಟ್ಟಿನಲ್ಲಿ ಸಾಕಷ್ಟು ಪ್ರಗತಿ ಸಾಧಿಸಿಲ್ಲ. ಹೀಗಾಗಿ ಜುಲೈ 1ರ ಬದಲಿಗೆ ಸೆಪ್ಟೆಂಬರ್‌ ತಿಂಗಳಿಗೆ ಮುಂದೂಡಿಕೆಯಾಗುವ ಸಾಧ್ಯತೆಯೂ ಇದೆ.

ತರಿಗೆ ವಿಧ

ಕೇಂದ್ರ ಜಿ.ಎಸ್.ಟಿ. ರಾಜ್ಯ ಜಿ.ಎಸ್.ಟಿ.
ಕೇಂದ್ರ ಅಬಕಾರಿ ಸುಂಕ ಮೌಲ್ಯರ‍್ಧಿತ ಮಾರಾಟ ತೆರಿಗೆ
ಹೆಚ್ಚುವರಿ ಅಬಕಾರಿ ಸುಂಕ ಖರೀದಿ ವಹಿವಾಟು ತೆರಿಗೆ
ಸೇವಾ ತೆರಿಗೆ ಮನರಂಜನಾ ತೆರಿಗೆ
ಹೆಚ್ಚುವರಿ ಸೀಮಾ ಸುಂಕ ಐಷಾರಾಮಿ ತೆರಿಗೆ; ಲಾಟರಿ ತೆರಿಗೆ
ಸರ್ ಚಾರ್ಜು, ಸೆಸ್,ಒಳಗೊಂಡಿರುತ್ತದೆ. ಸರ್ಚಾರ್ಜು ಮತ್ತು ಸೆಸ್ಸು

ಜಿಎಸ್‌ಟಿಯ ವೈಶಿಷ್ಟ್ಯಗಳು

  • ವರ್ಷಕ್ಕೆ ರೂ.20 ಲಕ್ಷದವರೆಗೆ ವಹಿವಾಟು ನಡೆಸುವವರಿಗೆ ಜಿಎಸ್‌ಟಿ ಅನ್ವಯವಾಗದು.
  • ರಾಜ್ಯ ಸರ್ಕಾರಗಳಿಗೆ 5 ವರ್ಷಗಳವರೆಗೆ ನಷ್ಟ ಭರ್ತಿ ಮಾಡಿಕೊಡಲಿರುವ ಕೇಂದ್ರ ಸರ್ಕಾರ.
  • ಸರಕು ಮತ್ತು ಸೇವೆಗಳ ತೆರಿಗೆ ದರಗಳನ್ನು ನಾಲ್ಕು ಹಂತದಲ್ಲಿ (ಶೇ 5, 12, 18 ಮತ್ತು 28) ನಿಗದಿ.
  • ವಿಲಾಸಿ ಸರಕು, ತಂಪು ಪಾನೀಯ ಮತ್ತು ಆರೋಗ್ಯಕ್ಕೆ ಹಾನಿಕರವಾಗಿರುವ ತಂಬಾಕು ಮತ್ತು ಪಾನ್‌ ಮಸಾಲಾ ಉತ್ಪನ್ನಗಳ ಮೇಲೆ (ಬೀಡಿ ಹೊರತುಪಡಿಸಿ) ವಿಧಿಸಬಹುದಾದ ಸೆಸ್‌ನ ಗರಿಷ್ಠ ದರ ಶೇ 15ರಷ್ಟಕ್ಕೆ ನಿಗದಿ.
  • ಜಿಎಸ್‌ಟಿ ಗರಿಷ್ಠ ದರ ಶೇ 40ರಷ್ಟು
  • ಈ ನಾಲ್ಕು ಹಂತದ ತೆರಿಗೆ ದರಗಳಲ್ಲಿ ಯಾವ, ಯಾವ ಸರಕು ಮತ್ತು ಸೇವೆಗಳನ್ನು ಸೇರ್ಪಡೆ ಮಾಡಬೇಕು ಎನ್ನುವುದನ್ನು ಜಿಎಸ್‌ಟಿ ಮಂಡಳಿ ಇನ್ನೂ ನಿರ್ಧರಿಸಬೇಕಾಗಿದೆ. ಬಾಕಿ ಉಳಿದಿರುವ ಈ ಕೆಲಸ ಪೂರ್ಣಗೊಂಡರೆ, ತೆರಿಗೆಗೆ ಸಂಬಂಧಿಸಿದ ಅನುಮಾನಗಳೆಲ್ಲ ದೂರವಾಗಲಿವೆ.

ರದ್ದಾಗಲಿರುವ ತೆರಿಗೆಗಳು

  • ಕೇಂದ್ರ ಅಬಕಾರಿ ಸುಂಕ, ಸೀಮಾ ಸುಂಕ, ಸೇವಾ ತೆರಿಗೆ ಮತ್ತು ಹೆಚ್ಚುವರಿ ಉಪ ಕರಗಳು (ಸೆಸ್‌/ಸರ್ಚಾರ್ಜ್‌)
  • ರಾಜ್ಯಗಳ ಮೌಲ್ಯವರ್ಧಿತ ತೆರಿಗೆ, ಪ್ರವೇಶ ತೆರಿಗೆ, ಮನರಂಜನಾ ತೆರಿಗೆ, ಜಾಹೀರಾತು ತೆರಿಗೆ, ಲಾಟರಿ ತೆರಿಗೆ ಮತ್ತು ರಾಜ್ಯಗಳ ಉಪ ಕರಗಳು
  • ಕೇಂದ್ರ ಸರ್ಕಾರ ನಿಗದಿಪಡಿಸುವ ತೆರಿಗೆಗಳನ್ನು ಕೇಂದ್ರೀಯ ಜಿಎಸ್‌ಟಿ (ಸಿಜಿಎಸ್‌ಟಿ) ಮತ್ತು ರಾಜ್ಯ ಸರ್ಕಾರಗಳು ವಿಧಿಸುವ ತೆರಿಗೆ ‘ಎಸ್‌ಜಿಎಸ್‌ಟಿ’ ಆಗಿರುತ್ತದೆ.

ಜಿಎಸ್‌ಟಿಯ ಒಟ್ಟು ಪರಿಣಾಮ

  • ೧೯-೫-೨೦೧೭;
  • ಸಿನಿಮಾ ವೀಕ್ಷಣೆ, ಏ.ಸಿ ರೆಸ್ಟೊರೆಂಟ್ಸ್‌ಗಳಲ್ಲಿ ಊಟ, ಮೊಬೈಲ್‌ ಬಳಕೆ, ಬ್ಯೂಟಿ ಸಲೂನ್‌ಗೆ ಭೇಟಿ ನೀಡುವುದು ಇನ್ನು ಮುಂದೆ ಗ್ರಾಹಕರ ಪಾಲಿಗೆ ದುಬಾರಿಯಾಗಿ ಪರಿಣಮಿಸಲಿವೆ. ಈ ಎಲ್ಲ ಸೇವೆಗಳು ಗರಿಷ್ಠ ಸೇವಾ ತೆರಿಗೆ ದರವಾದ ಶೇ 28ರ ಅಡಿಯಲ್ಲಿ ಬರಲಿವೆ. ಹೀಗಾಗಿ ಸದ್ಯದ ದರಗಳಿಗೆ ಹೋಲಿಸಿದರೆ ಬಳಕೆದಾರರು ಜುಲೈ 1ರಿಂದ ಜಿಎಸ್‌ಟಿ ಜಾರಿಗೆ ಬಂದಾಗ ಹೆಚ್ಚು ತೆರಿಗೆ ಪಾವತಿಸಬೇಕಾಗುತ್ತದೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯು, ವಿವಿಧ ಸೇವೆಗಳಿಗೆ ಅನ್ವಯಿಸುವ ತೆರಿಗೆ ದರಗಳನ್ನು ಅಂತಿಮಗೊಳಿಸಿದೆ. ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯು ಸೇವಾ ತೆರಿಗೆಯಿಂದ ವಿನಾಯ್ತಿ ಪಡೆಯಲಿವೆ.
  • ಏ.ಸಿ ರಹಿತ ರೆಸ್ಟೊರೆಂಟ್ಸ್‌ಗಳು ಊಟದ ಬಿಲ್‌ ಮೇಲೆ ಶೇ 12 ಮತ್ತು ಮದ್ಯ ಪೂರೈಸುವ ಹೋಟೆಲ್‌ಗಳು ಶೇ 18ರಷ್ಟು ಸೇವಾ ತೆರಿಗೆ ವಿಧಿಸಲಿವೆ. ದೂರಸಂಪರ್ಕ, ವಿಮೆ, ಹೋಟೆಲ್‌ ಮತ್ತು ರೆಸ್ಟೊರೆಂಟ್ಸ್‌ಗಳನ್ನು ವಿವಿಧ ತೆರಿಗೆ ಹಂತದ ವ್ಯಾಪ್ತಿಗೆ ತರಲಾಗಿದೆ. ‘ಬಹುತೇಕ ಸೇವೆಗಳು ಶೇ 18ರಷ್ಟು ತೆರಿಗೆ ವ್ಯಾಪ್ತಿಗೆ ಒಳಪಡಲಿವೆ. ಸರಕುಗಳಿಗೆ ಅನ್ವಯಿಸಿರುವ ತೆರಿಗೆ ದರದ ಹಂತಗಳನ್ನೇ (ಶೇ 5, 12, 18, ಮತ್ತು 28) ಸೇವೆಗಳಿಗೂ ಅನ್ವಯಿಸಲು ಕೇಂದ್ರ ಹಣಕಾಸು ಮಂಡಳಿ ನಿರ್ಧರಿಸಿದೆ’.

ವಿನಾಯ್ತಿ ಮುಂದುವರಿಕೆ

  • ಸರ್ಕಾರಿ ಕಛೇರಿಗಳಿಗೆ ಬಾಡಿಗೆ ಬಿಡುವ ಸಾರಿಗೆ ಸೇವೆಗೆ ಸಂಬಂದಿಸಿದ ಜಿ ಎಸ್ ಟಿ ರಿಯಾಯಿತಿ ಕನಿಷ್ಠ ತೆರಿಗೆ ದರ ಮಟ್ಟವಾದ ಶೇ 5ರ ವ್ಯಾಪ್ತಿಯಲ್ಲಿ ತರಲಾಗಿದೆ.
  • ಇದುವರೆಗೆ ಸೇವಾ ತೆರಿಗೆಯಿಂದ ವಿನಾಯ್ತಿ ಹೊಂದಿರುವ ಸೇವೆಗಳು ಹೊಸ ವ್ಯವಸ್ಥೆಯಲ್ಲಿಯೂ ಈ ಅನುಕೂಲತೆ ಪಡೆಯಲಿವೆ.
  • ಸಾರಿಗೆ ಸೇವೆಯನ್ನು ಕನಿಷ್ಠ ತೆರಿಗೆ ದರ ಮಟ್ಟವಾದ ಶೇ 5ರ ವ್ಯಾಪ್ತಿಯಲ್ಲಿ ತರಲಾಗಿದೆ. ಇದರಿಂದಾಗಿ ಗ್ರಾಹಕ ಬಳಕೆ ಸರಕುಗಳು, ತರಕಾರಿ ಮತ್ತು ಹಣ್ಣುಗಳ ಬೆಲೆ ನಿಯಂತ್ರಣದಲ್ಲಿ ಇರಲಿದೆ. ಏ.ಸಿ ರಹಿತ ರೈಲ್ವೆ ಪ್ರಯಾಣಕ್ಕೆ ವಿನಾಯ್ತಿ ನೀಡಲಾಗಿದೆ. ಏ.ಸಿ ರೈಲ್ವೆ ಪ್ರಯಾಣ ಮತ್ತು ಇಕಾನಮಿ ದರ್ಜೆಯ ವಿಮಾನ ಪ್ರಯಾಣವು ಸದ್ಯದ ಶೇ 6ರ ಬದಲಿಗೆ ಶೇ 5ರ ವ್ಯಾಪ್ತಿಗೆ ತರಲಾಗಿದೆ. ಮನರಂಜನಾ ತೆರಿಗೆಯನ್ನು ಸೇವಾ ತೆರಿಗೆಯಲ್ಲಿ ಲೀನಗೊಳಿಸಲಾಗಿದೆ. ಇದರಿಂದಾಗಿ ಸಿನಿಮಾ ಟಿಕೆಟ್‌ಗಳ ಮೇಲೆಶೇ 28ರಷ್ಟು ತೆರಿಗೆ ಅನ್ವಯವಾಗಲಿದೆ. ಸಿನಿಮಾ ಟಿಕೆಟ್‌ಗಳ ಮೇಲೆ ಸದ್ಯಕ್ಕೆ ಶೇ 40 ರಿಂದ ಶೇ 55ರಷ್ಟು ತೆರಿಗೆ ಜಾರಿಯಲ್ಲಿ ಇದೆ. ಅದಕ್ಕೆ ಹೋಲಿಸಿದರೆ ಹೊಸ ತೆರಿಗೆ ವ್ಯವಸ್ಥೆಯಲ್ಲಿ ಕಡಿಮೆ ತೆರಿಗೆ ಇರಲಿದೆ. ಆದರೆ, ರಾಜ್ಯ ಸರ್ಕಾರಗಳು ಸ್ಥಳೀಯ ಶುಲ್ಕ ವಿಧಿಸುವ ಅಧಿಕಾರ ಹೊಂದಿರುವುದರಿಂದ ಟಿಕೆಟ್‌ ದರ ಅಗ್ಗವಾಗುವ ಸಾಧ್ಯತೆ ಕಡಿಮೆ ಇದೆ. ಕುದುರೆ ರೇಸ್‌ ಬೆಟ್ಟಿಂಗ್‌ ಕೂಡ ಇದೇ ದರದ ವ್ಯಾಪ್ತಿಗೆ ಬರಲಿದೆ.

ಗರಿಷ್ಟ ತೆರಿಗೆ

  • ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯಲ್ಲಿ ಆರೋಗ್ಯಕ್ಕೆ ಹಾನಿಕರವಾದ ಮತ್ತು ಐಷಾರಾಮಿ ಸರಕುಗಳಿಗೆ ಶೇ 28 ರಷ್ಟು ಗರಿಷ್ಠ ಮಟ್ಟದ ತೆರಿಗೆ ವಿಧಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ಧರಿಸಿವೆ.ಎಲ್ಲಾ ಮಾದರಿಯ ಕಾರು, ಬಸ್‌, ಟ್ರಕ್‌, ಮೋಟಾರ್ ಸೈಕಲ್ಸ್‌ (ಮೊಪೆಡ್‌ ಒಳಗೊಂಡು), ವೈಯಕ್ತಿಕ ಬಳಕೆಯ ಜೆಟ್‌ ವಿಮಾನ ಮತ್ತು ಐಷಾರಾಮಿ ದೋಣಿಗಳಿಗೆ ಶೇ 28 ರಷ್ಟು ಜಿಎಸ್‌ಟಿ ತೆರಿಗೆ ದರ ಮತ್ತು ಶೇ 3 ರಷ್ಟು ಸೆಸ್‌ ಸೇರಿ ಒಟ್ಟಾರೆ ಶೇ 31 ರಷ್ಟು ತೆರಿಗೆ ನಿಗದಿಪಡಿಸಲಾಗಿದೆ.

ತೆರಿಗೆಯ ದರಗಳು

  • ಚಿನ್ನದ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರವನ್ನು ಕೇಂದ್ರ ಸರ್ಕಾರ ೩-೬-೨೦೧೭ ಶನಿವಾರ ಅಂತಿಮಗೊಳಿಸಿದೆ. ಚಿನ್ನದ ಮೇಲೆ ಶೇಕಡ 3ರಷ್ಟು ಜಿಎಸ್‌ಟಿ ದರ ವಿಧಿಸಲು ಜಿಎಸ್‌ಟಿ ಮಂಡಳಿ ನಿರ್ಧರಿಸಿದೆ. ನವದೆಹಲಿಯಲ್ಲಿ ಶನಿವಾರ ನಡೆದ ಜಿಎಸ್‌ಟಿ ಮಂಡಳಿಯ 15ನೇ ಸಭೆಯಲ್ಲಿ ಚಿನ್ನ, ಸಂಸ್ಕರಿಸಿದ ಆಹಾರ, ಸಿದ್ಧ ಉಡುಪು, ಪಾದರಕ್ಷೆ, ಬೀಡಿ ಸೇರಿದಂತೆ ಹಲವು ಉತ್ಪನ್ನಗಳ ಜಿಎಸ್‌ಟಿ ದರವನ್ನು ಅಂತಿಮಗೊಳಿಸಲಾಗಿದೆ. ಈ ಹಿಂದೆ ನಿಗದಿಗೊಳಿಸಿದ್ದ ನಾಲ್ಕು ವರ್ಗಗಳನ್ನು (5%, 12%, 18% ಮತ್ತು 28%) ಬಿಟ್ಟು ಚಿನ್ನಕ್ಕೆ ಹೊಸ ವರ್ಗದ (3%) ದರ ನಿಗದಿಗೊಳಿಸಲಾಗಿದೆ.
  • ಸಂಸ್ಕರಿಸಿದ ಆಹಾರಕ್ಕೆ ಶೇಕಡ 5ರಷ್ಟು, ಬಿಸ್ಕತ್‌ ಮೇಲೆ ಶೇಕಡ 18ರಷ್ಟು, ಬೀಡಿಗೆ ಶೇಕಡ 28ರಷ್ಟು ಜಿಎಸ್‌ಟಿ ದರ ನಿಗದಿಪಡಿಸಲಾಗಿದೆ. ರೂ.500ಕ್ಕಿಂತ ಕಡಿಮೆ ಬೆಲೆಯ ಪಾದರಕ್ಷೆಗಳ ಜಿಎಸ್‌ಟಿ ದರ ಶೇ 5ರಷ್ಟು ಇರಲಿದೆ. ₹ 500ಕ್ಕಿಂತ ಹೆಚ್ಚಿನ ಬೆಲೆಯ ಪಾದರಕ್ಷೆಗಳ ಮೇಲೆ ಶೇಕಡ 18ರಷ್ಟು ಜಿಎಸ್‌ಟಿ ದರ ನಿಗದಿಯಾಗಿದೆ. ಸಿದ್ಧ ಉಡುಪುಗಳ ಮೇಲೆ ಶೇಕಡ 12, ಹತ್ತಿ ಬಟ್ಟೆ ಮತ್ತು ಸೋಲಾರ್‌ ಪ್ಯಾನೆಲ್‌ಗಳ ಮೇಲೆ ಶೇಕಡ 5ರಷ್ಟು ಜಿಎಸ್‌ಟಿ ದರ ನಿಗದಿಗೊಳಿಸಲಾಗಿದೆ. ಜುಲೈ 1ರಿಂದ ಜಿಎಸ್‌ಟಿ ತೆರಿಗೆ ವ್ಯವಸ್ಥೆ ಜಾರಿಗೆ ಬರಲಿದೆ.

ವಿಶ್ವದಲ್ಲಿಯೇ ಅತಿದೊಡ್ಡ ಏಕೀಕೃತ ಮಾರುಕಟ್ಟೆ

  • ದೇಶದ ಅರ್ಥ ವ್ಯವಸ್ಥೆಯ ಸಮಗ್ರ ಚಿತ್ರಣವನ್ನೇ ಆಮೂಲಾಗ್ರವಾಗಿ ಬದಲಿಸಲಿರುವ ಮಹತ್ವಾಕಾಂಕ್ಷೆಯ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆಯು, ಸ್ವಾತಂತ್ರ್ಯಾನಂತರದ ಅತಿ ದೊಡ್ಡ ತೆರಿಗೆ ಸುಧಾರಣಾ ಕ್ರಮವಾಗಿದೆ. ಇಡೀ ದೇಶವನ್ನು ವಿಶ್ವದಲ್ಲಿಯೇ ಅತಿದೊಡ್ಡ ಏಕೀಕೃತ ಮಾರುಕಟ್ಟೆಯನ್ನಾಗಿ ಈ ಹೊಸ ವ್ಯವಸ್ಥೆ ಪರಿವರ್ತಿಸಲಿದೆ. ಸದ್ಯಕ್ಕೆ ಜಾರಿಯಲ್ಲಿ ಇರುವ ಬಹುಹಂತದ ತೆರಿಗೆ ವ್ಯವಸ್ಥೆ ಕೊನೆಗೊಳ್ಳಲಿದೆ, ಸರಕು ಮತ್ತು ಸೇವೆಗಳ ಬೆಲೆಗಳು ದೇಶದಾದ್ಯಂತ ಒಂದೇ ರೀತಿಯಲ್ಲಿ ಇರಲಿವೆ.

ತೆರಿಗೆಯ ಹೊರೆ

  • ಸದ್ಯಕ್ಕೆ ವಿವಿಧ ತೆರಿಗೆ ದರಗಳ ಒಟ್ಟಾರೆ ಹೊರೆಯು ಶೇ 25 ರಿಂದ ಶೇ 30ರಷ್ಟು ಇದೆ. ಪ್ರತಿಯೊಂದು ಕುಟುಂಬ ಬಳಸುವ ಆಹಾರ ಧಾನ್ಯ, ಬೇಳೆಕಾಳು, ಮೈದಾ, ಕಡಲೆ ಹಿಟ್ಟು, ಹಾಲು, ಉಪ್ಪು, ತರಕಾರಿ ಮತ್ತು ಹಣ್ಣುಗಳು ಅಗ್ಗವಾಗಲಿವೆ. ಜಿಎಸ್‌ಟಿ ವಿನಾಯಿತಿ ಕೊಟ್ಟ ಕಾರಣಕ್ಕೆ, ಇವುಗಳ ಬೆಲೆಗಳು ಸದ್ಯದ ಬೆಲೆಗಿಂತ ಶೇ 4 ರಿಂದ 5ರಷ್ಟು ಅಗ್ಗವಾಗಲಿವೆ. ಹೊಸ ವ್ಯವಸ್ಥೆಯಲ್ಲಿ, ಸರಕುಗಳು ದೇಶಿ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ದರಗಳಿಗೆ ದೊರೆಯಲಿವೆ. ಇದು ಆರ್ಥಿಕ ಚಟುವಟಿಕೆಗಳು ಗರಿಗೆದರಲು ತಕ್ಷಣ ಉತ್ತೇಜನ ನೀಡಲಿದೆ. ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ) ಶೇ 1 ರಿಂದ ಶೇ 2ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.
  • ಹೋಟೆಲ್‌ ಉದ್ದಿಮೆ ಮೇಲೆ ಶೇ 12 ರಿಂದ ಶೇ 18ರಷ್ಟು ತೆರಿಗೆ ವಿಧಿಸಲಾಗಿದೆ. ವಾಹನ ತಯಾರಿಕೆ, ಹೋಟೆಲ್‌ ಮತ್ತು ವಿಮೆ ಉದ್ಯಮಗಳ ಪಾಲಿಗೆ ಜಿಎಸ್‌ಟಿ ದರಗಳು ದುಬಾರಿಯಾಗಿ ಪರಿಣಮಿಸಿವೆ. ಮೋಟಾರ್‌ ವಾಹನಗಳು ಅದರಲ್ಲೂ ವಿಶೇಷವಾಗಿ ವಿದ್ಯುತ್‌ ಮತ್ತು ಇಂಧನ ಚಾಲಿತ ಹೈಬ್ರಿಡ್‌ ವಾಹನ, ಪ್ರವಾಸೋದ್ಯಮ ಮತ್ತು ಹೋಟೆಲ್‌ಗಳ ಮೇಲೆ ವಿಧಿಸಿರುವ ತೆರಿಗೆಗಳು ವಹಿವಾಟಿಗೆ ಧಕ್ಕೆ ಒದಗಿಸಲಿವೆ. ಚಿನ್ನ: ಬೆಳ್ಳಿ ಮತ್ತು ವಜ್ರದ ಮೇಲೆ ಶೇ 3ರಷ್ಟು ತೆರಿಗೆ ವಿಧಿಸಲಾಗಿದೆ. ಸದ್ಯಕ್ಕೆ ಚಿನ್ನದ ಮೇಲೆ ಶೇ 1 ರಷ್ಟು ಅಬಕಾರಿ ಸುಂಕ ಮತ್ತು ಹಲವು ರಾಜ್ಯಗಳಲ್ಲಿ ಶೇ 1ರಷ್ಟು ಮೌಲ್ಯವರ್ಧಿತ ತೆರಿಗೆ (ವ್ಯಾಟ್‌) ಇದೆ. ಈಗ ಶೇ 3ರಷ್ಟು ಜಿಎಸ್‌ಟಿ ಕಾರಣಕ್ಕೆ ಚಿನ್ನ ಖರೀದಿ ತುಟ್ಟಿಯಾಗಲಿದೆ. ವಿಮೆ, ಆರೋಗ್ಯ, ಕಾರ್‌ ವಿಮೆ ಕಂತುಗಳು ದುಬಾರಿಯಾಗಿ ಪರಿಣಮಿಸಲಿವೆ. ಸದ್ಯಕ್ಕೆ ಶೇ 15ರಷ್ಟು ಇರುವ ತೆರಿಗೆ ದರ ಶೇ 18ಕ್ಕೆ ಏರಲಿದೆ.

ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗೆ ಇರುವ ಉತ್ಪನ್ನಗಳು

ಪೆಟ್ರೋಲ್‌, ಡೀಸೆಲ್‌, ನೈಸರ್ಗಿಕ ಅನಿಲ, ವಿಮಾನ ಇಂಧನ, ಮದ್ಯ ಮತ್ತು ವಿದ್ಯುತ್‌ –ಈ ಸರಕುಗಳಿಗೆ ಸಂಬಂಧಿಸಿದಂತೆ ಸದ್ಯ ಜಾರಿಯಲ್ಲಿ ಇರುವ ವ್ಯಾಟ್‌ ಮತ್ತು ಕೇಂದ್ರೀಯ ಅಬಕಾರಿ ಸುಂಕಗಳು ಮುಂದುವರೆಯಲಿವೆ.

ಜಿಎಸ್‌ಟಿಯ ವೈಶಿಷ್ಟ್ಯಗಳು

  • ವರ್ಷಕ್ಕೆ ₹ 20 ಲಕ್ಷದವರೆಗೆ ವಹಿವಾಟು ನಡೆಸುವವರಿಗೆ ಜಿಎಸ್‌ಟಿ ಅನ್ವಯವಾಗದು.
  • ರಾಜ್ಯ ಸರ್ಕಾರಗಳಿಗೆ 5 ವರ್ಷಗಳವರೆಗೆ ನಷ್ಟ ಭರ್ತಿ ಮಾಡಿಕೊಡಲಿರುವ ಕೇಂದ್ರ ಸರ್ಕಾರ.
  • ಸರಕು ಮತ್ತು ಸೇವೆಗಳ ತೆರಿಗೆ ದರಗಳು, ನಾಲ್ಕು ಹಂತಗಳಲ್ಲಿ (ಶೇ 5, 12, 18 ಮತ್ತು 28) ನಿಗದಿ.
  • ವಿಲಾಸಿ ಸರಕು, ತಂಪು ಪಾನೀಯ ಮತ್ತು ಆರೋಗ್ಯಕ್ಕೆ ಹಾನಿಕರವಾಗಿರುವ ತಂಬಾಕು ಮತ್ತು ಪಾನ್‌ ಮಸಾಲಾ ಉತ್ಪನ್ನಗಳ ಮೇಲೆ (ಬೀಡಿ ಹೊರತುಪಡಿಸಿ) ವಿಧಿಸಬಹುದಾದ ಸೆಸ್‌ನ ಗರಿಷ್ಠ ದರ ಶೇ 15ರಷ್ಟಕ್ಕೆ ನಿಗದಿ.
  • ಜಿಎಸ್‌ಟಿ ಗರಿಷ್ಠ ದರ ಶೇ 40ರಷ್ಟಕ್ಕೆ ನಿಗದಿ.

ತುಟ್ಟಿಯಾಗುವ ಸರಕುಗಳು/ ಸೇವೆ

2017 ರ ಜುಲೈ 1 ರಿಂದ ಜಾರಿಯಅಗುವ ಸರಕು ಮತ್ತು ಸೇವಾತೆರಿಗೆಗಳು:

ಸರಕು ಹಾಲಿ ತೆರಿಗೆ ತೆರಿಗೆ ದರ ಶೇಕಡಾವಾರ ಜಿ.ಎಸ್.ಟಿ.
ಸಕ್ಕರೆ , ಚಹಾ, ಖಾದ್ಯ ತೈಲ 5
ಇನ್-ಕಾಫಿ,ಸುಗಂಧ, ಸೌಂದರ್ಯ ಸಾಮಗ್ರಿ+ಶಾಂಪು 28
ಚಿನ್ನ 2 3
ವಿಮೆ 15 18
ಬ್ಯಾಂಕ್ ಸೇವೆ 15 18
ಮೊಬೈಲ್ ಬಿಲ್ 15 18
ಔಷಧಿಗಳು(ಅಬಕಾರಿ ಸೀಮಾಸುಂಕ ವಿನಾಯಿತಿ) 5
ಬ್ರ್ಯಾಂಡೆಡ್ ಗುಟ್ಕಾ, . 72
ಬೈಕು ೩೫೦ಸಿಸಿ ಗೂ ಹೆಚ್ಚು 31
ಕಾರು 28
ಗಾತ್ರ ಆದರಿಸಿ ಹೆಚ್ಚುವರಿ ಸೆಸ್
ಹೈಬ್ರಿಡ್ ಕಾರು 29 43
ಬಿಸಿನೆಸ್ ದರ್ಜೆ ವಿಮಾನ ಪ್ರಯಾಣ 9 12
ಮನರಂಜನಾ ಪಾರ್ಕು ಐಪಿಲ್ ಪಂದ್ಯ 28
ಆಯುರ್ವೇದ ಉತ್ಪನ್ನಗಳು 8 -9 12
ಎಸಿ ರೈಲು ಪ್ರಯಾಣ 4.5 5
ಪ್ಲ್ಯಾಟ್ ನಿರ್ವಹಣೆಪ್ರತಿ ತಿಂ.೫೦೦೦ ನಿರ್ವಹಣೆ ಯವರು 15.5 18

ಅಗ್ಗವಾಗುವ ಸರಕು ಮತ್ತು ಸೇವೆ

  • ಸದ್ಯಕ್ಕೆ ಶೇ. ೪೮ರಿಂದ ೫೫ ರಷ್ಟು ತೆರಿಗೆಗೆ ಒಳಪಟ್ಟಿರುವ ಎಸ್ ಯು ವಿ ಗಳು
  • 2017 ರ ಜುಲೈ 1 ರಿಂದ ಜಾರಿಯಅಗುವ ಸರಕು ಮತ್ತು ಸೇವಾತೆರಿಗೆಗಳು:
ಸರಕು ಹಾಲಿ ತೆರಿಗೆ ತೆರಿಗೆ ದರ ಶೇಕಡಾವಾರ ಜಿ.ಎಸ್.ಟಿ.
ಆಹಾರ ಧಾನ್ಯ 22 ರಿಂದ 24 --
ಸ್ಮಾರ್ಟ್ ಫೋನು 5 ರಿಂದ 15 12
ಕೇಶ ತೈಲ; ಸೋಪು; ಟೂತ್ ಪೇಸ್ಟು 22 ರಿಂದ 24 18
ಓಲಾ ಉಬರ್ 6 5
ಇಕನಾಮಿಕ್ ವಿಮಾನ ಪ್ರಯಾಣ 6 5
ಕಲ್ಲಿದ್ದಲಿ -(ವಿದ್ಯುತ್ ಉತ್ಪಾದನೆಗೆ) 11.69 5
ಸಿಮೆಂಟು 31 28

ತೆರಿಗೆ ಕಡಿತ

  • ಆಹಾರ ವಸ್ತುಗಳಾದ ಉಪ್ಪಿನಕಾಯಿ, ಸಾಸಿವೆ ಸಾಸ್, ಮಧುಮೇಹದ ಚಿಕಿತ್ಸೆಗೆ ಬಳಸುವ ಇನ್ಸುಲಿನ್, ಎಲೆಕ್ಟ್ರಾನಿಕ್ ವಸ್ತುವಾದ ಪ್ರಿಂಟರ್, ರೂ.150ಕ್ಕಿಂತ ಕಡಿಮೆ ದರದ ಸಿನಿಮಾ ಟಿಕೆಟ್‌ ಸೇರಿದಂತೆ ಒಟ್ಟು 66 ವಸ್ತುಗಳ ತೆರಿಗೆ ದರವನ್ನು ಕಡಿಮೆ ಮಾಡಲಾಗಿದೆ. ದಿ.೧೧-೬-೨೦೧೭ ಭಾನುವಾರ ನಡೆದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಮಿತಿಯ 16ನೇ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ನೋಡಿ

ಉಲ್ಲೇಖ

Tags:

🔥 Trending searches on Wiki ಕನ್ನಡ:

ಕರ್ನಾಟಕ ಜನಪದ ನೃತ್ಯಹಳೆಗನ್ನಡಟೊಮೇಟೊಸರ್ಪ ಸುತ್ತುತತ್ಪುರುಷ ಸಮಾಸಬಸವೇಶ್ವರಸಮರ ಕಲೆಗಳುಸುದೀಪ್ದೇವರ/ಜೇಡರ ದಾಸಿಮಯ್ಯಕನ್ನಡ ವ್ಯಾಕರಣಕವಿಗಳ ಕಾವ್ಯನಾಮಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಸಂಸ್ಕಾರಪಂಚತಂತ್ರಮಾಸಚಂಪೂಜಶ್ತ್ವ ಸಂಧಿಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಹಿಂದೂ ಧರ್ಮಭಾರತದ ಬಂದರುಗಳುಭಾರತ ಬಿಟ್ಟು ತೊಲಗಿ ಚಳುವಳಿಸಾಮಾಜಿಕ ಸಮಸ್ಯೆಗಳುಸಾವಿತ್ರಿಬಾಯಿ ಫುಲೆಬೆಲ್ಲಭಾರತದ ರಾಜಕೀಯ ಪಕ್ಷಗಳುಮೈಸೂರುಸಹಕಾರಿ ಸಂಘಗಳುರಂಗಭೂಮಿಸ್ವರಸಂಯುಕ್ತ ರಾಷ್ಟ್ರ ಸಂಸ್ಥೆಗೊರೂರು ರಾಮಸ್ವಾಮಿ ಅಯ್ಯಂಗಾರ್ಹೊಸ ಆರ್ಥಿಕ ನೀತಿ ೧೯೯೧ಪರಿಸರ ಕಾನೂನುತಂತ್ರಜ್ಞಾನಹಸ್ತ ಮೈಥುನಕೇಶಿರಾಜರಾಜಕೀಯ ವಿಜ್ಞಾನದ್ರವೀಕೃತ ಪೆಟ್ರೋಲಿಯಮ್‌ ಅನಿಲ(ಎಲ್‌ಪಿಜಿ),ಬಾದಾಮಿ ಶಾಸನಹದಿಬದೆಯ ಧರ್ಮಒಲಂಪಿಕ್ ಕ್ರೀಡಾಕೂಟಉಡಚಿಕ್ಕಮಗಳೂರುಗ್ರಹಣಉತ್ತರ ಕರ್ನಾಟಕಹಲ್ಮಿಡಿ ಶಾಸನಹನುಮಾನ್ ಚಾಲೀಸರಾಷ್ಟ್ರಕೂಟಸಮಾಜಶಾಸ್ತ್ರಚುನಾವಣೆಹುಣ್ಣಿಮೆತಾಜ್ ಮಹಲ್ಹಲಸುಭಾರತದ ಭೌಗೋಳಿಕತೆಪ್ರಜಾವಾಣಿಮಾವುಕೈಕೇಯಿಮಾಧ್ಯಮಬಿ. ಆರ್. ಅಂಬೇಡ್ಕರ್ಭಾರತದ ಜನಸಂಖ್ಯೆಯ ಬೆಳವಣಿಗೆಎಕರೆಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಾಳಿಂಬೆಗೌತಮ ಬುದ್ಧಕಂಸಾಳೆಹೊಯ್ಸಳತೆಂಗಿನಕಾಯಿ ಮರರಕ್ತ ದಾನಕರ್ನಾಟಕದ ವಾಸ್ತುಶಿಲ್ಪಮಹಾಕವಿ ರನ್ನನ ಗದಾಯುದ್ಧಕರ್ನಾಟಕದ ಮುಖ್ಯಮಂತ್ರಿಗಳುಹೆಳವನಕಟ್ಟೆ ಗಿರಿಯಮ್ಮರಾಣಿ ಅಬ್ಬಕ್ಕಬ್ಯಾಡ್ಮಿಂಟನ್‌ಭಾರತದ ತ್ರಿವರ್ಣ ಧ್ವಜಮುಟ್ಟು ನಿಲ್ಲುವಿಕೆಕಾನೂನುಪ್ರೀತಿ🡆 More