ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ

ಹಿಂದುಸ್ತಾನಿ ಸಂಗೀತ ಭಾರತದ ಎರಡು ಮುಖ್ಯ ಶಾಸ್ತ್ರೀಯ ಸಂಗೀತ ಪದ್ಧತಿಗಳಲ್ಲಿ ಒಂದು; ಉತ್ತರ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಭಾಗಶಃ ಕರ್ನಾಟಕ ರಾಜ್ಯದಲ್ಲಿ ಪ್ರಚಲಿತವಾಗಿದೆ.

ಭಾರತದಲ್ಲಿ ಶಾಸ್ತ್ರೀಯ ಸಂಗೀತ ಧಾರ್ಮಿಕ ಅಂಗವಾಗಿ ಸಾಮವೇದ ಸಂಪ್ರದಾಯದಲ್ಲಿ ಹುಟ್ಟಿತು ಎಂದು ನಂಬಲಾಗಿದೆ. ೧೩-೧೪ ನೆಯ ಶತಮಾನಗಳಲ್ಲಿ ಉತ್ತರ ಭಾರತದಲ್ಲಿ ದೆಹಲಿ ಸುಲ್ತಾನೇಟ್ ಮತ್ತು ಮೊಘಲ್ ಸಾಮ್ರಾಜ್ಯದ ಆಡಳಿತ ಪ್ರಾರಂಭವಾದ ನಂತರ ಅನೇಕ ಸಂಗೀತಗಾರರು ಈ ರಾಜರ ಬಳಿ ಆಶ್ರಯ ಪಡೆದರು. ಮುಸ್ಲಿಮ್ ರಾಜರ ಆಸ್ಥಾನಗಳಲ್ಲಿ ಭಾರತೀಯ ಸಂಗೀತ ಪರ್ಷಿಯದ ಸಾಕಷ್ಟು ಸಂಗೀತ ತತ್ವಗಳನ್ನು ತನ್ನದಾಗಿಸಿಕೊಂಡಿತು. ಈ ಸಂಯುಕ್ತ ಸಂಪ್ರದಾಯ ಹಿಂದುಸ್ತಾನಿ ಸಂಗೀತವಾಗಿ ಬೆಳವಣಿಗೆ ಹೊಂದಿದೆ.

ಮೊಘಲ್ ಕಾಲದ ಪ್ರಸಿದ್ಧ ಸಂಗೀತಗಾರ ಅಮೀರ್ ಖುಸ್ರೋ - ವೈದಿಕ ಸಂಪ್ರದಾಯದ ಸಂಗೀತ ಮತ್ತು ಪರ್ಷಿಯನ್ ಸಂಗೀತಗಳನ್ನು ಸಮಾಗಮಗೊಳಿಸಲು ಸಾಧ್ಯವಾಗುವ ಅನೇಕೆ ವಿಧಾನಗಳ ಪಿತಾಮಹ ಅಮೀರ್ ಖುಸ್ರೋ ಎಂದು ಪರಿಗಣಿಸಲಾಗಿದೆ. ಮೊಘಲ್ ಸಾಮ್ರಾಜ್ಯದ ಉನ್ನತಿಯಲ್ಲಿ ಅಕ್ಬರ್‍ನ ಆಡಳಿತದ ಕಾಲದ ಇನ್ನೊಬ್ಬ ಪ್ರಸಿದ್ಧ ಸಂಗೀತಗಾರ ತಾನ್ ಸೇನ್.

ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ
ಭೀಮ್‍ಸೇನ್ ಜೋಷಿ - ಹಿಂದುಸ್ತಾನೀ ಸಂಗೀತ ಪದ್ಧತಿಯ ಸುಪ್ರಸಿದ್ಧ ಗಾಯಕರು

ಪ್ರಸಿದ್ಧ ಸಂಗೀತಗಾರರು

ಹಾಡುಗಾರರು

ಈ ಸಂಗೀತ ಪದ್ಧತಿಯ ಪ್ರಸಿದ್ಧ ಹಾಡುಗಾರರಲ್ಲಿ ಪಂಡಿತ್ ಗುರುರಾವ್ ದೇಶಪಾಂಡೆ, ಪಂಡಿತ್ ಭೀಮಸೇನ್ ಜೋಷಿ,ಪಂಡಿತ್ ಜಸ್ ರಾಜ್, ಮಲ್ಲಿಕಾರ್ಜುನ ಮನ್ಸೂರ್, ಗಂಗೂಬಾಯಿ ಹಾನಗಲ್, ಬಸವರಾಜ ರಾಜಗುರು, ನಸ್ರತ್ ಫತೇ ಅಲಿ ಖಾನ್ (ಪಾಕಿಸ್ತಾನ) ಮೊದಲಾದವರನ್ನು ಹೆಸರಿಸಬಹುದು.ಪದ್ಮಶ್ರೀ ಎಂ.ವೆಂಕಟೇಶ್ ಕುಮಾರ್, ಇತ್ತೀಚಿನ ವರ್ಷಗಳಲ್ಲಿ ಪ್ರಸಿದ್ಧಿ ಪಡೆದವರಲ್ಲಿ ವಿನಾಯಕ ತೊರವಿ , ರಷೀದ್ ಖಾನ್, ಸಂಜೀವ್ ಅಭ್ಯಂಕರ್ ಮೊದಲಾದವರು ಸೇರಿದ್ದಾರೆ.

ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ 
ಸಂತೂರ್ ಹಿಂದುಸ್ತಾನಿ ಸಂಗೀತದ ಪ್ರಸಿದ್ಧ ವಾದ್ಯಗಳಲ್ಲೊಂದು

ವಾದ್ಯ

ಹಿಂದುಸ್ತಾನಿ ಸಂಗೀತ ಪದ್ಧತಿಯಲ್ಲಿ ಸಾಮಾನ್ಯವಾಗಿ ಉಪಯೋಗಿಸಲಾಗುವ ವಾದ್ಯಗಳಲ್ಲಿ ಸಿತಾರ್, ಸರೋದ್, ತಬಲಾ, ಸಾರಂಗಿ, ಸಂತೂರ್ ಮೊದಲಾದವುಗಳನ್ನು ಹೆಸರಿಸಬಹುದು. ವಾದ್ಯಗಳಲ್ಲಿ ಪರಿಣತಿ ಪಡೆದ ಸಂಗೀತಗಾರರಲ್ಲಿ ಅತಿ ಪ್ರಸಿದ್ಧರಾದವರಲ್ಲಿ ಕೆಲವರು: ಉಸ್ತಾದ್ ಬಿಸ್ಮಿಲ್ಲಾ ಖಾನ್(ಶಹನಾಯಿ), ಪಂಡಿತ್ ರವಿ ಶಂಕರ್ (ಸಿತಾರ್), ಶಿವಕುಮಾರ್ ಶರ್ಮಾ (ಸಂತೂರ್), ಹರಿಪ್ರಸಾದ್ ಚೌರಾಸಿಯಾ (ಕೊಳಲು), ಅಲ್ಲಾ ರಖಾ ಮತ್ತುಜಾಕಿರ್ ಹುಸೇನ್ (ಸಂಗೀತಗಾರ) (ತಬಲಾ), ಅಲಿ ಅಕ್ಬರ್ ಖಾನ್ ಮತ್ತು ಅಮ್ಜದ್ ಅಲಿ ಖಾನ್ (ಸರೋದ್).

ಸಂಗೀತ ಪ್ರಕಾರಗಳು

ಹಿಂದುಸ್ತಾನಿ ಹಾಡುಗಾರಿಕೆಗೆ ಸಂಬಂಧಪಟ್ಟಂತೆ ಹೆಚ್ಚಾಗಿ ಬಳಕೆಯಲ್ಲಿರುವ ಪ್ರಕಾರಗಳೆಂದರೆ ಖಯಾಲ್, ಗಜಲ್' ಮತ್ತು ಠುಮ್ರಿ. ಬಳಕೆಯಲ್ಲಿರುವ ಇತರ ಪ್ರಕಾರಗಳಲ್ಲಿ ಧ್ರುಪದ್, ಧಮಾರ್ ಮತ್ತು ತರಾನಾ ಗಳು ಸೇರಿವೆ.

ಧ್ರುಪದ್

ಧ್ರುಪದ್ ಕೃತಿಗಳು ಮುಖ್ಯವಾಗಿ ಭಕ್ತಿಪ್ರಧಾನವಾದ ಕೃತಿಗಳು. ಕೆಲವೊಮ್ಮೆ ವೀರರಸ ಪ್ರಧಾನವಾಗಿರಬಹುದು. ಬಹುಪಾಲು ಧ್ರುಪದ್ ಕೃತಿಗಳು ಮಧ್ಯಕಾಲೀನ ಹಿಂದಿ ಭಾಷೆಯಲ್ಲಿವೆ. ಪಕ್ಕವಾದ್ಯಗಳಾಗಿ ಸಾಮಾನ್ಯವಾಗಿ ತಂಬೂರಿ ಮತ್ತು ಪಖಾವಾಜ್ ಗಳು ಉಪಯೋಗಗೊಳ್ಳುತ್ತವೆ.

ಭಜನೆ

ಭಜನೆ ಹಿಂದೂ ಧರ್ಮದ ಧಾರ್ಮಿಕ ಸಂಗೀತ ಪ್ರಕಾರಗಳಲ್ಲಿ ಮುಖ್ಯವಾದುದು. ಭಜನೆಗಳ ಪ್ರಸಿದ್ಧ ಕವಿಗಳೆಂದರೆ ಕಬೀರ್, ತುಲಸಿದಾಸ್ ಮತ್ತು ಮೀರಾ ಬಾಯಿ. ಭಜನೆಗಳ ಉಗಮ ೯-೧೦ ನೆಯ ಶತಮಾನದ ಆಳ್ವಾರ್ ಭಕ್ತಿ ಪಂಥದ ಕಾಲದಲ್ಲಿ ಆಯಿತೆಂದು ಊಹಿಸಲಾಗಿದೆ.

ಗಜಲ್

ಗಜಲ್ ಮೂಲತಃ ಪರ್ಷಿಯಾದ ಸಂಗೀತ ಪ್ರಕಾರ. ಈಗಲೂ ಸಹ ಭಾರತದ ಹೊರಗೆ ಇರಾನ್, ಮಧ್ಯ ಏಷ್ಯಾ, ಟರ್ಕಿ ಮೊದಲಾದ ದೇಶಗಳಲ್ಲಿ ಈ ಸಂಗಿತ ಪ್ರಕಾರ ಪ್ರಚಲಿತವಾಗಿದೆ. ಭಾರತದಲ್ಲಿ ಗಜಲ್ ಗಳ ಜಾನಪದ ಹಾಗೂ ಜನಪ್ರಿಯ ರೂಪಾಂತರಗಳುಂಟು. ಭಾರತದ ಪ್ರಸಿದ್ಧ ಗಜಲ್ ಗಾಯಕರು ಜಗಜೀತ್ ಸಿಂಗ್, ಪಂಕಜ್ ಉಧಾಸ್ ಮೊದಲಾದವರು. ಪಾಕಿಸ್ತಾನದ ಮೆಹದಿ ಹಸನ್ ಮತ್ತು ಗುಲಾಂ ಅಲಿ ಈ ಶೈಲಿಯ ಪ್ರಸಿದ್ದ ಗಾಯಕರು. ಈ ಹಾಡುಗಳ ವಸ್ತು ಶೃಂಗಾರದಿಂದ ಭಕ್ತಿಯವರೆಗೆ ವ್ಯತ್ಯಾಸಗೊಳ್ಳುತ್ತದೆ.

ಖಯಾಲ್

ಇತ್ತೀಚಿನ ವರ್ಷಗಳಲ್ಲಿ ಹಿಂದುಸ್ತಾನಿ ಸಂಗೀತದ ಅತ್ಯಂತ ಜನಪ್ರಿಯ ಪ್ರಕಾರ ಖಯಾಲ್. ಈ ಪ್ರಕಾರದಲ್ಲಿ ಮನೋಧರ್ಮ ಸಂಗೀತದ ಪ್ರಾಮುಖ್ಯತೆ ಇತರ ಪ್ರಕಾರಗಳದ್ದಕ್ಕಿಂತ ಹೆಚ್ಚು. ೧೮ ನೆಯ ಶತಮಾನದಿಂದ ಇತ್ತೀಚೆಗೆ ಜನಪ್ರಿಯವಾದ ಈ ಪ್ರಕಾರದ ಇತ್ತೀಚಿನ ಹಾಡುಗಾರರಲ್ಲಿ ಪ್ರಸಿದ್ಧರಾದವರು ಭೀಮಸೇನ್ ಜೋಷಿ, ಮಲ್ಲಿಕಾರ್ಜುನ ಮನ್ಸೂರ್, ಮತ್ತಿತರರು.

ತರಾನಾ

ತರಾನಾಗಳು ಕರ್ನಾಟಕ ಸಂಗೀತ ಪದ್ಧತಿಯ ತಿಲ್ಲಾನಾ ಗಳನ್ನು ಹೋಲುವಂತಹ ಕೃತಿಗಳು. ಸಂತೋಷ ಭಾವವನ್ನು ಮೂಡಿಸುವ ಉದ್ದೇಶವನ್ನು ಹೊಂದಿರುವ ಈ ಕೃತಿಗಳನ್ನು ಸಾಮಾನ್ಯವಾಗಿ ಕಛೇರಿಗಳ ಕೊನೆಯಲ್ಲಿ ಹಾಡಲಾಗುತ್ತದೆ. ಲಯಬದ್ಧವಾದ ಶಬ್ದಪುಂಜಗಳು ಹೆಚ್ಚಿದ್ದು ಪದಗಳ ಬಳಕೆ ಈ ಪ್ರಕಾರದಲ್ಲಿ ಕಡಿಮೆ.

ಠುಮ್ರಿ

೧೯ ನೆಯ ಶತಮಾನದಲ್ಲಿ ಬಳಕೆಗೆ ಬಂದ ಶೃಂಗಾರ ರಸ ಪ್ರಧಾನವಾದ ಕೃತಿಗಳು. ಈ ಕೃತಿಗಳ ಭಾಷೆ ಸಾಮಾನ್ಯವಾಗಿ ಹಿಂದಿಯ ಪೂರ್ವರೂಪವಾದ ಬ್ರಜಭಾಷೆ. ಈ ಪ್ರಕಾರದ ಪ್ರಸಿದ್ಧ ಹಾಡುಗಾರರಲ್ಲಿ ಕೆಲವರೆಂದರೆ ಶೋಭಾ ಗುರ್ಟು, ಬಡೆ ಗುಲಾಮ್ ಅಲಿ ಖಾನ್ ಮತ್ತು ಗಿರಿಜಾ ದೇವಿ.

ಇವನ್ನೂ ನೋಡಿ

ಬಾಹ್ಯ ಸಂಪರ್ಕಗಳು

Tags:

ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಪ್ರಸಿದ್ಧ ಸಂಗೀತಗಾರರುಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಸಂಗೀತ ಪ್ರಕಾರಗಳುಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಇವನ್ನೂ ನೋಡಿಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಬಾಹ್ಯ ಸಂಪರ್ಕಗಳುಹಿಂದುಸ್ತಾನಿ ಶಾಸ್ತ್ರೀಯ ಸಂಗೀತಕರ್ನಾಟಕಭಾರತ

🔥 Trending searches on Wiki ಕನ್ನಡ:

ಕುದುರೆಭಾರತದ ಮಾನವ ಹಕ್ಕುಗಳುಜಾಹೀರಾತುಸೆಸ್ (ಮೇಲ್ತೆರಿಗೆ)ತ್ರಿಪದಿದರ್ಶನ್ ತೂಗುದೀಪ್ಜೀವನಅಕ್ಷಾಂಶ ಮತ್ತು ರೇಖಾಂಶಆಟಿಸಂಆಂಧ್ರ ಪ್ರದೇಶವಿಷ್ಣುಸಂಭೋಗಜೈನ ಧರ್ಮಬಾಹುಬಲಿಕವಿರಾಜಮಾರ್ಗಬ್ರಹ್ಮವಲ್ಲಭ್‌ಭಾಯಿ ಪಟೇಲ್ಧರ್ಮರಾಯ ಸ್ವಾಮಿ ದೇವಸ್ಥಾನಪರೀಕ್ಷೆಡಿ.ಕೆ ಶಿವಕುಮಾರ್ಭಾರತದ ಪ್ರಧಾನ ಮಂತ್ರಿಗಳ ಪಟ್ಟಿಕಾವ್ಯಮೀಮಾಂಸೆಬಯಲಾಟಇಮ್ಮಡಿ ಪುಲಕೇಶಿನಾಯಕ (ಜಾತಿ) ವಾಲ್ಮೀಕಿಸಂಖ್ಯೆಸುಗ್ಗಿ ಕುಣಿತಹೈದರಾಲಿಸಾಲುಮರದ ತಿಮ್ಮಕ್ಕಎಲೆಕ್ಟ್ರಾನಿಕ್ ಮತದಾನಸಾರ್ವಜನಿಕ ಆಡಳಿತಜೋಡು ನುಡಿಗಟ್ಟುಬಿ.ಜಯಶ್ರೀಶ್ರೀನಿವಾಸ ರಾಮಾನುಜನ್ಶಬ್ದಮಣಿದರ್ಪಣಕ್ರೀಡೆಗಳುಕಾರ್ಮಿಕರ ದಿನಾಚರಣೆಕರ್ನಾಟಕದ ಸಂಸ್ಕೃತಿಸಂಜಯ್ ಚೌಹಾಣ್ (ಸೈನಿಕ)ಭಗತ್ ಸಿಂಗ್ಕಬ್ಬುಹೃದಯಶಬ್ದ ಮಾಲಿನ್ಯಎಕರೆಗಣರಾಜ್ಯೋತ್ಸವ (ಭಾರತ)ಬೀಚಿಅತ್ತಿಮಬ್ಬೆವೆಂಕಟೇಶ್ವರ ದೇವಸ್ಥಾನಭಾರತದ ನದಿಗಳುವಿರಾಟ್ ಕೊಹ್ಲಿನುಡಿ (ತಂತ್ರಾಂಶ)ರಾಘವಾಂಕತುಮಕೂರುಜ್ಯೋತಿಬಾ ಫುಲೆಕನ್ನಡ ಜಾನಪದಮೊದಲನೇ ಅಮೋಘವರ್ಷಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುನವೋದಯಶಿಕ್ಷಕವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುವಿರಾಮ ಚಿಹ್ನೆಪ್ರಾಥಮಿಕ ಶಿಕ್ಷಣಕರ್ನಾಟಕದ ಅಣೆಕಟ್ಟುಗಳುಹುಲಿಮಾನವ ಹಕ್ಕುಗಳುಉಪನಯನಮೂಢನಂಬಿಕೆಗಳುಗಂಗ (ರಾಜಮನೆತನ)ಭಾರತದ ಚುನಾವಣಾ ಆಯೋಗಅಷ್ಟ ಮಠಗಳುಚಿಲ್ಲರೆ ವ್ಯಾಪಾರವಿಮರ್ಶೆಹಾಸನಭಾಷಾ ವಿಜ್ಞಾನಪಂಚಾಂಗ🡆 More