ಮಲ್ಲಿಕಾರ್ಜುನ ಮನ್ಸೂರ್

ಮಲ್ಲಿಕಾರ್ಜುನ ಭೀಮರಾಯಪ್ಪ ಮನ್ಸೂರ್ (೧೯೧೧–೧೯೯೨) ಒಬ್ಬ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ.

ಇವರು ಜೈಪುರ-ಅತ್ರೋಲಿ ಘರಾನಾದ 'ಖಯಾಲಿ' ಶೈಲಿಯ ಸಂಗಿತಗಾರರಾಗಿದ್ದರು. ಇವರಿಗೆ ೩ ಪದ್ಮ ಪ್ರಶಸಿಗಳನ್ನು ನೀಡಿ ಭಾರತ ಸರ್ಕಾರ ಗೌರವಿಸಿದೆ: ೧೯೭೦ರಲ್ಲಿ ಪದ್ಮಶ್ರೀ, ೧೯೭೬ರಲ್ಲಿ ಪದ್ಮ ಭೂಷಣ, ಮತ್ತು ೧೯೯೨ರಲ್ಲಿ ಪದ್ಮವಿಭೂಷಣ.

Mallikarjun Mansur
ಮಲ್ಲಿಕಾರ್ಜುನ ಮನ್ಸೂರ್
ಹಿನ್ನೆಲೆ ಮಾಹಿತಿ
ಅಡ್ಡಹೆಸರುಮಲ್ಲಿಕಾರ್ಜುನ ಮನ್ಸೂರ್
ಜನನಡಿಸೆಂಬರ್ ೩೧, ೧೯೧೦
ಮೂಲಸ್ಥಳಮನ್ಸೂರ್, ಧಾರವಾಡ, ಕರ್ನಾಟಕ
ಸಂಗೀತ ಶೈಲಿಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ
ವೃತ್ತಿಗಾಯಕ
ಸಕ್ರಿಯ ವರ್ಷಗಳು೧೯೨೮(?) - ೧೯೯೨

ಮಲ್ಲಿಕಾರ್ಜುನ ಮನ್ಸೂರ್' ಕನ್ನಡ ನಾಡು ಕಂಡ ಶ್ರೇಷ್ಠ ಸಂಗೀತ ಪ್ರತಿಭೆ. ಇವರು ಹಾಡಿದ್ದು ಹಿಂದೂಸ್ತಾನಿ ಖಯಾಲ್ ಸಂಗೀತ ಶೈಲಿಯ ಜೈಪುರಿ-ಅತ್ರೊಲಿ ಘರಾಣೆಯಯಲ್ಲಿ. ನೀಲಕಂಠ ಬುವಾ ಮತ್ತು ಪ್ರಖ್ಯಾತ ಸಂಗೀತಕಾರ ಅಲ್ಲಾದಿಯಾ ಖಾನ್ ಅವರ ಪುತ್ರರಾದ ಮಂಜಿ ಖಾನ್ ಹಾಗೂ ಬುರಜಿ ಖಾನ್ ಇವರ ಸಂಗೀತ ಗುರುಗಳಲ್ಲಿ ಪ್ರಮುಖರಾಗಿದ್ದಾರೆ. ಸುಮಾರು ೬೦ ವರುಷಗಳಿಗಿಂತ ಹೆಚ್ಚು ಕಾಲ ದೇಶ-ವಿದೇಶಗಳಲ್ಲಿ ಸಂಗೀತ ಸುಧೆಯನ್ನು ಹರಿಸಿದ ಮಹಾನ್ ಸಂಗೀತಗಾರ ಮಲ್ಲಿಕಾರ್ಜುನ ಮನ್ಸೂರ್. ಬಾಲ್ಯದಲ್ಲಿ ನಾಟಕಗಳಲ್ಲಿ ಪಾತ್ರ ಮಾಡಿ, ಪ್ರಹ್ಲಾದ, ಧ್ರುವ, ನಾರದ ಮೊದಲಾದ ಪಾತ್ರಗಳ ಅಭಿನಯಕ್ಕಾಗಿ ಅಪಾರ ಜನಪ್ರಿಯತೆ ಗಳಿಸಿದರೂ, ಸಂಗೀತದ ಒಲವು ಅವರನ್ನು ಸಂಗೀತದ ಸಾಧನೆಗೆ ಕರೆದೊಯ್ಯಿತು. ಬಡ ಕುಟುಂಬದಿಂದ ಬಂದ ಮಲ್ಲಿಕಾರ್ಜುನ ಮನ್ಸೂರ್, ಸರಳ ಜೀವನ, ವಿನಯತೆ ಮತ್ತು ನೇರನುಡಿಗಾಗಿ ಪ್ರಸಿದ್ಧರು. ಸಂಗೀತವೇ ನನ್ನ ಜೀವನ, ನನ್ನ ಕಾಯಕ ಮತ್ತು ಪೂಜೆ ಎಂದು ಹೇಳಿ, ಬಾಳಿದವರು ಮಲ್ಲಿಕಾರ್ಜುನ ಮನ್ಸೂರ್. ಮಹಾತ್ಮ ಗಾಂಧೀಜಿ ಮತ್ತು ಧಾರವಾಡಮುರುಘಾ ಮಠದ ಮೃತ್ಯುಂಜಯ ಮಹಾಸ್ವಾಮಿಗಳವರಿಂದ ಪ್ರಭಾವಿತರಾದ ಇವರು, ವಚನ ಸಂಗೀತಕ್ಕಾಗಿ ನೀಡಿದ ಕೊಡುಗೆ ಅಪಾರ.

ಇವರು ತಮ್ಮ ಜೀವನ ಚಿತ್ರವನ್ನು "ನನ್ನ ರಸಯಾತ್ರೆ" ಎಂಬ ಹೆಸರಿನ ಪುಸ್ತಕದಲ್ಲಿ ದಾಖಲಿಸಿದ್ದಾರೆ. ದೇಶದ ಪ್ರತಿಷ್ಠತ ಪ್ರಶಸ್ತಿ ಕಾಳಿದಾಸ ಸಮ್ಮಾನ್ ಪಡೆದ ಪ್ರಥಮ ಕನ್ನಡಿಗ ಸಂಗೀತಗಾರರು ಇವರು. ಕರ್ನಾಟಕ ವಿಶ್ವವಿದ್ಯಾಲಯವು ಇವರಿಗೆ ಗೌರವ ಡಾಕ್ಟರೇಟ್ ನೀಡಿದೆ.ಭಾರತ ಸರಕಾರ ಇವರಿಗೆ ಪದ್ಮವಿಭೂಷಣಪ್ರಶಸ್ತಿಯನ್ನಿತ್ತು ಗೌರವಿಸಿದೆ. ಪ್ರಚಾರ, ರಾಜಕೀಯದಿಂದ ದೂರ ಉಳಿದ ಮಲ್ಲಿಕಾರ್ಜುನ ಮನ್ಸೂರ್ ಪ್ರಶಸ್ತಿಗಳು,ಸನ್ಮಾನಗಳಿಗಾಗಿ ಹಾತೊರಯಲಿಲ್ಲ. ಇವರ ಸುಪುತ್ರ ರಾಜಶೇಖರ ಮನ್ಸೂರ್ ತಂದೆಯಂತೆ ಪ್ರಸಿದ್ಧ ಸಂಗೀತಕಾರರಾಗಿದ್ದಾರೆ.

ವೃತ್ತಿಜೀವನ

ಮಲ್ಲಿಕಾರ್ಜುನ ಮನ್ಸೂರ್ 
Mallikarjun Mansur

ಮನ್ಸೂರ್ ಅವರು ದೊಡ್ಡ ಪ್ರಮಾಣದ ಅಪರೂಪದ (ಅಪ್ರಚಲಿತ) ರಾಗಗಳಾದ ಶುದ್ಧ ನಾಟ, ಅಸಾ ಜೋಜಿಯ, ಹೇಮ್ ನಾಟ್ , ಲಚಚಾಕ್, ಖಾತ್, ಶಿವಮತ್ ಭೈರವ್, ಬಿಹಾರಿ, ಸಂಪೂರ್ಣ ಮಾಲ್ಕೌಂಸ್, ಲಾಜವಂತಿ, ಅಡಂಬರಿ ಕೇದಾರ್, ಏಕ್ ನಿಶಾದ್ ಬಿಹಾಗ್ಡಾ ಮತ್ತು ಬಹಾದುರಿ ತೋಡಿ ಗಳನ್ನು ಜನಪ್ರಿಯಗೊಳಿಸಿದರು. ಹಾಡಿನ ಭಾವನಾತ್ಮಕ ವಿಷಯವನ್ನು ಅವರು ಕಳೆದುಕೊಳ್ಳದೇ ನಿರಂತರ, ಮಧುರ ಮತ್ತು ಮೀಟರ್ನಲ್ಲಿ ಹಾಡುತ್ತಿದ್ದರು ಅವರ ಧ್ವನಿ ಮತ್ತು ಶೈಲಿ ಮಂಜಿ ಖಾನ್ ಮತ್ತು ನಾರಾಯಣರಾವ್ ವ್ಯಾಸ್ನಂತೆ ಹೋಲುತ್ತಿತ್ತು, ಆದರೆ ಕ್ರಮೇಣ ಅವರು ತಮ್ಮ ಸ್ವಂತ ಶೈಲಿಯ ಚಿತ್ರಣವನ್ನು ಅಭಿವೃದ್ಧಿಪಡಿಸಿದರು.

ಅವರು ಅವರ ಮಾಸ್ಟರ್ಸ್ ವಾಯ್ಸ್ ಜೊತೆಗೆ ಸಂಗೀತ ನಿರ್ದೇಶಕರಾಗಿದ್ದರು ಮತ್ತು ಆಲ್ ಇಂಡಿಯಾ ಆಕಾಶವಾಣಿ ಕೇಂದ್ರ ಧಾರವಾಡದಲ್ಲಿ ಸಂಗೀತ ಸಲಹೆಗಾರಾಗಿದ್ದರು.

ಬಾಹ್ಯ ಸಂಪರ್ಕಗಳು

ಉಲ್ಲೇಖಗಳು

+

Tags:

ಪದ್ಮ ಭೂಷಣಪದ್ಮವಿಭೂಷಣಪದ್ಮಶ್ರೀಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ

🔥 Trending searches on Wiki ಕನ್ನಡ:

ಮಡಿಕೇರಿಭಾರತದ ಸರ್ವೋಚ್ಛ ನ್ಯಾಯಾಲಯಅಂಬರೀಶ್ ನಟನೆಯ ಚಲನಚಿತ್ರಗಳುಗಾಳಿ/ವಾಯುರಾಜಕೀಯ ಪಕ್ಷಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ದೇವನೂರು ಮಹಾದೇವಚಾಮುಂಡೇಶ್ವರಿ ದೇವಸ್ಥಾನ, ಮೈಸೂರುರಾಜ್‌ಕುಮಾರ್ಕರ್ನಾಟಕದ ವಿಧಾನ ಸಭಾ ಕ್ಷೇತ್ರಗಳುನೀತಿ ಆಯೋಗಊಟದಯಾನಂದ ಸರಸ್ವತಿಪ್ರಾರ್ಥನಾ ಸಮಾಜರಗಳೆಹಾಸನಕ್ರಿಯಾಪದಮಹಾಕಾವ್ಯಮಹಮ್ಮದ್ ಘಜ್ನಿಇನ್ಸ್ಟಾಗ್ರಾಮ್ಪ್ರಜಾಪ್ರಭುತ್ವಕನ್ನಡ ಛಂದಸ್ಸುಸಂಭೋಗದಿಯಾ (ಚಲನಚಿತ್ರ)ಅಡಿಕೆರಮ್ಯಾ ಕೃಷ್ಣನ್ಜಯಮಾಲಾಭಾರತೀಯ ಸಂವಿಧಾನದ ತಿದ್ದುಪಡಿಭಾರತದ ಸಂಸತ್ತುಬಿ. ಎಂ. ಶ್ರೀಕಂಠಯ್ಯವೇದಬಿಳಿ ರಕ್ತ ಕಣಗಳುತತ್ತ್ವಶಾಸ್ತ್ರಸಂಯುಕ್ತ ರಾಷ್ಟ್ರ ಸಂಸ್ಥೆಗಣರಾಜ್ಯೋತ್ಸವ (ಭಾರತ)ಪ್ರಬಂಧಅನಂತ್ ನಾಗ್ರಾಜಧಾನಿಗಳ ಪಟ್ಟಿರಾಜಕೀಯ ವಿಜ್ಞಾನಪ್ರಜ್ವಲ್ ರೇವಣ್ಣಮಂಡಲ ಹಾವುಆದಿ ಶಂಕರಹೃದಯಾಘಾತಬೌದ್ಧ ಧರ್ಮಶಬರಿನ್ಯೂ ಜೀಲ್ಯಾಂಡ್ ಕ್ರಿಕೆಟ್ ತಂಡಭಾರತ ರತ್ನಲೋಕಸಭೆನಿರಂಜನಜಾಗತಿಕ ತಾಪಮಾನ ಏರಿಕೆಪಾಂಡವರುಪ್ರಗತಿಶೀಲ ಸಾಹಿತ್ಯಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಕರ್ನಾಟಕ ಹಿಂದುಳಿದ ವರ್ಗಗಳ ಆಯೋಗಗಳುಉತ್ತರ ಕನ್ನಡಬಸವೇಶ್ವರಮಹಾಲಕ್ಷ್ಮಿ (ನಟಿ)ಚುನಾವಣೆನಿರುದ್ಯೋಗಡೊಳ್ಳು ಕುಣಿತದಶಾವತಾರಶ್ರೀ ರಾಮಾಯಣ ದರ್ಶನಂಮತದಾನಭಾರತದಲ್ಲಿನ ಜಾತಿ ಪದ್ದತಿಕರ್ನಾಟಕದ ತಾಲೂಕುಗಳುಕಲ್ಪನಾದೇಶಗಳ ವಿಸ್ತೀರ್ಣ ಪಟ್ಟಿಮೈಸೂರು ಅರಮನೆಕರ್ನಾಟಕ ವಿಧಾನ ಸಭೆಸಾಮಾಜಿಕ ಸಮಸ್ಯೆಗಳುಆಯುರ್ವೇದಸಿದ್ದರಾಮಯ್ಯಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಆರೋಗ್ಯಹನುಮಾನ್ ಚಾಲೀಸಕೃಷ್ಣಾ ನದಿಗಣೇಶ ಚತುರ್ಥಿ🡆 More