ಬಿ.ಜಯಶ್ರೀ: ರಂಗ ಕಲಾವಿದೆ, ನಟಿ, ಗಾಯಕಿ

ಬಿ.ಜಯಶ್ರೀ ವೃತ್ತಿರಂಗಭೂಮಿಯ ಹೆಸರಾಂತ ಕಲಾವಿದ ಗುಬ್ಬಿ ವೀರಣ್ಣನವರ ಮೊಮ್ಮಗಳು.

ರಂಗಭೂಮಿ ಮತ್ತು ಚಲನಚಿತ್ರದಲ್ಲಿ ಕೆಲಸ ಮಾಡುತ್ತಿರುವ ಹಿರಿಯ ಕಲಾವಿದರಲ್ಲಿ ಒಬ್ಬರಾಗಿದ್ದಾರೆ. ಪ್ರಸಿದ್ಧ ಗಾಯಕರೂ ಆಗಿದ್ದಾರೆ. ಇವರು ೨೦೧೩ ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿದ್ದಾರೆ.

ಬಿ. ಜಯಶ್ರೀ
ಬಿ.ಜಯಶ್ರೀ: ಜೀವನ, ಸಾಧನೆ, ಆತ್ಮಕಥೆ
'ಇಷ್ಟಕಾಮ್ಯ' ಚಿತ್ರೀಕರಣದ ಸಮಯದಲ್ಲಿ (2015)
Born
ಸತ್ಯಭಾಮಾ

ಜೂನ್ ೯, ೧೯೫೦
ಬೆಂಗಳೂರು
Occupation(s)ನಟಿ, ನಿರ್ದೇಶಕಿ, ಗಾಯಕಿ
Spouseಆನಂದ್

ಜೀವನ

ಹುಟ್ಟಿದ್ದು ೧೯೫೦, ಜೂನ್ ೯ರಂದು ಬೆಂಗಳೂರಿನಲ್ಲಿ. ತಂದೆ ಬಸವರಾಜ್, ತಾಯಿ ಜಿ.ವಿ.ಮಾಲತಮ್ಮ. ಜಯಶ್ರೀ ವೃತ್ತಿರಂಗಭೂಮಿಯ ಹೆಸರಾಂತ ಗುಬ್ಬಿ ವೀರಣ್ಣನವರ ಮೊಮ್ಮಗಳು ಕೂಡಾ. ತನ್ನ ನಾಲ್ಕನೇ ವಯಸ್ಸಿನಲ್ಲಿಯೇ ರಂಗಭೂಮಿಗೆ ಪದಾರ್ಪಣೆ. ರಂಗಭೂಮಿಯ ಅಭಿಯದಿಂದ ಗಳಿಸಿದ ಜನಪ್ರಿಯತೆ ಇವರನ್ನು ನಾಟಕಗಳ ನಿರ್ದೇಶನಕ್ಕೆ ಕೊಂಡೊಯ್ದಿತು. ಇವರು ಪ್ರಸಿದ್ಧ National School of Drama ದಿಂದ ಪದವಿ ಪಡೆದಿದ್ದಾರೆ. ರಂಗಭೂಮಿ ಮತ್ತು ಚಲನಚಿತ್ರದಲ್ಲಿ ಕೆಲಸ ಮಾಡುತ್ತಿರುವ ಹಿರಿಯ ಕಲಾವಿದರಲ್ಲಿ ಒಬ್ಬರಾಗಿದ್ದಾರೆ. ಪ್ರಸಿದ್ಧ ಗಾಯಕರೂ ಆಗಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ನಮ್ಮ ಸರ್ಕಾರ ಅವರನ್ನು ೨೦೧೦ ರಲ್ಲಿ ರಾಜ್ಯಸಭೆ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದಾರೆ. ಇವರು ರಂಗಾಯಣದ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಇವರು ೨೦೧೩ ನೇ ಸಾಲಿನ ಪದ್ಮಶ್ರೀ ಪ್ರಶಸ್ತಿಯನ್ನು ಕೂಡ ಪಡೆದಿದ್ದಾರೆ.

ಸಾಧನೆ

ಕನ್ನಡ ರಂಗಭೂಮಿ ಹಾಗೂ ಚಲನಚಿತ್ರ ಕಂಡ ಅಪೂರ್ವ ಕಲಾವಿದರಲ್ಲಿ ಬಿ. ಜಯಶ್ರೀ ಒಬ್ಬರು. ರಂಗಭೂಮಿ, ಕಿರುತೆರೆ ಹಾಗೂ ಸಿನಿಮಾ ಮಾಧ್ಯಮಗಳಲ್ಲಿ ತಮ್ಮ ಛಾಪು ಮೂಡಿಸಿರುವ ಅವರು, ‘ಗುಬ್ಬಿ ವೀರಣ್ಣನವರ ಮೊಮ್ಮಗಳು’ ಎನ್ನುವ ‘ವಿಶೇಷಣ’ದ ಆಚೆಗೆ ಸಾಧನೆಯಿಂದ ಗುರ್ತಿಸಿಕೊಂಡವರು. ‘ರಂಗಾಯಣ’ದ ಮುಖ್ಯಸ್ಥರಾಗಿ, ರಾಜ್ಯಸಭೆ ಸದಸ್ಯರಾಗಿ ಕಾರ್ಯ ನಿರ್ವಹಿಸಿರುವ ಜಯಶ್ರೀ ತಮ್ಮ ಅಪೂರ್ವ ಕಂಠಸಿರಿಯಿಂದಲೂ ಪ್ರಸಿದ್ಧರು.

ರಂಗಭೂಮಿ

ಇವರ ಅಭಿನಯದ ಕೆಲವು ನಾಟಕಗಳು

ವಿದೇಶಿ ಸಂಸ್ಥೆಯ ಅನುದಾನದಿಂದ ನಿರ್ಮಿತ ನಾಟಕ ಲಕ್ಷಾಪತಿ ರಾಜನ ಕತೆ ಹಾಗೂ ವಿದೇಶದಲ್ಲೂ ಪ್ರದರ್ಶನಗೊಂಡು ಜನಮೆಚ್ಚುಗೆ ಗಳಿಸಿದ ನಾಟಕ ಕಿನ್ನರಿ ಜೋಗಿರಾಟ- ಇವರ ವೃತ್ತಿಜೀವನದ ಮೈಲಿಗಲ್ಲುಗಳು. ಸ್ವೀಡನ್, ಕೈರೋ, ಸ್ಕಾಟ್ಲೆಂಡ್ ರಂಗೋತ್ಸವಗಳಲ್ಲಿ ಭಾಗವಹಿಸಿದ್ದಾರೆ. ಅಮೆರಿಕದಲ್ಲಿ ಹೂವಿ ನಾಟಕ ನಿರ್ದೇಶಿಸಿದ್ದಾರೆ.

ಇವರು ನಿರ್ದೇಶಿಸಿದ ನಾಟಕಗಳು

  1. ಡೆತ್ ಆಫ್ ಎ ಸೇಲ್ಸ್‌ಮನ್
  2. ಕರಿಮಾಯಿ
  3. ಬ್ಯಾರಿಸ್ಟರ್
  4. ಲಕ್ಷಾಪತಿ ರಾಜನ ಕತೆ
  5. ಉರಿಯ ಉಯ್ಯಾಲೆ
  6. ವೈಶಾಖ
  7. ಯಕ್ಷನಗರಿ
  8. ನಹಿ ನಹಿ ರಕ್ಷತಿ
  9. ನೀಲಿ-ಕುದುರೆ
  10. ನಾಗಮಂಡಲ
  11. ಜಸ್ಮಾ ಓಡನ್
  12. ಅಗ್ನಿಪಥ ಚಿತ್ರಪಟ
  13. ಸಿರಿಸಂಪಿಗೆ.

ಸಿನಿಮಾ ನಂಟು

  1. ನಾಗಮಂಡಲ
  2. ಗಳಿಗೆ
  3. ಭಾವ ಭಾಮೈದ
  4. ಕೌರವ
  5. ಜೇನಿನ ಹೊಳೆ
  6. ದುರ್ಗಿ
  7. ಇಷ್ಟಕಾಮ್ಯ

ಇತ್ಯಾದಿ

ಗಾಯಕಿಯಾಗಿ

  1. ಕಾರ್ ಕಾರ್, ಎಲ್ನೋಡಿ ಕಾರ್ - 'ನನ್ನ ಪ್ರೀತಿಯ ಹುಡುಗಿ'
  2. ಚಕ್ಕೋತ ಚಕ್ಕೋತ - ಯಾರೇ ನೀನು ಚೆಲುವೆ
  3. ಏನಾ ಏನಿದು ಎಂಥಾ ಬೆರಗಾ
  4. ಬರ್ತಾಳ್ ನೋಡು - 'ದುರ್ಗಿ'
  5. ಬೆನ್ನ ಹಿಂದೆ ಬಂದೆ - 'ಬಾವ ಬಾಮೈದ'
  6. ಪಡುವಾಣ ದಿಬ್ಬದಾಗೆ - 'ಸ್ಪರ್ಶ'
  7. ಹಠ ಹಠ - 'ಹಠವಾದಿ'
  8. ಹೆಣ್ಣಿಂದ ನಾಕ ಹೆಣ್ಣಿಂದ ನರಕ - 'ಕೌರವ'
  9. ಹಾಲುಂಡು ಹೋಗೆ ನಾಗಮ್ಮ - ' ನಾಗದೇವತೆ'
  10. ರಂಗ ಗಣಪ ಎಂಬ ಧ್ವನಿಸುರುಳಿ

ಇತ್ಯಾದಿ

ಕಿರುತೆರೆಯ ನಟಿಯಾಗಿ

ಈಟಿವಿ ಕನ್ನಡದ ಜನಪ್ರಿಯ ಧಾರಾವಾಹಿ ಪ್ರೀತಿ ಇಲ್ಲದ ಮೇಲೆಯ ಅಜ್ಜಿ ಪಾತ್ರದಲ್ಲಿ ಪ್ರೇಕ್ಷಕರ ಮನ ಗೆದ್ದಿದ್ದಾರೆ.

ಆತ್ಮಕಥೆ

ಜಯಶ್ರೀ ಅವರ ಆತ್ಮಕಥೆ "ಕಣ್ಣಾಮುಚ್ಚೆ ಕಾಡೇಗೂಡೇ". ಈ ಕೃತಿಯನ್ನು ನಿರೂಪಿಸಿದವರು ಖ್ಯಾತ ಅಂಕಣ ಬರಹಗಾರ್ತಿ ಪ್ರೀತಿ ನಾಗರಾಜ್. ಮನೋಹರ ಗ್ರಂಥಮಾಲಾ, ಧಾರವಾಡದವರು ಇದನ್ನು ಪ್ರಕಟಿಸಿದ್ದಾರೆ.

ಪ್ರಶಸ್ತಿಗಳು

  1. ಸಫ್ದಾರ್ ಹಷ್ಮಿ ಪ್ರಶಸ್ತಿ.
  2. ೨೦೧೩ ನೇ ಸಾಲಿನ ಪದ್ಮಶ್ರೀ ಪ್ರಶಸ್ತಿ.
  3. ಕೇಂದ್ರ ಸಂಗೀತ ನಾಟಕ ಪ್ರಶಸ್ತಿ,
  4. ಆರ್ಯಭಟ ಪ್ರಶಸ್ತಿ,
  5. ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ,
  6. ಬಿ. ವಿ.ಕಾರಂತ ಪುರಸ್ಕಾರ,
  7. ಸಂದೇಶ ಕಲಾ ಪ್ರಶಸ್ತಿ,
  8. ರಾಜ್ಯೋತ್ಸವ ಪ್ರಶಸ್ತಿ

- ಇಷ್ಟೇ ಅಲ್ಲದೆ ಅನೇಕ ಗೌರವ ಪ್ರಶಸ್ತಿಗಳು ಸಂದಿವೆ.

ಓದಿಗೆ

ಉಲ್ಲೇಖ

Tags:

ಬಿ.ಜಯಶ್ರೀ ಜೀವನಬಿ.ಜಯಶ್ರೀ ಸಾಧನೆಬಿ.ಜಯಶ್ರೀ ಆತ್ಮಕಥೆಬಿ.ಜಯಶ್ರೀ ಪ್ರಶಸ್ತಿಗಳುಬಿ.ಜಯಶ್ರೀ ಓದಿಗೆಬಿ.ಜಯಶ್ರೀ ಉಲ್ಲೇಖಬಿ.ಜಯಶ್ರೀಗುಬ್ಬಿ ವೀರಣ್ಣ

🔥 Trending searches on Wiki ಕನ್ನಡ:

ವೇದರಂಗಭೂಮಿಮಧ್ವಾಚಾರ್ಯಹಲ್ಮಿಡಿ ಶಾಸನಪು. ತಿ. ನರಸಿಂಹಾಚಾರ್ದೆಹಲಿ ಸುಲ್ತಾನರುಆವಕಾಡೊಸಂಭೋಗಬೀಚಿಮೈಸೂರುವೆಬ್‌ಸೈಟ್‌ ಸೇವೆಯ ಬಳಕೆದೇವಸ್ಥಾನಹಳೆಗನ್ನಡಭಾರತೀಯ ರೈಲ್ವೆಪ್ರೀತಿ೧೬೦೮ಫೇಸ್‌ಬುಕ್‌ಭಾರತದ ಉಪ ರಾಷ್ಟ್ರಪತಿಕರ್ನಾಟಕದ ಅಣೆಕಟ್ಟುಗಳುವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ವ್ಯವಹಾರವಿಜಯದಾಸರುಗೋವಿಂದ ಪೈಅಂಟುಸಂಜಯ್ ಚೌಹಾಣ್ (ಸೈನಿಕ)ಸಜ್ಜೆಯೇಸು ಕ್ರಿಸ್ತವಲ್ಲಭ್‌ಭಾಯಿ ಪಟೇಲ್ಮಂಗಳೂರುಭಾರತ ಸಂವಿಧಾನದ ಪೀಠಿಕೆನಾಗರೀಕತೆಭಾರತದ ರಾಜಕೀಯ ಪಕ್ಷಗಳುರಾಮಓಝೋನ್ ಪದರು ಸವಕಳಿ(ಸಾಮರ್ಥ್ಯ ಕುಂದು)ಮಾನವ ಅಸ್ಥಿಪಂಜರಮಾಸ್ಕೋಯಮಸಂಯುಕ್ತ ಕರ್ನಾಟಕಗಂಡಬೇರುಂಡದ್ವಂದ್ವ ಸಮಾಸಗೋಕಾಕ್ ಚಳುವಳಿಪ್ರಾಥಮಿಕ ಶಿಕ್ಷಣವಾಸ್ತುಶಾಸ್ತ್ರವಿನಾಯಕ ದಾಮೋದರ ಸಾವರ್ಕರ್ಜೋಡು ನುಡಿಗಟ್ಟುರಾವಣಮೂಕಜ್ಜಿಯ ಕನಸುಗಳು (ಕಾದಂಬರಿ)ಹಾಗಲಕಾಯಿಸೀತೆಪ್ರಿನ್ಸ್ (ಚಲನಚಿತ್ರ)ಕನ್ನಡ ಅಭಿವೃದ್ಧಿ ಪ್ರಾಧಿಕಾರಪಿ.ಲಂಕೇಶ್ದೇವತಾರ್ಚನ ವಿಧಿಭಾರತದ ಸರ್ವೋಚ್ಛ ನ್ಯಾಯಾಲಯಹೊಂಗೆ ಮರರಸ(ಕಾವ್ಯಮೀಮಾಂಸೆ)ಸಂಪ್ರದಾಯಅರವಿಂದ ಘೋಷ್ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ವಿವಾಹರಗಳೆಜಿ.ಪಿ.ರಾಜರತ್ನಂಪ್ರಬಂಧ ರಚನೆಕಲ್ಯಾಣಿವಿಮರ್ಶೆಮಾವುವಿರಾಮ ಚಿಹ್ನೆಮಲ್ಲಿಗೆಕರ್ನಾಟಕ ಲೋಕಾಯುಕ್ತರಾಶಿವಂದೇ ಮಾತರಮ್ಹಣಕಾಸುಮುಖ್ಯ ಪುಟಮಲ್ಟಿಮೀಡಿಯಾಸಾಮಾಜಿಕ ಸಮಸ್ಯೆಗಳು🡆 More