ಮಾನವ ಅಸ್ಥಿಪಂಜರ

ಮಾನವ ಅಸ್ಥಿಪಂಜರ ಎಂದರೆ ಶರೀರದ ಆಂತರಿಕ ಚೌಕಟ್ಟು.

ಅದು ಜನನದ ಸಮಯದಲ್ಲಿ ೨೭೦ ಮೂಳೆಗಳಿಂದ ಕೂಡಿದ್ದು – ಪ್ರೌಢಾವಸ್ಥೆಯ ವೇಳೆಗೆ ಕೆಲವು ಮೂಳೆಗಳು ಒಟ್ಟಿಗೆ ಕೂಡಿಕೊಂಡ ನಂತರ ಈ ಮೊತ್ತ ೨೦೬ ಮೂಳೆಗಳಿಗೆ ಇಳಿಯುತ್ತದೆ. ಅಸ್ಥಿಪಂಜರದಲ್ಲಿ ಮೂಳೆಯ ದ್ರವ್ಯರಾಶಿಯು ಸುಮಾರು ೩೦ರ ವಯಸ್ಸಿನ ಹೊತ್ತಿಗೆ ಗರಿಷ್ಠ ಸಾಂದ್ರತೆಯನ್ನು ಮುಟ್ಟುತ್ತದೆ.ಮಾನವನ ಅಸ್ಥಿಪಂಜರವನ್ನು ಅಕ್ಷೀಯ ಅಸ್ಥಿಪಂಜರ ಮತ್ತು "ಅಪೆಂಡಿಕ್ಯುಲಾರ್"(appendicular) ಅಸ್ಥಿಪಂಜರ ಎಂದು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ.ಅಕ್ಷೀಯ ಅಸ್ಥಿಪಂಜರವು ಬೆನ್ನೆಲುಬು, ಪಕ್ಕೆಲುಬು ಮತ್ತು ತಲೆಬುರುಡೆಯಿಂದ ರೂಪುಗೊಂಡಿದೆ."ಅಪೆಂಡಿಕ್ಯುಲಾರ್" ಅಸ್ತಿಪಂಜರವು ಅಕ್ಷೀಯ ಅಸ್ಥಿಪಂಜರಕ್ಕೆ ಲಗತ್ತಿಸಲಾಗಿದ್ದು ಇದು ಎದೆಯ ನಡುಕಟ್ಟು,ಶ್ರೋಣಿಯ ಹುಳು ಹಾಗು ಕೈ ಕಾಲುಗಳ ಮೂಳೆಗಳಿಂದ ರೂಪುಗೊಂಡಿದೆ.

ಮಾನವ ಅಸ್ಥಿಪಂಜರ

ಮಾನವನ ಅಸ್ಥಿಪಂಜರದಲ್ಲಿ ಅನೇಕ ಇತರ ಪ್ರಾಣಿಗಳಿಗಿದ್ದಂತೆ ಲಿಂಗ ಸಂಭಂದಿತ ವ್ಯತ್ಯಾಸಗಳು ಇಲ್ಲದಿದ್ದರೂ, ತಲೆಬುರುಡೆ, ಸೊಂಟ ,ಹಲ್ಲುಗಳ ರಚನೆ ,ಮೂಳೆಗಳ ಉದ್ದದಲ್ಲಿ ಲಿಂಗಗಳ ನಡುವೆ ಸೂಕ್ಷ್ಮ ವ್ಯತ್ಯಾಸಗಳನ್ನು ಕಾಣಬಹುದು.ಒಂದು ಸಂಬಂಧಿತ ಜನಸಂಖ್ಯೆಯಲ್ಲಿ ಸಾಮಾನ್ಯವಾಗಿ, ಸ್ತ್ರೀ ಅಸ್ಥಿಪಂಜರದ ಅಂಶಗಳು ಪುರುಷ ಅಸ್ಥಿಪಂಜರದ ಅಂಶಗಳಿಗಿಂತಲು ಚಿಕ್ಕದಾಗಿ ಮತ್ತು ಕಡಿಮೆ ದೃಢವಾಗಿ ಇರುವುದನ್ನು ಕಾಣುತ್ತೇವೆ. ಮಗುವಿನ ಜನನಕ್ಕೆ ಅನುಗುಣವಾಗುವುದಕ್ಕೆ ಸ್ತ್ರೀ ಸೊಂಟವು ಪುರುಷರ ಸೊಂಟಕ್ಕಿಂತಲೂ ಭಿನ್ನವಾಗಿರುತ್ತದೆ.ಇತರ ಜೀವಿಗಳಂತೆ ಮಾನವ ಪುರುಷರು ಶಿಶ್ನ ಮೂಳೆಗಳನ್ನು ಹೊಂದಿರುವುದಿಲ್ಲ.

ವಿಭಾಗಗಳು

ಅಕ್ಷೀಯ ಅಸ್ಥಿಪಂಜರ

ಅಕ್ಷೀಯ ಅಸ್ಥಿಪಂಜರವು(೮೦ ಮೂಳೆಗಳು) ಬೆನ್ನೆಲುಬುಗಳ ಮೂಳೆಗಳು ,ಪಕ್ಕೆಲುಬುಗಳು(೧೨),ತಲೆಬುರುಡೆ(೨೨ ಮೂಳೆಗಳು ಮತ್ತು ೭ ಸಂಬಂಧಿಸಿದ ಮೂಳೆಗಳು) ಹಾಗು ಎದೆಮೂಳೆಗಳಿಂದ ಕೂಡಿದೆ.ಬೆನ್ನೆಲುಬಿನ ಮೂಳೆಗಳ ಸಂಖ್ಯೆ(೩೨-೩೪) ಮಾನವನಿಂದ ಮಾನವನಿಗೆ ಬದಲಾಗಬಹುದು. ಏಕೆಂದರೆ ಬೆನ್ನೆಲುಬಿನ ಕೆಳಗಿನ ಎರಡು ಭಾಗಗಳಾದ ಸ್ಯಾಕ್ರಲ್(sacral) ಹಾಗು "ಕೊಕೈಜಲ್"(coccygeal) ಮೂಳೆಗಳ ಉದ್ದದಲ್ಲಿ ವ್ಯತ್ಯಾಸವಿರುತ್ತದೆ.

ಮಾನವರು ನೇರವಾಗಿ ನಿಲ್ಲುವುದಕ್ಕೆ ಅಕ್ಷೀಯ ಅಸ್ಥಿಪಂಜರವು ಸಹಕರಿಸುತ್ತದೆ.ಇದು ಮೇಲಿನ ಭಾಗಗಳಾದ ತಲೆ,ಕಾಂಡ,ಕೈಗಳ ಭಾರವನ್ನು ಕಾಲುಗಳಿಗೆ ಹಿಪ್ ಜಂಟಿಯ ಮೂಲಕ ಪ್ರಸಾರ ಮಾಡುತ್ತದೆ.ಬೆನ್ನಿನ ಮೂಳೆಗಳು ಅನೇಕ ಕಟ್ಟುಗಳ (ligaments)ಮೂಲಕ ಬೆಂಬಲಿತವಾಗಿವೆ.ನಿರ್ಮಾಪಕ "ಸ್ಪೈನೇ" ಸ್ನಾಯುಗಳು ಬೆಂಬಲ ಹಾಗು ಸಮತೋಲನೆಗೆ ಉಪಯುಕ್ತ.

ಮಾನವನು ತಮ್ಮ ಅಸ್ಥಿಪಂಜರದ ಕೇವಲ ಅಕ್ಷೀಯ ಭಾಗವೊಂದದಿಂದ ಮಾತ್ರವೂ ಬದುಕಲು ಸಾಧ್ಯವಿದೆ.

ಅಪೆಂಡಿಕ್ಯುಲಾರ್ ಅಸ್ಥಿಪಂಜರ

ಅಪೆಂಡಿಕ್ಯುಲಾರ್ ಅಸ್ಥಿಪಂಜರವು(126 ಮೂಳೆಗಳು) ಎದೆಯ ನಡುಕಟ್ಟು,ಕೈಕಾಲುಗಳು,ಶ್ರೋಣಿಯ ಹುಳು ಇವುಗಳಿಂದ ರೂಪುಗೊಂಡಿದೆ.ಅವುಗಳ ಕಾರ್ಯಗಳು ಚಲನೆಯನ್ನು ಸಾಧ್ಯವಾಗಿಸುವುದು ಮತ್ತು ಪ್ರಮುಖ ಅಂಗಗಳ ಕಾರ್ಯಗಳಾದ ಜೀರ್ಣಕ್ರಿಯೆ, ವಿಸರ್ಜನೆ ಮತ್ತು ಪುನರುತ್ಪಾದನೆಯ ಇವುಗಳನ್ನು ರಕ್ಷಿಸುವುದು.

ಕಾರ್ಯಗಳು

ಮಾನವ ಅಸ್ಥಿಪಂಜರ 
A human skeleton on exhibit at the Museum of Osteology, Oklahoma City, Oklahoma

ಮಾನವ ಅಸ್ಥಿಪಂಜರವು ಆರು ಪ್ರಮುಖ ಕಾರ್ಯಚರಣೆಗಳನ್ನು ನಿರ್ವಹಿಸುತ್ತದೆ; ಬೆಂಬಲ, ಚಲನೆ, ರಕ್ಷಣೆ, ರಕ್ತ ಕಣಗಳ ಉತ್ಪಾದನೆ,ಅಯಾನುಗಳ ಸಂಗ್ರಹ ಮತ್ತು ಅಂತಃಸ್ರಾವಕ ನಿಯಂತ್ರಣ.

ಬೆಂಬಲ

ಅಸ್ಥಿಪಂಜರವು ಆಂತರಿಕ ಚೌಕಟ್ಟನ್ನು ಒದಗಿಸಿ; ದೇಹಕ್ಕೆ ಬೆಂಬಲವನ್ನು ನೀಡಿ ಅದರ ಆಕಾರವನ್ನು ಕಾಪಾಡುತ್ತದೆ.ಸೊಂಟ,ಸಂಬಂಧಿಸಿದ ಅಸ್ಥಿರಜ್ಜುಗಳು ಮತ್ತು ಸ್ನಾಯುಗಳು ಶ್ರೋಣಿಯ ರಚನೆಗೆ ಒಂದು ನೆಲವನ್ನು ಒದಗಿಸಿಕೊಡುತ್ತದವೆ.ಪಕ್ಕೆಲುಬು ಗಳು, ಪಕ್ಕೆಲುಬುಗಳ ಮೃದ್ವಸ್ಥಿ ಗಳು, ಮತ್ತು ಪಕ್ಕೆಲುಬುಗಳ ಸ್ನಾಯು ಗಳು ಇಲ್ಲದೆ, ಮಾನವನ ಶ್ವಾಸಕೋಶ ಕುಸಿದುಬೀಳುತ್ತದೆ.

ಚಲನೆ

ಮೂಳೆಗಳ ನಡುವಿನ ಕೀಲುಗಳು ಚಲನೆಗೆ ಅವಕಾಶಮಾಡಿಕೊಡುತ್ತವೆ.ಕೆಲವು ಇತರವುಗಳಿಗಿಂತ ವಿಸ್ತಾರ ವ್ಯಾಪ್ತಿಯಾಗಿ ಚಲನೆಗೆ ಅವಕಾಶ ಮಾಡಿಕೊಡುತ್ತವೆ.ಉದಾಹರಣೆಗೆ:ಚೆಂಡು-ಮತ್ತು-ಸಾಕೆಟ್ ಜಂಟಿ ಕೊರಳಿನ ಮುಖ್ಯ ಜಂಟಿಗಿಂತ ಹೆಚ್ಚು ಚಲನೆಯ ವ್ಯಾಪ್ತಿಯನ್ನು ಅನುಮತಿಸುತ್ತದೆ.ಚಲನೆಯು ಅಸ್ಥಿಪಂಜರದ ಸ್ನಾಯು ಗಳ ಶಕ್ತಿಯಿಂದ ಸಾಧ್ಯವಾಗಿದೆ.ಇವುಗಳು ಮೂಳೆಗಳ ವಿವಿಧ ಸ್ಥಳಗಳಲ್ಲಿ ಅಸ್ಥಿಪಂಜರಕ್ಕೆ ಜೋಡಿಸಲಾಗಿವೆ.ಸ್ನಾಯುಗಳು, ಮೂಳೆಗಳು, ಮತ್ತು ಕೀಲುಗಳು ಚಲನೆಗೆ ಪ್ರಧಾನ ಯಂತ್ರಗಳಾಗಿದ್ದು,ಇವು ನರಮಂಡಲದ ಮೂಲಕ ನಿಯಂತ್ರಿಸಲ್ಪಡುತ್ತವೆ.

ಇತಿಹಾಸಪೂರ್ವ ಕಾಲದಲ್ಲಿ ಮಾನವನ ಮೂಳೆಯ ಸಾಂದ್ರತೆ ಕಡಿಮೆಯಾದಕಾರಣ ಮಾನವನ ಚಲನೆಯಲ್ಲಿ ಚುರುಕುತನ ಹಾಗು ದಕ್ಷತೆಯು ಕಡಿಮೆಯಾಗಿದೆ ಎಂದು ನಂಬಲಾಗಿದೆ. ಬೇಟೆಯಿಂದ ಕೃಷಿಗೆ ವರ್ಗಾವಣೆಗೊಂಡ ಕಾರಣ ಮಾನವನ ಮೂಳೆಯ ಸಾಂದ್ರತೆ ಗಮನಾರ್ಹವಾಗಿ ಕಡಿಮೆಯಾಗಿದೆ.

ರಕ್ಷಣೆ

ಅಸ್ಥಿಪಂಜರ ನಮ್ಮ ಅನೇಕ ಪ್ರಮುಖ ಆಂತರಿಕ ಅಂಗಗಳಿಗೆ ಹಾನಿಯಾಗದಂತೆ ರಕ್ಷಿಸಲು ಸಹಾಯ ಮಾಡುತ್ತದೆ.

  • ಮಾನವನ ತಲೆಬುರುಡೆಯು ಮಾನವ ಮೆದುಳು, ಮಾನವನ ಕಣ್ಣು, ಮಧ್ಯಮ ಕಿವಿ ಮತ್ತು ಒಳ ಕಿವಿ ಗಳನ್ನು ರಕ್ಷಿಸುತ್ತದೆ.
  • ಕಶೇರುಖಂಡಗ ಬೆನ್ನುಬಳ್ಳಿಯನ್ನು ರಕ್ಷಿಸುತ್ತದೆ.
  • ಮಾನವನ ಪಕ್ಕೆಲುಬು, ಬೆನ್ನೆಲುಬು ಮತ್ತು ಮಾನವ ಎದೆಮೂಳೆಯು , ಮಾನವ ಶ್ವಾಸಕೋಶ, ಮಾನವ ಹೃದಯ ಮತ್ತು ಪ್ರಮುಖ ರಕ್ತಪರಿಚಲನಾ ವ್ಯವಸ್ಥೆಯನ್ನು ರಕ್ಷಿಸಲು ಸಹಕರಿಸುತ್ತವೆ.

ರಕ್ತಕಣಗಳ ಉತ್ಪಾದನೆ

ಅಸ್ಥಿಪಂಜರವು "ಹೀಮ್ಯಾಟೋಪೊಎಸಿಸ್"ನ (haematopoiesis) ತಾಣವಾಗಿದೆ.ರಕ್ತ ಕಣಗಳ ಬೆಳವಣಿಗೆ ಹಾಗು ಅಭಿವೃದ್ಧಿ ಮೂಳೆ ಮಜ್ಜೆಯಲ್ಲಿ ನಡೆಯುವುದನ್ನು "ಹೀಮ್ಯಾಟೋಪೊಎಸಿಸ್" ಎಂದು ಕರೆಯುತ್ತೇವೆ.ಮಕ್ಕಳಲ್ಲಿ, "ಹೀಮ್ಯಾಟೋಪೊಎಸಿಸ್"ಪ್ರಾಥಮಿಕವಾಗಿ ಉದ್ದವಾದ ಎಲುಬು ಮತ್ತು ಮೊಳಕಾಲುಗಳಲ್ಲಿರುವ ಮೂಳೆಗಳ ಮಜ್ಜೆಯಲ್ಲಿ ಕಂಡುಬರುತ್ತದೆ.ವಯಸ್ಕರಲ್ಲಿ, ಇದು ಮುಖ್ಯವಾಗಿ ಸೊಂಟ, ಕ್ರೇನಿಯಂ, ಕಶೇರುಖಂಡ, ಎದೆಮೂಳೆಗಳಲ್ಲಿ ಕಂಡುಬರುತ್ತದೆ.

ಶೇಖರಣೆ

ಓಸ್ಟಿಯೋನ್(Osteon) "ಕ್ಯಾಲ್ಸಿಯಂ"ನನ್ನು ಸಂಗ್ರಹಿಸುತ್ತದೆ ಮತ್ತು ಕ್ಯಾಲ್ಸಿಯಂ ಚಯಾಪಚಯನದಲ್ಲಿ ಭಾಗವಹಿಸುತ್ತದೆ.ಮೂಳೆಯ ಮಜ್ಜೆಯು ಕಬ್ಬಿಣವನ್ನು ಫೆರ್ರಿಟಿನ್ನಲ್ಲಿ(ferritin) ಸಂಗ್ರಹಿಸುತ್ತದೆ ಮತ್ತು ಮನುಷ್ಯರಲ್ಲ ಕಬ್ಬಿಣದ ಚಯಾಪಚಯನದಲ್ಲಿ ಭಾಗವಹಿಸುತ್ತದೆ. ಮೂಳೆಗಳು ಸಂಪೂರ್ಣವಾಗಿ ಕ್ಯಾಲ್ಸಿಯಂನಿಂದ ಮಾಡಲ್ಪಟ್ಟಿಲ್ಲ, ಆದರೆ "ಕೊನ್ಡ್ರೊಯಿಟಿನ್ ಸಲ್ಫೇಟ್" ಮತ್ತು "ಹೈಡ್ರಾಕ್ಸಿಯಪಟೈಟ್"ಗಳ ಮಿಶ್ರಣದಿಂದ ಮಾಡಲ್ಪಟ್ಟಿದ್ದು ಎರಡನೆಯದು ೭೦% ಒಳಗೊಂಡಿರುತ್ತದೆ.ಪ್ರತಿಯಾಗಿ ಹೈಡ್ರಾಕ್ಸಿಯಪಟೈಟ್ ಕ್ಯಾಲ್ಸಿಯಂ (39.8%), ಆಮ್ಲಜನಕದ (41.4%)," ಫಾಸ್ಪರಸ್" (18.5%), ಮತ್ತು ದ್ರವ್ಯರಾಶಿಯ ಜಲಜನಕಗಳಿಂದ (0.2%) ಕೂಡಿದೆ.ಕಾಂಡ್ರೋಟಿನ್ ಸಲ್ಫೇಟ್ ಸಕ್ಕರೆ ಹೊಂದಿದ್ದು ಮುಖ್ಯವಾಗಿ ಆಮ್ಲಜನಕ ಮತ್ತು ಇಂಗಾಲದಿಂದ ಮಾಡಲ್ಪಟ್ಟಿದೆ.


ಎಂಡೋಕ್ರೈನ್ ನಿಯಂತ್ರಣ

ಮೂಳೆಯ ಜೀವಕೋಶಗಳು ಆಸ್ಟಿಯೊಕ್ಯಾಲ್ಸಿನ್ ಎಂಬ ಹಾರ್ಮೋನ್ ಬಿಡುಗಡೆ ಮಾಡುತ್ತವೆ.ಇವು ರಕ್ತದ ಸಕ್ಕರೆ ಮತ್ತು ದೇಹದ ಕೊಬ್ಬು (ಗ್ಲುಕೋಸ್) ಇವುಗಳನ್ನು ನಿಯಂತ್ರಣಕ್ಕೆ ತರುತ್ತದೆ.ಆಸ್ಟಿಯೊಕ್ಯಾಲ್ಸಿನ್ ಬೀಟಾ ಸೆಲ್ಗಳ(ಇನ್ಸುಲಿನ್ ಉತ್ಪಾದಿಸುವ ಜೀವಕೋಶಗಳು) ಸಂಖ್ಯೆ ಉತ್ತೇಜಿಸುವ ಹಾಗು ಕೊಬ್ಬಿನಾಂಶವನ್ನು ಇಳಿಸುವುದರ ಜೊತೆಗೆ ಇನ್ಸುಲಿನ್ ಸ್ರವಿಸುವಿಕೆಯನ್ನು ಮತ್ತು ಸಂವೇದನೆಯನ್ನು ಕೂಟ ಹೆಚ್ಚಿಸುತ್ತದೆ.

ಅಸ್ವಸ್ಥತೆಗಳು

ಅನೇಕ ವರ್ಗೀಕೃತ ಅಸ್ಥಿಪಂಜರದ ಕಾಯಿಲೆಗಳು ಇವೆ.ಸಾಮಾನ್ಯವಾಗಿ ಕಂಡುಬರುವ ಒಂದು ಅಸ್ವಸ್ಥ ಆಸ್ಟಿಯೊಪೊರೋಸಿಸ್.ಸಾಮಾನ್ಯವಾಗಿ ಕಂಡುಬರುವ ಮತ್ತೊಂದು ಅಸ್ವಸ್ಥ ಸ್ಕೋಲಿಯೋಸಿಸ್.ಸಂಧಿವಾತ(Arthritis) ಕೀಲುಗಳ ಒಂದು ಕಾಯಿಲೆಯಾಗಿದೆ.ಇದು ಒಂದು ಅಥವಾ ಹೆಚ್ಚು ಕೀಲುಗಳ ಉರಿಯೂತವನ್ನು ಒಳಗೊಂಡಿರುತ್ತದೆ."ಆಸ್ಟಿಯೊಪೊರೋಸಿಸ್" ಮೂಳೆಯ ಖನಿಜಾಂಶಗಳ ಸಾಂದ್ರತೆ ಕಡಿಮೆ ಇದ್ದಾಗ ಕಂಡುಬರುವ ಕಾಯಿಲೆ.ಇದರಿಂದ ಮೂಳೆ ಮುರಿತದ ಸಾಧ್ಯತೆಯು ಹೆಚ್ಚಾಗುತ್ತದೆ.

ನೋಡಿ

ಉಲ್ಲೇಖಗಳು

Tags:

ಮಾನವ ಅಸ್ಥಿಪಂಜರ ವಿಭಾಗಗಳುಮಾನವ ಅಸ್ಥಿಪಂಜರ ಕಾರ್ಯಗಳುಮಾನವ ಅಸ್ಥಿಪಂಜರ ಅಸ್ವಸ್ಥತೆಗಳುಮಾನವ ಅಸ್ಥಿಪಂಜರ ನೋಡಿಮಾನವ ಅಸ್ಥಿಪಂಜರ ಉಲ್ಲೇಖಗಳುಮಾನವ ಅಸ್ಥಿಪಂಜರತಲೆಬುರುಡೆಪಕ್ಕೆಲುಬುಬೆನ್ನೆಲುಬುಮೂಳೆ

🔥 Trending searches on Wiki ಕನ್ನಡ:

ಶಾಸನಗಳುವ್ಯಂಜನರಾಧೆಫುಟ್ ಬಾಲ್ಜಾನಪದಡಿ.ವಿ.ಗುಂಡಪ್ಪಕುತುಬ್ ಮಿನಾರ್ಹನುಮಾನ್ ಚಾಲೀಸಹೊಯ್ಸಳ ವಾಸ್ತುಶಿಲ್ಪಗಿರೀಶ್ ಕಾರ್ನಾಡ್ಇಂಡಿಯನ್ ಪ್ರೀಮಿಯರ್ ಲೀಗ್ವಿಜಯಪುರ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳುಕನ್ನಡಸಚಿನ್ ತೆಂಡೂಲ್ಕರ್ನದಿಯೇಸು ಕ್ರಿಸ್ತರಾಷ್ಟ್ರೀಯ ಸೇವಾ ಯೋಜನೆಬಿ.ಎಸ್. ಯಡಿಯೂರಪ್ಪಜ್ಯೋತಿಬಾ ಫುಲೆಭಾರತದ ನದಿಗಳುಪುರಂದರದಾಸಕನ್ನಡ ಕಾವ್ಯಭಾರತ ರತ್ನಪ್ರಿನ್ಸ್ (ಚಲನಚಿತ್ರ)ಗೋಕಾಕ್ ಚಳುವಳಿತ. ರಾ. ಸುಬ್ಬರಾಯಜಯಪ್ರಕಾಶ ನಾರಾಯಣಸಂಯುಕ್ತ ಕರ್ನಾಟಕಹಸ್ತ ಮೈಥುನಅಕ್ಕಮಹಾದೇವಿರವಿಚಂದ್ರನ್ಬೇಲೂರುಕ್ರೀಡೆಗಳುಕಲ್ಯಾಣ ಕರ್ನಾಟಕಚಪ್ಪಾಳೆಭಾರತದ ಪ್ರಧಾನ ಮಂತ್ರಿಗಳ ಪಟ್ಟಿಜಾಗತಿಕ ತಾಪಮಾನಪೂನಾ ಒಪ್ಪಂದಹಣಉಪಯುಕ್ತತಾವಾದಕನ್ನಡ ಗುಣಿತಾಕ್ಷರಗಳುಚಂದ್ರಶೇಖರ ಕಂಬಾರಜೀವಕೋಶಆವಕಾಡೊಅನುನಾಸಿಕ ಸಂಧಿವೃದ್ಧಿ ಸಂಧಿಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಪಂಪಜೋಡು ನುಡಿಗಟ್ಟುಶಾಲೆಕೋಟ ಶ್ರೀನಿವಾಸ ಪೂಜಾರಿಕೊರೋನಾವೈರಸ್ಮಲೆಗಳಲ್ಲಿ ಮದುಮಗಳುರೋಸ್‌ಮರಿತುಮಕೂರುಆಮ್ಲಗಳು ಮತ್ತು ಪ್ರತ್ಯಾಮ್ಲಗಳುಪಂಚ ವಾರ್ಷಿಕ ಯೋಜನೆಗಳುಮುಹಮ್ಮದ್ಪಾರ್ವತಿಪಪ್ಪಾಯಿಅವ್ಯಯಅಡೋಲ್ಫ್ ಹಿಟ್ಲರ್ಸೀತೆಮಂಕುತಿಮ್ಮನ ಕಗ್ಗದಕ್ಷಿಣ ಕನ್ನಡಗಣರಾಜ್ಯೋತ್ಸವ (ಭಾರತ)ಕಾರ್ಮಿಕರ ದಿನಾಚರಣೆಮಾಸಮಜ್ಜಿಗೆರಾಜಧಾನಿಗಳ ಪಟ್ಟಿಭಾರತದಲ್ಲಿ ಬಡತನದ್ವಂದ್ವ ಸಮಾಸಭಾರತದ ಜನಸಂಖ್ಯೆಯ ಬೆಳವಣಿಗೆಎಸ್.ಜಿ.ಸಿದ್ದರಾಮಯ್ಯಭಕ್ತಿ ಚಳುವಳಿತಂತ್ರಜ್ಞಾನದ ಉಪಯೋಗಗಳುಮಹಮದ್ ಬಿನ್ ತುಘಲಕ್ನಗರ🡆 More