ಅವ್ಯಯ

ನಾಮ ಪ್ರಕೃತಿ, ಕ್ರಿಯಾ ಪ್ರಕೃತಿಗಳು ಪ್ರತ್ಯಯಗಳನ್ನು ಕೂಡಿ ತಮ್ಮ ರೂಪವನ್ನು ಬದಲಾಯಿಸುತ್ತವೆ.

ಆ ಯಾವ ರೀತಿಯ ರೂಪ ಭೇದಗಳನ್ನು ಪಡೆಯದೆಯೆ ಸಾಮಾನ್ಯವಾಗಿ ಏಕರೂಪವಾಗಿ ವಾಕ್ಯದಲ್ಲಿ ಬಳಕೆಯಾಗುವ ಶಬ್ದಗಳು ಅವ್ಯಯಗಳು. ಪ್ರಾಚೀನ ವೈಯಾಕರಣರು ಅವನ್ನು ಅರ್ಥಾನುಸಾರವಾಗಿಯೂ ಆಧುನಿಕರು ಕಾರ್ಯಾನುಸಾರವಾಗಿ ಗುಂಪು ಮಾಡುತ್ತಾರೆ.

ವ್ಯಾಖ್ಯೆ

  • ರೂಪಭೇದವಿಲ್ಲದವು ಆಂದರೆ ಲಿಂಗ, ವಚನ, ವಿಭಕ್ತಿಗಳ ವಿಕಾರವಿಲ್ಲದೆ ಒಂದೇ ರೂಪದಲ್ಲಿರುವ ಶಬ್ದಗಳು ‘ಅವ್ಯಯಪದ’ ಗಳೆನಿಸುವವು. ಈ ಅವ್ಯಯ ಪದಗಳು ನಾಮವಿಭಕ್ತಿ – ಕ್ರಿಯಾವಿಭಕ್ತಿ ಪ್ರತ್ಯಯಗಳನ್ನೂ ಮತ್ತು ಲಿಂಗ - ವಚನವನ್ನೂ ಹೊಂದಿರುವುದಿಲ್ಲ. ಉದಾ : ಮತ್ತು, ಹಾಗೆ, ಆದರೆ, ಬಳಿಕ, ಒಡನೆ, ವರೆಗೆ, ಅಹಹ, ಸುಮ್ಮನೆ, ಕೂಡಲೇ, ಇಲ್ಲ ,ಮುಂತಾದವು.
  • ಅವ್ಯಯವೆಂದರೆ ರೂಪಾಂತರವಾಗದಂಥ ಪದ. ಅದಕ್ಕೆ ವಿಭಕ್ತಿ ಮುಂತಾದದ್ದು ಏನೇನೂ ಹತ್ತುವುದಿಲ್ಲ. ಆದರೂ ಕೆಲವು ಅವ್ಯಯ ಪದಗಳಿಗೆ ವಿಕಲ್ಪದಿಂದ ವಿಭಕ್ತಿಗಳು ಹತ್ತುವುವು.

ಅವ್ಯಯ ವಿಧಗಳು

ನಾಮಪದಗಳು ಕ್ರಿಯಾಪದಗಳಂತೆ ಲಿಂಗ, ವಚನ, ವಿಭಕ್ತಿಗಳಿಂದ ರೂಪಬೇಧಗವನ್ನು ಹೊಂದದೆ ಏಕರೂಪವಾಗಿರುವ ಶಬ್ದಗಳು ಅವ್ಯಯಗಳೆನಿಸುವುವು. ಅವ್ಯಯಗಳಲ್ಲಿ ಹತ್ತು ವಿಧ.

೧. ಸಾಮಾನ್ಯಾವ್ಯಯ

ಸಾಮಾನ್ಯ ಅವ್ಯಯ ಎಂದರೆ ಯಾವುದೇ ಕ್ರಿಯೆಯು ನಡೆದ ಕ್ರಿಯೆಯ ಸ್ಥಳ-ಕಾಲ-ರೀತಿಗಳನ್ನು ಹೇಳುವಂಥವು.

  1. ಸ್ಥಳಕ್ಕೆ : ಅಲ್ಲಿ, ಎಲ್ಲಿ, ಎಲ್ಲಿ, ಮೇಲು, ಕೆಳಗು
  2. ಕಾಲಕ್ಕೆ : ಆಗ, ಈಗ, ನಿನ್ನೆ, ಇಂದು, ಅಂದು, ಎಂದು, ಬಳಿಕ, ಬೇಗ,ತರುವಾಯ, ಕೂಡಲೆ, ಒಡನೆ.
  3. ರೀತಿಗೆ : ಚೆನ್ನಾಗಿ, ನೆಟ್ಟಗೆ, ತಟ್ಟನೆ, ಉಮ್ಮನೆ, ಸುಮ್ಮನೆ, ಕಮ್ಮನೆ, ಮೆಲ್ಲನೆ, ಹಾಗೆ.

೨. ಅನುಕರಣಾವ್ಯಯ

ಅರ್ಥವಿಲ್ಲದ ಧ್ವನಿವಿಶೇಷಗಳನ್ನು ಕೇಳಿದಂತೆ, ಪುನ: ಉಚ್ಚರಣೆ ಮಾಡಿ ಹೇಳುವ ಶಬ್ದಗಳು. ಉದಾಹರಣೆಗೆ, ದಬದಬ, ಪಟಪಟ,ಕರಕರ, ಚುರುಚುರು,ಧಗಧಗ, ಗುಳುಗುಳು, ಥರಥರ, ಘಮಘಮ, ಚಟಚಟ, ಗುಡುಗುಡು.ಮಿಣಿಮಿಣಿ ಉಧಾಹರಣೆ = ನೀರು ದಬ ದಬ ಸುರಿಯಿತು

೩.ಭಾವಸೂಚಕಾವ್ಯಯ

ಮನೋಭಾವಗಳನ್ನು ವ್ಯಕ್ತಪಡಿಸುವಾಗ ಅರ್ಥವಿಲ್ಲದ ಶಬ್ದಗಳನ್ನು ಬಳಸುತ್ತೇವೆ. ಇವುಗಳನ್ನು ಭಾವಬೋಧಕಾವ್ಯಯ, ನಿಪಾತಾವ್ಯಯ ಎನ್ನವರು. ಉದಾಹರಣೆಗೆ, ಅಯ್ಯೋ ! ಎಲಾ ! ಆಹಾ ! ಭಲೇ ! ಅಕಟಕಟಾ!, ಓಹೋ!.

೪. ಕ್ರಿಯಾರ್ಥಕಾವ್ಯಯ

ವಾಕ್ಯದಲ್ಲಿಯ ಕ್ರಿಯಾಪದದ ಸ್ಥಾನದಲ್ಲದ್ದೂ ಕ್ರಿಯೆಯ ಅರ್ಥವನ್ನು ಹೇಳುವ ಶಬ್ದಗಳು. ಉದಾಹರಣೆಗೆ, ಉಂಟು, ಬೇಕು, ಬೇಡ, ಅಲ್ಲ, ಹೌದು, ಸಾಕು, ಅಹುದು,.

೫. ಸಂಬಂಧಾರ್ಥ ಸೂಚಕಾವ್ಯಯ

ಹಲವು ಪದಗಳ, ಹಲವು ವಾಕ್ಯಗಳ ಸಂಬಂಧವನ್ನು ತೋರಿಸುವ ಶಬ್ದಗಳು. ಉದಾಹರಣೆಗೆ, ಊ, ಉಂ, ಆದ್ದರಿಂದ, ಮತ್ತು, ಅಥವಾ, ರಾಮನು, ಹಾಗಾದರೆ, ಆದುದರಿಂದ, ಸಂಗಡ, ಹೊರತು.

೬.ಕೃದಂತಾವ್ಯಯ

ಅವ್ಯಯದಂತೆ ರೂಪಭೇದವಿಲ್ಲದೆ ಕೃತ್ ಪ್ರತ್ಯಯಗಳು ದಾತುಗಳ ಮುಂದೆ ಸೇರಿದಾಗ. ಐದು ವಿಧ.

  1. ವರ್ತಮಾನ ಕೃದಂತಾವ್ಯಯ - ಧಾತುಗಳ ಮುಂದೆ ಅವ್ಯಯದಂತೆ ವರ್ತಮಾನ ಕಾಲದ ಉತ್ತ/ಉತ್ತಾ ಪ್ರತ್ಯಯಗಳು ಸೇರಿದಾಗ ಆಗುತ್ತದೆ. ಉದಾಹರಣೆಗೆ, ಹೋಗು + ಉತ್ತ., ನಗುತ್ತ, ಹಾಡುತ್ತ, ನೋಡುತ್ತ, ಆಡುತ್ತ.
  2. ಭೂತ ಕೃದಂತಾವ್ಯಯ - ಧಾತುಗಳ ಮುಂದೆ ಅವ್ಯಯದಂತೆ ಭೂತಕಾಲದ ‘ದು’, ‘ಇ’ ಪ್ರತ್ಯಯಗಳು ಸೇರಿದಾಗ ಆಗುತ್ತದೆ. ಉದಾಹರಣೆಗೆ, ನಗು+ದು=ನಕ್ಕು. ಬೇ+ದು=ಬೆಂದು. ನುಂಗು+ಇ=ನುಂಗು. ಕೊಲ್ಲು+ದು=ಕೊಂದು.
  3. ನಿಷೇಧಾರ್ಥಕ ಕೃದಂತಾವ್ಯಯ - ಧಾತುಗಳ ಮುಂದೆ ನಿಷೇಧಾರ್ಥ ತೋರುವ ಅದೆ ಪ್ರತ್ಯಯ ಸೇರಿದಾಗ ಆಗುತ್ತದೆ. ಉದಾಹರಣೆಗೆ,ನಗು+ಅದೆ=ನಗದೆ, ಕೇಳದೆ, ತಿಳಿಯದೆ, ಸೇರದೆ, ತಿನ್ನದೆ, ಬರದೆ, ಹೋಗದೆ.
  4. ಭಾವಲಕ್ಷಕ ಕೃದಂತಾವ್ಯಯ - ಧಾತುಗಳ ಮುಂದೆ ‘ಅಲು/ಎ’ ಪ್ರತ್ಯಯಗಳು ಬಂದಾಗ ಆಗುತ್ತದೆ. ಉದಾಹರಣೆಗೆ, ಹಾಡು+ಅಲು=ಹಾಡಲು, ನೋಡಲು,ಕೇಳಲು, ಬರಲು, ಹೋಗಲು, ಓಡಲು, ಬರೆಯಲು. ಕಣ್ಣು+ಅರ್+ಎ=ಕಣ್ಣಾರೆ. ಕಿವಿಯಾರೆ.
  5. ಪಕ್ಷಾರ್ಥಕ ಕೃದಂತಾವ್ಯಯ - ಧಾತುಗಳ ಮುಂದೆ ‘ಅರೆ’ ಪ್ರತ್ಯಯವು ಸೇರಿದಾಗ ಆಗುತ್ತದೆ. ಉದಾಹರಣೆಗೆ, ಹೋಗು+ದ್+ಅರೆ=ಹೋದರೆ. ಬಂದರೆ, ನಿಂತರೆ, ಕೊಟ್ಟರೆ,ಕೇಳಿದರೆ.

೭.ತದ್ಧಿತಾಂತಾವ್ಯಯ

ಷಷ್ಠ್ಯಂತ ನಾಪದಗಳ ಮುಂದೆ ಅಂತೆ, ಹಾಗೆ, ವೋಲ್, ವೊಲು, ವೋಲು, ತನಕ, ವರೆಗೆ, ಮಟ್ಟಿಗೆ, ಓಸುಗ, ಓಸ್ಕರ, ಇಂತ, ಆಗಿ, ಸಲುವಾಗಿ,.

೮. ಅವಧಾರಣಾರ್ಥಕಾವ್ಯಯ

ಹಲವು ವಸ್ತುಗಳಲ್ಲಿ ಒಂದನ್ನು ನಿಶ್ಚಯಿಸುವುದು. ಎ, ಏ, = ಅದೆ, ಅದೇ, ನಾನೇ, ರಾಮನೇ, ನೀನೇ, ಅವನೇ, ಅವಳೇ, ಅವರೇ.

೯.ಸಂಬೋಧಕಾವ್ಯಯ

ಕರೆಯುವಾಗ ಉಪಯೋಗಿಸುವ ಶಬ್ದಗಳು - ಎಲೋ, ಎಲಾ, ಎಲೇ, ಎಲೌ, ಓ.

೧೦.ಪ್ರಶ್ನಾರ್ಥಕಾವ್ಯಯ

ಪ್ರಶ್ನೆಮಾಡುವಾಗ ಉಪಯೋಗಿಸುವ ಅವ್ಯಯಗಳು-ಎ, ಏ, ಓ, ಆ, ಏನು, ಅವನು ಬಂದನೇ.

ಉಲ್ಲೇಖ

Tags:

ಅವ್ಯಯ ವ್ಯಾಖ್ಯೆಅವ್ಯಯ ವಿಧಗಳುಅವ್ಯಯ ಉಲ್ಲೇಖಅವ್ಯಯಕ್ರಿಯಾಪದನಾಮಪದ

🔥 Trending searches on Wiki ಕನ್ನಡ:

ಕವಿಗಳ ಕಾವ್ಯನಾಮಯುಗಾದಿಆಧುನಿಕ ಮಾಧ್ಯಮಗಳುಕೈವಾರ ತಾತಯ್ಯ ಯೋಗಿನಾರೇಯಣರುಹಳೆಗನ್ನಡವಿಕ್ರಮಾರ್ಜುನ ವಿಜಯಮಿಥುನರಾಶಿ (ಕನ್ನಡ ಧಾರಾವಾಹಿ)ರಾಯಲ್ ಚಾಲೆಂಜರ್ಸ್ ಬೆಂಗಳೂರುವಿಧಾನಸೌಧವಿಶ್ವ ಪರಂಪರೆಯ ತಾಣಕರ್ಮಧಾರಯ ಸಮಾಸಜಾತ್ಯತೀತತೆಮೊದಲನೇ ಅಮೋಘವರ್ಷಜನ್ನಸಾಲುಮರದ ತಿಮ್ಮಕ್ಕರೈತವಾರಿ ಪದ್ಧತಿಭಾರತೀಯ ಧರ್ಮಗಳುರಾಷ್ಟ್ರೀಯ ಸ್ವಯಂಸೇವಕ ಸಂಘಸಂಸ್ಕೃತ ಸಂಧಿಗುರುರಾಜ ಕರಜಗಿಮುದ್ದಣಹನುಮಾನ್ ಚಾಲೀಸಪ್ರತಿಭಾ ನಂದಕುಮಾರ್ಸಹಕಾರಿ ಸಂಘಗಳುಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಕಬೀರ್ಸರ್ವಜ್ಞಕನ್ನಡದಲ್ಲಿ ಸಣ್ಣ ಕಥೆಗಳುಕನ್ನಡ ಸಾಹಿತ್ಯ ಸಮ್ಮೇಳನವಜ್ರಮುನಿಹಲ್ಮಿಡಿ ಶಾಸನಮಧ್ವಾಚಾರ್ಯದಾಳಿಂಬೆಕರ್ಣಾಟಕ ಸಂಗೀತಉದಾರವಾದಸಾರಾ ಅಬೂಬಕ್ಕರ್ಮಳೆಕರ್ನಾಟಕದ ಕಲೆ ಮತ್ತು ಸಂಸ್ಕೃತಿಮೀನಾಕ್ಷಿ ದೇವಸ್ಥಾನಧರ್ಮಸ್ಥಳಕ್ರೀಡೆಗಳುಇಮ್ಮಡಿ ಪುಲಿಕೇಶಿಶೃಂಗೇರಿಪಂಚ ವಾರ್ಷಿಕ ಯೋಜನೆಗಳುನಾಲ್ವಡಿ ಕೃಷ್ಣರಾಜ ಒಡೆಯರುರಾಜೇಶ್ ಕುಮಾರ್ (ಏರ್ ಮಾರ್ಷಲ್)ಬಹುಸಾಂಸ್ಕೃತಿಕತೆಕನ್ನಡದಲ್ಲಿ ವಚನ ಸಾಹಿತ್ಯಚರ್ಚೆಜಲಿಯನ್‍ವಾಲಾ ಬಾಗ್ ಹತ್ಯಾಕಾಂಡಕುಂದಾಪುರಮಲೈ ಮಹದೇಶ್ವರ ಬೆಟ್ಟಅಮೇರಿಕ ಸಂಯುಕ್ತ ಸಂಸ್ಥಾನಲೋಪಸಂಧಿಕ್ರೈಸ್ತ ಧರ್ಮಹೊಯ್ಸಳದೇವತಾರ್ಚನ ವಿಧಿಝಾನ್ಸಿ ರಾಣಿ ಲಕ್ಷ್ಮೀಬಾಯಿಬಹಮನಿ ಸುಲ್ತಾನರುಸಂವಹನಕರ್ಕಾಟಕ ರಾಶಿವ್ಯಂಜನಕರ್ನಾಟಕದ ಮಹಾನಗರಪಾಲಿಕೆಗಳುನಾಗವರ್ಮ-೧ವಿಷ್ಣುಬೆಂಗಳೂರು ಕೋಟೆಕರ್ನಾಟಕ ಜನಪದ ನೃತ್ಯಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿನೀರುಜಾಗತೀಕರಣಕುಮಾರವ್ಯಾಸಭತ್ತನೇಮಿಚಂದ್ರ (ಲೇಖಕಿ)ಕನ್ನಡ ಸಂಧಿಸಂಸ್ಕೃತಿಭಾರತೀಯ ಭಾಷೆಗಳುವಿಮರ್ಶೆವಚನ ಸಾಹಿತ್ಯಅರಿಸ್ಟಾಟಲ್‌🡆 More