ತಲೆಬುರುಡೆ

ತಲೆಬುರುಡೆಯು ಕಶೇರುಕಗಳಲ್ಲಿನ ತಲೆಯನ್ನು ರಚಿಸುವ ಮೂಳೆಯುಳ್ಳ ರಚನೆ.

ಅದು ಮುಖದ ರಚೆನಗಳಿಗೆ ಆಧಾರ ನೀಡುತ್ತದೆ ಮತ್ತು ಮಿದುಳಿಗೆ ಒಂದು ರಕ್ಷಣಾತ್ಮಕ ಕುಹರವನ್ನು ಒದಗಿಸುತ್ತದೆ. ತಲೆಬುರುಡೆಯು ಎರಡು ಭಾಗಗಳನ್ನು ಒಳಗೊಂಡಿರುತ್ತದೆ: ಮೆದುಳು ಕೋಶ ಮತ್ತು ಮ್ಯಾಂಡಿಬಲ್. ಮಾನವರಲ್ಲಿ ಇವೆರಡು ಭಾಗಗಳೆಂದರೆ ನ್ಯೂರೋಕ್ರೇನಿಯಮ್ ಮತ್ತು ವಿಸರೋಕ್ರೇನಿಯಮ್ ಅಥವಾ ಮುಖದ ಅಸ್ಥಿಪಂಜರ. ವಿಸರೋಕ್ರೇನಿಯಮ್ ತನ್ನ ಅತಿ ದೊಡ್ಡ ಎಲುಬಾಗಿ ಮ್ಯಾಂಡಿಬಲ್ ಅನ್ನು ಒಳಗೊಂಡಿರುತ್ತದೆ. ತಲೆಬುರುಡೆಯು ಅಸ್ಥಿಪಂಜರದ ಅತ್ಯಂತ ಮೇಲಿನ ಭಾಗವನ್ನು ರಚಿಸುತ್ತದೆ ಮತ್ತು ಸೆಫ಼ಲೈಜ಼ೇಶನ್ ಪ್ರಕ್ರಿಯೆಯ ಉತ್ಪನ್ನವಾಗಿದೆ. ತಲೆಬುರುಡೆಯು ಮಿದುಳು ಮತ್ತು ಕಣ್ಣುಗಳು, ಕಿವಿಗಳು, ಮೂಗು ಮತ್ತು ಬಾಯಿಯಂತಹ ಹಲವು ಇಂದ್ರಿಯ ರಚನೆಗಳಿಗೆ ಸ್ಥಳ ಒದಗಿಸುತ್ತದೆ. ಮಾನವರಲ್ಲಿ ಈ ಇಂದ್ರಿಯ ರಚನೆಗಳು ಮುಖದ ಅಸ್ಥಿಭಾಗದ ಭಾಗವಾಗಿರುತ್ತವೆ.

ತಲೆಬುರುಡೆ
ಇಲಿಯ ತಲೆಬುರುಡೆ

ತಲೆಬುರುಡೆಯ ಕಾರ್ಯಗಳಲ್ಲಿ ಮಿದುಳಿನ ರಕ್ಷಣೆ, ಸ್ಟೀರಿಯೋಸ್ಕೋಪಿಕ್ ದೃಷ್ಟಿಗೆ ಅವಕಾಶ ನೀಡಲು ಕಣ್ಣುಗಳ ನಡುವಿನ ದೂರವನ್ನು ನಿಗದಿಮಾಡುವುದು, ಮತ್ತು ಶಬ್ದಗಳ ದಿಕ್ಕು ಮತ್ತು ದೂರದ ಧ್ವನಿ ಸ್ಥಳೀಕರಣವನ್ನು ಸಕ್ರಿಯಗೊಳಿಸಲು ಕಿವಿಗಳ ಸ್ಥಾನವನ್ನು ನಿಗದಿಮಾಡುವುದು ಸೇರಿವೆ. ಕೊಂಬಿರುವ ಗೊರಸುಳ್ಳ ಪ್ರಾಣಿಗಳಂತಹ ಕೆಲವು ಪ್ರಾಣಿಗಳಲ್ಲಿ, ತಲೆಬುರುಡೆಯು ಕೊಂಬುಗಳಿಗೆ (ಮುಮ್ಮೂಳೆ ಮೇಲೆ) ಆಧಾರವನ್ನು ಒದಗಿಸುವ ಮೂಲಕ ರಕ್ಷಣಾತ್ಮಕ ಕಾರ್ಯವನ್ನು ಕೂಡ ಹೊಂದಿರುತ್ತದೆ. ಅನೇಕ ಸಂಯೋಜಿತ ಚಪ್ಪಟೆ ಮೂಳೆಗಳಿಂದ ತಲೆಬುರುಡೆಯ ರಚನೆಯಾಗಿರುತ್ತದೆ. ತಲೆಬುರುಡೆಯು ಅನೇಕ ಫ಼ಾರೇಮನ್‍ಗಳು, ಫ಼ಾಸಾಗಳು, ವಾಳಗಳು, ಮತ್ತು ಹಲವಾರು ಕುಳಿಗಳು ಅಥವಾ ಸೈನಸ್‍ಗಳನ್ನು ಹೊಂದಿರುತ್ತದೆ. ಪ್ರಾಣಿಶಾಸ್ತ್ರದಲ್ಲಿ ತಲೆಬುರುಡೆಯಲ್ಲಿ ಫ಼ೇನೆಸ್ಟ್ರಾಗಳು ಎಂದು ಕರೆಯಲ್ಪಡುವ ರಂಧ್ರಗಳಿರುತ್ತವೆ.

ಮಾನವ ತಲೆಬುರುಡೆಯೆಂದರೆ ಮಾನವ ಅಸ್ಥಿಪಂಜರದಲ್ಲಿ ತಲೆಯನ್ನು ರಚಿಸುವ ಮೂಳೆಯುಳ್ಳ ರಚನೆ. ಅದು ಮುಖದ ರಚನೆಗಳಿಗೆ ಆಧಾರ ನೀಡುತ್ತದೆ ಮತ್ತು ಮೆದುಳಿಗಾಗಿ ಕುಹರವನ್ನು ರಚಿಸುತ್ತದೆ. ಇತರ ಕಶೇರುಕಗಳ ತಲೆಬುರುಡೆಗಳಂತೆ, ಇದು ಮೆದುಳಿಗೆ ಗಾಯವಾಗದಂತೆ ರಕ್ಷಿಸುತ್ತದೆ. ನ್ಯೂರೋಕ್ರೇನಿಯಮ್ ಮೆದುಳು ಮತ್ತು ಮೆದುಳುಕಾಂಡವನ್ನು ಸುತ್ತುವರಿಯುವ ಮತ್ತು ಅವುಗಳಿಗೆ ಸ್ಥಳ ನೀಡುವ ರಕ್ಷಣಾತ್ಮಕ ಕಪಾಲ ಕುಹರವನ್ನು ರೂಪಿಸುತ್ತದೆ. ಕಪಾಲ ಮೂಳೆಗಳ ಮೇಲಿನ ಪ್ರದೇಶಗಳು ಬುರುಡೆ ಟೋಪಿಯನ್ನು (ತಲೆಚಿಪ್ಪು) ರೂಪಿಸುತ್ತವೆ.

ಉಲ್ಲೇಖಗಳು

Tags:

ಕಣ್ಣುಕಶೇರುಕಕಿವಿತಲೆಬಾಯಿಮಾನವಮಿದುಳುಮುಖಮೂಗುಮೂಳೆ

🔥 Trending searches on Wiki ಕನ್ನಡ:

ಉಪ್ಪಿನ ಸತ್ಯಾಗ್ರಹಗೋಕಾಕ್ ಚಳುವಳಿಬಸವೇಶ್ವರಎಸ್.ಜಿ.ಸಿದ್ದರಾಮಯ್ಯಮನೆರಾಷ್ತ್ರೀಯ ಐಕ್ಯತೆಸಿದ್ದರಾಮಯ್ಯಮಳೆಗಾಲಪಾರ್ವತಿಅಂಟುಮೂಲಭೂತ ಕರ್ತವ್ಯಗಳುನೀರುಸಂವಹನಮಾತೃಭಾಷೆಕೃಷ್ಣರಾಜನಗರತುಳಸಿಮಾರ್ಕ್ಸ್‌ವಾದಮೋಕ್ಷಗುಂಡಂ ವಿಶ್ವೇಶ್ವರಯ್ಯಬಸವ ಜಯಂತಿಮಲೈ ಮಹದೇಶ್ವರ ಬೆಟ್ಟಡೊಳ್ಳು ಕುಣಿತಝಾನ್ಸಿ ರಾಣಿ ಲಕ್ಷ್ಮೀಬಾಯಿಕನ್ನಡ ಸಾಹಿತ್ಯಸೀತೆಅಂಡವಾಯುಗೂಗಲ್ಪಿ.ಲಂಕೇಶ್ಶಿವಕರ್ನಾಟಕ ಲೋಕಸೇವಾ ಆಯೋಗಕರ್ನಾಟಕ ಜನಪದ ನೃತ್ಯಕನ್ನಡ ಗುಣಿತಾಕ್ಷರಗಳುಶಿವಮೊಗ್ಗನಾರುಮಳೆನೀರು ಕೊಯ್ಲುಸೌರಮಂಡಲವಿಧಾನ ಸಭೆಕವಿರಾಜಮಾರ್ಗವಿಜಯಪುರಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಸೂರ್ಯವ್ಯೂಹದ ಗ್ರಹಗಳುವ್ಯಂಜನಜೀವವೈವಿಧ್ಯತ್ಯಾಜ್ಯ ನಿರ್ವಹಣೆಜವಾಹರ‌ಲಾಲ್ ನೆಹರುಬಂಗಾರದ ಮನುಷ್ಯ (ಚಲನಚಿತ್ರ)ಕವಿಗಳ ಕಾವ್ಯನಾಮವಿರಾಟಸ್ಕೌಟ್ಸ್ ಮತ್ತು ಗೈಡ್ಸ್ಮಂಗಳ (ಗ್ರಹ)ಭಾರತೀಯ ರೈಲ್ವೆಕೊಡಗುನ್ಯೂ ಜೀಲ್ಯಾಂಡ್ ಕ್ರಿಕೆಟ್ ತಂಡಜೈನ ಧರ್ಮಚುನಾವಣೆಕೇಂದ್ರಾಡಳಿತ ಪ್ರದೇಶಗಳುನೀನಾದೆ ನಾ (ಕನ್ನಡ ಧಾರಾವಾಹಿ)ಸಂವತ್ಸರಗಳುಬ್ಲಾಗ್ಮೈಸೂರುಹರಿಹರ (ಕವಿ)ಬೆಂಗಳೂರು ಗ್ರಾಮಾಂತರ ಜಿಲ್ಲೆಭಾರತದಲ್ಲಿನ ಜಾತಿ ಪದ್ದತಿಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)ಶಿರ್ಡಿ ಸಾಯಿ ಬಾಬಾಹಕ್ಕ-ಬುಕ್ಕ೨೦೨೪ ಐಸಿಸಿ ಪುರುಷರ ಟಿ೨೦ ವಿಶ್ವಕಪ್ಎಳ್ಳೆಣ್ಣೆಮಡಿಕೇರಿಕಾದಂಬರಿಅಕ್ಷಾಂಶ ಮತ್ತು ರೇಖಾಂಶಶಿವಪ್ಪ ನಾಯಕಮುರುಡೇಶ್ವರಕಾರ್ಮಿಕರ ದಿನಾಚರಣೆಈಸೂರುರೋಮನ್ ಸಾಮ್ರಾಜ್ಯ🡆 More