ದ್ವಂದ್ವ ಸಮಾಸ

ಎರಡು ಅಥವಾ ಅನೇಕ ನಾಮಪದಗಳೂ ಸಹಯೋಗ ತೋರುವಂತೆ ಸೇರಿ, ಎಲ್ಲಾ ಪದಗಳ ಅರ್ಥಗಳೂ ಪ್ರಧಾನವಾಗಿ ಉಳ್ಳ ಸಮಾಸಕ್ಕೆ ದ್ವಂದ್ವ ಸಮಾಸವೆಂದು ಹೆಸರು.

  1. ಆತನು ಹೊಲಮನೆ ಮಾಡಿಕೊಂಡ್ಡಿದ್ದಾನೆ.
  2. ಕೆರೆಕಟ್ಟೆಗಳನ್ನು ಕಟ್ಟಿಸಿದನು.

ಈ ವಾಕ್ಯಗಳಲ್ಲಿ ಕಾಣುವ ಹೊಲಮನೆ, ಕೆರೆಕಟ್ಟೆ ಪದಗಳನ್ನು ಬಿಡಿಸಬಹುದು. ಹಾಗೆ, ಬಿಡಿಸಿ ಬರೆದಾಗ

  • ಹೊಲವನ್ನು+ಮನೆಯನ್ನು= ಹೊಲಮನೆಯನ್ನು ಅಥವಾ ಹೊಲಮನೆಗಳನ್ನು ಎಂದೂ
  • ಕೆರೆಯನ್ನು+ಕಟ್ಟೆಯನ್ನು= ಕೆರೆಕಟ್ಟೆಯನ್ನು ಅಥವಾ ಕೆರೆಕಟ್ಟೆಗಳನ್ನು ಎಂದೂ

ಹೇಳಬಹುದು.

ಇಲ್ಲಿ, ಇತರ ಸಮಾಸಗಳಂತೆ ಪೂರ್ವದ ಅಥವಾ ಉತ್ತರದ ಯಾವುದಾದರೊಂದು ಪದದ ಅರ್ಥಕ್ಕೆ ಪ್ರಾಧಾನ್ಯತೆಯಿರದೆ, ಎಲ್ಲಾ ಪದಗಳ ಅರ್ಥವೂ ಪ್ರಧಾನವಾಗಿರುವವು.

ಹೊಲವನ್ನು ಮಾಡಿಕೊಂಡನು, ಮನೆಯನ್ನು ಮಾಡಿಕೊಂಡನು ಎಂದರೆ, ಹೊಲ, ಮನೆ ಎರಡೂ ಪದಗಳಿಗೆ ಸಹಯೋಗ ತೋರುತ್ತದೆ.

ಹೊಲಕ್ಕೆ ಮನೆಯ, ಮನೆಗೆ ಹೊಲದ ಸಹಯೋಗ ಕರ್ತೃವಿಗೆ ಇದೆಯೆಂಬ ಅರ್ಥ. ಹಾಗೆಯೇ, ಕೆರೆಯನ್ನು, ಕಟ್ಟೆಯನ್ನು ಇವೆರಡು ಪದಗಳಿಗೂ ಕರ್ತೃಪದಕ್ಕೂ ಸಹಯೋಗವಿರುತ್ತದೆ.

ಹೀಗೆ ಸಹಯೋಗ ತೋರುವಂತೆ ಹೇಳುವ ಸಮಾಸವೇ ದ್ವಂದ್ವ ಸಮಾಸ. ಈ ಸಮಾಸದಲ್ಲಿ ಎರಡಕ್ಕಿಂತ ಹೆಚ್ಚು ಪದಗಳೂ ಇರಬಹುದು.

  • ಕನ್ನಡ - ಕನ್ನಡ ಪದಗಳು
  1. ಕೆರೆಯೂ+ಕಟ್ಟೆಯೂ+ಬಾವಿಯೂ - ಕೆರೆಕಟ್ಟೆಬಾವಿ ಅಥವಾ ಕೆರೆಕಟ್ಟೆಬಾವಿಗಳು
  2. ಗಿಡವೂ+ಮರವೂ+ಬಳ್ಳಿಯೂ+ಪೊದೆಯೂ - ಗಿಡಮರಬಳ್ಳಿಪೊದೆ ಅಥವಾ ಗಿಡಮರಬಳ್ಳಿಪೊದೆಗಳು
  3. ಆನೆಯೂ+ಕುದುರೆಯೂ+ಒಂಟೆಯೂ - ಆನೆಕುದುರೆಒಂಟೆ ಅಥವಾ ಆನೆಕುದುರೆಒಂಟೆಗಳು
  4. ಗುಡುಗೂ+ಸಿಡಿಲೂ+ಮಿಂಚೂ - ಗುಡುಗುಸಿಡಿಲುಮಿಂಚು ಅಥವಾ ಗುಡುಗುಸಿಡಿಲುಮಿಂಚುಗಳು
  • ಸಂಸ್ಕೃತ - ಸಂಸ್ಕೃತ ಪದಗಳು
  1. ಗಿರಿಯೂ+ವನವೂ+ದುರ್ಗವೂ - ಗಿರಿವನದುರ್ಗ ಅಥವಾ ಗಿರಿವನದುರ್ಗಗಳು
  2. ಸೂರ್ಯನೂ+ಚಂದ್ರನೂ+ನಕ್ಷತ್ರವೂ - ಸೂರ್ಯಚಂದ್ರನಕ್ಷತ್ರ ಅಥವಾ ಸೂರ್ಯಚಂದ್ರನಕ್ಷತ್ರಗಳು
  3. ಕರಿಯೂ+ತುರಗವೂ+ರಥವೂ - ಕರಿತುರಗರಥ ಅಥವಾ ಕರಿತುರಗರಥಗಳು

ಇಲ್ಲಿ ದ್ವಂದ್ವ ಸಮಾಸವಾದ ಮೇಲೆ, ಸಮಸ್ತಪದವು, ಏಕವಚನವಾಗಿಯೂ, ಬಹುವಚನವಾಗಿಯೂ ಅಂತ್ಯಗೊಳ್ಳುವುದುಂಟು. ಏಕವಚನವಾಗಿ ಅಂತ್ಯಗೊಂಡರೆ, ಸಮಾಹಾರ ದ್ವಂದ್ವ ಸಮಾಸವೆಂದೂ, ಬಹುವಚನವಾಗಿ ಅಂತ್ಯಗೊಂಡರೆ, ಇತರೇತರ ದ್ವಂದ್ವ ಸಮಾಸವೆಂದು ಹೆಸರು.

ನೋಡಿ


Tags:

🔥 Trending searches on Wiki ಕನ್ನಡ:

ದಿನಕರ ದೇಸಾಯಿನೇಮಿಚಂದ್ರ (ಲೇಖಕಿ)ಎಸ್.ಎಲ್. ಭೈರಪ್ಪರಾಜಕೀಯ ವಿಜ್ಞಾನಹೇರಳೆಕಾಯಿಪಟ್ಟದಕಲ್ಲುಕರ್ನಾಟಕ ವಿಧಾನ ಸಭೆಏಕಲವ್ಯರಾಷ್ಟ್ರೀಯ ಶಿಕ್ಷಣ ನೀತಿಜ್ಯೋತಿಷ ಮತ್ತು ವಿಜ್ಞಾನಕರ್ನಾಟಕದ ಅಣೆಕಟ್ಟುಗಳುಚನ್ನಬಸವೇಶ್ವರಕನ್ನಡ ಸಾಹಿತ್ಯ ಪರಿಷತ್ತುಸಂಶೋಧನೆಹಣ್ಣುಸ್ವಚ್ಛ ಭಾರತ ಅಭಿಯಾನಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣಇಮ್ಮಡಿ ಪುಲಕೇಶಿಪ್ಲಾಸಿ ಕದನಕಾಂತಾರ (ಚಲನಚಿತ್ರ)ಸುರಪುರಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಜೈನ ಧರ್ಮ ಇತಿಹಾಸಎಂ. ಎನ್. ಶ್ರೀನಿವಾಸ್ಮಂಜುಮ್ಮೆಲ್ ಬಾಯ್ಸ್ಕಿತ್ತೂರು ಚೆನ್ನಮ್ಮಗೊಮ್ಮಟೇಶ್ವರ ಪ್ರತಿಮೆಪಿ.ಲಂಕೇಶ್ಸ್ಟಾರ್ ಸುವರ್ಣಶಬ್ದಆದಿ ಶಂಕರಬಾಬು ಜಗಜೀವನ ರಾಮ್ಧರ್ಮಸ್ಥಳಕಾವೇರಿ ನದಿತಾಮ್ರಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಭಾರತದ ರಾಜ್ಯಗಳ ಜನಸಂಖ್ಯೆದೇವರ/ಜೇಡರ ದಾಸಿಮಯ್ಯಭಾರತದ ಸಂವಿಧಾನದ ೩೭೦ನೇ ವಿಧಿವ್ಯಾಯಾಮರಾಜು ಅನಂತಸ್ವಾಮಿಭಾಷಾಂತರರವೀಂದ್ರನಾಥ ಠಾಗೋರ್ಯಜಮಾನ (ಚಲನಚಿತ್ರ)ಮೇರಿ ಕ್ಯೂರಿಕನ್ನಡದಲ್ಲಿ ಸಣ್ಣ ಕಥೆಗಳುಬೈರಾಗಿ (ಚಲನಚಿತ್ರ)ಮಾಪನಅಶೋಕನ ಶಾಸನಗಳುಕವಿರಾಜಮಾರ್ಗಗಣೇಶ್ (ನಟ)ಕನ್ನಡ ಸಾಹಿತ್ಯ ಸಮ್ಮೇಳನಸಾವಯವ ಬೇಸಾಯಶುದ್ಧಗೆಮನುಸ್ಮೃತಿಅಕ್ಬರ್ಗೋಪಿಕೃಷ್ಣನರೇಂದ್ರ ಮೋದಿಹವಾಮಾನಆಗಮ ಸಂಧಿಅಲಂಕಾರಗೌತಮ ಬುದ್ಧಕೊಡಗಿನ ಇತಿಹಾಸಕಂದಕರ್ನಾಟಕ ಲೋಕಸಭಾ ಚುನಾವಣೆ, ೧೯೬೨ಭಾರತದ ಮುಖ್ಯಮಂತ್ರಿಗಳುಮದರ್‌ ತೆರೇಸಾವಾಣಿಜ್ಯ ಪತ್ರಓಂ (ಚಲನಚಿತ್ರ)ರಕ್ತದೊತ್ತಡಚಿತ್ರದುರ್ಗ ಕೋಟೆಜೀವವೈವಿಧ್ಯಜ್ಯೋತಿಷ ಶಾಸ್ತ್ರವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಭಾರತದ ರಾಷ್ಟ್ರಗೀತೆಅಷ್ಟಷಟ್ಪದಿಸಂಚಿ ಹೊನ್ನಮ್ಮಆರತಿ🡆 More