ಕನ್ನಡ ವ್ಯಾಕರಣ: ವ್ಯಾಕರಣ

ಪ್ರಮುಖವಾಗಿ ಕನ್ನಡ ವ್ಯಾಕರಣವು ಕೇಶೀರಾಜನ ಶಬ್ದಮಣಿದರ್ಪಣದ (ಕ್ರಿ.ಶ.

೧೨೬೦) ಮೇಲೆ ಆಧರಿಸಿದೆ. ಈ ಗ್ರಂಥವು ಕನ್ನಡ ಭಾಷೆಯನ್ನು ಸವಿವರವಾಗಿ ಪರಿಚಯಿಸುತ್ತದೆ.(kannada vyakarana) ಈ ಗ್ರಂಥವನ್ನು ಹೊರತುಪಡಿಸಿ ಕನ್ನಡ ವ್ಯಾಕರಣದ ಬಗ್ಗೆ ೯ನೇ ಶತಮಾನದ ಕವಿರಾಜಮಾರ್ಗ (ಅಲಂಕಾರಗಳ ಬಗ್ಗೆ ಉಲ್ಲೇಖವಿದೆ) ಹಾಗೂ ೨ನೇ ನಾಗವರ್ಮನ (೧೨ನೇ ಶತಮಾನದ ಮೊದಲಾರ್ಧದಲ್ಲಿ) ಕಾವ್ಯಲೋಕನ ಹಾಗೂ ಕರ್ನಾಟಕಭಾಷಾಭೂಷಣಗಳಲ್ಲಿ ಉಲ್ಲೇಖವಿದೆ.

ನಮ್ಮ ಭಾವನೆಗಳನ್ನು ಮತ್ತು ಅಭಿಪ್ರಾಯಗಳನ್ನು ಇತರರಿಗೆ ವ್ಯಕ್ತಪಡಿಸುವುದಕ್ಕೆ ಮತ್ತು ಅವರ ಅಭಿಪ್ರಾಯಗಳನ್ನು ಮತ್ತು ಭಾವನೆಗಳನ್ನು ನಾವು ತಿಳಿಯುವ ಮಾಧ್ಯಮಕ್ಕೆ ಭಾಷೆ ಎಂದು ಹೆಸರು.

ಭಾಷೆಯನ್ನು ಸರಿಯಾದ ವಿಧಾನದಲ್ಲಿ ಬಳಸಲು ಹಾಗೂ ಸಾರ್ವತ್ರೀಕರಣಗೊಳಿಸಲು ಇರುವ ಮಾರ್ಗದರ್ಶಿಯನ್ನು ವ್ಯಾಕರಣ ಎನ್ನುತ್ತಾರೆ.

ಪ್ರಪಂಚದಲ್ಲಿ ಸಾವಿರಾರು ಭಾಷೆಗಳಿವೆ.ಹಲವು ಭಾಷೆಗಳಲ್ಲಿ ನಾವು ಮಾತಾನಾಡುವ ಕನ್ನಡವೂ ಒಂದು ಪ್ರಮುಖ ಭಾಷೆಯಾಗಿದ್ದು ತನ್ನದೇ ಲಿಪಿಯನ್ನು ಹೊಂದಿರುವ ವಿಶೇಷ ಭಾಷೆ ಇದಾಗಿದೆ.

ಕನ್ನಡ ಭಾಷೆಯಲ್ಲಿ ಎರಡು ರೂಪಗಳಿವೆ.ಅವುಗಳೆಂದರೆ ಶ್ರಾವಣ ಮತ್ತು ಚಾಕ್ಷುಷ. ಶ್ರಾವಣ ರೂಪ ಎಂದರೆ ಧ್ವನಿಯ ಮೂಲಕ ಕಿವಿಗೆ ಕೇಳಿಸುವುದು. ಚಾಕ್ಷುಷ ರೂಪ ಎಂದರೆ ಬರಹದ ಮೂಲಕ ಕಣ್ಣಿಗೆ ಕಾಣಿಸುವುದು. ಕನ್ನಡ ಲಿಪಿಯನ್ನು ತಿಳಿಯಬೇಕಾದರೆ ಲಿಪಿರೂಪದ ವರ್ಣಮಾಲೆಯನ್ನು ತಿಳಿಯಬೇಕು. ವರ್ಣ ಎಂದರೆ ಅಕ್ಷರ. ವರ್ಣಗಳ ವ್ಯವಸ್ಥಿತ ಜೋಡಣೆಯನ್ನು ವರ್ಣಮಾಲೆ ಎನ್ನುವರು.

ಕನ್ನಡ ವರ್ಣಮಾಲೆಯಲ್ಲಿ ೪೯(49) ಅಕ್ಷರಗಳು ಬಳಕೆಯಲ್ಲಿವೆ.

ಕನ್ನಡ ಅಕ್ಷರಮಾಲೆ
ಸ್ವರಗಳು
ಯೋಗವಾಹಗಳು
ವರ್ಗೀಯ ವ್ಯಂಜನಗಳು
ಜ಼
ಫ಼
ಅವರ್ಗೀಯ ವ್ಯಂಜನಗಳು

ಮೂಲಭೂತ ಅಂಶಗಳು

  1. ಅಕ್ಷರ
  2. ೧೩ ಸ್ವರಗಳು -
  3. ಯೋಗವಾಹಗಳು - ಅಂ ಅಃ
  4. ೨೫+೯ ವ್ಯಂಜನಗಳು - .
  5. ಪದ ಅಥವಾ ಶಬ್ದ
  6. ನಾಮಪದ
  7. ಕ್ರಿಯಾಪದ
  8. ಸರ್ವನಾಮ
  9. ಗುಣವಾಚಕ
  10. ಸಾಲು ಅಥವಾ ವಾಕ್ಯ
  11. ವಿಭಕ್ತಿ ಪ್ರತ್ಯಯಗಳು
  12. ಆಖ‍್ಯಾತ ಪ್ರತ್ಯಯ
  13. ಲಿಂಗ ವಿವಕ್ಷೆ
  14. ಅಂಕಿ
  15. ವಿರುದ್ಧಾರ್ಥಕ ಪದಗಳು

ಪ್ರಮುಖ ವಿಭಾಗಗಳು

  1. ತತ್ಸಮ ತದ್ಭವ: ಸಂಸ್ಕೃತದ ಮೂಲ ಪದ, ಅದೇ ಪದದ ಅಪಭ್ರಂಶವಾದ ಕನ್ನಡ ಪದ - ಇವುಗಳನ್ನು ತತ್ಸಮ-ತದ್ಭವಗಳೆಂದು ಕರೆಯುತ್ತಾರೆ.
  2. ವಿಭಕ್ತಿ ಪ್ರತ್ಯಯಗಳು: 'ಪ್ರತ್ಯಯ' ಎಂದರೆ ಕಾರ್ಯಕಾರಣ ಸಂಭಂಧಗಳನ್ನು ಸೂಚಿಸುವ ಪದಗಳು. ಸಂಸ್ಕೃತದಲ್ಲಿ ಒಂದು ಪದದ ಕೊನೆಗೆ ಸೇರುವ ಕೆಲವು 'ಅಕ್ಷರಗಳ ಗುಂಪು'ಗಳು. ಇವು ಆ ಪದದ ಕೊನೆಗೆ ಸೇರಿ ಅದರ ಅರ್ಥವನ್ನು ಮಾರ್ಪಡಿಸುವುವು. ಇವು ಬರಿ ಒಂದು ಪದದ ಭಾಗಗಳು ಹೊರತು ಸ್ವತಂತ್ರ ಪದಗಳಲ್ಲ.
  3. ದ್ವಿರುಕ್ತಿ : ಒಂದು ಪದವು ಎರಡು ಬಾರಿ ಬರುವುದನ್ನು ದ್ವಿರುಕ್ತಿ ಎನ್ನುವರು.ಒಂದು ವಿಶೇಷಾರ್ಥವನ್ನು ವ್ಯಕ್ತಪಡಿಸುವುದಕ್ಕಾಗಿ ಒಂದು ಪದವನ್ನ್ನೋ, ಒಂದು ವಾಕ್ಯವನ್ನೋ ಎರಡೆರಡು ಸಲ ಪ್ರಯೋಗ ಮಾಡುವುದಕ್ಕೆ ದ್ವಿರುಕ್ತಿ (ದ್ವಿಃ ಉಕ್ತಿ - ದ್ವಿರುಕ್ತಿ) ಎನ್ನುವರು. ಉದಾ: ಬೇಗಬೇಗ, ಮನೆಮನೆಗೂ
  4. ಕಾಲ-ವ್ಯಾಕರಣ: ಕೇಶಿರಾಜನ ವ್ಯಾಕರಣ ಗ್ರಂಥವಾದ ಶಬ್ದಮಣಿ ದರ್ಪಣ ವೇ ನಮಗೆ ಸಿಗುವ ಪ್ರಾಚೀನ ಕನ್ನಡ ವ್ಯಾಕರಣ ಗ್ರಂಥ.ಅದಕ್ಕಿಂತ ಹಿಂದಿನ ಗ್ರಂಥಗಳು ಇರಬಹುದು ಆದರೆ ಉಪಲಬ್ಧವಾಗಿಲ್ಲ.]
  5. ಜೋಡು ನುಡಿಗಟ್ಟು: ದ್ವಿರುಕ್ತಿಯ ಹಾಗೆಯೇ ಇನ್ನೊಂದು ರೀತಿಯ ಶಬ್ದಗಳನ್ನು ನಾವು ಪ್ರಯೋಗಿಸುವುದುಂಟು. ಅವು ದ್ವಿರುಕ್ತಿಗಳ ಹಾಗೆ ಕಂಡರೂ, ದ್ವಿರುಕ್ತಿಗಳಲ್ಲ. ಅವುಗಳನ್ನು ಜೋಡು ನುಡಿಗಟ್ಟುಗಳೆಂದು ಕರೆಯುತ್ತಾರೆ. ಅವುಗಳಲ್ಲಿ, ಸಾಮಾನ್ಯವಾಗಿ ಎರಡನೆಯ ಪದಕ್ಕೆ ಅರ್ಥವಿರುವುದಿಲ್ಲ.ಉದಾ: ಮಕ್ಕಳುಗಿಕ್ಕಳು
  6. ಸಂಧಿ: ಸಂಧಿ/ಕೂಡಿಕೆ ಸಂಧಿಯೆಂದರೆ ಸಂಸ್ಕೃತದಲ್ಲಿ ಕೂಡಿಕೆ/ಕಲೆತ ಎಂದು ಅರ್ಥ. ವ್ಯಾಕರಣದಲ್ಲಿ ಎರಡು ಒರೆ(ಪದ)ಗಳನ್ನು ಕೂಡಿಸಿ/ಸೇರಿಸಿ/ಕಲೆಸಿ ಒಂದು ಒರೆ(ಪದ)ವನ್ನಾಗಿ ಮಾಡಿದರೆ ಅದು ಸಂಧಿ/ಕೂಡಿಕೆ ಯಾಗುವುದು. ಕನ್ನಡದಲ್ಲಿ ಅದನ್ನು "ಒರೆಗೂಡಿಕೆ" ಎಂದು ಕರೆಯಬಹುದು.
  7. ಸಮಾಸ: ಸಮಾಸವೆಂದರೆ ಸಮಸ್ತ ಪದವೆಂದರ್ಥ. ಅರ್ಥವನ್ನು ಅನುಸರಿಸಿ, ಎರಡು ಅಥವಾ ಅದಕ್ಕಿಂತ ಹೆಚ್ಚಿನ ಪದಗಳನ್ನು ಸಂಕ್ಷೇಪದಿಂದ ಹೇಳುವುದನ್ನು ಸಮಾಸ ಎನ್ನಲಾಗುತ್ತದೆ.
  8. ಛಂದಸ್ಸು: ಛಂದಸ್ಸು - ಪದ್ಯವನ್ನು ರಚಿಸುವ ಶಾಸ್ತ್ರ. ಛಂದಸ್ಸಿನ ಶಾಸ್ತ್ರದ ಪ್ರಕಾರ ರಚಿತವಾದ ಪದ್ಯವನ್ನು ಛಂದೋಬದ್ಧ ಪದ್ಯ ಎನ್ನುವರು.
  9. ಅಲಂಕಾರ: ವಿಶಾಲ ಅರ್ಥದಲ್ಲಿ ಕಾವ್ಯದ ರಮಣೀಯತೆ ಅಥವಾ ಅದರ ಸೌಂದರ್ಯಕ್ಕೆ ಕಾರಣವಾಗುವ 'ಶಬ್ದ' ಮತ್ತು 'ಅರ್ಥ'ಗಳ ವೈಚಿತ್ರವನ್ನು "ಅಲಂಕಾರ" ಎನ್ನಬಹುದು.
  10. ವೃತ್ತ: ಖ್ಯಾತ ಕರ್ಣಾಟಕ ವೃತ್ತಗಳು.
  11. ತ್ರಿಪದಿ: ತ್ರಿಎಂದರೆ ಮೂರು. ಪದಿ ಎಂದರೆ ಸಾಲು. ಮೂರು ಸಾಲಿನ ಪದ್ಯಕ್ಕೆ ತ್ರಿಪದಿ ಎಂದು ಕರೆವರು.
  12. ಕಾಂಡ:
  13. ಷಟ್ಪದಿ: ಷಟ್ ಎಂದರೆ ಆರು. ಪದಿ ಎಂದರೆ ಸಾಲು. ಆರು ಸಾಲಿನ ಪದ್ಯಕ್ಕೆ ಷಟ್ಪದಿ ಎಂದು ಕರೆವರು.
  14. ಸಾಂಗತ್ಯ: "ಸಾಂಗತ್ಯ " ಇದು ಕನ್ನಡದಲ್ಲಿ ಬಹು ಪ್ರಸಿದ್ಧವಾದ ಒಂದು ಅಂಶಚ್ಛಂದಸ್ಸಿನ ಪ್ರಕಾರ.
  15. ಪ್ರಾಸಗಳು: ಪದ್ಯದ ಪ್ರತಿಪಾದದ ೨ನೇ ಅಕ್ಷರವು ಪ್ರಾಸವೆಂದು ವರ್ತಿಸುತ್ತದೆ. ಆ ಎರಡನೆ ಅಕ್ಷರವು ಎಲ್ಲಾ ಪಾದಗಳಲ್ಲಿಯೂ ಒಂದೇ ಆಗಿರಬೇಕು.
  16. ಪರಿಮಾಣ ವಾಚಕಗಳು: ವಸ್ತುಗಳ ಸಾಮಾನ್ಯ ಅಳತೆ, ಪರಿಮಾಣ, ಗಾತ್ರ ಇತ್ಯಾದಿಗಳನ್ನು ಸೂಚಿಸುವ ಪದಗಳಿಗೆ ಪರಿಮಾಣ ವಾಚಕಗಳು ಎಂಬ ಹೆಸರು.
  1. ಸಮುಚ್ಚಯ ಪದಗಳು |ದ್ವಯಗಳು; ತ್ರಯ ; ಚತುಷ್ಟಯಗಳು ; ಪಂಚ ಗಳು; ಇತ್ಯಾದಿ, ಷಷ್ಠಿ (೬೦)ಸಂವತ್ಸರಗಳ ವರೆಗೆ
  1. ಪ್ರಬಂಧ ರಚನೆ: ಪ್ರಬಂಧ ರಚನೆ - ಅರ್ಥಪೂರ್ಣ ಖಚಿತ ವಾಕ್ಯಗಳ ಮೂಲಕ ವ್ಯಕ್ತಿಯ ಆಲೋಚನೆಗಳನ್ನು ಲಿಖಿತವಾಗಿ ಅಭಿವ್ಯಕ್ತಿಸುವ ಹಾಗೂ ನಿರ್ದಿಷ್ಟ ವಿಷಯಗಳನ್ನು ಕ್ರಮಬದ್ಧ ರೀತಿಯಲ್ಲಿ ಸಮರ್ಪಕವಾಗಿ ನಿರೂಪಿಸುವ ಪರಿ.

ಟಿಪ್ಪಣಿ


  • ಸಮುಚ್ಚಯ ಪದಗಳು :- ಇದು ಚತುರ್ವೇದ, ಅಷ್ಟದಿಕ್ಪಾಲಕರು, ಏಕಾದಶ ರುದ್ರರು ಮೊದಲಾದ ಸಮೂಹ ಪದಗಳ ಪಟ್ಟಿ (ಕೋಶ) ; ವಾಸ್ತವವಾಗಿ ಕನ್ನಡ ವ್ಯಾಕರಣ ದಲ್ಲಿ ಬರುವುದಿಲ್ಲ . ಆದರೆ ಇಂಗ್ಲಿಷ್ ವ್ಯಾಕರಣ ದಲ್ಲಿ ಸಮೂಹ ಪದಗಳ ವಿಭಾಗವಿದೆ. (ಕಲೆಕ್ಟಿವ್ ನೌನ್ಸ್ ). ಈ ಬಗೆಯ ಪದಗಳನ್ನು ಹೊಸದಾಗಿ ನಾಮಪದಗಳ ಗುಂಪಿಗೆ ಇಲ್ಲಿ ಸೇರಿಸಿದೆ.

ಭಾಷಾ ವಿಶೇಷಗಳು

  1. ಕನ್ನಡದ ಪ್ರತಿ ಅಕ್ಷರವು ತನ್ನದೇ ಆದ ರೂಪ ಮತ್ತು ಧ್ವನಿ ಹೊಂದಿದೆ.
  2. ಕನ್ನಡವನ್ನು ಎಡದಿಂದ ಬಲಕ್ಕೆ ಬರೆಯಲಾಗುತ್ತದೆ.

ಹೆಚ್ಚಿನ ಓದಿಗೆ

ನೋಡಿ

ಉಲ್ಲೇಖ

  1. http://www.nammakannadanaadu.com/vyakarana/kannada-vyak Archived 2016-04-17 ವೇಬ್ಯಾಕ್ ಮೆಷಿನ್ ನಲ್ಲಿ.
  2. ಕನ್ನಡ ವ್ಯಾಕರಣ

Tags:

ಕನ್ನಡ ವ್ಯಾಕರಣ ಮೂಲಭೂತ ಅಂಶಗಳುಕನ್ನಡ ವ್ಯಾಕರಣ ಪ್ರಮುಖ ವಿಭಾಗಗಳುಕನ್ನಡ ವ್ಯಾಕರಣ ಭಾಷಾ ವಿಶೇಷಗಳುಕನ್ನಡ ವ್ಯಾಕರಣ ಹೆಚ್ಚಿನ ಓದಿಗೆಕನ್ನಡ ವ್ಯಾಕರಣ ನೋಡಿಕನ್ನಡ ವ್ಯಾಕರಣ ಉಲ್ಲೇಖಕನ್ನಡ ವ್ಯಾಕರಣಕವಿರಾಜಮಾರ್ಗ

🔥 Trending searches on Wiki ಕನ್ನಡ:

ಜಾಹೀರಾತುಋಗ್ವೇದಧೂಮಕೇತುವಿಶ್ವ ರಂಗಭೂಮಿ ದಿನಸುದೀಪ್ರಾಷ್ಟ್ರೀಯತೆಪೆಟ್ರೋಲಿಯಮ್ಕಾನ್ಸ್ಟಾಂಟಿನೋಪಲ್ಓಂ ನಮಃ ಶಿವಾಯನಾಡ ಗೀತೆರಕ್ತಭಾರತೀಯ ೫೦೦ ಮತ್ತು ೧೦೦೦ ರೂಪಾಯಿ ನೋಟುಗಳ ಚಲಾವಣೆ ರದ್ದತಿಅವರ್ಗೀಯ ವ್ಯಂಜನಪುನೀತ್ ರಾಜ್‍ಕುಮಾರ್ವಿಕಿಪೀಡಿಯಮುದ್ದಣಸ್ತ್ರೀಮೈಸೂರುವಿಜಯನಗರದ ಕಲೆ ಮತ್ತು ವಾಸ್ತುಶಿಲ್ಪರತ್ನಾಕರ ವರ್ಣಿಹಿಂದೂ ಧರ್ಮದಶಾವತಾರಭಾರತೀಯ ಅಂಚೆ ಸೇವೆಕಿತ್ತೂರು ಚೆನ್ನಮ್ಮಅಲರ್ಜಿಭಗವದ್ಗೀತೆಭ್ರಷ್ಟಾಚಾರಮಂಗಳಮುಖಿಕೈಗಾರಿಕಾ ಕ್ರಾಂತಿಬಳ್ಳಾರಿಹ್ಯಾಲಿ ಕಾಮೆಟ್ಜನ್ನವ್ಯಕ್ತಿತ್ವರಾವಣಕೆ.ಗೋವಿಂದರಾಜುಖಾಸಗೀಕರಣಸಸ್ಯ ಅಂಗಾಂಶರಾಷ್ಟ್ರಕೂಟಬಂಗಾರದ ಮನುಷ್ಯ (ಚಲನಚಿತ್ರ)ವಾಯು ಮಾಲಿನ್ಯಕರ್ನಾಟಕದ ನದಿಗಳುಶ್ರವಣಬೆಳಗೊಳಕಾದಂಬರಿಲೋಕಸಭೆಜೈನ ಧರ್ಮ ಗ್ರಂಥ ತತ್ತ್ವಾರ್ಥ ಸೂತ್ರಗೋತ್ರ ಮತ್ತು ಪ್ರವರಅಸ್ಪೃಶ್ಯತೆನರರೋಗ(Neuropathy)ಫುಟ್ ಬಾಲ್ಆದೇಶ ಸಂಧಿಕರ್ನಾಟಕ ರತ್ನದರ್ಶನ್ ತೂಗುದೀಪ್ಹೊಯ್ಸಳಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆಯೂಟ್ಯೂಬ್‌ಶಿವರಾಮ ಕಾರಂತಈಸ್ಟರ್ಕೊಡಗಿನ ಗೌರಮ್ಮರಾಷ್ಟ್ರೀಯ ಸೇವಾ ಯೋಜನೆಸಂಗೊಳ್ಳಿ ರಾಯಣ್ಣಪ್ಲಾಸಿ ಕದನತಾಳಗುಂದ ಶಾಸನಶ್ಯೆಕ್ಷಣಿಕ ತಂತ್ರಜ್ಞಾನಸತ್ಯ (ಕನ್ನಡ ಧಾರಾವಾಹಿ)ದಕ್ಷಿಣ ಕನ್ನಡಶುಕ್ರದಾಸವಾಳಶಿವಪ್ಪ ನಾಯಕಚಾಲುಕ್ಯಮಲ್ಲಿಗೆಪರಿಮಾಣ ವಾಚಕಗಳುವಿತ್ತೀಯ ನೀತಿಭಾರತದ ರಾಷ್ಟ್ರೀಯ ಚಿನ್ಹೆಗಳುಭಾರತದಲ್ಲಿ ಹತ್ತಿಪಪ್ಪಾಯಿಮಹಾವೀರತಲಕಾಡುಎಚ್ ೧.ಎನ್ ೧. ಜ್ವರ🡆 More