ತೆಂಗಿನಕಾಯಿ ಮರ

ತೆಂಗಿನಕಾಯಿ ಮರ ಪಾಮೇ/ಅರೆಕೆಸಿಯಾ ಸಸ್ಯ ಕುಟುಂಬಕ್ಕೆ ಸೇರಿದ ಮರ.

ತೆಂಗಿನ ಮರ
ತೆಂಗಿನಕಾಯಿ ಮರ
Coconut Palm (ಕೊಕೊಸ್ ನ್ಯೂಸಿಫೆರ)
Conservation status
Secure
Scientific classification
ಸಾಮ್ರಾಜ್ಯ:
ಪ್ಲಾಂಟೇ
Division:
ಮಾಗ್ನೋಲಿಯೋಪೈಟಾ
ವರ್ಗ:
Liliopsida
ಗಣ:
Arecales
ಕುಟುಂಬ:
ಪಾಮೇ
ಕುಲ:
ಕೋಕಾಸ್
ಪ್ರಜಾತಿ:
ಕೋಕಸ್ ನ್ಯುಸಿಫೆರಾ
Binomial name
ಕೋಕಸ್ ನ್ಯೂಸಿಫೆರಾ
ಲಿ.

ಕೊಂಬೆಗಳು ಇರುವುದಿಲ್ಲ. ಗರಿಗಳು ಹಸ್ತಾಕಾರದಲ್ಲಿರುತ್ತವೆ. ಪಾಮೇಸಸ್ಯ ಕುಟುಂಬದಲ್ಲಿ ಈ ಮರ ಕೊಕಸ್ ಜಾತಿಗೆ ಸೇರಿದ ಮರ. . ಈ ಜಾತಿಯಲ್ಲಿ ಇರುವ ಒಂದೇ ಮರ ತೆಂಗಿನಮರ.ಗರಿಗಳು ಹರಿತವಾಗಿ ಹಚ್ಚ ಹಸಿರಾಗಿರುತ್ತವೆ. ಈ ಮರದ ಸಸ್ಯ ಶಾಸ್ತ್ರ ಹೆಸರು ಕೊಕಸ್ ನ್ಯುಸಿಫೆರಾ(cocos nucifera). ಮರದ ಮೇಲಿನ ಭಾಗದಲ್ಲಿ ವೃತ್ತಾಕಾರ ರೂಪದಲ್ಲಿ ಗರಿಗಳು ವ್ಯಾಪ್ತಿಸಿರುತ್ತವೆ. ತೆಂಗಿನ ಕಾಯಿಗಳು ದೊಡ್ಡದಾಗಿರುತ್ತವೆ. ಕಾಯಿಯ ಹೊರಭಾಗದಲ್ಲಿ ದಪ್ಪವಾಗಿ ಕತ್ತ/ನಾರು ಇರುತ್ತದೆ. ಕತ್ತದ ಒಳಗೆ ದಪ್ಪವಾದ, ಗಟ್ಟಿಯಾದ ಸಿಪ್ಪೆ ಇರುತ್ತದೆ. ಈ ಸಿಪ್ಪೆ ಒಳಗೆ ತಿರುಳು ಕಂಡು ಬರುತ್ತದೆ. ತಿರುಳು ಬೆಳ್ಳಗೆ ಇರುತ್ತದೆ.

ಇತರ ಹೆಸರುಗಳು

ಬ್ಯಾರಿ: ತ್ಯಾಗೆಂಡೆ ಮೆರ ತುಳು: ತಾರೆ,ತಾರೆದ ಮರ,ತಾರಾಯಿದ ಮರ

ಕನ್ನಡ: ತೆಂಗು,ತೆಂಗಿನ ಮರ,ನಾರೀಕೇಳ.

ಇಂಗ್ಲೀಷ್: Coconut palm

ಸಸ್ಯವಿಜ್ಞಾನದ ಪುದರು: ಕೋಕೊಸ್ ನ್ಯೂಸಿಫೆರ.Cocos nucifera ( ‍ಸಸ್ಯಕುಟುಮ: ಅರಕೇಸಿ Arecaceae - ಪಾಮ್ palm ಕುಟುಮ)

ಅಸಾಮಿ: ನಾರಿಕೊಳ್

ಬಂಗಾಲಿ:ನಾರಿಕೇಲ್,ನಾರಾಕೇಲ್,ನೀರಿಕೇಲ್

ಗುಜರಾತಿ: ನಾರಿಯಲ್

ಹಿಂದಿ: ನಾರೆಲ್, ನಾರಿಯಲ್

ಸಂಸ್ಕೃತ: ಕಲ್ಪವೃಕ್ಷ, ನಾರೀಕೇಳ,ನಾರಿಕೇರ, ಉಚ್ಛತರು,ಕರಕಟೋಯ,ಕರಕಂಬಾಸ್,ಕೌಶಿಕಫಲ,ಖಾನಮುದಕ,ತ್ರಾಣಂದ್ರುಮ,ತ್ರಾಣಂರಾಜ,ತ್ರಿನೇತ್ರಫಲ,ದೀರ್ಘ ಪತ್ರ,

ಪಾಲಿ: ನಾರೀಕೇರ

ಕಾಶ್ಮೀರಿ: ನೊರಿಲ್

ಮಲಯಾಳಂ:ನಾಲಿಕೇರಂ,ತೇಂಗ,ತೇಂಗಾಯಿ

ಮರಾಠಿ: ಮಾದ್, ನಾರಲ್, ಶ್ರೀಫಲ.

ತಮಿಳು: ತೇಂಗಾಯಿ,ತೆಂಗು,ತೆಂಕು,ತೆಂಕಾಯಿ

ತೆಲುಗು: ನಾರೀಕೇಳಂ,ತೇಂಕಾಯಿ,ಕೊಬ್ರಿಕಾಯಿ.

ಒರಿಯಾ: ನಾಡಿಯಾ

ಸಿಂಹಳಿ: ಪೊಲ್, ಪೋಲ್ಗಾ

ಅರಾಬಿಕ್: ಜಾಧಿರ್ದಾ, ಜೂಜಾಲ್ ಹಿಂದ್.

ಪರ್ಸಿಯಾ: ನಾರ್ಗಿಲಾ

ಬರ್ಮೀಸ್:ಒಂಗ್

ಹವಾಯಿ: ನಿಯು

ಹೀಬ್ರೂ: ಕೋಕಸ್

ಇಂಡೋನೇಶಿಯಾ: ಕೆಲಪ.

ಮಲಯ: ಕೆಲಪ,ನೈಯರ್

ಥಾಯ್: ಮಾಪ್ರೊ

ಕೊರಿಯಾ: ಕೊಕೊಸ್

ತೆಂಗಿನಕಾಯಿ ಮರ 
ಕುಂಭಮೇಳದಲ್ಲಿ ತೆಂಗಿನಕಾಯಿ

ಮೊದಲಿನ ಜನ್ಮಸ್ಥಾನ

ತೆಂಗಿನ ಮರ ಜನ್ಮದ ಬಗ್ಗೆ ಒಂದೇ ಅಭಿಪ್ರಾಯ ಇಲ್ಲ. ಬೇರೇ ಬೇರೇ ಅಭಿಪ್ರಾಯಗಳಿವೆ.3–4. ISBN 978-92-5-100853-9.. ಕೆಲವರು ಇಂಡೋ-ಪೆಸಿಫಿಕ್ ಸಮುದ್ರ ಪ್ರಾಂತವೆಂದು ಅಭಿಪ್ರಾಯ ವ್ಯಕ್ತಪಡಿಸಿದರೆ, ಕೆಲವರು ಮೆಲನೆಸಿಯ (melanesia) ಅಥವಾ ಮಲೇಷಿಯಾ (malesia)ಆಗಿರಬಹುದು ಎಂದಿದ್ದಾರೆ .ಇನ್ನು ಬೇರೆಯವರು ಆಗ್ನೇಯ ದಿಶೆಯಲ್ಲಿದ್ದ ದಕ್ಷಿಣ ಅಮೆರಿಕಾ ಎಂದು ಭಾವಿಸಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ದೇಶಗಳಿಂದ ಶೇಖರಣೆ ಮಾಡಿದ ೩೭-೫೫ ಮಿಲಿಯನ್ ವರ್ಷದ ಪಳೆಯುಳಿಕೆ(fossil) ಆಧಾರದಿಂದ ಇದರ ಮೂಲ ಸ್ಥಾನ ಈ ಎರಡು ದೇಶಗಳು ಎಂದು ಭಾವಿಸಲಾಗಿದೆ.

ಮರ

ನೇರವಾಗಿ ಎತ್ತರಕ್ಕೆ ಬೆಳೆಯುವ ಮರ. ಕೊಂಬೆಗಳಿರುವುದಿಲ್ಲ, ಗರಿಗಳಿರುತ್ತವೆ. ದೇಶವಾಳಿ ಮರ ೨೫-೩೦ ಮೀ. ಎತ್ತರ ಬೆಳೆಯುತ್ತದೆ. ಎಲೆಗಳು ಹಸ್ತ ರೂಪದಲ್ಲಿರುತ್ತವೆ. ಹಸ್ತಾಕಾರ ದಲ್ಲಿ ಪತ್ರಗಳು/ಎಲೆ/ಗರಿಗಳಿರುವ ಮರ, ಗಿಡಗಳನ್ನು ಪಾಮೇಸಸ್ಯ ಕುಟುಂಬಕ್ಕೆ ಸೇರಿಸಲಾಗಿದೆ. ತೆಂಗಿನಮರದ ಜೀವನ/ಕಾಲ ೮೦-೧೦೦ ವರ್ಷಗಳು. ಮರ ಹೂವುಗಳನ್ನು ೭-೧೦ ವರ್ಷದೊಳಗೆ ಬಿಡುತ್ತದೆ. ಮರದ ಕಾಂಡದ ಮೇಲಿನ ಕಡೆ ಭಾಗದಲ್ಲಿ ಗರಿಗಳನ್ನು ಬಿಡುತ್ತದೆ. ಮೇಲಿನ ಕಡೆ ಭಾಗದಲ್ಲಿ ೩೦ ಗರಿಗಳಿರುತ್ತವೆ. ಗರಿಗಳು ದೊಡ್ಡವಾಗಿ ೧೫-೨೦ ಅಡಿಗಳ ಉದ್ದ ಇರುತ್ತವೆ. ಮರದಲ್ಲಿ ೩೦ ಗರಿಗಳಿರುತ್ತವೆ. ತಿಂಗಳಿಗೊಂದು ಹೊಸ ಗರಿಯನ್ನು ಬಿಡುತ್ತದೆ. ಗರಿಯ ಜೀವನ ಕಾಲ ೩೦ ತಿಂಗಳುಗಳು, ಆಮೇಲೆ ಮರದಿಂದ ಗರಿ ಬೀಳುತ್ತದೆ. ಒಂದು ಮರದಿಂದ ೬೦ ಕಾಯಿಗಳು ಒಂದು ವರ್ಷಕ್ಕೆ ಬರುತ್ತವೆ. ಗಂಡು ಮತ್ತು ಹೆಣ್ಣು ಹೂವುಗಳು ಒಂದೇ ಮರದಲ್ಲಿ ಒಂದೇ ಕಡೆ ಇರುತ್ತವೆ. ಹೂವುಗಳು ಜೊಂಪಾಗಿ ಬಿಡುತ್ತವೆ. ಅವನ್ನು ಹೊಂಬಾಳೆಯೆಂದು ಕರೆಯುತ್ತಾರೆ. ಒಂದು ಮರದಲ್ಲಿ ೩೦ರ ತನಕ ಹೂ ಜೊಂಪೇ/ಗೊಂಚಲು (bunch) ಇರುತ್ತವೆ. ತಿಂಗಳಿಗೊಂದು ಹೂ ಗೊಂಚಲು ಹುಟ್ಟುತ್ತದೆ. ಒಂದು ಮರದಿಂದ ಒಂದು ಸಂವತ್ಸರ ಕಾಲದಲ್ಲಿ ೩೦-೬೦ ಕಾಯಿಗಳು ಉತ್ಪತ್ತಿಯಾಗುತ್ತವೆ. ಹೆಣ್ಣು ಹೂವು ಹುಟ್ಟಿದ ಮೇಲೆ ಕಾಯಿ ಆಗುವುದಕ್ಕೆ ಒಂದು ಸಂವತ್ಸರ ಕಾಲಬೇಕು.

ಸಸ್ಯಲಕ್ಷಣ

ತೆಂಗು 70 - 80 ವರ್ಷಗಳ ಕಾಲ ಬದುಕಿ ಫಲಕೊಡುವ ಒಂಟಿ ಕಾಂಡದ ವೃಕ್ಷ. ಮರದ ಬುಡದಲ್ಲಿ ಭದ್ರವಾದ ಬೇರುಗಳುಂಟು. ಕಾಂಡ ಕೊಂಬೆರಹಿತವಾಗಿದ್ದು ಬಿದ್ದ ಗರಿಗಳ ಗುರುತಿನಿಂದ ಕೂಡಿ ಸ್ತಂಭಾಕೃತಿಯಿಂದ 20 – 25 m. ಗೂ ಹೆಚ್ಚು ಎತ್ತರವಾಗಿ ಬೆಳೆಯುವುದು. ಮರದ ತುದಿಯಲ್ಲಿ ದಟ್ಟವಾಗಿ ಬೆಳೆದ ಬೇರೆ ಬೇರೆ ವಯಸ್ಸಿನ ಸುಮಾರು 30 - 40 ಗರಿಗಳಿರುತ್ತವೆ.

ಗಿಡದ ತುದಿಯ ಕೇಂದ್ರದಲ್ಲಿ ಸುಳಿಯಿದೆ. ಗರಿಗಳ ಉದ್ದ ಸುಮಾರು 4-6m. ಮಧ್ಯದ ದಿಂಡಿನ ಎರಡು ಕಡೆಯೂ ಅಭಿಮುಖ ಮಾದರಿಯಲ್ಲಿ ಜೋಡಣೆಗೊಂಡಿರುವ 200 ರಿಂದ 300 ಕಿರುಪತ್ರಗಳುಂಟು. ಒಂದು ಸಿಂಗಾರದಲ್ಲ (ಹೊಂಬಾಳೆಯಲ್ಲಿ) ಗಂಡು ಮತ್ತು ಹೆಣ್ಣು ಹೂಗಳಿರುತ್ತವೆ. ಪ್ರತಿ ಎಲೆಯ ಕಂಕುಳಲ್ಲೂ ಒಂದು ಸಿಂಗಾರ ಬರುವುದು. ಸಿಂಗಾರ ಉದ್ದನೆಯ ಕವಚದಿಂದ ಮುಚ್ಚಿರುವುದು. ಕವಚ ಒಡೆದು ಸಿಂಗಾರ ಅರಳಿದಾಗ ಅದರ ನಡುದಿಂಡಿನ ಎರಡು ಭಾಗದಲ್ಲೂ ಜೋಡಣೆಗೊಂಡಿರುವ ಉಪಕವಲುಗಳ ಮೇಲೆ ಹೂಗಳು ಗೋಚರವಾಗುವುವು. ತುದಿಯಲ್ಲಿ ಗಂಡು ಹೂಗಳೂ, ಬುಡದಲ್ಲಿ ಹೆಣ್ಣು ಹೂಗಳೂ ಇವೆ. ಮೊದಲು ಗಂಡು ಹೂಗಳು ಅನಂತರ ಹೆಣ್ಣು ಹೂಗಳು ಅರಳುತ್ತವೆ. ಉತ್ತಮವಾಗಿ ಕೃಷಿಮಾಡಿದ ಮರದಿಂದ 100 - 200 ಕಾಯಿಗಳು ದೊರೆಯುವುವು. ಕಾಯಿಗಳ ಬಣ್ಣ ಹಳದಿ, ಕೆಂಪು, ಕಿತ್ತಳೆ, ಕಂದು, ಹಸಿರು - ಹೀಗೆ ವೈವಿಧ್ಯಮಯ. ಕಾಯಿ ಡ್ರೂಪ್ ಮಾದರಿಯದು.

ತೆಂಗಿನ ಮರಗಳಲ್ಲಿ ವಿಧ

ಮರಗಳಲ್ಲಿ ಎರಡು ವಿಧಗಳಿವೆ. ಒಂದು ಎತ್ತರ/ಉದ್ದ ಪ್ರಭೇದ, ಎರಡನೆಯದು ಕುಳ್ಳ/ಗುಜ್ಜಾರಿ(dwarf)ತರಹದ್ದು. ಭಾರತ ದೇಶದಲ್ಲಿ ಬೆಳೆಸುವ ತೆಂಗಿನ ಮರಗಳಲ್ಲಿ ದೇಶವಾಳಿ ಜೊತೆಗೆ ಸಂಕರ ತಳಿ/ಮಿಶ್ರ ತಳಿ(hybrid)ಮರಗಳೂ ಇವೆ.

ಕೆಲವು ತೆಂಗಿನ ಮರಗಳು-ಕಾಯಿ ಇಳುವರಿ ಪಟ್ಟಿಕೆ

ಪ್ರಭೇದ ಕಾಯಿ/ಒಂದು ವರ್ಷ/ಒಂದು ಮರ ಕೊಬ್ಬರಿ,ಗ್ರಾಂ/ಕಾಯಿ ಎಣ್ಣೆ (ಟನ್ನುಗಳು/ಹೆಕ್ಟೇರಿಗೆ
ದೇಶವಾಳಿ ೩೦ ೧೫೦ ೦.೫೦
ಲಕ್ಷ ದೀವಿ, ಸಾಧಾರಣ ೧೨೭ ೧೬೯ ೨.೪೪
ಕಪ್ಪಡಂ ೯೦ ೨೯೯ ೩.೦೬
ಅಂಡಮಾನ್ ಝೈಂಟ್ ೧೧೦ ೧೮೧ ೨.೨೬
ಎಸ್.ಎಸ್.ಗ್ರೇನ್ ೯೭ ೧೮೯ ೨.೦೯
ಫಿಲಿಪ್ಪಿನ್ಸ್, ಸಾಧಾರಣ ೧೧೧ ೧೯೮ ೨.೪೮
CDO XWCT 130 215 3.18
WCTX ಗಂಗಬೊಣ್ಡಂ ೮೬ ೧೯೧ ೧.೮೭

ಸಾಗುವಳಿ

  • ತೆಂಗಿನಮರ/ಗಿಡವನ್ನು ಭಾರತ ದೇಶದಲ್ಲಿಕಲ್ಪವೃಕ್ಷ(Tree of heaven)ಎಂದು ಕರೆಯಲಾಗುತ್ತದೆ.
  • ಮಣ್ಣು/ನೆಲ: ತೆಂಗಿನಕಾಯಿ ಮರ ತೊಗಟೆಗಳನ್ನು ಬೆಳಸುವುದಕ್ಕೆ ಕರಾವಳಿ ಪ್ರಾಂತ್ಯ ಮತ್ತು ಸಮುದ್ರಮಟ್ಟಕ್ಕಿಂತ ೯೦೦ ಮೀಟರುಗಳ ಎತ್ತರದಲ್ಲಿದ್ದ ಭೂಮಿ/ನೆಲಗಳು ಅನುಕೂಲಕರವಾಗಿವೆ. ಇನ್ನು ತೆಂಗಿನ ಮರಗಳನ್ನು ಬೆಳೆಸುವುದಕ್ಕೆ ದ್ರವವನ್ನು ಹರಿಸಿ ಬಿಡುವ ಭೂಮಿಗಳು, redloam,coastal alliuvial,laterite,marshyl low land ಗಳು ಅನುಕೂಲಕರವಾಗಿವೆ.
  • ಮಳೆಸುರಿತ:೧೦೦೦-೨೨೫೦ ಮಿ.ಮೀ.ವರ್ಷಪೂರ್ತಿ ಬೀಳಬೇಕು/ಇರಬೇಕು.
  • ಉಷ್ಣೋಗ್ರತೆ:೨೭-೩೭C ಇರಬೇಕು. ಒಳ್ಳೆ ಸೂರ್ಯಕಿರಣದ ಬೆಳಕು/ರಶ್ಮಿಯ ಅವಶ್ಯಕತೆ ಇದೆ.
  • ಫಸಲು/ಉತ್ಪತ್ತಿ: ಒಂದು ಹೆಕ್ಟೇರಿಗೆ(೨.೪೭ ಎಕರೆಗಳು)೧೦,೦೦೦-೧೪,೦೦೦ ಕಾಯಿಗಳ ಆದಾಯವಿದೆ.(೨೫,೦೦೦ ವರಗೆ ಬರುವ ಅವಕಾಶವುಂಟು)

ಭಾರತ ದೇಶದಲ್ಲಿ ತೆಂಗಿನಕಾಯಿ ಮರ/ತೋಟ ಸಾಗುವಳಿಗೆ ಅನುಕೂಲವಾದ ರಾಜ್ಯಗಳು

ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ಒಡಿಶಾ, ಗೋವಾರಾಜ್ಯಗಳ ಕರಾವಳಿ ಪ್ರಾಂತಗಳಲ್ಲಿ ಹೆಚ್ಚಾಗಿ ಸಾಗುವಳಿ ಮಾಡುತ್ತಾರೆ. ಅಂಡಮಾನ್-ನಿಕೋಬಾರ್ ದ್ವೀಪಗಳ ಸಮುದ್ರ ತೀರ ಪ್ರಾಂತದಲ್ಲೂ ಇದೆ. ಅಸ್ಸಾಂ, ಗುಜರಾತ್, ಮಹಾರಾಷ್ಟ್ರ, ನಾಗಲ್ಯಾಂಡ್, ತ್ರಿಪುರ, ಪಶ್ಚಿಮ ಬಂಗಾಳ, ಲಕ್ಷದ್ವೀಪ, ಪಾಂಡಿಚೆರಿ ರಾಜ್ಯಗಳಲ್ಲಿಯೂ ಸಾಗುವಳಿ ನಡೆಯುತ್ತಿದೆ.

ಪ್ರಪಂಚದಲ್ಲಿ ತೆಂಗಿನಕಾಯಿ ಮರ ತೋಟಗಳನ್ನು ಸಾಗುವಳಿ ಮಾಡುವ ದೇಶಗಳು

ಈ ಕೆಳಗಿನ ದೇಶಗಳಲ್ಲಿ ತೆಂಗಿನಕಾಯಿ ತೋಟಗಳನ್ನು ಹೆಚ್ಚಾಗಿ ಸಾಗುವಳಿ ಮಾಡುತಾರೆ. ೧.ಫಿಲಿಫ್ಪಿನ್ಸು, ೨.ಇಂಡೋನೇಷಿಯಾ, ೩.ಬ್ರೆಜಿಲ್, ೪.ಶ್ರೀಲಂಕ, ೫.ಥಾಯ್ ಲಾಂಡ್, ೬.ಮೆಕ್ಸಿಕೋ, ೭.ವಿಯಾಟ್ನಾಂ, ೮.ಪಾಪ್ಯೂ ನ್ಯೂಗಿನಿಯಾ, ೯.ಮಲೇಸಿಯಾ, ೧೦.ಟಾಂಜಾನಿಯಾ. ೧೧.ಆಸ್ಟ್ರೇಲಿಯಾ, ೧೨.ಬರ್ಮುಡಾ, ೧೩.ಮಾಲ್ಡೀವ್ಸ್ ನಲ್ಲಿ, ೧೪.ಪರ್ಷಿಯನ್ ಗಲ್ಫ್, ೧೫.ಅರೇಬಿ ಸಮುದ್ರ, ೧೬. ಕೆಂಪು ಸಮುದ್ರ ಕರಾವಳಿ ಪ್ರಾಂತದಲ್ಲಿಯೂ ಸಾಗುವಳಿ ಮಾಡುತ್ತಾರೆ.

ಕೀ.ಶ. 2010ರಲ್ಲಿ ತೆಂಗಿನಕಾಯಿ ಉತ್ಪತ್ತಿಯಲ್ಲಿ ಮೊದಲಿನ ಹತ್ತು ಸ್ಥಾನದಲ್ಲಿದ್ದ ದೇಶಗಳು
ದೇಶ ಉತ್ಪಾದನೆ (ಟನ್ನುಗಳು) ಪಾದಸೂಚಿಕೆ
ಫಿಲಿಫಿನ್ಸು 19,500,000
ಇಂಡೋನೇಶಿಯಾ 15,540,000
ಇಂಡಿಯಾ 10,824,100
ಬ್ರೆಜಿಲ್ 2,759,044
ಶ್ರೀಲಂಕ 2,200,000 F
ಥಾಯ್ ಲಾಂಡ್ 1,721,640 F
ಮೆಕ್ಸಿಕೋ 1,246,400 F
ವಿಯಾಟ್ನಾಂ 1,086,000 A
ಪಾಪೂನ್ಯೂ ಗಿನಿಯಾ 677,000 F
ಮಲೇಸಿಯಾ 555,120
ಟಾಂಜಾನಿಯಾ 370,000 F
ಒಟ್ಟಿಗೆ 54,716,444 A
No symbol = official figure, P = official figure, F = FAO estimate,
* = Unofficial/Semi-official/mirror data, C = Calculated figure,
A = Aggregate (may include official, semi-official or estimates);

Source: Food And Agriculture Organization of the United Nations:
Economic And Social Department: The Statistical Division

ಪ್ರಯೋಜನಗಳು

ತೆಂಗಿನಮರವನ್ನು ಕಲ್ಪವೃಕ್ಷಎನ್ನುತಾರೆ. ಏಕೆಂದರೆ ತೆಂಗಿನಮರ ಕೊಡುವ ತೆಂಗಿನ ಕಾಯಿ, ಇದರ ಎಲೆ/ಗರಿ, ಕತ್ತ, ಕಾಂಡ ಎಲ್ಲ ಉಪಯೋಗಕಾರಿಯಾಗಿವೆ.

೧.ಎಲೆ/ಗರಿ

  • ಹೆಣ್ಣು ಮಕ್ಕಳು ಮೈ ನೆರೆದಾಗ, ಅವರಿಗೆ ಒಸಗೆ ಮಾಡುವ ಸಂದರ್ಭದಲ್ಲಿ ಮಟ್ಟೆ/ತೆಂಗಿನಗರಿಯಿಂದ ಹೆಣೆದು ಚಪ್ಪರ ಮಂಟಪ ಮಾಡುವರು.
  • ಹಸಿ ತೆಂಗಿನ ಎಲೆ/ಗರಿಗಳಿಂದ ಹಬ್ಬದ ಸಮಯದಲ್ಲಿ, ಕಲ್ಯಾಣ ಸಮಯದಲ್ಲಿ, ಮತ್ತು ಇತರ ಶುಭ ಸಂದರ್ಭದಲ್ಲಿ ಮಂಟಪಗಳನ್ನು ಅಲಂಕರಿಸಲು ಬಳಸುವರು.
  • ಹಸಿ ಎಲೆಗಳಿಂದ ಚಾಪೆ, ಬುಟ್ಟಿ ಮುಂತಾದ ಅಲಂಕಾರಿಕ ಸಾಮಗ್ರಿಗಳನ್ನು ಹೆಣೆಯುತ್ತಾರೆ.
  • ಹಸಿ ಎಲೆಗಳಿಂದ ಹುಡುಗರು ಊದುವ ಪೀಪಿ, ಹಾವು, ಜಡೆಸರಗಳನ್ನು ತಯಾರಿಸುವರು.
  • ಗುಡಿಸಲು/ಜೋಪಡಿಗಳ ಮಾಳಿಗೆಗೆ/ಸೂರನ್ನಾಗಿ ಉಪಯೋಗಿಸುತ್ತಾರೆ.
  • ಒಣಗಿಸಿದ ಎಲೆಗಳನ್ನು ಸೌದೆಯಾಗಿ ಉಪಯೋಗಿಸುತ್ತಾರೆ.
  • ಶವ ಸಂಸ್ಕಾರದ ಸಮಯದಲ್ಲೂ ತೆಂಗಿನ ಗರಿ/ಮಟ್ಟೆಗಳನ್ನು ಬಳಸುತ್ತಾರೆ.

೨.ಮರದಕಾಂಡ

  • ಒಣಗಿಸಿದ ಕಾಂಡವನ್ನು ಮನೆ ನಿರ್ಮಾಣದಲ್ಲಿ ದೂಲವನ್ನಾಗಿ ಉಪಯೋಗಿಸುತ್ತಾರೆ.
  • ಮರದ ಕಾಂಡವನ್ನು ಮನೆಯ ಕಂಬ/ಸ್ತಂಬಗಳನ್ನಾಗಿ ಉಪಯೋಗಿಸುವುದಕ್ಕೂ ಬಳಸಬಹುದು.
  • ಸೌದೆಯಾಗಿ ಉಪಯೋಗಿಸಬಹುದು.
  • ಸಣ್ಣ ಕಾಲುವೆಗಳನ್ನು ಹಾಯಲು/ದಾಟುವುದಕ್ಕೆ ನಾವೆಯಾಗಿಯೂ ಉಪಯೋಗಿಸುತ್ತಾರೆ.

೩.ಕಾಯಿ

  • ಕಾಯಿಯ ಮೇಲಿರುವ ಕತ್ತಮಿಂದ ತೆಂಗಿನನಾರು ತಯಾರು ಮಾಡಿ, ಅದರಿಂದ ಕಾಲ್ಚಾಪೆ(doormat), ಹಗ್ಗ, ನೇಣುರುಳುಗಳನ್ನು ಉತ್ಪನ್ನ ಮಾಡುವರು.
  • ಕಾಯಿ ಒಳಗೆ ಇರುವ ನೀರನ್ನು ಎಳೆನೀರೆಂದು ಕರೆಯುತ್ತಾರೆ. ಈ ಎಳೆನೀರಲ್ಲಿ ಪೋಷಕ ಪದಾರ್ಥಗಳು ಅಧಿಕವಾಗಿವೆ. ಹೆಚ್ಚಿನ ಜನ ಎಳೆನೀರಿರುವ ಪ್ರಭೇದಗಳನ್ನು ಬೆಳೆಸುತ್ತಾರೆ. ಅದರಲ್ಲಿ ಗಂಗಾಭವಾನಿ ಪ್ರಭೇದವೂ ಒಂದು.
  • ಕತ್ತ ತೆಗೆದ ತೆಂಗಿನಕಾಯನ್ನು ದೇವಾಲಯದಲ್ಲಿ, ಮನೆಯಲ್ಲಿ ಪೂಜೆ ಮಾಡುವಾಗ ಉಪಯೋಗಿಸುವರು.
  • ಶುಭಕಾರ್ಯದಲ್ಲಿ, ಮದುವೆ ಸಂದರ್ಭದಲ್ಲಿ ತೆಂಗಿನಕಾಯಿ ಇರಲೇಬೇಕು.
  • ಕತ್ತದ ಕೊಚ್ಚನ್ನು ಸೌದೆಯನ್ನಾಗಿ ವಿನಿಯೋಗಿಸುತ್ತಾರೆ.
  • ಕೊಬ್ಬರಿ ಎಳೆನೀರನ್ನು ಹುಳುಹಿಡಿಸಿ, ಅದರಿಂದ ಲೊಕೋನೆಟ್ ವಿನೆಗರ್(coconut vinegar)ನ್ನು ಉತ್ಪಾದನೆ ಮಾಡುವರು.
  • ತೆಂಗಿನಕಾಯಿ ಒಳಗಿರುವ ಹಸಿ ತಿರುಳು/ಕೊಬ್ಬರಿಯಿಂದ ಕೊಬ್ಬರಿ ಹಾಲನ್ನು ತೆಗೆಯಲಾಗುತ್ತದೆ.
  • ಹಸಿ ಕೊಬ್ಬರಿಯಿಂದ ಕೊಬ್ಬರಿಚಟ್ನಿ , ಸಾಂಬಾರು ಮಾಡಲಾಗುತ್ತದೆ.
  • ಹಸಿ ಮತ್ತು ಒಣ ಕೊಬ್ಬರಿಯಿಂದ ಕೊಬ್ಬರಿ ಎಣ್ಣೆಯನ್ನು ತಯಾರಿಸುವರು.
  • ಕೊಬ್ಬರಿ ಸಿಪ್ಪೆಯಿಂದ ಅಲಂಕರಣ ವಸ್ತು ಸಾಮಗ್ರಿಗಳನ್ನು ಮಾಡಲಾಗುತ್ತದೆ.

ಕೊಬ್ಬರಿ ಎಣ್ಣೆ

ಹೆಚ್ಚಿನ ವಿವರಗಳಿಗಾಗಿ ಪ್ರಧಾನ ಲೇಖನ ಕೊಬ್ಬರಿ ಎಣ್ಣೆನೋಡಿರಿ.

ಉಲ್ಲೇಖನಗಳು

Tags:

ತೆಂಗಿನಕಾಯಿ ಮರ ಇತರ ಹೆಸರುಗಳು[೨]ತೆಂಗಿನಕಾಯಿ ಮರ ಮೊದಲಿನ ಜನ್ಮಸ್ಥಾನತೆಂಗಿನಕಾಯಿ ಮರ ಮರತೆಂಗಿನಕಾಯಿ ಮರ ಸಸ್ಯಲಕ್ಷಣತೆಂಗಿನಕಾಯಿ ಮರ ಸಾಗುವಳಿತೆಂಗಿನಕಾಯಿ ಮರ ಭಾರತ ದೇಶದಲ್ಲಿ ತೋಟ ಸಾಗುವಳಿಗೆ ಅನುಕೂಲವಾದ ರಾಜ್ಯಗಳುತೆಂಗಿನಕಾಯಿ ಮರ ಪ್ರಪಂಚದಲ್ಲಿ ತೋಟಗಳನ್ನು ಸಾಗುವಳಿ ಮಾಡುವ ದೇಶಗಳುತೆಂಗಿನಕಾಯಿ ಮರ ಪ್ರಯೋಜನಗಳುತೆಂಗಿನಕಾಯಿ ಮರ ಕೊಬ್ಬರಿ ಎಣ್ಣೆತೆಂಗಿನಕಾಯಿ ಮರ ಉಲ್ಲೇಖನಗಳುತೆಂಗಿನಕಾಯಿ ಮರ

🔥 Trending searches on Wiki ಕನ್ನಡ:

ಶಾಂತಲಾ ದೇವಿಕಾಲಾಯ ತಸ್ಮೈ ನಮಃ (ಚಲನಚಿತ್ರ)ಚೀನಾಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟನಾಲಿಗೆವಿಧಾನಸೌಧಸೆಸ್ (ಮೇಲ್ತೆರಿಗೆ)ಕೈಗಾರಿಕೆಗಳುಹನುಮಾನ್ ಚಾಲೀಸಸೂರ್ಯ (ದೇವ)ಮದುವೆಗ್ರಹಕುಂಡಲಿರಾಮ ಮಂದಿರ, ಅಯೋಧ್ಯೆತಿಗಣೆಮಹಾವೀರ ಜಯಂತಿಭಾರತೀಯ ಭಾಷೆಗಳುಸಿಂಧೂತಟದ ನಾಗರೀಕತೆಬಾದಾಮಿ ಗುಹಾಲಯಗಳುಪ್ಲೇಟೊಪರೀಕ್ಷೆವೈದೇಹಿಕೊಲೆಸ್ಟರಾಲ್‌ದಾನ ಶಾಸನಲಾರ್ಡ್ ಕಾರ್ನ್‍ವಾಲಿಸ್ಅರ್ಥ ವ್ಯತ್ಯಾಸಬ್ಯಾಂಕ್ಮಹೇಂದ್ರ ಸಿಂಗ್ ಧೋನಿಯುನೈಟೆಡ್ ಕಿಂಗ್‌ಡಂಅಲಂಕಾರಗರ್ಭಧಾರಣೆಗಾದೆತಂತಿವಾದ್ಯಸೂರ್ಯ ವಂಶಚಿಕ್ಕಮಗಳೂರುಶ್ರೀನಾಥ್ಗಿರೀಶ್ ಕಾರ್ನಾಡ್ಡೊಳ್ಳು ಕುಣಿತಸಮಾಸರಾಜಸ್ಥಾನ್ ರಾಯಲ್ಸ್ಕರ್ನಾಟಕದ ಜಾನಪದ ಕಲೆಗಳುವೃದ್ಧಿ ಸಂಧಿಕನ್ನಡ ಅಕ್ಷರಮಾಲೆಕನ್ನಡದಲ್ಲಿ ಸಣ್ಣ ಕಥೆಗಳುದೇವತಾರ್ಚನ ವಿಧಿಮಣ್ಣುಊಳಿಗಮಾನ ಪದ್ಧತಿಅಯೋಧ್ಯೆಭಕ್ತಿ ಚಳುವಳಿಅರ್ಜುನವಿಕ್ರಮಾರ್ಜುನ ವಿಜಯಚಿದಂಬರ ರಹಸ್ಯಕನ್ನಡದಲ್ಲಿ ಗದ್ಯ ಸಾಹಿತ್ಯಕೇರಳಸವರ್ಣದೀರ್ಘ ಸಂಧಿಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿಭಾಷಾ ವಿಜ್ಞಾನಮಹಿಳೆ ಮತ್ತು ಭಾರತಹಳೆಗನ್ನಡರಾಮ್ ಮೋಹನ್ ರಾಯ್ಮುಹಮ್ಮದ್ಭತ್ತಸಿದ್ದಲಿಂಗಯ್ಯ (ಕವಿ)ನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಕಾರ್ಮಿಕರ ದಿನಾಚರಣೆಕನಕದಾಸರುತೋಟಗಾರಿಕೆಕಲ್ಯಾಣ ಕರ್ನಾಟಕಮಂಟೇಸ್ವಾಮಿನರೇಂದ್ರ ಮೋದಿಕರ್ನಾಟಕ ಲೋಕಸೇವಾ ಆಯೋಗಬೌದ್ಧ ಧರ್ಮಬಹಮನಿ ಸುಲ್ತಾನರುಕವಿರಾಜಮಾರ್ಗಬ್ಲಾಗ್ಯಾಣ🡆 More