ಸ್ವರ: ಸ್ವತಂತ್ರವಾಗಿ ಉಚ್ಚರಿಸಲ್ಪಡುವ ಅಕ್ಷರಗಳು

ಸ್ವರವೆಂಬುದು ಭಾಷೆ, ವ್ಯಾಕರಣ ಮತ್ತು ಸಂಗೀತದಲ್ಲಿ ಕಂಡು ಬರುವ ಪದ.

ಸಂಗೀತ ಕ್ಷೇತ್ರದಲ್ಲಿ ಸ್ವರ (ಸಂಗೀತ) ಎಂಬ ಪದ ಬಳಕೆಯಲ್ಲಿದೆ.

ಸ್ವರ: ಸ್ವರಾಕ್ಷರಗಳು ಎಂದರೇನು ?, ವಿಧಗಳು, ಸವರ್ಣಗಳು
ಜೀವ ಸ್ವರ ಮತ್ತು ಧೀರ್ಘ ಸ್ವರ

ಸ್ವರಾಕ್ಷರಗಳು ಎಂದರೇನು ?

ಕೇಶಿರಾಜ ಕನ್ನಡದಲ್ಲಿ ೧೪ ಸ್ವರಗಳಿವೆ ಎಂದು ಅಭಿಪ್ರಾಯಪಡುತ್ತಾನೆ.

  1. ಸ್ವಯಂ ರಂಜತೇ ಇತಿಃ ಸ್ವರಃ - ಸ್ವತಂತ್ರವಾಗಿ ಉಚ್ಚರಿಸಲು ಬರುವ ಅಕ್ಷರಗಳೇ ಸ್ವರಗಳು.
  2. ಅಕಾರಂ ಮೊದಲಾಗಿರೆ ಪದಿನಾಲ್ಕು ಸ್ವರಂಗಳ್.

ಸಂಸ್ಕೃತದಲ್ಲಿ (ದೇವನಾಗರಿ) ಸ್ವರಾಕ್ಷರಗಳು ‘ಅ’ ಕಾರ ದಿಂದ ‘ಔ’ ಕಾರದವರೆಗೆ ೧೪ ಇವೆ. ಅವುಗಳೆಂದರೆ,

ಌ - ಇದು 'ಲುೃ ಗೆ ಹತ್ತಿರದ ಉಚ್ಛಾರ ಹೊಂದಿದೆ

ವಿಧಗಳು

ಸ್ವರಗಳನ್ನು ನಾಲ್ಕು ವಿಭಾಗ ಮಾಡಬಹುದು.

  1. ಹ್ರಸ್ವಸ್ವರ
  2. ದೀರ್ಘಸ್ವರ
  3. ಸಂಧ್ಯಕ್ಷರ
  4. ಪ್ಲುತ

ಹ್ರಸ್ವಸ್ವರ

ಒಂದು ಮಾತ್ರೆಗಳ ಕಾಲಾವಧಿಯಲ್ಲಿ ಉಚ್ಚರಿಸಬಹುದಾದ ಅಕ್ಷರಗಳು 5 - ಅ,ಇ,ಉ,ಋ,ಎ. ಈ ಅಕ್ಷರಗಳನ್ನು ಲಘು(ವ್ಯಾಕರಣ) ಎಂದು ಕರೆಯುತ್ತಾರೆ.

ದೀರ್ಘಸ್ವರ

ಎರಡು ಮಾತ್ರೆಗಳ ಕಾಲಾವಧಿಯಲ್ಲಿ ಉಚ್ಚರಿಸಬಹುದಾದ ಅಕ್ಷರಗಳು 5 – ಆ,ಈ,ಊ.ಋೂ,ಏ. ಈ ಅಕ್ಷರಗಳನ್ನು ಗುರು(ವ್ಯಾಕರಣ) ಅಕ್ಷರಗಳು ಎಂದು ಕರೆಯುತ್ತಾರೆ.

ಸಂಧ್ಯಕ್ಷರ

  • ಮೂರು ಮಾತ್ರೆಗಳ ಕಾಲಾವಧಿಯಲ್ಲಿ ಉಚ್ಚರಿಸಬಹುದಾದ ಅಕ್ಷರಗಳು 4 – ಏ,ಐ,ಓ,ಔ.
  • ಸಂಧ್ಯಕ್ಷರಗಳಲ್ಲಿ ಗೂಢಸಂಧಿಯಿದೆ.
    • =ಅ+ಇ;ಆ+ಈ;ಅ+ಈ;ಆ+ಇ,
    • =ಅ+ಉ;ಆ+ಊ,
    • =ಅ+ಏ,
    • =ಅ+ಒ.

ಪ್ಲುತ

ದೀರ್ಘಸ್ವರವನ್ನೇ ಇನ್ನೂ ಎಳೆದು ಉಚ್ಚರಿಸುವ ಅಕ್ಷರ. ಉದಾ: ಅಣ್ಣಾಽಽ, ತಮ್ಮಾಽಽ, ಹಾ! ರಾಮಾ!

ಸವರ್ಣಗಳು

ಕೇಶಿರಾಜನು ಅ,ಆ - ಇ,ಈ - ಉ,ಊ - ಋ,ಋೂ - ಲುೃ,ಲೂೃ ಅಕ್ಷರಗಳ ಜೋಡಿಗಳನ್ನು ಸವರ್ಣ/ಸಮಾನಅಕ್ಷರಗಳೆಂದು ಕರೆದಿದ್ದಾನೆ. ಅಲ್ಲದೆಯೆ, ಎ,ಏ – ಒ,ಓ ಎಂಬ ಅಕ್ಷರಗಳು ಸವರ್ಣ/ಸಮಾನ ಅಕ್ಷರಗಳೆಂದು ಹೇಳಿ ಕನ್ನಡಕ್ಕೆ ವಿಶಿಷ್ಟವಾಗಿರುವ ಕೆಲವು ಅಕ್ಷರಗಳನ್ನು ಗುರುತಿಸಿದ್ದಾನೆ. ಅ. ಆ. ಎಂಬ ವರ್ಣಗಳನ್ನು ಬಿಟ್ಟು ಉಳಿದ ಸ್ವರಗಳು ‘ನಾಮಿ’ ಸ್ವರಗಳು.

ಅನುಸ್ವಾರ ಮತ್ತು ವಿಸರ್ಗ

ಅನುಸ್ವಾರ ಮತ್ತು ವಿಸರ್ಗಗಳು ಸ್ವರಗಳಲ್ಲಿಯೇ ಸೇರಿದ್ದರೂ ಸ್ವರದೊಡನೆ ಉಚ್ಚಾರಗೊಳ್ಳುವ ಅನುಸ್ವಾರವನ್ನು ಸ್ವರಾಂಗವೆಂದೂ, ವ್ಯಂಜನದೊಢನೆ ಉಚ್ಚಾರಗೊಳ್ಳುವ ವಿಸರ್ಗವನ್ನು ವ್ವಂಜನಾಂಗವೆಂದೂ ಕರೆಯಲಾಗಿದೆ. (ಅಂ-ಅನುಸ್ವಾರ, ಅ ಃವಿಸರ್ಗ)

ಉಲ್ಲೇಖ

Tags:

ಸ್ವರ ಾಕ್ಷರಗಳು ಎಂದರೇನು ?ಸ್ವರ ವಿಧಗಳುಸ್ವರ ಸವರ್ಣಗಳುಸ್ವರ ಅನುಸ್ವಾರ ಮತ್ತು ವಿಸರ್ಗಸ್ವರ ಉಲ್ಲೇಖಸ್ವರಸ್ವರ (ಸಂಗೀತ)

🔥 Trending searches on Wiki ಕನ್ನಡ:

ಯಮಸುದೀಪ್ಮುಮ್ಮಡಿ ಕೃಷ್ಣರಾಜ ಒಡೆಯರುಪರಿಸರ ಕಾನೂನುಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಶ್ರೀಪಾದರಾಜರುಕಾರ್ಯಾಂಗಕೆ. ಎಸ್. ನರಸಿಂಹಸ್ವಾಮಿಅರ್ಥಶಾಸ್ತ್ರದ್ವಿಗು ಸಮಾಸಉಪ್ಪಾರಕ್ರೈಸ್ತ ಧರ್ಮಬಬಲಾದಿ ಶ್ರೀ ಸದಾಶಿವ ಮಠವಿಭಕ್ತಿ ಪ್ರತ್ಯಯಗಳುಋಗ್ವೇದಎಕರೆರಾಯಲ್ ಚಾಲೆಂಜರ್ಸ್ ಬೆಂಗಳೂರುವಾಲಿಬಾಲ್ಕೆ. ಅಣ್ಣಾಮಲೈಮುಹಮ್ಮದ್ಕೇಸರಿ (ಬಣ್ಣ)ಕನ್ನಡ ಚಂಪು ಸಾಹಿತ್ಯವಾಸ್ತವಿಕವಾದಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಕರ್ಕಾಟಕ ರಾಶಿಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಶನಿಭಾರತ ಸರ್ಕಾರಗಾದೆ ಮಾತುನವ್ಯಬಿಳಿಗಿರಿರಂಗನ ಬೆಟ್ಟಹಿಂದೂ ಮಾಸಗಳುಗೂಗಲ್ಪ್ರೀತಿಬಾವಲಿಕೈಗಾರಿಕಾ ಕ್ರಾಂತಿಗ್ರಾಮ ದೇವತೆರೋಮನ್ ಸಾಮ್ರಾಜ್ಯಕಂಸಾಳೆಮಹಾವೀರಗಂಗ (ರಾಜಮನೆತನ)ಗಣರಾಜ್ಯೋತ್ಸವ (ಭಾರತ)ಮದುವೆಕನ್ನಡ ಕಾಗುಣಿತಅರಸೀಕೆರೆಮೊದಲನೇ ಅಮೋಘವರ್ಷಸ್ವಚ್ಛ ಭಾರತ ಅಭಿಯಾನಅಡಿಕೆರಾಜ್ಯಪ್ರಜಾವಾಣಿಒಡೆಯರ ಕಾಲದ ಕನ್ನಡ ಸಾಹಿತ್ಯಮಂಕುತಿಮ್ಮನ ಕಗ್ಗವಿಮರ್ಶೆಪಂಜೆ ಮಂಗೇಶರಾಯ್ಗದ್ಯಹಿಂದೂ ಧರ್ಮಭಕ್ತಿ ಚಳುವಳಿಹನುಮಾನ್ ಚಾಲೀಸಸ್ತ್ರೀವಾದಕಿತ್ತೂರು ಚೆನ್ನಮ್ಮಸಂಶೋಧನೆಚಾಣಕ್ಯಕೃಷ್ಣಕದಂಬ ಮನೆತನಭಾರತದ ಸ್ವಾತಂತ್ರ್ಯ ದಿನಾಚರಣೆಸಾರಾ ಅಬೂಬಕ್ಕರ್ಕಾಳಿ ನದಿಮಾವುಯಣ್ ಸಂಧಿಸಜ್ಜೆಮಹಾಭಾರತಅನುನಾಸಿಕ ಸಂಧಿಕೇಸರಿಅಸಹಕಾರ ಚಳುವಳಿವಿಷ್ಣುವರ್ಧನ್ (ನಟ)ಜಯಚಾಮರಾಜ ಒಡೆಯರ್ಮಧ್ವಾಚಾರ್ಯತಮಿಳುನಾಡುದ್ವಿರುಕ್ತಿ🡆 More