ಭಾರತ ಗಣರಾಜ್ಯದ ಇತಿಹಾಸ - ಭಾಗ ೨

2012ರಲ್ಲಿ ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ಈ ಏಷ್ಯಾದ 16 ರಾಷ್ಟ್ರಗಳ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆ ಆರಂಭವಾಗಿತ್ತು.

ಭಾರತ ಗಣರಾಜ್ಯದ ಇತಿಹಾಸ - ಭಾಗ ೨
ಭಾರತದ ಲಾಂಛನ

2014 -ಮತ್ತೆ ಭಾರತೀಯ ಜನತಾ ಪಕ್ಷದ ಸರ್ಕಾರ

೨೦೧೪ರ ಚುನಾವಣೆ

ಭಾರತ ಗಣರಾಜ್ಯದ ಇತಿಹಾಸ - ಭಾಗ ೨ 
ನರೇಂದ್ರ ಮೋದಿ ಪ್ರಧಾನ ಮಂತ್ರಿ 2015
ಭಾರತ ಗಣರಾಜ್ಯದ ಇತಿಹಾಸ - ಭಾಗ ೨ 
ರಾಮನಾಥ ಕೋವಿಂದ್: ರಾಷ್ಟ್ರಾಧ್ಕ್ಷರು
  • ೨೦೧೪ ಭಾರತದ ಸಾರ್ವತ್ರಿಕ ಲೋಕಸಭಾ ಚುನಾವಣೆ ಮತ್ತು ಫಲಿತಾಂಶ
  • ಹಿಂದು ರಾಷ್ಟ್ರೀಯತೆಯನ್ನು ಎತ್ತಿಹಿಡಿಯುವ ನೀತಿಯನ್ನು ಮುಂದಿಟ್ಟುಕೊಂಡ ಹಿಂದುತ್ವ ಚಳುವಳಿಯು 1920 ರ ದಶಕದಲ್ಲಿ ಹುಟ್ಟಿಕೊಂಡಿತು. ಅದು ಭಾರತದಲ್ಲಿ ಪ್ರಬಲ ರಾಜಕೀಯ ಶಕ್ತಿಯಾಗಿ ಬೆಳೆದು ಉಳಿದಿದೆ. 1980 ರಲ್ಲಿ ಸ್ಥಾಪನೆಯಾದಂದಿನಿಂದ, ಧಾರ್ಮಿಕ ಹಕ್ಕಿನ ಪ್ರತಿಪಾದನೆ ಮತ್ತು ಧಾರ್ಮಿಕ ಬೆಂಬಲದಿಂದ ಪ್ರಮುಖ ಪಕ್ಷ ಭಾರತೀಯ ಜನತಾ ಪಕ್ಷ (ಬಿಜೆಪಿ) ಚುನಾವಣೆಯಲ್ಲಿ ಗೆದ್ದಿತು. 2004 ರಲ್ಲಿ ನಡೆದ ಚುನಾವಣೆಯಲ್ಲಿ ಪಡೆದ ಸೋಲಿನ ನಂತರ ಕಾಂಗ್ರೆಸ್ ಪಕ್ಷದ ಸಮ್ಮಿಶ್ರ ಸರಕಾರದ ವಿರುದ್ಧದ ಪ್ರಮುಖ ಪಕ್ಷಗಳಲ್ಲಿ ಒಂದಾಗಿತ್ತು. ಅದು ಒಂದು ಪೂರ್ಣ ಬಹುಮತವನ್ನು ಗಳಿಸಿತು. ರಾಷ್ಟ್ರೀಯ ಡೆಮಾಕ್ರಟಿಕ್ ಅಲಯನ್ಸ್ ಒಟ್ಟಾಗಿ 336 ಸೀಟುಗಳನ್ನು ಪಡೆದುಕೊಂಡು ಗೆಲುವು ಸಾಧಿಸಿತು. ಬಿಜೆಪಿ 31.0% ಮತಗಳನ್ನು ಪಡೆದುಕೊಂಡಿತು. ಸ್ವಾತಂತ್ರ್ಯದ ನಂತರ ಭಾರತದಲ್ಲಿ ಬಹುಮತದ ಸರ್ಕಾರ ರಚಿಸುವ ಪಕ್ಷಕ್ಕೆ ಇದು ಅತಿ ಕಡಿಮೆ ಪ್ರಮಾಣದ ಮತಗಳಿಕೆ. ಎಂದರೆ ಇಷ್ಟು ಕಡಿಮೆ ಪ್ರಮಾಣ (ಶೇ.೩೧) ಮತಗಳಿಸಿ ಪೂರ್ಣ ಬಹುಮತ ಪಡೆದಿರುವುದು ಇದೇ ಮೊದಲು.
ಭಾರತ ಗಣರಾಜ್ಯದ ಇತಿಹಾಸ - ಭಾಗ ೨ 
ನರೇಂದ್ರ ಮೋದಿ ವಿದೇಶ ಪ್ರವಾಸ
  • ಹಿಂದೆ ಗುಜರಾತ್ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕರಾಗಿದ್ದ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿಯಾಗಿ 27 ಮೇ 2014 ರಂದು ಅಧಿಕಾರ ಸ್ವೀಕರಿಸಿದರು ಮತ್ತು ಸರ್ಕಾರವನ್ನು ರಚಿಸಿದರು. ಮೋದಿ ಸರಕಾರದ ವ್ಯಾಪಕ ಜನಬೆಂಬಲ ಮತ್ತು ಜನಪ್ರಿಯತೆ ಕಾರಣ ಬಿಜೆಪಿಯು ಭಾರತದಲ್ಲಿ ಹಲವಾರು ರಾಜ್ಯ ವಿಧಾನಸಭೆ ಚುನಾವಣೆಗಳಲ್ಲಿ ಜಯಗಳಿಸಲು ನೆರವಾಯಿತು. ಮೋದಿ ಸರ್ಕಾರವು ಉತ್ಪಾದನೆ ಮತ್ತು ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸಲು ಅನೇಕ ಉಪಕ್ರಮಗಳು ಮತ್ತು ಕಾರ್ಯಾಚರಣೆಗಳನ್ನು ಜಾರಿಗೊಳಿಸಿತು - ಗಮನಾರ್ಹವಾಗಿ - ಭಾರತದಲ್ಲಿ, ಡಿಜಿಟಲ್ ಇಂಡಿಯಾ ಮತ್ತು ಸ್ವಚ್ ಭಾರತ್ ಅಭಿಯಾನ.

2018 ರಲ್ಲಿ ಲೋಕಸಭೆ

  • ೨೦೧೮(2018): ಲೋಕಸಭಾ ಉಪಚುನಾವಣೆಯಲ್ಲಿ ಮೂರು ಸ್ಥಾನಗಳಲ್ಲಿ ಒಂದು ಸ್ಥಾನ ಪಡೆದ ಬಿಜೆಪಿ, 539 ಸದಸ್ಯರ ಸದನದಲ್ಲಿ 272 ಸ್ಥಾನ ಹೊಂದಿದೆ. ಲೋಕಸಭೆಯು 543 ಚುನಾಯಿತ ಸದಸ್ಯರನ್ನು ಹೊಂದಿದೆ ಆದರೆ ಅದರ ನಾಲ್ಕು ಸ್ಥಾನಗಳನ್ನು ಪ್ರತಿನಿಧಿಸಲಾಗಿಲ್ಲ. ಕರ್ನಾಟಕದ ಮೂವರು ಸಂಸದರು ರಾಜೀನಾಮೆ ನೀಡಿರುವ ಸಂದರ್ಭದಲ್ಲಿ, ಕಾಶ್ಮೀರದ ಅನಂತನಾಗ್ ಕ್ಷೇತ್ರವು ಕಳೆದ ವರ್ಷ ಮೇ ಯಲ್ಲಿ ಅನಿರ್ದಿಷ್ಟವಾಗಿ ಮುಂದೂಡಲ್ಪಟ್ಟ ನಂತರ ಖಾಲಿಯಾಗಿತ್ತು. ಇದು ಬಿಜೆಪಿ ಬಲ ಲೋಕಸಬೆಯಲ್ಲಿ ಅಂಕವನ್ನು 270 ಕ್ಕೆ ತರುತ್ತದೆ. ಆದಾಗ್ಯೂ, ಎಲ್ಲಾ ಪ್ರಾಯೋಗಿಕ ಉದ್ದೇಶಗಳಿಗಾಗಿ ಬಿಜೆಪಿಆದಾಗ್ಯೂ, ಎಲ್ಲಾ ಪ್ರಾಯೋಗಿಕ ಉದ್ದೇಶಗಳಿಗಾಗಿ ಬಿಜೆಪಿಗೆ 274 ಸ್ಥಾನಗಳಿವೆ, ಏಕೆಂದರೆ ನಾಮನಿರ್ದೇಶಿತ ಸದಸ್ಯರು ಅದರಲ್ಲಿ ಸೇರಿದ್ದಾರೆ. ಅವರನ್ನು ಎಣಿಸಿ, ಬಿಜೆಪಿ 541 ಸದಸ್ಯರ ಸದನದಲ್ಲಿ 271 ಕ್ಕಿಂತಲೂ ಹೆಚ್ಚು ಸದಸ್ಯರನ್ನು ಹೊಂದಿದೆ.(ಮೇ 31, 2018 ರ ಸ್ಥಿತಿ),

ವಿದೇಶ ಪ್ರವಾಸ

ಭಾರತ ಗಣರಾಜ್ಯದ ಇತಿಹಾಸ - ಭಾಗ ೨ 
ಮುಫ್ತಿ ಮೆಹಬೂಬಾ - ಕಾಶ್ನೀರ ಪೀಪಲ್ಸ್‌ ಡೆಮಾಕ್ರಟಿಕ್‌ ಪಕ್ಷದ ಅಧ್ಯಕ್ಷೆ
  • ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ನಾಲ್ಕು ವರ್ಷಗಳ ಅಧಿಕಾರವನ್ನು ಪೂರ್ಣಗೊಳಿಸಿ ಐದನೇ ವರ್ಷದಲ್ಲಿದೆ. ಈ ನಾಲ್ಕು ವರ್ಷಗಳಲ್ಲಿ, ಮೋದಿ ವಿದೇಶಾಂಗ ನೀತಿಯ ಬಗ್ಗೆ ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಸರ್ಕಾರದ ನೇತೃತ್ವ ವಹಿಸಿದ್ದರು. ಆಗಸ್ಟ್ 2018 ರ ವೇಳೆಗೆ, ಪಾಕಿಸ್ತಾನ, ಭೂತಾನ್, ಅಮೆರಿಕಾ ಸಂಯುಕ್ತ ಸಂಸ್ಥಾನದ ಇಸ್ರೇಲ್ ಮತ್ತು ನೇಪಾಳ ಮೊದಲಾದ 61 ದೇಶಗಳಿಗೆ ಪ್ರಧಾನಿ ಹಲವು ಭೇಟಿಯ ಮೂಲಕ ಭಾರತದ ವಿದೇಶಾಂಗ ನೀತಿಯಮತೆ ಸೌಹಾರ್ ಸಂಬಂಧ ಬೆಳೆಸಲು ಪ್ರಯತ್ನಿಸಿದರು. ಪ್ರಯಾಣದ ವೆಚ್ಚಗಳು ಪ್ರತಿ ಪ್ರಯಾಣಕ್ಕೆ ರೂ.2.5 ಕೋಟಿ ರೂ.ಗಳಿಂದ 22.5 ಕೋಟಿ ರೂ,ಗಳ ಖರ್ಚು ವೆಚ್ಚಗಳನ್ನು ಭಾರತ ಭರಿಸಿದೆ.

ಜಮ್ಮು ಕಾಶ್ಮೀರ

  • ಜಮ್ಮು ಮತ್ತು ಕಾಶ್ಮೀರ ಸರ್ಕಾರ ೨೦೧೪-೧೬
  • 2014 ಡಿಸೆಂಬರ್ ನಲ್ಲಿ ನೆಡೆದ ಸ್ಥಳೀಯ ಚುನಾವಣೆಗಳ ನಂತರ ವಿವಾದಿತ ಕಾಶ್ಮೀರ ಪ್ರದೇಶದ ಪ್ರಮುಖ ರಾಜಕೀಯ ಆಡಳಿತ ಭಾಗಿದಾರನಾಗಿ ಬಿಜೆಪಿ ಮೊದಲ ಬಾರಿಗೆ ಹೊರಹೊಮ್ಮಿತು. ರಾಜ್ಯ ವಿಧಾನಸಭೆಯಲ್ಲಿ ತನ್ನ ಸ್ಥಾನವನ್ನು ದ್ವಿಗುಣಗೊಳಿಸಿಕೊಂಡಿತು. ಪೀಪಲ್ಸ್‌ ಡೆಮಾಕ್ರಟಿಕ್‌ ಪಕ್ಷ ಮತ್ತು ಭಾರತೀಯ ಜನತಾಪಕ್ಷ ಒಟ್ಟಾಗಿ ಸರ್ಕಾರ ರಚಿಸಿದವು. ದಿ. 01/03/2015 ಪೀಪಲ್ಸ್‌ ಡೆಮಾಕ್ರಟಿಕ್‌ ಪಕ್ಷದ(ಪಿಡಿಪಿ) ಮುಖ್ಯಸ್ಥ ಮುಫ್ತಿ ಮೊಹಮ್ಮದ್‌ ಸಯೀದ್‌ ಅವರು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯಾಗಿಯೂ ಬಿಜೆಪಿಯ ನಿರ್ಮಲ್ ಸಿಂಗ್ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ ಸಂಮಿಸ್ರ ಸರ್ಕಾರ ರಚಿಸಿದರು. ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಜನವರಿ 7, 2016 ನಿಧನರಾದರು. ನಂತರ ಅದೇ ಒಕ್ಕೂಟದಲ್ಲಿ ಮೆಹಬೂಬಾ ರಾಜ್ಯದ ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಕೊಂಡರು. ಅವರು 2018 ಜೂನ್ 20 ರಂದುಬಿಜೆಪಿ ಮೈತ್ರಿಯಿಂದ ಹೊರಗೆ ಬಂದು ಮೆಹಬೂಬಾ ರಾಜಿನಾಮೆ ನೀಡಿದರು.

೨೦೧೫

ಭಾರತ ಗಣರಾಜ್ಯದ ಇತಿಹಾಸ - ಭಾಗ ೨ 
ಅಎವಿಂದ ಕೇಜ್ರಿವಾಲ್(potrait)
  • ದೆಹಲಿ ಅಸೆಂಬ್ಲಿ ಚುನಾವಣೆ
  • ದೆಹಲಿ ವಿಧಾನಸಭೆ ಚುನಾವಣೆ 2015ರ ಫೆಬ್ರವರಿ 7 ರಂದು (ಶನಿವಾರ) ನಡೆದು ಭ್ರಷ್ಟಾಚಾರ-ವಿರೋಧಿ ಎಂದು ಹೇಳಿಕೊಂಡ ಆಮ್ ಆದ್ಮಿ ಪಾರ್ಟಿ (ಎಎಪಿ) ದೆಹಲಿ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಆಶ್ಚರ್ಯಕರ ಗೆಲುವು ಸಾಧಿಸಿತು. ಇದು 2014 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ಮೊದಲ ಹಿನ್ನಡೆಯಾಗಿದೆ. ಆಮ್ ಆದ್ಮಿ ಪಾರ್ಟಿಯು 70 ಕ್ಷೇತ್ರಗಳಲ್ಲಿ 67 (54.3%)ಸ್ಥಾನ ಗೆದ್ದು ಇತಿಹಾಸ ಸೃಷ್ಟಿಸಿತು.ಬಿಜೆಪಿ 3ಸ್ತಾನ ಮಾತ್ರಾ ಗೆದ್ದಿತು. ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ರವರು ದೆಹಲಿಯ ಮುಖ್ಯಮಂತ್ರಿಗಳಾಗದರು.

ಯೋಜನಾ ಆಯೋಗ ರದ್ದು

  • ವಿಶೇಷ ಲೇಖನ:ನೀತಿ ಆಯೋಗ
  • ಪ್ರಧಾನಿ ನರೇಂದ್ರ ಮೋದಿ ಯೋಜನಾ ಆಯೋಗವನ್ನು "ನಿಯಂತ್ರಣ ಆಯೋಗ" ವನ್ನಾಗಿ ಬದಲಾಯಿಸಲುನಿರ್ಧರಿಸಿದರು. ಅದರ ಬದಲಿಗೆ 2014 ರ ಆಗಸ್ಟ್ 13 ರಂದು, ಭಾರತದ ರಾಷ್ಟ್ರೀಯ ಸಲಹಾ ಮಂಡಳಿ (ಎನ್ಎಸಿ) ಗಿಂತ ದುರ್ಬಲಗೊಳಿಸಿದ ಆವೃತ್ತಿಯಾಗಿ ಬದಲಿಸಲು ಕೇಂದ್ರ ಮಂತ್ರಿಮಂಡಲ ಯೋಜನಾ ಆಯೋಗವನ್ನು ರದ್ದುಗೊಳಿಸಿತು. ಜನವರಿ 1, 2015 ರಂದು ಯೋಜನಾ ಆಯೋಗವನ್ನು ಹೊಸದಾಗಿ ರಚನೆಯಾದ ಎನ್ಐಟಿಐ ಆಯೋಗ (NITI Aayog (National Institution for Transforming India). ನ್ಯಾಷನಲ್ ಇನ್ಸ್ಟಿಟ್ಯೂಷನ್ ಟ್ರಾನ್ಸ್ಫಾರ್ಮಿಂಗ್ ಇಂಡಿಯಾ) ರಚಿಸಲು ಕ್ಯಾಬಿನೆಟ್ ನಿರ್ಣಯ ಮಾಡಿ ನೀತಿ ಆಯೋಗವನ್ನು ಜಾರಿಗೆ ತರಲಾಯಿತು. ಇದರಿಂದ ೬೪ ವರ್ಷಗಳಿಂದ ಇದ್ದ ಪಂಚವಾರ್ಷಿಕ ಯೋಜನೆಯ ಅಭಿವೃದ್ಧಿ ಕ್ರಮವನ್ನು ಕೈಬಿಟ್ಟು ವಾರ್ಷಿಕ ಬಜೆಟ್ಟಿನಲ್ಲಿ ಯೋಜನೆಗಳನ್ನು ವರ್ಷಕ್ಕೆ ಸೀಮಿತ ಮಾಡಲಾಯಿತು. ಹಾಗಾಗಿ ಅಭಿವೃದ್ಧಿ ಯೊಜನೆಗಳಿಗಿಂತ ಜನಪ್ರಿಯ ಯೋಜನೆಗಳಿಗೆ ಪ್ರಾಮುಖ್ತೆ ದೊರೆಯಿತು. ಬಿಜೆಪಿ ಚುನಾವಣೆ ಪ್ರಣಾಳಿಕೆಯಲ್ಲಿದ್ದ "ಅಭಿವೃದ್ಧಿ" ಮತ್ತು "ಉದ್ಯೋಗ ಸೃಷ್ಠಿಯ ಗುರಿ" ಹಿಂದೆ ಬಿತ್ತು.

ಬಾಂಗ್ಲಾ ಭೇಟಿ

ಭಾರತ ಗಣರಾಜ್ಯದ ಇತಿಹಾಸ - ಭಾಗ ೨ 
ಪ್ರಧಾನಿ ನರೇಂದ್ರ ಮೋದಿ ಮತ್ತು ಪ್ರಧಾನಿ ಶೇಖ್ ಹಸೀನಾ ಭೇಟಿ
  • 2015 ಜೂನ್ - ಭಾರತ ಮತ್ತು ಬಾಂಗ್ಲಾದೇಶಗಳು ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದವು, ಗಡಿ ಪ್ರದೇಶಗಳಲ್ಲಿ ವಾಸಿಸುವ 50,000 ಕ್ಕಿಂತ ಹೆಚ್ಚಿನ ಜನರು ಅವರು ಯಾವ ದೇಶಗಳಲ್ಲಿ ವಾಸಿಸಲು ಅಪೇಕ್ಷಿಸುತ್ತಾರೆ ಎಂಬುದನ್ನು ಆಯ್ಕೆ ಮಾಡಲು ಅವಕಾಶಕಲ್ಪಿಸಲಾಯಿತು.
  • 2015 ಸೆಪ್ಟಂಬರ್ - ಭಾರತ ತನ್ನ ಮೊದಲ ಬಾಹ್ಯಾಕಾಶ ಪ್ರಯೋಗಾಲಯ ಆಸ್ಟ್ರೋಸಾಟ್‍ನ್ನು ಅದರ ದೊಡ್ಡ ಯೋಜನೆಯ ಅಡಿಯಲ್ಲಿ 2014 ರಲ್ಲಿ ಮಾರ್ಸ್ ಆರ್ಬಿಟರ್ ಮಿಷನ್ ಪ್ರಾರಂಭಿಸಿತು.[೬೫]

2016 -ರಾಫೇಲ್ ಫೈಟರ್ ವ್ಯವಹಾರ

  • ಇಂಗ್ಲಿಷ್ ಲೇಖನ:
    ಭಾರತ ಗಣರಾಜ್ಯದ ಇತಿಹಾಸ - ಭಾಗ ೨ 
    ಡಸ್ಸಾಲ್ಟ್ ರಾಫೆಲ್ ಬಿ
  • ಲೇಖನ:ರಫೆಲ್ ಯುದ್ಧವಿಮಾನ - ಭಾರತ ಮತ್ತು ಫ್ರಾನ್ಸ್ ಒಪ್ಪಂದ:
  • 2016 ರ ಸೆಪ್ಟೆಂಬರ್‍ನಲ್ಲಿ ವಿವಾದಾತ್ಮಕ 36 ರಾಫೇಲ್ ಫೈಟರ್ ಜೆಟ್ಗಳನ್ನು ಖರೀದಿಸಲು ಭಾರತವು ಬಿಲಿಯನ್ ಡಾಲರ್ ರಕ್ಷಣಾ ಒಪ್ಪಂದವನ್ನು ಫ್ರಾನ್ಸ್‍ನೊಂದಿಗೆ ಮಾಡಿಕೊಂಡಿತು. ಈ ಜೆಟ್ಟ್‍ಗಳಿಗೆ ಹಿಂದಿನ ಯು.ಪಿ.ಯೆ.ಯ ಆಡಳಿತ ಸಮಯದಲ್ಲಿ ಮಾಡಿಕೊಂಡಿದ್ದ, ಒಂದು ಜೆಟ್ಟಿಗೆ ರೂ.428.57 ಕೋಟಿಯ ಬೆಲೆಯಂತೆ 126 ಫೈಟರ್ ಜೆಟ್‍ ಒಪ್ಪಂದವನ್ನು ಮೋದಿಯವರು ರದ್ದು ಮಾಡಿ, ಅದೇ ಜೆಟ್ಟಿಗೆ ಈಗಿನ ಬೆಲೆ ತಲಾ ರೂ.1611.11 ಕೋಟಿಗೆ ನಾಲ್ಕರಷ್ಟು ದುಬಾರಿಯಾಗಿ ಕೇವಲ 36 ಫೈಟರ್ ಜೆಟ್‍ಗಳನ್ನು ಒಪ್ಪಂದ ಮಾಡಿಕೊಂಡರು. ಅದನ್ನು ಅವರದೇ ಪಕ್ದದವರು ಮತ್ತು ವಿರೋಧಪಕ್ಷದವರು ವಿರೋಧಿಸಿದರು. ಅದು ಮೊದಲಿನ ಒಪ್ಪಂದಕ್ಕಿಂತ ಒಂದು ಜೆಟ್ಟಿಗೆ ರೂ.1182.54 ಕೋಟಿಯಂತೆ ಒಟ್ಟು ರೂ.'Rs.42,571.44' ಕೋಟಿ ಹೆಚ್ಚು ಪಾವತಿ ಮಾಢಿರುವುದು ವಿವಾದಕ್ಕೆ ಕಾರಣವಾಗಿದೆ. ಅಲ್ಲದೆ ಕರ್ನಾಟಕದಲ್ಲಿರುವ, ಯುದ್ಧ ವಿಮಾನಗಳನ್ನು ತಯಾರಿಸಿ ಅನುಭವವಿರುವ ಎಚ್.ಎ.ಎಲ್‍ನಲ್ಲಿ ಬಿಡಿಭಾಗ ತಯಾರಿಕೆ ಮತ್ತು ಹೆಚ್ಚಿನ ವಿಮಾನಗಳನ್ನು ತಯಾರಿಸಬೇಕೆಂಬ ಷರತ್ತಿನೊಂದಿಗೆ ಹಿಂದೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈಗ ಅದರ ಬದಲಿಗೆ ವಿಮಾನ ತಯಾರಿಕೆಯ ಅನುಭವವಿಲ್ಲದ ಆಂಬಾನಿಯ ರಿಲೆಯನ್ಸ್‍ ಕಂಪನಿಯನ್ನು ಹೊಸ ಒಪ್ಪಂದದಲ್ಲಿ ಪಾಲುದಾರಿಕೆಗೆ ಸೇರಿಸಿದೆ ಎಂಬ ದೂರು ಇದೆ.
  • ಸುಪ್ರೀಮ್ ಕೋರ್ಟಿನಲ್ಲಿ ಈ ಹಗರಣದ ಮರು ಪರಿಶೀಲನೆ ಅರ್ಜಿ ಸಲ್ಲಿಸಿದಾಗ ಭಾರತದ ಅಟಾರ್ನಿಯವರು, 'ಫ್ರಾನ್ಸ್‌ನಿಂದ ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದ ದಾಖಲೆಗಳು ರಕ್ಷಣಾ ಸಚಿವಾಲಯದಿಂದ ಕಳವಾಗಿವೆ' ಎಂದು ಕೇಂದ್ರ ಸರ್ಕಾರವ ಪರವಾಗಿ ಸುಪ್ರೀಂ ಕೋರ್ಟ್‌ಗೆ ಹೇಳಿದರು. ಹೀಗೆ ಕಳವಾದ ದಾಖಲೆಗಳ ಆಧಾರದಲ್ಲಿ ವರದಿಗಳನ್ನು ಪ್ರಕಟಿಸುತ್ತಿರುವ ‘ದ ಹಿಂದೂ’ ಪತ್ರಿಕೆಯ ವಿರುದ್ಧ ಅಧಿಕೃತ ರಹಸ್ಯಗಳ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸುವುದಾಗಿಯೂ ಸರ್ಕಾರ ಹೇಳಿದೆ. ಆದರೆ 'ದರ' ರಹಸ್ಯಕಾಯಿದೆಯ ಅಡಿಯಲ್ಲಿ ಬರದಿರುವುದರಿಂದ ದೂರು ದಾಖಲಿಸಲಿಲ್ಲ.
  • ರಕ್ಷಣಾ ಸಚಿವಾಲಯದ ದಾಖಲೆ ಕಳವಾಗಿರುವುದು ಅತ್ಯಂತ ಗಂಭೀರ ವಿಷಯವಾಗಿದ್ದರೂ ‘ಕಳವು’ ಕುರಿತು ಪೊಲೀಸ್‌ ಇಲಾಖೆಗೆ ರಕ್ಷಣಾ ಸಚಿವಾಲಯ ಔಪಚಾರಿಕ ದೂರು ಅಥವಾ ಎಫ್‌ಐಆರ್ ಸಲ್ಲಿಸಿಲ್ಲ. ಇದು ರಾಷ್ಟ್ರೀಯ ಭದ್ರತೆಯ ಒಂದು ಪ್ರಮುಖ ಉಲ್ಲಂಘನೆ ಮತ್ತು ಪೊಲೀಸರು ಮತ್ತು ದೇಶದ ಜನರಿಂದ ಈ ಅಪರಾಧವನ್ನು ಸರ್ಕಾರ ಮರೆಮಾಚುತ್ತಿದೆ ಎಂದು ವೆಬ್ ತಾಣ ಹೇಳಿದೆ.

ನ್ಯಾಯಾಲಯಕ್ಕೆ ತಪ್ಪು ಮಾಹಿತಿ

  • ರಫೇಲ್‌ ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿಯೇ ಕೇಂದ್ರ ಸರ್ಕಾರ ‌ನ್ಯಾಯಾಲಯವನ್ನು ತಪ್ಪು ದಾರಿಗೆಳೆದಿದೆ’ ಎಂದು ಕೇಂದ್ರದ ಮಾಜಿ ಸಚಿವರಾದ ಅರುಣ್‌ ಶೌರಿ, ಯಶವಂತ್‌ ಸಿನ್ಹಾ ಮತ್ತು ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ. ‘ಕೇಂದ್ರ ಸರ್ಕಾರ ಸತ್ಯವನ್ನು ಮರೆಮಾಚಿದೆ. ವಿಚಾರಣೆ ಸಂದರ್ಭದಲ್ಲಿ ನಿಖರ ಮಾಹಿತಿಗಳನ್ನು ನ್ಯಾಯಾಲಯಕ್ಕೆ ನೀಡದೆ ಮುಚ್ಚಿಡಲಾಗಿದೆ’ ಎಂದು ಪ್ರತಿಪಾದಿಸಿದ್ದಾರೆ.

ಆರ್ಥಿಕ ಸುಧಾರಣೆಗಳಿಗೆ ವಿರೋಧ:

  • Indian general strike of 2016
  • ಸೆಪ್ಟೆಂಬರ್ 2016ರಲ್ಲಿ ಹೆಚ್ಚಿನ ವೇತನ ಬೇಡಿಕೆ ಮತ್ತು ಸರ್ಕಾರದ ಆರ್ಥಿಕ ಸುಧಾರಣೆಗಳ ವಿರುದ್ಧ ಪ್ರತಿಭಟಿಸಲು 24 ಗಂಟೆಗಳ ಮುಷ್ಕರದಲ್ಲಿ ಹತ್ತಾರು ಮಿಲಿಯನ್ ಕಾರ್ಮಿಕರು ಪಾಲ್ಗೊಂಡರು.

೧೦೦೦ ಮತ್ತು ೫೦೦ ರೂಪಾಯಿ ನೋಟುಗಳ ಅಮಾನ್ಯೀಕರಣ

ಭಾರತ ಗಣರಾಜ್ಯದ ಇತಿಹಾಸ - ಭಾಗ ೨ 
ಒಂದು ಎಸ್.ಬಿ.ಐ.ಬ್ರ್ಯಾಚ್ ರಾತ್ರಿಯಲ್ಲಿಯೂ ತೆರೆದಿದ್ದು, ಮತ್ತು ಎಟಿಎಮ್ ನಲ್ಲಿ ಕೂಡಾ ಜನರ ಸರತಿ ಸಾಲು ರಾತ್ರಿಯಲ್ಲೂ ನಿಂತಿರುವುದು.
  • ವಿವರ:ಭಾರತೀಯ ೫೦೦ ಮತ್ತು ೧೦೦೦ ರೂಪಾಯಿ ನೋಟುಗಳ ಚಲಾವಣೆ ರದ್ದತಿ
  • 2016 ನವೆಂಬರ್‍ನಲ್ಲಿ ಆಶ್ಚರ್ಯಕರ ಪ್ರಕಟಣೆಯಲ್ಲಿ, ಸರ್ಕಾರವು ಹಳೆಯ ನೋಟುಗಳನ್ನು ಹೊಸದಕ್ಕೆ ವಿನಿಮಯ ಮಾಡಲು ಜನರು ಪ್ರಯಾಸ ಪಡುವ ಹಾಗೆ ಮತ್ತು ದೇಶಾದ್ಯಂತ ಬ್ಯಾಂಕ್‍ಗಳಲ್ಲಿ ಅಸ್ತವ್ಯಸ್ತವಾಗಿರುವ ದೃಶ್ಯಗಳನ್ನು ಉಂಟುಮಾಡುವ ಹಾಗೆ, ಚಲಾವಣೆಯಲ್ಲಿರುವ ಹೆಚ್ಚಿನ ಮುಖಬೆಲೆಯ ಕರೆನ್ಸಿ ನೋಟುಗಳನ್ನು ರದ್ದುಮಾಡಿತು (ಹಿಂಪಡೆಯಿತು).
  • "ಅಕ್ರಮ ಅಥವಾ ಕಪ್ಪು ಹಣವನ್ನು ನಾಶಪಡಿಸಲು 2016 ರ ನವೆಂಬರ್‍ನಲ್ಲಿ ಜಾರಿಗೆ ತಂದ ನೋಟುಗಳ ಅಮಾನ್ಯೀಕರಣ (ಡಿಮಾನೈಟೈಸೇಷನ್) ಕಳಪೆಯಾಗಿ ಅವ್ಯವಸ್ಥಿತವಾಗಿ ಮತ್ತು ಅನವಶ್ಯಕವಾಗಿ ಜಾರಿ ಮಾಡಲಾಯಿತು. ನಂತರದ ವರ್ಷ, ದೇಶದ ಕೇಂದ್ರೀಯ ಬ್ಯಾಂಕ್ (ರಿಸರ್ವ್ ಬ್ಯಾಂಕ್) ಇದನ್ನು ಬಹಿರಂಗಪಡಿಸಿತು. ರದ್ದಗೊಳಿಸಿದ ಎಲ್ಲಾ ಕರೆನ್ಸಿಗಳನ್ನೂ ಈ ವ್ಯವಸ್ಥೆಯಲ್ಲಿ ಹಿಂದಕ್ಕೆ ಪಡೆದಿದೆ. ಕರೆನ್ಸಿ ಮೌಲ್ಯ 15.28 ಟ್ರಿಲಿಯನ್ ರೂಪಾಯಿ ಬ್ಯಾಂಕುಗಳಲ್ಲಿ ಠೇವಣಿಯಾಗಿದೆ, ಇದರರ್ಥ ಯಾವುದೇ ಗಮನಾರ್ಹವಾದ ಕಪ್ಪು ಹಣ ಇರಲಿಲ್ಲ, ಅಥವಾ ಸಂಗ್ರಹಣೆದಾರರು ತಮ್ಮ ದುರದೃಷ್ಟದ ಕಪ್ಪುಹಣವನ್ನು ಬದಲಾಯಿಸುವುದಕ್ಕೆ ಒಂದು ಮಾರ್ಗವನ್ನು ಕಂಡುಕೊಂಡಿದ್ದರು.
  • "ಬಡವರ ಪ್ರಯೋಜನಕ್ಕಾಗಿ ಮೋದಿಯವರು ನೋಟು ರದ್ದೀಕರಣ ಕಲ್ಪನೆಯನ್ನು ಪ್ರಯೋಗಮಾಡಿದರು (ಸರ್ಕಾರಕ್ಕೆ ಲಾಭ ವಾಗುವುದೆಂದು ಈ ಯೊಜನೆಯನ್ನ ಮಾರಾಟ ಮಾಡಿದರು). ಆದರೆ ಇದು ಬೃಹತ್ ನೀತಿ ವಿಫಲತೆಯಾಗಿ ಮಾರ್ಪಟ್ಟಿದೆ ಮತ್ತು ಕೃಷಿ ವರ್ಗವು ಇನ್ನೂ ಅದರಿಂದ ಚೇತರಿಸಿಕೊಳ್ಳುತ್ತಿದೆ." ಎಂದು ವಿಶ್ಲೇಷಕ ಎಂ ಕೆ ವೇಣು ಡಿ.ಡಬ್ಲ್ಯೂಗೆ ತಿಳಿಸಿದರು. "ಈ ಕ್ರಮವು ದೇಶದ ಅನೌಪಚಾರಿಕ ಆರ್ಥಿಕತೆಯನ್ನು ನಿಲುಗಡೆಗೆ ತಂದಿತು ಮತ್ತು ಬೆಳವಣಿಗೆಯನ್ನು ಕುಸಿಯುವಂತೆ ಮಾಡಿದೆ. ಸಣ್ಣ ಗುತ್ತಿಗೆದಾರರು ನಗದು ಕೊರತೆಯಿಂದ ಉದ್ಯಮ ನಿಲ್ಲಿಸಿದರು. ಕೂಲಿಕಾರರು ನಿರುದ್ಯೋಗದಿಂದ ಬಳಲಿದರು" ಎಂದು ವೇಣು ತಮ್ಮ ಆರ್ಥಿಕ ವಿಮರ್ಶೆಯಲ್ಲಿ ಹೇಳಿಸದ್ದಾರೆ. ಭಾರತದಲ್ಲಿ, ಮೇಕ್ ಇಂಡಿಯಾ, ಡಿಜಿಟಲ್ ಇಂಡಿಯಾ, ಸ್ಕಿಲ್ ಇಂಡಿಯಾ ಮತ್ತು ಸ್ಮಾರ್ಟ್ ಸಿಟೀಸ್‍ ನಂತಹ ಇತರ ದೊಡ್ಡ ಆರ್ಥಿಕ ಯೋಜನೆಗಳು ಇನ್ನೂ ಭರವಸೆಯ ನೀತಿಯೆಂದು- ಬೆಂಬಲವನ್ನು ಸ್ವೀಕರಿಸಲು ಯೊಗ್ಯವಾಲಿಲ್ಲ, ಎಂದು ವಿಶ್ಲೇಷಕರು ಹೇಳುತ್ತಾರೆ.

ರಿಸರ್ವ್ ಬ್ಯಾಂಕಿನ ಅಂತಿಮ ವರದಿಯಂತೆ - ನೋಟುರದ್ದಿನ ವಿಫಲತೆ

  • ಕೇಂದ್ರ ಸರ್ಕಾರವು 2016ರಲ್ಲಿ ರದ್ದು ಮಾಡಿದ ರೂ.500 ಮತ್ತು ರೂ.1,000 ಮುಖಬೆಲೆಯ ನೋಟುಗಳ ಪೈಕಿ ಶೇ 99.3ರಷ್ಟು ಬ್ಯಾಂಕುಗಳಿಗೆ ವಾಪಸಾಗಿವೆ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ದಿ.೨೯-೮-೨೦೧೮ರಂದು ಹೇಳಿಕೆ ನೀಡಿತು.
  • ಹೊಸ ನೋಟುಗಳ ಮುದ್ರಣಕ್ಕೆ 12877 ಕೋಟಿ ರೂ. ವೆಚ್ಚವಾಯಿತು. ಬ್ಯಾಂಕುಗಳಿಗೆ ಹಂಚುವ ವೆಚ್ಚ ಬೇರೆ ಎಂದು ರಿಜರ್ವ್‍ಬ್ಯಾಕ್ ಹೇಳಿದೆ.
  • ಕಪ್ಪುಹಣ ಮತ್ತು ಭ್ರಷ್ಟಾಚಾರಗಳನ್ನು ತಡೆಯುವ ಉದ್ದೇಶದಿಂದ ನೋಟು ರದ್ದತಿಯ ನಿರ್ಧಾರವನ್ನು ಮೋದಿಯವರು ಕೈಗೊಂಡಿದ್ದಾಗಿ ಹೇಳಿದ್ದರು. ಆದರೆ, ಸ್ವಲ್ಪ ಪ್ರಮಾಣದ ನೋಟುಗಳು ಮಾತ್ರ ಬ್ಯಾಂಕುಗಳಿಗೆ ಹಿಂತಿರುಗಿಲ್ಲೆಂದು ಕಂಡುಬಂದಿದೆ. ಆರ್‌ಬಿಐ ನೀಡಿರುವ ಮಾಹಿತಿ ಪ್ರಕಾರ ರೂ.13 ಸಾವಿರ ಕೋಟಿ ಮಾತ್ರ ಬ್ಯಾಂಕಿಗೆ ಬಂದಿಲ್ಲ. ಆದರೆ, ಇದಕ್ಕೆ ದೇಶ ಭಾರಿ ಬೆಲೆ ತೆರಬೇಕಾಯಿತು. ಜನರು ಉದ್ಯೋಗ ಕಳೆದುಕೊಂಡರು, ಉದ್ಯಮಗಳು ಮುಚ್ಚಿದವು ಮತ್ತು ಒಟ್ಟು ದೇಶಿ ಉತ್ಪನ್ನ ಇಳಿಕೆಯಾಯಿತು ಎಂದು ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಹೇಳಿದ್ದಾರೆ. ‘ನೋಟು ರದ್ದತಿಯಿಂದಾಗಿ ಭಾರತದ ಜಿಡಿಪಿ ಶೇ 1.5ರಷ್ಟು ಕುಸಿತ ಕಂಡಿತು. ಇದರ ಮೌಲ್ಯವೇ ರೂ.2.25 ಲಕ್ಷ ಕೋಟಿ. ಸಾಲುಗಳಲ್ಲಿ ನಿಂತು ಬಳಲಿ ಸುಮಾರು ನೂರಕ್ಕೂ ಹೆಚ್ಚು (೧೨೫?) ಜನರು ಪ್ರಾಣ ಕಳೆದುಕೊಂಡರು. 15 ಕೋಟಿಯಷ್ಟು ದಿನಗೂಲಿ ನೌಕರರಿಗೆ ಹಲವು ವಾರ ಕೆಲಸವೇ ಇರಲಿಲ್ಲ. ಸಣ್ಣ ಮತ್ತು ಮಧ್ಯಮ ಗಾತ್ರದ ಸಾವಿರಾರು ಘಟಕಗಳು ಬಾಗಿಲು ಮುಚ್ಚಿದವು. ಲಕ್ಷಾಂತರ ಮಂದಿ ಉದ್ಯೋಗ ಕಳೆದುಕೊಂಡರು’ ಎಂದು ಹಿಂದಿನ ಹಣಕಾಸು ಮಂತ್ರಿ ಚಿದಂಬರಂ ಅವರು ಹೇಳಿದ್ದಾರೆ.
  • ಬ್ಯಾಂಕಿಗೆ ಹಿಂದಕ್ಕೆ ಬಾರದೇ ಇರುವ ರೂ.13 ಸಾವಿರ ಕೋಟಿಯಲ್ಲಿ ಬಹಳಷ್ಟು ನೋಟುಗಳು ನೇಪಾಳ ಮತ್ತು ಭೂತಾನ್‌ಗಳಲ್ಲಿ ಇರಬಹುದು. ಸ್ವಲ್ಪ ಪ್ರಮಾಣದ ನೋಟುಗಳು ಹಾಳಾಗಿ ಹೋಗಿರಬಹುದು, ಎಂದು ಹಿಂದಿನ ಹಣಕಾಸು ಸಚಿವ ಚಿದಂಬರಂ ಅವರು ಅಂದಾಜಿಸಿದ್ದಾರೆ. ನೇಪಾಳ ಮತ್ತು ಭೂತಾನ್‌ಗಳಲ್ಲಿ ಭಾರತದ ನೋಟುಗಳ ಚಲಾವಣೆ ಇತ್ತು ಆದರೆ ಅವರಿಗೆ ಬದಲಾಯಿಸಲು ಅವಕಾಶ ಮತ್ತು ಅನುಮತಿ ಕೊಡಲಿಲ್ಲ.

ಇತರ ನಕಾರಾತ್ಮಕ ಅಂಶಗಳು

  • ಮೇಲೆ ಹೇಳಿದ ನೋಟು ರದ್ದತಿ, ಮಕ್ಕಳ ರಕ್ಷಣೆ,ಗೋರಕ್ಷಣೆಯ ನೆವದಲ್ಲಿ ಜನರು ಗುಂಪುಗೂಡಿ ಸಾಯಹೊಡೆದ ಪ್ರಕರಣಗಳು, ಈ ನಾಲ್ಕು ವರ್ಷಗಲಲ್ಲಿ ಡಾಲರ್‌ ವಿರುದ್ಧ ರೂಪಾಯಿ ಮೌಲ್ಯ ಕುಸಿದಿರುವುದು, ರಫೇಲ್‌ ದುಬಾರಿ ಖರೀದಿ, ಎಚ್.ಎ.ಎಲ್, ಕೈಬಿಟ್ಟ ವಿಚಾರ, ಕೃಷಿ ಕ್ಷೇತ್ರದಲ್ಲಿನ ಕಳಪೆ ಸಾಧನೆ ಮತ್ತು ಬಿಕ್ಕಟ್ಟು, ಪ್ರತಿ ಭಾರತೀಯನಿಗೆ ರೂ.15 ಲಕ್ಷವನ್ನು ವಿದೇಶದಲ್ಲಿದ ಕಪ್ಪುಹಣ ವಸೂಲುಮಾಡಿ ತಂದುಕೊಡಲಾಗುವುದು ಎಂಬ ಭರವಸೆ ಪೊಳ್ಳಾಗಿದ್ದು, ಸತತ ಹಣದುಬ್ಬರ, ಹೊರ ಜಗತ್ತಿನಲ್ಲಿ ಇಳಿದರೂ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ ಬೆಲೆಯಲ್ಲಿ ಹೆಚ್ಚಳ, ಲೈಂಗಿಕ ಕಿರುಕುಳ ನೀಡಿದ ಆರೋಪ ಕೆಲವು ಸಚಿವರ ವಿರುದ್ಧ ಕೇಳಿಬಂದಿದ್ದು, ಎರಡು ಕೋಟಿ ಉದ್ಯೋಗ ಸೃಷ್ಟಿಯ ಭರವಸೆ ಸುಳ್ಳಾಗಿ ಸಂಘಟಿತ ವಲಯದಲ್ಲಿ ಉದ್ಯೋಗ ಕಡಿಮೆ ಆಗಿರುವುದು. ಗಂಗಾ ಶುದ್ದೀಕರಣದ ಭರವಸೆ ಮರೆತು ಅದಕ್ಕಾಗಿ ಉಪವಾಸ ಸತ್ಯಾಗ್ರಹ ಮಾಡಿದ ಸ್ವಾಮಿ ಜ್ನಾನಸ್ವರೂಪ ಸಾನಂದರು ತಮ್ಮ ಪತ್ರಕ್ಕ ಪ್ರಧಾನಿಯಿಂದ ಉತ್ತರ ಸಿಗದೆ ಮರಣಹೊಂದಿದುದು. ಮೋದಿಯವರು ೨೦೧೪ ರಲ್ಲಿ ಬನಾರಸಿನಲ್ಲಿ ಕೊಟ್ಟ ಭರವಸೆಗಳಾದ:-‘ಗಂಗೆ ಯಮುನೆ ನನ್ನ ತಾಯಂದಿರು. ಈ ಎರಡೂ ನದಿಗಳ ಜಲವನ್ನು ಸ್ವಚ್ಛಗೊಳಿಸಲು ಜನಾಂದೋಲನ ನಡೆಸುವೆ ವಿಶ್ವದ ಪ್ರಸಿದ್ಧ ಪರಿಸರವಾದಿಗಳನ್ನು ಕರೆಯಿಸುವೆ’ ಎಂದಿದ್ದರು. ಮತ್ತೆ 2014ರ ಲೋಕಸಭಾ ಚುನಾವಣೆ ಗೆದ್ದ ನಂತರ ತಾವು ತಾಯಿ ಗಂಗಾ ತಮ್ಮನ್ನು ಬನಾರಸಿಗೆ ಕರೆಯಿಸಿಕೊಂಡಿದ್ದಾಳೆ ಎಂದು ಹೇಳಿದ್ದರು, ಆದರೆ ಈ ಭರವಸೆಗಳು ಹಾಗೆಯೇ ಉಳಿದವು. ಇತ್ಯಾದಿ'

೨೦೧೭ ರ ಬೆಳವಣಿಗೆ

  • ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಜುಲೈ 24 ರಂದು ನಿವೃತ್ತರಾಗಿ, ರಾಮ್ ನಾಥ್ ಕೋವಿಂದ್ ಅವರು ಜುಲೈ 25 ರಿಂದ ರಾಷ್ಟ್ರಪತಿಯಾಗಿ ಆಯ್ಕೆಯಾದರು.
  • ಜಾತಿ, ಮತ, ಜನಾಂಗ, ಸಮುದಾಯ ಅಥವಾ ಭಾಷೆಯ ಆಧಾರದ ಮೇಲೆ ಮತದಾರರ ಮತದಾನಕ್ಕೆ ಮತದಾನಕ್ಕಾಗಿ ಮನವಿ ಮಾಡುವುದು 'ಚುನಾವಣೆ ಭ್ರಷ್ಟ' ತಗೆ' ಕಾರಣವಾಗಲಿದೆ ಎಂದು ಭಾರತದ ನ್ಯಾಯಾಂಗ ನ್ಯಾಯಮೂರ್ತಿ (4: 3) ತೀರ್ಪು ನೀಡಿದೆ. ಯಾವುದೇ ಚುನಾವಣೆಯಲ್ಲಿ ಅಭ್ಯರ್ಥಿಯ ಅನರ್ಹತೆಗಾಗಿ ಕಾರಣವಾಗುವುದು ಎಂದಿದೆ.
  • ಪರಮಾಣು-ಸಮರ್ಥ ಭೂಖಂಡದ ಖಂಡಾಂತರ ಕ್ಷಿಪಣಿ ಅಗ್ನಿ-IV ಕ್ಷಿಪಣಿ ಒಡಿಶಾದ ತೀರದಿಂದ ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ.
  • 2017 ಜನವರಿಯಲ್ಲಿ ಸರ್ಕಾರವು ಇಂಧನ, ರಕ್ಷಣೆ, ವ್ಯಾಪಾರ ಮತ್ತು ಕಡಲ ವ್ಯವಹಾರಗಳ ಕುರಿತು ವ್ಯವಹರಿಸಿ ಯುನೈಟೆಡ್ ಅರಬ್ ಎಮಿರೇಟ್ಸ್ ಜೊತೆ ವ್ಯಾಪಕವಾದ ಸಹಕಾರ ಒಪ್ಪಂದವನ್ನು ಮಾಡಿಕೊಂಡಿದೆ. 2017 ಮೇ ತಿಂಗಳಲ್ಲಿ ಆಂಧ್ರಪ್ರದೇಶದ ದೇಶದ ಬಾಹ್ಯಾಕಾಶ ಕೇಂದ್ರದಿಂದ ಅದರ "ದಕ್ಷಿಣ ಏಷ್ಯಾ ಉಪಗ್ರಹ" ಎಂದು ಕರೆಯಲ್ಪಡುವ ಉಪಗ್ರಹವನ್ನು ಉಡಾಯಿಸಲಾಯಿತು. ಇದು ಈ ಪ್ರದೇಶದಲ್ಲಿನ ವಿಪತ್ತು ಪರಿಹಾರ ಮತ್ತು ದೂರಸಂವಹನ ಸಂಪರ್ಕಗಳನ್ನು ಸುಧಾರಿಸಲು ವಿನ್ಯಾಸಗೊಳಿಸಲಾಗಿದೆ.
  • ಫೆಬ್ರವರಿ 1 - ಕೇಂದ್ರ ಸರ್ಕಾರದ ವಾರ್ಷಿಕ ಬಜೆಟ್ ಅನ್ನು ಲೋಕಸಭೆಯಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ನೀಡಿದ್ದಾರೆ. 92 ವರ್ಷದ ರೈಲ್ವೆ ಬಜೆಟ್ ಅನ್ನು ಸ್ಥಗಿತಗೊಳಿಸಲಾಗಿದೆ ಮತ್ತು ಅದನ್ನು ಸಾಮಾನ್ಯ ಬಜೆಟ್ನಲ್ಲಿ ವಿಲೀನಗೊಳಿಸಲಾಗಿದೆ.
  • ಫೆಬ್ರವರಿ 15 - ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಪಿ.ಎಸ್‍ಎಲ್‍ವಿ ಸಿ.೩೭ (PSLV-C37) ಅನ್ನು ಉಡಾಯಿಸಿತು, ಏಳು ರಾಷ್ಟ್ರಗಳ 104 ಉಪಗ್ರಹಗಳನ್ನು ಕಕ್ಷೆಗೆ ಕಳುಹಿಸಿತು, ಇದು ಬಾಹ್ಯಾಕಾಶ ಪರಿಶೋಧನೆಯ ಇತಿಹಾಸದಲ್ಲಿ ಅತಿ ಹೆಚ್ಚು ಉಪಗ್ರಹಗಳನ್ನು ಕಕ್ಷೆಗೆ ಕಳುಹಿಸಿದ ದಾಖಲೆ.
  • 2017 ಜೂನ್‍ನಲ್ಲಿ ಪಾಕಿಸ್ತಾನದ ಜೊತೆಗೆ, ಭಾರತವು ಶಾಂಘಾಯ್ ಸಹಕಾರ ಸಂಘದ ಒಂದು ಪೂರ್ಣ ಪ್ರಮಾಣದ ಸದಸ್ಯನಾಗಿದೆ, ಇದು ಅಂತರ ಸರ್ಕಾರಗಳ ಭದ್ರತಾ ಗುಂಪು/ಕೂಟ. ಭಾರತದ ಸದಸ್ಯರು ಗುಂಪು ಸದಸ್ಯತ್ವವನ್ನು ದಕ್ಷಿಣ ಏಷ್ಯಾದಲ್ಲಿ ವಿಸ್ತರಿಸಲು ಬಯಸುತ್ತಾರೆ. 2017 ಜುಲೈ-ಆಗಸ್ಟ್‍ನಲ್ಲಿ ಹಿಮಾಲಯದ ವಿವಾದಿತ ಪ್ರದೇಶದ ಮೇಲೆ ಚೀನಾದೊಂದಿಗಿನ ವಿವಾದ ಪ್ರದೇಶದಲ್ಲಿ, ಚೀನಾವು ಭಾರತೀಯ ಪಡೆಗಳು ಅತಿಕ್ರಮಿಸುತ್ತಿದೆ ಎಂದು ದುರಿದರು.

ಜಿ.ಎಸ್.ಟಿ ತೆರಿಗೆ ಪದ್ದತಿ ಜಾರಿ

  • ವಿಶೇಷ ಲೇಕನ:ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ)
  • 2017, 1 ಜುಲೈ ನಿಂದು ಹೊಸ ತೆರಿಗೆ ಪದ್ದತಿ, ಸರಕು ಮತ್ತು ಸೇವೆಗಳ ತೆರಿಗೆ (ಭಾರತ) ಕಾಯಿದೆ ಭಾರತದಲ್ಲಿ ಜಾರಿಗೆ ಬಂದಿತು. ಸ್ವಾತಂತ್ರ್ಯ ಬಂದ 70 ವರ್ಷಗಳ ನಂತರ ಭಾರತದ ಅತಿದೊಡ್ಡ ತೆರಿಗೆ ಸುಧಾರಣೆಯನ್ನು ಜೂನ್ 30, 2017 ರ ಮಧ್ಯರಾತ್ರಿ ಆರಂಭಿಸಲಾಯಿತು. ಇದು ಅನೇಕ ಪರೋಕ್ಷ ತೆರಿಗೆಗಳನ್ನು ಬದಲಿಸಿತು.
  • ಇದು ಸರಕು ಮತ್ತು ಸೇವೆಗಳ ಸರಬರಾಜಿನ ಮೇಲೆ ಭಾರತದಲ್ಲಿ ತೆರಿಗೆ ವಿಧಿಸುವ ಸರಕು ತೆರಿಗೆ ಮತ್ತು ಸರಕು ತೆರಿಗೆ (ಜಿಎಸ್ಟಿ) ಪರೋಕ್ಷ ತೆರಿಗೆ (ಅಥವಾ ಬಳಕೆ ತೆರಿಗೆ) ಆಗಿದೆ. ಉತ್ಪಾದನಾ ಪ್ರಕ್ರಿಯೆಯಲ್ಲಿನ ಪ್ರತಿಯೊಂದು ಹಂತದಲ್ಲೂ ಜಿಎಸ್ಟಿ ವಿಧಿಸಲ್ಪಡುತ್ತದೆ, ಆದರೆ ಅಂತಿಮ ಗ್ರಾಹಕರ ಹೊರತುಪಡಿಸಿ ಉತ್ಪಾದನೆಯ ವಿವಿಧ ಹಂತಗಳಲ್ಲಿ ಎಲ್ಲಾ ವ್ಯಕ್ತಿಗಳಿಗೆ ಮರುಪಾವತಿಸಲು ಉದ್ದೇಶಿಸಲಾಗಿದೆ. ಈ ತೆರಿಗೆ ಪದ್ದತಿಯನ್ನು ಯುಪಿಯೆ ಸರ್ಕಾರದ ಪಿ ಚಿದಂಬರಮ್ ಜಾರಿಗೊಳಿಸಲು ಪ್ರಯತ್ನಿಸಿದಾಗ ಗುಜಾರಾತು ಮುಖ್ಯ ಮಂತ್ರಿಯಾಗಿದ್ದ ನರೇಂದ್ರ ಮೋದಿಯವರು ವಿರೋಧಿಸಿದ್ದರು.
  • ಸರಕು ಮತ್ತು ಸೇವೆಗಳನ್ನು ತೆರಿಗೆ ಸಂಗ್ರಹಕ್ಕೆ ಐದು ತೆರಿಗೆ ಸ್ಲಾಬ್‍ಗಳಾಗಿ (ಹಂತ)ವಿಭಾಗಿಸಲಾಗಿದೆ - 0%, 5%, 12%, 18% ಮತ್ತು 28%. ಆದಾಗ್ಯೂ, ಪೆಟ್ರೋಲಿಯಂ ಉತ್ಪನ್ನಗಳು, ಆಲ್ಕೊಹಾಲ್‍-ಯುಕ್ತ ಪಾನೀಯಗಳು, ವಿದ್ಯುತ್ ಮತ್ತು ರಿಯಲ್ ಎಸ್ಟೇಟ್ಗಳು- ಇವಕ್ಕೆ ಜಿಎಸ್ಟಿ ಅಡಿಯಲ್ಲಿ ತೆರಿಗೆ ಇಲ್ಲ. ಬದಲಿಗೆ ಹಿಂದಿನ ತೆರಿಗೆ ವಿಧಿಸುವ ಪ್ರಕಾರವೇ ರಾಜ್ಯ ಸರ್ಕಾರಗಳು ಪ್ರತ್ಯೇಕವಾಗಿ ವಿಧಿಸುವ ತೆರಿಗೆಗೆ ಒಳಪಡುತ್ತವೆ. ಬೆಲೆಬಾಳುವ ಒರಟಾದ ಅರೆ ಪ್ರಶಸ್ತ ಕಲ್ಲುಗಳು (ಹರಳು, ರತ್ನ) ಮೇಲೆ 0.25% ವಿಶೇಷ ದರ ಮತ್ತು ಚಿನ್ನದ ಮೇಲೆ 3%. ಇದರ ಜೊತೆಗೆ, ಏರಿಟೇಟೆಡ್ ಪಾನೀಯಗಳು (ಸೋಡಾ), ಐಷಾರಾಮಿ ಕಾರುಗಳು ಮತ್ತು ತಂಬಾಕು ಉತ್ಪನ್ನಗಳಂತಹ ಕೆಲವೊಂದು ವಸ್ತುಗಳಿಗೆ 28% ಗಿಂತಲೂ ಹೆಚ್ಚಿನ ದರ ಪೂರ್ವ-ಜಿಎಸ್ಟಿ ಇದ್ದ, ಅವು ನಂತರ 22% ರಷ್ಟು ದರಗಳು ಅನ್ವಯ ವಾಗಬಹದು. ಹೆಚ್ಚಿನ ಸರಕುಗಳಿಗೆ ಶಾಸನಬದ್ಧ ತೆರಿಗೆ ದರವು 26.5%, ಆಗಿದ್ದವು- ನಂತರ ಹೆಚ್ಚಿನ ಸರಕುಗಳು 18% ತೆರಿಗೆ ಶ್ರೇಣಿಯಲ್ಲಿರುತ್ತವೆ ಎಂದು ನಿರೀಕ್ಷಿಸಲಾಗಿದೆ.
  • ಭಾರತದ ಸರ್ಕಾರವು, ಭಾರತ ಸಂವಿಧಾನದ ಒಂದು ನೂರಾ ಒಂದನೆಯ ತಿದ್ದುಪಡಿಯ ಅನುಷ್ಠಾನದ ಮೂಲಕ 2017 ರ ಜುಲೈ 1 ರಿಂದ ಜಾರಿಗೆ ಬಂದಿತು. ಈ ಕೇಂದ್ರೀಯ ತರಿಗೆಗಳು, ರಾಜ್ಯ ಸರ್ಕಾರಗಳು ವಿಧಿಸುತ್ತಿದ್ದ -ಹಿಂದೆ ಅಸ್ತಿತ್ವದಲ್ಲಿದ್ದ ಬಹು ಹಂತಗಳ ತೆರಿಗೆಗಳ ಬದಲಿಗೆ ಈ ತೆರಿಗೆಗಳನ್ನು ಜಾರಿ ಮಾಡಲಾಗಿದೆ.
  • ತೆರಿಗೆ ದರಗಳು, ನಿಯಮಗಳು ಮತ್ತು ನಿಬಂಧನೆಗಳನ್ನು ಕೇಂದ್ರದ ಹಣಕಾಸು ಮಂತ್ರಿಗಳು ಮತ್ತು ಎಲ್ಲಾ ರಾಜ್ಯಗಳನ್ನು ಒಳಗೊಂಡಿರುವ (GST) ಜಿಎಸ್‍ಟಿ ಕೌನ್ಸಿಲ್ ನಿರ್ವಹಿಸುತ್ತದೆ. ಜಿಎಸ್ಟಿ ಒಂದು ಏಕೀಕೃತ ತೆರಿಗೆಯನ್ನು ವಿಧಾನವನ್ನು ಹೊಂದಿದ್ದು, ಪರೋಕ್ಷ ತೆರಿಗೆಗಳ ಬದಲಿಗೆ ಇದನ್ನು ಉದ್ದೇಶವನ್ನು ಹೊಂದಿದೆ, ಆದ್ದರಿಂದ ಇದು ರಾಷ್ಟ್ರದ 2.4 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಪುನರ್ನಿರ್ಮಾಣ ಮಾಡಲಿದೆ, ಆದರೆ ಇದಕ್ಕೆ ಟೀಕೆಗಳು ಇಲ್ಲವೆಂದಿಲ್ಲ. ಅಂತರ ರಾಜ್ಯ ಸಾಗಣೆಯ ಲಾರಿಗಳ ಪ್ರಯಾಣದ ಸಮಯವು 20% ನಷ್ಟು ಕಡಿಮೆಯಾಗುವುದು, ಏಕೆಂದರೆ ಅಂತರ ರಾಜ್ಯ ತಪಾಸಣೆ ಕೇಂದ್ರಗಳಿರುವುದಿಲ್ಲ. (ಇಂಟರ್ ಸ್ಟೇಟ್ ಚೆಕ್ ಪೋಸ್ಟ್‍ಗಳಿಲ್ಲ).

ಮೇಕ್ ಇನ್ ಇಂಡಿಯಾ ಅಭಿವೃದ್ಧಿ ಯೊಜನೆ

  • 'ಮೇಕ್ ಇನ್ ಇಂಡಿಯಾ' ಯೊಜನೆಯನ್ನು ನರೇಂದ್ರ ಮೋದಿ ಸರ್ಕಾರವು ಹೆಚ್ಚಾಗಿ ಪ್ರಚಾರ ಮಾಡಿತ್ತು . ಸ್ಥಳೀಯ ಉತ್ಪಾದಕರನ್ನು ಉತ್ತೇಜಿಸಿ ಹೊಸ ಕೌಶಲಗಳನ್ನು ಸೃಷ್ಟಿಸುವುದು ಇದರ ಉದ್ದೇಶವಾಗಿತ್ತು. ಸ್ಟಾರ್ಟ್ಅಪ್‌ ಇಂಡಿಯಾದಲ್ಲಿ ಬಂದ ಈ ಕುರಿತ ವರದಿಯೊಂದರ ಪ್ರಕಾರ ಜನವರಿ ಮೊದಲ ವಾರದವರೆಗೆ ಕೇವಲ 74 ಸ್ಟಾರ್ಟ್‌ಅಪ್‌ಗಳು ತೆರಿಗೆ ವಿನಾಯಿತಿಗೆ ಬಂದಿವೆ. ಭಾರತದ ವ್ಯಾಪಾರ ವಹಿವಾಟು ತೀರಾ ಇಳಿಕೆಯಾಗಿದೆ. ಅದೆ ಚೀನಾ ಮೇಲ್ಮುಖವಾಗಿ ಚಲಿಸುತ್ತಿದೆ. ಇವೆರಡರ ಅನುಪಾತ 4:1 ರಷ್ಟಿದೆ. ಹೀಗೆ ಮೇಕ್ ಇನ್ ಇಂಡಿಯಾ ಯೋಜನೆಗೆ ಹಿನ್ನಡೆಯಾಗಿದೆ.

ಆರ್ಥಿಕ ಸಮೀಕ್ಷೆ

  • ತೈಲ ನೀತಿ:2014 ರ ಏಪ್ರಲ್‍ ನಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬಂದಾಗ, ಕಚ್ಚಾ ತೈಲ ಬ್ಯಾರೆಲ್‍ಗೆ 107 ಡಾಲರ್ಗೆ ಜಾಗತಿಕ ಮಾರಾಟ ಬೆಲೆಇತ್ತು. ಅದು ಶೀಘ್ರದಲ್ಲೇ $30 (ಡಾಲರಿಗಿಂತ) ಕ್ಕಿಂತ ಕೆಳಗೆ ಹೋಯಿತು. ಆದರೆ ಮತ್ತೆ ಏರಲು ಪ್ರಾರಂಭಿಸಿತು. 2018 ರಲ್ಲಿ ಬ್ಯಾರೆಲ್ಗೆ 80 ಡಾಲರ್‍ಗೆ ವ್ಯಾಪಾರವಾಗುತ್ತಿದ್ದೂ ಭಾರತದಲ್ಲಿ ಚಿಲ್ಲರೆ ಬೆಲೆ ರೂ. 65/- ರಿಂದ ರೂ.75-80/- ಕ್ಕೆ ಏರಿ ಇನ್ನೂ ಏರುತ್ತಲೇ ಇದೆ. ಬದಲಾಗಿ, ಈ ಸರಕಾರವು ಕೇಂದ್ರ ಎಕ್ಸೈಸ್ ತೆರಿಗೆಗಳನ್ನು ಹೆಚ್ಚಿಸಲು ನಿರ್ಧರಿಸಿದೆ (ಪೆಟ್ರೋಲ್ ಮೇಲೆ 200% ಮತ್ತು ಡೀಸೆಲ್‍ಗೆ 400% ಕ್ಕಿಂತಲೂ ಹೆಚ್ಚಿದೆ) ತೆರಿಗೆ ತೈಲ ಬೆಲೆಗಿಂತಲೂ ಹೆಚ್ಚಾಗಿದೆ.ಸರ್ಕಾರ 10 ಲಕ್ಷ ಕೋಟಿ ರೂ.ಗಳನ್ನು ಈ ರೀತಿ ಭಾರವಾಧ ಏರಿಕೆ ಮೂಲಕ ಸಂಗ್ರಹಿಸಿದೆ.
  • ಭಾರತ ಅದರ ತೈಲ ಅವಶ್ಯಕತೆಗಳಲ್ಲಿ ಶೇ 80 ರಷ್ಟನ್ನು ಆಮದು ಮಾಡಿಕೊಳ್ಳುತ್ತದೆ. 2017-18ರಲ್ಲಿ 220.43 ದಶಲಕ್ಷ ಟನ್ಗಳಷ್ಟು (ಎಂಟಿ-MT) ಕಚ್ಚಾತೈಲವನ್ನು ಆಮದು ಮಾಡಿಕೊಳ್ಳಲು 5.65 ಲಕ್ಷ ಕೋಟಿ ರೂ. ಖರ್ಚು ಮಾಡಿದೆ. 2018-19ರಲ್ಲಿ, ಆಮದುಗಳು ಸುಮಾರು 227 ಮಿ.ಟಿ.ಎಂದು ಅಂದಾಜಿಸಲಾಗಿದೆ.
  • ಜಿಡಿಪಿ:ಭಾರತದ ಒಟ್ಟು ದೇಶೀಯ ಉತ್ಪಾದನೆ (ಜಿಡಿಪಿ) ನೋಟು ರದ್ದಿನ ನಂತರ 4 ಇದ್ದುದು ಕ್ರಮೇಣ ಈ ನಾಲ್ಕು ವರ್ಷಗಳಲ್ಲಿ ಸುಧಾರಿಸಿ 7.3 ರಷ್ಟಕ್ಕೆ ಏರಿದೆ. 2014 ಕ್ಕೂ ಹಿಂದಿನ ದಶಕದಲ್ಲಿ 7.6 ಇತ್ತು. ವಿದೇಶೀ ಬಂಡವಾಳ ಹೂಡಿಕೆ 22 ರಷ್ಟು ಇದ್ದುದು 2018 ಕ್ಕೆ 24 ಕ್ಕೆ ಏರಿದೆ. ಕ್ರಿಸಿಲ್ ರಿಪೋರ್ಟ್ ಪ್ರಕಾರ, "ಕಳೆದ ಐದು ವರ್ಷಗಳಲ್ಲಿ 2.2 ಶೇಕಡಾದಿಂದ *ಆರ್ಥಿಕ ಕೊರತೆ:2015 ರ ಹಣಕಾಸು ಮತ್ತು 2017 ರ ನಡುವೆ ರಾಜ್ಯಗಳಿಗೆ ಸರಾಸರಿ ಆರ್ಥಿಕ ಕೊರತೆ 3.2 ಪ್ರತಿಶತಕ್ಕೆ ಏರಿಕೆಯಾಗಿದೆ." ಕಳೆದ ನಾಲ್ಕು ವರ್ಷಗಳಲ್ಲಿ ಭಾರತದ ಚಾಲ್ತಿ ಲೆಕ್ಕದ ಕೊರತೆ (ಸಿಎಡಿ)ಶೇ. 3.3 ರಿಂದ 1.9 ಕ್ಕೆ ಇಳಿದಿದೆ. ಜನಧನ ಯೋಜನೆಯಲ್ಲಿ ಒಟ್ಟು ರೂ. 2,563 ರ ಸರಾಸರಿ ಡಿಪಾಜಿಟ್‍ನ್ನು ನೀಡುವ ಮೂಲಕ ಜೆಡಿವೈಎಸ್ ಅಡಿಯಲ್ಲಿ ಒಟ್ಟು 79, 455 ಕೋಟಿ ಸಂಗ್ರಹಿಸಲಾಗಿದೆ. ಆದರೆ, ಕಡಿಮೆ ಶಿಲ್ಕಿನ ಮತ್ತು ಶೂನ್ಯ ಉಳಿತಾಯ ಅಥವಾ ಶಿಲ್ಕಿನ ಖಾತೆಗಳ ಸಮಸ್ಯೆಗಳ ಬಗ್ಗೆ ನಿಗಾವಹಿಸಬೇಕಾಗಿದೆ. ಬ್ಯಾಂಕುಗಳು ಕಡಿಮೆ ಶಿಲ್ಕು ಇರುವ ಬಡವರ ಖಾತೆಗಳಮೇಲೆ ದಂಡ ಹಾಕಿ ಸುಮಾರು ಮೂರು ಸಾವಿರ ಕೋಟಿ ಸಂಗ್ರಹಿಸಿರುವುದು ಇದರ ದೋಷವಾಗಿದೆ.
  • ದಿವಾಳಿ ತಡೆಗೆ:ದಿವಾಳಿತನ ಮತ್ತು ದಿವಾಳಿತನ ನೀತಿ (ಕೋಡ್)2016 ರಲ್ಲಿ ಐಬಿಸಿ ಸಂಸತ್ತು ಅಂಗೀಕರಿಸಿದಾಗ 338 ಡೆಬಿಟ್ ರಿಕವರಿ ಟ್ರಿಬ್ಯೂನಲ್ಗಳಲ್ಲಿ 72,841 ಪ್ರಕರಣಗಳು ಬಾಕಿ ಉಳಿದಿತ್ತು. ಭಾರತದಲ್ಲಿ ವ್ಯಾಪಾರ ವಾಣಿಜ್ಯದ ಮೇಲೆ ಪರಿಣಾಮ ಬೀರಿ ವಸೂಲಾತಿ ವಿಳಂಬ ನೀತಿ ಅನುಸರಿಸುತ್ತಿತ್ತು. ವಸೂಲಾತಿಗೆ ಕಾಲ ನಿಗದಿ ಮಾಡಿ ಆಸ್ತಿವಶದ ಕಾನೂನು ತಂದ ನಂತರ ವಸೂಲಾತಿಯಲ್ಲಿ ಏರಿಕೆ ಕಂಡಿತು. ವಿಶ್ವ ಬ್ಯಾಂಕಿನ ಸಾಲ ವಸೂಲಾತಿ ಮಾಡುವ ವ್ಯವಹಾರ ವರದಿ 2018 ರಲ್ಲಿ ಭಾರತವು 30ನೇ ಸ್ಥಾನದಿಂದ 100 ನೇ ಸ್ಥಾನಕ್ಕೆ ಏರಿದೆ.
  • ಬಂಡವಾಳ ಮತ್ತು ಹೂಡಿಕೆಗಳು ದುರ್ಬಲವಾಗಿಯೇ ಉಳಿದಿದೆ. ಕ್ರಿಸಿಲ್ ವರದಿಯ ಪ್ರಕಾರ 2010 ಮತ್ತು 2014 ಅವಧಿಯಲ್ಲಿ ಹೂಡಿಕೆಯ ದರವು ಸರಾಸರಿ 33.6 ಪ್ರತಿಶತ ಇದ್ದು, 2014 ರಿಂದ 2015 ಮತ್ತು ಫೆಬ್ರವರಿ 2015 ಮತ್ತು 2018 ರ ನಡುವಿನಲ್ಲಿ ಶೇ. 31 ರವರೆಗೆ ಇಳಿಮುಖವಾಗಿದೆ.
  • ಕೃಷಿ: ವಿಫಲವಾದ ಯಾವುದೇ ಕ್ಷೇತ್ರಗಳಿಗಿಂತ ಪ್ರಧಾನಮಂತ್ರಿಯ ಭರವಸೆಗಳಲ್ಲಿ ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಆಘಾತವಾಗಿದೆ. ಆರ್ಥಿಕ ಸುಧಾರಣೆಗಳು ಆರಂಭವಾದಂದಿನಿಂದ ಕಳೆದ ನಾಲ್ಕು ವರ್ಷಗಳಲ್ಲಿನ ಕೃಷಿ ಬೆಳವಣಿಗೆಯು ಅತ್ಯಂತ ಕಡಿಮೆಯಿದೆ. 1.9% ರಷ್ಟು ಬೆಳವಣಿಗೆಯ ದರದಲ್ಲಿದೆ; ರೈತರ ಆದಾಯವನ್ನು ದ್ವಿಗುಣಗೊಳಿಸುವ ಭರವಸೆಯು ಒಂದು ಸೂಕ್ತವಲ್ಲದ ಹಗೆತನದಂತೆ ತೋರುತ್ತದೆ. ಇದನ್ನು ಈ ಸನ್ನಿವೇಶದಲ್ಲಿ ನೋಡಲು, ಯುಪಿಎ ಆಡಳಿತದ ಅಡಿಯಲ್ಲಿ ಕೃಷಿ ಆದಾಯದ ಸರಾಸರಿ ಬೆಳವಣಿಗೆ ದರ 4.2% ಇತ್ತು.
  • ಸಿಜಿಟಿ; ಬಂಡವಾಳ ತೆರಿಗೆ:ಹಿಂದುಳಿದ ದೀರ್ಘಾವಧಿಯ ಬಂಡವಾಳದ ಲಾಭದ ಮೇಲಿನ ತೆರಿಗೆಯನ್ನು (ಯುಪಿಎ ರದ್ದುಗೊಳಿಸಿದ್ದು), ಇವರು ಪುನಃ ಜಾರಿಮಾಡಿ, ಸ್ವಚ್ಭ್ರತ್, ಶಿಕ್ಷಣ ಮತ್ತು ಕೃಶಿ ಕಲ್ಯಾಣ್ ಸೆಸ್‍ನ್ನು ಹಾಕಿ ರಹಸ್ಯವಾದ ಲೆವಿ ಮತ್ತು ಉಳಿತಾಯದ ಬ್ಯಾಂಕ್ ಖಾತೆಯ ಮೇಲಿನ ಬಡ್ಡಿದರಗಳನ್ನು 3.5% ಕ್ಕೆ ಇಳಿಸಿ ಆದಾಯ ಕಡಿತಗೊಳಿಸುವುದರೊಂದಿಗೆ ತೆರಿಗೆ ಮರುಪ್ರವೇಶ ಮಾಡಿದೆ. ಮಧ್ಯಮ ವರ್ಗದ ಉಳಿತಾಯದ ಆದಾಯವನ್ನು ಅಳಿಸಿಹಾಕಿದೆ. ಇದು ಎದ್ದುಕಾಣುವ ಸಂಗತಿಯಾಗಿದೆ.
  • ನಿರುದ್ಯೋಗ:ಉದ್ಯೋಗಗಳ ಕೊರತೆ ಈ ಸರ್ಕಾರ ಎದುರಿಸುತ್ತಿರುವ ದೊಡ್ಡ ಸವಾಲಾಗಿದೆ. ಮೂರುವರೆಗಿಂತಲೂ ಹೆಚ್ಚು ವರ್ಷಗಳವರೆಗೆ ಉದ್ಯೋಗ ಸೃಷ್ಟಿಗೆ ಸಾರ್ವಜನಿಕರನ್ನು (ಮತ್ತು ಬಹುಶಃ ಸ್ವತಃ) ತಮ್ಮನ್ನೇ ತಪ್ಪಾಗಿ ಮಾರ್ಗದರ್ಶನ ಮಾಡಿದ ನಂತರ ಆರಿವಾಗಿದೆ; ಈ ವರ್ಷದ ಜನವರಿಯಲ್ಲಿ 'ಎಕನಾಮಿಕ್ ಕೌನ್ಸಿಲ್' ಸ್ಥಾಪಿಸುವ ಮೂಲಕ ಅದರ ಬಗ್ಗೆ ಏನಾದರೂ ಮಾಡುವ ಅಗತ್ಯವನ್ನು ಮೋದಿ ಅಂತಿಮವಾಗಿ ಒಪ್ಪಿಕೊಂಡರು. ಈ ಕೌನ್ಸಿಲ್ ಇನ್ನೂ ಪರಿಹಾರವನ್ನು ಒದಗಿಸಬೇಕಾಗಿದೆ.
  • ರೈತರ ಬವಣೆ:ರೈತರು ಸಂಕಷ್ಟದಲ್ಲಿದ್ದರೂ ಧಾನ್ಯಗಳನ್ನು ಅಮದು ಮಾಡಿಕೊಳ್ಳಲಾಯಿತು, ಅದೂ ತೆರಿಗೆ ವಿನಾಯಿತಿ ಕೊಟ್ಟು. ಇದು ರೈತರ ಧಾನ್ಯಗಳನ್ನು ಕೊಳ್ಳುವವರಿಲ್ಲದೆ ರೈತರಿಗೆ ಉತ್ತಮ ಬೆಲೆಸಿಗದೆ ಸಂಕಷ್ಟಕ್ಕೊಳಗಾದರು. ಇದರಮೇಲೆ ಕೃಷಿ ರಫ್ತು $ 9 ಶತಕೋಟಿಯಷ್ಟು ಕುಸಿಯಿತು. ಇದು ನಿರ್ಲಕ್ಷ್ಯದ ಅಪರಾಧ; ಮೇಲಾಗಿ ಮಿತಿಗಳನ್ನು ಮಾಡುವ ನೀತಿಯ ವೈಫಲ್ಯ ಎಂದು ಆರ್ಥಿಕ ತಜ್ಞರು ಹೇಳಿದರು.[೨೪೦] [೨೪೧] ನೋಡಿ ಆರ್ಥಿಕ ತತ್ತ್ವ ಸಮೀಕ್ಷೆ

ವಿದೇಶ ನೀತಿ

  • ಭಯೋತ್ಪಾದನೆ:ಅಧಿಕಾರಕ್ಕೆ ಬಂದ ದಿನದಿಂದಲೂ: ಆಂತರಿಕ ಮತ್ತು ಬಾಹ್ಯ ಭದ್ರತೆಯ ಮೇಲಿನ ಸರ್ಕಾರದ ವಿಫಲತೆಗಳ ಬಗ್ಗೆ ಹೇಳುವುದು ಬಹಳಷ್ಟಿದೆ. 'ದೋವಲ್ ಸಿದ್ಧಾಂತ' (ಓಲೈಸುವ ಸಿದ್ದಾಂತ) ಪಾಕಿಸ್ತಾನದ ಕಡೆಗೆ ನಿಶ್ಚಿತವಲ್ಲದ ಒಂದು ಗೊಂದಲಮಯವಾದ ನೀತಿಯನ್ನು ಸೃಷ್ಟಿಸಿದೆ. ಕಾಶ್ಮೀರದ ಕಾರ್ಯಾಚರಣೆಗಳಲ್ಲಿ ಸಾವುನೋವುಗಳಿಂದ ಅತ್ಯಧಿಕ ಸಂಖ್ಯೆಯಲ್ಲಿ ಭಾರತದ (ನಮ್ಮ) ಪಡೆಗಳ ಸೈನಿಕರು ಮತ್ತು ನಾಗರಿಕರು ಹುತಾತ್ಮರಾಗಿದ್ದಾರೆ. ನಿಷ್ಕ್ರಿಯ ಬಿಜೆಪಿ-ಪಿಡಿಪಿ ಮೈತ್ರಿಕೂಟವು ಪರಿಸ್ಥಿತಿಯ ಉಲ್ಬಣವನ್ನು ಹೆಚ್ಚಿಸಿದೆ. ಗಡಿ ತಂಟೆ ಹೆಚ್ಚದೆ.
  • ಚೀನಾವು ಉತ್ತರ ಡೋಕ್ಲಾಮ್ನಲ್ಲಿ ಪೂರ್ಣ-ಪ್ರಮಾಣದ ಕೈಗಾರಿಕಾ ಸಂಕೀರ್ಣವನ್ನು ನಿರ್ಮಿಸಲು ಮತ್ತು ದಕ್ಷಿಣ ಡೊಕ್ಲಾಮ್ಗೆ ಹೋಗುವ ರಸ್ತೆಯ ನಿರ್ಮಾಣದೊಂದಿಗೆ ಚೀನಾವು ಮುಂದುವರಿಯುತ್ತಿದೆ, 'ಚಿಕನ್ ನೆಕ್' ಒಪ್ಪಂದವನ್ನು ಮೀರುತ್ತಿದೆ. ಅದೇ ಸಮಯದಲ್ಲಿ, ಚೀನಾ ಪರಮಾಣು ಸರಬರಾಜುದಾರರ ಗುಂಪಿನ ಭಾಗವಾಗಿ ಬಿಡ್ ಮಾಡಲು ಭಾರತವನ್ನು ವಿರೋಧಿಸಿದೆ. ನೀತಿ ನಿರ್ಮಾಪಕರಿಗೆ ಸಹ ಭಾರತದ ಚೀನಾ ನೀತಿ ಅಸ್ಪಷ್ಟವಾಗಿದೆ.

ಜನಪ್ರಿಯ ಯೋಜನೆಗಳು

  • ಕೇಂದ್ರದಲ್ಲಿ ಬಿಜೆಪಿ ಸರ್ಕಾರ 2014 ಮೇ 26 ರಂದು ಅಧಿಕಾರಕ್ಕೆ ಬಂದ ನಂತರದ ಹಲವು ಜನಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದೆ. ಇದರಲ್ಲಿ ಬಡವರು, ರೈತರು, ಯುವಕರು, ಮಹಿಳೆಯರು ಹಾಗೂ ಹಿರಿಯ ನಾಗರಿಕರು ಮೊದಲಾದವರ ಕ್ಷೇಮ ಮತ್ತು ಅಭಿವೃದ್ಧಿಗಾಗಿ ಅನೇಕ ಯೋಜನೆಗಳು ಇವೆ. ಜನರ ಹಣಕಾಸು ಭದ್ರತೆ, ಮೂಲಭೂತ ಅಭಿವೃದ್ಧಿ ಹಾಗೂ ದೀನರ ಸಬಲೀಕರಣ, ಸಾಧಿಸುವ ಉದ್ದೇಶಹೊಂದಿ ಅನೇಕ ಯೋಜನೆಗಲನ್ನು ತಂದಿದೆ. ಆದರೆ ಈ ಯೊಜನೆಗಳಿಗೆ ಸರಿಯಾದ ಪ್ರವರ್ತಕರು ಪ್ರಚಾರಕರಿಲ್ಲದೆ ಜನರಿಗೆ ತಲುಪುವುದರಲ್ಲಿ ಹಿಂದೆ ಬಿದ್ದಿದೆ.
  • ಅವು: 1. ಪ್ರಧಾನಮಂತ್ರಿ ಜನಧನ ಯೋಜನೆ;2. ಸುಕನ್ಯಾ ಸಮೃದ್ಧಿ ಯೋಜನೆ; 3. ಪ್ರಧಾನಮಂತ್ರಿ ಅವಾಸ್ ಯೋಜನೆ ಲಾಂಚ್;4. ಪ್ರಧಾನಮಂತ್ರಿ ಮುದ್ರಾ ಯೋಜನೆಯು; 5. ಪ್ರಧಾನಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆಯು;6. ಅಟಲ್ ಪಿಂಚಣಿ ಯೋಜನೆಯು; 7. ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ ;'8. ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯು;9. ಪ್ರಧಾನಮಂತ್ರಿ ಗರಿಬ್ ಕಲ್ಯಾಣ ಯೋಜನೆ.;10. ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆಯು ;11. ಡಿಜಿಟಲ್ ಇಂಡಿಯಾ; 12. ಸ್ವಚ್ಛ ಭಾರತ ಅಭಿಯಾನ - -13. ಮೇಕ್ ಇನ್ ಇಂಡಿಯಾ.ವಿವರ:

ವಿದೇಶ ವ್ಯವಹಾರ

  • List of international prime ministerial trips made by Narendra Modi
  • ಸಾಧನೆ:ಜಗತ್ತಿನಲ್ಲಿ ಭಾರತದ ಪ್ರಭಾವವನ್ನು ಹೆಚ್ಚಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಅನೇಕ ವಿದೇಶ ಪ್ರವಾಸಗಳನ್ನು ಮಾಡಿದ್ದಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಜಪಾನ್‌ ಪ್ರಧಾನಿ ಶಿಂಜೊ ಅಬೆ ಮೊದಲಾದವರನ್ನು ಅನೇಕ ಸಲ ಭೇಟಿಯಾದರು. ಮೋದಿ ಅವರ ವಿದೇಶ ಪ್ರವಾಸ ಮತ್ತು ಸರ್ಕಾರದ ಸಾಧನೆಯ ಜಾಹೀರಾತಿಗೆ ನಾಲ್ಕೂವರೆ ವರ್ಷಗಳಲ್ಲಿ ಮೊದಲ ನಾಲ್ಕುವರ್ಷಗಳಲ್ಲಿ 84 ವಿದೇಸ ಯಾತ್ರೆಗೆ ರೂ.6,590 ಕೋಟಿ ಖರ್ಚು ಮಾಡಲಾಗಿದೆ ಎಂದು ಸರ್ಕಾರದ ವರದಿ ಹೇಳುತ್ತದೆ. ಮೋದಿ ಅವರು ಐದು ವರ್ಷಗಳಲ್ಲಿ 57 ದೇಶಗಳಿಗೆ ಒಟ್ಟು 92 ವಿದೇಶ ಪ್ರವಾಸ ಮಾಡಿದ್ದರು. ಇದಕ್ಕೆ ಸರ್ಕಾರ ರೂ.1,960 ಕೋಟಿ ವೆಚ್ಚಭರಿಸಿದೆ. ಸರ್ಕಾರದ ನಾನಾ ಯೋಜನೆಗಳು ಮತ್ತು ಸಾಧನೆಗಳನ್ನು ಪ್ರಚಾರ ಮಾಡುವ ಜಾಹೀರಾತಿಗೆ ರೂ.4,630 ಕೋಟಿಗಳನ್ನು ವೆಚ್ಚ ಮಾಡಿರುವುದಾಗಿ ಸರ್ಕಾರ ಮಾಹಿತಿ ನೀಡಿದೆ. ಮೋದಿಯವರು ಐದು ವರ್ಷಗಳಲ್ಲಿ ಅವರ ಪೂರ್ವವರ್ತಿ ಮನಮೋಹನ್ ಸಿಂಗ್‍ರ ಎರಡು ಪಟ್ಟು ಹೆಚ್ಚು ವಿದೇಶಗಳಿಗೆ ಹಾರಿದ್ದಾರೆ.

ಆರ್ಥಿಕ ನೀತಿ

  • ಭಾರತದ ವ್ಯಾಪಾರ ಕೊರತೆಯು 14.88 ಶತಕೋಟಿ $/ಡಾ. ನಷ್ಟು ಏರಿದೆ. ಇದು ನವೆಂಬರ್ 2014 ರಿಂದಲೂ ಹೆಚ್ಚುತ್ತಿದೆ. ಅದೇ ಸಮಯ ಆಮದು ಹೆಚ್ಚಳವಾಗಿದೆ. ವಾಸ್ತವವಾಗಿ, ಕಳೆದ ವರ್ಷದಲ್ಲಿ ಭಾರತದ ಆಮದು 21.12% ಹೆಚ್ಚಾಗಿದೆ, ಸುಮಾರು 42 ಶತಕೋಟಿ ಡಾಲರ್ಗಳಷ್ಟು ಹೆಚ್ಚಾಗಿದೆ. ಆದ್ದರಿಂದ, ಹೆಚ್ಚುತ್ತಿರುವ ವ್ಯಾಪಾರ ಕೊರತೆ ವಾಸ್ತವವಾಗಿ ರಫ್ತುಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಎಂದು ವ್ಯಂಗ್ಯವಾಗಿ ಹೇಳಬಹುದು. ಈ ಕಾರಣಕ್ಕಾಗಿಯೇ ರೂಪಾಯಿಯನ್ನು ತುಲನಾತ್ಮಕವಾಗಿ ದುರ್ಬಲವಾಗಿಡಲು ಭಾರತೀಯ ಸರ್ಕಾರ ಪ್ರಯತ್ನಿಸಿದೆ ಎನ್ನಬಹುದು. ಇದಕ್ಕೆ ವ್ಯತಿರಿಕ್ತವಾಗಿ, ದುರ್ಬಲ ಕರೆನ್ಸಿಯು ದೇಶೀಯ ಸರಕುಗಳನ್ನು ಹೆಚ್ಚು ದುಬಾರಿಯಾಗಿ ಮಾಡುತ್ತದೆ, ಇದು ಹಣದುಬ್ಬರದ ಏರಿಕೆಗೆ ಕಾರಣವಾಗುತ್ತದೆ.. ಡಿಸೆಂಬರ್ 14, 2018 ... 2018 ರ ನವೆಂಬರ್‍ನಲ್ಲಿ ಭಾರತ ವ್ಯಾಪಾರ ಕೊರತೆಯು 16.67 ಶತಕೋಟಿ ಡಾಲರ್ಗೆ ಏರಿದೆ. ಆಗಸ್ಟ್ 3, 2018 ... ಭಾರತದ ಸಂಸದೀಯ ಸಮಿತಿಯು, ಚೀನಾವು ಭಾರತದಲ್ಲಿ ಉತ್ಪನ್ನಗಳನ್ನು ತಂದು ಸುರಿಯಸುತ್ತಿದೆ ಎಂದು ಹೇಳಿದೆ .. ಚೀನಾದೊಂದಿಗೆ ಭಾರತವು ವ್ಯಾಪಕವಾದ ವ್ಯಾಪಾರ ಕೊರತೆಯ ಬಗ್ಗೆ ವರದಿಯಲ್ಲಿ ಚಿಂತೆಯನ್ನು ಕೂಡ ವ್ಯಕ್ತಪಡಿಸಿದೆ.

ಸರ್ಕಾರದ ಸಾಲದ ಹೊರೆ

  • ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಆರ್ಥ ವವ್ಯಸ್ಥೆಯ ಬೆನ್ನೆಲುಬು ಮುರಿದ್ದಾರೆ ಎಂದು ಬಿಜೆಪಿಯ ಮಾಜಿ ಹಣಕಾಸು ಸಚಿವ ಯಶವಂತ್ ಸಿನ್ಹಾ ಆರೋಪಿಸಿದ್ದಾರೆ. ಮೋದಿ ಅವರು ಹೇಳುತ್ತಿರುವ ವಿಚಾರಗಳಲ್ಲಿ ಸತ್ಯಾಂಶವಿಲ್ಲವೆಂದು ಅವರ ಪುಸ್ತಕದಲ್ಲಿ ಪ್ರತಿಪಾದಿಸಿದ್ದಾರೆ.
  • ಸರ್ಕಾರದ ಸಾಲದ ಬಗ್ಗೆ ಇರುವ ದಾಖಲೆ:: ಕಳೆದ ನಾಲ್ಕೂವರೆ ವರ್ಷದ ನರೇಂದ್ರ ಮೋದಿ ಅಧಿಕಾರವಧಿಯಲ್ಲಿ ಸರ್ಕಾರದ ಸಾಲ ಬಾಧ್ಯತೆ ಶೇ. 49ರಷ್ಟುಹೆಚ್ಚಾಗಿದೆ. ಸೆಪ್ಟೆಂಬರ್ 2018ರವರೆಗೆ ಇರುವ ಮಾಹಿತಿಗಳನ್ನು ಗಮನಿಸಿದರೆ, ಜೂನ್ 2014ರ ವರೆಗೆ ಕೇಂದ್ರ ಸರ್ಕಾರದ ಸಾಲ ರೂ.54,90,763 ಕೋಟಿ ಆಗಿತ್ತು. ಆದರೆ ಕಳೆದ ನಾಲ್ಕೂವರೆ ವರ್ಷದಲ್ಲಿ ಒಟ್ಟು ಸಾಲ ರೂ.82,03,253 ಕೋಟಿ ಆಗಿದೆ ಎಂದು ವಿತ್ತ ಸಚಿವಾಲಯ ತಮ್ಮ ದಾಖಲೆಗಳಲ್ಲಿ ತಿಳಿಸಿದೆ. ಸಾರ್ವಜನಿಕ ಸಾಲ ರೂ.48 ಲಕ್ಷ ಕೋಟಿ ಇದ್ದದ್ದು ನಾಲ್ಕೂವರೆ ವರ್ಷಗಳಲ್ಲಿ ರೂ.73 ಲಕ್ಷ ಕೋಟಿ ಆಗಿದೆ. ಅಂದರೆ 51.7 ಶೇ ಹೆಚ್ಚಾಗಿದೆ. ಆಂತರಿಕ ಸಾಲದಲ್ಲಿ ಶೇ.54 ಏರಿಕೆ ಆಗಿದ್ದು, ಇದುರೂ.68 ಲಕ್ಷ ಕೋಟಿ ಇದೆ,
  • ಇದೇ ಕಾಲಾವಧಿಯಲ್ಲಿ ಮಾರುಕಟ್ಟೆ ಸಾಲದಲ್ಲಿಯೂ ಶೇ. 47.5 ಏರಿಕೆಯಾಗಿದ್ದು ಮೋದಿ ಅಧಿಕಾರವಧಿಯಲ್ಲಿ ಸಾಲದ ಮೊತ್ತ ರೂ. 52 ಲಕ್ಷ ಕೋಟಿ ಆಗಿದೆ. ಜೂನ್ 2014ರ ಕೊನೆಯವರೆಗೆ ಚಿನ್ನದ ಬಾಂಡ್ ಮೂಲಕ ಸಾಲ ಏರಿಕೆ ಆಗಿಲ್ಲವಾದರೂ ಚಿನ್ನದ ಹಣಗಳಿಕೆ ಯೋಜನೆ ಸೇರಿದಂತೆ ಸಾಲದ ಮೊತ್ತ ರೂ.9,089 ಕೋಟಿ ಆಗಿದೆ.
  • ಕೇಂದ್ರ ಸರ್ಕಾರದ ಸಾಲ(ವಿತ್ತೀಯ ಕೊರತೆ):31 ಜನವರಿ 2019 ರಂದು, 2019- 2020 ರ ಮಧ್ಯಂತರ ಬಜೆಟ್ ಮಂಡನೆಯ ಪೂರ್ವದಲ್ಲಿ ಬಿಡುಗಡೆ ಮಾಡಿದ ಮಾಹಿತಿಯಂತೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಒಟ್ಟು ಸಾಲದ ಮೊತ್ತ ರೂ.97 ಲಕ್ಷ ಕೋಟಿ. ಬಿಜೆಪಿ ಸರ್ಕಾರದ ಅಧಿಕಾರ ಅವಧಿ 2014ರ ಜೂನ್‌ನಿಂದ ಪ್ರಾರಂಭವಾಗಿದ್ದು, 2014ರ ಮಾರ್ಚ್‌ ಅಂತ್ಯದ ನಂತರದಲ್ಲಿ ಸಾಲದ ಪ್ರಮಾಣ ಶೇ 59ರಷ್ಟು ಏರಿಕೆಯಾಗಿದೆ. ಒಟ್ಟು ಸಾಲ ರೂ.97 ಲಕ್ಷ ಕೋಟಿಯಲ್ಲಿ ಕೇಂದ್ರ ಸರ್ಕಾರದ ಸಾಲದ ಮೊತ್ತ ರೂ.68.8 ಲಕ್ಷ ಕೋಟಿ ಅಥವಾ ಒಟ್ಟು ಸಾಲದ ಪ್ರಮಾಣದಲ್ಲಿ ಶೇ 71. ಸಾಲದ ಪ್ರಮಾಣವು 2014ರ ಮಾರ್ಚ್‌ನಿಂದ ಶೇ 49ರಷ್ಟು ಏರಿಕೆ ಕಂಡಿದೆ. ಸರ್ಕಾರ ಸಾಲದ ಮಾಹಿತಿ 2017–18ರ ಪ್ರಕಾರ, ಸರ್ಕಾರದ ಸಾಲ 2014ರಲ್ಲಿ ರೂ.68.7 ಲಕ್ಷ ಕೋಟಿ ಹಾಗೂ 2011ರಲ್ಲಿ ರೂ.47.6 ಲಕ್ಷ ಕೋಟಿ ಇತ್ತು. ವಿತ್ತೀಯ ಕೊರತೆಯು 2019 ಮಾರ್ಚ್ 31 ಕ್ಕೆ ಕೊನೆಗೊಳ್ಳುವ ವರ್ಷದ ಕೊರತೆಯು ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) 3.4 ಪ್ರತಿಶತದಷ್ಟನ್ನು ತಲುಪಲಿದೆ ಎಂದು ದೇಶದ ತತ್ಕಾಲ ಹಣಕಾಸು ಸಚಿವ ಪಿಯುಶ್ ಗೋಯಲ್ ಲೋಕಸಭೆಗೆ ತಿಳಿಸಿದರು. ಒಟ್ಟು ಕೊರತೆ-(Debt- Receipts)ರೂ.652701.57 ಲಕ್ಷ ಕೋಟಿ.
  • ಕಾಂಗ್ರೆಸ್‌ ವಕ್ತಾರ ರಣದೀಪ್‌ ಸುರ್ಜೇವಾಲಾ ಅವರು ಹಣಕಾಸು ಸಚಿವಾಲಯದ ದಾಖಲೆಗಳ ಪ್ರಕಾರ ಸಾಲದ ದಾಖಲೆ. ಮೋದಿ ಅವರು 4 ವರ್ಷ 9 ತಿಂಗಳಲ್ಲಿ ರೂ.30.28 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಮೋದಿ ಆಡಳಿತದಲ್ಲಿ ಒಬ್ಬೊಬ್ಬ ಪ್ರಜೆಯ ತಲೆ ಮೇಲೆ ರೂ.23,300 ಹೆಚ್ಚುವರಿ ಸಾಲದ ಹೊರೆ ಬಿದ್ದಿದೆ.

2020-2021ರ ಹಣಕಾಸು ವರ್ಷದಲ್ಲಿ ಕೇಂದ್ರದ ಸಾಲ

  • 2020-2021ರಲ್ಲಿ 20 ಸೆಪ್ಸಂಬರ್ ಕೊನೆಗೆ ರ್ಕಾರದ ಒಟ್ಟು ಹೊಣೆಗಾರಿಕೆಗಳು 2020 ರ ಜೂನ್ ಅಂತ್ಯದ ವೇಳೆಗೆ 101.3 ಲಕ್ಷ ಕೋಟಿ ರೂ.ಗೆ ಏರಿದೆ,ಸಾರ್ವಜನಿಕ ಸಾಲದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, 2020 ರ ಮಾರ್ಚ್ ಅಂತ್ಯದ ವೇಳೆಗೆ 94.6 ಲಕ್ಷ ಕೋಟಿ ರೂ. 2019 ರ ಜೂನ್ ಅಂತ್ಯದ ವೇಳೆಗೆ ಸರ್ಕಾರದ ಒಟ್ಟು ಸಾಲ 88.18 ಲಕ್ಷ ಕೋಟಿ ರೂ.ಇತ್ತು.

ಉದ್ಯೋಗ ಸೃಷ್ಠಿ

  • 2019ರ ಹಿಂದಿನ 45 ವರ್ಷಗಳಲ್ಲೇ ಅತಿ ಹೆಚ್ಚು ನಿರುದ್ಯೋಗ ಪ್ರಮಾಣ 2017–18ನೇ ಸಾಲಿನಲ್ಲಿ ದಾಖಲಾಗಿದೆ. ಈ ಹಣಕಾಸು ವರ್ಷದಲ್ಲಿ ನಿರುದ್ಯೋಗ ಪ್ರಮಾಣ ಶೇ 6.1ರಷ್ಟಿದೆ ಎಂದು ವರದಿಯಾಗಿದೆ..- ನ್ಯಾಷನಲ್ ಸ್ಯಾಂಪಲ್ ಸರ್ವೇ ಆಫೀಸ್) ನಡೆಸಿದ ಸಮೀಕ್ಷೆಯಿಂದ ಹೇಳಿದೆ. ಭಾರತದಲ್ಲಿ 2017 ರಲ್ಲಿ ಗರಿಷ್ಠ ಮುಖ ಬೆಲೆಯ ನೋಟು ರದ್ದು ಮಾಡಿದ ಪರಿಣಾಮವನ್ನು ತಿಳಿಯಲು ನಿರುದ್ಯೋಗ ವಿಚಾರಕ್ಕೆ ಸಂಬಂಧಪಟ್ಟು ಸರ್ಕಾರಿ ಸ್ವಾಮ್ಯದ ಸಂಸ್ಥೆ ನಡೆಸಿದ ಮೊದಲ ಸಮೀಕ್ಷೆ ಇದು.
  • ಮೋದಿಯವರು ಐದುವರ್ಷದಲ್ಲಿ ಐದು ಕೋಟಿ ಉದ್ಯೋಗ ಸೃಷ್ಠಿಸುವುದಾಗಿ ಘೋಷಿಸಿದ್ದರು. ಆದರೆ ೨೦೧೪ ರಿಂದ ನಾಲ್ಕುವರೆ ವರ್ಷಗಳಲ್ಲಿ ಪ್ರಮುಖ ಯೋಜನೆಗಳ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಕೇವಲ 27.5 ಲಕ್ಷ ಉದ್ಯೋಗ ಸೃಷ್ಟಿಸಿದೆ

ಕಾಶ್ಮೀರ ನೀತಿ

  • 2016 ಕ್ಕೆ ಹೋಲಿಸಿದರೆ 2018- 2019 ರ ವರ್ಷವು ನಿಯಂತ್ರಣ ರೇಖೆಯ (ಲೋಕ) ನಿಯಂತ್ರಣದಲ್ಲಿ 230% ರಷ್ಟು ಕದನ ವಿರಾಮ ಉಲ್ಲಂಘನೆಯಾಗಿದೆ ಎಂದು ಸರಕಾರ ಮಂಗಳವಾರ ಲೋಕಸಭೆಗೆ ತಿಳಿಸಿದೆ. 2018 ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನದಿಂದ 2,936 ಕದನ ವಿರಾಮ ಉಲ್ಲಂಘನೆ ನಡೆದಿದೆ ಎಂದು ಭಾರತೀಯ ಮಾಧ್ಯಮಗಳು ವರದಿ ಮಾಡಿದೆ. 2017 ರಲ್ಲಿ 971 ಪ್ರಕರಣಗಳು ವರದಿಯಾಗಿವೆ. 2017 ರಲ್ಲಿ ಕಾಶ್ಮೀರದಲ್ಲಿ 881 ಕದನ ವಿರಾಮ ಉಲ್ಲಂಘನೆ ನಡೆದಿದೆ ಎಂದು ಭಾರತ ಸರ್ಕಾರ ಲೋಕಸಭೆಗೆ ತಿಳಿಸಿದೆ; 2016 ರಲ್ಲಿ 449 ಮಾತ್ರ . ಈ 881 ಘಟನೆಗಳ ಪೈಕಿ 110 ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ಸಂಭವಿಸಿದೆ
  • ಸರ್ಕಾರಿ ಮಾಹಿತಿ ಪ್ರಕಾರ, ಪಾಕಿಸ್ತಾನವು 2013 ರಲ್ಲಿ 432 ಕದನ ವಿರಾಮ ಉಲ್ಲಂಘನೆ ಮಾಡಿತ್ತು, 2012 ರಲ್ಲಿ 114, 2011 ರಲ್ಲಿ 62 ಮತ್ತು 2010 ರಲ್ಲಿ 70 ರಷ್ಟಿತ್ತು

2014 ರಿಂದ 2019 ರ ವರೆಗಿನ ಸಾಧನೆ ಮತ್ತು ಕೊರತೆಯ ವರದಿಯ ಸಾರಾಂಶ

  • 2014 ರಿಂದ 2019 ರಲ್ಲಿ ಹೊಸ ಸರ್ಕಾರ ತಳಮಟ್ಟದ ಕಾರ್ಯದೊಂದಿಗೆ ಮೊದಲ ಎರಡು ವರ್ಷಗಳ ಹೊಸ ಕಾರ್ಯಕ್ರಮಗಳನ್ನ ಚಾಲನೆಯಲ್ಲಿ ತಂದಿತು ಮತ್ತು ಯೋಜನೆಗಳನ್ನು ಕ್ರಮವಾಗಿ ಅನುಸರಣೆ ಮಾಡಲಾಯಿತು -ಆದರೆ ಅವರು ಅಧಿಕಮೊತ್ತದ 86% ರವರೆಗೆ ಚಲಾವಣೆಯಲ್ಲಿದ್ದ ನೋಟುಗಳ ರದ್ದತಿಯ ಅನಿಯಂತ್ರಿತ ನಿರ್ಧಾರ ತೆಗೆದುಕೊಂಡಿತು. ಅವರ ಐದು ವರ್ಷದ ಪದಾಧಿಕಾರದ ಅಂತ್ಯದಲ್ಲಿ ನೋಡಿದಾಗ ಐದು ವರ್ಷಗಳಲ್ಲಿ, ಕೆಲವೇ ಸಾಧನೆಗಳು ಮತ್ತು ಪ್ರಮುಖವಾದ ವಿಷಯಗಳಲ್ಲಿ ಹಲವು ಕೊರತೆಗಳು ಕಂಡುಬಂದವು.

ಕೆಲವು ಸಂದೇಹಾತ್ಮಕ ನಿಯಮಗಳು

  • ರಾಜಕೀಯ ಪಕ್ಷಕ್ಕೆ ರಹಸ್ಯ ಚುನಾವಣಾ ಬಾಂಡುಗಳ ಮೂಲಕ ದೇಣಿಗೆಗೆ ಅವಕಾಶದ ನಿಯಮ:
  • (3 Instances of Subterfuge)
  • 2017 ರಲ್ಲಿ, ಸರ್ಕಾರವು ಚುನಾವಣಾ ಬಾಂಡ್ಗಳನ್ನು ಪರಿಚಯಿಸಿತು, ರಾಜಕೀಯ ಪಕ್ಷಗಳು ಅನಿಯಮಿತ ದೇಣಿಗೆಗಳನ್ನು ಸ್ವೀಕರಿಸುವ ವ್ಯವಸ್ಥೆ, ಇದರಲ್ಲಿ ದಾನಿಗಳು ಅನಾಮಧೇಯರಾಗಿರುತ್ತಾರೆ. ದಾನಿಗಳು ಅವರು ಯಾರಿಗೆ ದಾನ ಮಾಡಿದ್ದಾರೆ ಮತ್ತು ಎಷ್ಟು ಜನರಿಗೆ ಬಹಿರಂಗಪಡಿಸಬೇಕಾಗಿಲ್ಲ. ರಾಜಕೀಯ ಪಕ್ಷಗಳು ಯಾರಿಗೆ ದಾನ ಮಾಡಿದವು ಮತ್ತು ಎಷ್ಟು. ಅವರು ಪಡೆದಿರುವ ಒಟ್ಟು ಮೊತ್ತದ ದೇಣಿಗೆಗಳನ್ನು ಮಾತ್ರ ಘೋಷಿಸಬೇಕು. ಇಬಿಗಳ(EBs) ಅಪೇಕ್ಷೆಯ ಬಗ್ಗೆ ಸರ್ಕಾರದ ಒಳಗೆ ಚರ್ಚೆಗಳ ಬಗ್ಗೆ ಮಾಹಿತಿಯನ್ನು, ಆರ್ಟಿಐ ಅಡಿಯಲ್ಲಿ ಕೋರಿದ್ದನ್ನು, ನಿರಾಕರಿಸಲಾಗಿದೆ.
  • ರಾಜಕೀಯ ಪಕ್ಷಗಳಿಗೆ ಅನಾಮಧೇಯ ಮತ್ತು ಅನಿಯಮಿತ ದೇಣಿಗೆಗಳನ್ನು ಅನುಮತಿಸುವ ರಹಸ್ಯವಾದ ಚುನಾವಣಾ ಬಾಂಡುಗಳ ಯೋಜನೆಗೆ ಅನುವು ಮಾಡಿಕೊಡುವ ನಾಲ್ಕು ಕಾನೂನುಗಳಿಗೆ ತಿದ್ದುಪಡಿಗಳು ಹಣಕಾಸು ಬಿಲ್ 2017 ರಲ್ಲಿ ಅಡಗಿಕೊಂಡಿವೆ ಮತ್ತು ಲೋಕಸಭೆಯಲ್ಲಿ ಮಂಡಿಸಲ್ಪಟ್ಟಿವೆ, ಈ ವಿಷಯದ ಬಗ್ಗೆ ಯಾವುದೇ ಚರ್ಚೆಯಿಲ್ಲದೆ ಅಂಗೀಕಾರವಾಗಿದೆ.

ರಹಸ್ಯ ಹಣ ವರ್ಗಾವಣೆಯ ಚುನಾವಣಾ ಬಾಂಡು

  • ಚುನಾವಣಾ ಬಾಂಡುಗಳ ಮಾನ್ಯತೆಯು ಈಗ ಸರ್ವೋಚ್ಚ ನ್ಯಾಯಾಲಯದಲ್ಲಿ ಇರುವ ಒಂದು ವಿಷಯವಾಗಿದೆ. ಏತನ್ಮಧ್ಯೆ, ಅನಾಮಧೇಯ ದೇಣಿಗೆಗಳ ಪೈಕಿ ಬಿಜೆಪಿ ಅತಿದೊಡ್ಡ ಫಲಾನುಭವಿಯಾಗಿದ್ದು, ಇಂತಹ ಒಟ್ಟು ದೇಣಿಗೆಗಳಲ್ಲಿ ಶೇ 95 ರಷ್ಟು(ಸುಮಾರು 3000 ಕೋಟಿ ರೂ) ಸಂಗ್ರಹಿಸಿದೆ. ಈ ಚುನಾವಣೆಯಲ್ಲಿ ಗೆಲ್ಲುವಲ್ಲಿ ಚುನಾವಣಾ ಬಾಂಡ್ಗಳ ಮೂಲಕ ಸಂಗ್ರಹಿಸಿದ ಭಾರೀ ಪ್ರಮಾಣದಲ್ಲಿ ಬಿಜೆಪಿ ಹಣ ಸುರಿಯುತ್ತಿದೆ ಎಂಬ ಭಯವಿದೆ. (ಭ್ರಷ್ಟಾಚಾರದಿಂದ ಗಳಿಸಿದ ಹಣದ ಭಾಗ ಮತ್ತು ತೆರಿಗೆ ತಪ್ಪಸಿದ ಹಣದ ಭಾಗವನ್ನು ಈ ಪಾಂಡುಗಳು ಮೂಲಕ ಪಕ್ಷಕ್ಕೆ ನೀಡಿ ಶಿಕ್ಷೆಯಿಂದ ಪಾರಾಗಲು ಅವಕಾಶ ಇದು ಎಂದು ಹೇಳಲಾಗಿದೆ) ಎಲೆಕ್ಟೋರಲ್ ಬಾಂಡ್ ಎಂಬ ಹೆಸರಿನ ಅಪಾರದರ್ಶಕ ವ್ಯವಸ್ಥೆ ಯಾವ ದೇಶದಲ್ಲೂ ಇಲ್ಲ. ಕಾರ್ಪೊರೇಟ್‌ಗಳು ಯಾವುದೇ ಪಕ್ಷಕ್ಕೆ ರಹಸ್ಯವಾಗಿ ಹಣ ವರ್ಗಾಯಿಸುವಂತಹ ಈ ವ್ಯವಸ್ಥೆಯಲ್ಲಿ ಯಾರು ಹಣ ಕೊಟ್ಟರು, ಎಷ್ಟು ಹಣ ಕೊಟ್ಟರು, ಯಾವ ಮೂಲದಿಂದ ಕೊಟ್ಟರು ಎಂದು ತಿಳಿಯುವ ಹಕ್ಕು ಪ್ರಜೆಗಳಿಗೆ ಇಲ್ಲ.

ಆಧಾರ್ ಮಸೂದೆ

  • ಆಧಾರ್ ಮಸೂದೆಯನ್ನು ಮನಿ ಬಿಲ್‍ನಲ್ಲಿ/ ಹಣಕಾಸು ಮಸೂದೆಯಲ್ಲಿ ಸೇರಿಸಿ ಮರೆಮಾಡಲಾಗಿದೆ, ಆದರೆ ಇದು ಹಣಕಾಸು ಮಸೂದೆಯ ಭಾಗವಾಗಿರಬಾರದು ಎಂಬ ನಿಬಂಧನೆಗಳನ್ನು ಒಳಗೊಂಡಿತ್ತು ಮತ್ತು ಲೋಕಸಭೆಯ ಮೂಲಕ ಅಂಗೀಕರಿಸಲ್ಪಟ್ಟಿತು, ಈ ಕಾರಣ ಈ ನಿಬಂಧನೆಗಳನ್ನು ಚರ್ಚಿಸಲು ರಾಜ್ಯಸಭೆಯು ಒಂದು ಅವಕಾಶಗದಿಂದ ನಿರಾಕರಿಸಲ್ಪಟ್ಟಿತು. ಇವುಗಳಲ್ಲಿ ಹೆಚ್ಚಿನವುಗಳನ್ನು ನಂತರ ತಳ್ಳಿಹಾಕಲಾಯಿತು - ಆದರೆ ಇದು ಸುಪ್ರೀಮ್ ಕೋರ್ಟಿನ ತೀರ್ಪಿನಿಂದ ಹೊರಬರಲು ಸರ್ಕಾರದ ಆದೇಶವನ್ನು ಜಾರಿಗೊಳಿಸಿದೆ.

ಸೇನಾ ನೀತಿ

  • ಮೋದಿಯವರ ಮಾತು ಮತ್ತು ಕಾರ್ಯ- ಹೊಂದಿಕೆಯಾಗುವುದಿಲ್ಲ. ಭಾರತದ ವಾಯು ಪಡೆಗೆ ರಾಫೆಲ್ ಜೆಟ್‍ಗಳು ಅಗತ್ಯವಿದ್ದಾಗ, ಫ್ರೆಂಚ್ ಕಂಪನಿಯಾದ ಡಸ್ಸಾಲ್ಟ್ ಏವಿಯೇಶನ್‍ನೊಂದಿಗೆ ಯುಪಿಯೆ ಸರ್ಕಾರ 126 ಜೆಟ್ಗಳ ಸರಬರಾಜಿಗೆ ಒಪ್ಪಂದ ಮಾಡಿಕೊಂಡಿತು. 15 ಜೆಟ್ಗಳ 8 ಸ್ಕ್ವಾಡ್ರನ್‍ಗಳ ಕನಿಷ್ಠ ಅವಶ್ಯಕತೆ ಇತ್ತು. ಆದರೆ ನಂತರ ಪ್ರಧಾನಿಯಾದ ಮೋದಿ ಅದನ್ನು ಏಕಾಏಕಿ ರದ್ದುಪಡಿಸಿ, ಅದೇ ರೀತಿಯ ಫೈಟರ್ ಜೆಟ್ಗಳಲ್ಲಿ 36 ಕ್ಕೆ ಮಾತ್ರ ತಲಾ ಜೆಟ್ಟಿಗೆ ಐದು ಪಟ್ಟು ದರ ಹೆಚ್ಚು ಮಾಡಿ ಸರಬರಾಜು ಮಾಡಲು ಆದೇಶಿಸಿ ಹೊಸ ಒಪ್ಪಂದ ಮಾಡಿಕೊಂಡರು. ಆದು ಈಗ ಸುಪ್ರೀಮ್ ಕೋರ್ಟ್‍ನ ದಾಖಲೆ ಸಿಗದೆ ಕೈಚೆಲ್ಲಿದೆ; ಮತ್ತು ರಹಸ್ಯ ಕಾಯಿದೆ ಅಡಿಯಲ್ಲಿ ಸತ್ಯ ಅಡಗಿದೆ.

ಭಯೋತ್ಪಾದನೆ- ಪುಲ್ವಾಮಾ ದಾಳಿ

  • ವಿಶೇಷ ಲೇಖನ:೨೦೧೯ ಪುಲ್ವಾಮಾ ದಾಳಿ
  • ಫೆಬ್ರವರಿ 14, 2019 ರಂದು, ಜಮ್ಮು ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ, ಭದ್ರತಾ ಸಿಬ್ಬಂದಿಯನ್ನು ಸಾಗಿಸುವ ವಾಹನಕ್ಕೆ , ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲೆಥ್ಪೊರದಲ್ಲಿ (ಅವಾಂತಿಪೋರಾ ಬಳಿ) ಆತ್ಮಹತ್ಯಾ ಬಾಂಬರ್ ವಾಹನದಿಂದ ದಾಳಿ ಮಾಡಲಾಯಿತು. ಈ ದಾಳಿಯಿಂದಾಗಿ ಕೇಂದ್ರ ಮೀಸಲು ಪೊಲೀಸ್ ಪಡೆಯ ೪೦ ಮಂದಿ ಹುತಾತ್ಮರಾದರು.
  • ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಯೋಧರ ಮೇಲೆ ಆತ್ಮಾಹುತಿ ದಾಳಿ ನಡೆಸಿದ ಜೈಷ್–ಎ–ಮೊಹಮದ್ (ಜೆಇಎಂ) ಉಗ್ರಗಾಮಿ ಸಂಘಟನೆ ಮೇಲೆ 26-2-2019 ಬೆಳಗ್ಗಿನ ಜಾವ 3.45ಕ್ಕೆ ದಾಳಿ ಸಂಘಟಿಸಿ ಭಾರಿ ಸಂಖ್ಯೆಯ ಉಗ್ರರು, ತರಬೇತಿದಾರರು ಮತ್ತು ಕಮಾಂಡರ್‌ಗಳನ್ನು ನಾಶ ಮಾಡಲಾಗಿದೆ ಮತ್ತು ಈ ಕಾರ್ಯಾಚರಣೆಯು ಸೇನಾ ಸಂಘರ್ಷ ಅಲ್ಲ, ಬದಲಿಗೆ ಉಗ್ರರ ದಾಳಿ ತಡೆಗಾಗಿ ನಡೆದ ‘ಮುನ್ನೆಚ್ಚರಿಕಾ ಕ್ರಮ’ ಎಂದು ಭಾರತದ ಅಧಿಕಾರಿಗಳು ತಿಳಿಸಿದರು. ಪಾಕಿಸ್ತಾನ ಧಾಳಿಯು ಜನರಹಿತ ಕಣಿವೆಯಲ್ಲಿ ಆಗಿದೆ; ಜನರಿಗೆ ಹಾನಿಯಾಗಿಲ್ಲ ಎಂದಿದೆ.. ಇಸ್ಲಾಮಾಬಾದಿನಲ್ಲಿರುವ ಪಾಶ್ಚಾತ್ಯ ರಾಜತಾಂತ್ರಿಕರು ತಾವು, ಭಾರತೀಯ ವಾಯುಪಡೆ ಒಂದು ಉಗ್ರಗಾಮಿ ಶಿಬಿರವನ್ನು ಹೊಡೆದು ಉರುಳಿಸಿದೆ ಎಂದು ಹೇಳಿರುವುದನ್ನು ನಂಬುವುದಿಲ್ಲ ಎಂದು ಹೇಳಿದರು.

ಭಾರತದ ಪೈಲೆಟ್ ಬಿಡುಗಡೆ

  • ಪಾಕಿಸ್ತಾನವು ತನ್ನ ಪ್ರದೇಶ ಪ್ರವೇಶಿಸಿದ 2 ಭಾರತೀಯ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿ, ಪೈಲಟ್‌ ಬಂಧನ ಮಾಡಿರುವುದಾಗಿ 27 ಫೆಬ್ರವರಿ 2019 ರಂದು ಹೇಳಿಕೊಂಡಿತು.. ಭಾರತೀಯ ವಾಯುಪಡೆಯ ಮಿಗ್‌ 21 ಯುದ್ಧ ವಿಮಾನದ ಪೈಲಟ್‌ ಅಭಿನಂದನ್‌ ವರ್ಥಮಾನ್‌ ಅವರನ್ನು ಪಾಕಿಸ್ತಾನ ಸೇನೆ ವಶಕ್ಕೆ ಪಡೆಯಿತು. 27 ಫೆಬ್ರವರಿ 2019, ಭಾರತದ ವಾಯು ವಲಯ ಪ್ರವೇಶಿಸಿದ ಪಾಕಿಸ್ತಾನದ ಯುದ್ಧ ವಿಮಾನವನ್ನು ಭಾರತದ ಮಿಗ್‌ 21 ಯುದ್ಧ ವಿಮಾನ ಹೊಡೆದುರುಳಿಸಿದೆ. ಅಭಿನಂದನ್‌ ವರ್ಥಮಾನ್‌ ಅವರು ಆ ಮಿಗ್‌ 21 ಯುದ್ಧ ವಿಮಾನದ ಪೈಲೆಟ್ ಆಗಿದ್ದಾರೆ. ಅವರ ವಿಮಾನವೂ ಧಾಳಿಗೆ ಸಿಲುಕಿದಾಗ ಅವರು ಪ್ಯರಾಚೂಟ್ ಮೂಲಕ ಪಾಕಿಸ್ತಾನದ ಪ್ರದೇಶದಲ್ಲಿ ಗಾಯಗೊಂಡು ಇಳಿದಿದ್ದರು
  • ಪಾಕಿಸ್ತಾನ ವಶದಲ್ಲಿ ಇರುವ ಅಭಿನಂದನ್‌ರನ್ನು ಕೂಡಲೇ ಸುರಕ್ಷಿತವಾಗಿ ವಾಪಸ್‌ ಕಳುಹಿಸಿಕೊಡಬೇಕು ಎಂದು ಭಾರತ ಒತ್ತಾಯಿಸಿತು. ಅದಕ್ಕೆ ವಿಂಗ್‌ ಕಮಾಂಡರ್‌ ಅಭಿನಂದನ್‌ ಅವರನ್ನು 1-3-2019 ರಂದು ವಾಪಸ್‌ ಕಳುಹಿಸಲು ಪಾಕಿಸ್ತಾನ ಸರ್ಕಾರ ಒಪ್ಪಿ, ಈ ಸಂಬಂಧ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್, ಸವರು ‘ಶಾಂತಿಯ ಸಂಕೇತವಾಗಿ 1-3-2019 ಶುಕ್ರವಾರ ವಿಂಗ್‌ ಕಮಾಂಡರ್‌ನ್ನು ವಾಪಸ್‌ ಕಳುಹಿಸಲಾಗುವುದು ಎಂದು ಸಂಸತ್‌ನಲ್ಲಿ 28-2-2019 ರಂದು ಗುರುವಾರ ಘೋಷಿಸಿದ್ದರು.ಅದೇ ರೀತಿ 1-3-2019 ಶುಕ್ರವಾರ ಸಂಜೆಯ ನಂತರ ವಾಘಾ ಗಡಿಯಲ್ಲಿ ಕಮಾಂಡರ್‌ ಅಭಿನಂದನ್‌ರನ್ನು ಸೂಕ್ತ ಚಿಕಿತ್ಸೆಯ ನಂತರ ಭಾರತದ ವಾಯುಪಡೆಯ ನಿಯೋಗಕ್ಕೆ ಒಪ್ಪಿಸಿದರು.

೨೦೧೯ರ ಭಾರತದ ಸಾರ್ವರ್ತ್ರಿಕ ಚುನಾವಣೆ

  • 2019 Indian general election-೨೦೧೯ರ ಭಾರತದ ಸಾರ್ವರ್ತ್ರಿಕ ಲೋಕಸಭೆ ಚುನಾವಣೆ
  • How India Voted; 25-5-2019
  • ಭಾರತದಲ್ಲಿ 2019 ರ ಸಾರ್ವತ್ರಿಕ ಚುನಾವಣೆಯು ಏಪ್ರಿಲ್ 11 ರಿಂದ 19 ಮೇ 2019 ವರೆಗೆ ಏಳು ಹಂತಗಳಲ್ಲಿ ನೆಡೆದು 17 ನೇ ಲೋಕಸಭೆಯ ರಚನೆ ಯಾಯಿತು. ಮತಗಳ ಎಣಿಕೆಯು ಮೇ 23 ರಂದು ನಡೆಯಿತು ಮತ್ತು ಅದೇ ದಿನ ಫಲಿತಾಂಶಗಳು ಘೋಷಿಸಲ್ಪಟ್ಟವು.
  • ಚುನಾವಣಾ ಆಯೋಗದ (ಇಸಿಐ) ಪ್ರಕಾರ, ಸುಮಾರು 900 ದಶಲಕ್ಷ (90 ಕೋಟಿ) ಜನರು ಮತ ಚಲಾಯಿಸಲು ಅರ್ಹರಾಗಿದ್ದರು, 2014 ರ ಕೊನೆಯ ಚುನಾವಣೆಯ ನಂತರ 84.3 ಮಿಲಿಯನ್ (8ಕೋಟಿ 43ಲಕ್ಷ) ಮತದಾರರ ಹೆಚ್ಚಳ ಆಗಿತ್ತು, 2019 ರಲ್ಲಿ 46 ಕೋಟಿ 80 ಲಕ್ಷ ಅರ್ಹ ಮತದಾರರು ಪುರುಷರು, ಮತ್ತು 43ಕೋಟಿ 20 ಲಕ್ಷ ಮಹಿಳೆಯರು ಮತ್ತು 38325 ಮತದಾರರು ಮೂರನೇ ಲಿಂಗಕ್ಕೆ ಸೇರಿದವರಾಗಿದ್ದರೆ;. ಒಟ್ಟಾರೆ 71,735 ಸಾಗರೋತ್ತರ ಮತದಾರರು ಒಟ್ಟು -90,01,00,060 ಮತದಾರರು ಇದ್ದರು. ಈ ಚುನಾವಣೆಯಲ್ಲಿ ಒಟ್ಟು 67.11% ರಷ್ಟು ಎಂದರೆ 60,40,57,150 ಜನರ ಮತದಾನ ನದೆದಿದೆ. (ಹೆಚ್ಚಳ 0.7%).
  • ಮೇ 23 ರಂದು ನಡೆದ ಮತ ಎಣಿಕೆಯಲ್ಲಿ ಒಟ್ಟು 542 ಸ್ಥಾನಗಳಿಗೆ ನೆಡೆದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ 303 ಸ್ಥಾನಗಳನ್ನು ಗೆದ್ದು, ಅದರ ಬಹುಮತವನ್ನು ಹೆಚ್ಚಿಸಿಕೊಂಡಿತು ಮತ್ತು ಬಿಜೆಪಿ ನೇತೃತ್ವದ ರಾಷ್ಟ್ರೀಯ ಡೆಮಾಕ್ರಟಿಕ್ ಅಲಯನ್ಸ್ 351 ಸ್ಥಾನಗಳನ್ನು ಗೆದ್ದಿತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವು 52 ಸ್ಥಾನಗಳನ್ನು ಗೆದ್ದಿತು ಮತ್ತು ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರಗತಿಪರ ಒಕ್ಕೂಟ 95 ಸ್ಥಾನಗಳನ್ನು ಗೆದ್ದುಕೊಂಡಿತು. ಇತರ ಪಕ್ಷಗಳು ಮತ್ತು ಅವರ ಮೈತ್ರಿಗಳು 98 ಸ್ಥಾನಗಳನ್ನು ಗೆದ್ದವು. ತೃಣಮೂಲ ಕಾಂಗ್ರೆಸ್ 22 ಸ್ಥಾನಗಳನ್ನು ಗೆದ್ದಿತು. ಒಟ್ಟು ಮತದಾನ 60,40,57,150 ಓಟು ಮಾಡಿದವರಲ್ಲಿ ಬಿಜೆಪಿಗೆ ಮತದಾನ ಶೇಕಡ 37.36% ರಷ್ಟು (22,90,75,170 ಓಟುಗಳು) ಮತ್ತು ಕಾಂಗ್ರೆಸ್‍ಗೆ 19.49% ರಷ್ಟು (11,94,94,885 ಓಟುಗಳು) ಮತದಾನ ಆಗಿದೆ.

೨೦೧೯ರ ನರೆಂದ್ರ ಮೋದಿಯವರ ಸರ್ಕಾರ

  • ನರೇಂದ್ರ ಮೋದಿ ಅವರು ದೇಶದ 15ನೇ ಪ್ರಧಾನಮಂತ್ರಿಯಾಗಿ ಮೇ 30, 2019 ಗುರುವಾರ ಸಂಜೆ, 07.21 ಗಂಟೆಗೆ ದೇಶದ 15ನೇ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಪ್ರಮಾಣವಚನ ಸ್ವೀಕರಿಸಿದರು. ಹೊಸ ಮಂತ್ರಿ ಮಂಡಲದಲ್ಲಿ, 25 ಕ್ಯಾಬಿನೆಟ್ ದರ್ಜೆ ಸಚಿವರು; 9 ರಾಜ್ಯ ಸಚಿವರು ಸ್ವತಂತ್ರ ಖಾತೆ; 24. ರಾಜ್ಯ ಸಚಿವರು ಇರುವ ಸಂಪುಟರಚನೆ ಮಾಡಿ ಖಾತೆಗಳನ್ನು ಹಂಚಿದರು.(23 ಸ್ಥಾನ ಖಾಲಿ ಬಿಟ್ಟರು)

ಹೊಸ ಆಂತರಿಕ ನೀತಿ

  • ಭಾರತದಲ್ಲಿ ಬಿಜೆಪಿಯ ಸ್ಪಷ್ಟ ಬಹುಮತ ಸರ್ಕಾರ ಬಂದ ನಂತರ ಎರಡು ವಿಧಗಳ ರಾಷ್ಟ್ರೀಯತೆಯ ವ್ಯಾಖ್ಯಾನಗಳು ಕಂಡು ಬಂದವು. ಒಂದು, ಸ್ವಾತಂತ್ರ್ಯ ಸಂಗ್ರಾಮದ ಕಾಲದಿಂದ ಇದ್ದ ನೀತಿಯನ್ನು ಅನುಸರಿಸಿ ಬಂದಿರುವಂಥದು. ಅದು, ಎಲ್ಲ ಮತ- ಧರ್ಮ-ನಂಬಿಕೆಗಳನ್ನೂ ಒಳಗೊಳ್ಳುವ, ಅನೇಕತೆಯಲ್ಲಿ ಏಕತೆಯನ್ನು ಕಾಣುವ, ಒಗ್ಗಟ್ಟಾದ ಪ್ರಜಾಪ್ರಭುತ್ವದ ರಾಷ್ಟ್ರೀಯತೆ. ಇನ್ನೊಂದು, ಅದಕ್ಕೆ ಪರ್ಯಾಯವಾಗಿ ಮತ್ತು ಸವಾಲಾಗಿ, ಆರ್‌ಎಸ್ಎಸ್ ಮೊದಲಿಂದಲೂ ಪ್ರತಿಪಾದಿಸಿದ, ಹಿಂದೂಗಳಿಗೆ ಮಾತ್ರ ಪ್ರಾಧಾನ್ಯವನ್ನು ಕೊಡುವ, ಭಿನ್ನತೆಯನ್ನು ಇರಿಸಿಕೊಂಡು ಏಕವನ್ನೇ ಪ್ರಧಾನವಾಗಿ ಒಪ್ಪಿಕೊಳ್ಳುವ ಹಿಂದೂ ರಾಷ್ಟ್ರೀಯತೆ. ಈ ಎರಡೂ ವಾದಗಳು ಭಾರತದ ಜನರ ಮನಸ್ಸಿನ ಮೇಲೆ ಹಿಡಿತ ಸಾಧಿಸಲು ಸ್ಪರ್ಧಿಸುತ್ತಿವೆ.

ಹೊಸ ಆಂತರಿಕ ಆರ್ಥಿಕ ನೀತಿ

  • ಹದಿನೈದನೇ ಹಣಕಾಸು ಆಯೋಗವ ರಚನೆ:Fifteenth Finance Commission
  • ನವೆಂಬರ್ 27, 2017 ರಂದು ದಿ ಇಂಡಿಯಾ ಗೆಜೆಟ್ ನಲ್ಲಿ ಅಧಿಸೂಚನೆಯ ಮೂಲಕ ಹದಿನೈದನೇ ಹಣಕಾಸು ಆಯೋಗವನ್ನು ಭಾರತ ಸರ್ಕಾರವು ರಾಷ್ಟ್ರಪತಿಯಿಂದ ವಿಧ್ಯುಕ್ತ ಅನುಮೋದನೆ ಪಡೆದ ನಂತರ ರಚಿಸಲಾಯಿತು. ನಂದ ಕಿಶೋರ್ ಸಿಂಗ್ ಅವರನ್ನು ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಲಾಯಿತು, ಅದರ ಪೂರ್ಣ ಸಮಯದ ಸದಸ್ಯರು ಶಕ್ತಿಕಾಂತ ದಾಸ್ ಮತ್ತು ಅನೂಪ್ ಸಿಂಗ್ ಮತ್ತು ಅದರ ಅರೆಕಾಲಿಕ ಸದಸ್ಯರು ರಮೇಶ್ ಚಂದ್ ಮತ್ತು ಅಶೋಕ್ ಲಾಹಿರಿ.
  • ಆಯೋಗವು ತನ್ನ ಮೊದಲ ಸಭೆಯನ್ನು 4 ಡಿಸೆಂಬರ್ 2017 ರಂದು ನಡೆಸಿತು. ಲಾಹಿರಿ ಅವರನ್ನು ಮೇ 2018 ರಲ್ಲಿ ಪೂರ್ಣ ಸಮಯದ ಸದಸ್ಯರ ಸ್ಥಾನಕ್ಕೆ ಏರಿಸಲಾಯಿತು ಮತ್ತು ಅವರಿಗೆ ರಾಜ್ಯ ಸಚಿವರ ಸ್ಥಾನಮಾನ ನೀಡಲಾಯಿತು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಆಗಲು ದಾಸ್ 11 ಡಿಸೆಂಬರ್ 2018 ರಂದು ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು,
  • ಆಯೋಗದ ನೇತೃತ್ವವನ್ನು ಎನ್ ಕೆ ಸಿಂಗ್ ವಹಿಸಿದರು. ಅದರ ಸದಸ್ಯರಲ್ಲಿ ಎ ಎನ್ - ಜಾ, ಅಶೋಕ್ ಲಾಹಿರಿ, ಅನೂಪ್ ಸಿಂಗ್ ಮತ್ತು ರಮೇಶ್ ಚಂದ್ ಸೇರಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (ಆರ್‌ಡಿಪಿಆರ್) ಸಚಿವ ಕೃಷ್ಣ ಬೈರೆ ಗೌಡ ಬುಧವಾರ ಐದು ಸದಸ್ಯರ 15 ನೇ ಹಣಕಾಸು ಆಯೋಗದಲ್ಲಿ ದಕ್ಷಿಣ ಭಾರತದಿಂದ ಯಾವುದೇ ಪ್ರತಿನಿಧಿ ಇಲ್ಲದಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ.
  • ಕರ್ನಾಟಕದ ಮಂತ್ರಿ ಕೃಷ್ಣಬೈರೆ ಗೌಡ ಅವರು, 2015-20ರ ಅವಧಿಯಲ್ಲಿ ಹಣ ಹಂಚಿಕೆ ಮಾಡುವಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಟ್ವೀಟ್‌ಗಳ ಸರಣಿಯಲ್ಲಿ ಹೇಳಿಕೊಂಡಿದ್ದಾರೆ. ಬರ ಮತ್ತು ಪ್ರವಾಹವನ್ನು ಎದುರಿಸಲು 2015-20ರ ಅವಧಿಯಲ್ಲಿ ರಾಜ್ಯಕ್ಕೆ ವಿಪತ್ತು ಪರಿಹಾರ ನಿಧಿಯಡಿ 1,527 ಕೋಟಿ ರೂ. ನೀಡಿದರೆ, ಮಹಾರಾಷ್ಟ್ರಕ್ಕೆ 8,195 ಕೋಟಿ ರೂ. ನೀಡಲಾಗಿದೆ. "ಈ ಅನ್ಯಾಯಗಳನ್ನು ಸರಿಪಡಿಸಲು ಮತ್ತು ನ್ಯಾಯಯುತ ಶಿಫಾರಸುಗಳನ್ನು ಮಾಡಲು ನಾವು ಆಯೋಗಕ್ಕೆ ಮನವಿ ಮಾಡಿದ್ದೇವೆ" ಎಂದು ಅವರು ಹೇಳಿದರು.
  • ರಾಜಕಾರಣಿಗಳು-ಮುಖ್ಯಮಂತ್ರಿಗಳು ಮತ್ತು ಹಣಕಾಸು ಮಂತ್ರಿಗಳು ಸೇರಿದಂತೆ; ನಿವೃತ್ತ ನಾಗರಿಕ ಸೇವಕರು; ನ್ಯಾಯಾಧೀಶರು; ಮತ್ತು ದಕ್ಷಿಣ ಭಾರತದ ರಾಜ್ಯಗಳ ಅರ್ಥಶಾಸ್ತ್ರಜ್ಞರು ಆಯೋಗದ ಉಲ್ಲೇಖದ ಹೊಸ ನಿಯಮಗಳನ್ನು ವಿರೋಧಿಸಿದರು,
  • ಇದು ಹಿಂದಿನ ನಿಯಮದ ಜನಗಣತಿ ನಿಯಮ ಕಡೆಗಣಿಸಿದೆ; 1971 ರ ಜನಗಣತಿಯ ದತ್ತಾಂಶದ ಬದಲು 2011 ರ ಜನಗಣತಿಯ ದತ್ತಾಂಶವನ್ನು ಬಳಸಿದೆ. ಜನಸಂಖ್ಯಾ ನಿಯಂತ್ರದ ಕುಟುಂಬ ಯೋಜನೆಯ ಕಾರ್ಯಕ್ರಮಗಳನ್ನು ಸಮರ್ಥವಾಗಿ ಜಾರಿ ತಂದಿರುವುದಕ್ಕೆ ದಕ್ಷಿಣ ಬಾರದ ರಾಜ್ಯಗಳಿಗೆ ಶಿಕ್ಷೆ ವಿಧಿಸಿದಂತಾಗಿದೆ ಎಂದು ದೂರಿದ್ದಾರೆ. 1971 ರಿಂದ ಉತ್ತರ ಭಾರತಕ್ಕ ಹೋಲಿಸಿದರೆ ದಕ್ಷಿಣದ ರಾಜ್ಯಗಳಲ್ಲಿ ಜನಸಂಖ್ಯೆಯು ಕುಗ್ಗುತ್ತಿರುವ ಕಾರಣ ಇದು "ಯೂನಿಯನ್ ತೆರಿಗೆ ಆದಾಯದ ಮೊತ್ತದ ಹುಂಡಿ"ಯಲ್ಲಿ ದಕ್ಷಿಣ ಭಾರತದ ಪಾಲನ್ನು ಕಡಿತಗೊಳಿಸುತ್ತದೆ ಎಂದು ದಕ್ಷಿಣದ ರಾಜಕಾರಣಿಗಳು ಹೇಳಿದ್ದಾರೆ.
  • ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್ವಾದಿ) ಕೇಂದ್ರ ಸಮಿತಿ ಸದಸ್ಯ ಮತ್ತು ಕೇರಳ ಹಣಕಾಸು ಸಚಿವ ಟಿ. ಎಂ. ಥಾಮಸ್ ಇಸಾಕ್ ಅವರು ಆಯೋಗದ ನೀತಿ ನಿಯಮಾವಳಿ (ಟಿ.ಒ.ಆರ್) ಬಗ್ಗೆ ಚರ್ಚಿಸಲು ಹತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಹಣಕಾಸು ಮಂತ್ರಿಗಳ ಸಭೆಯನ್ನು ಕರೆಯಲು ಸೂಚಿದರು.
  • ಒಟ್ಟಿನಲ್ಲಿ ದಕ್ಷಿಣದ ರಾಜ್ಯಗಳು ಜನಸಂಖ್ಯೆಯನ್ನು ನಿಯಂತ್ರಿಸಿ ಆದಾಯವನ್ನು ಹೆಚ್ಚಿಸಿಕೊಂಡರೂ, ಕೇಂದ್ರದಿಂದ ರಾಜ್ಯಗಳಿಗೆ ಸಲ್ಲಬೇಕಾದ ಪಾಲಿನಲ್ಲಿ ಉತ್ತರದ ರಾಜ್ಯಗಳು ಕೇಂದ್ರದ ಹೊಸ ನೀತಿಯಿಂದ ಹೆಚ್ಚು ಲಾಭ ಪಡೆಯುತ್ತವೆ ಮತ್ತು ದಕ್ಷಿಣದ ರಾಜ್ಯಗಳು ಪಡೆಯಬೇಕಾದುದಕ್ಕಿಂತ ಕಡಿಮೆ ಅನುದಾನ ಪಡೆಯುತ್ತವೆ.

ನಗದು ಚಲಾವಣೆಯಲ್ಲಿ ಹೆಚ್ಚಳ

  • ನಗದು ಬಳಕೆನ್ನು ಕಡಿಮೆಮಾಡಿ ಡಿಜಿಟಲ್‌ ವ್ಯವಹಾರ ಹೆಚ್ಚಿಸುವುದು 2016ರ ನವೆಂಬರ್‌ 8ರಂದು ಜಾರಿಮಾಡಿದ ನೋಟು ರದ್ದತಿಯ ಉದ್ದೇಶಗಳಲ್ಲಿ ಒಂದಾಗಿತ್ತು. ಆದರೆ ನಗದು ರಹಿತ (ಡಿಜಿಟಲ್‌) ವಹಿವಾಟು ಹೆಚ್ಚದೆ ದೇಶದಲ್ಲಿ ನಗದು ಚಲಾವಣೆಯು ಶೇ 17ರಷ್ಟು ಏರಿಕೆ ಆಗಿದೆ. ೨೦೧೯ ರ ವರ್ಷದ ಮಾರ್ಚ್‌ ಅಂತ್ಯದ ವೇಳೆಗೆ ಆರ್‌ಬಿಐನ ವಾರ್ಷಿಕ ವರದಿಯಂತೆ ರೂ. 21.10 ಲಕ್ಷ ಕೋಟಿ ಮೊತ್ತದ ನೋಟುಗಳು ಚಲಾವಣೆಯಲ್ಲಿದ್ದವು. ರೂ.500 ಮುಖಬೆಲೆಯ ನೋಟುಗಳ ಚಲಾವಣೆ ಗರಿಷ್ಠಮಟ್ಟದ ಶೇ 51ರ ೨೦೧೯ ರ ಮಾರ್ಚಿಗೆ ಪ್ರಮಾಣದಷ್ಟಿತ್ತು.
  • ೨೦೧೯ರ ಹೊತ್ತಿಗೆ ನಕಲಿ ನೋಟು ಪತ್ತೆ: 3.17 ಲಕ್ಷ ನಕಲಿ ನೋಟುಗಳು ಪತ್ತೆಯಾಗಿವೆ. 2018ರಲ್ಲಿ 5.22 ಲಕ್ಷ ನಕಲಿ ನೋಟು ದೊರೆತಿದ್ದವು.

ಭಾರತ ಸಂವಿಧಾನದ ಲೇಖನ ೩೭೦ ಮತ್ತು ೩೫ ಎ ರದ್ದು

  • ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿ, ಮತ್ತು 35ಎ ವಿಧಿಯನ್ನು ರದ್ದುಪಡಿಸುವ ಶಿಫಾರಸಿಗೆ ಸುಗ್ರೀವಾಜ್ಞೆ ಮೂಲಕ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಂಕಿತ ಹಾಕುವ ಮೂಲಕ ರದ್ದುಪಡಿಸಿದರು. ೩೭೦ ನೇ ವಿಧಿಯನ್ನು ರದ್ದುಪಡಿಸುವ ಮತ್ತು ಜಮ್ಮು ಮತ್ತು ಕಾಶ್ಮೀರ ಪುನಾರಚನಾ ವಿಧೇಯಕ–2019 ವಿಧೇಯಕವನ್ನು ಆಗಸ್ಟ್ ೫, ೨೦೧೯ ರಂದು ಕೇಂದ್ರ ಗೃಹಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ಮಂಡಿಸಿದರು. ವಿಧೇಯಕಕ್ಕೆ ರಾಜ್ಯಸಭೆಯಲ್ಲಿ ಅಂಗೀಕಾರ ದೊರಕಿತು. ಇದು ದಿ ೬ ಆಗಸ್ಟ್ ೨೦೧೯ ಲೋಕಸಭೆ ಅಂಗೀಕರಿಸುವ ಮೂಲಕ ಅಧಿಸೂಚನೆಯ ಎರಡೂ ನಿಯಮಗಳು ಖಾಯಂ ಆಗಿ ರದ್ದಾಯಿತು. ನಿರ್ಣಯದ ಪರವಾಗಿ 351, ವಿರುದ್ಧವಾಗಿ 71 ಮತಗಳು ಚಲಾವಣೆಯಾದವು. ಒಬ್ಬರು ಗೈರಾಗಿದ್ದರು, ಒಟ್ಟು 424 ಮತಗಳು ಚಲಾವಣೆಯಾದವು

ಜಮ್ಮು ಮತ್ತು ಕಾಶ್ಮಿರ ಕೇಂದ್ರಾಡಳಿತ ಪ್ರದೇಶವಾಗಿ ಪುನಾರಚನೆ

ಭಾರತ ಗಣರಾಜ್ಯದ ಇತಿಹಾಸ - ಭಾಗ ೨ 
ಭಾರತ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಕ್ಷೆ
  • ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರ ಸರ್ಕಾರವು ಅಧಿಸೂಚನೆ ಮೂಲಕ ವಿಭಾಗಿಸಿ, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್‍ಗಳನ್ನು ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿದೆ. ಇದರಿಂದ ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ ಹೆಚ್ಚಿದೆ. ವಿಸ್ತೀರ್ಣದ ವಿಚಾರದಲ್ಲಿ ಕಾಶ್ಮೀರ ಈಗ ಅತಿದೊಡ್ಡ ಕೇಂದ್ರಾಡಳಿತ ಪ್ರದೇಶವಾಗಿದೆ. ಇದರ ಬಳಿಕ ಲಡಾಕ್ ದೊಡ್ಡ ಕೇಂದ್ರಾಡಳಿತ ಪ್ರದೇಶವಾಗಿದೆ. ಇದರಿಂದ ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ದೆಹಲಿ, ಪುದುಚೇರಿ, ದಿಯು ಮತ್ತು ದಮನ್, ದಾದ್ರಾ ಮತ್ತು ನಗರ ಹವೇಲಿ, ಚಂಡಿಗಡ, ಲಕ್ಷದ್ವೀಪ ಹಾಗೂ ಅಂಡಮಾನ್–ನಿಕೋಬಾರ್ ದ್ವೀಪ ಸಮೂಹಗಳು ಸದ್ಯ ಕೇಂದ್ರಾಡಳಿತಕ್ಕೆ ಒಳಪಟ್ಟಿವೆ. ದೆಹಲಿ ಹಾಗೂ ಪುದುಚೆರಿಯ ಜೊತೆಗೆ ಜಮ್ಮು–ಕಾಶ್ಮೀರ ವಿಧಾನಸಭೆ ಇರುವ ಕೇಂದ್ರಾಡಳಿತ ಪ್ರದೇಶವಾಗಿ ಸೇರ್ಪಡೆಯಾಗಿದೆ. ಮೊದಲಿನಂತೆ ವಿಧಾನಸಭೆ ಇರುವ ಕೇಂದ್ರಾಡಳಿತ ಪ್ರದೇಶಗಳಲ್ಲಿ ಲೆಫ್ಟಿನೆಂಟ್ ಗವರ್ನರ್ ಇರುತ್ತಾರೆ. ಈ ನಿಯಮ ರದ್ದಾದ ನಂತರ ಕಾಶ್ಮೀರದ ಪ್ರಜೆಗಳೂ ಭಾರತದ ಇತರ ರಾಜ್ಯಗಳ ಪ್ರಜೆಗಳಂತೆಯೇ ಹಕ್ಕು ಪಡೆಯುತ್ತಾರೆ. ವಿಶೇಷ ಹಕ್ಕುಗಳು ಇರುವುದಿಲ್ಲ. ಹಾಗೆಯೇ ಇತರ ರಾಜ್ಯಗಳ ಜನರಿಗೂ ಅಲ್ಲಿ ಎಲ್ಲಾ ಬಗೆಯ ಹಕ್ಕು ಇರುವುದು.
  • ಪೂರ್ವಾನ್ವಯವಾಗಿ ದಿ. 1919 ಅಕ್ಟೋಬರ್‌ 31ರಿಂದ ಜಾರಿಯಾಗುವಂತೆ ಜಮ್ಮು ಕಾಶ್ಮೀರ ಹಾಗೂ ಲಡಾಖ್‌ ಕೇಂದ್ರಾಡಳಿತ ಪ್ರದೇಶಗಳು ಅಸ್ತಿತ್ವಕ್ಕೆ ಬರುವಂತೆ ಜಮ್ಮು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸುವ ಮಸೂದೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು 9-8-2019 ಶುಕ್ರವಾರ ಸಹಿ ಮಾಡಿದ್ದಾರೆ.
  • ಈ ಆಜ್ಞೆಯಂತೆ ಜಮ್ಮು ಮತ್ತು ಕಾಶ್ಮೀರವು ಶಾಸನ ಸಭೆ ಸಹಿತವಾಗಿರುವ ಕೇಂದ್ರಾಡಳಿತ ಪ್ರದೇಶವಾಗಲಿದೆ. 'ಲಡಾಖ್‌' ಪ್ರದೇಶ ಚಂದಿಗಡದಂತೆ ಶಾಸನಸಭೆ ರಹಿತವಾದ ಕೇಂದ್ರಾಡಳಿತ ಪ್ರದೇಶವಾಗುವುದು. ಈಗ ಜಮ್ಮು ಕಾಶ್ಮೀರದ ಶಾಸನಸಭೆಯು ಗರಿಷ್ಠ 107 ಸದಸ್ಯರನ್ನು ಹೊಂದಿರುತ್ತದೆ. ಕ್ಷೇತ್ರ ಮರು ವಿಂಗಡಣೆಯ ಬಳಿಕ ಆ ಸಂಖ್ಯೆಯನ್ನು 114ಕ್ಕೆ ಹೆಚ್ಚಿಸಲು ಯೋಜಿಸಿದೆ. ಇಲ್ಲಿನ 24 ಕ್ಷೇತ್ರಗಳು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾಗದಲ್ಲಿ ಬರುವುದರಿಂದ ಅವು ಖಾಲಿ ಉಳಿಯುತ್ತವೆ. ಕಾರ್ಗಿಲ್‌ ಮತ್ತು ಲೇಹ್‌ ಜಿಲ್ಲೆಗಳನ್ನು ಲಡಾಖ್‌ ಪ್ರದೇಶ ಒಳಗೊಂಡಿರುತ್ತದೆ. ಇನ್ನು ಲೋಕಸಭೆಯಲ್ಲಿ ಜಮ್ಮು ಕಾಶ್ಮೀರದ ಐವರು ಸದಸ್ಯರು ಹಾಗೂ ಲಡಾಖ್‌ನ ಒಬ್ಬ ಪ್ರತಿನಿಧಿ ಇರುತ್ತಾರೆ

೨೦೧೯-೨೦ ರಲ್ಲಿ ದೇಶದ ಆರ್ಥಿಕ ಹಿನ್ನಡೆ

  • ಭಾರತೀಯ ಆರ್ಥಿಕತೆಯೊಳಗೆ ಬಿಕ್ಕಟ್ಟು ಉಂಟಾಗುತ್ತಿರುವುದು ಸರ್ವಾನುಮತದ ಅಂಗೀಕಾರವಾಗಿದೆ. 2018-19ರ ಆರ್ಥಿಕ ವರ್ಷಕ್ಕೆ (ಅಥವಾ ಆರ್ಥಿಕವರ್ಷ 19) ಆರ್‌ಬಿಐನ ಇತ್ತೀಚಿನ ವಾರ್ಷಿಕ ವರದಿಯು ಸಹ ಭಾರತೀಯ ಆರ್ಥಿಕತೆಯು ಹಿಂದೇಟು ಹೊಡೆದಿದೆ ಎಂದು ದೃಡಪಡಿಸಿತು. ಆರ್ಥಿಕತೆಯ ಜಿಡಿಪಿ ಬೆಳವಣಿಗೆಯ ದರವು ಆರ್ಥಿಕವರ್ಷ 2019-1920 ರ ಮೊದಲ ತ್ರೈಮಾಸಿಕದಲ್ಲಿ ಶೇಕಡಾ 5 ಕ್ಕೆ ಇಳಿದಿದೆ, ಇದು ಆರು ವರ್ಷಗಳಲ್ಲಿ ಅತ್ಯಂತ ಕಡಿಮೆ. ಇದು ಮುಂದೆ ಕಠಿಣ ಸಮಯದ ಸೂಚನೆಯಾಗಿತ್ತು. ಇದು ಆಟೋಮೊಬೈಲ್ ಕ್ಷೇತ್ರದ ಇತ್ತೀಚಿನ ಕುಸಿತವಾಗಲಿ ಅಥವಾ ಹೆಚ್ಚುತ್ತಿರುವ ನಿಷ್ಕ್ರಿಯ ಆಸ್ತಿಗಳ (ಎನ್‌ಪಿಎ) ಆಗಿರಲಿ.
  • 2019-1920 ರ ಮೊದಲ ತ್ರೈಮಾಸಿಕದಲ್ಲಿ ಭಾರತದ ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) 5% ಬೆಳವಣಿಗೆಯು ದೀರ್ಘಕಾಲದ ಮಂದಗತಿಯನ್ನು ಸೂಚಿಸಿತು ಮತ್ತು ಆರ್ಥಿಕತೆಯನ್ನು ಮಾನವ ನಿರ್ಮಿತ ಬಿಕ್ಕಟ್ಟಿನಿಂದ ಹೊರತೆಗೆಯಲು ವೆಂಡೆಟ್ಟಾ (ಹಿಂದಿನ ಸರ್ಕಾರದ ಮೇಲಿನ ದ್ವೇಷದ) ರಾಜಕೀಯವನ್ನು ತ್ಯಜಿಸುವ ಮೂಲಕ "ಆಲೋಚನಾ ಮನಸ್ಸಿನಲ್ಲಿ ತೊಡಗಿಸಿಕೊಳ್ಳಲು" ಸರ್ಕಾರವನ್ನು ಕೇಳಿದೆ. ಆರ್ಥಿಕತೆಯ ಸ್ಥಿತಿ "ಆಳವಾಗಿ ಚಿಂತಿಸುವಂತಿದೆ" ಮತ್ತು ಉತ್ಪಾದನಾ ಕ್ಷೇತ್ರದ ಶೂನ್ಯ% ಬೆಳವಣಿಗೆಯು "ನೋಟುರದ್ದತಿ ಪ್ರಮಾದಗಳು ಮತ್ತು ತರಾತುರಿಯಲ್ಲಿ ಜಾರಿಗೆ ತಂದ ಜಿಎಸ್ಟಿ" (“blunders of demonetisation and a hastily implemented GST.”) ಯಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಎಂದು ಸಾಬೀತುಪಡಿಸಿತು ಎಂದು ಮನಮೋಹನ ಸಿಂಗ್‌ ಅವರು ಹೇಳಿದರು.
  • ಭಾರತವು ಹೆಚ್ಚು ವೇಗವಾಗಿ ಬೆಳೆಯುವ ಸಾಮರ್ಥ್ಯವನ್ನು ಹೊಂದಿದೆ ಆದರೆ ಮೋದಿ ಸರಕಾರದ ಸರ್ವಾಂಗೀಣ ದುರುಪಯೋಗವು ಈ ಮಂದಗತಿಗೆ ಕಾರಣವಾಗಿದೆ, ”ಎಂದು ಸಿಂಗ್ ಅವರು ಹೇಳಿದರು. ಆರ್ಥಿಕ ಚೇತರಿಕೆಗೆ ಮನಮೋಹನ ಸಿಂಗ್‌ ನೀಡಿದ ಆರು ಪ್ರಮುಖ ಸಲಹೆಗಳನ್ನು ನೀಡಿದ್ದಾರೆ.1. ಜಿಎಸ್‌ಟಿ ಸರಳಗೊಳಿಸುವುದು; 2. ಕೃಷಿ ವಲಯದ ಸುಧಾರಣೆ; 3. ಬಂಡವಾಳ ಸೃಷ್ಟಿ: 4. ಉದ್ಯೋಗ ಸೃಷ್ಟಿಗೆ ಆದ್ಯತೆ: 5. ರಫ್ತು ಹೆಚ್ಚಳ: 6. ಮೂಲ ಸೌಕರ್ಯ ವೃದ್ಧಿ.
  • ಜಾಗತಿಕ ಮಟ್ಟದಲ್ಲಿ ಆಗಿರುವ ಆರ್ಥಿಕತೆಯು ಕುಸಿತದ ಪರಿಣಾಮಗಳು ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಗೋಚರಿಸುತ್ತಿವೆ. ಈ ಮಾರುಕಟ್ಟೆಯಲ್ಲಿ ಆರ್ಥಿಕತೆಯು ಹತ್ತು ವರ್ಷದ ಹಿಂದೆ ಇದ್ದ ಮಟ್ಟಕ್ಕೆ ಕುಸಿಯುವ ಸಾದ್ಯತೆ ಇದೆ ಎಂದು ಅಂತರರಾಷ್ಟ್ರೀಯ ಹಣಕಾಸು ನಿಧಿಯ (ಐಎಂಎಫ್‌) ವ್ಯವಸ್ಥಾಪಕ ನಿರ್ದೇಶಕಿ ಕ್ರಿಸ್ಟಲಿನಾ ಜಾರ್ಜೀವಾ ಹೇಳಿದ್ದಾರೆ. ಜಾಗತಿಕ ಸ್ಪರ್ಧಾತ್ಮಕ ಸೂಚ್ಯಂಕದಲ್ಲಿ ೧೯೧೯ ರಲ್ಲಿ ಭಾರತ ಹತ್ತು ಸ್ಥಾನ ಕುಸಿದಿದೆ.

೨೦೧೯ರ ಜಿ.ಡಿ.ಪಿ. ಕುಸಿತ

  • ಅಧಿಕೃತ ಮಾಹಿತಿಯ ಪ್ರಕಾರ 2019 ರ ಭಾರತದ ರಾಷ್ಟ್ರೀಯ ಉತ್ಪನ್ನ ಮತ್ತು ಆರ್ಥಿಕ ಬೆಳವಣಿಗೆಯು (India's GDP growth sinks further to 4.5% in second quarter) ಮತ್ತಷ್ಟು ಕುಸಿದು ಆರು ವರ್ಷಗಳ ಕನಿಷ್ಠ ಶೇಕಡಾ 4.5 ಕ್ಕೆ ತಲುಪಿತು..

ವಿದೇಶ ವ್ಯಾಪಾರದಲ್ಲಿ ವ್ಯಾಪಾರ ಕೊರತೆ

  • Regional Comprehensive Economic Partnership
  • Balance of trade
  • List of the largest trading partners of India
  • ಏಷ್ಯಾದ ರಾಷ್ಟ್ರಗಳು ಮತ್ತು ಭಾರತದ ನಡುವಣ ವ್ಯಾಪಾರ ಕೊರತೆ ಅಧಿಕ ಪ್ರಮಾಣದಲ್ಲಿದೆ. ಯಾವುದೇ ದೇಶವು ರಫ್ತು ಮಾಡುವ ಸರಕು ಮತ್ತು ಸೇವೆಗಳ ಮೊತ್ತಕ್ಕಿಂತ, ಆಮದು ಮಾಡಿಕೊಳ್ಳುವ ಸರಕು ಮತ್ತು ಸೇವೆಗಳ ಮೊತ್ತ ಅಧಿಕವಾಗಿದ್ದರೆ, ಅದನ್ನು ವ್ಯಾಪಾರ ಕೊರತೆ ಎನ್ನಲಾಗುತ್ತದೆ. ರಫ್ತು ಮೊತ್ತ ಮತ್ತು ಆಮದು ಮೊತ್ತದ ನಡುವಣ ವ್ಯತ್ಯಾಸ ಮೊತ್ತವೇ ವ್ಯಾಪಾರ ಕೊರತೆ ಅಥವಾ ವ್ಯಾಪಾರ ಹೆಚ್ಚುವರಿ. ಭಾರತವು 2018-19 ನೇ ಸಾಲಿನಲ್ಲಿ ಒಟ್ಟು ರೂ.12.31 ಲಕ್ಷಕೋಟಿ ವ್ಯಾಪಾರ ಕೊರತೆಯನ್ನು ಹೊಂದಿದೆ. ಏಷ್ಯಾದ ದೇಶಗಳೊಂದಿಗೆ ರೂ.7.1 ಲಕ್ಷಕೋಟಿಗಳ ವ್ಯಾಪಾರದ ಕೊರತೆ ಹೊಂದಿದೆ. ಅದರಲ್ಲಿ ಚೀನಾದ ಜೊತೆ ವ್ಯಾಪಾರದ ಕೊರತೆ ರೂ.3.71 ಲಕ್ಷ ಕೋಟಿ

ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (ಆರ್‌ಸಿಇಪಿ) ಒಪ್ಪಂದ

ಭಾರತ ಗಣರಾಜ್ಯದ ಇತಿಹಾಸ - ಭಾಗ ೨ 
16 ರಾಷ್ಟ್ರಗಳ ಮುಕ್ತ ವ್ಯಾಪಾರ ಸಂಘಟನೆಯ ರಾಷ್ಟ್ರಗಳು

ಕೆಲವು ಸರಕುಗಳನ್ನು ಸುಂಕರಹಿತ ವ್ಯಾಪಾರದಿಂದ ಹೊರಗೆ ಇಡಬೇಕು ಎಂದು ಅಂದಿನ ಭಾರತ ಸರ್ಕಾರ ಪ್ರತಿಪಾದಿಸಿತ್ತು. ನಂತರದ ಸರ್ಕಾರಗಳೂ ಇದನ್ನೇ ಪ್ರತಿಪಾದಿಸಿದವು. ಭಾರತದ ತಯಾರಿಕಾ ವಲಯ ಮತ್ತು ಹೈನುಗಾರಿಕೆಗೆ ಧಕ್ಕೆ ತರಲಿದೆ ಎಂಬ ಆತಂಕಕ್ಕೆ ಕಾರಣವಾಗಿತ್ತು. ಆದ್ದರಿಂದ ಅಂದಿನ ಪ್ರಧಾನ ಮಂತ್ರಿ ಮನಮೋಹನಸಿಂಗ್ ಆ ಒಪ್ಪಂದವನ್ನು ತಿರಸ್ಕರಿಸಿದ್ದರು. 2019ರ ನವೆಂಬರಿನಲ್ಲಿ ಏಷ್ಯಾದ ರಾಜ್ಯಗಳ ಜೊತೆ ಆರ.ಸಿ.ಇ.ಪಿ. ಪಪ್ಪಂದವಾಗಿ ಭಾರತ ಸೇರಿದರೆ ವಿದೇಶ ವ್ಯಾಪಾರ ಕೊರತೆ ಇನ್ನೂ ಹೆಚ್ಚುವ ಸಂಭವ ಇತ್ತು. ಮತ್ತೊಮ್ಮೆ 3 ನೇ ಆರ್‌ಸಿಇಪಿ ಶೃಂಗಸಭೆಯನ್ನು ಅಕ್ಟೋಬರ್ 31 ರಿಂದ 2019 ರ ನವೆಂಬರ್ 3 ರವರೆಗೆ ಥೈಲ್ಯಾಂಡ್‌ನಲ್ಲಿ 35 ನೇ ಆಸಿಯಾನ್ ಶೃಂಗಸಭೆಯೊಂದಿಗೆ ನಡೆಸಲಾಯಿತು. ಒಪ್ಪಂದದ ನಿಯಮಗಳನ್ನು ರಹಸ್ಯವಾಗಿಡಲಾಗಿತ್ತು. ಭಾರತದಲ್ಲಿ ಜನಾಭಿಪ್ರಾಯವನ್ನು ಪರಿಗಣಿಸಿ, ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ (ಆರ್‌ಸಿಇಪಿ) ಒಪ್ಪಂದವನ್ನು 2019 ಅಕ್ಟೋಬರ್ ನವೆಂಬರ್‍ನಲ್ಲಿ ನೆಡೆದ ಸಭೆಯ ನಂತರ, ಭಾರತ ತಿರಸ್ಕರಿಸಿತು.

ವಿತ್ತಕೊರತೆ ನೀಗಲು ರಿಸರ್ವ್‍ ಬ್ಯಾಂಕಿನ ಆಪದ್ಧನದ ಉಪಯೋಗ

  • 'ಮೋದಿಯವರು ರಿಸರ್ವ್ ಬ್ಯಾಂಕಿನ ಆಪತ್ತು ನಿಧಿ ಯಾ ರಿಸರ್ವ್‌ನಿಂದ ರೂ. 1.76 ಲಕ್ಷ ಕೋಟಿಯನ್ನು ತಮ್ಮ ಸರ್ಕಾರದ ವಶಕ್ಕೆ ತೆಗೆದುಕೊಂಡರು ಸರ್ಕಾರಕ್ಕೆ ಈ ದಾಖಲೆ ವರ್ಗಾವಣೆಯ ನಂತರ ಆರ್‌ಬಿಐನ ಸ್ಥಿತಿ ಮತ್ತು ಸ್ಥಿರತೆಯನ್ನು ಪರೀಕ್ಷೆಗೊಳಪಡಿಸಬೇಕು,' ಎಂದು ಆರ್‌ಬಿಐ ಮಾಜಿ ಗವರ್ನರ್ ಆಗಿರುವ ಡಾ. ಸಿಂಗ್ ಹೇಳಿದರು. ಹೇಳಿದರು.
  • ವಿತ್ತೀಯ ಕೊರತೆಯನ್ನು ಕಡಿಮೆ ಮಾಡಲು, ಕೇಂದ್ರ ಸರ್ಕಾರವು ಆರ್‌ಬಿಐನಿಂದ ಮಧ್ಯಂತರ ಲಾಭಾಂಶದ ರೂ.30 ಸಾವಿರ ಕೋಟಿಯನ್ನು ಪುನಃ ಪಡದಿದೆ.
  • ಕಳೆದ 70 ವರ್ಷಗಳಲ್ಲಿ ಆಗದ್ದು ನಿಜಕ್ಕೂ ಆಗಿದೆ. ಆರ್ಥಿಕತೆ ಹಿಂದೆಂದೂ ಎದುರಿಸದ ಸಂಕಷ್ಟ ಸ್ಥಿತಿಯನ್ನು ಈಗ ಎದುರಿಸುತ್ತಿದೆ. 70 ವರ್ಷಗಳಲ್ಲಿ ಕಾಣದ ದುರ್ದಿನಗಳನ್ನು ದೇಶದ ಆರ್ಥಿಕತೆ ಈಗ ಎದುರಿಸುತ್ತಿದೆ ಎಂದು ಹೇಳಿದ್ದು ಸ್ವತಃ ನೀತಿ ಆಯೋಗದ ಮುಖ್ಯಸ್ಥರು (ರಾಜೀವ್ ಕುಮಾರ್– 2019, ಆಗಸ್ಟ್ 23 & ಕೆ. ವಿ. ಸುಬ್ರಮಣಿಯನ್‌, ಮುಖ್ಯ ಆರ್ಥಿಕ ಸಲಹೆಗಾರ). ನೋಟು ರದ್ದತಿ ಮಾಡಿದ ಕಾಲದಲ್ಲಿ ಭ್ರಮೆಗಳಾದ ಮೋದಿಯವರು ಹೇಳಿದ, 'ಇನ್ನು ಮುಂದೆ ಭಾರತದಲ್ಲಿ ತೆರಿಗೆಗಳೇ ಇರುವುದಿಲ್ಲ, ಬದಲಿಗೆ ಬ್ಯಾಂಕ್ ವ್ಯವಹಾರದ ಮೇಲೆ ಹಾಕುವ ಸಣ್ಣ ಶುಲ್ಕವೇ ಖಜಾನೆ ತುಂಬಲಿದೆ; ಇನ್ನು ನಕಲಿ ನೋಟುಗಳೇ ಇರುವುದಿಲ್ಲ, ಇನ್ನು ಸರ್ಕಾರದ ಬಳಿ ಹಣದ ಕೊರತೆ ಎನ್ನುವುದೇ ಇರುವುದಿಲ್ಲ’ ಇತ್ಯಾದಿ ಘೋಷಣೆಯಿಂದ ಚುನಾವಣೆ ಗೆಲ್ಲಬಹುದು, ಅರ್ಥವ್ಯವಸ್ಥೆಯಲ್ಲಿ ಅವೆಲ್ಲಾ ಪ್ರಯೋಜನಕ್ಕೆ ಬರುವುದಿಲ್ಲ,' ಎಂದರು.

ಆರ್ಥಿಕ ಹಿಂಜರಿತ -ಕರ್ನಾಟಕದಲ್ಲಿ ೨೦ ಲಕ್ಷ ಉದ್ಯೋಗ ನಷ್ಟ

  • ಕರ್ನಾಟಕ ರಾಜ್ಯದಲ್ಲಿ 5-6 ಲಕ್ಷ ಸಣ್ಣ ಕೈಗಾರಿಕೆಗಳಿವೆ. ಆರ್ಥಿಕ ಹಿಂಜರಿತದ ಪರಿಣಾಮ ಈಗಾಗಲೇ ಸಾವಿರಾರು ಕೈಗಾರಿಕೆಗಳು ಬಾಗಿಲು ಮುಚ್ಚುವ ಹಂತಕ್ಕೆ ಬಂದಿವೆ. ಅವು ಪೂರ್ಣಪ್ರಮಾಣದಲ್ಲಿಮುಚ್ಚಿದರೆ ಮತ್ತು ದೇಶದಲ್ಲಿನ ಆರ್ಥಿಕ ಹಿಂಜರಿತಕ್ಕೆ ತಕ್ಷಣವೇ ತಡೆ ಬೀಳದಿದ್ದರೆ, ರಾಜ್ಯದ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿರುವ 20 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಕಳೆದುಕೊಳ್ಳಲಿದ್ದಾರೆ. ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಆರ್‌.ರಾಜು ಎಚ್ಚರಿಸಿದರು.

ತೆರಿಗೆ ರಿಯಾಯತಿ : ಆರ್ಥಿಕ ಕೊರತೆ

  • ಆರ್ಥಿಕತೆಯನ್ನು ಮೇಲೆತ್ತಲು ಕೇಂದ್ರ ಸರಕಾರ ದಿ.೨೧-೯-೨೦೧೯ ರಂದು ಅನೇಕ ಸುಧಾರಣ ಕ್ರಮಗಳನ್ನು ಘೋಷಿಸಿತು. ಕಾರ್ಪೊರೇಟ್‌ ತೆರಿಗೆ ಕಡಿತ ಮಾಡಿರುವುದರಿಂದ ದೇಶದ ತೆರಿಗೆ ಮೂಲದ ಆದಾಯದಲ್ಲಿ ಭಾರಿ ಪ್ರಮಾಣದ ಖೋತಾ ಆಗಲಿದೆ. ಇದರಿಂದ ಸರ್ಕಾರವು ನಿರೀಕ್ಷಿಸಿರುವುದಕ್ಕಿಂತಲೂ ಅಧಿಕ ಪ್ರಮಾಣದಲ್ಲಿ ಮುಂದೆ ದೇಶದಲ್ಲಿ ಆರ್ಥಿಕ ಕೊರತೆ ತಲೆದೋರಲಿದೆ ಎಂಬುದು ತಜ್ಞರಅಭಿಪ್ರಾಯ. ಆದರೆ ದಿರ್ಘಾವಧಿಯಲ್ಲಿ ಆರ್ಥಿಕತೆಯ ಉತ್ತೇಜನಕ್ಕೆ ಈ ಕ್ರಮ ನೆರವಾಗಬಹುದು ಎಂದು ತಜ್ಞರು ಹೇಳಿದರು. ಅದು ಎಲ್ಲಾ ರಾಜ್ಯಗಳ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ, ಎಂದು ಆರ್ಥಿಕ ವಹಿವಾಟು ರೇಟಿಂಗ್ ಸಂಸ್ಥೆ ಇಕ್ರಾ ಅಭಿಪ್ರಾಯಪಟ್ಟಿದೆ.

ಜಾಗತಿಕ ಹಸಿವು ಸೂಚ್ಯಂಕ ೨೦೧೯

  • ಜಾಗತಿಕ ಹಸಿವು ಸೂಚ್ಯಂಕದಲ್ಲಿ ಭಾರತವು 2019ರಲ್ಲಿ 102ನೇ ಸ್ಥಾನಕ್ಕೆ ಇಳಿದಿದೆ. 2015ರಲ್ಲಿ ಭಾರತವು 93ನೇ ಸ್ಥಾನದಲ್ಲಿತ್ತು; ೨೦೧೯ ರಲ್ಲಿ ಚೀನಾ (25), ಶ್ರೀಲಂಕಾ (66), ನೇಪಾಳ (73), ಬಾಂಗ್ಲಾದೇಶ (88) ಮತ್ತು ಪಾಕಿಸ್ತಾನ (94) ಭಾರತಕ್ಕಿಂತ ಉತ್ತಮ ಸ್ಥಾನದಲ್ಲಿವೆ.

ಅತಿವೃಷ್ಠಿ ೨೦೧೯

  • 2019 Indian floods
  • ೨೦೧೯ರಲ್ಲಿ ಬಾರತ ಅತಿವೃಷ್ಠಿಯಿಂದ ನರಳಿತು. 25 ವರ್ಷಗಳಲ್ಲಿ ಅತಿ ಹೆಚ್ಚು ಮಳೆಯ ವರದಿಯಾಯಿತು; ಕೇರಳ -101 ಮೃತ, ಎರಡು ಲಕ್ಷ ಜನರನ್ನು ಸ್ಥಳಾಂತರಿಸಲಾಗಿತ್ತು ;ಕರ್ನಾಟಕದಲ್ಲಿ 76 ಜನ ಮೃತಪಟ್ಟಿದ್ದಾರೆ, 2,00,000 ಮಂದಿ ಮನೆಮಠಕಳೆದುಕೊಂಡರು.; ಪಶ್ಚಿಮ ಮಹಾರಾಷ್ಟ್ರದಲ್ಲಿ 4.24 ಲಕ್ಷಕ್ಕೂ ಹೆಚ್ಚು ಜನರನ್ನು ಅತವೃಷ್ಠಿ ಬಾಧಿಸಿತು. ಮಳೆ ಸಂಬಂಧಿತ ಘಟನೆಗಳಲ್ಲಿ ಸುಮಾರು 4,00,000 ಜನರನ್ನು ಸ್ಥಳಾಂತರಿಸಲಾಯಿತು ಮತ್ತು 30 ಜನರು ಸಾವನ್ನಪ್ಪಿದರು.
  • ಆಗಸ್ಟ್ ಮೊದಲ ವಾರದಲ್ಲಿ ಒಡಿಶಾದಲ್ಲಿ ಭಾರಿ ಮಳೆಯಿಂದಾಗಿ ಪ್ರವಾಹ ಉಂಟಾಯಿತು 1012 ಹಳ್ಳಿಗಳಲ್ಲಿ ಸುಮಾರು 1,30,000 ಜನರು ಮತ್ತು 9 ಜಿಲ್ಲೆಗಳ 5 ನಗರಗಳು ಬಾಧಿತವಾದವು. ಆಂಧ್ರಪ್ರದೇಶದಲ್ಲಿ ಗೋದಾವರಿ ನದಿಯಿಂದ ಪ್ರವಾಹ ಉಂಟಾಗಿ ಪೂರ್ವ ಗೋದಾವರಿ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಯ 74,000 ಜನರು ಹಾನಿಗೊಳಗಾಗಿದ್ದಾರೆ. ಪಂಜಾಬ್ ಜಾನುವಾರುಗಳ ನಷ್ಟದ ಒಟ್ಟು ಮೌಲ್ಯವನ್ನು 1.2 ಕೋಟಿ ರೂ.ಗೆ ನಿಗದಿಪಡಿಸಲಾಗಿದೆ ಮತ್ತು ವೈಯಕ್ತಿಕ ಆಸ್ತಿಗಳು, ಸೇತುವೆಗಳು, ಕಾಲುವೆಗಳು, ರಸ್ತೆಗಳು ಮತ್ತು ಸಾರ್ವಜನಿಕ ಕಟ್ಟಡಗಳು ಸೇರಿದಂತೆ ನೂರಾರು ಕೋಟಿ ಮೌಲ್ಯದ ಮೂಲಸೌಕರ್ಯಗಳು ನಾಶವಾದವು. ಆರು ರಾಜ್ಯಗಳಲ್ಲಿ (ಕೇರಳ, ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ಮಧ್ಯಪ್ರದೇಶ ಮತ್ತು ಗುಜರಾತ್) 42,000 ಕ್ಕೂ ಹೆಚ್ಚು ಜನರನ್ನು ಎನ್‌ಡಿಆರ್‌ಎಫ್ ರಕ್ಷಿಸಿದೆ.
  • ಕರ್ನಾಟಕ ಒಂದು ರಾಜ್ಯದಲ್ಲಿ ಅತಿವೃಷ್ಟಿಯಿಂದ ಅಂದಾಜು ಒಂದು ಲಕ್ಷ ಕೋಟಿ ರೂ.ನಷ್ಟವಾಗಿದೆ ಎಂದು ಅಂದಾಜು ಮಾಡಿದರು. ಮಾನವ ಸಾವು: 61; ಜನರು ಕಾಣೆಯಾದವರು: 15; ಪ್ರಾಣಿಗಳ ಸಾವು: 859; ಜನರ ಸ್ಥಳಾಂತರ: 697948; ಸುಮಾರು 10 ಲಕ್ಷಜನ ಸಂಕಷ್ಟಕ್ಕೆ ಸಿಕ್ಕಿದರು. ಪರಿಹಾರಕ್ಕೆ ಕೇಂದ್ರ ಸರಕಾರ 1,200 ಕೋಟಿ ರೂ. ಮಾತ್ರಾ ಬಿಡುಗಡೆ ಮಾಡಿತು. ದೇಶದ ಆರ್ಥಿಕ ಬಿಕ್ಕಟ್ಟು ಕೇಂದ್ರದ ಆಪತ್ತು ಪರಿಹಾರ ನಿಧಿ ಬಿಡುಗಡೆಗೂ ಕಷ್ಟತಂದಿದೆ.

ಚಾದ್ರಯಾನ ೨

ಭಾರತ ಗಣರಾಜ್ಯದ ಇತಿಹಾಸ - ಭಾಗ ೨ 
ಚಂದ್ರಯಾನ್ -2 ಲಿಫ್ಟಿಂಗ್ ಆಫ್; 2019 ಜುಲೈ 22 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜಿಎಸ್ಎಲ್ವಿ-ಎಂಕೆ III ಲಾಂಚರ್‌ನಲ್ಲಿ ರೀಡ್‌ ಚಂದ್ರಯಾನ್ -2 ಕೋಶ ಉಡಾವಣೆ.
ಭಾರತ ಗಣರಾಜ್ಯದ ಇತಿಹಾಸ - ಭಾಗ ೨ 
ಚಂದ್ರಯಾನ್ -2 ಲ್ಯಾಂಡರ್ ಮತ್ತು ಆರ್ಬಿಟರ್ ಇಂಟಿಗ್ರೇಟೆಡ್ ಸ್ಟ್ಯಾಕ್
  • 2019 ಜುಲೈ 22 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜಿಎಸ್ಎಲ್ವಿ-ಎಂಕೆ III ಲಾಂಚರ್‌ನಲ್ಲಿ ರೀಡ್‌ ಚಂದ್ರಯಾನ್ -2 ಅನ್ನು ಉಡಾವಣೆ ಮಾಡಲಾಯಿತು. ಇಲ್ಲಿಯವರೆಗೆ, ಬಾಹ್ಯಾಕಾಶ ನೌಕೆ ತನ್ನ ಎಲ್ಲಾ ಕುಶಲತೆಯನ್ನು ಹೆಚ್ಚಿನ ನಿಖರತೆಯಿಂದ ಕೈಗೊಂಡಿದೆ. ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿನ ಅಂತಿಮ ಸಾಫ್ಟ್-ಲ್ಯಾಂಡಿಂಗ್/ ಮೃದು-ಇಳಿಯುವಿಕೆಯ ಉದ್ದೇಶ/ಯೋಜನೆ ಆಗಿತ್ತು.
  • ಚಂದ್ರಯಾನ-2ರ ಲ್ಯಾಂಡರ್ 'ವಿಕ್ರಮ್' 7-9-2019 ಶನಿವಾರ ಬೆಳಗಿನಜಾವ 1.55ಕ್ಕೆ ಚಂದ್ರನ ನೆಲ ಸ್ಪರ್ಶ ಮಾಡುವ ಸಮಯದ ಕೊನೆಯ ಹಂತದಲ್ಲಿ ಸಂಪರ್ಕ ಕಡಿದುಕೊಂಡಿತು. ಇದರಿಂದ ಚಂದ್ರನ ಈ ಅನ್ವೇಶಣೆಯ ಯೋಜನೆ ಯಶಸ್ವಿ ಆಯಿತೇ ಇಲ್ಲವೇ ಎಂಬುದು ತಿಳಿಯದು. ಚಂದ್ರನ ಮೇಲೆ ಇಳಿಯಲು 2.1 ಕಿ.ಮೀ. ದೂರದಷ್ಟು ಎತ್ತರದಲ್ಲಿದ್ಧಾಗ ವಿಕ್ರಮ ಅವತರಣ ಸಾದನವು ಸಂಪರ್ಕವನ್ನು ಕಡಿದುಕೊಂಡಿತು. ಅದು ಎಲ್ಲಿ ಇಳಿಯಬೇಕು ಎಂಬ ಗುರಿ ಇತ್ತೋ ಅಲ್ಲಿ ಇಳಿಯಲಿಲ್ಲ. ಆದರೆ, ಅದನ್ನು ಹೊತ್ತು ತಂದ ಆರ್ಬಿಟರ್ ಉತ್ತಮವಾಗಿ ಚಂದ್ರನನ್ನು ಪರಿಭ್ರಮಣ ಮಾಡುತ್ತಿದೆ. ಲ್ಯಾಂಡರ್ 'ವಿಕ್ರಮ್' ಚಂದ್ರನ ನೆಲ ಸ್ಪರ್ಶ ಮಾಡುವಾಗ ಕೊನೆಯ ಹಂತ ಸಮಯ ದಿ ೭-೯-೨೦೧೯ ಬೆಳಿಗಿನಜಾವ 02: 25ಗಂಟೆ. ಆಗ ಭೂಮಿಯ ಸಂಪರ್ಕ ಕಡಿದುಕೊಂಡಿತು. ಆದರೂ ಮೊದಲ ಪ್ರಯತ್ನದ ಈ ಸಾಧನೆ ೯೦% ಯಶಸ್ವಿ ಎಂದೇ ಪರಿಗಣಿಸಲಾಯಿತು..

ಅಯೋಧ್ಯೆಯ ರಾಮಮಂದಿರದ ವಿವಾದದ ತೀರ್ಪು

134 ವರ್ಷಗಳಲ್ಲಿ ನಾನಾ ಹಂತದ ನ್ಯಾಯಾಲಯಗಳಳ್ಲಿ ವಿಚಾರಣೆಗೆ ಗುರಿಯಾಗಿದ್ದ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಭೂವಿವಾದದ ಕುರಿತು ದಿ. 9, ನವೆಂಬರ್ 2019 ರಂದು ರಾಮಜನ್ಮಭೂಮಿ, ಬಾಬ್ರಿ ಮಸೀದಿ ಭೂ ವಿವಾದದ ಕುರಿತಂತೆ ಭಾರತದ ಸುಪ್ರೀಮ್ ಕೋರ್ಟಿನ ಸಿಜೆಐ ರಂಜನ್ ಗೋಗೊಯಿ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠ ತೀರ್ಪಿನ್ನು ನೀಡಿತು. ರಾಮಮಂದಿರ ನಿರ್ಮಾಣಕ್ಕೆ ಟ್ರಸ್ಟ್‌ ರಚಿಸಲು ಮತ್ತು ವಿವಾದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅನುಮತಿ ಮತ್ತು ಮಸೀದಿಗೆ ಪರ್ಯಾಯ ಭೂಮಿ ನೀಡಲು ಸರ್ಕಾರಕ್ಕೆ 3–4 ತಿಂಗಳ ಗಡುವನ್ನು ಸುಪ್ರೀಂ ಕೋರ್ಟ ವಿಧಿಸಿದೆ. ರಾಮಮಂದಿರ ನಿರ್ಮಾಣ ಹೊಣೆಯನ್ನು ಸರ್ಕಾರಕ್ಕೂ, ಅದರ ನಿರ್ವಹಣೆ ಹೊಣೆಯನ್ನು ಟ್ರಸ್ಟ್‌ಗೂ ನೀಡುವಂತೆ ಸರ್ಕಾರಕ್ಕೆ ಆದೇಶ ನೀಡಿದೆ.

ತೀರ್ಪಿನ ಮುಖ್ಯಾಂಶಗಳು

  • 1992 ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ನಂತರದಲ್ಲಿ ಒಟ್ಟು 67 ಎಕರೆಯಲ್ಲಿ 64.3 ಎಕರೆ ಭೂಮಿಯನ್ನು ಸರ್ಕಾರ ವಶಪಡಿಸಿಕೊಂಡಿತ್ತು. ಉಳಿದ ಕೇವಲ 2.7 ಎಕರೆ ಭೂಮಿಯಷ್ಟೇ ವಿವಾದಾತ್ಮಕ ಸ್ಥಳವಾಗಿದ್ದು, ಉಳಿದವು ವಿವಾದಮುಕ್ತವಾಗಿತ್ತು.
    ತೀರ್ಪಿನ ಮುಖ್ಯಾಂಶಗಳು:
  • ಅಯೋಧ್ಯೆಯ ವಿವಾದಿತ ಭೂಮಿ 2.7 ಎಕರೆ ರಾಮಜನ್ಮಭೂಮಿ ನ್ಯಾಸ ಟ್ರಸ್ಟಿಗೆ ನೀಡುವುದು.
  • ಕೇಂದ್ರ ಸರ್ಕಾರ ವಶದಲ್ಲಿದ್ದ 64.3 ಎಕರೆ ಭೂಮಿಯಲ್ಲಿ ಸುನ್ನಿ ವಕ್ಫ್ ಬೋರ್ಡಿಗೆ 5 ಎಕರೆ ನೀಡುವುದು.
  • ವಿವಾದಿತ ರಾಮಮಂದಿರ ನಿರ್ಮಾಣ ಮಾಡಲು ರಾಮಜನ್ಮಭೂಮಿ ನ್ಯಾಸ್ ಅಲ್ಲದೆ ಸರ್ಕಾರ ಪ್ರತ್ಯೇಕ ಟ್ರಸ್ಟ್ ರಚನೆ ಮಾಡಬೇಕು. ಮಸೀದಿಗೆ ಪರ್ಯಾಯ ಭೂಮಿಯನ್ನು 3 ರಿಂದ 4 ತಿಂಗಳುಗಳಲ್ಲಿ ಸರ್ಕಾರವು ನೀಡಬೇಕು.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಿಂದ ಉನ್ನತ ಮಟ್ಟದ ಉಪಗ್ರಹ ಉಡಾವಣೆ

  • ಇಸ್ರೊಸಂಸ್ಥೆಯು ಅತ್ಯಾಧುನಿಕ ಮತ್ತು ಮೂರನೇ ತಲೆಮಾರಿನ ಭೂಪರಿವೀಕ್ಷಣಾ ಉಪಗ್ರಹ ‘ಕಾರ್ಟೊಸ್ಯಾಟ್‌–3’ನ್ನು ದಿ.27-11-2019 ರಂದು ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. ಇದು ಭೂಪರಿವೀಕ್ಷಣಾ ಉಪಗ್ರಹಗಳಲ್ಲೇ ಅತ್ಯಂತ ಉತ್ತಮ (ಹೈರೆಸಲ್ಯೂಷನ್) ಚಿತ್ರಗಳನ್ನು ಕೊಡುವ ಸಾಮರ್ಥ್ಯವನ್ನು ಹೊಂದಿದೆ. 1625 ಕೆಜಿ ತೂಕದ ಕಾರ್ಟೊಸ್ಯಾಟ್ -3 ಹಿದಿನದಕ್ಕಿಂತ ಸುಧಾರಣೆಹೊಂದಿದ ಉಪಗ್ರಹವಾಗಿದ್ದು, ಇದು 5 ವರ್ಷಗಳ ಕಾಲ ಕೆಲಸ ಮಾಡುವುದು.
  • ಇದು ಭೂಮಿಯ ಚಿತ್ರ ಹಾಗೂ ನಕ್ಷೆಗೆ ಸಂಬಂಧಿಸಿದ ಕಾರ್ಟೊಸ್ಯಾಟ್‌-3 ಸೇರಿದಂತೆ ಅಮೆರಿಕದ 13 ಮೈಕ್ರೋ ಉಪಗ್ರಹಗಳನ್ನ ಆಕಾಶಕ್ಕೆ ಕಳುಹಿಸಿದೆ. ಹೆಚ್ಚಿನ ಸ್ಪಷ್ಟತೆಯ ಫೋಟೊಗಳನ್ನು ಸೆರೆ ಹಿಡಿಯುವ ಸಾಮರ್ಥ್ಯವಿದೆ 3ನೇ ತಲೆಮಾರಿನ ಉಪಗ್ರಹ ಕಾರ್ಟೊಸ್ಯಾಟ್‌-3 ಒಟ್ಟು 14 ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿ-ಸಿ47 ರಾಕೆಟ್‌ ಮೂಲಕ ಕಕ್ಷೆಗೆ ಸೇರಿಸಿತು.

'ಭಾರತ್‌ಮಾಲಾ ಪರಿಯೋಜನಾ’ ಹೆದ್ದಾರಿ ಯೋಜನೆ

  • Bharatmala
  • ಭಾರತ್ಮಾಲಾ ಪರಿಯೋಜನ (ಪ್ರಾಜೆಕ್ಟ್) ಭಾರತ ಸರ್ಕಾರದ ಕೇಂದ್ರ-ಪ್ರಾಯೋಜಿತ ಮತ್ತು ಅನುದಾನಿತ ರಸ್ತೆ ಮತ್ತು ಹೆದ್ದಾರಿಗಳ ಯೋಜನೆ. ಅದು 83,677 ಕಿಮೀ (51,994 ಮೈಲಿ) ಉದ್ದೇಶಿತ ಹೊಸ ಹೆದ್ದಾರಿಗಳ ಒಟ್ಟು ಹೂಡಿಕೆಯು ರೂ.5.35 ಲಕ್ಷ ಕೋಟಿ (ಯುಎಸ್ $ 77 ಬಿಲಿಯನ್) ಎಂದು ಅಂದಾಜಿಸಲಾಗಿದೆ. ಇದು ಸರ್ಕಾರಿ ರಸ್ತೆ ನಿರ್ಮಾಣ ಯೋಜನೆಗೆ (ಡಿಸೆಂಬರ್ 2017 ರಂತೆ) ಏಕೈಕ ಅತಿದೊಡ್ಡ ವಿನಿಯೋಗವಾಗಿದೆ. ಈ ಯೋಜನೆ ಹೆಚ್ಚಾಗಿ ಉತ್ತರಭಾರತದ ನಗರಗಳನ್ನು ಜೊಡಿಸುವ ನಾಲ್ಕುಪಥ ಹೆದ್ದಾರಿ ಯೋಜನೆ.
  • ಯೋಜನೆಯ ಒಟ್ಟು ಬಂಡವಾಳ ವೆಚ್ಚವು ಸಿಸಿಇಎ ಅನುಮೋದನೆ ನೀಡಿರುವ ಮೊತ್ತದ ಶೇ 50ಕ್ಕಿಂತಲೂ ಹೆಚ್ಚಾಗಿದೆ. 6,361 ಕಿ.ಮೀ. ಯೋಜನೆಗೆ ಭಾರತ್‌ಮಾಲಾ ಅಡಿ Rs.1.475 ಲಕ್ಷ ಕೋಟಿ ಅಂದಾಜು ವೆಚ್ಚ. ಈ ಪೈಕಿ, Rs.1.03 ಲಕ್ಷ ಕೋಟಿ ಮೌಲ್ಯದ 4,383 ಕಿ.ಮೀ. ರಸ್ತೆ ನಿರ್ಮಾಣ ಯೋಜನೆಯೂ ಸೇರಿದೆ.
  • ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ‘ಭಾರತ್‌ಮಾಲಾ ಪರಿಯೋಜನಾ’ ಹೆದ್ದಾರಿ ಯೋಜನೆಯ ಕಾಮಗಾರಿ, ವರದಿಯ ಪ್ರಕಾರ, ಭೂಸ್ವಾಧೀನಕ್ಕೇ ಹೆಚ್ಚು ವೆಚ್ಚ ತಗಲುತ್ತಿದೆ. ಪ್ರತಿ ಕಿಲೋ ಮೀಟರ್ ರಸ್ತೆಯ ಭೂಸ್ವಾಧೀನ ಪ್ರಕ್ರಿಯೆಗೆ Rs.13.7 ಕೋಟಿ ಅನುಮೋದನೆ ನೀಡಲಾಗಿದ್ದು, ವಾಸ್ತವದಲ್ಲಿ ವೆಚ್ಚ Rs.17.3 ಕೋಟಿ ವೆಚ್ಚ ಮಾಡಲಾಗಿದೆ. ಇದೇ ರೀತಿ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ 1,978 ಕಿ.ಮೀ. ರಸ್ತೆ ನಿರ್ಮಾಣ ಯೋಜನೆಗೆ Rs.44,309 ಕೋಟಿ ಹೆಚ್ಚುವರಿ (ಪ್ರತಿ ಕಿ.ಮೀ.ಗೆ Rs.23.3 ಕೋಟಿ ಹೆಚ್ಚುವರಿ) ವೆಚ್ಚ ಅಂದಾಜಿಸಲಾಗಿದೆ. ಆದರೆ ಸಿಸಿಇಎ ಅನುಮೋದನೆ ನೀಡಿರುವ ಮೊತ್ತ ಪ್ರತಿ ಕಿ.ಮೀ.ಗೆ Rs.15 ಕೋಟಿ. ಹೀಗಾಗಿ ಹಣಕಾಸು ಗುರಿಯನ್ನು ಮೀರಿ ಯೋಜನೆ ಅನುಷ್ಠಾನ ಪ್ರಕ್ರಿಯೆ ನಡೆಯುತ್ತಿದೆ. ವರ್ಷದ ಗುರಿ ತಲುಪಲು ಕಷ್ಟ ಅಥವಾ ಅಸಾಧ್ಯ ಎನ್ನಲಾಗಿದೆ. ಪ್ರಸಕ್ತ 2019-20 ಹಣಕಾಸು ವರ್ಷದಲ್ಲಿ 8,134 ಕಿ.ಮೀ. ರಸ್ತೆ ನಿರ್ಮಾಣದ ಗುರಿ ಹಮ್ಮಿ ಕೊಳ್ಳಲಾಗಿತ್ತು. ಆದರೆ, ಸೆಪ್ಟೆಂಬರ್ ವೇಳೆಗೆ ಕೇವಲ 268 ಕಿ.ಮೀ. ರಸ್ತೆ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ. ಮೂಲ ಯೋಜನೆಯ ಯೋಜಿತ ವೆಚ್ಚಕ್ಕಿಂತ ವಾಸ್ತವ ವೆಚ್ಚ ಬಹಳ ಅಧಿಕವಾಗಿದೆ. ಹಾಗಾಗಿ ಹಣದ ಕೊರೆತೆಯಿಂದ ಯೋಜನೆ ಹಿಂದೆಬಿದ್ದಿದೆ.

ಕೃಷಿ ನೀತಿ

  • ಭಾರತದಲ್ಲಿ 2019 ರವರೆಗೆ ಜಾರಿಯಲ್ಲಿರುವ 1966ರ ಬೀಜ ಕಾಯ್ದೆಯ ನಿಯಮಗಳಂತೆ, ಸಂಕೀರ್ಣವಾಗಿ ಬೆಳೆದಿರುವ ಭಾರತದ ಇಂದಿನ ಬಿತ್ತನೆ ಬೀಜ ಕ್ಷೇತ್ರವನ್ನು ನಿರ್ವಹಿಸಲಾಗುತ್ತಿಲ್ಲ. ಹೀಗಾಗಿ ಈ ಕುರಿತ ಹೊಸ ಸಮಗ್ರ ಕಾನೂನೊಂದರ ಅವಶ್ಯಕತೆಯಿತ್ತು. ಈ ಉದ್ದೇಶದಿಂದ ಭಾರತ ಸರ್ಕಾರವು ‘ಬೀಜ ಮಸೂದೆ- 2019’ರೂಪಿಸಿದೆ. ಆದರೆ ಈ ಮಸೂದೆಯಲ್ಲಿ ರೈತರ ಬೀಜ-ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ಮತ್ತು ಬೀಜ ಉದ್ಯಮದ ಕಂಪನಿಗೆ ಹೆಚ್ಚು ಅಧಿಕಾರ ಕೊಡುವ ಸೂಚನೆಗಳು ಕಂಡಿವೆ.

ಪೌರತ್ವ (ತಿದ್ದುಪಡಿ) ಮಸೂದೆ 2019

  • ಪೌರತ್ವ (ತಿದ್ದುಪಡಿ) ಮಸೂದೆ, ೨೦೧೯
  • ಪೌರತ್ವ ಕಾಯ್ದೆ ೧೯೫೫ ರಲ್ಲಿ ತಿದ್ದುಪಡಿ ಮಾಡ ಮಸೂದೆ. ೧೯೯೫ರ ಪೌರತ್ವ ಕಾಯ್ದೆಗೆ ತಿದ್ದುಪಡಿ ಮಾಡುವ ಮಸೂದೆಯಾಗಿದ್ದು, ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರೈಸ್ತರಿಗೆ ಪೌರತ್ವ ನೀಡುವ ಉದ್ದೇಶವನ್ನು ಹೊಂದಿದೆ. ಆ ಆರು ಧರ್ಮದವರು ಭಾರತಕ್ಕೆ ೩೧ ಡಿಸೆಂಬರ್ ೨೦೧೪ ಅಥವಾ ಅದಕ್ಕಿಂತಲೂ ಮೊದಲು ಪ್ರವೇಶಿಸಿದವರಾಗಿದ್ದಲ್ಲಿ, ಅವರೆಲ್ಲರೂ ಭಾರತೀಯ ಪೌರತ್ವಕ್ಕೆ ಅರ್ಹರು. ಹಳೆಯ ಕಾಯ್ದೆ ಪ್ರಕಾರ 12 ಅಥವಾ ಅದಕ್ಕಿಂತ ಹೆಚ್ಚು ವರ್ಷ ವಾಸವಿದ್ದಲ್ಲಿ ಮಾತ್ರ ಭಾರತೀಯ ಪೌರತ್ವ ಪಡೆಯಲು ಅರ್ಹರಾಗಿದ್ದರು. ಆದರೆ ತಿದ್ದುಪಡಿ ಮಾಡಿ ರೂಪಿಸಲಾಗಿರುವ ಮಸೂದೆ ಅಡಿಯಲ್ಲಿ, ಇವರೆಲ್ಲಾ ಭಾರತದಲ್ಲಿ 6 ವರ್ಷ ವಾಸವಿದ್ದರೆ ಇಲ್ಲಿನ ಪೌರತ್ವ ಪಡೆಯಲು ಅರ್ಹರಾಗುತ್ತಾರೆ. ಯಾವುದೇ ಸೂಕ್ತ ದಾಖಲೆಗಳು ಇಲ್ಲದಿದ್ದರೂ ಅವರು ಪೌರತ್ವಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಆದರೆ ಇತರ ರಾಷ್ಟ್ರಗಳ ಮುಸ್ಲಿಮರಿಗೆ ಈ ಮಸೂದೆ ಅಡಿಯಲ್ಲಿ ಭಾರತ ಪೌರತ್ವ ನೀಡಲಾಗುವುದಿಲ್ಲ.
    • ಧರ್ಮದ ಆಧಾರದಲ್ಲಿ ನೆರೆ ರಾಷ್ಟ್ರಗಳಲ್ಲಿ ಕಿರುಕುಳಕ್ಕೊಳಗಾಗಿ ಭಾರತಕ್ಕೆ ಬಂದಿರುವ ಮುಸ್ಲಿಮೇತರ ವಲಸಿಗರು ಪೌರತ್ವಕ್ಕೆ ಅರ್ಹರಾಗಿದ್ದಾರೆ. ಆದರೆ, ಇಂತಹವರು 2014ರ ಡಿಸೆಂಬರ್‌ 31ರ ಮೊದಲು ಭಾರತಕ್ಕೆ ಬಂದಿರಬೇಕು. ಸಾಗರೋತ್ತರ ನಾಗರಿಕರ ನೋಂದಣಿಗೆ ಸಂಬಂಧಿಸಿದ ಪ್ರಸ್ತಾವವನ್ನೂ ಮಸೂದೆಯಲ್ಲಿ ಸೇರಿಸಲಾಗಿದೆ. ಸಾಗರೋತ್ತರ ನಾಗರಿಕ ಕಾರ್ಡ್ (ಓವರ್‌ಸೀಸ್ ಸಿಟಿಜನ್ ಆಫ್‌ ಇಂಡಿಯಾ/ಒಸಿಐ) ಹೊಂದಿರುವ ವ್ಯಕ್ತಿಯು ಮಸೂದೆಯಲ್ಲಿರುವ ಯಾವುದೇ ಅಂಶಗಳನ್ನು ಅಥವಾ ಅಸ್ತಿತ್ವದಲ್ಲಿರುವ ಕಾನೂನನ್ನು ಉಲ್ಲಂಘಿಸಿದ್ದರೆ ಆತನ ನೋಂದಣಿ ರದ್ದು ಮಾಡುವ ಬಗ್ಗೆ ಮಸೂದೆಯ ಸೆಕ್ಷನ್ 7ರ ಉಪ ವಿಭಾಗದಲ್ಲಿ (ಡಿ) ಉಲ್ಲೇಖಿಸಲಾಗಿದೆ
  • ಕೇಂದ್ರ ಸಚಿವ ಸಂಪುಟವು ೪ ಡಿಸೆಂಬರ್ ೨೦೧೯ ರಂದು ಅಂಗೀಕರಿಸಿದ ಈ ಮಸೂದೆಯನ್ನು ಡಿಸೆಂಬರ್ ೧೦ ರಂದು ಲೋಕಸಭೆಯು ಅಂಗೀಕರಿಸಿತು. ಹಾಗೂ ಡಿಸೆಂಬರ್ ೧೧ ರಂದು ರಾಜ್ಯಸಭೆಯು ಇದನ್ನು ಅಂಗೀಕಾರ ಮಾಡಿತು.
  • 2020ರ ಜನವರಿ 10ರಿಂದ ಸಿಎಎ ಅನುಷ್ಠಾನಗೊಂಡಿರುವುದಾಗಿ ಕೇಂದ್ರ ಸರ್ಕಾರ ಕಳೆದ ವಾರ ಗೆಜೆಟ್‌ ಅಧಿಸೂಚನೆ ಹೊರಡಿಸಿದೆ.

ವಿರೋಧ

ಭಾರತ ಗಣರಾಜ್ಯದ ಇತಿಹಾಸ - ಭಾಗ ೨ 
ಶಹೀನ್ ಬಾಗ್ ಪ್ರತಿಭಟನಾಕಾರರು ನವದೆಹಲಿಯ ಪ್ರಮುಖ ರಸ್ತೆಯನ್ನು 28 ದಿನಗಳ ಕಾಲ ನಿರ್ಬಂಧಿಸಿದ ಸಂದರ್ಭ-(ವಿಷುಯಲ್ 11 ಜನವರಿ 2020 ರಂದು)
  • ಈ ಮಸೂದೆಗೆ ಭಾರತದೇಶದ ಅನೇಕ ಕಡೆ ವಿರೋಧ ಮತ್ತು ಆಕ್ರೋಶ ವ್ಯಕ್ತವಾಗಿದೆ. ಈಶಾನ್ಯ ಭಾರತದ ಪ್ರಮುಖ ರಾಜ್ಯ ಅಸ್ಸಾಂನಲ್ಲಿ ಹೆಚ್ಚು ವಿರೋದವಿದ್ದು ವ್ಯಾಪಕವಾಗಿದೆ. ಪಶ್ಚಿಮ ಬಂಗಾಳದಲ್ಲಿಯೂ ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ ಅಸ್ಸಾಮಿಗರ ಪ್ರತಿರೋಧಕ್ಕೆ ಅದರ ಹಿಂದಿನ ಇತಿಹಾಸದ ಕಾರಣಗಳಿವೆ.
  • ವಿಶ್ವಸಂಸ್ಥೆ ತಾಕೀತು:-ಧರ್ಮದ ಆಧಾರದಲ್ಲಿ ಮುಸ್ಲಿಮೇತರ ಅಕ್ರಮ ವಲಸಿಗರಿಗೆ ಮಾತ್ರ ಪೌರತ್ವ ನೀಡುವ ಭಾರತದ ನಡೆಯ ಬಗ್ಗೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನ್ ತೀವ್ರ ಕಳವಳ ವ್ಯಕ್ತಪಡಿಸಿದೆ ಪೌರತ್ವ (ತಿದ್ದುಪಡಿ) ಮಸೂದೆಯು ಭಾರತದ ಸಂವಿಧಾನಕ್ಕೆ ಬದ್ಧವಾಗಿರುತ್ತದೆ ಎಂದು ನಿರೀಕ್ಷಿಸಿದ್ದೇವೆ’ ಎಂದು ಐರೋಪ್ಯ ಒಕ್ಕೂಟವು ಹೇಳಿಕೆ ನೀಡಿತ್ತು.

ವಿವಾದ ಮತ್ತು ಕಾರಣ

  • C.A.Act protests
  • "ಸಿಎಎ,( CAA:- Citizenship Amendment Act.) ಧರ್ಮದ ಆಧಾರದಲ್ಲಿ ಪೌರತ್ವ ನೀಡುವುದಿಲ್ಲ, ಧಾರ್ಮಿಕ ಕಿರುಕುಳಕ್ಕೊಳಗಾದ ಸಂತ್ರಸ್ತತೆಯ ಆಧಾರದಲ್ಲಿ ಪೌರತ್ವ ನೀಡುತ್ತದೆ; ಆದಕಾರಣ ಇಲ್ಲಿ ಸಂವಿಧಾನದ ಉಲ್ಲಂಘನೆಯ ಪ್ರಶ್ನೆಯೇ ಇಲ್ಲ" ಎಂದು ಸರ್ಕಾರ ಹೇಳುತ್ತಿದೆ. ಆದರೆ ಕಾಯ್ದೆಯಲ್ಲಿ ಎಲ್ಲಿಯೂ "ಧಾರ್ಮಿಕ ಕಿರುಕುಳಕ್ಕೊಳಗಾದ ಆಧಾರದ ಮೇಲೆ ವಲಸೆ ಬಂದ ಮುಸ್ಲಿಮೇತರರಿಗೆ ಪೌರತ್ವ ನೀಡಲಾಗುವುದು" ಎಂದು ಹೇಳಿಲ್ಲ. ಅದರಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಗಾನಿಸ್ತಾನದಿಂದ ಬಂದ ಹಿಂದೂ, ಬೌದ್ಧ, ಜೈನ, ಪಾರ್ಸಿ, ಸಿಖ್ ಮತ್ತು ಕ್ರೈಸ್ತ ಅಕ್ರಮವಾಸಿಗಳಿಗೆ ಆದ್ಯತೆಯ ಮೇಲೆ ಪೌರತ್ವ ನೀಡಲಾಗುವುದು ಎಂದು ಹೇಳಿದೆ. ಇದರ ಬದಲಿಗೆ "ಆ ದೇಶಗಳಿಂದ ಧಾರ್ಮಿಕ ಕಿರುಕುಳಕ್ಕೊಳಗಾಗಿ ಬಂದವರಿಗೆ" ಎಂದು ಸ್ಪಷ್ಟವಾಗಿ ಹೇಳಿದ್ದರೆ ಮತ್ತು ಆ ಕಾರಣಕ್ಕೋಸ್ಕರ ಬಹಳಷ್ಟು ಮುಸ್ಲಿಮರು ಈ ಕಾಯ್ದೆಯಡಿ ಅನುಕೂಲ ಪಡೆಯಲು ಅನರ್ಹರಾಗಿದ್ದರೆ, ಆಗ ಸಂವಿಧಾನದ ಉಲ್ಲಂಘನೆಯ ಪ್ರಶ್ನೆಯೇ ಬರುತ್ತಿರಲಿಲ್ಲ. ಇಡೀ ಪ್ರಕ್ರಿಯೆಯಲ್ಲಿ, 'ದೇಶವಾಸಿಗಳೂ ಅಕ್ರಮವಾಸಿಗಳೆಂದು ಪರಿಗಣಿಸಲ್ಪಟ್ಟು, ಅಕ್ರಮ ವಲಸಿಗರನ್ನು ಇರಿಸುವ ಯೋಜಿತ ಬಂಧನಗೃಹ ಕೇಂದ್ರದಲ್ಲಿ ಈ ವಸತಿಯ ದಾಖಲೆ ಇಲ್ಲದ ದೇಶವಾಸಿಗಳನ್ನೂ ಸೇರಿಸಿ ಅನಿರ್ದಿಷ್ಟಕಾಲ ಕೊಳೆಹಾಕುವ ಅಪಾಯವೂ ಇದೆ,' ಎನ್ನುವ ಅಂಶವನ್ನು ಅಸ್ಸಾಂನಲ್ಲಿ ನಡೆದ ಎನ್ಆರ್‌ಸಿ (National Register of Citizens) ತೋರಿಸಿಕೊಟ್ಟಿದೆ.(ನಾಜಿ ಹಿಟ್ಲರ್‍ ಯಹೂದ್ಯರಿಗೆ ಹೀಗೆ ಮಾಡಿದ್ದ)
  • ಎಲ್ಲಾ ಶ್ರೀಮಂತ ದೇಶಗಳಲ್ಲೂ ಅಕ್ರಮವಾಗಿ ನೆಲೆಸಿದ ಲಕ್ಷಲಕ್ಷ ಭಾರತೀಯರಿದ್ದಾರೆ ‘ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯಲ್ಲಿ ಪ್ರಕಟವಾದ ವರದಿಯಂತೆ (2019, ಡಿ. 1), 2010-17ರ ನಡುವೆ ಅಮೆರಿಕವೊಂದರಲ್ಲೇ ಅಕ್ರಮವಾಗಿ ಉಳಿದುಕೊಂಡಿರುವವರಲ್ಲಿ ಅತೀ ಹೆಚ್ಚಿರುವುದು ಭಾರತೀಯರು (3.30 ಲಕ್ಷ). ಎಲ್ಲ ದೇಶಗಳೂ ಅಕ್ರಮವಾಸಿಗಳ ಬಗ್ಗೆ ಕ್ರೂರ ತೀರ್ಮಾನವೊಂದನ್ನು ಕೈಗೊಂಡದ್ದೇ ಆದರೆ, ಅದಕ್ಕೆ ಅತೀ ಹೆಚ್ಚಿನ ಸಂಖ್ಯೆಯಲ್ಲಿ ತೊಂದರೆಗೆ ಬಲಿಯಾಗಲಿರುವವರು ಭಾರತದ ಹಿಂದೂಗಳೇ ಆಗಬಹುದು.
  • ಸಿಎಎ ಬಗ್ಗೆ ಈಗಲೂ ಒಂದು ವರ್ಗದ ಜನರಿಗೆ ವಿರೋಧ ಇಲ್ಲ, ಸಿಎಎ ಜೊತೆ ಎನ್‌ಆರ್‌ಸಿ (National Register of Citizens) ಜೋಡಿಸುವುದಕ್ಕೆ ವಿರೋಧ ಇದೆ. ಎನ್‌ಪಿಆರ್ (National Population Register (NPR)) - ಬಗ್ಗೆ ಅಲ್ಲ, ಎನ್‌ಪಿಆರ್‌ನ ಪ್ರಶ್ನಾವಳಿಗೆ ಸೇರಿಸಿರುವ ಹೊಸ ಪ್ರಶ್ನೆಗಳ ಬಗ್ಗೆ ವಿರೋಧ ಇದೆ. ಕರ್ನಾಟಕ ರಾಜ್ಯದಲ್ಲಿ ಕಾಯ್ದೆಯನ್ನು ಜಾರಿಗೊಳಿಸಲು ಸಿದ್ಧತೆ ನಡೆಸಲಾಗಿದೆ ಎಂದು ಆಂಗ್ಲ ದೈನಿಕ 'ಡೆಕ್ಕನ್ ಹೆರಾಲ್ಡ್' ವರದಿ ಮಾಡಿದೆ; ರಾಜ್ಯಗಳು ಬಂಧನ ಕೇಂದ್ರಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರ ಉತ್ಸುಕವಾಗಿದೆ(ಏಕೆ). ಅದು ದೊಡ್ಡ ಗುಂಪಿನ ಜನರ ರಾಷ್ಟ್ರೀಯತೆ ಮತ್ತು ಸ್ವಾತಂತ್ರ್ಯವನ್ನು ಕಳೆದುಕೊಳ್ಳುವುದಕ್ಕೆ ಮಾತ್ರವಲ್ಲದೆ ಅವರ ಮೂಲಭೂತ ಹಕ್ಕುಗಳ ನಿರಾಕರಣೆಗೂ ಕಾರಣವಾಗುತ್ತದೆ - ಮುಂದಿನ ತಲೆಮಾರುಗಳ ಜೀವನದಮೆಲೆ ತೀವ್ರವಾಗಿ ಪರಿಣಾಮ ಬೀರುತ್ತದೆ , ”

ಬಾಂಗ್ಲಾ ವಲಸಿಗರ ನೆವ ೩೦೦ ಕಾರ್ಮಿಕರ ಜೋಪಡಿಗಳ ನೆಲಸಮ

  • ಈ ಕಾಯಿದೆಯಿಂದ ನಿರಪರಾಧಿ ಬಡವರಿಗೆ ಭಾರತೀಯರಾಗಿದ್ದರೂ ತೊಂದರೆ ಅನುಭವಿಸಬೇಕಾಗ ಬಹುದು. ದಾಖಲೆ ತೋರಿಸಿದರೂ ಬೆಂಗಳೂರು ಹತ್ತಿರದ ದೇವರಬಿಸನಹಳ್ಳಿಯ ಕರಿಯಮ್ಮನ ಅಗ್ರಹಾರದಲ್ಲಿದ್ದ ಸ್ಥಳೀಯ ಕಾರ್ಮಿಕರ ೩೦೦ ಮನೆ ಜೋಪಡಿಗಳನ್ನು ಬಾಂಗ್ಲಾ ವಲಸಿಗರನ್ನು ಓಡಿಸುವ ನೆವದಲ್ಲಿ, ನೆಲಸಮ ಮಾಡಲಾಯಿತು. ೧೦೦೦ಕ್ಕೂ ಹೆಚ್ಚು ಜನ ಬೀದಿಪಾಲು.

ಬಂಧನ ಶಿಬಿರ

  • ಭಾರತದ ಅತಿದೊಡ್ಡ ಬಂಧನ ಶಿಬಿರವು ಪೂರ್ಣಗೊಳ್ಳುವ ಹಂತದಲ್ಲಿದೆ. 46 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ, ಇದು ಗುವಾಹಟಿಯಿಂದ 129 ಕಿ.ಮೀ ದೂರದಲ್ಲಿರುವ ಗೋಲ್ಪಾರಾದ ಮಾಟಿಯಾದಲ್ಲಿದೆ ಮತ್ತು 3,000 ಕೈದಿಗಳು ವಾಸಿಸಲು ಸಾಧ್ಯವಾಗುತ್ತದೆ.

ಶಹೀನ್ ಬಾಗ್ ಪ್ರತಿಭಟನೆ

ಭಾರತ ಗಣರಾಜ್ಯದ ಇತಿಹಾಸ - ಭಾಗ ೨ 
ಶಾಹೀನ್ ಬಾಗ್ ಮಹಿಳಾ ಪ್ರತಿಭಟನಾಕಾರರು 15 ಜನವರಿ 2020
  • ದೆಹಲಿಯ ಶಹೀನ್ ಬಾಗ್ ಪ್ರತಿಭಟನೆಯು ಮಹಿಳೆಯರ ನೇತೃತ್ವದಲ್ಲಿ ನಡೆಯುತ್ತಿರುವ 24/7 (ಹಗಲು-ರಾತ್ರಿ- ಸತತ) ಧರಣಿ ಶಾಂತಿಯುತ ಪ್ರತಿಭಟನೆಯಾಗಿದ್ದು, ಇದು ಡಿಸೆಂಬರ್ 11, 2019 ರಂದು ಸಂಸತ್ತಿನ ಉಭಯ ಸದನಗಳಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಅಂಗೀಕಾರದೊಂದಿಗೆ ಪ್ರಾರಂಭವಾಯಿತು ಮತ್ತು ನಂತರದ ತಿದ್ದುಪಡಿಯನ್ನು ವಿರೋಧಿಸುತ್ತಿದ್ದ ಜಾಮಿಯಾ ಮಿಲಿಯಾ ಇಸ್ಲಾಮಿಯಾದ ವಿದ್ಯಾರ್ಥಿಗಳ ಮೇಲೆ ಪೊಲೀಸ್ ಹಸ್ತಕ್ಷೇಪದಿಂದ ಪ್ರಾರಂಭವಾಯಿತು. ಪ್ರತಿಭಟನಾಕಾರರು ಸಿಎಎ-ಎನ್‌ಆರ್‌ಸಿ ಮಾತ್ರವಲ್ಲದೆ ಮಹಿಳೆಯರ ಸುರಕ್ಷತೆ, ಹೆಚ್ಚುತ್ತಿರುವ ಸರಕುಗಳ ಬೆಲೆ, ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಬಡತನದ ಬಗ್ಗೆಯೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಖ್ಯವಾಗಿ ಮುಸ್ಲಿಂ ಮಹಿಳೆಯರನ್ನು ಒಳಗೊಂಡ, ಶಹೀನ್ ಬಾಗ್‌ನಲ್ಲಿ ಪ್ರತಿಭಟನಾಕಾರರು, ಡಿಸೆಂಬರ್ 15, 2019 ರಿಂದ, ನವದೆಹಲಿಯ ಪ್ರಮುಖ ಹೆದ್ದಾರಿಯನ್ನು ನಿರ್ಬಂಧಿಸಿ(have blocked a major highway in New Delhi) ಅಹಿಂಸಾತ್ಮಕ ಪ್ರತಿರೋಧವನ್ನು ಬಳಸಿಕೊಂಡು 53 ದಿನಗಳ ಕಾಲ 2020 ರ ಫೆಬ್ರವರಿ 6 ರವರೆಗೆ ನಡೆಸುತ್ತಿದ್ದು ಮುಂದುವರಿಯುತ್ತಿದೆ. ಇದು ಈಗ ಸಿಎಎ-ಎನ್ಆರ್ಸಿ-ಎನ್ಪಿಆರ್[CAA-NRC-NPR] ವಿರುದ್ಧ ನಡೆಯುತ್ತಿರುವ ನಿರಂತರ ಮುಂದುವರಿಯುತ್ತಿರುವ ಪ್ರತಿಭಟನೆಯಾಗಿದೆ.

ಮಾಜಿ ಬಿಜೆಪಿಯ ಯಶ್ವಂತ್ ಸಿನ್ಹಾ ವಿರೋಧ

ಭಾರತ ಗಣರಾಜ್ಯದ ಇತಿಹಾಸ - ಭಾಗ ೨ 
ಯಶ್ವಂತ್ ಸಿನ್ಹಾ ಅವರು ಪ್ರಧಾನಿ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಹಣಕಾಸು ಸಚಿವರು ಮತ್ತು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಡಿಯಲ್ಲಿ ವಿದೇಶಾಂಗ ಸಚಿವರಾಗಿದ್ದರು.
  • ಅಸ್ಸಾಂನಲ್ಲಿನ ಎನ್ಆರ್ಸಿಯ ಜಾರಿ ಒಂದು "ಅವ್ಯವಸ್ಥಿತ ಆಡಳಿತ-ಕಸರತ್ತು"- (“botched up exercise,”) ಎಂದು ಅವರು ಹೇಳಿದರು, ಆ ರಾಜ್ಯದಲ್ಲಿಯ ಅನುಭವದ ಹೊರತಾಗಿಯೂ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಂಸತ್ತಿನ ಸಭೆಯಲ್ಲಿ ಯಾವುದೇ ಅಂದಾಜು ಮಾಡದೆ ರಾಷ್ಟ್ರವ್ಯಾಪಿ ಎನ್ಆರ್ಸಿ ಇರುತ್ತದೆ ಎಂದುಮಾಜಿ ವಿದೇಶಾಂಗ ಮಂತ್ರಿ ಸಿನ್ಹಾ ಘೋಷಿಸಿದರು. ಅದಕ್ಕೆ ಅಗತ್ಯವಾದ ವೆಚ್ಚಗಳು ಮತ್ತು ಯಂತ್ರೋಪಕರಣಗಳು ದೊಡ್ಡಮೊತ್ತದ್ದು ಎಂದರು.
  • ಸಿಎಎಯನ್ನು ವಿರೋಧಿಸಲು ಸಿನ್ಹಾ ಅವರು ಮೂರು ಕಾರಣಗಳನ್ನು ಪಟ್ಟಿ ಮಾಡಿದರು. ಮೊದಲಿಗೆ, ಸಿಎಎ "ಸಂವಿಧಾನದ ಮೂಲ ರಚನೆ" ಯ ವಿರುದ್ಧ ಹೋಗಿದೆ," ಎಂದು ಅವರು ವಾದಿಸಿದರು. ಎರಡನೆಯದಾಗಿ, ಇದು ಅಗತ್ಯವಿಲ್ಲ, ಮೂಲ ಕಾನೂನಿನ ಪ್ರಕಾರ ತಾನು ಬಯಸಿದ ಯಾರಿಗಾದರೂ ಪೌರತ್ವ ನೀಡುವ ಅಧಿಕಾರ ಸರ್ಕಾರಕ್ಕೆ ಈಗಾಗಲೇ ಇದೆ ಎಂದು ವಾದಿಸಿದರು. ಮೂರನೆಯದಾಗಿ, ಸರ್ಕಾರವು “ಕಾನೂನಿನಲ್ಲಿ ಬಳಸುವ ಭಾಷೆ” ಕಾರ್ಯಗತಗೊಳಿಸಲು ಕಷ್ಟವಾಗುತ್ತದೆ. “ಬಹುಶಃ, ಅವರ ಉದ್ದೇಶವು ಅದನ್ನು ಕಾರ್ಯಗತಗೊಳಿಸುವುದಲ್ಲ, ಆದರೆ ಜನರನ್ನು ದಾರಿ ತಪ್ಪಿಸುವುದು”.
  • ಜನರನ್ನು ಧಾರ್ಮಿಕ ದೃಷ್ಟಿಯಿಂದ ವಿಭಜಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಸಿನ್ಹಾ ಆರೋಪಿಸಿದರು. "ನಾವು 1947 ರ ಪೂರ್ವದ ಯುಗಕ್ಕೆ ಹಿಂತಿರುಗುತ್ತಿದ್ದೇವೆ" ಎಂದು ಅವರು ಹೇಳಿದರು.
  • ಪೌರತ್ವ (ತಿದ್ದುಪಡಿ) ಕಾಯ್ದೆ, ನಾಗರಿಕರ ರಾಷ್ಟ್ರೀಯ ನೋಂದಣಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು ವಿರೋಧಿಸಿ ಮಾಜಿ ಕೇಂದ್ರ ಸಚಿವ ಯಶ್ವಂತ್ ಸಿನ್ಹಾ ಶನಿವಾರ ರಾಷ್ಟ್ರವ್ಯಾಪಿ `ಯಾತ್ರೆ '(ಪ್ರವಾಸ) ಘೋಷಿಸಿದರು. ತಮ್ಮ ಸಂಸ್ಥೆ ರಾಷ್ಟ್ರ ಮಂಚ್‌ನ ಬ್ಯಾನರ್ ಅಡಿಯಲ್ಲಿ ಆಯೋಜಿಸಲಾಗಿರುವ ಈ ಅಭಿಯಾನವನ್ನು 'ಗಾಂಧಿ ಶಾಂತಿ ಯಾತ್ರೆ' ಎಂದು ಕರೆಯಲಾಗುವುದು ಎಂದು ಸಿನ್ಹಾ ತಿಳಿಸಿದರು.

ದೆಹಲಿ ಈಶಾನ್ಯ ಶಹೀನ್ ಭಾಗ್- ಜಾಫ್ರಾಬಾದ್ ಪ್ರದೇಶ ಹಿಂಸಾಚಾರ

  • North East Delhi riots
  • ಸಿಎಎ ಪರವಾದ ಪ್ರತೀಕಾರ ಪ್ರತಿಭಟನೆಯಲ್ಲಿ,(ಮತೀಯ ಹಿಂಸಾಚಾರ) ನವದೆಹಲಿಯ ಈಶಾನ್ಯ ಭಾಗದಲ್ಲಿ ನಡೆದ ಹಿಂಸಾಚಾರದಲ್ಲಿ 79 ಮನೆಗಳು, 327 ಗುಡಿಸಲುಗಳು ಬೆಂಕಿಗೆ ಆಹುತಿಯಾಗಿವೆ. ದೆಹಲಿಯ ಕೋಮು ಹಿಂಸಾಚಾರದಲ್ಲಿ ಫೆಬ್ರವರಿ 23, 2020 ರ ರಾತ್ರಿ, ಈಶಾನ್ಯ ದೆಹಲಿಯ ಜಾಫ್ರಾಬಾದ್ ಪ್ರದೇಶದಲ್ಲಿ ಸರಣಿ ಗಲಭೆಗಳು ಮತ್ತು ಹಿಂಸಾತ್ಮಕ ಘಟನೆಗಳು ಪ್ರಾರಂಭವಾದವು, ಇದರಲ್ಲಿ 49 ಜನರು ಸಾವನ್ನಪ್ಪಿದರು. ಮತ್ತು 200 ಕ್ಕೂ ಹೆಚ್ಚು ಜನರು ಗಾಯಗೊಂಡರು. 2019 ಡಿಸೆಂಬರ್ 19 - ಪ್ರಸ್ತುತ: ಉತ್ತರ ಪ್ರದೇಶದಲ್ಲಿ 20 ಸಾವುಗಳು; 2019 ಡಿಸೆಂಬರ್ 12: ಅಸ್ಸಾಂನಲ್ಲಿ ಐದು ಸಾವುಗಳು

ಶಸ್ತ್ರಾಸ್ತ್ರ ಖರೀದಿ, ನಿರ್ವಹಣೆಗೂ ಕೊರತೆ

  • ಶಸ್ತ್ರಾಸ್ತ್ರ ಮತ್ತು ವಾಹನಗಳ ನಿರ್ವಹಣೆ ಮತ್ತು ಖರೀದಿಗೂ ಕಡಿಮೆ ಅನುದಾನವನ್ನು ರಕ್ಷಣಾ ಸಚಿವಾಲಯ ನೀಡಿದೆ. ಬಂದೂಕುಗಳು, ಫಿರಂಗಿಗಳು, ಟ್ಯಾಂಕ್‌ಗಳ ನಿರ್ವಹಣೆಗೆ ಇದರಿಂದತೊಂದರೆಗುತ್ತಿದೆ. ಅಲ್ಲದೆ ಹೊಸ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಖರೀದಿಸಲು ಅನುದಾನ ಸಾಕಾಗುತ್ತಿತ್ತಿಲ್ಲ. ಹಾಗಾಗಿ ಭೂಸೇನೆಯ ಯುದ್ಧಸನ್ನದ್ಧತೆಗೆ ಕಷ್ಟವಾಗಿದೆ. ಇದರಿಂದ ದೇಶದ ಭದ್ರತೆಗೆ ಅಪಾಯವಿದೆ ಎಂದು ಸಮಿತಿಯು ಕಳವಳ ವ್ಯಕ್ತಪಡಿಸಿದೆ.
  • ಭೂಸೇಮೆಯು ರೂ.1.98 ಲಕ್ಷಕೋಟಿ ಬೇಡಿಕೆ ಇಟ್ಟರೆ ಅದಕ್ಕೆ ದೊರಕಿದ ಹಣ ರೂ.1.68 ಕೋಟಿ, ರೂ.30 ಲಕ್ಷಕೋಟಿರೂ. ಕಡೆಮೆ. ಈ ಬಗ್ಗೆ ಸಂಸದೀಯ ಸ್ಥಾಯೀ ಸಮಿತಿ ಕಳವಳ ವ್ಯಕ್ತಪಡಿಸಿದೆ.

೨೦೨೦- ೨೦೨೧ ರ ಕೇಂದ್ರ ಬಜೆಟ್

ಆರ್ಥಿಕ ಸಂಕಷ್ಟ- ಸೇನಾ ಬಜೆಟ್ ಕಡಿತ - ಸಂಸದೀಯ ಸ್ಥಾಯಿ ಸಮಿತಿಯು ಕಳವಳ

  • ಮೋದಿ ಸರ್ಕಾರ 2019-20ರ (ಪ್ರಸಕ್ತ) ಹಣಕಾಸು ವರ್ಷಗಳಲ್ಲಿ ರಕ್ಷಣಾ ಬಜೆಟ್ ಪರಿಶೀಲನೆ ನಡೆಸಿದ ಶಾಸಕರ ತಂಡದ ವರದಿಯ ಪ್ರಕಾರ, ಬಜೆಟ್‌ನಲ್ಲಿ 2019-2020ನೇ ಸಾಲಿನಲ್ಲಿ ಮಿಲಿಟರಿ ಪಡೆಗಳಿಗೆ ರೂ .1 ಲಕ್ಷ 3770 ಸಾವಿರ ಕೋಟಿ ಕಡಿಮೆ ನೀಡಿದೆ. ಭಾರತ ಸೇನೆಯ ಅಭಿವೃದ್ಧಿ ಮತ್ತು ಆಧುನೀಕರಣಕ್ಕೆ 2019-20 ರಿಂದ ಹಿಂದಿನ ಐದು ಹಣಕಾಸು ವರ್ಷಗಳಲ್ಲೂ ಸಹ ಅಗತ್ಯಕ್ಕಿಂತ ಕಡಿಮೆ ಮೊತ್ತವನ್ನು ನೀಡಲಾಗಿದೆ. ಅದರಿಂದ ಭೂಸೇನೆಯ ನಿರ್ವಹಣೆಗೆ ಮತ್ತು ಕಾರ್ಯಾಚರಣೆಗಗಳಿಗೆ ಕುಂದಾಗುತ್ತಿದೆ ಎಂಬ ಅಭಿಪ್ರಾಯ ಸೇನೆಯದು.. ನೌಕಾಪಡೆಗೆ ಸಹ ಅದು ಕೇಳಿದ್ದಕ್ಕಿಂತ ರೂ.53,035 ಕೋಟಿ ಮತ್ತು ವಾಯುಪಡೆ ಕೇಳಿದ್ದಕ್ಕಿಂತ ರೂ.23,048 ಕೋಟಿ ಕಡಿಮೆ ಹಣವನ್ನು ರಕ್ಷಣಾ ಸಚಿವಾಲಯವು ಕೊಟ್ಟಿದೆ. ಮೋದಿ ಸರ್ಕಾರ 2019-2020ನೇ ಸಾಲಿನಲ್ಲಿ ಮಿಲಿಟರಿ ಪಡೆಗಳಿಗೆ ರೂ .1 ಲಕ್ಷ 3770 ಸಾವಿರ ಕೋಟಿ ಕಡಿಮೆ ನೀಡಿದೆ. 2019 ರಲ್ಲಿ, ಐಎಎಫ್ ಬಂಡವಾಳ ವಿಭಾಗದಲ್ಲಿ, 81,302 ಕೋಟಿ ಕೇಳಿದೆ, ಆದರೆ ಕೇವಲ, 39,347 ಕೋಟಿಗಳನ್ನು ಪಡೆದುಕೊಂಡಿತು, ಇದು 41,955 ಕೋಟಿಗಳ ದೊಡ್ಡ ಕೊರತೆಯಾಗಿದೆ.ಇದು ದೇಶದ ಭದ್ರತೆಗೆ ಅಪಾಯಕಾರಿ ಎಂದು ರಕ್ಷಣಾ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿಯು ಕಳವಳ ವ್ಯಕ್ತಪಡಿಸಿದೆ.

ಶಸ್ತ್ರಾಸ್ತ್ರ ಖರೀದಿ, ನಿರ್ವಹಣೆಗೂ ಕೊರತೆ

  • ಶಸ್ತ್ರಾಸ್ತ್ರ ಮತ್ತು ವಾಹನಗಳ ನಿರ್ವಹಣೆ ಮತ್ತು ಖರೀದಿಗೂ ಕಡಿಮೆ ಅನುದಾನವನ್ನು ರಕ್ಷಣಾ ಸಚಿವಾಲಯ ನೀಡಿದೆ. ಬಂದೂಕುಗಳು, ಫಿರಂಗಿಗಳು, ಟ್ಯಾಂಕ್‌ಗಳ ನಿರ್ವಹಣೆಗೆ ಇದರಿಂದತೊಂದರೆಗುತ್ತಿದೆ. ಅಲ್ಲದೆ ಹೊಸ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ಖರೀದಿಸಲು ಅನುದಾನ ಸಾಕಾಗುತ್ತಿತ್ತಿಲ್ಲ. ಹಾಗಾಗಿ ಭೂಸೇನೆಯ ಯುದ್ಧಸನ್ನದ್ಧತೆಗೆ ಕಷ್ಟವಾಗಿದೆ. ಇದರಿಂದ ದೇಶದ ಭದ್ರತೆಗೆ ಅಪಾಯವಿದೆ ಎಂದು ಸಮಿತಿಯು ಕಳವಳ ವ್ಯಕ್ತಪಡಿಸಿದೆ.
  • ಭೂಸೇಮೆಯು ರೂ.1.98 ಲಕ್ಷಕೋಟಿ ಬೇಡಿಕೆ ಇಟ್ಟರೆ ಅದಕ್ಕೆ ದೊರಕಿದ ಹಣ ರೂ.1.68 ಕೋಟಿ, ರೂ.30 ಲಕ್ಷಕೋಟಿರೂ. ಕಡೆಮೆ. ಈ ಬಗ್ಗೆ ಸಂಸದೀಯ ಸ್ಥಾಯೀ ಸಮಿತಿ ಕಳವಳ ವ್ಯಕ್ತಪಡಿಸಿದೆ.

ಮೂಲಸೌಕರ್ಯ ಅಭಿವೃದ್ಧಿಗೂ ಅಡ್ಡಿ

  • ರೋಹ್ತಾಂಗ್‌ ಪಾಸ್ ಸುರಂಗ ಮಾರ್ಗ, ಚೀನಾ ಸ್ಟಡಿ ಗ್ರೂಪ್‌ ರಸ್ತೆ (ಸಿಎಸ್‌ಜಿ) ಮತ್ತು ಈಶಾನ್ಯ ಭಾರತದ ಗಡಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೂ ಕಡಿಮೆ ಅನುದಾನವನ್ನು ಹಂಚಿಕೆ ಮಾಡಲಾಗಿದೆ. ಈ ಬಗೆಗೆ ಸ್ಥಾಯೀ ಸಮಿತಿ ಚಿಂತೆ ವ್ಯಕ್ತಪಡಿಸಿದೆ

ವಿತ್ತೀಯ ಕೊರತೆ

  • 2019-2020 ರ (ಪ್ರಸಕ್ತ) ಹಣಕಾಸು ವರ್ಷಕ್ಕೆ ಬಜೆಟ್‌ ಅಂದಾಜಿನಂತೆ ವಿತ್ತೀಯ ಕೊರತೆ ರೂ. 7.2 ಲಕ್ಷ ಕೋಟಿ ಇರಲಿದೆ. ಆದರೆ ಅಕ್ಟೋಬರ್‌ ಅಂತ್ಯದ ವೇಳೆಗೆ ಬಜೆಟ್‌ ಅಂದಾಜನ್ನೂ ಮೀರಿ ರೂ. 7.20 ಲಕ್ಷ ಕೋಟಿಗೆ (ಶೇ 102.4ಕ್ಕೆ)ಹಣ ಸಂಗ್ರಹದ ಕೊರತೆಯಲ್ಲಿ ಏರಿಕೆಯಾಗಿದೆ.
  • ಆದರೂ ವಿವಿಧ ಮೂಲಗಳಿಂದ ಕೇಂದ್ರದ ಬೊಕ್ಕಸಕ್ಕೆ ಬರಬೇಕಾದ ವರಮಾನದಲ್ಲಿ ಬಜೆಟ್ 2020ರಲ್ಲಿ ರೂ. 3.50 ಲಕ್ಷದಿಂದ ರೂ. 3.75 ಲಕ್ಷ ಕೋಟಿ ಕೊರತೆ ಬೀಳುವ ಅಂದಾಜಿದೆ.

ಅಂಕಿಅಂಶಗಳ ಸಂಕ್ಷಿಪ್ತ ನೋಟ

  • ಕೇಂದ್ರ ಬಜೆಟ್‌ ಅಂಕಿಅಂಶಗಳು: 2019–20ರ ಜಿಡಿಪಿ ಪ್ರಗತಿ ಅಂದಾಜು ಶೇ 5. ಸರ್ಕಾರದ ವರಮಾನ ಸಂಗ್ರಹದಲ್ಲಿನ ಕೊರತೆ ಅಂದಾಜು ರೂ 3.75 ಲಕ್ಷ ಕೋಟಿ.(ವೆಚ್ಚದಲ್ಲಿ ವರಮಾನ ಕಳೆದುವಾಸ್ತವ ಕೊರತೆ:ರೂ,೭.೦೪ ಕೋಟಿ.) ವಾರ್ಷಿಕೆ ಬಜೆಟ್ ವೆಚ್ಚ ರೂ.27.86 ಲಕ್ಷ ಕೋಟಿ, ಸಾಲ ಹೊರತುಪಡಿಸಿದ ಸರ್ಕಾರದ ವರಮಾನ ರೂ. 20.82 ಲಕ್ಷ ಕೋಟಿ. 2020-21ರ ಬಜೆಟ್ಟಿನ ಪ್ರಸ್ತಾವಿತ ಖರ್ಚು.ರೂ. 30.42 ಲಕ್ಷ ಕೋಟಿ.ಪ್ರಸ್ತಾವಿತ ಆದಾಯ ರೂ. 22.46 ಲಕ್ಷ ಕೋಟಿ; ಸಾಲದಿಂದ 5.36 ಲಕ್ಷ ಕೋಟಿ ರೂ.; 2019 -20ರ ಪರಿಷ್ಕೃತ ಖರ್ಚು ರೂ .26.99. ಲಕ್ಷ ಕೋಟಿ;ಪರಿಷ್ಕೃತ ಆದಾಯ- ರೂ .19.32 ಲಕ್ಷ ಕೋಟಿ; ಸಾಲ ರೂ .4.99 ಲಕ್ಷ ಕೋಟಿ. ಒಟ್ಟು ವೆಚ್ಚ ಮತ್ತು ವರಮಾನ ಸಂಗ್ರಹದಲ್ಲಿನ ರೂ. 7.96 ಲಕ್ಷ ಕೋಟಿ ಕೊರತೆಯನ್ನು ಭರಿಸಲು ರೂ. 5.45 ಲಕ್ಷ ಕೋಟಿ ಸಾಲ ಸಂಗ್ರಹಿಸಲು ಸರ್ಕಾರ ಉದ್ದೇಶಿಸಿದೆ. ಕೇಂದ್ರದ ಉದ್ಯಮಗಳ(ಜೀವವಿಮೆ) ಷೇರು ವಿಕ್ರಯದ ಮೂಲಕ ರೂ. 2.1 ಲಕ್ಷ ಕೋಟಿ ಸಂಗ್ರಹಿಸುವ ಗುರಿ ನಿಗದಿಪಡಿಸಿದೆ.

ಕರ್ನಾಟಕದಲ್ಲಿ ಪ್ರಧಾನಿ ಮೋದಿ

  • ದಿ.2 ಜನವರಿ 2020 ರಂದು ಪ್ರಧಾನಿ ಮೋದಿಯವರು ತುಮಕೂರಿನಲ್ಲಿ ರೈತರ ಸಮಾವೇಶಕ್ಕೆ ಬಂದಾಗ ಯಡಿಯೂರಪ್ಪ ಅವರು, ನೆರೆ ಪರಿಹಾರಕ್ಕೆ ಹೆಚ್ಚು ಹಣ, ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ರೂ.50 ಸಾವಿರ ಕೋಟಿ ಹೆಚ್ಚುವರಿ ಅನುದಾನ ನೀಡುವಂತೆ ಕೋರಿದರು. 'ಈ ವರ್ಷ ರಾಜ್ಯದಲ್ಲಿ ಅತಿವೃಷ್ಟಿಯಿಂದ 3 ಲಕ್ಷ ಮನೆಗಳು ನೆಲಸಮವಾಗಿವೆ. ಸೇತುವೆ, ರಸ್ತೆಗಳು ಕೊಚ್ಚಿ ಹೋಗಿವೆ. ಒಟ್ಟು ರೂ.30 ಸಾವಿರ ಕೋಟಿ ನಷ್ಟವಾಗಿದೆ. ಈ ಹಿಂದೆ ಹೆಚ್ಚಿನ ಪರಿಹಾರ ಕೊಡುವಂತೆ ಪ್ರಧಾನಿಯವರಿಗೆ ಮೂರ್ನಾಲ್ಕು ಬಾರಿ ಮನವಿ ಮಾಡಿಕೊಂಡರೂ ಇದುವರೆಗೆ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿಲ್ಲ' ಎಂದು ಹೇಳಿದರು. ರಾಜ್ಯದಲ್ಲಿ 1966ರಲ್ಲಿ ಪ್ರಾರಂಭವಾದ ನೀರಾವರಿ ಯೋಜನೆಗಳು ಇನ್ನೂ ಪೂರ್ಣಗೊಂಡಿಲ್ಲ. ಅವುಗಳನ್ನು ಪೂರ್ಣಗೊಳಿಸಲು ಹೆಚ್ಚುವರಿ ಅನುದಾನ ಕೊಡಬೇಕು' ಎಂದು ಮನವಿ ಮಾಡಿದರು.
  • ಬಳಿಕ ರೈತರನ್ನು ಉದ್ದೇಶಿಸಿ ಮಾತನಾಡಿದ ಮೋದಿ ಅವರು, ದೇಶದ ರಾಜಕೀಯ ಸಮಸ್ಯೆಗಳ ವಿಚಾರ ಹೇಳಿದರು. ಆದರೆ ರಾಜ್ಯದ ಸಮಸ್ಯೆಗಳನ್ನು ಬಗೆಹರಿಸುವ, ಸಹಾಯ ನೀಡುವ ಭರವಸೆಯ ಮಾತನ್ನೇ ಉಚ್ಚರಿಸಲಿಲ್ಲ. ಮುಖ್ಯಮಂತ್ರಿಯೊಬ್ಬರು ಬಹಿರಂಗ ವೇದಿಕೆಯಲ್ಲಿ ಕೇಳಿದಾಗಲಾದರೂ ಪರಿಶೀಲಿಸುವ ಭರವಸೆ ನೀಡುವ ಕೆಲಸವನ್ನಾದರೂ ಪ್ರಧಾನಿ ಅಲ್ಲಿ ಮಾಡಬೇಕಿತ್ತು. ಆ ಸೌಜನ್ಯವೂ ಕಾಣಲಿಲ್ಲ ಎಂದು ಪತ್ರಿಕೆಗಳಲ್ಲಿ ಸಂಪಾದಕೀಯ ಬರೆದವು. ಆದರೆ ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ಬೇಡಿಕೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ನಂತರ ಹೇಳಿದರು.
  • ತುಮಕೂರಿನ ಶ್ರೀ ಸಿದ್ದಗಂಗ ಮಠದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಮೋದಿ, "ನಮ್ಮ ಸರ್ಕಾರ ಸಿಎಎ ತಂದಿತು, ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಮೇಲೆ ಅತ್ಯಾಚಾರ ಆಗುತ್ತಿದೆ. ಸಾವಿರಾರು ಅಲ್ಪ ಸಂಖ್ಯಾತರು ಅಲ್ಲಿಂದ ಭಾರತಕ್ಕೆ ಬರುವ ಅನಿವಾರ್ಯತೆ ಇದೆ. ಆದರೆ, ಕಾಂಗ್ರೆಸ್ಸಿಗರು ಪಾಕಿಸ್ತಾನದ ತಪ್ಪು ಬಗ್ಗೆ ಮಾತಾಡುತ್ತಿಲ್ಲ. ಪಾಕಿಸ್ತಾನದಲ್ಲಿ ಲಕ್ಷಾಂತರ ಜನರನ್ನು ಬರ್ಬಾದ್ ಮಾಡಿದ್ದಾರೆ," ಎಂದು ವಿದ್ಯಾರ್ಥಿಗಳಿಗೆ ಮಾಡಿದ ರಾಜಕೀಯ ಭಾಷಣಕ್ಕೆ. ವಿರೋಧ ವ್ಯಕ್ತವಾಗಿದೆ. ಆದರಜೊತೆ ಕರ್ನಾಟಕದ ಜನರ ಕಷ್ಟಕ್ಕೆ ನೆರವಾಗುವ ವಿಚಾರದಲ್ಲಿ ಏನೂ ಹೇಳಿಲ್ಲವೆಂದು ಅಸಮಾಧಾನ ವ್ಯಕ್ತವಾಗಿದೆ.,[೩]
  • ನೆರೆ ಪರಿಹಾರಕ್ಕೆ ಎರಡನೇ ಕಂತಿನಲ್ಲಿ ರೂ1,869.85 ಕೋಟಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿತ್ತು. ‘ಮೊದಲ ಕಂತಿನಲ್ಲಿ ರೂ.1,200 ಕೋಟಿ ಬಿಡುಗಡೆಯಾಗಿದ್ದು, ಮುಖ್ಯಮಂತ್ರಿಯ ಒತ್ತಾಯದ ನಂತರ ರೂ.669.85 ಕೋಟಿ ಮಾತ್ರ ನೀಡಲಾಯಿತು. ಒಟ್ಟಾರೆ ಎರಡೂಕಂತು ಸೇರಿ ರೂ1,869.85 ಕೋಟಿ ಬಿಡುಗಡೆ ಆದಂತಾಗಿದೆ. ಹಿಂದಿನ ಕಳೆದ ಹಣಕಾಸು ವರ್ಷಕ್ಕೆ ಹೋಲಿಸಿದರೆ ಭಾರತದ ಗೃಹ ಸಚಿವಾಲಯ ತನ್ನ ಬಜೆಟ್ ಹಂಚಿಕೆಯಲ್ಲಿ ವಿಪತ್ತು ನಿರ್ವಹಣೆ, ಸೈಬರ್ ಅಪರಾಧ ಮೂಲಸೌಕರ್ಯಗಳ ಬಗ್ಗೆ ವಿಶೇಷ ಗಮನಹರಿಸಿ ಕಳೆದ ಹಣಕಾಸು ವರ್ಷಕ್ಕಿಂತ 5% - ರೂ.5,858 ಕೋಟಿ ಹೆಚ್ಚಿರುವ ರೂ 1,19,025 ಕೋಟಿ 2019-20ರ ಕೇಂದ್ರ ಬಜೆಟ್‌ನಲ್ಲಿ ನಿಗದಿಪಡಿಸಿತ್ತು. ಆದರೆ ಅತಿವೃಷ್ಟಿಯಲ್ಲಿ ಸುಮಾರು ೫೦,ಸಾವಿರ ಕೋಟಿಗೂ ಹೆಚ್ಚು ನಷ್ಟ ಅನುಭವಿದಸಿದ ಕರ್ನಾಟಕಕ್ಕೆ ಕೇಂದ್ರಸರ್ಕಾರ ಕೇವಲ ರೂ1,869.85 ಕೋಟಿ ಕೊಟ್ಟಿತು.

೨೦೨೦ ರ ದೆಹಲಿ ವಿಧಾನಸಭೆ ಚುನಾವಣೆ

  • 2020 Delhi Legislative Assembly election
  • ಭಾರತದ ರಾಜಧಾನಿ ದೆಹಲಿ ವಿಧಾನಸಭೆಯ 70 ಸದಸ್ಯರನ್ನು ಆಯ್ಕೆ ಮಾಡಲು 2020 ರ ಫೆಬ್ರವರಿ 8 ರಂದು ದೆಹಲಿಯ ವಿಧಾನಸಭಾ ಚುನಾವಣೆ ನಡೆಯಿತು. ಮತದಾರರ ಸಂಖ್ಯೆ 62.59%, ದೆಹಲಿಯಲ್ಲಿ ಹಿಂದಿನ ವಿಧಾನಸಭಾ ಚುನಾವಣೆಯಿಂದ 4.88% ನಷ್ಟು ಕಡಿಮೆಯಾಗಿದೆ ಆದರೆ ದೆಹಲಿಯಲ್ಲಿ 2019 ರ ಭಾರತೀಯ ಸಾರ್ವತ್ರಿಕ ಚುನಾವಣೆಗಿಂತ 2% ಹೆಚ್ಚಾಗಿದೆ. 2015 ರಲ್ಲಿ ಚುನಾಯಿತರಾದ ಪ್ರಸ್ತುತ ವಿಧಾನಸಭೆಯ ಅವಧಿ 22 ಫೆಬ್ರವರಿ 2020 ರಂದು ಮುಕ್ತಾಯಗೊಳ್ಳುತ್ತದೆ. ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು 62 ಸ್ಥಾನಗಳನ್ನು (-5) ಗೆದ್ದು ಚುನಾವಣೆಯಲ್ಲಿ ಸಂಪೂರ್ಣ ಬಹುಮತ ಗಳಿಸಿತು. ಬಿಜೆಪಿ 8 (+5) ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್‍ಗೆ ಯಾವುದೇ ಸ್ಥಾನಗಳು ಸಿಗಲಿಲ್ಲ. ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ಅವರು 16 ನೇ ಫೆಬ್ರವರಿ -2020 ರಂದು ದೆಹಲಿ ಸಿಎಂ ಆಗಿ ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಮತಗಳ ವಿವರ

  • ಒಟ್ಟು ಮತದಾರರು 1.47 ಕೋಟಿ; ಅವರಲ್ಲಿ 66.8 ಲಕ್ಷ ಮಹಿಳಾ ಮತದಾರರು ಮತ್ತು 80.6 ಲಕ್ಷ ಪುರುಷರು. 4,974,522 (62.59- ಶೇ.->% -ಇಳಿಕೆ 4.88%) ಜನರು ಮತ ಚಲಾಯಿಸಿದ್ದಾರೆ . ಎಎಪಿಗೆ ಮತ ಚಲಾಯಿಸಿದವರ ಸಂಖ್ಯೆ 4,974,522 (53.57% - ಹಿಂದಿ ನದಕ್ಕಿಂತ 0.73% ಕಡಿಮೆ); ಬಿಜೆಪಿಗೆ 3,575,430 (38.51%, ಹಿಂದಿನದಕ್ಕಿಂತ 6.21% ಹೆಚ್ಚು); ಕಾಂಗ್ರೆಸ್ ಗೆ -395,924 (4.26%) ಮತ ಚಲಾವಣೆ - ಹಿಂದಿನದಕ್ಕಿಂತ 5.44% ಕಡಿಮೆ); 16 ಫೆಬ್ರವರಿ -2020 ರಂದು ಪ್ರಮಾಣ ಪ್ರತಿಜ್ಞೆ ಸ್ವೀಕರಿಸಿ, ಅರವಿಂದ್ ಕೇಜ್ರಿವಾಲ್ ಮುಖ್ಯಮಂತ್ರಿಯಾಗುವುದರೊಂದಿಗೆ ಆಮ್ ಆದ್ಮಿ ಪಕ್ಷವು ರಾಜ್ಯ ಸರ್ಕಾರವನ್ನು ರಚಿಸಿತು.

ಕೇಂದ್ರದಿಂದ ತೆರಿಗೆವರಮಾನ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಕಡಿತ

  • ಕೇಂದ್ರ ಸರ್ಕಾರವು ತನ್ನ ತೆರಿಗೆ ವರಮಾನವನ್ನು ರಾಜ್ಯಗಳಿಗೆ ಹಂಚಿಕೆ ಮಾಡುವ ನಿಯಮಗಳಲ್ಲಿ ಕೆಲವೊಂದು ಬದಲಾವಣೆ ಮಾಡಿದೆ. ಹಾಗಾಗಿ, ಕೇಂದ್ರದಿಂದ ರಾಜ್ಯಗಳಿಗೆ ಕೊಡುವ ತೆರಿಗೆ ಪಾಲಿನಲ್ಲಿ ಭಾರಿ ಕಡಿತವಾಗಿದೆ. 15ನೇ ಹಣಕಾಸು ಆಯೋಗವು ಶಿಫಾರಸು ಮಾಡಿರುವ ನೂತನ ನಿಯಮಾವಳಿಗಳ ಪ್ರಕಾರ 2020–21ನೇ ಸಾಲಿನಲ್ಲಿ ತೆರಿಗೆ ಪಾಲನ್ನು ಹಂಚಿಕೆ ಮಾಡಲಾಗಿದೆ. ಇದರಿಂದ, ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದರೂ ಕೇಂದ್ರದ ತೆರಿಗೆ ಆದಾಯದಲ್ಲಿ ಬರಬೇಕಿದ್ದ ಪಾಲಿನಲ್ಲಿ ಕರ್ನಾಟಕಕ್ಕೆ ರೂ.5,102 ಕೋಟಿ ಕಡಿತ ಆಗುವುದು. ಕರ್ನಾಟಕಕ್ಕೆ ಕಡಿತ ಮಾಡಿದ್ದನ್ನು ಉತ್ತರದ ರಾಜ್ಯಗಳಿಗೆ ಕೊಡಿಗೆ ಏರಿಸಿದೆ. ಕೇಂದ್ರ ಸರ್ಕಾರವು ತನ್ನ ತೆರಿಗೆ ವರಮಾನದಲ್ಲಿ ಕರ್ನಾಟಕದ ಪಾಲನ್ನು ಕಡಿಮೆಮಾಡಿದ್ದರೆ, ಉತ್ತರ ಪ್ರದೇಶ ಮತ್ತು ಬಿಹಾರಗಳಿಗೆ ಕೊಡುವ ಪಾಲನ್ನು ಏರಿಕೆ ಮಾಡಿದೆ.

೨೦೨೦-೨೦೨೧ರಲ್ಲಿ ಮಿತಿ ಮೀರಿದ ಕೇಂದ್ರದ ವಿತ್ತೀಯ ಕೊರತೆ

  • 2020-21 ರ ವಿತ್ತೀಯ ಕೊರತೆಯ ಅಂದಾಜು. 2020-21 ಹಣಕಾಸು ವರ್ಷಕ್ಕೆ ವಿತ್ತೀಯ ಕೊರತೆ Rs. 7.96 ಲಕ್ಷ ಕೋಟಿ (ಶೇ 3.5) ಇರುವ ಅಂದಾಜು ಮಾಡಲಾಗಿದೆ. ಆದರೆ, ನಾಲ್ಕು ತಿಂಗಳಿನಲ್ಲಿಯೇ ಅದು ರೂ. 8.21 ಲಕ್ಷ ಕೋಟಿಗೆ ಏರಿಕೆಯಾಗಿದೆ ಎಂದು ಮಹಾಲೇಖಪಾಲರ ವರದಿ ತಿಳಿಸಿದೆ. 2019–20ರಲ್ಲಿ ವಿತ್ತೀಯ ಕೊರತೆ ಏಳು ವರ್ಷಗಳ ಗರಿಷ್ಠ ಮಟ್ಟವಾದ ಶೇ 4.6ಕ್ಕೆ ಏರಿಕೆಯಾಗಿತ್ತು. ಸರ್ಕಾರದ ಒಟ್ಟಾರೆ ವೆಚ್ಚ Rs. 10.54 ಲಕ್ಷ ಕೋಟಿಗಳಷ್ಟಾಗಿದ್ದು, ಇದು ಬಜೆಟ್‌ ಅಂದಾಜಿನ ಶೇ 34.7ರಷ್ಟಿದೆ. 2020–21ರಲ್ಲಿ ಏಪ್ರಿಲ್‌–ಜುಲೈ ಅವಧಿಯಲ್ಲಿನ ಬೆಳವಣಿಗೆಯೂ ಶೇ 20.5ರಷ್ಟು ಇಳಿಕೆಯಾಗಿದೆ. 2019–20ರಲ್ಲಿ ಶೇ 3.2ರಷ್ಟು ಬೆಳವಣಿಗೆ ಆಗಿತ್ತು.
  • ಸಾಂಕ್ರಾಮಿಕ ರೋಗ ಬಂದಾಗ ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯು ಆಗಲೇ ಕುಂಠಿತಗೊಂಡಿತ್ತು. ಏಪ್ರಿಲ್-ಜೂನ್‌ನಲ್ಲಿ, ಭಾರತವು 1996 ರಲ್ಲಿ ತ್ರೈಮಾಸಿಕ ದಾಖಲೆಗಳನ್ನು ಕಾಯ್ದುಕೊಳ್ಳಲು ಪ್ರಾರಂಭಿಸಿದ ನಂತರ ಮೊದಲ ಬಾರಿಗೆ ಸಂಕೋಚನವನ್ನು ಅನುಭವಿಸಿತು.
  • ರಾಷ್ಟ್ರೀಯ ಅಂಕಿಅಂಶಗಳ ಕಚೇರಿ (ಎನ್‌ಎಸ್‌ಒ)31-8-2020 ಬಿಡುಗಡೆ ಮಾಡಿದ ಅಂಕಿ ಅಂಶಗಳು 2020-21ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಜಿಡಿಪಿ 23.9% ನಷ್ಟು ಕುಸಿದಿದೆ ಎಂದು ತೋರಿಸಿದೆ. ಹಿಂದಿನ (ಜನವರಿ-ಮಾರ್ಚ್) ತ್ರೈಮಾಸಿಕದಲ್ಲಿ ಇದು 3.1% ರಷ್ಟಿದೆ. ಪ್ರಮುಖ ಆರ್ಥಿಕತೆಗಳಲ್ಲಿ, ಭಾರತದ ಸಂಕೋಚನವು ತೀಕ್ಷ್ಣವಾಗಿತ್ತು.

ರಾಜ್ಯಗಳಿಗೆ ಜಿ.ಎಸ್.ಟಿ. ಯಲ್ಲಿ ಖೋತಾ

  • 2020- 2021 ಹಣಕಾಸು ವರ್ಷ ಕೊಡಬೇಕಾಗಿರುವ ಒಟ್ಟು ಬಾಕಿ ಹಣ ರೂ. 3 ಲಕ್ಷ ಕೋಟಿ. ಕೇಂದ್ರ ಸರ್ಕಾರ, ಮಾರ್ಚ್ 31, 2021ಕ್ಕೆ ಕೊನೆಗೊಳ್ಳುವ ಹಣಕಾಸು ವರ್ಷದಲ್ಲಿ ರಾಜ್ಯ ಸರ್ಕಾರದಿಂದ ಪರಿಹಾರ ಸೆಸ್ ಮೂಲಕ ಕೇವಲ ರೂ.65,000 ಮಾತ್ರ ಸಂಗ್ರಹಿಸುವ ನಿರೀಕ್ಷೆ ಇದೆ ಎಂದು ಹೇಳಿದೆ. ರಾಜ್ಯಗಳ ಜಿಎಸ್ಟಿ ಪರಿಹಾರದಲ್ಲಿ ರಾಜ್ಯಗಳಿಗೆ ದೊಡ್ಡ ಕೊರತೆ ಆಗುವುದು ಎಂದಿದೆ. ಅದಕ್ಕಿ ಅರ್ಥ ಮಂತ್ರಿಯವರು ಎರಡು ಆಯ್ಕೆಗಳನ್ನು ಇಟ್ಟಿದ್ದಾರೆ.

ಆಯ್ಕೆಗಳು

  • ಜಿಎಸ್‌ಟಿ ಅನುಷ್ಠಾನದಿಂದ ಉಂಟಾಗಿರುವ ಹಣಕಾಸು ಕೊರತೆಯನ್ನು ಸಾಲ ಸಂಗ್ರಹಿಸುವ ಮೂಲಕ ಪರಿಹರಿಸಿಕೊಳ್ಳಬಹುದು. ಇದಕ್ಕಾಗಿ ರಿಸರ್ವ್‌ ಬ್ಯಾಂಕ್‌ನಿಂದ ರೂ.97 ಸಾವಿರ ಕೋಟಿ ಸಾಲ ಪಡೆಯಬಹುದು. ಇಲ್ಲವೇ, ಹೊರಗಡೆಯಿಂದ ೬ಊ.2.35 ಲಕ್ಷ ಕೋಟಿ ಪೂರ್ಣ ಹಣವನ್ನು ಸಾಲವಾಗಿ ಪಡೆಯಬಹುದು.
  • ಮೊದಲ ಆಯ್ಕೆಯಲ್ಲಿ ರಾಜ್ಯಗಳು ರೂ.97,000 ಕೋಟಿ ಸಾಲವನ್ನು ಸಂಗ್ರಹಿಸಿದರೆ, ಕೇಂದ್ರವು ಅಸಲು ಮತ್ತು ಬಡ್ಡಿಯನ್ನು ಭರಿಸುತ್ತದೆ. ಎರಡನೇ ಆಯ್ಕೆಯಡಿ, ರಾಜ್ಯಗಳು ರೂ. 2.35 ಲಕ್ಷ ಕೋಟಿ ಸಾಲ ಮಾಡಿದರೆ, ಕೇಂದ್ರ ಅಸಲು ಮಾತ್ರ ಪಾವತಿಸುತ್ತದೆ. ಆ ಸಾಲಗಳ ಮೇಲಿನ ಬಡ್ಡಿಯನ್ನು ರಾಜ್ಯಗಳೇ ಭರಿಸಬೇಕಾಗುತ್ತದೆ. ಎರಡೂ ಆಯ್ಕೆಯಲ್ಲಿ ಕೇಂದ್ರ ಸರ್ಕಾರ ನೀಡುವ ಹಣವನ್ನು 2022ರ ನಂತರ ಸೆಸ್‌ ಮೂಲಕ ಮರುಪಾವತಿ ಮಾಡುತ್ತದೆ.
  • ಕರ್ನಾಟಕ (ರಾಜ್ಯವು ಆರ್ಥಿಕ ಸಂಕಷ್ಟದಲ್ಲಿದ್ದು, ತಕ್ಷಣವೇ ರೂ.13,764 ಕೋಟಿ ಜಿಎಸ್‌ಟಿ ಪರಿಹಾರ ನೀಡಬೇಕು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಒತ್ತಾಯಿಸಿದರು.
  • ಸಂವಿಧಾನದ 101 ರ ತಿದ್ದುಪಡಿಯಲ್ಲಿ ಸೆಕ್ಷನ್‌ 18 ರ ಪ್ರಕಾರ ಜಿಎಸ್‌ಟಿ ಮಂಡಳಿ‌ ರಾಜ್ಯಗಳಿಗೆ ತೆರಿಗೆ ಸಂಗ್ರಹದ ಕೊರತೆ ತುಂಬಿಕೊಡುವ ಬಗ್ಗೆ ಸ್ಪಷ್ಟ ಉಲ್ಲೇಖವಿದೆ. ಅದರ ಅನ್ವಯ ಕೂಡಲೇ ಪರಿಹಾರವನ್ನು ನೀಡಬೇಕು ಎಂದು ಹೇಳಿದರು..

2020-2021ರ ಹಣಕಾಸು ವರ್ಷದಲ್ಲಿ ಕೇಂದ್ರದ ಸಾಲ

  • 2020-2021ರಲ್ಲಿ 20 ಸೆಪ್ಸಂಬರ್ ಕೊನೆಗೆ ರ್ಕಾರದ ಒಟ್ಟು ಹೊಣೆಗಾರಿಕೆಗಳು 2020 ರ ಜೂನ್ ಅಂತ್ಯದ ವೇಳೆಗೆ 101.3 ಲಕ್ಷ ಕೋಟಿ ರೂ.ಗೆ ಏರಿದೆ. ಸಾರ್ವಜನಿಕ ಸಾಲದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, 2020 ರ ಮಾರ್ಚ್ ಅಂತ್ಯದ ವೇಳೆಗೆ 94.6 ಲಕ್ಷ ಕೋಟಿ ರೂ. 2019 ರ ಜೂನ್ ಅಂತ್ಯದ ವೇಳೆಗೆ ಸರ್ಕಾರದ ಒಟ್ಟು ಸಾಲ 88.18 ಲಕ್ಷ ಕೋಟಿ ರೂ.ಇತ್ತು. ಮತ್ತೊಂದು ವರದಿಯಂತೆ, ಈಚೆಗೆ ಸರ್ಕಾರವೇ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ, ಭಾರತದ ಸಾಲ ಈ ವರ್ಷ ರೂ. 107 ಲಕ್ಷ ಕೋಟಿಗೆ ತಲುಪಿದೆ! ಏಳು ವರ್ಷಗಳ ಹಿಂದೆ ಇದು ರೂ. 40 ಲಕ್ಷ ಕೋಟಿ ಇತ್ತು. ಹಿಂದೆಲ್ಲಾ ದೇಶದ ಸಾಲವನ್ನು ತಲಾವಾರು ಲೆಕ್ಕ ಹಾಕಲಾಗುತ್ತಿತ್ತು. https://www.prajavani.net/op-ed/analysis/economic-gap-covid-and-human-life-798479.html ಅಧಿಕಾರದ ಹುಲಿ ಸವಾರಿ;ಸಬಿತಾ ಬನ್ನಾಡಿ Updated: 22 ಜನವರಿ 2021

೨೦೨೧-೨೨ಕ್ಕೆ ವಿತ್ತೀಯ ಕೊರತೆ

  • ೨೦೨೧-೨೨ ಕ್ಕೆ‘ಕೇಂದ್ರ ಸರ್ಕಾರವು ಈಗಾಗಲೇ ಘೋಷಿಸಿರುವ Rs. 12 ಲಕ್ಷ ಕೋಟಿಗೂ ಹೆಚ್ಚಿನ ವಿತ್ತೀಯ ಕೊರತೆಯನ್ನು ಎದುರಿಸಲಿದೆ’ ಎಂದು ಇವೈ ಇಂಡಿಯಾದ ಮುಖ್ಯ ನೀತಿ ಸಲಹೆಗಾರ ಡಿ.ಕೆ. ಶ್ರೀವಾಸ್ತವ ಹೇಳಿದ್ದಾರೆ. ಏಪ್ರಿಲ್‌–ನವೆಂಬರ್‌ ಅವಧಿಯಲ್ಲಿ ವಿತ್ತೀಯ ಕೊರತೆಯು ಬಜೆಟ್‌ ಅಂದಾಜಿನ ಶೇ 135ರಷ್ಟಾಗಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ *ವಿತ್ತೀಯ ಕೊರತೆ ತಜ್ಞರ ಅಂದಾಜು::33ರಷ್ಟು ಹೆಚ್ಚಿಗೆ ಇದೆ.

೨೦೨೦ರಲ್ಲಿ ಕೋವಿಡ್‌-19- ಜಾಗತಿಕ ಪಿಡುಗು: ರಾಷ್ಟ್ರಮಟ್ಟದ ವಿಪ್ಪತ್ತು

ಭಾರತ ಗಣರಾಜ್ಯದ ಇತಿಹಾಸ - ಭಾಗ ೨ 
ಕರೋನವೈರಸ್‍ನ ಅಡ್ಡ ಸೀಳಿದ-ಭಾಗದ ಮಾದರಿ - ಕೊರೋನಾವೈರಸಗಳ ಜೀನೋಮಿಕ್ ಗಾತ್ರವು ಸುಮಾರು 26 ರಿಂದ 32 ಕಿಲೋಬೇಸ್‌ಗಳವರೆಗೆ ಇರುತ್ತದೆ, ಇದು ಆರ್‌ಎನ್‌ಎ ವೈರಸ್‌ಗಿಂತ ದೊಡ್ಡದಾಗಿದೆ. (1 ಕಿಲೋಬೇಸ್= 1 ಮಿಲಿಮೀಟರ್‍ನ 10 ಲಕ್ಷದ ಒಂದು ಭಾಗ; ಒಂದು ಸಾಸಿವೆ ಕಾಳನ್ನು 10 ಲಕ್ಷ ಭಾಗ ಮಾಡಿ, 3 ಭಾಗ ತೆಗೆದುಕೊಂಡಷ್ಟು ಈ ಅರೆಜೀವಿ ವೈರಸ್ ಚಿಕ್ಕದು.)
  • ೨೦೧೯ ರ ವರ್ಷದ ಡಿಸೆಂಬರ್‌ನಲ್ಲಿ ಚೀನಾದ ವುಹಾನ್‌ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಕೊರೊನಾ ವೈರಸ್ ಸೋಂಕು, ಇದುವರೆಗೂ 100ಕ್ಕೂ ಹೆಚ್ಚು ದೇಶಗಳಿಗೆ ವ್ಯಾಪಿಸಿದ್ದಲ್ಲದೆ 1,20,000 ಸಾವಿರ ಜನರಿಗೆ ಸೋಂಕು ತಗುಲಿದೆ. ಕೋವಿಡ್-19 ಗೆ ಜಾಗತಿಕವಾಗಿ 5,700ಕ್ಕೂ ಅಧಿಕ ಜನರು 15 ಮಾರ್ಚ್ 2020 ರ ವರಗೆ ಮೃತಪಟ್ಟಿದ್ದಾರೆ. ಇದು ಜಾಗತಿಕ ವಿಪ್ಪತ್ತಾಗಿ ಮಾರ್ಪಟ್ಟಿದತು.
  • 2020, ಜನವರಿ ೩೦ ರಂದು ವುಹಾನ್ ವಿಶ್ವವಿದ್ಯಾಲಯದಿಂದ ಕೇರಳಕ್ಕೆ ಮರಳಿದ ವಿದ್ಯಾರ್ಥಿಯಲ್ಲಿ ದೇಶದ ಮೊದಲ ಪ್ರಕರಣ ದೃಢಪಟ್ಟಿತು. ಭಾರತದಲ್ಲಿ ೨೦೨೦ ಮಾರ್ಚಿ ೧೫ರ ವರೆಗೆ 107 ಮಂದಿಯಲ್ಲಿ ಕೋವಿಡ್‌ 19 ಇರುವುದು ದೃಢಪಟ್ಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಭಾನುವಾರ ಸ್ಪಷ್ಟಪಡಿಸಿದೆ. 'ಕೋವಿಡ್-19' ನಿಂದಾಗಿ ಕರ್ನಾಟಕ ಮತ್ತು ದೆಹಲಿ ಸೇರಿದಂತೆ, ಮಾರ್ಚಿ ೧೫ರ ವರೆಗೆ ಇಬ್ಬರು ಮೃತಪಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ 5 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 31 ಜನರು ಸೋಂಕಿತರಾಗಿರುವುದು ತಿಳಿದುಬಂದಿದತು.
  • ಆದರೆ ಸಾಂಕ್ರಾಮಿಕ ರೋಗ ಹರಡುತ್ತಿರುವ ಇದೇ ಸಮಯದಲ್ಲಿ ಪ್ರಧಾನಿ ಮೋದಿಯವರ ಆಹ್ವಾನದಂತೆ ದಿ. 24- 25 -2-2020 ಡೊನಾಲ್ಡ್ ಟ್ರಂಪ್ ಅವರ ಪತ್ನಿ ಮತ್ತು ಮಗಳ ಜೊತೆ -ಗುಜರಾತಿನ ಸರ್ದಾರ್ ವಲ್ಲಭಭಾಯ್ ಪಟೇಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ 1.25 ಲಕ್ಷ ಜನರ ಸಭೆಯ 'ನಮಸ್ತೆ ಟ್ರಂಪ್' ಕಾರ್ಯಕ್ರಮದಲ್ಲಿ ನೂತನ ಸ್ಟೇಡಿಯಂ ಉದ್ಘಾಟಿಸಿದರು. ನಂತರ ಆಗ್ರಾದಲ್ಲಿ ತಾಜ್ ಮಹಲ್ ಗೆ ಭೇಟಿ ನೀಡಿ, ಭಾರತದ ಅಧ್ಯಕ್ಷರನ್ನು ಬೇಟಿ ಮಾಡಿ ಯಾವ ಮಹತ್ವದ ಘೋಷಣೆಗಳಿಲ್ಲದೆ ದಿ. 25 -2-2020 ರಂದು ನಿರ್ಗಮಿಸಿದರು."ನಮಸ್ತೆ, ಟ್ರಂಪ್" ಸ್ವಾಗತ - ಇದು ವಿಶ್ವದ ಅತಿದೊಡ್ಡ ಸಮಾರಂಭ. "ಭಾರತದ ಶ್ರೀಮಂತ ಮತ್ತು ವೈವಿಧ್ಯಮಯ ಸಂಸ್ಕೃತಿಯನ್ನು ಕ್ರೀಡಾಂಗಣಕ್ಕೆ ಹೋಗುವ ದಾರಿಯುದ್ದಕ್ಕೂ ಪ್ರದರ್ಶಿಸಲಾಯಿತು. ಅಧ್ಯಕ್ಷ ಟ್ರಂಪ್ ಅವರ ಬೆಂಗಾವಲು ಮೆರವಣಿಗೆ ಹಲವಾರು ಕೊಳೆಗೇರಿಗಳನ್ನು ಹೊಂದಿರುವ ಅಹಮದಾಬಾದ್‌ನ ಸರ್ದಾರ್‌ನಗರ ಪ್ರದೇಶದ ಮೂಲಕ ಹಾದು ಹೋಗುತ್ತಿತ್ತು. ಈ ವಿಭಾಗದ ಉದ್ದಕ್ಕೂ ನಾಲ್ಕು/ಆರು ಅಡಿ ಎತ್ತರದ, 500 ಮೀಟರ್ ಉದ್ದದ ಗೋಡೆಯನ್ನು ನಿರ್ಮಿಸಲಾಯಿತು, ಇದನ್ನು ಅಲ್ಲಿಯ ನಿವಾಸಿಗಳು "ಬಡ ಜನರನ್ನು ಮರೆಮಾಡಲು" ಎಂದರು. ಮುಂಬೈ, ದೆಹಲಿಯಲ್ಲಿ ಕೊರೊನಾ ವೈರಸ್ ಹರಡಲು ಈ ಕಾರ್ಯಕ್ರಮ ಕಾರಣ ಎಂದು ಶಿವಸೇನೆಯ ಸಂಸದ ದೂರಿದ್ದಾರೆ.

ಗ್ಲೆನ್‌ಮಾರ್ಕ್ ಸಂಸ್ತೆ ಔಷಧ

  • ಕೋವಿಡ್‌- 19 ದೃಢಪಟ್ಟವರಿಗೆ ಚಿಕಿತ್ಸೆ ನೀಡಲು ಆ್ಯಂಟಿ ವೈರಲ್‌ ಔಷಧವನ್ನು ಬಿಡುಗಡೆ ಮಾಡಿರುವುದಾಗಿ ಗ್ಲೆನ್‌ಮಾರ್ಕ್ ಔಷಧ ತಯಾರಿಕಾ ಸಂಸ್ಥೆ 20,ಜೂನ್, 2020 ಶನಿವಾರ ಹೇಳಿದೆ. ಫ್ಯಾಬಿಫ್ಲೂ (FabiFlu) ಬ್ರ್ಯಾಂಡ್‌ ಹೆಸರಿನಲ್ಲಿ ಮಾತ್ರೆಗಳನ್ನು ಹೊರತರಲಾಗಿದ್ದು, ಪ್ರತಿ ಮಾತ್ರೆಗೆ ಸುಮಾರು Rs.103 ಬೆಲೆ ಇದೆ. ಮೊದಲ ದಿನ ಎರಡು ಬಾರಿ 1,800 ಎಂಜಿ ಪ್ರಮಾಣದಷ್ಟು ಔಷಧ, ನಂತರ 14 ದಿನಗಳ ವರೆಗೂ ನಿತ್ಯ ಎರಡು ಬಾರಿ 800 ಎಂಜಿ ಪ್ರಮಾಣದ ಔಷಧ ತೆಗೆದುಕೊಳ್ಳಬಹುದು ಎಂದಿದೆ. ಕೊರೊನಾ ಸೋಂಕು ಪರಿಣಾಮ ಸಾಧಾರಣ ಮಟ್ಟದಲ್ಲಿರುವ ರೋಗಿಗಳಿಗೆ ಈ ಔಷಧ ಶೇ 88ರಷ್ಟು ಫಲಿತಾಂಶ ನೀಡಿರುವುದಾಗಿ ಗ್ಲೆನ್‌ಮಾರ್ಕ್‌ ಹೇಳಿದೆ.

ಕೋವಿಡ್‌- 19 ಸಾಂಕ್ರಾಮಿಕಕ್ಕೆ ಲಸಿಕೆ

  • ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಭಾರತದ ಮೊದಲ ಕರೋನವೈರಸ್ ಲಸಿಕೆ ಕೋವಾಕ್ಸಿನ್ ಅಭಿವೃದ್ಧಿಪಡಿಸಿದೆ. ಮಾನವರ ಮೇಲಿನ ಚಿಕಿತ್ಸಾ ಪ್ರಯೋಗ (ಹ್ಯೂಮನ್‌ ಕ್ಲಿನಿಕಲ್‌ ಟ್ರಯಲ್‌) ಪ್ರಾರಂಭಿಸಲು ಭಾರತದ ಔಷಧ ನಿಯಂತ್ರಣ ಮಹಾನಿರ್ದೇಶನದಿಂದ (ಡಿಸಿಜಿಐ)ಯಿಂದ ಅನುಮೋದನೆ ಪಡೆದಿದೆ. ವಿಸ್‌ಕಾನ್ಸಿನ್‌ ವಿಶ್ವವಿದ್ಯಾಲಯ, ಐಸಿಎಂಆರ್ ಮತ್ತು ಥಾಮಸ್ ಜೆಫರ್ಸನ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ತನ್ನ 3 ಕೋವಿಡ್ -19 ಲಸಿಕೆಗಳನ್ನು ಘೋಷಿಸಲು ಕೋವಾಕ್ಸಿನ್‌ ತಯಾರಕ ಸಂಸ್ಥೆ ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.ವಿಸ್‌ಕಾನ್ಸಿನ್‌ ವಿಶ್ವವಿದ್ಯಾಲಯ, ಐಸಿಎಂಆರ್ ಮತ್ತು ಥಾಮಸ್ ಜೆಫರ್ಸನ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಲಸಿಕೆಯ ಮೊದಲ ಮತ್ತು ಎರಡನೇ ಹಂತದ ಪ್ರಯೋಗವು ಜುಲೈನಿಂದ ಪ್ರಾರಂಭವಾಗಲಿದೆ, ಅದು ಜನರಿಗೆ ಲಭ್ಯವಾಗುವುದು ವೈಜ್ಞಾನಿಕವಾಗಿ ಪ್ರಯೋಗಗೊಂಡ ನಂತರ. ಹಾಗಾಗಿ ಅದರ ಲಭ್ಯತೆ ಯಾವಾಗ ಎನ್ನುವುದನ್ನು ತಿಳಿಯಲಾಗದು. ವಿಶ್ವಸಂಸ್ಥೆಯು, ಜಗತ್ತಿನಾದ್ಯಂತ ಸುಮಾರು 140 ಲಸಿಕೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಇವುಗಳಲ್ಲಿ 16 ಲಸಿಕೆ ಮಾತ್ರ ಚಿಕಿತ್ಸೆಗೆ ಬಳಸಲಾಗುತ್ತಿದೆ. ಚೀನಾದ 5, ಅಮೆರಿಕದ 3, ಇಂಗ್ಲೆಂಡ್‌ನ 2 ಮತ್ತು ಜರ್ಮನಿ, ಆಸ್ತ್ರೇಲಿಯಾ, ರಷ್ಯಾದ ತಲಾ ಒಂದು ಲಸಿಕೆ ಸೇರಿವೆ, ಎಂದು ಹೇಳಿತ್ತು. ಪ್ರಧಾನಿ ಮೋದಿ ಶುಭ ಹಾರೈಸಿದ್ದಾರೆ.

ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್‌ನ ಕೊವ್ಯಾಕ್ಸಿನ್‍ ಲಸಿಕೆಗಳು

  • 2020 ಫೆಬ್ರವರಿಯಲ್ಲಿ ಆರಂಭವಾಗಿ ಕಳೆದ 12 ತಿಂಗಳಿಂದ ದೇಶದ ಜನರನ್ನು ಕಂಗೆಡಿಸಿರುವ ಕೋವಿಡ್ ತೊಡೆದುಹಾಕುವ ನಿಟ್ಟಿನಲ್ಲಿ ಬೃಹತ್ ಕೋವಿಡ್ ಲಸಿಕೆ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ 16–1, 2021 ರಂದು ನೀಡಿದ್ದಾರೆ. ಇಂದಿನಿಂದ 3 ಕೋಟಿ ಆರೋಗ್ಯ ಮತ್ತು ಇತರ ಮುಂಚೂಣಿ ಕಾರ್ಯಕರ್ತರಿಗೆ ಮೊದಲಿಗೆ ಲಸಿಕೆ ಹಾಕಲಾಗುತ್ತಿದೆ. ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿರುವ ಆಕ್ಸ್‌ಫರ್ಡ್ ಯುನಿವರ್ಸಿಟಿ-ಅಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿರುವ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್‌ನ ಕೊವ್ಯಾಕ್ಸಿನ್ ಎರಡೂ ಲಸಿಕೆಗಳು ಸುರಕ್ಷಿತ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತವೆ ಎಂಬುದನ್ನು ಸಾಬೀತು ಮಾಡಿವೆ ಎಂದು ಕೇಂದ್ರ ಆರೋಗ್ಯಮಂತ್ರಿ ಹರ್ಷವರ್ಧನ್ ಹೇಳಿದ್ದಾರೆ.
  • ಕೆಲವು ಮಾಹಿತಿಗಳು: ಈ ಲಸಿಕೆ ಅಭಿಯಾನದಲ್ಲಿ ಮೊದಲ ದಿನ 3 ಲಕ್ಷ ಆರೋಗ್ಯ ಕಾರ್ಯಕರ್ತರು ಲಸಿಕೆ ಸ್ವೀಕರಿಸಲಿದ್ದಾರೆ; ದೇಶದಾದ್ಯಂತ 3,000 ಕಡೆಗಳಲ್ಲಿ ಲಸಿಕೆ ಹಾಕಲಾಗುತ್ತಿದೆ; ಪ್ರತಿ ಲಸಿಕೆ ಕೇಂದ್ರದಲ್ಲಿ ಮೊದಲ ದಿನ 100 ಜನರಿಗೆ ಲಸಿಕೆ ಹಾಕಲಾಗುತ್ತದೆ;1 ಕೋಟಿ ಆರೋಗ್ಯ ಕಾರ್ಯಕರ್ತರು ಮತ್ತು 2 ಕೋಟಿ ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುತ್ತಿದೆ. ಕ್ರಮವಾಗಿ 50 ವರ್ಷ ಮೇಲ್ಪಟ್ಟವರಿಗೆ, 50 ವರ್ಷ ಒಳಗಿನ ಆರೋಗ್ಯ ಸಂಬಂಧಿತ ಸಮಸ್ಯೆ ಇರುವ ನಾಗರಿಕರಿಗೆ ಲಸಿಕೆ ಹಾಕಲಾಗುತ್ತದೆ. 700 ಜಿಲ್ಲೆಗಳಲ್ಲಿ ಸುಮಾರು 1.5 ಲಕ್ಷ ಸಿಬ್ಬಂದಿಗೆ ಲಸಿಕೆ ವಿತರಣೆಗೆ ವಿಶೇಷ ತರಬೇತಿ ನೀಡಲಾಗಿದೆ. ಈ ಸಾಂಕ್ರಾಮಿಕ ರೋಗವು ದೇಶದಲ್ಲಿ ಇದುವರೆಗೆ 1.5 ಲಕ್ಷಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ. 1.05 ಕೋಟಿಗೂ ಹೆಚ್ಚು ಮಂದಿ ಸೋಂಕಿಗೆ ಒಳಗಾಗಿದ್ದಾರೆ.

ಭಾರತದ ಕೊವ್ಯಾಕ್ಸಿನ್‍ ಲಸಿಕೆಗಳು

ಭಾರತವು ಈವರೆಗೆ ಸುಮಾರು 5.8 ಕೋಟಿ ಕೋವಿಡ್ ಲಸಿಕೆಯ ಡೋಸ್‌ಗಳನ್ನು 100ಕ್ಕೂ ಹೆಚ್ಚು ದೇಶಗಳಿಗೆ ವಿತರಣೆ ಮಾಡಿದೆ ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ. ಕೆಲವು ದೇಶಗಳಿಗೆ ಉಚಿತವಾಗಿ ನೆರವಿನ ರೂಪದಲ್ಲಿ ನೀಡಿದರೆ, ಅಂತರರಾಷ್ಟ್ರೀಯ ಲಸಿಕೆ ಒಕ್ಕೂಟಕ್ಕೆ ಒಂದಿಷ್ಟು ಲಸಿಕೆ ನೀಡಲಾಗುತ್ತಿದೆ. ಉಳಿದವನ್ನು ವಿವಿಧ ದೇಶಗಳಿಗೆ ಮಾರಾಟ ಮಾಡಲಾಗುತ್ತಿದೆ. ದೇಶೀಯ ಬಳಕೆಯನ್ನು ಗಮನದಲ್ಲಿಟ್ಟುಕೊಂಡು ವಿದೇಶ ಗಳಿಗೆ ಹಂತಹಂತವಾಗಿ ರಫ್ತು ಮಾಡಲಾಗುತ್ತಿದೆ ಎಂದು ವಿದೇಶಾಂಗ ವಕ್ತಾರ ಅನುರಾಗ್ ಶ್ರೀವಾಸ್ತವ ತಿಳಿಸಿ ದ್ದಾರೆ.

ಭಾರತದಲ್ಲಿ 350 ಕೋಟಿ ಡೋಸ್‌ ತಯಾರಿಕೆ

ಕೋವಿಡ್ ಲಸಿಕೆ ಉತ್ಪಾದನೆಯಲ್ಲಿ ಅಮೆರಿಕ ಮೊದಲನೇ ಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ ಭಾರತ ಇದೆ. 2021ರಲ್ಲಿ ಭಾರತದಲ್ಲಿ ಸುಮಾರು 350 ಕೋಟಿ ಡೋಸ್ ಲಸಿಕೆ ತಯಾರಿ ಆಗಬಹುದು ಎಂದು ಸಲಹಾ ಸಂಸ್ಥೆ ಡೆಲಾಯ್ಟ್ ಅಭಿಪ್ರಾಯಪಟ್ಟಿದೆ. ಅಮೆರಿಕ ಸುಮಾರು 400 ಕೋಟಿ ಡೋಸ್ ತಯಾರಿಸಬಹುದು ಎಂದು ಅಂದಾಜಿಸಿದೆ. ಜಾಗತಿಕ ಬೇಡಿಕೆ ಪೂರೈಸಲು ಭಾರತದ ಕಂಪನಿಗಳು ಉತ್ಪಾದನೆಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ತಯಾರಿ ನಡೆಸುತ್ತಿವೆ.

  • ದೇಶಗಳಿಗೆ ನೆರವಿನ ಲಸಿಕೆಬಾಂಗ್ಲಾದೇಶ, ಮ್ಯಾನ್ಮಾರ್, ನೇಪಾಳ, ಭೂತಾನ್, ಮಾಲ್ಡೀವ್ಸ್, ಮಾರಿಷಸ್, ಸೀಷೆಲ್ಸ್, ಶ್ರೀಲಂಕಾ, ಬಹರೇನ್, ಒಮಾನ್, ಅಫ್ಗಾನಿಸ್ತಾನ, ಬಾರ್ಬಡೋಸ್ ಮತ್ತು ಡೊಮೊನಿಕಾ.
  • ಬ್ರೆಜಿಲ್, ಮೊರಾಕ್ಕೊ, ಬಾಂಗ್ಲಾದೇಶ, ಮ್ಯಾನ್ಮಾರ್, ಈಜಿಪ್ಟ್, ಅಲ್ಜೀರಿಯಾ, ದಕ್ಷಿಣ ಆಫ್ರಿಕಾ, ಕುವೈತ್, ಯುಎಇ ಹಾಗೂ ಇತರೆ ದೇಶಗಳಿಗೆ ಲಸಿಕೆ ಮಾರಾಟಮಾಡಿದೆ.

ಭಾರತಾದ್ಯಂತ ಲಾಕ್‍ಡೌನ್

  • ಕರ್ನಾಟಕದಲ್ಲಿ ೨೦೨೦ ಕೊರೋನಾವೈರಸ್ ಸಾಂಕ್ರಾಮಿಕ‎
  • ಕೊರೋನಾವೈರಸ್ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟಲು, 24ನೇ ಮಾರ್ಚಿ 2020 ರಂದು, ಭಾರತ ದೇಶದ ಜನತೆ 21 ದಿನಗಳ ಕಾಲ ಮನೆಯಲ್ಲೇ ಇರುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮನವಿ ಮಾಡಿದರು. ದಿ.24ನೇ ಮಾರ್ಚಿ 2020 ಮಧ್ಯರಾತ್ರಿಯಿಂದ ದೇಶಾದ್ಯಂತ 21 ದಿನಗಳ ಕಾಲ (ದಿ.16 ಏಪ್ರಿಲ್‍ 2020 ವರೆಗೆ) ಸಂಪೂರ್ಣ ಲಾಕ್ ಡೌನ್ ಆಗಿದೆ. ಇದು ಜನಸಂಚಾರ ವಾಹನ ಸಂಚಾರದ ಕಟ್ಟುನಿಟ್ಟಾದ ನಿರ್ಬಂಧ. ಇದು ಜನತಾ ಕರ್ಪ್ಯೂಗಿಂತ ಕಠಿಣವಾಗಿದೆ. ಒಂದು ರೀತಿಯಲ್ಲಿ ಕರ್ಪ್ಯೂವೇ ಆಗಿದೆ. ಇದು ದೇಶದ ಪ್ರತಿ ರಾಜ್ಯ, ಜಿಲ್ಲೆ, ಗ್ರಾಮಗಳಿಗೆ ಅನ್ವಯವಾಗಲಿದೆ ಎಂದು ಮೋದಿಯವರು ಘೋಷಿಸಿದರು. ಅದಕ್ಕೂ ಮೊದಲ ದಿನ ಕರ್ನಾಟಕದಲ್ಲಿ ಮಾರ್ಚಿ 31, 2020 ರವರೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಲಾಕ್‍ಡೌನ್ ಘೋಷಿಸಿದ್ದರು.. ಆದರೆ ಸಾಮಾನ್ಯ ಜನರಿಗೆ ಅಗತ್ಯ ವಸ್ತುಗಳ ಸರಬರಾಜು ತೊಂದರೆಗೊಳಗಾಯಿತು ಮತ್ತು ದಿನಗೂಲಿ ನೌಕರರು, ವಲಸೆ ಕಾರ್ಮಿಕರರು ಆಹಾರ ವಸತಿ ಇಲ್ಲದೆ ಸಂಕಷ್ಟಕ್ಕೊಳಗಾದರು. ಕೆಲಸವಿಲ್ಲ, ದುಡ್ಡಿಲ್ಲ, ಹಳ್ಳಿಗಳಿಗೆ ತೆರಳಿದವರು ರಸ್ತೆಗಳಲ್ಲೇ ವಾಸ್ತವ್ಯ, ಕರುಣಾಜನಕ ಸ್ಥಿತಿ

ಲಾಕ್‌ಡೌನ್ 2020 ಮೇ 3 ರವರೆಗೆ ವಿಸ್ತರಣೆ

  • ದಿ.16 ಏಪ್ರಿಲ್‍ 2020 ವರೆಗೆ ಇದ್ದ ಕರೋನವೈರಸ್ ಹೊಸ ಹರಡುವಿಕೆಯನ್ನು ನಿಯಂತ್ರಿಸಲು ರಾಷ್ಟ್ರವ್ಯಾಪಿ ಲಾಕ್‌ಡೌನ್ ಅನ್ನು 2020 ಮೇ 3 ರವರೆಗೆ ವಿಸ್ತರಿಸಲಾಗಿದೆ. ಮತ್ತು ಇದರೊಂದಿಗೆ ಹೊಸ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಸಾರ್ವಜನಿಕರು, ಕಚೇರಿಗಳು, ಕೈಗಾರಿಕೆಗಳು ಮತ್ತು ಇತರ ಸಂಸ್ಥೆಗಳು ಅನುಸರಿಸಬೇಕಾಗಿದೆ.

ಲಾಕ್‌ಡೌನ್ 2020 ಮೇ 17 ರವರೆಗೆ ವಿಸ್ತರಣೆ

  • ಲಾಕ್‌ಡೌನ್ ಅವಧಿಯನ್ನು 2020 ಮೇ 3 ರಿಂದ ಮೇ.17ರವರೆಗೆ ಕೇಂದ್ರಸರ್ಕಾರ ವಿಸ್ತರಣೆ ಮಾಡಿತು. ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವುದರಿಂದ ಲಾಕ್‌ಡೌನ್ ಅವಧಿ ವಿಸ್ತರಿಸಲಾಗಿದೆ, ಎಂದು ಹೇಳಿದೆ. ಮೇ.3ರ ನಂತರ ಎರಡು ವಾರ ಲಾಕ್‍ಡೌನ್ ವಿಸ್ತರಿಸಿರುವುದಾಗಿ ಪ್ರಕಟಣೆ ಹೊರಡಿಸಿರುವ ಕೇಂದ್ರ ಗೃಹ ಸಚಿವಾಲಯವು ಈ ಅವಧಿಯಲ್ಲಿ ಕೆಲವು ಕಾರ್ಯಗಳಿಗೆ ನಿಯಂತ್ರಣ ಹೇರುವ ಬಗ್ಗೆ ಹೊಸ ಮಾರ್ಗಸೂಚಿ ಹೊರಡಿಸಿತು. ಕೆಂಪು, ಕಿತ್ತಳೆ ಮತ್ತು ಹಸಿರು ವಲಯಗಳಾಗಿ ವಿಂಗಡಿಸಿದ ಪ್ರದೇಶಗಳಲ್ಲಿ ಹೊಸ ರೀತಿ ನಿರ್ಬಂಧಗಳಿರಲಿವೆ.

ಲಾಕ್‍ಡೌನ್ ಮೂರನೇ ಹಂತ

  • ದಿ.4-5-2020 ಸೋಮವಾರದಿಂದ ದೇಶದಾದ್ಯಂತ ಮೂರನೇ ಹಂತದ ಲಾಕ್‌ಡೌನ್‌ ಜಾರಿಯಾಗಿದ್ದು, ಅದು ಮೇ 17ರವರೆಗೆ ಮುಂದುವರಿಯಲಿದೆ. ‘ಈ ಬಾರಿ ಸಾಕಷ್ಟು ವಿನಾಯಿತಿಗಳನ್ನು ನೀಡಲಾಗಿದೆ. ಕೊರೊನಾ ವೈರಸ್‌ ನಿಯಂತ್ರಣದಲ್ಲಿ ಈವರೆಗೆ ಆಗಿರುವ ಸಾಧನೆ ವ್ಯರ್ಥವಾಗಬಾರದೆಂಬ ಕಾರಣಕ್ಕೆ ಕಂಟೈನ್‌ಮೆಂಟ್‌ ಪ್ರದೇಶಗಳಲ್ಲಿ ನಿರ್ಬಂಧಗಳು ಮುಂದುವರಿಯಲಿವೆ’ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಕಂಟೈನ್‌ಮೆಂಟ್‌ ಪ್ರದೇಶವನ್ನು ಬಿಟ್ಟು ಉಳಿದ ಎಲ್ಲಾ ವಲಯಗಳಲ್ಲೂ ಬೆಳಿಗ್ಗೆ 7ರಿಂದ ಸಂಜೆ 7 ಗಂಟೆಯವರೆಗೆ ಸಾರ್ವಜನಿಕರ ಓಡಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.

ಲಾಕ್‍ಡೌನ್ ನಾಲ್ಕನೇ ಹಂತ

  • ನಾಲ್ಕನೇ ಹಂತದ ರಾಷ್ಟ್ರವ್ಯಾಪಿ ಲಾಕ್‌ಡೌನ್‌ ೧೮-೫-೨೦೨೦ ಸೋಮವಾರದಿಂದ ಪ್ರಾರಂಭವಾಗುತ್ತದೆ. ಈ ಕುರಿತು ಕೇಂದ್ರವು ಭಾನುವಾರ ಅಧಿಸೂಚನೆ ಹೊರಡಿಸಿದ್ದು, ಮೇ 31 ರಂದು ಇನ್ನೂ ಎರಡು ವಾರಗಳವರೆಗೆ ನಿರ್ಬಂಧಗಳನ್ನು ವಿಸ್ತರಿಸಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಹೇಳಿದಂತೆ, ಲಾಕ್‌ಡೌನ್ 4.0 ಹಿಂದಿನ ಮೂರಕ್ಕಿಂತ ಭಿನ್ನವಾಗಿರುತ್ತದೆ ಹಂತಗಳು.[
  • ನಾಲ್ಕನೇ ಲಾಕ್‌ಡೌನ್‌ನಲ್ಲಿ ಏನೇನು ಸೇವೆ ಲಭ್ಯವಿರಲಿವೆ ಮತ್ತು ಯಾವುದಕ್ಕೆಲ್ಲ ನಿರ್ಬಂಧವಿದೆ ಎಂದು ಕೇಂದ್ರ ಗೃಹ ಸಚಿವಾಲಯ ೧೭-೫-೨೦೨೦ಭಾನುವಾರ ಬಿಡುಗಡೆ ಮಾಡಿರುವ ಮಾರ್ಗಸೂಚಿಯಲ್ಲಿ ವಿಸ್ತೃತವಾಗಿ ಹೇಳಲಾಗಿದೆ. ರಾಜ್ಯ ಸರ್ಕಾರಗಳು ಕೆಂಪು, ಹಸಿರು, ಕಿತ್ತಳೆ ವಲಯಗಳನ್ನು ನಿರ್ಧರಿಸಬಹುದಾಗಿದೆ. ಕೆಂಪು ಮತ್ತು ಕಿತ್ತಳೆ ವಲಯಗಳಲ್ಲಿ ಕಂಟೈನ್‌ಮೆಂಟ್ ವಲಯಗಳ ಗಡಿಯನ್ನು ಜಿಲ್ಲಾ ಅಧಿಕಾರಿಗಳು ಗುರುತಿಸಬೇಕಾಗುತ್ತದೆ. ಮುಖ್ಯವಾಗಿ,* ಕಂಟೈನ್‌ಮೆಂಟ್ ಪ್ರದೇಶ ಹೊರತುಪಡಿಸಿ ಅಂತರರಾಜ್ಯ ಪ್ರಯಾಣಿಕ ವಾಹನಗಳ ಹಾಗೂ ಬಸ್ ಸಂಚಾರಕ್ಕೆ ಅನುಮತಿ. ಉಭಯ ರಾಜ್ಯಗಳ ಸಮ್ಮತಿಯೊಂದಿಗೆ ಸಂಚಾರ ಕೈಗೊಳ್ಳಬಹುದು. ಕೆಂಪು, ಹಸಿರು, ಕಿತ್ತಳೆ ವಲಯಗಳನ್ನು ರಾಜ್ಯಗಳು ನಿರ್ಧರಿಸಬೇಕು. ಕೆಂಪು ಮತ್ತು ಕಿತ್ತಳೆ ವಲಯಗಳಲ್ಲಿ ಕಂಟೈನ್‌ಮೆಂಟ್ ವಲಯಗಳನ್ನು ಜಿಲ್ಲಾ ಅಧಿಕಾರಿಗಳು ಗುರುತಿಸಬೇಕು. ಕಂಟೈನ್‌ಮೆಂಟ್ ವಲಯಗಳಲ್ಲಿ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶವಿದೆ. ವಿಶೇಷ ನಿರ್ಬಂಧ ವಿಧಿಸದೇ ಇರುವ ಚಟುವಟಿಕೆಗಳಿಗೆ ಅನುಮತಿ ಇದೆ. ಆರೋಗ್ಯ ಕಾರ್ಯಕರ್ತರು ಮತ್ತು ಅಧಿಕಾರಿಗಳ ಅಂತರರಾಜ್ಯ ಪ್ರಯಾಣ ಮತ್ತು ರಾಜ್ಯದೊಳಗಿನ ಪ್ರಯಾಣಕ್ಕೆ ನಿರ್ಬಂಧ ವಿಧಿಸುವಂತಿಲ್ಲ. ಎಲ್ಲ ರೀತಿಯ ಸರಕು ಸಾಗಣೆ ವಾಹನಗಳ ಅಂತರರಾಜ್ಯ ಪ್ರಯಾಣಕ್ಕೆ ಎಲ್ಲ ರಾಜ್ಯಗಳೂ ಅನುಮತಿ ನೀಡಬೇಕು. ಖಾಲಿ ಟ್ರಕ್‌ಗಳ ಸಂಚಾರಕ್ಕೂ ಅವಕಾಶ ನೀಡಬೇಕು. ಇತ್ಯಾದಿ.

ಲಾಕ್‍ಡೌನ್ ಜೂನ್ ೧ರಿಂದ ಹಂತ ಹಂತವಾಗಿ ತೆರವು

  • 2020 ಜೂನ್ 1ರಿಂದ ಹೊಸ ಮಾರ್ಗಸೂಚಿಯಂತೆ ನಿಷೇಧಾಜ್ಞೆ ಅವಧಿಯನ್ನು ಪರಿಷ್ಕರಿಸಲಾಗಿದೆ. ಬೆಂಗಳೂರಿನಲ್ಲಿ ರಾತ್ರಿ 9ರಿಂದ ಬೆಳಿಗ್ಗೆ 5ರವರೆಗೆ ನಿಷೇಧಾಜ್ಞೆ ಮುಂದುವರಿಕೆ ಇರಲಿದೆ. ಉಳಿದ ಸಮಯದಲ್ಲಿ ವ್ಯಾಪಾರ ಮತ್ತು ಸಂಚಾರ ಮುಕ್ತ. ಹಂತ ಹಂತವಾಗಿ ಬೀಗಮುದ್ರೆ ತೆರವುಗೊಳಿಸುವ ಯೋಜನೆಯನ್ನು ಹಾಕಿಕೊಂಡದೆ
  • ಹೊಸ ಕರೋನವೈರಸ್ ಪ್ರಕರಣಗಳಲ್ಲಿ ದೇಶವು ದಿನನಿತ್ಯ ದಾಖಲೆಯ ಏರಿಕೆಯನ್ನು ವರದಿ ಮಾಡಿದ್ದರೂ ಭಾರತವು ಕಠಿಣ ರಾಷ್ಟ್ರೀಯ ಲಾಕ್‌ಡೌನ್ ಅನ್ನು ಇನ್ನಷ್ಟು ಸರಾಗಗೊಳಿಸುವ ಯೋಜನೆಯನ್ನು ಪ್ರಕಟಿಸಿದೆ. ಜೂನ್ 8 ರಿಂದ, ಮೂರು ಹಂತದ ಯೋಜನೆಯ ಮೊದಲ ಹಂತದಲ್ಲಿ ರೆಸ್ಟೋರೆಂಟ್‌ಗಳು, ಹೋಟೆಲ್‌ಗಳು, ಖರೀದಿ ಕೇಂದ್ರಗಳು ಮತ್ತು ಪೂಜಾ ಸ್ಥಳಗಳನ್ನು ಅನೇಕ ಪ್ರದೇಶಗಳಲ್ಲಿ ಮತ್ತೆ ತೆರೆಯಲು ಅನುಮತಿಸಿದೆ. ವಾರಗಳ ನಂತರ, ಬಹುಶಃ ಜುಲೈನಲ್ಲಿ, ಶಾಲೆಗಳು ಮತ್ತು ಕಾಲೇಜುಗಳು ಬೋಧನೆಯನ್ನು ಪುನರಾರಂಭಿಸುವ ಯೋಜನೆ ಇದೆ.
  • 2020 ಜಲೈ 1ರಿಂದ ಎರಡನೇ ಹಂತದಲ್ಲಿ ಹೆಚ್ಚಿನ ರಿಯಾಯತಿ ಮಾಡಿಲ್ಲ. ಶಾಲಾಕಲೇಜುಗಳು ತೆರೆದಿಲ್ಲ. ಅಂತರ ಕಾಯ್ದುಕೊಳ್ಳುವಿಕೆ, ವೈಯಕ್ತಿಕ ಶುಚಿತ್ವ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಪ್ರಧಾನಿ ಸೂಚಿಸಿದರು.

ಲಾಕ್‍ಡೌನ ಪರಿಣಾಮ- ಸಂಕಷ್ಟದಲ್ಲಿ ವಲಸೆ ಕಾರ್ಮಿಕರು

  • ಕಳೆದ 2011ರ ರಜನಗಣತಿ ವರದಿಯ ಪ್ರಕಾರ ದೇಶದಲ್ಲಿ ನಾಲ್ಕು ಕೋಟಿ ವಲಸೆ ಕಾರ್ಮಿಕರಿದ್ದಾರೆ. ಆರ್ಥಿಕ ಹಿನ್ನಡೆಯ ಈ ಹತ್ತು ವರ್ಷಗಳಲ್ಲಿ ಅದು ಐದು - ಆರು ಕೋಟಿ ಆಗಿರಬಹುದು. ಲಾಕ್‌ಡೌನ್‌ ಘೋಷಿಸಿದ ನಂತರ ಸುಮಾರು 75 ಲಕ್ಷ ಮಂದಿ ತಮ್ಮ ಮನೆಗೆ ಮರಳಿದ್ದಾರೆ. ಅವರಲ್ಲಿ 35 ಲಕ್ಷ ಜನರು ಶ್ರಮಿಕ ರೈಲುಗಳಲ್ಲಿ ತಮ್ಮ ಮನೆಗಳನ್ನು ತಲುಪಿದ್ದಾರೆ. ಇನ್ನುಳಿದ 40 ಲಕ್ಷ ಜನರು ಬಸ್‌ಗಳಲ್ಲಿ ತೆರಳಿದರು ಎಂದು ಪುಣ್ಯ ಶ್ರೀವಾಸ್ತವ ಹೇಳಿದ್ದಾರೆ. ಆದರೆ ನೂರಾರು - ಸಾವಿರಾರು ಕಾರ್ಮಿಕರು ಸಾವಿರಾರು ಮೈಲುಗಳ ದೂರ ಸರ್ಕಾರ ಯಾವ ವ್ಯವಸ್ಥೆಯನ್ನೂ ಮಾಡದ ಕಾರಣ ಮಕ್ಕಳುಮರಿ ಸಹಿತ ತಮ್ಮ ದಿನಬಳಕೆಯ ಹೊರೆ ಹೊತ್ತು ನೆಡೆದೇ ತಮ್ಮ ಊರು ಸೇರಿದರು. ಅದರಲ್ಲಿ ಅನೇಕರು ಅನಧಿಕೃತ ವಾಹನದ ಅಪಘಾತದಲ್ಲಿ ಮತ್ತು ಬಳಲಿ ಪ್ರಾಣ ಕಳೆದುಕೊಂಡರು. ಸರ್ಕಾರ ಮೌನವಹಿಸಿತು. ಅವರಿಗೆ ಯಾವ ಪರಿಹಾರವನ್ನೂ ಕೊಡಲಿಲ್ಲ.
  • ಆ 10 ದುಃಖಕರ ದಿನಗಳಲ್ಲಿ, ಈ ವಲಸೆ ಕಾರ್ಮಿಕನು 1,250 ಮೈಲುಗಳಷ್ಟು ಮನೆಗೆ ನಡೆದು ಹೋದನು. ಭಾರತದ ಲಾಕ್ ಡೌನ್‍ನಲ್ಲಿ ಅವರಿಗೆ ಬೇರೆ ಆಯ್ಕೆಗಳಿರಲ್ಲ.

ಇನ್ನಷ್ಟು ಮಾನವೀಯ ಸಮಾಜ ಕಟ್ಟೋಣವೇ?

  • ಅಜೀಂ ಪ್ರೇಮ್‌ಜಿ ಬರಹ:
  • ಚಲಿಸುತ್ತಿದ್ದ ರೈಲು ಹದಿನಾರು ಜನ ಯುವಕರನ್ನು ಆಹುತಿ ತೆಗೆದುಕೊಂಡಿತು. ಜೀವನೋಪಾಯ ಕಳೆದುಕೊಂಡ ಲಕ್ಷಾಂತರ ಇತರರಂತೆ, ಈ ಯುವಕರು ಕೂಡ ಹಸಿವಿನಿಂದ ಕಂಗೆಟ್ಟಿದ್ದರು. ಹಾಗಾಗಿ, ನೂರಾರು ಕಿ.ಮೀ. ದೂರದಲ್ಲಿದ್ದ ತಮ್ಮ ಮನೆಗಳಿಗೆ ನಡೆದುಕೊಂಡೇ ಹೋಗೋಣ ಎಂದು ತೀರ್ಮಾನಿಸಿದ್ದ ಇವರು, ರೈಲು ಹಳಿಯ ಮೇಲೆ ಮಲಗಿದ್ದರು. ಲಾಕ್‌ಡೌನ್‌ ಅವಧಿಯಲ್ಲಿ ರೈಲು ಸಂಚಾರ ಇರುವುದಿಲ್ಲ ಎಂದು ಅವರು ಭಾವಿಸಿದ್ದರು. ಸಾಂಕ್ರಾಮಿಕವನ್ನು ತಡೆಯಲು ಒಂದಲ್ಲ ಒಂದು ಬಗೆಯಲ್ಲಿ ಲಾಕ್‌ಡೌನ್‌ ಅಗತ್ಯವಿತ್ತು. ಆದರೆ, ಈ ಬಗೆಯ ದುರಂತಗಳನ್ನು ಕ್ಷಮಿಸಲಾಗದು.
  • ‘ಕ್ಷಮಿಸಲಾಗದು’ ಎಂಬ ಪದವನ್ನು ನಾನು ಹಗುರವಾಗಿ ಬಳಸುತ್ತಿಲ್ಲ. ಇದರ ಹೊಣೆಯನ್ನು ನಾವೇ, ಅಂದರೆ ನಾವು ಕಟ್ಟಿದ ಸಮಾಜ ಹೊರಬೇಕು. ನಮ್ಮ ನಡುವಿನ ಅತ್ಯಂತ ದುರ್ಬಲರು, ಅತ್ಯಂತ ಬಡವರು ಅನುಭವಿಸುತ್ತಿರುವ ಯಾತನೆಯನ್ನು ಅತ್ಯಂತ ಗಾಢವಾಗಿ ತೋರಿಸುವ ದುರಂತಗಳಲ್ಲಿ ಇದು ಒಂದು. ನಾವು ವಾಸ್ತವದಲ್ಲಿ ಅನುಭವಿಸುತ್ತಿರುವ ಸಂಕಟ ಇದು.
  • ವಾಣಿಜ್ಯೋದ್ಯಮಗಳ ಬೆಂಬಲದಿಂದ ಕೆಲವು ರಾಜ್ಯ ಸರ್ಕಾರಗಳು, ಕಾರ್ಮಿಕರನ್ನು ರಕ್ಷಿಸುವ ಹಲವು ಕಾನೂನುಗಳನ್ನು ಅಮಾನತಿನಲ್ಲಿರಿಸುವ ಆಲೋಚನೆಯಲ್ಲಿವೆ (ಅಥವಾ, ಈಗಾಗಲೇ ಅಮಾನತಿನಲ್ಲಿರಿಸಿವೆ) ಎಂಬುದನ್ನು ತಿಳಿದಾಗ ಆಘಾತವಾಯಿತು.

ಭಾರತಾದ್ಯಂತ ಲಾಕ್‍ಡೌನ್‍ ಸಡಿಲ

  • ಭಾರತದಲ್ಲಿ ಕರೋನವೈರಸ್ ಪ್ರಕರಣಗಳು ಇಳಿಮುಖವಾಗುತ್ತಿರುವುದರಿಂದ, ಕೇಂದ್ರ ಸರ್ಕಾರವು 2021 ಫೆಬ್ರವರಿ 1 ರಿಂದ ಸಾರ್ವಜನಿಕರಿಗೆ ಅನ್‌ಲಾಕ್ ಮಾರ್ಗಸೂಚಿಗಳನ್ನು ಸಡಿಲಗೊಳಿಸಿದೆ, ಸಿನೆಮಾ ಹಾಲ್‌ಗಳಲ್ಲಿ ಸಂಪೂರ್ಣ ಸಾಮರ್ಥ್ಯವನ್ನು ನೀಡುತ್ತದೆ, ಹಾಗೆಯೇ ದೇವಾಲಯಗಳಿಗೂ ಅವಕಾಶನೀಡಲಾಗಿದೆ. ಶಾಲಾಕಾಲೇಜುಗಳನ್ನು ಮುನ್ನೆಚ್ಚರಿಕೆಯ ಕ್ರಮ ಅನುಸರಿಸಿ ನೆಡೆಸಲು ಅನುಮತಿ ನೀಡಲಾಗಿದೆ. ಎಂದರೆ ಕರೋನವೈರಸ್ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಅನುಸರಿಸಿ ಶಾಲೆಗಳನ್ನು ಪುನಃ ತೆರೆಯಲಾಗುತ್ತದೆ.

ಪಶ್ಚಿಮ ಬಂಗಾಳದಲ್ಲಿ ಅಪಂನ್‌ ಚಂಡಮಾರುತ

ಭಾರತ ಗಣರಾಜ್ಯದ ಇತಿಹಾಸ - ಭಾಗ ೨ 
ಮೇ 19, 20 ರಂದು ಪೂರ್ವ ಭಾರತ, ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶ ಕ್ಕೆ ಸಮೀಪಿಸುತ್ತಿರುವ ಅಪಂನ್‌ ಚಂಡಮಾರುತ
  • ವಿವರ:Cyclone Amphan- ಅಪಂನ್‌ ಚಂಡಮಾರುತ
  • ಪಶ್ಚಿಮ ಬಂಗಾಳದಲ್ಲಿ ಮೇ ೨೦,೨೦೨೦ ರಿಂದ ಅಪಂನ್‌ ಚಂಡಮಾರುತ ಧಾಳಿಮಾಡಿತು. ದೇಶದ ಪೂರ್ವ ಭಾಗದಲ್ಲಿ ತೀವ್ರ ಪ್ರಭಾವ ಬೀರಿದ್ದು, ಪಶ್ಚಿಮ ಬಂಗಾಳದಲ್ಲಿ Rs.1 ಲಕ್ಷ ಕೋಟಿಯಷ್ಟು (13 ಬಿಲಿಯನ್‌ ಡಾಲರ್‌) ಮೂಲಸೌಕರ್ಯಗಳು ಹಾಗೂ ಬೆಳೆಗೆ ಹಾನಿಯಾಗಿರುವುದಾಗಿ ರಾಜ್ಯದ ಅಧಿಕಾರಿಗಳು ತಿಳಿಸಿದ್ದಾರೆ. ಅಂಪನ್ ಅಪ್ಪಳಿಸುವುದಕ್ಕೂ ಮುನ್ನ 30 ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದ್ದು, ಇದರಿಂದಾಗಿ ಸಾಕಷ್ಟು ಪ್ರಾಣ ಹಾನಿ ತಪ್ಪಿದೆ. ಚಂಡಮಾರುತದಿಂದ 1.3 ಕೋಟಿಗೂ ಹೆಚ್ಚು ಜನರು ಮನೆ, ಬೆಳೆ ಹಾಗೂ ಭೂಮಿ ಕಳೆದುಕೊಂಡಿದ್ದಾರೆ. ಸುಮಾರು 15 ಲಕ್ಷ ಮನೆಗಳಿಗೆ ಹಾನಿಯಾಗಿರುವುದಾಗಿ ಪಶ್ಚಿಮ ಬಂಗಾಳ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಪಶ್ಚಿಮ ಬಂಗಾಳದ 24 ಪರಗಣದಲ್ಲಿ 700 ಗ್ರಾಮಗಳಲ್ಲಿ ಹಾನಿ ಉಂಟಾಗಿದ್ದು, 80,000 ಜನರು ಮನೆಗಳನ್ನು ಕಳೆದುಕೊಂಡಿರುವುದಾಗಿ ವರದಿಯಾಗಿದೆ. ಚಂಡಮಾರುತ ಗಂಟೆಗೆ 133 ಕಿ.ಮೀ ವೇಗದಲ್ಲಿ ಬೀಸಿರುವ ಪರಿಣಾಮ ರಸ್ತೆಯಲ್ಲಿ ಉರುಳಿರುವ ಮರಗಳು, ತುಂಬಿರುವ ಮಣ್ಣು ಹಾಗೂ ಕಟ್ಟಡದ ಅವಶೇಷಗಳನ್ನು ತೆರವುಗೊಳಿಸಲು ಕೋಲ್ಕತ್ತದಲ್ಲಿ ಆಡಳಿತವು ಪ್ರಯತ್ನಿಸುತ್ತಿದೆ. ಅಲ್ಲಿ 86 ಜನರು ಸಾವನ್ಪ್ಪಿದ್ದಾರೆ.
  • ಕೇಂದ್ರ ಸರ್ಕಾರವು ಪಶ್ಚಿಮ ಬಂಗಾಳಕ್ಕೆ 1000 ಕೋಟಿ ರೂ. ನೆರವು ಘೋಷಿಸಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ತಮ್ಮ ರಾಜ್ಯಕ್ಕೆ ಕೇಂದ್ರದಿಂದ ಬರಬೇಕಾದ ತೆರಿಗೆ ಬಾಕಿಯ ಮೊತ್ತ ರೂ.53 ಸಾವಿರ ಕೋಟಿಗಳ ಬಾಕಿಯನ್ನು ಕೊಟ್ಟರೆ ಪರಿಹಾರಕ್ಕೆ ನೆರವಾಗಲಿದೆ ಎಂದು ಕೇಂದ್ರಕ್ಕೆ ಒತ್ತಾಸೆ ಮಾಡಿದ್ದಾರೆ. ಆದರೆ ಕೇಂದ್ರ ಅದಕ್ಕೆ ಮೌನ ವಹಿಸಿದೆ.

ಜೂನ್ 15, 2020 ರ ದೋಕಲಾದಲ್ಲಿ ಚೀನಾ ಸಂಘರ್ಷ

  • ವಿಸ್ತೃತ ಲೇಖನ:ಭಾರತ ಚೀನಾ ಗಡಿ ವಿವಾದ
  • 2020 China–India skirmishes-2020 ಭಾರತ ಚೀನಾ ಘರ್ಷಣೆ
  • ಗಾಲ್ವನ್‌ ಕಣಿವೆ ಮತ್ತು ಪೂರ್ವ ಲಡಾಖ್‌ ಪ್ರದೇಶದಲ್ಲಿ ಜೂನ್ 15, ೨೦೨೦ ಸೋಮವಾರ ರಾತ್ರಿ ಚೀನಾದ ಸೈನಿಕರ ಜತೆ ನಡೆದ ಘರ್ಷಣೆಯಲ್ಲಿ 20 ಯೋಧರು ಹುತಾತ್ಮರಾಗಿದ್ದು, ಘಟನೆಯಲ್ಲಿ ನಾಲ್ವರು ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಹಿಂಸಾಚಾರದಲ್ಲಿ 16 ಬಿಹಾರ ರೆಜಿಮೆಂಟ್‌ನ ಕರ್ನಲ್‌ ಬಿ. ಸಂತೋಷ್‌ ಬಾಬು, ಯೋಧರಾದ ಹವಾಲ್ದಾರ್‌ ಪಳನಿ ಮತ್ತು ಸಿಪಾಯಿ ಓಝಾ ಸೇರಿದಂತೆ ಇಪ್ಪತ್ತು ಮಂದಿ ಯೋಧರು ಮೃತಪಟ್ಟಿದ್ದಾರೆ. ಅಲ್ಲದೆ, ಇದಕ್ಕೆ ಪ್ರತಿಯಾಗಿ ಚೀನಾದ 43 ಸೈನಿಕರು ಸಾವಿಗೀಡಾಗಿದ್ದಾರೆ ಎಂಬ ವರದಿ ಅನಧಿಕೃತ ಇದೆ. ಚೀನಾ ಮೌನ ವಹಿಸಿದೆ.

ಲಡಾಖ್‌ನ ನಾಲ್ಕು ಪ್ರದೇಶಗಳಲ್ಲಿ ಚೀನಾದ ಅತಿಕ್ರಮಣ

  • ಭಾರತ ಚೀನಾ ಗಡಿ ವಿವಾದ
  • ಭಾರತದ ನೆಲವನ್ನು ಚೀನಾ ಕಬಳಿಸಿದೆ ಎಂದೂ ಲಡಾಖ್‌ನ ನಾಲ್ಕು ಪ್ರದೇಶಗಳಲ್ಲಿ ಚೀನಾ ಅತಿಕ್ರಮಣ ಮಾಡಿದೆ ಎಂದೂ ರಾಹುಲ್ ಹೇಳಿದರು. ಇದನ್ನು ಭಾರತ ಸರ್ಕಾರ ಅಥವಾ ಪ್ರಧಾನಿ ನಿರಾಕರಿಸಿಲ್ಲ. ಚೀನಾದಿಂದ ಅಧಿಕ ಆಮದು ಮಾಡಿದ್ದನ್ನೂ ರಾಹುಲ್ ಟೀಕಿಸಿದರು.
  • ಇದಕ್ಕೆ ಉತ್ತರವಾಗಿ ಪ್ರಧಾನಿ ನರೇಂದ್ರ ಮೋದಿ 3-7-2020 ರಂದು ಶುಕ್ರವಾರ ಲಡಾಖ್‌ಗೆ ಭೇಟಿ ನೀಡಿ, ಚೀನಾದ ಹೆಸರು ಹೇಳದೆ, ಚೀನಾಕ್ಕೆ ಸ್ಪಷ್ಟ ಸಂದೇಶವೊಂದರಲ್ಲಿ ವಿಸ್ತರಣೆಯ ಯುಗ ಮುಗಿದಿದೆ ಮತ್ತು ಲಡಾಖ್‌ಗೆ ಘೋಷಿತ ಭೇಟಿ ನೀಡಿದ್ದರಿಂದ ಭಾರತದ ಶತ್ರುಗಳು ತನ್ನ ಸಶಸ್ತ್ರ ಪಡೆಗಳ "ಬೆಂಕಿ ಮತ್ತು ಕೋಪವನ್ನು" ನೋಡಿದ್ದಾರೆ ಎಂದು ಹೇಳಿದರು. ಈ ಭೇಟಿಯು ನೆರೆಯ ದೇಶದೊಂದಿಗೆ ಗಡಿರೇಖೆಯ ಬಗೆಗೆ ವ್ಯವಹರಿಸುವಾಗ ಭಾರತದ ದೃಡತೆಯ ಸಂಕೇತ ನೀಡಿದೆ,'ಎಂದರು.
  • ಒಂದು ತಿಂಗಳಿಗಿಂತಲೂ ಹೆಚ್ಚು ಕಾಲದಿಂದ ಚೀನಾ ಲಡಾಕನ ಈ ಪ್ರದೇಶದಲ್ಲಿ ಪಡೆಗಳನ್ನು ನಿರ್ಮಿಸುತ್ತಿದೆ ಎಂದು ಭಾರತ ಸಚಿವಾಲಯ ಹೇಳಿದೆ: "ಮೇ ತಿಂಗಳ ಆರಂಭದಿಂದಲೂ, ಚೀನಾದ ಕಡೆಯವರು ಎಲ್‌ಎಸಿಯ ಉದ್ದಕ್ಕೂ ಸೈನ್ಯ ಮತ್ತು ಶಸ್ತ್ರಾಸ್ತ್ರಗಳ ಒಂದು ದೊಡ್ಡ ತಂಡವನ್ನು ಸಂಗ್ರಹಿಸುತ್ತಿದ್ದಾರೆ."
  • ೨೦೨೦ ಜುಲೈ ಮೊದಲ ವಾರ ಬಿಡುಗಡೆಯಾದ ಮ್ಯಾಕ್ಸಾರ್ ಉಪಗ್ರಹ ಫೋಟೋಗಳು ಚೀನಾ ಗೊಗ್ರಾ ಉತ್ತರದ ಶಿಬಿರದಲ್ಲಿ ಟ್ಯಾಂಕ್ ಕಂಪನಿ ಮತ್ತು ಫಿರಂಗಿ ಘಟಕಗಳನ್ನು ಇರಿಸಿದೆ ಎಂದು ತೋರಿಸುತ್ತದೆ. ಮತ್ತೊಂದು ಮಹತ್ವದ ನೆಲೆಯನ್ನು ಕೊಂಗ್ಕಾ ಪಾಸ್‌ನಲ್ಲಿ ತೋರಿಸಲಾಗಿದೆ.([೪] ಚೀನಾದ ಕ್ಯಾಂಪ್‍ಗಳು.

ಚೀನಾದಿಂದ ಕ್ಯಾಂಪುಗಳ ಪುನರ್ನಿರ್ಮಾಣ

  • ಜೂನ್ ೨೦೨೦
  • ಭಾರತದೊಂದಿಗೆ ಮಾರಣಾಂತಿಕ ಗಡಿ ಘರ್ಷಣೆಯ ಸ್ಥಳವಾದ ಹಿಮಾಲಯದಲ್ಲಿ ಚೀನಾ ಮಿಲಿಟರಿ ಶಿಬಿರವನ್ನು ಪುನರ್ನಿರ್ಮಿಸಿ ವಿಸ್ತರಿಸಿದೆ ಎಂದು ಉಪಗ್ರಹ ಚಿತ್ರಗಳು ತೋರಿಸುತ್ತವೆ. ಯುಎಸ್ ಸ್ಯಾಟಲೈಟ್ ಆಪರೇಟರ್ ಮ್ಯಾಕ್ಸಾರ್ ಟೆಕ್ನಾಲಜೀಸ್‌ನ ಚಿತ್ರಗಳನ್ನು ಸೋಮವಾರ ತೆಗೆದುಕೊಳ್ಳಲಾಗಿದೆ, ಒಂದು ವಾರದ ನಂತರ ಕೋಲುಗಳು ಮತ್ತು ಕ್ಲಬ್‌ಗಳೊಂದಿಗೆ ಕೈಯಿಂದ ಹೊಡೆದಾಟ ನೆಡೆದಿದೆ ಎಂದು ವಿವರಿಸಲಾಗಿದೆ. ಅದರಲ್ಲಿ ಕನಿಷ್ಠ 20 ಭಾರತೀಯ ಸೈನಿಕರು ಸತ್ತಿದ್ದಾರೆ.
  • ವಿವರ:ಪಿಎಲ್ಎ ಪಡೆಗಳು ಪಿಪಿ -14 ಹುದ್ದೆಯಿಂದ ಘಟನಾಸ್ಥಳಕ್ಕೆ ಹಿಂತಿರುಗಿ ಬರುವುದನ್ನು ಭಾರತೀಯರು ನೋಡಿದರು. ಈ ಬಾರಿ, ಅಧಿಕೃತ ಮೂಲಗಳ ಪ್ರಕಾರ, ಅವರು 300 ಕ್ಕಿಂತಲೂ ಹೆಚ್ಚು ಬಲವನ್ನು ಹೊಂದಿದ್ದರು, ರಕ್ಷಣಾತ್ಮಕ ರಬ್ಬರ್ ಸೂಟ್‌ಗಳನ್ನು ಧರಿಸಿ ಗಲಭೆ ಕೋರರಂತೆ ಕಾಣುತ್ತಿದ್ದರು ಮತ್ತು ಪರ್ವತ ಪರ್ವತದಿಂದ ಇಳಿಯುವಾಗ ಕಲ್ಲುಗಳನ್ನು ಒಟ್ಟುಗೂಡಿಸಿದರು. "ಅದು ಸ್ವಯಂಪ್ರೇರಿತ ಏನೂ ಆಗಿರಲಿಲ್ಲ. ಅವರು ದಾಳಿಗೆ ಸಂಪೂರ್ಣವಾಗಿ ಸಿದ್ಧರಾಗಿದ್ದರು,”ಎಂದು ಭಾರತದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
  • 06 ಜುಲೈ 2020,ರ ವರದಿಯಂತೆ ಉಭಯ ರಾಷ್ಟ್ರಗಳ ಸೇನೆಗಳ ಕಮಾಂಡರ್ ಮಟ್ಟದಲ್ಲಿ ನಡೆದ ಒಪ್ಪಂದದ ಪ್ರಕಾರ ಚೀನಾದ ಸೇನೆಯು ಭಾರತದ ಆಕ್ರಮಿತ ಪ್ರದೇಏಶದಿಂದ ಹಿಂದಕ್ಕೆ ಸರಿಯುತ್ತಿದೆ. ವೀಕ್ಷಣಾ ಕೇಂದ್ರ 14ರಲ್ಲಿ ಚೀನಾ ಸ್ಥಾಪಿಸಿದ್ದ ಟೆಂಟ್‌ ಹಾಗೂ ಇತರ ನಿರ್ಮಾಣಗಳನ್ನು ತೆರವುಗೊಳಿಸುತ್ತಿದೆ. ಗೋಗ್ರಾ ಹಾಟ್‌ಸ್ಪ್ರಿಂಗ್‌ ಪ್ರದೇಶದಲ್ಲೂ ಇಂಥದ್ದೇ ಬೆಳವಣಿಗೆ ಕಾಣಿಸಿದೆ’ ಎಂದು ಭಾರತ ಸರ್ಕಾರದ ಮೂಲಗಳು ತಿಳಿಸಿವೆ. ಪ್ರಧಾನಿ ಮೋದಿಯವರು ಹಿಂದೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡವಾಗ ಚೀನಾ ಭಾರತದ ಯಾವ ಪ್ರದೇಶವನ್ನೂ ಆಕ್ರಮಿಸಿಲ್ಲ ಎಂದಿದ್ದರು. ಅದು ವಿವಾದಕ್ಕೆ ಕಾರಣವಾಗಿತ್ತು.
  • ಲಡಾಖ್‌ನಲ್ಲಿನ ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ), ಅದರಲ್ಲೂ ಗಾಲ್ವನ್ ಕಣಿವೆಯಲ್ಲಿ ಚೀನಾ ಸೇನೆಯು ಭಾರತದ ನೆಲವನ್ನು ಅತಿಕ್ರಮಿಸಿದೆ ಎಂಬ ಉಲ್ಲೇಖವಿದ್ದ ದಾಖಲೆ ಪತ್ರವು, ರಕ್ಷಣಾ ಸಚಿವಾಲಯದ ಜಾಲತಾಣದಲ್ಲಿ ಪ್ರಕಟವಾದ ಎರಡೇ ದಿನದಲ್ಲಿ ಅಳಿಸಲಾಗಿದೆ. ಭಾರತದ ನೆಲವನ್ನು ಯಾರೂ ಅತಿಕ್ರಮಿಸಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಹೇಳಿಕೆಗೆ ಈ ಮಾಹಿತಿ ವ್ಯತಿರಿಕ್ತವಾಗಿತ್ತು. ಗಾಲ್ವನ್ ಕಣಿವೆಯಲ್ಲಿ ಮೇ 5ರ ನಂತರ ಚೀನಾ ಸೇನೆಯ ಅತಿಕ್ರಮಣ ಹೆಚ್ಚಳವಾಗಿದೆ. ಕುಂಗ್ರಾಂಗ್ ನಾಲಾ, ಗೋಗ್ರಾ ಮತ್ತು ಪ್ಯಾಂಗಾಂಗ್ ಸರೋವರದ ಉತ್ತರದ ದಂಡೆಯಲ್ಲಿ 2020 ಮೇ 17–18ರಂದು ಚೀನಾ ಸೈನಿಕರು ಅತಿಕ್ರಮಣ ಮಾಡಿದ್ದಾರೆ’ ಎಂದು ವರದಿ ಹೇಳಿತ್ತು.

ಚೀನಾ ಭಾರತದ ಪ್ರದೇಶದಿಂದ ಸ್ವಲ್ಪ ಹಿಂದೆಸರಿಯಲು ಒಪ್ಪಿದೆ

  • ರಕ್ಷಣಾ ಸಚಿವ ರಾಜನಾಥ್ ಸಿಂಗ್ ೧೧-೨-೨೦೨೧ ಗುರುವಾರ ಮಾಡಿದ ಹೇಳಿಕೆ ಮತ್ತು ಒಂದು ದಿನದ ಮೊದಲು ಚೀನಾದ ರಕ್ಷಣಾ ಸಚಿವಾಲಯ ಹೊರಡಿಸಿದ ಹೇಳಿಕೆಯ ಪ್ರಕಾರ, ಪೂರ್ವ ಲಡಾಖ್‌ನ ಪಾಂಗೊಂಗ್ ತ್ಸೊ ಪ್ರದೇಶದಿಂದ ಎರಡೂ ಕಡೆಯ ಸೈನಿಕರು ತಮ್ಮ ನೆಲೆಯಿಂದ ಪರಸ್ಪರ ಅಗಲಿ ಹಿಂದೆಸರಿಸಲು ಪ್ರಾರಂಭಿಸಿದ್ದಾರೆ. ಈಗಿನ ಸುದ್ದಿಯಂತೆ, ನಿಷ್ಕ್ರಿಯಗೊಳಿಸುವ ಪ್ರಕ್ರಿಯೆಯು ಪ್ಯಾಂಗೊಂಗ್ ತ್ಸೊದ ಉತ್ತರ ಮತ್ತು ದಕ್ಷಿಣ ದಂಡೆಗಳಿಗೆ ಸೀಮಿತವಾಗಿದೆ.ಆದರೆ ಆ ಪ್ರಕ್ರಿಯೆಯು ಯಶಸ್ವಿಯಾಗಲಿಲ್ಲ. ಪಿಪಿ 14 ರಿಂದ ಚೀನಾ ತನ್ನ ಸೈನ್ಯವನ್ನು ಹಿಂದಕ್ಕೆ ಎಳೆದುಕೊಂಡರೂ, ಅದು ಕೆಲವು ಸೈನ್ಯವನ್ನು ಎಲ್‌ಎಸಿಯ ಭಾರತೀಯ ಭಾಗದಲ್ಲಿ ಪಿಪಿ 15 ಮತ್ತು ಪಿಪಿ 17 ಎಗಳಲ್ಲಿ ಇರಿಸಿತು. "ಚೀನಾ ಫಿಂಗರ್ 8 ರಲ್ಲಿ 8 ಕಿಮೀ.ನಷ್ಟು ಭಾರತದ ಗಡಿಯೊಳಗೆ ಬಂದಿದೆ. ಚೀನಾ ತನ್ನ ಸೈನ್ಯವನ್ನು ಉತ್ತರದ ದಂಡೆಯಲ್ಲಿ ಫಿಂಗರ್ 8 ರ ಪೂರ್ವಕ್ಕೆ ಹಿಂದೆಸರಿಯಬಕಾಗುತ್ತದೆ.ಹಾಗೆಂದು ಒಪ್ಪಂದವಾಗಿದೆ.

೨೦೨೦ - ೨೦೨೧ ರ ಜಿಎಸ್‍ಟಿ ಸಂಗ್ರಹದಲ್ಲಿ ಕೊರತೆ ರಾಜ್ಯಗಳ ಪಾಲಿನ ಹಣ ಇಲ್ಲ

  • ೨೦೨೦-೨೦೨೧ ರಲ್ಲಿ ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರವಾಗಿ ನಿಯಮ ಪ್ರಕಾರ . ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ ನೀಡುವ ಸ್ಥಿತಿಯಲ್ಲಿ ತಾನಿಲ್ಲ ಎಂದು ಕೇಂದ್ರ ಈಗ ಹೇಳುತ್ತಿದೆ. ನಾಲ್ಕು ವರ್ಷಗಳ ಹಿಂದೆ ಇದೇ ವಿಚಾರವಾಗಿ ತೃಣಮೂಲ ಕಾಂಗ್ರೆಸ್ ಸಂಸತ್ತಿನಲ್ಲಿ ಎಚ್ಚರಿಕೆ ನೀಡಿತ್ತು’. ೨೦೨೦-೨೦೨೧ ರ ಸಾಲಿನಲ್ಲಿ ಜಿಎಸ್‍ಟಿ ಪರಿಹಾರದ ಬದಲಿಗೆ ಸಾಲದ ರೂಪದಲ್ಲಿ ಪಡೆಯಬಹುದು ಎಂದು ಕೇಂದ್ರವು ಹೇಳಿದೆ. ಈ ಮೊತ್ತವನ್ನು ರಾಜ್ಯಗಳು ಸೆಸ್ ಮೂಲಕ ಸಂಗ್ರಹಿಸಿದ ಹಣದಿಂದ ಹಿಂದಿರುಗಿಸಬಹುದು.
  • ಕೇಂದ್ರ ಸರ್ಕಾರವು ಆರ್‌ಬಿಐ ಜೊತೆ ಸಮಾಲೋಚಿಸಿ ರೂಪಿಸುವ ವಿಶೇಷ ವ್ಯವಸ್ಥೆ ಮೂಲಕ ಈ ಸಾಲವನ್ನು ಸಮಂಜಸ ಬಡ್ಡಿ ದರದಲ್ಲಿ ಕೊಡಿಸಲಾಗುತ್ತದೆ. ‘ಕೋವಿಡ್–19 ಕಾರಣದಿಂದಾಗಿ ಅರ್ಥವ್ಯವಸ್ಥೆಯು ಈ ವರ್ಷ ೨೦೨೦ ರಲ್ಲಿ ಕುಸಿತ ಕಾಣಬಹುದು. ಇದು ರಾಜ್ಯಗಳಿಗೆ ಹಣಕಾಸಿನ ನೆರವು ನೀಡುವ ವಿಚಾರದಲ್ಲಿ ಕೇಂದ್ರದ ಕೈಗಳನ್ನು ಕಟ್ಟಿಹಾಕಬಹುದು’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
  • ಕರ್ನಾಟಕ (ರಾಜ್ಯವು ಆರ್ಥಿಕ ಸಂಕಷ್ಟದಲ್ಲಿದ್ದು, ತಕ್ಷಣವೇ ರೂ.13,764 ಕೋಟಿ ಜಿಎಸ್‌ಟಿ ಪರಿಹಾರ ನೀಡಬೇಕು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಒತ್ತಾಯಿಸಿದರು.)
  • ಸಂವಿಧಾನದ 101 ರ ತಿದ್ದುಪಡಿಯಲ್ಲಿ ಸೆಕ್ಷನ್‌ 18 ರ ಪ್ರಕಾರ ಜಿಎಸ್‌ಟಿ ಮಂಡಳಿ‌ ರಾಜ್ಯಗಳಿಗೆ ತೆರಿಗೆ ಸಂಗ್ರಹದ ಕೊರತೆ ತುಂಬಿಕೊಡುವ ಬಗ್ಗೆ ಸ್ಪಷ್ಟ ಉಲ್ಲೇಖವಿದೆ. ಅದರ ಅನ್ವಯ ಕೂಡಲೇ ಪರಿಹಾರವನ್ನು ನೀಡಬೇಕು ಎಂದು ಹೇಳಿದರು. ಆದರೆ ಕೇಂದ್ರ ಸಭೆಯಲ್ಲಿ ರಾಜ್ಯಗಳ ಎದುರು ಎರಡು ಆಯ್ಕೆಗಳನ್ನು ಇರಿಸಿದೆ. ಜಿಎಸ್‌ಟಿ ವ್ಯವಸ್ಥೆಯಿಂದ ಆಗಿರುವ ಆದಾಯ ಕೊರತೆಯಾದ ರೂ. 97 ಸಾವಿರ ಕೋಟಿಯನ್ನು ರಾಜ್ಯಗಳು ರಿಸರ್ವ‍ ಬ್ಯಾಂಕಿನಿಂದ ಸಾಲವಾಗಿ ಪಡೆಯುವುದು. ಅಥವಾ, ಜಿಎಸ್‌ಟಿ ಆದಾಯ ಕೊರತೆ ಹಾಗೂ ಕೋವಿಡ್‌–19ನಿಂದ ಆಗಿರುವ ನಷ್ಟವನ್ನೂ ಒಳಗೊಂಡ ಒಟ್ಟು ರೂ. 2.35 ಲಕ್ಷ ಕೋಟಿಯನ್ನು ಬೇರೆ ಕಡೆಯಿಂದ ಸಾಲವಾಗಿ ಪಡೆಯುವುದು.

ದೇಶಕ್ಕೆ ಹೊಸ ಶಿಕ್ಷಣ ನೀತಿಯ ಘೋಷಣೆ

ಭಾರತ ಗಣರಾಜ್ಯದ ಇತಿಹಾಸ - ಭಾಗ ೨ 
ಪ್ರಧಾನಿ, ನರೇಂದ್ರ ಮೋದಿ ಅವರು ಆಗಸ್ಟ್ 07, 2020 ರಂದು ನವದೆಹಲಿಯಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ರಾಷ್ಟ್ರೀಯ ಶಿಕ್ಷಣ ನೀತಿ -2020 ರ ಅಡಿಯಲ್ಲಿ ಉನ್ನತ ಶಿಕ್ಷಣದಲ್ಲಿನ ಪರಿವರ್ತನೆಯ ಸುಧಾರಣೆಗಳ ಕುರಿತಾದ ಸಮಾವೇಶದಲ್ಲಿ ಭಾಗವಹಿಸಿದ್ದರು. ಎಡದಲ್ಲಿ: ಹೊಸ ಎನ್‍ಇಪಿ ಶಿಕ್ಷಣ ಸಮಿತಿ ಅಧ್ಯಕ್ಷ; ಡಾ.ಕೃಷ್ಣಸ್ವಾಮಿ ಕಸ್ತೂರಿರಂಗನ್ ಮಾಜಿ ಅಧ್ಯಕ್ಷ, ಇಸ್ರೋ; ಬೆಂಗಳೂರು, ಕರ್ನಾಟಕ
    2019 ರಲ್ಲಿ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಹೊಸ ಶಿಕ್ಷಣ ನೀತಿಯ 2019 ಕರಡುನ್ನು ಬಿಡುಗಡೆ ಮಾಡಿತು, ಅದರ ನಂತರ ಹಲವಾರು ಸಾರ್ವಜನಿಕ ಸಮಾಲೋಚನೆಗಳು ನಡೆದವು. ಕರಡು ಎನ್ಇಪಿ ( NEP- National Education Policy) ಯೋಜನೆಯು ಅಗತ್ಯ ಕಲಿಕೆ, ವಿಮರ್ಶಾತ್ಮಕ ಚಿಂತನೆ ಮತ್ತು ಹೆಚ್ಚು ಸಮಗ್ರ ಅನುಭವ, ಚರ್ಚಾ-ಆಧಾರಿತ ಮತ್ತು ವಿಶ್ಲೇಷಣೆ ಆಧಾರಿತ ಕಲಿಕೆಯನ್ನು ಹೆಚ್ಚಿಸಲು ಹಾಗೂ ಪಠ್ಯಕ್ರಮದ ವಿಷಯವನ್ನು ಕಡಿಮೆ ಮಾಡುವ ಯೋಜನೆಯನ್ನು ಚರ್ಚಿಸುತ್ತದೆ. ಮಕ್ಕಳ ಅರಿವಿನ ಬೆಳವಣಿಗೆಯ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಕಲಿಕೆಯನ್ನು ಉತ್ತಮಗೊಳಿಸುವ ಪ್ರಯತ್ನದಲ್ಲಿ ಪಠ್ಯಕ್ರಮ ಮತ್ತು ಶಿಕ್ಷಣ ರಚನೆಯನ್ನು 10 + 2 ವ್ಯವಸ್ಥೆಯಿಂದ 5 + 3 + 3 + 4 ವ್ಯವಸ್ತೆಯ ವಿನ್ಯಾಸಕ್ಕೆ ಪರಿಷ್ಕರಿಸುವುದಾಗಿ ಇದು ಹೇಳುತ್ತದೆ. ಅಸ್ತಿತ್ವದಲ್ಲಿರುವ ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಹಲವಾರು ಬದಲಾವಣೆಗಳನ್ನು ಜಾರಿತರುವ ಉದ್ದೇಶದಿಂದ 2020 ರ ಜುಲೈ 29 ರಂದು ಭಾರತದ ಕೇಂದ್ರ ಮಂತ್ರಿಮಂಡಲ (ಕ್ಯಾಬಿನೆಟ್) ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಂಗೀಕರಿಸಿತು. ಹೊಸ ನೀತಿಯು ಹಿಂದಿನ ರಾಷ್ಟ್ರೀಯ ಶಿಕ್ಷಣ ನೀತಿ, 1986 ಅನ್ನು ಇದು ಬದಲಾಯಿಸುತ್ತದೆ. ಈ ನೀತಿಯು ಪ್ರಾಥಮಿಕ ಶಿಕ್ಷಣ- ಉನ್ನತ ಶಿಕ್ಷಣಕ್ಕೆ ಮತ್ತು ಗ್ರಾಮೀಣ ಮತ್ತು ಭಾರತದ ನಗರಗಳಲ್ಲಿ ವೃತ್ತಿಪರ ತರಬೇತಿಯ ಸಮಗ್ರ ಚೌಕಟ್ಟು ಹೊಂದಿದೆ. ಈ ನೀತಿಯು 2040 ರ ವೇಳೆಗೆ ಭಾರತಶಿಕ್ಷಣ ವ್ಯವಸ್ಥೆಯನ್ನು ಪರಿವರ್ತಿಸುವ ಗುರಿಯನ್ನು ಹೊಂದಿದೆ.

ಹೊಸ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆ

  • ವಿಸ್ತೃತ ಲೇಖನ:2020ರ ಭಾರತೀಯ ರೈತರ ಪ್ರತಿಭಟನೆ;
  • 2020 ರ ಭಾರತೀಯ ರೈತರ ಪ್ರತಿಭಟನೆಯು ಭಾರತದ ಸಂಸತ್ತು ಸೆಪ್ಟೆಂಬರ್ 2020 ರಲ್ಲಿ ಅಂಗೀಕರಿಸಿದ ಮೂರು ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯಾಗಿದೆ. ಈ ಕಾಯ್ದೆದಗಳನ್ನು ಅನೇಕ ಪ್ರಮುಖ ರೈತ ಸಂಘಗಳು "ರೈತ ವಿರೋಧಿ ಕಾನೂನುಗಳು" ಎಂದು ವಿವರಿಸಿವೆ,. ರೈತ ಸಂಘಗಳು ಮತ್ತು ವಿರೋಧ ಪಕ್ಷದ ರಾಜಕಾರಣಿಗಳು ಇದು ರೈತರನ್ನು "ಕಾರ್ಪೊರೇಟ್‌ಗಳ ಕರುಣೆಗೆ" ಬಿಡುತ್ತದೆ ಎಂದು ಹೇಳುತ್ತಾರೆ. ೨೦೨೦ ಸೆಪ್ಟಂಬರ್ ನಲ್ಲಿ ಈ ಕೃಷಿ ಕಾಯ್ದೆಗಳನ್ನು ಮಂಡಿಸಿದ (ಪರಿಚಯಿಸಿದ) ಕೂಡಲೇ, ರೈತ ಒಕ್ಕೂಟಗಳು ಸ್ಥಳೀಯವಾಗಿ ಪ್ರತಿಭಟನೆಗಳನ್ನು ನಡೆಸಲು ಪ್ರಾರಂಭಿಸಿದವು, ಅದು ಹೆಚ್ಚಾಗಿ ಪಂಜಾಬ್‌ನಲ್ಲಿ ನೆಡೆಯಿತು. ಎರಡು ತಿಂಗಳ ಪ್ರತಿಭಟನೆಯ ನಂತರ, ಮುಖ್ಯವಾಗಿ ರಾಜಸ್ಥಾನ ಮತ್ತು ಹರಿಯಾಣದಿಂದ ಬಂದ ರೈತರು 'ದಿಲ್ಲಿ ಚಲೋ' (ಅನುವಾದ: ದೆಹಲಿಗೆ ಹೋಗೋಣ) ಎಂಬ ಆಂದೋಲನವನ್ನು ಪ್ರಾರಂಭಿಸಿದರು, ನವೆಂಬರ್ 26 ರಂದು, ಪ್ರತಿಭಟನೆಯನ್ನು ಆಯೋಜಿಸಿದ ಕಾರ್ಮಿಕ ಸಂಘಗಳ ಪ್ರಕಾರ ಸುಮಾರು 25 ಕೋಟಿ (250 ಮಿಲಿಯನ್/ "On 26 November a nationwide general strike that involved approximately 250 million people took place in support of the farmer unions.[20] ಜನರನ್ನು ಒಳಗೊಂಡ ರಾಷ್ಟ್ರವ್ಯಾಪಿ ಮುಷ್ಕರವು ರೈತರಿಗೆ ಬೆಂಬಲವಾಗಿ ನಡೆಯಿತು. ನವೆಂಬರ ೨೬ರಿಮದ ದೆಹಲಿಯನ್ನ ಪ್ರವೇಶಿಸುವ ಗಡಿಗಳಲ್ಲಿ ಮೂರು ನಾಲ್ಕು ಲಕ್ಷ ರೈತರು ಅಹೋರಾತ್ರಿ ಧರಣಿ ನೆಡೆಸುತ್ತಿದ್ದಾರೆ. ಜನವರಿ ೨೬ ರ ರಂದು ಒಂದು ಗುಂಪು ಹಿಂಸಾರಕ್ಕಿಳಿದು ಕೆಂಪುಕೋಟೆಯಲ್ಲಿ ಮತೀಯ ಧ್ವಜ ಹಾರಿಸಿತು. ಇದನ್ನು ರೈತ ಸಂಘದ ನಾಯಕರು ಪಿತೂರಿ ಎಂದು ಘೋಷಿಸಿ, ಹೆದ್ದಾರಿ ಬಂದ ಚಳುವಳಿ ಮುಂದು ವರೆಸಿದರು. ಸರ್ಕಾರ ಪ್ರತೀಕಾರವಾಗಿ ರೈತ ಚಳುವಳಿಗಾರರಿಗೆ ಯಾವ ಸೌಲಬ್ಯವೂ ಸಿಗದಂತೆ ಸುತ್ತಲೂ ಬ್ಯಾರಿಕೇಡ್ ಮುಳ್ಳು ಮತ್ತು ಈಟಿಗಳ ಬೇಲಿ ಹಾಕಿ ರಸ್ತೆಗಳನ್ನು ಅಗೆದು ತೋಡಿ ದಿಗ್ಭಂಧನ ಮಾಡಿದರು. ಸರ್ಕಾರ ಮತ್ತು ರೈತನಾಯಕರ ಮಧ್ಯೆ ನೆಡೆದ ಹನ್ನೊಂದು ಸುತ್ತಿನ ಮಾತುಕತೆಗಳೂ ವಿಫಲವಾದವು. ರೈತರು ಹೊಸ ಕಾನೂನು ರದ್ದುಮಾಡಬೇಕೆಂದು ಹಠಹಿಡಿದರು. ಸರ್ಕಾರ ಈ ಹೊಸ ಕಾನೂನಿಂದ ರೈತರಿಗೆ ಅನುಕೂಲ ಎಂದು ಒಪ್ಪಲು ಒತ್ತಾಯಿಸಿತು. ಕೊನೆಗೆ ಒಂದುವರೆ ವರ್ಷ ಹೊಸ ಕಾನೂನನ್ನು ತಡೆಹಿಡಿಯುವುದಾಗಿ ಹೇಳಿತು. ಅದಕ್ಕೆ ರೈತರು ಒಪ್ಪದ ಕಾರಣ ಒಪ್ಪಂದ ಮುರಿದುಬಿತ್ತು. ಫೆಬ್ರವರಿ ದಿ.1-2 ರಂದು ಸರ್ಕಾರ ಪ್ರತೀಕಾರವಾಗಿ ದೆಹಲಿ ಗಡಿ ರಸ್ತೆಗಳಲ್ಲಿ ಎರಡು ತಿಂಗಳಿಗೂ ಹೆಚ್ಚುಕಾಲ ಕುಳಿತು ಪ್ರತಿಭಟಿಸುತ್ತಿದ್ದ ಎರಡು ಲಕ್ಷ ಜನ ರೈತರಲ್ಲಿ ಒಂದು ದಿಕ್ಕಿನಲ್ಲಿ ಅವರ ಸುತ್ತಲೂ ಮುಳ್ಳುಬೇಲಿ, ಕಾಂಕ್ರೀಟ್ ತಳಪಾಯದ ಬ್ಯಾರಿಕೇಡ್ ತಡೆಗೋಡೆ, ಎತ್ತರದ ಮೊಳೆ ಹೊಡೆದು ಮತ್ತು ರಸ್ತೆಯಲ್ಲಿ ಅಗಳ ತೋಡಿ ಯಾವ ವಸ್ತುವೂ ರೈತರಿಗೆ ಒದಗದಂತೆ ದಿಗ್ಬಂಧನ ಮಾಡಿತು. ಆದರೆ ರೈತರು ಹೇಗೋ ತಮ್ಮ ಚಳಿವಳಿ ಮುಂದುವರಿಸಿದರು.

ಭಾರತದ ಪ್ರಜಾಪ್ರಭುತ್ವ

  • ಭಾರತದ ಪ್ರಜಾಪ್ರಭುತ್ವವು 2014ರ ಸಂಸತ್ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವನ್ನು (ಬಿಜೆಪಿ) ನರೇಂದ್ರ ಮೋದಿ ಅವರು ಗೆಲುವಿನತ್ತ ಮುನ್ನಡೆಸಿದ ನಂತರದಿಂದ ‘ಚುನಾಯಿತ ನಿರಂಕುಶಾಧಿಪ‍ತ್ಯ’ದ ಸ್ಥಿತಿಗೆ ಇಳಿದಿದೆ ಎಂದು ಸ್ವೀಡನ್‌ನ ಗೊಥೆನ್‌ಬರ್ಗ್ ವಿಶ್ವವಿದ್ಯಾಲಯದ ವಿ–ಡೆಮ್ ಸ್ವತಂತ್ರ ಸಂಶೋಧನಾ ಸಂಸ್ಥೆಯ ‘ಪ್ರಜಾಪ್ರಭುತ್ವ ವರದಿ 2021’ರಲ್ಲಿ ಹೇಳಲಾಗಿದೆ. ಅಮೆರಿಕದ ‘ಫ್ರೀಡಮ್ ಹೌಸ್’ ಭಾರತವನ್ನು ‘ಮುಕ್ತ ದೇಶ’ದಿಂದ ‘ಭಾಗಶಃ ಮುಕ್ತ ದೇಶ’ ದರ್ಜೆಗೆ ಇಳಿಸಿದ ಕೆಲವೇ ದಿನಗಳಲ್ಲಿ ಈ ವರದಿ ಬಿಡುಗಡೆಯಾಗಿದೆ. ‘137 ಕೋಟಿ ಜನಸಂಖ್ಯೆಯೊಂದಿಗೆ ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವಾಗಿದ್ದ ಭಾರತವು ಈಗ ಚುನಾಯಿತ ನಿರಂಕುಶಾಧಿಪತ್ಯವಾಗಿ ಬದಲಾಗಿದೆ. ಇದರೊಂದಿಗೆ ಜಗತ್ತಿನ ಜನಸಂಖ್ಯೆಯ ಶೇ 68ರಷ್ಟು ಮಂದಿ ಚುನಾಯಿತ ನಿರಂಕುಶಾಧಿಪತ್ಯ ಅಥವಾ ನಿರಂಕುಶಾಧಿಪತ್ಯದ ಅಡಿಯಲ್ಲಿ ನೆಲೆಸುವಂತಾಗಿದೆ’ ಎಂದು ವರದಿಯು ಹೇಳಿದೆ.
  • ಪ್ರೊ. ಸ್ಟಾಫನ್ ಐ ಲಿಂಡ್‌ಬರ್ಗ್ ಅವರು 2014ರಲ್ಲಿ ಈ ಸಂಸ್ಥೆ ಸ್ಥಾಪಿಸಿದ್ದರು. 2010ರಲ್ಲಿ ಜಗತ್ತಿನ 41 ದೇಶಗಳಲ್ಲಿ ಉದಾರವಾದಿ ಪ್ರಜಾಪ್ರಭುತ್ವವಿತ್ತು. ಆದರೆ, ಈಗ ಅದು 32 ದೇಶಗಳಿಗೆ ಕುಸಿದಿದೆ. ಹಾಗಾಗಿ, ಜಗತ್ತಿನ ಜನಸಂಖ್ಯೆಯ ಪೈಕಿ ಉದಾರವಾದಿ ಪ್ರಜಾಪ್ರಭುತ್ವ ದೇಶಗಳಲ್ಲಿ ಇರುವ ಜನರ ಪ್ರಮಾಣವು ಶೇ 14 ಮಾತ್ರ. ಚುನಾಯಿತ ಪ್ರಜಾಪ್ರಭುತ್ವವು 60 ದೇಶಗಳಲ್ಲಿದೆ. ಜಗತ್ತಿನ ಜನಸಂಖ್ಯೆಯಲ್ಲಿ ಈ ದೇಶಗಳ ಜನರ ಪ್ರಮಾಣವು ಶೇ 19 ಮಾತ್ರ ಎಂದು ವರದಿಯು ಹೇಳಿದೆ.

ಅತಿ ಮುಖ್ಯವ್ಯಕ್ತಿಗಳಿಗೆ ವಿಶೇಷ ವಿಮಾನ

  • ಏರ್ ಇಂಡಿಯಾ ಒನ್ ಬಳಸಬೇಕಾದ ಬಿ 777 ವಿಮಾನವನ್ನು ಭಾರತದ ಪ್ರಧಾನಿ, ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಹೆಚ್ಚು ಕಸ್ಟಮೈಸ್ (ವಿಶೇಷ ವ್ಯವಸ್ಥೆ) ಮಾಡಲಾಗಿದೆ. ಎರಡು ವಿಮಾನಗಳು 2018 ರಲ್ಲಿ ಕೆಲವು ತಿಂಗಳುಗಳ ಕಾಲ ಏರ್ ಇಂಡಿಯಾದ ವಾಣಿಜ್ಯ ನೌಕೆಯ ಭಾಗವಾಗಿದ್ದವು, ಅವುಗಳನ್ನು ವಿವಿಐಪಿ ಪ್ರಯಾಣಕ್ಕಾಗಿ ಮರು ವ್ಯವಸ್ಥೆಗಾಗಿ ಬೋಯಿಂಗ್‌ಗೆ ಕಳುಹಿಸುವ ಮೊದಲು. ಅಧಿಕಾರಿಗಳ ಪ್ರಕಾರ, ಎರಡು ವಿಮಾನಗಳನ್ನು ಖರೀದಿಸಲು ಮತ್ತು ಮರುಹೊಂದಿಸಲು ಒಟ್ಟು ವೆಚ್ಚವು ತಲಾ ಸುಮಾರು 8,400 ಕೋಟಿ ರೂ. (ಒಟ್ಟು 16800 ಕೋಟಿ ರೂ.) ಕಸ್ಟಮ್-ನಿರ್ಮಿತ ಬಿ 777 ವಿಮಾನವು ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಪ್ರಧಾನ ಮಂತ್ರಿಯನ್ನು ಹಾರಲು ಬಳಸುವ ಮೊದಲ ಮೀಸಲಾದ ವಿಮಾನವಾಗಿದೆ. ಮೊದಲ ವಿಮಾನ ಅಕ್ಟೋಬರ್ 1, 2020 ಗುರುವಾರ ಅಮೆರಿಕದಿಂದ ದೆಹಲಿಗೆ ಬಂದಿತು. ಕಸ್ಟಮ್ ನಿರ್ಮಿತ ಮತ್ತೊಂದು ಬಿ 777 ವಿಮಾನವು ನಂತರದ ತಿಂಗಳುಗಳಲ್ಲಿ ಬರಲಿದೆ

ತಾತ್ಕಾಲಿಕ ಸಂಪಾದನೆಗಳು

  • ಪ್ರಚಲಿತ ವಿದ್ಯಮಾನ

ಕೊರೊನಾ ಸೋಂಕು ಹರಡುವಿಕೆಯ ಹೆಚ್ಚಳಕ್ಕೆ ಕಾರಣ

  • ದಿ.31-3-2020 ಮಂಗಳವಾರ, ದೆಹಲಿ ಪೊಲೀಸರು ಈ ತಿಂಗಳ ಆರಂಭದಲ್ಲಿ ನಿಜಾಮುದ್ದೀನ್ ಪಶ್ಚಿಮದಲ್ಲಿ ಬೃಹತ್ ಧಾರ್ಮಿಕ ಸಭೆಯ ನೇತೃತ್ವ ವಹಿಸಿದ್ದ ಧರ್ಮಗುರು ಮೌಲಾನಾ ಸಾದ್ ಕಂಧ್ಲವಿ ವಿರುದ್ಧ ಸಾರ್ವಜನಿಕ ಸಭೆಗಳನ್ನು ಆಯೋಜಿಸದಿರುವುದು ಮತ್ತು ಕೋವಿಡ್ -19 ಏಕಾಏಕಿ ತಡೆಗಟ್ಟಲು ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳದೆ ಸರ್ಕಾರದ ಆದೇಶಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಧರ್ಮಗುರು ಮೌಲಾನಾ ಸಾದ್ ಕಂಧ್ಲವಿ ಜಗತ್ತಿನಾದ್ಯಂತ ಸುಮಾರು 100 ಕೋಟಿ ಅನುಯಾಯಿಗಳನ್ನು ಹೊಂದಿದ್ದಾರೆಂದು ಹೇಳಲಾಗಿದೆ.
  • ಧರ್ಮಗುರು ಮೌಲಾನಾ ಸಾದ್ ಕಂಧ್ಲವಿ: [೫]

ಜಗತ್ತಿನ ಮೇಲೆ ಈ ವೈರಾಣು ಕೊರೊನಾ ಧಾಳಿಯ ಪೂರ್ವ ಸೂಚನೆ

  • ಮುನ್ನಚ್ಚರಿಹೆಯ ನಿರ್ಲಕ್ಷ
  • ಹಾಂಗ್‌ಕಾಂಗ್ ವಿಶ್ವವಿದ್ಯಾಲಯದ ವಿನ್ಸೆಂಟ್ ಮತ್ತು ಅವರ ವಿಜ್ಞಾನಿಗಳ ತಂಡ 2007ರ ಅಕ್ಟೋಬರ್‌ನಲ್ಲಿ ಪ್ರಕಟಿಸಿದ ಲೇಖನವೊಂದರಲ್ಲಿ ಈ ವೈರಾಣು ಧಾಳಿಯ ಪೂರ್ವ ಸೂಚನೆ ದಾಖಲಿಸಿದೆ. ಅದು, ಸಾರ್ಸ್ ಮತ್ತು ಕೊರೊನಾ ವೈರಾಣುಗಳು ಒಂದು ಜಾತಿಯ ಬಾವಲಿಗಳಲ್ಲಿ ಶೇಖರಗೊಂಡುಕ್ರಿಯಾಶೀಲವಾಗಿರುವುದು ಮತ್ತು ದಕ್ಷಿಣ ಚೀನಾದ ಪ್ರಾಂತ್ಯಗಳಲ್ಲಿ ಜನ ನಾನಾ ತರಹದ ಪ್ರಾಣಿಗಳನ್ನು ತಿನ್ನುವ ಕಾರಣದಿಂದ ವೈರಾಣು ರೋಗದ ಮಹಾಸ್ಫೋಟ ಇಡೀ ಜಗತ್ತಿನಲ್ಲಿ ಸಂಭವಿಸಬಹುದೆಂದು ಎಚ್ಚರಿಸಿತ್ತು. ಅದನ್ನೊಂದು ಟೈಮ್ ಬಾಂಬ್ ಎಂದು ಆಗಲೇ ಹೇಳಿತ್ತು. ಅದನ್ನು ತಡೆಯಲು ಸೂಕ್ತ ಕ್ರಮಗಳತ್ತ ಗಮನಹರಿಸಬೇಕು ಎಂದು ವಿಜ್ಞಾನಿಗಳ ತಂಡ ಕೋರಿತ್ತು. ಆದರೆ ಜಗತ್ತು, ವಿಶ್ವ ಆರೋಗ್ಯ ಸಂಸ್ಥೆ (World Health Organization: WHO) ಮತ್ತು ಚೀನಾ ಅದನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ. ವಿಶ್ವ ಆರೋಗ್ಯ ಸಂಸ್ಥೆಉ ಮುಖ್ಯಸ್ಥ ಚೀನಾಪರ ವಹಿಸಿ, ಅಪಾಯವಿಲ್ಲವೆಂದು ಹೇಳಿದ್ದಕ್ಕಾಗಿ ಅಮೇರಿಕಾ ಸರ್ಕಾರ ವಿಶ್ವ ಆರೋಗ್ಯ ಸಂಸ್ತಯನನು ಬಹಿಷ್ಕರಿಸಿ ಅದರ ಅನುದಾನ 90 ಕೋ.ಡಾಲರನ್ನು (2018–19ರಲ್ಲಿ ಸುಮಾರು US $ 900 ಮಿಲಿಯನ್.)ತಡೆಹಿಡಿಯಿತು

ಪ್ರಧಾನಿ ಮೋದಿಯವರಿಂದ ದೇಶದ ಪ್ರತಿಕ್ರಿಯೆಯನ್ನು ಚರ್ಚಿಸಲು ವಿರೋಧ ಪಕ್ಷಗಳ ಸಭೆ

  • ಪಿಎಂ ಮೋದಿ ದಿ. 5-4-2020ಭಾನುವಾರ ಕರೋನವೈರಸ್‍ನ ಬಿಕ್ಕಟ್ಟಿನ ಬಗ್ಗೆ ದೇಶದ ಪ್ರತಿಕ್ರಿಯೆಯನ್ನು ಚರ್ಚಿಸಲು ವಿರೋಧ ಪಕ್ಷದ ನಾಯಕರನ್ನು ಸಂಪರ್ಕಿಸಿದ್ದರು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ದಿ.7-4-2020 ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದು, ಕೊರೊನಾವೈರಸ್ ಕಾಯಿಲೆ ಕೋವಿಡ್ -19 ಅನ್ನು ನಿಭಾಯಿಸಲು ಧನ ಸಂಗ್ರಹಕ್ಕಾಗಿ ಐದು ಸಲಹೆಗಳನ್ನು ನೀಡಿದರು;
  • ೧.ಮೊದಲನೆಯದಾಗಿ, ಟಿವಿ, ಮುದ್ರಣ ಮತ್ತು ಆನ್‌ಲೈನ್ ಮಾಧ್ಯಮಗಳಿಗೆ ನೀಡುವ ಸರ್ಕಾರಿ ಜಾಹೀರಾತುಗಳನ್ನು ಎರಡು ವರ್ಷಗಳ ಕಾಲ ಸಂಪೂರ್ಣ ನಿಷೇಧಿಸಲು ಗಾಂಧಿ ಕೋರಿದ್ದಾರೆ.ಮೊದಲು, ಸರ್ಕಾರ ಮತ್ತು ಸಾರ್ವಜನಿಕ ವಲಯದ ಉದ್ಯಮಗಳು [ಪಿಎಸ್ಯುಗಳು]ಇವುಗಳ ಎರಡು ವರ್ಷಗಳ ಅವಧಿಗೆ ಜಾಹೀರಾತು ನಿಷೇಧ.
  • ೨.“ಎರಡನೆಯದಾಗಿ, ಕೇಂದ್ರ ಯೋಜನೆ, ರೂ.20,000 ಕೋಟಿ‘ ಸೆಂಟ್ರಲ್ ವಿಸ್ಟಾ ’ಸುಂದರೀಕರಣ ಮತ್ತು (ಸಂಸದ್ ಭವನದ ಹೊಸ ನಿರ್ಮಾಣ) ನಿರ್ಮಾಣ ಯೋಜನೆಯನ್ನು ಕೂಡಲೇ ಸ್ಥಗಿತಗೊಳಿಸಿ, ಈ ಸಮಯದಲ್ಲಿ, ಅಂತಹ ವಿನಿಯೋಗವು, ಚಿಕ್ಕದಾಗಿ ಹೇಳುವುದಾದರೆ ಸ್ವಯಂ-ವೈಭೋಗವನ್ನು ತೋರುತ್ತದೆ. ಅಸ್ತಿತ್ವದಲ್ಲಿರುವ ಐತಿಹಾಸಿಕ ಕಟ್ಟಡಗಳಲ್ಲಿ ಸಂಸತ್ತು ಆರಾಮವಾಗಿ ಕಾರ್ಯನಿರ್ವಹಿಸಬಲ್ಲದು ಎಂದು ನನಗೆ ಖಚಿತವಾಗಿದೆ, ಅದರ ಬದಲು, "ಹೊಸ ಆಸ್ಪತ್ರೆಯ ಮೂಲಸೌಕರ್ಯ ಮತ್ತು ರೋಗನಿರ್ಣಯಗಳ ಕೇಂದ್ರಗಳನ್ನು ನಿರ್ಮಿಸುವುದರ ಜೊತೆಗೆ ನಮ್ಮ ಮುಂಚೂಣಿ ಕಾರ್ಮಿಕರನ್ನು ವೈಯಕ್ತಿಕ ಸಂರಕ್ಷಣಾ ಸಲಕರಣೆಗಳು [ಪಿಪಿಇ] ಮತ್ತು ಉತ್ತಮ ಸೌಲಭ್ಯಗಳೊಂದಿಗೆ ಸಜ್ಜುಗೊಳಿಸಲು" ಹಣವನ್ನು ಖರ್ಚು ಮಾಡಬಹುದು.
  • ೩.'ಕೇಂದ್ರ ಸರ್ಕಾರಕ್ಕೆ ಖರ್ಚು ಬಜೆಟ್‌ನಲ್ಲಿ (ಸಂಬಳ, ಪಿಂಚಣಿ ಮತ್ತು ಕೇಂದ್ರ ವಲಯದ ಯೋಜನೆಗಳನ್ನು ಹೊರತುಪಡಿಸಿ) ಶೇಕಡಾ 30 ರಷ್ಟು ಕಡಿತಗೊಳಿಸಬೇಕು' ಎಂದು ಶ್ರೀಮತಿ ಗಾಂಧಿ ಹೇಳಿದರು. "ಈ ಶೇಕಡಾ 30 ರಷ್ಟು (ಅಂದರೆ ವರ್ಷಕ್ಕೆ ಅಂದಾಜು 2.5 ಲಕ್ಷ ಕೋಟಿ).ಈ ಉಳಿತಾಯವನ್ನು ವಲಸೆ ಕಾರ್ಮಿಕರು, ಕಾರ್ಮಿಕರು, ರೈತರು, ಎಂಎಸ್‌ಎಂಇಗಳು ಮತ್ತು ಅಸಂಘಟಿತ ವಲಯದಲ್ಲಿರುವವರಿಗೆ ಆರ್ಥಿಕ ಸುರಕ್ಷತಾ ಜಾಲವನ್ನು ಸ್ಥಾಪಿಸಲು ಹಂಚಿಕೆ ಮಾಡಬಹುದು."
  • ೪.ಸಂಸದರಿಗೆ ವರ್ಷಕ್ಕೆ 5 ಕೋಟಿ ರೂ. ಅಭಿವೃದ್ಧಿ ಕಾರ್ಯಗಳಿಗಾಗಿ (ಎಂಪಿಎಲ್‌ಎಡಿ ಯೋಜನೆ) ಖರ್ಚು ಮಾಡಿ, ಉಳಿಸಿದ ಎಲ್ಲಾ ಹಣವನ್ನು (ಪಾರದರ್ಶತೆಗಾಗಿ ಆಡಿಟ್ಟಿಗೆ ಒಳಪಡುವ) ಭಾರತದ ಏಕೀಕೃತ ನಿಧಿಗೆ ಹಾಕಿ ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಬಳಸುವುದು.
  • ೫.ಎಲ್ಲಾ ಅಧಿಕೃತ ವಿದೇಶ ಪ್ರವಾಸಗಳನ್ನು ತಡೆಹಿಡಿಯುವುದು. ಕಳೆದ ಐದು ವರ್ಷಗಳಲ್ಲಿ ಕೇಂದ್ರವು ವಿದೇಶ ಪ್ರಯಾಣಕ್ಕಾಗಿ ರೂ.3393 ಕೋಟಿ ಖರ್ಚು ಮಾಡಿದೆ. "ರಾಷ್ಟ್ರಪತಿ, ಪ್ರಧಾನಿ, ಕೇಂದ್ರ ಮಂತ್ರಿಗಳು, ಮುಖ್ಯಮಂತ್ರಿಗಳು, ರಾಜ್ಯ ಸಚಿವರು ಮತ್ತು ಅಧಿಕಾರಿಗಳು ಸೇರಿದಂತೆ ಎಲ್ಲಾ ವಿದೇಶಿ ಭೇಟಿಗಳನ್ನು ಇದೇ ಮಾದರಿಯಲ್ಲಿ ತಡೆಹಿಡಿಯಬೇಕು". ವಿಶೇಷ ತುರ್ತು ಪರಿಸ್ಥಿತಿ ಅಥವಾ ರಾಷ್ಟ್ರೀಯ ಹಿತಾಸಕ್ತಿಗೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿಯಿಂದ ತೆರವುಗೊಳಿಸಿ, ವಿನಾಯಿತಿಗಳನ್ನು ನೀಡಬಹುದು.
  • 'ಸಂಸತ್ ಸದಸ್ಯರ ವೇತನವನ್ನು ಶೇಕಡಾ 30 ರಷ್ಟು ಕಡಿಮೆ ಮಾಡಲು ಕೇಂದ್ರ ಸಚಿವ ಸಂಪುಟ ತೆಗೆದುಕೊಂಡ ನಿರ್ಧಾರಕ್ಕೆ ನಮ್ಮ ಬೆಂಬಲವನ್ನು ತಿಳಿಸಲು ನಾನು ಬರೆಯುತ್ತಿದ್ದೇನೆ. ಪ್ರಧಾನಮಂತ್ರಿಯೊಂದಿಗೆ ದೂರವಾಣಿ ಮೂಲಕ ನಡೆಸಿದ ಚರ್ಚೆಗೆ ಪ್ರತಿಕ್ರಿಯೆಯಾಗಿ ಈ ಸಲಹೆಗಳಿವೆ,' ಎಂದು ಅವರು ಹೇಳಿದರು. ಆದರೆ ಪ್ರಧಾನ ಮಂತ್ರಿಯವರು ಇದಾವುದಕ್ಕೂ ಪ್ರತಿಕ್ರಿಯೆ ನೀಡಿಲ್ಲ.

(PM CARES Fund:ಪ್ರಧಾನಿ ಕೇರ್ಸ್ ಫಂಡ್)

  • ಆದರೆ ಅದರ ಬದಲಿಗೆ ಪ್ರಧಾನಿಯವರಿಂದ ಭಾರತದಲ್ಲಿ ಕೊವಿಡ್-19 (COVID-19) ಸಾಂಕ್ರಾಮಿಕ ರೋಗದ ನಂತರ ಪ್ರಧಾನಮಂತ್ರಿ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳ ನಿಧಿಯನ್ನು (PM CARES Fund) 28 ಮಾರ್ಚ್ 2020 ರಂದು ರಚಿಸಲಾಯಿತು. ಪ್ರಧಾನ ಮಂತ್ರಿ ಟ್ರಸ್ಟ್‌ನ ಅಧ್ಯಕ್ಷರು. ಟ್ರಸ್ಟಿಗಳಲ್ಲಿ ರಕ್ಷಣಾ, ಗೃಹ ಮತ್ತು ಹಣಕಾಸು ಮಂತ್ರಿಗಳು ಸೇರಿದ್ದಾರೆ. ಈ ನಿಧಿಯನ್ನು ಭಾರತದ ಕಂಟ್ರೋಲರ್ ಮತ್ತು ಲೆಕ್ಕಪರಿಶೋಧಕ ಜನರಲ್ ಅವರಿಗೆ ಲೆಕ್ಕಪರಿಶೋಧಿಸಲು(ಆಡಿಟ್ಟಿಗೆ) ಅನುಮತಿ ಇರುವುದಿಲ್ಲ.. ಪಿಎಂ ಕೇರ್ಸ್ ಒಂದು ವಾರದಲ್ಲಿ ಸುಮಾರು ರೂ.6,500 ಕೋಟಿಗೂ ಹೆಚ್ಚು ದೇಣಿಗೆ ಪಡೆದಿದೆ, 'ಪಿಎಂ.ಎನ್ಆರ್ಎಫ್.' 2 ವರ್ಷಗಳಲ್ಲಿ ಪಡೆದದ್ದಕ್ಕಿಂತ 3 ಪಟ್ಟು ಹೆಚ್ಚು ಸಂಗ್ರಹವಾಗಿದೆ
  • ಪಕ್ಷದ ಸಂಸದರು ತಮ್ಮ ರಾಜ್ಯದ ಕ್ಷೇತ್ರ ಅಭವೃದ್ಧಿಗೆ ಮೀಸಲಾದ ತಮ್ಮ "ಎಂಪಿಲ್ಯಾಡ್ಸ್"(“MPLADS funds)ನಿಧಿಯಿಂದ ತಲಾ ರೂ.1 ಕೋಟಿ ಹಣವನ್ನು "ಪಿಎಂ ಕೇರ್‌"ಗಳಿಗೆ ದೇಣಿಗೆ ನೀಡುವಂತೆ ಭಾರತೀಯ ಜನತಾ ಪಕ್ಷದ ಮುಖ್ಯಸ್ಥ ಜೆ ಪಿ ನಡ್ಡಾ ಕರೆ ನೀಡಿದರು. ಬಿಜೆಪಿಗೆ ಲೋಕಸಭೆಯಲ್ಲಿ 303 ಮತ್ತು ರಾಜ್ಯಸಭೆಯಲ್ಲಿ 83 ಸಂಸದರಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ, “ಎಂಪಿಎಲ್‌ಡಿಎಸ್" ಹಣವನ್ನು ಕ್ಷೇತ್ರದ ಅಭಿವೃದ್ಧಿಗೆ ಮೀಸಲಿಡಲಾಗಿದೆ. "ಪಿಎಂ ಕೇರ್‌"ಗೆ "ಎಂಪಿಎಲ್‌ಎಡಿಎಸ್" ಹಣವನ್ನು ನೀಡುವುದು ಮಾನದಂಡಗಳ ಉಲ್ಲಂಘನೆ ಮಾತ್ರವಲ್ಲ, ತಮ್ಮದೇ ಕ್ಷೇತ್ರಗಳಿಗೆ ದ್ರೋಹ ಬಗೆದಹಾಗೆ."ಎಂದಿದ್ದಾರೆ. ತೆರಿಗೆಯಿಂದ ಬಂದ ಹಣವನ್ನು ಆಡಿಟ್ಟಿಗೆ ಒಳಪಡದ ನಿಧಿಗೆ ನಿಡಬಹುದೆ? ಎಂಬ ಪ್ರಶ್ನೆಯೂ ಎದ್ದಿದೆ. "ಎಂಪಿಎಎಲ್‍ಡಿಎಸ್" ಅಡಿಯಲ್ಲಿ, ಪ್ರತಿ ಸಂಸದರು ತಮ್ಮ ಕ್ಷೇತ್ರದಲ್ಲಿ ವರ್ಷಕ್ಕೆ ರೂ.5 ಕೋಟಿಗಳಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸೂಚಿಸಬಹುದು. ಸ್ಥಳೀಯವಾಗಿ ಅಗತ್ಯವಿರುವ ಮೂಲಸೌಕರ್ಯ ಮತ್ತು ಅಭಿವೃದ್ಧಿಯನ್ನು ಪೂರೈಸುವ ಎಲ್ಲಾ ಕೃತಿಗಳಿಗೆ ಹಣ ನೀಡಬಹುದು. ಅದರಲ್ಲಿ ಈಗ ಒಂದು ಕೋಟಿ ರೂ. ಕಡಿಮೆಯಾಗುವುದು.


2020 - 2021 ರಲ್ಲಿ ಕೋವಿಡ್-೧೯- ಸಧ್ಯ ಸ್ಥಿತಿ

ವಿಶ್ವ ವಿಶ್ವ ವಿಶ್ವ ವಿಶ್ವ ವಿಶ್ವ ವಿಶ್ವ ವಿಶ್ವ
ಕೊರೊನಾ> ಬೆಳಿಗ್ಗೆ 6 ಗಂಟೆಗೆ 4—4- 2021 5—4- 2021 6—4- 2021 7—4- 2021 8—4- 2021 9—4- 2021 13—4- 2021
ವೈರಸ್ ಪ್ರಕರಣಗಳು: 13,13,85,236 13,19,33,255 13,24,43,111 13,31,30,885 13,37,86,309 13,46,78,521 13,67,81,961
ಸಾವುಗಳು : 28,59,674 28,66,411 28,74,569 28,89,054 29,03,583 29,18,286 29,51,955
ಚೇತರಿಸಿಕೊಂಡವರು: 10,57,67,141 10,62,33,186 10,36,71,987 10,73,68,388 10,78,82,722 10,84,26,939 10,99,95,392
ಸಕ್ರಿಯ ಪ್ರಕರಣಗಳು: 2,27,58,421 2,28,33,658 2,27,96,555 2,28,73,443 2,30,00,004 2,33,33,296 2,38,33,589
ಸೌಮ್ಯ ಸ್ಥಿತಿಯಲ್ಲಿ:) 22,66,09,35 (99.6%) 2,27,34,944 (99.6%) 2,26,98,139 (99.6%) 2,27,73,772 (99.6%) 2,28,99,093 (99.6%) 2,32,31,449 (99.6%) 2,37,31,128 (99.6%)
ಪ್ರಕರಣಗಳು:
MoH>ಹಿಂದಿನ ಸಂಜೆ 8 ಕ್ಕೆ ಭಾರತ ಭಾರತ ಭಾರತ ಭಾರತ ಭಾರತ ಭಾರತWM ಭಾರತ-WM - 2 ನೇ ಸ್ಥಾನ
ಒಟ್ಟು ವೈರಸ್ಪ್ರಕರಣಗಳು,ಒಟ್ಟು: 24,85,509 1,25,89,067 1,26,86,049 1,28,01,785 1,29,28,574 1,30,60,542 1,35,27,717
ಸಾವುಗಳು: 1,65,132 1,65,577 1,66,208 1,66,892 1,67,694 1,70,209
ಸಕ್ರಿಯ ಪ್ರಕರಣಗಳು: 6,91,565 7,41,799 7,88,193 8,43,442 910,289 9,79,556 12,00,979
ಚೇತರಿಸಿದವರು: 1,16,29,289 1,16,82,136 1,17,32,279 1,17,92,135 1,18,51,393 1,19,13,292 1,21,56,529

ವಿಶ್ವಸಂಸ್ತೆಯ ಎಚ್ಚರಿಕೆ

ಭಾರತ ಗಣರಾಜ್ಯದ ಇತಿಹಾಸ - ಭಾಗ ೨ 
ಸೌಮ್ಯಾ ಸ್ವಾಮಿನಾಥನ್; ವಿಶ್ವ ಆರೋಗ್ಯ ಸಂಸ್ಥೆಯಲ್ಲಿ(WHO)ವಿಜ್ಞಾನ ವಿಭಾಗದ ಮುಖ್ಯಸ್ಥೆ; ಜನವರಿ 19, 2016 ರಂದು ನವದೆಹಲಿಯಲ್ಲಿ ಐಸಿಎಂಆರ್ ಮತ್ತು ಕಾರ್ಯದರ್ಶಿ, ಡಿಹೆಚ್ಆರ್, ಡಾ. ಸೌಮ್ಯಾ ಸ್ವಾಮಿನಾಥನ್
  • ಜಗತ್ತು ಕೇವಲ ಕೆಲವೇ ತಿಂಗಳುಗಳಲ್ಲಿ "ಬೈಬಲ್‍ನ ಅನುಪಾತ"ದ (ದೊಡ್ಡ ಪ್ರಮಾಣದ) ಅನೇಕ ಕ್ಷಾಮಗಳನ್ನು ಎದುರಿಸುತ್ತದೆ,ಎಂದು ವಿಶ್ವಸಂಸ್ತೆ ಹೇಳಿದೆ, ಕರೋನವೈರಸ್ ಸಾಂಕ್ರಾಮಿಕವು ಹೆಚ್ಚುವರಿ 130 ಮಿಲಿಯನ್/13 ಕೋಟಿ ಜನರನ್ನು ಹಸಿವಿನ ಅಂಚಿಗೆ ತಳ್ಳುತ್ತದೆ ಎಂದು ಎಚ್ಚರಿಸಿದೆ.
  • WHO’- ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಙಾನ ವಿಭಾಗದ ಮುಖ್ಯಸ್ಥೆ- ಸೌಮ್ಯ ಸ್ವಾಮಿನಾಥನ್‍, ಸಂದರ್ಶನ- ಕೊವಿಡ್-19 ರ ಬಗೆಗೆ: India’s Covid-19 response prompt, testing appropriate: WHO’s Soumya Swaminathan;Sanchita Sharma- 22-4-2020

ನೋಡಿ

ಹೆಚ್ಚಿನ ಮಾಹಿತಿ

ಉಲ್ಲೇಖ

Tags:

ಭಾರತ ಗಣರಾಜ್ಯದ ಇತಿಹಾಸ - ಭಾಗ ೨ 2014 -ಮತ್ತೆ ಭಾರತೀಯ ಜನತಾ ಪಕ್ಷದ ಸರ್ಕಾರಭಾರತ ಗಣರಾಜ್ಯದ ಇತಿಹಾಸ - ಭಾಗ ೨ ೨೦೧೭ ರ ಬೆಳವಣಿಗೆಭಾರತ ಗಣರಾಜ್ಯದ ಇತಿಹಾಸ - ಭಾಗ ೨ ಆರ್ಥಿಕ ಸಮೀಕ್ಷೆಭಾರತ ಗಣರಾಜ್ಯದ ಇತಿಹಾಸ - ಭಾಗ ೨ ಜನಪ್ರಿಯ ಯೋಜನೆಗಳುಭಾರತ ಗಣರಾಜ್ಯದ ಇತಿಹಾಸ - ಭಾಗ ೨ ವಿದೇಶ ವ್ಯವಹಾರಭಾರತ ಗಣರಾಜ್ಯದ ಇತಿಹಾಸ - ಭಾಗ ೨ ಆರ್ಥಿಕ ನೀತಿಭಾರತ ಗಣರಾಜ್ಯದ ಇತಿಹಾಸ - ಭಾಗ ೨ ಕಾಶ್ಮೀರ ನೀತಿಭಾರತ ಗಣರಾಜ್ಯದ ಇತಿಹಾಸ - ಭಾಗ ೨ 2014 ರಿಂದ 2019 ರ ವರೆಗಿನ ಸಾಧನೆ ಮತ್ತು ಕೊರತೆಯ ವರದಿಯ ಸಾರಾಂಶಭಾರತ ಗಣರಾಜ್ಯದ ಇತಿಹಾಸ - ಭಾಗ ೨ ಸೇನಾ ನೀತಿಭಾರತ ಗಣರಾಜ್ಯದ ಇತಿಹಾಸ - ಭಾಗ ೨ ಭಯೋತ್ಪಾದನೆ- ಪುಲ್ವಾಮಾ ದಾಳಿಭಾರತ ಗಣರಾಜ್ಯದ ಇತಿಹಾಸ - ಭಾಗ ೨ ೨೦೧೯ರ ಭಾರತದ ಸಾರ್ವರ್ತ್ರಿಕ ಚುನಾವಣೆಭಾರತ ಗಣರಾಜ್ಯದ ಇತಿಹಾಸ - ಭಾಗ ೨ ೨೦೧೯ರ ನರೆಂದ್ರ ಮೋದಿಯವರ ಸರ್ಕಾರಭಾರತ ಗಣರಾಜ್ಯದ ಇತಿಹಾಸ - ಭಾಗ ೨ ಭಾರತ ಸಂವಿಧಾನದ ಲೇಖನ ೩೭೦ ಮತ್ತು ೩೫ ಎ ರದ್ದುಭಾರತ ಗಣರಾಜ್ಯದ ಇತಿಹಾಸ - ಭಾಗ ೨ ಚಾದ್ರಯಾನ ೨ಭಾರತ ಗಣರಾಜ್ಯದ ಇತಿಹಾಸ - ಭಾಗ ೨ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಿಂದ ಉನ್ನತ ಮಟ್ಟದ ಉಪಗ್ರಹ ಉಡಾವಣೆಭಾರತ ಗಣರಾಜ್ಯದ ಇತಿಹಾಸ - ಭಾಗ ೨ ಭಾರತ್‌ಮಾಲಾ ಪರಿಯೋಜನಾ’ ಹೆದ್ದಾರಿ ಯೋಜನೆಭಾರತ ಗಣರಾಜ್ಯದ ಇತಿಹಾಸ - ಭಾಗ ೨ ೨೦೨೦- ೨೦೨೧ ರ ಕೇಂದ್ರ ಬಜೆಟ್ಭಾರತ ಗಣರಾಜ್ಯದ ಇತಿಹಾಸ - ಭಾಗ ೨ ೨೦೨೦ ರ ದೆಹಲಿ ವಿಧಾನಸಭೆ ಚುನಾವಣೆಭಾರತ ಗಣರಾಜ್ಯದ ಇತಿಹಾಸ - ಭಾಗ ೨ ಕೇಂದ್ರದಿಂದ ತೆರಿಗೆವರಮಾನ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಕಡಿತಭಾರತ ಗಣರಾಜ್ಯದ ಇತಿಹಾಸ - ಭಾಗ ೨ ೨೦೨೦-೨೦೨೧ರಲ್ಲಿ ಮಿತಿ ಮೀರಿದ ಕೇಂದ್ರದ ವಿತ್ತೀಯ ಕೊರತೆಭಾರತ ಗಣರಾಜ್ಯದ ಇತಿಹಾಸ - ಭಾಗ ೨ ೨೦೨೦ರಲ್ಲಿ ಕೋವಿಡ್‌-19- ಜಾಗತಿಕ ಪಿಡುಗು: ರಾಷ್ಟ್ರಮಟ್ಟದ ವಿಪ್ಪತ್ತುಭಾರತ ಗಣರಾಜ್ಯದ ಇತಿಹಾಸ - ಭಾಗ ೨ ಲಾಕ್‍ಡೌನ ಪರಿಣಾಮ- ಸಂಕಷ್ಟದಲ್ಲಿ ವಲಸೆ ಕಾರ್ಮಿಕರುಭಾರತ ಗಣರಾಜ್ಯದ ಇತಿಹಾಸ - ಭಾಗ ೨ ಜೂನ್ 15, 2020 ರ ದೋಕಲಾದಲ್ಲಿ ಚೀನಾ ಸಂಘರ್ಷಭಾರತ ಗಣರಾಜ್ಯದ ಇತಿಹಾಸ - ಭಾಗ ೨ ೨೦೨೦ - ೨೦೨೧ ರ ಜಿಎಸ್‍ಟಿ ಸಂಗ್ರಹದಲ್ಲಿ ಕೊರತೆ ರಾಜ್ಯಗಳ ಪಾಲಿನ ಹಣ ಇಲ್ಲಭಾರತ ಗಣರಾಜ್ಯದ ಇತಿಹಾಸ - ಭಾಗ ೨ ದೇಶಕ್ಕೆ ಹೊಸ ಶಿಕ್ಷಣ ನೀತಿಯ ಘೋಷಣೆಭಾರತ ಗಣರಾಜ್ಯದ ಇತಿಹಾಸ - ಭಾಗ ೨ ಹೊಸ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆಭಾರತ ಗಣರಾಜ್ಯದ ಇತಿಹಾಸ - ಭಾಗ ೨ ಭಾರತದ ಪ್ರಜಾಪ್ರಭುತ್ವಭಾರತ ಗಣರಾಜ್ಯದ ಇತಿಹಾಸ - ಭಾಗ ೨ ತಾತ್ಕಾಲಿಕ ಸಂಪಾದನೆಗಳುಭಾರತ ಗಣರಾಜ್ಯದ ಇತಿಹಾಸ - ಭಾಗ ೨ ನೋಡಿಭಾರತ ಗಣರಾಜ್ಯದ ಇತಿಹಾಸ - ಭಾಗ ೨ ಹೆಚ್ಚಿನ ಮಾಹಿತಿಭಾರತ ಗಣರಾಜ್ಯದ ಇತಿಹಾಸ - ಭಾಗ ೨ ಉಲ್ಲೇಖಭಾರತ ಗಣರಾಜ್ಯದ ಇತಿಹಾಸ - ಭಾಗ ೨

🔥 Trending searches on Wiki ಕನ್ನಡ:

ಕನ್ನಡ ವ್ಯಾಕರಣಕಲಿಯುಗಭಾರತದಿಕ್ಕುಭಾರತದ ಸಂವಿಧಾನದ ೩೭೦ನೇ ವಿಧಿಪಶ್ಚಿಮ ಘಟ್ಟಗಳುಪೂರ್ಣಚಂದ್ರ ತೇಜಸ್ವಿಮತದಾನಮುದ್ದಣಶ್ರೀ ರಾಮಾಯಣ ದರ್ಶನಂಪುಟ್ಟರಾಜ ಗವಾಯಿವಿಜಯಪುರಪು. ತಿ. ನರಸಿಂಹಾಚಾರ್ಶರಣಬಸವೇಶ್ವರ ದೇವಸ್ಥಾನ ಕಲಬುರಗಿಲೋಪಸಂಧಿರಾಷ್ತ್ರೀಯ ಐಕ್ಯತೆಪ್ರದೀಪ್ ಈಶ್ವರ್ಬೆಂಗಳೂರಿನ ಇತಿಹಾಸಮಲಬದ್ಧತೆತೆರಿಗೆಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುಭಾವನಾ(ನಟಿ-ಭಾವನಾ ರಾಮಣ್ಣ)ಮೂಲಧಾತುಅಮೇರಿಕ ಸಂಯುಕ್ತ ಸಂಸ್ಥಾನಮೂಳೆಪೆಟ್ರೋಮ್ಯಾಕ್ಸ್ (ಚಲನಚಿತ್ರ)ಸರ್ವೆಪಲ್ಲಿ ರಾಧಾಕೃಷ್ಣನ್ಸಂವಿಧಾನಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯರಶ್ಮಿಕಾ ಮಂದಣ್ಣಜಾಗತಿಕ ತಾಪಮಾನ ಏರಿಕೆತಾಜ್ ಮಹಲ್ಜಲ ಮಾಲಿನ್ಯವೈದಿಕ ಯುಗಕರಗಗೋವಿಂದ ಪೈಬೆಳಗಾವಿಕಬ್ಬಿಣಕ್ರಿಯಾಪದಕೊಡಗು ಜಿಲ್ಲೆಹಸ್ತ ಮೈಥುನಹುಲಿಮುಟ್ಟು ನಿಲ್ಲುವಿಕೆಕನ್ನಡ ಗುಣಿತಾಕ್ಷರಗಳುರಕ್ತಅರ್ಥಶಾಸ್ತ್ರಹಾಸನಹೈದರಾಬಾದ್‌, ತೆಲಂಗಾಣಚಿನ್ನಜಾತ್ರೆಸಂತಾನೋತ್ಪತ್ತಿಯ ವ್ಯವಸ್ಥೆಸು.ರಂ.ಎಕ್ಕುಂಡಿಪ್ರಾರ್ಥನಾ ಸಮಾಜಲಕ್ಷ್ಮಣಯಲ್ಲಮ್ಮ ದೇವಿ ದೇವಸ್ಥಾನ ಸವದತ್ತಿವಿಜಯನಗರಶಂಕರ್ ನಾಗ್ಏಕರೂಪ ನಾಗರಿಕ ನೀತಿಸಂಹಿತೆಎಚ್.ಎಸ್.ಶಿವಪ್ರಕಾಶ್ಶಿವರಾಮ ಕಾರಂತಬೈಲಹೊಂಗಲಚನ್ನವೀರ ಕಣವಿಕನ್ನಡಕನ್ನಡ ಸಾಹಿತ್ಯ ಪರಿಷತ್ತುರಾಮಹಯಗ್ರೀವಮಾನವ ಹಕ್ಕುಗಳುಹಾಸನ ಜಿಲ್ಲೆಪಂಡಿತಗಂಗ (ರಾಜಮನೆತನ)ರಗಳೆವ್ಯಂಜನಮಾಟ - ಮಂತ್ರಶ್ರೀ ಕೃಷ್ಣ ಪಾರಿಜಾತನಾಗವರ್ಮ-೨ತಾಳೀಕೋಟೆಯ ಯುದ್ಧಅನ್ನಪೂರ್ಣೇಶ್ವರಿ ದೇವಾಲಯ, ಹೊರನಾಡುಕುರು🡆 More