ಭಾರತದಲ್ಲಿ ೨೦೨೦ ಕೊರೋನಾವೈರಸ್ ಸಾಂಕ್ರಾಮಿಕ

ದೆಹಲಿ ಹರಿಯಾಣ, ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಮತ್ತು ಉತ್ತರ ಪ್ರದೇಶಗಳಲ್ಲಿ, ಸಾಂಕ್ರಾಮಿಕ ರೋಗಗಳ ಕಾಯ್ದೆ-೧೮೯೭ ಪ್ರಕಾರ ಇದನ್ನು ಸಾಂಕ್ರಾಮಿಕ ರೋಗವೆಂದು ಘೋಷಿಸಲಾಗಿದೆ.

ಶಿಕ್ಷಣ ಸಂಸ್ಥೆಗಳು ಮತ್ತು ಅನೇಕ ವಾಣಿಜ್ಯ ಸಂಸ್ಥೆಗಳು ಸ್ಥಗಿತಗೊಂಡಿವೆ. ಭಾರತವು ಎಲ್ಲಾ ಪ್ರವಾಸಿ ವೀಸಾಗಳನ್ನು ಅಮಾನತುಗೊಳಿಸಿದೆ. ಯಾಕೆಂದರೆ ಹೆಚ್ಚಿನ ಪ್ರಕರಣಗಳು ಇತರ ದೇಶಗಳಿಗೆ ಸಂಬಂಧ ಹೊಂದಿವೆ.

ಭಾರತದಲ್ಲಿ ೨೦೨೦ ಕೊರೋನಾವೈರಸ್ ಸಾಂಕ್ರಾಮಿಕ
ಭಾರತದಲ್ಲಿ ೨೦೨೦ ಕೊರೋನಾವೈರಸ್ ಸಾಂಕ್ರಾಮಿಕ (ಮಾರ್ಚ್ ೧೬, ೨೦೨೦).
ರೋಗCOVID-19
ವೈರಸ್ ತಳಿSARS-CoV-2
ಸ್ಥಳಭಾರತ
ಮೊದಲ ಪ್ರಕರಣಕೇರಳ
ಆಗಮನದ ದಿನಾಂಕ೩೦ ಜನವರಿ ೨೦೨೦
ಮೂಲವುಹಾನ್, ಚೀನಾ
ಪ್ರಸ್ತುತ ದೃಡಪಡಿಸಲಾದ ಪ್ರಕರಣಗಳು
ಸಕ್ರಿಯ ಪ್ರಕರಣಗಳು೨,೭೫,೨೨೪
ಚೇತರಿಸಿಕೊಂಡ ಪ್ರಕರಣಗಳು
ಸಾವುಗಳು
ಪ್ರಾಂತ್ಯಗಳು
ಆಂಧ್ರ ಪ್ರದೇಶ, ದೆಹಲಿ, ಹರಿಯಾಣ, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕ, ಕೇರಳ, ಲಡಾಖ್, ಮಹಾರಾಷ್ಟ್ರ, ಒರಿಸ್ಸಾ ಪಂಜಾಬ್, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಉತ್ತರಾಖಂಡ, ಉತ್ತರ ಪ್ರದೇಶ
ಅಧಿಕೃತ ಜಾಲತಾಣ
www.mohfw.gov.in

ಜನವರಿ

  • ಜನವರಿ ೩೦ ರಂದು ವುಹಾನ್ ವಿಶ್ವವಿದ್ಯಾಲಯದಿಂದ ಕೇರಳಕ್ಕೆ ಮರಳಿದ ವಿದ್ಯಾರ್ಥಿಯಲ್ಲಿ ದೇಶದ ಮೊದಲ ಪ್ರಕರಣ ದೃಢಪಟ್ಟಿತು.

ಫೆಬ್ರವರಿ

  • ಫೆಬ್ರವರಿ ೨ ರಂದು, ಕೇರಳದಲ್ಲಿ ಎರಡನೇ ಪ್ರಕರಣವನ್ನು ದೃಢಪಡಿಸಲಾಯಿತು. ಈ ವ್ಯಕ್ತಿ ಭಾರತ ಮತ್ತು ಚೀನಾ ನಡುವೆ ನಿಯಮಿತವಾಗಿ ಪ್ರಯಾಣಿಸುತ್ತಿದ್ದರು.
  • ಫೆಬ್ರವರಿ ೩ ರಂದು ಕೇರಳದ ಕಾಸರಗೋಡಿನಲ್ಲಿ ಮೂರನೇ ಪ್ರಕರಣ ವರದಿಯಾಗಿದೆ. ರೋಗಿಯು ವುಹಾನ್‌ನಿಂದ ಪ್ರಯಾಣಿಸಿದ್ದರು. ಮೂವರೂ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ಮಾರ್ಚ್

ಮಾರ್ಚ್ ೧-೧೫

ಚಿತ್ರ:Healthcare workers wearing PPE 01.jpg
ಕರೋನಾವೈರಸ್ ಸೋಂಕಿತ ವ್ಯಕ್ತಿಗಳಿಗೆ ಚಿಕಿತ್ಸೆ ನೀಡಲು ಕೇರಳದ ಆರೋಗ್ಯ ಕಾರ್ಯಕರ್ತರು ವೈಯಕ್ತಿಕ ರಕ್ಷಣಾ ಸಾಧನಗಳನ್ನು ಧರಿಸುತ್ತಾರೆ
  • ಮಾರ್ಚ್ ೨ ರಂದು, ಕೇಂದ್ರ ಆರೋಗ್ಯ ಸಚಿವಾಲಯವು ಇನ್ನೂ ಎರಡು ದೃಢಪಡಿಸಿದ ಪ್ರಕರಣಗಳನ್ನು ವರದಿ ಮಾಡಿದೆ: ದೆಹಲಿಯಲ್ಲಿ ಇಟಲಿಯಿಂದ ಹಿಂದಿರುಗಿದ ೪೫ ವರ್ಷದ ವ್ಯಕ್ತಿ ಮತ್ತು ಹೈದರಾಬಾದ್ನಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ನಿಂದ ಪ್ರಯಾಣ ಮಾಡಿದ ಇತಿಹಾಸವಿರುವ 24 ವರ್ಷದ ಎಂಜಿನಿಯರ್. ಇದಲ್ಲದೆ, ಜೈಪುರದಲ್ಲಿ ಇಟಾಲಿಯನ್ ಪ್ರಜೆಯೊಬ್ಬನನ್ನು ಈ ಹಿಂದೆ ಋಣಾತ್ಮಕವಾಗಿ ಪರೀಕ್ಷಿಸಲಾಗಿದ್ದು, ನಂತರ ಕರೋನವೈರಸ್ ಇರುವುದನ್ನು ದೃಢಪಡಿಸಲಾಯಿತು. ಇದರಿಂದಾಗಿ ದೇಶದಲ್ಲಿ ಒಟ್ಟು ಆರು ಪ್ರಕರಣಗಳು ದೃಢಪಟ್ಟಂತಾಯಿತು. ಬೆಂಗಳೂರಿನ ಓರ್ವ ಸಹಪ್ರಯಾಣಿಕ ಸೇರಿದಂತೆ ಹೈದರಾಬಾದ್ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದ ೮೮ ಜನರನ್ನು ಸರ್ಕಾರ ಪತ್ತೆ ಹಚ್ಚಿ ಕಾವಲು ಕಾಯುತ್ತಿದೆ. ಹೈದರಾಬಾದ್ ಎಂಜಿನಿಯರ್ ಅವರೊಂದಿಗೆ ಸಂಪರ್ಕದಲ್ಲಿದ್ದ ೩೬ ಜನರು ಕರೋನವೈರಸ್ ರೋಗಲಕ್ಷಣಗಳನ್ನು ಹೊಂದಿದ್ದಾರೆ ಎಂದು ತೆಲಂಗಾಣ ಸರ್ಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಅವರೊಂದಿಗೆ ಸಂಪರ್ಕಕ್ಕೆ ಬಂದ ಬೆಂಗಳೂರಿನ ಇಂಟೆಲ್ ಉದ್ಯೋಗಿಯೊಬ್ಬರನ್ನು ನಿರ್ಬಂಧಿಸಲಾಗಿದೆ. ದೆಹಲಿಯ ವ್ಯಕ್ತಿಯನ್ನು ವಿಯೆನ್ನಾದಿಂದ ಕರೆತಂದ ಏರ್ ಇಂಡಿಯಾ ವಿಮಾನದ ಹದಿನೈದು ಸಿಬ್ಬಂದಿಯನ್ನು ೧೪ ದಿನಗಳ ಕಾಲ ಪ್ರತ್ಯೇಕವಾಗಿರಿಸಲಾಯಿತು ಹಾಗೂ ಆಗ್ರಾದಲ್ಲಿ ಅವರ ಕುಟುಂಬದ ಆರು ಸದಸ್ಯರನ್ನು ನಿರ್ಬಂಧಿಸಲಾಯಿತು. ಫೆಬ್ರವರಿ ೨೮ ರಂದು ಆತ ಊಟ ಮಾಡಿದ ದೆಹಲಿಯ ರೆಸ್ಟೋರೆಂಟ್‌ನ ಸಿಬ್ಬಂದಿಯನ್ನು ಎರಡು ವಾರಗಳ ಕಾಲ ಸ್ವಯಂ-ನಿರ್ಬಂಧನದಲ್ಲಿರುವಂತೆ ಕೇಳಿಕೊಳ್ಳಲಾಯಿತು. ಅವರ ಮಗುವಿನ ಹುಟ್ಟುಹಬ್ಬದ ಸಂತೋಷಕೂಟದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದ ನೋಯ್ಡಾದ ಎರಡು ಶಾಲೆಗಳನ್ನು ಒಂದು ವಾರದ ಕಾಲ ಮುಚ್ಚಲಾಯಿತು.
  • ಮಾರ್ಚ್ ೩ ರಂದು, ಜೈಪುರದ ಇಟಾಲಿಯನ್ ಪ್ರವಾಸಿಯೊಬ್ಬರ ಪತ್ನಿ ಸಹ ತಮ್ಮಲ್ಲಿ ಕೊರೋನಾವೈರಸ್ ಇರುವುದನ್ನು ಪರೀಕ್ಷೆಯಿಂದ ದೃಢಪಡಿಸಲಾಯಿತು. ದಕ್ಷಿಣ ದೆಹಲಿಯ ಹೋಟೆಲ್‌ನಲ್ಲಿ ವಾಸಿಸುತ್ತಿದ್ದ ಒಟ್ಟು ೨೪ ಜನರನ್ನು (೨೧ ಇಟಾಲಿಯನ್ನರು ಮತ್ತು ೩ ಭಾರತೀಯರು) ಪರೀಕ್ಷೆಗಾಗಿ ಐಟಿಬಿಪಿ ಶಿಬಿರಕ್ಕೆ ಸ್ಥಳಾಂತರಿಸಲಾಯಿತು.
  • ಮಾರ್ಚ್ ೪ ರಂದು, ಜೈಪುರದ ಇಟಾಲಿಯನ್ ಪ್ರವಾಸಿ ಪತ್ನಿ ಸಹಿತ ಒಟ್ಟು ೧೫ ಮಂದಿ (೧೪ ಇಟಾಲಿಯನ್ನರು ಮತ್ತು ಓರ್ವ ಭಾರತೀಯ) ಕರೋನವೈರಸ್ ಇರುವುದನ್ನು ದೃಢಪಡಿಸಲಾಯಿತು. ಗುರ್ಗಾಂವ್‌ನ ಮೆಡಂಟಾದಲ್ಲಿ ೧೪ ಇಟಾಲಿಯನ್ನರನ್ನು ನಿರ್ಬಂಧಿಸಲಾಯಿತು. ಆಗ್ರಾದಲ್ಲಿ ದೆಹಲಿ ಪ್ರಕರಣದ ಆರು ಕುಟುಂಬ ಸದಸ್ಯರು ಈ ವೈರಸ್ ಸೋಂಕಿಗೆ ಒಳಗಾಗಿರುವುದು ದೃಢಪಡಿಸಲಾಗಿದೆ. ಇಟಲಿಯಲ್ಲಿ ವಿಹಾರಕ್ಕೆ ಹೋಗಿ ಹಿಂದಿರುಗಿದ ಪೇಟಿಎಂ ಕಂಪೆನಿಯ ಉದ್ಯೋಗಿಯೊಬ್ಬರು ಕೊರೊನಾವೈರಸ್ ಸೋಂಕಿಗೆ ಒಳಪಟ್ಟದ್ದನ್ನು ದೃಢಪಡಿಸಲಾಯಿತು. ಕೊಚ್ಚಿಯಲ್ಲಿ ಇಟಾಲಿಯನ್ ಐಷಾರಾಮಿ ಕ್ರೂಸ್ ಶಿಪ್ 'ಕೋಸ್ಟಾ ವಿಕ್ಟೋರಿಯಾ'ದಲ್ಲಿ ಪ್ರಯಾಣಿಸಿದ್ದ ೪೫೯ ಪ್ರಯಾಣಿಕರನ್ನು ಪರೀಕ್ಷಿಸಲಾಯಿತು.
  • ಮಾರ್ಚ್ ೫ ರಂದು, ಇರಾನ್‌ನೊಂದಿಗೆ ಪ್ರಯಾಣದ ಇತಿಹಾಸವನ್ನು ಹೊಂದಿದ್ದ ಗಾಜಿಯಾಬಾದ್‌ನ ಮಧ್ಯವಯಸ್ಕ ವ್ಯಕ್ತಿಯೊಬ್ಬರಿಗೆ ಕೊರೋನಾವೈರಸ್ ಇರುವುದು ದೃಢಪಟ್ಟಿತು. ಇತರೆ ದೇಶಗಳಿಂದ ಬಂದ ೧,೨೦೦ ಕ್ಕೂ ಹೆಚ್ಚು ಜನರನ್ನು ಕೋಲ್ಕತ್ತಾದಲ್ಲಿ ನಿರ್ಬಂಧಿಸಲಾಯಿತು.
  • ಮಾರ್ಚ್ ೬ ರಂದು, ಮಲೇಷ್ಯಾ ಮತ್ತು ಥೈಲ್ಯಾಂಡ್ಗೆ ಪ್ರಯಾಣಿಸಿದ್ದ ಪಶ್ಚಿಮ ದೆಹಲಿಯ ನಿವಾಸಿ ಕೊರೋನಾವೈರಸ್ ರೋಗದಿಂದ ಬಳಲುತ್ತಿದ್ದುದು ಪತ್ತೆಯಾಯಿತು.
  • ಮಾರ್ಚ್ ೭ ರಂದು, ಜಮ್ಮುವಿನಲ್ಲಿ ಇರಾನ್ ಮತ್ತು ದಕ್ಷಿಣ ಕೊರಿಯಾಕ್ಕೆ ಪ್ರಯಾಣಿಸಿದ್ದ ಒಬ್ಬ ವ್ಯಕ್ತಿ, ಮತ್ತು ಹೋಶಿಯಾರ್‌ಪುರದಿಂದ ಇಟಲಿಯ ಪ್ರವಾಸದ ಇತಿಹಾಸ ಹೊಂದಿರುವ ಇಬ್ಬರು ಪ್ರಾಥಮಿಕ ಪರೀಕ್ಷೆಗಳಲ್ಲಿ ಸಕಾರಾತ್ಮಕ ಫಲಿತಾಂಶ ನೀಡಿದರೂ, ಪುಣೆಯಿಂದ ದೃಢೀಕರಣವನ್ನು ನಿರೀಕ್ಷಿಸಲಾಗುತ್ತಿದೆ. ಕೇಂದ್ರ ಆರೋಗ್ಯ ಸಚಿವಾಲಯವು ಮಾರ್ಚ್ ೭ ರಂದು ಮೂರು ದೃಢಪಡಿಸಿದ ಪ್ರಕರಣಗಳನ್ನು ಘೋಷಿಸಿತು-ಇರಾನ್‌ಗೆ ಭೇಟಿ ನೀಡಿದ ಲಡಾಖ್‌ನ ಇಬ್ಬರು ಮತ್ತು ಒಮಾನ್‌ಗೆ ತೆರಳಿದ್ದ ತಮಿಳುನಾಡಿನ ಒಬ್ಬ ವ್ಯಕ್ತಿ. ತಮಿಳುನಾಡಿನ COVID-19 ನ ಏಕೈಕ ರೋಗಿಯು ನಂತರ ಮಾರ್ಚ್ ೧೦ ರಂದು ಋಣಾತ್ಮಕ ಫಲಿತಾಂಶವನ್ನು ನೀಡಿದರು. ಇದರೊಂದಿಗೆ ರಾಜ್ಯದಲ್ಲಿ ಯಾವುದೇ ಹೊಸ ಪ್ರಕರಣಗಳು ಕಂಡುಬಂದಿಲ್ಲ.
  • ಮಾರ್ಚ್ ೮ ರಂದು ಕೇರಳದ ಪಥನಮ್‍ತಿಟ್ಟದಲ್ಲಿ ಒಂದೇ ಕುಟುಂಬದ ಐದು ಜನರಲ್ಲಿ ವೈರಸ್‌ ಕಂಡುಬಂತು. ಅವರಲ್ಲಿ ಮೂವರು ಇಟಲಿಗೆ ಹೋಗಿದ್ದರೆ, ಇತರ ಇಬ್ಬರು ಸೋಂಕಿತರೊಂದಿಗೆ ನೇರ ಸಂಪರ್ಕಕ್ಕೆ ಬಂದಿದ್ದರು.
  • ಮಾರ್ಚ್ ೯ ರಂದು, ಎರಡು ದಿನಗಳ ಮೊದಲು ಎರ್ನಾಕುಲಂನಲ್ಲಿ ಇಟಲಿಯಿಂದ ಹಿಂದಿರುಗಿದ ಮೂರು ವರ್ಷದ ಮಗುವಿನಲ್ಲಿ ವೈರಸ್ ಪತ್ತೆಯಾಯಿತು. ಮಗುವಿನ ಹೆತ್ತವರನ್ನು ಮುನ್ನೆಚ್ಚರಿಕೆಯಾಗಿ ಪ್ರತ್ಯೇಕಿಸಲಾಯಿತು. ಇರಾನ್‌ಗೆ ತೆರಳಿದ್ದ ಜಮ್ಮು ಮತ್ತು ಕಾಶ್ಮೀರದ ೬೩ ವರ್ಷದ ಮಹಿಳೆ ವೈರಸ್‌ಗೆ ತುತ್ತಾಗಿರುವುದು ದೃಢಪಟ್ಟಿದೆ. ಆಗ್ರಾದಲ್ಲಿ ಒಬ್ಬ ವ್ಯಕ್ತಿ, ಮತ್ತು ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದಿದ್ದ ದೆಹಲಿಯ ಒಬ್ಬ ವ್ಯಕ್ತಿಗೆ ವೈರಸ್ ಇರುವುದು ಪತ್ತೆಯಾಗಿದೆ. ಪಂಜಾಬ್ನ ಹೋಶಿಯಾರ್‌ಪುರದ ಎರಡು ಪ್ರಕರಣಗಳಲ್ಲಿ ಒಂದು ಸಕಾರಾತ್ಮಕವೆಂದು ಕಂಡುಬಂತು. ದುಬೈಗೆ ಪ್ರಯಾಣದ ಇತಿಹಾಸವನ್ನು ಹೊಂದಿದ್ದ ಪುಣೆ ದಂಪತಿಗಳಲ್ಲಿ ವೈರಸ್ ಇರುವುದು ಕಂಡುಬಂತು.
  • ಮಾರ್ಚ್ ೧೦ ರಂದು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಪತ್ರಿಕಾ ಪ್ರಕಟಣೆಯು ಕರ್ನಾಟಕದಲ್ಲಿ ಸೋಂಕಿತ ಬೆಂಗಳೂರು ಟೆಕ್ಕಿಯ ಪತ್ನಿ ಮತ್ತು ಮಗು ಸೇರಿದಂತೆ ಇನ್ನೂ ಮೂರು ಜನರಿಗೆ ವೈರಸ್ ಇರುವುದು ಪತ್ತೆಯಾಗಿದೆ ಎಂದು ದೃಢಪಡಿಸಿತು. ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪಥನಮ್‍ತಿಟ್ಟದಲ್ಲಿ ಆರು ಹೊಸ ಪ್ರಕರಣಗಳನ್ನು ವರದಿ ಮಾಡಿದ್ದಾರೆ. ಪುಣೆಯಲ್ಲಿ ಸೋಂಕಿತ ದಂಪತಿಗಳೊಂದಿಗೆ ಸಂಪರ್ಕಕ್ಕೆ ಬಂದ ಇನ್ನೂ ಮೂರು ಜನರಲ್ಲಿ ವೈರಸ್ ಇರುವುದು ಕಂಡುಬಂತು. ನಂತರ, ಎರ್ನಾಕುಲಂನಲ್ಲಿ ಸೋಂಕಿತ ಮೂರು ವರ್ಷದ ಮಗುವಿನ ಪೋಷಕರಲ್ಲಿ ಸಹ ವೈರಸ್ ಇರುವುದು ದೃಢಪಟ್ಟಿತು.
  • ಮಾರ್ಚ್ ೧೧ ರಂದು, ದುಬೈಗೆ ಪ್ರಯಾಣದ ಇತಿಹಾಸವನ್ನು ಹೊಂದಿರುವ ಜೈಪುರದ ೮೫ ವರ್ಷದ ವ್ಯಕ್ತಿಯೊಬ್ಬರು ವೈರಸ್ ಹೊಂದಿರುವುದು ದೃಢಪಟ್ಟಿತು. ಈ ಹಿಂದೆ ವರದಿಯಾದ ಪುಣೆ ರೋಗಿಗಳಿಗೆ ಹತ್ತಿರವಾಗಿದ್ದ ಇಬ್ಬರಿಗೆ ಮುಂಬೈಯಲ್ಲಿ ವೈರಸ್ ಇರುವುದು ಪತ್ತೆಯಾಯಿತು. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ಪುಣೆಯಲ್ಲಿ ೮ ಮತ್ತು ಮುಂಬೈಯಲ್ಲಿ ೨ ಮಂದಿ ಸೇರಿ ಒಟ್ಟು ಹತ್ತು ಜನರಿಗೆ ವೈರಸ್ ಇರುವುದು ದೃಢಪಟ್ಟಿದೆ ಎಂದರು. ನಂತರ, ಅಮೆರಿಕದಿಂದ ಹಿಂದಿರುಗಿದ ೪೫ ವರ್ಷದ ವ್ಯಕ್ತಿಯೊಬ್ಬರು ನಾಗ್ಪುರದಲ್ಲಿ ಪರೀಕ್ಷೆಯಲ್ಲಿ ಧನಾತ್ಮಕ ಫಲಿತಾಂಶ ನಿಡುವ ಮೂಲಕ ಮಹಾರಾಷ್ಟ್ರದಲ್ಲಿ ಒಟ್ಟು ಸಂಕ್ಯೆಯನ್ನು ೧೧ ಕ್ಕೆ ತಲುಪಿಸಿದರು.
  • ಮಾರ್ಚ್ ೧೨ ರಂದು, ಸೌದಿ ಅರೇಬಿಯಾಕ್ಕೆ ಪ್ರಯಾಣದ ಇತಿಹಾಸವನ್ನು ಹೊಂದಿದ್ದ ಕರ್ನಾಟಕದ ಕಲಬುರ್ಗಿಯ ೭೬ ವರ್ಷದ ವ್ಯಕ್ತಿ ಮಾರ್ಚ್ ೧೦ ರಂದು ಸತ್ತದ್ದು ಸಿಒವಿಐಡಿ-೧೯ ರಿಂದಲೇ ಎಂದು ದೃಢಪಡಿಸುವ ಮೂಲಕ ಭಾರತವು ತನ್ನ ಮೊದಲ ಸಾವನ್ನು ಸಾರಿದಂತಾಯಿತು. ಇಟಲಿಯ ಪ್ರವಾಸಿಗರ ಗುಂಪಿನೊಂದಿಗೆ ಸಂಪರ್ಕಕ್ಕೆ ಬಂದ ಉತ್ತರ ಪ್ರದೇಶದ ನೋಯ್ಡಾದಲ್ಲಿ ಪ್ರವಾಸಿ ಮಾರ್ಗದರ್ಶಿಯಾಗಿ ಕೆಲಸ ಮಾಡುತ್ತಿದ್ದವರೊಬ್ಬರು ಪರೀಕ್ಷೆಯಲ್ಲಿ ಧನಾತ್ಮಕ ಫಲಿತಾಂಶ ನೀಡಿದರು. ನಂತರ, ಕೆನಡಾದ ಮಹಿಳೆಯೊಬ್ಬರು ಉತ್ತರ ಪ್ರದೇಶದ ಲಕ್ನೋದಲ್ಲಿ ಪರೀಕ್ಷೆಯಲ್ಲಿ ಧನಾತ್ಮಕ ಫಲಿತಾಂಶ ನೀಡಿದರು. ಆಕೆಯೊಂದಿಗೆ ಪ್ರಯಾಣಿಸಿದ್ ಆಕೆಯ ಪತಿಯನ್ನು ಸಹ ಪ್ರತ್ಯೇಕವಾಗಿರಿಸಲಾಯಿತು. ಪಶ್ಚಿಮ ದೆಹಲಿಯ ೬೯ ವರ್ಷದ ಮಹಿಳೆ ಪರೀಕ್ಷೆಯಲ್ಲಿ ಧನಾತ್ಮಕ ಫಲಿತಾಂಶ ನೀಡಿ ನಂತರ ನಿಧನರಾದರು. ಆಕೆಗೆ ಈ ವೈರಸ್ ಜಪಾನ್, ಇಟಲಿ ಮತ್ತು ಸ್ವಿಟ್ಜರ್ಲೆಂಡ್‌ನ ಜಿನೀವಾಕ್ಕೆ ಪ್ರಯಾಣಿಸಿದ್ದ ಆಕೆಯ ಮಗನಿಂದ ಬಂದಿತ್ತು. ಆಂಧ್ರಪ್ರದೇಶದ ವ್ಯಕ್ತಿಯೊಬ್ಬ ಇಟಲಿಯಿಂದ ಹಿಂದಿರುಗಿದ ನಂತರ ನೆಲ್ಲೂರಿನಲ್ಲಿ ಪರೀಕ್ಷೆಯಲ್ಲಿ ಧನಾತ್ಮಕ ಫಲಿತಾಂಶ ನೀಡುವ ಮೂಲಕ ಆಂದ್ರಪ್ರದೇಶದ ಮೊದಲ ಪ್ರಕರಣ ವರದಿಯಾಯಿತು. ಅವರ ಸಂಪರ್ಕಕ್ಕೆ ಬಂದ ಐದು ಜನರನ್ನು ಪ್ರತ್ಯೇಕಿಸಲಾಯಿತು.
  • ಹಿಂದಿನ ದಿನ ಧನಾತ್ಮಕ ಫಲಿತಾಂಶ ನೀಡಿದ ದೆಹಲಿಯ ೬೯ ವರ್ಷದ ಮಹಿಳೆ ಸಾವನ್ನಪ್ಪಿದ್ದರಿಂದ ಮಾರ್ಚ್ ೧೩ ರಂದು ದೇಶದ ಎರಡನೇ ಸಾವು ದಾಖಲಾದಂತಾಯಿತು. ಗ್ರೀಸ್‌ನ ಪ್ರವಾಸದಿಂದ ಹಿಂದಿರುಗಿದ ಬೆಂಗಳೂರಿನ ಗೂಗಲ್‌ನ ಉದ್ಯೋಗಿಯೊಬ್ಬರು ಧನಾತ್ಮಕ ಫಲಿತಾಂಶ ನಿಡಿದರು ಹಾಗೂ ಅವರ ಸಹೋದ್ಯೋಗಿಗಳನ್ನು ಪ್ರತ್ಯೇಕಿಸಲಾಯಿತು. ನಂತರ, ದುಬೈ ಮತ್ತು ಕತಾರ್‌ನಿಂದ ಮರಳಿದ ಕೇರಳದ ಇನ್ನೂ ಇಬ್ಬರು ಧನಾತ್ಮಕ ಫಲಿತಾಂಶ ನೀಡಿ ರಾಜ್ಯದ ಒಟ್ಟು COVID-19 ಪ್ರಕರಣಗಳನ್ನು ೧೬ ಕ್ಕೆ ಏರಿಸಿದರು. ಮಹಾರಾಷ್ಟ್ರದಲ್ಲಿ, ಪುಣೆಯಲ್ಲಿ ಇನ್ನೂ ಒಬ್ಬರು ಮತ್ತು ನಾಗ್ಪುರದಲ್ಲಿ ಇಬ್ಬರು ಧನಾತ್ಮಕ ಫಲಿತಾಂಶ ನೀಡುವ ಮೂಲಕ ರಾಜ್ಯದಲ್ಲಿ ಒಟ್ಟು ೧೭ ಜನರಿಗೆ ವೈರಸ್ ಬಂದಂತಾಯಿತು. ನೋಯ್ಡಾದ ಖಾಸಗಿ ಸಂಸ್ಥೆಯ ಉದ್ಯೋಗಿಯೊಬ್ಬರು ಇಟಲಿಗೆ ಮತ್ತು ಸ್ವಿಟ್ಜರ್‌ಲ್ಯಾಂಡ್‌ಗೆ ಪ್ರಯಾಣ ಬೆಳೆಸಿದ್ದು ವೈರಸ್ ಪರೀಕ್ಷೆಯಲ್ಲಿ ಧನಾತ್ಮಕತೆಯನ್ನು ನೀಡಿದರು. ಒಬ್ಬ ಭಾರತೀಯ ಪ್ರಜೆಯನ್ನು ಇಟಲಿಯಿಂದ ಸ್ಥಳಾಂತರಿಸಲಾಯಿತು ಮತ್ತು ಗುರುಗ್ರಾಮ್ ಬಳಿಯ ಸೈನ್ಯದ ಸೌಲಭ್ಯವೊಂದರಲ್ಲಿ ಪ್ರತ್ಯೇಕಿಸಿ ಇಡಲಾಯಿತು. ಏಳು ರೋಗಿಗಳು - ಉತ್ತರ ಪ್ರದೇಶದ ೫, ಮತ್ತು ರಾಜಸ್ಥಾನ ಮತ್ತು ದೆಹಲಿಯ ತಲಾ ಒಬ್ಬರು ಕಾಯಿಲೆಯಿಂದ ಮುಕ್ತರಾದರು ಮತ್ತು ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದರು.
  • ಮಾರ್ಚ್ ೧೪ ರಂದು, ಮಹಾರಾಷ್ಟ್ರದಲ್ಲಿ ಒಟ್ಟು ಏಳು ಜನರಿಗೆ ವೈರಸ್ ಇರುವುದು ದೃಢಪಟ್ಟಿತು. ಇಟಲಿಗೆ ಪ್ರಯಾಣದ ಇತಿಹಾಸ ಹೊಂದಿರುವ ವ್ಯಕ್ತಿಯಲ್ಲಿ ಹೈದರಾಬಾದ್‌ನಲ್ಲಿ ಕರೋನವೈರಸ್‌ನ ಎರಡನೇ ಪ್ರಕರಣ ಪತ್ತೆಯಾಯಿತು. ಸ್ಪೇನ್‌ಗೆ ಪ್ರಯಾಣದ ಇತಿಹಾಸವನ್ನು ಹೊಂದಿದ್ದ ಜೈಪುರದ ೨೪ ವರ್ಷದ ವ್ಯಕ್ತಿಯೊಬ್ಬರಲ್ಲಿ ವೈರಸ್ ಇರುವುದು ಪತ್ತೆಯಾಯಿತು.

ಮಾರ್ಚ್ ೧೬-೩೧

ಪ್ರತಿಕ್ರಿಯೆ

ಭಾರತದಲ್ಲಿ ೨೦೨೦ ಕೊರೋನಾವೈರಸ್ ಸಾಂಕ್ರಾಮಿಕ 
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬಿಡುಗಡೆ ಮಾಡಿದ ಜಾಗೃತಿ ಪೋಸ್ಟರ್

ನಿರೋಧಕ ಕ್ರಮಗಳು

ರಕ್ಷಣಾತ್ಮಕ ಕ್ರಮಗಳನ್ನು ಮೊದಲು ಜನವರಿಯಲ್ಲಿ ಅನ್ವಯಿಸಲಾಯಿತು. ಭಾರತ ಸರ್ಕಾರವು ತನ್ನ ನಾಗರಿಕರಿಗೆ, ವಿಶೇಷವಾಗಿ ಚೀನಾದ ವುಹಾನ್ ಗೆ ಪ್ರಯಾಣ ಸಲಹೆಯನ್ನು ನೀಡಿತು. ಅಲ್ಲಿ ಸುಮಾರು ೫೦೦ ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದರು. ಚೀನಾದಿಂದ ಬರುವ ಪ್ರಯಾಣಿಕರ ಉಷ್ಣ ತಪಾಸಣೆ ನಡೆಸಲು ಏಳು ಪ್ರಮುಖ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ನಿರ್ದೇಶನ ನೀಡಿತು.

ಮಾರ್ಚ್ ಆರಂಭದ ಮಧ್ಯಭಾಗದವರೆಗೆ ದೇಶದಲ್ಲಿ ಸಾಂಕ್ರಾಮಿಕ ರೋಗವನ್ನು ಉಲ್ಬಣಗೊಳಿಸುವುದನ್ನು ಎದುರಿಸಲು ಸರ್ಕಾರವು ಯೋಜನೆಗಳನ್ನು ರೂಪಿಸಿತ್ತು, ಇದರಲ್ಲಿ ದೇಶಾದ್ಯಂತ ಹೆಚ್ಚುವರಿ ಸಂಪರ್ಕತಡೆಯನ್ನು ಮತ್ತು ಚಿಕಿತ್ಸಾ ಸೌಲಭ್ಯಗಳನ್ನು ಸ್ಥಾಪಿಸಲು ಏಳು ಸಚಿವಾಲಯಗಳು ಒಟ್ಟಾಗಿ ಕಾರ್ಯನಿರ್ವಹಿಸುತ್ತಿವೆ. ರಾಜ್ಯಗಳು ಮತ್ತು ಮನೆ, ರಕ್ಷಣಾ, ರೈಲ್ವೆ, ಕಾರ್ಮಿಕ, ಅಲ್ಪಸಂಖ್ಯಾತ ವ್ಯವಹಾರಗಳು, ವಾಯುಯಾನ ಮತ್ತು ಪ್ರವಾಸೋದ್ಯಮ ಸೇರಿದಂತೆ ಇಪ್ಪತ್ತು ಸಚಿವಾಲಯಗಳಿಗೆ ಧಾರಕ ಯೋಜನೆಯ ಬಗ್ಗೆ ಮಾಹಿತಿ ನೀಡಲಾಗಿದೆ. ರಕ್ಷಣಾತ್ಮಕ ಮತ್ತು ವೈದ್ಯಕೀಯ ಸಾಮಗ್ರಿಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವ ಕೆಲಸವನ್ನು ಜವಳಿ ಸಚಿವಾಲಯಕ್ಕೆ ವಹಿಸಲಾಗಿದೆ. ಅಗತ್ಯ ಔಷಧಿಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿಯನ್ನು ಔಷಧೀಯ ಇಲಾಖೆಗೆ ವಹಿಸಲಾಗಿದೆ. ಅಗತ್ಯ ವಸ್ತುಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವನ್ನು ಕೇಳಲಾಗಿದೆ.

ಮಾರ್ಚ್ ೧೫ ರಂದು ಭಾರತೀಯ ಜನತಾ ಪಕ್ಷವು ರಾಜಸ್ಥಾನದಲ್ಲಿ ಕರೋನವೈರಸ್ ಬಗ್ಗೆ ಜಾಗೃತಿ ಮೂಡಿಸಲು ಸಾರ್ವಜನಿಕ ಅಭಿಯಾನ ನಡೆಸಿತು.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೇರಳದ ತಿರುವನಂತಪುರಂನಲ್ಲಿರುವ ತನ್ನ ಮೂರು ಸೌಲಭ್ಯಗಳಲ್ಲಿ ಸಾಂಕ್ರಾಮಿಕ ರೋಗದ ವಿರುದ್ಧ ಮುನ್ನೆಚ್ಚರಿಕೆಗಳನ್ನು ಅಳವಡಿಸಿಕೊಂಡಿದೆ.

ಸಾರ್ಕ್ ಸಮ್ಮೇಳನ

'Prepare, but don't panic' has been India's guiding mantra in dealing with the virus outbreak. Our region has reported less than 150 coronavirus cases, but we need to remain vigilant. Step-by-step approach helped avoid panic, made special efforts to reach out to vulnerable groups.

—Prime Minister Narendra Modi during the video conference with SAARC nations, 15 February 2020.

ಮಾರ್ಚ್ ೧೩ ರಂದು, ಪ್ರಧಾನಿ ನರೇಂದ್ರ ಮೋದಿ ಅವರು ಸಾಂಕ್ರಾಮಿಕ ರೋಗದ ವಿರುದ್ಧ ಜಂಟಿಯಾಗಿ ಹೋರಾಡಲು ಸಾರ್ಕ್ ರಾಷ್ಟ್ರಗಳನ್ನು ಕೇಳಿಕೊಂಡರು. ಈ ಆಲೋಚನೆಯನ್ನು ನೇಪಾಳ, ಮಾಲ್ಡೀವ್ಸ್, ಶ್ರೀಲಂಕಾ, ಭೂತಾನ್ ನಾಯಕರು ಸ್ವಾಗತಿಸಿದರು. ಮಾರ್ಚ್ ೧೫ ರಂದು, ಸಾರ್ಕ್ ನಾಯಕರ ವೀಡಿಯೊ ಸಮ್ಮೇಳನದ ನಂತರ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ₹ ೭೪ ಕೋಟಿ ಹಣವನ್ನು ಸಾರ್ಕ್ ದೇಶಗಳಿಗೆ COVID19 ತುರ್ತು ನಿಧಿಗೆ ತೆಗೆದಿಟ್ಟರು.

ಪರೀಕ್ಷೆ

ನವದೆಹಲಿಯ ಕೇಂದ್ರ ಆರೋಗ್ಯ ಸಚಿವಾಲಯದ ತುರ್ತು ಪರಿಸ್ಥಿತಿ ಮತ್ತು ನೀತಿ ನಿರೂಪಣೆ ತಂಡವು ಸಚಿವಾಲಯದ ತುರ್ತು ವೈದ್ಯಕೀಯ ಪ್ರತಿಕ್ರಿಯೆ ಘಟಕ, ಕೇಂದ್ರ ಕಣ್ಗಾವಲು ಘಟಕ, ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್‌ಸಿಡಿಸಿ) ಮತ್ತು ಮೂರು ಸರ್ಕಾರಿ ಆಸ್ಪತ್ರೆಗಳ ತಜ್ಞರನ್ನು ಒಳಗೊಂಡಿದೆ. ದೇಶದಲ್ಲಿ ಕರೋನವೈರಸ್ ಅನ್ನು ಹೇಗೆ ನಿಭಾಯಿಸಬೇಕು ಎಂಬುದನ್ನು ನಿರ್ಧರಿಸುವ ನೀತಿ ನಿರ್ಧಾರಗಳ ಭಾಗ ಅವು. ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಎನ್‌ಐವಿ) ನೇತೃತ್ವದಲ್ಲಿ ಭಾರತದಾದ್ಯಂತ ೧೫ ಪ್ರಯೋಗಾಲಯಗಳು ವೈರಸ್‌ ಪರೀಕ್ಷೆ ನಡೆಸುತ್ತಿದ್ದು, ಹೆಚ್ಚಿನ ಪ್ರಯೋಗಾಲಯಗಳಿಗೆ ತರಬೇತಿ ನೀಡಲಾಗುತ್ತಿದೆ.

ಮಾರ್ಚ್ ೧೪ ರಂದು, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಯ ವಿಜ್ಞಾನಿಗಳು ಈ ಕರೋನವೈರಸ್ ಆವೃತ್ತಿಯನ್ನು ಪ್ರತ್ಯೇಕಿಸಿದರು. ಹಾಗೆ ಮಾಡುವುದರಿಂದ, ಭಾರತವು ಚೀನಾ, ಜಪಾನ್, ಥೈಲ್ಯಾಂಡ್ ಮತ್ತು ಅಮೆರಿಕ ನಂತರ ವೈರಸ್‌ನ ಶುದ್ಧ ಮಾದರಿಯನ್ನು ಯಶಸ್ವಿಯಾಗಿ ಪಡೆದ ಐದನೇ ದೇಶವಾಯಿತು.

ಸಮುದಾಯ ಪ್ರಸರಣದ ಪರೀಕ್ಷೆ ಮಾರ್ಚ್ ೧೫ ರಂದು ಪ್ರಾರಂಭವಾಯಿತು. ಆರೋಗ್ಯ ಸಂಶೋಧನಾ ಇಲಾಖೆ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ನ ೬೫ ಪ್ರಯೋಗಾಲಯಗಳು ಯಾವುದೇ ಪ್ರಯಾಣದ ಇತಿಹಾಸ ಅಥವಾ ಸೋಂಕಿತ ವ್ಯಕ್ತಿಗಳೊಂದಿಗೆ ಸಂಪರ್ಕವಿಲ್ಲದ ವ್ಯಕ್ತಿಗಳಿಂದ ಮಾದರಿಗಳನ್ನು ಪರೀಕ್ಷಿಸಲು ಪ್ರಾರಂಭಿಸಿವೆ.

ಪ್ರಯಾಣ ಮತ್ತು ಪ್ರವೇಶ ನಿರ್ಬಂಧಗಳು

ಮಾರ್ಚ್ ೩, ೨೦೨೦ ರಂದು, ಇಟಲಿ, ಇರಾನ್, ದಕ್ಷಿಣ ಕೊರಿಯಾ ಮತ್ತು ಜಪಾನ್ ಪ್ರಜೆಗಳಿಗೆ ಈಗಾಗಲೇ ನೀಡಲಾಗಿರುವ ವೀಸಾ ಮತ್ತು ಹೊಸ ವೀಸಾಗಳನ್ನು ಭಾರತ ಸರ್ಕಾರ ಸ್ಥಗಿತಗೊಳಿಸಿತು. ಮಾರ್ಚ್ ೪, ೨೦೨೦ ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷ್ ವರ್ಧನ್ ಅವರು ಭಾರತಕ್ಕೆ ಆಗಮಿಸುವ ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರನ್ನು ಕಡ್ಡಾಯವಾಗಿ ತಪಾಸಣೆ ಮಾಡುವುದಾಗಿ ಘೋಷಿಸಿದರು. ಇಲ್ಲಿಯವರೆಗೆ ೫,೮೯,೦೦೦ ಜನರನ್ನು ವಿಮಾನ ನಿಲ್ದಾಣಗಳಲ್ಲಿ ಪರೀಕ್ಷಿಸಲಾಗಿದೆ. ಒಂದು ದಶಲಕ್ಷಕ್ಕೂ ಹೆಚ್ಚು ಜನರನ್ನು ನೇಪಾಳದ ಗಡಿಯಲ್ಲಿ ಪರೀಕ್ಷಿಸಲಅಗಿದೆ. ಸುಮಾರು ೨೭,೦೦೦ ಜನರು ಪ್ರಸ್ತುತ ಸಮುದಾಯ ಕಣ್ಗಾವಲಿನಲ್ಲಿದ್ದಾರೆ. ವಿದೇಶದಿಂದ ಭಾರತಕ್ಕೆ ವಿಮಾನ ಮೂಲಕ ಬರುವ ಎಲ್ಲಾ ಪ್ರಯಾಣಿಕರನ್ನು ಸರ್ಕಾರವು ಈಗ ಸಾರ್ವತ್ರಿಕ ತಪಾಸಣೆಗೆ ಒಳಪಡಿಸುತ್ತಿದೆ.

೧೧ ಮಾರ್ಚ್ ೨೦೨೦ ರಂದು, ೨೦೨೦ರ ಏಪ್ರಿಲ್ ೧೫ ರವರೆಗೆ ಭಾರತ ಸರ್ಕಾರವು ಭಾರತಕ್ಕೆ ಎಲ್ಲಾ ವೀಸಾಗಳನ್ನು ಅಮಾನತುಗೊಳಿಸಿದೆ. ಒಸಿಐ ಕಾರ್ಡ್ ಹೊಂದಿರುವವರಿಗೆ ೨೦೨೦ ರ ಏಪ್ರಿಲ್ ೧೫ ರ ವರೆಗೆ ಭಾರತವು ವೀಸಾ ಮುಕ್ತ ಪ್ರಯಾಣ ಸೌಲಭ್ಯವನ್ನು ಸ್ಥಗಿತಗೊಳಿಸಿತು ಮತ್ತು ಫೆಬ್ರವರಿ ೧೫ ರ ನಂತರ COVID-19 ಪೀಡಿತ ರಾಷ್ಟ್ರಗಳಿಂದ ಬರುವ ಎಲ್ಲಾ ಭಾರತೀಯ ಪ್ರಜೆಗಳು ೧೪ ದಿನಗಳವರೆಗೆ ನಿರ್ಬಂಧನಲ್ಲಿರಬೇಕು ಎಂದು ಸಾರಿತು.

ಮಾರ್ಚ್ ೧೮ ರಿಂದ ಯುರೋಪಿಯನ್ ಯೂನಿಯನ್, ಯುನೈಟೆಡ್ ಕಿಂಗ್‌ಡಮ್ ಮತ್ತು ಟರ್ಕಿಯ ಪ್ರಯಾಣಿಕರ ಪ್ರವೇಶವನ್ನು ಮಾರ್ಚ್ ೩೧ ರವರೆಗೆ ನಿಷೇಧಿಸಲಾಯಿತು.

ಅಫ್ಘಾನಿಸ್ತಾನ, ಫಿಲಿಪೈನ್ಸ್, ಮಲೇಷ್ಯಾದ ಪ್ರಯಾಣಿಕರು ಮಾರ್ಚ್ ೩೧ ರವರೆಗೆ ಭಾರತಕ್ಕೆ ಪ್ರಯಾಣಿಸುವುದನ್ನು ಭಾರತ ಸರ್ಕಾರ ನಿಷೇಧಿಸಿದೆ.

ಅಂತರರಾಷ್ಟ್ರೀಯ ಗಡಿಗಳ ಮುಚ್ಚುವಿಕೆ

  • ವೈರಸ್ ಹರಡುವುದನ್ನು ತಡೆಗಟ್ಟಲು ಮಾರ್ಚ್ ೯ ರಂದು ಮಿಜೋರಾಂ ಸರ್ಕಾರ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ನೊಂದಿಗೆ ಅಂತರರಾಷ್ಟ್ರೀಯ ಗಡಿಗಳಿಗೆ ಮೊಹರು ಹಾಕಿದೆ.
  • ಮಾರ್ಚ್ ೧೩ ರಂದು, ಭಾರತ ಸರ್ಕಾರವು ಇಂಡೋ-ಬಾಂಗ್ಲಾದೇಶ, ಇಂಡೋ-ನೇಪಾಳ, ಇಂಡೋ-ಭೂತಾನ್ ಮತ್ತು ಇಂಡೋ-ಮ್ಯಾನ್ಮಾರ್ ಗಡಿ ಚೆಕ್ ಪೋಸ್ಟ್‌ಗಳಲ್ಲಿ ಮತ್ತು ಹೊರಗಿನ ಎಲ್ಲಾ ಅಂತರರಾಷ್ಟ್ರೀಯ ಪ್ರಯಾಣಿಕರ ಸಂಚಾರವನ್ನು ಸ್ಥಗಿತಗೊಳಿಸಿತು.
  • ಮಾರ್ಚ್ ೧೫ ರಂದು, ಇಂಡೋ-ಪಾಕಿಸ್ತಾನದ ಭೂ ಚೆಕ್ ಪೋಸ್ಟ್‌ಗಳಲ್ಲಿ ಮಾರ್ಚ್ ೧೬ ರ 00:00 ಗಂಟೆಯಿಂದ ಸರ್ಕಾರವು ಸಂಚಾರವನ್ನು ಸ್ಥಗಿತಗೊಳಿಸಿತು.

ಸ್ಥಳಾಂತರಿಸುವಿಕೆ

ಭಾರತದಲ್ಲಿ ೨೦೨೦ ಕೊರೋನಾವೈರಸ್ ಸಾಂಕ್ರಾಮಿಕ 
೨೦೨೦ ರ ಮಾರ್ಚ್ ೧೩ ರಂದು ನವದೆಹಲಿಯ ಐಟಿಬಿಪಿ ಚಾವ್ಲಾ ಕೇಂದ್ರದಲ್ಲಿ ಗೃಹ ವ್ಯವಹಾರಗಳ ಸಚಿವ ನಿತ್ಯಾನಂದ್ ರಾಯ್ ಅವರು ಭೇಟಿ ಮಾಡುತ್ತಾರೆ.

ಸಚಿವ ಸುಬ್ರಹ್ಮಣ್ಯಂ ಜೈಶಂಕರ್, ಏರ್ ಇಂಡಿಯಾ ಮತ್ತು ಭಾರತೀಯ ವಾಯುಪಡೆಯ ನೇತೃತ್ವದ ವಿದೇಶಾಂಗ ಸಚಿವಾಲಯವು ಅನೇಕ ಭಾರತೀಯ ಪ್ರಜೆಗಳನ್ನು ಮತ್ತು ಕೆಲವು ವಿದೇಶಿ ಪ್ರಜೆಗಳನ್ನು ವೈರಸ್ ಪೀಡಿತ ಪ್ರದೇಶಗಳಿಂದ ಸ್ಥಳಾಂತರಿಸುವಲ್ಲಿ ಯಶಸ್ವಿಯಾಗಿದೆ.

  • ಫೆಬ್ರವರಿ ೧ ರಂದು, ಭಾರತವು ತನ್ನ ಮೊದಲ ಏರ್ ಇಂಡಿಯಾ ವಿಮಾನ ಸ್ಥಳಾಂತರಿಸುವಿಕೆಯಲ್ಲಿ ವುಹಾನ್ ಪ್ರದೇಶದ ಮೂವರು ಅಪ್ರಾಪ್ತ ವಯಸ್ಕರು, ೨೧೧ ವಿದ್ಯಾರ್ಥಿಗಳು ಮತ್ತು ೧೧೦ ಕಾರ್ಮಿಕ ವೃತ್ತಿಪರರನ್ನು ಒಳಗೊಂಡ ೩೨೪ ಜನರನ್ನು ಸ್ಥಳಾಂತರಿಸಿತು.
  • ಫೆಬ್ರವರಿ ೨ ರಂದು, ವುಹಾನ್ ಪ್ರದೇಶದಿಂದ ೩೨೩ ಭಾರತೀಯರು ಮತ್ತು ಏಳು ಮಾಲ್ಡೀವಿಯರನ್ನು ಹೊತ್ತ ಎರಡನೇ ಏರ್ ಇಂಡಿಯಾ ವಿಮಾನ ಭಾರತಕ್ಕೆ ಬಂತು.
  • ಫೆಬ್ರವರಿ ೨೭ ರಂದು, ಭಾರತೀಯ ವಾಯುಪಡೆಯು ವುಹಾನ್‌ನಿಂದ ೧೧೨ ಜನರನ್ನು ಸ್ಥಳಾಂತರಿಸಿತು. ಭಾರತವು ವುಹಾನ್‌ಗೆ ಕಳುಹಿಸಿದ ಮೂರನೇ ಸ್ಥಳಾಂತರಿಸುವ ವಿಮಾನ ಇದಾಗಿದೆ. ಭಾರತವು ಅದೇ ಐಎಎಫ್ ಹಾರಾಟದ ಮೂಲಕ ಚೀನಾಕ್ಕೆ ಮುಖವಾಡಗಳು, ಕೈಗವಸುಗಳು ಮತ್ತು ಇತರ ತುರ್ತು ವೈದ್ಯಕೀಯ ಉಪಕರಣಗಳನ್ನು ಒಳಗೊಂಡ 15 ಟನ್ ವೈದ್ಯಕೀಯ ಸಹಾಯವನ್ನು ಒದಗಿಸಿತು.
  • ಮಾರ್ಚ್ ೧೦ ರಂದು, ಭಾರತೀಯ ವಾಯುಪಡೆಯ ಸಿ -17 ಗ್ಲೋಬ್‌ಮಾಸ್ಟರ್ ಸಾರಿಗೆ ವಿಮಾನವು ೫೮ ಭಾರತೀಯ ಯಾತ್ರಿಕರನ್ನು ಇರಾನ್‌ನಿಂದ ಸ್ಥಳಾಂತರಿಸಿತು. ಮಾರ್ಚ್ ೧೧ ರಂದು ಇರಾನ್‌ನಿಂದ ಇನ್ನೂ ೪೪ ಪ್ರಯಾಣಿಕರನ್ನು ಮರಳಿ ಕರೆತರಲಾಯಿತು.
  • ಮಾರ್ಚ್ ೧೧ ರಂದು ೮೩ ಜನರನ್ನು ಇಟಲಿಯಿಂದ ಏರ್ ಇಂಡಿಯಾ ಸ್ಥಳಾಂತರಿಸಿದೆ.
  • ಮಾರ್ಚ್ ೧೫ ರಂದು ವಿಶೇಷ ಏರ್ ಇಂಡಿಯಾ ವಿಮಾನದ ಮೂಲಕ ಇಟಲಿಯಿಂದ ೨೧೮ ಭಾರತೀಯರನ್ನು ಸ್ಥಳಾಂತರಿಸಲಾಯಿತು. ನಂತರ ೨೩೪ ಭಾರತೀಯ ಪ್ರಜೆಗಳನ್ನು ಇರಾನ್‌ನಿಂದ ಸ್ಥಳಾಂತರಿಸಲಾಯಿತು.
  • ಮಾರ್ಚ್ ೧೬ ರಂದು, ೫೨ ವಿದ್ಯಾರ್ಥಿಗಳು ಮತ್ತು ಓರ್ವ ಶಿಕ್ಷಕರನ್ನು ಒಳಗೊಂಡ ೫೩ ಭಾರತೀಯರನ್ನು ಇರಾನ್‌ನ ಟೆಹ್ರಾನ್ ಮತ್ತು ಶಿರಾಜ್ ನಗರಗಳಿಂದ ಭಾರತಕ್ಕೆ ಕರೆತರಲಾಯಿತು

ಮನರಂಜನೆ

ಚಲನಚಿತ್ರಗಳು, ಟಿವಿ ಕಾರ್ಯಕ್ರಮಗಳು ಮತ್ತು ವೆಬ್ ಸರಣಿಗಳ ಉತ್ಪಾದನೆಯನ್ನು ಮಾರ್ಚ್ ೩೧ ರವರೆಗೆ ನಿಲ್ಲಿಸಲು ಚಲನಚಿತ್ರ ಸಂಸ್ಥೆಗಳು ನಿರ್ಧರಿಸಿದವು.

ಐತಿಹಾಸಿಕ ಕಟ್ಟಡಗಳು

ದೇಶದ ಎಲ್ಲಾ ಐತಿಹಾಸಿಕ ಕಟ್ಟಡಗಳು ಮಾರ್ಚ್ ೩೧ ರವರೆಗೆ ಮುಚ್ಚಲ್ಪಡುತ್ತವೆ.

ರೈಲ್ವೆ

ಮಾರ್ಚ್ ೧೪ ರಂದು, ಹವಾನಿಯಂತ್ರಿತ ಬೋಗಿಗಳಿಂದ ಪರದೆ ಮತ್ತು ಕಂಬಳಿಗಳನ್ನು ತೆಗೆದುಹಾಕಲಾಗಿದೆ.

ಧಾರ್ಮಿಕ

ಮಾರ್ಚ್ ೧೭ ರಂದು ಮುಂಬೈನ ಸಿದ್ಧಿವಿನಾಯಕ ದೇವಸ್ಥಾನವನ್ನು ಭಕ್ತರಿಗೆ ಮುಂದಿನ ಸೂಚನೆ ಬರುವವರೆಗೂ ಮುಚ್ಚಲಾಯಿತು.

ಕ್ರೀಡೆ

ಮಾರ್ಚ್ ೧೩ ರಂದು, ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ ೨೦೨೦ ರ ಇಂಡಿಯನ್ ಪ್ರೀಮಿಯರ್ ಲೀಗ್‌ನ ಪ್ರಾರಂಭವನ್ನು ಮಾರ್ಚ್ ೨೯ ರಿಂದ ಏಪ್ರಿಲ್ ೧೫ ಕ್ಕೆ ಮುಂದೂಡಲಾಗಿದೆ ಎಂದು ಘೋಷಿಸಿತು. ಅನಂತರ, ಇದು ಮಾರ್ಚ್ ೧೫ ಮತ್ತು ೧೮ ರಂದು ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಪಂದ್ಯಗಳನ್ನು ರದ್ದುಗೊಳಿಸಿತು. ನಂತರ ಇದನ್ನು ಮೂಲತಃ ಪ್ರೇಕ್ಷಕರು ಇಲ್ಲದೆ ಆಡಲಾಗುವುದು ಎಂದು ಘೋಷಿಸಲಾಯಿತು.

ಮಾರ್ಚ್ ೨೪ ರಿಂದ ೨೯ ರವರೆಗೆ ನವದೆಹಲಿಯಲ್ಲಿ ನಡೆಯಬೇಕಿದ್ದ ಇಂಡಿಯನ್ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಏಪ್ರಿಲ್ ೧೨ ರವರೆಗೆ ಸ್ಥಗಿತಗೊಳಿಸಲಾಯಿತು.

ಭಾರತದಲ್ಲಿ ಕರೋನಾ ಲಸಿಕೆ

    2021 ಮಾರ್ಚಿ12 ರ ಸರ್ಕಾರದ ವರದಿಯಂತೆ ದೇಶೀಯವಾಗಿ ತಯಾರಿಸಲಾಗಿರುವ, ಭಾರತ್ ಬಯೊಟೆಕ್‌ನ ಕೋವ್ಯಾಕ್ಸಿನ್ ಲಸಿಕೆಯು ಮನುಷ್ಯರ ಮೇಲೆ ಪ್ರಾಯೋಗಿಕ ಪರೀಕ್ಷೆ (ಕ್ಲಿನಿಕಲ್ ಟ್ರಯಲ್‌) ಹಂತವನ್ನು ಪೂರ್ಣಗೊಳಿಸಿದ್ದು, ಅದಕ್ಕೆ ನಿಯಮಿತ ನಿರ್ಬಂಧಿತ ತುರ್ತು ಬಳಕೆಯ ದೃಢೀಕರಣ ನೀಡಲಾಗಿದೆ. ಸೀರಂ ಇನ್‌ಸ್ಟಿಟ್ಯೂಟ್‌ನ ಕೋವಿಶೀಲ್ಡ್ ಹೊಂದಿರುವ ಮಾನ್ಯತೆಯನ್ನೇ ಈಗ ಕೋವ್ಯಾಕ್ಸಿನ್ ಪಡೆದುಕೊಂಡಿದೆ ಎಂದು ನೀತಿ ಆಯೋಗದ ಸದಸ್ಯ ಡಾ. ವಿ.ಕೆ. ಪಾಲ್ ಅವರು ತಿಳಿಸಿದ್ದಾರೆ. ಲಸಿಕೆಯು ಕ್ಲಿನಿಕಲ್ ಟ್ರಯಲ್ ಹಂತದ ಕೊನೆಯ ಘಟ್ಟದಲ್ಲಿ ಇದ್ದಾಗಲೇ ತುರ್ತು ಬಳಕೆಗೆ ನಿರ್ಬಂಧಿತ ಅನುಮತಿ ನೀಡಲಾಗಿತ್ತು. 19 ಲಕ್ಷ ಮಂದಿಗೆ ಕೋವ್ಯಾಕ್ಸಿನ್ ಲಸಿಕೆ ಹಾಕಲಾಗಿದೆ.

ನೋಡಿ

ಬಾಹ್ಯ ಸಂಪರ್ಕ

ಉಲ್ಲೇಖಗಳು

Tags:

ಭಾರತದಲ್ಲಿ ೨೦೨೦ ಕೊರೋನಾವೈರಸ್ ಸಾಂಕ್ರಾಮಿಕ ಜನವರಿಭಾರತದಲ್ಲಿ ೨೦೨೦ ಕೊರೋನಾವೈರಸ್ ಸಾಂಕ್ರಾಮಿಕ ಫೆಬ್ರವರಿಭಾರತದಲ್ಲಿ ೨೦೨೦ ಕೊರೋನಾವೈರಸ್ ಸಾಂಕ್ರಾಮಿಕ ಮಾರ್ಚ್ಭಾರತದಲ್ಲಿ ೨೦೨೦ ಕೊರೋನಾವೈರಸ್ ಸಾಂಕ್ರಾಮಿಕ ಪ್ರತಿಕ್ರಿಯೆಭಾರತದಲ್ಲಿ ೨೦೨೦ ಕೊರೋನಾವೈರಸ್ ಸಾಂಕ್ರಾಮಿಕ ಭಾರತದಲ್ಲಿ ಕರೋನಾ ಲಸಿಕೆಭಾರತದಲ್ಲಿ ೨೦೨೦ ಕೊರೋನಾವೈರಸ್ ಸಾಂಕ್ರಾಮಿಕ ನೋಡಿಭಾರತದಲ್ಲಿ ೨೦೨೦ ಕೊರೋನಾವೈರಸ್ ಸಾಂಕ್ರಾಮಿಕ ಬಾಹ್ಯ ಸಂಪರ್ಕಭಾರತದಲ್ಲಿ ೨೦೨೦ ಕೊರೋನಾವೈರಸ್ ಸಾಂಕ್ರಾಮಿಕ ಉಲ್ಲೇಖಗಳುಭಾರತದಲ್ಲಿ ೨೦೨೦ ಕೊರೋನಾವೈರಸ್ ಸಾಂಕ್ರಾಮಿಕಉತ್ತರ ಪ್ರದೇಶಕರ್ನಾಟಕಗುಜರಾತ್ದೆಹಲಿಮಹಾರಾಷ್ಟ್ರಹರಿಯಾಣ

🔥 Trending searches on Wiki ಕನ್ನಡ:

ಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಹೆಸರುಕೊಪ್ಪಳಸಮುಚ್ಚಯ ಪದಗಳುಕನ್ನಡ ಅಭಿವೃದ್ಧಿ ಪ್ರಾಧಿಕಾರವಿಜಯ ಕರ್ನಾಟಕಪ್ಯಾರಾಸಿಟಮಾಲ್ದ್ವಿಗು ಸಮಾಸಸ್ವಾಮಿ ವಿವೇಕಾನಂದಸಾಮಾಜಿಕ ಸಮಸ್ಯೆಗಳುಹೊಯ್ಸಳ ವಾಸ್ತುಶಿಲ್ಪಭೀಷ್ಮಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳುನೀತಿ ಆಯೋಗಮಹಜರುವಿಮರ್ಶೆಕೆ. ಎಸ್. ನರಸಿಂಹಸ್ವಾಮಿಒಡೆಯರ್ಚದುರಂಗದ ನಿಯಮಗಳುಕದಂಬ ಮನೆತನಬಿಳಿ ರಕ್ತ ಕಣಗಳುಮ್ಯಾಕ್ಸ್ ವೆಬರ್ಕರಗವಿಜಯನಗರ ಸಾಮ್ರಾಜ್ಯವಿಷ್ಣುಸಂವತ್ಸರಗಳುಬಿ.ಎಚ್.ಶ್ರೀಧರಗ್ರಂಥಾಲಯಗಳುಅಡಿಕೆಪ್ರಬಂಧ ರಚನೆಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಹೊಯ್ಸಳರಾಜಕುಮಾರ (ಚಲನಚಿತ್ರ)ವಿಜ್ಞಾನಪಶ್ಚಿಮ ಘಟ್ಟಗಳುಬೌದ್ಧ ಧರ್ಮಮಸೂರ ಅವರೆಬಾಬು ರಾಮ್ಭಾರತೀಯ ಧರ್ಮಗಳುಕರ್ನಾಟಕಭಾರತೀಯ ಜನತಾ ಪಕ್ಷಸೂರ್ಯವ್ಯೂಹದ ಗ್ರಹಗಳುಸೂರ್ಯವಂಶ (ಚಲನಚಿತ್ರ)ಮಾನವ ಹಕ್ಕುಗಳುಕೈಮಗ್ಗಮುಹಮ್ಮದ್ಆಗಮ ಸಂಧಿಕರಗ (ಹಬ್ಬ)ಗೋಪಾಲಕೃಷ್ಣ ಅಡಿಗಜ್ಯೋತಿಬಾ ಫುಲೆವಾಟ್ಸ್ ಆಪ್ ಮೆಸ್ಸೆಂಜರ್ಜಾನಪದಕರ್ನಾಟಕದ ಮುಖ್ಯಮಂತ್ರಿಗಳುಮುದ್ದಣಕಲ್ಯಾಣ ಕರ್ನಾಟಕಕ್ರೈಸ್ತ ಧರ್ಮಕರ್ನಾಟಕ ಸಂಗೀತಮಾಸ್ತಿ ವೆಂಕಟೇಶ ಅಯ್ಯಂಗಾರ್ದ್ರಾವಿಡ ಭಾಷೆಗಳುಶಿಕ್ಷಣಗೊಮ್ಮಟೇಶ್ವರ ಪ್ರತಿಮೆಸಾಮಾಜಿಕ ಸಂಶೋಧನೆ ಅದರ ವಿಧಾನಗಳು ಮತ್ತು ತಂತ್ರಗಳುಸೆಸ್ (ಮೇಲ್ತೆರಿಗೆ)ಹೆಚ್.ಡಿ.ಕುಮಾರಸ್ವಾಮಿಕೈವಾರ ತಾತಯ್ಯ ಯೋಗಿನಾರೇಯಣರುಮಹಾಕಾವ್ಯಭರತನಾಟ್ಯವಿಕಿಪೀಡಿಯಭೌಗೋಳಿಕ ಲಕ್ಷಣಗಳುಕಾದಂಬರಿಸುಂದರ್ ಪಿಚೈಮಾಸ್ಕೋಭಾರತದ ರಾಷ್ಟ್ರೀಯ ಶಿಕ್ಷಣ ನೀತಿ ೨೦೨೦ವ್ಯಂಜನಒಂದು ಮುತ್ತಿನ ಕಥೆಕರ್ನಾಟಕದ ಏಕೀಕರಣಮಲೆಗಳಲ್ಲಿ ಮದುಮಗಳುಸ್ಕೌಟ್ಸ್ ಮತ್ತು ಗೈಡ್ಸ್🡆 More