ನೀರಿನ ಸಂರಕ್ಷಣೆ: ಜಲ ಸಂರಕ್ಷಣಾ ವಿಧಾನ

ನೀರಿನ ಮಾಲಿನ್ಯವನ್ನು ತಡೆಗಟ್ಟುವ ಕಡೆ ನಾವೆಲ್ಲರೂ ಗಮನಹರಿಸಬೇಕು.ಇಲ್ಲದಿದ್ದರೆ ಭೂಮಿಯ ಮೇಲೆ ಜೀವಿಗಳು ಬದುಕುಳಿಯುವುದು ಅಸಾಧ್ಯವಾಗುತ್ತದೆ.ನೀರಿನ ಅಭಾವವನ್ನು ತಡೆಗಟ್ಟಲು ಇರುವ ಒಂದೇ ಮಾರ್ಗವೆಂದರೆ ನೀರಿನ ಸಂರಕ್ಷಣೆ.ಲಭ್ಯವಿರುವ ನೀರನ್ನು ಜಾಗರೂಕತೆಯಿಂದ ಮತ್ತು ಮಿತವ್ಯಯದಿಂದ ಬಳಸಿ,ಮುಂದಿನ ಪೀಳಿಗೆಗೆ ನೀರನ್ನು ಉಳಿಸುವುದೇ ನೀರಿನ ಸಂರಕ್ಷಣೆ.

ನೀರಿನ ಸಂರಕ್ಷಣೆ: ಜಲ ಸಂರಕ್ಷಣಾ ವಿಧಾನ
conservation

ನೀರಿನ ಸಂರಕ್ಷಣಾ ವಿಧಾನಗಳು:

   ನೀರನ್ನು ಸಂರಕ್ಷಿಸಲು ಪ್ರಮುಖವಾದ ಎರಡು ವಿಧಾನಗಳನ್ನು ಅನುಸರಿಸಬಹುದಾಗಿದೆ. 

೧.ನೀರಿನ ನಿರ್ವಹಣೆ:

   ಜೇವ ಸಂಕುಲದ ಉಗಮ,ಅಸ್ತಿತ್ವ ಮತ್ತು ಬೆಳವಣಿಗೆಗೆ ಕಾರಣವಾಗಿರುವ ನೀರನ್ನು ಸಮರ್ಪಕವಾಗಿ ನಿರ್ವಹಿಸುವುದರ ಮೂಲಕ ಸಂರಕ್ಷಿಸಬಹುದು.ನೀರಿನ ಸಮರ್ಪಕ ನಿರ್ವಹಣೆಯು ಈ ಕೆಳಗಿನ ಪ್ರಮುಖ ಅಂಶಗಳನ್ನು ಒಳಗೊಂಡಿರುತ್ತದೆ. 

ಅ) ನೀರಿನ ಕ್ಲೋರೀನ್ ಅಂಶಗಳಂತಹ ರೋಗನಿವಾರಕ ರಾಸಾಯನಿಕಗಳನ್ನು ಬೆರೆಸಿ, ಶುದ್ಧಿಕರಿಸುವುದರ ಮೂಲಕ ಶುದ್ಧ ಕುಡಿಯುವ ನೀರನ್ನು ಪೂರೈಸುವುದು. ಆ)ತ್ಯಾಜ್ಯವಸ್ತುಗಳನ್ನು ಕೆರೆ,ನದಿಗಳಂತಹ ನೀರಿನ ಆಕರಗಳಲ್ಲಿ ಹಾಕುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಜಾ‌‌‌‍ಗೃ‍ತಿ ಮೂಡಿಸುವುದು. ಇ)ಕೈಗಾರಿಕ ತ್ಯಾಜ್ಯ ವಸ್ತುಗಳನ್ನು ನೀರಿನ ಆಕರಗಳಿಗೆ ವಿಸರ್ಜಿಸುವ ಮೊದಲು ವೈಜ್ಞಾನಿಕ ಸಂಸ್ಕರಣೆಗೆ ಒಳಪಡಿಸುವುದು . ಈ)ನೀರಿನಲ್ಲಿರುವ ಕಲುಷಿತ ಅಂಶಗಳನ್ನು ವಿವಿಧ ವಿಧಾನಗಳಿಂದ ಬೇರ್ಪಡಿಸಿ, ನೀರನ್ನು ಸಂಸ್ಕರಿಸಿ ಮರುಬಳಕೆ ಮಾಡುವುದು. ಉ)ಮಳೆಗಾಲದಲ್ಲಿ ಭೂಮಿಗೆಬಿದ್ದ ನೀರು ವ್ಯರ್ಥವಾಗಿ ಹರಿದು ಹೋಗುವುದನ್ನು ತಪ್ಪಿಸಲು ಸಣ್ಣ ಹಳ್ಳ-ತೊರೆಗಳಿಗೆ ಚೆಕ್ ಡ್ಯಾಮ್ಗಳನ್ನು ನಿರ್ಮಿಸಿ ನೀರು ಸಂಗ್ರಹಿಸುವುದು. ಊ)ಅರಣ‍್ಯ ನಾಶವನ್ನು ತಡೆಗಟ್ಟುವುದು ಮತ್ತು ಪ್ರಾಣಿಗಳ ಅತಿಯಾದ ಮೇಯಿಸುವಿಕೆಯನ್ನು ನಿಯಂತ್ರಿಸುವುದು. ೨.ಮಳೆ ನೀರು ಕೊಯ್ಲು:ಮಳೆ ನೀರನ್ನು ನೇರವಾಗಿ ಸಂಗ್ರಹಿಸಿ ಬಳಸುವುದನ್ನು ಮಳೇ ನೀರು ಕೊಯ್ಲು ಎನ್ನುವರು.ಇದರಲ್ಲಿ ಎರಡು ವಿಧಗಳಿವೆ. ಅ)ಮಳೆ ಬಿದ್ದ ಸ್ಥಳದಲ್ಲಿಯೇ ನೀರನ್ನು ಸಂಗ್ರಹಿಸುವುದು. ಆ)ಮಳೆ ಬಿದ್ದು ಹರಿಯುವ ನೀರನ್ನು ಸಂಗ್ರಹಿಸುವುದು.

  ಮಳೆ ನೀರು ಹರಿದು ಹೋಗದಂತೆ ತಡೆಯೊಡ್ಡಿ ಭೂಮಿಯಲ್ಲಿ ಇಂಗುವಂತೆ ಮಾಡುವುದರಿಂದ ಅಂತರ್ಜಲ ಮಟ್ಟವು ಮರುಪೂರ್ಣದಿಂದ ಹೆಚ್ಚುವುದು ಮತ್ತು ವರ್ಷದ ಎಲ್ಲಾ ಕಾಲದಲ್ಲಿಯೂ ನೀರು ದೊರೆಯುವಂತಾಗುವುದು. 

Tags:

ಜೀವಿಭೂಮಿ

🔥 Trending searches on Wiki ಕನ್ನಡ:

ಹಣಕಾಸು ಸಚಿವಾಲಯ (ಭಾರತ)ಸಮಾಸಶಬ್ದಅಶೋಕ್ಪ್ಯಾರಾಸಿಟಮಾಲ್ಖೊಖೊಚಂದ್ರಶೇಖರ ಕಂಬಾರಮಧುಮೇಹಭ್ರಷ್ಟಾಚಾರಪೆರಿಯಾರ್ ರಾಮಸ್ವಾಮಿರೈತವಾರಿ ಪದ್ಧತಿಕರ್ನಾಟಕದ ಕಲೆ ಮತ್ತು ಸಂಸ್ಕೃತಿಶಿಕ್ಷಕತತ್ಸಮ-ತದ್ಭವಮೈಸೂರು ರಾಜ್ಯಸುಧಾ ಮೂರ್ತಿಕರ್ನಾಟಕದ ಅಣೆಕಟ್ಟುಗಳುಅಕ್ಷಾಂಶ ಮತ್ತು ರೇಖಾಂಶಆಹಾರ ಸರಪಳಿಹೈದರಾಲಿಏಲಕ್ಕಿಡಿ.ಎಸ್.ಕರ್ಕಿಮಾನವನ ಪಚನ ವ್ಯವಸ್ಥೆದಾಳಿಂಬೆಕೆ. ಎಸ್. ನರಸಿಂಹಸ್ವಾಮಿಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುಮಾಟ - ಮಂತ್ರಕರ್ನಾಟಕದ ನದಿಗಳುಕುರುಬಮಾಹಿತಿ ತಂತ್ರಜ್ಞಾನವಡ್ಡಾರಾಧನೆಕೋವಿಡ್-೧೯ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಅಲಾವುದ್ದೀನ್ ಖಿಲ್ಜಿಶಬರಿನದಿಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಭಾರತದ ಇತಿಹಾಸಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಹಾಲಕ್ಕಿ ಸಮುದಾಯಹೆಳವನಕಟ್ಟೆ ಗಿರಿಯಮ್ಮಜವಾಹರ‌ಲಾಲ್ ನೆಹರುನೀತಿ ಆಯೋಗಗುರು (ಗ್ರಹ)ಮೆಕ್ಕೆ ಜೋಳಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಶ್ವೇತ ಪತ್ರಇತಿಹಾಸಬರಗೂರು ರಾಮಚಂದ್ರಪ್ಪಶನಿಒಗಟುಆಂಗ್ಲ ಭಾಷೆಸಹಕಾರಿ ಸಂಘಗಳುಚಂದ್ರಗುಪ್ತ ಮೌರ್ಯರಾಷ್ಟ್ರಕೂಟವ್ಯಂಜನವೆಂಕಟೇಶ್ವರ ದೇವಸ್ಥಾನಒಡೆಯರ್ಝಾನ್ಸಿ ರಾಣಿ ಲಕ್ಷ್ಮೀಬಾಯಿಗಣರಾಜ್ಯೋತ್ಸವ (ಭಾರತ)ರಾಷ್ಟ್ರೀಯತೆಬೈಗುಳಚನ್ನವೀರ ಕಣವಿಕನ್ನಡ ಸಾಹಿತ್ಯಸಮುಚ್ಚಯ ಪದಗಳುಪೊನ್ನಕೇಂದ್ರಾಡಳಿತ ಪ್ರದೇಶಗಳುರಾಗಿಅಶೋಕನ ಶಾಸನಗಳುರೇಡಿಯೋಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಟಿಪ್ಪು ಸುಲ್ತಾನ್ಜೈಮಿನಿ ಭಾರತಹಲ್ಮಿಡಿ ಶಾಸನಸೂರ್ಯರಾಜಸ್ಥಾನ್ ರಾಯಲ್ಸ್🡆 More