ಭಾರತದ ಸಂಯುಕ್ತ ಪದ್ಧತಿ

ಭಾರತವು ಸಂಯುಕ್ತ ಪದ್ಧತಿಯ ಸರಕಾರವನ್ನು ಹೊಂದಿದೆಯೆ ಎಂಬುದು ವಾದಗ್ರಸ್ಥ ವಿಷಯವಾಗಿದೆ ಈ ವಿಷಯಕ್ಕೆ ಸಂಬಂಧಪಟ್ಟಂತೆ ಎರಡು ಬಗೆಯ ವಾದಗಳನ್ನು ಮಂಡಿಸಲಾಗಿದೆ.

ಪ್ರೊ. ಕೆ. ಸಿ. ವೇರ್ ಅವರು, "ಭಾರತದ ಸಂವಿಧಾನವು ಅರೆ-ಸಂಯುಕ್ತ ಪದ್ಧತಿಯ ಸರಕಾರವನ್ನು ಒದಗಿಸಿಕೊಟ್ಟಿದ್ದು ಕೇಂದ್ರಿಕೃತ ಲಕ್ಷಣಗಳನ್ನೂಳಗೊಂಡ ಸಂಯುಕ್ತ ರಾಜ್ಯ ಪದ್ಧತಿಯನ್ನು ಕಲ್ಪಿಸಿಕೊಟ್ಟಿದೆ ಎಂಬುದನ್ನು ಅವರು ಒಪ್ಪವುದಿಲ್ಲ. ಡಾ. ಡಿ. ಎನ್. ಬ್ಯಾನರ್ಜಿಯವರು "ಭಾರತವು ಕೇಂದ್ರದ ಜೊತೆಗೆ ಬಲವಾದ ಒಲವನ್ನು ಹೊಂದಿದೆ ಸಂಯುಕ್ತ ಪದ್ಧತಿ ರಾಜ್ಯ ವಾಗಿದೆ" ಎಂದು ವಾದಿಸಿದ್ದಾರೆ. ಭಾರತದ ಸಂವಿಧಾನದ ರಚನಾಕಾರರು ಉದ್ದೇಶ ಪೂರ್ವಕವಾಗಿ ಭಾರತದ ಸಂವಿಧಾನ ಸಂಯುಕ್ತ ಪದ್ಧತಿಯನ್ನು ಒದಗಿಸಿಕೊಟ್ಟಿದ್ದಾರೆ. ಸಂವಿಧಾನದ ಮೂಲಗ್ರಂಥದಲ್ಲಿ ಸಂಯುಕ್ತ ರಾಜ್ಯ ಎಂಬ ಪದವನ್ನು ಬಳಸಿಲ್ಲ. ಆದರೆ ಸಂವಿಧಾನದ ೧ ನೇ ಅನುಚ್ಛೇದವು ಭಾರತವು ರಾಜ್ಯಗಳ ಒಕ್ಕೂಟವಾಗಿರಬೇಕು" ಎಂಬುದರ ಬಗ್ಗೆ ವಿವರಿಸುತ್ತದೆ. ಭಾರತದಲ್ಲಿ ಏಕತೆ ಹಾಗು ಸಮಗ್ರತೆಯನ್ನು ಕಾಪಾಡುವ ಉದ್ದೇಶದಿಂದ ಸಂವಿಧಾನದ ರಚನಾಕಾರರು ಬಲಿಷ್ಠ ಕೇಂದ್ರದ ಸಂಯುಕ್ತ ಪದ್ಧತಿಯನ್ನು ಒದಗಿಸಿಕೊಟ್ಟಿದ್ದಾರೆ. ನಮ್ಮ ಸಂವಿಧಾನದದಲ್ಲಿ ಬಲಿಷ್ಠ ಕೇಂದ್ರೀಕೃತ ಸರಕಾರದ ಬಗ್ಗೆ ಹೆಚ್ಚಿನ ಒಲವು ಇರುವುದರಿಂದ ಕೆಲ ಟೀಕಾಕಾರರು "ಭಾರತ ಸರಕಾರವು ಕೇಂದ್ರಿಕೃತವಾಗಿದೆ ಹೊರತು ಸಂಯುಕ್ತ ಪದ್ಧತಿಯಾಗಿಲ್ಲ" ವೆಂದು ಹೇಳಿದ್ದಾರೆ. ಆದರೂ ಸಂಯುಕ್ತ ಪದ್ಧತಿಗೆ ಬೇಕಾಗುವ ಲಕ್ಷಣಗಳು ಸಂವಿಧಾನದಲ್ಲಿ ಇರುವುದರಿಂದ ಸಂಯುಕ್ತ ಪದ್ಧತಿಯ ಸರಕಾರವನ್ನು ಅವಲಂಬಿಸಿದೆ ಎಂದು ಹೇಳಬಹುದು.

ಭಾರತದ ಸಂಯುಕ್ತ ಪದ್ಧತಿ
ಭಾರತದ ಸುಪ್ರೀಂ ಕೋರ್ಟಿನ ಲಾಂಛನ

ಸಂಯುಕ್ತ ಪದ್ಧತಿಯ ಲಕ್ಷಣಗಳು

ಭಾರತದ ಸಂಯುಕ್ತ ಪದ್ಧತಿ 
ಭಾರತದ ಸಂವಿಧಾನ

ಭಾರತವು ಕೆನಡಾ ದೇಶದ ಸಂಯುಕ್ತ ಮಾದರಿಯನ್ನು ಹೊಂದಿದೆಯೆ ಹೊರತು ಅಮೆರಿಕೆಯ ಮಾದರಿಯನ್ನು ಹೊಂದಿರುವುದಿಲ್ಲ. ಅತೀ ಹೆಚ್ಚಿನ ಅಧಿಕಾರಗಳು ಕೇಂದ್ರದ ಸ್ವಾಧೀನದಲ್ಲಿರುತ್ತವೆ. "ಭಾರತದ ಸಂವಿಧಾನವು ಸಂಯುಕ್ತ ಸ್ವರೂಪನ್ನು ಹೊಂದಿದ್ದು ಏಕಾತ್ಮಕ ಉದ್ದೇಶವನ್ನು ಹೊಂದಿದೆ" ಎಂಬುದಕ್ಕಾಗಿ ಈ ಕೆಳಗಿನ ಉದಾಹರಣೆಗಳನ್ನು ಕೊಡಬಹುದು. ಕೇಂದ್ರ ಹಾಗು ರಾಜ್ಯ ಸರಕಾರಗಳು ಸ್ವತಂತ್ರ ಹಾಗೂ ಸ್ವಯಂ ಅಧಿಕಾರಗಳನ್ನು ಹೊಂದಿದ್ದು ಇವುಗಳ ಕಾರ್ಯ ವ್ಯಾಪ್ತಿಯಲ್ಲಿ ಸುಲಭವಾಗಿ ಬದಲಾವಣೆ ಮಾಡುವಂತಿಲ್ಲ. ಇದು ಸಂವಿಧಾನದ ತಿದ್ದುಪಡಿಯಿಂದ ಮಾತ್ರ ಸಾಧ್ಯ. ಸರ್ವೋಚ್ಛ ನ್ಯಾಯಾಲಯವು ವಿವಿಧ ತಂಟೆಗಳನ್ನು ಇತ್ಯರ್ಥಗೊಳಿಸುತ್ತದೆ. ಭಾರತ ಸಂವಿಧಾನದಲ್ಲಿ ಒಕ್ಕೂಟ ಸರಕಾರ ಕೆಲ ಲಕ್ಷಣಗಳಿದ್ದು ಅವುಗಳನ್ನು ಕೆಳಗೆ ವಿವರಿಸಲಾಗಿದೆ.

ಲಿಖಿತ ಸಂವಿಧಾನ

ಭಾರತದ ಸಂವಿಧಾನವು ಲಿಖಿತ ಹಾಗು ವಿಸ್ತ್ರತ ಸಂವಿಧಾನವಾಗಿದೆ. ಕೇಂದ್ರ-ರಾಜ್ಯ ಸರಕಾರಗಳು,ಅವುಗಳು ಅಧಿಕಾರಗಳು ಸಂಬಂಧ, ಮೂಲಭೂತ ಹಕ್ಕುಗಳು, ಕರ್ತವ್ಯಗಳು, ರಾಜ್ಯ ನೀತಿ ನಿರ್ದೇಶಕ ತತ್ವಗಳು, ನಾಗರೀಕತೆ, ಸ್ವತಂತ್ರ ಹಾಗು ನಿಷ್ಪಕ್ಷಪಾತ ನ್ಯಾಯಾಂಗ, ಕಾರ್ಯಾಂಗ, ಚುನಾವಣೆ ಆಯೋಗ ಮುಂತಾದವುಗಳು ಲಿಖಿತ ರೂಪದಲ್ಲಿದ್ದು ಅಗತ್ಯ ವಿವರಣೆಗಳನ್ನು ಪಡೆದಕೊಳ್ಳಲು ಸಹಾಯಕವಾಗಿದೆ. ೨೬ ನವೆಂಬರ್, ೧೯೪೯ ರಂದು ಕರಡು ರಚನೆಯಾಗಿ ಸಂವಿಧಾನವು ಒಟ್ಟು ೩೫ ಅನುಚ್ಛೇದಗಳನ್ನು ಹಾಗು ೮ ಅನುಸೂಚಿಗಳನ್ನು ಹೊಂದಿತ್ತು, ಆದರೆ ಇಲ್ಲಿಯವರಗೆ ಸಂವಿಧಾನಕ್ಕೆ ೧೦೦ ತಿದ್ದುಪಡಿಗಳನ್ನು ಮಾಡಿದ್ದು ಕೆಲವೊಂದು ಹೊಸ ಅನುಚ್ಛೇದಗಳನ್ನು, ೧೨ ಅನುಸೂಚಿಗಳನ್ನು , ೨೨ ಭಾಗಗಳನ್ನು ಹೊಂದಿದ್ದು ವಿಸ್ತ್ರತ ಸಂವಿಧಾನವೆಂದೂ, "ನ್ಯಾಯವಾದಿಗಳ ಪ್ಯಾರಡ್ಯೆಸ್" ಎಂದೂ ಹೇಳಿದ್ದಾರೆ.

ಅನಮ್ಯ ಸಂವಿಧಾನ

ಅನಮ್ಯ ಸಂವಿಧಾನವು ಸಂಯುಕ್ತ ಪದ್ಧತಿ ಲಕ್ಷಣವಾಗಿದೆ. ಅದರೆ ಭಾರತದ ಸಂವಿಧಾನವು ಸಂಯುಕ್ತ ಪದ್ಧತಿಯ ಲಕ್ಷಣವಾಗಿದ್ದು ನಮ್ಯಾನಮ್ಯವಾಗಿದೆ. ಮೂರು ವಿಧಾನಗಳಿಂದ ಸಂವಿಧಾನದ ತಿದ್ದುಪಡಿಯನ್ನು ಮಾಡಲಾಗುತ್ತದೆ. ಸಂವಿಧಾನದ ಕೆಲವೊಂದು ನಿಯಮಗಳನ್ನು ಕೇಂದ್ರ ಸಂಸತ್ತಿನ ೨/೩ ಬಹುಮತದಿಂದ ಹಾಗು ಅರ್ಧದಷ್ಟು ರಾಜ್ಯಗಳ ಒಪ್ಪಿಗೆಯಿಂದ ತಿದ್ದುಪಡಿ ಮಾಡಲಾಗುತ್ತದೆ. ತಿದ್ದುಪಡಿಯ ಈ ಕಡೆಯ ವಿಧಾನವನ್ನು ಗಮನಿಸಿದಾಗ ನಮ್ಮ ಸಂವಿಧಾನವು ಅನಮ್ಯವಾಗಿದ್ದು ಕಂಡುಬರುತ್ತದೆ.

ಸಂವಿಧಾನದ ಶ್ರೇಷ್ಠತೆ

ಭಾರತದ ಸಂವಿಧಾನವು ದೇಶದ ಶ್ರೇಷ್ಠ ಕಾನೂನು ಎಂದು ಪರಿಗಣಿಸಲ್ಪಟ್ಟಿದೆ. ಕೇಂದ್ರ-ರಾಜ್ಯ ಸರಕಾರಗಳು ಸಂವಿಧಾನದ ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕಾಗತ್ತದೆ. ಸಂವಿಧಾನಕ್ಕೆ ವ್ಯತಿರಿಕ್ತವಾದ ಕಾನೂನುಗಳನ್ನು ಕಾನೂನುಬಾಹಿರವೆಂದು ಘೋಷಿಸುವ ಆಧಿಕಾರವನ್ನು ಸರ್ವೋಚ್ಛ ನ್ಯಾಯಲಯಕ್ಕೆ ಕೊಡಲಾಗಿದೆ.ಸಂಯುಕ್ತ ಸರ್ಕಾರದಲ್ಲಿ ಸಂವಿಧಾನವು ದೇಶದ ಮೂಲಭೂತ ಕಾನೂನಾಗಿದ್ದು ಸರ್ವೋಚ್ಛ ಸ್ಥಾನವನ್ನು ಹೊಂದಿರುತ್ತದೆ . ಸಂವಿಧಾನದ ಅನುಗುಣವಾಗಿಯೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಶಾಸನ ಮತ್ತು ಆಡಳಿತದ ಕಾರ್ಯಗಳನ್ನು ನಿರ್ವಹಿಸುತ್ತಿರಬೇಕು . ಕೇಂದ್ರ ಹಾಗೂ ರಾಜ್ಯ ಶಾಸಕಾಂಗಗಳು ಪಾಸು ಮಾಡಿದ ಕಾಯ್ದೆಗಳು ಸಂವಿಧಾನದಲ್ಲಿ ರೂಪಿಸಲ್ಪಟ್ಟಂತೆ ಇರಬೇಕು . ಇಲ್ಲದಿದ್ದರೆ , ಈ ಎರಡೂ ಸರ್ಕಾರಗಳು ಪಾಸು ಮಾಡಿದ ಕಾಯ್ದೆಗಳನ್ನು ಸರ್ವೋಚ್ಛ ನ್ಯಾಯಾಲಯವು ತನ್ನ ನ್ಯಾಯಿಕ ವಿಮರ್ಶೆಯ ಅಧಿಕಾರದ ಮೂಲಕ ಅಸಿಂಧುಗೊಳಿಸುತ್ತವೆ . ಅಂತೆಯೇ . ಸಿ . ವಿಯರ್ ( Wheare ) ರವರು ' ಸರ್ಕಾರವು ಸಂಯುಕ್ತ ಸರ್ಕಾರವಾಗಬೇಕಾದರೆ ಸರ್ವೋಚ್ಚ ನ್ಯಾಯಾಲಯಕ್ಕೆ ಶ್ರೇಷ್ಠ ಅಧಿಕಾರ ಇರಬೇಕು ಎಂದು ಹೇಳಿದ್ದಾರೆ . There must be Supremacy of Judiciary for the federal government * ಇದರನ್ವಯ ಭಾರತದಲ್ಲಿನ ಸಂವಿಧಾನವು ಒಂದು ಲಿಖಿತ ಸಂವಿಧಾನವಾಗಿದ್ದು ಅದನ್ನು ದೇಶದ ಸರ್ವೋಚ್ಛ ಮೂಲಭೂತ ಕಾನೂನು ಆಗಿದೆ . ಇಲ್ಲಿನ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂವಿಧಾನಕ್ಕೆ ಬದ್ಧವಾಗಿದೆ . ಸಂಸತ್ತು ಮತ್ತು ರಾಜ್ಯಗಳ ವಿಧಾನ ಮಂಡಲಗಳು ಪಾಸು ಮಾಡುವ ಕಾಯ್ದೆಗಳು ಸಂವಿಧಾನಾತ್ಮಕವಾಗಿರುತ್ತವೆ . ಒಂದು ವೇಳೆ ಈ ಎರಡು ಸರ್ಕಾರಗಳು ಸಂವಿಧಾನಕ್ಕೆ ವ್ಯತಿರಿಕ್ತವಾಗಿ ಕಾನೂನು ಅಥವಾ ಕಾರ್ಯಾಲಯದ ಆಜ್ಞೆಗಳನ್ನಾದರೂ ಪಾಸು ಮಾಡಿದ್ದಲ್ಲಿ ಅದನ್ನು ಭಾರತದ ಸುಪ್ರೀಂ ಕೋರ್ಟು “ ಸಂವಿಧಾನ ಬಾಹಿರ ' ' ಎಂದು ಘೋಷಿಸಿ ರದ್ದುಪಡಿಸುತ್ತದೆ . ಆದ್ದರಿಂದ ಭಾರತದ ಸಂವಿಧಾನವು ಒಕ್ಕೂಟದ ತತ್ವದನ್ನಯ ಸಂವಿಧಾನದ ಶ್ರೇಷ್ಠತೆಯ ತತ್ವಕ್ಕೆ ಅವಕಾಶ ಮಾಡಿದೆ . ಸಂಯುಕ್ತ ಪದತಿಯಲ್ಲಿ ಸರ್ವೋಚ್ಚ ನ್ಯಾಯಾಲಯಕ್ಕೆ ಸಂವಿಧಾನವನ್ನು ಅರ್ಥೈಯಿಸುವ ಮತ್ತು ರಕ್ಷಣೆಯ ಜವಾಬ್ದಾರಿಯನ್ನು ಕೊಡಲಾಗಿದೆ

ಅಧಿಕಾರಗಳ ವಿಭಜನೆ

ಸಂಯುಕ್ತ ರಾಜ್ಯ ಪದ್ಧತಿಗೆ ಅನುಗುಣವಾಗಿ ಸಂವಿಧಾನವು ಕೇಂದ್ರ-ರಾಜ್ಯಗಳ ನಡುವೆ ಅಧಿಕಾರಗಳನ್ನು ಹಂಚಿಕೊಟ್ಟಿದೆ. ಈ ಆಧಿಕಾರಗಳನ್ನು ಕೇಂದ್ರ ಪಟ್ಟಿ, ರಾಜ್ಯ ಪಟ್ಟಿ ಹಾಗು ಸಮವರ್ತಿ ಪಟ್ಟಿಗಳಲ್ಲಿ ವಿವರಿಸಲಾಗಿದೆ.

  • ಕೇಂದ್ರ ಪಟ್ಟಿ: ಕೇಂದ್ರಪಟ್ಟಿಯಲ್ಲಿ ೯೯ ವಿಷಯಗಳಿದ್ದು ಇವುಗಳ ಬಗ್ಗೆ ಕಾನೂನುಗಳನ್ನು ರಚಿಸುವ ಸಂಪೂರ್ಣ ಅಧಿಕಾರವು ಕೇಂದ್ರ ಸಂಸತ್ತಿಗೆ ಇದೆ. ಊದಾ: ರಕ್ಷಣೆ, ವಿದೇಶಸೇವೆ, ಒಪ್ಪಂದಗಳು, ಯುದ್ದ ಹಾಗೂ ಶಾಂತಿ, ನಾಗರೀಕತೆ, ರೈಲ್ವೆ, ಹಡಗು ಮತ್ತು ವಿಮಾನಯಾನ, ಅಂಚೆ-ತಂತಿ, ದೂರವಾಣಿ, ಹಣ-ಚಲಾವಣೆ, ವಿದೇಶಸಾಲ, ವಿದೇಶವ್ಯಾಪಾರ, ರಿಸರ್ವ್ ಬ್ಯಾಂಕ್, ಅಂತರರಾಜ್ಯ ವ್ಯಾಪಾರ, ವಾಣಿಜ್ಯ, ಬ್ಯಾಂಕಿಂಗ್, ವಿಮೆ, ಚುನಾವಣೆಗಳು ಇತ್ಯಾದಿ.
  • ರಾಜ್ಯ ಪಟ್ಟಿ: ರಾಜ್ಯ ಪಟ್ಟಿಯಲ್ಲಿ ೬೧ ವಿಷಯಗಳಿದ್ದು ರಾಜ್ಯ ಶಾಸಕಾಂಗಗಳಿಗೆ ಸ್ವತಂತ್ರವಾಗಿ ಈ ವಿಷಯಗಳ ಬಗ್ಗೆ ಕಾನೂನುಗಳನ್ನು ರಚಿಸುವ ಅಧಿಕಾರವಿದೆ. ಊದಾ: ಸಾರ್ವಜನಿಕಶಾಂತಿ, ಪೋಲಿಸ್, ನ್ಯಾಯದ ಅಡಳಿತ, ಜೈಲುಗಳು, ಸ್ಧಳೀಯ ಸರಕಾರಗಳು, ಸಾರ್ವಜನಿಕ ಆರೋಗ್ಯ, ನಿರ್ಮಲೀಕರಣ, ಗ್ರಂಥಾಲಯಗಳು, ಒಕ್ಕಲುತನ, ನೀರು ಸರಬರಾಜು, ನೀರಾವರಿ, ಮೀನುಗಾರಿಕೆ, ಸಿನಿಮಾ ಮಂದಿರಗಳು, ಜೂಜಾಟ, ಸ್ಧಳೀಯ ಚುನಾವಣೆಗಳು, ಕಂದಾಯ ಇತ್ಯಾದಿ.
  • ಸಮವರ್ತಿ ಪಟ್ಟಿ: ಈ ಪಟ್ಟಿಯಲ್ಲಿ 52 ವಿಷಯಗಳಿದ್ದು ಇವುಗಳ ಮೇಲೆ ಸಂಸತ್ತು ಹಾಗು ರಾಜ್ಯ ಶಾಸಕಾಂಗಗಳು ಕಾನೂನು ರಚಿಸುವ ಆಧಿಕಾರ ಪಡೆದುಕೊಂಡಿರುತ್ತವೆ. ಊದಾ: ರಾಜ್ಯದ ಭದ್ರತೆ, ವಿವಾಹ, ವಿವಾಹವಿಚ್ಛೇದನ, ಅಸ್ತಿಯ ವರ್ಗಾವಣೆ, ಒಕ್ಕುಲುತನ, ಭೂಮಿ, ನಿಕ್ಷೇಪ, ನ್ಯಾಯಾಲಯ ನಿಂದನೆ, ಕಲಬೆರಕೆ, ಸಾಮಾಜಿಕ ಹಾಗು ಆರ್ಥಿಕ ಯೋಜನೆ, ಸಾಮಾಜಿಕ ಭದ್ರತೆ, ಶಿಕ್ಷಣ, ಅರಣ್ಯ, ಕಾಯ್ದೆ, ವೈದ್ಯಕೀಯ ಹಾಗು ಇತರ ವೃತ್ತಿಗಳು. ಬೆಲೆನಿಯಂತ್ರಣ, ಕಾರ್ಖಾನೆಗಳು, ವಿದ್ಯುತ್ತ್ ಶಕ್ತಿ, ಸಮಾಚಾರ ಪತ್ರಿಕೆಗಳು, ಪುಸ್ತಕ ಹಾಗು ಮುದ್ರಣ ಮುಂತಾದವುಗಳು.

ಸ್ವತಂತ್ರ ನ್ಯಾಯಾಂಗ

ಭಾರತದ ಸಂವಿಧಾನವು ಸ್ವತಂತ್ರ ಹಾಗು ನಿಷ್ಪಕ್ಷಪಾತ ನ್ಯಾಯಾಂಗ ವ್ಯವಸ್ಥೆಯನ್ನು ಹೊಂದಿದೆ, ಇಡೀ ದೇಶಕ್ಕೆ ಒಂದು ಸರ್ವೋಚ್ಛ ನ್ಯಾಯಾಲ ಯ ವಿದ್ದು ರಾಜ್ಯಗಳಲ್ಲಿ ಉಚ್ಚ ನ್ಯಾಯಾಲಯಗಳಿವೆ. ಸಂಯುಕ್ತ ವ್ಯವಸ್ಥೆಯಲ್ಲಿ ಕೇಂದ್ರ -ರಾಜ್ಯಗಳ ನಡುವೆ ಅಧಿಕಾರಿಗಳ ವಿಭಜನೆ ಆಗಿರುವುದರಿಂದ ಅವುಗಳ ನಡುವೆ ವಾದ-ವಿವಾದಗಳು ಉದ್ಬವಿಸುವುದು ಅನಿವಾರ್ಯ. ಈವಾದ-ವಿವಾದಗಳ ಇತ್ಯರ್ಥ ಗೊಳಿಸುವ ಸಲುವಾಗಿ ನ್ಯಾಯಾಂಗ ವ್ಯವಸ್ಧೆಯನ್ನು ಮಾಡಲಾಗಿದೆ. ಆದುದರಿಂದ ಸಂಯುಕ್ತ ಪದ್ಧತಿಯಲ್ಲಿ ಶಾಸಕಾಂಗ ಹಾಗು ಕಾರ್ಯಾಂಗಗಳಿಗಿಂತ ನ್ಯಾಯಾಂಗವು ಸಂಪೂರ್ಣವಾಗಿ ಸ್ವತಂತ್ರ ಹಾಗು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುವುದು ಅಗತ್ಯ. ಸ್ವತಂತ್ರನ್ಯಾಯಾಂಗವು ಜನತೆಯ ಮೂಲಭೂತ ಹಕ್ಕುಗಳು ಹಾಗೂ ಸಂವಿಧಾನದ ರಕ್ಷಕನಾಗಿ ಕಾರ್ಯಾನಿರ್ವಹಿಸುತ್ತದೆ. ಸರ್ವೋಚ್ಛ ಹಾಗೂ ನ್ಯಾಯಾಲಯಗಳ ನ್ಯಾಯಾಧೀಶರು ಗಳನ್ನು ರಾಷ್ಟ್ರಪತಿಯು ಮಂತ್ರಿಮಂಡಳದ ಸಲಹೆಯಮೇರೆಗೆ ನೇಮಕ ಮಾಡುತ್ತಾರೆ, ಆದರೆ ಅವರನ್ನು ಸುಲಭವಾಗಿ ಪದಚ್ಯುತಿಗಳಿಸಲಾಗದು.

ದ್ವಿ ಸರಕಾರ

ಭಾರತದಲ್ಲಿ ಎರಡು ಸರಕಾರಗಳಿದ್ದು ಕೇಂದ್ರ ಹಾಗೂ ರಾಜ್ಯ ಸರಕಾರಗಳೆಂದು ವಿಂಗಡಿಸಲಾಗಿದೆ. ಇವು ತಮ್ಮ ಕ್ಷೇತ್ರಗಳಲ್ಲಿ ಸ್ವಾಯತ್ತ ಅಧಿಕಾರಗಳನ್ನು ಪಡೆದುಕೊಂಡಿವೆ. ಈ ಲಕ್ಷಣಗಳು ರಾಜ್ಯ ಪದ್ಥತಿಗೆ ಅನುಗುಣವಾಗಿದ್ದರೂ ಕೇವಲ ಸಿದ್ದಾಂತಗಳಾಗಿದ್ದು ವಾಸ್ತವಿಕವಾಗಿ ಅದರ ಸ್ವರೂಪವು ಭಿನ್ನವಾಗಿದೆ. ಆದುದರಿಂದ ಭಾರತವು ಪರಿಪೂರ್ಣವಾಗಿ ಸಂಯುಕ್ತ ರಾಜ್ಯವಾಗಿರದೆ ಅರೆ-ಸಂಯುಕ್ತ ಅಥವಾ ಭಾಗಶಃ ಸಂಯುಕ್ತ ಪದ್ಧತಿಯನ್ನು ಹೊಂದಿದೆ. ಭಾರತ ಸಂವಿಧಾನ ದಲ್ಲಿ ಅತೀ ಹಚ್ಚಿನ ಏಕಾತ್ಮಕ ಸರಕಾರ ಪದ್ಧತಿಯ ಲಕ್ಷಣಗಳು ಇರುವುದರಿಂದ ಸಂಯುಕ್ತ ಪದ್ಧತಿ ಕೇವಲ ಸಿದ್ಧಾಂತವಾಗಿದೆ ಹೊರತು ಆಚರಣೆಯಲ್ಲಿ ಏಕಾತ್ಮಕವಾಗಿದೆ ಎಂದು ಹೇಳಬಹುದು.

ಏಕಾತ್ಮಕ ಪದ್ಧತಿಯ ಲಕ್ಷಣಗಳು

ಏಕ ಸಂವಿಧಾನ

ಕೇಂದ್ರ ಹಾಗೂ ರಾಜ್ಯಗಳಿಗೆ ಸಂವಿಧಾನವು ಒಂದೇ ಇರುತ್ತದೆ. ಕೇಂದ್ರ - ರಾಜ್ಯಗಳ ಕಾಯ್ದೆ, ಕಾನೂನುಗಳನ್ನು ರಚಿಸಬೇಕಾದರೆ ಒಂದೇ ಸಂವಿಧಾನವು ಮೊರೆಹೋಗುತ್ತವೆ.

ಏಕ ನಾಗಿರೀಕತೆ

ಸಾಮಾನ್ಯವಾಗಿ ಸಂಯುಕ್ತ ಸರಕಾರ ಪದ್ಧತಿಯಲ್ಲಿ ದ್ವಿ ನಾಗಿರೀಕತೆ ಇದ್ದುದು ಕಂಡುಬರುತ್ತದೆ. ಉದಾ: ಆಮೇರಿಕದಲ್ಲಿ ಪ್ರತಿಯೊಬ್ಬ ನಾಗರೀಕನು ಕೇಂದ್ರ ನಾಗಿರೀಕತೆಯನ್ನು ಪಡೆದುಕೊಂಡಿದ್ದಾನೆ. ಭಾರತದಲ್ಲಿ ಏಕ ಪೌರತ್ವವನ್ನು ಕಲ್ಪಿಸಿಕೊಡಲಾಗಿದ್ದು ಔಕೀಕೃತ ಸರಕಾರ ಪದ್ಧತಿಗೆ ಚಾಲನೆ ನೀಡಿದಂತಾಗಿದೆ.

ಬಲಿಷ್ಟ ಕೇಂದ್ರ

ಆಧಿಕಾರ ವಿತರಣೆಯ ಆಧಿಕಾರಮೇರೆಗೆ ಸಂವಿಧಾನ ಮಾಡಿದ ಕೇಂದ್ರ ಪಟ್ಟಿ, ರಾಜ್ಯ ಪಟ್ಟಿ ಹಾಗು ಸಮವರ್ತಿ ಪಟ್ಟಿಯಲ್ಲಿ ಬರುವ ವಿಷಯಗಳನ್ನು ಗಮನಿಸಿದಾಗ ಕೇಂದ್ರ ಸರಕಾರ Archived 2014-01-23 ವೇಬ್ಯಾಕ್ ಮೆಷಿನ್ ನಲ್ಲಿ. ಕ್ಕೆ ೯೯ ವಿಷಯಗಳನ್ನು ಕೊಡಲಾಗಿದ್ದು ರಾಜ್ಯಗಳಿಗೆ ಕೊಡ ಮಾಡಿದ ಆಧಿಕಾರಗಳಿಗಿಂತ ಕೇಂದ್ರವು ಆತೀ ಹಚ್ಚಿನ ಹಾಗು ರಾಷ್ಟ್ರೀಯ-ಅಂತರಾಷ್ಟ್ರೀಯ ಮಹತ್ವದ ಆಧಿಕಾರಗಳನ್ನು ಹೊಂದಿದ್ದು ಬಲಿಷ್ಟ ಸರಕಾರವಾಗಿ ಪರಿಣಮಿಸಿದೆ.

ಸರಳ ಸಂವಿಧಾನದ

ನಮ್ಮ ಸಂವಿಧಾನದವು ಏಕೀಕೃತ ಸರಕಾರ ಪದ್ಧತಿಯ ಲಕ್ಷಣವಾಗಿದೆ. ಭಾರತದ ಸಂವಿಧಾನದಲ್ಲಿ ಬರವ ನಿಯಮಗಳನ್ನು ಸರಳ ಮತ್ತು ವಿಶೇಷ ಬಹುಮತದೊಂದಿಗೆ ತಿದ್ದುಪಡಿಮಾಡಬಹುದು. ಕೆಲವೊಂದು ತಿದ್ದುಪಡಿಗಳಿಗೆ ಮಾತ್ರ ರಾಜ್ಯಗಳ ಒಪ್ಪಿಗೆಬೇಕಾಗುತ್ತದೆ.

ತುರ್ತು ಪರಿಸ್ಥಿತಿಯ ಅವಕಾಶಗಳು

ಸಂವಿಧಾನದ ೩೫೨, ೩೫೬ ಮತ್ತು ೩೬೦ ಆನುಚ್ಛೇದಗಳು ರಾಷ್ಟ್ರಪತಿಗೆ ತುರ್ತು ಪರಿಸ್ಥಿತಿಯನ್ನು ಘೋಷಿಸುವ ಆಧಿಕಾರಕಲ್ಪಿಸಿಕೊಟ್ಟಿವೆ. ತುರ್ತುಪರಿಸ್ಥಿತಿಯ ಅವಧಿಯಲ್ಲಿ ಸಂಸತ್ತು ರಜ್ಯ ಪಟ್ಟಿಯಲ್ಲಿ ಬರವ ವಿಷಯಗಳ ಮೇಲೆ ಕಾನೂನು ರಚಿಸುವ ಆಧಿಕಾರವನ್ನು ಪಡೆದುಕೊಳ್ಳುತ್ತದೆ. ಸಂವಿಧಾನದ ಚೌಕಟ್ತಿನಲ್ಲಿ ಕಾರ್ಯ ನಿರ್ವಹಿಸಲು ರಾಜ್ಯ ಸರಕಾರವು ಅಸಮರ್ಥವಾದರೆ ಅಥವಾ ಸಂವಿಧಾನಿ ಕಾಯಂತ್ರವು ಕುಸಿದ್ದು ಬಿದ್ದಿದ್ದೆ ಎಂಬುದು ಕೇಂದ್ರಕ್ಕೆ ಮನವರಿಕೆಯಾದರೆ ರಾಜ್ಯವಪಾಲರ ವರದಿಯ ಆಧಾರದ ಮೇರೆಗೆ ರಾಷ್ಟ್ರಪತಿ ಆಡಳಿತ ಘೋಷಿಸುವ ಅವಕಾಶವಿದೆ. ಹಣಕಾಸಿನ ತುರ್ತು ಪರಿಸ್ಥಿತಿಯಲ್ಲಿ ಕೇಂದ್ರವು ರಾಜ್ಯಗಳನ್ನು ನಿಯಂತ್ರಿಸುವ ಆಧಿಕಾರವನ್ನು ಪಡೆದುಕೊಂಡಿದೆ.

ಉಲ್ಲೇಖನ

Tags:

ಭಾರತದ ಸಂಯುಕ್ತ ಪದ್ಧತಿ ಸಂಯುಕ್ತ ಪದ್ಧತಿಯ ಲಕ್ಷಣಗಳುಭಾರತದ ಸಂಯುಕ್ತ ಪದ್ಧತಿ ಏಕಾತ್ಮಕ ಪದ್ಧತಿಯ ಲಕ್ಷಣಗಳುಭಾರತದ ಸಂಯುಕ್ತ ಪದ್ಧತಿ ತುರ್ತು ಪರಿಸ್ಥಿತಿಯ ಅವಕಾಶಗಳುಭಾರತದ ಸಂಯುಕ್ತ ಪದ್ಧತಿ ಉಲ್ಲೇಖನಭಾರತದ ಸಂಯುಕ್ತ ಪದ್ಧತಿಭಾರತ

🔥 Trending searches on Wiki ಕನ್ನಡ:

ಕರ್ನಾಟಕದ ಮುಖ್ಯಮಂತ್ರಿಗಳುಬಾಲಕೃಷ್ಣವಿರಾಟ್ ಕೊಹ್ಲಿಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಭಾರತೀಯ ಅಂಚೆ ಸೇವೆಕಬ್ಬುಮಲೈ ಮಹದೇಶ್ವರ ಬೆಟ್ಟಜಿ.ಎಸ್.ಶಿವರುದ್ರಪ್ಪಛಂದಸ್ಸುಗೋವಿಂದ ಪೈಜಶ್ತ್ವ ಸಂಧಿದಕ್ಷಿಣ ಭಾರತದ ಇತಿಹಾಸಕಾವೇರಿ ನದಿಕನ್ನಡ ಸಂಧಿಭಾರತದಲ್ಲಿ ಮೀಸಲಾತಿಶಿವರಾಜ್‍ಕುಮಾರ್ (ನಟ)ಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಪ್ರಾಥಮಿಕ ಶಿಕ್ಷಣತತ್ಪುರುಷ ಸಮಾಸಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಭಗವದ್ಗೀತೆಸ್ತ್ರೀಕಾಮನಬಿಲ್ಲು (ಚಲನಚಿತ್ರ)ಕೃಷ್ಣದೇವರಾಯಬಾದಾಮಿಆದೇಶ ಸಂಧಿಬ್ರಿಟಿಷ್ ಈಸ್ಟ್ ಇಂಡಿಯ ಕಂಪನಿಐಹೊಳೆಭಾರತೀಯ ಧರ್ಮಗಳುಪ್ಲಾಸ್ಟಿಕ್ವಿಜಯಪುರ ಜಿಲ್ಲೆತುಳಸಿದೇವತಾರ್ಚನ ವಿಧಿಕದಂಬ ಮನೆತನಮಳೆನೀರು ಕೊಯ್ಲುಒಂದೆಲಗಪ್ರಿಯಾಂಕ ಗಾಂಧಿಭಾರತದ ರಾಷ್ಟ್ರೀಯ ಉದ್ಯಾನಗಳುನಾಯಕ (ಜಾತಿ) ವಾಲ್ಮೀಕಿಅಮೇರಿಕ ಸಂಯುಕ್ತ ಸಂಸ್ಥಾನಸಮಾಜ ವಿಜ್ಞಾನಸಿರಿ ಆರಾಧನೆಹನುಮಾನ್ ಚಾಲೀಸಕ್ಯಾನ್ಸರ್ಸಂಗೀತಕರ್ನಾಟಕ ವಿಧಾನ ಸಭೆಮಧ್ವಾಚಾರ್ಯಕನ್ನಡ ಸಾಹಿತ್ಯಮಳೆಸಾವಿತ್ರಿಬಾಯಿ ಫುಲೆಗುರುರಾಜ ಕರಜಗಿವಾರ್ಧಕ ಷಟ್ಪದಿಸಾಮಾಜಿಕ ಸಮಸ್ಯೆಗಳುಕರ್ನಾಟಕದ ತಾಲೂಕುಗಳುಹಾಲುಅಮೃತಬಳ್ಳಿಕ್ರಿಯಾಪದವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನಮಳೆಗಾಲಶಾಸನಗಳುಕಲ್ಪನಾಕರ್ನಾಟಕ ಐತಿಹಾಸಿಕ ಸ್ಥಳಗಳುಸಚಿನ್ ತೆಂಡೂಲ್ಕರ್ರಾಜಸ್ಥಾನ್ ರಾಯಲ್ಸ್ಕಾದಂಬರಿಯುಧಿಷ್ಠಿರಅಶ್ವತ್ಥಾಮಪ್ರಾಥಮಿಕ ಶಾಲೆಒಲಂಪಿಕ್ ಕ್ರೀಡಾಕೂಟಶಾತವಾಹನರುಯೋನಿಹರಪ್ಪಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಲೋಪಸಂಧಿಬ್ಯಾಂಕ್ಕೇಶಿರಾಜಗುಲಾಬಿ🡆 More