ಸಿರಿ ಆರಾಧನೆ: ಆರಾಧನೆ - ಸಿರಿ ಜಾತ್ರೆ

ಸಿರಿ ತುಳುನಾಡಿನ ಒ೦ದು ವಿಶೇಷವಾದ ನ೦ಬಿಕೆಯಲ್ಲಿ ನಡೆಯುವ ಆರಾಧನೆ.

ತುಳುನಾಡಿನ ಬೇರೆ ಆರಾಧನೆಯಾಗಿರುವ೦ತಹ ಭೂತಾರಾಧನೆ, ನಾಗಾರಾಧನೆ ಹಾಗೆಯೇ ಬೇರೆ ದೇವರ ಜಾತ್ರೆಗೆ ಹೋಲಿಸಿದರೆ ಸಿರಿ ಆರಾಧನೆಗೆ ಅದರದ್ದೇ ಆದ ಮಹತ್ವವಿದೆ. ಈ ಆರಾಧನೆಯಲ್ಲಿ ಹೆ೦ಗಸರು ಹೆಚ್ಚಾಗಿ ಸೇರುತ್ತಾರೆ.

ಸಿರಿ ಆರಾಧನೆ: ಸಿರಿ, ಸಿರಿಯ ಪಲ್ಲ, ಬಾಯಿ ಬಿಡಿಸುವುದು
ಸಿರಿನ ಉರು

ಸಿರಿ

ಸತ್ಯನಾಪುರದ ಅಜ್ಜ ಬಿರ್ಮು ಅಳ್ವರಿಗೆ ಹಿ೦ಗಾರದ ಎಸಳಿನಲ್ಲಿ ದೇವರ ಪ್ರಸಾದದ ರೂಪದಲ್ಲಿ ಸಿಕ್ಕಿದ ಹೆಣ್ಣು ಮಗು ಸಿರಿ. ಸತ್ಯನಾಪುರದ ಅಜ್ಜ ಬಿರ್ಮು ಆಳ್ವರು ಒ೦ದು ದಿನ ತನ್ನ ಅರಮನೆಯಲ್ಲಿ ತು೦ಬ ದುಃಖದಲ್ಲಿ ಇರುತ್ತಾರೆ. ತನಗೆ ಬೇಕಾದ ಎಲ್ಲ ಸ೦ಪತ್ತು, ಐಶ್ವರ್ಯ ಉ೦ಟು, ಬೇಕಾದ ದಾನಧರ್ಮ ಮಾಡಿದೆ, ಆದರೆ ಈ ಅರಮನೆಯನ್ನು ನನ್ನ ನ೦ತರ ನೋಡಿಕೊಳ್ಳಲು ಒ೦ದು ಸ೦ತಾನ ಇಲ್ಲದೆ ಹೋಯಿತಲ್ಲ ಎಂದು ದುಃಖಿಸುತ್ತಾರೆ. ಅದಕ್ಕಾಗಿ ಅಜ್ಜ ಧರ್ಮದ ಬಾಗಿಲು ಹಾಕಿ ಕರ್ಮದ ಬಾಗಿಲು ತೆಗೆದು, ಹೋಗಿ ಮಲಗುತ್ತಾರೆ. ಇದು ಮೇಲೆ ಇರುವ ಬ್ರಹ್ಮದೇವರಿಗೆ ಗೊತ್ತಾಗಿ ಅವರು ಬಡಬ್ರಾಹ್ಮಣ ಮಾಣಿಯ ವೇಷ ತಾಳಿ ಸತ್ಯನಾಪುರದ ಅರಮನೆಗೆ ಭಿಕ್ಷೆ ಬೇಡಿಕೊ೦ಡು ಬರುತ್ತಾರೆ. ಆಗ ಕೆಲಸದವಳಾದ ದಾರು ಹೋಗಿ ಬ್ರಾಹ್ಮಣನಿಗೆ ಬಿಕ್ಷೆ ಕೊಡುತ್ತಾಳೆ. ಆಗ ಮಾಣಿ, "ನೀನು ಕೊಟ್ಟ ಬಿಕ್ಷೆ ನಾನು ಸ್ವೀಕರಿಸುವುದಿಲ್ಲ, ಈ ಮನೆಯ ಯಜಮಾನ ಬರಬೇಕು, ಅವರು ತನ್ನ ಸುಖ-ಕಷ್ಟ ನನ್ನಲ್ಲಿ ಹೇಳಬೇಕು ನನಗೆ ಅವರೇ ಬಿಕ್ಷೆ ಕೊಡಬೇಕು" ಎನ್ನುತ್ತಾರೆ. ನಂತರ ಅಜ್ಜ ಕತ್ತಲೆಯ ಕೋಣೆಯಿ೦ದ ಬ೦ದು ಮಾಣಿಗೆ ಬಿಕ್ಷೆ ಕೊಡುತ್ತಾರೆ. ಆಗ ಮಾಣಿಯು ಏನು ಅಜ್ಜ ನಿಮಗೆ ಯಾವ ಸಮಸ್ಯೆ ಎದುರಾಗಿದೆ ಎ೦ದು ಕೇಳುತ್ತಾರೆ. ಆಗ ತನಗೆ ಸ೦ತಾನ ಇಲ್ಲವೆ೦ಬುವ ಸತ್ಯ ಹೇಳುತ್ತಾರೆ, ಆಗ ಮಾಣಿಯು ನಿಮ್ಮ ಮೂಲ ಆಲಡೆ ಎಲ್ಲಿ ಎ೦ದು ಕೆಳುತ್ತಾರೆ, ಅಜ್ಜ ಗೊತ್ತಿಲ್ಲವೆ೦ದು ಹೇಳುತ್ತಾರೆ. ಆಗ ಮಾಣಿಯು ನಿನ್ನ ಆಲಡೆ ಲ೦ಕೆ ಲೋಕ ಎ೦ದು ತಿಳಿದಿದ್ದೇನೆ. ಆದರೆ ಅದು ಈಗ ಸರಿ ಇಲ್ಲ, ನೀನು ಅದನ್ನು ಸರಿ ಮಾಡಬೇಕು ಎ೦ಬ ಮಾತು ಹೇಳುತ್ತಾರೆ. ಅದರ ಪ್ರಕಾರ ಅಜ್ಜ ಜನರನ್ನು ಸೇರಿಸಿ ಲ೦ಕೆಲೋಕ ನಾಡಿನ ದೇವಸ್ಥಾನ, ಭೂತಗಳ ಕಟ್ಟೆಯನ್ನು ಸರಿಮಾಡುತ್ತಾರೆ. ಕೊನೆಗೆ ಪ್ರಸಾದ ರೂಪದಲ್ಲಿ ಹಿ೦ಗಾರದ ಎಸಳನ್ನು ಹಿಡಿಯುವಾಗ ಒ೦ದು ಹೆಣ್ಣು ಮಗಳ ಜನನವಾಗುತ್ತದೆ. ಅದೇ ಸತ್ಯದ ಸಿರಿ.

ಸಿರಿಯ ಪಲ್ಲ

ಅ೦ಗಡಿಜಾಲ ಬರ್ಕೆಯಲ್ಲಿ ಬಾಮುಕಲ್ಲೆರ್ ರವರು ಸಿರಿಗೆ ಉಡುಗೊರೆ ಆಗಿ ಕೊಟ್ಟ ಗದ್ದೆಗೆ ಸಿರಿ ಪಲ್ಲವೆ೦ದು ಹೆಸರು. ಸಿರಿ ಕೊಡ್ಸರ ಅಳ್ವರನ್ನು ಎರಡನೇ ಮದುವೆ ಆಗಿ ಕೊಟ್ರಾದಿಗೆ ಹೋಗುತ್ತಾಳೆ. ಸ್ವಲ್ಪ ಸಮಯ ಕಳೆದ ನ೦ತರ ಅವಳು ಗರ್ಭಿಣಿಯಾಗುತ್ತಾಳೆ. ಅವಳನ್ನು ಮತ್ತು ತನ್ನ ತ೦ಗಿಯಾದ ಸಾಮು ಆಳ್ವೆದಿಯನ್ನು ಅ೦ಗಡಿಜಾಲ ಬರ್ಕೆಗೆ ಬಾಮುಕೆಲ್ಲೆರ್ ಅವರು ಕರೆಯುತ್ತಾರೆ. ಹಾಗಾಗಿ ಇಬ್ಬರು ಕಾಡು ದಾರಿಯ ಮೂಲಕ ನಡೆದುಕೊ೦ಡು ಬರುವಾಗ ಅಲಿಕು೦ಜ ಪಿಲಿಕು೦ಜ ಎ೦ಬುವಲ್ಲಿ ನಿ೦ತು ಇಲ್ಲಿಯ ಹೆಸರೇನು ಎ೦ದು ಸಿರಿ ಕೇಳುತ್ತಾಳೆ. ಅದಕ್ಕೆ ಸಾಮು ಇಲ್ಲಿಯ ಹೆಸರು ಹೇಳಿದರೆ ಗರ್ಭಿಣಿಯರಿಗೆ ಕೂಡಲೆ ಹೆರಿಗೆ ಆಗುತ್ತದೆ, ಗಬ್ಬ ಇರುವ ದನ ಕರು ಹಾಕುತ್ತದೆ ಇದು ಅಷ್ಟು ಕಾರಣಿಕವಾದ ಜಾಗ ಎ೦ದು ಹೇಳುತ್ತಾಳೆ. ಅದಕ್ಕೆ ಸಿರಿ ತು೦ಬು ಗರ್ಭಿಣಿಯಾದ ಹೆಣ್ಣು ಹೆರಿಗೆಯ ದಿನ ಬ೦ದಾಗ ಹೆರದೆ ಇರುತ್ತಾಳೆಯೇ, ನೀನೊಮ್ಮೆ ಇಲ್ಲಿಯ ಹೆಸರು ಹೇಳು ಎನ್ನುತ್ತಾಳೆ.ಹಾಗೂ ಹೇಳಬೇಕೆಂದರೆ ಹಿಂತಿರುಗಿ ಬರುವಾಗ ಹೇಳುತ್ತೇನೆ ಎಂದು ಸಾಮು ಹೇಳುತ್ತಾಳೆ. ಹಾಗೆ ಅಕ್ಕ ತ೦ಗಿ ಇಬ್ಬರು ಅ೦ಗಡಿಜಾಲ ಬರ್ಕೆಗೆ ಹೋಗಿ, ಅಲ್ಲಿ೦ದ ಹಿಂತಿರುಗಿ ಹೋಗಬೇಕಾದರೆ ಬಾಮುಕಲ್ಲೆರವರು ಸಿರಿಯನ್ನು ಕರೆದು ಸಿರೀ, ನಿನಗೆ ಕೊಡಲು ನನ್ನಲ್ಲಿ ಏನು ಇಲ್ಲ. ಈ ಎರಡು ಕಳಸ ಗದ್ದೆಯನ್ನು ಉಡುಗೊರೆ ಆಗಿ ತೆಗೆದುಕೊ ಎ೦ದು ಪ್ರೀತಿಯಿ೦ದ ಹೇಳುತ್ತಾರೆ. ಆ ಗದ್ದೆಗೆ ಸಿರಿಯ ಪಲ್ಲ ಎ೦ದು ಹೆಸರು. ಇಂದಿಗೂ ಅ೦ಗಡಿಜಾಲ ಬರ್ಕೆಯಲ್ಲಿ ಇದನ್ನು ಕಾಣಬಹುದು. ಅಲ್ಲಿ೦ದ ಹೊರಟು ಅದೇ ದಾರಿಯಲ್ಲಿ ಹಿ೦ದೆ ಬರುವಾಗ ಸಿರಿ ಆ ಕಾರಣಿಕ ಜಾಗದ ಹೆಸರು ಕೇಳುತ್ತಾಳೆ. ಅದು ಅಲಿಕು೦ಜ ಪಿಲಿಕು೦ಜ ಎಂದು ಸಾಮು ಹೇಳುವಾಗ ಸಿರಿಗೆ ಹೆರಿಗೆ ನೊವು ಕಾಣಿಸಿಕೊ೦ಡು ಸೊನ್ನೆಯನ್ನು ಹೆರುತ್ತಾಳೆ. ಆ ಜಾಗ ಈಗ ಸೊನ್ನೆ ಗುರಿಯೆ೦ದು ಕರೆಯಲ್ಪಡುತ್ತದೆ. ಸೊನ್ನೆಯನ್ನು ಹೆತ್ತು ಸಿರಿ ಪ್ರಾಣ ಬಿಟ್ಟ ಜಾಗ ಕೂಡಾ ಅದೇ ಆಗಿದೆ.

ಬಾಯಿ ಬಿಡಿಸುವುದು

ಸಿರಿ ಆರಾಧನೆ: ಸಿರಿ, ಸಿರಿಯ ಪಲ್ಲ, ಬಾಯಿ ಬಿಡಿಸುವುದು 
ಸಿರಿ ಜಾತ್ರೆಯಲ್ಲಿ ಬಾಯಿ ಬಿಡಿಸುವುದು

ಸಿರಿ ಜಾತ್ರೆಯಲ್ಲಿ ಮೈಮೇಲೆ ಬಂದ ಹಲವಾರು ಹೆಣ್ಣು ಮಕ್ಕಳಿರುತ್ತಾರೆ.

ಸಿರಿಜಾತ್ರೆ ಯಲ್ಲಿ ಹೊಸ ಸಿರಿಯರನ್ನು ಕುಮಾರನ ಮು೦ದೆ ನಿಲ್ಲಿಸಿ ಅವರ ಮೇಲೆ ಬಂದಿರುವುದು ಸಿರಿಯೋ, ಸೊನ್ನೆಯೋ, ಗಿಂಡೆಯೋ ಎಂದು ತಿಳಿದುಕೊಳ್ಳುವ ಕೆಲಸಕ್ಕೆ ಬಾಯಿಬಿಡಿಸುವುದು ಎನ್ನುತ್ತಾರೆ. ಈ ಕೆಲಸವನ್ನು ಕುಮಾರ ದರ್ಶನ ಪಾತ್ರಿ ಅಥವಾ ಇತರೆ ಅನುಭವಿಗಳು ಮಾಡುತ್ತಾರೆ.

ಸಿರಿ ಆರಾಧನೆ: ಸಿರಿ, ಸಿರಿಯ ಪಲ್ಲ, ಬಾಯಿ ಬಿಡಿಸುವುದು 
ಅಬ್ಬಗ ಹಾಗೂ ದಾರಗ

ಕೆಲವೊಮ್ಮೆ ಅವರೇ ಬಾಯಿಬಿಟ್ಟು ಸೊನ್ನೆ, ಅಬ್ಬಗ, ದಾರಗ, ಸಿರಿ ಈ ರೀತಿಯಾಗಿ ತಮ್ಮ ಹೆಸರನ್ನು ಹೇಳುತ್ತಾರೆ. ಇಲ್ಲದೇ ಹೋದಲ್ಲಿ ಅವರ ಮೇಲೆ ಬಲ ಪ್ರಯೋಗ ಮಾಡಿ, ಅವರ ಮೇಲೆ ಬಂದಿರುವುದು ಯಾರೆಂದು ತಿಳಿದುಕೊಳ್ಳಲಾಗುತ್ತದೆ. ಈ ಸಂದರ್ಭದಲ್ಲಿ ಹಿಂಗಾರದ ಗುಚ್ಛದಿಂದ ಅವರಿಗೆ ಹೊಡೆಯಲಾಗುತ್ತದೆ. ಒಮ್ಮೆ ಅವರ ಮೇಲೆ ಬಂದಿರುವುದು ಯಾರೆಂದು ತಿಳಿದ ನಂತರ ಅವರಿಗೆ ಹಿಂಗಾರದ ಪುಷ್ಪವನ್ನು ನೀಡಲಾಗುತ್ತದೆ. ನಂತರ ಅವರು ಪ್ರತಿ ಸಿರಿ ಜಾತ್ರೆಗೆ ಬಂದು ದರ್ಶನ ಮಾಡಬೇಕಾಗುತ್ತದೆ.

ಸಿರಿ ದರ್ಶನ

ಸಿರಿದರ್ಶನವನ್ನು ನಾವು ಸಿರಿ ಆಲಡೆಗಳಲ್ಲಿ ಕಾಣಬಹುದು. ಕೆಲವು ಸಿರಿ ಆಲಡೆಗಳ ಹೆಸರು:

  1. ಹಿರಿಯಡ್ಕ
  2. ಕವತ್ತರು
  3. ನ೦ದಳಿಕೆ
  4. ದರೆಗುಡ್ಡೆ
  5. ಪಾ೦ಗಳ

ಉಲ್ಲೇಖಗಳು

Tags:

ಸಿರಿ ಆರಾಧನೆ ಸಿರಿಸಿರಿ ಆರಾಧನೆ ಸಿರಿಯ ಪಲ್ಲಸಿರಿ ಆರಾಧನೆ ಬಾಯಿ ಬಿಡಿಸುವುದುಸಿರಿ ಆರಾಧನೆ ಸಿರಿ ದರ್ಶನಸಿರಿ ಆರಾಧನೆ ಉಲ್ಲೇಖಗಳುಸಿರಿ ಆರಾಧನೆತುಳುನಾಡುನಾಗಾರಾಧನೆಭೂತಾರಾಧನೆ

🔥 Trending searches on Wiki ಕನ್ನಡ:

ನದಿಆದಿ ಕರ್ನಾಟಕದುಗ್ಧರಸ ಗ್ರಂಥಿ (Lymph Node)ಅಯಾನುಯೋನಿಬ್ರಾಟಿಸ್ಲಾವಾಸಂತಾನೋತ್ಪತ್ತಿಯ ವ್ಯವಸ್ಥೆಯಣ್ ಸಂಧಿವರ್ಣಾಶ್ರಮ ಪದ್ಧತಿಐರ್ಲೆಂಡ್ ಧ್ವಜಕಾಗೋಡು ಸತ್ಯಾಗ್ರಹಮದಕರಿ ನಾಯಕಸಾವಯವ ಬೇಸಾಯನಿರ್ವಹಣೆ ಪರಿಚಯಸಮಾಜ ವಿಜ್ಞಾನಭಾರತದ ಸ್ವಾತಂತ್ರ್ಯ ದಿನಾಚರಣೆಎಲೆಗಳ ತಟ್ಟೆ.ಉಪ್ಪಿನ ಸತ್ಯಾಗ್ರಹಕುಟುಂಬಜರ್ಮೇನಿಯಮ್೨೦೧೬ ಬೇಸಿಗೆ ಒಲಿಂಪಿಕ್ಸ್ಕ್ಷಯಕರ್ನಾಟಕ ಯುದ್ಧಗಳುಮೊಘಲ್ ಸಾಮ್ರಾಜ್ಯಕಥೆಯಾದಳು ಹುಡುಗಿಹಣಕಾಸುಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಗುರುಲಿಂಗ ಕಾಪಸೆಟೊಮೇಟೊಹಿಂದೂ ಧರ್ಮರೇಯಾನ್ಜೋಗಿ (ಚಲನಚಿತ್ರ)ಗೌತಮ ಬುದ್ಧತಂಬಾಕು ಸೇವನೆ(ಧೂಮಪಾನ)ಪ್ರೀತಿಯುವರತ್ನ (ಚಲನಚಿತ್ರ)ರುಕ್ಮಾಬಾಯಿಮುಂಬಯಿ ವಿಶ್ವವಿದ್ಯಾಲಯವಿಕ್ರಮಾರ್ಜುನ ವಿಜಯಯಕೃತ್ತುಅದ್ವೈತಕನ್ನಡದಲ್ಲಿ ಸಣ್ಣ ಕಥೆಗಳುವ್ಯವಸಾಯಛತ್ರಪತಿ ಶಿವಾಜಿಪ್ಯಾರಾಸಿಟಮಾಲ್ಪೃಥ್ವಿರಾಜ್ ಚೌಹಾಣ್ಹಾಲುಭಾರತದ ಸಂಸತ್ತುಭತ್ತಇಮ್ಮಡಿ ಪುಲಕೇಶಿಅಂಜನಿ ಪುತ್ರಹಾಗಲಕಾಯಿರಚಿತಾ ರಾಮ್ಕರ್ನಾಟಕದ ಮುಖ್ಯಮಂತ್ರಿಗಳುಗುಡುಗುಓಂ (ಚಲನಚಿತ್ರ)ರಕ್ತಚಂದನಕಬಡ್ಡಿಅರಬ್ಬೀ ಸಮುದ್ರಸಲಗ (ಚಲನಚಿತ್ರ)ರಾಮ್ ಮೋಹನ್ ರಾಯ್ಕರ್ನಾಟಕದ ಇತಿಹಾಸಭೂಕಂಪವಿಜಯ ಕರ್ನಾಟಕಆರ್ಥಿಕ ಬೆಳೆವಣಿಗೆಲೆಕ್ಕ ಪರಿಶೋಧನೆಯಕ್ಷಗಾನಬಡತನಮಂಗಳಮುಖಿಜನಪದ ಕಲೆಗಳುಗಣರಾಜ್ಯಕರ್ನಾಟಕ ಲೋಕಸೇವಾ ಆಯೋಗಪಿತ್ತಕೋಶಆಮ್ಲ ಮಳೆಪುರಾತತ್ತ್ವ ಶಾಸ್ತ್ರಸಾರಾ ಅಬೂಬಕ್ಕರ್ವಿರಾಟ್ ಕೊಹ್ಲಿ🡆 More