ಕ್ಷಯ

ಕ್ಷಯ ಮಾನವನಿಗೆ ಮತ್ತು ಹಲವು ಪ್ರಾಣಿಗಳಿಗೆ ಬರುವ ಒಂದು ಮಾರಕ ರೋಗ.

ಈ ರೋಗವು ಮೈಕೊಬ್ಯಾಕ್ಟೀರಿಯಂ ಜಾತಿಯ ಹಲವು ಬ್ಯಾಕ್ಟೀರಿಯಗಳಿಂದ ಬರುತ್ತದೆ. ಪ್ರಮುಖವಾಗಿ ಪುಪ್ಪಸಗಳಿಗೆ ಹಾನಿ ಮಾಡುವ ಈ ರೋಗ ಮುಂದೆ ದೇಹದ ಹಲವು ಅಂಗಾಂಗಗಳ ಮೇಲೆ ತನ್ನ ದುಷ್ಪರಿಣಾಮ ಬೀರುತ್ತದೆ.

ಕ್ಷಯ
ಕ್ಷಯ ರೋಗದಿಂದ ಪೀಡಿತ ವ್ಯಕ್ತಿಯ ಪುಪ್ಪಸಗಳ ಕ್ಷ-ಕಿರಣ ಚಿತ್ರ

ಸೋಂಕು ಹರಡುವ ರೀತಿ

ಕ್ಷಯ 
ನಿಂಗ್ ಎಲೆಕ್ಟ್ರಾನ್ ಮೈಕ್ರೊಗ್ರಾಫ್; ಬ್ಯಾಕ್ಟೀರಿಯಾ: M. tuberculosis; ಎಮ್. ಕ್ಷಯರೋಗ
ಕ್ಷಯ 
RobertKoch ರಾಬರ್ಟ್ ಕೋಚ್ ಕ್ಷಯರೋಗ ಬಾಸಿಲಸ್ ಅನ್ನು ಕಂಡುಹಿಡಿದನು.

ಕ್ಷಯ' ಮಾನವನಿಗೆ ಅದೇ ರೀತಿ ಹಲವು ಪ್ರಾಣಿಗಳಿಗೆ ಬರುವ ಒಂದು ಮಾರಕ ರೋಗ. ಈ ರೋಗವು ಮೈಕೊ 'ಬ್ಯಾಕ್ಟೀರಿಯಂ ಟ್ಯೂಬರ್‌ಕ್ಯುಲೋಸಿಸ್' ಎಂಬ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಪ್ರಮುಖವಾಗಿ ಪುಪ್ಪಸಗಳಿಗೆ ಹಾನಿ ಮಾಡುವ ಈ ರೋಗವು ದೇಹದ ಅಂಗಾಂಗಗಳ ಮೇಲೆ ಹಲವು ದುಷ್ಪರಿಣಾಮ ಬೀರುತ್ತದೆ.

ಕ್ಷಯ ರೋಗಕ್ಕೆ ಸಮಾರು ನೂರು ವರ್ಷಗಳ ಇತಿಹಾಸವಿದೆ. ಇದು ಸಂಪೂರ್ಣವಾಗಿ ಗುಣಪಡಿಸುಬಹುದಾದ ಕಾಯಿಲೆಯಾಗಿದೆ. ರೋಗಿಯೊಬ್ಬ ಕೆಮ್ಮಿದಾಗ ಕಫದಲ್ಲಿರುವ ರೋಗಾಣುವಿನಿಂದ ಈ ರೋಗ ಹರಡುತ್ತದೆ. ಕಾಯಿಲೆ ಇರುವವರು ಕೆಮ್ಮಿದಾಗ, ಸೀನಿದಾಗ ಅಥವಾ ಉಗುಳಿದಾಗ ತುಂತುರು ಹನಿಗಳ ಮೂಲಕ ಬೇರೊಬ್ಬ ವ್ಯಕ್ತಿಗೆ ರೋಗ ಹರಡಲು ಕಾರಣವಾಗುತ್ತದೆ. ಹೀಗಾಗಿ ಇದು ಗಾಳಿಯ ಮೂಲಕವೂ ಹರಡುತ್ತವೆ.

ಈ ಸೋಂಕು ತಗುಲಿದ ವ್ಯಕ್ತಿಯು ಒಂದು ವರ್ಷದಲ್ಲಿ ಹತ್ತು ಜನರಿಗೆ ಸೋಂಕು ತಗುಲಿಸಬಹುದು. ಇದು ಸಾಮಾನ್ಯವಾಗಿ 15ರಿಂದ 45 ವರ್ಷದೊಳಗಿನವರಿಗೆ ಹೆಚ್ಚಾಗಿ ತಗಲುತ್ತವೆ. ಕ್ಷಯರೋಗದ ಪ್ರಮುಖ ಲಕ್ಷ್ಮಣಗಳು- ಕೆಮ್ಮು, ರಾತ್ರಿಯಲ್ಲಿ ಜ್ವರ, ತೂಕ ಕಡಿಮೆಯಾಗುವುದು, ಅಶಕ್ತತೆ, ಕಫದಲ್ಲಿ ರಕ್ತ, ರಾತ್ರಿಯಲ್ಲಿ ಬೆವರು, ಎದೆನೋವು, ಹಸಿವಾಗದಿರುವುದು. ಎಚ್‌ಐವಿ, ಏಡ್ಸ್ ಮತ್ತು ಮಧುಮೇಹ ರೋಗಿಗಳಿಗೂ ಬೇಗನೇ ಸೋಂಕು ತಗಲುವ ಸಾಧ್ಯತೆ ಹೆಚ್ಚಿವೆ.

ಕ್ಷಯರೋಗ ನಿವಾರಣೆ

  • ಭಾರತವು ಸ್ವಚ್ಛ, ಸ್ವಸ್ಥ ಸಮಾಜದ ನಿರ್ಮಾಣಕ್ಕೆ ನೀಲನಕ್ಷೆ ಹಾಕಿಕೊಂಡಿದೆ. ಪೋಲಿಯೊ ನಿರ್ಮೂಲನೆಯ ನಂತರ ಇದೀಗ ದಢಾರ ಮತ್ತು ರುಬೆಲ್ಲಾ ನಿರ್ಮೂಲನೆಗೆ ರಾಷ್ಟ್ರವ್ಯಾಪಿ ಆಂದೋಲನ ನಡೆದಿದೆ. ಮುಂದಿನ ವರ್ಷದ ಕೊನೆಯೊಳಗೆ ಕುಷ್ಠರೋಗವನ್ನೂ 2020ರ ವೇಳೆಗೆ ದಢಾರವನ್ನೂ; 2025ರೊಳಗೆ ಕ್ಷಯರೋಗವನ್ನೂ ನಿರ್ಮೂಲನ ಮಾಡಿಸುವುದಾಗಿ ಪ್ರಧಾನಿ ಮೋದಿಯವರು ಈ ವರ್ಷದ ಸೈನ್ಸ್ ಕಾಂಗ್ರೆಸ್ ಮೇಳದಲ್ಲಿ ದೇಶಕ್ಕೆ ವಾಗ್ದಾನ ಮಾಡಿದ್ದಾರೆ. ಅದಕ್ಕೆಂದೇ ವಿತ್ತ ಸಚಿವ ಜೇಟ್ಲಿಯವರು ಈ ವರ್ಷದ ಮುಂಗಡ ಪತ್ರದಲ್ಲಿ ಸಾರ್ವಜನಿಕ ಸ್ವಾಸ್ಥ್ಯ ರಕ್ಷಣೆಗೆಂದೇ ಎಂದಿಗಿಂತ ಶೇ 23.5ರಷ್ಟು ಹೆಚ್ಚಿನ ಹಣವನ್ನು ಮೀಸಲಾಗಿಟ್ಟು ಭೇಷ್ ಎನ್ನಿಸಿಕೊಂಡಿದ್ದಾರೆ.

ಪ್ರಾಣಿಗಳಿಂದ ಸೋಂಕು

  • ದನಗಳಿಗೆ ಬರುವ ಕ್ಷಯವೇ ಹಾಲಿನ ಡೇರಿಯ ಕೆಲಸಗಾರರಿಗೆ, ಆ ಮೂಲಕ ಮನೆಯವರಿಗೆ, ಅವರ ಮೂಲಕ ಸಮಾಜದ ಇತರರಿಗೆ ಬರುತ್ತದೆ ಎಂಬುದು ಎಂದೋ ಪ್ರಮಾಣಿತವಾಗಿದೆ. ಮನುಷ್ಯರಿಂದ ಮನುಷ್ಯರಿಗೆ ಕ್ಷಯರೋಗ ಹಬ್ಬದ ಹಾಗೆ ಅದೆಷ್ಟೇ ಬಿಗಿಯಾದ ಕ್ರಮಗಳನ್ನು ಕೈಗೊಂಡರೂ ದನಗಳಿಗೆ ಕ್ಷಯರೋಗ ಬರುತ್ತಿದ್ದರೆ ಆ ಮೂಲಕ ಮತ್ತೆ ಮತ್ತೆ ಅದು ಮನುಷ್ಯರಿಗೂ ಬಂದೇ ಬರುತ್ತದೆ.

ಲಕ್ಷಣ

  • ಕ್ಷಯ (ಟಿ.ಬಿ) ರೋಗದ ಹಿನ್ನೆಲೆ ಇಷ್ಟು: ಅದು ಮೈಕೊಬ್ಯಾಕ್ಟೀರಿಯಂ ಟುಬರ್ಕುಲೊಸಿಸ್ (ಎಮ್‌ಟಿಬಿ) ಎಂಬ ಏಕಾಣು ಜೀವಿಯಿಂದ ಬರುತ್ತದೆ. ಪದೇಪದೇ ಕೆಮ್ಮು, ಕಫದಲ್ಲಿ ಆಗಾಗ ರಕ್ತ, ತೂಕದ ಸತತ ಇಳಿತ, ಆಗಾಗ ಜ್ವರ, ನಿರಂತರ ಅಶಕ್ತತೆ ಇವು ಅದರ ಮುಖ್ಯ ಲಕ್ಷಣಗಳು. ಹೆಚ್ಚಿನ ರೋಗಿಗಳಿಗೆ ಶ್ವಾಸಕೋಶದ ಟಿ.ಬಿ ಇರುತ್ತದೆ. ಅಪರೂಪಕ್ಕೆ ಮೂಳೆ ಟಿ.ಬಿ, ಸ್ನಾಯು ಟಿ.ಬಿ, ಹಾಲ್ರಸನಾಳದ ಟಿ.ಬಿ ಕೂಡ ಬರಬಹುದು. ಎದೆಯ ಎಕ್ಸ್-ರೇ ಮತ್ತು ಕಫದ ಪರೀಕ್ಷೆಯ ಮೂಲಕ ಶ್ವಾಸಕೋಶದ ಟಿ.ಬಿಯನ್ನು ಸುಲಭವಾಗಿ ಪತ್ತೆ ಮಾಡಬಹುದು. ದಿನಕ್ಕೆ ಮೂರು ಬಾರಿಯಂತೆ ಅತ್ಯಂತ ಕಟ್ಟುನಿಟ್ಟಾಗಿ ಆರುತಿಂಗಳ ಕಾಲ ಔಷಧ ಸೇವಿಸಬೇಕು. ಮಧ್ಯೆ ಒಮ್ಮೆ ತಪ್ಪಿದರೆ ಮತ್ತೆ ಆರಂಭದಿಂದ ಮಾತ್ರೆಗಳ ಸೇವನೆ ಮಾಡಬೇಕು.

ನಿರ್ಮೂಲನೆಯ ಸವಾಲು

  • ಆದರೂ ಕ್ಷಯರೋಗ ನಿರ್ಮೂಲನೆಯ ಪ್ರಶ್ನೆ ಬಂದಾಗ ಎನ್‌ಡಿಎ ಸರ್ಕಾರಕ್ಕೆ ಬಹುದೊಡ್ಡ ಸವಾಲು ಎದುರಾಗಲಿದೆ. ದನಗಳ ಮೇಲೆ ಪೂಜನೀಯ ಭಾವ, ಕರುಣೆ, ದಯೆದಾಕ್ಷಿಣ್ಯ ಇದ್ದಷ್ಟು ಕಾಲ ಕ್ಷಯರೋಗ ನಿರ್ಮೂಲನ ಸಾಧ್ಯವಿಲ್ಲ. ಏಕೆಂದರೆ ದನಗಳಿಗೆ ಬರುವ ಕ್ಷಯವೇ ಹಾಲಿನ ಡೇರಿಯ ಕೆಲಸಗಾರರಿಗೆ, ಆ ಮೂಲಕ ಮನೆಯವರಿಗೆ, ಅವರ ಮೂಲಕ ಸಮಾಜದ ಇತರರಿಗೆ ಬರುತ್ತದೆ ಎಂಬುದು ಎಂದೋ ಪ್ರಮಾಣಿತವಾಗಿದೆ.

ಪ್ರತಿ ದಿನ ಸರಾಸರಿ 960 ಜನರ ಸಾವು

  • ನಮ್ಮ ಬಹುತೇಕ ಎಲ್ಲರ ಶರೀರದಲ್ಲೂ ಕ್ಷಯದ ಏಕಾಣುಜೀವಿ ಇರುತ್ತದೆ. ಆದರೆ ರೋಗನಿರೋಧಕ ಶಕ್ತಿ ಗಟ್ಟಿ ಇದ್ದರೆ ಆ ರೋಗಾಣುವಿನ ಸುತ್ತ ಪೊರೆ ಕಟ್ಟಿ ಬಂಧಿತವಾಗಿರುತ್ತದೆ. ಬಂಧ ಗಟ್ಟಿಯಾಗಿದ್ದಷ್ಟು ದಿನ ರೋಗದ ಭಯವಿಲ್ಲ. ಸತತ ಧೂಮಪಾನ, ಏಡ್ಸ್ ಅಥವಾ ಕೆಲವರಿಗೆ ಸಕ್ಕರೆ ಕಾಯಿಲೆ ಇದ್ದರೂ ಬಂಧನ ಸಡಿಲವಾಗಿ ರೋಗ ಶರೀರಕ್ಕೆ ಹರಡುತ್ತದೆ. ಶ್ವಾಸದ ಮೂಲಕ, ದೇಹದ್ರವಗಳ ಮೂಲಕ ಆಸುಪಾಸಿನ ಇತರರಿಗೆ ಹರಡುತ್ತದೆ. ನಮ್ಮಲ್ಲಿ ರೋಗದ ಬಗೆಗಿನ ಅಜ್ಞಾನ, ಔಷಧ ಸೇವನೆಯಲ್ಲಿ ಅಶಿಸ್ತು, ಕಂಡಲ್ಲಿ ಉಗುಳುವ ಅಭ್ಯಾಸ ಈ ಎಲ್ಲ ಕಾರಣದಿಂದಾಗಿ ರೋಗನಿಯಂತ್ರಣ ದುಸ್ತರವಾಗಿದೆ. ಅಂದಾಜಿನ ಪ್ರಕಾರ, ಸುಮಾರು 22 ಲಕ್ಷ ರೋಗಿಗಳು ನಮ್ಮಲ್ಲಿದ್ದು ಪ್ರತಿ ದಿನವೂ ಸರಾಸರಿ 960 ಜನರು (ಪ್ರತಿ ಗಂಟೆಗೆ 90 ಜನ) ಈ ಕಾಯಿಲೆಯಿಂದ ಸಾಯುತ್ತಿದ್ದಾರೆ. ಯಾವ ಔಷಧವೂ ನಾಟದಂಥ ಹೊಸ ಹೊಸ ಕ್ಷಯತಳಿಗಳು ಸೃಷ್ಟಿ ಆಗುತ್ತಿರುವುದರಿಂದ ರೋಗ ನಿಯಂತ್ರಣ ವರ್ಷವರ್ಷಕ್ಕೆ ಕಠಿಣವಾಗುತ್ತ ಹೋಗುತ್ತಿದೆ.

ರೋಗವೇ ಬಾರದಂಥ ತಳಿ

  • ಭಾರತದಲ್ಲಿ ದನಕ್ಷಯದ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನಗಳು ಅಷ್ಟೇನೂ ವ್ಯಾಪಕವಾಗಿ ನಡೆಯುತ್ತಿಲ್ಲ. ಇಲ್ಲಿನ ಕೊಳಕು ಡೇರಿಗಳು, ಅಶಿಕ್ಷಿತ ಪಶುವೈದ್ಯ ಸಿಬ್ಬಂದಿ, ಹಸೀ ಹಾಲು ಕುಡಿಯುವ ಪರಿಪಾಠ ಇವೆಲ್ಲ ಕಾರಣಗಳಿಂದ ಮನುಷ್ಯರು ಮತ್ತು ಸಾಕುಪ್ರಾಣಿಗಳ ನಡುವೆ ಕ್ಷಯ ರೋಗಾಣುಗಳ ವಿನಿಮಯ ಸತತವಾಗಿ ನಡೆಯುತ್ತಲೇ ಇರುತ್ತದೆ. ರೋಗಪೀಡಿತ ಹಸುಗಳನ್ನು ಕೊಲ್ಲುವ ಮಾತು ಹಾಗಿರಲಿ, ರೋಗಾಣುಗಳ ಪತ್ತೆಗೆ ಹೋದರೂ ಪ್ರತಿಭಟನೆ ಎದುರಾಗುವ ಸಂಭವ ಇದೆ. ನಾಲ್ಕು ವರ್ಷಗಳ ಹಿಂದೆ ಗುಜರಾತ್‌ನಲ್ಲಿ ಹಸುಗಳ ಕ್ಷಯದ ಬಗ್ಗೆ ನಡೆದ ವಿಚಾರ ಸಂಕಿರಣಕ್ಕೂ ಪ್ರತಿರೋಧ ಬಂದಿತ್ತು. ದನಗಳಿಗೆ ಕ್ಷಯ ಬಾರದಂತೆ ತಡೆಗಟ್ಟಬಲ್ಲ ಲಸಿಕೆಯಂತೂ ಫಲಕಾರಿ ಆಗುತ್ತಿಲ್ಲ. ಇನ್ನುಳಿದ ಕೊನೆಯ ಪ್ರಯತ್ನ ಏನೆಂದರೆ ಹಸುಗಳ ಭ್ರೂಣದ ಹಂತದಲ್ಲೇ ಇತ್ತೀಚಿನ ಕ್ರಿಸ್ಪ್-ಆರ್ ತಂತ್ರವನ್ನು ಪ್ರಯೋಗಿಸಿ ರೋಗವೇ ಬಾರದಂಥ ತಳಿಗಳನ್ನು ಸೃಷ್ಟಿಸಬೇಕು. ಚೀನಾದಲ್ಲಿ ಅಂಥ ಹೊಸ ತಳಿಯ ಕರುಗಳು ಹುಟ್ಟಿವೆ ಎಂಬ ವರದಿಗಳು ಬರುತ್ತಿವೆ.

ಕ್ಷಯದ ಪರಿಣಾಮ

ಕ್ಷಯರೋಗದ ಲಕ್ಷ್ಮಣಗಳು ಕಂಡುಬಂದಲ್ಲಿ ತಾತ್ಸಾರ ಮಾಡದೆ ಕೂಡಲೇ ಅರ್ಹ ವೈದ್ಯರಿಂದ ಚಿಕಿತ್ಸೆ ಪಡೆಯಬೇಕು. ಸೂಕ್ತ ಚಿಕಿತ್ಸೆ ಪಡೆಯದಿದ್ದಲ್ಲಿ ರೋಗ ಮತ್ತಷ್ಟು ಮಾರಕವಾಗುವ ಸಾಧ್ಯತೆ ಹೆಚ್ಚಿದೆ. ಸರಿಯಾದ ಚಿಕಿತ್ಸೆ ಪಡೆಯದಿದ್ದರೆ ಶ್ವಾಸಕೋಶ, ಮೆದುಳು, ಬೆನ್ನಮೂಳೆ ಭಾಗಗಳಿಗೆ ಹಾನಿಕಾರಕವಾಗುತ್ತದೆ. ಹಾಗಾಗಿ ರೋಗವನ್ನು ಯಾವುದೇ ಹಂತದಲ್ಲಿಯೂ ಕಡೆಗಣಿಸಬಾರದು.

ಪೌಷ್ಠಿಕ ಆಹಾರ ಕೊರತೆಯಿಂದಾಗಿ ದೇಹದ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಇದ್ದರಿಂದ ರೋಗಾಣುಗಳು ಬೇಗನೇ ದೇಹವನ್ನು ಆಕ್ರಮಿಸುಕೊಳ್ಳುತ್ತವೆ.

ರೋಗದ ಬಗೆಗಳು

ಕೆಮ್ಮು, ಜ್ವರ, ತೂಕ ಕಡಿಮೆಯಾಗುವುದು, ಅಶಕ್ತತೆ, ಕಫದಲ್ಲಿ ರಕ್ತ, ರಾತ್ರಿಯಲ್ಲಿ ಬೆವರು, ಎದೆನೋವು, ಹಸಿವಾಗದಿರುವುದು.

ಕಂಡು ಹಿಡಿಯುವ ವಿಧಾನ

ಕಫ ಪರೀಕ್ಷೆ, ಎಕ್ಸ್‌ರೇ ಮತ್ತು ರಕ್ತ ಪರೀಕ್ಷೆಯಿಂದಲೂ ರೋಗವನ್ನು ನಿರ್ಧರಿಸಬಹುದಾಗಿದೆ.

ಧಾತು (ವ್ಯಾಕ್ಸಿನೇಷನ್)ಮತ್ತು ಅದರ ಪರಿಣಾಮ

ರೋಗ ಪರಿಹಾರಕ್ಕಾಗಿ ಔಷಧಿಗಳು

ರಿಫಾಂಪಿಸಿಸ್, ಇತ್ಯಾಂಬ್ಯುಟಾಲ್ ಮತ್ತು ಇಸೋನಿಯಾಝಡ್ಗಳಂತಹ ಔಷದಿ ಗಳಿಂದ ಈ ರೋಗ ವಾಸಿಯಾಗುತ್ತದೆ. ಈಗ ಡಾಟ್ಸ್ ಚಿಕಿತ್ಸಾ ವಿಧಾನದಲ್ಲಿ ಪರಿಣಾಮಕಾರಿ ಐದು ಔಷಧಿಗಳಿದ್ದು, ಕನಿಷ್ಠ 6 ತಿಂಗಳು ತಪ್ಪದೆ ಸೇವಿಸಬೇಕು.

ಭಾರತದಲ್ಲಿ ಕ್ಷಯ

ಉಲ್ಲೇಖ

Tags:

ಕ್ಷಯ ಸೋಂಕು ಹರಡುವ ರೀತಿಕ್ಷಯ ರೋಗ ನಿವಾರಣೆಕ್ಷಯ ಪ್ರಾಣಿಗಳಿಂದ ಸೋಂಕುಕ್ಷಯ ದ ಪರಿಣಾಮಕ್ಷಯ ರೋಗದ ಬಗೆಗಳುಕ್ಷಯ ಕಂಡು ಹಿಡಿಯುವ ವಿಧಾನಕ್ಷಯ ಧಾತು (ವ್ಯಾಕ್ಸಿನೇಷನ್)ಮತ್ತು ಅದರ ಪರಿಣಾಮಕ್ಷಯ ರೋಗ ಪರಿಹಾರಕ್ಕಾಗಿ ಔಷಧಿಗಳುಕ್ಷಯ ಉಲ್ಲೇಖಕ್ಷಯಪುಪ್ಪಸಬ್ಯಾಕ್ಟೀರಿಯರೋಗ

🔥 Trending searches on Wiki ಕನ್ನಡ:

ಹನುಮ ಜಯಂತಿವ್ಯಂಜನಬಾಲ್ಯ ವಿವಾಹಹುಬ್ಬಳ್ಳಿಜ್ವರಸಲಿಂಗ ಕಾಮಮೊದಲನೇ ಅಮೋಘವರ್ಷಧರ್ಮರಾಯ ಸ್ವಾಮಿ ದೇವಸ್ಥಾನಕನ್ನಡ ಅಭಿವೃದ್ಧಿ ಪ್ರಾಧಿಕಾರಭಾರತದ ಮುಖ್ಯ ನ್ಯಾಯಾಧೀಶರುಕುಕ್ಕೆ ಸುಬ್ರಹ್ಮಣ್ಯ ದೇವಾಲಯಹಣ್ಣುಮಾನಸಿಕ ಆರೋಗ್ಯಬೇಲೂರುದಾಸ ಸಾಹಿತ್ಯಮೈಗ್ರೇನ್‌ (ಅರೆತಲೆ ನೋವು)ಪರಮಾಣುವ್ಯಾಪಾರ ಸಂಸ್ಥೆಪಂಪಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಭಾರತೀಯ ರಿಸರ್ವ್ ಬ್ಯಾಂಕ್ಡಿ.ವಿ.ಗುಂಡಪ್ಪಸಮಾಜ ವಿಜ್ಞಾನಪಿ.ಲಂಕೇಶ್ಭಾರತದ ಉಪ ರಾಷ್ಟ್ರಪತಿಭಾರತದ ಗಡಿಗಳು ಮತ್ತು ನರೆ ರಾಜ್ಯಗಳುಭಾರತದ ಸಂವಿಧಾನಭಾರತದ ರಾಷ್ಟ್ರೀಯ ಉದ್ಯಾನಗಳುನುಡಿ (ತಂತ್ರಾಂಶ)ನಾಲ್ವಡಿ ಕೃಷ್ಣರಾಜ ಒಡೆಯರುಬೆಳ್ಳುಳ್ಳಿಟೊಮೇಟೊಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಮಧುಮೇಹನಿರ್ವಹಣೆ ಪರಿಚಯಕನ್ನಡ ಗುಣಿತಾಕ್ಷರಗಳುಬಿ.ಜಯಶ್ರೀವಿಭಕ್ತಿ ಪ್ರತ್ಯಯಗಳುಕಾವೇರಿ ನದಿಛತ್ರಪತಿ ಶಿವಾಜಿಕಂದಸಮುದ್ರಗುಪ್ತಭಾಷೆಬಿಳಿ ರಕ್ತ ಕಣಗಳುಸ್ವಚ್ಛ ಭಾರತ ಅಭಿಯಾನನಾಯಕ (ಜಾತಿ) ವಾಲ್ಮೀಕಿಕ್ಯಾರಿಕೇಚರುಗಳು, ಕಾರ್ಟೂನುಗಳುಮೂಕಜ್ಜಿಯ ಕನಸುಗಳು (ಕಾದಂಬರಿ)ತಾಳಗುಂದ ಶಾಸನಪರಿಸರ ವ್ಯವಸ್ಥೆಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಬಿ. ಎಂ. ಶ್ರೀಕಂಠಯ್ಯಕವಿಗಳ ಕಾವ್ಯನಾಮಭಾರತೀಯ ಸಂಸ್ಕೃತಿಕೃಷಿಇಂಡೋನೇಷ್ಯಾಶ್ರೀಧರ ಸ್ವಾಮಿಗಳುಕನ್ನಡದಲ್ಲಿ ಸಣ್ಣ ಕಥೆಗಳುಮುಹಮ್ಮದ್ಆನೆಸಾವಿತ್ರಿಬಾಯಿ ಫುಲೆದ್ವಿರುಕ್ತಿಶ್ರೀವಿಜಯಮೈಸೂರು ಅರಮನೆಭಾರತಅನುನಾಸಿಕ ಸಂಧಿಗರ್ಭಧಾರಣೆಕೈವಾರ ತಾತಯ್ಯ ಯೋಗಿನಾರೇಯಣರುನ್ಯೂಟನ್‍ನ ಚಲನೆಯ ನಿಯಮಗಳುಉಚ್ಛಾರಣೆಕನ್ನಡ ಸಾಹಿತ್ಯ ಪರಿಷತ್ತುರಕ್ತದೊತ್ತಡಮಾನವ ಅಸ್ಥಿಪಂಜರಮಾವುಝಾನ್ಸಿ ರಾಣಿ ಲಕ್ಷ್ಮೀಬಾಯಿಹಯಗ್ರೀವ🡆 More