ಅಂಜನಿ ಪುತ್ರ: ಹರ್ಷ ನಿರ್ದೇಶನದ ಕನ್ನಡ ಚಲನಚಿತ್ರ

ಅಂಜನಿ ಪುತ್ರ ಎ.

ಹರ್ಷ ನಿರ್ದೇಶಿಸಿದ ಮತ್ತು ಎಮ್.ಎನ್. ಕುಮಾರ್ ನಿರ್ಮಿಸಿದ ಭಾರತೀಯ ಕನ್ನಡ ಮಸಾಲಾ ಚಲನಚಿತ್ರ. ಈ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಪಿ. ರವಿಶಂಕರ್, ರಮ್ಯಾ ಕೃಷ್ಣನ್, ಮುಖೇಶ್ ತಿವಾರಿ ಮತ್ತು ಚಿಕ್ಕಣ್ಣ ಪೋಷಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ರವಿ ಬಸ್ರೂರ್ ಅವರು ಚಿತ್ರಕ್ಕಾಗಿ ಧ್ವನಿಪಥವನ್ನು ರಚಿಸಿದ್ದಾರೆ. ಛಾಯಾಗ್ರಹಣವನ್ನು ಸ್ವಾಮಿ ಜೆ ಮಾಡಿದ್ದಾರೆ ಹಾಗೂ ದೀಪು ಎಸ್.ಕುಮಾರ್ ಚಲನಚಿತ್ರ ಸಂಕಲನ ನಿರ್ವಹಿಸಿದರು. ಈ ಚಿತ್ರ ನಿರ್ದೇಶಕ ಹರಿ ಅವರ ತಮಿಳು ಚಲನಚಿತ್ರ ಪೂಜಾಯಿ (2014) ಚಿತ್ರದ ರಿಮೇಕ್ ಆಗಿದೆ.

ಅಂಜನಿ ಪುತ್ರ
ನಿರ್ದೇಶನಎ. ಹರ್ಷ
ನಿರ್ಮಾಪಕಎಮ್.ಎನ್ ಕುಮಾರ್
ಚಿತ್ರಕಥೆಎ. ಹರ್ಷ
ಕಥೆಹರಿ
ಆಧಾರಪೂಜೈ
ಹರಿ
ಪಾತ್ರವರ್ಗಪುನೀತ್ ರಾಜ್ ಕುಮಾರ್
ರಶ್ಮಿಕಾ ಮಂದಣ್ಣ
ರವಿ ಬಸ್ರೂರ್
ಸಂಗೀತರವಿ ಬಸ್ರೂರ್
ಛಾಯಾಗ್ರಹಣಸ್ವಾಮಿ ಜೆ
ಸಂಕಲನದೀಪು ಎಸ್.ಕುಮಾರ್
ಸ್ಟುಡಿಯೋಎಮ್.ಎನ್.ಕೆ ಮೂವೀಸ್
ಜಯಶ್ರೀದೇವಿ ಪ್ರೊಡಕ್ಶನ್
ವಿತರಕರುಎಮ್.ಎನ್ ಕುಮಾರ್
ಬಿಡುಗಡೆಯಾಗಿದ್ದು
  • 21 ಡಿಸೆಂಬರ್ 2017 (2017-12-21)
ಅವಧಿ೨ ಘಂಟೆ ೧೯ ನಿಮಿಷ
ದೇಶಭಾರತ
ಭಾಷೆಕನ್ನಡ

ಈ ಚಲನಚಿತ್ರವನ್ನು ಅಧಿಕೃತವಾಗಿ ಫೆಬ್ರವರಿ 6, 2017 ರಂದು ಪ್ರಾರಂಭಿಸಲಾಯಿತು ಮತ್ತು ಪ್ರಧಾನ ಛಾಯಾಗ್ರಹಣವು ಒಂದು ವಾರದ ನಂತರ ಪ್ರಾರಂಭವಾಯಿತು. ಈ ಚಿತ್ರದ ಟ್ರೈಲರ್ ಅನ್ನು 2017 ರ ನವೆಂಬರ್ 24 ರಂದು ಪುನೀತ್ ರಾಜ್ ಕುಮಾರ್ ಅವರ ಪಿಆರ್ಕೆ ಆಡಿಯೊ ಕಂಪನಿಯಲ್ಲಿ ಬಿಡುಗಡೆಗೊಂಡಿತು.

ಈ ಚಲನಚಿತ್ರವನ್ನು 21 ಡಿಸೆಂಬರ್ 2017 ರಂದು ಕರ್ನಾಟಕದಲ್ಲಿ ಬಿಡುಗಡೆ ಮಾಡಲಾಯಿತು.

ಕಥಾವಸ್ತು

ತಮಿಳು ಚಲನಚಿತ್ರ ಪೂಜಾಯಿ ಚಿತ್ರದ ರಿಮೇಕ್ ಆಗಿರುವ ಆಂಜನಿಪುತ್ರ, ರಾಜ ಕುಟುಂಬಕ್ಕೆ ಸೇರಿದ ವಿರಾಜ್ ಎಂಬ ವ್ಯಕ್ತಿ ಬಗ್ಗೆ ಈ ಚಲನಚಿತ್ರದ ಕಥಾವಸ್ತು. ಅಂಜನಿ ಪುತ್ರ ಕೌಟಂಬಿಕ ಸನ್ನಿವೇಶ ಇರುವ ಪ್ರಣಯ ಚಿತ್ರ. ಅವನ ತಂದೆಯು ಮೃತಪಟ್ಟ ನಂತರ ಅವರು ತಮ್ಮ ತಂದೆಯ ಜವಳಿ ಉದ್ಯಮವಾದ ರಾಜ್ ಗ್ರೂಪ್ ಆಫ್ ಇಂಡಸ್ಟ್ರೀಸ್ನ ಮಾಲೀಕರಾದರು. ಒಮ್ಮೆ ಕುಟುಂಬದಲ್ಲಿ ಆದ ಸಮಾರಂಬದಲ್ಲಿ ವಿರಾಜ್ ನ ಚಿಕ್ಕಪ್ಪನ ಮಗಳು, ಅವನ ಸೋದರ ಸಂಬಂಧಿ, ಕೋಣೆಯ ಒಳಗಡೆ ಅವಳು ವಿರಾಜನ್ನು ಮದುವೆಯಾಗಬೇಕೆಂದು ಬಯಸುತ್ತಾಳೆ ಎಂದು ಹೇಳುತ್ತಾಳೆ. ಅವಳನ್ನು ತಡೆಯಲು ಪ್ರಯತ್ನಿಸುವಾಗ, ಅವಳ ಸೀರೆ ವಿರಾಜನ ಕೈಯಲ್ಲಿ ಬರುತ್ತೆ. ಆಗ, ಆಕೆಯ ತಂದೆ, ವಿರಾಜ ಆಕೆಗೆ ಕಿರುಕುಳ ನೀಡುತ್ತಿದ್ದಾಳೆಂದು ವಿರಾಜನ ಅಮ್ಮನ ಹತ್ತಿರ ಹೇಳುತ್ತಾರೆ. ಅದೇ ಸಮಯದಲ್ಲಿ ವಿರಾಜನ ತಾಯಿ ಬಂದು ವಿರಾಜನ್ನು ಮನೆ ಇಂದ ಹೊರಗೆ ಹಾಕುತ್ತಾರೆ. ಅಂಜನಾ ದೇವಿ ತನ್ನ ಮಗ ವೀರಾಜ್ ಅನ್ನು ತುಂಬಾ ಪ್ರೀತಿಸುತ್ತಾರೆ. ಅವನ ಒಳ್ಳೆತನ ಬಗ್ಗೆ ಎಲ್ಲರಿಗೂ ಗೊತ್ತಿದ್ದರೂ, ಅವನು ಮಾಡದ ತಪ್ಪಿಗೆ ಅಂಜನಾ ದೇವಿ ಹಿಂದೆ ಮುಂದೆ ನೋಡದೆ ಮನೆಯಿಂದ ಹೊರಹಾಕುತ್ತಾರೆ. ವಿರಾಜ್ ಒಬ್ಬ ಪ್ರಾಮಾಣಿಕನಾಗಿದ್ದರಿಂದ, ತನ್ನ ಅಮ್ಮನ ಮಾತಿಗೆ ವಿಧೇಯವಾಗಿ , ಮನೆಯಿಂದ ಹೊರನಡೆಯುತ್ತಾನೆ.

ಚಲನಚಿತ್ರದ ನಾಯಕ ಕಷ್ಟದಲ್ಲಿ ಇರುವವರಿಗೆ ಸಾಲ ನೀಡುವ ಒಬ್ಬ ಒಳ್ಳೆಯ ಹುಡುಗ. ಅವನು ಪ್ರೀತಿಸುವ ಹುಡುಗಿ ಇವನ ದೈನಂದಿನ ಜೀವನ ಶೈಲಿಯನ್ನು ಹಾಗೂ ಆರ್ಥಿಕ ಸ್ಥಿತಿಯನ್ನು ನೋಡಿ ಅವನ ಪ್ರೀತಿಯನ್ನು ನಿರಾಕರಿಸುತ್ತಾಳೆ. ಆಗ ನಾಯಕನ ಗೆಳೆಯ, ವಿರಾಜ್ ನ ರಾಜಮನೆತನದ ಹಿನ್ನೆಲೆ ಗೀತಾಳೊಡನೆ ಬಹಿರಂಗಪಡಿಸುತ್ತಾನೆ. ಇಲ್ಲಿ ನಾಯಕ ಕೇವಲ ತನ್ನ ಮನೆಯವರ ತಪ್ಪುಗ್ರಹಿಕೆ ಇಂದ ಮನೆ ಇಂದ ದೂರವಿರಬೇಕಾಗಿ ಇರುತ್ತದೆ. ನಂತರ ತನ್ನ ಕುಟುಂಬದ ಪುನರ್ಮಿಲನದಿಂದ, ವಿರಾಜ ತನ್ನ ಮನೆಯವರ ರಕ್ಶಣೆಗಾಗಿ ಖಳನಾಯಕನೊಟ್ಟಿಗೆ ಹೋರಾಡುತ್ತಾನೆ.

ಪಾತ್ರವರ್ಗ

ಸಂಗೀತ

ರವಿ ಬಸ್ರೂರ್ ಈ ಚಲನಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಈ ಚಲನಚಿತ್ರದ ಸಂಗೀತವನ್ನು ಪುನೀತ್ ರಾಜ್‍ಕುಮಾರ್ (ನಟ) ಒಡೆತನದ ಪಿ.ಆರ್.ಕೆ ಆಡಿಯೊ ಖರೀದಿಸಿತ್ತು. ಈ ಚಲನಚಿತ್ರದ ಸಂಗೀತವನ್ನು ೨೪ ನವೆಂಬರ್ ೨೦೧೭ ರಂದು ಪಿ.ಆರ್.ಕೆ ಆಡಿಯೊ ಬಿಡುಗಡೆಗೊಳಿಸಿತು.

ಸಂ.ಹಾಡುಸಾಹಿತ್ಯಗಾಯಕಸಮಯ
1."ಅಂಜನಿ ಪುತ್ರ"ಕಿನ್ನಲ್ ರಾಜ್ರವಿ ಬಸ್ರೂರ್, ಶ್ರೀನಿವಾಸ್, ಮೋಹನ್೨:೩೩
2."ಮಾಗರಿಯ"ಚೆತನ್ ಕುಮಾರ್ಸಚಿನ್ ಬಸ್ರೂರ್೩:೦೪
3."ಗೀತ"ರವಿ ಬಸ್ರೂರ್ವಿಜಯ್ ಪ್ರಕಾಶ್, ಸುಪ್ರಿಯ ಲೋಹಿತ್೩:೩೧
4."೧೨೩೪ ಶಿಲ್ಲೆ ಹೊಡಿ"ವಿ. ನಾಗೇಂದ್ರ ಪ್ರಸಾದ್ಪುನೀತ್ ರಾಜ್‍ಕುಮಾರ್ (ನಟ), ಚಂದನ್ ಶೆಟ್ಟಿ೩:೩೩
5."ಚಂದ ಚಂದ"ಪ್ರಮೊದ್ ಮರವಂತೆರವಿ ಬಸ್ರೂರ್, ಅನುರಾಧ ಭಟ್೩:೧೯
6."ಸಾಹುಕಾರಾ"ಕೆ. ಕಲ್ಯಾಣ್ವಿಜಯ್ ಪ್ರಕಾಶ್೩:೦೦
ಒಟ್ಟು ಸಮಯ:೧೯:೦೫

ಉಲ್ಲೇಖಗಳು

ಕೋಂಡಿಗಳು

ಅಧಿಕೃತ ವೆಬ್ಸೈಟ್ Archived 2018-04-23 ವೇಬ್ಯಾಕ್ ಮೆಷಿನ್ ನಲ್ಲಿ.

Tags:

ಅಂಜನಿ ಪುತ್ರ ಕಥಾವಸ್ತುಅಂಜನಿ ಪುತ್ರ ಪಾತ್ರವರ್ಗಅಂಜನಿ ಪುತ್ರ ಸಂಗೀತಅಂಜನಿ ಪುತ್ರ ಉಲ್ಲೇಖಗಳುಅಂಜನಿ ಪುತ್ರ ಕೋಂಡಿಗಳುಅಂಜನಿ ಪುತ್ರw:Harsha (director)ಚಿಕ್ಕಣ್ಣಪುನೀತ್ ರಾಜ್‍ಕುಮಾರ್ (ನಟ)ರಶ್ಮಿಕಾ ಮಂದಣ್ಣ

🔥 Trending searches on Wiki ಕನ್ನಡ:

ಕರ್ನಾಟಕ ವಿಧಾನ ಪರಿಷತ್ರಚಿತಾ ರಾಮ್ರನ್ನಹಲ್ಮಿಡಿಗೋತ್ರ ಮತ್ತು ಪ್ರವರ೨೦೨೪ರಲ್ಲಿ ಕೆನಡಾದ ಕ್ರಿಕೆಟ್ ತಂಡದ ಅಮೇರಿಕ ಸಂಯುಕ್ತ ಸಂಸ್ಥಾನ ಪ್ರವಾಸಕರ್ನಾಟಕದ ನದಿಗಳುಶಾತವಾಹನರುವಿಷ್ಣುವರ್ಧನ್ (ನಟ)ಶಬರಿಜಯಂತ ಕಾಯ್ಕಿಣಿಪಂಪ ಪ್ರಶಸ್ತಿಕನ್ನಡ ಸಾಹಿತ್ಯ ಪ್ರಕಾರಗಳುಅಂಚೆ ವ್ಯವಸ್ಥೆಮಲೇರಿಯಾದ್ವಿರುಕ್ತಿಕಂಸಾಳೆಹೊಯ್ಸಳ ವಿಷ್ಣುವರ್ಧನಶ್ರೀ ರಾಘವೇಂದ್ರ ಸ್ವಾಮಿಗಳುಸತ್ಯ (ಕನ್ನಡ ಧಾರಾವಾಹಿ)ಪ್ರಾಥಮಿಕ ಶಿಕ್ಷಣಕೃಷ್ಣರಾಜಸಾಗರಶ್ರೀ ಸಿದ್ದೇಶ್ವರ ಸ್ವಾಮಿಜಿಗಳುಮಧುಮೇಹಮಾನವ ಅಸ್ಥಿಪಂಜರಹಾಗಲಕಾಯಿಹಣ್ಣುಹುಲಿಮಳೆಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಸ್ವಾಮಿ ವಿವೇಕಾನಂದ೨೦೨೪ ಸಂಯುಕ್ತ ಅರಬ್ ಸಂಸ್ಥಾನ ತ್ರಿ-ರಾಷ್ಟ್ರ ಸರಣಿ (ಸುತ್ತು ೨)ಸಂಸ್ಕೃತ ಸಂಧಿವಿಶ್ವದ ಅದ್ಭುತಗಳುಹತ್ತಿಬಿಜಾಪುರ (ಲೋಕ ಸಭೆ ಚುನಾವಣಾ ಕ್ಷೇತ್ರ)ಕವಿಜ್ಯೋತಿಬಾ ಫುಲೆನರೇಂದ್ರ ಮೋದಿಮೌರ್ಯ ಸಾಮ್ರಾಜ್ಯಕರ್ನಾಟಕದ ಮಹಾನಗರಪಾಲಿಕೆಗಳುಕೇಂದ್ರಾಡಳಿತ ಪ್ರದೇಶಗಳುಸಾಲ್ಮನ್‌ಸಮುದ್ರಗುಪ್ತಭಾರತದ ಗಡಿಗಳು ಮತ್ತು ನರೆ ರಾಜ್ಯಗಳುವರದಕ್ಷಿಣೆಉಪೇಂದ್ರ (ಚಲನಚಿತ್ರ)ಅಮೇರಿಕ ಸಂಯುಕ್ತ ಸಂಸ್ಥಾನಗಾದೆ ಮಾತುಪರೀಕ್ಷೆಶೈಕ್ಷಣಿಕ ಸಂಶೋಧನೆಪಾಲಕ್ಜಾತ್ಯತೀತತೆಮೂಲಭೂತ ಕರ್ತವ್ಯಗಳುಗಿಡಮೂಲಿಕೆಗಳ ಔಷಧಿದುಶ್ಯಲಾರಂಗಭೂಮಿಷಟ್ಪದಿಸಹಕಾರಿ ಸಂಘಗಳುಮಾನಸಿಕ ಆರೋಗ್ಯಒನಕೆ ಓಬವ್ವರಾಜಧಾನಿಗಳ ಪಟ್ಟಿಬಸವ ಜಯಂತಿಕಲಬುರಗಿಬಹುವ್ರೀಹಿ ಸಮಾಸಕೆ. ಅಣ್ಣಾಮಲೈಮಳೆಗಾಲಮಂಗಳ (ಗ್ರಹ)ಭಾರತ ಸಂವಿಧಾನದ ಪೀಠಿಕೆಗೊರೂರು ರಾಮಸ್ವಾಮಿ ಅಯ್ಯಂಗಾರ್ಕರ್ನಾಟಕ ಸ್ವಾತಂತ್ರ್ಯ ಚಳವಳಿಪಾಕಿಸ್ತಾನಕನ್ನಡ ವ್ಯಾಕರಣಭಕ್ತಿ ಚಳುವಳಿಜಿ.ಎಸ್.ಶಿವರುದ್ರಪ್ಪಹನುಮಾನ್ ಚಾಲೀಸಛತ್ರಪತಿ ಶಿವಾಜಿಬಿಳಿಗಿರಿರಂಗನ ಬೆಟ್ಟ🡆 More