ಒನಕೆ ಓಬವ್ವ

ಒನಕೆ ಓಬವ್ವ ೧೮ನೆಯ ಶತಮಾನದ ಚಿತ್ರದುರ್ಗದ ಕೋಟೆಯ ಪಾಳೆಗಾರನಾಗಿದ್ದ ಮದಕರಿ ನಾಯಕನ ಕೋಟೆಯ ಕಾವಲುಗಾರ ಕಹಳೆ ಮದ್ದಹನುಮಪ್ಪನ ಹೆಂಡತಿ.

ಇವರನ್ನು ಕನ್ನಡ ನಾಡಿನ ವೀರವನಿತೆಯರಾದ ಕಿತ್ತೂರು ಚೆನ್ನಮ್ಮ,ರಾಣಿ ಅಬ್ಬಕ್ಕ ರ ಸಾಲಿನಲ್ಲಿ ಪರಿಗಣಿಸಲಾಗುತ್ತದೆ.

ಒನಕೆ ಓಬವ್ವ

ಹೈದರಾಲಿಯು ಚಿತ್ರದುರ್ಗದ ಮೇಲೆ ಹಟಾತ್ತಾಗಿ ಆಕ್ರಮಣ ಮಾಡಿದಾಗ ಓಬವ್ವೆಯು ತನ್ನ ಒನಕೆಯನ್ನು ಅಸ್ತ್ರವಾಗಿ ಇಟ್ಟುಕೊಂಡು ಶತ್ರುಗಳನ್ನು ಎದುರಿಸಿದ್ದಳು.ನೂರಾರು ಶತ್ರು ಸೈನಿಕರನ್ನು ತನ್ನ ಒನಕೆಯಿಂದಲೇ ಕೊಂದು ಕೊನೆಯಲ್ಲಿ ಎದುರಾಳಿಯು ಬೆನ್ನಹಿಂದೆ ಬಂದದ್ದನ್ನು ಗಮನಿಸಲಾಗದೆ ಶತ್ರುವಿನ ಕತ್ತಿಗೆ ಬಲಿಯಾದರು. ಅಂದಿನಿಂದ ಅವರಿಗೆ ಒನಕೆ ಓಬವ್ವ ಎಂದು ಬಿರುದು ಸಿಕ್ಕಿತು.

ಚಿತ್ರದುರ್ಗದಲ್ಲಿನ ಓಬವ್ವ ಸ್ಮರಣೆ

ಒನಕೆ ಓಬವ್ವರ ಹೆಸರು ಚಿತ್ರದುರ್ಗದ ಇತಿಹಾಸದಲ್ಲಿ ಮರೆಯಲಾಗದ್ದು. ಅವರನ್ನು ಕರ್ನಾಟಕದ ವೀರವನಿತೆಯರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಚಿತ್ರದುರ್ಗದ ಆಟದ ಕ್ರೀಡಾಂಗಣಕ್ಕೆ ಒನಕೆ ಓಬವ್ವ ಕ್ರೀಡಾಂಗಣ ಎಂದು ಅವರ ಹೆಸರನ್ನಿಟ್ಟು ಗೌರವಿಸಲಾಗಿದೆ. ಚಿತ್ರದುರ್ಗದ ಕೋಟೆಯಲ್ಲಿ ಓಬವ್ವ ಹೈದರಾಲಿಯ ಸೈನಿಕರನ್ನು ಸೋಲಿಸಿದ ಕಿಂಡಿಯನ್ನು ಒನಕೆ ಓಬವ್ವನ ಕಿಂಡಿ ಅಥವಾ ಒನಕೆ ಕಿಂಡಿ ಎಂದು ಕರೆಯಲಾಗುತ್ತದೆ.

ಕನ್ನಡ ಚಿತ್ರರಂಗದಲ್ಲಿ ಓಬವ್ವ ಸ್ಮರಣೆ

ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು ಚಿತ್ರದಲ್ಲಿನ ಪ್ರಸಿದ್ಧ ಹಾಡಿನಲ್ಲಿ ಅವರ ವೀರೋಚಿತ ಪ್ರಯತ್ನವನ್ನು ಚಿತ್ರಿಸಲಾಗಿದೆ. ಈ ಚಿತ್ರದಲ್ಲಿ ನಟಿ ಜಯಂತಿ (ನಟಿ) ಅವರು ಓಬವ್ವನ ಪಾತ್ರ ಮಾಡಿದ್ದರು. ೨೦೧೯ರಲ್ಲಿ ಚಿತ್ರದುರ್ಗದ ಒನಕೆ ಓಬವ್ವ ಎನ್ನುವ ಸಿನಿಮಾದಲ್ಲಿ ತಾರಾ ಅನುರಾಧಾ ಅವರು ಒನಕೆ ಓಬವ್ವನಾಗಿ ಅಭಿನಯಿಸಿದ್ದಾರೆ.

ಇವನ್ನೂ ನೋಡಿ

ಕಿತ್ತೂರು ಚೆನ್ನಮ್ಮ ರಾಣಿ ಅಬ್ಬಕ್ಕ [[ವರ್ಗ:]]

Tags:

ಒನಕೆ ಓಬವ್ವ ಒನಕೆ ಓಬವ್ವ ಚಿತ್ರದುರ್ಗದಲ್ಲಿನ ಓಬವ್ವ ಸ್ಮರಣೆಒನಕೆ ಓಬವ್ವ ಕನ್ನಡ ಚಿತ್ರರಂಗದಲ್ಲಿ ಓಬವ್ವ ಸ್ಮರಣೆಒನಕೆ ಓಬವ್ವ ಇವನ್ನೂ ನೋಡಿಒನಕೆ ಓಬವ್ವಕಿತ್ತೂರು ಚೆನ್ನಮ್ಮಚಿತ್ರದುರ್ಗಮದಕರಿ ನಾಯಕರಾಣಿ ಅಬ್ಬಕ್ಕ

🔥 Trending searches on Wiki ಕನ್ನಡ:

ದೇವರ/ಜೇಡರ ದಾಸಿಮಯ್ಯರಚಿತಾ ರಾಮ್ರಾಜು ಅನಂತಸ್ವಾಮಿಬಹಮನಿ ಸುಲ್ತಾನರುಬಾಲ ಗಂಗಾಧರ ತಿಲಕಮಂಜುಳಕ್ರಿಕೆಟ್ಭಾರತದಲ್ಲಿನ ಚುನಾವಣೆಗಳುವಾಟ್ಸ್ ಆಪ್ ಮೆಸ್ಸೆಂಜರ್ನೈಲ್ವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಅಮರ್ (ಚಲನಚಿತ್ರ)ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮನೀತಿ ಆಯೋಗಕೆ. ಎಸ್. ನಿಸಾರ್ ಅಹಮದ್ವಚನ ಸಾಹಿತ್ಯಸಾಮ್ರಾಟ್ ಅಶೋಕಮಾಸಕೆ. ಎಸ್. ನರಸಿಂಹಸ್ವಾಮಿಸಂಗೊಳ್ಳಿ ರಾಯಣ್ಣಕರ್ನಾಟಕದ ವಾಸ್ತುಶಿಲ್ಪಭಾರತೀಯ ನದಿಗಳ ಪಟ್ಟಿತಿರುಗುಬಾಣಅಳೆಯುವ ಸಾಧನಬ್ರಹ್ಮಛಂದಸ್ಸುಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗರೇಣುಕಅಕ್ಬರ್ಕಲ್ಪನಾಶ್ರೀವಿಜಯಮರಾಠಾ ಸಾಮ್ರಾಜ್ಯಭಾರತದ ಇತಿಹಾಸಜನಪದ ಕಲೆಗಳುಉಪೇಂದ್ರ (ಚಲನಚಿತ್ರ)ಚೆಂಗಲರಾಯ ರೆಡ್ಡಿಕರ್ನಾಟಕದಲ್ಲಿ ಜೈನ ಧರ್ಮಕೇಂದ್ರ ಲೋಕ ಸೇವಾ ಆಯೋಗಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆದೇವಸ್ಥಾನಭಾರತದ ಸ್ವಾತಂತ್ರ್ಯ ದಿನಾಚರಣೆವಚನಕಾರರ ಅಂಕಿತ ನಾಮಗಳುಸುಮಲತಾಮಂಗಳ (ಗ್ರಹ)ಮಿಂಚುಸಂಸ್ಕಾರಜಾಗತೀಕರಣಭಾರತ ರತ್ನಏಕರೂಪ ನಾಗರಿಕ ನೀತಿಸಂಹಿತೆಒಗಟುದೀಪಾವಳಿಕೈಗಾರಿಕೆಗಳುಗವಿ ಗಂಗಾಧರೇಶ್ವರ ದೇವಾಲಯ, ಬೆಂಗಳೂರುಮಾರುಕಟ್ಟೆಗ್ರಂಥ ಸಂಪಾದನೆಶ್ರೀ. ನಾರಾಯಣ ಗುರುಅಸಹಕಾರ ಚಳುವಳಿಶಿವರಾಮ ಕಾರಂತರಕ್ತಯೇಸು ಕ್ರಿಸ್ತವಯನಾಡು ಜಿಲ್ಲೆಶ್ರೀ ರಾಘವೇಂದ್ರ ಸ್ವಾಮಿಗಳುಕೊಡಗುವಿಕಿಪೀಡಿಯ ಪ್ರಚಲಿತ ವಿದ್ಯಮಾನಗಳುವೇದಹಾಸನ ಜಿಲ್ಲೆಜಯಮಾಲಾಮಧುಬನಿ ಕಲೆಕರ್ನಾಟಕ ಜನಪದ ನೃತ್ಯಕ್ರೀಡೆಗಳುಪ್ರಾಥಮಿಕ ಶಿಕ್ಷಣಕುಟುಂಬಭಗವದ್ಗೀತೆಮನೆಅಲಂಕಾರಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ🡆 More