ಸಂಗೀತ

ಎಲ್ಲ ಕಲೆಗಳಲ್ಲು ಎಲ್ಲರು ರಮಿಸುವ ಕಲೆಯೆಂದರೆ ಸಂಗೀತ.

ಎಲ್ಲ ಹಾಡುಗಳ ಮೂಲ ಸಂಗೀತ. ಚರಿತ್ರೆಯನ್ನು ನೋಡಿದರೆ, ಸಂಗೀತವು ಉತ್ಪತ್ತಿಯಾದ ಬಗ್ಗೆ ಬಹಳ ಊಹೆಗಳಿವೆ. ಅದರ ಮೂಲ ತಿಳಿಯುವುದು ಅಸಾಧ್ಯ.

ಸಂಗೀತ
ಭಾರತೀಯ ಸಂಗೀತ

ಇತಿಹಾಸ

ಸಾಮವೇದದಲ್ಲಿ ಸಂಗೀತದ ಕುರುಹುಗಳನ್ನು ಕಾಣಬಹುದು. ಸಂಗೀತವು ಮೊದಲು ದೇವ ದೇವತೆಗಳ ಮೇಲೆ ಕುರಿತಿದ್ದವು. ೧೨ ನೆ ಮತ್ತು ೧೩ ನೆ ಶತಮಾನಗಳಲ್ಲಿ ಮೊಘಲರು ಉತ್ತರ ಭಾರತವನ್ನು ಆಳಲು ಪ್ರಾರಂಭಿಸಿದ ನಂತರ ಭಾರತೀಯ ಸಂಗೀತದಲ್ಲಿ ಎರಡು ಬೇರೆ ಬೇರೆ ಪದ್ಧತಿಗಳು ಉಂಟಾದವು. ಅವು ಶಾಸ್ತ್ರೀಯ ಸಂಗೀತ ಹಾಗೂ ಹಿಂದುಸ್ತಾನಿ ಸಂಗೀತವಾಗಿ ಮುಖ್ಯಗೊಂಡವು. ಸಪ್ತ ಸ್ವರಗಳು, ರಾಗಗಳು, ತಾಳಗಳು ಇವೆಲ್ಲ ಸಂಗೀತದ ಶಾಸ್ತ್ರಗಳು. ಕೀರ್ತನೆಗಳನ್ನು ಹಾಗು ವರ್ಣಗಳನ್ನು ಕೃತಿಗಳೆನ್ನುತ್ತಾರೆ. ರಾಗ ಆಲಾಪನೆ, ನೆರವಲ್‍, ಕಲ್ಪನಾಸ್ಪರ, ತಾನ, ರಾಗ ತಾನ ಪಲ್ಲವಿಯನ್ನು ಮನೋದರ್ಮ ಸಂಗೀತವೆನ್ನುತ್ತಾರೆ.

ಸಂಗೀತಗಾರರು

ನಮ್ಮ ದೇಶದಲ್ಲಿ ಪ್ರಮುಖವಾದ ಸಂಗೀತಗಾರರು ಬಹಳಷ್ಟು ಜನರು ಇದ್ದಾರೆ. ಅವರಲ್ಲಿ ತುಂಬಾ ಹೆಸರು ಗಳಸಿದ್ದವರಲ್ಲಿ ಒಬ್ಬರು ಶ್ರೀ ಪುರಂದರದಾಸರು. ಅವರು "ಕರ್ನಾಟಕ ಸಂಗೀತ ಪಿತಾಮಹ" ಎಂದು ಹೆಸರಾದರು. ಅವರು ೨ ಲಕ್ಶಕ್ಕೂ ಹೆಚ್ಚು ಹಾಡುಗಳನ್ನು ರಚಿಸಿದ್ದಾರೆ. ಅವರು ರಾಗ ಮಾಯಮಾಳವಗೌಳವನ್ನು ಪರಿಚಯಿಸಿದರು. ಶ್ರೀ ಪುರಂದರದಾಸರು, ಶ್ರೀಪಾದರಾಯರು, ಕನಕದಾಸರು, ಜಗನ್ನಾಥದಾಸರು ಮತ್ತು ವಿಜಯದಾಸರು ಸಂಗೀತದ ಮೂಲಕ ಭಕ್ತಿಮಾರ್ಗವನ್ನು ಬೋಧಿಸಿದವರು.

ಭಾಷೆಗಳು

ಕನ್ನಡ ಭಾಷೆಯ ಜೊತೆಗೆ ತೆಲುಗು, ಮಲಯಾಲಂ‍, ಸಂಸ್ಕ್ರುತ, ತಮಿಳು, ಮತ್ತು ಹಲವಾರು ಭಾಷೆಗಳಲ್ಲಿಯೂ ಸಹ ಸಂಗೀತವನ್ನು ಅಳವಡಿಸಿಕೊಂಡಿದ್ದಾರೆ.

ವಾದ್ಯಗಳು

ಶ್ರುತಿಗಾಗಿ ತಂಬೂರಿ, ವೀಣೆ, ಪಿಟೀಲು (ವಯೊಲಿನ್‍), ಕೊಳಲು, ಮೃದಂಗ, ಘಟವನ್ನು ಉಪಯೋಗಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಮ್ಯಾಂಡೋಲಿನ್‍, ವಿಚಿತ್ರವೀಣೆ, ಸ್ಯಾಕ್ಸೋಫೋನ್‍ಗಳು ಬಳಸುತ್ತಿದ್ದಾರೆ.

ಸಂಯೋಜನೆಗಳು

ಸಂಗೀತದಲ್ಲಿ ಹಲವಾರು ಸಂಯೋಜನೆಗಳಿವೆ. ಮೊದಲಾಗಿ ಗೀತೆಗಳು. ನಂತರ ಲಕ್ಷಣ ಗೀತೆಗಳು. ಗೀತೆಗಳ ಹಾಡ್ಬರಗಗಳಲ್ಲಿ ರಾಗಗಳನ್ನು ವಿವರಿಸಿದ್ದಾರೆ. ಆನಂತರ ರೂಪಗಳು ಇನ್ನೂ ಪ್ರಗತಿಯಾಗಿದೆ. ಜಂಟಿ ಸ್ವರಗಳು, ಸ್ವರ ಜಂಟಿಗಳು, ತನ ವರ್ಣಗಳನ್ನು ಮುದ್ದುಸ್ವಮಿ ದಿಕ್ಶಿತರರು ರಚನೆಯಾಗಿದ್ದವು. ಅವರು ಹಲವಾರು ಸುಂದರವಾದ ರಾಗಮಲಿಕಗಳನ್ನು ಸಂಯೋಜಿಸಿದ್ದಾರೆ. ಅದರಲ್ಲಿ ಹಲವಾರು ವಿಷಯಾಧಾರಿತವಾದುದು. ಅವುಗಳ ನಡುವೆ ಗಮನಾರ್ಹವಾದುದು ದಶಾವತಾರ, ಕಮಲಾಂಬಿಕ, ಹಾಗು ಚದುರ್‌ದಾಸ ರಾಗಮಾಲಿಕಗಳು. ಇನ್ನು ಹಲವಾರು ಸಂಗೀತದ ನಿಯಮಗಳು ಹಾಗು ಕ್ರಮಗಳಿವೆ.

ಸಂಗೀತದ ಮುಖ್ಯ ಪಾತ್ರ

ಸಂಗೀತ ತಾಳದ ಮೂಲಕ ಭರತನಾಟ್ಯದ ಕ್ರಮಗಳನ್ನು ಸ್ತಾಪಿಸಿ ಹೆಜ್ಜೆಯ ಹಾಕುತ್ತಾರೆ. ಅದರಿಂದ ರೋಗಗಳನ್ನೂ ಸಹ ನಿವಾರಿಸಬಹುದು ಎಂದು ಹೇಳುತ್ತಾರೆ. ಅದನ್ನು ಪ್ರಾಯೋಗಿಕವಾಗಿಯೂ ನಿರೂಪಿಸಲಾಗಿದೆ. ಸಂಗೀತದ ಆಳವನ್ನು ತಿಳಿಯುವುದಕ್ಕೆ ಒಂದು ಜನ್ಮ ಸಾಲದೆಂದು ಹೇಳಬಹುದು. ಅದನ್ನು ಅರಿಯಲು ಅಷ್ಟು ಸುಲಭವಲ್ಲ. ಸಾರಂಶವಾಗಿ ಹೇಳಬೇಕೆಂದರೆ, ಸಂಗೀತವು ಅನಂತವಾದುದು.

Tags:

ಸಂಗೀತ ಇತಿಹಾಸಸಂಗೀತ ಗಾರರುಸಂಗೀತ ಭಾಷೆಗಳುಸಂಗೀತ ವಾದ್ಯಗಳುಸಂಗೀತ ಸಂಯೋಜನೆಗಳುಸಂಗೀತ ದ ಮುಖ್ಯ ಪಾತ್ರಸಂಗೀತ

🔥 Trending searches on Wiki ಕನ್ನಡ:

ಕೆಂಬೂತ-ಘನಏಲಕ್ಕಿರಾಜ್‌ಕುಮಾರ್ಭಾರತದ ರಾಷ್ಟ್ರಪತಿಎಸ್.ಎಲ್. ಭೈರಪ್ಪಬಿ.ಎಲ್.ರೈಸ್ಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಹಾವು ಕಡಿತಊಳಿಗಮಾನ ಪದ್ಧತಿಉಪ್ಪಿನ ಸತ್ಯಾಗ್ರಹಕಿತ್ತೂರು ಚೆನ್ನಮ್ಮಮಂಡ್ಯಅಮೇರಿಕ ಸಂಯುಕ್ತ ಸಂಸ್ಥಾನಇತಿಹಾಸಅಂತರ್ಜಲರಾಜಕೀಯ ವಿಜ್ಞಾನಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಋಗ್ವೇದಭಾರತದ ವಿಜ್ಞಾನಿಗಳುಭಾರತದಲ್ಲಿ ಬಡತನತ್ರಿಪದಿಕಬೀರ್ಬೈಗುಳವಚನ ಸಾಹಿತ್ಯಆರೋಗ್ಯಗಣರಾಜ್ಯೋತ್ಸವ (ಭಾರತ)ಗುಪ್ತ ಸಾಮ್ರಾಜ್ಯಭಾರತದ ಸಂಸತ್ತುಮನುಸ್ಮೃತಿಸರ್ವಜ್ಞದೀಪಾವಳಿವೃದ್ಧಿ ಸಂಧಿಅಲಂಕಾರಪಾಟೀಲ ಪುಟ್ಟಪ್ಪಕರ್ಬೂಜದೇವುಡು ನರಸಿಂಹಶಾಸ್ತ್ರಿಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುಮಹಾವೀರ ಜಯಂತಿಭಾರತದಲ್ಲಿನ ಶಿಕ್ಷಣಕೆ. ಅಣ್ಣಾಮಲೈದಶಾವತಾರಎಳ್ಳೆಣ್ಣೆವೆಂಕಟೇಶ್ವರ ದೇವಸ್ಥಾನವಡ್ಡಾರಾಧನೆಕಾಲಾಯ ತಸ್ಮೈ ನಮಃ (ಚಲನಚಿತ್ರ)ಗರ್ಭಧಾರಣೆಕದಂಬ ರಾಜವಂಶಶ್ರೀ ರಾಘವೇಂದ್ರ ಸ್ವಾಮಿಗಳುಟಿಪ್ಪು ಸುಲ್ತಾನ್ಶಾಲೆಟಿ.ಪಿ.ಕೈಲಾಸಂಕುರುಬವಿಶ್ವ ಪರಿಸರ ದಿನಬೃಂದಾವನ (ಕನ್ನಡ ಧಾರಾವಾಹಿ)ಜನಪದ ಕ್ರೀಡೆಗಳುರೇಡಿಯೋಓಂ ನಮಃ ಶಿವಾಯಕಲಿಕೆಜಿ.ಪಿ.ರಾಜರತ್ನಂಮೌಲ್ಯಶೃಂಗೇರಿಪುಸ್ತಕವಿರಾಮ ಚಿಹ್ನೆಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)ಸಜ್ಜೆಯುನೈಟೆಡ್ ಕಿಂಗ್‌ಡಂಸಂಘಟನೆಭಾರತದ ವಿಶ್ವ ಪರಂಪರೆಯ ತಾಣಗಳುರಾಮಹಿಂದೂ ಮಾಸಗಳುಸುಗ್ಗಿ ಕುಣಿತಕರ್ಣಾಟ ಭಾರತ ಕಥಾಮಂಜರಿಯಾಣಕರ್ನಾಟಕದ ಕಲೆ ಮತ್ತು ಸಂಸ್ಕೃತಿಸಿಂಧೂತಟದ ನಾಗರೀಕತೆವಿಶ್ವ ಪರಂಪರೆಯ ತಾಣಶ್ರೀನಿವಾಸ ರಾಮಾನುಜನ್🡆 More