ವಿಶ್ವ ಕನ್ನಡ ಸಮ್ಮೇಳನ

ವಿಶ್ವ ಕನ್ನಡ ಸಮ್ಮೇಳನವು ಜಗತ್ತಿನಾದ್ಯಂತ ಹರಡಿರುವ ಕನ್ನಡಿಗರನ್ನು ಒಗ್ಗೂಡಿಸಿ ಕನ್ನಡ ನಾಡು-ನುಡಿಗೆ ಸಂಬಂಧಿಸಿದ ವಿಷಯಗಳನ್ನು ಕುರಿತು ನಡೆಸುವ ಸಮ್ಮೇಳನ.

ಈವರೆಗೆ ವಿಶ್ವ ಕನ್ನಡ ಸಮ್ಮೇಳನವು ಎರಡು ಬಾರಿ ನಡೆದಿದೆ. ಇನ್ನು ಮುಂದೆ ಐದು ವರ್ಷಗಳಿಗೊಮ್ಮೆ ನಡೆಸುವ ಯೋಜನೆಯನ್ನು ಎರಡನೆಯ ಸಮ್ಮೇಳನದಲ್ಲಿ ಘೋಷಿಸಲಾಗಿದೆ.

ಮೊದಲನೆಯ ವಿಶ್ವ ಕನ್ನಡ ಸಮ್ಮೇಳನ

ಮೊದಲನೆಯ ವಿಶ್ವ ಕನ್ನಡ ಸಮ್ಮೇಳನವು ೧೯೮೫ರಲ್ಲಿ ಮೈಸೂರಿನಲ್ಲಿ ನಡೆಯಿತು. ಸಾಹಿತಿ ಶಿವರಾಮ ಕಾರಂತರ ಅಧ್ಯಕ್ಷತೆಯಲ್ಲಿ ರಾಷ್ಟ್ರಕವಿ ಕುವೆಂಪುರವರು ಈ ಸಮ್ಮೇಳನವನ್ನು ಉದ್ಘಾಟಿಸಿದರು.ರಾಜೀವ್ ಗಾಂಧಿ ಅವರು ಸಹ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಎರಡನೆಯ ವಿಶ್ವ ಕನ್ನಡ ಸಮ್ಮೇಳನ

ಎರಡನೆಯ ವಿಶ್ವ ಕನ್ನಡ ಸಮ್ಮೇಳನವು ೨೦೧೧ರ ಮಾರ್ಚ್ ೧೧, ೧೨, ೧೩ರಂದು ಬೆಳಗಾವಿಯಲ್ಲಿ ನಡೆಯಿತು. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ಇನ್ಫೋಸಿಸ್ ಸಂಸ್ಥೆಯ ಸ್ಥಾಪಕ ಎನ್ ಆರ್ ನಾರಾಯಣಮೂರ್ತಿಯವರು ಈ ಸಮ್ಮೇಳನವನ್ನು ಉದ್ಘಾಟಿಸಿದರು. ವಿಶೇಷ ಅತಿಥಿಯಾಗಿ ಶ್ರೀಮತಿ ಐಶ್ವರ್ಯಾ ರೈ ಬಚ್ಚನ್ ಭಾಗವಹಿಸಿದ್ದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ನಾಡೋಜ ದೇ ಜವರೇಗೌಡರು ವಹಿಸಿದ್ದರು. ಈ ಸಮ್ಮೇಳನಕ್ಕಾಗಿ ಸಾವಿರಾರು ಜನ ದೇಶ ವಿದೇಶಗಳಿಂದ ಆಗಮಿಸಿದ್ದರು.

Tags:

ಕನ್ನಡ

🔥 Trending searches on Wiki ಕನ್ನಡ:

ಕುಮಾರವ್ಯಾಸಹಳೆಗನ್ನಡಕಲಿಯುಗನೀನಾದೆ ನಾ (ಕನ್ನಡ ಧಾರಾವಾಹಿ)ರಾಷ್ಟ್ರೀಯ ಶಿಕ್ಷಣ ನೀತಿಆದೇಶ ಸಂಧಿಸಿದ್ದಲಿಂಗಯ್ಯ (ಕವಿ)ಮೌರ್ಯ ಸಾಮ್ರಾಜ್ಯರಾವಣರಾಷ್ಟ್ರೀಯ ಭದ್ರತಾ ಪಡೆಗೌತಮ ಬುದ್ಧನ ಕುಟುಂಬಭಗೀರಥಭಾರತ ರತ್ನಮುಖ್ಯ ಪುಟಅಂತರರಾಷ್ಟ್ರೀಯ ನ್ಯಾಯಾಲಯಮನೆಮೂಲಧಾತುಪ್ರಾಥಮಿಕ ಶಾಲೆರಾಶಿಕೊಪ್ಪಳಆಟಿಸಂವರ್ಣಾಶ್ರಮ ಪದ್ಧತಿಇಂಟರ್ನೆಟ್‌ ಇತಿಹಾಸಕುವೆಂಪುಭಾರತಿಯ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಭಾರತದ ೨೦೨೪ರ ಸಾರ್ವತ್ರಿಕ ಚುನಾವಣೆಗಳುಸಂಶೋಧನೆಸುಧಾ ಮೂರ್ತಿಆನೆವಿಜಯನಗರನಗರೀಕರಣಲೋಕಸಭೆಲಕ್ಷ್ಮಣಭಾರತದ ಇತಿಹಾಸಕರ್ನಾಟಕದ ವಾಸ್ತುಶಿಲ್ಪಕಬಡ್ಡಿನೀರುಗುಡಿಸಲು ಕೈಗಾರಿಕೆಗಳುಅಂತರಜಾಲಷಟ್ಪದಿಚರಕಪೆರಿಯಾರ್ ರಾಮಸ್ವಾಮಿಮೂಲಭೂತ ಕರ್ತವ್ಯಗಳುಗೋವಿಂದ ಪೈಋತುಚಕ್ರಜಾತಿಗಂಗ (ರಾಜಮನೆತನ)ವೆಂಕಟೇಶ್ವರಡಿ.ವಿ.ಗುಂಡಪ್ಪಕನ್ನಡದಲ್ಲಿ ವಚನ ಸಾಹಿತ್ಯಕಾವೇರಿ ನದಿಭೂಮಿ ದಿನಲಕ್ಷ್ಮಿಕನ್ನಡ ವಿಶ್ವವಿದ್ಯಾಲಯವಿಜಯ ಕರ್ನಾಟಕಹಳೇಬೀಡುಕುಂಬಳಕಾಯಿಕದಂಬ ಮನೆತನತಾಮ್ರಅಳತೆಗಳುಅಮೃತಾ ಶೇರ್ಗಿಲ್ಶೀತಲ ಸಮರಚಿತ್ರಕಲೆವಚನಕಾರರ ಅಂಕಿತ ನಾಮಗಳುವಿಧಾನ ಸಭೆಅವರ್ಗೀಯ ವ್ಯಂಜನಕಪ್ಪೆ ಅರಭಟ್ಟಕನ್ನಡ ವ್ಯಾಕರಣಜೈನ ಧರ್ಮ ಇತಿಹಾಸನರೇಂದ್ರ ಮೋದಿನವರತ್ನಗಳುಭಾರತದ ಪ್ರಧಾನ ಮಂತ್ರಿಕಲಬುರಗಿಗುಡುಗುಕರ್ನಾಟಕದ ಕಲೆ ಮತ್ತು ಸಂಸ್ಕೃತಿ🡆 More