ರತ್ನಾಕರ ವರ್ಣಿ

ರತ್ನಾಕರವರ್ಣಿಕನ್ನಡದ ಕವಿಗಳಲ್ಲೊಬ್ಬನಾದ.

ರತ್ನಾಕರವರ್ಣಿಯ ಕಾಲ ಸುಮಾರು ಕ್ರಿ.ಶ. 1560. ಇವರ ತಂದೆಯ ಹೆಸರು ದೇವರಾಜ. ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಈತನ ಜನ್ಮಸ್ಥಳ. ರತ್ನಾಕರವರ್ಣಿಯು ವಿಜಯನಗರದ ಅರಸರ ಸಾಮಂತರಾಜನಾದ ಕಾರ್ಕಳದ ಭೈರರಾಜನ ಆಸ್ಥಾನದಲ್ಲಿದ್ದರು. ಇವರ ದೀಕ್ಷಾಗುರು ಚಾರುಕೀರ್ತಿ ಆಚಾರ್ಯ. ಮೋಕ್ಷ ಗುರು ಹಂಸನಾಥ. ಇವರಿಗೆ ಶೃಂಗಾರಕವಿ ,ರತ್ನಾಕರ ಸಿದ್ಧ ಎಂಬ ಬಿರುದುಗಳಿವೆ

ವಿವರ

  • ರತ್ನಾಕರವರ್ಣಿ 16ನೆಯ ಶತಮಾನದ ಜೈನಕವಿ. ಕನ್ನಡದ ಸಾಂಗತ್ಯ ಕವಿಗಳಲ್ಲಿ ಅಗ್ರಗಣ್ಯನಾದವ. ಭರತೇಶವೈಭವ, ತ್ರಿಲೋಕಶತಕ, ರತ್ನಾಕರಾಧೀಶ್ವರ ಶತಕ, ಅಪರಾಜಿತೇಶ್ವರಶತಕ ಎಂಬ ಗ್ರಂಥಗಳ ಕರ್ತೃ. ಇವನಿಗೆ ರತ್ನಾಕರ. ರತ್ನಾಕರಅಣ್ಣ, ರತ್ನಾಕರಸಿದ್ಧ ಎಂಬ ಹೆಸರುಗಳೂ ಇದ್ದು ತನಗೆ ರತ್ನಾಕರಸಿದ್ಧ ಎಂಬ ಹೆಸರು ಅತ್ಯಂತ ಮೆಚ್ಚುಗೆಯಾದುದೆಂದು ಹೇಳಿಕೊಂಡಿದ್ದಾನೆ. ಚಾರುಕೀರ್ತಿ ಆಚಾರ್ಯ ಇವನ ದೀಕ್ಷಾಗುರು. ಹಂಸನಾಥ ಮೋಕ್ಷಗುರು.
  • ರತ್ನಾಕರವರ್ಣಿ ತನ್ನ ಕಾವ್ಯಗಳಲ್ಲಿ ಸ್ವಂತ ಜೀವಿತಕ್ಕೆ ಸಂಬಂಧಿಸಿದ ಯಾವ ವಿವರಗಳನ್ನೂ ಹೇಳಿಲ್ಲ. ಇವನನ್ನು ಕುರಿತು ಕೆಲವು ಬಾಹ್ಯವಿವರಗಳು ದೊರೆತಿವೆ. ದೇವ ಚಂದ್ರ (1770-1841) ತನ್ನ ರಾಜಾವಳೀಕಥೆಯಲ್ಲಿ ರತ್ನಾಕರವರ್ಣಿಯ ಬಗ್ಗೆ ಕೆಲವು ವಿವರಗಳನ್ನು ಕೊಟ್ಟಿದ್ದಾನೆ. ಆತನ ಹೇಳಿಕೆಯ ಪ್ರಕಾರ ರತ್ನಾಕರವರ್ಣಿ ಸೂರ್ಯವಂಶಕ್ಕೆ ಸೇರಿದವನು. ಕ್ಷತ್ರೀಯ ಕುಲದವನು. ತುಳುನಾಡಿನವನು, ಮೂಡುಬಿದರೆಯವನು, ದೇವರಾಜನ ಮಗ, ರತ್ನಾಕರಾಧೀಶನೆಂದು ಹೆಸರು. ಬಾಲ್ಯದಲ್ಲಿ ಜೈನಾಗಮಗಳ ಶಿಕ್ಷಣವನ್ನು ಪಡೆದಿದ್ದ. ಕವಿಯಾದ ಮೇಲೆ ತೌಳವ ದೇಶದ ಭೈರರಸ ಒಡೆಯರ ಆಸ್ಥಾನ ಕವಿಯಾಗಿ ಶೃಂಗಾರಕವಿಯೆಂಬ ಪ್ರಶಸ್ತಿ ಪಡೆದ.

ರತ್ನಾಕರನ ಧಾರ್ಮಿಕತೆ

  • ರತ್ನಾಕರ ಸಂಪ್ರದಾಯಗಳಿಗೆ ಶರಣಾದವನಲ್ಲ; ಸಂಸಾರ ಸುಖವನ್ನು ನಿರಾಕರಿಸಬೇಕೆಂದವನಲ್ಲ; ಉಂಡರೇನು ಉಟ್ಟರೇನು ಅಬಲೆಯರೊಡನೆ ಕೂಡಿದರೇನು-ಎಂದು ನೇರವಾಗಿ ಕೇಳಿದವನು; ಯಾವುದರಲ್ಲೂ ಒಂದು ಇತಿಮಿತಿ ಇರಬೇಕೆಂದವನು. ವಸ್ತುವಿನ ಆಯ್ಕೆಯಲ್ಲಿ, ನಿರ್ವಹಣೆಯಲ್ಲಿ, ಛಂದಸ್ಸಿನಲ್ಲಿ, ನಿರೂಪಣೆಯಲ್ಲಿ ಯಾದೃಚ್ಚಿಕವಾಗಿ ನಡೆದವನು. ರೂಢಿ ನೀತಿ ರಿವಾಜುಗಳಲ್ಲಿ ಅರ್ಥಹೀನತೆಯಿದ್ದಾಗ ಮುಲಾಜಿಲ್ಲದೆ ಕಿತ್ತೆಸೆದು ಸರಿಕಂಡ ದಾರಿಯಲ್ಲಿ ಧೀಮಂತನಂತೆ ಹೆಜ್ಜೆ ಹಾಕಿದವನು.
  • ಅವರು ಬರೆದ ಕೃತಿಗಳಲ್ಲಿ ಹಲವಾರು ಶಾಲಾ ಮಕ್ಕಳಿಗೆ ಪದ್ಯ ಗದ್ಯವಾಗಿ ಬಂದಿವೆ

ರತ್ನಾಕರವರ್ಣಿ ರಚಿಸಿದ ಕೃತಿಗಳು:

  • ಭರತೇಶ ವೈಭವ - ರತ್ನಾಕರವರ್ಣಿಯ ಮೇರು ಕೃತಿ.೮೦ಸಂಧಿ ಸಾಂಗತ್ಯ ಕೃತಿ.
  • ತ್ರಿಲೋಕ ಶತಕ
  • ಅಪರಾಜಿತೇಶ್ವರ ಶತಕ
  • ರತ್ನಾಕರಾಧೀಶ್ವರ ಶತಕ
  • ಅಣ್ಣನ ಪದಗಳು

ರಚನೆಯ ಕಾಲ

ಘಟನೆ ಕಾಲ
ಜನನ ೧೫೬೦
ತ್ರಿಲೋಕಶತಕದ ರಚನೆ ೧೫೫೭
ಭರತೇಶವೈಭವದ ರಚನೆ ೧೫೬೭
ವೀರಶೈವನಾದುದು ೧೫೭೨
ಮತ್ತೆ ಜೈನನಾದುದು ೧೫೭೫
ರತ್ನಾಕರಶತಕದ ರಚನೆ ೧೫೭೭
ಅಪರಾಜಿತಶತಕದ ರಚನೆ ೧೫೮೨
ಅಧ್ಯಾತ್ಮಗೀತದ ರಚನೆ ೧೫೮೭
ಮರಣ ೧೬೦೦ರ ಮೇಲೆ

ಭರತೇಶ ವೈಭವ

  • ಭರತೇಶ ವೈಭವವು ನಡುಗನ್ನಡ ಸಾಹಿತ್ಯದ ಒಂದು ಶ್ರೇಷ್ಠ ಕೃತಿ. ಇದು ರತ್ನಾಕರವರ್ಣಿಯ ಮೇರು ಕೃತಿ. ಹಳೆಗನ್ನಡದ ಕವಿಗಳು ಛಂದಸ್ಸುಗಳಲ್ಲಿ ತೋಯ್ದ ಘನವಾದ ಕೃತಿಗಳನ್ನು ರಚಿಸುತ್ತಿದ್ದ ಕಾಲದಲ್ಲಿ ರತ್ನಾಕರವರ್ಣಿಯು ಸಾಂಗತ್ಯರೂಪದಲ್ಲಿ ಭರತೇಶ ವೈಭವವನ್ನು ರಚಿಸಿ ಕನ್ನಡ ಕಾವ್ಯದ ಹೊಸ ಶಕೆಯೊಂದಕ್ಕೆ ನಾಂದಿ ಹಾಡುತ್ತಾನೆ.ಉಂಡು ಉಪವಾಸಿ,ಬಳಸಿ ಬ್ರಹ್ಮಚಾರಿ ಭೂ ಮಂಡಲದಲ್ಲಿದ್ದು ನಿಸ್ಸೀಮ.
  • ಭರತೇಶ ವೈಭವ’ ರತ್ನಾಕರವರ್ಣಿಯು ಸಾಂಗತ್ಯ ರೂಪದಲ್ಲಿದೆ. ಆದಿತೀರ್ಥಂಕರ ವೃಷಭನಾಥನ ಮಗ ಭರತ ಈ ಕಾವ್ಯದ ನಾಯಕ. ಈ ಕಾವ್ಯದಲ್ಲಿ ಭೋಗವಿಜಯ, ದಿಗ್ವಿಜಯ, ಯೋಗವಿಜಯ, ಅರ್ಕಕೀರ್ತಿವಿಜಯ,ಮೋಕ್ಷವಿಜಯ ಎನ್ನುವ ಐದು ಸಂಧಿಗಳಿದ್ದು ಒಟ್ಟು ಹತ್ತುಸಾವಿರ ಪದ್ಯಗಳಿವೆ.
  • ಭರತೇಶ ವೈಭವ’ ಕಾವ್ಯದಲ್ಲಿ ಒಂದು ಪದ್ಯ:
    ‘ಬಡವಗೆ ಬಲುರೋಗ ಬಂದು ಬಾಯ್ಬಿಡಲೊರ್ವ/
    ರೆಡಹಿಯು ಕಾಣರುರ್ವಿಯೊಳು/
    ಒಡವೆಯುಳ್ಳವಗಲ್ಪರುಜೆ ಬರೆ ವಿಸ್ಮಯ/
    ಬಡುತ ಸಾರುವರದು ಸಹಜ’ ||

ಉಲ್ಲೇಖ

ಕಾಲ:೧೫೬೦

Tags:

ರತ್ನಾಕರ ವರ್ಣಿ ವಿವರರತ್ನಾಕರ ವರ್ಣಿ ರತ್ನಾಕರವರ್ಣಿ ರಚಿಸಿದ ಕೃತಿಗಳು:ರತ್ನಾಕರ ವರ್ಣಿ ಉಲ್ಲೇಖರತ್ನಾಕರ ವರ್ಣಿಕನ್ನಡಕವಿಕಾರ್ಕಳದಕ್ಷಿಣ ಕನ್ನಡಮೂಡುಬಿದಿರೆವಿಜಯನಗರ

🔥 Trending searches on Wiki ಕನ್ನಡ:

ಮುರುಡೇಶ್ವರದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆಹ್ಯಾಲಿ ಕಾಮೆಟ್ಬುದ್ಧಮಹಾಕಾವ್ಯಬಸವೇಶ್ವರಸರ್ಪ ಸುತ್ತುಇತಿಹಾಸಬ್ಯಾಂಕ್ಸವದತ್ತಿದಿಕ್ಸೂಚಿಕುರುಬಬಿ.ಜಯಶ್ರೀನೈಟ್ರೋಜನ್ ಚಕ್ರಭಾರತದ ರಾಷ್ಟ್ರೀಯ ಚಿನ್ಹೆಗಳುವ್ಯಂಜನಚದುರಂಗ (ಆಟ)ಕೋಗಿಲೆಭಾರತದ ಆರ್ಥಿಕ ವ್ಯವಸ್ಥೆಜಾನಪದಧೂಮಕೇತುಭರತ-ಬಾಹುಬಲಿಉತ್ತರ ಕರ್ನಾಟಕನವೆಂಬರ್ ೧೪ವ್ಯಾಸರಾಯರುಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಕೇಂದ್ರಾಡಳಿತ ಪ್ರದೇಶಗಳುರಾಜ್ಯಸಭೆಆಧುನಿಕ ಕನ್ನಡ ಕಾವ್ಯದ ಬೆಳವಣಿಗೆಪುಸ್ತಕಗೌತಮಿಪುತ್ರ ಶಾತಕರ್ಣಿಮೇರಿ ಕೋಮ್ಟಿಪ್ಪು ಸುಲ್ತಾನ್ಚೋಮನ ದುಡಿಮುಖ್ಯ ಪುಟಬೃಂದಾವನ (ಕನ್ನಡ ಧಾರಾವಾಹಿ)ಭಾರತದಲ್ಲಿ ಪಂಚಾಯತ್ ರಾಜ್21ನೇ ಶತಮಾನದ ಕೌಶಲ್ಯಗಳುವಿನಾಯಕ ದಾಮೋದರ ಸಾವರ್ಕರ್ಎಸ್.ಎಲ್. ಭೈರಪ್ಪವಿಧಾನ ಪರಿಷತ್ತುಜೋಡು ನುಡಿಗಟ್ಟುಭಾರತದ ಸ್ವಾತಂತ್ರ್ಯ ದಿನಾಚರಣೆಕಳಿಂಗ ಯುದ್ಧಕರ್ನಾಟಕ ರತ್ನರೆವರೆಂಡ್ ಎಫ್ ಕಿಟ್ಟೆಲ್ಕ್ರಿಕೆಟ್ಹಸಿರುಮನೆ ಪರಿಣಾಮಕರ್ನಾಟಕದ ರಾಜ್ಯಪಾಲರುಗಳ ಪಟ್ಟಿಗಿರೀಶ್ ಕಾರ್ನಾಡ್ಸೂರ್ಯನಾಥ ಕಾಮತ್ಸಂಧಿರಾಮ್ ಮೋಹನ್ ರಾಯ್ಪಂಪಜೋಗಿ (ಚಲನಚಿತ್ರ)ಮೋಕ್ಷಗುಂಡಂ ವಿಶ್ವೇಶ್ವರಯ್ಯಜ್ಞಾನಪೀಠ ಪ್ರಶಸ್ತಿನಿರಂಜನಆಧುನಿಕತಾವಾದಪ್ರಜಾಪ್ರಭುತ್ವಶಕ್ತಿಕಥೆಪ್ರಬಂಧ ರಚನೆಪರಿಸರ ವ್ಯವಸ್ಥೆಪರಮಾಣುಸಮಾಜ ವಿಜ್ಞಾನಎಚ್ ೧.ಎನ್ ೧. ಜ್ವರಮೂಕಜ್ಜಿಯ ಕನಸುಗಳು (ಕಾದಂಬರಿ)ಚಿತ್ರದುರ್ಗ ಕೋಟೆಭಾರತದ ರಾಜಕೀಯ ಪಕ್ಷಗಳುಗುರುತ್ವಕ್ರಿಯಾಪದಮೊಜಿಲ್ಲಾ ಫೈರ್‌ಫಾಕ್ಸ್ಭಾರತರೋಮನ್ ಸಾಮ್ರಾಜ್ಯಶೃಂಗೇರಿತೆಲುಗುಆಸ್ಟ್ರೇಲಿಯನದಿ🡆 More