ಅಮೆರಿಕಸ್ ಅಥವಾ ಅಮೆರಿಕ ವು,ಸ್ಪ್ಯಾನಿಷ್: Américaಪೋರ್ಚುಗೀಸ್:AméricaFrench: AmériqueDutch: Error: }: text has italic markup (help) ಪಶ್ಚಿಮ ಗೋಳಾರ್ಧದಲ್ಲಿರುವ ಭೂಪ್ರದೇಶ.
ಅದು ಉತ್ತರ ಅಮೆರಿಕ, ದಕ್ಷಿಣ ಅಮೆರಿಕ ಖಂಡಗಳು, ದ್ವೀಪ ಪ್ರದೇಶಗಳು ಮತ್ತು ಪ್ರಾಂತ್ಯಗಳನ್ನು ಒಳಗೊಂಡ ಹೊಸ ಜಗತ್ತಾಗಿ ರೂಪುಗೊಂಡಿದೆ. ಅಮೆರಿಕ ಎಂಬ ಪದವು ಆಂಗ್ಲಭಾಷೆಯಲ್ಲಿ ವಿಭಿನ್ನಾರ್ಥ ನೀಡುತ್ತದೆಯಾದರೂ, ಅಮೆರಿಕ ಸಂಯುಕ್ತ ಸಂಸ್ಥಾನವನ್ನು ಈ ಪದದಿಂದ ಹೆಚ್ಚಾಗಿ ಮತ್ತು ಸಾಮಾನ್ಯವಾಗಿ ಪ್ರಬೋಧಿಸುತ್ತಾರೆ. ಪೃಥ್ವಿಯ ಒಟ್ಟು ಮೇಲ್ಮೈಯ ಶೇಕಡ 8.3 ರಷ್ಟು ಪ್ರದೇಶವನ್ನು ಅಮೆರಿಕ ಆವರಿಸಿಕೊಂಡಿದೆ ( ಶೇಕಡ 28.4 ರಷ್ಟೂ ಭೂಭಾಗ) ಮತ್ತು ಒಟ್ಟು ಜನಸಂಖ್ಯೆಯ ಶೇಕಡ 13.5 ರಷ್ಹ್ಟು ಜನಸಾಂದ್ರತೆಯನ್ನು ಹೊಂದಿದೆ(ಸುಮಾರು 900 ಮಿಲಿಯನ್ ಜನಸಂಖ್ಯೆ). ಅಮೇರಿಕಾ ದೇಶವನ್ನು ಕೊಲಂಬಸ್ ಸಮುದ್ರದ ಮೂಲಕ ಅನ್ವೇಷಿಸಿದ್ದರು.
Area | 42,549,000 km2 |
---|---|
Population | 910,720,588 (July 2008 est.) |
Population density | 21 km2 (55/sq mi) |
Demonym | American |
Countries | 35 |
Dependencies | 23 List of countries and territories in the Americas |
Languages | Spanish, English, Portuguese, ಫ್ರೆಂಚ್, and many others |
Time zones | UTC-10 to UTC |
ಗೊಂಡ್ವಾನಾಲ್ಯಾಂಡ್ ಬೃಹತ್ ಖಂಡದಲ್ಲಿದ್ದ ದಕ್ಷಿಣ ಅಮೆರಿಕವು 135 [[ಮಿಲಿಯನ್ ವರ್ಷಗಳ ಹಿಂದೆ (ಎಂಎ)|ಮಿಲಿಯನ್ ವರ್ಷಗಳ ಹಿಂದೆ (ಎಂಎ)]]ವಿಭಜನೆಯಾಗಿ, ಸ್ವತಂತ್ರ ಖಂಡವಾಗಿ ರೂಪುಗೊಂಡಿತು. 15 ಮಿಲಿಯನ್ ವರ್ಷಗಳ ಆರಂಭದಲ್ಲಿ, ವೆಸ್ಟ್ ಇಂಡೀಸ್ ದ್ವೀಪ ಮತ್ತು ಪೆಸಿಫಿಕ್ ಸಾಗರದ ನಡುವಿನ ಅಪ್ಪಳಿಕೆಯ ಪರಿಣಾಮವಾಗಿ ಈ ಭಾಗದ ಗಡಿಯುದ್ಧಕ್ಕೂ ಸರಣಿ ಜ್ವಾಲಾಮುಖಿಗಳು ಸಂಭವಿಸಿ, ಹಲವಾರು ದ್ವೀಪಪ್ರದೇಶಗಳು ಸೃಷ್ಟಿಯಾದವು. ಮಧ್ಯ ಅಮೆರಿಕದ ದ್ವೀಪ ಸಮುದಾಯದ ಕಣಿವೆಗಳಲ್ಲಿ ಉತ್ತರ ಅಮೆರಿಕ ಮತ್ತು ದಕ್ಷಿಣ ಅಮೆರಿಕ ಅಳಿದುಳಿದ ಭೂಭಾಗ ಆವೃತಗೊಂಡಿದೆ. ಜೊತೆಗೆ ನಿರಂತರ ಜ್ವಾಲಾಮುಖಿಯಿಂದ ಹೊಸ ಭೂಭಾಗ ಸೃಷ್ಟಿಯಾಗಿದೆ. 3 ಮಿಲಿಯನ್ ವರ್ಷಗಳಲ್ಲಿ, ಉತ್ತರ ಅಮೆರಿಕ ಮತ್ತು ದಕ್ಷಿಣ ಅಮೆರಿಕವನ್ನು ಪನಾಮಾ ಭೂಸಂಧಿಗೆ ಜೋಡಿಸಿದ ತರುವಾಯ, ಏಕೈಕ ಅಮೆರಿಕ ಭೂಪ್ರದೇಶವನ್ನು ರೂಪಿಸಲಾಯಿತು.
ಶಿಲಾಯುಗದ ಭಾರತೀಯರು ಅಮೆರಿಕ ಮತ್ತು ಅಲ್ಲಿನ ಎಲ್ಲಾ ಭಾಗಗಳಿಗೆ ವಲಸೆ ಹೋಗಿರುವ ನಿಖರ ದಿನಾಂಕ ಮತ್ತು ಸಂಚರಿಸಿರುವ ಮಾರ್ಗಗಳ ಕುರಿತು ಸಂಶೋಧನೆ ಮತ್ತು ಸಮಾಲೋಚನೆ ನಡೆಯುತ್ತಿದೆ. 17 ಸಾವಿರ ವರ್ಷಗಳ ಹಿಂದೆ, ಶಾಶ್ವತ ಹಿಮ ಪದರ ಆವೃತವಾದ ಪರಿಣಾಮವಾಗಿ, ಅಮೆರಿಕದ ಸಾಗರ ಮಟ್ಟ ಗಣನೀಯವಾಗಿ ಕುಸಿದಿತ್ತು. ಆ ಸಂದರ್ಭದಲ್ಲಿ, ಸುಮಾರು ೪೦ ಸಾವಿರದಷ್ಟಿದ್ದ ಭಾರತೀಯ ಮೂಲದ ಈ ಪೂರ್ವಜರು, ಪೂರ್ವ ಸೈಬೀರಿಯಾ ಮತ್ತು ಈಗಿನ ಅಲಸ್ಕಾ ನಡುವೆ ಇರುವ ಬೆರಿಂಜಿಯಾ ಭೂಸೇತುವೆಯ ಕಡೆಗೆ ವಲಸೆ ಹೋಗಿದ್ದರು ಎಂಬ ಸಾಂಪ್ರದಾಯಿಕ ನಂಬಿಕೆ ಅಥವಾ ಸಿದ್ಧಾಂತ ಇದೆ. ಅಲ್ಲದೆ, ಇವರು ಲಾರೆಂಟೈಡ್ ಮತ್ತು ಕಾರ್ಡಿಲ್ಲೆರನ್ ಹಿಮ ಪದರಗಳ ಮಧ್ಯೆ ಹಾದು ಹೋಗಿರುವ ಹಿಮಮುಕ್ತ ಮಾರ್ಗಗಳಲ್ಲಿ ಸಂಚರಿಸಲು ಪ್ಲೆಸ್ಟೊಸಿನ್ ಮೆಗಾಫಾನ ಸಸ್ತನಿಯಂತಹ ದೊಡ್ಡ ದೊಡ್ಡ ಪ್ರಾಣಿಗಳನ್ನು ಅವಲಂಬಿಸುತ್ತಿದ್ದರು ಎಂದು ನಂಬಲಾಗಿದೆ. ಪ್ರಸ್ತಾಪಿಸಲಾಗಿರುವ ಮತ್ತೊಂದು ಮಾರ್ಗವೆಂದರೆ, ಅವರು ಕಾಲ್ನಡಿಗೆ ಅಥವಾ ಪ್ರಾಚೀನ ದೋಣಿಗಳನ್ನು ಬಳಸಿ, ಪೆಸಿಫಿಕ್ ವಾಯವ್ಯ ಕರಾವಳಿಯಿಂದ ದಕ್ಷಿಣ ಅಮೆರಿಕಕ್ಕೆ ವಲಸೆ ಹೋಗಿದ್ದರು. ಕೊನೆಯಲ್ಲಿ ಪ್ರಸ್ತಾಪಿಸಲಾಗಿರುವ ಮಾರ್ಗಕ್ಕೆ ಸಂಬಂಧಿಸಿದ ಪುರಾವೆಗಳನ್ನು, ಕೊನೆಯ ಹಿಮಯುಗದಲ್ಲಿ ನೂರಾರು ಮೀಟರ್ನಷ್ಟು ಏರಿಕೆಯಾದಸಮುದ್ರ ಮಟ್ಟದ ಆಧಾರದ ಮೇಲೆ ಒದಗಿಸಲಾಗಿದೆ. ಸುಮಾರು 16,500 ವರ್ಷಗಳ ಹಿಂದೆ ಬೆರಿಂಜಿಯಾ (ಪೂರ್ವ ಅಲಸ್ಕಾ)ಕ್ಕೆ ವಲಸೆ ಹೋದ ಶಿಲಾಯುಗದ ಭಾರತೀಯರ ಸಂಖ್ಯೆ 40,000 ಪ್ರಮಾಣದಲ್ಲಿ ಇದ್ದಿರಬಹುದು ಎಂಬುದು ಪುರಾತನವಸ್ತು ಶಾಸ್ತ್ರಜ್ಞರ ತರ್ಕ. ವಲಸೆಯ ಕಾಲದ ಬಗ್ಗೆ ಸುದೀರ್ಘ ಚರ್ಚೆಗಳು ನಡೆಯುತ್ತಿದ್ದು, ಇದರ ಬಗ್ಗೆ ನಿಖರ ಮಾಹಿತಿ ಹೊರಬೀಳಲು ಹಲವು ವರ್ಷಗಳೇ ಬೇಕಾಗಬಹುದು. ಮಧ್ಯ ಏಷ್ಯಾದ ಹುಟ್ಟು ಅಥವಾ ವಿಕಾಸ ಮತ್ತು ಕೊನೆಯ ಹಿಮಯುಗದ ಅಂತ್ಯಭಾಗದ ಅವಧಿಯಲ್ಲಿ ಅಮೆರಿಕದ ವ್ಯಾಪಕ ನೆಲೆಯ ಕಾಲಮಾನ ಕುರಿತು ಕೆಲವು ನಿರ್ಣಯಗಳನ್ನು ಅಂಗೀಕರಿಸಲಾಗಿದೆ. ಇನ್ನೂ ನಿರ್ದಿಷ್ಟವಾಗಿ ಹೇಳಬೇಕೆಂದರೆ, ಸುಮಾರು 16,000 — 13,000 ವರ್ಷಗಳ ಅವಧಿಗೆ ತಡ ಗರಿಷ್ಟ ಹಿಮಯುಗ ಎಂದು ಉಲ್ಲೇಖಿಸಲಾಗಿದೆ. ಎಸ್ಕಿಮೊ ಜನರು ಉತ್ತರ ಅಮೆರಿಕದ ಶೀತ ವಲಯ ಅಥವಾ ಆರ್ಕ್ಟಿಕ್ ಭಾಗಕ್ಕೆ ವಲಸೆ ಹೋಗಿದ್ದರು. ಕ್ರಿಸ್ತಶಕ 1000 ಇಸವಿ (Common Era) ಯಲ್ಲಿ ನಡೆದ ಮತ್ತೊಂದು ವಲಸೆ ಇದಾಗಿದೆ. ಉತ್ತರ ಅಮೆರಿಕಕ್ಕೆ ಎಸ್ಕಿಮೊ ಜನರು ವಲಸೆ ಬಂದ ಸಮಯದಲ್ಲೇ, ಸ್ಕಾಂಡಿನೇವಿಯಾದ ವಸಾಹತುಗಾರರು(ವೈಕಿಂಗ್ ಸೆಟ್ಲರ್ಸ್) 982 ರಲ್ಲಿ ಗ್ರೀನ್ ಲ್ಯಾಂಡ್ ಮತ್ತು ವಿನ್ ಲ್ಯಾಂಡ್ಗೆ ಬರಲಾರಂಭಿಸಿದರು. ನಂತರ ಈ ವಸಾಹತುಗಾರರು ಕ್ರಿಸ್ತಶಕ 1500ರ ವೇಳೆಗೆ ವಿನ್ ಲ್ಯಾಂಡ್ ತೊರೆದು, ಗ್ರೀನ್ ಲ್ಯಾಂಡ್ ನಿಂದಲೂ ನಾಪತ್ತೆಯಾದರು.
ಅಮೆರಿಕ ಖಂಡಗಳ ಮೇಲೆ ಮಹತ್ವಪೂರ್ಣ ಎನ್ನಲಾದ ಐರೋಪ್ಯ ಪ್ರಭಾವ ಮತ್ತು ಸಂಸ್ಕೃತಿ ಕಾಣಿಸಿಕೊಳ್ಳುವ ಮುನ್ನವೇ, ಅಮೆರಿಕ ಇತಿಹಾಸ ಮತ್ತು ಪೂರ್ವ ಇತಿಹಾಸದ ಎಲ್ಲಾಕಾಲಮಾನಗಳನ್ನು ಪೂರ್ವ ಕೊಲಂಬಿಯಾ ಯುಗ ಒಳಗೊಂಡಿತ್ತು. ಪೂರ್ವ ಆಧುನಿಕ ಕಾಲದಲ್ಲಿ ಪೂರ್ವ ಶಿಲಾಯುಗದಿಂದ ಹಿಡಿದು ಐರೋಪ್ಯ ವಸಾಹತು ಕಾಲದವರೆಗಿನ ಮೂಲ ನೆಲೆಯನ್ನೂ ಇದು ಒಳಗೊಂಡಿದೆ. ಅಮೆರಿಕದ ಸ್ಥಳೀಯ ಮಹಾನ್ ನಾಗರಿಕತೆಯನ್ನು ಬಣ್ಣಿಸುವ ಅರ್ಥದಲ್ಲಿ ಸಾಮಾನ್ಯವಾಗಿ ಪೂರ್ವ ಕೊಲಂಬಿಯಾ ಯುಗದ ಪದವನ್ನು ವಿಶೇಷವಾಗಿ, ಪದೇಪದೇ ಬಳಸುತ್ತಾರೆ. ಅವುಗಳೆಂದರೆ, ಮೆಸೊಅಮೆರಿಕ (ಮೆಸೋಅಮೇರಿಕಾ) ಅಂದರೆ ಮೆಕ್ಸಿಕೊ ಮತ್ತು ಸೆಂಟ್ರಲ್ ಅಮೆರಿಕ ಒಳಗೊಂಡ ಸಾಂಸ್ಕೃತಿಕ ಪ್ರಾಂತ್ಯ (ದ ಓಲ್ಮ್ಯಾಕ್, ದ ಟಾಲ್ಟೆಕ್, ದ ಟಿಯೋಟಿಹುಅಕ್ಯಾನೊ, ದ ಝಾಪೊಟೆಕ್, ದ ಮಿಕ್ಸ್ಟೆಕ್, ದ ಆಝ್ಟೆಕ್, ಮತ್ತು ದ ಮಾಯಾ) ಮತ್ತು ದಕ್ಷಿಣ ಅಮೆರಿಕದ ಪರ್ವತ ಪ್ರಾಂತ್ಯ ಆಂಡೆಸ್ (ಇಂಕಾ, ಮೊಚೆ, ಚಿಬ್ಚಾ, ಕೇನರೀಸ್). ಪೂರ್ವ ಕೊಲಂಬಿಯಾದ ಬಹಳಷ್ಟು ನಾಗರಿಕತೆಗಳು ಅರ್ಥಪೂರ್ಣವಾದ ಗುಣಲಕ್ಷಣಗಳು ಮತ್ತು ವಿಶೇಷತೆಗಳನ್ನು ಹುಟ್ಟುಹಾಕಿವೆ. ಶಾಶ್ವತ ನಗರ ವಾಸ ಅಥವಾ ವಸಾಹತು, ಕೃಷಿ, ನಾಗರಿಕ ಮತ್ತು ಸ್ಮಾರಕ ವಾಸ್ತುಶಿಲ್ಪ ಮತ್ತು ಸಮುದಾಯದ ಸಂಕೀರ್ಣ ವರ್ಗಶ್ರೇಣಿ ಪದ್ಧತಿ ಅವುಗಳಲ್ಲಿ ಮುಖ್ಯವಾದವು. ಕಾಯಂ ಆಗಿ ನೆಲಸಲು ಮೊದಲು ಬಂದ ಯೂರೋಪಿಯನ್ನರ ಆಗಮನದ ಸಂದರ್ಭದಲ್ಲೇ (15ನೇ ಶತಮಾನದ ಅಂತ್ಯ ಮತ್ತು 16ನೇ ಶತಮಾನದ ಆರಂಭ) ಬಹಳಷ್ಟು ಈ ನಾಗರಿಕತೆಗಳು ಸಂಪೂರ್ಣ ನಶಿಸಿಹೋದವು. ಈ ನಾಗರಿಕತೆಗಳನ್ನು ಪುರಾತನ ವಸ್ತು ಶಾಸ್ತ್ರದ ಮೂಲಕ ಮಾತ್ರ ತಿಳಿಯಬಹುದಾಗಿದೆ. ಪ್ರಸ್ತುತ ಸಂದರ್ಭಕ್ಕೆ ಸಮಕಾಲೀನವಾಗಿರುವ ಉಳಿದ ನಾಗರಿಕತೆಗಳನ್ನು ಇತಿಹಾಸದಲ್ಲಿ ದಾಖಲಾಗಿರುವ ಕಾಲಮಾನಗಳಿಂದ ತಿಳಿಯಬಹುದಾಗಿದೆ. ಕೆಲವೊಂದು, ಉದಾಹರಣೆಗೆ ಮಾಯಾ ನಾಗರಿಕತೆಯು, ಸ್ವಂತ ಲಿಖಿತ ದಾಖಲೆಗಳನ್ನು ಹೊಂದಿದೆ. ಆದಾಗ್ಯೂ, ಈ ದಾಖಲೆಗಳನ್ನು ಗಮನಿಸಿದ ಬಹುಪಾಲು ಯೂರೋಪಿಯನ್ನರು, ವಿರೋಧ ವ್ಯಕ್ತಪಡಿಸಿದ್ದಲ್ಲದೆ, ಬಹುಪಾಲು ದಾಖಲೆಗಳನ್ನು ಕ್ರೈಸ್ತರ ಚಿತೆಗೆ ಎಸೆದು ನಾಶಪಡಿಸಿದ್ದಾರೆ. ಬಚ್ಚಿಟ್ಟಿದ್ದ ಕೆಲವೇ ಕೆಲವು ದಾಖಲೆ ಪತ್ರಗಳು ಮಾತ್ರ ಈಗ ಲಭ್ಯವಿವೆ. ಪುರಾತನ ಸಂಸ್ಕೃತಿ ಮತ್ತು ಜೀವನ ಕ್ರಮದ ಬಗ್ಗೆ ಅಧ್ಯಯನ ನಡೆಸುವ ಆಧುನಿಕ ಇತಿಹಾಸಕಾರರಿಗೆ ಈ ದಾಖಲೆಗಳೇ ಈಗ ಮೂಲ ಪರಿಕರಗಳಾಗಿವೆ. ಅಮೇರಿಕ ಮತ್ತು ಯೂರೋಪಿನ ಸ್ಥಳೀಯ ದಾಖಲೆಗಳು ಮತ್ತು ಲೆಕ್ಕಪತ್ರಗಳ ಪ್ರಕಾರ, ಯೂರೋಪ್ ಯುದ್ಧ ಅಥವಾ ಕದನದ ಸಂದರ್ಭದಲ್ಲಿನ ಅಮೆರಿಕ ನಾಗರಿಕತೆಯು ಹಲವು ಹೃದಯಸ್ಪರ್ಶಿ ಸಾಧನೆಯ ಸಿದ್ಧಿಗಳನ್ನು ಹೊಂದಿತ್ತು. ಉದಾಹರಣೆಗೆ, ಆಝ್ ಟೆಕ್ ( ಸೆಂಟ್ರಲ್ ಮೆಕ್ಸಿಕೊದಲ್ಲಿ ಆಝ್ಟೆಕ್ ಜನಾಂಗೀಯರು ಹೊಂದಿದ್ದ ನಾಗರೀಕತೆ) ಜನಾಂಗೀಯರು ಟೆನೊಕ್ ಟಿಟ್ಲನ್ ಹೆಸರಿನಲ್ಲಿ ಸುಂದರ ನಗರವನ್ನು ನಿರ್ಮಿಸಿದ್ದರು. ಅದೀಗ ಮೆಕ್ಸಿಕೊ ನಗರದಲ್ಲಿ ಅಂದಾಜು 2 ಲಕ್ಷ ಜನಸಂಖ್ಯೆ ಹೊಂದಿರುವ ವಿಶ್ವದ ಅತ್ಯಂತ ಆಕರ್ಷಕ ಪುರಾತನ ತಾಣವಾಗಿ ಗಮನ ಸೆಳೆದಿದೆ. ಅಮೆರಿಕ ನಾಗರಿಕತೆಯು ಖಗೋಳಶಾಸ್ತ್ರ ಮತ್ತು ಗಣಿತಶಾಸ್ತ್ರದಲ್ಲೂ ತನ್ನದೇ ಆದ ವಿಶೇಷ ಛಾಪು ಹೊತ್ತಿದೆ.
1492 ರಲ್ಲಿ ಕ್ರಿಸ್ಟೋಫರ್ ಕೊಲಂಬಸ್ ಯಾತ್ರೆ ಕೈಗೊಂಡ ಸ್ವಲ್ಪ ದಿನಗಳ ತರುವಾಯ, ಬೃಹತ್ ಪ್ರಮಾಣದಲ್ಲಿ ಅಮೆರಿಕಕ್ಕೆ ಯೂರೋಪಿಯನ್ನರ ವಸಾಹತು ಆರಂಭವಾಯಿತು. ಯೂರೋಪಿಯನ್ನರು ಮತ್ತು ಆಫ್ರಿಕನ್ನರು ತಮ್ಮ ಜೊತೆ ಹೊಸಹೊಸ ರೋಗಗಳನ್ನು ತಂದ ಪರಿಣಾಮವಾಗಿ, ಉತ್ತರ ಅಮೆರಿಕ ಮತ್ತು ದಕ್ಷಿಣ ಅಮೆರಿಕದ ಹಲವು ನಿವಾಸಿಗಳು ಸಾವನ್ನಪ್ಪಿದರು, ಇದರಿಂದಾಗಿ ಹದಿನಾರನೇ ಶತಮಾನದ ಮಧ್ಯಭಾಗದಲ್ಲಿ ಮೂಲ ಅಮೆರಿಕನ್ನರ ಜನಸಂಖ್ಯೆ ಗಣನೀಯವಾಗಿ ಕುಸಿಯಿತು, ಆದಾಗ್ಯೂ ಯೂರೋಪಿಯನ್ನರ ಸಂಪರ್ಕ ಉತ್ತಮವಾಗೇ ಇತ್ತು. ಅಮೆರಿಕ ಮೂಲನಿವಾಸಿಗಳು ಮತ್ತು ಯೂರೋಪಿನ ವಸಾಹತುದಾರರ ನಡುವೆ ವ್ಯಾಪಕ ಸಂಘರ್ಷವೇ ಉಂಟಾಯಿತು. ಇದರ ಪರಿಣಾಮವಾಗಿ, ಡೇವಿಡ್ ಸ್ಟಾನರ್ಡ್ ಎಂಬಾತ ಸ್ಥಳೀಯ ಜನರ ನರಮೇಧಕ್ಕೆ ಕರೆ ನೀಡಿದ. ಪೂರ್ವ ಯೂರೋಪಿಯನ್ ವಲಸೆಗಾರರು ಅಮೆರಿಕದಲ್ಲಿ ಕಾಲೋನಿಗಳನ್ನು ಸ್ಥಾಪಿಸುವ ಸರ್ಕಾರದ ಪ್ರಾಯೋಜಕತ್ವದ ಪ್ರಯತ್ನಗಳಲ್ಲಿ ಪದೇಪದೇ ಭಾಗಿಯಾಗಿದ್ದರು. ಧಾರ್ಮಿಕ ಕಿರುಕುಳ ತಾಳಲಾರದೆ ಊರು ಬಿಟ್ಟು ಓಡಿ ಬರುವವರು ಮತ್ತು ಆರ್ಥಿಕ ಅವಕಾಶ ಅರಸಿ ಬರುವವರ ಸಂಖ್ಯೆ ಹೆಚ್ಚಿದ ಹಿನ್ನೆಲೆಯಲ್ಲಿ ಅಮೆರಿಕಕ್ಕೆ ವಲಸೆ ಬರುವವರ ಸಂಖ್ಯೆಯೂ ಹೆಚ್ಚತೊಡಗಿತು. ಮಿಲಿಯನ್ ಗಟ್ಟಲೆ ಜನರನ್ನು ಅಮೆರಿಕಕ್ಕೆ ಬಲತ್ಕಾರವಾಗಿ ಸಾಗಿಸಲಾಯಿತು. ಅವರನ್ನು ಅಮೆರಿಕದಲ್ಲಿ ಗುಲಾಮರು, ಕೈದಿಗಳು ಮತ್ತು ಕರಾರಿನ ಸೇವಕರ ಕೆಲಸಗಳಿಗೆ ದೂಡಲಾಯಿತು.
ಈ ಭೂಭಾಗಕ್ಕೆ ಅಮೆರಿಕ ಹೆಸರಿನ ಮೊಟ್ಟಮೊದಲ ಬಳಕೆ ಆಗಿದ್ದು ೧೫೦೭ ಏಪ್ರಿಲ್ 25ರಂದು. ಹನ್ನೆರಡು ವಲಯಗಳನ್ನು ಒಳಗೊಂಡ ಅಮೆರಿಕ ನಕ್ಷೆಯು ಮೊದಲು ಸಣ್ಣ ಭೂಪಟದಲ್ಲಿ ಕಾಣಿಸಿಕೊಂಡಿತು. ನಂತರ, ಜರ್ಮನ್ ನಕ್ಷೆಗಾರ ಮಾರ್ಟಿನ್ ವಾಲ್ಡ್ ಸೀಮುಲ್ಲರ್, ಫ್ರಾನ್ಸ್ ನ ಸೈಂಟ್-ಡೆಸ್-ವೊಗಸ್ ನಲ್ಲಿ ಬೃಹತ್ ಗೋಡೆಯ ಮೇಲೆ ರಚಿಸಿದ ಭೂಪಟದಲ್ಲಿ ಅದು ವಿಜೃಂಭಿಸಿತು. ಇದಕ್ಕೆ ಪೂರಕವಾಗಿ Cosmographiae Introductio ಕೃತಿ ಉಲ್ಲೇಖಿಸಿರುವಂತೆ, ಬುದ್ಧಿವಂತ ಎಂದು ಗುರುತಿಸಿಕೊಂಡಿದ್ದ ’ಅಮೆರಿಕಸ್ ’ ಎಂಬ ವ್ಯಕ್ತಿ ಈ ಭೂಪ್ರದೇಶವನ್ನು ಕಂಡು ಹಿಡಿದ ನಂತರ, ಅಮೆರಿಜ್, ಲ್ಯಾಂಡ್ ಆಫ್ ಅಮೆರಿಕಸ್ ಅಥವಾ ಅಮೆರಿಕಾ ಬಗ್ಗೆ ಆಕ್ಷೇಪಿಸಲು ಯಾರಿಗೂ ಹಕ್ಕಿಲ್ಲ. ಯೂರೋಪ್ ಮತ್ತು ಏಷ್ಯಾ ಖಂಡಗಳೆರಡಕ್ಕೂ ಮಹಿಳೆಯಿಂದ ಹೆಸರು ಬಂದಿದೆ. ಫ್ಲೋರಂಟೈನ್ ಸಂಶೋಧಕ ಅಮೇರಿಗೋ ವೆಸ್ಪುಸಿಯ ಹೆಸರಿನ ಲ್ಯಾಟಿನ್ ರೂಪವೇ ಅಮೇರಿಕಸ್ ವೆಸ್ಪುಸಿಯಸ್ , ಮತ್ತು ಅಮೆರಿಕಸ್ ಪದದ ಸ್ತ್ರೀಲಿಂಗವೇ ಅಮೆರಿಕ . ಯುವರಾಜ ಅಮಲರಿಕ್ (*Amalareiks) ಎಂಬಾತನ ಹೆಸರಿನ ಇಟಲಿ ರೂಪವೇ ಅಮೆರಿಗೊ , ಇದರರ್ಥ ಅಮಾಲಿಯ ಆಡಳಿತಗಾರ ಎಂಬುದು. ದಕ್ಷಿಣ ಅಮೆರಿಕದ ಕರಾವಳಿ ಭಾಗದಲ್ಲಿ ವೆಸ್ಪುಸ್ಸಿ ಸಮುದ್ರಯಾನ ನಡೆಸಿದ್ದ ಹಾಗೆಯೇ ಹೆಸರಿಡುವ ವಿಷಯದಲ್ಲಿ ಆತನ ಪಾತ್ರ ಏನು ಎಂಬುದು ಇನ್ನೂ ಅಸ್ಪಷ್ಟವಾಗಿದೆ. ಈ ನೂತನ ಭೂಭಾಗಕ್ಕೆ ಅವನ ಹೆಸರು ಇಡಲು ವ್ಯಾಪಕ ಸೂಚನೆಗಳು ಪ್ರಸ್ತಾಪವಾದ ಬಗ್ಗೆ ಆತನಿಗೆ ತಿಳಿದಿರಲಿಲ್ಲ ಎಂದು ಕೆಲವು ಮೂಲಗಳು ಹೇಳುತ್ತವೆ. ಕೆಲವರು ಸುಳ್ಳುಪತ್ರ ಎಂದು ಪ್ರತಿಪಾದಿಸಿದ್ದ ಸೊಡೆರಿನಿ ಪತ್ರದಿಂದ ವಾಲ್ಡ್ ಸೀ ಮುಲ್ಲರ್ ತಪ್ಪು ಅಭಿಪ್ರಾಯ ಹೊಂದಿದ್ದಿರಲೂಬಹುದು. ಇದರ ಪರಿಣಾಮವಾಗಿ, ಈ ಭೂಭಾಗವನ್ನು ಮೊಟ್ಟಮೊದಲು ಅಮೆರಿಗೊ ವೆಸ್ಪುಸ್ಸಿ ಕಂಡುಹಿಡಿದ. ಈ ಭೂಭಾಗದ ಅಸ್ತಿತ್ವ ಇರುವುದನ್ನು ಮೊಟ್ಟಮೊದಲ ಬಾರಿಗೆ ನವೋದಯ ಯುಗದ ಯಾತ್ರಿಕರ ಗಮನ ಸೆಳೆದ ಕ್ರಿಸ್ಟೋಫರ್ ಕೊಲಂಬಸ್, 1506 ರಲ್ಲಿ ಕೊನೆಯುಸಿರೆಳೆದ (ಕೊನೆಯಲ್ಲಿ ಆತ ತಾನು ಅಂದುಕೊಂಡು ಹೊರಟಂತೆ ಇಂಡೀಸ್ ಅನ್ನು ಕಂಡುಹಿಡಿದೆ ಮತ್ತು ಕಾಲನಿಯಾಗಿ ಮಾಡಿಕೊಂಡೆ ಎಂದು ನಂಬಿದ್ದ), ಮತ್ತು ಆತ ವಾಲ್ಡ್ ಸೀ ಮುಲ್ಲರ್ ತೀರ್ಮಾನಗಳನ್ನು ವಿರೋಧಿಸಲಿಲ್ಲ.
ಅಮೆರಿಕದ ಉತ್ತರ ಬಿಂದುವಿನಲ್ಲಿ ಕಫೆಕ್ ಲುಬೆನ್ ದ್ವೀಪ ಪ್ರದೇಶವಿದೆ. ಅದು ಪೃಥ್ವಿಯ ಉತ್ತರ ದಿಕ್ಕಿನ ತುದಿಯಲ್ಲಿರುವ ಭೂಭಾಗವಾಗಿದೆ. ದಕ್ಷಿಣ ದಿಕ್ಕಿನ ತುದಿಯಲ್ಲಿ ದಕ್ಷಿಣ ಥುಲೆ ದ್ವೀಪ ಪ್ರದೇಶವಿದೆ, ಆದಾಗ್ಯೂ ಕೆಲವು ಸಮಯ ಅದನ್ನು ಅಂಟಾರ್ಕ್ಟಿಕಾದ ಭಾಗ ಎಂದು ಪರಿಗಣಿಸಲಾಗಿತ್ತು. ಪೂರ್ವ ದಿಕ್ಕಿನ ತುದಿಯಲ್ಲಿ ನಾರ್ಡೊಸ್ಟ್ರಂಡಿಜನ್ ಪ್ರಮುಖ ಭೂಭಾಗವಿದೆ. ಪಶ್ಚಿಮ ದಿಕ್ಕಿನ ತುದಿ ಭಾಗದಲ್ಲಿ ಅಟ್ಟು ದ್ವೀಪ ಪ್ರದೇಶವಿದೆ. ಅಮೆರಿಕದ ಮುಖ್ಯ ಭೂಭಾಗವು ಉತ್ತರದಿಂದ ದಕ್ಷಿಣ ದಿಕ್ಕಿಗೆ ಉದ್ದವಾಗಿ ಚಾಚಿರುವ ಪೃಥ್ವಿಯ ವಿಶಾಲವಾದ ಭೂಪ್ರದೇಶವಾಗಿದೆ. ಅದು, ಉತ್ತರ ಕೆನಡಾದ ಬೂಥಿಯಾ ಪರ್ಯಾಯ ದ್ವೀಪದಿಂದ ಚಿಲಿ ಪೆಟೊಗೊನಿಯಾದ ಕೇಪ್ ಫ್ರೊವರ್ಡ್ ವರೆಗೆ ಸುಮಾರು 14 ಸಾವಿರ ಕಿಲೋಮೀಟರ್ (ಸುಮಾರು 8700 ಮೈಲುಗಳು) ವರೆಗೆ ವ್ಯಾಪಿಸಿದೆ. ಅಮೆರಿಕದ ಪಶ್ಚಿಮ ದಿಕ್ಕಿನ ಪ್ರಮುಖ ಭೂಪ್ರದೇಶವು ಅಲಸ್ಕಾಗೆ ಸೇರಿದ ಸಿವರ್ಡ್ ಪರ್ಯಾಯ ದ್ವೀಪ ಪ್ರದೇಶದ ಕೊನೆಯ ಭಾಗವನ್ನು ಹೊಂದಿದೆ. ಪೂರ್ವ ದಿಕ್ಕಿನ ತುತ್ತತುದಿಯಲ್ಲಿ ಈಶಾನ್ಯ ಬ್ರೆಜಿಲ್ ನ ಪೊಂಟಾ ಡೊ ಸಿಕ್ಸಾಸ್ ಭೂಪ್ರದೇಶ ಇದೆ.
ಅಮೆರಿಕದ ಭೌಗೋಳಿಕ ಹಿನ್ನೆಲೆ ಅಥವಾ ಮೇಲ್ಮೈಲಕ್ಷಣವು ಅಲ್ಲಿನ ಕರಾವಳಿಯಲ್ಲಿರುವ ಪರ್ವತ ಶ್ರೇಣಿ ಮತ್ತು ಬೆಟ್ಟಗುಡ್ಡಗಳಿಂದ ಪ್ರಭಾವಿತವಾಗಿದೆ. ಆಂಡೆಸ್ (Andes) ಪರ್ವತ ಪ್ರದೇಶವು ದಕ್ಷಿಣ ಅಮೆರಿಕದ ಪಶ್ಚಿಮ ಕರಾವಳಿಯುದ್ದಕ್ಕೂ ವ್ಯಾಪಿಸಿದೆ, ಅಲ್ಲದೆ, ಪಶ್ಚಿಮ ಘಟ್ಟದ ಪರ್ವತ ಶ್ರೇಣಿ ಮತ್ತು ಬೆಟ್ಟಗುಡ್ಡಗಳು ಉತ್ತರ ಅಮೆರಿಕದ ಪಶ್ಚಿಮ ಭಾಗದಲ್ಲಿ ಹರಡಿಕೊಡಿವೆ. 2300 ಕಿಲೋಮೀಟರ್ ಉದ್ದ(1429 ಮೈಲು)ದ ಅಪ್ಪಲಚಿಯಾನ್ ಪರ್ವತ ಶ್ರೇಣಿಯು ಉತ್ತರ ಅಮೆರಿಕದ ಪೂರ್ವ ಕರಾವಳಿಯಲ್ಲಿರುವ ಅಲಬಾಮಾದಿಂದ ನ್ಯೂಫೌಂಡ್ ಲ್ಯಾಂಡ್ ವರೆಗೆ ಚಾಚಿಕೊಂಡಿದೆ. ಅಪ್ಪಲಚಿಯಾನ್ ಪರ್ವತ ಶ್ರೇಣಿಯ ಉತ್ತರ ದಿಕ್ಕಿನಲ್ಲಿ, ಆರ್ಕ್ಟಿಕ್ ಪರ್ವತ ಪ್ರದೇಶವು ಕೆನಡಾದ ಪೂರ್ವ ಕರಾವಳಿಯುದ್ದಕ್ಕೂ ವ್ಯಾಪಿಸಿದೆ. ಕರಾವಳಿ ಪರ್ವತ ಶ್ರೇಣಿಯ ನಡುವೆಯೂ, ಉತ್ತರ ಅಮೆರಿಕ ಸಮತಟ್ಟಾದ ಭೂಪ್ರದೇಶವನ್ನು ಹೊಂದಿದೆ. ಆಂತರಿಕ ಭೂಪ್ರದೇಶ(ಭೌತಿಕ ಗುಣಲಕ್ಷಣ ಹೊಂದಿರುವ ಭೂಮಿಯ ಮೇಲ್ಮೈ)ವು ಉತ್ತರ ಅಮೆರಿಕ ಖಂಡದ ಬಹುಪಾಲು ಭಾಗವನ್ನು ಆವರಿಸಿದೆ. ಕೆನಾಡಾ ಪ್ರಸ್ಥಭೂಮಿಯು ಉತ್ತರ ಅಮೆರಿಕದ 5 ಮಿಲಿಯನ್ ಕಿ.ಮೀ ಸ್ಕ್ವೇರ್ (km²) ಭೂಭಾಗವನ್ನು ಆವರಿಸಿದೆ ಮತ್ತು ಅದು ಸಹಜವಾಗಿ ಸಮತಟ್ಟಾಗಿದೆ. ಅಂತೆಯೇ, ದಕ್ಷಿಣ ಅಮೆರಿಕದ ಈಶಾನ್ಯ ಭಾಗವು ಸಮತಟ್ಟಾದ ಅಮೆಜಾನ್ ನದಿಯನ್ನು ಆವರಿಸಿಕೊಂಡಿದೆ.
ಪೂರ್ವ ಕರಾವಳಿಯಲ್ಲಿನ ಬ್ರೆಜಿಲ್ ಪ್ರಸ್ಥಭೂಮಿ ಚಪ್ಪಟ್ಟೆಯಾಗಿ ಕಂಡುಬಂದರೂ, ಭೂ ಮೇಲ್ಮೈ ಆಕಾರದಲ್ಲಿ ತುಸು ಬದಲಾವಣೆಗಳನ್ನು ತೋರುತ್ತದೆ. ದಕ್ಷಿಣ ಕರಾವಳಿಯ ಗ್ರನ್ ಚಕೊ ಮತ್ತು ಪಂಪಸ್ ಭಾಗಗಳು ವಿಶಾಲವಾದ ತಗ್ಗು ಭೂ ಪ್ರದೇಶಗಳನ್ನು ಹೊಂದಿವೆ.
ಕರಾವಳಿ ಪರ್ವತ ಶ್ರೇಣಿ ಮತ್ತು ಆಂತರಿಕ ಭೂಪ್ರದೇಶದ ಜೊತೆಗೆ, ಅಮೆರಿಕವು ಹಲವಾರು ನದಿ, ಜಲಾಶಯಗಳನ್ನು ಹೊಂದಿದೆ. ದಕ್ಷಿಣ ಅಮೆರಿಕದಲ್ಲಿ ಅಮೆಜಾನ್ ಅತಿದೊಡ್ಡ ನದಿ ಎಂದು ಹೆಸರುವಾಸಿಯಾಗಿದೆ. ಅತಿ ಹೆಚ್ಚು ನೀರು ಹರಿಸುವ ವಿಶ್ವದ ಏಕೈಕ ಅತಿದೊಡ್ಡ ನದಿ ಎಂಬ ಖ್ಯಾತಿಯೂ ಅದಕ್ಕಿದೆ. ಮಿಸ್ಸಿಸ್ಸಿಪ್ಪಿ ನದಿ ಉತ್ತರ ಅಮೆರಿಕದ ಅತಿದೊಡ್ಡ ನದಿ. ಇದು ವಿಶ್ವದ ಎರಡನೇ ಅತಿದೊಡ್ಡ ಜಲಾನಯನ ಪ್ರದೇಶ ಎಂಬ ಖ್ಯಾತಿ ಹೊಂದಿದೆ. ದಕ್ಶಿಣ ಅಮೆರಿಕದ ಎರಡನೇ ಅತಿದೊಡ್ಡ ಜಲಾನಯನ ಪ್ರದೇಶ ಎನಿಸಿರುವ ಪರಾನ ನದಿಯು 2.5 ಮಿಲಿಯನ್ ಚದುರ ಕಿಲೋಮೀಟರ್ ಪ್ರದೇಶವನ್ನು ಆವರಿಸಿಕೊಂಡಿದೆ.
ಅಮೆರಿಕದ ಒಟ್ಟು ಜನಸಂಖ್ಯೆಯು ಸುಮಾರು 85 ಕೋಟಿ 90 ಲಕ್ಶದಷ್ಟಿದೆ. ಈ ಜನಸಂಖ್ಯೆಯನ್ನು ಕೆಳಗಿನಂತೆ ವಿಂಗಡಿಸಲಾಗಿದೆ.
ಇವನ್ನೂ ಗಮನಿಸಿ
ಅಮೆರಿಕದ ಅತ್ಯಂತ ಜನಪ್ರಿಯ ನಗರಗಳೆಂದರೆ ಮೆಕ್ಸಿಕೊ ರಾಜಧಾನಿ ಮೆಕ್ಸಿಕೊ ಸಿಟಿ, ಅಮೆರಿಕ ಸಂಯುಕ್ತ ಸಂಸ್ಥಾನದ ಪೂರ್ವ ಕರಾವಳಿಯಲ್ಲಿ ನೆಲೆ ನಿಂತಿರುವ ನ್ಯೂಯಾರ್ಕ್ ನಗರ, ಬ್ರೆಜಿಲ್ ರಾಜಧಾನಿ ಸಾವ್ ಪಾಲೊ. ಈ ಮೇಲಿನ ಯಾವ ನಗರ ಕೇಂದ್ರ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿದೆ ಎಂಬ ಪರಿಗಣನೆಯು, ಜನಸಂಖ್ಯೆ ಕಂಡು ಹಿಡಿಯಲು ಬಳಸುವ ಮಾನದಂಡವನ್ನು ಆಧರಿಸಿದೆ.
ನಗರ | ದೇಶ | ನಗರ ಯುಕ್ತ ಜನಸಂಖ್ಯೆ | ಶ್ರೇಣಿ | ನಗರ ಪ್ರದೇಶ ಜನಸಂಖ್ಯೆ | ಶ್ರೇಣಿ | ಮೆಟ್ರೋನಗರ ಪ್ರದೇಶದ ಜನಸಂಖ್ಯೆ | ಶ್ರೇಣಿ |
---|---|---|---|---|---|---|---|
ಸಾವೊ ಪೌಲೊ | Brazil | 11,037,593 | 1st | 19,505,000 | 2nd | 18,850,000 | 3ನೇ |
ಮೆಕ್ಸಿಕೋ ನಗರ | ಮೆಕ್ಸಿಕೋ | 8,841,916 | 2nd | 18,585,000 | 3rd | 20,450,000 | 1ನೇ |
ನ್ಯೂಯಾರ್ಕ್ ನಗರ | ಅಮೇರಿಕ ಸಂಯುಕ್ತ ಸಂಸ್ಥಾನ | 8,363,710 | 3rd | 21,295,000 | 1st | 19,750,000 | 2ನೇ |
ಅಮೆರಿಕದ ಜನಸಂಖ್ಯೆಯು ಅಲ್ಲಿನ ಏಳು ಬೃಹತ್ ಜನಾಂಗೀಯ ಗುಂಪುಗಳ ಸಂತತಿ ಮತ್ತು ಅವುಗಳ ಸಂಯೋಗದಿಂದ ಸೃಷ್ಟಿಯಾಗಿದೆ.
ಬಹುಸಂಖ್ಯಾತ ಜನರು ಲ್ಯಾಟಿನ್ ಅಮೆರಿಕದಲ್ಲಿ ನೆಲೆಸಿದ್ದಾರೆ, ಪ್ರಭಾವಶಾಲಿ ಸಂಸ್ಕೃತಿ ಹೊಂದಿರುವ ಲ್ಯಾಟಿನ್ ಅಮೆರಿಕದ ಮೂಲಬೇರು ಲ್ಯಾಟಿನ್ ಯೂರೋಪ್ ನಲ್ಲಿದೆ (ಎರಡು ಪ್ರಭಾವಶಾಲಿ ಸ್ಪಾನಿಷ್ ಮತ್ತು ಪೋರ್ಚುಗೀಸ್ ಭಾಷೆಗಳೂ ಸೇರಿವೆ. ಈ ಭಾಷೆಗಳಿಗೆ ನಿಯೋಲ್ಯಾಟಿನ್ ಎಂದೂ ಕರೆಯುತ್ತಾರೆ), ಇನ್ನೂ ನಿರ್ದಿಷ್ಟವಾಗಿ ಇಬೆರಿಯಾ ರಾಷ್ಟ್ರಗಳಾದ ಪೋರ್ಚುಗಲ್ ಮತ್ತು ಸ್ಪೇನ್ (ಇಬೆರೊ ಅಮೆರಿಕ ಎಂಬ ಸಮಾನಾರ್ಥಕ ಪದ ಬಳಕೆಯೂ ಇದೆ)ನಲ್ಲೂ ಈ ಮೂಲಬೇರು ನೆಲೆಸಿದೆ. ಲ್ಯಾಟಿನ್ ಅಮೆರಿಕವು ಆಂಗ್ಲೊ ಅಮೆರಿಕದೊಂದಿಗೆ ಗುಣಲಕ್ಷಣಗಳಲ್ಲಿ ಹಲವು ವೈರುಧ್ಯಗಳನ್ನು (ಜರ್ಮನ್ನರ ಭಾಷೆ ಇಂಗ್ಲಿಷ್, ಇಲ್ಲಿ ಹೆಚ್ಚು ಬಳಕೆಯಲ್ಲಿದೆ) ಹೊಂದಿದೆ. ಅದು ಕೆನಡಾ (ಫ್ರೆಂಚ್ ಭಾಷಿಕರನ್ನು ಹೊರತುಪಡಿಸಿದ ಕೆನಡಾದ ಮೂಲಬೇರು ಲ್ಯಾಟಿನ್ ಯೂರೋಪ್ (ಫ್ರಾನ್ಸ್)ನಲ್ಲಿದೆ : Québec and Acadia ನೋಡಿ) ಮತ್ತು ಸಂಯುಕ್ತ ಸಂಸ್ಥಾನಗಳನ್ನು ಒಳಗೊಂಡಿದೆ. ಇವೆರದೂ ಪ್ರದೇಶಗಳು ಉತ್ತರ ಅಮೆರಿಕದಲ್ಲಿ ನೆಲೆಗೊಂಡಿದ್ದು, ಅಲ್ಲಿ ಹೆಚ್ಚಾಗಿ ಆಂಗ್ಲೊ-ಸಕ್ಸನ್ ಮತ್ತು ಜರ್ಮನ್ ಬೇರುಗಳು ಇವೆ.
ಅಮೆರಿಕದಲ್ಲಿ ಹೆಚ್ಚಾಗಿ ರೂಢಿಯಲ್ಲಿರುವ ಪ್ರಮುಖ ಧರ್ಮ ಮತ್ತು ನಂಬಿಕೆಗಳು ಕೆಳಕಂಡಂತಿವೆ:
ಅಮೆರಿಕದಲ್ಲಿರುವ ಇತರೆ ಧರ್ಮಗಳೆಂದರೆ, ಸಿಖ್, ಬುದ್ಧ, ಹಿಂದು, ಬಹಾಯ್, ಸ್ಥಳೀಯವಾಗಿ ರೂಪುಗೊಂಡಿರುವ ವೈವಿಧ್ಯಪೂರ್ಣವಾದ ಹಲವು ಧರ್ಮಗಳು, ಅವುಗಳಲ್ಲಿ ಬಹಳಷ್ಟು ಧರ್ಮಗಳನ್ನು ಸರ್ವ ಚೇತನ ವಾದ, ಮತ್ತೆ ಕೆಲವನ್ನು ಆಫ್ರಿಕಾ ಮತ್ತು ಆಫ್ರಿಕಾ ಮೂಲದಿಂದ ಪಡೆದ ಧರ್ಮಗಳೆಂದು ವರ್ಗೀಕರಿಸಲಾಗಿದೆ. ವಿವಿಧ ಮತ ಪಂಗಡಗಳ ನಂಬಿಕೆಗಳು ಖಂಡದುದ್ದಕ್ಕೂ ರೂಢಿಯಲ್ಲಿರುವುದನ್ನು ಕಾಣಬಹುದಾಗಿದೆ.
ಅಮೆರಿಕದಲ್ಲಿ ಹಲವು ಭಾಷೆಗಳನ್ನು ಮಾತನ್ನಾಡಲಾಗುತ್ತದೆ. ಅವುಗಳಲ್ಲಿ ಕೆಲವು ಐರೋಪ್ಯ ಮೂಲದಿಂದ ಬಂದವಾದರೆ, ಮತ್ತೆ ಕೆಲವನ್ನು ಸ್ಥಳೀಯ ಜನರು ಮಾತನ್ನಾಡುತ್ತಾರೆ ಅಥವಾ ಹಲವು ನುಡಿಗಟ್ಟುಗಳ ಸಂಯೋಗದಿಂದ ಸೃಷ್ಟಿಯಾದ ಭಾಷೆ, ಉದಾಹರಣೆಗೆ ವಿವಿಧ ನೀಗ್ರೊ ಅಥವಾ ಕ್ರಿಯೋಲ ಸಂತತಿ ಉಪಯೋಗಿಸುವ ಭಾಷೆ ಇಲ್ಲಿ ಬಳಕೆಯಲ್ಲಿವೆ. ಲ್ಯಾಟಿನ್ ಅಮೆರಿಕದ ಪ್ರಭಾವಿಶಾಲಿ ಭಾಷೆ ಎಂದರೆ ಸ್ಪಾನಿಷ್, ಆದಾಗ್ಯೂ, ಲ್ಯಾಟಿನ್ ಅಮೆರಿಕದ ಬೃಹತ್ ರಾಷ್ಟ್ರವೆನಿಸಿರುವ ಬ್ರೆಜಿಲ್ ನಲ್ಲಿ ಮಾತ್ರ ಪೋರ್ಚುಗೀಸನ್ನು ಹೆಚ್ಚಾಗಿ ಮಾತನ್ನಾಡುತ್ತಾರೆ. ಫ್ರೆಂಚ್ ಮತ್ತು ಇಂಗ್ಲಿಷ್ ಮಾತನಾಡುವ ಜನರಿಂದಲೇ ಸುತ್ತುವರಿದಿರುವ ಸಣ್ಣ ಪ್ರದೇಶಗಳು ಲ್ಯಾಟಿನ್ ಅಮೆರಿಕದಲ್ಲಿವೆ, ಅದರಲ್ಲೂ ಬಹುಮುಖ್ಯವಾದವು ಅಂದರೆ ಫ್ರೆಂಚ್ ಗಯಾನಾ ಮತ್ತು ಬೆಲಿಝೆ, ಮತ್ತು ಫ್ರೆಂಚ್ ಮೂಲದ ಹೈಟಿ ಕ್ರಿಯೋಲ ಭಾಷೆ ಅಥವಾ ನೀಗ್ರೊ ಭಾಷೆ ಹೈಟಿ ರಾಷ್ಟ್ರದಲ್ಲಿ ಹೆಚ್ಚಿನ ಪ್ರಾಬಲ್ಯ ಹೊಂದಿದೆ.
ಆಂಗ್ಲೊ ಅಮೆರಿಕಗಿಂತ ಲ್ಯಾಟಿನ್ ಅಮೆರಿಕದಲ್ಲಿ ದೇಶಿಯ ಭಾಷೆಗಳು ಹೆಚ್ಚಿನ ಪ್ರಾಬಲ್ಯ ಹೊಂದಿವೆ, Nahuatl, Quechua, Aymara, ಮತ್ತು Guaraní ಭಾಷೆಗಳು ಅವುಗಳಲ್ಲಿ ಪ್ರಮುಖವಾದವು. ಇತರೆ ಹಲವು ದೇಶಿಯ ಭಾಷೆಗಳನ್ನು ಆಂಗ್ಲೊ-ಅಮೆರಿಕ ಮತ್ತು ಲ್ಯಾಟಿನ್ ಅಮೆರಿಕಗಳೆರಡರ ಉದ್ದಗಲಕ್ಕೂ ಅಪರೂಪವಾಗಿ ಮಾತನ್ನಾಡುತ್ತಾರೆ ಹೈಟಿ ಕ್ರಿಯೋಲ ಹೊರತುಪಡಿಸಿದ ಸಾಮಾನ್ಯ ಕ್ರಿಯೋಲ ಭಾಷೆಯನ್ನು ಲ್ಯಾಟಿನ್ ಅಮೆರಿಕದ ವಿವಿಧ ಭಾಗಗಳಲ್ಲಿ ಮಾತನ್ನಾಡುತ್ತಾರೆ.
ಹೆಸರೇ ಸೂಚಿಸುವಂತೆ, ಆಂಗ್ಲೊ ಅಮೆರಿಕದ ಪ್ರಬಲ ಭಾಷೆ ಇಂಗ್ಲಿಷ್. ಕೆನಡಾದಲ್ಲಿ ಫ್ರೆಂಚ್ ಸಹ ಅಧಿಕೃತ ಭಾಷೆ, ಕ್ಯುಬೆಕ್ (Québec)ನಲ್ಲಿ ಪ್ರಬಲ ಭಾಷೆಯಾಗಿರುವ ಇದು, ನ್ಯೂ ಬ್ರನ್ ಸ್ವಿಕ್ (New Brunswick)ನಲ್ಲಿ ಇಂಗ್ಲಿಷ್ ಜೊತೆ ಅಧಿಕೃತ ಭಾಷೆಯಾಗಿದೆ. ಅಮೆರಿಕದ ರಾಜ್ಯ ಲೂಸಿಯಾನಾದಲ್ಲಿ ಇದು ಅತಿಮುಖ್ಯ ಭಾಷೆಯಾಗಿದೆ. ನೈಋತ್ಯ ಸಂಯುಕ್ತ ಸಂಸ್ಥಾನದಲ್ಲಿ ಸ್ಪಾನಿಷ್, ತನ್ನ ಅಸ್ತಿತ್ವವನ್ನು ಮುಂದುವರೆಸಿಕೊಂಡು ಬಂದಿದೆ. ಇದು ನ್ಯೂ ಸ್ಪೇನ್ ನ ಪ್ರಾಂತ್ಯದ (Viceroyalty) ಪ್ರತ್ಯೇಕ ಭಾಗದ ರಚನೆಗೆ ಕಾರಣವಾಗಿದೆ, ಅದರಲ್ಲೂ ವಿಶೇಷವಾಗಿ ಕ್ಯಾಲಿಫೋರ್ನಿಯಾ ಮತ್ತು ನ್ಯೂ ಮೆಕ್ಸಿಕೊದಲ್ಲಿ ಅದು ತನ್ನ ಅಸ್ತಿತ್ವ ಮುಂದುಬರೆಸಿಕೊಂಡು ಬಂದಿದೆ. 17 ನೇ ಶತಮಾನದ ತರುವಾಯ ಅಲ್ಲಿ ವಿಭಿನ್ನ ಸ್ಪಾನಿಷ್ ಭಾಷೆಯ ಬಳಕೆಯಾಗುತ್ತಾ ಬಂದಿದೆ. ಲ್ಯಾಟಿನ್ ಅಮೆರಿಕದಿಂದ ವಲಸೆ ಬರುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚಿನವರೆಗೆ ಸಂಯುಕ್ತ ಸಂಸ್ಥಾನದ ಉಳಿದ ಭಾಗಗಳಲ್ಲೂ ಸ್ಪಾನಿಷ್ ಅನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಅತ್ಯದಿಕ ಪ್ರಮಾಣದ ವಲಸೆಯಿಂದಾಗಿ ಆಂಗ್ಲೊ ಅಮೆರಿಕದಲ್ಲಿ ಮಹತ್ವದ ಭಾಷಾ ವೈವಿಧ್ಯತೆ ಕಾಣಿಸಿಕೊಂಡಿದೆ, ಸಂಯುಕ್ತ ಸಂಸ್ಥಾನವೊಂದರಲ್ಲೇ 300 ಕ್ಕೂ ಅಧಿಕ ಭಾಷೆಗಳನ್ನು ಮಾತನ್ನಾಡುತ್ತಿರುವುದು ತಿಳಿದು ಬಂದಿದೆ, ಆದರೆ ಬಹುಪಾಲು ಭಾಷೆಗಳನ್ನು ಚಿಕ್ಕ ಪ್ರಾಂತ್ಯಗಳಲ್ಲಿ ಸಣ್ಣ ಸಣ್ಣ ವಲಸೆ ಗುಂಪುಗಳು ಮಾತ್ರ ಬಳಸುತ್ತಿವೆ. ಗಯಾನಾ, ಸುರಿನಾಮೆ ಮತ್ತು ಬೆಲಿಝೆ ರಾಷ್ಟ್ರಗಳು ಆಂಗ್ಲೊ ಅಮೆರಿಕಕ್ಕಾಗಲಿ ಅಥವಾ ಲ್ಯಾಟಿನ್ ಅಮೆರಿಕಕ್ಕಾಗಲಿ ಒಳಪಟ್ಟಿಲ್ಲ ಎಂದು ಸಾಮಾನ್ಯವಾಗಿ ಪರಿಗಣಿಸಲಾಗಿದೆ. ಏಕೆಂದರೆ, ಉಭಯ ರಾಷ್ಟ್ರಗಳ ನಡುವೆ ಮಹತ್ವದ ಭಾಷಾವಾರು ವ್ಯತ್ಯಾಸ, ಭೌಗೋಳಿಕ ಭಿನ್ನತೆ ಮತ್ತು ಸಂಸ್ಕೃತಿ ಹಾಗೂ ಚಾರಿತ್ರಿಕ ವ್ಯತ್ಯಾಸಗಳಿವೆ. ಗಯಾನಾ ಮತ್ತು ಬೆಲಿಝೆಯಲ್ಲಿ ಇಂಗ್ಲಿಷ್ ಪ್ರಾಥಮಿಕ ಭಾಷೆ, ಸುರಿನಾಮೆಯಲ್ಲಿ ಡಚ್ ಅಧಿಕೃತ ಮತ್ತು ಲಿಖಿತ ಭಾಷೆ.
ಸ್ಥಳೀಯವಲ್ಲದ ಬಹುಪಾಲು ಭಾಷೆಗಳು ವಿವಿಧ ಪದ ಬಳಕೆ ಮತ್ತು ಭಾಷಾ ಪ್ರಯೋಗಗಳನ್ನು ಹೊಂದಿರುತ್ತವೆ, ಮಾತೃ ರಾಷ್ಟ್ರಕ್ಕಿಂತ ವಿಭಿನ್ನ ಬಳಕೆಯ ಕ್ರಮ ಹೊಂದಿರುತ್ತವೆ, ಆದರೂ ಸಾಮಾನ್ಯವಾಗಿ ಅವುಗಳನ್ನು ಗ್ರಹಿಸಲು ಸಾಧ್ಯ. ಕೆಲವು ಭಾಷೆಗಳು ಸಂಯೋಜನೆಗೊಂಡು, ಅದರ ಪರಿಣಾಮವಾಗಿ ಪರಿಪೂರ್ಣ ಹೊಸ ಭಾಷೆಗಳೇ ಸೃಷ್ಟಿಯಾಗಿವೆ. ಅವುಗಳಲ್ಲಿ ಪಪಿಯಾಮೆಂಟು ಭಾಷೆ ಮುಖ್ಯವಾದುದು. ಇದು ಪೋರ್ಚುಗೀಸ್, ಸ್ಪಾನಿಷ್, ಡಚ್, ಅರವಕ್ ಸ್ಥಳೀಯ ಭಾಷೆ, ಹಲವಾರು ಆಫ್ರಿಕಾ ಭಾಷೆಗಳು ಮತ್ತು ಇತ್ತೀಚಿಗೆ ಇಂಗ್ಲಿಷ್ ಭಾಷೆಗಳ (ಈ ಪ್ರದೇಶಗಳ ವಸಾಹತುಗಾರರನ್ನು ಇದು ಪ್ರತಿನಿಧಿಸುತ್ತದೆ) ಸಂಯೋಜನೆಯಿಂದ ಈ ಭಾಷೆ ಸೃಷ್ಟಿಯಾಗಿದೆ. ವಲಸೆಯ ಏಕೈಕ ಕಾರಣದಿಂದಾಗಿ, ಹಲವಾರು ಸಮುದಾಯಗಳು ವಿಶ್ವದ ಎಲ್ಲಾ ಭಾಗಗಳಲ್ಲಿ ವಿವಿಧ ಭಾಷೆಗಳನ್ನು ಮಾತನ್ನಾಡುತ್ತಿದ್ದಾರೆ, ಅದರಲ್ಲೂ ವಿಶೇಷವಾಗಿ ಸಂಯುಕ್ತ ಸಂಸ್ಥಾನ, ಬ್ರೆಜಿಲ್, ಅರ್ಜೆಂಟೈನಾ ಮತ್ತಿ ಕೆನಡಾ ರಾಷ್ಟ್ರಗಳು ವಲಸೆಗಾರರ ಪ್ರಮುಖ ತಾಣಗಳಾಗಿವೆ.
ವಿಶ್ವದ ಹಲವು ಭಾಗಗಳಲ್ಲಿ, ಸಂಯುಕ್ತ ಸಂಸ್ಥಾನಕ್ಕೆ ಸಾಮಾನ್ಯವಾಗಿ ಅಮೆರಿಕ ಎಂಬ ಏಕವಾಚಕ ಪದವನ್ನು ಬಳಸುತ್ತಾರೆ, ಆದಾಗ್ಯೂ, ಅಮೆರಿಕಸ್ ಎಂಬ s ಜೊತೆಗಿನ ಬಹುವಾಚಕ ನಿರ್ದಿಷ್ಟ ಉಪಪದವನ್ನು ಪಶ್ಚಿಮ ಗೋಳಾರ್ಧದ ಭೂಪ್ರದೇಶ ಮತ್ತು ಪ್ರಾಂತ್ಯವನ್ನು ಉಲ್ಲೇಖಿಸಲು ಬಳಸುತ್ತಾರೆ. ಅಮೆರಿಕ ಹೆಸರನ್ನು ಒಟ್ಟಾರೆಯಾಗಿ ಮೇಲಿನಂತೆ ಬಳಸುವುದು ಸರ್ವೇಸಾಮಾನ್ಯ; ಉದಾಹರಣೆಗೆ, ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಐದು ಖಂಡಗಳಿಗೂ ಒಟ್ಟಾರೆಯಾಗಿ ಅಮೆರಿಕ ಹೆಸರನ್ನೇ ಪರಿಗಣಿಸಿದೆ, ಅಲ್ಲದೆ, ಒಲಿಂಪಿಕ್ ಚಿಹ್ನೆಯಲ್ಲೂ ಚಿತ್ರಿಸಿದೆ. ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಬೇರೆ ರಾಷ್ಟ್ರಗಳಲ್ಲಿ ಸಾಮಾನ್ಯವಾಗಿ ದೇಶಕ್ಕೆ ಅಮೆರಿಕ ಮತ್ತು ಪ್ರಜೆ ಅಥವಾ ನಾಗರಿಕರಿಗೆ ಅಮೆರಿಕನ್ನರು ಎಂದು ಉಲ್ಲೇಖಿಸುತ್ತಾರೆ, ಮೇಲಿನ ಸಂದರ್ಭಗಳಲ್ಲಿ ವಿವಿಧ ಜನರು ಉಪಯೋಗಿಸಿರುವ ಇಂತಹ ಪದಗಳ ದುರ್ಬಳಕೆಗೆ ಅಮೆರಿಕದ ಹಲವು ಮಂದಿ ತಮ್ಮ ಅತೃಪ್ತಿ ವ್ಯಕ್ತಪಡಿಸಿದ್ದಾರೆ, ಅಲ್ಲದೆ, ಈ ರೀತಿಯ ಪದಗಳ ಬಳಕೆಯಾಗುವುದನ್ನು ಆದಷ್ಟು ತಡೆಯಲಾಗುತ್ತಿದೆ. ಕೆನಡಾದಲ್ಲಿ, ಅಲ್ಲಿನ ದಕ್ಷಿಣ ಭಾಗದ ಜನರು ಅಪರೂಪವಾಗಿ ಅಮೆರಿಕ ಪದವನ್ನು ಸಾಮಾನ್ಯವಾಗಿ ಯುನೈಟೆಡ್ ಸ್ಟೇಟ್ಸ್ , ಯು.ಎಸ್. , ಅಥವಾ (ಔಪಚಾರಿಕವಾಗಿ) ಸ್ಟೇಟ್ಸ್ ಪರ್ಯಾಯ ಪದಗಳಿಂದಲೂ ಉಲ್ಲೇಖಿಸುತ್ತಾರೆ. ಇಂಗ್ಲಿಷ್ ಅರ್ಥಕೋಶ ಮತ್ತು ಗ್ರಂಥಗಳಲ್ಲಿ ಅಮೆರಿಕ ಪದ ಬಳಕೆ ಮತ್ತು ಉಚ್ಚಾರಣೆಯಲ್ಲಿ ವ್ಯತ್ಯಾಸಗಳಿವೆ.
ಅಮೆರಿಕ ಅಥವಾ ಅಮೆರಿಕಸ್ ಪದಗಳಲ್ಲಿ ಯಾವ ಪದ ಬಳಕೆ ಆಗುತ್ತಿದೆ ಎಂಬದಕ್ಕಿಂತ ಅಮೆರಿಕದಲ್ಲಿ ವಾಸಿಸುತ್ತಿರುವ ಹಲವಾರು ಜನರನ್ನು ವ್ಯಕ್ತಿಗತವಾಗಿ ಗುರುತಿಸಲು ಅಮೆರಿಕನ್ ಪದ ಹೆಚ್ಚಾಗಿ ಬಳಕೆಯಾಗುತ್ತಿದೆ. ಆದಾಗ್ಯೂ, ಅಮೆರಿಕ ಸಂಯುಕ್ತ ಸಂಸ್ಥಾನದ ನಾಗರಿಕರು, ನಿವಾಸಿಗಳು ಅಥವಾ ರಾಷ್ಟ್ರೀಯರನ್ನು ಪರಿಪೂರ್ಣವಾಗಿ ಉಲ್ಲೇಖಿಸಲು ಇಂಗ್ಲಿಷ್ ಮಾತನಾಡುವ ಬಹುಪಾಲು ಭಾಗಗಳಲ್ಲಿ ಅಮೆರಿಕನ್ ಪದ ಬಳಕೆ ಇದೆ. ಇದರ ಜೊತೆಗೆ, ಅಮೆರಿಕನ್ನರು ಎಂದು ಕರೆಸಿಕೊಳ್ಳಲು ಹಲವು ಕೆನಡಿಯನ್ನರು ತಮ್ಮ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕೆನಡಿಯನ್ನರು ಯು.ಎಸ್. ನಾಗರಿಕರು ಎಂಬ ತಪ್ಪು ಗ್ರಹಿಕೆ ಇದಕ್ಕೆ ಕಾರಣ, ಹಾಗೂ ಕೆನಡಿಯನ್ ಇಂಗ್ಲಿಷ್ ಮತ್ತು ಅಮೆರಿಕನ್ ಇಂಗ್ಲಿಷ್ ಪದ ಪ್ರಯೋಗದ ವ್ಯತ್ಯಾಸ ಅರಿಯದ ಹೊರದೇಶದ ಜನರ ತಪ್ಪು ಗ್ರಹಿಕೆಯೂ ಹೌದು.
ಸ್ಪಾನಿಷ್ ನಲ್ಲಿ, ಅಮೆರಿಕ ಎಂದರೆ ಒಂದು ಖಂಡದ ಹೆಸರು. ಈ ಖಂಡವು ಸುಡಾಮೆರಿಕ ಮತ್ತು ನಾರ್ಟೆಅಮೆರಿಕ ಉಪಖಂಡಗಳಿಂದ ರೂಪುಗೊಂಡಿದ್ದು, ಸೆಂಟ್ರೊಅಮೆರಿಕ ಭೂಭಾಗ ಮತ್ತು ಆಂಟಿಲ್ಲಾಸ್ ದ್ವೀಪ ಪ್ರದೇಶವನ್ನೂ ಒಳಗೊಂಡಿದೆ. ಅಮೆರಿಕ ದ ವ್ಯಕ್ತಿಗೆ ಸ್ಪಾನಿಷ್ ನಲ್ಲಿ Americano/a ಎಂಬ ಪದ ಬಳಕೆಯಲ್ಲಿದೆ. ಅಂತೆಯೇ, Europa ದೇಶದ ವ್ಯಕ್ಟಿಗೆ europeo or europea ಎಂಬ ಪದ ಬಳಸುತ್ತಾರೆ. sudamericano/a , centroamericano/a , antillano/a and norteamericano/a ಪದಗಳನ್ನು ವಿಶೇಷವಾಗಿ ವ್ಯಕ್ತಿಯು ವಾಸಿಸುವ ಸ್ಥಳಗಳನ್ನು ಉಲ್ಲೇಖಿಸಲು ಬಳಸಲಾಗುತ್ತದೆ. ಅಮೆರಿಕ ಸಂಯುಕ್ತ ಸಂಸ್ಥಾನದ ನಾಗರಿಕರು americano ಅಥವಾ americana ಪದಕ್ಕೆ ಬದಲಾಗಿ ಸಾಮಾನ್ಯವಾಗಿ estadounidense ಪದವನ್ನು (ಅದರ ಅಕ್ಷರ ಅನುವಾದ ರೂಪ "United-Staten" ಎಂಬುದು) ಬಳಸುತ್ತಾರೆ, ಮತ್ತು ರಾಷ್ಟ್ರದ ಹೆಸರನ್ನು Estados Unidos de Norteamérica ಎಂದು ಅನುವಾದಿಸಲಾಗುತ್ತದೆ. ಜೊತೆಗೆ, norteamericano ಪದವನ್ನು ಸಂಯುಕ್ತ ಸಂಸ್ಥಾನದ ನಾಗರಿಕರನ್ನು ಉಲ್ಲೇಖಿಸಲು ಬಳಸಲಾಗುತ್ತದೆ. ಈ ಪದವನ್ನು ಮೂಲತ: ಸಂಯುಕ್ತ ಸಂಸ್ಥಾನದ ನಾಗರಿಕರಿಗೆ ಪ್ರಾಥಮಿಕವಾಗಿ, ಉತ್ತರ ಅಮೆರಿಕದ ಇತರೆ ರಾಷ್ಟ್ರಗಳಿಗೆ ಅಪರೂಪವಾಗಿ ಬಳಸಲಾಗುತ್ತಿದೆ.
ಪೋರ್ಚುಗೀಸ್ ನಲ್ಲಿ, ಅಖಂಡ ಅಮೆರಿಕ ವನ್ನು ಪ್ರಸ್ತಾಪಿಸುವಾಗ americano ಪದವನ್ನು ಬಳಸುತ್ತಾರೆ. ಆದರೆ, ಬ್ರೆಜಿಲ್ ಮತ್ತು ಪೋರ್ಚುಗಲ್ ನಲ್ಲಿ, ಇದನ್ನು ಸಂಯುಕ್ತ ಸಂಸ್ಥಾನದ ನಾಗರಿಕರನ್ನು ಉಲ್ಲೇಖಿಸಲು ಉಪಯೋಗಿಸುತ್ತಾರೆ. ಅತ್ಯಲ್ಪ ವಿಭಿನ್ನಾರ್ಥ ನೀಡುವ ಪದ, estadunidense (ಬ್ರೆಜಿಲ್ನಲ್ಲಿ ಬಳಸುತ್ತಾರೆ), "United Statian" ನಂತಹ ಪದ ( ಅಥವಾ ಸ್ಪಾನಿಷ್ ಭಾಷೆಯಲ್ಲಿ "estadounidense"), ಮತ್ತು "ianque" - "Yankee" ಪದದ ಪೋರ್ಚುಗೀಸ್ ರೂಪ - ಈ ಪದಗಳನ್ನು ಅಪರೂಪವಾಗಿ ಬಳಸಲಾಗುತ್ತದೆ. ಆದಾಗ್ಯೂ, ದೇಶಕ್ಕೆ ಅಮೆರಿಕ ಪದವನ್ನು ಅಪರೂಪವಾಗಿ ಸಮಾನಾರ್ಥಕ ಪದವಾಗಿ ಬಳಸಲಾಗುತ್ತಿದೆ, ಆದರೆ ಮುದ್ರಣ ಸಂದರ್ಭಗಳನ್ನು ಹೊರತುಪಡಿಸಿದ ಔಪಚಾರಿಕ ಸಂದರ್ಭಗಳಲ್ಲಿ ಅಮೆರಿಕವನ್ನು Estados Unidos da América (ಅಂದರೆ ಅಮೆರಿಕ ಸಂಯುಕ್ತ ಸಂಸ್ಥಾನ ಎಂದರ್ಥ) ಅಥವಾ ಇನ್ನೂ ಸರಳವಾಗಿ, Estados Unidos (ಅಂದರೆ ಸಂಯುಕ್ತ ಸಂಸ್ಥಾನ) ಎಂದು ಕರೆಯುತ್ತಾರೆ. ಪೋರ್ಚುಗಲ್ ಮತ್ತು ಬ್ರೆಜಿಲ್ ನಲ್ಲಿ ಈ ಪದಗಳ ಬಳಕೆಯಲ್ಲಿ ಸ್ವಲ್ಪ ವ್ಯತ್ಯಾಸಗಳಿವೆ, ಪೋರ್ಚುಗೀಸರು ಅಮೆರಿಕ ಪದವನ್ನು ರಾಷ್ಟ್ರಕ್ಕೆ ಬಳಸಲು ಹೆಚ್ಚು ಒಲವು ಹೊಂದಿದ್ದಾರೆ.
américain ಪದವನ್ನು ಸಂಯುಕ್ತ ಸಂಸ್ಥಾನಕ್ಕೆ ಬಳಸಬೇಕೇ ಅಥವಾ ಅಮೆರಿಕನ್ ಖಂಡಗಳಿಗೆ ಬಳಸಬೇಕೇ ಎಂಬ ಗೊಂದಲ ಇಂಗ್ಲಿಷ್ನಲ್ಲಿ ಇರುವಂತೆ, ಫ್ರೆಂಚ್ನಲ್ಲೂ ಇದೆ. Amérique ನಾಮಪದವನ್ನು ಕೆಲವು ವೇಳೆ ಒಂದು ಸಂಪೂರ್ಣ ಖಂಡಕ್ಕೆ ಉಲ್ಲೇಖಿಸಲಾಗುತ್ತದೆ, ಮತ್ತೆ ಕೆಲವು ಸಂದರ್ಭಗಳಲ್ಲಿ ಎರಡು ಖಂಡಗಳಿಗೆ, ದಕ್ಷಿಣ ಮತ್ತು ಉತ್ತರ; ಸಂಯುಕ್ತ ಸಂಸ್ಥಾನವನ್ನು ಸಾಮಾನ್ಯವಾಗಿ les États-Unis d'Amérique , les États-Unis , ಅಥವಾ les USA ಎಂದು ಉಲ್ಲೇಖಿಸಲಾಗುತ್ತದೆ. ಸಂಯುಕ್ತ ಸಂಸ್ಥಾನ ಮತ್ತು ಅಮೆರಿಕ ಖಂಡಗಳಿಗೆ ಸಂಬಂಧಿಸಿದ ಹಲವಾರು ವಿಷಯಗಳ ಬಹುಪಾಲು ಸಂದರ್ಭಗಳಲ್ಲಿ américain ಗುಣವಾಚಕವನ್ನು ಬಳಸಲಾಗುತ್ತದೆ. ಸಂಯುಕ್ತ ಸಂಸ್ಥಾನದ ಅನೇಕ ಲೇಖಕರು ಹೊರತಂದಿರುವ ಇಂಗ್ಲಿಷ್ ಅನುವಾದಿತ ಕೃತಿಗಳಲ್ಲಿ ಪದೇಪದೇ "traduit de l'américain" ಪದವನ್ನು ಬಳಸಿದ್ದಾರೆ. ಸಂಯುಕ್ತ ಸಂಸ್ಥಾನಕ್ಕೆ ಸಂಬಂಧಿಸಿದಂತೆ ಯಾವುದೇ ವಿಭಿನ್ನಾರ್ಥ ನೀಡದ états-unien , étasunien , ಅಥವಾ étatsunien ಪದಗಳನ್ನು ಅಪರೂಪವಾಗಿ ಬಳಸಲಾಗುತ್ತದೆ.
ಡಚ್ ನಲ್ಲಿ ಸಂಯುಕ್ತ ಸಂಸ್ಥಾನಕ್ಕೆ ನಿರ್ದಿಷ್ಟವಾಗಿ Amerika ಪದವನ್ನು ಬಳಸುತ್ತಾರೆ. ಸಂಯುಕ್ತ ಸಂಸ್ಥಾನಕ್ಕೆ ಸಮಾನಾರ್ಥ ನೀಡುವ de Verenigde Staten or de VS ಪದ ಬಳಕೆಯೂ ಇದೆ, Amerika ಪದವನ್ನು ಅಪರೂಪವಾಗಿ Americas ಎಂದು ಪ್ರಸ್ತಾಪಿಸುತ್ತಾರೆ. ಆದರೆ, ಅಮೆರಿಕಸ್ ಗೆ ಈ ಡಚ್ ಪದವೇ (Amerika) ಎಲ್ಲೆಡೆ ಸಾಮಾನ್ಯ ಬಳಕೆಯಲ್ಲಿದೆ. ಇದು ಆಗಾಗ ವಿಭಿನ್ನಾರ್ಥಕ್ಕೆ ಎಡೆಮಾಡುತ್ತದೆ ಮತ್ತು ಅಮೆರಿಕಸ್ ನ ಹಲವು ಆತಂಕಗಳಿಗೆ ಒತ್ತು ನೀಡಿದೆ. ಉತ್ತರ ಮತ್ತು ದಕ್ಷಿಣ ಅಮೆರಿಕಕ್ಕೆ ಡಚ್ಚರು Noord- en Zuid Amerika ಪದವನ್ನು ಬಳಸುತ್ತಾರೆ.ಲ್ಯಾಟಿನ್ ಅಮೆರಿಕವನ್ನು ಸಾಮಾನ್ಯವಾಗಿ Latijns Amerika ಎಂದು, ದಕ್ಷಿಣ ಅಮೆರಿಕವನ್ನು ಆಗಿಂದಾಗ್ಗೆ Zuid Amerika ಎಂದು ಉಲ್ಲೇಖಿಸುತ್ತಾರೆ. amerikaans ಗುಣವಾಚಕವನ್ನು ಸಂಯುಕ್ತ ಸಂಸ್ಥಾನದ ಜನರು ಮತ್ತು ವಿಷಯಗಳಿಗೆ ಹೆಚ್ಚಾಗಿ ಬಳಸಲಾಗುತ್ತದೆ. ಸಂಯುಕ್ತ ಸಂಸ್ಥಾನ ಅಥವಾ ಅಮೆರಿಕಸ್ ಗೆ ಸಂಬಂಧಿಸಿದ ವಿಷಯಗಳನ್ನು ಪ್ರತ್ಯೇಕವಾಗಿ ಹೇಳಲು ಯಾವುದೇ ಪರ್ಯಾಯ ಪದಗಳಿಲ್ಲ. ಡಚ್ಚರು ಅಮೆರಿಕಸ್ ಗೆ ಪರ್ಯಾಯವಾದ ಸ್ಥಳೀಯ ಪದವನ್ನು ಬಳಸುತ್ತಾರೆ, ಉದಾಹರಣೆಗೆ Argentinian ಪದಕ್ಕೆ ಅವರು Argentijns ಪದವನ್ನು ಬಳಸುತ್ತಾರೆ.
19ನೇ ಶತಮಾನದಲ್ಲಿ, ರಷ್ಯಾದಲ್ಲಿ "America" ಪದವನ್ನು ಯೂರೋಪ ಮತ್ತು ಏಷ್ಯಾ ಖಂಡಗಳಿಗೆ ಬಳಸುತ್ತಿದ್ದರು. 20ನೇ ಶತಮಾನದಲ್ಲಿ, ಈ ಸಾಂಪ್ರದಾಯಿಕ ಖಂಡಗಳು ವಿಶ್ವದ ಪ್ರಮುಖ ಭಾಗಗಳಾಗಿ ಗುರುತಿಸಿಕೊಂದವು. ವಿಶಾಲ ಭೂರಾಶಿ ಹೊಂದಿರುವ ಯಾವುದೇ ಆರು ಬೃಹತ್ ಪ್ರದೇಶಗಳನ್ನು ಈಗ "ಖಂಡ" ಎಂಬ ಪದದಿಂದ ವ್ಯಾಖ್ಯಾನಿಸಲಾಗುತ್ತಿದೆ (ಯೂರಾಸಿಯಾ, ಆಫ್ರಿಕಾ, ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಅಂಟಾರ್ಕ್ಟಿಕಾ ಮತ್ತು ಆಸ್ಟ್ರೇಲಿಯಾ). ಈಗ ಅಮೆರಿಕ ಪದವನ್ನು ಸಂಯುಕ್ತ ಸಂಸ್ಥಾನಕ್ಕೆ ಹೆಚ್ಚಾಗಿ ಬಳಸಲಾಗುತ್ತಿದೆ. ರಷ್ಯಾದಲ್ಲಿ ಅಮೆರಿಕಸ್ಗೆ ಸಮನಾದ ಬೇರೆ ಯಾವುದೇ ಪದ ಇಲ್ಲ.
ಅಮೇರಿಕದಲ್ಲಿ 35 ಸಾರ್ವಭೌಮ ರಾಜ್ಯಗಳಿದ್ದು, ಅದರಲ್ಲಿ 23 ಉತ್ತರ ಅಮೇರಿಕಾದಲ್ಲಿ ಮತ್ತು 12 ದಕ್ಷಿಣ ಅಮೇರಿಕಾದಲ್ಲಿ ಇವೆ:
| width="20" | valign=top |
| width="20" | valign=top |
|
ಈ ಮುಂದಿನ ಪಟ್ಟಿಯು ಅಮೇರಿಕದ "ಸಾರ್ವಭೌಮ ರಾಜ್ಯಗಳ" ಪಟ್ಟಿಯಲ್ಲಿ ಬರದ ಕಡಲಾಚೆಯ ಪ್ರದೇಶಗಳು, ಅದೀನ ಪ್ರದೇಶಗಳು ಮತ್ತು ಇತರ ರಾಜ್ಯಾಡಳಿತ ವ್ಯವಸ್ಥೆಯನ್ನು ತೋರಿಸುತ್ತದೆ. ಅವುಗಳನ್ನು ನಿರ್ವಹಿಸುತ್ತಿರುವ ರಾಜ್ಯಗಳ ಹೆಸರಿನಲ್ಲಿ ಅವುಗಳನ್ನು ಗುಂಪುಗೊಳಿಸಲಾಗಿದೆ.
Francevalign=top |
| width= | valign=top |
|
valign=top |
| width= | valign=top |
|
This article uses material from the Wikipedia ಕನ್ನಡ article ಅಮೆರಿಕ, which is released under the Creative Commons Attribution-ShareAlike 3.0 license ("CC BY-SA 3.0"); additional terms may apply (view authors). ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 4.0" ರಡಿ ಲಭ್ಯವಿದೆ. Images, videos and audio are available under their respective licenses.
®Wikipedia is a registered trademark of the Wiki Foundation, Inc. Wiki ಕನ್ನಡ (DUHOCTRUNGQUOC.VN) is an independent company and has no affiliation with Wiki Foundation.