ಜಲಾನಯನ ಪ್ರದೇಶ

ಜಲಾನಯನ ಪ್ರದೇಶವು ಅವಕ್ಷೇಪನ ಸಂಗ್ರಹಗೊಂಡು ನದಿ, ಕೊಲ್ಲಿ, ಅಥವಾ ಬೇರೆ ಜಲಸಮೂಹದಂತಹ ಸಾಮಾನ್ಯ ಹೊರಗುಂಡಿಯೊಳಗೆ ಹರಿದು ಹೋಗುವ ಯಾವುದೇ ಭೂಪ್ರದೇಶ.

ಜಲಾನಯನ ಪ್ರದೇಶವು ಹಂಚಿಕೊಂಡ ಹೊರಗುಂಡಿಯ ಕಡೆಗೆ ಇಳಿಜಾರಿನಲ್ಲಿ ಚಲಿಸುವ ಹರಿದು ಹೋಗುವ ಮಳೆನೀರು, ಹಿಮಕರಗುವಿಕೆ, ಮತ್ತು ಹತ್ತಿರದ ಹೊಳೆಗಳಿಂದ ಮೇಲ್ಮೈ ನೀರನ್ನು, ಜೊತೆಗೆ ಭೂಮಿಯ ಮೇಲ್ಮೈ ಕೆಳಗಿನ ಅಂತರ್ಜಲವನ್ನು ಒಳಗೊಂಡಿರುತ್ತದೆ. ಜಲಾನಯನ ಪ್ರದೇಶಗಳು ಕ್ರಮಾನುಗತ ಮಾದರಿಯಲ್ಲಿ ಕಡಿಮೆ ಎತ್ತರದಲ್ಲಿನ ಇತರ ಜಲಾನಯನ ಪ್ರದೇಶಗಳನ್ನು ಕೂಡುತ್ತವೆ.

ಜಲಾನಯನ ಪ್ರದೇಶ
ಒಂದು ಜಲಾನಯನ ಪ್ರದೇಶದ ಸಚಿತ್ರ ವಿವರಣೆ. ಸಣ್ಣ ಗೆರೆಯ ಗಡಿಯು ಜಲರಾಶಿ ಪ್ರದೇಶದ ಮುಖ್ಯ ಜಲವಿಭಾಜಕ ರೇಖೆಯಾಗಿದೆ.

ಮುಚ್ಚಿದ ಜಲಾನಯನ ಪ್ರದೇಶದಲ್ಲಿ, ನೀರು ಜಲಾನಯನ ಭೂಮಿಯೊಳಗೆ ಒಂದೇ ಬಿಂದುವಿನಲ್ಲಿ ಸೇರುತ್ತದೆ. ಇದನ್ನು ಬತ್ತು ಕುಳಿ ಎಂದು ಕರೆಯಲಾಗುತ್ತದೆ, ಮತ್ತು ಇದು ಶಾಶ್ವತ ಕೆರೆ, ಶುಷ್ಕ ಸರೋರವರ, ಅಥವಾ ಮೇಲ್ಮೈ ನೀರು ನೆಲದಡಿ ಕಳೆದುಹೋಗುವ ಬಿಂದುವಾಗಿರಬಹುದು.

ಜಲಾನಯನ ಪ್ರದೇಶವು ಅದು ಆವರಿಸಿರುವ ಪ್ರದೇಶದಲ್ಲಿನ ಎಲ್ಲ ನೀರನ್ನು ಸಂಗ್ರಹಿಸಿ ಒಂದೇ ಬಿಂದುವಿಗೆ ನಿರ್ದೇಶಿಸುವ ಲಾಳಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಪಕ್ಕದ ಜಲಾನಯನ ಪ್ರದೇಶಗಳಿಂದ ಪ್ರತಿ ಜಲಾನಯನ ಪ್ರದೇಶವನ್ನು ಬಸಿ ವಿಭಾಜಕ ರೇಖೆ ಎಂದು ಕರೆಯಲಾಗುವ ಒಂದು ಪರಿಧಿಯು ಭೌಗೋಳಿಕವಾಗಿ ಪ್ರತ್ಯೇಕಿಸುತ್ತದೆ. ಇದರಲ್ಲಿ ಎತ್ತರದ ಭೌಗೋಳಿಕ ರೂಪವೈಶಿಷ್ಟ್ಯಗಳು (ಉದಾ. ದಿಣ್ಣೆ, ಬೆಟ್ಟ ಅಥವಾ ಪರ್ವತಗಳು) ತಡೆಗೋಡೆಯನ್ನು ರಚಿಸುತ್ತವೆ.

ಜಲಾನಯನ ಪ್ರದೇಶಗಳು ಜಲವೈಜ್ಞಾನಿಕ ಘಟಕಗಳನ್ನು ಹೋಲುತ್ತವೆ ಆದರೆ ಇವೆರಡೂ ಒಂದೇ ಅಲ್ಲ. ಜಲವೈಜ್ಞಾನಿಕ ಘಟಕಗಳು ಬಹು-ಮಟ್ಟದ ಕ್ರಮಾನುಗತ ಬಸಿ ವ್ಯವಸ್ಥೆಯೊಳಗೆ ಅಡಕವಾಗುವಂತೆ ಚಿತ್ರಿಸಲಾದ ಬಸಿ ಪ್ರದೇಶಗಳಾಗಿವೆ. ಬಹು ಪ್ರವೇಶದ್ವಾರಗಳು, ಹೊರಗುಂಡಿಗಳು, ಅಥವಾ ಬತ್ತು ಕುಳಿಗಳನ್ನು ಅನುಮತಿಸುವಂತೆ ಜಲವೈಜ್ಞಾನಿಕ ಘಟಕಗಳನ್ನು ವ್ಯಾಖ್ಯಾನಿಸಲಾಗುತ್ತದೆ. ಕಟ್ಟುನಿಟ್ಟಾದ ಅರ್ಥದಲ್ಲಿ, ಎಲ್ಲ ಜಲಾನಯನ ಪ್ರದೇಶಗಳು ಜಲವೈಜ್ಞಾನಿಕಘಟಕಗಳಾಗಿವೆ, ಆದರೆ ಎಲ್ಲ ಜಲವೈಜ್ಞಾನಿಕ ಘಟಕಗಳು ಜಲಾನಯನ ಪ್ರದೇಶಗಳಲ್ಲ.

ಜಲವಿಜ್ಞಾನದಲ್ಲಿ, ಜಲಾನಯನ ಪ್ರದೇಶವು ಜಲ ಚಕ್ರದಲ್ಲಿ ನೀರಿನ ಚಲನೆಯನ್ನು ಅಧ್ಯಯನಿಸಲು ಗಮನದ ತಾರ್ಕಿಕ ಘಟಕವಾಗಿದೆ, ಏಕೆಂದರೆ ಜಲಾನಯನ ಭೂಮಿಯ ಹೊರಗುಂಡಿಯಿಂದ ವಿಸರ್ಜನೆಗೊಂಡ ಬಹುತೇಕ ನೀರು ಜಲಾನಯನ ಪ್ರದೇಶದ ಮೇಲೆ ಬಿದ್ದ ಅವಕ್ಷೇಪನದಿಂದ ಉತ್ಪನ್ನವಾಯಿತು. ಜಲಾನಯನ ಪ್ರದೇಶದ ಕೆಳಗಿರುವ ಅಂತರ್ಜಲ ವ್ಯವಸ್ಥೆಯನ್ನು ಪ್ರವೇಶಿಸುವ ನೀರಿನ ಭಾಗವು ಮತ್ತೊಂದು ಜಲಾನಯನ ಪ್ರದೇಶದ ಹೊರಗುಂಡಿಯತ್ತ ಹರಿಯಬಹುದು ಏಕೆಂದರೆ ಅಂತರ್ಜಲ ಹರಿವಿನ ದಿಕ್ಕುಗಳು ತಮ್ಮ ಮೇಲಿರುವ ಬಸಿ ಜಾಲದ ದಿಕ್ಕುಗಳಿಗೆ ಯಾವಾಗಲೂ ಸರಿಸಮವಾಗಿರುವುದಿಲ್ಲ. ಜಲಾನಯನ ಭೂಮಿಯಿಂದ ವಿಸರ್ಜನೆಗೊಳ್ಳುವ ನೀರಿನ ಮಾಪನವನ್ನು ಜಲಾನಯನ ಭೂಮಿಯ ಹೊರಗುಂಡಿಯಲ್ಲಿ ಸ್ಥಿತವಾಗಿರುವ ಪ್ರವಾಹ ಮಾಪಕದಿಂದ ಮಾಡಬಹುದು.

ಉಲ್ಲೇಖಗಳು

Tags:

ಅಂತರ್ಜಲನದಿ

🔥 Trending searches on Wiki ಕನ್ನಡ:

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್1935ರ ಭಾರತ ಸರ್ಕಾರ ಕಾಯಿದೆಪ್ರಜಾಪ್ರಭುತ್ವಎಸ್.ಜಿ.ಸಿದ್ದರಾಮಯ್ಯಜೋಡು ನುಡಿಗಟ್ಟುರಾಮ್ ಮೋಹನ್ ರಾಯ್ಆದೇಶ ಸಂಧಿವಲ್ಲಭ್‌ಭಾಯಿ ಪಟೇಲ್ಪ್ರೇಮಾಬಸವರಾಜ ಬೊಮ್ಮಾಯಿಗಣರಾಜ್ಯೋತ್ಸವ (ಭಾರತ)ಸಮಾಜಶಾಸ್ತ್ರಮೈಸೂರುರೇಣುಕಬೀಚಿರಷ್ಯಾಶಾಸನಗಳುಇಮ್ಮಡಿ ಪುಲಕೇಶಿಕರ್ಣಾಟ ಭಾರತ ಕಥಾಮಂಜರಿಗಣೇಶಜಯದೇವಿತಾಯಿ ಲಿಗಾಡೆಬಾಲಕಾರ್ಮಿಕಪ್ರಗತಿಶೀಲ ಸಾಹಿತ್ಯಜನ್ನಕನ್ನಡದಲ್ಲಿ ವಚನ ಸಾಹಿತ್ಯಸೂಕ್ಷ್ಮ ಅರ್ಥಶಾಸ್ತ್ರಕೇಂದ್ರಾಡಳಿತ ಪ್ರದೇಶಗಳುದಿಕ್ಕುಅವ್ಯಯಮಹಾವೀರಟಿ. ವಿ. ವೆಂಕಟಾಚಲ ಶಾಸ್ತ್ರೀಕರ್ನಾಟಕದ ಅಣೆಕಟ್ಟುಗಳುಜನಪದ ಕ್ರೀಡೆಗಳುಗೋವಿಂದ ಪೈಶಿವನ ಸಮುದ್ರ ಜಲಪಾತಫ್ರೆಂಚ್ ಕ್ರಾಂತಿಭರತೇಶ ವೈಭವಗಂಗಾಕೆಳದಿಯ ಚೆನ್ನಮ್ಮಮಂಗಳ (ಗ್ರಹ)ಕನ್ನಡ ಸಂಧಿಭಾರತದ ಇತಿಹಾಸಕರ್ನಾಟಕ ಪತ್ರಿಕೋದ್ಯಮ ಇತಿಹಾಸಭಾರತ ರತ್ನಕವಿರಾಜಮಾರ್ಗದೊಡ್ಡರಂಗೇಗೌಡಬೇಡಿಕೆಯ ಬೆಲೆ ಸ್ಥಿತಿಸ್ಥಾಪಕತ್ವರಗಳೆಬಾಹುಬಲಿಸನ್ನತಿಭಾರತದಲ್ಲಿ ಪರಮಾಣು ವಿದ್ಯುತ್ಬಸವೇಶ್ವರಹಿಂದೂ ಧರ್ಮಬಾರ್ಲಿಖೊಖೊಯುಗಾದಿಸಂಭೋಗಕಣ್ಣುಭಾರತದ ರಾಷ್ಟ್ರೀಯ ಚಿನ್ಹೆಗಳುಸಂವಿಧಾನಚಿಪ್ಕೊ ಚಳುವಳಿಮರವ್ಯಾಯಾಮಚಿತ್ರದುರ್ಗಕೈಗಾರಿಕೆಗಳುಸೂರ್ಯಕರ್ನಾಟಕದ ತಾಲೂಕುಗಳುಮಳೆಟಾವೊ ತತ್ತ್ವಮೊಘಲ್ ಸಾಮ್ರಾಜ್ಯವಿಭಕ್ತಿ ಪ್ರತ್ಯಯಗಳುಕನ್ನಡ ಸಾಹಿತ್ಯಶ್ರೀ ರಾಘವೇಂದ್ರ ಸ್ವಾಮಿಗಳುರೇಡಿಯೋಬಾಗಲಕೋಟೆಕರ್ನಾಟಕ ಸ್ವಾತಂತ್ರ್ಯ ಚಳವಳಿವಿದ್ಯುತ್ ಮಂಡಲಗಳುಚೌರಿ ಚೌರಾ ಘಟನೆ🡆 More