ಬನವಾಸಿ

ಬನವಾಸಿ ಪಟ್ಟಣವು ವರದಾ ನದಿಯ ಎಡದಂಡೆಯ ಮೇಲಿರುವ ಪಟ್ಟಣ.

ಇದು ಉತ್ತರ ಕನ್ನಡ ಜಿಲ್ಲೆಯಲ್ಲಿಯ ಸಿರ್ಸಿ ತಾಲೂಕಿನಲ್ಲಿದೆ. ಬನವಾಸಿಯು ಸಿರ್ಸಿ ಮತ್ತು ಸೊರಬ ದಾರಿಯಲ್ಲಿ ಎರಡೂ ಪೇಟೆಗಳಿಂದ ಸುಮಾರು ೨೪ ಕಿ.ಮಿ.ಅಂತರದಲ್ಲಿದೆ. ಪ್ರಾಚೀನ ಕದಂಬರ ಕಾಲದಲ್ಲಿ ವೈಜಯಂತೀಪುರ ಎಂಬ ಹೆಸರಿನಿಂದ ವೈಭವಯುತವಾದ ರಾಜಧಾನಿಯಾಗಿತ್ತು.

ಬನವಾಸಿ
ಬನವಾಸಿ
village

ಸ್ಥಳನಾಮ

ಕ್ರಿ.ಶ. ೧ನೆಯ ಶತಮಾನದಲ್ಲಿ ಭಾರತಕ್ಕೆ ಬಂದಿದ್ದ ಗ್ರೀಕ್ ಪ್ರವಾಸಿ ಟಾಲೆಮಿ ಈ ಪಟ್ಟಣವನ್ನು “ಬನೌಸಿ” ಎಂದು ಕರೆದಿದ್ದಾನೆ. ಕ್ರಿ.ಶ. ೪ನೆಯ ಶತಮಾನದಲ್ಲಿ 'ಜಯಂತಿಪುರ' ಅಥವಾ 'ವೈಜಯಂತಿ' ಎಂದು ಕರೆಯಲಾಗುತ್ತಿತ್ತು.

ಮಹಾಭಾರತದಲ್ಲಿ ಬನವಾಸಿಯನ್ನು 'ವನವಾಸಕ' ಎಂಬ ಉಲ್ಲೇಖವಿದೆ.

ಬನವಾಸಿ 
ಮಧುಕೇಶ್ವರ ದೇವಾಲಯದ ಕಾಂಪೌಂಡ್ ನ ದಕ್ಷಿಣ ಭಾಗದಲ್ಲಿರುವ ಸಣ್ಣ ಕೋಣೆಯಲ್ಲಿ ಇರುವ ಕಲ್ಲಿನ ಹಾಸಿಗೆ.

ಐತಿಹಾಸಿಕ

ಬನವಾಸಿ 
ನಾಣ್ಯದ ಮೇಲೆ ತನ್ನನ್ನು "ಶ್ರೀ ದೋಷರಾಶಿ" ಕದಂಬ ರಾಜ ಕೃಷ್ಣವರ್ಮ II (516-540 ರ ಆಳ್ವಿಕೆ) ಉಲ್ಲೇಖಿಸಿಕೊಂಡಿದ್ದಾನೆಂದು ಭಾವಿಸಲಾಗಿದೆ. ನಾಣ್ಯದ ಹಿಮ್ಮುಖದಲ್ಲಿ "ಶಶಾಂಕಃ" ಅಥವಾ ಚಂದ್ರ ಎಂದಿದೆ.

ಕದಂಬ ರಾಜ್ಯವನ್ನು ಕರ್ನಾಟಕದ ಪ್ರಥಮ ರಾಜ್ಯವೆಂದು ವರ್ಣಿಸಲಾಗುತ್ತಿದೆ. ಈ ರಾಜ್ಯದ ಸ್ಥಾಪಕ ಮಯೂರವರ್ಮ ( ಕ್ರಿ.ಶ. ೩೨೫-೩೪೫). ಈತನ ರಾಜಧಾನಿ ಬನವಾಸಿ.

ಬೌದ್ಧ ಧರ್ಮ ಪ್ರಸಾರಕ್ಕಾಗಿ ಅಶೋಕ ಚಕ್ರವರ್ತಿ ಕಳುಹಿಸಿದ ಬೌದ್ಧ ಭಿಕ್ಷು ರಖ್ಖಿತನು ಬನವಾಸಿ ಪ್ರಾಂತಕ್ಕೆ ಬಂದಿದ್ದನೆಂದು ಮಹಾವಂಶ ಎಂಬ ಬೌದ್ಧಗ್ರಂಥ ತಿಳಿಸುತ್ತಿದೆ.

ನಾಗಾರ್ಜುನಕೊಂಡದ ಒಂದು ಶಾಸನದ ಪ್ರಕಾರ ಸಿಂಹಳದ ಬೌದ್ಧ ಭಿಕ್ಷುಗಳು ಧರ್ಮಪ್ರಸಾರಕ್ಕಾಗಿ ಬನವಾಸಿಗೆ ಬಂದಿದ್ದರಂತೆ.

ಕನ್ನಡ ಸಾಹಿತ್ಯದಲ್ಲಿ

ಕನ್ನಡದ ಆದಿಕವಿ ಪಂಪ ತನ್ನ ಕಾವ್ಯ ವಿಕ್ರಮಾರ್ಜುನ ವಿಜಯದಲ್ಲಿ ಬನವಾಸಿಯನ್ನು ವರ್ಣಿಸುತ್ತ “ ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ ” ಎಂದು ಹೇಳಿದ್ದಾನೆ.

ಕವಿ ಚಾಮರಸ ಬರೆದ ಪ್ರಭುಲಿಂಗಲೀಲೆ ಕಾವ್ಯದ ರಂಗಸ್ಥಳವೇ ಬನವಾಸಿ.

ಪ್ರೇಕ್ಷಣೀಯ

ಬನವಾಸಿ 
ಮಧುಕೇಶ್ವರ ದೇವಾಲಯ

ಮಧುಕೇಶ್ವರ ದೇವಾಲಯವೇ ಬನವಾಸಿಯ ಅತ್ಯಂತ ಪ್ರೇಕ್ಷಣೀಯ ಹಾಗು ಐತಿಹಾಸಿಕ ಸ್ಥಳವಾಗಿದೆ. ಇದಲ್ಲದೆ ಸ್ವಾದಿ ಅರಸರು ಕಟ್ಟಿಸಿದ ಶಿಲಾಮಂಟಪ ವೈಶಿಷ್ಟ್ಯಪೂರ್ಣವಾಗಿದೆ. ಇಲ್ಲಿ ಉಮಾ ದೇವಿ, ಶಾಂತಲಕ್ಶ್ಮಿ ನರಸಿಂಹ ಅಲ್ಲದೆ ಇನ್ನೂ ಹಲವು ದೇವತೆಗಳ ಮೂರ್ತಿಗಳು ಕಾಣಸಿಗುವುದು. ದೇವಾಲಯದ ಗರ್ಭಗುಡಿಯ ಬಾಗಿಲಲ್ಲಿ ಪುರುಷಾಮೃಗವನ್ನು ಅಧ್ಭುತವಾಗಿ ಕೆತ್ತಲಾಗಿದೆ.

ಬನವಾಸಿಯ ಕೋಟೆ ಬಹಳ ಪುರಾತನವಾದದ್ದು. ಚಾಲುಕ್ಯ ಇಮ್ಮಡಿ ಪುಲಕೇಶಿಯ ಐಹೊಳೆ ಶಾಸನದಲ್ಲಿ ಈ ಕೋಟೆಯ ಪ್ರಸ್ತಾಪವಿದೆ. ಸುಮಾರು ಕ್ರಿ.ಶ ೧೦೦೦ ಯ ವರ್ಷದ ಸುಮಾರಿಗೆ ಸೇರಿದ್ದಿರಬಹುದಾದ, ಚಂದ್ರವಳ್ಳಿಯಲ್ಲಿ ದೊರೆತಿರುವ ಇಟ್ಟಿಗೆಗಳಂತಹ ದೊಡ್ಡ ಚಪ್ಪಟ್ಟೆ ಇಟ್ಟಿಗೆಗಳನ್ನು ಈ ಕೋಟೆಯ ಗೋಡೆಯ ಅತೀ ಕೆಳಗಿನ ವರಸೆಗಳಲ್ಲಿ ಕಾಣಬಹುದು. ಇಟ್ಟಿಗೆಯ ಗೋಡೆಯ ಮೇಲೆ ಜಂಬಿಟ್ಟಿಗೆಯ ದಪ್ಪ ಗೋಡೆಯನ್ನು ಕಟ್ಟಲಾಗಿದೆ. ಇದು ವಿಜಯನಗರದ ಕಾಲದಲ್ಲಿ ಕಟ್ಟಲಾದದ್ದು ಎನ್ನಲಾಗಿದೆ.

ಪಂಪ ವರ್ಣಿಸಿದ ಬನವಾಸಿಯ ನಿಸರ್ಗಸಿರಿ ತಕ್ಕಮಟ್ಟಿಗೆ ಉಳಿದುಕೊಂಡಿದೆ.

ಕದಂಬೋತ್ಸವ

ಪ್ರತಿ ವರ್ಷವೂ ಕರ್ನಾಟಕ ಸರಕಾರ ಬನವಾಸಿಯಲ್ಲಿ ಕದಂಬೋತ್ಸವವನ್ನು ಆಚರಿಸುತ್ತದೆ. ಈ ಸಮಯದಲ್ಲಿ ಸಾಹಿತ್ಯ, ಸಂಗೀತ, ನೃತ್ಯ ಮೊದಲಾದ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತವೆ.

ಇತರ

ಬನವಾಸಿಯಲ್ಲಿ ಒಂದು ಚಿಕ್ಕ ಸರಕಾರಿ ಪ್ರವಾಸಿ ಬಂಗಲೆ ಇದ್ದು, ಕಾರ್ಯನಿರ್ವಾಹಕ ಇಂಜನಿಯರರು, ಸಿರ್ಸಿ ವಿಭಾಗ, ಲೋಕೋಪಯೋಗಿ ಇಲಾಖೆ, ಸಿರ್ಸಿ ಇವರ ಮುಖಾಂತರ ವಸತಿಗೆ ರಿಜರ್ವೇಶನ್ ಪಡೆಯಬಹುದು.ಬನವಾಸಿಯಲ್ಲಿ ನಡೆಯುವ ಕದಂಬೋತ್ಸವದಲ್ಲಿ ಸಾಹಿತ್ಯ ಸಾಧಕರಿಗೆ ಪಂಪ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಗುತ್ತದೆ.

ಚಿತ್ರಸಂಪುಟ

ಹೆಚ್ಚಿಗೆ ಓದಲು

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

Tags:

ಬನವಾಸಿ ಸ್ಥಳನಾಮಬನವಾಸಿ ಐತಿಹಾಸಿಕಬನವಾಸಿ ಕನ್ನಡ ಸಾಹಿತ್ಯದಲ್ಲಿಬನವಾಸಿ ಪ್ರೇಕ್ಷಣೀಯಬನವಾಸಿ ಕದಂಬೋತ್ಸವಬನವಾಸಿ ಇತರಬನವಾಸಿ ಚಿತ್ರಸಂಪುಟಬನವಾಸಿ ಹೆಚ್ಚಿಗೆ ಓದಲುಬನವಾಸಿ ಉಲ್ಲೇಖಗಳುಬನವಾಸಿ ಬಾಹ್ಯ ಸಂಪರ್ಕಗಳುಬನವಾಸಿಉತ್ತರ ಕನ್ನಡಸಿರ್ಸಿಸಿರ್ಸಿ ತಾಲೂಕುಸೊರಬ

🔥 Trending searches on Wiki ಕನ್ನಡ:

ಭಾರತದ ಜನಸಂಖ್ಯೆಯ ಬೆಳವಣಿಗೆಸಿಂಧನೂರುದೇವತಾರ್ಚನ ವಿಧಿವಾಣಿಜ್ಯ ಪತ್ರಕದಂಬ ರಾಜವಂಶಜೀವವೈವಿಧ್ಯಚಿನ್ನಮೂಢನಂಬಿಕೆಗಳುಸಾಂಗತ್ಯನಾಮಪದಹಾಸನ ಜಿಲ್ಲೆಮಾನವ ಸಂಪನ್ಮೂಲ ನಿರ್ವಹಣೆಕರ್ನಾಟಕ ವಿಧಾನ ಸಭೆಕನ್ನಡದಲ್ಲಿ ಕಾವ್ಯ ಮಿಮಾಂಸೆಮಾನಸಿಕ ಆರೋಗ್ಯಬೌದ್ಧ ಧರ್ಮಮನಮೋಹನ್ ಸಿಂಗ್ನಾಯಿಎರಡನೇ ಮಹಾಯುದ್ಧವಿಜಯಪುರಮಾಹಿತಿ ತಂತ್ರಜ್ಞಾನಕನ್ನಡ ರಾಜ್ಯೋತ್ಸವನಂಜುಂಡೇಶ್ವರ ದೇವಸ್ಥಾನ, ನಂಜನಗೂಡುಬರಗೂರು ರಾಮಚಂದ್ರಪ್ಪಸಿದ್ಧಯ್ಯ ಪುರಾಣಿಕತಮ್ಮಟ ಕಲ್ಲು ಶಾಸನಬಾದಾಮಿ ಶಾಸನಭಾರತದಲ್ಲಿನ ಜಾತಿ ಪದ್ದತಿಅಂತರಜಾಲಆಧುನಿಕ ಶೈಕ್ಷಣಿಕ ತಂತ್ರಜ್ಞಾನ ಪರಿಚಯಚನ್ನವೀರ ಕಣವಿರಾಷ್ಟ್ರೀಯ ಉತ್ಪನ್ನಉಪನಯನಆಂಡಯ್ಯಛತ್ರಪತಿ ಶಿವಾಜಿಶ್ರವಣಬೆಳಗೊಳನಾಗರೀಕತೆಮಾಸಭಾಗ್ಯಲಕ್ಷ್ಮೀ (ಕನ್ನಡ ಧಾರಾವಾಹಿ)ಕನ್ನಡ ಗುಣಿತಾಕ್ಷರಗಳುಭಾರತದ ಉಪ ರಾಷ್ಟ್ರಪತಿಗಳ ಪಟ್ಟಿಉಪ್ಪಿನ ಸತ್ಯಾಗ್ರಹಸಂಭೋಗತಮ್ಮಟಕಲ್ಲು ಶಾಸನಶಿವರಾಮ ಕಾರಂತಪಂಜೆ ಮಂಗೇಶರಾಯ್ಬಾವಲಿಕನ್ನಡ ಸಂಧಿಮೂಲಧಾತುಸಾರ್ವಜನಿಕ ಹಣಕಾಸುಕೋಟ ಶ್ರೀನಿವಾಸ ಪೂಜಾರಿಕಂಸಾಳೆಮಯೂರಶರ್ಮಕುರುಬಮ್ಯಾಕ್ಸ್ ವೆಬರ್ಆಯ್ದಕ್ಕಿ ಲಕ್ಕಮ್ಮಚದುರಂಗ (ಆಟ)ಸಂಚಿ ಹೊನ್ನಮ್ಮಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ರಿಕೆಟ್ಭಾರತದ ರಾಷ್ಟ್ರಪತಿಗಳ ಪಟ್ಟಿಉತ್ಪಲ ಮಾಲಾ ವೃತ್ತಮುದ್ದಣಅಂತಾರಾಷ್ಟ್ರೀಯ ಸಂಬಂಧಗಳುಯೋಗ ಮತ್ತು ಅಧ್ಯಾತ್ಮಮೂಕಜ್ಜಿಯ ಕನಸುಗಳು (ಕಾದಂಬರಿ)ಶಬರಿಮಾರೀಚಸಹಕಾರಿ ಸಂಘಗಳುಇಂದಿರಾ ಗಾಂಧಿಎಲಾನ್ ಮಸ್ಕ್ಕರ್ನಾಟಕದ ನದಿಗಳುಸುಧಾ ಚಂದ್ರನ್ಭಾರತದ ಆರ್ಥಿಕ ವ್ಯವಸ್ಥೆಸುಭಾಷ್ ಚಂದ್ರ ಬೋಸ್ಶುಂಠಿಕೇಸರಿ (ಬಣ್ಣ)🡆 More