ಕ್ರೈಸ್ತ ಧರ್ಮ

ಕ್ರೈಸ್ತ ಧರ್ಮ ಯೇಸು ಕ್ರಿಸ್ತನ ಜೀವನ ಮತ್ತು ಉಪದೇಶಗಳ ಮೇಲೆ ಆಧಾರಿತ ಏಕದೇವವಾದವನ್ನು ಅನುಸರಿಸುವ ಧರ್ಮಗಳಲ್ಲಿ ಒಂದು.

೨೦೦೧ರ ಅಂದಾಜಿನ ಪ್ರಕಾರ ಪ್ರಪಂಚದಲ್ಲಿ ೨.೧ ಬಿಲಿಯನ್ ಅನುಯಾಯಿಗಳನ್ನು ಹೊಂದಿರುವ ಈ ಧರ್ಮ, ಜಗತ್ತಿನ ಅತಿ ದೊಡ್ಡ ಧರ್ಮವಾಗಿದೆ.

ಇಂದಿಗೆ ಸುಮಾರು ೨೦೦೦ ವರ್ಷಗಳ ಹಿಂದೆ ಪ್ಯಾಲೆಸ್ತೀನ್ ದೇಶದ ಬೆತ್ಲೆಹೇಂ ಎಂಬ ಊರಿನಲ್ಲಿ ಯೇಸುಕ್ರಿಸ್ತ ಹುಟ್ಟಿದ. ಅವನು ಹುಟ್ಟಿ ಬೆಳೆದ ಕಾಲದಲ್ಲಿ ಯೆಹೂದ್ಯ ನಾಡು ರೋಮನ್ ಸಾಮ್ರಾಜ್ಯದ ಆಧಿಪತ್ಯಕ್ಕೆ ಒಳಪಟ್ಟಿದ್ದುದರಿಂದ ಸಹಜವಾಗಿ ಯೆಹೂದ್ಯರು ಸ್ವಾತಂತ್ರ್ಯಕ್ಕಾಗಿ ಹಂಬಲಿಸುತ್ತಿದ್ದರು. ಯುವಕ ಯೇಸುಕ್ರಿಸ್ತನ ವಿಚಾರಪ್ರದ ಮಾತುಗಳಿಂದ ಪ್ರಭಾವಿತರಾದ ಅವರು ಅವನನ್ನೇ ತಮ್ಮ ನಾಯಕನನ್ನಾಗಿ ಆರಿಸಿಕೊಂಡರು. ಆದರೆ ಯೇಸುಕ್ರಿಸ್ತ ಸೆಣಸಿದ್ದು ರೋಮನರ ವಿರುದ್ಧವಲ್ಲ ಬದಲಿಗೆ ತಮ್ಮದೇ ಜನರ ಮೌಡ್ಯದ ವಿರುದ್ಧ, ಶೋಷಣೆಯ ವಿರುದ್ಧ, ಕಂದಾಚಾರಗಳ ವಿರುದ್ಧ, ಹಾಗೂ ಮಾನವತೆಯಿಲ್ಲದ ವಿರುದ್ಧ. ಯೇಸುಕ್ರಿಸ್ತ ಅಂದು ಪ್ರಚಲಿತವಾಗಿದ್ದ ಕಣ್ಣಿಗೆ ಕಣ್ಣು ಹಲ್ಲಿಗೆ ಹಲ್ಲು ಎಂಬ ಮೃಗೀಯ ನಿಯಮಗಳ ಬದಲಿಗೆ 'ಬಲಗೆನ್ನೆಗೆ ಹೊಡೆದವಗೆ ಎಡಗೆನ್ನೆ ತೋರು' ಎಂಬ ಉದಾತ್ತತೆಯ ಮಾತುಗಳನ್ನಾಡಿದ. ಹಾದರದಲ್ಲಿ ಸಿಕ್ಕಿಬಿದ್ದ ಸ್ತ್ರೀಯನ್ನು ಕಲ್ಲುಗಳಿಂದ ಹೊಡೆದು ಕೊಲ್ಲಬೇಕೆಂಬ ನೀತಿಗೆ ಯೇಸುಕ್ರಿಸ್ತ ಹೊಸ ವ್ಯಾಖ್ಯಾನ ಬರೆದ. ಸ್ತ್ರೀಯೇನೋ ಹಾದರ ಮಾಡುವಾಗ್ಗೆ ಸಿಕ್ಕಿಬಿದ್ದಳು. ಆದರೆ ಹಾದರದಲ್ಲಿ ಪುರುಷನ ಪಾತ್ರವೂ ಇರಬೇಕಲ್ಲವೇ? ಅವನೂ ಸಮಾನ ತಪ್ಪಿತಸ್ಥನಲ್ಲವೇ? ತಪ್ಪು ಮಾಡುವುದು ಮಾನವ ಸಹಜ ಗುಣ. ತಪ್ಪನ್ನು ತೋರಿ ತಿದ್ದಿ ಕ್ಷಮಿಸಿ ಹೊಸತನ ನೀಡುವುದು ದೈವೀಗುಣ. ನಿನ್ನನ್ನು ವಿರೋಧಿಸುವವನಿಗೂ ಸ್ನೇಹಭಾವ ತೋರು. ಕ್ಷಮೆ ಇರುವಲ್ಲಿ ಪ್ರೀತಿ ವಿಶ್ವಾಸ ಮೊಳೆಯುತ್ತದೆ. ಎಲ್ಲ ಮಾನವರೂ ಒಂದೇ ಎಂಬ ಉದಾತ್ತ ಭಾವ ಉಂಟಾದಾಗ ಜಗತ್ತು ಸುಂದರವಾಗುತ್ತದೆ. ಆಗ ಪ್ರತಿ ಮಾನವನೂ ದೇವಸ್ವರೂಪಿಯಾಗುತ್ತಾನೆ ಎಂಬುದೇ ಯೇಸುಕ್ರಿಸ್ತನ ಬೋಧನೆಯ ಸಾರ. ಈ ಮಾನವಪ್ರೇಮದ ಸಂದೇಶವನ್ನು ಅವನ ಶಿಷ್ಯರೂ ಅನುಯಾಯಿಗಳೂ ಎಲ್ಲೆಡೆ ಪಸರಿಸುತ್ತಾ ಬಂದರು. ಯೇಸುಕ್ರಿಸ್ತನ ಶಿಷ್ಯರ ಒಗ್ಗಟ್ಟಿನ ಕೆಲಸ, ಸುವ್ಯವಸ್ಥಿತ ರೂಪುರೇಷೆ, ಕ್ರಿಸ್ತತತ್ವಗಳ ಕುರಿತ ಬದ್ದತೆ ಮುಂತಾದವುಗಳ ಕಾರಣದಿಂದ ಕ್ರೈಸ್ತಧರ್ಮ ಎಲ್ಲೆಡೆ ಪಸರಿಸಿತು.

ಕ್ರೈಸ್ತ ಧರ್ಮದ ಉದಯ

  • ಕ್ರಿ.ಶ. ೧ನೇ ಶತಮಾನದಲ್ಲಿ ಯಹೂದಿ ಧರ್ಮದ ಒಂದು ಪಂಥವಾಗಿ ಉದ್ಭವಿಸಿದ ಕ್ರೈಸ್ತ ಧರ್ಮ, ಯಹೂದಿಯರ ಧರ್ಮಗ್ರಂಥ ತನಖ್ ಅನ್ನು ತನ್ನ ಧರ್ಮಗ್ರಂಥವಾದ ಬೈಬಲ್‌ನ ಒಂದು ಭಾಗವಾದ ಹಳೆ ಒಡಂಬಡಿಕೆ (Old Testament)ಆಗಿ ಅಳವಡಿಸಿಕೊಂಡಿದೆ.
  • ಇಸ್ಲಾಂ, ಯಹೂದಿ ಧರ್ಮ ಮತ್ತು ಕ್ರೈಸ್ತ ಧರ್ಮಗಳೆಲ್ಲಾ ಅಬ್ರಹಾಮ್‌ನನ್ನು ಪ್ರಮುಖನನ್ನಾಗಿ ಪರಿಗಣಿಸುವುದರರಿಂದ ಇವನ್ನು ಅಬ್ರಹಮೀಯ ಧರ್ಮಗಳೆಂದೂ ವರ್ಗೀಕರಿಸಲಾಗುತ್ತವೆ. ಯೇಸುಕ್ರಿಸ್ತ ಹುಟ್ಟುವ ಕಾಲ, ಹುಟ್ಟಿದ ನಂತರದ ಕಾಲಘಟ್ಟ ಹಾಗೂ ಆತನ ಸಾವು-ಪುನರುತ್ಥಾನದ ನಂತರದ ಕೆಲವು ದಿನಗಳ ಚರಿತ್ರೆಯು ಬೈಬಲ್‌ನಲ್ಲಿ ಹೊಸ ಒಡಂಬಡಿಕೆ (New Testament)ಯ ರೂಪದಲ್ಲಿದೆ.

ಇತಿವೃತ್ತ

  • ಇಂದಿಗೆ ಸುಮಾರು ೨೦೦೦ ವರ್ಷಗಳ ಹಿಂದೆ ಪ್ಯಾಲೆಸ್ತೀನ್ ದೇಶದ ಬೆತ್ಲೆಹೇಂ ಎಂಬ ಊರಿನಲ್ಲಿ ಯೇಸುಕ್ರಿಸ್ತ ಹುಟ್ಟಿದ. ಅವನು ಹುಟ್ಟಿ ಬೆಳೆದ ಕಾಲದಲ್ಲಿ ಯೆಹೂದ್ಯ ನಾಡು ರೋಮನ್ ಸಾಮ್ರಾಜ್ಯದ ಆಧಿಪತ್ಯಕ್ಕೆ ಒಳಪಟ್ಟಿದ್ದುದರಿಂದ ಸಹಜವಾಗಿ ಯೆಹೂದ್ಯರು ಸ್ವಾತಂತ್ರ್ಯಕ್ಕಾಗಿ ಹಂಬಲಿಸುತ್ತಿದ್ದರು. ಯುವಕ ಯೇಸುಕ್ರಿಸ್ತನ ವಿಚಾರಪ್ರದ ಮಾತುಗಳಿಂದ ಪ್ರಭಾವಿತರಾದ ಅವರು ಅವನನ್ನೇ ತಮ್ಮ ನಾಯಕನನ್ನಾಗಿ ಆರಿಸಿಕೊಂಡರು.
  • ಆದರೆ ಯೇಸುಕ್ರಿಸ್ತ ಸೆಣಸಿದ್ದು ರೋಮನರ ವಿರುದ್ಧವಲ್ಲ ಬದಲಿಗೆ ತಮ್ಮದೇ ಜನರ ಮೌಡ್ಯದ ವಿರುದ್ಧ, ಶೋಷಣೆಯ ವಿರುದ್ಧ, ಕಂದಾಚಾರಗಳ ವಿರುದ್ಧ, ಹಾಗೂ ಮಾನವತೆಯಿಲ್ಲದ ಸನಾತನವಾದದ ವಿರುದ್ಧ. ಯೇಸುಕ್ರಿಸ್ತ ಅಂದು ಪ್ರಚಲಿತವಾಗಿದ್ದ ಕಣ್ಣಿಗೆ ಕಣ್ಣು ಹಲ್ಲಿಗೆ ಹಲ್ಲು ಎಂಬ ಮೃಗೀಯ ನಿಯಮಗಳ ಬದಲಿಗೆ 'ಬಲಗೆನ್ನೆಗೆ ಹೊಡೆದವಗೆ ಎಡಗೆನ್ನೆ ತೋರು' ಎಂಬ ಉದಾತ್ತತೆಯ ಮಾತುಗಳನ್ನಾಡಿದ.
  • ಹಾದರದಲ್ಲಿ ಸಿಕ್ಕಿಬಿದ್ದ ಸ್ತ್ರೀಯನ್ನು ಕಲ್ಲುಗಳಿಂದ ಹೊಡೆದು ಕೊಲ್ಲಬೇಕೆಂಬ ನೀತಿಗೆ ಯೇಸುಕ್ರಿಸ್ತ ಹೊಸ ವ್ಯಾಖ್ಯಾನ ಬರೆದ. ಸ್ತ್ರೀಯೇನೋ ಹಾದರ ಮಾಡುವಾಗ್ಗೆ ಸಿಕ್ಕಿಬಿದ್ದಳು. ಆದರೆ ಹಾದರದಲ್ಲಿ ಪುರುಷನ ಪಾತ್ರವೂ ಇರಬೇಕಲ್ಲವೇ? ಅವನೂ ಸಮಾನ ತಪ್ಪಿತಸ್ಥನಲ್ಲವೇ? ತಪ್ಪು ಮಾಡುವುದು ಮಾನವ ಸಹಜ ಗುಣ. ತಪ್ಪನ್ನು ತೋರಿ ತಿದ್ದಿ ಕ್ಷಮಿಸಿ ಹೊಸತನ ನೀಡುವುದು ದೈವೀಗುಣ. ನಿನ್ನನ್ನು ವಿರೋಧಿಸುವವನಿಗೂ ಸ್ನೇಹಭಾವ ತೋರು.
  • ಕ್ಷಮೆ ಇರುವಲ್ಲಿ ಪ್ರೀತಿ ವಿಶ್ವಾಸ ಮೊಳೆಯುತ್ತದೆ. ಎಲ್ಲ ಮಾನವರೂ ಒಂದೇ ಎಂಬ ಉದಾತ್ತ ಭಾವ ಉಂಟಾದಾಗ ಜಗತ್ತು ಸುಂದರವಾಗುತ್ತದೆ. ಆಗ ಪ್ರತಿ ಮಾನವನೂ ದೇವಸ್ವರೂಪಿಯಾಗುತ್ತಾನೆ ಎಂಬುದೇ ಯೇಸುಕ್ರಿಸ್ತನ ಬೋಧನೆಯ ಸಾರ. ಈ ಮಾನವಪ್ರೇಮದ ಸಂದೇಶವನ್ನು ಅವನ ಶಿಷ್ಯರೂ ಅನುಯಾಯಿಗಳೂ ಎಲ್ಲೆಡೆ ಪಸರಿಸುತ್ತಾ ಬಂದರು. ಯೇಸುಕ್ರಿಸ್ತನ ಶಿಷ್ಯರ ಒಗ್ಗಟ್ಟಿನ ಕೆಲಸ, ಸುವ್ಯವಸ್ಥಿತ ರೂಪುರೇಷೆ, ಕ್ರಿಸ್ತತತ್ವಗಳ ಕುರಿತ ಬದ್ದತೆ ಮುಂತಾದವುಗಳ ಕಾರಣದಿಂದ ಕ್ರೈಸ್ತಧರ್ಮ ಎಲ್ಲೆಡೆ ಪಸರಿಸಿತು.

Tags:

ಧರ್ಮಬಿಲಿಯನ್ಯೇಸು ಕ್ರಿಸ್ತ

🔥 Trending searches on Wiki ಕನ್ನಡ:

ಸ್ಟಾರ್ ಸುವರ್ಣಕೈಲಾಸನಾಥಕೊಪ್ಪಳಸಂವಹನಮಧ್ಯಕಾಲೀನ ಭಾರತರಾಷ್ಟ್ರೀಯ ಭದ್ರತಾ ಪಡೆವಲ್ಲಭ್‌ಭಾಯಿ ಪಟೇಲ್ವಚನಕಾರರ ಅಂಕಿತ ನಾಮಗಳುಇಮ್ಮಡಿ ಪುಲಿಕೇಶಿಕೋಲಾರರಾಮಾಯಣವೃದ್ಧಿ ಸಂಧಿರಾಶಿಯೋನಿಜಾತಿನಾಗಚಂದ್ರಅಲ್ಲಮ ಪ್ರಭುಬಿ.ಎಫ್. ಸ್ಕಿನ್ನರ್ಪರಿಪೂರ್ಣ ಪೈಪೋಟಿಕುಂಬಳಕಾಯಿಕೆಳದಿದುಗ್ಧರಸ ಗ್ರಂಥಿ (Lymph Node)ಕಾಗೋಡು ಸತ್ಯಾಗ್ರಹಕದಂಬ ರಾಜವಂಶಪರಶುರಾಮಕೇಂದ್ರ ಲೋಕ ಸೇವಾ ಆಯೋಗಸೀತೆಕರ್ನಾಟಕ ಜನಪದ ನೃತ್ಯಪ್ಯಾರಾಸಿಟಮಾಲ್ಕರ್ನಾಟಕದ ವಾಸ್ತುಶಿಲ್ಪಭಾರತದಲ್ಲಿನ ಜಾತಿ ಪದ್ದತಿಅಳೆಯುವ ಸಾಧನಕರ್ಬೂಜಕಾಮಸೂತ್ರಕಪ್ಪೆ ಅರಭಟ್ಟವಿರಾಮ ಚಿಹ್ನೆಭಾರತದ ಸಂವಿಧಾನ ರಚನಾ ಸಭೆಕನ್ನಡಶಿಶುನಾಳ ಶರೀಫರುಶನಿಭಾರತದ ಸ್ವಾತಂತ್ರ್ಯ ಚಳುವಳಿಮೊದಲನೆಯ ಕೆಂಪೇಗೌಡವಾಣಿವಿಲಾಸಸಾಗರ ಜಲಾಶಯಜೈಜಗದೀಶ್ಕೀರ್ತನೆಕಾರರು ಮತ್ತು ಅವರ ಅಂಕಿತನಾಮಗಳುಸುಧಾರಾಣಿಚಂದ್ರಗುಪ್ತ ಮೌರ್ಯವಿಜಯಪುರ ಜಿಲ್ಲೆಯ ತಾಲೂಕುಗಳುಆಂಡಯ್ಯಸುರಪುರವಿವಾಹಏಡ್ಸ್ ರೋಗಮಹಾಭಾರತಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಬಾದಾಮಿ ಚಾಲುಕ್ಯರ ವಾಸ್ತುಶಿಲ್ಪಕತ್ತೆಭಾರತದ ಚುನಾವಣಾ ಆಯೋಗಲೋಕಸಭೆಕಿತ್ತಳೆಬರವಣಿಗೆದೇವರ ದಾಸಿಮಯ್ಯಶಾತವಾಹನರುಸರ್ ಐಸಾಕ್ ನ್ಯೂಟನ್ಆನೆಶರಣ್ (ನಟ)ಗಾದೆ ಮಾತುಬಂಡಾಯ ಸಾಹಿತ್ಯದೆಹಲಿ ಸುಲ್ತಾನರುವಿಜಯನಗರಬೆಟ್ಟದ ನೆಲ್ಲಿಕಾಯಿದಿಕ್ಕುನುಗ್ಗೆಕಾಯಿಗಿರವಿದಾರಚರಕಕುಮಾರವ್ಯಾಸಸಾಮ್ರಾಟ್ ಅಶೋಕಮೋಕ್ಷಗುಂಡಂ ವಿಶ್ವೇಶ್ವರಯ್ಯ🡆 More