ನ್ಯೂ ಇಂಗ್ಲೆಂಡ್

ನ್ಯೂ ಇಂಗ್ಲೆಂಡ್ - ಅಮೆರಿಕ ಸಂಯುಕ್ತ ಸಂಸ್ಧಾನಗಳ ಈಶಾನ್ಯ ಪ್ರದೇಶ ಮೇನ್, ನ್ಯೂಹ್ಯಾಂಪ್‍ಷೈರ್, ವರ್‍ಮಾಂಟ್, ಮ್ಯಾಸಚೂಸೆಟ್ಸ್, ರೋಡ್ ಐಲೆಂಡ್ ಮತ್ತು ಕನೆಟಿಕಟ್ ರಾಜ್ಯಗಳನ್ನೊಳಗೊಂಡಿದೆ.

ಇತಿಹಾಸ

1614ರಲ್ಲಿ ಹಲವು ಲಂಡನ್ ವ್ಯಾಪಾರಸ್ಧರ ಪರವಾಗಿ ಇದರ ತೀರಪ್ರದೇಶದಲ್ಲಿ ಪರಿಶೋಧನೆ ನಡೆಸಿದ ಕ್ಯಾಪ್ಟನ್ ಜಾನ್ ಸ್ಮಿತ್ ಇದಕ್ಕೆ ನ್ಯೂ ಇಂಗ್ಲೆಂಡ್ ಎಂಬ ಹೆಸರನ್ನು ನೀಡಿದ. ಇಂಗ್ಲೆಂಡಿನ ಪ್ಯೂರಿಟನರು ಇಲ್ಲಿ ನೆಲಸಿ ವಸಾಹತುಗಳನ್ನು ಸ್ಧಾಪಿಸಿದರು. ವಸಾಹತುಗಳು ಪ್ರತಿನಿಧಿ ಸರ್ಕಾರವನ್ನು ರೂಪಿಸಿಕೊಂಡಿದ್ದುವು. ಉನ್ನತ ಶಿಕ್ಷಣ ಸಂಸ್ಧೆಗಳು ಸ್ಧಾಪಿತವಾದುವು. ಅವುಗಳಿಂದ ಇಂದಿನ ಹಾರ್ವರ್ಡ್ (1636) ಮತ್ತು ಯೇಲ್ (1701) ವಿಶ್ವವಿದ್ಯಾಲಯಗಳಂಥ ಸಂಸ್ಥೆಗಳು ಬೆಳೆದಿವೆ. ಸುತ್ತುಮುತ್ತ ಅರಣ್ಯಗಳಿದ್ದುದರಿಂದ ಹಡಗು ಕೈಗಾರಿಕೆ ಬೆಳೆಯಿತು. 18ನೆಯ ಶತಮಾನದಲ್ಲಿ ಇದು ಅಮೆರಿಕನ್ ಕ್ರಾಂತಿಕಾರಿ ಸಮರದ ಕಣವಾಗಿತ್ತು. ಹೊಸ ರಾಷ್ಟ್ರದ ಸ್ಥಾಪನೆಯ ಕಾರ್ಯದಲ್ಲಿ ಇದರ ರಾಷ್ಟ್ರವೀರರು ಪ್ರಮುಖ ಪಾತ್ರ ವಹಿಸಿದರು. 19ನೆಯ ಶತಮಾನದಲ್ಲಿ ಸಾಹಿತ್ಯ ಕ್ಷೇತ್ರದಲ್ಲೂ ಸುಧಾರಣಾ ಚಳವಳಿಯಲ್ಲೂ ಇದು ಮುಂದಾಗಿತ್ತು; ಮಿತಪಾನ, ಗುಲಾಮಗಿರಿಯ ನಿರ್ಮೂಲನ, ಕಾರಾಗೃಹಗಳ ಸ್ಧಿತಿ ಸುಧಾರಣೆ ಮುಂತಾದವುಗಳಲ್ಲಿ ಆಸಕ್ತಿ ವಹಿಸಿತ್ತು. ಅಮೆರಿಕನ್ ಅಂತರ್ಯುದ್ಧದ ಕಾಲದಲ್ಲಿ (1861-65) ಇದು ಒಕ್ಕೂಟದ ಪರವಾಗಿತ್ತು.

ಪಶ್ಚಿಮಾಭಿಮುಖವಾಗಿ ಅಮೆರಿಕದ ಗಡಿ ವಿಸ್ತರಿಸಿದಂತೆ ನ್ಯೂ ಇಂಗ್ಲೆಂಡಿನ ಗ್ರಾಮೀಣ ಸ್ವರೂಪ ಮರೆಯಾಯಿತು. ಕೈಗಾರಿಕಾ ಕ್ರಾಂತಿ ಹಬ್ಬಿತು. ಪಶ್ಚಿಮದ ಕಡೆಯ ವಸಾಹತುಗಳಲ್ಲಿ ಇದರ ವಿಶಿಷ್ಟ ಸಂಸ್ಕøತಿಯೂ ಆಡಳಿತ ಪದ್ಧತಿಯೂ ಪ್ರಸಾರ ಹೊಂದಿ ಬೇರುಬಿಟ್ಟುವು. ಅಮೆರಿಕನ್ ಅಂತರ್ಯುದ್ಧದ ಅನಂತರ ಪೂರ್ವ ಯೂರೋಪಿನ ಕಾರ್ಮಿಕರ ಗುಂಪುಗಳು ಇಲ್ಲಿಗೆ ಹರಿದುಬಂದುವು. ಜನಾಂಗಗಳು ಮಿಶ್ರಗೊಂಡವು. ಸಂಪ್ರದಾಯಗಳು ಬೆರೆತುವು. ರೋಮನ್ ಕ್ಯಾತೊಲಿಕ್ ಧರ್ಮೀಯರೂ ಹೆಚ್ಚಿನ ಸಂಖ್ಯೆಯಲ್ಲಿ ಬಂದರು. ಇಲ್ಲಿ ಬೆಳೆದಿದ್ದ ಜವಳಿ ಮತ್ತು ಧರ್ಮ ಕೈಗಾರಿಕೆಗಳು ಇಪ್ಪತ್ತನೆಯ ಶತಮಾನದಲ್ಲಿ ತಮ್ಮ ಪ್ರಾಮುಖ್ಯ ಕಳೆದುಕೊಂಡುವು. ಇವು ದಕ್ಷಿಣದ ರಾಜ್ಯಗಳಲ್ಲಿ ಕೇಂದ್ರೀಕೃತವಾಗತೊಡಗಿದುವು. ಆದರೆ ಹೆಚ್ಚು ಮೌಲ್ಯದ ಹಗುರ ಕೈಗಾರಿಕೆಗಳಲ್ಲಿ ಈ ಪ್ರದೇಶ ಪ್ರಾಮುಖ್ಯ ಗಳಿಸಿದೆ. ಉನ್ನತ ಶಿಕ್ಷಣದ ಹಲವಾರು ಮುಖ್ಯ ಕೇಂದ್ರಗಳು ಇಲ್ಲಿವೆ. ಈ ಪ್ರದೇಶ ಮೇಲೆ ಹೇಳಿದ ವಿವಿಧ ರಾಜ್ಯಗಳಲ್ಲಿ ಹಂಚಿದೆ.

ಉಲ್ಲೇಖಗಳು

ನ್ಯೂ ಇಂಗ್ಲೆಂಡ್ 
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ನ್ಯೂ ಇಂಗ್ಲೆಂಡ್

Tags:

ಅಮೇರಿಕ ಸಂಯುಕ್ತ ಸಂಸ್ಥಾನ

🔥 Trending searches on Wiki ಕನ್ನಡ:

ಭೂಕಂಪಮುದ್ದಣಚಿಕ್ಕಮಗಳೂರುಭಾರತದ ರಾಜಕೀಯ ಪಕ್ಷಗಳುಸೀತಾ ರಾಮಭಾರತದ ಜನಸಂಖ್ಯೆಯ ಬೆಳವಣಿಗೆ೧೬೦೮ಸೂರ್ಯವ್ಯೂಹದ ಗ್ರಹಗಳುಶ್ರೀನಿವಾಸ ರಾಮಾನುಜನ್ಸನ್ನತಿಲೋಕಸಭೆರಾಮಕರ್ನಾಟಕ ಲೋಕಾಯುಕ್ತವಾಟ್ಸ್ ಆಪ್ ಮೆಸ್ಸೆಂಜರ್ಚಂದ್ರಶೇಖರ ಕಂಬಾರರಾಮಕೃಷ್ಣ ಪರಮಹಂಸಚನ್ನಬಸವೇಶ್ವರವೆಂಕಟರಮಣೇ ಗೌಡ (ಸ್ಟಾರ್ ಚಂದ್ರು)ಸೌರಮಂಡಲಕನ್ನಡ ಛಂದಸ್ಸುಏಡ್ಸ್ ರೋಗದೇಶಕ್ರೀಡೆಗಳುತ್ಯಾಜ್ಯ ನಿರ್ವಹಣೆಹೊಂಗೆ ಮರಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕನ್ನಡ ಭಾಷಾ ಸಾಹಿತಿಗಳುಕಾರ್ಮಿಕರ ದಿನಾಚರಣೆಸಂಧಿನಿರ್ಮಲಾ ಸೀತಾರಾಮನ್ಜಯಂತ ಕಾಯ್ಕಿಣಿಬಿ.ಎಫ್. ಸ್ಕಿನ್ನರ್ಭಾರತ ಸಂವಿಧಾನದ ಪೀಠಿಕೆಕರ್ಕಾಟಕ ರಾಶಿಸಂಭವಾಮಿ ಯುಗೇ ಯುಗೇಕರಗಭಾರತದ ರಾಷ್ಟ್ರಪತಿಗಳ ಪಟ್ಟಿಕರ್ನಾಟಕದ ಏಕೀಕರಣಕುರಿದಶಾವತಾರಪ್ರವಾಹಕನ್ನಡ ರಾಜ್ಯೋತ್ಸವಮಾಹಿತಿ ತಂತ್ರಜ್ಞಾನಯಣ್ ಸಂಧಿಕಮಲನಾಯಕ (ಜಾತಿ) ವಾಲ್ಮೀಕಿಮಳೆಗಾಲಮಾನ್ವಿತಾ ಕಾಮತ್ತೆಂಗಿನಕಾಯಿ ಮರನಿರುದ್ಯೋಗವೇದಓಂ (ಚಲನಚಿತ್ರ)ಉಪೇಂದ್ರ (ಚಲನಚಿತ್ರ)ಆಡು ಸೋಗೆರಾಜಕೀಯ ಪಕ್ಷದೀಪಾವಳಿಜಾಗತಿಕ ತಾಪಮಾನ ಏರಿಕೆಯ ಪರಿಣಾಮಗಳುಭಾರತದ ಸಂವಿಧಾನವಂದೇ ಮಾತರಮ್ಅಂತರರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆವಿದುರಾಶ್ವತ್ಥಶ್ರೀಧರ ಸ್ವಾಮಿಗಳುರೇಣುಕಸವದತ್ತಿಎಸ್.ಎಲ್. ಭೈರಪ್ಪಸವರ್ಣದೀರ್ಘ ಸಂಧಿರಾಜಧಾನಿಗಳ ಪಟ್ಟಿಕೊಡಗಿನ ಗೌರಮ್ಮಗೋಕರ್ಣವಿಚಿತ್ರ ವೀಣೆಕಮಲದಹೂಕರ್ನಾಟಕ ಆಡಳಿತ ಸೇವೆಕೈಗಾರಿಕಾ ನೀತಿಕೊಬ್ಬಿನ ಆಮ್ಲಶಾಸನಗಳುಹಿಂದೂ ಧರ್ಮ🡆 More