ಉಲ್ಲೇಖನ

ಈ ಲೇಖನವನ್ನು wikipedia:Citing Sources ಆಂಗ್ಲ ಪುಟದಿಂದ ಅನುವಾದ ಮಾಡಬೇಕಿದೆ.

ಉಲ್ಲೇಖನ ಈ ಪುಟವು ಲೇಖನ ಶೈಲಿಯ ಕೈಪಿಡಿಯ ಭಾಗವಾಗಿದ್ದು,ಇದನ್ನು ವಿಕಿಪೀಡಿಯ ನಿಯಮಾವಳಿ ಎಂದು ಪರಿಗಣಿಸಲಾಗಿದೆ.ವಿಕಿಪೀಡಿಯಾದ ಹಲವಾರು ಲೇಖಕರ ಸಹಮತಿಯಿಂದ ಇದನ್ನು ನಿರೂಪಿಸಲಾಗಿದೆ.ವಿಕಿಪೀಡಿಯಾದ ಲೇಖನಗಳು ಈ ನಿಯಮಾವಳಿಗಳನ್ನು ಪಾಲಿಸುವುದು ಅತ್ಯಾವಶ್ಯಕ. ಈ ನಿಯಮಾವಳಿಗಳಿಗೆ ನೀವು ಅಗತ್ಯವೆನಿಸಿವ ಬದಲಾವಣೆಗಳನ್ನು ಮಾಡಬಹುದು, ಆದರೆ ಮಹತ್ವದ ಬಲಲಾವಣೆಗಳನ್ನು ಮಾಡುವ ಮುನ್ನ ಚರ್ಚೆ ಪುಟದಲ್ಲಿ ಚರ್ಚಿಸಿ.
 • [[:|WP:REF]]

ನೀವೂ ಸಹಾಯ ಮಾಡಬಹುದು.

ವಿಕಿಪೀಡಿಯ ನೀತಿಗಳು
ಲೇಖನಗಳ ಗುಣಮಟ್ಟ
ತಟಸ್ಥ ದೃಷ್ಟಿಕೋನ
ಪರಿಶೀಲನಾರ್ಹತೆ
ಸ್ವಂತ ಸಂಶೋಧನೆ ಸಲ್ಲದು
ಮೂಲಗಳ ಉಲ್ಲೇಖ
ವಿಕಿಪೀಡಿಯ ಏನಲ್ಲ
ಜೀವಂತವಾಗಿರುವರ ಆತ್ಮಚರಿತ್ರೆಗಳು
ಇತರರೊಡನೆ ಸಹಯೋಗ
ಸದುದ್ದೇಶವಿದೆಯೆಂದು ನಂಬಿ
ನಾಗರೀಕತೆ ಹಾಗು ಶಿಷ್ಟಾಚಾರ
ವೈಯುಕ್ತಿಕ ದಾಳಿ ಸಲ್ಲದು
ಬಿಕ್ಕಟ್ಟು ನಿವಾರಣೆ

ಈ ಪುಟವು ವಿಕಿಪೀಡಿಯಾದ ಲೇಖನ ಶೈಲಿಯ ಬಗೆಗಿನ ಒಂದು ಲೇಖನ. ಉಲ್ಲೇಖಗಳನ್ನು ಒದಗಿಸುವ ಬಗೆಗಿನ ಮಾಹಿತಿಯನ್ನು ನೀಡುವುದು ಇದರ ಉದ್ದೇಶ. ವಿಕಿಪೀಡಿಯಾದ ಎರಡು ಪ್ರಮುಖ ನೀತಿಗಳಾದ ವಿಕಿಪೀಡಿಯ:ಸ್ವಂತ ಸಂಶೋಧನೆ ಸಲ್ಲದು ಹಾಗು ವಿಕಿಪೀಡಿಯ:ಪರಿಶೀಲಿಸಬಲ್ಲ ಮಾಹಿತಿ ಮಾತ್ರ ಗಳನ್ವಯ ಲೇಖನಗಳಲ್ಲಿ ನೀಡಿದ ಮಾಹಿತಿಗೆ ಉಲ್ಲೇಖಗಳನ್ನು ಒದಗಿಸುವುದು ಅತ್ಯಾವಶ್ಯಕ. ಉಲ್ಲೇಖನಗಳನ್ನು ನೀಡದ ಮಾಹಿತಿಯನ್ನು ತೆಗೆಯುವ ಹಕ್ಕು ಎಲ್ಲಾ ಲೇಖಕರಿಗೂ ಇರುತ್ತದೆ. ನಂಬಿಕೆಗರ್ಹ ಮೂಲಗಳ ಬಗೆಗಿನ ಮಾಹಿತಿಗಾಗಿ ವಿಕಿಪೀಡಿಯ:ನಂಬಿಕಸ್ಥ ಮೂಲಗಳು ಲೇಖನವನ್ನು ನೋಡಿರಿ. ವ್ಯಕ್ತಿಗಳ ಬಗೆಗಿನ ಲೇಖನಗಳಲ್ಲಿ ಸರಿಯಾದ ಮೂಲಗಳನ್ನು ಬಳಸುವ ಮಹತ್ವವನ್ನು ತಿಳಿಯಲು ವಿಕಿಪೀಡಿಯ:ಜೀವಂತವಾಗಿರುವರ ಆತ್ಮಚರಿತ್ರೆಗಳು ಲೇಖನವನ್ನು ನೋಡಿರಿ.

ಮೂಲ ಲೇಖನಗಳಿಂದ ಸಾಲುಗಳನ್ನು ನೇರವಾಗಿ ಉಲ್ಲೇಖಿಸುವಾಗ, ಚರ್ಚಾಸ್ಪದ ಅಥವಾ ವಿವಾದಗ್ರಸ್ತ ವಿಷಯಗಳ ಬಗೆಗಿನ ಲೇಖನಗಳು,ಲೇಖನದಲ್ಲಿ ಪ್ರಸ್ತಾಪಿಸಲಾದ ಯಾವುದೋ ಒಂದು ವಸ್ತು ಇತರ ವಸ್ತುಗಳಿಗಿಂತ ಉತ್ತಮ ಹಾಗೂ ಅದಕ್ಕೆ ಸಮಾನವಿಲ್ಲ ಎಂಬಿತ್ಯಾದಿ ಮಾಹಿತಿಗಳನ್ನು ಸೇರಿಸುವಾಗ ಉಲ್ಲೇಖಗಳ ಮಹತ್ವ ಇನ್ನಷ್ಟು ಹೆಚ್ಚುತ್ತದೆ. ನಿಮಗೆ ಉಲ್ಲೇಖಗಳನ್ನು ಹೇಗೆ ಫಾರ್ಮಾಟ್ ಮಾಡಬೇಕೆಂದು ತಿಳಿಯದಿದ್ದಲ್ಲಿ, ಲೇಖನದಲ್ಲಿ ಸೇರಿಸಿದರಾಯಿತು. ಇತರ ಲೇಖಕರು ಅದನ್ನು ನಿಮಗಾಗಿ ಸರಿಪಡಿಸುವರು.

ಏಕೆ ಮೂಲಗಳನ್ನು ಉಲ್ಲೇಖಿಸಬೇಕು

 • ಜೀವಂತ ವ್ಯಕ್ತಿಗಳ ಕುರಿತಾದ ವಿಷಯವು ನಂಬಲರ್ಹ ಮೂಲಗಳಿಂದ ಬಂದಿದೆ ಮತ್ತು ವಿಕಿಪೀಡಿಯ:ಜೀವಂತವ್ಯಕ್ತಿಗಳ ಚರಿತ್ರೆಗೆ ಅನುಗುಣವಾಗಿದೆ ಎಂದು ಖಾತರಿಪಡಿಸಲು .
 • ನಿಮ್ಮ ಬರಹವು ಮೂಲ ಸಂಶೋಧನೆ ಅಲ್ಲ ಎಂದು ತೋರಿಸಲು.
 • ಲೇಖನಗಳಲ್ಲಿನ ವಿಷಯವು ವಿಶ್ವಾಸಾರ್ಹವೆಂದೂ ಯಾರೇ ಓದುಗ ಅಥವಾ ಸಂಪಾದಕರು ಖಚಿತಪಡಿಸಬಹುದು ಎಂದೂ ಖಾತರಿಪಡಿಸಲು.
 • ಲೇಖನದ ವಿಷಯದ ಸಂಬಂಧ ಹೆಚ್ಚಿನ ವಿಶ್ವಾಸಾರ್ಹ ಮಾಹಿತಿಯನ್ನು ಹುಡುಕಲು ಬಳಕೆದಾರರು ಸಹಾಯಮಾಡಲು .
 • ವಿಕಿಪೀಡಿಯದ ಒಟ್ಟು ವಿಶ್ವಾಸಾರ್ಹತೆಯನ್ನು ಮತ್ತು ಅಧಿಕೃತತೆಯ ಗುಣವನ್ನು ಸುಧಾರಿಸಲು.
 • ಸಂಪಾದಕೀಯ ವಿವಾದಗಳ ಸಂಭಾವ್ಯತೆಯನ್ನು ಕಡಿಮೆ ಮಾಡಲು ಅಥವಾ ಏಳಬಹುದಾದ ವಿವಾದಗಳನ್ನು ಬಗೆಹರಿಸಲು .
 • ಉಪಯುಕ್ತ ಮಾಹಿತಿ ನೀಡುವ ಮೂಲಗಳಿಗೆ ಮನ್ನಣೆ ನೀಡಲು ಮತ್ತು ಕೃತಿಚೌರ್ಯದ ಆಪಾದನೆಗಳಿಂದ ತಪ್ಪಿಸಿಕೊಳ್ಳಲು .

ಗಮನಿಸಿ: ವಿಕಿಪೀಡಿಯ ಲೇಖನಗಳನ್ನು ಮೂಲ ಎಂದು ಉಲ್ಲೇಖಿಸಬಾರದು.


ಯಾವಾಗ ಮೂಲಗಳನ್ನು ಉಲ್ಲೇಖಿಸಬೇಕು ?

ನೀವು ವಿಷಯ ಸೇರಿಸಿದಾಗ

ಮೂಲಗಳನ್ನು ಹುಡುಕುವ ಬಗ್ಗೆ ಮಾಹಿತಿಗಾಗಿ, ವಿಕಿಪೀಡಿಯ:ನಂಬಲರ್ಹ ಮೂಲಗಳು ಲೇಖನ ನೋಡಿ.

 • ಲೇಖನವೊಂದಕ್ಕೆ ನೀವು ಮಾಹಿತಿಯನ್ನು ಸೇರಿಸುತ್ತಿದ್ದಲ್ಲಿ ವಿಶೇಷತಃ ಅದು ವಿವಾದಾಸ್ಪದವಾಗಿದ್ದಲ್ಲಿ ಅಥವಾ ಪ್ರಶ್ನಿಸಪಡುವಂತಿದ್ದಲ್ಲಿ ನೀವು ಮೂಲವನ್ನೊದಗಿಸಬೇಕು. ಉಲ್ಲೇಖದ ಸ್ವರೂಪ ಹೇಗಿರಬೇಕೆಂದು ನಿಮಗೆ ಗೊತ್ತಿರದಿದ್ದಲ್ಲಿ, ನಿಮಗಾಗಿ ಅದನ್ನು ಇತರರು ಮಾಡುವರು. ನಿಮಗೆ ಸಾಧ್ಯವಿದ್ದ ಮಾಹಿತಿ ಕೊಡಿ ಅಷ್ಟೇ .
 • ಸಾಮಾನ್ಯವಾಗಿ, ನಿಮ್ಮ ನೆನಪನ್ನಾಧರಿಸಿ ಲೇಖನಗಳನ್ನು ಬರೆಯುವಾಗ, ಜೊತೆ ಜೊತೆಯಲ್ಲಿಯೇ ಉಲ್ಲೇಖಾರ್ಹ ಮೂಲಗಳ ಶೊಧನೆ ಆರಂಭಿಸಿ. ವಿಷಯದ ಬಗ್ಗೆ ನಿಮಗೆ ಸಾಕಷ್ಟು ತಿಳುವಳಿಕೆ ಇದ್ದಲ್ಲಿ, ಅದರ ಬಗ್ಗೆ ಒಳ್ಳೆಯ ಮೂಲಗಳನ್ನು ತಿಳಿಸಿದರಾಯಿತು. ಇದರಿಂದ ಇತರ ಓದುಗರು ಹಾಗು ಸಂಪಾದಕರಿಗೆ ಆ ವಿಷಯದಲ್ಲಿ ಹೆಚ್ಚು ಮಾಹಿತಿ ತಿಳಿಯಲು ಸಹಾಯಕಾರಿಯಾಗುತ್ತದೆ.
 • ನೀವು ಬರೆಯುತ್ತಿರುವ ಲೇಖನದ ಬಗ್ಗೆ ನಿಮಗೆ ನಿಮ್ಮದೇ ಆದ ವೈಯುಕ್ತಿಕ ಅಭಿಪ್ರಾಯಗಳಿದ್ದರೆ, ಮೂಲಗಳ ಉಲ್ಲೇಖನದ ಮಹತ್ವ ಇನ್ನಷ್ಟು ಹೆಚ್ಚುತ್ತದೆ. "ಕೆಲವರು ಹೀಗೆನ್ನುತ್ತಾರೆ" ಎಂಬಿತ್ಯಾದಿ [[ವಿಕಿಪೀಡಿಯ::Avoid weasel words | Avoid weasel words]] ಪದಗಳ ಪ್ರಯೋಗ ನಿಲ್ಲಿಸಿ. ಆದಷ್ಟು ಮಟ್ಟಿಗೆ, ನಿಮ್ಮ ಲೇಖನವು ಪರಿಶೀಲಿಸಬಲ್ಲ ಮಾಹಿತಿ ಮಾತ್ರ ಹೊಂದಿರಲಿ. ವಿಷಯದ ಬಗ್ಗೆ ನೀವು ಹೊಂದಿರು ಮಾಹಿತಿಯನ್ನೇ ಹೊಂದಿರುವ ವ್ಯಕ್ತಿ ಅಥವಾ ಗುಂಪನ್ನು ಹುಡುಕಿ, ಅವರನ್ನು ಉಲ್ಲೇಖಿಸಿ, ಅವರ ಅಭಿಪ್ರಾಯಗಳು ಮೂಡಿರುವ ಪತ್ರಿಕೆ ಅಥವಾ ಇನ್ಯಾವುದೇ ನಂಬಲರ್ಹ ಮೂಲವನ್ನು ನೀಡಿರಿ. ನೆನಪಿರಲಿ, ವಿಕಿಪೀಡಿಯ ನಿಮ್ಮ ಸ್ವಂತ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ವೇದಿಕೆಯಲ್ಲ ( ವಿಕಿಪೀಡಿಯ:ಸ್ವಂತ ಸಂಶೋಧನೆ ಸಲ್ಲದು ).

Tags:

en:wikipedia:Citing Sources

🔥 Trending searches on Wiki ಕನ್ನಡ:

ಮೈಸೂರು ದಸರಾಬೆಂಗಳೂರುಸ್ವಾಮಿ ವಿವೇಕಾನಂದಚಾಲುಕ್ಯಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿಚಾಣಕ್ಯಚಿಕ್ಕಮಗಳೂರುಸಂಸ್ಕೃತ ಸಂಧಿಕರ್ನಾಟಕದ ಕಲೆ ಮತ್ತು ಸಂಸ್ಕೃತಿಆದಿಚುಂಚನಗಿರಿಋತುಚಕ್ರಭಾರತದ ರಾಷ್ಟ್ರೀಯ ಉದ್ಯಾನಗಳುಹೈನುಗಾರಿಕೆಏಡ್ಸ್ ರೋಗಕರ್ನಾಟಕದ ಪ್ರಸಿದ್ಧ ಪುಣ್ಯ ಕ್ಷೇತ್ರಗಳುಪ್ಯಾರಾಸಿಟಮಾಲ್ಕ್ರಿಕೆಟ್‌ನ ನಿಯಮಗಳುರಾಘವಾಂಕಸಂಭೋಗಸಂಧ್ಯಾವಂದನ ಪೂರ್ಣಪಾಠರೇಡಿಯೋಗೌತಮ ಬುದ್ಧನ ಕುಟುಂಬಕರ್ನಾಟಕದ ರಾಜ್ಯಪಾಲರುಗಳ ಪಟ್ಟಿವಿಕಿಮೀಡಿಯ ಕಾಮನ್ಸ್ನಿರುದ್ಯೋಗನಿಜಗುಣ ಶಿವಯೋಗಿಗಳುವಿನಾಯಕ ಕೃಷ್ಣ ಗೋಕಾಕಮೂಕಜ್ಜಿಯ ಕನಸುಗಳು (ಕಾದಂಬರಿ)ಹಿಂದೂ ಧರ್ಮಕಲ್ಯಾಣ ಕರ್ನಾಟಕಭಾರತವಾಸ್ತವಿಕವಾದಜೈಮಿನಿ ಭಾರತದಲ್ಲಿ ನವರಸಗಳುಕರ್ನಾಟಕ ಪತ್ರಿಕೋದ್ಯಮ ಇತಿಹಾಸಖಿನ್ನತೆ-ಶಮನಕಾರಿ(ಆಂಟಿ-ಡಿಪ್ರೆಸೆಂಟ್)ಶಿವಪ್ಪ ನಾಯಕಹರಪ್ಪರಾಜಧಾನಿಗಳ ಪಟ್ಟಿವಿನಾಯಕ ದಾಮೋದರ ಸಾವರ್ಕರ್ತೋಟಗಾರಿಕೆಶ್ರೀ ರಾಘವೇಂದ್ರ ಸ್ವಾಮಿಗಳುಚಿಪ್ಕೊ ಚಳುವಳಿಪ್ರಾಚೀನ ಈಜಿಪ್ಟ್‌ಮಂತ್ರಾಲಯಮೊಗಳ್ಳಿ ಗಣೇಶಜೇನುಧರ್ಮಸ್ಥಳಅಶ್ವತ್ಥಮರಮೈಗ್ರೇನ್‌ (ಅರೆತಲೆ ನೋವು)ಶಬ್ದ ಮಾಲಿನ್ಯಕರ್ಮಧಾರಯ ಸಮಾಸನಿರಂಜನಗೋಪಾಲಕೃಷ್ಣ ಅಡಿಗಯೋಗವಾಹಪ್ರಬಂಧಚಾಮುಂಡಿ ಬೆಟ್ಟಬ್ಯಾಂಕ್ಭಾರತ ಸಂವಿಧಾನದ ಪೀಠಿಕೆತಾಜ್ ಮಹಲ್ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಸಂಚಿ ಹೊನ್ನಮ್ಮವಚನ ಸಾಹಿತ್ಯದೂರಸಂವಹನ ವ್ಯವಸ್ಥೆಜವಾಹರ‌ಲಾಲ್ ನೆಹರುಮುದ್ದಣರತನ್ ನಾವಲ್ ಟಾಟಾಗೋಕರ್ಣ21ನೇ ಶತಮಾನದ ಕೌಶಲ್ಯಗಳುಬಡತನತ್ರಿಪದಿಕನ್ನಡ ಸಾಹಿತ್ಯ ಪರಿಷತ್ತುಜಲ ಮಾಲಿನ್ಯಪಂಪ ಪ್ರಶಸ್ತಿಎಸ್.ಜಿ.ಸಿದ್ದರಾಮಯ್ಯಮೂತ್ರಪಿಂಡಕರ್ನಾಟಕದ ಮುಖ್ಯಮಂತ್ರಿಗಳುಜೀವವೈವಿಧ್ಯದ ಸೂಕ್ಷ್ಮ ಪ್ರದೇಶಗಳು🡆 More